ಮಂಡ್ಯ: ಇತ್ತ ವಿಶ್ವವಿಖ್ಯಾತ ಮೈಸೂರು ದಸರಾ ಕಳೆಗಟ್ಟಿದೆ. ಈ ಬೆನ್ನಲ್ಲೇ ಇಂದಿನಿಂದ ಮಂಡ್ಯದ ಶ್ರೀರಂಗಪಟ್ಟಣ ದಸರಾ (Srirangapatna Dasara) ಉತ್ಸವಕ್ಕೂ ಚಾಲನೆ ಸಿಗಲಿದೆ.
ಇಂದಿನಿಂದ 4 ದಿನಗಳ ಕಾಲ ನಡೆಯಲಿರುವ ಈ ಉತ್ಸವಕ್ಕೆ ನಟ, ನಿರ್ದೇಶಕ ಟಿ.ಎಸ್ ನಾಗಾಭರಣ ಅವರು ಮಧ್ಯಾಹ್ನ 2:30 ರಿಂದ 3 ಗಂಟೆಗೆ ಸಲ್ಲುವ ಶುಭ ಲಗ್ನದಲ್ಲಿ ಉದ್ಘಾಟನೆ ನೆರವೇರಿಸಲಿದ್ದಾರೆ. ಶ್ರೀರಂಗಪಟ್ಟಣದ ಕಿರಂಗೂರು ಬಳಿ ಬನ್ನಿಮಂಟಪದಲ್ಲಿ ಪೂಜಾ ಕೈಂಕರ್ಯ ನೆರವೇರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಇದನ್ನೂ ಓದಿ: ದಸರೆ ಹಬ್ಬ ಮಾತ್ರ ಅಲ್ಲ, ಎಲ್ಲರನ್ನು ಒಳಗೊಳ್ಳುವ ಸಮನ್ವಯದ ಮೇಳ: ಬಾನು ಮುಷ್ತಾಕ್
ಇದಾದ ಬಳಿಕ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮೂಲಕ ಜಂಬೂಸವಾರಿಗೂ ಚಾಲನೆ ನೀಡಲಾಗುತ್ತದೆ. ಶ್ರೀರಂಗಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜಂಬೂಸವಾರಿ ಮೆರವಣಿಗೆ ಸಾಗಲಿದೆ. ಮೈಸೂರು ದಸರಾಕ್ಕೆ ಆಗಮಿಸಿರುವ ಮಹೇಂದ್ರ ಆನೆ ಅಂಬಾರಿ ಹೊತ್ತು ಹೆಜ್ಜೆ ಹಾಕಲಿದ್ದಾನೆ. ಇಲ್ಲಿನ ಬನ್ನಿ ಮಂಟಪದಿಂದ ಶುರುವಾಗಿ ಶ್ರೀರಂಗನಾಥ ದೇವಾಲಯದ ವರೆಗೆ ಮೆರವಣಿಗೆ ಸಾಗಲಿದೆ.
ಇನ್ನೂ ಜಂಬೂ ಸವಾರಿಗೆ ವಿವಿಧ ಕಲಾತಂಡಗಳ ಸಾಂಸ್ಕೃತಿಕ ವೈಭವ ಮೆರುಗು ನೀಡಲಿದೆ. ಬ್ಯಾಂಡ್, ಪೂಜಾ ಕುಣಿತ, ವೀರಗಾಸೆ, ನಗಾರಿ, ಜಡೆ ಕೋಲಾಟ, ಗಾರುಡಿ ಗೊಂಬೆ, ತಮಟೆ, ದೊಣ್ಣೆವರಸೆ, ಡೊಳ್ಳು ಕುಣಿತ, ಕಂಸಾಳೆ, ಕೊಂಬು-ಕಹಳೆ ಹಾಗೂ ಸ್ತಬ್ಧ ಚಿತ್ರಗಳ ಮೆರವಣಿ ನಡೆಯಲಿದೆ. ಇದನ್ನೂ ಓದಿ: ದಸರಾ ವಿಶೇಷ | ಮೈಸೂರು ಸಿಂಗರಿಸಿದ ದೀಪಾಲಂಕಾರ, ಆಹಾರ ಮೇಳಕ್ಕೆ ಚಾಲನೆ
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಟಿ.ಎಸ್ ನಾಗಾಭರಣ (TS Nagabharana) ಹೊಸ ಸಿನಿಮಾವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಅವರು ಗಟ್ಟಿದನಿಯ ದಿಟ್ಟ ಕಲಾವಿದೆ ಬೆಂಗಳೂರು ನಾಗರತ್ನಮ್ಮ (Bangalore Nagaratnamma) ಕುರಿತಾಗಿ (Biopic) ಸಿನಿಮಾ ಮಾಡುತ್ತಿದ್ದು, ಆ ಸಿನಿಮಾದ ಕೆಲಸವನ್ನೂ ಈಗಾಗಲೇ ಶುರು ಮಾಡಿದ್ದಾರೆ.
ನಾಗಾಭರಣ ಅವರು ಬೆಂಗಳೂರು ನಿರ್ಮಾತೃ ಕೆಂಪೇಗೌಡ ಅವರ ಕುರಿತಾಗಿ ಸಿನಿಮಾ ಮಾಡಲಿದ್ದಾರೆ ಎಂದು ಸುದ್ದಿ ಆಗಿತ್ತು. ಈ ಚಿತ್ರಕ್ಕೆ ಯುವ ರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದು ಸುಳ್ಳು ಸುದ್ದಿ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ. ಅಸಲಿಯಾಗಿ ಈ ಸಿನಿಮಾವನ್ನು ತಾವು ಮಾಡುತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ:ಅನಿಮಲ್ ಶೂಟಿಂಗ್ ಮುಗಿಸಿದ ರಶ್ಮಿಕಾ ಮಂದಣ್ಣ
‘ಕರ್ನಾಟಕ ಸಂಗೀತಕ್ಕೆ ಸಾಕಷ್ಟು ಕೊಡುಗೆ ನೀಡಿರುವ ಬೆಂಗಳೂರು ನಾಗರತ್ನಮ್ಮ ಕುರಿತಾಗಿ ಸಿನಿಮಾ ಮಾಡಲು ಹೊರಟಿರುವೆ. ಈ ಕುರಿತು ಈಗಾಗಲೇ ಸಂಶೋಧನೆಯನ್ನೂ ಕೈಗೆತ್ತಿಕೊಂಡಿದ್ದೇನೆ. ನಾಯಕಿ ಸೇರಿದಂತೆ ಇತರ ಕಲಾವಿದರ ಹುಡುಕಾಟ ನಡೆದಿದೆ. ಸದ್ಯದಲ್ಲೇ ಈ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.
ಮೂಲತಃ ನಂಜನಗೂಡಿನವರಾದ (Nanjangudu) ನಾಗರತ್ನ ಹಾಡುಗಾರಿಕೆಯಿಂದಲೇ ಫೇಮಸ್ ಆದವರು. ಬೆಂಗಳೂರಿನ ಗುರು ಮುನಿಸ್ವಾಮಪ್ಪನವರಲ್ಲಿ ಕರ್ನಾಟಕ ಸಂಗೀತ ಕಲಿತು, ಒಡೆಯರ್ ಇವರಿಂದ ಗೌರವಿಸಲ್ಪಟ್ಟವರು. ದೇಶಾದ್ಯಂತ ಸಾವಿರಾರು ಸಂಗೀತ ಕಛೇರಿಗಳನ್ನು ನೀಡಿದ ಹೆಗ್ಗಳಿಕೆ ಇವರದ್ದು. ಮಹಾರಾಜರು ಮರಣಾನಂತರ ಬೆಂಗಳೂರಿನಲ್ಲಿ ನೆಲೆಸಿದರು. ಇಲ್ಲಿಂದ ಮತ್ತೆ ಚೆನ್ನೈಗೆ ಹೊರಟರು. 1878ರಲ್ಲಿ ಹುಟ್ಟಿದ ನಾಗರತ್ನಮ್ಮ 1952ರಲ್ಲಿ ನಮ್ಮನ್ನು ಅಗಲಿದರು.
