Tag: Troll

  • ಹೂವಿನ ಹಾರ, ಮೊಟ್ಟೆ, ಕಲ್ಲು ಹಾಗೂ ರಶ್ಮಿಕಾ: ಕಿಚ್ಚನ ಸಖತ್ ಉತ್ತರ

    ಹೂವಿನ ಹಾರ, ಮೊಟ್ಟೆ, ಕಲ್ಲು ಹಾಗೂ ರಶ್ಮಿಕಾ: ಕಿಚ್ಚನ ಸಖತ್ ಉತ್ತರ

    ಸಂದರ್ಶನ ಯಾರೇ ಮಾಡುತ್ತಿರಲಿ ಕಿಚ್ಚ ಸುದೀಪ್ ಮಾತ್ರ ಅಚ್ಚುಕಟ್ಟಾಗಿ ಅದರಲ್ಲಿ ಭಾಗಿಯಾಗುತ್ತಾರೆ. ಪ್ರಶ್ನೆಗೆ ಹೊಸ ರೀತಿಯಲ್ಲೇ ಉತ್ತರ ನೀಡುತ್ತಾರೆ. ಅವರ ಮಾತಿನಲ್ಲೊಂದು ತೂಕ ಇರುತ್ತದೆ. ಪ್ರತಿಮೆ ಬಳಸಿಕೊಂಡೇ ಅವರು ಮಾತನಾಡುತ್ತಾರೆ. ರಶ್ಮಿಕಾ ಮಂದಣ್ಣ ಮೇಲೆ ಆಗುತ್ತಿರುವ ಟ್ರೋಲ್ ವಿಚಾರವಾಗಿಯೂ ಸುದೀಪ್ ಪ್ರತಿಕ್ರಿಯೆ ನೀಡಿದ್ದು, ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ. ನಾವು ಏನು ಮಾತನಾಡುತ್ತಿದ್ದೇವೆ ಎನ್ನುವುದರ ಬಗ್ಗೆ ಅರಿವೂ ಇರಬೇಕು ಅಂದಿದ್ದಾರೆ.

    ನಾನಾ ಕಾರಣಗಳಿಂದಾಗಿ ರಶ್ಮಿಕಾ ಮಂದಣ್ಣ ಟ್ರೋಲ್ ಆಗುತ್ತಲೇ ಇರುತ್ತಾರೆ. ಬಹುಶಃ ಈ ವರ್ಷದಲ್ಲಿ ಅತೀ ಹೆಚ್ಚು ಟ್ರೋಲ್ ಆದ ನಟಿ ಎಂಬ ಹೆಗ್ಗಳಿಕೆಯೂ ಅವರದ್ದು. ಅದರಲ್ಲೂ ಕನ್ನಡ ಸಿನಿಮಾರಂಗ ಮತ್ತು ಕನ್ನಡದ ವಿಚಾರವಾಗಿ ಅವರು ಸಾಕಷ್ಟು ಬಾರಿ ಟ್ರೋಲ್ ಆಗಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಕಾಂತಾರ ಸಿನಿಮಾವನ್ನೂ ಇನ್ನೂ ನೋಡಿಲ್ಲ ಎನ್ನುವ ಕಾರಣಕ್ಕಾಗಿ ಟ್ರೋಲಿಗರಿಗೆ ಆಹಾರವಾಗಿದ್ದರು. ಇದೇ ವಿಚಾರವಾಗಿಯೇ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ಅದನ್ನೂ ಮಾರ್ಮಿಕವಾಗಿಯೇ ವಿವರಿಸಿದ್ದಾರೆ. ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ

    ಟ್ರೋಲ್ ವಿಚಾರದಲ್ಲಿ ಮುಂದುವರೆದು ಮಾತನಾಡಿರುವ ಸುದೀಪ್, ‘ಪಬ್ಲಿಕ್ ಫಿಗರ್ ಎಂಬ ಹಣೆಪಟ್ಟಿ ಬಂದಾಕ್ಷಣ ಹೂವಿನ ಹಾರದ ಜೊತೆ, ಟೊಮ್ಯಾಟೊ, ಮೊಟ್ಟೆ, ಕಲ್ಲುಗಳು ಸಹ ಬರಬಹುದು’ ಎಂದು ಹೇಳಿದ್ದಾರೆ. ಈ ಮೂಲಕ ಸಿಲೆಬ್ರಿಟಿ ಆದವನು ಹೇಗೆ ಇರಬೇಕು, ಹೇಗೆ ಇದ್ದರೆ ತಮ್ಮತ್ತ ಏನು ತೂರಿ ಬರುತ್ತವೆ ಎನ್ನುವುದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ. ಅದರಲ್ಲೂ ಸಾರ್ವಜನಿಕ ಬದುಕಿನಲ್ಲಿ ಇರುವವರು ಹೇಗೆ ಇರಬೇಕು, ಯಾವ ರೀತಿಯಲ್ಲಿ ವರ್ತಿಸಬೇಕು ಎನ್ನುವುದನ್ನು ವಿವರಿಸಿದ್ದಾರೆ.

    ಬಿಗ್ ಬಾಸ್ ವೇದಿಕೆಯಲ್ಲೂ ಕಿಚ್ಚ ಇಂತಹ ಅನೇಕ ಸಂಗತಿಗಳನ್ನು ಹೇಳಿಕೊಂಡಿದ್ದಾರೆ. ಉದಾಹರಣೆ ಸಹಿತ ವಿವರಿಸಿದ್ದಾರೆ. ಯಾರೋ ಯಾರಿಗೋ ಅವಮಾನ ಮಾಡಿದಾಗ ನೇರವಾಗಿಯೇ ಅವರಿಗೆ ತಿವಿದಿದ್ದಾರೆ. ಸಲಹೆಗಳನ್ನು ನೀಡಿದ್ದಾರೆ. ಎಚ್ಚರಿಕೆಯ ಮಾತುಗಳನ್ನೂ ಆಡಿದ್ದಾರೆ. ಹಾಗಾಗಿ ಕಿಚ್ಚ ಸುದೀಪ್ ಅವರ ಮಾತುಗಳು ಯಾವತ್ತಿಗೂ ವಿಶೇಷವಾಗಿ ಇರುತ್ತವೆ.

    Live Tv
    [brid partner=56869869 player=32851 video=960834 autoplay=true]

  • ‘ವೈ’ ಭದ್ರತೆಯಲ್ಲಿ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನ ವಾಕಿಂಗ್

    ‘ವೈ’ ಭದ್ರತೆಯಲ್ಲಿ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನ ವಾಕಿಂಗ್

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ಕೇಂದ್ರ ಸರಕಾರ ‘ವೈ’ ಶ್ರೇಣಿಯ ಭದ್ರತೆಯನ್ನು ನೀಡಿದೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಂದ ನಂತರ ಅವರ ಜೀವಕ್ಕೆ ಅಪಾಯವಿದೆ ಎನ್ನುವ ಕಾರಣಕ್ಕಾಗಿ ಈ ಭದ್ರತೆಯನ್ನು ನೀಡಲಾಗಿದ್ದು, ವಿವೇಕ್ ಎಲ್ಲಿಗೆ ಹೋದರೂ ಹಿಂದೆಯೇ ಭದ್ರತಾ ಸಿಬ್ಬಂದಿ ಹೋಗುತ್ತದೆ. ಇಂಥದ್ದೊಂದು ವಿಡಿಯೋವನ್ನು ಸ್ವತಃ ವಿವೇಕ್ ಅಗ್ನಿಹೋತ್ರಿ ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ವಿವೇಕ್ ಅಗ್ನಿಹೋತ್ರಿ ಮನೆಯಿಂದ ಆಚೆ ಕಾಲಿಟ್ಟರೆ, ಅವರು ಎಲ್ಲಿಗೆ ಹೋದರೂ, ಹಿಂದೆಯೇ ಭದ್ರತಾ ಸಿಬ್ಬಂದಿ ಹೋಗಲೇಬೇಕು. ಹಾಗಾಗಿ ವಿವೇಕ್ ವಾಕಿಂಗ್ ಮಾಡುವಾಗಲೂ ಅವರು ಜೊತೆಯಲ್ಲೇ ಇದ್ದಾರೆ. ಆ ವಿಡಿಯೋವನ್ನು ವಿವೇಕ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ ಹಲವರು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. ಇವರಿಗೆ ‘ವೈ’ ಭದ್ರತೆ ಕೊಡುವುದಕ್ಕೆ ಅಂತಹ ಘನಂದಾರಿ ಕೆಲಸವನ್ನು ಏನು ಮಾಡಿದ್ದಾರೆ ಎಂದು ಕೇಳಿದ್ದಾರೆ.

    ಇನ್ನೂ ಕೆಲವರು ನಮ್ಮ ತೆರಿಗೆ ಹಣ ಎಲ್ಲಿ ಖಾಲಿ ಆಗುತ್ತಿದೆ ಅಂತ ಕಣ್ತುಂಬಿಕೊಳ್ಳಿ. ಜನರ ತೆರಿಗೆ ಹಣದಲ್ಲಿ ಇಂಥವರು ಭದ್ರತೆ ಇಟ್ಟುಕೊಂಡು ಶೋಕಿ ಮಾಡುತ್ತಾರೆ ಎಂದು ಕಾಲೆಳೆದಿದ್ದಾರೆ. ಈ ಕುರಿತು ವಿವೇಕ್ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದರೂ, ಭದ್ರತೆಯೊಂದಿಗೆ ವಾಕ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕರು ಅನೇಕ ರೀತಿಯಲ್ಲಿ ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ‘ಪುಷ್ಪಾ 2’ ಟೀಮ್ ಸೇರಿಕೊಂಡ ನಟಿ ಸಾಯಿ ಪಲ್ಲವಿ: ರಶ್ಮಿಕಾ ಮಂದಣ್ಣ ಪಾತ್ರವೇನು?

    kashmir

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ರಿಲೀಸ್ ನಂತರ ವಿವೇಕ್ ಅಗ್ನಿಹೋತ್ರಿ ಕುರಿತಾಗಿ ಅನೇಕರು ಪರ ಮತ್ತು ವಿರೋಧದ ಮಾತುಗಳನ್ನು ಆಡಿದ್ದರು. ಇನ್ನೂ ಈ ಸಿನಿಮಾ ಬಗ್ಗೆ ಚರ್ಚೆ ಆಗುತ್ತಲೇ . ಕೆಲವರು ಸೋಷಿಯಲ್ ಮೀಡಿಯಾ ಮೂಲಕ ವಿವೇಕ್ ಅವರಿಗೆ ಬೆದರಿಕೆಯನ್ನೂ ಹಾಕಿದ್ದರು. ಈ ಎಲ್ಲವನ್ನೂ ಪರಿಗಣಿಸಿ ಕೇಂದ್ರ ಸರಕಾರ ಅವರಿಗೆ ವೈ ಶ್ರೇಣಿಯ ಭದ್ರತೆಯನ್ನು ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಹಿಂದೆ ನನ್ನ ಬೈದವರೆಲ್ಲ ಚಂದಾಗಿರಲಿ: ಕನಕದಾಸರ ನೆನೆದ ಡಾಲಿ ಧನಂಜಯ್

    ಹಿಂದೆ ನನ್ನ ಬೈದವರೆಲ್ಲ ಚಂದಾಗಿರಲಿ: ಕನಕದಾಸರ ನೆನೆದ ಡಾಲಿ ಧನಂಜಯ್

    ಹೆಡ್ ಬುಷ್ ಸಿನಿಮಾ ವಿವಾದದಿಂದ ದೂರವಾಗಿ, ಹೊಯ್ಸಳ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ನಟ ಡಾಲಿ ಧನಂಜಯ್, ತಮ್ಮ ಬದುಕಿಗೂ ಮತ್ತು ಕನಕದಾಸರ ಪದಕ್ಕೂ ಹೋಲಿಕೆ ಮಾಡಿಕೊಂಡು ಇವತ್ತೊಂದು ಪೋಸ್ಟ್ ಮಾಡಿದ್ದಾರೆ. ಅದು ಕನಕದಾಸರ ರಚನೆಯಾದರೂ, ಧನಂಜಯ್ ತಮ್ಮ ವೈರಿಗಳಿಗೆ ಈ ಮೂಲಕ ಟಾಂಗ್ ಕೊಟ್ಟಿದ್ದಾರೆ. ಇತ್ತೀಚಿಗೆ ಡಾಲಿ ವೃತ್ತಿ ಜೀವನದಲ್ಲಿ ನಡೆದ ಘಟನೆಯನ್ನು ನೆನಪಿಸುತ್ತಲೇ, ತಮ್ಮ ಬಗ್ಗೆ ಸಲ್ಲದ ಆರೋಪಗಳನ್ನು ಮಾಡುವವರಿಗೆ ಈ ಮೂಲಕ ಎಚ್ಚರಿಸಿದ್ದಾರೆ.

    ಇಂದು ಕನಕದಾಸರ ಜಯಂತಿ. ಈ ನೆಪದಲ್ಲಿ ಕನಕದಾಸರ ರಚನೆಯ ‘ ಹಿಂದೆ ನನ್ನ ಬೈದವರೆಲ್ಲ ಚೆಂದಾಗಿರಲಿ, ಮುಂದೆ ನನ್ನ ಬಯ್ಯುವರೆಲ್ಲ ಅಂದಣವೇರಲಿ, ಕುಂದು ಇಟ್ಟವರೆಲ್ಲ ಕುದುರೆಯ ಕಟ್ಟಿ ಬಾಳಲಿ, ಬಂದು ಒದ್ದವರಿಗೆ ಭತ್ತದ ಗದ್ದೆ ಬೆಳೆಯಲಿ. ಜನರೊಳಗೆ ಮಾನಭಂಗ ಮಾಡಿದವರಿಗೆ ಜೇನು ತುಪ್ಪು, ಸಕ್ಕರೆ ಊಟ ಆಗಲಿ ಅವರಿಗೆ. ಹಾನಿ ಬಾರದಂತಹ ಲೋಕ ಆಗಲಿ ಅವರಿಗೆ. ಮಹಾನುಭಾವ ಮುಕ್ತಿಯ ಕೊಡುವ ನೆಲೆಯಾದಿಕೇಶವ’ ಎಂದು ದಾಸರಪದವನ್ನು ಹಾಕುವ ಮೂಲಕ ತಮಗೆಲ್ಲ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ:ಕನ್ನಡದಲ್ಲೂ ಮೂಡಿ ಬರಲಿದೆ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕನ ಹೊಸ ಸಿನಿಮಾ

    ಪ್ರಗತಿಪರ ವಿಚಾರಧಾರೆಗಳನ್ನು ಆಗಾಗ್ಗೆ ತಮ್ಮ ಅಭಿಮಾನಿಗಳಿಗೆ ಹಂಚಿಕೊಳ್ಳುವ ಧನಂಜಯ್, ಮನುಷ್ಯತ್ವದ ಬಗ್ಗೆ ಕೆಲವು ಸಾಲುಗಳನ್ನು ಬರೆದುಕೊಂಡಿದ್ದರು. ಇದೇ ಅವರಿಗೆ ಮುಳುವಾಗಿತ್ತು. ಹೆಡ್ ಬುಷ್ ಸಿನಿಮಾದಲ್ಲಿ ವೀರಗಾಸೆಗೆ ಅಪಮಾನ ಮಾಡಿದ್ದಾರೆ ಎಂದು ವಿವಾದ ಸೃಷ್ಟಿ ಮಾಡಲಾಯಿತು. ಕರಗದ ವಿಚಾರದಲ್ಲೂ ಎಳೆತರಲಾಯಿತು. ಬಡವರ ಮಕ್ಳು ಬೆಳೆಯಬೇಕು ಎನ್ನುವ ಅವರ ಮಾತನ್ನು ಟ್ರೋಲ್ ಮಾಡಲಾಯಿತು. ತಮ್ಮ ವಿರುದ್ಧ ಷಡ್ಯಂತ್ರ ಮಾಡುತ್ತಿರುವ ಎಲ್ಲರಿಗೂ ಈ ಕನಕದಾಸರ ರಚನೆಯ ಮೂಲಕ ಉತ್ತರಿಸಿದ್ದಾರೆ ಧನಂಜಯ್.

    Live Tv
    [brid partner=56869869 player=32851 video=960834 autoplay=true]

  • ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ನಟನೆಯ ‘ಬನಾರಸ್’ ಚಿತ್ರದ ಟ್ರೋಲ್ ನೋಡಿದ್ರಾ?

    ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ನಟನೆಯ ‘ಬನಾರಸ್’ ಚಿತ್ರದ ಟ್ರೋಲ್ ನೋಡಿದ್ರಾ?

    ಝೈದ್ ಖಾನ್ (Zaid Khan) ನಾಯಕನಾಗಿ ಎಂಟ್ರಿ ಕೊಡುತ್ತಿರುವ ಬಹುನಿರೀಕ್ಷಿತ ಚಿತ್ರ ಬನಾರಸ್ (Banaras). ಜಯತೀರ್ಥ (Jayathirtha) ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಈಗಾಗಲೇ ನಾನಾ ದಿಕ್ಕುಗಳಿಂದ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಕುತೂಹಲ ಹುಟ್ಟು ಹಾಕಿದೆ. ಅದನ್ನೆಲ್ಲ ಮತ್ತಷ್ಟು ತೀವ್ರವಾಗಿಸಿದ ಕ್ರೆಡಿಟ್ ಸಲ್ಲುವುದು ಮುದ್ದಾಗಿ ಮೂಡಿಬಂದು, ಹಂತ ಹಂತವಾಗಿ ಬಿಡುಗಡೆಯಾದ ಹಾಡುಗಳಿಗೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ಮಾಯಗಂಗೆ ಎಂಬ ಹಾಡಿನ ಮೋಡಿಗೆ ಸಿಲುಕದವರೇ ಇಲ್ಲ. ಸಾಹಿತ್ಯ, ಸಂಗೀತ, ದೃಷ್ಯೀಕರಣ ಸೇರಿದಂತೆ ಎಲ್ಲದರಲ್ಲಿಯೂ ಸೈ ಅನ್ನಿಸಿಕೊಂಡಿದ ಮಾಯಗಂಗೆ ಈವತ್ತಿಗೂ ಟ್ರೆಂಡಿಂಗ್‌ನಲ್ಲಿದೆ. ಇದೇ ಹೊತ್ತಿನಲ್ಲೀಗ ಲಿರಿಕಲ್ ವೀಡಿಯೋ ಸಾಂಗ್ ಒಂದು ಬಿಡುಗಡೆಗೊಂಡಿದೆ.

    ‘ಎಲ್ಲ ಟ್ರೋಲು (Troll) ಎಲ್ಲಾ ಟ್ರೋಲು, ಸಿಕ್ಕಾಪಟ್ಟೆ ಕೊಲೇಸ್ಟ್ರಾಲು’ ಅಂತ ಶುರುವಾಗೋ ಈ ಹಾಡಿಗೆ ಡಾ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ವಿಶೇಷವೆಂದರೆ, ಸಂಗೀತ ಸಂಯೋಜನೆ ಮಾಡಿರುವ ಅಜನೀಶ್ ಲೋಕನಾಥ್ ಅವರೇ ಈ ಹಾಡನ್ನು ಹಾಡಿದ್ದಾರೆ. ಸಾಮಾನ್ಯವಾಗಿ ಮೆಲೋಡಿ ಹಾಡುಗಳ ಮೂಲಕ ಗಮನ ಸೆಳೆಯುವ, ಅದಕ್ಕೆ ಪ್ರಸಿದ್ಧಿ ಪಡೆದುಕೊಂಡಿರುವವರು ನಾಗೇಂದ್ರ ಪ್ರಸಾದ್. ಅವರು ಆಗಾಗ ಟಪ್ಪಾಂಗುಚ್ಚಿ ಸಾಂಗಿಗೂ ಸೈ ಎಂಬುದನ್ನು ಸಾಬೀತುಪಡಿಸುತ್ತಿರುತ್ತಾರೆ. ಈ ಟ್ರೋಲ್ ಹಾಡಿನ ಮೂಲಕ ಅದು ಮತ್ತೊಮ್ಮೆ ಋಜುವಾತಾಗಿದೆ. ಇದನ್ನೂ ಓದಿ:ಪುನೀತ್ ಅಭಿಮಾನಿಗಳಿಗೆ ಗುಡ್‍ನ್ಯೂಸ್- ಅಪ್ಪು ಜನ್ಮದಿನ ಇನ್ಮೇಲೆ ಸ್ಫೂರ್ತಿ ದಿನ

    ವಿಸೇಷವಾಗಿ, ಈ ಹಾಡಿನಲ್ಲಿ ಝೈದ್ ಖಾನ್ ಮತ್ತೆ ಮಿಂಚಿದ್ದಾರೆ. ಆ ಮೂಲಕ ಮತ್ತಷ್ಟು ಭರವಸೆ ಮೂಡಿಸಿದ್ದಾರೆ. ಈ ಹಿಂದೆ ಮಾಯಗಂಗೆ ಹಾಡು ನೋಡಿದವರೆಲ್ಲರೂ ಝೈದ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಇದೀಗ ಸದರಿ ಟ್ರೋಲ್ ಸಾಂಗ್ ಕೂಡಾ ಅಂಥಾದ್ದೇ ಮೆಚ್ಚುಗೆಗೆ ಪಾತ್ರವಾಗಿದೆ. ಈ ಜಮಾನದ ಟ್ರೆಂಡ್ ಅನ್ನು ಸಾಹಿತ್ಯಕ್ಕೆ ಒಗ್ಗಿಸಿಕೊಂಡಿರುವ ಈ ಹಾಡೂ ಕೂಡಾ ಟ್ರೆಂಡ್ ಸೆಟ್ ಮಾಡೋದರಲ್ಲಿ ಯಾವ ಅನುಮಾನವೂ ಇಲ್ಲ.

    ಬನಾರಸ್ ಏಕಕಾಲದಲ್ಲಿಯೇ ಐದು ಭಾಷೆಗಳಲ್ಲಿ ತಯಾರುಗೊಂಡಿರುವ ಪ್ಯಾನಿಂಡಿಯಾ ಚಿತ್ರ. ಇದನ್ನು ಬಲು ಪ್ರೀತಿಯಿಂದ ತಿಲಕ್ ರಾಜ್ ಬಲ್ಲಾಳ್ ನಿರ್ಮಾಣ ಮಾಡಿದ್ದಾರೆ. ಕರಾವಳಿಯ ಹುಡುಗಿ ಸೋನಲ್ ಮಂತೇರೋ ನಾಯಕಿಯಾಗಿ ಝೈದ್ ಖಾನ್‌ಗೆ ಸಾಥ್ ಕೊಟ್ಟಿದ್ದಾರೆ. ಸುಜಯ್ ಶಾಸ್ತ್ರಿ, ದೇವರಾಜ್, ಅಚ್ಯುತ್ ಕುಮಾರ್, ಸಪ್ನಾ ರಾಜ್, ಬರ್ಖತ್ ಅಲಿ ಮುಂತಾದವರು ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಮದುವೆ’ ನಂತರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆದ ಮಹಾಲಕ್ಷ್ಮಿ ರವೀಂದರ್

    ‘ಮದುವೆ’ ನಂತರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆದ ಮಹಾಲಕ್ಷ್ಮಿ ರವೀಂದರ್

    ಟಿ ಮಹಾಲಕ್ಷ್ಮಿ (Mahalakshmi) ಮತ್ತು ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಮದುವೆಯ (Marriage) ನಂತರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಇನ್ಸ್ಟಾ ಮತ್ತು ಫೇಸ್ ಬುಕ್ ಸೇರಿದಂತೆ ಸೋಷಿಯಲ್ ಖಾತೆಗಳಲ್ಲಿ ಅವರು ನಿತ್ಯವೂ ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ. ಒಬ್ಬರಿಗೊಬ್ಬರು ಹೊಗಳುವ ಮತ್ತು ಟ್ರಾವೆಲ್ ಮಾಡುತ್ತಿರುವ ಫೋಟೋಗಳನ್ನೂ ಅಪ್ ಲೋಡ್ ಮಾಡುವ ಮೂಲಕ ಅಭಿಮಾನಿಗಳ ಜೊತೆ ಸಂವಾದಿಸುತ್ತಿದ್ದಾರೆ. ಅಲ್ಲದೇ, ತಾವು ಹೊಸ ಬದುಕನ್ನು ಎಂಜಾಯ್ ಮಾಡುತ್ತಿರುವುದಾಗಿಯೂ ತಿಳಿಸಿದ್ದಾರೆ.

    ಈ ನಡುವೆ, ನನ್ನ ಪತಿ ದಪ್ಪ ಇದ್ದಾರೆ. ಹಾಗಂತ ಅವರನ್ನು ಅವಮಾನ ಮಾಡಬೇಡಿ ಎಂದು ನಟಿ ಮಹಾಲಕ್ಷ್ಮಿ ಸೋಷಿಯಲ್ ಮೀಡಿಯಾದಲ್ಲಿ ಲೈವ್‍ ಗೆ ಬಂದು ಮನವಿ ಮಾಡಿಕೊಂಡಿದ್ದಾರೆ. ದಪ್ಪ ಇದ್ದಾರೆ ಅನ್ನುವ ಕಾರಣಕ್ಕೆ ಟ್ರೋಲ್ ಮಾಡುತ್ತಿದ್ದೀರಿ. ಕೆಟ್ಟದ್ದಾಗಿ ಕಾಮೆಂಟ್ ಮಾಡಲಾಗುತ್ತಿದೆ. ಇದರಿಂದಾಗಿ ಅವರಿಗೆ ನೋವಾಗುತ್ತದೆ. ನಮ್ಮ ಪಾಡಿಗೆ ನಮ್ಮನ್ನು ನೆಮ್ಮದಿಯಾಗಿ ಇರುವುದಕ್ಕೆ ಬಿಡಿ ಎಂದು ಮಹಾಲಕ್ಷ್ಮಿ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಪ್ರೀತಿಯಿಂದ ಆಯ್ಕೆ ಮಾಡಿದ ಸೋನು ಮಾತಿನಿಂದ ಜಯಶ್ರೀಗೆ ಬೇಸರ – ಎಲ್ಲರೂ ದಂಗಾಗುವಂತೆ ಕಿರುಚಿದ್ಯಾಕೆ ಜಯಶ್ರೀ

    ನಟಿ ಮಹಾಲಕ್ಷ್ಮಿ ಅವರನ್ನು ನಿರ್ಮಾಪಕ ರವೀಂದರ್ ಚಂದ್ರಶೇಖರನ್ (Ravinder Chandrasekhar) ಮದುವೆಯಾದ ನಂತರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಪ್ರತಿಯೊಂದು ಸಂಗತಿಯನ್ನೂ ಅವರು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ. ಪ್ರೈವೆಟ್ ಜಟ್ ನಲ್ಲಿ ಹನಿಮೂನಿಗೆ (Honeymoon) ಹೋಗುವ ಮುನ್ನ ಅವರು ಮನೆದೇವರ ಗುಡಿಗೆ ಹೋಗಿ ಆಶೀರ್ವಾದ ಪಡೆದಿದ್ದಾರೆ. ಆ ಫೋಟೋವನ್ನೂ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

    ಮಿಸ್ ಮ್ಯಾಚ್ ಜೋಡಿ ಎಂದೇ ಟ್ರೋಲ್ ಆಗುತ್ತಿರುವ ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ ಜೋಡಿಯ ಹನಿಮೂನ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮದುವೆಯಾಗಿ ಅಚ್ಚರಿ ಮೂಡಿಸಿದ್ದ ಈ ಜೋಡಿ, ಮದುವೆಯಾದ ಮೂರನೇ ದಿನಕ್ಕೆ ಹನಿಮೂನ್ ಟೂರ್ ಮಾಡಿದ್ದಾರೆ. ಹನಿಮೂನ್ ಸ್ಪಾಟ್‍ ನಿಂದಲೇ ಅವರು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಆ ಫೋಟೋ ಸಖತ್ ವೈರಲ್ ಕೂಡ ಆಗಿವೆ.

    Live Tv
    [brid partner=56869869 player=32851 video=960834 autoplay=true]

  • ಗಂಡನ ಕುರಿತು ಟ್ರೋಲ್ ಮಾಡುವವರಿಗೆ ವಿಶೇಷ ಮನವಿ ಮಾಡಿಕೊಂಡ ನಟಿ ಮಹಾಲಕ್ಷ್ಮಿ

    ಗಂಡನ ಕುರಿತು ಟ್ರೋಲ್ ಮಾಡುವವರಿಗೆ ವಿಶೇಷ ಮನವಿ ಮಾಡಿಕೊಂಡ ನಟಿ ಮಹಾಲಕ್ಷ್ಮಿ

    ನ್ನ ಪತಿ ದಪ್ಪ ಇದ್ದಾರೆ. ಹಾಗಂತ ಅವರನ್ನು ಅವಮಾನ ಮಾಡಬೇಡಿ ಎಂದು ನಟಿ ಮಹಾಲಕ್ಷ್ಮಿ (Mahalakshmi) ಸೋಷಿಯಲ್ ಮೀಡಿಯಾದಲ್ಲಿ ಲೈವ್‍ ಗೆ ಬಂದು ಮನವಿ ಮಾಡಿಕೊಂಡಿದ್ದಾರೆ. ದಪ್ಪ ಇದ್ದಾರೆ ಅನ್ನುವ ಕಾರಣಕ್ಕೆ ಟ್ರೋಲ್ (Troll) ಮಾಡುತ್ತಿದ್ದೀರಿ. ಕೆಟ್ಟದ್ದಾಗಿ ಕಾಮೆಂಟ್ ಮಾಡಲಾಗುತ್ತಿದೆ. ಇದರಿಂದಾಗಿ ಅವರಿಗೆ ನೋವಾಗುತ್ತದೆ. ನಮ್ಮ ಪಾಡಿಗೆ ನಮ್ಮನ್ನು ನೆಮ್ಮದಿಯಾಗಿ ಇರುವುದಕ್ಕೆ ಬಿಡಿ ಎಂದು ಮಹಾಲಕ್ಷ್ಮಿ ಮನವಿ ಮಾಡಿಕೊಂಡಿದ್ದಾರೆ.

    ನಟಿ ಮಹಾಲಕ್ಷ್ಮಿ ಅವರನ್ನು ನಿರ್ಮಾಪಕ ರವೀಂದರ್ ಚಂದ್ರಶೇಖರನ್ (Ravinder Chandrasekaran) ಮದುವೆಯಾದ ನಂತರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಪ್ರತಿಯೊಂದು ಸಂಗತಿಯನ್ನೂ ಅವರು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ. ಪ್ರೈವೆಟ್ ಜಟ್ ನಲ್ಲಿ ಹನಿಮೂನಿಗೆ ಹೋಗುವ ಮುನ್ನ ಅವರು ಮನೆದೇವರ ಗುಡಿಗೆ ಹೋಗಿ ಆಶೀರ್ವಾದ ಪಡೆದಿದ್ದಾರೆ. ಆ ಫೋಟೋವನ್ನೂ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ಯಶ್ ಮುಂದಿನ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿನಾ?

    ಮಿಸ್ ಮ್ಯಾಚ್ ಜೋಡಿ ಎಂದೇ ಟ್ರೋಲ್ ಆಗುತ್ತಿರುವ ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ ಜೋಡಿಯ ಹನಿಮೂನ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮದುವೆಯಾಗಿ (Marriage) ಅಚ್ಚರಿ ಮೂಡಿಸಿದ್ದ ಈ ಜೋಡಿ, ಮದುವೆಯಾದ ಮೂರನೇ ದಿನಕ್ಕೆ ಹನಿಮೂನ್ ಟೂರ್ ಮಾಡಿದ್ದಾರೆ. ಹನಿಮೂನ್ ಸ್ಪಾಟ್‍ ನಿಂದಲೇ ಅವರು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಆ ಫೋಟೋ ಸಖತ್ ವೈರಲ್ ಕೂಡ ಆಗಿವೆ.

    ಮಹಾಲಕ್ಷ್ಮಿ ಮತ್ತು ರವೀಂದರ್ ಜೋಡಿ ಮೇಲೆ ಸಾಕಷ್ಟು ಜೋಕ್ ಗಳು ಹರಿದಾಡುತ್ತಿದ್ದರೂ, ಗಾಸಿಪ್ ಗಳು ಸೃಷ್ಟಿ ಆಗುತ್ತಿದ್ದರೂ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೇ ಹನಿಮೂನ್ ಎಂಜಾಯ್ ಮಾಡುತ್ತಿದೆ ಈ ಜೋಡಿ. ಸದ್ಯ ಈ ದಂಪತಿ ಮಹಾಬಲಿಪುರಂ ಇಂಟರ್ ಕಾಂಟಿನೆಂಟಲ್ ರೆಸಾರ್ಟ್ ನಲ್ಲಿ ತಂಗಿದ್ದು, ಅಲ್ಲಿಂದಲೇ ಅಭಿಮಾನಿಗಳು ಸಂದೇಶ ರವಾನಿಸಿದ್ದಾರೆ. ಮಹಾಲಕ್ಷ್ಮಿ ‘ಲೈಫ್ ಇಸ್ ಬ್ಯೂಟಿಫುಲ್’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರೆ, ರವೀಂದರ್ ‘ಲೈಫ್‍ ಗೆ ಪ್ರೀತಿ ಬೇಕು, ಈ ಪ್ರೀತಿಗೆ ಮಹಾಲಕ್ಷ್ಮಿ ಇರಬೇಕು’ ಎಂದು ಕಾವ್ಯಾತ್ಮಕವಾಗಿ ಭಾವನೆ ಹೊರ ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹುಡುಗರ ಲೈಂಗಿಕ ಸಾಮರ್ಥ್ಯ ಎರಡೇ ನಿಮಿಷ, ಮ್ಯಾಗಿ ಹಾಗೆ ಮುಗಿದು ಹೋಗತ್ತೆ: ಶಾಕಿಂಗ್ ಹೇಳಿಕೆ ಕೊಟ್ಟ ನಟಿ ರೆಜಿನಾ

    ಹುಡುಗರ ಲೈಂಗಿಕ ಸಾಮರ್ಥ್ಯ ಎರಡೇ ನಿಮಿಷ, ಮ್ಯಾಗಿ ಹಾಗೆ ಮುಗಿದು ಹೋಗತ್ತೆ: ಶಾಕಿಂಗ್ ಹೇಳಿಕೆ ಕೊಟ್ಟ ನಟಿ ರೆಜಿನಾ

    ನ್ನಡದ ‘ಸೂರ್ಯಕಾಂತಿ’ ಸೇರಿದಂತೆ ಸಾಕಷ್ಟು ಸಿನಿಮಾಗಳನ್ನು ಮಾಡಿರುವ ರೆಜಿನಾ ಕಸೆಂದ್ರ (Regina Cassandra), ಹುಡುಗರ ಲೈಂಗಿಕ ಸಾಮರ್ಥ್ಯವನ್ನು ಎರಡೇ ಎರಡು ನಿಮಿಷದಲ್ಲಿ ಮುಗಿದು ಹೋಗುವ ಮ್ಯಾಗಿಗೆ ಹೋಲಿಸಿದ್ದಾರೆ. ಹುಡುಗರು ಮತ್ತು ಮ್ಯಾಗಿ ಎರಡೂ ಒಂದೇ, ಎರಡೇ ನಿಮಿಷದಲ್ಲಿ ಮುಗಿದು ಬಿಡುತ್ತೆ ಎಂದು ಜೋಕ್ ಮಾಡುವ ಮೂಲಕ ಟ್ರೋಲ್ ಆಗಿದ್ದಾರೆ. ಈ ಮಾತು ಪಡ್ಡೆಗಳನ್ನು ರೊಚ್ಚಿಗೇಳುವಂತೆ ಮಾಡಿದ್ದು, ರೆಜಿನಾ ಬಗ್ಗೆ ಸಲ್ಲದ ಕಾಮೆಂಟ್‍ಗಳನ್ನು ಬರೆಯುತ್ತಿದ್ದಾರೆ.

    ಸದ್ಯ ರೆಜಿನಾ ಶಾಕಿನಿ ಡಾಕಿನಿ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರವು ಬಿಡುಗಡೆಗೆ ಸಿದ್ಧವಾಗಿದೆ. ಹಾಗಾಗಿ ಕೋ ಸ್ಟಾರ್ ನಿವೇತಾ ಥಾಮಸ್ ಜೊತೆ ಭರ್ಜರಿಯಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಇದೇ ಸಂದರ್ಭದಲ್ಲಿ ನಡೆದ ಸಂದರ್ಶನವೊಂದರಲ್ಲಿ ರೆಜಿನಾ ಹುಡುಗರ ಸೆಕ್ಸ್ (Sex) ಸಾಮರ್ಥ್ಯವನ್ನು ಅಳೆದಿದ್ದಾರೆ. ಅದು ಎರಡೇ ನಿಮಿಷದಲ್ಲಿ ಮುಗಿಯುವಂಥದ್ದು ಎಂದು ಹೇಳುವ ಮೂಲಕ ಇಡೀ ಸಂದರ್ಶನದ ಮೂಡ್ ಅನ್ನು ಮತ್ತೊಂದು ದಿಕ್ಕಿಗೆ ತಗೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ:ಬಿಕಿನಿಯಲ್ಲಿ `ಲೈಗರ್’ ಬ್ಯೂಟಿ ಅನನ್ಯಾ ಪಾಂಡೆ ಮಿಂಚಿಂಗ್

    ಸಂದರ್ಶನದಲ್ಲಿ ನಿರೂಪಕರು ಒಂದು ಜೋಕ್ ಹೇಳ್ತಾ, ಮ್ಯಾಗಿ ಎರಡೇ ನಿಮಷದಲ್ಲಿ ರೆಡಿಯಾದರೂ, ಹುಡುಗಿಯರ ಮೇಕಪ್ ಮಾತ್ರ ಬೇಗ ಆಗುವುದೇ ಇಲ್ಲ ಎಂದು ಹೇಳುತ್ತಾರೆ. ಮ್ಯಾಗಿ (Maggie) ಬಗ್ಗೆ ನನಗೂ ಒಂದು ಜೋಕ್ ಗೊತ್ತು ಎನ್ನುವ ರೆಜಿನಾ, ಮ್ಯಾಗಿ ಎರಡೇ ನಿಮಿಷದಲ್ಲಿ ಮುಗಿದು ಹೋಗತ್ತೆ, ಹಾಗೆ ಹುಡುಗರದ್ದು (Boys) ಕೂಡ ಎರಡೇ ನಿಮಿಷ ಎಂದು ಜೋಕ್ ಕಟ್ ಮಾಡುತ್ತಾರೆ. ಇದು ನಿರೂಪಕನಿಗೆ ಮೊದ ಮೊದಲು ಗೊತ್ತೇ ಆಗುವುದಿಲ್ಲ. ಅಷ್ಟಕ್ಕೆ ಸುಮ್ಮನಿರದ ರೆಜಿನಾ, ನಿಮಗೆ ಜೋಕ್ ಅರ್ಥ ಆಗಲಿಲ್ಲವಾ? ಅಂತಾರೆ. ತಡವಾಗಿ ಅರ್ಥ ಮಾಡಿಕೊಂಡ ನಿರೂಪಕ, ಅಯ್ಯ.. ಈ ವಿಷಯವೇ ಬೇಡ ಎಂದು ಬೇರೆ ಪ್ರಶ್ನೆ ಮಾಡುತ್ತಾನೆ.

    ರೆಜಿನಾ ಕನ್ನಡ ಸಿನಿಮಾ ರಂಗಕ್ಕೆ ಹೊಸಬರೇನೂ ಅಲ್ಲ. ಚೇತನ್ ನಟನೆಯ ‘ಸೂರ್ಯಕಾಂತಿ’ ಚಿತ್ರದಲ್ಲಿ ನಟಿಸಿದ್ದಾರೆ. ಕೆ.ಎಂ. ಚೈತನ್ಯ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡಿತ್ತು. ಚೇತನ್ ಅವರಿಗೆ ಒಳ್ಳೆಯ ಹೆಸರು ತಂದು ಕೊಟ್ಟಿತ್ತು.

    Live Tv
    [brid partner=56869869 player=32851 video=960834 autoplay=true]

  • ಮಹಾ ಮಳೆಗೆ ವ್ಯಂಗ್ಯ – #LeaveBengaluru ಅಭಿಯಾನ ಆರಂಭಿಸಿದ ಕನ್ನಡಿಗರು

    ಮಹಾ ಮಳೆಗೆ ವ್ಯಂಗ್ಯ – #LeaveBengaluru ಅಭಿಯಾನ ಆರಂಭಿಸಿದ ಕನ್ನಡಿಗರು

    ಬೆಂಗಳೂರು: ಮಹಾ ಮಳೆಗೆ ನಲುಗಿರುವ ಸಿಲಿಕಾನ್ ಸಿಟಿ ಬೆಂಗಳೂರಿನ ಬಗ್ಗೆ ಟ್ರೋಲ್ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ನೆಟ್ಟಿಗರು ಬೆಂಗಳೂರು ಬಿಟ್ಟು ತೊಲಗಿ ಎಂಬ ಅಭಿಯಾನವನ್ನು ಶುರುಮಾಡಿದ್ದಾರೆ.

    ಕೆಲದಿನಗಳಿಂದ ಬೆಂಗಳೂರಿನಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನಗರದ ಹಲವಾರು ಪ್ರದೇಶಗಳು ಜಲಾವೃತಗೊಂಡಿದೆ. ಇದರಿಂದಾಗಿ ಜನ ಜೀವನ ಕೊಂಚ ಅಸ್ತವ್ಯಸ್ತವಾಗಿದೆ. ಈ ನಡುವೆ ಬೆಂಗಳೂರಿನ ಬಗ್ಗೆ ಕೆಲಕಿಡಿಗೇಡಿಗಳು ಸೋಶಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಇದನ್ನೂ ಓದಿ: ಜನೋತ್ಸವದ ಬದಲು ಜನಸ್ಪಂದನ ಹೆಸರಲ್ಲಿ ಸಮಾವೇಶ ನಡೆಸಲು ಮುಂದಾದ ಬಿಜೆಪಿ

    ಹೌದು, ಅದೆಷ್ಟೂ ಮಂದಿ ತಮ್ಮ ಜೀವನ ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂಧು ನೆಲೆಸುತ್ತಾರೆ. ಆದರೆ ಕೆಲದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಲವರ ಹಸಿವು ನೀಗಿಸುತ್ತಿರುವ ಆಶ್ರಯತಾಣ ಬೆಂಗಳೂರಿನ ಬಗ್ಗೆ ಟ್ರೋಲ್ ಮಾಡುವ ಮೂಲಕ ಧಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಇದೀಗ ಈ ಕಿಡಿಗೇಡಿಗಳ ವಿರುದ್ಧ ರೊಚ್ಚಿಗೆದ್ದಿರುವ ಕನ್ನಡಿಗರು `ಬೆಂಗಳೂರು ಹೇಟರ್ಸ್ ನಗರ ಬಿಟ್ಟು ತೊಲಗಿ’ ಹಾಗೂ ಬೆಂಗಳೂರು ನಮ್ಮದು ಎಂದು ಟ್ವಿಟ್ಟರ್ ಮೂಲಕ ಅಭಿಯಾನ ಪ್ರಾರಂಭಿಸಿದ್ದಾರೆ.

    ನೀವು ಬೆಂಗಳೂರಿಗೆ ಬಂದಿರುವುದು ಬ್ರೆಡ್ ಮತ್ತು ಬಟರ್ ತಿನ್ನಲು, ನಿಮ್ಮ ಕೆಲಸ ಮುಗಿಸಿಕೊಂಡು ಬೆಂಗಳೂರು ಬಿಟ್ಟಿ ತೊಲಗಿ. ನೀವು ತೆರಿಗೆ ಕಟ್ಟಿದರೂ ಬೆಂಗಳೂರಿನಲ್ಲಿ ಇರಬೇಡಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಗುಂಡಿನ ದಾಳಿ – ಅಲ್ ಖೈದಾದ ಇಬ್ಬರು ಉಗ್ರರು ಹತ್ಯೆ

    ಮತ್ತೊಂದೆಡೆ ಕ್ರಿಕೆಟ್ ಎಂ.ಎಸ್. ಧೋನಿ ಬೆಂಗಳೂರಿನ ಬಗ್ಗೆ ಮಾತನಾಡಿರುವ ವೀಡಿಯೋ ಒಂದು ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಬೆಂಗಳೂರಿನಲ್ಲಿ ನಿಮ್ಮೆಲ್ಲರನ್ನು ನೋಡಿ ನನಗೆ ಹೊಟ್ಟೆ ಉರಿಯುತ್ತಿದೆ. ಏಕೆಂದರೆ ಇದಕ್ಕೆ ಬೆಂಗಳೂರಿನ ವಾತಾವರಣ ಕಾರಣ ಎಂದು ಬೆಂಗಳೂರನ್ನು ಹೊಗಳಿದ್ದಾರೆ.

    ಇನ್ನೊಂದೆಡೆ ಈ ಅಭಿಯಾನಕ್ಕೆ ಕೆಲ ಪರ ರಾಜ್ಯದ ಜನರು ಕೂಡ ಸಾಥ್ ನೀಡುತ್ತಿದ್ದಾರೆ. ನಾನು ಚೆನ್ನೈ ಮೂಲದ ವ್ಯಕ್ತಿ, ಬೆಂಗಳೂರು ಬಿಡಿ ಅಭಿಯಾನಕ್ಕೆ ನಾನು ಬೆಂಬಲಿಸುತ್ತೇನೆ. ಆದರೆ #ಬೆಂಗಳೂರು ನನಗೆ ಬ್ರೆಡ್ ಮತ್ತು ಬಟರ್ ನೀಡಿದೆ. ಇದು ನನ್ನ ಎರಡನೇ ಮನೆ. ಇಂದು ನಾನು ಹಿಂತಿರುಗಿಸುವ ಸಮಯ ಬಂದಿದೆ. ನಾನು ಎಂದಿಗೂ ಬೆಂಗಳೂರಿನಿಂದ ಓಡಿಹೋಗುವುದಿಲ್ಲ ಮತ್ತು ನಾನು ಅದರೊಂದಿಗೆ ನಿಲ್ಲುತ್ತೇನೆ. ಬೆಂಗಳೂರು ನನ್ನ ಊರು ಎಂದು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ನನ್ನ ಹೃದಯ ಕದ್ದಿದ್ದೀಯಾ, ಜೋಪಾನವಾಗಿಡು ಕಳ್ಳ’ ಎಂದು ಪತಿಗೆ ಹೇಳಿದ ನಟಿ ಮಹಾಲಕ್ಷ್ಮಿ

    ‘ನನ್ನ ಹೃದಯ ಕದ್ದಿದ್ದೀಯಾ, ಜೋಪಾನವಾಗಿಡು ಕಳ್ಳ’ ಎಂದು ಪತಿಗೆ ಹೇಳಿದ ನಟಿ ಮಹಾಲಕ್ಷ್ಮಿ

    ದುವೆ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಯದ್ವಾತದ್ವಾ ಟ್ರೋಲ್ ಆಗುತ್ತಿರುವ ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಹೇಗೆ ಜೊತೆಯಾದರು ಎನ್ನುವ ಬಗ್ಗೆ ನಟಿ ಮಹಾಲಕ್ಷ್ಮಿ ರೊಮ್ಯಾಂಟಿಕ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಮೊದಲು ಯಾರು, ಯಾರ ಹೃದಯ ಕದ್ದರು ಎನ್ನುವುದನ್ನೂ ಅವರು ಬಹಿರಂಗ ಪಡಿಸಿದ್ದಾರೆ. ಕದ್ದ ಹೃದಯವನ್ನು ಜೋಪಾನವಾಗಿ ಕಾಪಾಡಿಕೊಳ್ಳುವಂತೆಯೂ ತಿಳಿಸಿದ್ದಾರೆ.

    ಮಹಾಲಕ್ಷ್ಮಿ ಅವರು ದುಡ್ಡಿನ ಆಸೆಗೆ ರವೀಂದರ್ ಅವರನ್ನು ಮದುವೆಯಾಗಿದ್ದಾರೆ ಎಂದು ಟ್ರೋಲ್ ಮಾಡಲಾಗುತ್ತಿತ್ತು. ಮಹಾಲಕ್ಷ್ಮಿ ಅವರೇ ಪ್ರಪೋಸ್ ಮಾಡಿರಬಹುದು ಎನ್ನುವ ಅನುಮಾನ ಕೂಡ ವ್ಯಕ್ತವಾಗಿತ್ತು. ಇವೆಲ್ಲವಕ್ಕೂ ಉತ್ತರ ಕೊಟ್ಟಿರುವ ನಟಿ, ಮೊದಲು ಪ್ರಪೋಸ್ ಮಾಡಿದ್ದು ರವೀಂದರ್ ಎಂದು ಹೇಳಿದ್ದಾರೆ. ಹಾಗಾಗಿ ‘ನನ್ನ ಹೃದಯವನ್ನು ಕದ್ದಿದ್ದೀರಿ. ಅದನ್ನು ಜೋಪಾನವಾಗಿ ನೋಡಿಕೊಳ್ಳಿ’ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ಪ್ರೀ ವೆಡ್ಡಿಂಗ್ ಫೋಟೋಶೂಟ್‌ನಲ್ಲಿ ಮಿಂಚಿದ `ಕಮಲಿ’ ಖ್ಯಾತಿಯ ಗೇಬ್ರಿಯೆಲಾ- ಸುಹಾಸ್

    ತಮಿಳು ಸಿನಿಮಾ ರಂಗದಲ್ಲಿ ನಿರ್ಮಾಪಕ ರವೀಂದ‍ರ್ ಮತ್ತು ನಟಿ ಮಹಾಲಕ್ಷ್ಮಿ ಮದುವೆ ವಿಚಾರ ಸಖತ್ ಸದ್ದು ಮಾಡಿದೆ. ಈ ಜೋಡಿಯ ಬಗ್ಗೆ ನಾನಾ ರೀತಿಯ ನೆಗೆಟಿಗ್ ಕಾಮೆಂಟ್ ಗಳು ಹರಿದು ಬರುತ್ತಿವೆ. ಇದೊಂದು ದುಡ್ಡಿನ ಆಸೆಗೆ ಆಗಿರುವ ವಿವಾಹ ಎಂದು ಗಾಸಿಪ್ ಹಬ್ಬಿಸಲಾಗಿದೆ. ಏನೇ ಗಾಸಿಪ್ ಗಳು ಬಂದರೂ, ದಂಪತಿ ಮಾತ್ರ ಖುಷಿ ಖುಷಿಯಾಗಿ ಇದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಲವ್ ಯೂ ಅಮ್ಮು’ ಎಂದು ನಿರ್ಮಾಪಕನ ಜೊತೆ ಸಪ್ತಪದಿ ತುಳಿದ ನಟಿ ಮಹಾಲಕ್ಷ್ಮೀ: ಮದುವೆ ಬಗ್ಗೆ ಅನುಮಾನಗೊಂಡ ಅಭಿಮಾನಿಗಳು

    ‘ಲವ್ ಯೂ ಅಮ್ಮು’ ಎಂದು ನಿರ್ಮಾಪಕನ ಜೊತೆ ಸಪ್ತಪದಿ ತುಳಿದ ನಟಿ ಮಹಾಲಕ್ಷ್ಮೀ: ಮದುವೆ ಬಗ್ಗೆ ಅನುಮಾನಗೊಂಡ ಅಭಿಮಾನಿಗಳು

    ಮಿಳಿನ ಖ್ಯಾತ ಕಿರುತೆರೆ ನಟಿ ಮಹಾಲಕ್ಷ್ಮೀ ಮದುವೆ ಆಗುವ ಮೂಲಕ ನಿನ್ನೆ ಬೆಳ್ಳಂಬೆಳಗ್ಗೆ ಅಭಿಮಾನಿಗಳಿಗೆ ಖುಷಿ ಸುದ್ದಿ ಕೊಟ್ಟಿದ್ದಾರೆ. ಆದರೆ, ಅದನ್ನು ಸಂಭ್ರಮಿಸೋಕೆ ರೆಡಿಯಾಗಿಲ್ಲ ಅಭಿಮಾನಿಗಳು. ಕಾರಣ ಮಹಾಲಕ್ಷ್ಮೀ ಆಯ್ಕೆ ಮಾಡಿಕೊಂಡ ಹುಡುಗ. ತಮಿಳಿನ ಶ್ರೀಮಂತ ನಿರ್ಮಾಪಕ ರವೀಂದ್ರ ಚಂದ್ರಶೇಖರ್ ಜೊತೆ ನಿನ್ನೆ ಬೆಳಿಗ್ಗೆ ಹೊಸ ಜೀವನಕ್ಕೆ ಕಾಲಿಟ್ಟಿರುವ ಮಹಾಲಕ್ಷ್ಮಿ, ಆ ಮದುವೆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು. ಹುಡುಗನ ಕಂಡು ಅಭಿಮಾನಿಗಳು ಬೆಚ್ಚಿ ಬಿದ್ದಿದ್ದಾರೆ.

    ಪ್ರೀತಿ ಕುರುಡು ನಿಜ. ಹಾಗಂತ ಮಹಾಲಕ್ಷ್ಮೀ ಅಭಿಮಾನಿಗಳು ಒಪ್ಪಿಕೊಳ್ಳುತ್ತಿಲ್ಲ. ಕಾರಣ ರವೀಂದ್ರ ಅವರ ಧಡೂತಿ ದೇಹ. ಮಹಾಲಕ್ಷ್ಮಿ ಗುಬ್ಬಚ್ಚಿ ಮರಿಯಂತೆ ಕಂಡರೆ, ರವೀಂದ್ರ ನಟಿಗಿಂತೂ ಮೂರ್ನಾಲ್ಕು ಪಟ್ಟ ದಪ್ಪ ಇದ್ದಾರೆ. ಹಾಗಾಗಿ ಇದು ನಿಜವಾಗಿಯೂ ನಡೆದ ಮದುವೆನಾ? ಅಥವಾ ಸೀರಿಯಲ್ ದೃಶ್ಯನಾ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಪ್ರೀತಿಗೆ ಎಲ್ಲವನ್ನೂ ತಡೆದುಕೊಳ್ಳುವ ಶಕ್ತಿ ಇದೆ ಎಂದು ಹಲವರು ಹಾರೈಸಿದ್ದಾರೆ. ಇದನ್ನೂ ಓದಿ:ಮ್ಯೂಸಿಕಲ್ ಲವ್ ಸ್ಟೋರಿಗೆ ನಾಯಕಿಯಾದ ಮೇಘಶ್ರೀ

    ಇದು ಇಬ್ಬರಿಗೂ ಎರಡನೇ ಮದುವೆ. ಮಹಾಲಕ್ಷ್ಮೀಗೆ ಒಂದು ಮಗು ಕೂಡ ಇದೆ. ಇದೆಲ್ಲವನ್ನೂ ರವೀಂದ್ರ ಒಪ್ಪಿಕೊಂಡಿದ್ದರೆ, ರವೀಂದ್ರ ಅವರ ಎಲ್ಲ ವಿಚಾರವನ್ನೂ ತಿಳಿದುಕೊಂಡು ಮಹಾಲಕ್ಷ್ಮಿ ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರೂ ಖುಷಿಯಿಂದ ಇರುವ ಹೊತ್ತಿನಲ್ಲಿ ‘ನಟಿಯು ಹಣಕ್ಕಾಗಿ ಆತನನ್ನು ಮದುವೆಯಾಗಿದ್ದಾರೆ’ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಏನೇ ಇರಲಿ, ಇಬ್ಬರೂ ಇಷ್ಟಪಟ್ಟು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂದಿನ ಜೀವನ ಚೆನ್ನಾಗಿರಲಿ ಎಂದು ಹಾರೈಸೋಣ.

    Live Tv
    [brid partner=56869869 player=32851 video=960834 autoplay=true]