Tag: Truck Driver

  • ಊಟ ನೀಡಲು ನಿರಾಕರಿಸಿದ ಹೋಟೆಲ್‌ಗೆ ಲಾರಿ ನುಗ್ಗಿಸಿದ ಚಾಲಕ – ವೀಡಿಯೋ ವೈರಲ್

    ಊಟ ನೀಡಲು ನಿರಾಕರಿಸಿದ ಹೋಟೆಲ್‌ಗೆ ಲಾರಿ ನುಗ್ಗಿಸಿದ ಚಾಲಕ – ವೀಡಿಯೋ ವೈರಲ್

    ಮುಂಬೈ: ಊಟ ನೀಡಲು ನಿರಾಕರಿಸಿದ ಹೋಟೆಲ್‌ವೊಂದಕ್ಕೆ ಚಾಲಕನೊಬ್ಬ ಕುಡಿದ ಅಮಲಿನಲ್ಲಿ ಲಾರಿ ನುಗ್ಗಿಸಿದ ಘಟನೆ ಪುಣೆಯಲ್ಲಿ (Pune) ನಡೆದಿದ್ದು, ಇದೀಗ ವೀಡಿಯೋ ವೈರಲ್ ಆಗಿದೆ.

    ಚಾಲಕನು ಸೋಲಾಪುರದಿಂದ ಪುಣೆ ಕಡೆಗೆ ಲಾರಿ ಸಾಗಿಸುತ್ತಿದ್ದ. ಮಾರ್ಗಮಧ್ಯದಲ್ಲಿ ಆತ ಹೋಟೆಲ್‌ವೊಂದರಲ್ಲಿ ಲಾರಿ ನಿಲ್ಲಿಸಿ ಊಟ ಕೇಳಿದ್ದಾನೆ. ಆದರೆ ಹೋಟೆಲ್ ಮಾಲೀಕ ಆತನಿಗೆ ಊಟ ನೀಡಲು ನಿರಾಕರಿಸಿದ್ದಾರೆ. ಇದರಿಂದಾಗಿ ಮೊದಲೇ ಮದ್ಯ ಸೇವಿಸಿ ಅಮಲಿನಲ್ಲಿದ್ದ ಆತ ಸಿಟ್ಟಿಗೆದ್ದು ಲಾರಿಯನ್ನು ಹೋಟೆಲ್‌ಗೆ ನುಗ್ಗಿಸಿದ್ದಾನೆ. ಇದನ್ನೂ ಓದಿ: ಬಳ್ಳಾರಿ ಜೈಲಲ್ಲಿ ಗಣೇಶ ಚತುರ್ಥಿ ಆಚರಣೆ – ಆರೋಪಿ ದರ್ಶನ್‌ಗಿಲ್ಲ ವಿನಾಯಕನ ದರ್ಶನ ಭಾಗ್ಯ

    ಹೋಟೆಲ್‌ಗೆ ಲಾರಿ ನುಗ್ಗಿಸುತ್ತಿದ್ದಂತೆಯೇ ಅಕ್ಕಪಕ್ಕದಲ್ಲಿದ್ದವರು ಲಾರಿಗೆ ಕಲ್ಲಿನಿಂದ ಹೊಡೆಯಲು ಪ್ರಾರಂಭಿದ್ದರು. ಆದರೂ ಕೂಡ ಲಾರಿ ಚಾಲಕ ನಿಲ್ಲಿಸದೆ ಲಾರಿ ಚಲಾಯಿಸಿ ಹಾನಿಗೊಳಿಸಿದ್ದಾನೆ.

    ಲಾರಿ ಹೋಟೆಲ್‌ಗೆ ನುಗ್ಗಿದ ಪರಿಣಾಮ ಹೋಟೆಲ್‌ನ ಮುಂಭಾಗಕ್ಕೆ ಹಾನಿಯಾಗಿದ್ದು, ಹೋಟೆಲ್ ಆವರಣದಲ್ಲಿ ನಿಂತಿದ್ದ ಕಾರೊಂದು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.ಇದನ್ನೂ ಓದಿ: 2 ಸಾವಿರ ಮಕ್ಕಳಿಂದ ಗಣೇಶನ ಆಕೃತಿ – ಐನೂರು ಅಡಿ ಎತ್ತರದಿಂದ ಚಿತ್ರೀಕರಣ

    ಘಟನೆಗೆ ಸಂಬಂಧಿಸಿದಂತೆ ಲಾರಿ ಚಾಲಕನನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

  • ಕಾಳಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಕುಸಿತ – ನೀರಿಗೆ ಬಿದ್ದ ಲಾರಿ, ಚಾಲಕನ ರಕ್ಷಣೆ

    ಕಾಳಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಕುಸಿತ – ನೀರಿಗೆ ಬಿದ್ದ ಲಾರಿ, ಚಾಲಕನ ರಕ್ಷಣೆ

    ಕಾರವಾರ: ಕಾಳಿ ನದಿ (Kali River) ಸೇತುವೆಗೆ ಅಡ್ಡಲಾಗಿ 40 ವರ್ಷದ ಹಿಂದೆ ಕಟ್ಟಿದ್ದ ಸೇತುವೆ (Bridge) ಕುಸಿದು ಬಿದ್ದ ಪರಿಣಾಮ ತಮಿಳುನಾಡು ಮೂಲದ ಲಾರಿಯೊಂದು ನದಿಗೆ ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ (Karwar) ನಗರದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

    ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಸೇತುವೆ ಕುಸಿದಿದ್ದು, ಘಟನೆಯಲ್ಲಿ ಲಾರಿ ಚಾಲಕ ಬಾಲಮುರುಗನ್ ಅವರನ್ನು ರಕ್ಷಣೆ ಮಾಡಲಾಗಿದೆ. ಗೋವಾದಿಂದ ಹುಬ್ಬಳ್ಳಿಗೆ ತೆರಳುತಿದ್ದ ಖಾಲಿ ಲಾರಿ ಕಾಳಿನದಿಯ ಸೇತುವೆಮೇಲೆ ವೇಗವಾಗಿ ಹೋಗುತ್ತಿದ್ದ ವೇಳೆ ಸೇತುವೆ ಕುಸಿದಿದೆ. ಈ ವೇಳೆ ಚಾಲಕ ಲಾರಿಯ ಕ್ಯಾಬಿನ್ ಮೇಲೆ ನಿಂತು ಕೂಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಆಗಮಿಸಿದ ಕರಾವಳಿ ಕಾವಲುಪಡೆ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ಅವರ ರಕ್ಷಣೆ ಮಾಡಲಾಗಿದೆ. ಇದನ್ನೂ ಓದಿ: ಲಿಫ್ಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್ – ಹೊತ್ತಿ ಉರಿದ ಕಾರ್ಖಾನೆ

    ಕಾಳಿ ನದಿಯ ಸೇತುವೆ ಮೂರು ಕಡೆ ಕುಸಿದಿದೆ. ಕಾರವಾರದಿಂದ ಗೋವಾ ಕಡೆಗೆ ತೆರಳುವ ಮೊದಲ ಭಾಗ, ನಂತರ ಮಧ್ಯ ಭಾಗ, ಅದರ ನಂತರ ಗೋವಾದಿಂದ ಕಾರವಾರದ ಕಡೆ ಬರುವ ಪ್ರಾರಂಭದಲ್ಲಿ ಸೇತುವೆಯ ಮೇಲ್ಛಾವಣಿ ಹಾಸು ಕುಸಿದು ಘಟನೆ ನಡೆದಿದೆ. ಇದನ್ನೂ ಓದಿ: ವಿನೇಶ್‌ ಫೋಗಟ್‌ ಫೈನಲ್‌ಗೆ ಲಗ್ಗೆ – ಒಲಿಂಪಿಕ್ಸ್‌ ಫೈನಲ್‌ ಪ್ರವೇಶಿಸಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು

    ಘಟನೆ ನಡೆದ ನಂತರ ಗೋವಾ-ಕಾರವಾರ ಮಾರ್ಗದ ಎರಡು ಭಾಗದ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಜಿಲ್ಲಾಧಿಕಾರಿ, ಕಾರವಾರದ ಶಾಸಕ ಸತೀಶ್ ಸೈಲ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ನಂತರ ಆಸ್ಪತ್ರೆಗೆ ತೆರಳಿ ಗಾಯಾಳುವನ್ನು ಭೇಟಿಯಾಗಿ ಮಾಹಿತಿ ಪಡೆದರು. ಇದನ್ನೂ ಓದಿ: ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣ – 12 ವರ್ಷಗಳ ಬಳಿಕ 40 ಆರೋಪಿಗಳು ದೋಷಮುಕ್ತ

    ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಅಗ್ನಿಶಾಮಕ ದಳದ ಸಿಬ್ಬಂದಿ, ಕರಾವಳಿ ಕಾವಲು ಪಡೆ ಮೊಕ್ಕಾಂ ಹೂಡಿದೆ. ಇದನ್ನೂ ಓದಿ: ಮನೆ, ಬಾಡಿಗೆ ಮನೆ ಬದಲಿಸುವವರಿಗೆ ಗೃಹಜ್ಯೋತಿ; ಡಿ-ಲಿಂಕ್ ಮಾಡುವುದು ಹೇಗೆ?

  • ದೇಶಾದ್ಯಂತ ಟ್ರಕ್‌ ಚಾಲಕರು ಪ್ರತಿಭಟನೆಗೆ ಧುಮುಕಿದ್ದು ಯಾಕೆ?

    ದೇಶಾದ್ಯಂತ ಟ್ರಕ್‌ ಚಾಲಕರು ಪ್ರತಿಭಟನೆಗೆ ಧುಮುಕಿದ್ದು ಯಾಕೆ?

    ನವದೆಹಲಿ: ಭಾರತೀಯ ನ್ಯಾಯ ಸಂಹಿತೆಯಲ್ಲಿರುವ ಕಠಿಣ ಕಾನೂನು ವಿರೋಧಿಸಿ ಟ್ರಕ್‌ ಚಾಲಕರು (Truck Drivers) ದೇಶಾದ್ಯಂತ ಪ್ರತಿಭಟನೆಗೆ (Protest) ಧುಮುಕಿದ್ದಾರೆ.

    ಟ್ರಕ್‌ ಮಾಲೀಕರ ಸಂಘ ಪ್ರತಿಕ್ರಿಯಿಸಿ,ನಾವು ಈ ಪ್ರತಿಭಟನೆಗೆ ಕರೆಕೊಟ್ಟಿಲ್ಲ. ಚಾಲಕರೇ ಸ್ವಯಂಪ್ರೇರಿತವಾಗಿ ಪ್ರತಿಭಟನೆಗೆ ಧುಮುಕಿದ್ದಾರೆ ಎಂದು ಹೇಳಿದೆ. ಇದನ್ನೂ ಓದಿ: ಹುಣಸೂರಿನಲ್ಲಿ KSRTC ಬಸ್, ಜೀಪ್ ನಡುವೆ ಅಪಘಾತ – ನಾಲ್ವರ ದುರ್ಮರಣ

     

    ಪ್ರತಿಭಟನೆ ಯಾಕೆ?
    ಈ ಮೊದಲು ಹಿಟ್‌ ಆಂಡ್‌ ರನ್‌ ಪ್ರಕರಣದ (Hit and Run) ಆರೋಪ ಸಾಬೀತಾದರೆ ಐಪಿಸಿ ಅಡಿ ಚಾಲಕನಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತಿತ್ತು.

    ಈಗ ಹೊಸದಾಗಿ ಬಂದಿರುವ ಭಾರತೀಯ ನ್ಯಾಯ ಸಂಹಿತೆಯ (Bharatiya Nyaya Sanhita) ಅಡಿಯಲ್ಲಿ ಹಿಟ್‌ ಆಂಡ್‌ ರನ್‌ ಪ್ರಕರಣದಲ್ಲಿ ದಂಡದ ಜೊತೆ 10 ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.

    ಈ ಶಿಕ್ಷೆಯ ಪ್ರಮಾಣ ಬಹಳ ಹೆಚ್ಚಾಯಿತು. ಇದರಿಂದಾಗಿ ಮುಂದೆ ಚಾಲಕ ವೃತ್ತಿ ಜನ ಬರುವುದು ಕಡಿಮೆಯಾಗಬಹುದು. ಹೀಗಾಗಿ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಬೇಕೆಂದು ಚಾಲಕರು ಆಗ್ರಹಿಸಿದ್ದಾರೆ.

     

  • ಪೊಲೀಸರಿಂದ ತಪ್ಪಿಸಿಕೊಳ್ಳಲು ನಾಲೆಯಲ್ಲಿ 3 ಕಿ.ಮೀ ವರೆಗೆ ಈಜಿದ ಟ್ರಕ್‌ ಡ್ರೈವರ್‌ – ಮುಂದೇನಾಯ್ತು?

    ಪೊಲೀಸರಿಂದ ತಪ್ಪಿಸಿಕೊಳ್ಳಲು ನಾಲೆಯಲ್ಲಿ 3 ಕಿ.ಮೀ ವರೆಗೆ ಈಜಿದ ಟ್ರಕ್‌ ಡ್ರೈವರ್‌ – ಮುಂದೇನಾಯ್ತು?

    ಅಮರಾವತಿ: ಅಪಘಾತ ಮಾಡಿ ಪೊಲೀಸರಿಂದ ತಪ್ಪಿಸಿಕೊಳ್ಳಲು ನಾಲೆಗೆ ಹಾರಿದ ಟ್ರಕ್‌ ಚಾಲಕನೊಬ್ಬ 3 ಕಿ.ಮೀ. ವರೆಗೂ ಸ್ವಿಮ್ಮಿಂಗ್‌ ಮಾಡಿರುವ ಘಟನೆ ಆಂಧ್ರಪ್ರದೇಶದಲ್ಲಿ (Andhra Pradesh) ನಡೆದಿದೆ.

    ಟ್ರಕ್‌ ಡ್ರೈವರ್‌ ಚಲ್ಲ ಕೃಷ್ಣ ಈ ಸಾಹಸ ಮಾಡಿದ ಭೂತ. ಈತ ವಿಂಜಮೂರಿಗೆ ತೆರಳುತ್ತಿದ್ದ. ವೇಗವಾಗಿ ಟ್ರಕ್‌ ಚಾಲನೆ ಮಾಡುತ್ತಿದ್ದರಿಂದ ನಿಯಂತ್ರಣಕ್ಕೆ ಸಿಗದೆ ಪೊದಲಕೂರು ಮಂಡಲದ ತಾಟಿಪರ್ತಿ ಬಳಿ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದ್ದಾನೆ. ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕೃಷ್ಣ ವಾಹನವನ್ನು ನಿಲ್ಲಿಸದೆ ಇನ್ನಷ್ಟು ವೇಗವಾಗಿ ಓಡಿಸಿದ್ದಾನೆ. ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ವಿಧವೆಗೆ 12 ಲಕ್ಷ ವಂಚಿಸಿದ 56ರ ವ್ಯಕ್ತಿ!

    ಗಾಬರಿಯಲ್ಲಿ ವಾಹನ ಚಲಾಯಿಸುತ್ತಿದ್ದ ಕೃಷ್ಣ, ಸಂಗಮ್ ಪ್ರದೇಶದಲ್ಲಿ ಮತ್ತೆ ಎಮ್ಮೆಯೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈತನನ್ನು ಹಿಡಿಯಲೇಬೇಕು ಎಂದು ಪೊಲೀಸರು ಟ್ರಕ್‌ ಬೆನ್ನತ್ತಿದ್ದಾರೆ. ಡ್ರೈವರ್‌ ಬೆನ್ನತ್ತಿದ್ದ ಪೊಲೀಸರಿಗೆ ಕನಿಗಿರಿ ಜಲಾಶಯದ ನಾಲೆಯ ಒಡ್ಡು ಮೇಲೆ ಟ್ರಕ್‌ ನಿಂತಿರುವುದು ಕಂಡುಬಂದಿದೆ.

    ಈ ವೇಳೆ ನಾಲೆ ಕಡೆ ದೃಷ್ಟಿ ಹಾಯಿಸಿ ನೋಡಿದ ಪೊಲೀಸರಿಗೆ ಟ್ರಕ್‌ ಡ್ರೈವರ್‌ ನೀರಿನಲ್ಲಿ ಈಜುತ್ತಿರುವುದು ಕಂಡುಬಂದಿದೆ. ಆತನನ್ನು ಹಿಡಿಯಲು ಮುಂದಾದಾಗ, ಸಿಗಬಾರದು ಎಂಬ ಕಾರಣಕ್ಕೆ ನಾಲೆಯಿಂದ ದಡದ ಮೇಲಕ್ಕೆ ಬರದೇ ಸುಮಾರು 3 ಕಿ.ಮೀ ವರೆಗೂ ಈಜಿದ್ದಾನೆ. ಇದನ್ನೂ ಓದಿ: ಚಾಕಲೇಟ್ ಆಮಿಷವೊಡ್ಡಿ 4ರ ಬಾಲಕಿ ಮೇಲೆ ಅತ್ಯಾಚಾರ

    ನಾಲೆಯಲ್ಲಿ ಅಪಾಯದ ನೀರಿನ ಮಟ್ಟ ಇದ್ದಿದ್ದರಿಂದ ಪೊಲೀಸರು ಯಾರೂ ಸಹ ನೀರಿಗಿಳಿಯಲು ಮುಂದಾಗಲಿಲ್ಲ. ಕೊನೆಗೆ ಈಜುಪಟುವೊಬ್ಬನನ್ನು ಸ್ಥಳಕ್ಕೆ ಕರೆಸಿದರು. ಆತ ನಾಲೆಗೆ ದುಮುಕಿ ಕೃಷ್ಣನನ್ನು ಹಿಡಿದು ಸುರಕ್ಷಿತವಾಗಿ ದಡಕ್ಕೆ ಕರೆತಂದ. ನಂತರ ಕೃಷ್ಣನನ್ನು ಪೊಲೀಸರು ವಶಕ್ಕೆ ಪಡೆದರು.

  • ಶ್ರೀಲಂಕಾ ಬಿಕ್ಕಟ್ಟು; ಡೀಸೆಲ್‌ಗಾಗಿ ಬಂಕ್‌ನಲ್ಲಿ 5 ದಿನ ಕ್ಯೂನಲ್ಲಿ ನಿಂತಿದ್ದ ಟ್ರಕ್‌ ಡ್ರೈವರ್‌ ಸಾವು

    ಶ್ರೀಲಂಕಾ ಬಿಕ್ಕಟ್ಟು; ಡೀಸೆಲ್‌ಗಾಗಿ ಬಂಕ್‌ನಲ್ಲಿ 5 ದಿನ ಕ್ಯೂನಲ್ಲಿ ನಿಂತಿದ್ದ ಟ್ರಕ್‌ ಡ್ರೈವರ್‌ ಸಾವು

    ಕೊಲಂಬೊ: ಡೀಸೆಲ್‌ಗಾಗಿ ಬಂಕ್‌ನಲ್ಲಿ ಸತತ 5 ದಿನಗಳ ಕಾಲ ಕ್ಯೂನಲ್ಲಿ ನಿಂತಿದ್ದ ಟ್ರಕ್‌ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶ್ರೀಲಂಕಾದಲ್ಲಿ ನಡೆದಿದೆ.

    ದೇಶದ ಪಶ್ಚಿಮ ಪ್ರಾಂತ್ಯದ ಫಿಲ್ಲಿಂಗ್ ಸ್ಟೇಷನ್‌ನಲ್ಲಿ ಐದು ದಿನಗಳ ಕಾಲ ಸರದಿಯಲ್ಲಿ ನಿಂತಿದ್ದ 63 ವಯಸ್ಸಿನ ಟ್ರಕ್‌ ಚಾಲಕ ಶ್ರೀಲಂಕಾದಲ್ಲಿ ಸಾವನ್ನಪ್ಪಿದ್ದಾರೆ. ಸಾಲದ ಸುಳಿಯಲ್ಲಿ ಸಿಲುಕಿರುವ ದ್ವೀಪ ರಾಷ್ಟ್ರದಲ್ಲಿ ಇಂಧನ ಸಂಗ್ರಹಕ್ಕಾಗಿ ಸರತಿ ಸಾಲಿನಲ್ಲಿ ನಿಂತು ದೀರ್ಘಕಾಲ ಕಾದು ಮೃತಪಟ್ಟವರ ಸಂಖ್ಯೆ 10ಕ್ಕೇರಿದೆ. ಇದನ್ನೂ ಓದಿ: ರಫ್ತು ನಿಲ್ಲಿಸಿದ ಭಾರತ – ಗೋಧಿಗಾಗಿ ರಷ್ಯಾ ಕಡೆ ಮುಖ ಮಾಡಿದ ಬಾಂಗ್ಲಾದೇಶ

    sri lanka diesel

    ಅಂಗುರುವಾತೋಟದ ಫಿಲ್ಲಿಂಗ್ ಸ್ಟೇಷನ್‌ನಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಮೃತಪಟ್ಟವರು 43 ರಿಂದ 84 ವರ್ಷ ವಯಸ್ಸಿನ ಪುರುಷರೇ ಆಗಿದ್ದಾರೆ. ಈ ಪೈಕಿ ಹೆಚ್ಚಿನ ಸಾವುಗಳು ಹೃದಯಾಘಾತದಿಂದ ಸಂಭವಿಸಿದ್ದಾಗಿವೆ ಎಂದು ವರದಿಯಾಗಿದೆ.

    ವಾರದ ಹಿಂದೆ, 53 ವರ್ಷದ ವ್ಯಕ್ತಿಯೊಬ್ಬರು ಕೊಲಂಬೊದ ಪಾನದುರಾದ ಪೆಟ್ರೋಲ್‌ ಬಂಕ್‌ನಲ್ಲಿ ದೀರ್ಘಕಾಲ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ ಸಾವನ್ನಪ್ಪಿದರು. ಇದನ್ನೂ ಓದಿ: 6 ವರ್ಷದ ಹಿಂದೆ ಮದುವೆ- 4ನೇ ಪತ್ನಿಗೆ ಡಿವೋರ್ಸ್ ಕೊಟ್ಟ 91ರ ರೂಪರ್ಟ್ ಮುರ್ಡೋಕ್

    ಶ್ರೀಲಂಕಾದಲ್ಲಿ 2.2 ಕೋಟಿ ಜನಸಂಖ್ಯೆ ಇದೆ. 70 ವರ್ಷಗಳ ನಂತರ ಈ ದೇಶ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಂಧನ ಕೊರತೆ, ಆಹಾರದ ಬೆಲೆಗಳಲ್ಲಿ ಏರಿಕೆ ಮತ್ತು ಔಷಧಗಳ ಕೊರತೆ ದೇಶವನ್ನು ಹೆಚ್ಚು ಭಾದಿಸುತ್ತಿದೆ.

    Live Tv

  • ಹುಬ್ಬಳ್ಳಿಯಲ್ಲಿ ಅತ್ಯಾಧುನಿಕ ಟ್ರಕ್ ಟರ್ಮಿನಲ್ ನಿರ್ಮಾಣ: ಡಿ.ಎಸ್ ವೀರಯ್ಯ

    ಹುಬ್ಬಳ್ಳಿಯಲ್ಲಿ ಅತ್ಯಾಧುನಿಕ ಟ್ರಕ್ ಟರ್ಮಿನಲ್ ನಿರ್ಮಾಣ: ಡಿ.ಎಸ್ ವೀರಯ್ಯ

    ನವದೆಹಲಿ: ರಾಜ್ಯದಲ್ಲಿ ಶೀಘ್ರ ಮೂರು ಅತ್ಯಾಧುನಿಕ ಟ್ರಕ್ ಟರ್ಮಿನಲ್‍ಗಳನ್ನು ನಿರ್ಮಿಸಲಾಗುವುದು ಎಂದು ದೇವರಾಜ್ ಅರಸ್ ಟ್ರಕ್ ಟರ್ಮಿನಲ್ಸ್ ಅಧ್ಯಕ್ಷ ಡಿ.ಎಸ್ ವೀರಯ್ಯ ಹೇಳಿದ್ದಾರೆ.

    ನವದೆಹಲಿಯಲ್ಲಿ ಮಾತನಾಡಿದ ಡಿ.ಎಸ್ ವೀರಯ್ಯ ಅವರು, ರಾಜ್ಯದಲ್ಲಿ ಈಗಾಗಲೇ ನಾಲ್ಕು ಕಡೆ ಟ್ರಕ್ ಟರ್ಮಿನಲ್‍ಗಳನ್ನು ನಿರ್ಮಾಣ ಮಾಡಲಾಗಿದ್ದು ಅವು ಕಾರ್ಯ ನಿರ್ವಹಿಸುತ್ತಿದೆ. ಈಗ ಹೊಸಪೇಟೆ, ಹುಬ್ಬಳ್ಳಿ, ದಾಂಡೇಲಿಯಲ್ಲಿ ಹೊಸ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ ಎಂದರು.

    ಸದ್ಯ ನಿರ್ಮಾಣವಾಗಿರುವ ಟ್ರಕ್ ಟರ್ಮಿನಲ್‍ಗಳಲ್ಲಿ ಅತ್ಯಾಧುನಿಕ ವ್ಯವಸ್ಥೆಗಳಿಲ್ಲದ ಕಾರಣ ಚಾಲಕರಿಗೆ ತೊಂದರೆಗಳಾಗುತ್ತಿದೆ. ಹೀಗಾಗಿ ಜಪಾನ್ ಮಾಡೆಲ್ ಟ್ರಕ್ ಟರ್ಮಿನಲ್ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ಇದಕ್ಕಾಗಿ ಜಪಾನ್ ಹೋಗಿ ಅಧ್ಯಯನ ಮಾಡಿಕೊಂಡು ಬರಲಾಗಿದ್ದು ಅದೇ ಮಾದರಿಯಲ್ಲಿ ಟರ್ಮಿನಲ್ ನಿರ್ಮಾಣ ಮಾಡಲಾಗುವುದು. ಜಪಾನ್ ಮಾದರಿಯ ಅತ್ಯಾಧುನಿಕ ಟರ್ಮಿನಲ್‍ನಲ್ಲಿ ಪೆಟ್ರೋಲ್ ಬಂಕ್, ಸಿನಿಮಾ ಹಾಲ್, ಡಾರ್ಮೆಟ್ರಿ, ಗ್ಯಾರೇಜ್, ವಿಶ್ರಾಂತಿ ಗೃಹ, ಜಿಮ್, ಪಾರ್ಕ್, ಹೋಟೆಲ್ ಸೇರಿ ಹಲವು ಉತ್ತಮ ವ್ಯವಸ್ಥೆ ಮಾಡಲಾಗುವುದು. ಇದರಿಂದ ಚಾಲಕರಿಗೆ ಹಲವು ವ್ಯವಸ್ಥೆ ಒಂದೇ ಕಡೆ ಸಿಗಲಿದೆ ಟ್ರಕ್ ಟರ್ಮಿನಲ್ ಬಗ್ಗೆ ಸರ್ಕಾರ ಹೆಚ್ಚು ಆಸಕ್ತಿವಹಿಸಿಲ್ಲ, ಟರ್ಮಿನಲ್‍ಗಳ ನಿರ್ಮಾಣದಿಂದ ಟ್ರಕ್ ನಿಲುಗಡೆ ಉತ್ತಮ ಸ್ಥಳಾವಕಾಶ ಸಿಗಲಿದೆ. ಇದರಿಂದ ರಸ್ತೆ ಅಪಘಾತ ತಪ್ಪಲಿದೆ. ಅನಗತ್ಯ ಟ್ರಾಫಿಕ್ ಜಾಮ್ ಮತ್ತು ವಾಯು ಮಾಲಿನ್ಯ ಕೂಡಾ ಕಡಿಮೆ ಆಗಲಿದೆ ಎಂದು ಮಾಹಿತಿ ನೀಡಿದರು.ಇದನ್ನೂ ಓದಿ: ಮೇಕೆದಾಟು ಯೋಜನೆಗೆ ಅಡ್ಡಿಪಡಿಸಲು ತಮಿಳುನಾಡು ಸರ್ಕಾರದಿಂದ ಹೊಸ ತಂತ್ರ

    ಈ ಎಲ್ಲ ಅಂಶಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದು 500 ಕೋಟಿ ಅನುದಾನ ಕೇಳಲಾಗಿತ್ತು, ಆದರೆ ಸರ್ಕಾರ 100 ಕೋಟಿ  ಅನುದಾನ ನೀಡಿದೆ. ಒಂದು ಟರ್ಮಿನಲ್ ನಿರ್ಮಾಣಕ್ಕೆ 40 ಕೋಟಿ ವೆಚ್ಚವಾಗಲಿದ್ದು, ಭೂಮಿ ಖರೀದಿಗೆ ಪ್ರತ್ಯೇಕ ಹಣದ ಅವಶ್ಯಕತೆ ಇದೆ. ಆರ್ಥಿಕ ಸಂಕಷ್ಟದ ನಡುವೆಯೂ ರಾಜ್ಯದ್ಯಾಂತ ಹೆಚ್ಚು ಅತ್ಯಾಧುನಿಕ ಟ್ರಕ್ ಟರ್ಮಿನಲ್ ನಿರ್ಮಿಸಲು ಚಿಂತಿಸಲಾಗಿದೆ ಎಂದು ವೀರಯ್ಯ ಹೇಳಿದರು.

  • ಟ್ರಕ್ ಚಾಲನೆ ವೇಳೆ ಹೆಲ್ಮೆಟ್ ಧರಿಸದ ಚಾಲಕನಿಗೆ ಬಿತ್ತು ದಂಡ

    ಟ್ರಕ್ ಚಾಲನೆ ವೇಳೆ ಹೆಲ್ಮೆಟ್ ಧರಿಸದ ಚಾಲಕನಿಗೆ ಬಿತ್ತು ದಂಡ

    ಭುವನೇಶ್ವರ: ಟ್ರಕ್ ಚಾಲಕರೊಬ್ಬರು ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣ ನೀಡಿ ಆರ್‌ಟಿಒ 1,000 ರೂಪಾಯಿ ದಂಡ ವಿಧಿಸಿರುವ ಘಟನೆ ಒಡಿಶಾದಲ್ಲಿ ವರದಿಯಾಗಿದೆ.

    ಒಡಿಶಾದ ಗಾಂಜಾಂ ಜಿಲ್ಲೆಯ ಪ್ರಮೋದ್ ಕುಮಾರ್ ಸ್ವೈನ್ ಟ್ರಕ್ ಚಾಲಕರಾಗಿದ್ದು, ತಮ್ಮ ಟ್ರಕ್‍ನ ಪರ್ಮಿಟ್‍ನ್ನು ನವೀಕರಿಸಲು ಸ್ಥಳೀಯ ಆರ್‌ಟಿಒ ಕಚೇರಿಗೆ ತೆರಳಿದ್ದರು. ಈ ವೇಳೆ ಚಲನ್ ಕಟ್ಟಲು ತೆರಳಿದಾಗ ಟ್ರಕ್‍ನಲ್ಲಿ ಹೆಲ್ಮೆಟ್ ಇಲ್ಲದೆ ಚಾಲನೆ ಮಾಡಿರುವುದಕ್ಕಾಗಿ ವಾಹನದ ರಿಜಿಸ್ಟರ್ ನಂಬರ್‍ ಗೆ ದಂಡ ಹಾಕಲಾಗಿದೆ. ಅದನ್ನು ಕಟ್ಟಿದ ಬಳಿಕ ನವೀಕರಿಸಲಾಗುದು ಎಂದು ತಿಳಿಸಿದ್ದಾರೆ. ನಂತರ ಸ್ವೈನ್ ದಂಡ ಕಟ್ಟಿದ ಬಳಿಕ ತಮ್ಮ ಟ್ರಕ್‍ನ್ನು ನವೀಕರಿಸಿಕೊಂಡಿದ್ದಾರೆ.

    ಈ ಕುರಿತು ಸ್ಥಳೀಯ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸ್ವೈನ್, ನಾನು ಕಳೆದ ಮೂರು ವರ್ಷಗಳಿಂದ ಟ್ರಕ್ ಚಾಲನೆ ಮಾಡುತ್ತಿದ್ದು, ಟ್ರಕ್‍ನಲ್ಲಿ ನೀರನ್ನು ಸರಬರಾಜು ಮಾಡುತ್ತಿದ್ದೇನೆ. ಇದೀಗ ನಾನು ಟ್ರಕ್‍ನ ಪರ್ಮಿಟ್ ನವೀಕರಿಸಲೆಂದು ಆರ್‌ಟಿಒ ಕಚೇರಿಗೆ ತೆರಳಿದ್ದೆ. ಈ ವೇಳೆ ನನಗೆ ಟ್ರಕ್‍ನಲ್ಲಿ ಹೆಲ್ಮೆಟ್ ಇಲ್ಲದೆ ಪ್ರಯಾಣ ಮಾಡಿರುವುದಕ್ಕಾಗಿ ದಂಡ ಹಾಕಿರುವ ಕುರಿತು ತಿಳಿದು ಬಂದಿದ್ದು, ಅಧಿಕಾರಿಗಳು ವಿನಾಕಾರಣ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಇದರ ವಿರುದ್ಧ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕಾಗಿ ಮನವಿ ಮಾಡಿಕೊಂಡಿದ್ದಾರೆ.

