Tag: Trophy

  • Asia Cup 2025 | ಚಾಂಪಿಯನ್‌ ಭಾರತ ತಂಡಕ್ಕೆ ಬಿಸಿಸಿಐನಿಂದ 21 ಕೋಟಿ ಗಿಫ್ಟ್‌

    Asia Cup 2025 | ಚಾಂಪಿಯನ್‌ ಭಾರತ ತಂಡಕ್ಕೆ ಬಿಸಿಸಿಐನಿಂದ 21 ಕೋಟಿ ಗಿಫ್ಟ್‌

    ದುಬೈ: ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಏಷ್ಯಾ ಕಪ್ (Asia Cup) ಗೆದ್ದ ಭಾರತ ತಂಡದ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗೆ ಬಿಸಿಸಿಐ (BCCI) ಬರೋಬ್ಬರಿ 21 ಕೋಟಿ ನಗದು ಬಹುಮಾನ ಘೋಷಿಸಿದೆ.

    ಇದಲ್ಲದೇ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ನಿಂದ (ACC) ಚಾಂಪಿಯನ್‌ ತಂಡಕ್ಕೆ 2.6 ಕೋಟಿ ರೂ. ಟೂರ್ನಿಯ ಬಹುಮಾನ ಸಿಕ್ಕಿದೆ. ರನ್ನರ್‌ ಅಪ್‌ ಪಾಕಿಸ್ತಾನ ತಂಡ ಕೇವಲ 1.3 ಕೋಟಿ ರೂ. ಬಹುಮಾನ ಪಡೆದುಕೊಂಡಿದೆ. ಇದನ್ನೂ ಓದಿ: ಏಷ್ಯಾಕಪ್‌ನಲ್ಲಿ ಭಾರತಕ್ಕೆ ಸಿಂಧೂರ ʼತಿಲಕʼ!

    ಮೈದಾನದಲ್ಲಿ ಭಾರೀ ಹೈಡ್ರಾಮಾ
    ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ (Pakistan) ವಿರುದ್ಧ ಭಾರತ ಗೆದ್ದರೂ, ಏಷ್ಯಾ ಕಪ್‌ ಟ್ರೋಫಿ ತಂಡದ ಕೈ ಸೇರಿಲ್ಲ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಮತ್ತು ಪಾಕಿಸ್ತಾನದ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಇಂಡಿಯಾ ತಂಡ ನಿರಾಕರಿಸಿದ ಕಾರಣ ವಿಜೇತ ತಂಡಕ್ಕೆ ಟ್ರೋಫಿಯನ್ನು ನೀಡದ ವಿಚಿತ್ರ ಘಟನೆ ನಡೆಯಿತು.

    ತಡರಾತ್ರಿ ನಡೆದ ಈ ನಾಟಕೀಯ ಬೆಳವಣಿಗೆಯಿಂದಾಗಿ, ಸೂರ್ಯಕುಮಾರ್ ಯಾದವ್ (Suryakumar Yadav) ನೇತೃತ್ವದ ಭಾರತೀಯ ತಂಡವು ಟ್ರೋಫಿ ಇಲ್ಲದೆಯೇ ತಮ್ಮ ವಿಜಯ ಆಚರಿಸಬೇಕಾಯಿತು. ಇದನ್ನೂ ಓದಿ: ಪಾಕ್‌ ವಿರುದ್ಧ ಗೆದ್ದ ಭಾರತಕ್ಕೆ ಏಷ್ಯಾ ಕಪ್‌ – ಸಿದ್ದರಾಮಯ್ಯ, ಹೆಚ್‌ಡಿಕೆ ಅಭಿನಂದನೆ

    ಭಾನುವಾರ ನಡೆದ ಹೈವೋಲ್ಟೇಜ್‌ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಮಣಿಸಿದ ಭಾರತ, ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ಕಾಯುತ್ತಿತ್ತು. ಆದರೆ, ವಿಜೇತರ ಟ್ರೋಫಿಯನ್ನು ಯಾರು ನೀಡುತ್ತಾರೆ ಎಂದು ಭಾರತೀಯ ತಂಡದ ಆಡಳಿತ ಮಂಡಳಿ ವಿಚಾರಿಸಿದಾಗ, ಅದು ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಎಂದು ತಿಳಿದು ಬಂತು. ಪಾಕಿಸ್ತಾನಿ ಸಚಿವರಾಗಿರುವ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಭಾರತ ತಂಡವು ಸ್ಪಷ್ಟವಾಗಿ ನಿರಾಕರಿಸಿತು.

    ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಳಂಬ
    ಈ ಹಿನ್ನೆಲೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ಬಹಳ ವಿಳಂಬವಾಗಿ ನಡೆಯಿತು. ನಖ್ವಿ ವೇದಿಕೆಯ ಮೇಲೆ ಬಂದು ನಿಂತಾಗ, ಭಾರತೀಯ ಆಟಗಾರರು ಸುಮಾರು 15 ಗಜಗಳಷ್ಟು ದೂರದಲ್ಲಿಯೇ ನಿಂತು, ಮುಂದೆ ಬರಲು ಒಪ್ಪಲೇ ಇಲ್ಲ. ಈ ಸಂದರ್ಭದಲ್ಲಿ, ಇನ್ನೂ ಕ್ರೀಡಾಂಗಣದಲ್ಲಿದ್ದ ಭಾರತೀಯ ಅಭಿಮಾನಿಗಳು ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗುತ್ತಾ ನಖ್ವಿಯವರನ್ನು ಹೀಯಾಳಿಸಿದರು. ಇದನ್ನೂ ಓದಿ: ಪಾಕ್‌ ಸಚಿವನಿಂದ ಏಷ್ಯಾಕಪ್‌ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಟೀಂ ಇಂಡಿಯಾ

  • ಯಾರಿಗೂ ಅಗೌರವ ತೋರಿಲ್ಲ- ಟ್ರೋಫಿ ಮೇಲೆ ಕಾಲಿಟ್ಟಿದ್ದಕ್ಕೆ ಮಿಚೆಲ್ ಸ್ಪಷ್ಟನೆ

    ಯಾರಿಗೂ ಅಗೌರವ ತೋರಿಲ್ಲ- ಟ್ರೋಫಿ ಮೇಲೆ ಕಾಲಿಟ್ಟಿದ್ದಕ್ಕೆ ಮಿಚೆಲ್ ಸ್ಪಷ್ಟನೆ

    ನವದೆಹಲಿ: ವಿಶ್ವಕಪ್ 2023 ರ (World Cup 2023) ಟ್ರೋಫಿ ಮೇಲೆ ಕಾಲಿಟ್ಟು ಭಾರೀ ವಿವಾದಕ್ಕೀಡಾದ ಬಳಿಕ ಇದೀಗ ಆಸೀಸ್ ತಂಡದ ಆಲ್ ರೌಂಡರ್ ಮಿಚೆಲ್ ಮಾರ್ಷ್ (Mitchell Marsh) ಸ್ಪಷ್ಟನೆ ನೀಡಿದ್ದಾರೆ.

    ನಾನು ಯಾರಿಗೂ ಅಗೌರವ ತೋರಿಲ್ಲ. ನಾನು ಅದರ ಬಗ್ಗೆ ಹೆಚ್ಚು ಯೋಚಿಸಿಲ್ಲ. ಆ ಫೋಟೋ ಸಾಕಷ್ಟು ವೈರಲ್ ಆಗಿದೆ ಎಂದು ಹಲವರು ನನ್ನ ಗಮನಕ್ಕೆ ತಂದಿದ್ದರು. ಆದರೆ ನಾನು ಅದನ್ನು ನೊಡಲು ಹೋಗಿಲ್ಲ. ಟೀಕಿಸುವಂಥದ್ದು ಅದರಲ್ಲಿ ಏನೂ ಇಲ್ಲ ಎಂದು ಮಾರ್ಷ್ ತಿಳಿಸಿದ್ದಾರೆ.

    ನ.19 ರಂದು ಅಹಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆದ 2023ರ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 6 ವಿಕೆಟ್‍ಗಳಿಂದ ಭಾರತ ತಂಡವನ್ನು ಮಣಿಸಿತ್ತು. ಈ ಮೂಲಕ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು. ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಸತತ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ಇದನ್ನೂ ಓದಿ: ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟ ಮಿಚೆಲ್ ವಿರುದ್ಧ ದೂರು ದಾಖಲು

    ಗೆಲುವಿನ ನಂತರ ಸಂಭ್ರಮ ಆಚರಿಸಿಕೊಂಡಿದ್ದ ಆಸೀಸ್ ಪಡೆ, ಚಿತ್ರಗಳನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಹಂಚಿಕೊಂಡಿತ್ತು. ಚಿತ್ರವೊಂದರಲ್ಲಿ ಮಿಚೆಲ್ ಮಾರ್ಷ್ ಟ್ರೋಫಿಯ ಮೇಲೆ ಕಾಲಿಟ್ಟು ಪೋಸ್ ಕೊಟ್ಟಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ (Social Media) ಭಾರೀ ವಿರೋಧ ಕೂಡ ವ್ಯಕ್ತವಾಗಿತ್ತು. ಕೆಲವರು ಮಿಚೆಲ್ ಪರವಾಗಿಯೂ ವಾದಿಸಿದ್ದರು.

  • World Cup 2023 – ಚಿನ್ನದಲ್ಲಿ ವಿಶ್ವಕಪ್ ತಯಾರಿಸಿದ ಬೆಂಗಳೂರಿನ ಅಕ್ಕಸಾಲಿಗ

    World Cup 2023 – ಚಿನ್ನದಲ್ಲಿ ವಿಶ್ವಕಪ್ ತಯಾರಿಸಿದ ಬೆಂಗಳೂರಿನ ಅಕ್ಕಸಾಲಿಗ

    ಬೆಂಗಳೂರು: ದೇಶದೆಲ್ಲೆಡೆ ಈಗಾಗಲೇ ವಿಶ್ವಕಪ್ (World Cup) ಜ್ವರ ಜೋರಾಗಿದೆ. ಇಂದಿನ ಪಂದ್ಯಾವಳಿಯಲ್ಲಿ ಇಂಡಿಯಾ (India) ಗೆಲ್ಲಲ್ಲಿ ಅನ್ನೋ ಶುಭ ಹಾರೈಕೆ ನಾಡಿನೆಲ್ಲೆಡೆ ಕೇಳಿಬರುತ್ತಿದೆ. ಇದರ ನಡುವೆ ಬೆಂಗಳೂರಿನ (Bengaluru) ಅಕ್ಕಸಾಲಿಗನೊಬ್ಬ (Goldsmith) ಚಿನ್ನದ ವಿಶ್ವಕಪ್ ತಯಾರಿಸಿ ಡಿಫರೆಂಟ್ ಆಗಿ ವಿಶ್ ಮಾಡಿದ್ದಾರೆ.

    ವಿಶ್ವಕಪ್ ಟೂರ್ನಿನಲ್ಲಿ ಟೀಂ ಇಂಡಿಯಾ ಫೈನಲ್‌ಗೆ ಪ್ರವೇಶಿಸುತ್ತಿದ್ದಂತೆ ಭಾರತ ಗೆಲ್ಲುತ್ತದೆ ಎನ್ನುವ ನಿರೀಕ್ಷೆಗಳು ಗರಿಗೆದರಿವೆ. ಲಕ್ಷಾಂತರ ಜನ ಪೂಜೆ, ಪುನಸ್ಕಾರ ಸೇರಿದಂತೆ ಹಲವು ರೀತಿಯಲ್ಲಿ ವಿಶ್ ಮಾಡುತ್ತಿದ್ದಾರೆ. ಬೆಂಗಳೂರಿನ ಚಿನ್ನದ ವ್ಯಾಪಾರಿಯಿಂದ ವಿಶ್ವಕಪ್ ಮಿನಿ ಟ್ರೋಫಿಗಳು (Trophy) ನಿರ್ಮಾಣವಾಗಿವೆ. ಕ್ರಿಕೆಟ್ (Cricket) ಅಭಿಮಾನಿಯಾಗಿರುವ ನಾಗರಾಜ್ ರೇವಣಕರ್ ಅಕ್ಕಸಾಲಿಗನಾಗಿ ಕೆಲಸ ಮಾಡುತ್ತಿದ್ದು, ಇಂದು ಭಾರತ ಗೆಲ್ಲಲಿ ಅನ್ನೋ ಆಶಯದೊಂದಿಗೆ ಚಿನ್ನದಲ್ಲಿ ಮೂರು ವಿಶ್ವಕಪ್ ಟ್ರೋಫಿ ನಿರ್ಮಿಸಿದ್ದಾರೆ. ನಾಗರಾಜ್, ಟೀಂ ಇಂಡಿಯಾ ಮೇಲಿನ ಅಭಿಮಾನಕ್ಕೆ 22 ಕ್ಯಾರೆಟ್‌ನಲ್ಲಿ ಒಂದು ಗ್ರಾಂ, 680 ಮಿಲಿಗ್ರಾಂನಲ್ಲಿ ಒಂದು ವಿಶ್ವಕಪ್‌ನಂತೆ ಒಟ್ಟು ಮೂರು ವಿಶ್ವಕಪ್ ಅನ್ನು ನಾಲ್ಕು ಗ್ರಾಂ 880 ಮಿಲಿಯಲ್ಲಿ, ಎರಡು ಸೆಂ.ಮೀನಲ್ಲಿ ತಯಾರಿಸಿದ್ದಾರೆ. ಇದನ್ನೂ ಓದಿ: 13 ವಿಶ್ವಕಪ್‍ನಲ್ಲಿ 8ನೇ ಬಾರಿ ಫೈನಲ್- 5 ಬಾರಿ ಚಾಂಪಿಯನ್ ಆಗಿರೋ ಆಸ್ಟ್ರೇಲಿಯಾ

    ಇನ್ನೂ ವಿಶ್ಚಕಪ್ ಅನ್ನು ಚಿನ್ನದಲ್ಲಿ ತಯಾರಿಸಿದರೇ, ಬ್ಯಾಟ್‌ಗಳನ್ನು ಬೆಳ್ಳಿಯಲ್ಲಿ ತಯಾರಿಸಿದ್ದಾರೆ. ಸ್ಟಮ್ಸ್‌ಗಳನ್ನು ಚಿನ್ನದ ಕೋಟೆಡ್‌ನಲ್ಲಿ ಮಾಡಿದ್ದಾರೆ. ಮೊದಲನೆ ವಿಶ್ವಕಪ್ ಬ್ಯಾಟ್‌ನಲ್ಲಿ ಕಪೀಲ್ ದೇವ್ (1983), ಎರಡನೇ ಬ್ಯಾಟ್‌ನಲ್ಲಿ ಎಂ.ಎಸ್ ದೋನಿ(2011) ಅಂತಾ ಬರೆದರೇ, ಮೂರನೇ  ಬ್ಯಾಟ್‌ನಲ್ಲಿ ‘ಆಲ್ ದಿ ಬೆಸ್ಟ್ ಇಂಡಿಯಾ’ ಅಂತಾ ಬರೆಯಲಾಗಿದೆ.  ಇದನ್ನೂ ಓದಿ: World Cup 2023: ರಾಜ್ಯದ ಎಲ್ಲಾ ಜಿಲ್ಲಾ ಕ್ರೀಡಾಂಗಣಗಳಲ್ಲಿ ದೊಡ್ಡ ಪರದೆಯಲ್ಲಿ ನೇರಪ್ರಸಾರದ ವ್ಯವಸ್ಥೆ

