Tag: Troll

  • ಟ್ರೋಲ್‌ಗಳಿಗೆ ನಾನು ತಲೆ ಕೆಡಿಸಿಕೊಳ್ಳೊಲ್ಲ, ಮಧು ಬಂಗಾರಪ್ಪ ಮಧು ಬಂಗಾರಪ್ಪನೇ: ಟ್ರೋಲರ್‌ಗಳ ವಿರುದ್ಧ ಕಿಡಿ

    ಟ್ರೋಲ್‌ಗಳಿಗೆ ನಾನು ತಲೆ ಕೆಡಿಸಿಕೊಳ್ಳೊಲ್ಲ, ಮಧು ಬಂಗಾರಪ್ಪ ಮಧು ಬಂಗಾರಪ್ಪನೇ: ಟ್ರೋಲರ್‌ಗಳ ವಿರುದ್ಧ ಕಿಡಿ

    ಬೆಂಗಳೂರು: ನಾನು ವಿದ್ಯಾರ್ಥಿ (Student) ವಿರುದ್ದ ಕ್ರಮಕ್ಕೆ ಸೂಚನೆ ನೀಡಿಲ್ಲ. ಹೆಡ್ ಮಾಸ್ಟರ್ ಮತ್ತು ಬಿಇಓ ವಿರುದ್ದ ಕ್ರಮಕ್ಕೆ ಸೂಚನೆ‌ ನೀಡಿದ್ದು ಎಂದು ಹೇಳುವ ಮೂಲಕ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಯೂಟರ್ನ್ ಹೊಡೆದಿದ್ದಾರೆ.

    ಶಿಕ್ಷಣ ಸಚಿವರಿಗೆ ಕನ್ನಡ (Kannada) ಬರುವುದಿಲ್ಲ ಎಂದಿದ್ದ ವಿದ್ಯಾರ್ಥಿ ವಿರುದ್ದ ಕ್ರಮಕ್ಕೆ ಸೂಚನೆ ನೀಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡುವಾಗ ಮತ್ತೆ ಮಾಧ್ಯಮಗಳ ಮೇಲೆ ಗರಂ ಆದರು. ನಾನು ಟ್ರೋಲ್‌ಗೆ (Troll) ಹೆದರುವುದಿಲ್ಲ. ವಿದ್ಯಾರ್ಥಿ ವಿರುದ್ದ ಕ್ರಮ ತೆಗೆದುಕೊಳ್ಳಿ ಎಂದು ನಾನು ಹೇಳಿಲ್ಲ. ಹೆಡ್ ಮಾಸ್ಟರ್, ಬಿಇಓ ವಿರುದ್ದ ಕ್ರಮ ತೆಗೆದುಕೊಳ್ಳಿ ಅಂತ ಹೇಳಿದ್ದು. ನಾನೇ ಅದನ್ನು ಹೇಳಿದ್ದೇನೆ ಎಂದರು.

    ನಾನು ಶಿಕ್ಷಣ ಸಚಿವ. ನಿಮ್ಮ ಮಕ್ಕಳನ್ನ ಶಾಲೆಗೆ ಕಳುಹಿಸುತ್ತೀರಿ. ನಿಮ್ಮ ಮಕ್ಕಳನ್ನು ತಪ್ಪು ಮಾಡೋಕೆ‌ ಬಿಡ್ತೀರಾ ಟ್ರೋಲ್‌ಗಳಿಗೆಲ್ಲಾ ತಲೆಕೆಡಿಸಿಕೊಳ್ಳೋ ಮಧು ಬಂಗಾರಪ್ಪ ಅಲ್ಲ ನಾನು. ಮಕ್ಕಳ ಮೇಲೆ ಆಕ್ಷನ್ ತಗೊಳ್ಳೋಕೆ ನಮಗೆ ಅಧಿಕಾರ ಇಲ್ಲ. ನಿಮ್ಮ ಮಕ್ಕಳನ್ನ ಹತೋಟಿಯಲ್ಲಿ ಇಡಬೇಕು ಅಂತ ಹೆಡ್ ಮಾಸ್ಟರ್, ಬಿಇಓ ವಿರುದ್ದ ಕ್ರಮಕ್ಕೆ ಸೂಚನೆ ನೀಡಿದ್ದೇನೆ. ನಿಮ್ಮ ಮಗ ಹಾಗೆ ಮಾತನಾಡಿದ್ರೆ ನೀವು ಏನ್ ಮಾಡ್ತಿದ್ರಿ?ನಾನಾಗಿದ್ರೆ ನನ್ನ ಮಗನ ಜೊತೆ ಮಾತಾಡುತ್ತಿದ್ದೆ ಅಂತ ಮತ್ತೆ ರಾಂಗ್ ಆದ್ರು. ಮಾಧ್ಯಮಗಳು ಸುಮ್ಮನೆ ಇಲ್ಲದೆ ಇರೋದು ತರಬೇಡಿ. ಪದೇ ಪದೇ ಇದನ್ನ ತರೋದು ಮಾಧ್ಯಮಗಳು ಕಿಡಿಕಾರಿದರು.

     

    ಮೊಟ್ಟೆ ಕೊಟ್ಟಿರೋ ವಿಚಾರ ಯಾರು ಹೇಳುವುದಿಲ್ಲ . ಶಿಕ್ಷಣ ಸಚಿವರಿಗೆ ಕನ್ನಡ ಬರುವುದಿಲ್ಲ ಎನ್ನುವುದನ್ನು ಹಾಕುತ್ತೀರಿ. 60-70 ಸಾವಿರ ಮಕ್ಕಳು ಇದ್ದಾಗ ಮಾತಾಡೋದು ಮಕ್ಕಳು ಸರಿಯಲ್ಲ. ಇದನ್ನ ಶಾಲೆಯಲ್ಲಿ ಶಿಸ್ತು ತರೋಕೆ ಆಗುತ್ತಾ? ನಾನು ತಂದೆಯಾಗಿ ನಾನು ಇದನ್ನ ಹೇಳ್ತಿದ್ದೇನೆ. ನೀವು ಟ್ರೋಲ್ ಮಾಡಿದ್ರೆ ಪುಕ್ಸಟ್ಟೆ ನನಗೇನು ಆಗಬೇಕಿದೆ. ಮಧು ಬಂಗಾರಪ್ಪ ಮಧು ಬಂಗಾರಪ್ಪನೇ ಆಗಿರುತ್ತಾನೆ‌ ಅಂತ ತಿಳಿಸಿದರು. ಇದನ್ನೂ ಓದಿ: RC 16: ಮೈಸೂರು ಚಾಮುಂಡೇಶ್ವರಿ ದೇವಸ್ಥಾನದ ಮುಂದೆ ಸ್ಕ್ರಿಪ್ಟ್‌ ಹಿಡಿದು ನಿಂತ ‘ಉಪ್ಪೇನ’ ಡೈರೆಕ್ಟರ್‌

    ಬಿಸಿ ನಾಗೇಶ್ ಅವರು ಮಧು ಬಂಗಾರಪ್ಪ ಗೆ ಇಲಾಖೆ ಏನು ಗೊತ್ತಿಲ್ಲ ಅಂದರು. ಅದಕ್ಕೆ ‌ನಮ್ಮಂತ ದಡ್ಡರನ್ನ ಹೈ ಲೀಡ್ ನಲ್ಲಿ ಗೆಲ್ಲಿಸಿ ಅವರನ್ನ ಸೋಲಿಸಿದ್ದಾರೆ. ಸಭಾಪತಿ ಹೊರಟ್ಟಿ ಅವರು ನನಗೆ ಕರೆ ಮಾಡಿ ಒಳ್ಳೆ ಕೆಲಸ ಮಾಡಿದ್ದೀಯಾ ಅಂದರು. ನನ್ನ ಜವಾಬ್ದಾರಿ ನಾನು ಮಾಡಿದ್ದೇನೆ. ಟ್ರೋಲ್ ಮಾಡಿದವರು ನಿಮ್ಮ ಮಕ್ಕಳು ಹೀಗೆ ಮಾಡಿದ್ರೆ ಏನ್ ಮಾಡ್ತೀರಾ ಯೋಚನೆ ಮಾಡಿ. ಸಿದ್ದರಾಮಯ್ಯ ಕೊಟ್ಟ ಜವಾಬ್ದಾರಿ ನಾನು ನನ್ನ ಮಕ್ಕಳನ್ನ ನೋಡಿಕೊಂಡಂತೆ ಶಾಲಾ ಮಕ್ಕಳನ್ನು ನೋಡಿಕೊಳ್ತೀನಿ. ಇನ್ನು ಮೇಲೆ ಇದೆಲ್ಲ ರಬ್ಬಿಶ್ ಅನ್ನ ನಿಲ್ಲಿಸಿ ಸಾಕು ಇದು ಸರಿಯಲ್ಲ ಅಂತ ಮಾಧ್ಯಮಗಳ ಮೇಲೆ ಕಿಡಿಕಾರಿದರು.