  • 80ರ ವೃದ್ಧೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆಗೈದ ಟ್ರಕ್ ಡ್ರೈವರ್!

    80ರ ವೃದ್ಧೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆಗೈದ ಟ್ರಕ್ ಡ್ರೈವರ್!

    ಗಾಂಧಿನಗರ: ದೆಹಲಿಯಲ್ಲಿ ಇತ್ತೀಚೆಗಷ್ಟೇ 90 ವರ್ಷದ ವೃದ್ಧೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಭಯಾನಕ ಘಟನೆ ಮಾಸುವ ಮುನ್ನವೇ ಇದೀಗ ಗುಜರಾತ್‍ನ ರಾಜ್‍ಕೋಟ್ ಎಂಬಲ್ಲಿ ಇಂತದ್ದೇ ಘಟನೆ ನಡೆದಿದೆ.

    ಹೌದು. 80 ವರ್ಷದ ವೃದ್ಧೆಯ ಮೇಲೆ 40 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಲು ಯತ್ನಿಸಿದ್ದಾನೆ. ಅಲ್ಲದೆ ವೃದ್ಧೆಯನ್ನು ಬಟ್ಟೆಯಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆರೋಪಿಯನ್ನು ಜಸರಾಜ್ ಮಾನೆಕ್ ಎಂದು ಗುರುತಿಸಲಾಗಿದೆ. ಈತ ರಾಜ್‍ಕೋಟ್ ನಲ್ಲಿ ಟ್ರಕ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಈ ಘಟನೆ ದೇವಭೂಮಿ ದ್ವಾರಕಾದ ಓಖಾ ತಾಲೂಕಿನ ಸೂರಜ್ ಕರಾಡಿ ಗ್ರಾಮದಲ್ಲಿ ನಡೆದಿದೆ.

    ಭಾನುವಾರ ರಾತ್ರಿ ವೃದ್ಧೆ ಸೂರಜ್ ಕರಡಿ ಬಸ್ಸು ನಿಲ್ದಾಣದಲ್ಲಿ ಬಸ್ಸಿಗಾಗಿ ಒಬ್ಬರೇ ಕಾಯುತ್ತಾ ಕುಳಿತಿದ್ದರು. ಇದೇ ಸಂದರ್ಭದಲ್ಲಿ ವೃದ್ಧೆ ಏಕಾಂಗಿಯಾಗಿ ಕುಳಿತಿರುವುದನ್ನು ಗಮನಿಸಿದ ಕಾಮುಕ ಆಕೆಯ ಬಳಿ ಬಂದು ಬಲವಂತ ಮಾಡಿದ್ದಾನೆ. ಇದರಿಂದ ಗಾಬರಿಗೊಂಡ ವೃದ್ಧೆ ಜೋರಾಗಿ ಕಿರುಚಿಕೊಂಡಿದ್ದಾರೆ. ವೃದ್ಧೆ ಕೂಗಿಕೊಂಡಿದ್ದರಿಂದ ಜನ ಜಮಾಯಿಸುತ್ತಾರೆ ಎಂದು ಕಾಮುಕ ಆಕೆಯ ಕುತಿಗೆಗೆ ಬಟ್ಟೆ ಸುತ್ತಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

    ಇತ್ತ ವೃದ್ಧೆಯ ಚೀರಾಟ ಕೇಳಿದ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಆರೋಪಿ ಅಲ್ಲಿಂದ ಕಾಲ್ಕಿತ್ತಲು ಪ್ರಯತ್ನಿಸಿದ್ದಾನೆ. ಕೂಡಲೇ ಆತನನ್ನು ಹಿಡಿದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: 90 ವರ್ಷದ ಅಜ್ಜಿಯನ್ನೂ ಬಿಡದ ಕಾಮುಕ- ಅತ್ಯಾಚಾರವೆಸಗಿ ಥಳಿಸಿದ!

    ಜಗಳವಾದರೆ ಮನೆಯಿಂದ ಹೊರ ಹೋಗುವ ಅಭ್ಯಾಸ ವೃದ್ಧೆಗೆ ಇತ್ತು ಎಂದು ತಿಳಿದುಬಂದಿದೆ. ವೃದ್ಧೆಯ ಮಗ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ ಬಳಿಕ ಆರೋಪಿ ಮಾನೆಕ್ ವಿರುದ್ಧ ಪ್ರಕರಣ ದಾಖಲಾಗಿದೆ. ಕೋವಿಡ್ 19 ಪರೀಕ್ಷೆಯ ಬಳಿಕ ಆತನನ್ನು ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಈ ಹಿಂದೆ ದೆಹಲಿಯ ನಜಾಫ್‍ಗರ್ ಎಂಬಲ್ಲಿ 90 ವರ್ಷದ ಅಜ್ಜಿಯ ಮೇಲೆ ಸಾಮೂಹಿಕ ಅತ್ಯಾಚಾರವೆಗಿದ್ದಾರೆ. ತನ್ನ ಮೇಲೆ ನಡೆಯುತ್ತಿರುವ ಅತ್ಯಾಚಾರವನ್ನು ವಿರೋಧಿಸಿದಾಗ ಆಕೆಗೆ ಥಳಿಸಿ ಗಂಭೀರವಾಗಿ ಗಾಯಗೊಳಿಸಲಾಗಿತ್ತು.

  • ಚಿರತೆಯಿಂದ ಟ್ರಕ್ ಚಾಲಕನನ್ನ ಉಳಿಸಿದ ನಾಯಿಗಳು- ವಿಡಿಯೋ

    ಚಿರತೆಯಿಂದ ಟ್ರಕ್ ಚಾಲಕನನ್ನ ಉಳಿಸಿದ ನಾಯಿಗಳು- ವಿಡಿಯೋ

    ಹೈದರಾಬಾದ್: ಚಿರತೆ ದಾಳಿಯಿಂದ ಓರ್ವ ಟ್ರಕ್ ಚಾಲಕನನ್ನು ನಾಯಿಗಳು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಹೈದರಾಬಾದ್‍ನ ಕಟೇಡನ್‍ನಲ್ಲಿ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ (ಐಎಫ್‍ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ಶನಿವಾರ ಟ್ವೀಟ್ ಮಾಡಿದ್ದಾರೆ.