  • ಬಿಗ್ ಬಾಸ್ ಟ್ರೋಫಿಯನ್ನು ರಾಕೇಶ್ ಅಡಿಗ ಗೆಲ್ಲಬೇಕಿತ್ತು: ಹೀಗೊಂದು ಅಭಿಯಾನ

    ಬಿಗ್ ಬಾಸ್ ಟ್ರೋಫಿಯನ್ನು ರಾಕೇಶ್ ಅಡಿಗ ಗೆಲ್ಲಬೇಕಿತ್ತು: ಹೀಗೊಂದು ಅಭಿಯಾನ

    ನ್ನಡದ ಬಿಗ್ ಬಾಸ್ ಸೀಸನ್ 9ರ ಟ್ರೋಫಿ ರೂಪೇಶ್ ಶೆಟ್ಟಿ ಪಾಲಾಗಿದೆ. ಆ ಟ್ರೋಫಿಯ ಜೊತೆಗೆ ಅವರು ಸಂಭ್ರಮಿಸುತ್ತಿದ್ದಾರೆ. ಆದರೆ, ಈ ಟ್ರೋಫಿ ರಾಕೇಶ್ ಅಡಿಗ ಕೈಯಲ್ಲಿ ಇರಬೇಕಿತ್ತು ಎನ್ನುವ ಅಭಿಯಾನ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಈ ಟ್ರೋಫಿಗೆ ರಾಕೇಶ್ ಅರ್ಹವಾದ ಸ್ಪರ್ಧಿ. ಅವರು 99 ದಿನಗಳ ಕಾಲವೂ ಮನರಂಜಿಸುತ್ತಾ, ಎಲ್ಲರೊಂದಿಗೆ ಬೆರೆಯುತ್ತಾ ಕೋಪ ಮಾಡಿಕೊಳ್ಳದೇ ಆಡಿದ್ದಾರೆ. ಹಾಗಾಗಿ ಟ್ರೋಫಿಗೆ ಅವರು ಅರ್ಹರು ಎಂದು ಸಾಕಷ್ಟು ಜನ ಪೋಸ್ಟ್ ಮಾಡುತ್ತಿದ್ದಾರೆ.

    ಹಾಗಂತ ರೂಪೇಶ್ ಶೆಟ್ಟಿ ಆಟ ಕಳಪೆಯೇನೂ ಇರಲಿಲ್ಲ. ಅವರೂ ಈ ಟ್ರೋಫಿಗೆ ಅರ್ಹರೇ ಆಗಿದ್ದಾರೆ. ಮನೆಯಲ್ಲಿ ಇದ್ದಷ್ಟು ದಿನವೂ ಒಳ್ಳೆಯ ರೀತಿಯಲ್ಲೇ ಆಟವಾಡಿದ್ದಾರೆ. ಪ್ರತಿ ಟಾಸ್ಕ್ ನಲ್ಲೂ ಉತ್ತಮ ಪ್ರದರ್ಶನ ಮಾಡಿದ್ದಾರೆ. ಆದರೆ, ರಾಕೇಶ್ ಗೆ ಇದ್ದ ತಾಳ್ಮೆ ಮತ್ತು ಜಾಣನಡೆ ರೂಪೇಶ್ ಅವರಲಿಲ್ಲ ಇರಲಿಲ್ಲ ಎನ್ನುವುದು ಕೆಲವರ ವಾದ. ಒಂದು ಕಡೆ ರಾಕೇಶ್ ಬೆಂಬಲಿಗರು ಈ ಟ್ರೋಫಿ ರಾಕೇಶ್ ಗೆ ಬರಬೇಕಿತ್ತು ಎಂದರೆ, ಇನ್ನೂ ಹಲವರು ರೂಪೇಶ್ ಗೆಲುವಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ

    ರೂಪೇಶ್ ಶೆಟ್ಟಿ ಸೂಕ್ತ ಸ್ಪರ್ಧಿ ಆಗಿದ್ದರು. ಅವರಿಗೆ ಜನರ ಬೆಂಬಲವೂ ಇತ್ತು. ಸಾಕಷ್ಟು ವೋಟುಗಳನ್ನು ಕೂಡ ಪಡೆದಿದ್ದಾರೆ. ಜನಪ್ರಿಯ ವ್ಯಕ್ತಿ ಕೂಡ ಅವರಿಗಿದ್ದಾರೆ. ಈ ಆಯ್ಕೆಯಲ್ಲಿ ಯಾವುದೇ ಮೋಸ ಅಥವಾ ಅನುಮಾನವಿಲ್ಲ ಎಂದು ರೂಪೇಶ್ ಬೆಂಬಲಿಗರು ಉತ್ತರಿಸುತ್ತಿದ್ದಾರೆ. ಈ ಪರ ಮತ್ತು ವಿರೋಧದ ಪೋಸ್ಟ್ ಗಳು ಸೋಷಿಯಲ್ ಮೀಡಿಯಾದಲ್ಲಿ ತುಂಬಿ ಹೋಗಿವೆ. ಪರಸ್ಪರರು ಪಾಸಿಟಿವ್ ಮತ್ತು ನೆಗೆಟಿವ್ ಕಾಮೆಂಟ್ ಗಳನ್ನು ಹಾಕುತ್ತಾ ವೈರಲ್ ಮಾಡುತ್ತಿದ್ದಾರೆ.

    ರೂಪೇಶ್ ಮತ್ತು ರಾಕೇಶ್ ಇಬ್ಬರೂ ಈ ಟ್ರೋಫಿಗೆ ಅರ್ಹರೇ ಆಗಿದ್ದಾರೆ. ಆದರೆ, ಟ್ರೋಫಿ ಒಬ್ಬರಿಗೆ ಸಿಗಬೇಕು. ಯಾರಿಗೆ ಟ್ರೋಫಿ ಹೋಗಬೇಕು ಎನ್ನುವುದಕ್ಕೆ ಬಿಗ್ ಬಾಸ್ ಗೆ ಅದರದ್ದೇ ಆದ ನಿಯಮಾವಳಿಗಳು ಇರುತ್ತವೆ. ಹೀಗಾಗಿ ರೂಪೇಶ್ ಕೈಯಲ್ಲಿ ಬಿಗ್ ಬಾಸ್ ಗೆಲುವಿನ ಟ್ರೋಫಿ ಇದೆ. ಚರ್ಚೆ ಕೂಡ ಮುಂದುವರೆದಿದೆ.

    Live Tv
    [brid partner=56869869 player=32851 video=960834 autoplay=true]

  • ಭಾರತ-ಕಿವೀಸ್ ಸರಣಿ ಆರಂಭಕ್ಕೂ ಮುನ್ನ ಕಪ್ ಹಿಡಿದು ಹೊರಟ ವಿಲಿಯಮ್ಸನ್

    ಭಾರತ-ಕಿವೀಸ್ ಸರಣಿ ಆರಂಭಕ್ಕೂ ಮುನ್ನ ಕಪ್ ಹಿಡಿದು ಹೊರಟ ವಿಲಿಯಮ್ಸನ್

    ವೆಲ್ಲಿಂಗ್ಟನ್: ಟಿ20 ವಿಶ್ವಕಪ್ (T20 World Cup) ಸೆಮಿಫೈನಲ್‍ನಲ್ಲಿ ಸೋಲಿನ ಬಳಿಕ ನ್ಯೂಜಿಲೆಂಡ್ (New Zealand) ಮತ್ತು ಭಾರತ (India) ತಂಡ ದ್ವಿಪಕ್ಷೀಯ ಸರಣಿಗೆ ಸಿದ್ಧಗೊಂಡಿದೆ. ಕಿವೀಸ್ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ 3 ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿ ಆಡಲಿದೆ.