ಸ್ಯಾಂಡಲ್ ವುಡ್ ನಲ್ಲಿ ಅಚ್ಚರಿಯ ಘಟನೆಗಳು ನಡೆಯುತ್ತಿವೆ. ಅದರಲ್ಲೂ ಸದ್ದಿಲ್ಲದೇ ನಡೆಯುವ ಕೆಲಸಗಳೇ ಸಖತ್ ಸದ್ದು ಮಾಡುತ್ತವೆ. ಈಗ ಸದ್ದು ಮಾಡುವಂತಹ ಸುದ್ದಿಯೊಂದು ಗಾಂಧಿನಗರದಲ್ಲಿ ಹರಿದಾಡುತ್ತಿದ್ದು, ಅದು ನಿಜವಾದರೆ ತೆರೆಗೆ ಬರಲಿದ್ದಾನೆ ಬೆಂಗಳೂರು ನಿರ್ಮಾತೃ ಕೆಂಪೇಗೌಡ.
ಹೌದು, ನಾಡಪ್ರಭು ಕೆಂಪೇಗೌಡ (Kempegowda) ಅವರ ಜೀವನದ ಕುರಿತಾಗಿ ಸಿನಿಮಾವೊಂದು ತಯಾರಾಗಲಿದ್ದು, ಅದರ ನೇತೃತ್ವವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಟಿ.ಎಸ್ ನಾಗಾಭರಣ (TS Nagabharana) ವಹಿಸಿದ್ದಾರೆ. ಈಗಾಗಲೇ ನಾಗಾಭರಣ ಕಥೆಯನ್ನೂ ಸಿದ್ಧಪಡಿಸಿದ್ದು, ನಾಯಕನಿಗಾಗಿ ಅವರು ಕಾಯುತ್ತಿದ್ದಾರಂತೆ.
ಅಂದುಕೊಂಡಂತೆ ಆಗಿದ್ದರೆ ನಾಡಪ್ರಭು ಕೆಂಪೇಗೌಡರ ಬಗ್ಗೆ ಬಹಳ ವರ್ಷಗಳ ಹಿಂದೆಯೇ ಸಿನಿಮಾ ಬರಬೇಕಿತ್ತು. ಕೆಂಪೇಗೌಡರ ಪಾತ್ರವನ್ನು ಮಾಡುವಂತೆ ವರನಟ ಡಾ.ರಾಜ್ ಕುಮಾರ್ ಅವರನ್ನು ಕೇಳಲಾಗಿತ್ತು. ಆ ಪಾತ್ರವನ್ನು ಮಾಡುವ ಆಸೆ ಡಾ.ರಾಜ್ ಕುಮಾರ್ ಅವರಿಗೆ ಇದ್ದರೂ, ಕೆಂಪೇಗೌಡರಿಗೆ ಅಪಚಾರವಾಗದಂತಹ ಸ್ಕ್ರಿಪ್ಟ್‌ಗಾಗಿ ಡಾ.ರಾಜ್ ಕಾದರು. ಆದರೆ, ಕೊನೆಗೂ ಅವರಿಗೆ ಅದು ಸಿಗಲಿಲ್ಲ.
ಇದೀಗ ಕೆಂಪೇಗೌಡರ ಕುರಿತಾದ ಸಿನಿಮಾ ಮಾಡುವ ಅವಕಾಶ ಮತ್ತೆ ದೊಡ್ಮನೆ ಕುಟುಂಬಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಕೆಂಪೇಗೌಡ ಅವರ ಪಾತ್ರವನ್ನು ಯುವರಾಜ್ ಕುಮಾರ್ (Yuvraj Kumar) ಮಾಡಬೇಕು ಎನ್ನುವುದು ನಿರ್ದೇಶಕರ ಆಸೆ. ಯುವರಾಜ್ ಕುಮಾರ್ ಅವರನ್ನೇ ಮನಸ್ಸಲ್ಲಿಟ್ಟುಕೊಂಡು ಚಿತ್ರಕಥೆ ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದೆ ಏನಾಯಿತು ಎನ್ನುವ ವಿವರ ಲಭ್ಯವಿಲ್ಲ.
ಸದ್ಯ ಯುವ ರಾಜ್ ಕುಮಾರ್ ‘ಯುವ’ ಸಿನಿಮಾದ ಶೂಟಿಂಗ್‌ನಲ್ಲಿದ್ದಾರೆ. ಮಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆಯುತ್ತಿದೆ. ಈ ಸಿನಿಮಾದ ನಂತರ ಅವರು ಮತ್ತೊಂದು ಕಥೆಯನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ ಕೆಂಪೇಗೌಡ ಸಿನಿಮಾ ಒಪ್ಪುತ್ತಾರಾ, ತಾತನ ಆಸೆಯನ್ನು ಯುವ ಈಡೇರಿಸುತ್ತಾರಾ ಎನ್ನುವುದು ಕುತೂಹಲದ ಪ್ರಶ್ನೆ.
ಬೆಳಗಾವಿ: ಜಿಲ್ಲೆಯ ಗಡಿ ಭಾಗದ ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರಿ ಪತ್ರ ವ್ಯವಹಾರಗಳು ಕನ್ನಡ ಭಾಷೆಯಲ್ಲಿಯೇ ಆಗಬೇಕು. ಈ ಕುರಿತು ಜಿಲ್ಲಾ ಪಂಚಾಯಿತಿ ಸಿಇಒ ಜೊತೆ ಚರ್ಚೆ ನಡೆಸಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಟಿ.ಎಸ್.ನಾಗಾಭರಣ ಹೇಳಿದರು.
ನಗರದ ಅತಿಥಿ ಗೃಹದಲ್ಲಿ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು ಹಾಗೂ ಕನ್ನಡಪರ ಸಂಘಟನೆಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲ ಉದ್ದೇಶ ರಾಜ್ಯದಲ್ಲಿ ಕನ್ನಡದಲ್ಲಿ ಆಡಳಿತ ವ್ಯವಹಾರ ನಡೆಯುವಂತೆ ನೋಡಿಕೊಳ್ಳುವುದಾಗಿದೆ. ಗಡಿ ಭಾಗದಲ್ಲಿ ಆಗುತ್ತಿರುವ ಭಾಷಾ ಸಮಸ್ಯೆಯನ್ನು ಪರಿಹರಿಸಲು, ಸರ್ಕಾರಿ ಇಲಾಖೆಯಲ್ಲಿ ಎಷ್ಟರ ಮಟ್ಟಿಗೆ ಕನ್ನಡ ಭಾಷೆಯಲ್ಲಿ ಪತ್ರ ವ್ಯವಹಾರಗಳು ಆಗುತ್ತಿವೆ ಎಂದು ಪರಿಶೀಲನೆ ಮಾಡುವುದಾಗಿ ಅವರು ಹೇಳಿದರು.
ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದ 8ನೇ ತರಗತಿಯವರೆಗೆ ಪ್ರಾದೇಶಿಕ ಭಾಷೆ ಕನ್ನಡವನ್ನು ಪ್ರಥಮ ಭಾಷೆಯಾಗಿ ವಿದ್ಯಾಭ್ಯಾಸ ಮಾಡಿಸಬೇಕಿದೆ. ಬಳಿಕ ವಿದ್ಯಾರ್ಥಿಗಳ ಇಷ್ಟದ ಭಾಷೆಯಲ್ಲಿ ಶಿಕ್ಷಣ ಪಡೆಯುವಂತೆ ಆಯ್ಕೆ ನೀಡಬಹುದು. ಡಿಗ್ರಿ ವಿಭಾಗದಲ್ಲಿ ವಿದ್ಯಾರ್ಥಿಗಳು ತಮಗೆ ಬೇಕಾದ ಭಾಷೆಯಲ್ಲಿ ಶಿಕ್ಷಣ ಪಡೆಯಬಹುದು. ಆದರೆ ಯಾವುದೇ ಶಿಕ್ಷಣ ಸಂಸ್ಥೆಯವರು ಕನ್ನಡವನ್ನು ಬದಿಗೊತ್ತಿ ಬೇರೆ ಭಾಷೆಯನ್ನು ತೆಗೆದುಕೊಳ್ಳುವಂತೆ ಒತ್ತಾಯ ಮಾಡುವಂತಿಲ್ಲ ಎಂದರು. ಇದನ್ನೂ ಓದಿ: ಸೋಮವಾರ ದೇಶದ 15ನೇ ರಾಷ್ಟ್ರಪತಿ ಚುನಾವಣೆ – ಜೂನ್ 21ಕ್ಕೆ ಮತ ಎಣಿಕೆ
ಗಡಿ ಭಾಗದಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಬೇರೆ ಭಾಷೆಯನ್ನು ತೆಗೆದುಕೊಳ್ಳಲು ಒತ್ತಾಯ ಮಾಡುತ್ತಿರುವ ವಿಚಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಶಿಕ್ಷಣದಲ್ಲಿ ಕನ್ನಡ ಭಾಷೆ ವಿಚಾರವನ್ನು ಶಿಕ್ಷಣ ಸಚಿವರ ಗಮನಕ್ಕೆ ತಂದು ಶಿಸ್ತಿನ ಕ್ರಮ ತೆಗೆದುಕೊಳ್ಳವಂತೆ ಮಾಡುವುದಾಗಿ ಹೇಳಿದರು.
ಕನ್ನಡ ಬಾವುಟ ಹಾರಿಸುವ, ಕನ್ನಡ ನಾಮಫಲಕಗಳ ಬಳಕೆ ವಿಚಾರವಾಗಿ ಮಹಾನಗರ ಪಾಲಿಕೆಯ ಅಧಿಕಾರಿಗಳ ಜೊತೆ ಹಾಗೂ ಶಿಕ್ಷಣ ವಿಷಯಕ್ಕೆ ಸಂಬಂಧಿಸಿದಂತೆ ಸಾರಿಗೆ ಸೌಲಭ್ಯ ವಿಚಾರವಾಗಿ ಸಾರಿಗೆ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದರು. ಇದನ್ನೂ ಓದಿ: ಜಿಎಸ್‌ಟಿ ಶಾಕ್ – ಯಾವ ಯಾವ ವಸ್ತುಗಳ ಬೆಲೆ ಎಷ್ಟೆಷ್ಟು ಏರಿಕೆ?
ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು ಹಾಗೂ ಕನ್ನಡಪರ ಸಂಘಟನೆಗಳು ನೀಡಿದ ಕನ್ನಡ ಭಾಷೆ ಅನುಷ್ಠಾನ ಕುರಿತ ಸಮಸ್ಯೆಗಳನ್ನು ಸೋಮವಾರ(ಜು.18) ನಡೆಯುವ ಜಿಲ್ಲಾಮಟ್ಟದ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳುವ ಕಾರ್ಯ ಮಾಡಲಾಗುವುದು ಎಂದು ನಾಗಾಭರಣ ಹೇಳಿದರು.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗುರುವಾರ ಮಧ್ಯಾಹ್ನ 3ಕ್ಕೆ ಜರ್ಮನಿಯ ಬವೇರಿಯಾ ರಾಜ್ಯದ ರಾಜಧಾನಿಯಾದ ಮ್ಯೂನಿಕ್ ನಗರದ ಸಿರಿಗನ್ನಡ ಕೂಟದ ಸದಸ್ಯರೊಂದಿಗೆ ಹಾಗೂ ಭಾರತದ ರಾಯಭಾರಿ ಕಚೇರಿಯ ವಾಣಿಜ್ಯ, ಶಿಕ್ಷಣ ಮತ್ತು ಮಾಹಿತಿ ವಿಭಾಗದ ಕಾನ್ ಸುಲ್ ಅಧಿಕಾರಿಗಳಾದ ಡಾ.ಸುಯಶ್ ಚವ್ಹಾಣ್ ಅವರೊಂದಿಗೆ ಸಂಪರ್ಕ ಜಾಲ ಸಭೆ ನಡೆಸಲಾಯಿತು.
ಮ್ಯೂನಿಕ್ ನಗರದ ಸಿರಿಗನ್ನಡ ಕೂಟದ ಸದಸ್ಯರಾದ ಶ್ರೀಧರ್ ಲಕ್ಷ್ಮೀಪುರ ಅವರು ಮೊದಲಿಗೆ ಸಿರಿಗನ್ನಡ ಕೂಟದ ಬಗ್ಗೆ ಮಾಹಿತಿ ನೀಡಿದ್ದು, ಜರ್ಮನಿಯಲ್ಲಿರುವ ಹಳೆಯ ಕನ್ನಡ ಕೂಟ ಇದಾಗಿದೆ. 10 ವರ್ಷಗಳಿಂದ ಸಕ್ರಿಯವಾಗಿರುವ ಕೂಟ ಮ್ಯೂನಿಕ್ ನಗರದಲ್ಲಿ ಕನ್ನಡದ ಸಾಂಸ್ಕೃತಿಕ ವಾತಾವರಣ ಸೃಷ್ಟಿಸುವುರೊಂದಿಗೆ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಜರ್ಮನ್ ದೇಶದಲ್ಲಿ ಸಾರುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನೋಡಿ ಭಾವುಕರಾದ ಶಾಸಕ ಡಾ.ಭರತ್ ಶೆಟ್ಟಿ
ನಂತರ ಮ್ಯೂನಿಕ್ ನಗರದಲ್ಲಿರುವ ಭಾರತದ ರಾಯಭಾರಿ ಕಚೇರಿಯ ವಾಣಿಜ್ಯ, ಶಿಕ್ಷಣ ಮತ್ತು ಮಾಹಿತಿ ವಿಭಾಗದ ಕಾನ್ ಸುಲ್ ಅಧಿಕಾರಿಗಳಾದ ಡಾ.ಸುಯಶ್ ಚವ್ಹಾಣ್ ಮಾತನಾಡಿದರು. ಶಿಕ್ಷಣದಲ್ಲಿ ಕನ್ನಡ ಅನುಷ್ಠಾನ ವಿಚಾರದಲ್ಲಿ ಪ್ರಾಧಿಕಾರದ ಕ್ರಮಗಳನ್ನು ಬಗ್ಗೆ ಶಾಘ್ಲಿಸಿದ ಅವರು, ಮ್ಯೂನಿಕ್ ನಗರದಲ್ಲಿ ಕರ್ನಾಟಕದ ಸಂಸ್ಕೃತಿಯನ್ನು ಪಸರಿಸಲು ಪ್ರಾಧಿಕಾರದ ಸಹಯೋಗವನ್ನು ಕೋರಿದರು.
ಭದ್ರತೆ, ಶಿಕ್ಷಣ, ಮಾಹಿತಿ, ಸಾಂಸ್ಕೃತಿಕ ವಿನಿಯಮ ವಿಚಾರಗಳಲ್ಲಿ ಕರ್ನಾಟಕ ಸರ್ಕಾರ ಮತ್ತು ಬವೇರಿಯಾ ಸರ್ಕಾರ ಯೋಚಿಸುವ ರೀತಿ ಒಂದೇ ತೆರನಾದ್ದಗಿರುತ್ತದೆ ಎಂದರು. ಸಿರಿಗನ್ನಡ ಕೂಟದ ಸದಸ್ಯರಾದ ರಶ್ಮಿ ನಾಗರಾಜ್ ಅವರು ಮಾತನಾಡಿ, ಮ್ಯೂನಿಕ್ ನಗರದಲ್ಲಿ ಕನ್ನಡ ಕಲಿಯಲು ಆಸಕ್ತಿ ಇರುವವರಿಗೆ ಕನ್ನಡ ಭಾಷೆಯನ್ನು ಕಲಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಗತ್ಯ ನೆರವನ್ನು ಒದಗಿಸಬೇಕೆಂದು ಮನವಿ ಮಾಡಿದರು.
ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು, ಮ್ಯೂನಿಕ್ ನಗರದಲ್ಲಿ ಕನ್ನಡ ಕಲಿಯಲು ಇಚ್ಛಿಸುವ ಮಂದಿಗೆ ಹಾಗೂ ಸಿರಿಗನ್ನಡ ಕೂಟದ ಕನ್ನಡ ಕಲಿ ನಲಿಯ ಶಿಕ್ಷಕರಿಗೆ ಪ್ರಾಧಿಕಾರದಿಂದ 2022 ಏಪ್ರಿಲ್ 3ರಂದು ಆನ್ಲೈನ್ ನಲ್ಲಿ ಕನ್ನಡ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಸರ್ಕಾರ ಮತ್ತು ಬವೇರಿಯಾ ಸರ್ಕಾರದ ಮಧ್ಯೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ವೇದಿಕೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಧ್ಯಸ್ಥಿಕೆ ವಹಿಸಲಿದೆ. ಕರ್ನಾಟಕ ಸರ್ಕಾರ ಮತ್ತು ಬವೇರಿಯಾ ಸರ್ಕಾರದ ಮಧ್ಯೆ ಈ ಹಿಂದೆ ಒಡಂಬಡಿಕೆಯ ಅಂಶಗಳನ್ನು ಊರ್ಜಿತಗೊಳಿಸಲು ಅಗತ್ಯ ಕ್ರಮ ವಹಿಸಬೇಕು ಹಾಗೂ ಕನ್ನಡ ಭಾಷೆಯನ್ನು ಕಲಿಯಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಬವೇರಿಯಾ ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಅವಕಾಶ ಕಲ್ಪಿಸಲು ಕ್ರಮ ವಹಿಸುವುದು. ಕನ್ನಡ ಭಾಷೆಯ ಆಯ್ಕೆಗೆ ಅಲ್ಲಿನ ಸರ್ಕಾರ ಅವಕಾಶ ನೀಡುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಟಿ.ಎಸ್.ನಾಗಾಭರಣ ಅವರು ತಿಳಿಸಿದರು. ಇದನ್ನೂ ಓದಿ: ಪಿಯಾನೋ ನುಡಿಸುತ್ತಾ ಹಾಡಲು ಪ್ರಯತ್ನಿಸುತ್ತಿರುವ ನಾಯಿ – ವೀಡಿಯೋ ಎಂಜಾಯ್ ಮಾಡುತ್ತಿರುವ ನೆಟ್ಟಿಗರು
ಇದಕ್ಕೆ ಕಾನ್ ಸುಲ್ ಅಧಿಕಾರಿಗಳಾದ ಡಾ.ಸುಯಶ್ ಚವ್ಹಾಣ್ ಅವರು ಒಪ್ಪಿಗೆ ಸೂಚಿಸಿದರು. ನಂತರ ವಿದೇಶದಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಿರುವ ಸಿರಿಗನ್ನಡ ಕೂಟದ ಕಾರ್ಯ ಶಾಘ್ಲನೀಯವಾದ್ದು. ಈ ಕೂಟದ ಕಾರ್ಯಗಳು ಇತರೆ ದೇಶಗಳಲ್ಲಿರುವ ಕನ್ನಡ ಕೂಟಗಳಿಗೆ ಮಾದರಿಯಾಗಲಿ ಎಂದು ಹಾರೈಸಿದ ಪ್ರಾಧಿಕಾರದ ಅಧ್ಯಕ್ಷರು ಕನ್ನಡ ಸಂಸ್ಕøತಿಯನ್ನು ಅನ್ಯ ನೆಲೆದಲ್ಲಿ ಪಸರಿಸುವ ಕಾರ್ಯಕ್ಕೆ ಪ್ರಾಧಿಕಾರ ಅಗತ್ಯ ಸಹಕಾರ ಒದಗಿಸಲಿದೆ ಎಂದು ತಿಳಿಸಿದರು.
ಬೆಂಗಳೂರು: ಚಂದನವನದ ಹಿರಿಯ ನಟಿ, ರಂಗಭೂಮಿ, ಕಿರುತೆರೆಗಳಲ್ಲಿ ಸಕ್ರಿಯರಾಗಿದ್ದ ಭಾರ್ಗವಿ ನಾರಾಯಣ್ ಅವರ ನಿಧನಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಸಂತಾಪ ಸೂಚಿಸಿದ್ದಾರೆ.
1970ರಲ್ಲಿ ಮೊಟ್ಟ ಮೊದಲ ಬಾರಿಗೆ ನಾಗಾಭರಣ ಅವರು ನಿರ್ದೇಶಿಸುತ್ತಿದ್ದ ಬಕ ನಾಟಕದಲ್ಲಿ ಅಭಿನಯಿಸುವಂತೆ ಅವರನ್ನು ಕೇಳಲಾಗಿತ್ತು. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಭಾರ್ಗವಿ ಒಂದು ತಿಂಗಳ ಕಾಲ ನಾಟಕದ ತಾಲೀಮಿಗೆ ಬರುತ್ತಿದ್ದರು. ಆ ಸಮಯದಲ್ಲಿ ಅವರು ಹೆಸರಾಂತ ನಟಿಯಾಗಿ ಗುರುತಿಸಿಕೊಂಡಿದ್ದರು. ಬಹಳ ದೊಡ್ಡ ಹೆಸರಿದ್ದ ನಟಿಯಾದರೂ ಭಾರ್ಗವಿ ಅವರು ಸಮಯಕ್ಕೆ ಸರಿಯಾಗಿ ನಾಟಕದ ತಾಲೀಮಿಗೆ ಆಗಮಿಸುತ್ತಿದ್ದರು. ಅವರಲ್ಲಿದ್ದ ಶ್ರದ್ಧೆ, ಸಮಯ ಬದ್ಧತೆ, ಶಿಸ್ತು ಇತರರಿಗೆ ಮಾದರಿಯಾಗಿತ್ತು ಎಂದು ಟಿ.ಎಸ್.ನಾಗಾಭರಣ ಅವರು ತಿಳಿಸಿದ್ದಾರೆ. ಇದನ್ನೂ ಓದಿ:ಹಿರಿಯ ಕಲಾವಿದೆ ಭಾರ್ಗವಿ ನಾರಾಯಣ್ ಇನ್ನಿಲ್ಲ
ಮೆಕಪ್ ನಾಣಿ ಅವರ ನನ್ನ ಗುರುಗಳಾಗಿದ್ದರು. ಭಾರ್ಗವಿ ನಾರಾಯಣ್ ನನ್ನ ಗುರು ಮಾತೆಯಾಗಿದ್ದರು. ಸಿನಿಮಾ ಮತ್ತು ರಂಗಭೂಮಿಯಲ್ಲಿ ಅವರು ನನಗೆ ಬೆನ್ನುಲುಬಾಗಿದ್ದರು. ನನ್ನ ಕಾಯಕದಲ್ಲಿ ಅವರು ಸದಾ ಭರವಸೆ ತುಂಬುವ ವ್ಯಕ್ತಿಯಾಗಿದ್ದರು. ಅವರ ಅಗಲಿಕೆಯಿಂದ ಅಪಾರ ನೊವು ಉಂಟಾಗಿದೆ ಎಂದು ಕ.ಅ.ಪ್ರಾ. ಅಧ್ಯಕ್ಷರು ತಿಳಿಸಿದ್ದಾರೆ.
ಭಾರ್ಗವಿ ಅವರಿಗೆ ಯಾವುದೇ ಪಾತ್ರ ಕೊಟ್ಟರೂ ಅದನ್ನು ಅನಾಯಾಸವಾಗಿ ಮಾಡುತ್ತಿದ್ದರು. ಇವರಿಗೆ ರಾಜ್ಯ ಚಲನಚಿತ್ರ ಪ್ರಶಸ್ತಿ, ಅತ್ಯುತ್ತಮ ಪೋಷಕ ನಟಿ ,ರಾಜ್ಯನಾಟಕ ಅಕಾಡೆಮಿ ಪ್ರಶಸ್ತಿ,ಮಂಗಳೂರು ಪ್ರತಿಷ್ಠಿತ ಸಂದೇಶ ಪ್ರಶಸ್ತಿ ಆಳ್ವಾಸ್ ನುಡಿಸಿರಿ ಪ್ರಶಸ್ತಿ ಲಭಿಸಿವೆ. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆನೆಂದು ಟಿ.ಎಸ್.ನಾಗಾಭರಣ ಅವರು ತಿಳಿಸಿದ್ದಾರೆ.
ಆರೋಗ್ಯ ಸಚಿವ ಹಿರಿಯ ನಟಿ, ರಂಗಭೂಮಿ ಕಲಾವಿದೆ ಶ್ರೀಮತಿ ಭಾರ್ಗವಿ ನಾರಾಯಣ್ ಅವರ ನಿಧನದಿಂದ ಕನ್ನಡ ಚಿತ್ರರಂಗ ಹಾಗೂ ಕಿರುತರೆಗೆ ತುಂಬಲಾರದ ನಷ್ಟವಾಗಿದೆ. ತಮ್ಮ ಸಹಜ ಅಭಿನಯದಿಂದ ಕನ್ನಡಿಗರ ಪಾಲಿನ ಪ್ರೀತಿಯ ಅಜ್ಜಿಯಾಗಿದ್ದ ಶ್ರೀಮತಿ ಭಾರ್ಗವಿ ನಾರಾಯಣ್ ಅವರು ಟಿ.ಎನ್.ಸೀತಾರಾಮ್ ಅವರ ಮುಕ್ತ ಧಾರಾವಾಹಿಯಲ್ಲಿ ಅಜ್ಜಿ ಪಾತ್ರದ ಮೂಲಕ ಮನೆ ಮಾತಾಗಿದ್ದರು. ಅವರ ಆತ್ಮಕ್ಕೆ ಸದ್ಗತಿ ದೊರಕಲಿ, ಅವರ ಮಕ್ಕಳಾದ ಶ್ರೀ ಪ್ರಕಾಶ್ ಬೆಳವಾಡಿ, ಶ್ರೀಮತಿ ಸುಧಾ ಬೆಳವಾಡಿ ಸೇರಿದಂತೆ ಅವರ ಎಲ್ಲ ಕುಟುಂಬ ಸದಸ್ಯರಿಗೆ, ಅಭಿಮಾನಿಗಳಿಗೆ ಹಾಗೂ ಸ್ನೇಹಿತರಿಗೆ ಈ ಅಗಲಿಕೆಯನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ. ಎಂದು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ವಿಜಯ್ ಕಿರಗಂದೂರ್ ಟ್ವೀಟ್ ಮಾಡಿ, ಉತ್ತಮ ಬರವಣಿಗೆ, ಅದ್ಭುತ ನಟನೆ ಮೂಲಕ, ಪ್ರತೀ ಪಾತ್ರಕ್ಕೆ ಜೀವ ತುಂಬುತ್ತಿದ್ದ ನಾಡಿನ ಹಿರಿಯ ಕಲಾವಿದರು ಭಾರ್ಗವಿ ನಾರಾಯಣ್ ಅವರ ಅಗಲಿಕೆಯ ಸುದ್ದಿ ತಿಳಿದು ನೋವಾಯಿತು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕಲಾವಿದ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥನೆ. ಓಂ ಶಾಂತಿ.
ಧಾರವಾಡ: ಕರ್ನಾಟಕಕ್ಕೆ ಮಹಿಳಾ ಸಿಎಂ ಆಗೋದು ಯಾವಾಗ? ಎಂದು ಚಲನಚಿತ್ರ ನಿರ್ದೇಶಕ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಟಿ.ಎಸ್ ನಾಗಾಭರಣ ಪ್ರಶ್ನೆ ಹಾಕಿದ್ದಾರೆ.
ಕನ್ನಡ ನಾಡು ನುಡಿ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ನಮ್ಮ ಕರ್ನಾಟಕ ರಾಜ್ಯವಾಗಿ ಎಷ್ಟು ವರ್ಷ ಆಯ್ತು? ಒಬ್ಬ ಮಹಿಳೆಯಾದರು ಇಲ್ಲಿಯವರೆಗೆ ಸಿಎಂ ಆಗಿದ್ದಾರೆಯೇ? ಬೇರೆ ರಾಜ್ಯಗಳ ಕಡೆ ಖಂಡಿತ ಆಗಿದ್ದಾರೆ ಇಲ್ಲ ಅಂತಿಲ್ಲ. ಒಬ್ಬರಾದರೂ ನಮ್ಮ ರಾಜ್ಯದಲ್ಲಿ ಆಗಿಬೇಕಿತ್ತಲ್ಲವಾ? ಮಹಿಳಾ ಪ್ರಾತಿನಿಧ್ಯ ರಾಜಕೀಯದಲ್ಲಿ ಎಷ್ಟಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಹೆಣ್ಣು ಕುಲಕ್ಕೆ ಕ್ಷಮೆ ಕೇಳಿದ ರಮೇಶ್ ಕುಮಾರ್ – ಮುಂದುವರಿಸೋದು ಬೇಡ ಎಂದ ಸ್ಪೀಕರ್ ಕಾಗೇರಿ
ಸಾಹಿತ್ಯ, ಸಾಂಸ್ಕೃತಿಕ, ಆಡಳಿತದಲ್ಲಿ ಮಹಿಳೆಯ ಬಗ್ಗೆ ಯೋಚನೆ ಮಾಡುತ್ತೇವೆ. ಆದರೆ ಮಹಿಳೆಯರು ರಾಜಕಾರಣದಲ್ಲಿ ಬೆಳೆದಾಗ ಮಾತ್ರ ಒಂದು ಶಕ್ತಿ ಆಗಲು ಸಾಧ್ಯ. ಪ್ರಜಾಪ್ರಭುತ್ವದ ಪರಿಧಿಯಲ್ಲಿ ಮಹಿಳಾ ಶಕ್ತಿ ಹುಟ್ಟು ಹಾಕಬೇಕಿದೆ. ಇಂದಿರಾಗಾಂಧಿ, ಮಮತಾ ಬ್ಯಾನರ್ಜಿಯಂತೆ ಕರ್ನಾಟಕದಲ್ಲಿಯೂ ಒಬ್ಬ ಮಹಿಳೆ ಸಿಎಂ ಆಗಬೇಕು ಎಂದರು.
ಪ್ರಸ್ತುತ ನಟರ ನಡತೆ ಬಗ್ಗೆ ನಿರ್ದೇಶಕ ನಾಗಾಭರಣ ಬೇಸರ ವ್ಯಕ್ತಪಡಿಸಿದ್ದು, ನೀವು ಸಿನಿಮಾ ನಟರ ಸಂದರ್ಶನ ನೋಡಿರಬಹುದು. ಟಿವಿ ಮೈಕ್ ಮೀಡಿಯಾ ಮುಂದೆ ಕುಳಿತುಕೊಳ್ಳುವ ಭಂಗಿ ನೋಡಬೇಕು. ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಮರೀಂದರ್ ಹೊಸ ಪಕ್ಷ ಸ್ಥಾಪನೆ – ರೈತರ ಸಮಸ್ಯೆ ಪರಿಹಾರವಾದರೆ ಬಿಜೆಪಿ ಜೊತೆ ಮೈತ್ರಿ
ಹಿಂದಿನ ಯಾವ ನಟರೂ ಆ ರೀತಿ ಕುಳಿತುಕೊಳ್ಳಿತ್ತಿರಲಿಲ್ಲ. ಹಾಗೆಯೇ ಅವರು ಸಂದರ್ಶನದಲ್ಲಿ ಮಾತನಾಡುವ ಭಂಗಿ ನೋಡಬೇಕು ನಿಮ್ಮ ಪಾತ್ರ ಹೇಗಿದೆ? ಅಂತಾ ಕೇಳಿದರೆ ಪಾತ್ರ ಡಿಫರೆಂಟ್ ಇದೆ ಅಂತಾರೆ. ಏನು ಆ ಡಿಫರೆಂಟ್? ಅಂತಾ ಕೇಳಿದರೆ. ಬಹಳ ಡಿಫರೆಂಟ್ ಆಗಿದೆ ಅಂತಾರೆ. ಅದು ಏನು ಅನ್ನೋದು ಮಾತ್ರ ಗೊತ್ತಿಲ್ಲ ಅನ್ನತ್ತಾರೆ ಎಂದು ಸಿಡಿದರು.
ಬೆಂಗಳೂರು: ಭಾಷೆ ಮತ್ತು ಸಂಸ್ಕೃತಿಯಿಂದಲೇ ಸಮುದಾಯಗಳು ತಮ್ಮ ಅಸ್ಮಿತೆಯನ್ನು ಗುರುತಿಸಿಕೊಳ್ಳುವುದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಹೇಳಿದ್ದಾರೆ.
ನಾಯರಿ ಜನಾಂಗೀಯ ಅಧ್ಯಯನ ಮತ್ತು ಸಂಶೊಧನಾ ಪ್ರತಿಷ್ಠಾನದ ಕಾರ್ಯಗಳಿಗೆ ಸೆ.9 ಗುರುವಾರದಂದು ಟಿ.ಎಸ್.ನಾಗಾಭರಣ ಚಾಲನೆ ನೀಡಿದರು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕುಂದಾಗನ್ನಡದ ಮೂಲ ಪರಿಕಲ್ಪನೆಯ ಅಧ್ಯಯನದಲ್ಲಿ ನಾಯರಿ ಜನಾಂಗ ಬಹುಮುಖ್ಯವಾಗಲಿದೆ. ಕುಂದಾಗನ್ನಡದ ಮೂಲ ಸ್ವರೂಪದ ಅಂಶಗಳು ದೊರಕುವುದು ನಾಯರಿ ಜನಾಂಗ ಬಳಸುವ ಭಾಷೆಯಿಂದ ಎಂದರು. ಇದನ್ನೂ ಓದಿ: ಫುಲ್ ಒಳ್ಳೆ ಹುಡುಗನ ರೀತಿ ಡವ್ ಎಂದ ಬ್ರೊ ಗೌಡ
ಭಾಷೆ ಮತ್ತು ಸಂಸ್ಕೃತಿಯಿಂದಲೇ ಸಮುದಾಯಗಳೆಲ್ಲ ತಮ್ಮ ಅಸ್ಮಿತೆಯನ್ನು ಗುರುತಿಸಿಕೊಳ್ಳುವುದು. ಹೀಗೆ ನಾಯರಿ ಜನಾಂಗದ ಅಸ್ಮಿತೆ ಕುಂದಾಗನ್ನಡದ ಮೂಲ ಭಾಷೆಯಾಗಿದೆ. ಈ ಬಗ್ಗೆ ಸಂಶೋಧನೆಗಳು ನಡೆಯಬೇಕು. ಕುಂದಾಗನ್ನಡದ ಮೂಲ ಅಸ್ಮಿತೆಯ ಸಂಶೋಧನಾ ಕಾರ್ಯಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪೂರಕವಾಗಿ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು. ವಿನಾಶದ ಅಂಚಿನಲ್ಲಿರುವ ನಾಯರಿ ಜನಾಂಗದ ಅಸ್ಮಿತೆಯನ್ನು ರಕ್ಷಿಸುವಂತೆ ಕೋರಿ ಮನವಿ ಮಾಡಿದರು. ಇದನ್ನೂ ಓದಿ: ನಿಫಾ ತಡೆಯಲು ಮುನ್ನೆಚ್ಚೆರಿಕೆ ವಹಿಸೋಣ, ಸೋಂಕು ತಡೆಯೋಣ ನಾಣ್ಣುಡಿಯೊಂದಿದೆ ಗಡಿಯಲ್ಲಿ ಜಾಗೃತಿ
ಈ ಸಂದರ್ಭದಲ್ಲಿ ಮಾತನಾಡಿದ ನಾಯರಿ ಜನಾಂಗೀಯ ಅಧ್ಯಯನ ಮತ್ತು ಸಂಶೋಧನಾ ಪ್ರತಿಷ್ಠಾನದ ಸಲಹಾ ನಿರ್ದೇಶಕರಾದ ಗೋಪಾಲಕೃಷ್ಣ ನಾಯರಿ, ಉಡುಪಿ ಜಿಲ್ಲೆಯ ಕುಂದಗನ್ನಡದ ಸಂಸ್ಕøತಿಯಷ್ಟೇ ಮೂಲದ ಮಿತಿಯಿಂದ ಏಕೈಕ ಬುಡಕಟ್ಟಿನ ನಾವು ನಾಯರಿ ಜನಾಂಗದವರಾಗಿದ್ದು, ಸಾಂಖ್ಯಿಕವಾಗಿ ರಾಜ್ಯದಲ್ಲೇ ಸರಿಸುಮಾರು ಮೂರರಿಂದ ನಾಲ್ಕು ಸಾವಿರದ ಗಡಿಯನ್ನು ದಾಟದವರು. ಮೂಲತಃ ಕುಂದಗನ್ನಡದ ಮಾತೃಭಾಷಿಕರಾದ ನಮ್ಮನ್ನು ಮುಖ್ಯ ವಾಹಿನಿಗಳು ಸಾಮಾನ್ಯವಾಗಿ ಕೇರಳದ ನಾಯರ್‍ಗಳು ಎಂದು ಗ್ರಹಿಸಿಕೊಂಡು ಬಂದಿರುವುದು ವಿಷಾದದ ಸಂಗತಿ ಎಂದರು.
ಉಡುಪಿಯ ಹತ್ತಾರು ಕಡೆಗಳಲ್ಲಿ ನಾಯರಿಕೆರೆ, ನಾಯರಿಬೆಟ್ಟು, ನಾಯರಿಹಾಡಿ, ನಾಯರಿಅಡಿ, ನಾಯರಿಮಠ, ನಾಯರಿಕೇರಿ ಮುಂತಾದ ಪ್ರದೇಶ ಸೂಚಿಗಳಿದ್ದು, ಬಹುತೇಕ ಕೇರಳದ ನಾಯರ್‍ಗಳೊಂದಿಗೆ ವಿಕೃತಿ ಸ್ವರೂಪವನ್ನು ಪಡೆದಿರುವುದು ಶೋಚನೀಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ರಾಜ್ಯದ ಏಕೈಕ ಸ್ವರ್ಣ ಗೌರಿ ದೇವಾಲಯದಲ್ಲಿಲ್ಲ ಪೂಜೆ, ಪುನಸ್ಕಾರ
ಏನಿದು ನಾಯರಿ?
12ನೇ ಶತಮಾನದ ನನ್ನಿದೇವನು ಉಡುಪಿಯ ನಾಯರಿ ಎಂಬ ಬಂಟನೊಂದಿಗೆ ಕಠ್ಮಂಡುವಿನಲ್ಲಿ ಸಾಮ್ರಾಜ್ಯ ಸ್ಥಾಪನೆ ಮಾಡಿ ಪಶುಪತಿ ದೇವಸ್ಥಾನದ ಪ್ರಸಿದ್ಧಿಗೆ ಕಾರಣಕರ್ತನಾಗಿರುವುದನ್ನು ಶಾಸನಗಳ ಸಾಕ್ಷ್ಯಗಳೊಂದಿಗೆ ಹಿರಿಯ ಸಂಶೋಧಕ ಡಾ.ಚಿದಾನಂದಮೂರ್ತಿ ಅವರು ಪ್ರಸ್ತಾಪಿಸಿರುತ್ತಾರೆ ಎಂದು ಮಾಹಿತಿ ನೀಡಿದರು.
ನಮ್ಮ ಜನಾಂಗದ ಬಗ್ಗೆ ವಸಾಹತು ಭಾರತದಲ್ಲಿ ಸೌತ್ ಕೆನರಾ ಡಿಸ್ಟ್ರಿಕ್ಟ್ ನ ಗೆಜೆಟಿಯರ್ ಪ್ರಕಾರ ನಾ-ಯಿರಿ ಎಂದರೆ ಭೂಮಿಯನ್ನು ಉಳುವವನು ಎಂಬರ್ಥ ಇರುವುದಾಗಿ ನಮೂದಿಸಿದೆ. ಭೂಮಿಕಾಣಿಕೆಯ ವಿಷಯದಲ್ಲೂ ನಾಯರಿ ಮೂಲ ಮತ್ತು ದೇವ ಮೂಲವೇ ಪ್ರಧಾನವಾಗಿ ಇರುವುದನ್ನು ಕಾಣುತ್ತೆ. ನಾವು ನಾಯಿರಿಗಳು ಕುಂದಗನ್ನಡದ ಮೂಲ ಅಥವಾ ಆದಿವಾಸಿಗಳೆಂಬುದರಲ್ಲಿ ಸಂಶಯವಿಲ್ಲ. ಕನ್ನಡದ ಕಡಲತೀರದ ಭಾರ್ಗವ ಶಿವರಾಮಕಾರಂತ ಹಾಗೂ ಅವರ ಸಹೋದರ ಕೋ.ಲ.ಕಾರಂತರು ಕೂಡ ಹಲವು ಬಾರಿ ನಮ್ಮನ್ನು ಕನ್ನಡದ್ದೇ ಆದ ವಿಶಿಷ್ಟ ಜನಾಂಗ ಎಂದು ಕರೆದಿರುವುದು ಮತ್ತು ಗುರುತಿಸಿರುವುದನ್ನು ಅಲ್ಲಗಳೆಯುವಂತಿಲ್ಲ ಎಂದರು. ಇದನ್ನೂ ಓದಿ: ಸಿಲಿಂಡರ್ ಸ್ಫೋಟ- ಮೊಮ್ಮಗಳ ಸಮಯ ಪ್ರಜ್ಞೆಯಿಂದ ಉಳೀತು ಅಜ್ಜಿ ಜೀವ
ಕನ್ನಡಿಗರಾಗಿದ್ದರೂ ಪರಭಾಷಿಕರು!
ಮೂಲತಃ ಕುಂದಗನ್ನಡದ ನಾಡಾಡಿಗಳೇ ಆದ ನಾವು, ಕೇವಲ ನಮ್ಮ ಜನಾಂಗೀಯ ಹೆಸರಿನ ಸಾಮ್ಯತೆಯು ಕೇರಳದ ನಾಡಿಗಂಟಿದೆ. ಈ ಕಾರಣ ನಾವುಗಳು ಕರ್ನಾಟಕದಲ್ಲಿದ್ದು, ನೂರಕ್ಕೆ ನೂರರಷ್ಟು ಕನ್ನಡಿಗರಾಗಿದ್ದರೂ ಪರಭಾಷಿಕರಾಗಿ ಗುರುತಿಸಲ್ಪಡುತ್ತಿರುವುದು ವಿಷಾದದ ಸಂಗತಿ. ನಮ್ಮದು ಮಾತೃ ಪ್ರಧಾನ ಕುಟುಂಬದ ಸಂಸ್ಕøತಿಯಾಗಿದ್ದು, ಸೋದರಿಕೆಯ ಅಳಿ ಸಂತನ. ಬಂಟರಲ್ಲಿರುವ ಅಳಿ ಸಂತನದ ಪರಿಕಲ್ಪನೆಗೂ ನಾಯರಿ ಸಮುದಾಯದಲ್ಲಿರುವ ಸೋದರಿಕೆಯ ಅಳಿ ಸಂತನಕ್ಕೆ ವ್ಯತ್ಯಾಸವಿದೆ ಎಂದು ತಿಳಿಸಿದರು.
ವಿನಾಶದ ಅಂಚಿಗೆ ಸರಿದಿರುವ ನಮ್ಮನ್ನು ನಾಡಾಡಿ ಕನ್ನಡಿಗರನ್ನಾಗಿ ಉಳಿಸಿಕೊಡಲು ಯೋಜಿಸಿ ಅನುಷ್ಠಾನಕ್ಕೆ ತಂದು ಕನ್ನಡದ್ದೇ ಆದ ವಿಶಿಷ್ಟ ಅಸ್ಮಿತೆಯನ್ನು ನಮ್ಮೊಂದಿಗೆ ಕಾಪಾಡಿಕೊಡಬೇಕೆಂದು ಮನವಿ ಮಾಡಿದರು. ಇದನ್ನೂ ಓದಿ: ಊಸರವಳ್ಳಿಯಂತೆ ಬಣ್ಣ ಬದಲಾಗುವ ಚರ್ಮ ಮನುಷ್ಯನಿಗೂ ಬಂತು
ಕನ್ನಡಪರ ಚಿಂತಕರಾದ ರಾ.ನಂ.ಚಂದ್ರಶೇಖರ್, ನಾಯರಿ ಜನಾಂಗೀಯ ಅಧ್ಯಯನ ಮತ್ತು ಸಂಶೋಧನಾ ಪ್ರತಿಷ್ಠಾನದ ಉಪಾಧ್ಯಕ್ಷರಾದ ಕೆ.ಶಂಕರ್, ವಿ.ಸೂರ್ಯಕಲಾ, ಸಹ ಕಾರ್ಯದರ್ಶಿಗಳಾದ ಕೆ.ಎಂ.ರಾಮಚಂದ್ರ ನಾಯರಿ, ಸಂಪಾದನ-ದಾಖಲಾ ಮಂಡಳಿಯ ವೆಂಕಟೇಶ್ ಜಿ.ನಾಯರಿ ಅವರು ಈ ವೇಳೆ ಹಾಜರಿದ್ದರು.
ಬೆಂಗಳೂರು: ಕನ್ನಡ ಭಾಷಾ ಕಲಿಕಾ ಅಧಿನಿಯಮ-2015ರ ಅನ್ವಯ 2017-18ನೇ ಸಾಲಿನಿಂದ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಸುವುದು ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಶೈಕ್ಷಣಿಕ ಸಂಸ್ಥೆಗಳಿಗೆ ಕಡ್ಡಾಯಗೊಳಿಸಲಾಗಿದೆ. ಆದರೆ ಕೆಲ ಶಾಲೆಗಳು ಈ ನಿಯಮವನ್ನು ಪಾಲಿಸುತ್ತಿಲ್ಲ. ಈ ಬಗ್ಗೆ ಗಮನ ಹರಿಸಿ ಕನ್ನಡ ಭಾಷಾ ಕಲಿಕಾ ಅಧಿನಿಯಮ-2015ರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರಿಗೆ ಮನವಿ ಮಾಡಿದರು.
2017-18ನೇ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗಿ 2020-21ನೇ ಶೈಕ್ಷಣಿಕ ವರ್ಷಕ್ಕೆ 4ನೇ ತರಗತಿ ಮಕ್ಕಳಿಗೆ ಈ ನಿಯಮದಡಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಿರಬೇಕಿತ್ತು. ಆದರೆ ರಾಜ್ಯದಲ್ಲಿರುವ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಈ ನಿಯಮವನ್ನು ಉಲ್ಲಂಘಿಸುತ್ತಿರುವ ಬಗ್ಗೆ ಪ್ರಾಧಿಕಾರಕ್ಕೆ ನಿರಂತರವಾಗಿ ದೂರುಗಳು ಸಲ್ಲಿಕೆಯಾಗುತ್ತಿವೆ. ಕರ್ನಾಟಕ ರಾಜ್ಯ ಪಠ್ಯಪುಸ್ತಕ ಸಂಘದಿಂದ ಪ್ರಾಧಿಕಾರಕ್ಕೆ ಬಂದಿರುವ ಅಧಿಕೃತ ಮಾಹಿತಿ ಅನ್ವಯ 2021-22ನೇ ಶೈಕ್ಷಣಿಕ ವರ್ಷಕ್ಕೆ ರಾಜ್ಯದ ಸುಮಾರು 823 ಶಾಲೆಗಳು ಸರ್ಕಾರ ನಿಗದಿಪಡಿಸಿರುವ ಕನ್ನಡ ಪಠ್ಯಪುಸ್ತಕಗಳನ್ನು ಖರೀದಿಸಲು ಅಧಿಕೃತ ಪಟ್ಟಿ ಸಲ್ಲಿಸಿರುವುದಿಲ್ಲ. ಹೀಗಾಗಿ ಈ ಶಾಲೆಗಳು ಕನ್ನಡ ಭಾಷಾ ಕಲಿಕಾ ಅಧಿನಿಯಮ-2015 ಅನ್ನು ಸರಿಯಾಗಿ ಪಾಲಿಸುತ್ತಿರುವುದು ಅನುಮಾನ ಬರುವಂತಿದೆ. ಹೀಗಾಗಿ ಶಿಕ್ಷಣ ಇಲಾಖೆಯಲ್ಲಿನ ಎಲ್ಲ ಶೈಕ್ಷಣಿಕ ಜಿಲ್ಲೆಗಳ ಉಪ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಎನ್‍ಇಪಿ ಮೂಲಕ ಶಿಕ್ಷಣದಲ್ಲಿ ಸುಧಾರಣೆ: ಬಿ.ಸಿ.ನಾಗೇಶ್
1,2,3 ಮತ್ತು 4ನೇ ತರಗತಿಗೆ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಲಾಗಿದೆಯೇ ಪರಿಶೀಲಿಸುವುದು. ತರಗತಿಗಳಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪಠ್ಯಪುಸ್ತಕಗಳನ್ನು ಸಕ್ಷಮ ಪ್ರಾಧಿಕಾರದಿಂದ ಖರೀದಿಸಲಾಗಿದೆಯೇ? ಅಗತ್ಯ ದಾಖಲೆಗಳನ್ನು ಸಂಗ್ರಹಿಸುವುದು. ಕನ್ನಡ ವಿಷಯಕ್ಕೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಅರ್ಹ ಶಿಕ್ಷಕರನ್ನು ನೇಮಕ ಮಾಡಿರುವ ಬಗ್ಗೆ ಹಾಗೂ ಶಿಕ್ಷಕರಿಗೆ ನಿಯಮಾನುಸಾರ ತರಗತಿಗಳನ್ನು ಹಂಚಿಕೆ ಮಾಡಿರುವ ಬಗ್ಗೆ ಪರಿಶೀಲಿಸುವುದು. ವಿದ್ಯಾರ್ಥಿಗಳಿಗೆ 100 ಅಂಕದ ಕನ್ನಡ ಪರೀಕ್ಷೆಯನ್ನು ನಡೆಸಿರುವ ಬಗ್ಗೆ, ಅದರಂತೆ ಮೌಲ್ಯಮಾಪನ ಮಾಡಿರುವ ಬಗ್ಗೆ ಹಾಗೂ ಮೌಲ್ಯಮಾಪನದಂತೆ ಅಂಕಪಟ್ಟಿಯನ್ನು ವಿತರಿಸಿರುವ ಬಗ್ಗೆ ಪರಿಶೀಲಿಸಿ ದಾಖಲೆಗಳನ್ನು ಸಂಗ್ರಹಿಸುವುದು.
ಕನ್ನಡ ಭಾಷಾ ಕಲಿಕಾ ಅಧಿನಿಯಮ-2015ರಂತೆ ಉಳಿದೆಲ್ಲಾ ಅಗತ್ಯ ಪರಿಶೀಲನೆಗಳನ್ನು ನಡೆಸುವುದು. ಈ ಬಗ್ಗೆ 15 ದಿನಗಳೊಳಗಾಗಿ ಪ್ರಾಧಿಕಾರಕ್ಕೆ ವಿಸ್ತೃತ ವರದಿ ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಈ ಸಂಬಂಧ ಶೀಘ್ರದಲ್ಲಿಯೇ ನೂತನ ಶಿಕ್ಷಣ ಸಚಿವರೊಂದಿಗೆ ಉನ್ನತ ಮಟ್ಟದ ಸಮಿತಿ ಸಭೆ ಕರೆಯಲಾಗುವುದು ಎಂದು ಉಪನಿರ್ದೇಶಕರುಗಳಿಗೆ ಪತ್ರ ಬರೆಯಲಾಗಿದೆ ಎಂದು ಸಚಿವರಿಗೆ ಇದೇ ವೇಳೆ ಪ್ರಾಧಿಕಾರದ ಅಧ್ಯಕ್ಷರು ಮಾಹಿತಿ ನೀಡಿದರು. ಇದನ್ನೂ ಓದಿ: ಮಕ್ಕಳಿಗೆ ಸಾಂಸ್ಕೃತಿಕ ವಾತಾವರಣ ಕಟ್ಟಿಕೊಡಿ: ಟಿ.ಎಸ್ ನಾಗಾಭರಣ
ಈ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್ಲ ಹಾಜರಿದ್ದರು.
ಬೆಂಗಳೂರು: ಪ್ರೀತಿಯಿಂದ ಕನ್ನಡ ಕಲಿಸುವ ಕೆಲಸವಾಗಬೇಕು ಹೊರತು ಸರ್ಕಾರದ ಆದೇಶಗಳು, ಒತ್ತಾಯಗಳಿಂದ ಕನ್ನಡ ಕಲಿಸುವ ಕೆಲಸ ಅಸಾಧ್ಯ. ಜನರ ಹೃದಯದಲ್ಲಿ ಕನ್ನಡ ಭಾಷೆ ಕಲಿಯುವ ಇಚ್ಛೆ ಮೂಡಬೇಕು ಎಂದು ಶಿಕ್ಷಣ ತಜ್ಞರಾದ ಡಾ.ಗುರುರಾಜ ಕರ್ಜಗಿ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕನ್ನಡ ಜಾಗೃತಿ ಸಮಿತಿಯ ಸದಸ್ಯರ ಒಂದು ದಿನದ ರಾಜ್ಯಮಟ್ಟದ ಕಾರ್ಯಗಾರವನ್ನು ಬೆಂಗಳೂರಿನ ನಹಾದೇವ ದೇಸಾಯಿ ಸಭಾಂಗಣದಲ್ಲಿ ಇಂದು ಬೆಳಗ್ಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ.ಗುರುರಾಜ ಕರ್ಜಗಿ, ಕನ್ನಡದ ಜಾತ್ರೆಗಳು, ಉತ್ಸವಗಳು, ಕಾರ್ಯಕ್ರಮಗಳ ಕನ್ನಡದ ತೋರಣಗಳಂತೆ ಕಾಣುತ್ತವೆ. ಕನ್ನಡಕ್ಕೆ ತೋರಣದ ಜೊತೆ ಹೂರಣವೂ ಬೇಕು. ಹೀಗಾಗಿ ಕನ್ನಡ ಭಾಷೆಯ ಹೂರಣದ ಕೆಲಸವಾಗಬೇಕು ಎಂದು ತಿಳಿಸಿದರು.
ಕನ್ನಡವನ್ನು ದೈಹಿಕವಾಗಿ, ಭಾವನಾತ್ಮಕವಾಗಿ, ಬೌದ್ಧಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಬೆಳೆಸುವ ಕೆಲಸವಾಗಬೇಕು. ಸಾಹಿತಿಗಳು ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಬರೆಯಬೇಕು. ಹೀಗೆ ರಚಿತಗೊಂಡ ಸಾಹಿತ್ಯವನ್ನು ಜನ ಸಾಮಾನ್ಯರಿಗೆ ತಲುಪಿಸುವ ಕೆಲಸವು ಆಗಬೇಕು. ಜೀವನ ಮಾರ್ಗಕ್ಕಾಗಿ ಪೋಷಕರು ತಮ್ಮ ಮಕ್ಕಳಿಗೆ ಇಂಗ್ಲಿಷ್ ಭಾಷೆ ಕಲಿಸಲು ಮುಂದಾಗುತ್ತಾರೆ. ಕನ್ನಡದಿಂದಲೂ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂಬುದು ಪೋಷಕರಿಗೆ ಅರ್ಥವಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಗೊಂದು ಕನ್ನಡ ಮಾಧ್ಯಮ ಮಾದರಿ ಶಾಲೆಗಳನ್ನು ತೆರೆದು ಅಲ್ಲಿನ ಮಕ್ಕಳು ತಾಂತ್ರಿಕ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲೂ ಯಶಸ್ವಿಯಾಗುತ್ತಾರೆ ಎಂಬುದನ್ನು ಸಾಬೀತುಪಡಿಸಬೇಕು. ಆಗ ಪೋಷಕರು ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ದಾಖಲಿಸಲು ಮುಂದಾಗುತ್ತಾರೆ. ಕನ್ನಡ ಜಾಗೃತಿ ಸಮಿತಿ ಸದಸ್ಯರು ತಮ್ಮ ಊರುಗಳಲ್ಲಿ ವಾರಕ್ಕೊಂದು ಕನ್ನಡದ ಕಾರ್ಯಕ್ರಮಗಳನ್ನು ಮಾಡಿ ಜನಸಾಮಾನ್ಯರಿಗೆ ಕನ್ನಡ ಭಾಷೆಯನ್ನು ತಲುಪಿಸಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ರಾಜ್ಯದ ಎಲ್ಲ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಬುಕ್ ಬ್ಯಾಂಕ್ ಸ್ಥಾಪನೆಗೆ ಆದೇಶ
ಸಂಸ್ಕøತಿ ಚಿಂತಕ ಸುಚೇಂದ್ರ ಪ್ರಸಾದ್ ಮಾತನಾಡಿ, ಮನೋ ವಿಕೃತಿಗಳನ್ನು ತೊಡೆಯದೆ ಜಾಗೃತಿ ಆಗಲು ಸಾಧ್ಯವಿಲ್ಲ. ನಮ್ಮ ಭಾಷೆಗೆ ಸಂಬಂಧಿಸಿದಂತೆ ಅಭಿವೃದ್ಧಿ ಪ್ರಾಧಿಕಾರ, ಜಾಗೃತಿ ಸಮಿತಿಗಳು ರಚನೆಗೊಂಡಲೇ ಕನ್ನಡಿಗರು ಜಾಗೃತಗೊಳ್ಳಬೇಕಿತ್ತು. ಇದಾಗದಿರುವುದು ದುರದೃಷ್ಟಕರ. ಭಾಷೆಯ ಬದ್ಧತೆಯ ಕೆಲಸಗಳನ್ನು ಮರೆತು ಅಧಿಕಾರದ ಗಾದಿಗಾಗಿ ತಾ ಮುಂದು ನಾ ಮುಂದು ಎಂದು ಮುಗಿ ಬೀಳುವಲ್ಲೇ ಹೆಚ್ಚಿನ ಮಂದಿ ನಿರತರಾಗಿರುವುದು ಬೇಸರದ ಸಂಗತಿ ಎಂದು ನುಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಮಾತನಾಡಿ, ಕನ್ನಡ ಜಾಗೃತಿ ಸಮಿತಿ ಸದಸ್ಯರು ಕನ್ನಡದ ಕಾವಲುಪಡೆಯಂತೆ ಕೆಲಸ ಮಾಡಬೇಕು. ಸದಸ್ಯರು ತಮ್ಮ ಆತ್ಮ ವಿಮರ್ಶೆ ಮಾಡಿಕೊಂಡು ಆಶಯಗಳನ್ನು ಗುರುತಿಸಿಕೊಂಡು ಕನ್ನಡದ ಕೆಲಸಗಳನ್ನು ಮಾಡಬೇಕು. ಕನ್ನಡ ಕಾಯಕ ವರ್ಷದ ಶಪಥವನ್ನು ಈಡೀರಿಸುವ ನಿಟ್ಟಿನಲ್ಲಿ ಬಹಳ ಗಟ್ಟಿತನದಿಂದ ಕನ್ನಡದ ಕಾಯಕವನ್ನು ಮಾಡಬೇಕು ಎಂದು ಸೂಚಿಸಿದರು.
ಕಾರ್ಯಕ್ರಮಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಡಾ.ಸಂತೋಷ ಹಾನಗಲ್ಲ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಪ್ತ ಕಾರ್ಯದರ್ಶಿ ಡಾ.ವೀರಶೆಟ್ಟಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಉಪಸ್ಥಿತರಿದ್ದರು.