    ಚಿರತೆಯನ್ನು ನೋಡಿ ಇಬ್ಬರು ಟ್ರಕ್ ಚಾಲಕರು ತಪ್ಪಿಸಿಕೊಳ್ಳಲು ಮುಂದಾಗುತ್ತಾರೆ. ಈ ಪೈಕಿ ಓರ್ವ ಟ್ರಕ್ ಏರಿ ಕೂರುತ್ತಾನೆ. ಮತ್ತೊಬ್ಬ ಶೆಡ್ ಒಳಗೆ ಹೋಗಲು ಯತ್ನಿಸಿ ವಿಫಲನಾಗಿ ತಕ್ಷಣವೇ ಟ್ರಕ್ ಏರಲು ಮುಂದಾಗುತ್ತಾರೆ. ಈ ವೇಳೆ ದಾಳಿ ನಡೆಸಿ ಚಿರತೆ ಆತನ ಪ್ಯಾಂಟ್ ಹಿಡಿದು ಎಳೆಯಲು ಆರಂಭಿಸುತ್ತದೆ. ಇದನ್ನು ನೋಡಿದ ಕೆಲ ನಾಯಿಗಳು ಚಿರತೆಯ ಮೇಲೆ ದಾಳಿ ನಡೆಸಿ ಟ್ರಕ್ ಚಾಲಕನನ್ನು ರಕ್ಷಿಸುತ್ತವೆ.

    https://twitter.com/ParveenKaswan/status/1261620405648982016

    ಚಿರತೆ ನಾಯಿಗಳಿಂದ ತಪ್ಪಿಸಿಕೊಳ್ಳಲು ಶೆಟ್ ಒಳಗೆ ನುಗ್ಗಲು ಯತ್ನಿಸುತ್ತದೆ. ಅದು ಸಾದ್ಯವಾಗದೇ ಇದ್ದಾಗ ಚಿರತೆ ನಾಯಿಗಳನ್ನು ಭಯ ಮೂಡಿಸಿ ಅಲ್ಲಿಂದ ಜಾಗ ಖಾಲಿ ಮಾಡುತ್ತದೆ. ಪರ್ವೀನ್ ಕಸ್ವಾನ್ ಅವರು ಟ್ವೀಟ್ ಮಾಡಿದ ಈ ವಿಡಿಯೋವನ್ನು 23 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಕೆಲವರು ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

    “ಇದು ಅರಣ್ಯನಾಶದ ಪರಿಣಾಮ. ಅರಣ್ಯ ವ್ಯಾಪ್ತಿಯು ಕಣ್ಮರೆಯಾಗುತ್ತಿದೆ. ಹೀಗಾಗಿ ಕಾಡು ಪ್ರಾಣಿಗಳು ಅರಣ್ಯದಿಂದ ಹೊರ ಬಂದು ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

  • ಪಶುವೈದ್ಯೆಯನ್ನ ಗ್ಯಾಂಗ್‍ರೇಪ್ ಮಾಡಿ, ಕೊಲೆ – 25 ಕಿ.ಮೀ ದೂರ ಶವವೊಯ್ದು ಸುಟ್ಟರು

    ಪಶುವೈದ್ಯೆಯನ್ನ ಗ್ಯಾಂಗ್‍ರೇಪ್ ಮಾಡಿ, ಕೊಲೆ – 25 ಕಿ.ಮೀ ದೂರ ಶವವೊಯ್ದು ಸುಟ್ಟರು

    – ಪಂಕ್ಚರ್ ಸರಿ ಮಾಡುವ ನೆಪದಲ್ಲಿ ರೇಪ್
    – ಸಿಸಿಟಿವಿ ದೃಶ್ಯಾವಳಿಯಿಂದ ಆರೋಪಿಗಳು ಪತ್ತೆ
    – ಕೃತ್ಯವೆಸೆಗಿದ ಟ್ರಕ್ ಡ್ರೈವರ್ ಸೇರಿ ನಾಲ್ವರು ಅರೆಸ್ಟ್

    ಹೈದರಾಬಾದ್: ತೆಲಂಗಾಣದಲ್ಲಿ ಪಶುವೈದ್ಯೆಯನ್ನು ಓರ್ವ ಟ್ರಕ್ ಚಾಲಕ ಸೇರಿದಂತೆ ಒಟ್ಟು ನಾಲ್ಕು ಮಂದಿ ಸಾಮೂಹಿಕ ಅತ್ಯಾಚಾರಗೈದು ಕೊಲೆ ಮಾಡಿ, ಘಟನಾ ಸ್ಥಳದಿಂದ 25 ಕಿ.ಮೀ ದೂರ ಶವವನ್ನು ಕೊಂಡೊಯ್ದು ಸುಟ್ಟಿರುವುದು ಬಯಲಾಗಿದೆ.

    ತೆಲಂಗಾಣದ ಕೊಲ್ಲೂರು ಗ್ರಾಮದ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಪಶುವೈದ್ಯೆಯಾದ ಪ್ರಿಯಾಂಕಾ ರೆಡ್ಡಿ, ಬುಧವಾರ ಬೆಳಗ್ಗೆ ಶಾದ್‍ನಗರದ ತನ್ನ ಮನೆಯಿಂದ ತಾನು ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟು ನಂತರ ರಾತ್ರಿ ಸ್ಕೂಟಿ ಪಂಕ್ಚರ್ ಆಗಿದೆ ಎಂದು ತನ್ನ ತಂಗಿಗೆ ಕರೆ ಮಾಡಿದ್ದರು. ಆ ಬಳಿಕ ಅವರ ನಾಪತ್ತೆಯಾಗಿದ್ದರು. ಆದರೆ ಗುರುವಾರ ಬೆಳಗ್ಗೆ ಶಾಡ್‍ನಗರದಲ್ಲಿ ಅಂಡರ್ ಬ್ರಿಡ್ಜ್ ನ ಕೆಳಗೆ ಪ್ರಿಯಾಂಕಾ ಶವವಾಗಿ ಪತ್ತೆಯಾಗಿದ್ದರು.

    ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ತೊಂಡುಪಲ್ಲಿ ಟೋಲ್ ಪ್ಲಾಝಾ ಬಳಿ ಬೆಳಗ್ಗೆ ವೈದ್ಯೆ ತನ್ನ ಸ್ಕೂಟಿ ಪಾರ್ಕ್ ಮಾಡಿ ಗಚಿಬೌಲಿಗೆ ತೆರೆಳಿದ್ದರು. ಇದನ್ನು ಲಾರಿ ಚಾಲಕ ಮಹ್ಮದ್ ಪಾಷಾ, ಆತನ ಸಹಾಯಕ ಹಾಗೂ ಇನ್ನೂ ಇಬ್ಬರು ಗಮನಿಸಿದ್ದರು. ಸಂಜೆ ವೈದ್ಯೆ ಸ್ಕೂಟಿ ತೆಗೆದುಕೊಂಡು ಹೋಗಲು ಬಂದೇ ಬರುತ್ತಾರೆ ಎಂದು ತಿಳಿದುಕೊಂಡು ಬೇಕಂತಲೆ ವಾಹನವನ್ನು ಪಂಕ್ಚರ್ ಮಾಡಿದ್ದರು.