    ನ.18 ರಿಂದ ಟಿ20 ಸರಣಿ ಆರಂಭವಾಗುತ್ತಿದೆ. ಈ ನಡುವೆ ಸರಣಿ ಆರಂಭಕ್ಕೂ ಮೊದಲೇ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ (Kane Williamson) ಕಪ್ ಹಿಡಿದು ಹೊರಟಿದ್ದಾರೆ. ಇಂದು ಎರಡೂ ತಂಡಗಳ ನಾಯಕರಾದ ವಿಲಿಯಮ್ಸನ್ ಮತ್ತು ಹಾರ್ದಿಕ್ ಪಾಂಡ್ಯ (Hardik Pandya)  ಟಿ20 ಸರಣಿಯ ಟ್ರೋಫಿ ಜೊತೆ ಫೋಟೋ ತೆಗೆಸಿಕೊಂಡರು. ಈ ವೇಳೆ ಫೋಟೋಶೂಟ್‍ಗೂ ಮುನ್ನ ಟ್ರೋಫಿ ಗಾಳಿಗೆ ಹಾರಿದೆ. ಪಕ್ಕದಲ್ಲಿದ್ದ ವಿಲಿಯಮ್ಸನ್ ಕೂಡಲೇ ಬೀಳುತ್ತಿದ್ದ ಟ್ರೋಫಿ ಹಿಡಿದಿದ್ದಾರೆ. ಅಲ್ಲದೆ ಟ್ರೋಫಿ ಜೊತೆ ಹೊರಡಲು ಸಿದ್ಧರಾದಂತೆ ಕಂಡು ಬಂದರು. ಇದನ್ನೂ ಓದಿ: ರಿಟೈನ್ ಪಟ್ಟಿಯಲ್ಲಿ RCB ಗೇಮ್ ಪ್ಲಾನ್ – 10 ತಂಡಗಳ ರಿಟೈನ್-ರಿಲೀಸ್‌ ಲಿಸ್ಟ್

    ಈ ಮೊದಲು ಫೋಟೋಗಾಗಿ ಇಬ್ಬರು ನಾಯಕರು Crocodile Bike ನಲ್ಲಿ ಬಂದರು. ಟಿ20 ಸರಣಿಯ ಮೂರು ಪಂದ್ಯಗಳು ನ.18, 20 ಮತ್ತು 22 ರಂದು ನಡೆಯಲಿದೆ. ಟಿ20 ಸರಣಿಯಲ್ಲಿ ಟೀಂ ಇಂಡಿಯಾವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. 3 ಪಂದ್ಯಗಳ ಏಕದಿನ ಸರಣಿ ನ.25, 27 ಮತ್ತು 30 ರಂದು ನಡೆಯಲಿದ್ದು, ಟೀಂ ಇಂಡಿಯಾವನ್ನು ಶಿಖರ್ ಧವನ್ ಮುನ್ನಡೆಸಲಿದ್ದಾರೆ. ಟಿ20 ಮತ್ತು ಏಕದಿನ ತಂಡಕ್ಕೆ ಪ್ರತ್ಯೇಕ ನಾಯಕರನ್ನು ನೇಮಿಸಲಾಗಿದೆ. ಈ ಸರಣಿಯಿಂದ ರೋಹಿತ್ ಶರ್ಮಾ, ಕೊಹ್ಲಿ ಸಹಿತ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ.

    ಟಿ20 ತಂಡ:
    ಹಾರ್ದಿಕ್ ಪಾಂಡ್ಯ (ನಾಯಕ), ರಿಷಬ್ ಪಂತ್, ಶುಭಮನ್ ಗಿಲ್, ಇಶಾನ್ ಕಿಶನ್, ದೀಪಕ್ ಹೂಡಾ, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಕುಲ್‍ದೀಪ್ ಯಾದವ್, ಅರ್ಶ್‍ದೀಪ್ ಸಿಂಗ್, ಹರ್ಷಲ್ ಪಟೇಲ್ , ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್. ಇದನ್ನೂ ಓದಿ: ಐಪಿಎಲ್‌ಗೆ ಗುಡ್‌ಬೈ ಹೇಳಿದ್ರೂ ಮುಂಬೈ ತಂಡದಲ್ಲೇ ಇರಲಿದ್ದಾರೆ ಪೋಲಾರ್ಡ್‌

    ಏಕದಿನ ತಂಡ:
    ಶಿಖರ್ ಧವನ್ (ನಾಯಕ), ರಿಷಬ್ ಪಂತ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಶಹಬಾಜ್ ಅಹ್ಮದ್, ಯಜುವೇಂದ್ರ ಚಾಹಲ್, ಕುಲ್‍ದೀಪ್ ಯಾದವ್, ಅರ್ಶ್‍ದೀಪ್ ಸಿಂಗ್, ದೀಪಕ್ ಚಾಹರ್, ಕುಲದೀಪ್ ಸೇನ್, ಉಮ್ರಾನ್ ಮಲಿಕ್.

    Live Tv
    [brid partner=56869869 player=32851 video=960834 autoplay=true]

  • ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಗೆಲುವಿನ ಜೋಡಿಗೆ ಸಿಕ್ತು ಭರ್ಜರಿ ಬಹುಮಾನ ಜೊತೆ ಅಪ್ಪು ಟ್ರೋಫಿ

    ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಗೆಲುವಿನ ಜೋಡಿಗೆ ಸಿಕ್ತು ಭರ್ಜರಿ ಬಹುಮಾನ ಜೊತೆ ಅಪ್ಪು ಟ್ರೋಫಿ

    ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ – 6  (Dance Karnataka Dance 6), ಇಡೀ ಕರ್ನಾಟಕವೇ ಮೆಚ್ಚಿ ಮೆರೆಸಿದ ಅದ್ಧೂರಿ ಡ್ಯಾನ್ಸ್ ಶೋ . ಡ್ಯಾನ್ಸಿಂಗ್ ಮಹಾಗುರು ಕರುನಾಡ ಚಕ್ರವರ್ತಿ ಡಾ . ಶಿವರಾಜ್ ಕುಮಾರ್ ಅವರ ಸಾರಥ್ಯದಲ್ಲಿ ಯಶಸ್ವಿಗೊಂಡ ಈ ಕಾರ್ಯಕ್ರಮ ಕಳೆದ ಶನಿವಾರವಷ್ಟೇ ಭರ್ಜರಿಯಾಗಿ ಫಿನಾಲೆ ಮುಗಿಸಿದೆ. ಈ ಸೀಸನ್ ನ ಆರಂಭದಿಂದಲೂ ನೃತ್ಯದ ಅನೇಕ ಪ್ರಯೋಗಗಳಿಂದ ವೀಕ್ಷಕರ ಮನಸೆಳೆದಿದ್ದ ಈ ಶೋ ಕೊನೆಯ ಹಂತದಲ್ಲೂ ಅದನ್ನು ಮುಂದುವರೆಸಿ ದೊಡ್ಡ ಮಟ್ಟದ ಚಪ್ಪಾಳೆ ಪಡೆದುಕೊಂಡಿದೆ. ಅಷ್ಟೇ ಅಲ್ಲದೆ ವಾರದಿಂದ ವಾರಕ್ಕೆ ಸ್ಪರ್ಧಿಗಳ ಧೈರ್ಯ , ಶಿಸ್ತು ಮತ್ತು ಛಲದಿಂದ ಸ್ಪರ್ಧೆ ಕಠಿಣವಾಗುತ್ತಿದ್ದಿದ್ದು ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.

