Tag: Troll

  • ಅಭಿಮಾನಿಗಳಿಗೆ ಖಡಕ್ ವಾರ್ನಿಂಗ್‌ ಕೊಟ್ಟ ವಿಜಯ್ ದಳಪತಿ

    ಅಭಿಮಾನಿಗಳಿಗೆ ಖಡಕ್ ವಾರ್ನಿಂಗ್‌ ಕೊಟ್ಟ ವಿಜಯ್ ದಳಪತಿ

    ಕಾಲಿವುಡ್ ನಟ ವಿಜಯ್ ತಮಿಳುನಾಡು ಸೇರಿದಂತೆ ಭಾರತದ ವಿವಿಧ ಮೂಲೆಗಳಿಂದಲೂ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ವಿಜಯ್ ಸಿನಿಮಾ ರಿಲೀಸ್ ಆಗುತ್ತದೆ ಅಂದರೆ ಅಭಿಮಾನಿಗಳಿಗೆ ಅಂದೊಂದು ರೀತಿಯಲ್ಲಿ ಹಬ್ಬದಂತೆ. ದಳಪತಿ ಎಂದೇ ವಿಜಯ್ ಅವರನ್ನು ಕರೆಯುವ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಒಂದು ವೇಳೆ ಯಾರಾದರೂ ಟ್ರೋಲ್ ಮಾಡಿದರೆ ಎಂದಿಗೂ ಸಹಿಸುವುದಿಲ್ಲ.

    ಕಳೆದ ವರ್ಷ ತಮಿಳುನಾಡಿನ 9 ಜಿಲ್ಲೆಗಳ ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ವಿಜಯ್ ಅವರ 100ಕ್ಕೂ ಹೆಚ್ಚು ಅಭಿಮಾನಿಗಳು ಗೆಲುವು ಸಾಧಿಸುವ ಮೂಲಕ ಭಾರೀ ಸದ್ದು ಮಾಡಿದ್ದರು. ಸದ್ಯ ತಮಿಳುನಾಡಿನಲ್ಲಿ ಪ್ರಬಲ ವ್ಯಕ್ತಿಯಾಗಿ ಹೊರಹೊಮ್ಮುತ್ತಿರುವ ವಿಜಯ್, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಯಾರನ್ನೂ ಟ್ರೋಲ್ ಮಾಡಬೇಡಿ ಎಂದು ತಮ್ಮ ಅಭಿಮಾನಿಗಳ ಸಂಘದ ಸದಸ್ಯರಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:  ಮತ್ಸ್ಯಕನ್ಯೆ ಸ್ಟೈಲ್‍ನಲ್ಲಿ ಸೋನಾಕ್ಷಿ ಫುಲ್ ಮಿಂಚಿಂಗ್ 

    ವಿಜಯ್ ಮಕ್ಕಳ್ ಇಯಕ್ಕಂನ ಪ್ರಧಾನ ಕಾರ್ಯದರ್ಶಿ ಬುಸ್ಸಿ ಆನಂದ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟರ್‌ವೊಂದನ್ನು ಶೇರ್ ಮಾಡಿದ್ದು, ರಾಜಕಾರಣಿಗಳು, ಅಧಿಕಾರಿಗಳು ಅಥವಾ ಯಾರಾದರೂ ಹೇಳಿಕೆಗಳು ಮತ್ತು ಪೋಸ್ಟರ್‌ಗಳನ್ನು ಟ್ರೋಲ್ ಮಾಡುವ ಯಾವುದನ್ನೂ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬೇಡಿ. ದಳಪತಿ ವಿಜಯ್ ಅವರ ಸೂಚನೆಯಂತೆ, ನಮ್ಮ ದಳಪತಿ ಅವರ ಸಲಹೆಗೆ ವಿರುದ್ಧವಾಗಿ ವರ್ತಿಸುವ ಯಾರನ್ನಾದರೂ ಸಂಸ್ಥೆಯಿಂದ ತೆಗೆದುಹಾಕಲಾಗುವುದು ಮತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಾನು ನಿಮಗೆ ತಿಳಿಸುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

     

    ಅಭಿಮಾನಿಗಳಿಂದ ದಳಪತಿ ಎಂದು ಪ್ರೀತಿಯಿಂದ ಕರೆಯಿಸಿಕೊಳ್ಳುವ ವಿಜಯ್ ಅವರು, 2021ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮತಗಟ್ಟೆಗೆ ಸೈಕಲ್ ತುಳಿದುಕೊಂಡು ಬರುವ ಮೂಲಕ ಇಂಧನ ಬೆಲೆ ಏರಿಕೆ ಕುರಿತಂತೆ ಪರೋಕ್ಷವಾಗಿ ಟೀಕಿಸಿದ್ದರು. ಇದನ್ನೂ ಓದಿ: ಕೆಜಿಎಫ್-2 ಬುಕಿಂಗ್ ಯಾವಾಗ ಪ್ರಾರಂಭ?

  • ದತ್ತು ಪುತ್ರಿ ನಿರ್ಲಕ್ಷ್ಯ  – ಟ್ರೋಲಿಗರ ಕಣ್ಣಿಗೆ ಗುರಿಯಾದ ಸನ್ನಿ ಉತ್ತರವೇನು?

    ದತ್ತು ಪುತ್ರಿ ನಿರ್ಲಕ್ಷ್ಯ – ಟ್ರೋಲಿಗರ ಕಣ್ಣಿಗೆ ಗುರಿಯಾದ ಸನ್ನಿ ಉತ್ತರವೇನು?

    ಬಾಲಿವುಡ್ ಮಾದಕ ನಟಿ ಸನ್ನಿಲಿಯೋನ್ ಮೂರುಮಕ್ಕಳ ತಾಯಿಯಾಗಿದ್ದಾರೆ. ಇಬ್ಬರಲ್ಲಿ ಅಶೆರ್ ಹಾಗೂ ನೋಹಾ ಮಕ್ಕಳನ್ನು ಬಾಡಿಗೆ ತಾಯ್ತನದಿಂದ ದಂಪತಿ ಪಡೆದುಕೊಂಡಿದ್ದಾರೆ. ಇಬ್ಬರ ಜೊತೆಗೆ ನಿಶಾ ದತ್ತುಪುತ್ರಿಯಿದ್ದಾಳೆ. ಸನ್ನಿ ಪತಿ ಡೇನಿಯಲ್ ವೆಬಲ್ ಸಹ ಮಕ್ಕಳ ಲಾಲನೆ-ಪಾಲನೆಗೆ ಹೆಚ್ಚು ಸಮಯ ಕೊಡುತ್ತಾರೆ. ಇತ್ತೀಚೆಗೆ ದಂಪತಿ ಮಕ್ಕಳ ಜೊತೆ ಫೋಟೋ ಶೇರ್ ಮಾಡಿಕೊಂಡಿದ್ದು, ದತ್ತುಪುತ್ರಿ ಕೈ ಹಿಡಿದುಕೊಂಡಿರಲಿಲ್ಲ. ಇದನ್ನು ಗಮನಿಸಿದ ನೆಟ್ಟಿಗರು, ಸನ್ನಿ ದತ್ತು ಪುತ್ರಿಯನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಗರಂ ಆಗಿದ್ದಾರೆ. ಈ ಫೋಟೋವನ್ನು ಸಖತ್ ಟ್ರೋಲ್ ಮಾಡುತ್ತಿದ್ದಾರೆ.

