Tag: Trouble

  • ಗರ್ಭಿಣಿ ಅಂತಾ ಸುಳ್ಳು ಹೇಳಿ ಮಗುವಿಗೆ ಜನ್ಮ ಕೊಟ್ಟಳು- ಆದರೆ ಕಂದಮ್ಮ ಇಲ್ಲ

    ಗರ್ಭಿಣಿ ಅಂತಾ ಸುಳ್ಳು ಹೇಳಿ ಮಗುವಿಗೆ ಜನ್ಮ ಕೊಟ್ಟಳು- ಆದರೆ ಕಂದಮ್ಮ ಇಲ್ಲ

    ಅಮರಾವತಿ: 9 ವರ್ಷ ಕಳೆದರೂ ಮಕ್ಕಳಾಗಲಿಲ್ಲ ಎಂದು ನಿಂದಿಸುವ ಜನರಿಂದ ತಪ್ಪಿಸಿಕೊಳ್ಳಲು, ಮಹಿಳೆ 9 ತಿಂಗಳು ಕುಟುಂಬಸ್ಥರನ್ನೇ ಮೂರ್ಖರನ್ನಾಗಿ ಮಾಡಿರುವ ಸುದ್ದಿಯಾಗಿದೆ.

    ಮಹಿಳೆಯೊಬ್ಬರು 9 ವರ್ಷಗಳ ಹಿಂದೆ ತೆಲಂಗಾಣದ ಖಮ್ಮಂ ಜಿಲ್ಲೆಯ ವೈರಾ ಮೂಲದ ವ್ಯಕ್ತಿಯನ್ನು ಮದುವೆಯಾಗಿದ್ದರು. ಮದುವೆಯಾಗಿ 9 ವರ್ಷಗಳು ಕಳೆದ್ರೂ ಮಕ್ಕಳಾಗಿರಲಿಲ್ಲ. ಮಕ್ಕಳಿಲ್ಲವಾ ಎಂದು ನೆರೆಹೊರೆಯವರು, ಕುಟುಂಬಸ್ಥರು, ಸ್ನೇಹಿತರು ಕೇಳುತ್ತಿದ್ದರು. ಈ ವಿಚಾರವಾಗಿ ಮಾನಸಿಕವಾಗಿ ನೊಂದಿದ್ದ ಮಹಿಳೆ ಖತರ್ನಾಕ್ ಉಪಾಯವನ್ನು ಮಾಡಿ ಸಿಕ್ಕಿ ಬಿದ್ದಿದ್ದಾಳೆ.

    ಗರ್ಭಧರಿಸಿದ್ದೇನೆ ಎಂದು ಅತ್ತೆಗೆ ಸುಳ್ಳು ಹೇಳಿ ತವರು ಮನೆಗೆ ಹೆರಿಗೆಗೆ ಹೋಗಿದ್ದಾಳೆ. ತನ್ನ ತಾಯಿಯೊಂದಿಗೆ 9 ತಿಂಗಳು ಗರ್ಭಿಣಿಯಂತೆಯೇ ನಟಿಸಿದ್ದಾಳೆ. ಪ್ರತಿ ತಿಂಗಳು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಹೋಗಿದ್ದಾಳೆ. ವೈದ್ಯರು ತನ್ನ ಹೆರಿಗೆಯ ದಿನಾಂಕವನ್ನು ಜನವರಿ 5 ಬುಧವಾರದಂದು  ನೀಡಿದ್ದಾರೆ ಎಂದು ಎಲ್ಲರಿಗೂ ತಿಳಿಸಿದ್ದಾಳೆ. ಒಂದು ದಿನ ಮಧ್ಯರಾತ್ರಿ ತನಗೆ ಹೆರಿಗೆ ನೋವು ಕಾಣಿಸಿಕೊಂಡಿದೆ ಎಂದು ಕುಟುಂಬದವರಿಗೂ ತಿಳಿಸಿದ್ದಾಳೆ. ಇದನ್ನೂ ಓದಿ: ನನ್ನ ಹೆಸರು Kovid, ಆದ್ರೆ ನಾನು ವೈರಸ್ ಅಲ್ಲ: ಬೆಂಗಳೂರು ಉದ್ಯಮಿ

    ಹೆರಿಗೆಯನ್ನೂ ಮಾಡಿಕೊಂಡಂತೆ ನಟನೆ ಕೂಡಾ ಮಾಡಿದ್ದಾಳೆ. ಬಳಿಕ ಮಗು ನೋಡಲು ಬಂದ ಮನೆಯವರಿಗೆ ಕಥೆ ಕಟ್ಟಿದ್ದಾಳೆ. ಹೆರಿಗೆಗೆ ಸಹಾಯ ಮಾಡಲು ಬಂದ ಇಬ್ಬರು ವ್ಯಕ್ತಿಗಳು ಮಗುವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾಳೆ. ಮಹಿಳೆಯ ಮಾತಿನ ಹಿನ್ನೆಲೆಯಲ್ಲಿ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಈ ವಿಚಾರವಾಗಿ ಪೊಲೀಸರು ಆಕೆಯನ್ನು ವಿಚಾರಿಸಿದಾಗ ನಿಜ ಗೊತ್ತಾಗಿದೆ. ಇದನ್ನೂ ಓದಿ: ವಯೋಮಿತಿ ಏರಿಕೆ ಭೀತಿ- ಮುಸ್ಲಿಮರು ತರಾತುರಿ ಲಗ್ನ

  • ಜನರಿಗೆ ತೊಂದರೆ ನೀಡುವಲ್ಲಿ ಮೋದಿ ಸರ್ಕಾರ ದಾಖಲೆ ಮಾಡಿದೆ: ಪ್ರಿಯಾಂಕಾ ಗಾಂಧಿ

    ಜನರಿಗೆ ತೊಂದರೆ ನೀಡುವಲ್ಲಿ ಮೋದಿ ಸರ್ಕಾರ ದಾಖಲೆ ಮಾಡಿದೆ: ಪ್ರಿಯಾಂಕಾ ಗಾಂಧಿ

    ನವದೆಹಲಿ: ಜನರಿಗೆ ತೊಂದರೆ ಕೊಡುವುದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ದಾಖಲೆ ಸೃಷ್ಟಿಸಿದೆ ಎಂದು ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

    ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕುರಿತು ಇಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕಾ ಗಾಂಧಿ ವಾದ್ರಾ, ಮೋದಿ ಸರ್ಕಾರ ಜನರಿಗೆ ತೊಂದರೆ ನೀಡುವಲ್ಲಿ ದಾಖಲೆಗಳನ್ನು ಸೃಷ್ಟಿಸಿದೆ. ಈ ವರ್ಷ ಪೆಟ್ರೋಲ್ ಬೆಲೆ ದಾಖಲೆಯ 23.53 ರೂ.ಗಳಷ್ಟು ಹೆಚ್ಚಾಗಿದೆ. ಮೋದಿ ಜಿ ಸರ್ಕಾರವು ಸಾರ್ವಜನಿಕರಿಗೆ ತೊಂದರೆ ನೀಡುವಲ್ಲಿ ದೊಡ್ಡ ದಾಖಲೆಗಳನ್ನು ಮಾಡಿದೆ. ಅತಿ ಹೆಚ್ಚು ನಿರುದ್ಯೋಗ, ಸರ್ಕಾರಿ ಆಸ್ತಿ ಮಾರಾಟದಲ್ಲಿ ದಾಖಲೆ ನಿರ್ಮಿಸಿದೆ ಎಂದು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಬ್ರದರ್, ಬ್ರದರ್‌ ಅಂತ ಕತ್ತು ಕೊಯ್ಯೋದು: ಜಮೀರ್ ಅಹ್ಮದ್

    ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಅವರು ಇದೇ ಮಾಧ್ಯಮ ವರದಿಯನ್ನು ಟ್ಯಾಗ್ ಮಾಡಿ ಅಚ್ಛೇ ದಿನ್ (ಒಳ್ಳೆಯ ದಿನಗಳು) ಎಂದು ಟ್ವೀಟ್ ಮಾಡುವ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: 14 ವರ್ಷದ ಬಳಿಕ ಬೆಂಕಿಪೊಟ್ಟಣದ ಬೆಲೆ ಏರಿಕೆ

    ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಸತತ ನಾಲ್ಕನೇ ದಿನವಾದ ಶನಿವಾರ ಪ್ರತಿ ಲೀಟರ್‍ಗೆ 35 ಪೈಸೆ ಏರಿಕೆಯಾಗಿದ್ದು, ಪೆಟ್ರೋಲ್ ಮೇಲಿನ ದರವನ್ನು ಪ್ರತಿ ಲೀಟರ್‍ಗೆ 36 ರೂ. ಮತ್ತು ಡೀಸೆಲ್ ಮೇಲೆ 26.58 ರೂ.ಗೆ ಏರಿಕೆ ಮಾಡಲಾಗಿದೆ.

  • ಗಾಳಿ, ಗುಡುಗು ಸಹಿತ ಧಾರಾಕಾರ ಮಳೆ – ಮತದಾನಕ್ಕೆ ಅಡ್ಡಿ

    ಗಾಳಿ, ಗುಡುಗು ಸಹಿತ ಧಾರಾಕಾರ ಮಳೆ – ಮತದಾನಕ್ಕೆ ಅಡ್ಡಿ

    -ಭಾರೀ ಪ್ರಮಾಣದ ಆಲಿಕಲ್ಲು

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ವರುಣನ ಅಬ್ಬರ ಜೋರಾಗಿದ್ದು, ಭಾರೀ ಮಳೆಯಿಂದಾಗಿ ಮತದಾನಕ್ಕೆ ಅಡ್ಡಿಯಾಗಿದೆ.

    ಮುಂಡಗೋಡಿನಲ್ಲಿ ಅರ್ಧ ಗಂಟೆಗಳಿಂದ ಗಾಳಿ, ಗುಡುಗು ಸಹಿತ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಮತ ಚಲಾಯಿಸಲು ಬಂದ ಮತದಾರರಿಗೆ ತೊಂದರೆಯಾಗುತ್ತಿದೆ. ಒಂದು ವೇಳೆ ಮಳೆ ಹೀಗೆ ಮುಂದುವರಿದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇಕಡಾವಾರು ಮತದಾನ ಕಡಿಮೆಯಾಗುವ ಸಾಧ್ಯತೆ ಇದೆ.

    ಇತ್ತ ಶಿರಸಿಯಲ್ಲೂ ಗುಡುಗು ಸಹಿತ ಭಾರೀ ಮಳೆ ಪ್ರಾರಂಭವಾಗಿದ್ದು, ಮಳೆಯ ಅಬ್ಬರಕ್ಕೆ ಐದಕ್ಕೂ ಹೆಚ್ಚು ಮರಗಳು ಧರೆಗುರುಳಿ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯ ಅಬ್ಬರಕ್ಕೆ ಮತದಾರರು ಮತಗಟ್ಟೆಗೆ ಬರುತ್ತಿಲ್ಲ. ಮಳೆಯಿಂದ ಮತದಾನ ಇಳಿಮುಖವಾಗಿದೆ. ಒಂದು ಕಡೆ ಮಳೆಯಾದರೆ, ಮತ್ತೊಂಡೆ ಮಳೆಯ ಅಬ್ಬರಕ್ಕೆ ಶಿರಸಿ ನಗರದಲ್ಲಿ ಪವರ್ ಕಟ್ ಆಗಿದೆ. ಮತಗಟ್ಟೆಯ ಕೊಠಡಿಗಳಲ್ಲಿ ಕತ್ತಲು ಆವರಿಸಿದೆ. ಇದರಿಂದ ಮತದಾರರು ಮತದಾನಕ್ಕೆ ಬರದೇ ಮತದಾನ ಪ್ರಕ್ರಿಯೆ ಮಧ್ಯಾಹ್ನದ ಬಳಿಕ ಇಳಿಮುಖವಾಗಿದೆ.

    ಹಳೇ ಭದ್ರವತಿ ಮತ್ತು ಹೊಸಮನೆ ಭಾಗದಲ್ಲಿ ಗಾಳಿ ಸಹಿತ ಮಳೆಯಾಗುತ್ತಿದ್ದು, ಗುಡುಗು-ಸಿಡಿಲು ಮತದಾರರನ್ನು ಹೆದರಿಸಿದೆ. ಪರಿಣಾಮ ಮತಕೇಂದ್ರಗಳು ಖಾಲಿ ಖಾಲಿಯಾಗಿವೆ. ಸುಮಾರು ಅರ್ಧ ಗಂಟೆಯಿಂದ ಮಳೆ ಸುರಿಯುತ್ತಿದೆ. ಇದಲ್ಲದೇ ಮಳೆಯಿಂದಾಗಿ ಮತಗಟ್ಟೆಗಳು ಅಸ್ತವ್ಯಸ್ತವಾಗಿದ್ದು, ಎಲ್ಲೆಡೆ ನೀರು ತುಂಬಿ ಹರಿಯುತ್ತಿದೆ.

    ಇನ್ನೂ ಕಾಫಿನಾಡು ಮಲೆನಾಡು ಭಾಗದಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆಯಾಗುತ್ತಿದೆ. ಮೂಡಿಗೆರೆಯ ಕಳಸ, ಎನ್.ಆರ್.ಪುರದ ಬಾಳೆಹೊನ್ನೂರು ಸುತ್ತಮುತ್ತ ಗುಡುಗು-ಸಿಡಿಲಿನೊಂದಿಗೆ ಧಾರಾಕಾರ ಮಳೆಯಾಗುತ್ತಿದೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದು, ರಣಬಿಸಿಲಿಗೆ ಬೇಸತ್ತಿದ್ದ ಮಲೆನಾಡಿಗರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ರೈತರು, ಕಾಫಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.

  • ಐಟಿ ದಾಳಿ ಮುಗಿದರೂ ನಟರಿಗೆ ತಪ್ಪದ ಸಂಕಷ್ಟ

    ಐಟಿ ದಾಳಿ ಮುಗಿದರೂ ನಟರಿಗೆ ತಪ್ಪದ ಸಂಕಷ್ಟ

    ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ನಟರ ನಿವಾಸದಲ್ಲಿ ಮೂರು ದಿನಗಳಿಂದ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು ಇಂದು ನಸುಕಿನ ಜಾವ ನಿರ್ಗಮಿಸಿದ್ದಾರೆ.

    ಶಿವರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್, ಸುದೀಪ್ ಅವರ ಮನೆಯಲ್ಲಿ ಈಗಾಗಲೇ ಐಟಿ ದಾಳಿ ಮುಗಿದಿದೆ. ಆದರೆ ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಐಟಿ ಅಧಿಕಾರಿಗಳು ಇನ್ನೂ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಐಟಿ ಅಧಿಕಾರಿಗಳ ಬಳಿ ಕಿಚ್ಚ ಸುದೀಪ್ ಮನವಿ

    ಸ್ಟಾರ್ ನಟರ ಕುಟುಂಬದ ಆಸ್ತಿಪಾಸ್ತಿಗೆ ಸಂಬಂಧಿಸಿದ ಆಸ್ತಿ ದಾಖಲೆಗಳು ಐಟಿ ವಶದಲ್ಲಿದೆ. ಅಲ್ಲದೇ ಬ್ಯಾಂಕ್ ಖಾತೆ, ಲಾಕರ್ ಗಳಲ್ಲಿಟ್ಟಿರುವ ಚಿನ್ನಾಭರಣಗಳ ದಾಖಲೆಗಳನ್ನು ಕೂಡ ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಐಟಿ ದಾಳಿ ವೇಳೆ ಬೆಳಕಿಗೆ ಬಂತು ಮಹತ್ವದ ವಿಚಾರಗಳು

    ಅಧಿಕಾರಿಗಳು ಇನ್ಮುಂದೆ ವಿಚಾರಣೆಗೆ ಬನ್ನಿ ಎಂದು ಹೇಳಿದಾಗಲೆಲ್ಲಾ ಸ್ಟಾರ್ ನಟರು ಐಟಿ ಆಫೀಸ್‍ಗೆ ಹೋಗಬೇಕಾಗಿದೆ. ಆಸ್ತಿಪಾಸ್ತಿ ಬಗ್ಗೆ ಸ್ಟಾರ್ ನಟರು ಹಾಗೂ ಅವರ ಕುಟುಂಬಸ್ಥರು ಪದೇ ಪದೇ ವಿಚಾರಣೆಗೆ ಹಾಜರಾಗಿ ತಮ್ಮ ಆದಾಯದ ಮಾಹಿತಿಯನ್ನು ನೀಡಬೇಕಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv