Tag: trump

  • ಶೀಘ್ರವೇ ಶುಭ ಶುದ್ದಿ ಸಿಗಲಿದೆ: ಡೊನಾಲ್ಡ್ ಟ್ರಂಪ್

    ಶೀಘ್ರವೇ ಶುಭ ಶುದ್ದಿ ಸಿಗಲಿದೆ: ಡೊನಾಲ್ಡ್ ಟ್ರಂಪ್

    ಹನಾಯ್: ಭಾರತ ಮತ್ತು ಪಾಕಿಸ್ತಾನದ ನಡುವೆ ಗಡಿಯಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ ಎರಡು ರಾಷ್ಟ್ರಗಳಿಂದ ಉತ್ತಮ ಸುದ್ದಿಯನ್ನು ಕೇಳಲು ನಿರೀಕ್ಷೆ ಮಾಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

    ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರೊಂದಿಗೆ ಭೇಟಿ ಮಾಡಿ 2ನೇ ಶೃಂಗಸಭೆಗೆ ಚಾಲನೆ ನೀಡಿದ್ದ ಟ್ರಂಪ್, ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುವ ವೇಳೆ ಪಾಕಿಸ್ತಾನ ಹಾಗೂ ಭಾರತ ನಡುವಿನ ಉದ್ವಿಗ್ನ ಪರಿಸ್ಥಿತಿಯನ್ನು ಪ್ರಸ್ತಾಪ ಮಾಡಿದರು.

     

    ಎರಡು ರಾಷ್ಟ್ರಗಳೊಂದಿಗೆ ಶಾಂತಿ ಕಾಪಾಡಲು ನಾವು ಮಧ್ಯವರ್ತಿಯಾಗಿ ಕೆಲಸ ಮಾಡುತ್ತೇವೆ. ಶೀಘ್ರವೇ ಶುಭ ಸುದ್ದಿ ಸಿಗಲಿದೆ ಎಂದು ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದರು.

    ಭಾರತ ಪಾಕಿಸ್ತಾನದ ಭಯೋತ್ಪಾದನ ಕೇಂದ್ರಗಳ ಮೇಲೆ ದಾಳಿ ನಡೆಸಿ ನಾಶ ಪಡಿಸಿದ ಬಳಿಕ ಭಾರತದ ಬೆಂಬಲಕ್ಕೆ ನಿಂತಿದ್ದ ಅಮೆರಿಕ ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶದ ರವಾನೆ ಮಾಡಿತ್ತು.

    ಭಾರತ ಭಯೋತ್ಪಾದನೆ ವಿರುದ್ಧ ನಡೆಸಿದ ದಾಳಿಗೆ ಪ್ರತಿಕಾರವಾಗಿ ಮಿಲಿಟರಿ ಕಾರ್ಯಾಚರಣೆ ನಡೆಸಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು. ಈಗಲಾದರೂ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮಕೈಗೊಳ್ಳಿ. ಇಲ್ಲವಾದರೆ ಹೆಚ್ಚಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಕಾರ್ಯದರ್ಶಿ ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ನೀಡಿದ್ದರು.

    ಕಳೆದ ವಾರವೂ ಕೂಡ ಭಾರತ ಹಾಗೂ ಪಾಕಿಸ್ತಾನ ನಡುವಿನ ಸ್ಥಿತಿಯ ಬಗ್ಗೆ ಟ್ರಂಪ್ ಆತಂಕ ವ್ಯಕ್ತಪಡಿಸಿದ್ದರು. ಇತ್ತ ಉತ್ತರ ಕೊರಿಯಾದೊಂದಿಗೆ ಅಮೆರಿಕ ನಡೆಸುತ್ತಿದ್ದ ಶೃಂಗಸಭೆ ಅಂತ್ಯವಾಗಿದ್ದು, ಯಾವುದೇ ಒಪ್ಪಂದ ಇಲ್ಲದೇ ಚರ್ಚೆಗಳು ಅಂತ್ಯವಾಗಿದೆ. ಉತ್ತರ ಕೊರಿಯಾ ವಿಧಿಸಿದ್ದ ನಿರ್ಬಂಧಗಳನ್ನು ಈಡೇರಿಸಲು ಸಾಧ್ಯವಾಗದ ಕಾರಣ ಶೃಂಗ ಸಭೆ ಅಂತ್ಯವಾಗಿದೆ ಎಂದು ಟ್ರಂಪ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

    ಉತ್ತರ ಕೊರಿಯಾ ಸಾಧ್ಯವಾಗದಂತಹ ಒಪ್ಪಂದಗಳನ್ನ ಮುಂದಿಟ್ಟಿದೆ. ಅಲ್ಲದೇ 3ನೇ ಶೃಂಗ ಸಭೆ ನಡೆಸಲು ಉದ್ದೇಶಿಸಿಲ್ಲ. ಉತ್ತರ ಕೊರಿಯಾದೊಂದಿಗಿನ ಸಂಬಂಧವನ್ನು ಮುಂದುವರಿಸಲು ಮತ್ತಷ್ಟು ಬಯಸುತ್ತೇವೆ. ಯಾವುದೇ ನ್ಯೂಕ್ಲಿಯರ್ ಪರೀಕ್ಷೆ ನಡೆಸಲ್ಲ ಎಂದು ಉತ್ತರ ಕೊರಿಯಾ ಹೇಳಿರುವುದಾಗಿ ಟ್ರಂಪ್ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಕ್ ಮೆಚ್ಚಿದ ರಾಜಕುಮಾರನಿಗೆ ಪ್ರಧಾನಿ ಅಪ್ಪುಗೆಯ ಸ್ವಾಗತ- ಭಾರತಕ್ಕೆ ಬೆಂಬಲಿಸುತ್ತಾ ಸೌದಿ..?

    ಪಾಕ್ ಮೆಚ್ಚಿದ ರಾಜಕುಮಾರನಿಗೆ ಪ್ರಧಾನಿ ಅಪ್ಪುಗೆಯ ಸ್ವಾಗತ- ಭಾರತಕ್ಕೆ ಬೆಂಬಲಿಸುತ್ತಾ ಸೌದಿ..?

    – ದಾಳಿ ಭಯಾನಕ ಎಂದ ಟ್ರಂಪ್

    ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮ ದಾಳಿ ಹೊತ್ತಲ್ಲಿ ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನ ಪ್ರವಾಸದಲ್ಲಿದ್ದ ಸೌದಿ ಆರೇಬಿಯಾ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಭಾರತಕ್ಕೆ ಬಂದಿಳಿದ್ದಾರೆ.

