Tag: Trucks

  • ಟ್ರಕ್‌ಗಳಲ್ಲಿ ಹವಾನಿಯಂತ್ರಿತ ಡ್ರೈವರ್‌ ಕ್ಯಾಬಿನ್‌ಗಳು ಕಡ್ಡಾಯ: ನಿತಿನ್‌ ಗಡ್ಕರಿ

    ಟ್ರಕ್‌ಗಳಲ್ಲಿ ಹವಾನಿಯಂತ್ರಿತ ಡ್ರೈವರ್‌ ಕ್ಯಾಬಿನ್‌ಗಳು ಕಡ್ಡಾಯ: ನಿತಿನ್‌ ಗಡ್ಕರಿ

    ನವದೆಹಲಿ: ಟ್ರಕ್‌ಗಳಲ್ಲಿ (Truck) ಹವಾನಿಯಂತ್ರಿತ ಡ್ರೈವರ್‌ ಕ್ಯಾಬಿನ್‌ಗಳನ್ನು (Air Conditioned Driver Cabins) ಕಡ್ಡಾಯಗೊಳಿಸುವ ಕ್ರಮವನ್ನು ಶೀಘ್ರವೇ ಕೈಗೊಳ್ಳಲಾಗುವುದು. ವಾಹನ ತಯಾರಕರು ಹವಾನಿಯಂತ್ರಿತ ಡ್ರೈವರ್‌ ಕ್ಯಾಬಿನ್‌ಗಳನ್ನು ಅಳವಡಿಸಬೇಕಾಗುತ್ತದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ (Nitin Gadkari) ತಿಳಿಸಿದ್ದಾರೆ.

    ಆಟೋ ಉದ್ಯಮದ ಸಮಾರಂಭವೊಂದರಲ್ಲಿ ಮಾತನಾಡಿದ ಸಚಿವರು, ಟ್ರಕ್ ಡ್ರೈವರ್ ಕಂಪಾರ್ಟ್‌ಮೆಂಟ್‌ಗಳಲ್ಲಿ ಹವಾನಿಯಂತ್ರಿತ (ಎಸಿ) ಕಡ್ಡಾಯಗೊಳಿಸುವ ಕಡತಕ್ಕೆ ಸಹಿ ಹಾಕಿದ್ದೇನೆ. ಟ್ರಕ್‌ಗಳನ್ನು ಓಡಿಸುವ ಚಾಲಕರು ಈ ಕ್ರಮವನ್ನು ಒಪ್ಪಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭೂಪೇಂದ್ರ ಯಾದವ್ ಭೇಟಿ ಮಾಡಿದ ಈಶ್ವರ್ ಖಂಡ್ರೆ – ಹುಲಿ ಅಭಯಾರಣ್ಯ ಬಾಕಿ ಹಣ ಬಿಡುಗಡೆಗೆ ಮನವಿ

     

    ನಮ್ಮ ಚಾಲಕರು 43-47% ರಷ್ಟು ಕಠಿಣ ತಾಪಮಾನದಲ್ಲಿ ವಾಹನಗಳನ್ನು ಚಲಾಯಿಸುತ್ತಾರೆ. ಆಗ ಚಾಲಕರ ಸ್ಥಿತಿ ಹೇಗಿರುತ್ತದೆ ಎಂಬುದನ್ನು ನಾವು ಊಹಿಸಬೇಕು. ನಾನು ಸಚಿವನಾದ ನಂತರ ಎಸಿ ಕ್ಯಾಬಿನ್ ಪರಿಚಯಿಸಲು ಉತ್ಸುಕನಾಗಿದ್ದೆ. ಆಗ ಟ್ರಕ್‌ಗಳ ಬೆಲೆ ಹೆಚ್ಚಾಗುತ್ತದೆ ಎಂದು ಕೆಲವರು ಇದನ್ನು ವಿರೋಧಿಸಿದ್ದರು. ಈಗ ನಾನು ಡ್ರೈವರ್‌ ಕ್ಯಾಬಿನ್‌ಗಳಲ್ಲಿ ಎಸಿ ಕಡ್ಡಾಯಗೊಳಿಸುವ ಕಡತಕ್ಕೆ ಸಹಿ ಹಾಕಿದ್ದೇನೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

    ಭಾರತದಲ್ಲಿ ಚಾಲಕರ ಕೊರತೆಯಿದೆ. ಇದರ ಪರಿಣಾಮವಾಗಿ ಈಗ ಇರುವ ಚಾಲಕರು ದಿನದಲ್ಲಿ 14-16 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಇತರ ದೇಶಗಳಲ್ಲಿ, ಟ್ರಕ್‌ ಚಾಲಕರು ಇಷ್ಟು ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುವುದಕ್ಕೆ ನಿರ್ಬಂಧವಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಛತ್ತೀಸ್‌ಗಢದ ಮಾವಿನ ಮೇಳದಲ್ಲಿ ವಿಶ್ವದ ದುಬಾರಿ ಮಾವಿನ ಪ್ರದರ್ಶನ- ಕೆ.ಜಿಗೆ 2.70 ಲಕ್ಷ ರೂ.

    ಎಸಿ ಡ್ರೈವರ್‌ ಕ್ಯಾಬಿನ್‌ ಹೊಂದಿರುವ ಟ್ರಕ್‌ಗಳನ್ನು ಯಾವಾಗ ಹೊರತರಲಾಗುತ್ತದೆ ಎಂಬ ಬಗ್ಗೆ ಸಚಿವರು ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ 2025 ರಿಂದ ಇದನ್ನು ಪರಿಚಯಿಸಲಾಗುವುದು ಎಂದು ವರದಿಗಳಾಗಿವೆ.

  • 2005ರಿಂದ ವಾಸವಿದ್ದ ಸರ್ಕಾರಿ ಬಂಗಲೆ ತೊರೆದ ರಾಹುಲ್ ಗಾಂಧಿ

    2005ರಿಂದ ವಾಸವಿದ್ದ ಸರ್ಕಾರಿ ಬಂಗಲೆ ತೊರೆದ ರಾಹುಲ್ ಗಾಂಧಿ

    ನವದೆಹಲಿ: ಕಾಂಗ್ರೆಸ್ (Congress) ಮುಖಂಡ ರಾಹುಲ್ ಗಾಂಧಿ (Rahul Gandhi) ಅವರು ಕೇಂದ್ರ ದೆಹಲಿಯಲ್ಲಿರುವ ತಮ್ಮ ಅಧಿಕೃತ ನಿವಾಸವನ್ನು ಖಾಲಿ ಮಾಡಿದ್ದಾರೆ.

    ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ಅವರು ಬೆಳಗ್ಗೆಯಿಂದ 2 ಬಾರಿ ಬಂಗಲೆಗೆ ಭೇಟಿ ನೀಡಿದ್ದಾರೆ. ನಂತರ ಮಧ್ಯಾಹ್ನದ ವೇಳೆಗೆ ರಾಹುಲ್ ಗಾಂಧಿ ಕೀಗಳನ್ನು ಹಸ್ತಾಂತರಿಸಿದ್ದಾರೆ.

    2005 ರಿಂದ ರಾಹುಲ್ ಗಾಂಧಿ 12 ತುಘಲಕ್ ಲೇನ್ ಬಂಗಲೆಯಲ್ಲಿ ವಾಸಿಸುತ್ತಿದ್ದರು. ಆದರೆ ಕಳೆದ ತಿಂಗಳ ಕೊನೆಯಲ್ಲಿ ಸಂಸತ್ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹಗೊಂಡಿದ್ದರು. ಇದರ ಬೆನ್ನಲ್ಲೇ ಬಿಜೆಪಿ ಸಂಸದ ಸಿ.ಆರ್. ಪಾಟೀಲ್ ನೇತೃತ್ವದ ಲೋಕಸಭೆಯ ವಸತಿ ಸಮಿತಿಯು ಏಪ್ರಿಲ್ 22ರೊಳಗೆ ದೆಹಲಿಯಲ್ಲಿರುವ (Delhi) ತುಘಲಕ್ ಲೇನ್ (Tughlaq Lane) ಬಂಗಲೆ ತೊರೆಯುವಂತೆ ಲೋಕಸಭಾ ವಸತಿ ಸಮಿತಿ ನೋಟಿಸ್ ನೀಡಿತ್ತು. ಮನೆ ಖಾಲಿ ಮಾಡಲು ಒಪ್ಪಿಗೆ ಸೂಚನೆ ನೀಡುತ್ತಿದ್ದಂತೆ ರಾಹುಲ್ ಗಾಂಧಿಗೆ ಪಕ್ಷದ ನಾಯಕರಿಂದ ಮನೆ ಆಫರ್‌ಗಳು ಹರಿದು ಬಂದಿತ್ತು.

    ಆದರೆ ರಾಹುಲ್ ಗಾಂಧಿ ಅವರು ಸೋನಿಯಾ ಗಾಂಧಿ (Sonia Gandhi) ಅವರ ಜನಪಥ್ ನಿವಾಸಕ್ಕೆ ತೆರಳುತ್ತಿದ್ದಾರೆ. ಆದರೂ ರಾಹುಲ್ ಗಾಂಧಿ ಅವರು ಕೆಲವು ನಿಯಮಗಳ ಪ್ರಕಾರ ಬಂಗಲೆಯಿಂದ ಹೊರಹೋಗಬೇಕಾಗಿದೆ. ಕಾಂಗ್ರೆಸ್ ನಾಯಕರು ಕೇಂದ್ರದ ವಿರುದ್ಧ ರಾಜಕೀಯ ಸೇಡಿನ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ರಾಮಲಲ್ಲಾನ ಜಲಾಭಿಷೇಕಕ್ಕೆ ಪಾಕಿಸ್ತಾನ ಸೇರಿದಂತೆ 155 ದೇಶದ ನದಿಗಳ ನೀರು