     

    ಟ್ರೋಲ್ ಮಾಡಿಕೊಂಡು ನನ್ನನ್ನ ಬಗ್ಗಿಸೋಕೆ ಯಾರಿಂದಲೂ ಸಾಧ್ಯವಿಲ್ಲ. ನನ್ನ ವಿರುದ್ದ 7-8 ತಿಂಗಳಿಂದ ಟ್ರೋಲ್‌ ನಡೆಯುತ್ತಿದೆ. ಮಕ್ಕಳನ್ನ ಸರಿ ದಾರಿಗೆ ತರಬೇಕು. ಅಂತಹ ಕಾರ್ಯಕ್ರಮದಲ್ಲಿ ಹಾಗೆ ಮಾತಾಡಿದ್ರೆ ಹೇಗೆ ಹೇಳಿ. ನಾಳೆ ಸಿಎಂ, ನ್ಯಾಯಾಧೀಶರ ಕಾರ್ಯಕ್ರಮದಲ್ಲಿ ಇದ್ದಾಗ ಹಾಗೆ ಹೇಳಿದ್ರೆ ಹೇಗೆ. ತಲೆಯಲ್ಲಿ ಏನಾದ್ರು ಇದ್ದರೆ ಟ್ಯಾಕ್ಸ್ ಹಣವನ್ನು ಮಕ್ಕಳಿಗಾಗಿ ಖರ್ಚು ಮಾಡ್ತಿದ್ದೇವೆ. ಅದನ್ನ ಮಾಡಿ ಎಂದರು.

    ನನಗೆ ಕನ್ನಡ ಬರಲ್ಲ ಅಂದರೆ ನೀವು ಹೇಳಿಕೊಟ್ರೆ ನಾನೇನು ಉದ್ದಾರ ಆಗಲ್ಲ. ನನ್ ರಕ್ತದಲ್ಲಿ ಕನ್ನಡ ಇದೆ. ನಾವು ಚಿಕ್ಕವರು ಇದ್ದಾಗ ನಮಗೆ ಹೇಳಿ ಕೊಟ್ಟಿದ್ದೇ ಇಷ್ಟು. ನಾನು ನಿಮಗೆ ಎಕ್ಸಾಂ ಮಾಡ್ತೀನಿ. 1 ರಾಂಕ್ ನಿಂದ 30 ರಾಂಕ್ ಬರ್ತಿರಾ. 30 ರಾಂಕ್ ಇರೋನು ಕೆಟ್ಟೋನು ಅಂತೀರಾ‌. ಇದೆಲ್ಲ ಬಿಟ್ಟು ಬಿಡಬೇಕು. ಇದೆಲ್ಲ ಸಾಕು ಅಂತ ಮಾಧ್ಯಮಗಳ ಮೇಲೆ ಕಿಡಿಕಾರಿದರು.

     

  • ರಿಷಿ ಸುನಕ್‌ ವಿದಾಯ ಭಾಷಣದ ವೇಳೆ ಗಮನಸೆಳೆದ ಪತ್ನಿ ಅಕ್ಷತಾ ಡ್ರೆಸ್-‌ ಫುಲ್‌ ಟ್ರೋಲ್‌

    ರಿಷಿ ಸುನಕ್‌ ವಿದಾಯ ಭಾಷಣದ ವೇಳೆ ಗಮನಸೆಳೆದ ಪತ್ನಿ ಅಕ್ಷತಾ ಡ್ರೆಸ್-‌ ಫುಲ್‌ ಟ್ರೋಲ್‌

    ಲಂಡನ್:‌ ಮಾಜಿ ಪ್ರಧಾನಿ ರಿಷಿ ಸುನಕ್‌ (Rishi Sunak) ಅವರ ವಿದಾಯ ಭಾಷಣದ ವೇಳೆ ಪತ್ನಿ ಅಕ್ಷತಾ ಮೂರ್ತಿ (Akshata Murthy) ಅವರ ಡ್ರೆಸ್‌ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಅಲ್ಲದೇ ಇದೀಗ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.

    ಬ್ರಿಟಿಷ್ ಸಾರ್ವತ್ರಿಕ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬಳಿಕ ರಿಷಿ ಸುನಕ್‌ ಅವರು ಡೌನಿಂಗ್ ಸ್ಟ್ರೀಟ್‌ನಲ್ಲಿರುವ ಪ್ರಧಾನ ಮಂತ್ರಿ ಕಚೇರಿಯ ಹೊರಗೆ ತಮ್ಮ ವಿದಾಯ ಭಾಷಣ ಮಾಡಿದರು. ಈ ವೇಳೆ ಪತ್ನಿ ಅಕ್ಷತಾ ಮೂರ್ತಿಯವರು ಪತಿಯ ಹಿಂದೆ ಶಾಂತವಾಗಿ ನಿಂತು ಭಾಷಣ ಕೇಳುತ್ತಿರುವುದು ಕಂಡುಬಂತು. ಆದರೆ ಅಕ್ಷತಾ ಮೂರ್ತಿ ಪತಿಯ ವಿದಾಯ ಭಾಷಣದ ವೇಳೆ ಧರಿಸಿದ್ದ ಡ್ರೆಸ್ (Akshata Murthy Dress) ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಕ್ಷತಾ ಅವರ ಈ ಉಡುಗೆ ಸಾಕಷ್ಟು ಟ್ರೋಲ್ ಆಗುತ್ತಿದೆ.

    ಡ್ರೆಸ್‌ ಟ್ರೋಲ್‌ ಯಾಕೆ..?: ಅಕ್ಷತಾ ಅವರು ಕಡು ನೀಲಿ, ಬಿಳಿ ಮತ್ತು ಕೆಂಪು ಬಣ್ಣವಿರುವ ಉಡುಪನ್ನು ಧರಿಸಿದ್ದರು. ಸುನಕ್‌ನ ಭಾಷಣದ ಸಮಯದಲ್ಲಿ ಎಲ್ಲರ ಕಣ್ಣುಗಳು ಅಕ್ಷತಾ ಉಡುಪಿನತ್ತ ವಾಲಿದೆ. ಈ ಡ್ರೆಸ್ ಬೆಲೆ 395 ಪೌಂಡ್ ಅಂದರೆ ಬರೋಬ್ಬರಿ 42 ಸಾವಿರ ರೂಪಾಯಿ ಆಗಿರುತ್ತದೆ. ಹಾಗಾದ್ರೆ ಈ ಡ್ರೆಸ್‌ನಲ್ಲಿ ಏನಿತ್ತು? ಟ್ರೋಲ್‌ಗೆ ಏಕೆ ಕಾರಣವಾಯಿತು? ಎಂಬುದನ್ನು ನೋಡೋದಾದ್ರೆ ವಾಸ್ತವವಾಗಿ ನೀಲಿ, ಬಿಳಿ ಮತ್ತು ಕೆಂಪು ಬಣ್ಣಗಳು ಬ್ರಿಟಿಷ್ ಧ್ವಜವನ್ನು ಹೋಲುತ್ತವೆ. ಇದನ್ನೂ ಓದಿ: UK Elections 2024: ಕ್ಷಮೆ ಕೇಳಿ ಸೋಲಿನ ಹೊಣೆ ಹೊತ್ತುಕೊಂಡ ರಿಷಿ ಸುನಾಕ್‌

    ಅಕ್ಷತಾ ಧರಿಸಿರುವ ಡ್ರೆಸ್‌ ಕೆಂಪು, ನೀಲಿ ಮತ್ತು ಬಿಳಿ ಪಟ್ಟೆಗಳನ್ನು ಹೊಂದಿತ್ತು. ಅವುಗಳು ಟೋರಿ ಧ್ವಜದ (The Tory Flag) ಬಣ್ಣಗಳಾಗಿವೆ. ಹೀಗಿರುವಾಗ ಅಕ್ಷತಾ ಮೂರ್ತಿ ಈ ಡ್ರೆಸ್ ತೊಡುವ ಮೂಲಕ ಟೋರಿಯ ಸದ್ಯದ ಪರಿಸ್ಥಿತಿಯನ್ನು ಬಿಂಬಿಸಿದ್ದಾರೆ ಎಂದು ಅಲ್ಲಿನ ಜನ ಹೇಳುತ್ತಿದ್ದಾರೆ.

    ಸದ್ಯ ಅಕ್ಷತಾ ಡ್ರೆಸ್‌ ಟ್ರೋಲ್‌ ಆಗುತ್ತಿದ್ದು, ಅಕ್ಷತಾ ಮೂರ್ತಿ ಅವರ ಉಡುಗೆ ಸ್ಟೀರಿಯೋಗ್ರಾಮ್ ಆಗಿದೆ ಎಂದು ಓರ್ವ ಬಳಕೆದಾರ ಹೇಳಿದರೆ, ಇನ್ನೊಬ್ಬ ಈ ಡ್ರೆಸ್‌ ಅನ್ನು ತುಂಬಾ ದೂರದಿಂದ ನೀವು ನೋಡಿದರೆ, ʼನೀವು ಕ್ಯಾಲಿಫೋರ್ನಿಯಾಗೆ ಹಾರುತ್ತಿರುವ ವಿಮಾನವನ್ನು ನೋಡುತ್ತೀರಿ’ ಎಂದು ಹೇಳಿದ್ದಾರೆ. ಹೀಗೆ ಹಲವಾರು ಮಂದಿ ಡ್ರೆಸ್‌ ಬಗ್ಗೆ ಟ್ರೋಲ್‌ ಮಾಡುತ್ತಿದ್ದಾರೆ.

  • ಪ್ಯಾಲೆಸ್ತೀನ್‌ ಬೆಂಬಲಿಸಿದ್ದಕ್ಕೆ ಟ್ರೋಲ್‌ ಬೆನ್ನಲ್ಲೇ ಹಿಟ್‌ಮ್ಯಾನ್‌ ಪತ್ನಿ ಪೋಸ್ಟ್‌ ಡಿಲೀಟ್

    ಪ್ಯಾಲೆಸ್ತೀನ್‌ ಬೆಂಬಲಿಸಿದ್ದಕ್ಕೆ ಟ್ರೋಲ್‌ ಬೆನ್ನಲ್ಲೇ ಹಿಟ್‌ಮ್ಯಾನ್‌ ಪತ್ನಿ ಪೋಸ್ಟ್‌ ಡಿಲೀಟ್

    ಕ್ರಿಕೆಟಿಗ ರೋಹಿತ್ ಶರ್ಮಾ (Rohit Sharma) ಸದ್ಯಕ್ಕೆ ಟಿ20 ವಿಶ್ವಕಪ್ ಆಡಲು ಅಮೆರಿಕಾದಲ್ಲಿ (America) ತರಬೇತಿ ಪಡೆಯುತ್ತಿದ್ದಾರೆ. ಆದರೆ ಅವರ ಪತ್ನಿ ರಿತಿಕಾ ಸಜ್ದೇ (Ritika Sajdeh) ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೋಲ್ ಆಗುತ್ತಿದ್ದಾರೆ.

    ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿಯನ್ನು ಅಪ್‌ಡೇಟ್ ಮಾಡುವಾಗ, ಅವರು ‘ಆಲ್ ಐಸ್ ಆನ್ ರಫಾ’ (All Eyes On Rafah) ಅನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದಾರೆ. ಕೂಡಲೇ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗಿದ್ದು, ನೆಟ್ಟಿಗರು ಟೀಕಿಸಲು ಪ್ರಾರಂಭಿಸಿದರು. ವಿವಾದವಾಗುತ್ತಿದ್ದಂತೆಯೇ ರೋಹಿತ್‌ ಪತ್ನಿ ತಮ್ಮ ಪೋಸ್ಟ್‌ ಅನ್ನು ಡಿಲೀಟ್‌ ಮಾಡಿದ್ದಾರೆ.

    ಟ್ರೋಲ್‌ ಯಾಕೆ?: ಇತ್ತೀಚೆಗೆ ಪ್ಯಾಲೇಸ್ತೀನಿಯನ್ ನಗರ ರಫಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 45 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದಾದ ಬಳಿಕ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ಯಾಲೆಸ್ತೀನ್‌ನೊಂದಿಗೆ ತಮ್ಮ ಒಗ್ಗಟ್ಟನ್ನು ತೋರಿಸಲು ‘ಆಲ್ ಐಸ್ ಆನ್ ರಾಫಾ’ ಅನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಹ್ಯಾಶ್‌ಟ್ಯಾಗ್ ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ವಿಶ್ವಾದ್ಯಂತ ಭಾರೀ ಟ್ರೆಂಡಿಂಗ್ ಆಯಿತು. ಇದನ್ನೂ ಓದಿ: ನಿರಾಶ್ರಿತರಿದ್ದ ಡೇರೆಗಳ ಮೇಲೆ ಇಸ್ರೇಲ್‌ ವಾಯುದಾಳಿ; 45 ಮಂದಿ ಸಾವು

    ಇತ್ತ ರಿತಿಕಾ ಸಜ್ದೇ ಅವರು ತಮ್ಮ ಇನ್‌ಸ್ಟಾಗ್ರಾಮ್ (Instagram) ಸ್ಟೋರಿಯಲ್ಲಿ ಇದನ್ನು ಹಂಚಿಕೊಂಡಿದ್ದಾರೆ. ರಿತಿಕಾ ಪೋಸ್ಟ್‌ ಮಾಡುತ್ತಿದ್ದಂತೆಯೇ ಭಾರೀ ಟೀಕೆಗೆ ಗುರಿಯಾದರು. ಪ್ಯಾಲೆಸ್ತೀನ್ (Palestine) ಜನತೆಯನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದಕ್ಕಾಗಿ ಟ್ರೋಲ್‌ ಮಾಡಿ ಆಕ್ರೋಶ ಹೊರಹಾಕಿದರು. ಎಕ್ಸ್‌ ಬಳಕೆದಾರರಲ್ಲಿ ಕೆಲವರು ಭಾರತೀಯ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಆರೋಪಿಸಿದರು. ಇನ್ನೂ ಕೆಲವರು ರಾಫಾ ಎಲ್ಲಿದ್ದಾರೆ ಎಂದು ರಿತಿಕಾಗೆ ತಿಳಿದಿಲ್ಲ ಎಂದು ಲೇವಡಿ ಮಾಡಿದ್ದಾರೆ. ಈ ಬೆನ್ನಲ್ಲೇ ರಿತಿಕಾ ತಮ್ಮ ಸಾಮಾಜಿಕ ಜಾಲತಾಣ ಖಾತೆಯಿಂದ ಆ ಪೋಸ್ಟ್ ತೆಗೆದುಹಾಕಿದ್ದಾರೆ.

    ಈ ಬಗ್ಗೆ ರಿತಿಕಾ ಅಥವಾ ರೋಹಿತ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸಹ ಪ್ಯಾಲೆಸ್ತೀನ್ ಜನರಿಗೆ ತಮ್ಮ ಬೆಂಬಲವನ್ನು ತೋರಿಸಿದ್ದಾರೆ. ಇವರಲ್ಲಿ ಕರೀನಾ ಕಪೂರ್, ಆಲಿಯಾ ಭಟ್, ವರುಣ್ ಧವನ್, ತೃಪ್ತಿ ದಿಮ್ರಿ, ಸಮಂತಾ ಪ್ರಭು, ಫಾತಿಮಾ ಸನಾ ಶೇಖ್, ಸ್ವರಾ ಭಾಸ್ಕರ್ ಮತ್ತು ದಿಯಾ ಮಿರ್ಜಾ ಸೇರಿದ್ದಾರೆ.

  • ಕ್ರಿಕೆಟಿಗ ರಿಷಬ್ ಪಂತ್ ಕುರಿತು ಸ್ಪಷ್ಟನೆ ನೀಡಿದ ನಟಿ ಊರ್ವಶಿ

    ಕ್ರಿಕೆಟಿಗ ರಿಷಬ್ ಪಂತ್ ಕುರಿತು ಸ್ಪಷ್ಟನೆ ನೀಡಿದ ನಟಿ ಊರ್ವಶಿ

    ಟಿ ಊರ್ವಶಿ ರೌಟೇಲಾ (Uravashi Rautela) ಮತ್ತು ರಿಷಬ್ ಪಂತ್  (Rishab Pant) ವಿಚಾರ ಆಗ್ಗಾಗ್ಗೆ ಸುದ್ದಿಯಲ್ಲಿರುತ್ತದೆ. ಮೊನ್ನೆಯಷ್ಟೇ ರಿಷಬ್ ಪಂತ್ ಹೈಟ್ ಬಗ್ಗೆ ಊರ್ವಶಿ ಟೀಕೆ ಮಾಡಿದ್ದರು. ಇದಕ್ಕೆ ಪಂತ್ ಅವರ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ಈ ಟೀಕೆಯ ಕುರಿತಂತೆ ನಟಿ ಸ್ಪಷ್ಟನೆ ನೀಡಿದ್ದಾರೆ. ಅದು ಜಾಹೀರಾತು ಒಂದರ ಡೈಲಾಗ್. ಅದಕ್ಕೂ ನನಗೂ ಸಂಬಂಧವಿಲ್ಲ. ನಾನು ರಿಷಬ್ ಬಗ್ಗೆ ನೆಗೆಟಿವ್ ಆಗಿ ಮಾತನಾಡುವುದಿಲ್ಲ ಎಂದಿದ್ದಾರೆ.

    ಜಾಹೀರಾತುವೊಂದರಲ್ಲಿ ತನ್ನೊಂದಿಗೆ ಸ್ನೇಹದಲ್ಲಿದ್ದವರ ಹೈಟ್ ಬಗ್ಗೆ ಟೀಕಿಸಿರುವ ಊರ್ವಶಿ, ಕ್ರಿಕೆಟಿಗನೊಬ್ಬನ ಹೈಟ್ ನನ್ನ ಎದೆಮುಟ್ಟುವಷ್ಟೂ ಇಲ್ಲ ಎಂದು ಪರೋಕ್ಷವಾಗಿ ಕುಳ್ಳ ಎಂದಿದ್ದರು. ಇದು ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಊರ್ವಶಿಯನ್ನೂ ನಾನಾ ರೀತಿಯಲ್ಲಿ ಟ್ರೋಲ್ ಮಾಡಲಾಗಿತ್ತು. ಈ ಹಿಂದೆ ರಿಷಬ್ ಪಂತ್ ಅವರಿಗೆ ಕಾರು ಅಪಘಾತವಾಗಿತ್ತು. ಮುಂಬೈನ(Mumbai)  ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಿಷಬ್ ಹಿಂದೆಯೂ ಊರ್ವಶಿ ಬಿದ್ದಿದ್ದರು. ನಟಿಯ ವರ್ತನೆಗೆ ಅನೇಕರು ಛೀಮಾರಿ ಹಾಕಿದ್ದಾರೆ. ಜೊತೆಗೆ ಊರ್ವಶಿಯನ್ನು ತರಾಟೆಗೆ ತೆಗೆದುಕೊಂಡದ್ದರು.

    ರಿಷಬ್ ಪಂತ್ ಜೊತೆ ಊರ್ವಶಿ ಈ ಮೊದಲು ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿತ್ತು. ಆದರೆ, ಇದನ್ನು ಇಬ್ಬರೂ ಒಪ್ಪಿಕೊಂಡಿರಲಿಲ್ಲ. ಈ ಮಧ್ಯೆ ಇಬ್ಬರ ನಡುವೆ ಬ್ರೇಕಪ್ ಆಗಿದೆ ಎನ್ನಲಾಯಿತು. ನಟಿ ಊರ್ವಶಿ ಈ ಹಿಂದೆ ಅವರು ಮಾಧ್ಯಮವೊಂದಕ್ಕೆ ಹೇಳಿಕೆ ನೀಡುವಾಗ ರಿಷಬ್ ಪಂತ್ ನನ್ನ ಭೇಟಿ ಮಾಡಲು ಹಲವು ಗಂಟೆ ಕಾದಿದ್ದರು ಎಂದಿದ್ದರು. ಇದು ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಈ ಬಗ್ಗೆ ಕ್ರಿಕೆಟಿಗ ರಿಷಬ್ ಕೂಡ ನಟಿಗೆ ಖಡಕ್ ಆಗಿ ತಿರುಗೇಟು ನೀಡಿದ್ದರು.

     

    ರಿಷಬ್ ಪಂತ್ ಕಾರು ಅಪಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾಗ. ಅವರಿಗೆ ಚಿಕಿತ್ಸೆ ನೀಡುವ ಕೆಲಸ ಆಗುತ್ತಿತ್ತು. ಆಗಲೂ ಊರ್ವಶಿ ಅವರು ರಿಷಬ್ ಅವರನ್ನು ಹಿಂಬಾಲಿಸಿದ್ದರು. ರಿಷಬ್‌ಗೆ ಅಪಘಾತದ ವಿಚಾರ ತಿಳಿದಾಗ ʻಪ್ರಾರ್ಥನೆʼ (Prayer) ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದು ರಿಷಬ್‌ಗಾಗಿ ಹೇಳಿದ ಮಾತು ಎನ್ನಲಾಗಿತ್ತು. ಊರ್ವಶಿ ತಾಯಿ, ರಿಷಬ್ ಬೇಗ ಚೇತರಿಕೆ ಕಾಣಲಿ ಎಂದು ಬರೆದುಕೊಂಡಿದ್ದರು. ಇದಕ್ಕಾಗಿ ಊರ್ವಶಿಯನ್ನು ನೆಟ್ಟಿಗರು ಟೀಕೆ ಮಾಡಿದ್ದರು.

  • ದರ್ಶನ್ ಕುರಿತು ನೆಗೆಟಿವ್ ಟ್ರೋಲ್: ಸಿಡಿದೆದ್ದ ಫ್ಯಾನ್ಸ್

    ದರ್ಶನ್ ಕುರಿತು ನೆಗೆಟಿವ್ ಟ್ರೋಲ್: ಸಿಡಿದೆದ್ದ ಫ್ಯಾನ್ಸ್

    ನ್ನಡದ ಹೆಸರಾಂತ ನಟ ದರ್ಶನ್ (Darshan) ಅವರ ಸಿನಿಮಾರಿಲೀಸ್ ಆಗುವ ವೇಳೆಯಲ್ಲೇ ಬೇಕು ಅಂತಾನೇ ಕೆಲವರು ನೆಗೆಟಿವ್ ಟ್ರೋಲ್ (Troll) ಮಾಡುತ್ತಾರೆ. ಈ ಬಾರಿಯೂ ಕಾಟೇರ  (Katera)ಕುರಿತಾಗಿ ಟ್ರೋಲ್ ಮಾಡಲಾಗುತ್ತಿದೆ. ಈ ಕುರಿತಂತೆ ದರ್ಶನ್ ಫ್ಯಾನ್ಸ್ ಗರಂ ಆಗಿದ್ದಾರೆ. ನೆಗೆಟಿವ್ ಟ್ರೋಲ್ ಮಾಡುವವರನ್ನು ಹುಡುಕುವ ಪ್ರಯತ್ನವನ್ನು ಅವರು ಮಾಡುತ್ತಿದ್ದಾರೆ.

    ಕನ್ನಡ ಸಿನಿಮಾ ಕುರಿತಂತೆ ದರ್ಶನ್ ಮೊನ್ನೆಯಷ್ಟೇ ಗಟ್ಟಿ ಧ್ವನಿಯಲ್ಲಿ ಮಾತನಾಡಿದ್ದಾರೆ. ನಮ್ಮದು ಪ್ಯಾನ್ ಇಂಡಿಯಾ ಸಿನಿಮಾವಲ್ಲ, ಅಪ್ಪಟ ಕನ್ನಡ ಸಿನಿಮಾ. ನಮ್ಮ ನೆಲದಲ್ಲಿ ಬೇರೆ ಸಿನಿಮಾಗಳು ರಿಲೀಸ್ ಆಗೋಕೆ ಭಯ ಪಡಬೇಕು. ನಾವೇಕೆ ಭಯ ಪಡಬೇಕು ಎಂದೆಲ್ಲ ಮಾತನಾಡಿದ್ದಾರೆ. ಈ ಕುರಿತಂತೆಯೂ ಟ್ರೋಲ್ ಮಾಡಲಾಗುತ್ತಿದೆ.

    ನಾನಾ ಕಾರಣಗಳಿಂದಾಗಿ ಕಾಟೇರ ಸಿನಿಮಾ ನಿರೀಕ್ಷೆ ಮೂಡಿಸಿದೆ. ಇವತ್ತು ಸಿನಿಮಾದ ಟ್ರೈಲರ್ ಕೂಡ ಬಿಡುಗಡೆ ಆಗುತ್ತಿದೆ. ಅದಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ದರ್ಶನ್ ಹೊಸ ಬಗೆಯ ಪಾತ್ರ ಮಾಡಿದ್ದು, ಆ ಪಾತ್ರವನ್ನು ನೋಡಲು ನೋಡುಗರು ಕಾಯುತ್ತಿದ್ದಾರೆ.

     

    ಇದರ ಸೃಷ್ಟಿಕರ್ತರು ತರುಣ್ ಸುಧೀರ್ (Tarun Sudhir). ರಾಕ್ಲೈನ್ ವೆಂಕಟೇಶ್ (Rock Line Venkatesh) ಅದ್ಧೂರಿ ನಿರ್ಮಾಣದಲ್ಲಿ ತಯಾರಾಗುತ್ತಿರುವ ಚಿತ್ರ. ದರ್ಶನ್ (Darshan) ಅಭಿನಯದ 56ನೇ ಸಿನಿಮಾ ಕೂಡ ಇದಾಗಿದೆ. ದರ್ಶನ್ ಕಾಟೇರನಾಗಿ ಬರುತ್ತಿದ್ದಾರೆ. ಒಂದೇ ಒಂದು ಲುಕ್ನಲ್ಲೇ ಮಾಸ್ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಹಿಂದಿನ 55 ಸಿನಿಮಾಗಳಲ್ಲಿ ದರ್ಶನ್ ಕಾಣಿಸ್ಕೊಂಡಿದ್ದೇ ಬೇರೆ. ಇದುವೇ ಬೇರೆ. ಔಟ್ ಆ್ಯಂಡ್ ಔಟ್ ಹಳ್ಳಿ ಬ್ಯಾಕ್ಡ್ರಾಪ್.

  • ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ಕುಳಿತ ಮಿಚೆಲ್ ಮಾರ್ಷ್- ಭಾರೀ ಟ್ರೋಲ್

    ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ಕುಳಿತ ಮಿಚೆಲ್ ಮಾರ್ಷ್- ಭಾರೀ ಟ್ರೋಲ್

    ಅಹಮ್ಮದಾಬಾದ್: ವಿಶ್ವಕಪ್ 2023 ರಲ್ಲಿ (World Cup 2023) ಆಸ್ಟ್ರೇಲಿಯಾ ಗೆಲುವಿನ ನಗೆ ಬೀರಿದ ಬೆನ್ನಲ್ಲೇ ಇದೀಗ ತಂಡದ ಆಟಗಾರ ಮಿಚೆಲ್ ಮಾರ್ಷ್ (Mitchell Marsh) ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

    ಹೌದು. ಮಿಚೆಲ್ ಟ್ರೋಫಿ (World Cup Trophy) ಮೇಲೆ ಕಾಲಿಟ್ಟು ಕುಳಿತ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಟ್ರೋಫಿಗೆ ಅಗೌರವ ಸೂಚಿಸಿರುವ ಮಿಚೆಲ್ ನಡೆಯನ್ನು ಜನ ಖಂಡಿಸಿದ್ದು, ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ರೋಹಿತ್‌ ಶರ್ಮಾ ವಿಶ್ವದಲ್ಲೇ ಅತ್ಯಂತ ನತದೃಷ್ಟ ವ್ಯಕ್ತಿ – ಶತಕ ಸಿಡಿಸಿದ ಟ್ರಾವಿಸ್‌ ಹೇಡ್‌ ಮಾತು

    ಫೋಟೋದಲ್ಲಿ ಮಿಚೆಲ್ ಅವರು ತಮ್ಮ ಎರಡೂ ಕಾಲುಗಳನ್ನು ವಿಶ್ವಕಪ್ ಟ್ರೋಫಿಯ ಮೇಲೆ ಇಟ್ಟು ಗೆದ್ದು ಬೀಗಿದ್ದೇವೆ ಎಂಬ ಸಿಂಬಲ್ ತೋರಿಸಿದ್ದಾರೆ. ಈ ಫೋಟೋವನ್ನು ಆರಂಭದಲ್ಲಿ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ತಮ್ಮ ಇನ್‍ಸ್ಟಾಗ್ರಾಂ (Instagram) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಮ್ಮಿನ್ಸ್ ಫೋಟೋ ಶೇರ್ ಮಾಡುತ್ತಿದ್ದಂತೆಯೇ ಇದು ಭಾರೀ ವೈರಲ್ ಆಯಿತು. ಮಿಚೆಲ್ ವಿಶ್ವಕಪ್‍ಗೆ ಅಗೌರವ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಟ್ರೋಲ್ ಮಾಡಲಾಗುತ್ತಿದೆ.

    ಆಸ್ಟ್ರೇಲಿಯಾ ವಿಶ್ವಕಪ್ ಟ್ರೋಫಿ ಗೆದ್ದ ಕೆಲವೇ ಗಂಟೆಗಳ ನಂತರ ಈ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ನವೆಂಬರ್ 19 ರ ಭಾನುವಾರ ಅಹಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ (IND Vs AUS) ಆಟವಾಡಿದೆ. ಪಂದ್ಯ ಗೆದ್ದ ಬಳಿ ಆಸ್ಟ್ರೇಲಿಯಾ ತಂಡವು ಹೋಟೆಲ್‍ನಲ್ಲಿ ಆರಾಮವಾಗಿ ಕುಳಿತುಕೊಂಡು ಮಾತನಾಡುತ್ತಿರುವುದು ಫೋಟೋದಲ್ಲಿ ಕಂಡುಬಂದಿದೆ.

    ವಿಶ್ವಕಪ್ ಗೆಲುವಿನ ಹಂಬಲದಲ್ಲಿದ್ದ ಭಾರತ ಕ್ರಿಕೆಟ್ ತಂಡ ಅಂತಿಮ ಹಂತದಲ್ಲಿ ಎಡವಿದ್ದು, ಆಸ್ಟ್ರೇಲಿಯಾ ಆರು ವಿಕೆಟ್‍ಗಳ ಜಯ ಸಾಧಿಸಿತು.

  • 1 ಲಕ್ಷ + ಅಭಿಮಾನಿಗಳ ಮುಂದೆ ಪಾಕ್‌ ಆಟಗಾರನನ್ನು ಟ್ರೋಲ್‌ಗೈದ ಕೊಹ್ಲಿ

    1 ಲಕ್ಷ + ಅಭಿಮಾನಿಗಳ ಮುಂದೆ ಪಾಕ್‌ ಆಟಗಾರನನ್ನು ಟ್ರೋಲ್‌ಗೈದ ಕೊಹ್ಲಿ

    ಅಹಮದಾಬಾದ್‌: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಶ್ವಕಪ್‌ ಕ್ರಿಕೆಟ್‌ (Wordl Cup Cricket) ಪಂದ್ಯದಲ್ಲಿ ಪಾಕ್‌ (Pakistan) ತಂಡದ ರಿಜ್ವಾನ್‌ ಮೊಹಮ್ಮದ್‌ (Mohammad Rizwan) ಅವರನ್ನು ವಿರಾಟ್‌ ಕೊಹ್ಲಿ ಟ್ರೋಲ್‌ ಮಾಡಿದ್ದಾರೆ.

    12.3 ಓವರ್‌ನಲ್ಲಿ ಇಮಾಮ್‌-ಉಲ್‌-ಹಕ್‌ ಔಟಾದ ನಂತರ ರಿಜ್ವಾನ್‌ ಕ್ರೀಸ್‌ಗೆ ಆಗಮಿಸಿದರು. ಈ ವೇಳೆ ಗಾರ್ಡ್‌ ತೆಗೆದುಕೊಳ್ಳಲು ರಿಜ್ವಾನ್‌ ಕೆಲ ನಿಮಿಷ ತೆಗೆದುಕೊಂಡರು. ಅಂದಾಜು ಬ್ಯಾಟರ್‌ ತೆಗೆದುಕೊಳ್ಳುವ ಸೆಕೆಂಡ್‌ಗಿಂತಲೂ ಹೆಚ್ಚು ಸಮಯ ತೆಗೆದುಕೊಂಡಿದ್ದಕ್ಕೆ ಕೊಹ್ಲಿ (Virat Kohli) ವಾಚ್‌ ಕಟ್ಟುವ ಎಡಗೈನ್ನು ನೋಡಿ “ಎಷ್ಟು ಸಮಯ ಎಂದು” ಪ್ರಶ್ನೆ ಮಾಡುವಂತೆ ಟ್ರೋಲ್‌ ಮಾಡಿದರು.

    https://twitter.com/RajeshKuri16/status/1713142199968559597

    ಶ್ರೀಲಂಕಾ ವಿರುದ್ಧ ಸೆಂಚೂರಿ ಸಿಡಿಸಿದ್ದ ರಿಜ್ವಾನ್‌ ಈ ಪಂದ್ಯದಲ್ಲಿ 1 ರನ್‌ನಿಂದ ಅರ್ಧಶತಕ ವಂಚಿತರಾದರು. 69 ಎಸೆತ ಎದುರಿಸಿದ ರಿಜ್ವಾನ್‌ 7 ಬೌಂಡರಿಯೊಂದಿಗೆ 49 ರನ್‌ಗಳಿಸಿ ಔಟಾದರು. ಪಾಕಿಸ್ತಾನ 29.3 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 155 ರನ್‌ಗಳಿಸಿ ಸುಭದ್ರ ಸ್ಥಿತಿಯಲ್ಲಿ ಇತ್ತು. ಆದರೆ ಯಾವಾಗ ಬಾಬರ್‌ ಅಜಂ ಔಟಾದರೋ ಅಲ್ಲಿಂದ ಕುಸಿತ ಆರಂಭವಾಯಿತು. ಮಧ್ಯಮ ಕ್ರಮಾಂಕದಲ್ಲಿ ಯಾರು ಪ್ರತಿರೋಧ ನೀಡದ ಪರಿಣಾಮ ಕೇವಲ 36 ರನ್‌ಗಳ ಅಂತರದಲ್ಲಿ 8 ವಿಕೆಟ್‌ ಕಳೆದುಕೊಂಡು 42.5 ಓವರ್‌ಗಳಲ್ಲಿ 191 ರನ್‌ಗಳಿಗೆ ಸರ್ವಪತನ ಕಂಡಿತು.  ಇದನ್ನೂ ಓದಿ: Ind Vs Pak: ಪಾಕ್‌ ತಂಡಕ್ಕೆ ಅಗೌರವ ತೋರಬೇಡಿ – ಟೀಂ ಇಂಡಿಯಾ ಫ್ಯಾನ್ಸ್‌ಗೆ ಗಂಭೀರ್‌ ಮತ್ತೆ ಕ್ಲಾಸ್‌

    ಬಾಬರ್‌ ಅಜಂ (Babar Azam) ಮತ್ತು ರಿಜ್ವಾನ್‌ (Mohammad Rizwan) 3ನೇ ವಿಕೆಟಿಗೆ 103 ಎಸೆತಗಳಲ್ಲಿ 82 ರನ್‌ ಜೊತೆಯಾಟವಾಡಿದ್ದರು. 50 ರನ್‌ (58 ಎಸೆತ, 7 ಬೌಂಡರಿ) ಹೊಡೆದಿದ್ದ ಅಜಂ ಅವರನ್ನು ಸಿರಾಜ್‌ ಬೌಲ್ಡ್‌ ಮಾಡಿದರೆ 49 ರನ್‌ (69 ಎಸೆತ, 7 ಬೌಂಡರಿ) ಹೊಡೆದಿದ್ದ ರಿಜ್ವಾನ್‌ ಅವರನ್ನು ಬುಮ್ರಾ ಬೌಲ್ಡ್‌ ಮಾಡಿದರು.

    ಬುಮ್ರಾ , ಸಿರಾಜ್‌, ಪಾಂಡ್ಯ, ಕುಲದೀಪ್‌ ಯಾದವ್‌ , ಜಡೇಜಾ ತಲಾ ಎರಡು ವಿಕೆಟ್‌ ಪಡೆದರು. ಬುಮ್ರಾ 7 ಓವರ್‌ ಅದರಲ್ಲಿ 1 ಮೇಡನ್‌ ಸೇರಿ 19 ರನ್‌ ನೀಡಿದರೆ ಕುಲದೀಪ್‌ ಯಾದವ್‌ 10 ಓವರ್‌ ಹಾಕಿ 35 ರನ್‌ ನೀಡಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪತಿಯ ಮೇಲೆಯೇ ಗುರುತರ ಆರೋಪ ಮಾಡಿದ್ರಾ ನಟಿ ಮಹಾಲಕ್ಷ್ಮಿ

    ಪತಿಯ ಮೇಲೆಯೇ ಗುರುತರ ಆರೋಪ ಮಾಡಿದ್ರಾ ನಟಿ ಮಹಾಲಕ್ಷ್ಮಿ

    ಮಿಸ್ ಮ್ಯಾಚ್ ಜೋಡಿ ಎಂದೇ ಟ್ರೋಲ್ ಆಗಿದ್ದ ನಟಿ ಮಹಾಲಕ್ಷ್ಮೀ ಅವರು ತಮ್ಮ ಪತಿ, ನಿರ್ಮಾಪಕ ರವೀಂದ್ರ ಬಗ್ಗೆ ಗುರುತರ ಆರೋಪ ಮಾಡಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಹಣದ ವಂಚನೆ ಪ್ರಕರಣದಲ್ಲಿ ಜೈಲು (Jail) ಪಾಲಾಗಿರುವ ರವೀಂದ್ರ ಅವರಿಗೆ ಜಾಮೀನು ಸಿಗುತ್ತಿಲ್ಲ. ಹಾಗಂತ ಮಹಾಲಕ್ಷ್ಮಿ ಬೇಸರದಲ್ಲೂ ಇಲ್ಲ. ದಿನಕ್ಕೊಂದು ಫೋಟೋಶೂಟ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಾ, ಟ್ರೋಲ್ ಆಗುತ್ತಿದ್ದಾರೆ.

    ಈ ನಡುವೆ ಮಹಾಲಕ್ಷ್ಮಿ ಅವರೇ ಆಡಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ. ಮದುವೆ ಆಗುವಾಗ ತನ್ನ ಗಂಡ ಸಾಲ ಮಾಡಿರುವ ಮತ್ತು ಅವರಿಗೆ ಮೋಸ ಮಾಡಿರುವ ಯಾವುದೇ ವಿಚಾರವನ್ನು ನನ್ನ ಜೊತೆ ಹಂಚಿಕೊಂಡಿಲ್ಲ. ಅವರು ನನಗೆ ಮೋಸ ಮಾಡಿ ಮದುವೆ ಆಗಿದ್ದಾರೆ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ. ಈ ಮಾತುಗಳು ಸಖತ್ ಸುದ್ದಿ ಆಗಿದ್ದರೂ, ಮಹಾಲಕ್ಷ್ಮಿ ಮಾತ್ರ ಇದು ನಿಜನಾ ಅಥವಾ ಸುಳ್ಳಾ ಎಂದು ಸ್ಪಷ್ಟ ಪಡಿಸಿಲ್ಲ.

    ಇತ್ತೀಚೆಗಷ್ಟೇ ರವೀಂದ್ರ (Ravindar Chandrasekaran), ಮಹಾಲಕ್ಷ್ಮಿ (Mahalakshmi) ಜೋಡಿಯು ಮೊದಲ ಮದುವೆ ವಾರ್ಷಿಕೋತ್ಸವ ಪೂರೈಸಿದ್ದರು. ಈ ಬೆನ್ನಲ್ಲೇ ವಂಚನೆ ಪ್ರಕರಣವೊಂದರಲ್ಲಿ ರವೀಂದ್ರ ಜೈಲು ಪಾಲಾದ್ರು. ಗಂಡ ಜೈಲು ಸೇರಿದ್ರೆ, ಹೆಂಡತಿ ಮಹಾಲಕ್ಷ್ಮಿ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ನಟಿಯ ನಡೆಗೆ ನೆಟ್ಟಿಗರು ಕಾಲೆಳೆದಿದ್ದಾರೆ.

    ಲೈಟ್ ಬಣ್ಣ ಸೀರೆಯಲ್ಲಿ ಮತ್ತೊಂದು ಹಳದಿ ಬಣ್ಣದ ಸೀರೆಯಲ್ಲಿ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿ ಮಿಂಚಿದ್ದಾರೆ. ಬಗೆ ಬಗೆಯ ಭಂಗಿಯಲ್ಲಿ ನಟಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಗಂಡ ಜೈಲಿನಲ್ಲಿದ್ರೆ ನೀವು ಫೋಟೋ ತೆಗೆಸಿ ಮೋಜು ಮಾಡ್ತೀರಾ ಅಂತಾ ಬಗೆ ಬಗೆಯ ಕಾಮೆಂಟ್ಸ್ ಸೋಶಿಯಲ್ ಮೀಡಿಯಾದಲ್ಲಿ ಹರಿದು ಬರುತ್ತಿದೆ.

    ರವೀಂದ್ರ ಚಂದ್ರಶೇಖರ್ ಅವರನ್ನು ವಂಚನೆ ಆರೋಪದ ಮೇಲೆ ತಮಿಳುನಾಡು ಪೊಲೀಸರು ಸೆ.8ರಂದು ಬಂಧಿಸಿದ್ದರು. 16 ಕೋಟಿ ರೂ. ವಂಚಿಸಿದ ಆರೋಪದಲ್ಲಿ ನಿರ್ಮಾಪಕ ರವೀಂದ್ರ ಅವರನ್ನು ಅರೆಸ್ಟ್ ಮಾಡಿದ್ದರು.

     

    ಮಾಧವ ಮೀಡಿಯಾ ಪ್ರೈ. ಲಿಮಿಟೆಡ್‌ನ ಬಾಲಾಜಿ ಕಾಪಾ (Balaji,) ಎಂಬ ಉದ್ಯಮಿಗೆ ನಿರ್ಮಾಪಕ ರವೀಂದ್ರ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದ್ದು, ತಮ್ಮ ಲಿಬ್ರಾ ಪ್ರೋಡಕ್ಷನ್ಸ್ ಅಡಿ ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಹಣ ಹೂಡಿಕೆ ಮಾಡುವಂತೆ ಉದ್ಯಮಿ ಬಾಲಾಜಿ ಅವರನ್ನು ಕೇಳಿದ್ದರು. ಅದರಂತೆ ಉದ್ಯಮಿ ಬಾಲಾಜಿ ಅವರು ರವೀಂದ್ರಗೆ 2020ರ ಸೆಪ್ಟೆಂಬರ್‌ನಲ್ಲಿ 16 ಕೋಟಿ ರೂ. ಹಣ ವರ್ಗಾವಣೆ ಮಾಡಿದ್ದರು. ಉದ್ಯಮಿ ಬಳಿ ಹಣ ಪಡೆದು ಯೋಜನೆಗೆ ಚಾಲನೆ ನೀಡಿಲ್ಲ. ಪಡೆದ ಹಣವನ್ನು ಹಿಂತಿರುಗಿಸಿಲ್ಲ ಎಂದು ತಮಿಳುನಾಡು ಪೊಲೀಸರಿಗೆ ಉದ್ಯಮಿ ದೂರು ನೀಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟ್ರೋಲ್‌ನಿಂದ ನನ್ನ ಕನ್ನಡ ಮತ್ತಷ್ಟು ಸ್ಪಷ್ಟವಾಗಲಿದೆ: ಯುಟಿ ಖಾದರ್‌

    ಟ್ರೋಲ್‌ನಿಂದ ನನ್ನ ಕನ್ನಡ ಮತ್ತಷ್ಟು ಸ್ಪಷ್ಟವಾಗಲಿದೆ: ಯುಟಿ ಖಾದರ್‌

    ಬೆಂಗಳೂರು: ಟ್ರೋಲ್‌ನಿಂದ (Troll) ನನ್ನ ಕನ್ನಡ ಮತ್ತಷ್ಟು ಸ್ಪಷ್ಟವಾಗಲಿದೆ ಎಂದು ವಿಧಾನಸಭಾ ಸ್ಪೀಕರ್‌ ಯುಟಿ ಖಾದರ್‌ (UT Khader) ಹೇಳಿದ್ದಾರೆ.

    ಬೆಂಗಳೂರು ಪ್ರೆಸ್ ಕ್ಲಬ್ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ನನ್ನ ಕನ್ನಡದ (Kannada) ಬಗ್ಗೆ ಟ್ರೋಲ್ ಮಾಡುವವರು ಮಾಡಲಿ. ಸಹಜವಾಗಿ ಕರಾವಳಿ ಪ್ರದೇಶದವರಾದ ನಾವು ತುಳು (Tulu) ಭಾಷೆ ಮಾತನಾಡುವವರು ಸಿಕ್ಕಿದಾಗ ತುಳುವಿನಲ್ಲೇ ಮಾತಾಡುತ್ತೇವೆ. ಅವರ ಟ್ರೋಲ್‌ನಿಂದಾಗಿ ನನ್ನ ಕನ್ನಡ ಇನ್ನಷ್ಟು ಚೆನ್ನಾಗಿ ಸ್ಪಷ್ಟವಾಗಲಿದೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಪಾಕಿಸ್ತಾನ ತಂಡದಲ್ಲಿ ಎಲ್ಲರೂ ಉತ್ತಮ ಬೌಲರ್‌ಗಳೇ – ರೋಹಿತ್‌ ಶರ್ಮಾ

     

    ಶಾಸಕರನ್ನು ಅಮಾನತು ಮಾಡಿದ್ದು ಸರಿಯೇ ಎಂದು ಕೇಳಲಾದ ಪ್ರಶ್ನೆಗೆ, ಸಂವಿಧಾನ ಪ್ರಕಾರ ನಾನು ನಡೆದುಕೊಂಡಿದ್ದೇನೆ. ಸದನ ಮುಗಿಯುವ‌ ತನಕ ಶಾಸಕರ ಅಮಾನತು ಇತ್ತು. ಈಗ ಸದನ ಮುಗಿದಿದೆ. ಮತ್ತೆ ಚರ್ಚೆ ಬೇಡ ಎಂದರು.

    ಶಾಸಕರ ತರಬೇತಿ ಶಿಬಿರಕ್ಕೆ ರವಿಶಂಕರ್ ಗುರೂಜಿಗೆ (Ravi Shankar Guruji) ಆಹ್ವಾನ‌ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಎಡವೂ ಅಲ್ಲ, ಬಲವೂ ಅಲ್ಲ‌. ಕಷ್ಟದಲ್ಲಿರುವ ಎಡ, ಬಲ ಪರ ಇದ್ದೇನೆ. ಕಷ್ಟದಲ್ಲಿರುವ ಇಬ್ಬರನ್ನ ಒಟ್ಟಿಗೆ ತೆಗೆದುಕೊಂಡು ಹೋಗುತ್ತೇನೆ. ಅಂದು ನೂತನ ಶಾಸಕರಿಗೆ ಯಾರಿಗೂ ವಿರೋಧ ಇರಲಿಲ್ಲ, ಸಾಮಾಜಿಕ ಜಾಲತಾಣದಲ್ಲಿ ವಿರೋಧ ಮಾಡಿದರು. ಹೊರಗೆ ಕೆಲವರು ವಿರೋಧ ಮಾಡಿದರು. ಈಗ ಶಿಬಿರವೂ ಮುಗಿದು ಹೋಯ್ತಲ್ಲ ಬಿಡಿ ಎಂದರು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಳಿವಯಸ್ಸಿನವರ ಜೊತೆ ತಮನ್ನಾ ನಟನೆ: ಟ್ರೋಲ್ ಮಾಡಿದವರ ವಿರುದ್ಧ ನಟಿ ಗರಂ

    ಇಳಿವಯಸ್ಸಿನವರ ಜೊತೆ ತಮನ್ನಾ ನಟನೆ: ಟ್ರೋಲ್ ಮಾಡಿದವರ ವಿರುದ್ಧ ನಟಿ ಗರಂ

    ಕ್ಷಿಣದ ಖ್ಯಾತ ತಾರೆ ತಮನ್ನಾ (Tamannaah) ನಟನೆಯ ವೆಬ್ ಸರಣಿ ಮತ್ತು ಕಾವಾಲಾ ಹಾಡು ಫೇಮಸ್ ಆಗುತ್ತಿದ್ದಂತೆಯೇ ಅವರನ್ನು ಸಾಕಷ್ಟು ರೀತಿಯಲ್ಲಿ ನೆಗೆಟಿವ್ ಟ್ರೋಲ್ (Troll)ಮಾಡಲಾಗುತ್ತಿದೆ. ಅದರಲ್ಲಿ ತಮಗಿಂತ ಎರಡು ಪಟ್ಟು ವಯಸ್ಸಿನ ನಟರ ಜೊತೆ ತಮನ್ನಾ ತೆರೆ ಹಂಚಿಕೊಳ್ಳುತ್ತಿದ್ದಾರೆ ಎಂದು ಆಡಿಕೊಳ್ಳಲಾಗುತ್ತಿದೆ. ಇಳಿವಯಸ್ಸಿನವರ ಜೊತೆ ಪಾತ್ರ ಮಾಡಲು ತಮನ್ನಾ ಒಪ್ಪಿಕೊಳ್ಳುವುದಕ್ಕೆ ಕಾರಣವೇನು? ಎಂದು ಕೇಳಲಾಗುತ್ತಿದೆ. ಅದಕ್ಕೆ ತಮನ್ನಾ ತಮ್ಮದೇ ಆದ ರೀತಿಯಲ್ಲಿ ಉತ್ತರ ಕೊಟ್ಟಿದ್ದಾರೆ.

    ಮಾಧ್ಯಮವೊಂದರ ಜೊತೆ ಮಾತನಾಡಿದ ತಮನ್ನಾ, ‘ಸಿನಿಮಾದಲ್ಲಿ ವಯಸ್ಸಿನ ಅಂತರದ ಪಾತ್ರಗಳೇ ಇರಬಾರದಾ? ನಾನು ಪಾತ್ರ ಮಾಡುತ್ತಿದ್ದೇನೆ, ಅವರ ಜೊತೆ ಸಂಸಾರವಲ್ಲ’ ಎಂದು ಖಡಕ್ಕಾಗಿಯೇ ಉತ್ತರಿಸಿದ್ದಾರೆ. ಅಲ್ಲದೇ, ಹಾಲಿವುಡ್ ನಟ ಟಾಮ್ ಕ್ರೂಸ್ ಅವರನ್ನು ನೆನಪಿಸಿಕೊಂಡಿದ್ದಾರೆ. ಅವರು ಈ ವಯಸ್ಸಿನಲ್ಲೂ ಅದ್ಭುತ ಸ್ಟಂಟ್ ಮಾಡುತ್ತಾರೆ. ಅವರ ಹಾಗೆ ಆ ವಯಸ್ಸಿನಲ್ಲಿ ನಾನೂ ಮಾಡಬೇಕು’ ಎಂದಿದ್ದಾರೆ. ಇದನ್ನೂ ಓದಿ:ನಂದಿನಿ ಜಾಹೀರಾತಿಗೆ ಯಾವುದೇ ಸಂಭಾವನೆ ಪಡೆಯಲ್ಲ: ನಟ ಶಿವರಾಜ್ ಕುಮಾರ್

    ಲಸ್ಟ್ ಸ್ಟೋರಿಸ್ 2, ಜೀ ಕರ್ದಾ ಪ್ರಾಜೆಕ್ಟ್‌ನಲ್ಲಿ ನಟಿ ತಮನ್ನಾ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಸಂಚಲನ ಮೂಡಿಸಿದ್ದರು. ತಮನ್ನಾ ಹಸಿ ಬಿಸಿ ದೃಶ್ಯಕ್ಕೆ ಕೆಲವರು ವಿರೋಧಿಸಿದ್ರೆ, ಇನ್ನೂ ಕೆಲವರು ಮೆಚ್ಚುಗೆ ಸೂಚಿಸಿದ್ದರು. ಇತ್ತೀಚಿಗೆ ರಜನಿಕಾಂತ್ (Rajanikanth) ನಟನೆಯ ‘ಜೈಲರ್’ ಸಿನಿಮಾದಲ್ಲಿ ತಮನ್ನಾ ಸಾಥ್ ನೀಡಿದ್ದರು. ಚಿತ್ರದ ಕಾವಾಲಾ ಹಾಡಿಗೆ ಅದ್ಭುತವಾಗಿ ಹೆಜ್ಜೆಗೆ ಹಾಕಿದ್ದರು. ಅವರ ಎಕ್ಸ್ಪ್ರೇಷನ್‌ಗೆ ಪಡ್ಡೆಹುಡುಗರು ಕಳೆದು ಹೋಗಿದ್ದರು.‌

     

    ಅಷ್ಟರ ಮಟ್ಟಿಗೆ ತಮನ್ನಾ ‘ಕಾವಾಲಾ’ (Kaavala) ಸಾಂಗ್ ಎಲ್ಲೆಲ್ಲೂ ವೈರಲ್ ಆಗುತ್ತಿದೆ. ಚಿಕ್ಕವರಿಂದ ದೊಡ್ಡವರ ತನಕ ಈ ಸಾಂಗ್‌ಗೆ ರೀಲ್ಸ್ ಮಾಡ್ತಿದ್ದಾರೆ. ಸದ್ಯ ಜೈಲರ್ (Jailer) ಸಿನಿಮಾದ ಕಾವಾಲಾ ರಿಲೀಸ್ ಈವೆಂಟ್‌ಗೆ ತಮನ್ನಾ ಭಾಗಿಯಾಗಿದ್ದಾರೆ. ಅದಕ್ಕಾಗಿ ಸಖತ್ ಹಾಟ್ & ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]