    ದೆಹಲಿಯ ಪಾಲಂ ವಾಯುನೆಲೆಗೆ ಆಗಮಿಸಿದ ರಾಜಕುಮಾರನಿಗೆ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವ್ರೇ ಅಪ್ಪುಗೆಯ ಮೂಲಕ ಭವ್ಯ ಸ್ವಾಗತ ನೀಡಿದ್ದಾರೆ. ಪುಲ್ವಾಮದಲ್ಲಿ 44 ಸೈನಿಕರ ಹತ್ಯೆಗೆ ಕಾರಣವಾದ ಉಗ್ರ ದಾಳಿಯ ವೇಳೆ ಪಾಕಿಸ್ತಾನದಲ್ಲಿ 2 ಲಕ್ಷದ 79 ಸಾವಿರ ಕೋಟಿ ರೂಪಾಯಿ ಮೊತ್ತದ ಹೂಡಿಕೆಯನ್ನು ಘೋಷಿಸಿದ್ದ ರಾಜಕುಮಾರ, ಶಾಂತಿ ಸ್ಥಾಪನೆಯಲ್ಲಿ ಪಾಕ್ ಪಾತ್ರವನ್ನು ಕೊಂಡಾಡಿದ್ದರು. ಇದನ್ನೂ ಓದಿ: ಸಾಕ್ಷ್ಯ ನೀಡಿದ್ರೆ ಕ್ರಮ, ಯುದ್ಧ ನಡೆದರೆ ಉತ್ತರ ಕೊಡ್ತೀವಿ: ಭಾರತವನ್ನು ಕೆಣಕಿದ ಇಮ್ರಾನ್ ಖಾನ್

    ಮಂಗಳವಾರವಷ್ಟೇ ಯುದ್ಧಕ್ಕೆ ಸಿದ್ಧ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಉದ್ಧಟತನದ ಹೇಳಿಕೆಯನ್ನೂ ನೀಡಿದ್ದರು. ಭಾರತ-ಪಾಕಿಸ್ತಾನ ಜೊತೆಗೆ ಬೇಗುದಿ ಶಮನಕ್ಕೆ ಸಂಧಾನದ ಮಾತನ್ನೂ ಆಡಿದ್ದರು. ಈ ಹಿನ್ನೆಲೆಯಲ್ಲಿ ಸೌದಿ ರಾಜಕುಮಾರನ ಭಾರತ ಭೇಟಿ ಮಹತ್ವ ಪಡೆದಿದೆ. ಹೂಡಿಕೆ, ದ್ವಿಪಕ್ಷೀಯ ಸಹಕಾರ ಕುರಿತ 7 ಒಪ್ಪಂದಗಳಿಗೆ ಸಹಿ ಹಾಕುವುದರ ಜೊತೆಗೆ ಭಯೋತ್ಪಾದನೆ ವಿರುದ್ಧ ಸೌದಿ ಅರೇಬಿಯಾ-ಭಾರತ ಉಗ್ರ ಹೇಳಿಕೆ ಕೊಟ್ಟು ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ರವಾನಿಸೋ ಸಾಧ್ಯತೆ ಇದೆ. ಇದನ್ನೂ ಓದಿ: ‘ನಿಮ್ಮಿಂದ ಆಗದಿದ್ರೆ, ನಮಗೆ ಬಿಡಿ’ – ಇಮ್ರಾನ್ ಖಾನ್ ಹೇಳಿಕೆಗೆ ಪಂಜಾಬ್ ಸಿಎಂ ತಿರುಗೇಟು

    ಇತ್ತ ಪುಲ್ವಾಮಾ ದಾಳಿ ಭಯಾನಕ ಅಂತ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ. ನಾನು ಎಲ್ಲವನ್ನೂ ನೋಡುತ್ತಿದ್ದೇನೆ. ಸಾಕಷ್ಟು ವರದಿಗಳು ಬರ್ತಿವೆ. ಶೀಘ್ರವೇ ನಮ್ಮ ಹೇಳಿಕೆಯನ್ನ ಬಿಡುಗಡೆ ಮಾಡ್ತೇವೆ. ಆದ್ರೆ ಭಾರತ ಮತ್ತು ಪಾಕಿಸ್ತಾನ ಜೊತೆಯಾಗಿ ಸಾಗಿದರೆ ಅಚ್ಚರಿಯೇ ಸರಿ ಅಂತ ಟ್ರಂಪ್ ಹೇಳಿದ್ದಾರೆ.

    https://www.youtube.com/watch?v=kbMS2x06Kr0

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಕ್‍ಗೆ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ ಅಮೆರಿಕ!

    ಪಾಕ್‍ಗೆ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ ಅಮೆರಿಕ!

    ನವದೆಹಲಿ: ಅಮೆರಿಕ ಸರ್ಕಾರ ಪಾಕಿಸ್ತಾನಕ್ಕೆ ನೀಡುತ್ತಿದ್ದ 300 ಮಿಲಿಯನ್ ಡಾಲರ್ (ಸುಮಾರು 2,100 ಕೋಟಿ ರೂ.) ಮೊತ್ತದ ಭದ್ರತಾ ಅನುದಾನಕ್ಕೆ ಕತ್ತರಿ ಹಾಕಿದೆ.

    ಯುಸ್ ಒಕ್ಕೂಟ ಬೆಂಬಲ ನಿಧಿ(ಸಿಎಸ್‍ಎಫ್)ಯಿಂದ ಪಾಕ್‍ಗೆ ನೀಡಲಾಗುತ್ತಿದ್ದ ಅನುದಾನ ಕಡಿತಗೊಳಿಸಲು ಪೆಂಟಗನ್ ನಲ್ಲಿ ನಡೆದ ಸಭೆಯಲ್ಲಿ ಅಮೆರಿಕ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಕುರಿತು ಮಾಹಿತಿ ನೀಡಿರುವ ಪೆಂಟಗಾನ್ ವಕ್ತಾರ, ಪಾಕಿಸ್ತಾನ ಉಗ್ರ ನಿಯಂತ್ರಣಕ್ಕಾಗಿ ಕೈಗೊಂಡಿರುವ ಕ್ರಮಗಳು ನಿರೀಕ್ಷಿತ ಪರಿಣಾಮದಲ್ಲಿ ಇಲ್ಲದ ಕಾರಣ 2018 ಜೂನ್/ಜುಲೈ ಅವಧಿಯಲ್ಲಿ ನೀಡಬೇಕಿದ್ದ ಅನುದಾನವನ್ನು ಕಡಿತಗೊಳಿಸಿದ್ದಾಗಿ ತಿಳಿಸಿದ್ದಾರೆ.

    ಈಗಾಗಲೇ ಅಮೆರಿಕ ಹಲವು ಬಾರಿ ಉಗ್ರರ ನಿಯಂತ್ರಣ ಕುರಿತು ಕಠಿಣ ಕ್ರಮಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಹೇಳಿದೆ. ಆದರೆ ಪಾಕ್ ನಿರೀಕ್ಷಿತ ಪ್ರಮಾಣದಲ್ಲಿ ಕ್ರಮಕೈಗೊಂಡಿಲ್ಲ. ಅದ್ದರಿಂದ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ.

    ಇದರೊಂದಿಗೆ ಪಾಕ್ ರಕ್ಷಣಾ ಇಲಾಖೆ ನೀಡಲು ಉದ್ದೇಶಿಲಾಗಿದ್ದ 800 ಮಿಲಿಯನ್ ಡಾಲರ್ ಅನುದಾನ ಕುರಿತು ಮರು ಚಿಂತನೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಕುರಿತು ಯುಎಸ್ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಕ್ ಪಾಕಿಸ್ತಾನ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಪ್ರಮುಖ ಉಗ್ರಗಾಮಿ ಸಂಘಟನೆಗಳಾದ ಲಷ್ಕರ್ ಎ ತೊಯ್ಬಾ ಸೇರಿದಂತೆ ಇತರೆ ಸಂಘಟನೆಗಳ ವಿರುದ್ಧ ಕ್ರಮಕೈಗೊಳ್ಳಲು ತಿಳಿಸಿದ್ದರು. ಆದರೆ ಇದಕ್ಕೆ ಪೂರಕ ಪ್ರತಿಕ್ರಿಯೆ ಪಾಕ್ ನೀಡದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/ippatel/status/1036095040781660160

  • ಡೊನಾಲ್ಡ್ ಟ್ರಂಪ್ ರನ್ನು ದೇವರಂತೆ ಪೂಜಿಸುತ್ತಿರುವ ತೆಲಂಗಾಣ ಯುವಕ

    ಡೊನಾಲ್ಡ್ ಟ್ರಂಪ್ ರನ್ನು ದೇವರಂತೆ ಪೂಜಿಸುತ್ತಿರುವ ತೆಲಂಗಾಣ ಯುವಕ

    ತೆಲಂಗಾಣ: ವ್ಯಕ್ತಿಯೋರ್ವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ದೇವರಂತೆ ಪೂಜಿಸುತ್ತಿದ್ದಾರೆ. ತೆಲಂಗಾಣದ ಜನ್ ಗಾಂವ್ ಜಿಲ್ಲೆಯ ನಿವಾಸಿ ಬುಸ್ಸಾ ಟ್ರಂಪ್ ಫೋಟೋ ಗೆ ಪೂಜೆ ಮಾಡ್ತೀರೋ ವ್ಯಕ್ತಿ.