    ಕಳೆದ ವಾರ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ತಮ್ಮ ಮನೆಯನ್ನು ಖಾಲಿಗೊಳಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ತುಘಲಕ್ ಲೇನ್‍ನ ಬಂಗಲೆ ಹೊರಗೆ 2 ಟ್ರಕ್‍ಗಳಲ್ಲಿ ಕಾರ್ಮಿಕರು ಮನೆಯಲ್ಲಿದ್ದ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಮನೆ ಖಾಲಿ ಮಾಡುತ್ತಿರುವ ರಾಹುಲ್ ಗಾಂಧಿ – 2 ಟ್ರಕ್‍ಗಳಲ್ಲಿ ವಸ್ತುಗಳ ಸಾಗಣೆ

  • ಮನೆ ಖಾಲಿ ಮಾಡುತ್ತಿರುವ ರಾಹುಲ್ ಗಾಂಧಿ – 2 ಟ್ರಕ್‍ಗಳಲ್ಲಿ ವಸ್ತುಗಳ ಸಾಗಣೆ

    ಮನೆ ಖಾಲಿ ಮಾಡುತ್ತಿರುವ ರಾಹುಲ್ ಗಾಂಧಿ – 2 ಟ್ರಕ್‍ಗಳಲ್ಲಿ ವಸ್ತುಗಳ ಸಾಗಣೆ

    ನವದೆಹಲಿ: ಕಾಂಗ್ರೆಸ್ (Congress) ಮುಖಂಡ ರಾಹುಲ್ ಗಾಂಧಿ (Rahul Gandhi) ಅವರು ತಮ್ಮ ಮನೆಯನ್ನು ಖಾಲಿಗೊಳಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ತುಘಲಕ್ ಲೇನ್‍ನ (Tughlaq Lane) ಬಂಗಲೆ ಹೊರಗೆ 2 ಟ್ರಕ್‍ಗಳಲ್ಲಿ (Trucks) ಕಾರ್ಮಿಕರು ಮನೆಯಲ್ಲಿದ್ದ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ.

    ಕಳೆದ ತಿಂಗಳ ಕೊನೆಯಲ್ಲಿ ಸಂಸತ್ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹಗೊಂಡಿದ್ದರು. ಇದರ ಬೆನ್ನಲ್ಲೇ ಏಪ್ರಿಲ್ 22ರೊಳಗೆ ದೆಹಲಿಯಲ್ಲಿರುವ ತುಘಲಕ್ ಲೇನ್ ಬಂಗಲೆ ತೊರೆಯುವಂತೆ ಲೋಕಸಭಾ ವಸತಿ ಸಮಿತಿ ನೋಟಿಸ್ ನೀಡಿತ್ತು. ಮನೆ ಖಾಲಿ ಮಾಡಲು ಒಪ್ಪಿಗೆ ಸೂಚನೆ ನೀಡುತ್ತಿದ್ದಂತೆ ರಾಹುಲ್ ಗಾಂಧಿಗೆ ಪಕ್ಷದ ನಾಯಕರಿಂದ ಮನೆ ಆಫರ್‍ಗಳು ಹರಿದು ಬಂದಿತ್ತು.

    ರಾಹುಲ್ ಗಾಂಧಿ ಅವರು ಸೋನಿಯಾ ಗಾಂಧಿ (Sonia Gandhi) ಅವರ ಜನಪಥ್ ನಿವಾಸಕ್ಕೆ ತೆರಳುತ್ತಿದ್ದು, ಈ ಹಿನ್ನೆಲೆಂಯಲ್ಲಿ ತಮ್ಮ ನಿವಾಸ ಹಾಗೂ ಕಚೇರಿಯ ವರ್ಗಾವಣೆಯ ಪ್ರಕ್ರಿಯೆಯಲ್ಲಿದ್ದಾರೆ. ನಿಗದಿತ ದಿನಾಂಕಕ್ಕಿಂತಲೂ ಮೊದಲು ನಿವಾಸವನ್ನು ತೊರೆಯುವುದಾಗಿ ರಾಹುಲ್ ಗಾಂಧಿ ಕಚೇರಿ ತಿಳಿಸಿದೆ. ಇದನ್ನೂ ಓದಿ: ಕೊನೆಗೂ ಹಾಸನ ಟಿಕೆಟ್‌ ಗೆದ್ದ ಸ್ವರೂಪ್‌

    ಬಿಜೆಪಿ ನನ್ನ ಮನೆಯನ್ನು ತೆಗೆದುಕೊಂಡು ನನ್ನನ್ನು ಜೈಲಿಗೆ ಹಾಕಬಹುದು. ಆದರೆ ಅವರು ವಯನಾಡಿನ ಜನರು ಮತ್ತು ಅವರ ಸಮಸ್ಯೆಗಳನ್ನು ಪ್ರತಿನಿಧಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಇತ್ತೀಚೆಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಿಳಿಸಿದ್ದರು. ಇದನ್ನೂ ಓದಿ: ಪರಮೇಶ್ವರ್ ಕಾಲಿಗೆ ಬಿದ್ದು ನಮಸ್ಕರಿಸಿದ ವಿಜಯೇಂದ್ರ