    ರಾತ್ರಿ 8 ಗಂಟೆ ವೇಳೆಗೆ ಗಚಿಬೌಲಿಯಿಂದ ವಾಪಸ್ ಆಗಿದ್ದ ವೈದ್ಯೆ ಟೋಲ್ ಬಳಿ ಸ್ಕೂಟಿ ತೆಗೆದುಕೊಂಡು ಹೋಗಲು ಬಂದಿದ್ದರು. ಆಗ ಸ್ಕೂಟಿ ಪಂಚರ್ ಆಗಿದ್ದನ್ನು ನೋಡಿ ಏನು ಮಾಡುವುದು ಎಂದು ತೋಚದೇ ಆತಂಕದಲ್ಲಿದ್ದರು. ಈ ವೇಳೆ ಮೊದಲೇ ಪ್ಲಾನ್ ಮಾಡಿಕೊಂಡಿದ್ದ ಆರೋಪಿಗಳು ಪಂಕ್ಚರ್ ರಿಪೇರಿ ಮಾಡಲು ಸಹಾಯ ಮಾಡುತ್ತೇವೆ ಎಂದು ವೈದ್ಯೆಗೆ ನಂಬಿಸಿದರು. ಬಳಿಕ ಸಹಾಯ ಮಾಡುವ ನೆಪದಲ್ಲಿ ವೈದ್ಯೆಯನ್ನು ಟೋಲ್‍ನಿಂದ ತುಸು ದೂರ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ನಡೆಸಿದರು. ನಂತರ ವೈದ್ಯೆಯನ್ನು ಕೊಲೆಗೈದು, ಮೃತದೇಹವನ್ನು ಸುಮಾರು 25 ಕಿ.ಮೀ ದೂರ ಕೊಂಡೊಯ್ದು ಶಾಡ್‍ನಗರದಲ್ಲಿ ಅಂಡರ್ ಬ್ರಿಡ್ಜ್ ಕೆಳಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನಾ ಸ್ಥಳದ ಹತ್ತಿರವಿದ್ದ ಟಯರ್ ರಿಪೇರಿ ಅಂಗಡಿ ಮಾಲೀಕನನ್ನು ವಿಚಾರಿಸಿದಾಗ, ರಾತ್ರಿ ಸುಮಾರು 9:30 ಗಂಟೆಯಿಂದ 10 ಗಂಟೆ ವೇಳೆಯಲ್ಲಿ ಚಾಲಕರು ಸ್ಕೂಟಿ ತೆಗೆದುಕೊಂಡು ಬಂದಿದ್ದರು. ರಿಪೇರಿ ಆದ ಬಳಿಕ ಅದನ್ನು ತೆಗೆದುಕೊಂಡು ಹೋಗಿದ್ದರು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಆಧಾರದ ಮೇಲೆ ಪೊಲೀಸರು ಆರೋಪಿಗಳ ಪತ್ತೆಗೆ ಹೊರಟಾಗ ಇಬ್ಬರು ಚಾಲಕರು ಸಿಕ್ಕಿಬಿದ್ದಿದ್ದಾರೆ. ಸ್ಥಳೀಯ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಆರೋಪಿಗಳ ಬಗ್ಗೆ ಪತ್ತೆಯಾಗಿದ್ದು, ಸದ್ಯ 4 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಟೋಲ್ ಪ್ಲಾಝಾ ಬಳಿ ಇದ್ದ ವೈದ್ಯೆಯ ಸ್ಕೂಟಿ, ಬಟ್ಟೆ, ಚಪ್ಪಲಿ ಹಾಗೂ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಪ್ರಿಯಾಂಕಾ ಅವರ ಬಗ್ಗೆ ತಂಗಿ ಭವ್ಯ ಮಾತನಾಡಿ, ನನಗೆ ಪ್ರಿಯಾಂಕಾ ರಾತ್ರಿ 9:15 ಸುಮಾರಿಗೆ ಕರೆ ಮಾಡಿದಳು. ನನ್ನ ಬೈಕ್ ಪಂಕ್ಚರ್ ಆಗಿದೆ. ನನಗೆ ಭಯವಾಗುತ್ತಿದೆ ಎಂದು ಹೇಳಿದಳು. ನಂತರ ನಾನು ಅವಳಿಗೆ ಹತ್ತಿರದ ಟೋಲ್ ಬಳಿ ಹೋಗಲು ಹೇಳಿದೆ. ಆದರೆ ಅವಳು ನನಗೆ ತುಂಬಾ ಭಯವಾಗುತ್ತಿದೆ. ಇಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು ಓಡಾಡುತ್ತಿದ್ದಾರೆ ಹಾಗೂ ತುಂಬಾ ಲಾರಿಗಳನ್ನು ಪಾರ್ಕ್ ಮಾಡಲಾಗಿದೆ ಎಂದು ಹೇಳಿದ್ದಳು.

    ನಾನು ನಂತರ ಅವಳಿಗೆ ಭಯಪಡಬೇಡ ಬೈಕನ್ನು ಅಲ್ಲೇ ನಿಲ್ಲಿಸಿ ನೀನು ಅಲ್ಲಿಂದ ಬಾ ಎಂದು ಹೇಳಿದೆ. ನಂತರ ಮತ್ತೆ ಅವಳ ಫೋನ್‍ಗೆ ಕರೆ ಮಾಡಿದಾಗ ಅವಳ ಫೋನ್ ಸ್ವಿಚ್ ಆಫ್ ಬಂತು. ಆದರೆ ಬೆಳಗ್ಗೆ ಶಾಡ್‍ನಗರದಲ್ಲಿ ಅಂಡರ್ ಬ್ರಿಡ್ಜ್ ಕೆಳಗೆ ಪತ್ತೆಯಾಗದ ರೀತಿಯಲ್ಲಿ ಸುಟ್ಟು ಹೋದ ಅವಳ ದೇಹ ದೊರಕಿದೆ. ಆಕೆ ಹಾಕಿದ್ದ ಚೈನ್ ಲಾಕೆಟ್ ನೋಡಿ ನಾವು ದೇಹವನ್ನು ಗುರುತಿಸಿದೆವು ಎಂದು ಭವ್ಯ ತಿಳಿಸಿದ್ದರು.