    ಡೇನಿಯಲ್ ಮತ್ತು ಸನ್ನಿಗೆ ನಿಶಾ ದತ್ತುಪುತ್ರಿಯಾಗಿರುವ ಕಾರಣ ಅವಳ ಕೈಯನ್ನು ದಂಪತಿ ಹಿಡಿದುಕೊಂಡಿಲ್ಲ ಎಂದು ನೆಟ್ಟಿಗರು ಫುಲ್ ಗರಂ ಆಗಿ ಟ್ರೋಲ್ ಮಾಡಿದ್ದಾರೆ. ಟ್ರೋಲ್‍ನಿಂದ ಬೇಸರಗೊಂಡ ಸನ್ನಿ, ಪೋಷಕರಾದವರಿಗೆ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ಆಲೋಚನೆ ಇರುತ್ತೆ. ಕೇವಲ ಒಂದು ಫೋಟೋ ನೋಡಿ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಿದ್ದಾರೆ ಎಂದು ಅಳಿಯುವುದು ಸರಿಯಲ್ಲ. ನಾವು ನಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೇವೆ. ಅದರಲ್ಲಿಯೂ ಡೇನಿಯಲ್‍ಗೆ ನಿಶಾ ಎಂದರೆ ಪ್ರಾಣ ಎಂದು ಟ್ರೋಲಿಗರಿಗೆ ಉತ್ತರಕೊಟ್ಟಿದ್ದಾರೆ. ಇದನ್ನೂ ಓದಿ: ವರ್ಷಾಂತ್ಯಕ್ಕೆ ನಿರ್ದೇಶನದ ಹೊಸ ಪಯಣ ಮಾಡಲು ರೆಡಿಯಾಗುತ್ತಿದ್ದಾರೆ ಕೃಷ್ಣ ಅಜಯ್ ರಾವ್

     

    View this post on Instagram

     

    A post shared by Sunny Leone (@sunnyleone)

    ಕೆಟ್ಟ ರೀತಿಯ ಕಾಮೆಂಟ್‍ಗಳನ್ನು ನಾನು ಓದುವುದಿಲ್ಲ. ಆದರೆ ಡೇನಿಯಲ್ ಎಲ್ಲ ಕಾಮೆಂಟ್‍ಗಳನ್ನು ಓದುತ್ತಾರೆ. ಇದರಿಂದ ಅವರು ತುಂಬಾ ಬೇಸರಗೊಂಡಿದ್ದಾರೆ. ಆದರೆ ನಾನು ಬೇಸರ ಮಾಡಿಕೊಳ್ಳಬೇಡಿ ಎಂದು ತಿಳಿಸಿದ್ದೇನೆ. ಮಕ್ಕಳ ಬೆಳವಣೆಗೆಗೆ ಉತ್ತಮ ವಾತವರಣ ಇರುವುದು ತುಂಬಾ ಮುಖ್ಯವೆಂದು ನಾನು ಹೇಳಿದ್ದೇನೆ ಎಂದ ಸನ್ನಿ.

  • ಕಿರಿಕ್ ಪ್ರಶ್ನೆಯನ್ನು ಕೇಳಿದ ಅಭಿಮಾನಿಯ ಬಾಯಿ ಮುಚ್ಚಿಸಿದ ಸಮಂತಾ

    ಕಿರಿಕ್ ಪ್ರಶ್ನೆಯನ್ನು ಕೇಳಿದ ಅಭಿಮಾನಿಯ ಬಾಯಿ ಮುಚ್ಚಿಸಿದ ಸಮಂತಾ

    ಹೈದರಾಬಾದ್: ಟಾಲಿವುಡ್ ನಟಿ ಸಮಂತಾ ರುತ್ ಪ್ರಭು ಇತ್ತೀಚಿಗೆ ಸಾಮಾಜಿಕ ಜಾಲತಾಣವೊಂದರಲ್ಲಿ ತಪ್ಪಾದ ಇಂಗ್ಲೀಷ್ ಪದವನ್ನು ಬಳಸಿ ಟ್ರೋಲ್ ಆಗಿದ್ದರು. ಈ ವೇಳೆ ಅನುಚಿತ ಪ್ರಶ್ನೆಯನ್ನು ಕೇಳಿದ್ದ ಟ್ರೋಲಿಗನಿಗೆ ಸಮಂತಾ ಅವರು ಪ್ರತಿಕ್ರಿಯಿಸಿ ನೆಟ್ಟಿಗನ ಬಾಯಿ ಮುಚ್ಚಿಸಿದ್ದಾರೆ.

    ಈ ಹಿಂದೆ ಸಮಂತಾ ಅವರು ಇನ್ಸ್‍ಸ್ಟಾಗ್ರಾಮ್‍ನಲ್ಲಿ ಅಭಿಮಾನಿಗಳಿಗಾಗಿ ‘ಆಸ್ಕ್ ಮಿ ಎನಿಥಿಂಗ್’ ಸೆಷನ್ ಅನ್ನು ಆಯೋಜಿಸಿದ್ದರು. ಇದರಲ್ಲಿ ಅವರು ತಮ್ಮ ಅಭಿಮಾನಿಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಕೆಲವರು ನಟಿಗೆ ಉತ್ತಮ ಪ್ರಶ್ನೆಗಳನ್ನು ಕೇಳಿದರೆ, ಅದರಲ್ಲಿ ಒಬ್ಬರು, ನಾನು ನಿಮ್ಮನ್ನು ಪುನರಾವರ್ತಿಸಲು ಬಯಸುತ್ತೇನೆ ಅಂತ ಕೇಳಿದ್ದಾರೆ. ಇದನ್ನೂ ಓದಿ: ಶಾಕುಂತಲಂ ಫಸ್ಟ್ ಪೋಸ್ಟರ್ ಔಟ್ – ಶಕುಂತಲೆ ರೂಪದಲ್ಲಿ ಸಮಂತಾ ಫುಲ್ ಮಿಂಚಿಂಗ್

    ಇದಕ್ಕೆ ಉತ್ತರಿಸಿದ ಸಮಂತಾ ಅವರು, ಒಂದೇ ವಾಕ್ಯದಲ್ಲಿ ನಿಮಗೆ ಕೇಳುವುದಾದರೆ ರೀಪ್ರೊಡ್ಯೂಸ್ ಅನ್ನು ಹೇಗೆ ಬಳಸುವುದು. ಅದನ್ನು ಮೊದಲು ಗೂಗಲ್ ಮಾಡಬೇಕೇ? ಎಂದಿದ್ದಾರೆ.

    ಮತ್ತೊಬ್ಬ ಅಭಿಮಾನಿ ಸಮಂತಾ ಅವರಿಗೆ ಕೇಳಿದರು, ಭವಿಷ್ಯದಲ್ಲಿ ನೀವು ಚಲನಚಿತ್ರವನ್ನು ನಿರ್ದೇಶಿಸುತ್ತೀರಾ ಅಂತ ಕೇಳಿದ್ದಾರೆ. ಇದಕ್ಕೆ ಅವರು ಈಗಲೇ ಇಲ್ಲ ಇತ್ತೀಚೆಗೆ ನಿರ್ದೇಶನದ ಬಗ್ಗೆ ಕಲಿಯುತ್ತಿದ್ದೇನೆ ಎಂದರು. ಇದನ್ನೂ ಓದಿ: ಈ ಹುಡುಗಿಗೆ ಜಿಮ್ ನಲ್ಲಿ ಸಿಕ್ತಂತೆ ನಟಿಸೋಕೆ ಅವಕಾಶ

     

    View this post on Instagram

     

    A post shared by Samantha (@samantharuthprabhuoffl)

    ಅಂದಹಾಗೆ ನಟಿ ಸಮಂತಾ ಶಕುಂತಲಂ ಸಿನಿಮಾದ ಫಸ್ಟ್ ಲುಕ್ ಪೆÇೀಸ್ಟರ್ ಒಂದನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಹರ್ಷಕ್ಕೆ ಕಾರಣವಾಗಿದೆ. ಹತ್ತಾರು ಹಿಟ್ ಚಿತ್ರಗಳನ್ನು ಕೊಟ್ಟಿರುವ ಸಮಂತಾ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಸಮಂತಾ ಅವರ ಹೊಸ ಚಿತ್ರಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದು, ಇದೀಗ ಶಕುಂತಲಂ ಈ ಕುತೂಹಲವನ್ನು ಮತ್ತಷ್ಟು ಹೆಚ್ಚು ಮಾಡಿದೆ.

  • ಕರ್ನಾಟಕದಲ್ಲಿ ಹಿಜಬ್ ವಿವಾದ ಬೆನ್ನಲ್ಲೇ ಸ್ವರಾ ಭಾಸ್ಕರ್ ಟ್ರೋಲ್

    ಕರ್ನಾಟಕದಲ್ಲಿ ಹಿಜಬ್ ವಿವಾದ ಬೆನ್ನಲ್ಲೇ ಸ್ವರಾ ಭಾಸ್ಕರ್ ಟ್ರೋಲ್

    ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಸಾಕಷ್ಟು ಧ್ವನಿ ಎತ್ತುತ್ತಿರುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಇತ್ತೀಚೆಗೆ ಕರ್ನಾಟಕದಲ್ಲಿ ಹಿಜಬ್ ವಿವಾದಕ್ಕೆ ಸಂಬಂಧಿಸಿದಂತೆ ಅವರ ಡ್ರೆಸ್ಸಿಂಗ್ ಶೈಲಿಗಾಗಿ ಟ್ರೋಲ್ ಆಗಿದ್ದಾರೆ.

    ಟ್ವಿಟರ್ ಬಳಕೆದಾರರು ಸಂದರ್ಶನವೊಂದರಲ್ಲಿ ಸ್ವರಾ ಅವರು ಸಣ್ಣ ಉಡುಗೆ ತೊಟ್ಟ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದಕ್ಕೆ @Reallyswara ನನ್ನ ಸ್ನೇಹಿತರು, ಅವರು ಹಿಜಬಗಾಗಿ ಪ್ರತಿಪಾದಿಸುತ್ತಿದ್ದಾರೆ ಎಂದು ಬರೆದಿದ್ದಾರೆ. ಇದನ್ನು ಓದಿ : ಈ ವಾರ 10 ಚಿತ್ರಗಳು ರಿಲೀಸ್ : ಯಾವುದು ನೋಡ್ಬೇಕು, ಯಾವುದು ಬಿಡ್ಬೇಕು?

    ಟ್ರೋಲ್‍ಗೆ ಪ್ರತಿಕ್ರಿಯಿಸಿದ ಅವರು, ಹೌದು ಇದು ನಾನೇ ನೋಡಲು ಬಾಂಬ್ ಆಗಿ ಕಾಣಿಸುತ್ತಿದೆ ಧನ್ಯವಾದಗಳು! ನನ್ನ ಈ ಚಿತ್ರವನ್ನು ಹಂಚಿಕೊಂಡಿದ್ದಕ್ಕಾಗಿ. ನಾನು ಕೂಡ ಹಾಟ್ ಎಂದು ಜಗತ್ತಿಗೆ ನೆನಪಿಸಿದ್ದಕ್ಕಾಗಿ ಧನ್ಯವಾದಗಳು! ನಾನು ಮಹಿಳೆಯರ ಹಕ್ಕನ್ನು ಪ್ರತಿಪಾದಿಸುತ್ತೇನೆ. ನನ್ನ ಉಡುಪನ್ನು ಆಯ್ಕೆ ಮಾಡಲು ನಿಮಗೆ ಗೊತ್ತಾ, ಯಾರಾದರೂ ಇದ್ದೀರಾ ಆದರೂ ಪರವಾಗಿಲ್ಲ ಇರಲಿ ಬಿಡಿ. ನೀವು ಹೋಗಿ ಬೇರೆಯವರನ್ನು ನಾಚಿಕೆಪಡಿಸಿ. ನನ್ನನ್ನು ನಾಚಿಸಲು ನೀವು ವಿಫಲರಾಗಿದ್ದೀರಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.   ಇದನ್ನೂ ಓದಿ : ರಮ್ಯಾಗಾಗಿ ಕಾದ ದಿಲ್ ಕಾ ರಾಜಾ

    ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ವಿದ್ಯಾರ್ಥಿಗಳನ್ನು ವಿಭಜಿಸಿ ರಾಜ್ಯದಲ್ಲಿ ಪ್ರತಿಭಟನೆಗೆ ಕಾರಣವಾದ ಹಿಜಬ್ ವಿವಾದದ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಫೆಬ್ರವರಿ 17 ರಿಂದ ಪ್ರಾರಂಭಿಸಿದೆ. ಇದು ಸತತ ಐದನೇ ದಿನದ ಕಲಾಪವನ್ನು ಸೂಚಿಸುತ್ತಿದೆ.

    ಕಳೆದ ವರ್ಷ 2021ರ ಸೊಹೊ ಲಂಡನ್ ಇಂಡಿಪೆಂಡೆಂಟ್ ಫಿಲ್ಮ್ ಫೆಸ್ಟಿವಲ್‍ನಲ್ಲಿ ಶೀರ್ ಖೋರ್ಮಾದಲ್ಲಿ ಸಿತಾರಾ ಪಾತ್ರಕ್ಕಾಗಿ ಸ್ವರಾ ಅವರು ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದರು. ನಟಿ ತನು ವೆಡ್ಸ್ ಮನು, ನಿಲ್ ಬತ್ತೆ ಸನ್ನತ, ರಾಂಜನಾ ಮತ್ತು ವೀರೆ ದಿ ವೆಡ್ಡಿಂಗ್‍ನಂತಹ ಜನಪ್ರಿಯ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  • ನೆಟ್ಟಿಗರಿಂದ ಟ್ರೋಲ್ ಆಯ್ತು ಎಸ್‍ಆರ್‌ಹೆಚ್ ಹೊಸ ಜೆರ್ಸಿ

    ನೆಟ್ಟಿಗರಿಂದ ಟ್ರೋಲ್ ಆಯ್ತು ಎಸ್‍ಆರ್‌ಹೆಚ್ ಹೊಸ ಜೆರ್ಸಿ

    ಹೈದರಾಬಾದ್: ಸನ್‍ರೈಸರ್ಸ್ ಹೈದರಾಬಾದ್ (ಎಸ್‍ಆರ್‌ಹೆಚ್) ತಂಡದ ಹೊಸ ಜೆರ್ಸಿಯನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

    ಎಸ್‍ಆರ್‌ಹೆಚ್ ತಮ್ಮ ಹೊಸ ಜೆರ್ಸಿಯಲ್ಲೂ ತಮ್ಮ ಆರೆಂಜ್ ಗುರುತನ್ನು ಉಳಿಸಿಕೊಂಡಿದೆ. ಕೆಳಭಾಗವು ಸಂಪೂರ್ಣವಾಗಿ ಕಿತ್ತಳೆ ಬಣ್ಣದ್ದಾಗಿದ್ದರೆ ಜೆರ್ಸಿಯ ತೋಳುಗಳು ಕಿತ್ತಳೆ ಬಣ್ಣದಲ್ಲಿ ಚುಕ್ಕೆಗಳೊಂದಿಗೆ ಕಪ್ಪು ಬಣ್ಣದಲ್ಲಿದೆ. ಇದನ್ನೂ ಓದಿ: ಇನ್‍ಸ್ಟಾಗ್ರಾಮ್‍ನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊಗೆ 40 ಕೋಟಿ ಫಾಲೋವರ್ಸ್ – ನಂ.1

    ಈ ಹೊಸ ನೋಟದ ಜರ್ಸಿಯನ್ನು ಬಹುಪಾಲು ಎಸ್‍ಆರ್‌ಹೆಚ್ ಅಭಿಮಾನಿಗಳು ಮೆಚ್ಚಿಲ್ಲ. ಕೆಲವರು ಇದನ್ನು ಸ್ವಿಗ್ಗಿ ಫುಡ್ ಅಪ್ಲಿಕೇಶನ್ ವೇರ್‌ನ ಟಿ-ಶರ್ಟ್‍ಗಳ ವಿತರಣಾ ಕಾರ್ಯನಿರ್ವಾಹಕರ ಪ್ರತಿರೂಪ ಎಂದು ಟ್ರೋಲ್ ಮಾಡಿದ್ದಾರೆ. ಇದನ್ನೂ ಓದಿ: ಭಾರತ vs ವೆಸ್ಟ್ ಇಂಡೀಸ್ 2ನೇ ಏಕದಿನ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಕಾಣಿಸಿಕೊಂಡ ವಿಶೇಷ ಅತಿಥಿಗಳು

    ತಂಡದ 25 ಮಂದಿ ಆಟಗಾರ ಪೈಕಿ ಎಸ್‍ಆರ್‌ಹೆಚ್ ತಂಡವು ಕೇನ್ ವಿಲಿಯಮ್ಸನ್ (14 ಕೋಟಿ ರೂ.), ಅಬ್ದುಲ್ ಸಮದ್ (4 ಕೋಟಿ ರೂ.), ಉಮ್ರಾನ್ ಮಲಿಕ್ (4 ಕೋಟಿ ರೂ.) ನೀಡಿ ತಂಡದಲ್ಲಿಯೇ ಉಳಿಸಿಕೊಂಡಿದೆ. ಒಟ್ಟು 22 ಮಂದಿ ಆಟಗಾರರ ಪೈಕಿ 7 ಮಂದಿ ವಿದೇಶಿ ಆಟಗಾರರನ್ನು ಖರೀದಿಸಬಹುದು.

  • ಟ್ರೋಲಿಗರಿಗೆ ಖಡಕ್ ವಾರ್ನಿಂಗ್ ಕೊಟ್ಟ ಅಮೀರ್ ಪುತ್ರಿ ಇರಾ – ಸೋನಾ ಮೋಹಪತ್ರಾ ಸಾಥ್

    ಟ್ರೋಲಿಗರಿಗೆ ಖಡಕ್ ವಾರ್ನಿಂಗ್ ಕೊಟ್ಟ ಅಮೀರ್ ಪುತ್ರಿ ಇರಾ – ಸೋನಾ ಮೋಹಪತ್ರಾ ಸಾಥ್

    ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಮತ್ತು ಅವರ ಮಾಜಿ ಪತ್ನಿ ರೀನಾ ದತ್ತಾ ಅವರ ಪುತ್ರಿ ಇರಾ ಖಾನ್ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯರಾಗಿರುತ್ತಾರೆ. ಈ ವೇಳೆ ಇರಾ ಟ್ರೋಲ್ ಆಗಿದ್ದು, ಅದಕ್ಕೆ ಅವರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಗಾಯಕಿ ಸೋನಾ ಮೋಹಪತ್ರಾ ಸಹ ಇರಾಗೆ ಸಾಥ್ ಕೊಟ್ಟಿದ್ದಾರೆ.

    ಅಮೀರ್ ಖಾನ್ ಅವರ ಮಗಳು ಇರಾ ಅವರನ್ನು ಟ್ರೋಲಿಗರು, ಇರಾ ಅವರು ವಯಸ್ಸಾದವರು. ಹಂದಿಯಂತಹ ಮುಖವನ್ನು ಹೊಂದಿದ್ದಾರೆ ಎಂದು ಅಪಹಾಸ್ಯ ಮಾಡಿದ್ದರು. ಈ ಟ್ರೋಲ್ ಗೆ ಪ್ರತಿಕ್ರಿಯಿಸಿದ ಇರಾ ವೀಡಿಯೋ ಮಾಡಿ ಪೋಸ್ಟ್ ಮಾಡಿದ್ದು, ನಾನು ಸಾರ್ವಜನಿಕವಾಗಿ ಮಾನಸಿಕ ಸಮಸ್ಯೆಗಳನ್ನು ಹಂಚಿಕೊಳ್ಳುವ ಬಗ್ಗೆ ಮಾತನಾಡುತ್ತಿದ್ದೇನೆ. ನೀವು ಏಕೆ ಈ ರೀತಿ ಟ್ರೋಲ್ ಮಾಡುತ್ತಿದ್ದೀರಾ ಎಂದು ನಿಮಗೆ ತಿಳಿದಿರಲಿ. ಸಾರ್ವಜನಿಕವಾಗಿ ಈ ರೀತಿ ಸಮಸ್ಯೆಗಳ ಬಗ್ಗೆ ಮಾತನಾಡುವುದು ತುಂಬಾ ಮುಖ್ಯ. ಈ ಬಗ್ಗೆ ಮಾತನಾಡುವುದು ಮತ್ತು ಮಾನಸಿಕ ಆರೋಗ್ಯವನ್ನು ಸಾಮಾನ್ಯಗೊಳಿಸುವುದು ಮುಖ್ಯ. ನಿಮ್ಮ ಬಗ್ಗೆ ನೀವು ಮೊದಲು ಹೋರಾಡಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:  ಸಹೋದರನೊಂದಿಗೆ ಸಾರಾ ಅಲಿ ಖಾನ್ ಕಾಶ್ಮೀರ ಟ್ರಿಪ್

    ನಿಮ್ಮ ಸಮಸ್ಯೆಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ ಎಂದು ನಾನು ಎಲ್ಲರಿಗೂ ಹೇಳುವುದಿಲ್ಲ. ಅದನ್ನು ನಾನು ತೀರ್ಮಾನಿಸುವುದಿಲ್ಲ. ಸಾರ್ವಜನಿಕವಾಗಿ ಹಂಚಿಕೊಳ್ಳಲು ಆಸಕ್ತಿಯಿಲ್ಲದ ಸಾಕಷ್ಟು ಬುದ್ಧಿವಂತ, ಧೈರ್ಯಶಾಲಿ ಜನರನ್ನು ನಾನು ಬಲ್ಲೆ. ಸೊಶಿಯಲ್ ಮೀಡಿಯಾದಲ್ಲಿ ದ್ವೇಷ ಮತ್ತು ಕಾಮೆಂಟ್‍ಗಳಿಂದ ತೊಂದರೆಗೊಳಗಾಗುವ ಸಾಕಷ್ಟು ಬುದ್ಧಿವಂತ, ಧೈರ್ಯಶಾಲಿ ಜನರನ್ನು ನಾನು ಬಲ್ಲೆ. ಆದ್ದರಿಂದ ಅವರು ತಮ್ಮ ಅಮೂಲ್ಯ ಶಕ್ತಿಯನ್ನು ಬೇರೆಡೆ ಕೇಂದ್ರೀಕರಿಸುತ್ತಾರೆ. ಟೇಕ್ ಕೇರ್ ಎಂದು ಟ್ರೋಲಿಗರಿಗೆ ಖಡಕ್ ಆಗಿ ಹೇಳಿದ್ದಾರೆ.

     

    View this post on Instagram

     

    A post shared by Ira Khan (@khan.ira)

    ಗಾಯಕಿ ಸೋನಾ ಮೋಹಪತ್ರಾ ಈ ಪೋಸ್ಟ್ ಗೆ ‘ಗುಡ್, ಗೊಂಬೆ’ ಎಂದು ಬರೆದು ಕಾಮೆಂಟ್ ಮಾಡಿದ್ದಾರೆ. ಟ್ರೋಲಿಗರಿಗೆ, ನಿಮ್ಮ ಈ ರೀತಿಯ ಪೋಸ್ಟ್ ಅನುಭವಿಸುವವರಿಗೆ ವಿಷದ ರೀತಿ ಇರುತ್ತೆ. ಹೋಗಿ ಏನಾದರೂ ಕೆಲಸ ಕಲಿಯಿರಿ. ನಿಮ್ಮ ಹೆತ್ತವರಿಗೆ ಅವಮಾನ ಮಾಡಬೇಡಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ನಿದ್ದೆಗಳಿಲ್ಲದ ರಾತ್ರಿ ಕಳೆಯಲು ಸಿದ್ಧರಾಗಿ – ಪ್ರಿಯಾಂಕಾಗೆ ಅನುಷ್ಕಾ ಶರ್ಮಾ ವಿಶ್

    ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಇರಾ ಆಗಾಗ್ಗೆ ತಾನು ಅನುಭವಿಸಿದ ಮಾನಸಿಕ ಖಿನ್ನತೆ ಮತ್ತು ಇತರ ಸಮಸ್ಯೆಗಳ ಬಗ್ಗೆ ಪೋಸ್ಟ್ ಮಾಡುತ್ತಿರುತ್ತಾರೆ. ಈ ಕಾರಣದಿಂದ ಇರಾ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತಾರೆ.

  • ವಾಶ್‌ರೂಂ ಹೋಗೋ ಅರ್ಜೆಂಟಲ್ಲಿದ್ದಾರೆ – ಕಾಜೊಲ್ ಟ್ರೋಲ್ ಮಾಡಿದ ನೆಟ್ಟಿಗರು

    ವಾಶ್‌ರೂಂ ಹೋಗೋ ಅರ್ಜೆಂಟಲ್ಲಿದ್ದಾರೆ – ಕಾಜೊಲ್ ಟ್ರೋಲ್ ಮಾಡಿದ ನೆಟ್ಟಿಗರು

    ಮುಂಬೈ: ಬಾಲಿವುಡ್‌ನ ಖ್ಯಾತ ನಟಿಯರಲ್ಲಿ ಕಾಜೊಲ್ ಅವರು ಕೂಡ ಒಬ್ಬರು. ಇತ್ತೀಚೆಗೆ ಕಾಜೊಲ್ ವಿಭಿನ್ನ ರೀತಿಯಲ್ಲಿ ಟ್ರೋಲ್ ಆಗುತ್ತಿದ್ದಾರೆ. ಕಾಜೊಲ್ ಅವರ ನಡೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

    ಭಾನುವಾರದಂದು ಕಾಜೊಲ್ ಅವರು ಏರ್‌ಪೋರ್ಟ್ನಲ್ಲಿ ಬರುವಾಗ ಈ ವೀಡಿಯೋವನ್ನು ಮಾಡಲಾಗಿದೆ. ಈ ವೀಡಿಯೋದಲ್ಲಿ ವೇಗವಾಗಿ ಹೆಜ್ಜೆ ಹಾಕುತ್ತಿದ್ದ ನಟಿ ಯಾವುದೋ ಆತುರದಲ್ಲಿದ್ದಂತೆ ಕಾಣುತ್ತಿದ್ದರು. ಈ ಬಗ್ಗೆ ನೆಟ್ಟಿಗರು ಸಿಕ್ಕಾಪಟೆ ಟ್ರೋಲ್ ಮಾಡಿದ್ದಾರೆ. ಈ ಫೋಟೋವನ್ನು ಇನ್‌ಸ್ಟಾಗ್ರಾಂ ಖಾತೆಯ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ. ಅದಕ್ಕೆ ‘ರಾಜಧಾನಿ ಎಕ್ಸ್ಪ್ರೆಸ್’ ಎಂದು ಶೀರ್ಷಿಕೆಯನ್ನು ನೀಡಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ಈ ವೀಡಿಯೋವನ್ನು ನೋಡಿದ ಒಬ್ಬರು ಕಾಮೆಂಟ್ ಮಾಡಿ ವಾಶ್‌ರೂಂಗೆ ಹೋಗುವ ಅರ್ಜೆಂಟ್‌ನಲ್ಲಿ ವೇಗವಾಗಿ ಹೆಜ್ಜೆ ಹಾಕುತ್ತಿದ್ದಾರೆ ಎಂದರೆ, ಮತ್ತೊಬ್ಬರೂ ಮೆಕಪ್ ಇಲ್ಲದೇ ಹೊರ ಬಂದಿದ್ದಾರೆ ಎಂದು ಹೇಳಿದ್ದಾರೆ. ಮನೆಯನ್ನು ಸ್ವಚ್ಛಗೊಳಿಸುವ ಟೆನ್ಶನ್‌ಲ್ಲಿದ್ದಾರೆ ಎಂದು ಇನ್ನೊಬ್ಬರು ಬರೆದಿದ್ದಾರೆ.

    ವೀಡಿಯೋದಲ್ಲಿ ಕಾಜೊಲ್ ಹಳದಿ ಬಣ್ಣದ ದುಪ್ಪಟ್ಟವನ್ನು ಹೊದ್ದು ಏರ್‌ಪೋರ್ಟ್ನಿಂದ ಬರುತ್ತಿದ್ದಾರೆ. ಅವರು ವೇಗವಾಗಿ ಹಜ್ಜೆ ಹಾಕಿ, ಯಾರ ಮಾತಿಗೂ ಲಕ್ಷ್ಯ ಕೊಡದೇ ಹಾಗೇ ಕಾರನ್ನು ಹತ್ತಿರುವ ದೃಶ್ಯವನ್ನು ವೀಡಿಯೋದಲ್ಲಿ ನೋಡಬಹುದು. ಇದನ್ನೂ ಓದಿ: ಭಾರೀ ಮಳೆಗೆ ಮಲೇಷ್ಯಾದ 7 ರಾಜ್ಯಗಳಲ್ಲಿ ಪ್ರವಾಹ – ಸಾವಿರಾರು ಮಂದಿ ಪಲಾಯನ

    ಈ ಹಿಂದೆ ಕಾಜೊಲ್ ಅವರ ಹುಟ್ಟುಹಬ್ಬದ ದಿನ ಟ್ರೋಲ್‌ಗೆ ಒಳಗಾಗಿದ್ದರು. ಅಭಿಮಾನಿಗಳು ಆಕೆಯ ಹುಟ್ಟುಹಬ್ಬಕ್ಕೆ ಶುಭಾಶಯ ಕೊರಲು ಆಗಮಿಸಿದ್ದರು. ಆಗ ಅವರಿಗೆ ಧನ್ಯವಾದವನ್ನು ತಿಳಿಸದೇ ಕೇಕ್ ಕಟ್ ಮಾಡಿ ಹಾಗೆ ಬಂಗಲೆಯೊಳಗೆ ತೆರಳಿದ್ದರು. ಆಕೆಯ ವರ್ತನೆಗೆ ಆಗ ನೆಟ್ಟಿಗರಿಂದ ಭಾರೀ ಟ್ರೋಲ್ ಮಾಡಿದ್ದರು. ಇದನ್ನೂ ಓದಿ: ಜನ ಸಹಕಾರ ಕೊಡದಿದ್ದರೆ ಲಾಕ್‍ಡೌನ್ ಅನಿವಾರ್ಯ: ಆರಗ ಜ್ಞಾನೇಂದ್ರ

    1999ರಲ್ಲಿ ನಟ ಅಜಯ್ ದೇವಗನ್ ಅವರನ್ನು ವಿವಾಹವಾಗಿದ್ದರು. ಈ ಜೋಡಿ ಇಷ್ಕ್, ಗುಂಡರಾಜ್, ಪ್ಯಾರ್ ತೋ ಹೋನಾ ಹಿ ಥಾ ಮತ್ತು ಯು ಮೆ ಔರ್ ಹಮ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಕಳೆದ ಬಾರಿ, ಅವರು 2020 ರಲ್ಲಿ ಬಿಡುಗಡೆಯಾದ ತನ್ಹಾಜಿ ದಿ ಅನ್‌ಸಂಗ್ ವಾರಿಯರ್‌ನಲ್ಲಿ ಈ ಜೋಡಿ ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

  • ರಸ್ತೆಯಲ್ಲಿದ್ದ ಸಸಿ ಕಿತ್ತುಕೊಂಡು ನೆಟ್ಟಿಗರ ಕಣ್ಣಿಗೆ ಗುರಿಯಾದ ಮಹಿಳೆಯರು – ವೀಡಿಯೋ ವೈರಲ್

    ರಸ್ತೆಯಲ್ಲಿದ್ದ ಸಸಿ ಕಿತ್ತುಕೊಂಡು ನೆಟ್ಟಿಗರ ಕಣ್ಣಿಗೆ ಗುರಿಯಾದ ಮಹಿಳೆಯರು – ವೀಡಿಯೋ ವೈರಲ್

    ನವದೆಹಲಿ: ಕಾರಿನಲ್ಲಿ ಬಂದ ಮಹಿಳೆಯರು ರಸ್ತೆಬದಿಯಲ್ಲಿದ್ದ ಸಸಿಯನ್ನು ಕಿತ್ತುಕೊಂಡು ಹೋಗಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರ ಕಣ್ಣಿಗೆ ಗುರಿಯಾಗಿದೆ.

    ವೀಡಿಯೋ ನೋಡಲು ಹಾಸ್ಯಸ್ಪದವಾಗಿದ್ದು, ಕಾರಿನಲ್ಲಿ ಬಂದ ಇಬ್ಬರು ಮಹಿಳೆಯರು ಸುಮ್ಮನೆ ರಸ್ತೆಯಲ್ಲಿ ಹೋಗುತ್ತಿರುವಂತೆ ನಟಿಸುತ್ತಾ, ನೋಡನೋಡುತ್ತಿದ್ದಂತೆ ರಸ್ತೆ ಪಕ್ಕದಲ್ಲಿದ್ದ ಸಸಿಯನ್ನು ಕಿತ್ತುಕೊಂಡು ಹೋಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೆಟ್ಟಿಗರ ಕಣ್ಣಿಗೆ ಗುರಿಯಾಗಿದೆ. ಇದನ್ನೂ ಓದಿ: ಕೊಡಗಿನಾದ್ಯಂತ ಕಳೆಗಟ್ಟಿದ ಪುತ್ತರಿ ಸಂಭ್ರಮ

    ಇನ್‍ಸ್ಟಾಗ್ರಾಮ್‍ನಲ್ಲಿ ಮೀಮ್ ಪೇಜ್ ಈ ವೀಡಿಯೋವನ್ನು ಟ್ರೋಲ್ ಮಾಡಿ, ಕಾಮಿಡಿ ಎಫೆಕ್ಟ್ ಕೊಟ್ಟು ‘ಬಾಡೆ ಲಾಗ್’ ಎಂದು ಬರೆದು ಪೋಸ್ಟ್ ಮಾಡಿದೆ. ಅದು ಅಲ್ಲದೇ ವೀಡಿಯೋ ಮೇಲೆಯೂ ‘ಸರ್ಕಾರಿ ಪೌಢ ಭೀ ಸೇಫ್ ನಹೀ'(ಸರ್ಕಾರಿ ಸಸ್ಯವೂ ಸಹ ಸುರಕ್ಷಿತವಲ್ಲ) ಎಂದು ಬರೆದು ಪೋಸ್ಟ್ ಮಾಡಲಾಗಿದೆ. ಈ ವೀಡಿಯೋ ನೋಡಿದ ವೀಕ್ಷಕರು ಫುಲ್ ಎಂಜಾಯ್ ಮಾಡುತ್ತಿದ್ದು, ನಗುವಿನ ಎಮೋಜಿಗಳನ್ನು ಕಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಈ ಇಬ್ಬರು ಮಹಿಳೆಯರು ಕಾರಿನಲ್ಲಿ ಪ್ರಯಾಣಿಸಲು ಅರ್ಹರಲ್ಲ ಎಂದು ಕಮೆಂಟ್ ಮಾಡಿದ್ದಾರೆ.

     

    View this post on Instagram

     

    A post shared by MEMES.BKS???????? (@memes.bks)

    ಸಿಸಿಟಿವಿ ದೃಶ್ಯದಲ್ಲಿ, ತಡರಾತ್ರಿ ರಸ್ತೆ ಬದಿಯಲ್ಲಿ ಕಾರೊಂದು ನಿಲ್ಲಿಸಲಾಗುತ್ತೆ. ಕಾರಿನಿಂದ ಹೊರಬಂದ, ಕಪ್ಪು ಡ್ರೆಸ್ ಧರಿಸಿದ ಮಹಿಳೆಯೊಬ್ಬರು ರಸ್ತೆಯಲ್ಲಿ ಅಡ್ಡಾಡಿದಂತೆ ಪಾದಚಾರಿ ಮಾರ್ಗದ ಮೇಲೆ ನಡೆಯುತ್ತಾ ಬರುತ್ತಾರೆ. ಅದು ಅಲ್ಲದೇ ಆ ಮಹಿಳೆ ಜೊತೆಯಲ್ಲಿ ಗುಲಾಬಿ ಬಣ್ಣದ ಬಟ್ಟೆಯನ್ನು ಧರಿಸಿರುವ ಇನ್ನೊಬ್ಬರು ಮಹಿಳೆ ಇರುತ್ತಾರೆ. ಕಪ್ಪು ವಸ್ತ್ರದ ಮಹಿಳೆ ಪಾದಚಾರಿ ಮಾರ್ಗದಲ್ಲಿ ಬೆಳೆದಿದ್ದ ಸಸ್ಯವನ್ನು ನೋಡ ನೋಡುತ್ತಿದ್ದಂತೆ ಕಿತ್ತು ಅದನ್ನು ಕಾರಿಗೆ ಒಯ್ಯುತ್ತಾಳೆ. ನಂತರ ಕಾರು ಅಲ್ಲಿಂದ ಹೊರಟು ಹೋಗುತ್ತೆ. ಈ ಪೂರ್ತಿ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇನ್ನು ಮುಂದೆ ರಸ್ತೆಯಲ್ಲಿ ಇರುವ ಸಸಿಗಳಿಗೂ ಸೇಫ್ ಇಲ್ಲ ಎಂದು ಎಲ್ಲರೂ ಮಹಿಳೆಯರನ್ನು ಹಾಸ್ಯಸ್ಪದವಾಗಿ ನೋಡುತ್ತಿದ್ದಾರೆ. ಇದನ್ನೂ ಓದಿ: ನೀನು ನನ್ನ ಮಗ ಎಂದು ಹೇಳಲು ಹೆಮ್ಮೆ ಪಡುತ್ತೇನೆ: ಬಿಗ್ ಬಿ

  • ಟ್ರೋಲ್ ಪೇಜ್ ಅಡ್ಮಿನ್ ವಿರುದ್ಧ ಜೆಡಿಎಸ್‍ನಿಂದ ಪೊಲೀಸ್ ಆಯುಕ್ತರಿಗೆ ದೂರು

    ಟ್ರೋಲ್ ಪೇಜ್ ಅಡ್ಮಿನ್ ವಿರುದ್ಧ ಜೆಡಿಎಸ್‍ನಿಂದ ಪೊಲೀಸ್ ಆಯುಕ್ತರಿಗೆ ದೂರು

    ಬೆಂಗಳೂರು: ದರ್ಶನ್, ಇಂದ್ರಜಿತ್ ಲಂಕೇಶ್ ಆರೋಪ ಪ್ರತ್ಯಾರೋಪ ಸಮಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ನಿಂದಿಸಿದ್ದಕ್ಕೆ ‘ಟ್ರೋಲ್ ಮಗ’ ಪೇಜ್ ಅಡ್ಮಿನ್ ವಿರುದ್ಧ ಜೆಡಿಎಸ್ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.

    ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ವಿರುದ್ಧ ಆರಂಭವಾದ ಲೋನ್ ಲಡಾಯಿ ತಿಕ್ಕಾಟ ನಂತರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಡೆ ತಿರುಗಿತ್ತು.

    ಈ ಪ್ರಕರಣದಲ್ಲಿ ಹೆಚ್‍ಡಿಕೆ ಕೈವಾಡವಿದೆ ಆರೋಪಿಸಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೆಚ್‍ಡಿಕೆ ಇರುವ ಫೋಟೋ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿತ್ತು. ಇದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕೆಂಗಣ್ಣಿಗೆ ಗುರಿಯಾಗಿತ್ತು.

    ಫೋಟೋ ವೈರಲ್ ಬಗ್ಗೆ ಸ್ಪಷ್ಟನೆ ಕೊಡುವ ಮೂಲಕ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು. ಹೀಗಿದ್ದರೂ ಇಂದ್ರಜಿತ್ ಲಂಕೇಶ್ ಹಾಗೂ ಕುಮಾರಸ್ವಾಮಿಯ ಭಾವಚಿತ್ರಗಳನ್ನ ಬಳಸಿಕೊಂಡು ಟ್ರೋಲ್ ಮಾಡಲಾಗುತ್ತಿದೆ. ಹೀಗಾಗಿ ಈಗ ಫೋಟೋವನ್ನು ವೈರಲ್ ಮಾಡಿ ಅವಾಚ್ಯ ಪದ ಬಳಕೆ ಮಾಡಿ ನಿಂದಿಸಿದ್ದಾರೆ ಎಂದು ದೂರು ಜೆಡಿಎಸ್ ಕಾನೂನು ಘಟಕದ ಕಾರ್ಯದರ್ಶಿ ಪ್ರದೀಪ್ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ : ಇಂದ್ರಜಿತ್‍ಗೆ ಬೆದರಿಕೆ ಕರೆ – ದರ್ಶನ್ ಹಿಂಬಾಲಕರ ವಿರುದ್ಧ ದೂರು

    ದೂರಿನಲ್ಲಿ ‘ಟ್ರೋಲ್ ಮಗ’ಪೇಜ್ ಅಡ್ಮಿನ್ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು ಕೊಟ್ಟಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಇಂದ್ರಜಿತ್ ಲಂಕೇಶ್ ಇರುವ ಫೋಟೋವನ್ನು ವೈರಲ್ ಮಾಡಲಾಗುತ್ತಿದೆ. ಸೂತ್ರಧಾರಿ ಮತ್ತು ಪಾತ್ರಧಾರಿ ಎಂಬ ಪದದ ಜೊತೆಗೆ ಅವಾಚ್ಯ ಪದ ಬಳಕೆ ಆರೋಪ ಮಾಡುವ ಮೂಲಕ ಮಾಜಿ ಮುಖ್ಯಮಂತ್ರಿ ಮಾಜಿ ಕುಮಾರಸ್ವಾಮಿ ಅವರನ್ನು ತೇಜೋವಧೆ ಮಾಡಲಾಗಿದೆ ಎಂದು ಆರೋಪಿಸಿ ಟ್ರೋಲ್ ಪೇಜ್ ಆಡ್ಮಿನ್ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ದೂರು ನೀಡಿದ್ದಾರೆ.

  • ಪಂದ್ಯದ ಮಧ್ಯೆ ಸುಸೂಗೆ ಹೋಗಿ ಟ್ರೋಲ್ ಆದ ಪಾಕ್ ಆಟಗಾರ

    ಪಂದ್ಯದ ಮಧ್ಯೆ ಸುಸೂಗೆ ಹೋಗಿ ಟ್ರೋಲ್ ಆದ ಪಾಕ್ ಆಟಗಾರ

    ಇಸ್ಲಾಮಾಬಾದ್: ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿಯ ಪಂದ್ಯದ ವೇಳೆ ಆಟಗಾರ ಮೊಹಮ್ಮದ್ ಹಫೀಜ್ ಬ್ಯಾಟಿಂಗ್ ಮಧ್ಯದಲ್ಲಿ ಮೂತ್ರವಿಸರ್ಜನೆಗೆ ತೆರಳಿದ್ದು, ಸಾಮಾಜಿಕ ಜಾಲತಾಣದಲ್ಲಿ ನೆಗೆಪಾಟಲಿಗೀಡಾಗಿದ್ದಾರೆ.

    ಕೊರೊನಾ ಅಬ್ಬರಿಸುವ ಮುಂಚೆಯೇ ಲೀಗ್ ಹಂತದ ಪಿಎಸ್‍ಎಲ್ ಪಂದ್ಯಗಳು ಮುಗಿದಿದ್ದವು. ಪ್ಲೇ ಆಫ್ ಹಂತದ ಪಂದ್ಯಗಳು ಆರಂಭವಾಗುವ ಮೊದಲೇ ಕೊರೊನಾ ಆರಂಭವಾಗಿತ್ತು. ಈಗ ಕೊರೊನಾ ನಂತರ ಮತ್ತೆ ಪಿಎಸ್‍ಎಲ್ ಶುರುವಾಗಿ ಪ್ಲೇ ಆಫ್ ಹಂತದ ಪಂದ್ಯಗಳು ನಡೆಯುತ್ತಿವೆ.

    ಪ್ಲೇ ಆಫ್ ಹಂತದ ಮೊದಲ ಎಲಿಮಿನೇಟರ್ ಪಂದ್ಯ ಪೇಶಾವರ್ ಜಲ್ಮಿ ಮತ್ತು ಲಾಹೋರ್ ಖಲಂದರ್ಸ್ ತಂಡಗಳ ನಡುವೆ ನಡೆದಿತ್ತು. ಈ ಪಂದ್ಯದಲ್ಲಿ ಲಾಹೋರ್ ಖಲಂದರ್ಸ್ ತಂಡ ಸುಲಭ ಜಯ ಸಾಧಿಸಿದೆ. ಆದರೆ ಪೇಶಾವರ್ ಜಲ್ಮಿ ತಂಡ ನೀಡಿದ ಟಾರ್ಗೆಟ್ ಅನ್ನು ಬೆನ್ನಟ್ಟುತ್ತಿದ್ದ ಲಾಹೋರ್ ಖಲಂದರ್ಸ್ ತಂಡದ ಮೊಹಮ್ಮದ್ ಹಫೀಜ್, ಬ್ಯಾಟಿಂಗ್ ಆಡುವ ಮಧ್ಯದಲ್ಲಿ ಮೈದಾನದಿಂದ ಹೊರಹೋಗಿ ಮೂತ್ರ ವಿಸರ್ಜನೆ ಮಾಡಿ ಬಂದಿದ್ದಾರೆ. ಈ ಕಾರಣಕ್ಕೆ ಸಖತ್ ಟ್ರೋಲ್ ಕೂಡ ಆಗಿದ್ದಾರೆ.

    ಹಫೀಜ್‍ನನ್ನು ಪೇಶಾವರ್ ಜಲ್ಮಿ ತಂಡದ ವಿಕೆಟ್ ಕೀಪರ್ ಇಮಾಮ್-ಉಲ್-ಹಕ್ ಟ್ರೋಲ್ ಮಾಡಿದ್ದು, ಆತ ಕಳೆದ ಎರಡು ಓವರಿನಿಂದ ಸೂಸು ಮಾಡಬೇಕು ಎನ್ನುತ್ತಿದ್ದ ಎಂದು ಹೇಳಿ ಹಾಸ್ಯ ಮಾಡಿದ್ದಾರೆ. ಪಂದ್ಯದ ಮಧ್ಯೆ ಕಮೆಂಟೆಟರ್ ಜೊತೆ ವಹಾಬ್ ರಿಯಾಜ್, ಶೊಯೇಬ್ ಮಲ್ಲಿಕ್ ಮತ್ತು ಇಮಾಮ್-ಉಲ್-ಹಕ್ ಮಾತನಾಡುತ್ತಿರುತ್ತಾರೆ. ಈ ವೇಳೆ ಇಮಾಮ್ ಹಫೀಜ್ ಎರಡು ಓವರಿನಿಂದ ಸೂಸು ಮಾಡಬೇಕು ಎಂದು ಹೇಳುತ್ತಿದ್ದ ಎಂದಿದ್ದಾರೆ.