Tag: Trophy

  • ಐಪಿಎಲ್ ಟ್ರೋಫಿ ಮೇಲಿದೆ ಸಂಸ್ಕೃತ ವಾಕ್ಯ: ಅರ್ಥ ಏನು? ಕಪ್ ವಿಶೇಷತೆ ಏನು?

    ಐಪಿಎಲ್ ಟ್ರೋಫಿ ಮೇಲಿದೆ ಸಂಸ್ಕೃತ ವಾಕ್ಯ: ಅರ್ಥ ಏನು? ಕಪ್ ವಿಶೇಷತೆ ಏನು?

    ಮುಂಬೈ: ದೇಶಿಯ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಭಾಷ್ಯ ಬರೆಯುತ್ತಿರುವ ಐಪಿಎಲ್ ಹೊಸ ಪ್ರತಿಭೆಗಳು ತಮ್ಮ ಸಾಮರ್ಥ್ರ್ಯವನ್ನು ಸಾಬೀತು ಪಡಿಸಿಕೊಳ್ಳುವ ವೇದಿಕೆಯಾಗಿದೆ. ಇದರೊಂದಿಗೆ ಆಕರ್ಷಕ ಟ್ರೋಫಿಯನ್ನು ಹೊಂದಿದ್ದು, ಟ್ರೋಫಿಯ ಕುರಿತ ವಿಶೇಷ ಮಾಹಿತಿ ಇಲ್ಲಿದೆ.

    ಟೂರ್ನಿಯಲ್ಲಿ ಯಶಸ್ವಿ ಪ್ರದರ್ಶನ ನೀಡುವ ತಂಡಕ್ಕೆ ನೀಡುವ ಟ್ರೋಫಿಯು ವಿಶೇಷ ಆಕರ್ಷಣೆಯನ್ನು ಹೊಂದಿದೆ. ಇದರ ಮೇಲೆ ಸಂಸ್ಕೃತದಲ್ಲಿ “ಯಾತ್ರ ಪ್ರತಿಭಾ ಅವಸರ ಪ್ರಾಪ್ನೋತಿಹಿ” ಎಂದು ಬರೆಯಲಾಗಿದ್ದು, ಪ್ರತಿಭೆಗಳ ಅವಕಾಶಕ್ಕೆ ತಕ್ಕ ವೇದಿಕೆ ಎಂಬರ್ಥವನ್ನು ನೀಡುತ್ತದೆ. ಸ್ವರ್ಣ ಲೇಪಿತ ದಿಂದ ನಿರ್ಮಾಣವಾಗಿರುವ ಕಪ್ ಮೇಲಿನ ಅಕ್ಷರಗಳು ಬರಿಗಣ್ಣಿಗೆ ಗೋಚರಿಸುವುದಿಲ್ಲ ಎಂಬುದು ಇದರ ಮತ್ತೊಂದು ವಿಶೇಷವಾಗಿದೆ.

    ಟೂರ್ನಿಯಲ್ಲಿ ಭಾಗವಹಿಸುವ ತಂಡದ ಎಲ್ಲರೂ ಕಪ್ ಗೆಲ್ಲಲು ಒಟ್ಟಾಗಿ ಶ್ರಮವಹಿಸುತ್ತಾರೆ. ಬಳಿಕ ಒಂದು ವರ್ಷದ ಅವಧಿ ಅಂದರೆ ಮುಂದಿನ ಟೂರ್ನಿ ಆರಂಭವಾಗುವ ವರೆಗೂ ಟ್ರೋಫಿ ವಿಜೇತ ತಂಡದಲ್ಲಿರುತ್ತದೆ.

    ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮಹತ್ವದ ಬದಲಾವಣೆ ತಂದ ಐಪಿಎಲ್ ಟೂರ್ನಿ ದೇಶದ ಯುವ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ರ್ಯವನ್ನು ಪ್ರದರ್ಶಿಸುವ ಪ್ರಮುಖ ವೇದಿಕೆಯಾಗಿದೆ. ಮೇ 27 ರಂದು ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ 2018 ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ.

  • ಸ್ಯಾಂಡಲ್‍ವುಡ್ ನಟನ ಮೇಲೆ ಕಬಡ್ಡಿ ಆಟಗಾರರಿಂದ ಹಲ್ಲೆ

    ಸ್ಯಾಂಡಲ್‍ವುಡ್ ನಟನ ಮೇಲೆ ಕಬಡ್ಡಿ ಆಟಗಾರರಿಂದ ಹಲ್ಲೆ

    ಬೆಂಗಳೂರು: ಕಬಡ್ಡಿ ಸೋತಿದ್ದಕ್ಕೆ ಹತಾಶೆಗೊಂಡು ಸ್ಯಾಂಡಲ್‍ವುಡ್ ನಟನಿಗೆ ಮತ್ತೊಂದು ತಂಡ ಥಳಿಸಿದ ಘಟನೆ ಅನ್ನಪೂರ್ಣೇಶ್ವರಿ ನಗರದ ಬಿಬಿಎಂಪಿ ಪಾರ್ಕ್ ನಲ್ಲಿ ನಡೆದಿದೆ.

    18 ಪ್ಲಸ್ ಸಿನಿಮಾದ ನಾಯಕ ನಟ ಭರತ್ ಮೇಲೆ ಹಲ್ಲೆ ನಡೆಸಲಾಗಿದೆ. ಕಬಡ್ಡಿ ಟೂರ್ನಿಯಲ್ಲಿ ಭಾಗವಹಿಸಿದ್ದ ಭರತ್ ತಂಡ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಫೈನಲ್ ಪಂದ್ಯದಲ್ಲಿ ಸೋತಿದ್ದಕ್ಕೆ ಸಿಟ್ಟಾಗಿ ಕಿಟ್ಟಿ, ಪ್ರೇಮ್, ನಂದು ಎಂಬವರು ನಟ ಭರತ್ ಹಾಗೂ ನವೀನ್ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ.

    2 ದಿನಗಳ ಹಿಂದೆ ನಟನ ಮೇಲೆ ಹಲ್ಲೆ ನಡೆದಿದೆ. ಹಲ್ಲೆಯ ನಂತರ ಭರತ್ ಮುಖ ಊದಿಕೊಂಡಿದೆ. ಅನ್ನಪೂರ್ಣೆಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.