    ಜಿಲ್ಲೆಯ ಕೊನ್ನೆ ಗ್ರಾಮದ 31 ವರ್ಷದ ರೈತ ಬುಸ್ಸಾ ಕೃಷ್ಣಾ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಫೋಟೊವನ್ನು ತಮ್ಮ ಮನೆಯ ಪೂಜಾ ಮಂದಿರದಲ್ಲಿ ಇರಿಸಿಕೊಂಡು ಪೂಜೆ ಮಾಡುತ್ತಿದ್ದಾರೆ. ಪ್ರತಿನಿತ್ಯ ದೇವರಿಗೆ ಪೂಜೆ ಸಲ್ಲಿಸುವಾಗ ಟ್ರಂಪ್ ರಿಗೂ ಸಹ ಪೂಜೆ ಸಲ್ಲಿಸುತ್ತಾರೆ. ಟ್ರಂಪ್ ರ ಭಾವಚಿತ್ರಕ್ಕೆ ಅರಿಶಿಣ, ಕುಂಕುಮ ಹಚ್ಚಿ ಹೂ ಹಾಕಿ ಆರತಿ ಬೆಳಗುತ್ತಾರೆ.

    ಪೂಜೆ ಯಾಕೆ?
    2017ರ ಫೆಬ್ರವರಿಯಲ್ಲಿ ಅಮೆರಿಕದ ಕನ್ನಾಸ್ ನಲ್ಲಿ ತೆಲಂಗಾಣ ಮೂಲದ ಎಂಜನೀಯರ್ ಶ್ರೀನಿವಾಸ ಕೊಚಿಭೋಟ್ಲ ಎಂಬವರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು. ಅಮೆರಿಕದಲ್ಲಿ ಭಾರತೀಯರ ಮೇಲೆ ನಡೆದ ದ್ವೇಶಾಪರಾಧದ ಕೃತ್ಯ ಇದಾಗಿತ್ತು. ಈ ಪ್ರಕರಣ ಕುರಿತಂತೆ ಟ್ರಂಪ್ ಮೌನವಹಿಸಿದ್ದರು. ಇದರಿಂದ ಭಾರತ ಅಮೆರಿಕಾದೊಂದಿಗೆ ರಾಜತಾಂತ್ರಿಕ ಕ್ರಮಗಳನ್ನು ಕೈಗೊಳ್ಳದಿರಲು ನಿರ್ಧರಿಸಿತ್ತು. ಈ ಕಾರಣಕ್ಕಾಗಿ ಬುಸ್ಸಾ ಕೃಷ್ಣ ಟ್ರಂಪ್ ರ ಭಾವಚಿತ್ರಕ್ಕೆ ಈ ರೀತಿ ಪೂಜೆ ಸಲ್ಲಿಸಲು ಪ್ರಾರಂಭಿಸಿದ್ದಾರೆ.

    ಇನ್ನು ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕೃಷ್ಣ ಕೋಚಿಭೋಟ್ಲ ಹತ್ಯೆಯಿಂದ ನನ್ನ ಮನಸ್ಸಿಗೆ ತುಂಬ ನೋವಾಗಿದೆ. ಅಮೆರಿಕಾ ಜನರ ಮೇಲೆ ಭಾರತೀಯರಿಗೆ ಯಾವ ರೀತಿಯ ಪ್ರೀತಿ ಇದೆ ಎಂದು ಅಮೆರಿಕಾ ಜನತೆ ಹಾಗೂ ಟ್ರಂಪ್ ಗೆ ತಿಳಿಸಲು ರೀತಿ ಪೂಜೆ ಮಾಡುತ್ತಿದ್ದೇನೆ. ಇದು ಒಂದು ದಿನ ಟ್ರಂಪ್ ಗೆ ತಲುಪೇ ತಲುಪುತ್ತದೆ ಎಂದು ನನಗೆ ತಿಳಿದಿದದೆ. ಭಾರತೀಯರು ಆಧ್ಯಾತ್ಮಿಕತೆಯಿಂದ ಎಲ್ಲವನ್ನೂ ಗೆಲ್ಲಬಹುದೆಂದು ನಂಬಿದ್ದಾರೆ. ಒಬ್ಬ ವ್ಯಕ್ತಿಯೊಂದಿಗೆ ನೇರ ಸಂಪರ್ಕ ಸಾಧ್ಯವಾಗದೇ ಹೋದರೆ ಪ್ರೀತಿಯ ಆರಾಧನೆಯ ಮೂಲಕ ಅವರನ್ನು ಗೆಲ್ಲಬಹುದು. ನಾನಿಲ್ಲಿ ಮಾಡುತ್ತಿರುವುದು ಅದನ್ನೇ ಎಂದು ಹೇಳಿದ್ದಾರೆ.

    ಇನ್ನು ಈ ಪೂಜೆ ಕುರಿತಂತೆ ಕೃಷ್ಣ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಫೋಟೊಗಳನ್ನು ಅಪ್‍ಲೋಡ್ ಮಾಡುತ್ತಿದ್ದಾರೆ. ಆದರೆ ಕೆಲವರು ನನ್ನನ್ನು ಹುಚ್ಚ ಎಂದು ತಿಳಿದಿರಬಹುದು. ಇಲ್ಲಿ ಸಲ್ಲಿಸಿದ ಪೂಜೆ ಅಲ್ಲಿ ಹೇಗೆ ಸಲ್ಲುತ್ತದೆ ಎಂದು ನನಗೆ ನಂಬಿಕೆ ಇದೆ. ಒಂದು ವೇಳೆ ಟ್ರಂಪ್ ಭಾರತಕ್ಕೆ ಬಂದರೆ ನನ್ನನ್ನು ಖಂಡಿತವಾಗಿ ಗುರುತು ಹಿಡಿಯುತ್ತಾರೆ ಎಂದು ಕೃಷ್ಣ ಹೇಳಿದ್ದಾರೆ.

  • ಮೋದಿ ಒಬ್ಬ ಸುಂದರ, ಅದ್ಭುತ ವ್ಯಕ್ತಿ, ಇದ್ರಿಂದ ನಮಗೆ ಏನೂ ಲಾಭವಿಲ್ಲ: ಟ್ರಂಪ್ ವ್ಯಂಗ್ಯ

    ಮೋದಿ ಒಬ್ಬ ಸುಂದರ, ಅದ್ಭುತ ವ್ಯಕ್ತಿ, ಇದ್ರಿಂದ ನಮಗೆ ಏನೂ ಲಾಭವಿಲ್ಲ: ಟ್ರಂಪ್ ವ್ಯಂಗ್ಯ

    ವಾಷಿಂಗ್ಟನ್ ಡಿಸಿ: ಇಂದು ಶ್ವೇತಭವನದಲ್ಲಿ ಕರೆದಿದ್ದ ಗವರ್ನರ್ ಗಳ ಜೊತೆಗಿನ ಸಭೆಯಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೋದಿ ಒಬ್ಬ ಸುಂದರ, ಅದ್ಭುತ ವ್ಯಕ್ತಿಯಾಗಿದ್ದರೂ ಅಮೆರಿಕ ದೇಶಕ್ಕೆ ಏನೂ ಲಾಭವಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.

    ಅಮೆರಿಕನ್ ಮೋಟಾರ್ ಸೈಕಲ್‍ಗಳು, ಅದರಲ್ಲಿಯೂ ಹಾರ್ಲೆ ಡೇವಿಡ್‍ಸನ್ ಮಾದರಿಯ ವಾಹನಗಳ ಮೇಲೆ ಭಾರತ ಸರ್ಕಾರ ಶೇ.100ರಷ್ಟು ಆಮದು ತೆರಿಗೆಯನ್ನು ವಿಧಿಸುತ್ತಿತ್ತು. ಹೀಗಾಗಿ ಅಮೆರಿಕ ಸರ್ಕಾರ ಆಮದು ತೆರಿಗೆಯನ್ನು ಕಡಿತಗೊಳಿಸಬೇಕೆಂದು ಒತ್ತಡ ಹಾಕಿತ್ತು.

    ನಾನು ಪ್ರಧಾನಿ ಮೋದಿಯವರೊಂದಿಗೆ ಮಾತನಾಡಿದಾಗ 75%ರಷ್ಟು ಆಮದು ತೆರಿಗೆ ತಗ್ಗಿಸಿರುವುದಾಗಿ ಅಂತ ತಿಳಿಸಿದ್ರು. ಆದರೆ ಮೋದಿಯವರು ಮಾತ್ರ 50% ರಷ್ಟು ತಗ್ಗಿಸುವ ಮೂಲಕ ಅಮೆರಿಕಾಗೆ ದೊಡ್ಡ ಕೆಲಸ ಮಾಡಿದ್ದೇವೆ ಎಂಬ ಹೆಮ್ಮೆಯಲ್ಲಿದ್ದಾರೆ. ಇದರಿಂದ ಅಮೆರಿಕಾಗೆ ಯಾವುದೇ ರೀತಿಯಲ್ಲಿ ಲಾಭವಿಲ್ಲ ಎಂದು ಹೇಳಿದ್ದಾರೆ.

    ಈ ಮೊದಲು ಭಾರತ ಶೇ.75 ರಷ್ಟು ತೆರಿಗೆಯನ್ನು ಕಡಿತಗೊಳಿಸಲಾಗುವುದು ಎಂಬ ಭರವಸೆಯನ್ನು ನೀಡಿತ್ತು. ಆದ್ರೆ ಶೇ.25ರಷ್ಟು ತೆರಿಗೆ ಕಡಿತಗೊಳಿಸಿದ್ದು, ನಿರಾಶೆಯನ್ನು ಉಂಟು ಮಾಡಿದೆ ಅಂತಾ ಟ್ರಂಪ್ ಹೇಳಿದ್ದಾರೆ. ಅಮೆರಿಕನ್ ವಸ್ತುಗಳ ಮೇಲಿನ ಆಮದು ತೆರಿಗೆ ಕಡಿತದ ಕುರಿತಾಗಿ ಎರಡು ವಾರಗಳ ಅವಧಿಯಲ್ಲಿ ಟ್ರಂಪ್ ಭಾರತದ ವಿರುದ್ಧ ಎರಡು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    Washington : President Donald Trump and Indian Prime Minister Narendra Modi hug while making statements in the Rose Garden of the White House in Washington, Monday, June 26, 2017. AP/PTI(AP6_27_2017_000042B)
  • ಟ್ರಂಪ್ ಗೆ ಬೆರಳು ತೋರಿಸಿ ಕೆಲ್ಸ ಕಳ್ಕೊಂಡಿದ್ದ ಮಹಿಳೆಗೆ ದೇಣಿಗೆ ನೀಡಲು ಮುಗಿಬಿದ್ದ ಜನ

    ಟ್ರಂಪ್ ಗೆ ಬೆರಳು ತೋರಿಸಿ ಕೆಲ್ಸ ಕಳ್ಕೊಂಡಿದ್ದ ಮಹಿಳೆಗೆ ದೇಣಿಗೆ ನೀಡಲು ಮುಗಿಬಿದ್ದ ಜನ

    ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ಗೆ ಮಧ್ಯದ ಬೆರಳು ತೋರಿಸಿ ಕೆಲಸ ಕಳೆದುಕೊಂಡಿದ್ದ ಮಹಿಳೆಗೆ ಸಹಾಯ ಮಾಡಲು ಆನ್ ಲೈನ್ ಮೂಲಕ ಆರಂಭಗೊಂಡಿರುವ ಧನ ಸಂಗ್ರಹ ಕಾರ್ಯಕ್ಕೆ ಭಾರೀ ಸ್ಪಂದನೆ ದೊರೆತಿದೆ.

    Thank You Juli Briskman ಹೆಸರಿನಲ್ಲಿ ಆನ್ ಲೈನಲ್ಲಿ ನವೆಂಬರ್ 6ರಂದು ಹಣ ಸಂಗ್ರಹಣೆ ಆರಂಭವಾಗಿದೆ. 1 ಲಕ್ಷ ಡಾಲರ್(ಅಂದಾಜು 65 ಲಕ್ಷ ರೂ.) ಸಂಗ್ರಹದ ಗುರಿಯನ್ನು ಹೊಂದಿದ್ದು, ಈಗಾಗಲೇ 99 ಸಾವಿರ ಡಾಲರ್( ಅಂದಾಜು 64 ಲಕ್ಷ ರೂ.) ಸಂಗ್ರಹವಾಗಿದೆ.

    ಜೂಲಿ ಬ್ರಿಸ್ಕ್ ಮ್ಯಾನ್ ಅವರು ನಮಗೆಲ್ಲ ಪ್ರೇರಣೆ ಆಗಿದ್ದಾರೆ. ಹೀಗಾಗಿ ಕೆಲಸ ಕಳೆದುಕೊಂಡಿರುವ ಅವರಿಗೆ ದೇಣಿಗೆ ನೀಡಲು ಈ ಹಣ ಸಂಗ್ರಹಣೆ ಮಾಡುತ್ತಿದ್ದು, ಸಂಗ್ರಹವಾದ ಎಲ್ಲ ಹಣ ಅವರಿಗೆ ನೇರವಾಗಿ ತಲುಪುತ್ತದೆ ಎಂದು ವೆಬ್‍ಸೈಟ್ ನಲ್ಲಿ ಬರೆಯಲಾಗಿದೆ.

     

    ಕೆಲ್ಸ ಹೋಗಿದ್ದು ಯಾಕೆ?
    50 ವರ್ಷದ ಜೂಲಿ ಬ್ರಿಸ್ಕ್ ಮ್ಯಾನ್ ಎಂಬವರು ಅಕ್ಟೋಬರ್ 28 ರಂದು ಸೈಕಲ್ ತುಳಿಯುತ್ತಾ ಹೋಗುತ್ತಿದ್ದರು. ಈ ಸಮಯದಲ್ಲಿ ಟ್ರಂಪ್ ತಮ್ಮ ಬೆಂಗಾವಲು ವಾಹನದ ಜೊತೆ ಗಾಲ್ಫ್ ಆಡಲು ಹೋಗುತ್ತಿದ್ದರು. ಟ್ರಂಪ್ ಹೋಗುವುದನ್ನು ನೋಡಿದ ಬ್ರಿಸ್ಕ್ ಮ್ಯಾನ್ ಮಧ್ಯದ ಬೆರಳನ್ನು ಎತ್ತಿ ಬೆಂಗಾವಲು ವಾಹನ ಪಡೆಗೆ ತೋರಿಸಿದ್ದರು.

    ಈ ವೇಳೆ ಬೆಂಗಾವಲು ಪಡೆಯ ವಾಹನದಲ್ಲಿದ್ದ ಫೋಟೋ ಗ್ರಾಫರ್ ಒಬ್ಬರು ಬ್ರಿಸ್ಕ್ ಮ್ಯಾನ್ ಅವರ ಫೋಟೋವನ್ನು ಕ್ಲಿಕ್ಕಿಸಿದ್ದರು. ನಂತರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿ ವೈರಲ್ ಆಗಿತ್ತು. ಈ ಫೋಟೋದಿಂದಾಗಿ ಜೂಲಿ ಬ್ರಿಸ್ಕ್ ಮ್ಯಾನ್ ಉದ್ಯೋಗಕ್ಕೆ ಕುತ್ತು ಬಂದಿತ್ತು, ಕೆಲಸ ಮಾಡುತ್ತಿದ್ದ ಸಂಸ್ಥೆ ಆಕೆಯನ್ನು ವಜಾಗೊಳಿಸಿತ್ತು. ವರ್ಜೀನಿಯಾ ಮೂಲದ ಅಕಿಮಾ ಕಂಪೆನಿಯಲ್ಲಿ ಮಾರ್ಕೆಟಿಂಗ್, ಕಮ್ಯುನಿಕೇಷನ್ ಸ್ಪೆಷಲಿಸ್ಟ್ ಆಗಿ ಬ್ರಿಸ್ಕ್ ಮ್ಯಾನ್ 6 ತಿಂಗಳಿನಿಂದ ಕೆಲಸ ಮಾಡುತ್ತಿದ್ದರು. ಅಧ್ಯಕ್ಷರಿಗೆ ಮಧ್ಯದ ಬೆರಳು ತೋರಿಸಿದ್ದಕ್ಕೆ ಕಂಪೆನಿ, ಸಾಮಾಜಿಕ ಮಾಧ್ಯಮದ ನೀತಿಯನ್ನು ಉಲ್ಲಂಘಿಸಿದ ಪರಿಣಾಮ ನಮ್ಮ ನಮಗೆ ಕೆಟ್ಟ ಹೆಸರು ಬಂದಿದೆ ಎಂದು ಕಾರಣ ನೀಡಿ ಕೆಲಸದಿಂದ ತೆಗೆದುಹಾಕಿತ್ತು.

    ಕೆಲಸದಿಂದ ವಜಾಗೊಳಿಸಿದ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಪ್ರತಿಕ್ರಿಯಿಸಿದ್ದ ಅವರು, ಈ ಘಟನೆಯಿಂದ ನನಗೆ ಯಾವುದೇ ಬೇಸರವಿಲ್ಲ. ಟ್ರಂಪ್ ಕಾರಿನಲ್ಲಿ ಬರುತ್ತಿದ್ದಂತೆ ನನ್ನ ರಕ್ತ ಕುದಿಯಲು ಆರಂಭವಾಯಿತು. ಟ್ರಂಪ್ ವಿರುದ್ಧ ಈ ರೀತಿ ಪ್ರತಿಭಟಿಸಿದ್ದಕ್ಕೆ ನನಗೆ ಸಂತೋಷವಿದೆ. ನನ್ನ ಈ ಪ್ರತಿಭಟನೆಗೆ ಭಾರೀ ಸಂಖ್ಯೆಯಲ್ಲಿ ಜನರು ಬೆಂಬಲಿಸಿದ್ದು ನನಗೆ ಸಂತೋಷ ನೀಡಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಫೋಟೋವನ್ನು ಫೇಸ್‍ಬುಕ್ ಮತ್ತು ಟ್ಟಿಟ್ಟರ್ ಪ್ರೊಫೈಲ್ ಫೋಟೋವನ್ನಾಗಿ ಬ್ರಿಸ್ಕ್ ಮ್ಯಾನ್ ಬದಲಾಯಿಸಿದ್ದರು.

    ಎರಡು ಮಕ್ಕಳ ತಾಯಿಯಾದ ಬ್ರಿಸ್ಕ್ ಮ್ಯಾನ್ ಸದ್ಯಕ್ಕೆ ಹೊಸ ಉದ್ಯೋಗ ಹುಡುಕುವ ಕೆಲಸದಲ್ಲಿ ನಿರತರಾಗಿದ್ದಾರೆ. ಫೋಟೋ ವೈರಲ್ ಆಗಿದ್ದೆ ತಡ ಸಾಮಾಜಿಕ ಜಾಲತಾಣದಲ್ಲಿ ಬ್ರಿಸ್ಕ್ ಮ್ಯಾನ್ ಸಾಹಸಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಮುಂದಿನ ಚುನಾವಣೆಗೆ ಸ್ಪರ್ಧಿಸಬೇಕೆಂದು ಜನ ಕಮೆಂಟ್ ಮಾಡಿದ್ದರು.

  • ಪ್ರಧಾನಿ ಮೋದಿ ಕಾರ್ಯವೈಖರಿಯನ್ನು ವಿಶ್ವ ನಾಯಕರ ಮುಂದೆ ಹೊಗಳಿದ ಟ್ರಂಪ್

    ಪ್ರಧಾನಿ ಮೋದಿ ಕಾರ್ಯವೈಖರಿಯನ್ನು ವಿಶ್ವ ನಾಯಕರ ಮುಂದೆ ಹೊಗಳಿದ ಟ್ರಂಪ್

    ಡ್ಯಾನಂಗ್: 100 ಕೋಟಿ ಭಾರತೀಯರನ್ನು ಒಗ್ಗೂಡಿಸುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

    ಚೀನಾ ಪ್ರವಾಸ ಮುಕ್ತಾಯಗೊಳಿಸಿ ವಿಯೆಟ್ನಾಂ ನಲ್ಲಿ ನಡೆದ ಏಷ್ಯಾ ಪೆಸಿಫಿಕ್ ಆರ್ಥಿಕ ಸಹಕಾರ(ಅಪೆಕ್) ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಟ್ರಂಪ್ ಮೋದಿ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

    70 ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಭಾರತ ಆಚರಿಸುತ್ತಿದೆ. ನೂರು ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ವಿಶ್ವದ ದೊಡ್ಡ ಪ್ರಜಾಪ್ರಭುತ್ವದ ದೇಶದ ಪ್ರಜೆಗಳನ್ನು ಒಗ್ಗೂಡಿಸಿ ಯಶಸ್ವಿಯಾಗಿ ಮೋದಿ ಮುನ್ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.

    ಭಾರತ ಮುಕ್ತ ಆರ್ಥಿಕತೆಗೆ ತೆರೆದ ಬಳಿಕ ಭಾರೀ ಪ್ರಮಾಣದಲ್ಲಿ ಬೆಳವಣಿಗೆಯಾಗುತ್ತಿದೆ. ಮೋದಿ ಅವರು ಎಲ್ಲ ಜನರನ್ನು ಒಗ್ಗೂಡಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದಾರೆ ಎಂದು ಟ್ರಂಪ್ ಶ್ಲಾಘಿಸಿದರು. ಜಪಾನ್, ರಷ್ಯಾ, ಚೀನಾ, ದಕ್ಷಿಣ ಕೊರಿಯಾ ನಾಯಕರು ಅಪೆಕ್ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.

    ಪ್ರಧಾನಿ ಮೋದಿ  ಜೂನ್  ತಿಂಗಳಿನಲ್ಲಿ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಶ್ವೇತ ಭವನದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿದ್ದರು.

    ಇದನ್ನೂ ಓದಿ: ಶ್ವೇತಭವನದಲ್ಲಿ ಪ್ರಧಾನಿಯನ್ನು ಮುಜುಗರದಿಂದ ಪಾರು ಮಾಡಿದ್ರು ಅಜಿತ್ ದೋವಲ್!

     

     

  • 54 ಮುಸ್ಲಿಂ ರಾಷ್ಟ್ರಗಳಿಂದ ಪಾಕ್ ಪ್ರಧಾನಿಗೆ ಅವಮಾನ!

    54 ಮುಸ್ಲಿಂ ರಾಷ್ಟ್ರಗಳಿಂದ ಪಾಕ್ ಪ್ರಧಾನಿಗೆ ಅವಮಾನ!

    ರಿಯಾದ್: ನಿವೃತ್ತ ಸೇನಾಧಿಕಾರಿ ಕುಲಭೂಷಣ್ ಜಾಧವ್ ಮರಣದಂಡನೆ ಪ್ರಕರಣದಲ್ಲಿ ಭಾರತದೆದುರು ಭಾರೀ ಮುಖಭಂಗ ಅನುಭವಿಸಿದ ಬೆನ್ನಲ್ಲೇ ಇದೀಗ ಪಾಕ್ ಪ್ರಧಾನಿ ನವಾಜ್ ಶರೀಫ್ ಅವರಿಗೆ 54 ಮುಸ್ಲಿಂ ರಾಷ್ಟ್ರಗಳು ಅವಮಾನ ಮಾಡಿವೆ.

    ರಿಯಾದ್ ನಲ್ಲಿ ನಡೆದ ಅರಬ್ ಇಸ್ಲಾಮಿಕ್ ಅಮೆರಿಕನ್ ಶೃಂಗಸಭೆಯಲ್ಲಿ 54 ಮುಸ್ಲಿಂ ರಾಷ್ಟ್ರಗಳು ಭಾಗವಹಿಸಿದ್ದವು. ಈ ಸಭೆಯಲ್ಲಿ ಪಾಕ್ ಪ್ರಧಾನಿ ಶರೀಫ್ ದೀರ್ಘ ಭಾಷಣಕ್ಕೆ ರೆಡಿಯಾಗಿದ್ದರು. ವಿಶೇಷವಾಗಿ ರಿಯಾದ್‍ಗೆ ತೆರಳುತ್ತಿದ್ದಾಗಲೂ ಈ ಭಾಷಣ ಅಭ್ಯಾಸ ಮಾಡಿದ್ದರು. ಆದರೆ ಈ ಭಾಷಣ ಮಾಡಲು ಪ್ರಧಾನಿಯನ್ನು ವೇದಿಕೆಗೆ ಕರೆಯದೇ ಇರುವ ಮೂಲಕ ಉಳಿದ ರಾಷ್ಟ್ರಗಳು ಅವಮಾನಿಸಿದೆ ಎಂದು ಝಿ ನ್ಯೂಸ್ ವರದಿ ಮಾಡಿದೆ.

    ಸಭೆಗೆ ಭಾಗವಹಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಾಕ್ ಪ್ರಧಾನಿ ಕೈಕುಲುಕಿಸಿ ಅಫ್ಗಾನ್ ಅಧ್ಯಕ್ಷ ಅಶ್ರಫ್ ಘನಿ, ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಮುಂತಾದವರ ಜೊತೆ ಮಾತುಕತೆ ನಡೆಸಿದ್ದಾರೆ.

    ಬಳಿಕ ಸಭೆಯಲ್ಲಿ ಟ್ರಂಪ್, ಭಾರತ, ರಷ್ಯಾ ಹಾಗೂ ಆಸ್ಟ್ರೇಲಿಯಾದಲ್ಲಿ ಉಗ್ರರ ದಾಳಿ ಬಗ್ಗೆ ಮಾತನಾಡಿದ್ದಾರೆ. ಆದ್ರೆ ಪಾಕಿಸ್ತಾನದ ಬಗ್ಗೆ ಚಕಾರವೇ ಎತ್ತಿಲ್ಲ. ಅಲ್ಲದೇ ಬೇರೆ ದೇಶಗಳ ಮೇಲೆ ದಾಳಿ ಮಾಡುವ ಮೊದಲು ಉಗ್ರರು ತಮ್ಮ ನೆಲದ ಬಗ್ಗೆ ಖಚಿತಪಡಿಸಿಕೊಳ್ಳಲಿ ಅಂತಾ ಹೇಳಿದ್ರು.

  • ಟ್ರಂಪ್ ವೀಸಾ ನೀತಿಯಿಂದ ಭಾರತಕ್ಕೆ ಮರಳಿದ್ದ ಟೆಕ್ಕಿ ಪತ್ನಿ ನೇಣಿಗೆ ಶರಣು

    ಟ್ರಂಪ್ ವೀಸಾ ನೀತಿಯಿಂದ ಭಾರತಕ್ಕೆ ಮರಳಿದ್ದ ಟೆಕ್ಕಿ ಪತ್ನಿ ನೇಣಿಗೆ ಶರಣು

    ಹೈದರಾಬಾದ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವೀಸಾ ನೀತಿಯಿಂದಾಗಿ ಅಮೆರಿಕದಿಂದ ಭಾರತಕ್ಕೆ ಹಿಂದಿರುಗಿದ್ದ ಟೆಕ್ಕಿಯೊಬ್ಬರ ಪತ್ನಿಯೊಬ್ಬರು ನೇಣಿಗೆ ಶರಣಾಗಿದ್ದಾರೆ.

    ಹೈದರಾಬಾದ್ ನ ಅಲ್ಕಾಪುರ ಕಾಲೋನಿಯ ಪಪ್ಪಲಗುಡದ ನಿವಾಸಿಯಾದ ಟೆಕ್ಕಿ ಸಂಜಯ್ ಶರ್ಮಾ ಅವರ ಪತ್ನಿ ರಶ್ಮಿ(39) ತಮ್ಮ ನಿವಾಸದಲ್ಲಿ ಗುರುವಾರ ನೇಣಿಗೆ ಶರಣಾಗಿದ್ದಾರೆ. ಸಂಜಯ್ ಮತ್ತು ಅವರ ಮಕ್ಕಳು ಲ್ಯಾಪ್ ಟಾಪ್ ರಿಪೇರಿ ಮಾಡಿಸಲು ಮನೆಯಿಂದ ಹೊರಗಡೆಗೆ ತೆರಳಿದ್ದಾಗ ರಶ್ಮಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಸಂಜಯ್ ಶರ್ಮಾ ಉತ್ತರ ಪ್ರದೇಶದ ಫರೀದಾಬಾದ್ ಮೂಲದವರಾಗಿದ್ದು, ಕಳೆದ 8 ವರ್ಷಗಳಿಂದ ಅವರು ಬ್ಯಾಂಕ್ ಆಫ್ ಅಮೆರಿಕದಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದರು. ಅಮೆರಿಕದ ನೂತನ ನೀತಿಯಿಂದಾಗಿ ಸಂಜಯ್ ಶರ್ಮಾ ಅವರ ಎಚ್-1ಬಿ ವೀಸಾ ಅವಧಿಯನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಇದರಿಂದಾಗಿ ಸಂಜಯ್ ಶರ್ಮಾ ಉದ್ಯೋಗ ಕಳೆದುಕೊಂಡಿದ್ದರು.

    ಅನಿವಾರ್ಯವಾಗಿ ಭಾರತಕ್ಕೆ ಮರಳಲೇಬೇಕಾಗಿದ್ದರಿಂದ ಸಂಜಯ್ ಶರ್ಮಾ ಮಾರುಕಟ್ಟೆಯ ಬೆಲೆಗಿಂತಲೂ ಕಡಿಮೆ ಬೆಲೆಗೆ ಆಸ್ತಿ ಮತ್ತು ಪಿಠೋಪಕರಣಗಳನ್ನು ಮಾರಾಟ ಮಾಡಿದ್ದರು. ಅಮೆರಿಕದಿಂದ ಬಂದ ಬಳಿಕ ಹೈದರಾಬಾದ್‍ನ ರಹೇಜಾ ಐಟಿ ಪಾರ್ಕ್ ನಲ್ಲಿರುವ ಕಂಪೆನಿಯೊಂದರಲ್ಲಿ ಸಂಜಯ್ ಶರ್ಮಾ ಉದ್ಯೋಗಕ್ಕೆ ಸೇರಿಕೊಂಡಿದ್ದರು.

    ಪತಿ ಅಮೆರಿಕದಲ್ಲಿ ಉದ್ಯೋಗ ಕಳೆದುಕೊಂಡಿದ್ದರಿಂದ ರಶ್ಮಿ ಬೇಸರಗೊಂಡಿದ್ದರು. ಅಷ್ಟೇ ಅಲ್ಲದೇ ಭಾರತಕ್ಕೆ ವಾಪಸ್ ಆಗಲು ಇಷ್ಟವಿರಲಿಲ್ಲ. ಭಾರೀ ಮನನೊಂದಿದ್ದ ರಶ್ಮಿ ಈಗ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ರಶ್ಮಿಗೆ ದೆಹಲಿ ಸೇರಿದಂತೆ ಭಾರತದ ಯಾವ ಭಾಗದಲ್ಲೂ ನೆಲೆಸಲು ಇಷ್ಟವಿರಲಿಲ್ಲ. ಭಾರತಕ್ಕೆ ಮರಳಿದ ಬಳಿಕ ಆಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎಂದು ಸಂಬಂಧಿಕರ ಹೇಳಿಕೆಯನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿವೆ.

    ಇದನ್ನೂ ಓದಿ: ಭಾರತೀಯ ಮೂಲದ ಸಿಇಒ ಸುಂದರ್ ಪಿಚೈಗೆ ಗೂಗಲ್ 2016ರಲ್ಲಿ ನೀಡಿದ ಸಂಬಳ ಎಷ್ಟು ಗೊತ್ತೆ?

    ಕನಿಷ್ಠ ಸಂಬಳ ಈಗ ಎಷ್ಟಿರಬೇಕು?
    ಕನಿಷ್ಠ 1,30,000 ಡಾಲರ್(ಅಂದಾಜು 88.17 ಲಕ್ಷ ರೂ.) ಸಂಬಳ ಹೊಂದಿದ ಉದ್ಯೋಗಿಗಳಿಗೆ ಮಾತ್ರ ಎಚ್-1ಬಿ ವೀಸಾ ನೀಡಲು ಅಮೆರಿಕ ಸರ್ಕಾರ ಮುಂದಾಗಿದೆ. ಎಚ್-1ಬಿ ವೀಸಾದ ಕಾನೂನು ತಿದ್ದುಪಡಿಯಾಗಿದ್ದು, ಎಚ್-1ಬಿ ವೀಸಾ ಪಡೆಯಲು ಉದ್ಯೋಗಿಗಳಿಗೆ ಕನಿಷ್ಠ 1.30 ಲಕ್ಷ ಡಾಲರ್ ಸಂಬಳ ನೀಡಬೇಕೆಂಬ ಅಂಶವಿದೆ.

    ಇಲ್ಲಿಯವರೆಗೆ ಎಚ್-1ಬಿ ವೀಸಾ ಹೊಂದಿದವರಿಗೆ ಕನಿಷ್ಠ ಸಂಬಳದ ಮಿತಿ 60 ಸಾವಿರ ಡಾಲರ್(40.69 ಲಕ್ಷ ರೂ.) ಇತ್ತು. 1989ರ ಜಾರಿಗೆ ಬಂದಿದ್ದ ಈ ವೀಸಾ ನಿಯಮದಲ್ಲಿ ಇದೂವರೆಗೆ ಯಾವುದೇ ಬದಲಾವಣೆ ಆಗಿರಲಿಲ್ಲ. ಹೀಗಾಗಿ ಭಾರತೀಯ ಸಾಫ್ಟ್ ವೇರ್ ಕಂಪೆನಿಗಳು ಟೆಕ್ಕಿಗಳನ್ನು ಎಚ್-1ಬಿ ವೀಸಾದ ಅಡಿಯಲ್ಲಿ ಅಮೆರಿಕ ದೇಶಕ್ಕೆ ಕಳುಹಿಸಿಕೊಡುತಿತ್ತು. ಆದರೆ ಈಗ ಈ ವೀಸಾದ ಅಡಿ ಅಮೆರಿಕಕ್ಕೆ ತೆರಳುವ ಉದ್ಯೋಗಿಗಳ ಸಂಬಳದ ಮಿತಿ ಡಬಲ್ ಆಗಿದೆ.

    ಇದನ್ನೂ ಓದಿ: ಉದ್ಯೋಗ ನೀಡುವಂತೆ ಗೂಗಲ್‍ಗೆ 7ರ ಬಾಲಕಿಯಿಂದ ಪತ್ರ: ಸಿಇಒ ಪಿಚೈ ನೀಡಿದ ಉತ್ತರ ಇದು

  • ಮೇ 13ರಿಂದ ಮೂರನೇ ಮಹಾಯುದ್ಧ ಆರಂಭ: ದಾರ್ಶನಿಕ ಹೇಳಿದ್ದು ಸತ್ಯವಾಗುತ್ತಾ?

    ಮೇ 13ರಿಂದ ಮೂರನೇ ಮಹಾಯುದ್ಧ ಆರಂಭ: ದಾರ್ಶನಿಕ ಹೇಳಿದ್ದು ಸತ್ಯವಾಗುತ್ತಾ?

    ಲಂಡನ್: ಅಮೆರಿಕ, ರಷ್ಯಾ, ಉತ್ತರ ಕೊರಿಯಾಗಳ ನಡುವೆ ಯುದ್ಧದ ಮಾತುಕತೆ ಕೇಳಿ ಬರುತ್ತಿರುವಾಗಲೇ ಮೂರನೇ ಮಹಾಯುದ್ಧ ಮೇ 13ರಿಂದ ಆರಂಭವಾಗಲಿದೆ ಎಂದು ಟೆಕ್ಸಸ್ ದಾರ್ಶನಿಕ ಹೊರಶಿಯೋ ವಿಲೇಗಾಸ್ ಭವಿಷ್ಯ ನುಡಿದಿದ್ದಾರೆ.

    2015ರಲ್ಲಿ ಅಮೆರಿಕದ ಅಧ್ಯಕ್ಷ ಟ್ರಂಪ್ ಆಯ್ಕೆ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದ ಹೊರಶಿಯೋ ವಿಲೇಗಾಸ್ ಮೂರನೇ ಮಹಾಯುದ್ಧದಲ್ಲಿ ವಿಶ್ವದ ಹಲವು ಕಡೆ ಅಣುಬಾಂಬ್ ಬೀಳಲಿದೆ ಎಂದು ಹೇಳಿದ್ದಾರೆ.

    ಇಂಗ್ಲೆಂಡಿನ ಡೈಲಿಸ್ಟಾರ್ ಪತ್ರಿಕೆ ಹೊರಶಿಯೋ ವಿಲೇಗಾಸ್ ಭವಿಷ್ಯವಾಣಿಗೆ ಸಂಬಂಧಿಸಿದ ಸುದ್ದಿ ಪ್ರಕಟಿಸಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಭವಿಷ್ಯವಾಣಿ ಏನು?
    ಮೂರನೇ ಮಹಾಯುದ್ದದ ವೇಳೆ ಅಪಾಯದಿಂದ ಪಾರಾಗಲು ಜನ ವಿಶ್ವದೆಲ್ಲೆಡೆ ವಲಸೆ ಹೋಗುತ್ತಾರೆ. ಈ ಅವಧಿಯಲ್ಲಿ ಹಲವು ನಗರಗಳ ಮೇಲೆ ಅಣ್ವಸ್ತ್ರ ದಾಳಿ ನಡೆಯಲಿದೆ. ಅಕ್ಟೋಬರ್‍ನಲ್ಲಿ ಯದ್ಧ ಅಂತ್ಯಗೊಳ್ಳುತ್ತದೆ. ಅಮೆರಿಕ, ರಷ್ಯಾ, ಸಿರಿಯಾ, ಕೊರಿಯಾಗಳ ನಡುವೆ ಆರಂಭದಲ್ಲಿ ಯುದ್ಧ ಪ್ರಾರಂಭವಾಗುತ್ತದೆ. ಇದಾದ ಬಳಿಕ ಚೀನಾವೂ ಇದಕ್ಕೆ ಸೇರ್ಪಡೆಯಾಗುತ್ತದೆ. ಅಮೆರಿಕದ ಹಿಟ್‍ಲಿಸ್ಟ್ ನಲ್ಲಿ ಈಗ ಉತ್ತರ ಕೊರಿಯಾ ಇದೆ ಎಂದು ಹೇಳಿದ್ದಾರೆ.

    ಮೇ 13 ರಂದೇ ಯಾಕೆ?
    ಈ ವರ್ಷ ಮೇ 13 – ಕ್ರಿಸ್ತನ ತಾಯಿ, ವರ್ಜಿನ್ ಮೇರಿ , ಅಂದರೆ ಅವರ್ ಲೇಡಿ ಆಫ್ ಫಾತಿಮಾ ಭೂಮಿಗೆ ಇಳಿದು ಬಂದ ನೂರನೇ ವರ್ಷಾಚರಣೆಯ ದಿನ. ಅಂದು ಮೂರನೇ ಮಹಾ ಯುದ್ಧ ಆರಂಭವಾಗಲಿದೆ ಎಂದು ಹೇಳಿದ್ದಾರೆ.

    ಭವಿಷ್ಯವಾಣಿ ನಿಜವಾಗುತ್ತಾ?
    ಟೆಕ್ಸಾಸ್‍ನಲ್ಲಿ ವಾಸವಾಗಿರುವ ಕ್ಯಾಥೋಲಿಕ್ ಅನುಯಾಯಿ ಹೊರಶಿಯೋ ವಿಲೇಗಾಸ್ 10 ವರ್ಷದ ಹಿಂದೆ ಪುಸ್ತಕ ಪ್ರಕಟಿಸಿದ್ದು, ಇದರಲ್ಲಿ ಮುಂದೆ ಜಗತ್ತಿನಲ್ಲಿ ಏನೇನು ಆಗಲಿದೆ ಎನ್ನುವುದನ್ನು ವಿವರಿಸಿದ್ದಾರೆ. ಸಿರಿಯಾದ ಮೇಲೆ ಆರಂಭದಲ್ಲಿ ದಾಳಿ ಆಗುತ್ತದೆ ನಂತರ ಮೂರನೇ ಮಹಾಯುದ್ಧ ಸಂಭವಿಸಲಿದೆ ಎಂದು ಅವರು ಹೇಳಿದ್ದಾರೆ.

    ಅಷ್ಟೇ ಅಲ್ಲದೇ ಅಮೆರಿಕವನ್ನು ಶತಕೋಟಿ ಡಾಲರ್‍ಗಳ ಒಡೆಯ ಆಳಲಿದ್ದಾರೆ ಎಂದು ಈ ಹಿಂದೆ ಹೇಳಿದ್ದರು. ಟ್ರಂಪ್ ಅಧ್ಯಕ್ಷರಾಗುತ್ತಾರೆ ಎಂದು ನಾನು ಫಲಿತಾಂಶ ಬರುವ 15 ತಿಂಗಳ ಮೊದಲೇ ಹೇಳಿದ್ದರೂ ಜನ ಯಾರೂ ನಂಬಲಿಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

    ನಾನು ಬೈಬಲ್ ಮತ್ತು ವಿಶ್ವದ ಇತರ ಕೆಲವು ಧರ್ಮಗ್ರಂಥಗಳನ್ನು ಓದಿ ಅಧ್ಯಯನ ನಡೆಸಿದ್ದೇನೆ. ಈ ಕಾರಣದಿಂದಾಗಿ ಯಾವ ದಿನಾಂಕ ಪರಮಾಣು ಯುದ್ಧ ಆರಂಭವಾಗುತ್ತದೆ ಎನ್ನುವುದು ನನಗೆ ತಿಳಿದಿದೆ ಎಂದು ಅವರು ಹೇಳಿದ್ದಾರೆ.

    ಪ್ರಸ್ತುತ ವಿಶ್ವದಲ್ಲಿ ಏನಾಗ್ತಿದೆ?
    ಸಿರಿಯಾ ನಡೆಸಿದ ಕೆಮಿಕಲ್ ದಾಳಿಗೆ ಪ್ರತಿಯಾಗಿ ಅಮೆರಿಕ ವೈಮಾನಿಕ ದಾಳಿ ನಡೆಸಿದೆ. ಈ ವೈಮಾನಿಕ ದಾಳಿಯನ್ನು ರಷ್ಯಾ ಖಂಡಿಸಿದೆ. ಅಮೆರಿಕದ ಜೊತೆ ತಾನು ಯುದ್ಧಕ್ಕೆ ತಯಾರಾಗಿದ್ದೇನೆ ಎಂದು ತೋರಿಸಿಕೊಡಲು ಉತ್ತರ ಕೊರಿಯಾದ ಎರಡನೇ ಪ್ರಭಾವಿ ಅಧಿಕಾರಿ ಚೊ ಯಾಂಗ್, ಅಮೆರಿಕದ ಯಾವುದೇ ದಾಳಿಯನ್ನು ತಡೆದು ತಿರುಗೇಟು ನೀಡಲು ನಮ್ಮ ಸೇನೆ ಸಮರ್ಥವಾಗಿದೆ ಎಂದು ಅವರು ಹೇಳಿದ್ದಾರೆ. ಉತ್ತರ ಕೊರಿಯಾದ ಮೇಲೆ ಅಮೆರಿಕ ದಾಳಿ ನಡೆಸಬಹದು ಎನ್ನುವ ಕಾರಣಕ್ಕೆ ಚೀನಾ ಮತ್ತು ರಷ್ಯಾ ಉತ್ತರ ಕೊರಿಯಾಗೆ ಹೊಂದಿಕೊಂಡಿರುವಗಡಿ ಭಾಗಕ್ಕೆ ಸೇನಾಪಡೆ ಹಾಗೂ ಯುದ್ಧ ಸಾಮಗ್ರಿಗಳನ್ನು ರವಾನಿಸಿದೆ.

    ಮೊದಲ ಮಹಾಯುದ್ಧ 1914 ಜುಲೈ 28ರಿಂದ ಆರಂಭವಾಗಿ 1918ರ ನವೆಂಬರ್ 11ಕ್ಕೆ ಮುಕ್ತಾಯವಾಗಿತ್ತು. ಎರಡನೇ ಮಹಾಯುದ್ಧ, ಎರಡನೇ ಮಹಾಯುದ್ಧ 1939ರ ಸೆಪ್ಟೆಂಬರ್ 1ರಿಂದ ಆರಂಭವಾಗಿ 1945 ಸೆಪ್ಟೆಂಬರ್ 2ರಂದು ಕೊನೆಯಾಗಿತ್ತು.

    https://twitter.com/cassandra17lina/status/854689953724469248

    https://twitter.com/nukewarnews/status/853057591164809216

    https://twitter.com/EmekaGift/status/853938291543916544