    ಇನ್ನು ಈ ಕಾರ್ಯಕ್ರಮದ ಮತ್ತೊಂದು ವಿಶೇಷವೆಂದರೆ ” ಪವರ್ ಸ್ಟಾರ್ ಟ್ರೋಫಿ ” (Trophy). ಇಡೀ ರಾಜ್ಯದಾದ್ಯಂತ ಸಂಚರಿಸಿ ಅಭಿಮಾನಿಗಳ ಅಪ್ಪುಗೆ (Appu) ಪಡೆದು ಬಂದಿದ್ದ ಈ ಟ್ರೋಫಿಯನ್ನು ಹಾಗು ಅಪ್ಪು ಅವರ ಆಶೀರ್ವಾದವನ್ನು ಪಡೆದಿದ್ದಾರೆ ” ಸಧ್ವಿನ್ – ಶಾರಿಕಾ” ಜೋಡಿ. ಶಿವಣ್ಣ (Shivraj Kumar)ಅವರ ಕೈಯಿಂದ ಈ ಪ್ರಶಸ್ತಿಯನ್ನು ಪಡೆದು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ ಆರರ ವಿಜೇತರಾಗಿದ್ದಾರೆ. ಇದನ್ನೂ ಓದಿ:‘ಸಂಸ್ಕಾರ ಭಾರತ’ದಲ್ಲಿ ಅನಾಮಿಕನ ರೋಚಕ ಸ್ಟೋರಿ

    ಈ ಫಿನಾಲೆ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆಗಟ್ಟಿದವರು ಎಂದರೆ ಇದೇ ಸೆಪ್ಟೆಂಬರ್ 30 ರಂದು ಬಿಡುಗಡೆಯಾಗುತ್ತಿರುವ ನವರಸನಾಯಕ ಜಗ್ಗೇಶ್ (Jaggesh)   , ಅದಿತಿ ಪ್ರಭುದೇವ ಮತ್ತು ನಟ ರಾಕ್ಷಸ ಡಾಲಿ ಧನಂಜಯ ಅಭಿನಯದ ” ತೋತಾಪುರಿ ” ಚಿತ್ರತಂಡ .  ಸೂಪರ್ ಹಿಟ್ ಸಿನಿಮಾ ಸಿದ್ಲಿಂಗು ಖ್ಯಾತಿಯ ಎಂ . ಸಿ . ವಿಜಯ್ ಪ್ರಸಾದ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಸುರೇಶ್ .ಕೆಎ  ಅವರು ಹಣಹೂಡಿಕೆ ಮಾಡಿದ್ದಾರೆ.

    ಫಿನಾಲೆ ಕಾರ್ಯಕ್ರಮದ ವೇದಿಕೆಯಲ್ಲೊಂದು ಸಾರ್ಥಕ ಕ್ಷಣಕ್ಕೆ ಕಾರಣರಾದ ಈ ತಂಡ ಹಾಗು ನಿರ್ಮಾಪಕ ಸುರೇಶ್ ಅವರು ನವರಸ ನಾಯಕ ಜಗ್ಗೇಶ್ ಮತ್ತು ಡಾ . ಶಿವರಾಜ್ ಕುಮಾರ್ ಹಾಗು “ತೋತಾಪುರಿ ” ಚಿತ್ರ ತಂಡದ ಸಮ್ಮುಖದಲ್ಲಿ ಡಿಕೆಡಿ -6 ಕಾರ್ಯಕ್ರಮದ ವಿಶೇಷ ಪ್ರತಿಭೆಗಳಾದ ಹೃಷಿಕೇಶ್ ಮತ್ತು ಸಹನಾ ಜೋಡಿಗೆ ತಲಾ 1 ಲಕ್ಷ ರೂ ವನ್ನು ಬಹುಮಾನವಾಗಿ ನೀಡಿ ಪ್ರೋತ್ಸಾಹಿಸಿದ್ದಾರೆ.

    ಇದೇ ಸೆಪ್ಟೆಂಬರ್ 30 ಕ್ಕೆ ರಾಜ್ಯದಾದ್ಯಂತ ಬಿಡುಗಡೆಯಾಗಿತ್ತಿರುವ ಈ ವಿಶೇಷ ಸಿನಿಮಾಕ್ಕೆ ಅದ್ಧೂರಿಯಾದ ಯಶಸ್ಸು ಸಿಗಲಿ ಕನ್ನಡ ಚಿತ್ರೋದ್ಯಮ , ಚಿತ್ರಪ್ರೇಮಿಗಳು ಇದನ್ನು ಪ್ರೀತಿಯಿಂದ ಒಪ್ಪಿಕೊಂಡು ಅಪ್ಪಿಕೊಳ್ಳಲಿ ಎಂದು ಜೀ ಕನ್ನಡ ವಾಹಿನಿ ಈ ಮೂಲಕ ಆಶಿಸಿ , ಹಾರೈಸುತ್ತದೆ.

    Live Tv
    [brid partner=56869869 player=32851 video=960834 autoplay=true]

  • T20 ವಿಶ್ವಕಪ್‌ಗೂ ಮುನ್ನ ಭಾರತ, ಆಸ್ಟ್ರೇಲಿಯಾ T20 ಸರಣಿ

    T20 ವಿಶ್ವಕಪ್‌ಗೂ ಮುನ್ನ ಭಾರತ, ಆಸ್ಟ್ರೇಲಿಯಾ T20 ಸರಣಿ

    ಮುಂಬೈ: ಅಕ್ಟೋಬರ್-ನವೆಂಬರ್‌ನಲ್ಲಿ ನಿಗದಿಯಾಗಿರುವ 8ನೇ ಆವೃತ್ತಿಯ ಟಿ20 ವಿಶ್ವಕಪ್‌ಗೂ ಮುನ್ನ ತವರಿನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 3 ಟಿ20 ಪಂದ್ಯಗಳ ಸರಣಿ ಆಡಲಿದೆ. ಇದರೊಂದಿಗೆ 2023ರಲ್ಲಿ ಆಸೀಸ್ ತಂಡ ಮತ್ತೊಮ್ಮೆ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದ್ದು, ಫೆಬ್ರವರಿ-ಮಾರ್ಚ್‌ನಲ್ಲಿಯೂ 4 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ ಎಂದು ವರದಿಯಾಗಿದೆ.

    eng ind t20 virat kohli rohit sharma

    ಸದ್ಯ ಆಸ್ಟ್ರೇಲಿಯಾದ ಮುಂದಿನ ಕ್ರಿಕೆಟ್ ಸರಣಿಗಳ ವೇಳಾಪಟ್ಟಿ ಪ್ರಕಾರ, ಆಸೀಸ್ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದ್ದು, 3 ಟಿ20 ಪಂದ್ಯಗಳನ್ನಾಡಲಿದೆ. ಬಳಿಕ ಕೆಲ ದಿನಗಳಲ್ಲೇ ಟಿ20 ವಿಶ್ವಕಪ್ ನಡೆಯಲಿರುವುದರಿಂದ ಉಭಯ ತಂಡಗಳಿಗೂ ಇದು ಮಹತ್ವದ ಸರಣಿ ಎನಿಸಿಕೊಂಡಿದೆ. ಇದನ್ನೂ ಓದಿ: ‘ಸಮ’ಬಲಶಾಲಿಗಳ ಹೋರಾಟದಲ್ಲಿ 62 ರನ್‌ಗಳ ಜಯ – ಪ್ಲೇ ಆಫ್‌ಗೆ ಗುಜರಾತ್ ಟೈಟನ್ಸ್ ಭರ್ಜರಿ ಎಂಟ್ರಿ

