ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೂ ಟ್ರೋಲ್ ಪೇಜ್ ಗಳಿಗೂ ಒಂದು ರೀತಿಯಲ್ಲಿ ಹಾಲು ಹಣ್ಣು ಸಂಬಂಧ. ರಶ್ಮಿಕಾ ಏನೇ ಮಾಡಿದರೂ ಟ್ರೋಲ್ ಆಗುತ್ತಲೇ ಇರುತ್ತಾರೆ. ಹಾಗಾಗಿಯೇ ಅವರು ಆಗಾಗ್ಗೆ ಟ್ರೋಪ್ ಪೇಜ್ ಗಳ ವಿರುದ್ಧ ಗರಂ ಆಗುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ಅವರ ಸಾಧನೆಯ ಕುರಿತು ಅನುಮಾನ ವ್ಯಕ್ತ ಪಡಿಸುವಂತಹ ಘಟನೆಗಳು ನಡೆದಿವೆ. ಅದನ್ನೂ ಕೂಡ ಕೆಲವರು ಟ್ರೋಲ್ ಮಾಡಿದ್ದಾರೆ. ಹಾಗಾಗಿ ರಶ್ಮಿಕಾ ಅಪ್ ಸೆಟ್ ಆಗಿದ್ದಾರೆ.

ರಶ್ಮಿಕಾ ಮಂದಣ್ಣ ಕೂಡ ಎಲ್ಲ ಕಲಾವಿದರಂತೆಯೇ ಸ್ಟ್ರಗಲ್ ಮಾಡಿ ಬಂದಿದ್ದಾಳೆ. ನಾನು ರಾತ್ರೋರಾತ್ರಿ ಸ್ಟಾರ್ ಆಗಿರುವಂತಹ ನಟಿಯಲ್ಲ. ಹಲವು ಭಾಷೆಗಳಲ್ಲಿ ನಟಿಸಿದ್ದೇನೆ. ಅನೇಕ ನಟರ ಜೊತೆ ಕೆಲಸ ಮಾಡಿದ್ದೇನೆ. ಪ್ರತಿ ಸಿನಿಮಾದಲ್ಲೂ ಕಷ್ಟಪಟ್ಟಿದ್ದೇನೆ. ಈ ಯಶಸ್ಸಿನಲ್ಲಿ ನನ್ನ ಕಷ್ಟದ ಪಾಲೂ ಇದೆ ಎನ್ನುವ ಅರ್ಥದಲ್ಲಿ ಅವರು ಮಾತನಾಡಿದ್ದಾರೆ. ಈ ಮೂಲಕ ನಾನೂ ಕೂಡ ಕಷ್ಟಪಟ್ಟೇ ಮೇಲಕ್ಕೆ ಬಂದಿದ್ದು ಎಂದು ಸಂದೇಶವನ್ನು ರವಾನಿಸಿದ್ದಾರೆ. ಇದನ್ನೂ ಓದಿ:Bigg Boss: `ನಾನು ಪ್ರೀತಿಯಲ್ಲಿ ಕೊಲ್ತೀನಿ’ ಎಂದು ಸಾನ್ಯ ಅಯ್ಯರ್ ಹೇಳಿದ್ಯಾರಿಗೆ?

ಕನ್ನಡ ಸಿನಿಮಾ ರಂಗದಿಂದ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ರಶ್ಮಿಕಾ, ಆನಂತರ ತೆಲುಗು ಮತ್ತು ತಮಿಳು ಚಿತ್ರಗಳನ್ನು ಒಪ್ಪಿಕೊಂಡರು. ನಟಿಸಿದ ಬಹುತೇಕ ಚಿತ್ರಗಳು ಹಿಟ್ ಆದವು. ಕೇವಲ ಕನ್ನಡದಲ್ಲಿ ಮಾತ್ರವಲ್ಲ, ತಮಿಳು ಹಾಗೂ ತೆಲುಗಿನಲ್ಲೂ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಹುಟ್ಟಿಕೊಂಡರು. ಹೀಗಾಗಿ ಅವರನ್ನು ಬಾಲಿವುಡ್ ಕೂಡ ಕೈ ಬೀಸಿ ಕರೆಯಿತು. ಅಲ್ಲಿಯೂ ಕೂಡ ರಶ್ಮಿಕಾ ತಮ್ಮ ಛಾಪನ್ನು ಒತ್ತುತಿದ್ದಾರೆ.


ಕಳೆದ ಎರಡು ದಿನಗಳಿಂದ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿರುವ ವಿಚಾರ ಅಂದ್ರೆ ಸುಶ್ಮಿತಾ ಸೇನ್ ಮತ್ತು ಲಲಿತ್ ಮೋದಿ ಡೇಟಿಂಗ್ ವಿಚಾರ. ಇವರಿಬ್ಬರ ವಯಸ್ಸಿನ ಬಗ್ಗೆ, ಡೇಟಿಂಗ್ ಕುರಿತು ನಟಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದು, ಟ್ರೋಲಿಗರ ವಿರುದ್ಧ ಈಗ ನಟಿ ಫುಲ್ ಗರಂ ಆಗಿದ್ದಾರೆ. ಲಲಿತ್ ಮೋದಿ ಆಗರ್ಭ ಶ್ರೀಮಂತ ಸಾವಿರಾರು ಕೋಟಿಯ ಒಡೆಯ ಹಾಗಾಗಿ ಸುಶ್ಮಿತಾ ಅವರ ಜತೆ ಇದ್ದಾರೆ ಎಂದು ಸಖತ್ ಚರ್ಚೆ ಆಗುತ್ತಿರೋ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ನಟಿ ಸ್ಪಷ್ಟನೆ ನೀಡಿದ್ದಾರೆ.
ಲಲಿತ್ ಮೋದಿ ಚಿನ್ನದ ಗಂಟು ಎಂಬರ್ಥದಲ್ಲಿ ಚಿನ್ನದ ಹಿಂದೆ ಬಿದ್ದಿದ್ದಾರೆ ಎಂದು ಸುಶ್ಮಿತಾರನ್ನ ಟ್ರೋಲ್ ಮಾಡುತ್ತಿದ್ದು, ಇದಕ್ಕೆ ನಟಿ ಖಡಕ್ ಉತ್ತ ನೀಡಿದ್ದಾರೆ. ನಾನು ಚಿನ್ನಕ್ಕಿಂತ ಆಳವಾಗಿ ಅಗೆಯುತ್ತೇನೆ. ನಾನು ಯಾವಾಗಲೂ ವಜ್ರಗಳಿಗೆ ಆಧ್ಯತೆ ನೀಡುತ್ತೇನೆ. ಇನ್ನೂ ಅವುಗಳನ್ನು ನಾನೇ ಖರೀದಿಸುತ್ತೇನೆ. ನಿಮ್ಮ ಸುಶ್ ಸಂಪೂರ್ಣವಾಗಿ ಚೆನ್ನಾಗಿದ್ದಾರೆ ಎಂದೂ ಪೋಸ್ಟ್ ಮಾಡಿ, ಎಲ್ಲಾ ಗಾಸಿಪ್‌ಗೂ ನಟಿ ಅಂತ್ಯ ಹಾಡಿದ್ದಾರೆ. ಇದನ್ನೂ ಓದಿ:















