Tag: Trunk

  • ನಾಪತ್ತೆಯಾಗಿದ್ದ ಮೂವರು ಸಹೋದರಿಯರ ಮೃತದೇಹ ಟ್ರಂಕ್‌ನಲ್ಲಿ ಪತ್ತೆ

    ನಾಪತ್ತೆಯಾಗಿದ್ದ ಮೂವರು ಸಹೋದರಿಯರ ಮೃತದೇಹ ಟ್ರಂಕ್‌ನಲ್ಲಿ ಪತ್ತೆ

    ಚಂಡೀಗಢ: ನಾಪತ್ತೆಯಾಗಿದ್ದ ಮೂವರು ಅಪ್ರಾಪ್ತ ಸಹೋದರಿಯರ (Sisters) ಮೃತದೇಹ ತಮ್ಮ ಮನೆಯಲ್ಲಿಯೇ ಟ್ರಂಕ್‌ನಲ್ಲಿ (Trunk) ಪತ್ತೆಯಾಗಿರುವ ಆಘಾತಕಾರಿ ಘಟನೆ ಪಂಜಾಬ್‌ನ (Punjab) ಜಲಂಧರ್ (Jalandhar) ಜಿಲ್ಲೆಯ ಕಾನ್ಪುರ (Kanpur) ಗ್ರಾಮದಲ್ಲಿ ನಡೆದಿದೆ.

    ಮೃತ ಸಹೋದರಿಯರನ್ನು ಕಾಂಚನ್ (4), ಶಕ್ತಿ (7) ಹಾಗೂ ಅಮೃತ (9) ಎಂದು ಗುರುತಿಸಲಾಗಿದೆ. ಬಾಲಕಿಯರ ಪೋಷಕರು ಕೂಲಿ ಕಾರ್ಮಿಕರಾಗಿದ್ದು, ಒಟ್ಟು ಐವರು ಮಕ್ಕಳಿದ್ದರು. ಕೆಲಸದಿಂದ ಮನೆಗೆ ಹಿಂತಿರುಗಿದಾಗ ಮೂವರು ಮಕ್ಕಳು ನಾಪತ್ತೆಯಾಗಿರುವುದು ತಿಳಿದುಬಂದಿದೆ.

    ಮಕ್ಕಳು ನಾಪತ್ತೆಯಾಗಿರುವ ಬಗ್ಗೆ ಪೋಷಕರು ಮಕ್ಸೂದ್ ಪೊಲೀಸ್ ಠಾಣೆಯಲ್ಲಿ ಭಾನುವಾರ ರಾತ್ರಿ ದೂರು ನೀಡಿದ್ದಾರೆ. ಮರುದಿನ ಬಾಲಕಿಯರ ತಂದೆ ಗೃಹೋಪಯೋಗಿ ವಸ್ತುಗಳನ್ನು ಸ್ಥಳಾಂತರಿಸುತ್ತಿದ್ದಾಗ ಟ್ರಂಕ್ ಎಂದಿಗಿಂತಲೂ ಭಾರವಾಗಿರುವುದು ತಿಳಿದುಬಂದಿದೆ. ಈ ವೇಳೆ ಟ್ರಂಕ್ ಅನ್ನು ತೆರದಾಗ ಮೂವರು ಬಾಲಕಿಯರ ಮೃತದೇಹಗಳು ಅದರಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ವಾಹನ ತಪಾಸಣೆ ವೇಳೆ ಬ್ಯಾರಿಕೇಡ್ ಎಳೆದ ಪೊಲೀಸರು – ಬೈಕ್‌ನಿಂದ ಬಿದ್ದ ಮಹಿಳೆ ಕೈ ಮೇಲೆ ಹರಿದ ಟಿಪ್ಪರ್

    ಬಾಲಕಿಯರ ಸಾವು ನಿಗೂಢವಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸಹೋದರಿಯರ ಸಾವಿನ ಕಾರಣವನ್ನು ತಿಳಿಯಲು ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸರ ಪ್ರಕಾರ ಬಾಲಕಿಯರ ತಂದೆಗೆ ಕುಡಿತದ ಚಟವಿದ್ದು, ಮನೆಯ ಮಾಲೀಕರು ಮನೆಯನ್ನು ಖಾಲಿ ಮಾಡುವಂತೆ ಹೇಳಿದ್ದರು. ಈ ಬಗ್ಗೆಯೂ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಇದನ್ನೂ ಓದಿ: ಮೆಕ್ಸಿಕೊದಲ್ಲಿ ಟ್ರಕ್‌ ಅಪಘಾತಕ್ಕೆ 10 ವಲಸಿಗರು ಬಲಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿರ್ದೇಶಕಿ ರಿಷಿಕಾ ಜೊತೆ ಫೆ.15ಕ್ಕೆ ನಟ ನಿಹಾಲ್ ಮದುವೆ

    ನಿರ್ದೇಶಕಿ ರಿಷಿಕಾ ಜೊತೆ ಫೆ.15ಕ್ಕೆ ನಟ ನಿಹಾಲ್ ಮದುವೆ

    ಟ್ರಂಕ್ (Trunk), ವಿಜಯಾನಂದ (Vijayananda) ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದ ಜೋಡಿ ನಿರ್ದೇಶಕಿ ರಿಷಿಕಾ ಶರ್ಮಾ (Rishika Sharma) ಹಾಗೂ ನಟ ನಿಹಾಲ್ (Nihal) ಫೆಬ್ರವರಿ 15ರಂದು ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಒಂಬತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಇದೀಗ ಮದುವೆ (Marriage) ತಯಾರಿ ಮಾಡಿಕೊಂಡಿದ್ದಾರೆ. ಹತ್ತು ವರ್ಷಗಳ ಸ್ನೇಹಕ್ಕೆ ಸತಿಪತಿ ಸ್ಥಾನ ನೀಡುತ್ತಿದ್ದಾರೆ. ಈ ಮೂಲಕ ಸ್ಯಾಂಡಲ್ ವುಡ್ ಮತ್ತೊಂದು ಮದುವೆಗೆ ಸಿದ್ಧವಾಗಿದೆ.

    ಈ ಕುರಿತು ರಿಷಿಕಾ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದು, ‘ನಿಮ್ಮೆಲ್ಲರೊಂದಿಗೆ ಒಂದು ಖುಷಿ ಸುದ್ದಿಯನ್ನು ಹಂಚಿಕೊಳ್ಳುವುದಕ್ಕೆ ನಾನು ಎಕ್ಸೈಟ್ ಆಗಿದ್ದೇನೆ. ನಿಹಾಲ್ ಅವರೊಂದಿಗೆ ನಾನು ಇದೇ ಫೆಬ್ರವರಿ ತಿಂಗಳಲ್ಲಿ ಮದುವೆ ಆಗಲಿದ್ದೇನೆ. ನಮ್ಮ ಸುಂದರ ಲವ್ ಸ್ಟೋರಿ ಸೃಷ್ಟಿಯಾಗಲು ಲಕ್ಷಾಂತರ ಸಣ್ಣ ಕ್ಷಣಗಳಿವೆ. ನಮ್ಮ ಸಂತೋಷದಾಯಕ ಮತ್ತು ಅರ್ಥಪೂರ್ಣ 9 ವರ್ಷಗಳ ಸ್ನೇಹ ಮತ್ತು ಪ್ರೀತಿಗೆ ದಾರಿಯಾಗಿದೆ’ ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಖ್ಯಾತ ನಟ ನಿತಿನ್ ಪಾಲಾದ ‘ಕಬ್ಜ’ ಸಿನಿಮಾದ ಆಂಧ್ರ-ತೆಲಂಗಾಣ ಹಕ್ಕು

    2018ರಲ್ಲಿ ತೆರೆಕಂಡ ಟ್ರಂಕ್ ಸಿನಿಮಾಗೆ ರಿಷಿಕಾ ನಿರ್ದೇಶಕಿಯಾಗಿದ್ದರೆ, ನಿಹಾಲ್ ನಟ. ವಿಮರ್ಶಕರಿಂದ ಮೆಚ್ಚುಗೆ ಪಡೆದ ಸಿನಿಮಾ ಇದಾಗಿತ್ತು. ನಾಲ್ಕು ವರ್ಷಗಳ ಸತತ ಶ್ರಮದ ಪರಿಣಾಮ ಭಾರೀ ಬಜೆಟ್ ಸಿನಿಮಾ ‘ವಿಜಯಾನಂದ’ದಲ್ಲಿ ಮತ್ತೆ ಈ ಜೋಡಿ ಒಂದಾಗಿತ್ತು. ಈ ಸಿನಿಮಾದಲ್ಲೂ ನಿಹಾಲ್ ಹೀರೋ. ರಿಷಿಕಾ ನಿರ್ದೇಶಕಿ. ಈ ಎರಡೂ ಚಿತ್ರಗಳು ಅವರ ವೃತ್ತಿ ಬದುಕಿಗೆ ಸಾಕಷ್ಟು ಹೆಸರು ತಂದುಕೊಟ್ಟವು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸೊಂಡಿಲಿನಿಂದ ಹ್ಯಾಂಡ್‍ಪಂಪ್ ಹೊಡೆದು ನೀರು ಕುಡಿದ ಆನೆ

    ಸೊಂಡಿಲಿನಿಂದ ಹ್ಯಾಂಡ್‍ಪಂಪ್ ಹೊಡೆದು ನೀರು ಕುಡಿದ ಆನೆ

    ನೆಗಳು ಬುದ್ಧಿವಂತ ಪ್ರಾಣಿಯಾಗಿದ್ದು, ಅವು ಜ್ಞಾಪಕ ಶಕ್ತಿಯನ್ನು ಸಹ ಹೊಂದಿರುತ್ತದೆ. ಆನೆಗಳು ಭೂಮಿಯಲ್ಲಿರುವ ಎಲ್ಲಾ ಪ್ರಾಣಿಗಳಿಗಿಂತಲೂ ಅತಿದೊಡ್ಡ ಮೆದುಳನ್ನು ಹೊಂದಿದ್ದು, ಮನುಷ್ಯರಿಗಿಂತ ಮೂರು ಪಟ್ಟು ನರಕೋಶಗಳನ್ನು ಹೊಂದಿವೆ.

    ಸದ್ಯ ವಿಡಿಯೋವೊಂದರಲ್ಲಿ ಆನೆ ಬುದ್ಧಿವಂತ ಪ್ರಾಣಿ ಮತ್ತು ಮನುಷ್ಯರನ್ನು ಸುಲಭವಾಗಿ ಅನುಕರಣೆ ಮಾಡಬಲ್ಲವು ಎಂಬುವುದನ್ನು ತೋರಿಸಿದೆ. ಬಾಯಾರಿಕೆಗೊಂಡಿದ್ದ ಆನೆಯೊಂದು ನೀರು ಕುಡಿಯಲು ಯಾರ ಸಹಾಯವನ್ನು ಪಡೆಯದೇ ತನ್ನ ಸೊಂಡಿಲಿನಿಂದ ಹ್ಯಾಂಡ್‍ಪಂಪ್‍ನನ್ನು ಹೊಡೆಯುತ್ತದೆ. ನಂತರ ಪಂಪ್‍ನಿಂದ ನೀರು ಹೊರಬಂದ ತಕ್ಷಣ ನೀರು ಕುಡಿಯುತ್ತದೆ. ಈ ದೃಶ್ಯ ಅಲ್ಲಿದ್ದ ಜನರು ಅಚ್ಚರಿಗೊಳ್ಳುವಂತೆ ಮಾಡಿದೆ.

    ವೈರಲ್ ಆಗುತ್ತಿರುವ ಈ ವೀಡಿಯೋ ಎಲ್ಲಿಯದು ಎಂಬುವುದು ತಿಳಿದು ಬಂದಿಲ್ಲ. ಆದರೆ ದೇಸಿ ಆನೆಯ ಸ್ಟೈಲ್ ನೆಟ್ಟಿಗರ ಗಮನ ಸೆಳೆಯುತ್ತಿದ್ದು, ಆನೆಯ ಬುದ್ಧಿವಂತಿಕೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

     

  • ಹಾರರ್ ‘ಟ್ರಂಕ್’ ಸಿಕ್ಕಿದ್ದು ಕಲಬುರಗಿಯಲ್ಲಿ!

    ಹಾರರ್ ‘ಟ್ರಂಕ್’ ಸಿಕ್ಕಿದ್ದು ಕಲಬುರಗಿಯಲ್ಲಿ!

    – ದೆವ್ವಗಳ ಮೇಲೆ ಸೈಂಟಿಫಿಕ್ ಕಣ್ಗಾವಲು!
    – ರಿಷಿಕಾ ತಂದ ಟ್ರಂಕಿನೊಳಗೆ ಏನೇನಿದೆ ಗೊತ್ತಾ?

    ಬೆಂಗಳೂರು: ಈಗ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲಡೆ ರಿಶಿಕಾ ನಿರ್ದೇಶನದ ಟ್ರಂಕ್ ಚಿತ್ರದ್ದೇ ಮಾತು. ಹೀಗೆ ಟ್ರೇಲರ್ ಮೂಲಕ ಟಾಕ್ ಕ್ರಿಯೇಟ್ ಆಗುತ್ತಲೇ ಚಿತ್ರೀಕರಣದ ಸಂದರ್ಭದಲ್ಲಿ ಉಂಟಾದ ಪ್ರೇತಬಾಧೆಯ ವೀಡಿಯೋ ಒಂದು ಲೀಕ್ ಆಗೋ ಮೂಲಕ ಪ್ರೇಕ್ಷಕರು ಟ್ರಂಕಿನತ್ತ ಮತ್ತಷ್ಟು ಕುತೂಹಲಗೊಂಡಿದ್ದಾರೆ.

    ಕನ್ನಡದ ಖ್ಯಾತ ನಿರ್ದೇಶಕ ಜಿ.ವಿ ಅಯ್ಯರ್ ಮೊಮ್ಮಗಳು ರಿಶಿಕಾ ಶರ್ಮಾ ಈ ಮೂಲಕ ಮೊದಲ ಚಿತ್ರದಲ್ಲಿಯೇ ಎಲ್ಲರ ಗಮನ ಸೆಳೆದಿದ್ದಾರೆ. ಈ ಚಿತ್ರ ಸತ್ಯ ಘಟನೆಯೊಂದನ್ನು ಆಧರಿಸಿದ್ದೆಂಬುದು ಅಸಲೀ ವಿಶೇಷ. ಉತ್ತರಕರ್ನಾಟಕ ಸೀಮೆಯ ಗುಲ್ಬರ್ಗಾದಲ್ಲಿ (ಈಗಿನ ಕಲಬುರಗಿ) 1997ರ ಸುಮಾರಿಗೆ ನಡೆದಿದ್ದ, ಆ ಪ್ರದೇಶದಲ್ಲಿ ಈಗಲೂ ಚಾಲ್ತಿಯಲ್ಲಿರುವ ಪ್ರಕರಣವೊಂದನ್ನು ಆಧಾರವಾಗಿಟ್ಟುಕೊಂಡು ಈ ಕಥೆಯನ್ನು ಸಿದ್ಧಪಡಿಸಲಾಗಿದೆಯಂತೆ.

    ಸಾಮಾನ್ಯವಾಗಿ ದೆವ್ವ ಭೂತಗಳ ಜಾಡನ್ನು ಮಂತ್ರ ತಂತ್ರದ ಮೂಲಕ ಬೆನ್ನು ಬೀಳೋದು ಕನ್ನಡ ಚಿತ್ರಗಳ ಮಟ್ಟಿಗೆ ಜನಪ್ರಿಯವಾಗಿರೋ ಸಿದ್ಧ ಮಾದರಿ. ಆದರೆ ಟ್ರಂಕ್ ಚಿತ್ರದಲ್ಲಿ ಇದಕ್ಕಾಗಿ ಪಕ್ಕಾ ಸೈಂಟಿಫಿಕ್ ಮೆಥಡನ್ನು ಅನುಸರಿಸಲಾಗಿದೆಯಂತೆ. ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ದೆವ್ವ ಭೂತಗಳನ್ನು ಘೋಸ್ಟ್ ಹಂಟರ್ ತಂಡದ ಮೂಲಕ ಪತ್ತೆಹಚ್ಚುವಂಥಾ ವಿಭಿನ್ನವಾದ ಮಾದರಿಯನ್ನು ಅನುಸರಿಸಲಾಗಿದೆಯಂತೆ. ಈ ಘೋಸ್ಟ್ ಹಂಟರ್ ಗಳು ಬೀಡಾಡಿಗಳಂತೆ ಅಲೆದಾಡೋ ದೆವ್ವಗಳನ್ನು ಪಳಗಿಸಿಕೊಂಡು ಅವುಗಳೊಂದಿಗೆ ಮಾತುಕತೆ ನಡೆಸುವಂಥಾ ಕಥಾನಕಗಳೂ ಇದ್ದಾವೆ. ಈ ಕ್ಷಣಕ್ಕೂ ವಿಜ್ಞಾನ ದೆವ್ವಗಳ ಇರುವಿಕೆಯನ್ನು ಒಪ್ಪಿಕೊಂಡಿಲ್ಲವಾದರೂ ಸೈಂಟಿಫಿಕ್ ಮಾದರಿಯಲ್ಲಿ ದೆವ್ವಗಳ ಇರುವಿಕೆಯನ್ನು ಒಪ್ಪಿಕೊಳ್ಳುವುದೂ ಒಂದು ವೈರುಧ್ಯ. ಆದರೆ ಆ ಹಾದಿ ಬಲು ರೋಚಕ!

    ಅಂಥಾ ರೋಚಕತೆ ಟ್ರಂಕ್ ಚಿತ್ರದುದ್ದಕ್ಕೂ ಇದೆಯಂತೆ. ಹಾಡು, ಪ್ರೀತಿ ಮುಂತಾದವುಗಳತ್ತ ಹೆಚ್ಚಾಗಿ ಗಮನ ಹರಿಸದೆ, ಕಥೆಯ ಮೂಲಕವೇ ಕಾಮಿಡಿಯನ್ನೂ ಹರಿಯ ಬಿಟ್ಟು ಚಿತ್ರದುದ್ದಕ್ಕೂ ಹಾರರ್ ಅಂಶಗಳತ್ತಲೇ ಪ್ರಧಾನವಾಗಿ ಗಮನ ಹರಿಸಲಾಗಿದೆಯಂತೆ. ಅಂತೂ ರಿಷಿಕಾ ಸಾರಥ್ಯದ ಈ ಚಿತ್ರ ಮೊದಲ ಹಂತದಲ್ಲಿಯೇ ಭಾರೀ ಕ್ರೇಜ್ ಹುಟ್ಟು ಹಾಕಿರೋದಂತೂ ಸತ್ಯ!