    ಐಪಿಎಲ್ ಬಳಿಕ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಜೂ.9ರಿಂದ 19ರ ವರೆಗೆ ತವರಿನಲ್ಲಿ 5 ಪಂದ್ಯಗಳ ಟಿ20 ಸರಣಿ ಆಡಲಿದ್ದು, ನಂತರ 2 ಪಂದ್ಯಗಳ ಟಿ20 ಸರಣಿಗಾಗಿ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಜುಲೈ 1 ರಿಂದ ಇಂಗ್ಲೆಂಡ್ ವಿರುದ್ಧ ಏಕೈಕ ಟೆಸ್ಟ್ ಮತ್ತು 3 ಟಿ20, 3 ಏಕದಿನ ಪಂದ್ಯಗಳನ್ನು ಆಡಬೇಕಿದೆ.

    T20 IND

    2021ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಆಸ್ಟ್ರೇಲಿಯಾ ಈ ಬಾರಿಯ ವಿಶ್ವಕಪ್ ಟೂರ್ನಿಯ ಆತಿಥ್ಯವನ್ನು ವಹಿಸಿಕೊಳ್ಳಲಿದೆ. ಮುಂದಿನ ತಿಂಗಳ ಜೂನ್-ಜುಲೈನಿಂದಲೇ ವಿವಿಧ ದೇಶದ ತಂಡಗಳೊಂದಿಗೆ ಟಿ20, ಟೆಸ್ಟ್ ಹಾಗೂ ಏಕದಿನ ಇನ್ನಿಂಗ್ಸ್ ಪಂದ್ಯಗಳು ಪ್ರಾರಂಭವಾಗಲಿದ್ದು, 2023ರ ಅಕ್ಟೋಬರ್ – ನವಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನೊಂದಿಗೆ ಈ ಆಸ್ಟ್ರೇಲಿಯಾದ ಸರಣಿ ಅಂತ್ಯಗೊಳ್ಳಲಿದೆ. ಇದನ್ನೂ ಓದಿ: ಝೀರೋ.. ಝೀರೋ.. ಝೀರೋ – ಶೂನ್ಯ ಸುತ್ತಿದ ಕೊಹ್ಲಿಗೆ ರಾಕಿಭಾಯ್ ಸ್ಟೈಲ್‌ನಲ್ಲಿ ಟ್ರೋಲ್

    ಕಳೆದ ಬಾರಿಯ ಟೂರ್ನಿಯಿಂದ ಲೀಗ್ ಹಂತದಲ್ಲಿಯೇ ಹೊರಬಿದ್ದಿದ್ದ ಟೀಂ ಇಂಡಿಯಾ ಈ ಬಾರಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಕಣಕ್ಕಿಳಿದು ಟ್ರೋಫಿ ಗೆಲ್ಲುವತ್ತ ಚಿತ್ತ ಹರಿಸಿದೆ.

    T20

    2020ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಭಾರತ ಆಸ್ಟ್ರೇಲಿಯಾವನ್ನು 2 – 1 ಅಂತರದಲ್ಲಿ ಸೋಲಿಸಿ ಸರಣಿಯನ್ನು ವಶಪಡಿಸಿಕೊಂಡಿತ್ತು. ಇಂಡಿಯಾ-ಆಸಿಸ್ ನಡುವೆ ಇದುವರೆಗೆ ಒಟ್ಟು 23 ಟಿ20 ಪಂದ್ಯಗಳು ನಡೆದಿದ್ದು ಈ ಪೈಕಿ ಭಾರತ 13 ಪಂದ್ಯಗಳಲ್ಲಿ ಗೆದ್ದಿದ್ದರೆ, ಆಸ್ಟ್ರೇಲಿಯಾ 9 ಪಂದ್ಯಗಳಲ್ಲಿ ಗೆದ್ದಿದೆ ಉಳಿದ ಒಂದು ಪಂದ್ಯಗಳಲ್ಲಿ ಫಲಿತಾಂಶ ಕಾಣದೇ ಅಂತ್ಯಗೊಂಡಿದೆ.

  • ಹೊಂಡಗುಂಡಿ ರಸ್ತೆಯಲ್ಲಿ ಡರ್ಟ್ ರೇಸ್ ಪ್ರೊಟೆಸ್ಟ್ – ಗೆದ್ದವರಿಗೆ ಟ್ರೋಫಿ ಜೊತೆ ಮುಲಾಮು

    ಹೊಂಡಗುಂಡಿ ರಸ್ತೆಯಲ್ಲಿ ಡರ್ಟ್ ರೇಸ್ ಪ್ರೊಟೆಸ್ಟ್ – ಗೆದ್ದವರಿಗೆ ಟ್ರೋಫಿ ಜೊತೆ ಮುಲಾಮು

    ಉಡುಪಿ: ಕಾರ್ಕಳ ನಗರದ ಸಾಲು, ಸಾಲು ಹೊಂಡದ ರಸ್ತೆಯಲ್ಲಿ ಬೈಕ್ ರೇಸ್ ಮಾಡುವ ಮೂಲಕ ಕಾಂಗ್ರೆಸ್ ವಿಭಿನ್ನವಾಗಿ ಪ್ರತಿಭಟಿಸಿದೆ. ಗೆದ್ದವರಿಗೆ ಟ್ರೋಫಿ ಮತ್ತು ಬೆನ್ನು ನೋವಿಗೆ ಮುಲಾಮು ನೀಡಿ ರಾಜ್ಯ ಸರ್ಕಾರವನ್ನು ಮತ್ತು ಸ್ಥಳೀಯ ಶಾಸಕ, ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಅವರನ್ನು ಕಾಂಗ್ರೆಸ್ ಲೇವಡಿ ಮಾಡಿದೆ.

    ಕಾರ್ಕಳ ನಗರ ಭಾಗದಲ್ಲಿ ಸುಮಾರು 3 ಕಿಲೋಮೀಟರ್ ರಸ್ತೆ ನೂರಾರು ಹೊಂಡ ಗುಂಡಿಗಳಿಂದ ಕೂಡಿದೆ. ಈ ಬಗ್ಗೆ ಸಾಕಷ್ಟು ಬಾರಿ ರಾಜ್ಯ ಸರ್ಕಾರವನ್ನು, ವಿವಿಧ ಇಲಾಖೆಗಳ ಗಮನ ಸೆಳೆದರೂ ಗುಂಡಿಗಳನ್ನು ಮುಚ್ಚಿಸುವ ಕೆಲಸ ಆಗಿಲ್ಲ. ವಿಭಿನ್ನ ರೀತಿಯಲ್ಲಿ ಹಿಂದೆ ಮೂರ್ನಾಲ್ಕು ಬಾರಿ ಪ್ರತಿಭಟನೆ ನಡೆಸಿದರೂ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಂಡಿಲ್ಲ. ಇದನ್ನೂ ಓದಿ: ಮದುವೆ ದಿಬ್ಬಣದ ಬಸ್ ಪಲ್ಟಿ – 2 ಸಾವು, 16 ಮಂದಿಗೆ ಗಾಯ

    ಇಂದು ಕಾರ್ಕಳ ತಾಲೂಕು ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ನೇತೃತ್ವದಲ್ಲಿ ವಿಭಿನ್ನವಾಗಿ ಪ್ರತಿಭಟನೆ ನಡೆಯಿತು. ಹೊಂಡಗುಂಡಿ ರಸ್ತೆಯಲ್ಲಿ ಬೈಕ್ ರೇಸ್ ಆಯೋಜನೆ ಮಾಡುವ ಮೂಲಕ ರಾಜ್ಯ ಸರ್ಕಾರವನ್ನು ಮತ್ತೆ ಸೆಳೆಯುವ ಪ್ರಯತ್ನ ಮಾಡಲಾಗಿದೆ. ಬೈಕ್ ರೇಸ್ ನಲ್ಲಿ ಗೆದ್ದವರಿಗೆ ಬೆನ್ನು ನೋವು ನಿವಾರಣೆಗೆ ಬಳಸುವ ಮುಲಾಮುಗಳನ್ನು ಹಂಚಲಾಯಿತು. ಸುನೀಲ್ ಕುಮಾರ್, ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯ್ತು. ಮಳೆ ನಿಂತಿದೆ ಕೂಡಲೇ ರಸ್ತೆ ದುರಸ್ತಿ ಕಾರ್ಯ ನಡೆಸದಿದ್ದರೆ, ರಸ್ತೆ ತಡೆ ಮಾಡುವುದಾಗಿ ಕಾಂಗ್ರೆಸ್ ನಾಯಕರು ಎಚ್ಚರಿಕೆ ನೀಡಿದರು.

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಶುಭದ್ ರಾವ್, ಅಭಿವೃದ್ಧಿಯ ಮಂತ್ರವನ್ನು ಯಾವಾಗಲೂ ಜಪಿಸುವ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಕಾರ್ಕಳದ ರಸ್ತೆಗಳ ಬಗ್ಗೆ ಯಾಕೆ ಮೌನವಹಿಸಿದ್ದಾರೆ. ಹೊಂಡ ಬಿದ್ದ ರಸ್ತೆಯಲ್ಲಿ ಜನರ ಓಡಾಟ ಎಷ್ಟು ಕಷ್ಟ ಇದೆ ಎಂಬುದು ನಿಮಗೆ ಗೊತ್ತಿದೆಯೇ? ಈಗಾಗಲೇ ಮಳೆ ಕಡಿಮೆಯಾಗಿದೆ ರಸ್ತೆಯ ದುರಸ್ತಿ ಮಾಡಿ ಒಳಚರಂಡಿ ವ್ಯವಸ್ಥೆಯನ್ನು ಸರಿ ಮಾಡಿ ಇಲ್ಲದಿದ್ದರೆ ನಿರಂತರ ಪ್ರತಿಭಟನೆ ಮಾಡುವುದಾಗಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಇಂಡಿಯಾದವ್ರು ಹೆಂಗೆ ಮಂಜಾ ಕೊಡ್ತಾರೆ ನೋಡಿ: ಜಮೀರ್

  • ಟ್ರೋಫಿ ಮಾರಿ ಪಿಎಂ ಪರಿಹಾರ ನಿಧಿಗೆ 4.30 ಲಕ್ಷ ನೀಡಿದ ಗಾಲ್ಫರ್ ಅರ್ಜುನ್

    ಟ್ರೋಫಿ ಮಾರಿ ಪಿಎಂ ಪರಿಹಾರ ನಿಧಿಗೆ 4.30 ಲಕ್ಷ ನೀಡಿದ ಗಾಲ್ಫರ್ ಅರ್ಜುನ್

    – ಕಷ್ಟಪಟ್ಟು ಗೆದ್ದಿದ್ದ 102 ಟ್ರೋಫಿಗಳ ಮಾರಾಟ
    – ದೇಶಕ್ಕೆ ಅಗತ್ಯವಿದ್ದಾಗ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ

    ನವದೆಹಲಿ: ಕೊರೊನಾ ವೈರಸ್ ವಿರುದ್ಧ ಹೋರಾಡಲು ಈಗಾಗಲೇ ಅನೇಕ ಕ್ರಿಡಾಪಟುಗಳು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಇದೀಗ ಭಾರತದ ಗಾಲ್ಫರ್ ಅರ್ಜುನ್ ಭಾಟಿ ತಾವು ಗೆದ್ದ ಟ್ರೋಫಿಗಳನ್ನು ಮಾರಾಟ ಮಾಡಿ ಪಿಎಂ ಕೇರ್ಸ್ ನಿಧಿಗೆ ಹಣ ನೀಡಿದ್ದಾರೆ.

    15 ವರ್ಷದ ಯುವ ಭಾರತೀಯ ಗಾಲ್ಫ್ ಆಟಗಾರ ಅರ್ಜುನ್ ಭಾಟಿ ತಾನು ಕಷ್ಟಪಟ್ಟು ಗೆದ್ದಿದ್ದ ಟ್ರೋಫಿಗಳನ್ನು ಮಾರಾಟ ಮಾಡಿ ಪಿಎಂ ಪರಿಹಾರ ನಿಧಿಗೆ ಬರೋಬ್ಬರಿ 4.30 ಲಕ್ಷ ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದಾರೆ. 3 ವಿಶ್ವ ಗಾಲ್ಫ್ ಚಾಂಪಿಯನ್‍ಶಿಪ್ ಪ್ರಶಸ್ತಿಗಳು ಮತ್ತು ರಾಷ್ಟ್ರೀಯ ಚಾಂಪಿಯನ್‍ಶಿಪ್ ಪ್ರಶಸ್ತಿಗಳು ಸೇರಿದಂತೆ ಎಲ್ಲ ಟ್ರೋಫಿಗಳನ್ನು ಮಾರಾಟ ಮಾಡಿದ್ದಾರೆ.

    ಗ್ರೇಟರ್ ನೋಯ್ಡಾ ಮೂಲದ ಭಾಟಿ ತನ್ನ ಟ್ರೋಫಿಗಳನ್ನು ಸಂಬಂಧಿಕರು ಮತ್ತು ಪೋಷಕರ ಸ್ನೇಹಿತರಿಗೆ ಮಾರಿರುವುದನ್ನು ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ. “ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ದೇಶಕ್ಕೆ ಈಗ ಕಠಿಣ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ನೀವೆಲ್ಲರೂ ದೇಶಕ್ಕೆ ಸಹಾಯ ಮಾಡಲು ಮುಂದೆ ಬರಬೇಕು. ನಿಮ್ಮ ಕೈಯಲ್ಲಿ ಸಾಧ್ಯವಾದಷ್ಟು ಕೊಡುಗೆ ನೀಡಿ” ಎಂದು ಮನವಿ ಮಾಡಿಕೊಂಡಿದ್ದಾರೆ.

    “ಕಳೆದ 8 ವರ್ಷಗಳಲ್ಲಿ ನಾನು 102 ಟ್ರೋಫಿಗಳನ್ನು ಗೆದ್ದಿದ್ದೇನೆ. ನಾನು ಪಿಎಂ ಕೇರ್ಸ್ ನಿಧಿಗೆ 4 ಲಕ್ಷ ಮತ್ತು 30 ಸಾವಿರ ರೂ. ಕೊಡುಗೆ ನೀಡಿದ್ದೇನೆ. ಪ್ರತಿಯೊಬ್ಬರೂ ಈ ಸಮಯವನ್ನು ಬಳಸಿಕೊಳ್ಳಬೇಕು. ಹೀಗಾಗಿ ನೀವು ಸಹಾಯ ಮಾಡುವ ಮೂಲಕ ಮಾದರಿಯಾಗಬೇಕು” ಎಂದು ಹೇಳಿದರು.


    ಕೋವಿಡ್ -19 ವಿರುದ್ಧದ ಭಾರತದ ಹೋರಾಟದಲ್ಲಿ ನನ್ನ ಕೈಲಾದಷ್ಟು ಕೆಲಸ ಮಾಡಲು ನಾನು ಬಯಸಿದ್ದೆ. ಆದರೆ ನನಗೆ ಸ್ವಂತ ಸಂಪಾದನೆಯಿಲ್ಲದ ಕಾರಣ ನನ್ನ ಟ್ರೋಫಿಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ. ಟ್ರೋಫಿಗಳನ್ನು ಮುಂದಿನ ದಿನವೂ ಗೆಲ್ಲಬಹುದು. ಆದರೆ ನನ್ನ ದೇಶಕ್ಕೆ ಅಗತ್ಯವಿರುವಾಗ ನಾನು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಮಾರಕ ಕಾಯಿಲೆಯ ವಿರುದ್ಧ ಹೋರಾಡಲು ಹಣದ ಅಗತ್ಯವಿದೆ ಎಂದು ಮನವಿ ಮಾಡಿಕೊಂಡರು.

    ನನ್ನ ಸಂಬಂಧಿಕರು ಮತ್ತು ನನ್ನ ಪೋಷಕರ ಸ್ನೇಹಿತರು ಟ್ರೋಫಿಗಳನ್ನು ಖರೀದಿಸಿದ್ದಾರೆ. ಟ್ರೋಫಿಗಳು ಇನ್ನೂ ನನ್ನ ಮನೆಯಲ್ಲಿವೆ. ಲಾಕ್‍ಡೌನ್ ಮುಗಿದ ನಂತರ ಅವುಗಳನ್ನು ಅವರವರ ಮನೆಗೆ ತಲುಪಿಸುತ್ತೇನೆ ಎಂದು ಭಾಟಿಯ ಹೇಳಿದರು.

    ಸೂಪರ್ ಸ್ಟಾರ್ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಮೇರಿ ಕೋಮ್ ಮತ್ತು ಸಾನಿಯಾ ಮಿರ್ಜಾ ಸೇರಿದಂತೆ ಅನೇಕ ಕ್ರೀಡಾಪಟುಗಳು ಕೊರೊನಾ ವೈರಸ್ ವಿರುದ್ಧ ಹೋರಾಡಲು ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡಿದ್ದಾರೆ.

  • ಪಾಕ್ `ಬಿಸ್ಕತ್ ಟ್ರೋಫಿ’ ಕಂಡು ಟ್ರೋಲ್ ಮಾಡಿದ ಐಸಿಸಿ!

    ಪಾಕ್ `ಬಿಸ್ಕತ್ ಟ್ರೋಫಿ’ ಕಂಡು ಟ್ರೋಲ್ ಮಾಡಿದ ಐಸಿಸಿ!

    ದುಬೈ: ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವೆ ನಡೆಯಲಿರುವ ಮೂರು ಪಂದ್ಯಗಳ ಟಿ20 ಟೂರ್ನಿಗೆ ಪಿಸಿಬಿ ಟ್ರೋಫಿಯನ್ನು ಅನಾವರಣ ಮಾಡಿದ್ದು, ಟ್ರೋಫಿಯನ್ನು ಕಂಡ ಐಸಿಸಿ ತನ್ನ ಟ್ವಿಟ್ಟರ್‍ನಲ್ಲಿ ಪಾಕ್ ಕ್ರಿಕೆಟ್ ಮಂಡಳಿಯನ್ನು ಟ್ರೋಲ್ ಮಾಡಿದೆ.

    ಆಸೀಸ್ ಹಾಗೂ ಪಾಕ್ ನಡುವಿನ ಟಿಯುಸಿ ಕ್ರಿಕೆಟ್ ಕಪ್ ಟೂರ್ನಿ ಟ್ರೋಫಿಯನ್ನು ಇತ್ತಂಡಗಳ ನಾಯಕರು ಅನಾವರಣ ಮಾಡಿದ್ದು, ಇದರ ಬೆನ್ನಲ್ಲೇ ಟ್ರೋಫಿಯ ಫೋಟೋವನ್ನು ತನ್ನ ಖಾತೆಯಲ್ಲಿ ಟ್ವೀಟ್ ಮಾಡಿರುವ ಐಸಿಸಿ, ಬಿಸ್ಕತ್ ತೆಗೆದುಕೊಳ್ಳುವುದು, ಪಡೆಯುವುದು ಇದರ ಹೊಸ ಆರ್ಥ ಎಂದು ಬರೆದುಕೊಂಡಿದೆ.

    ಅಂದಹಾಗೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಪ್ರಯೋಜನೆ ಮಾಡುತ್ತಿರುವ ಬಿಸ್ಕತ್ ಸಂಸ್ಥೆಯ ಪ್ರಚಾರಕ್ಕಾಗಿ ಟೂರ್ನಿ ಟ್ರೋಫಿಯನ್ನ ಅದೇ ಮಾದರಿಯಲ್ಲಿ ಸಿದ್ಧಪಡಿಸಿದೆ. ಸ್ಟಂಪ್ಸ್, ಬಾಲ್ ಒಳಗೊಂಡಿರುವ ಟ್ರೋಫಿಯ ಮೇಲ್ಭಾಗದಲ್ಲಿ ಬಿಸ್ಕತ್ ಮಾದರಿ ನಿರ್ಮಿಸಲಾಗಿದೆ.

    ಟಿಯುಸಿ ಟ್ರೋಫಿ ಅನಾವರಣಗೊಳ್ಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಟ್ವಿಟ್ಟಿಗರು ಪಿಸಿಬಿಯನ್ನು ಟ್ರೋಲ್ ಮಾಡಿದ್ದು, ಐಸಿಸಿ ಕೂಡ ಚಾಂಪಿಯನ್ಸ್ ಟ್ರೋಫಿ ಫೋಟೋ ಟ್ವೀಟ್ ಮಾಡಿ ಟ್ರೋಲ್ ಮಾಡಿದೆ. ಐಸಿಸಿ ಟ್ವೀಟ್ ಮಾಡುತ್ತಿದಂತೆ ಹಲವು ಮಂದಿ ಮರು ಟ್ವೀಟ್ ಮಾಡಿ ತಮ್ಮದೇ ಅಭಿಪ್ರಾಯವನ್ನು ತಿಳಿಸಿದ್ದಾರೆ. ಪಾಕಿಸ್ತಾನ ಆರ್ಥಿಕ ಸ್ಥಿತಿಗತಿಗಳನ್ನು ಗಮನಿಸಿದರೆ, ಅವರು ಮುಂದಿನ ರೋಟಿ ಕಪ್ ಗೆಲ್ಲುತ್ತಾರೆ ಎಂದು ಪ್ರತಿಭಾ ಎಂಬವರು ಟ್ವೀಟ್ ಮಾಡಿ ಕಾಲೆಳೆದಿದ್ದಾರೆ.

    ಟಿ20 ಸರಣಿಗೂ ಮುನ್ನ ನಡೆದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ 1-0 ಅಂತರದಲ್ಲಿ ಜಯಗಳಿಸಿದ್ದು, ಆಸೀಸ್ ಟಿ20 ಸರಣಿಯಲ್ಲಿ ಕಮ್‍ಬ್ಯಾಕ್ ಮಾಡುವ ಮೂಲಕ ತಿರುಗೇಟು ನೀಡುವ ವಿಶ್ವಾಸದಲ್ಲಿದೆ. ಮೊದಲ ಟಿ20 ಪಂದ್ಯ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv