Tag: Trivikrama Sapalya

  • ‘ಕೊರಗಜ್ಜ’ ಚಿತ್ರ ನಿರ್ದೇಶಕನಿಗೆ ಭರ್ಜರಿ ಗಿಫ್ಟ್

    ‘ಕೊರಗಜ್ಜ’ ಚಿತ್ರ ನಿರ್ದೇಶಕನಿಗೆ ಭರ್ಜರಿ ಗಿಫ್ಟ್

    ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫ಼ಿಲ್ಮ್ಸ್ ಬ್ಯಾನರ್ ನಡಿ ಬಹುನಿರೀಕ್ಷಿತ, ಬಹುಕೋಟಿ ಬಜೆಟ್ ನ “ಕೊರಗಜ್ಜ” (Koragajja) ಸಿನಿಮಾದ ಮೊದಲ ಪ್ರತಿ ಇನ್ನೇನು ಕೈ ಸೇರಲಿದೆ ಎನ್ನುವ ಸಂದರ್ಭದಲ್ಲಿ , ಸಿನಿಮಾ ನೋಡಿ ನಿರ್ಮಾಪಕ ತ್ರಿವಿಕ್ರಮ ಸಪಲ್ಯ (Trivikrama Sapalya) , ಸಿನಿಮಾದ ಗುಣಮಟ್ಟ, ತಾಂತ್ರಿಕತೆ ಮತ್ತು ಮಾಸ್ ಅಪೀಲ್ ಗೆ ಫಿದಾ ಆಗಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ನಿರ್ದೇಶಕ ಸುಧೀರ್ ಅತ್ತಾವರ್ (Sudhir Attavar) ಗೆ ಟಾಪ್ ಎಂಡ್ ಕಿಯಾ ಕೇರನ್ಸ್ ಕಾರನ್ನೇ ಗಿಫ಼್ಟ್ ಮಾಡಿದ್ದಾರೆ.  ನಿರ್ದೇಶಕರ ಸ್ರಜನಶೀಲ ತಾಂತ್ರಿಕ ನೈಪುಣ್ಯತೆಯೊಂದಿಗೆ ಸುಮಾರು 15ಕೋಟಿ ಬಜೆಟ್ ನ  ಈ ಸಿನೆಮಾ ಯಾವ ಮಟ್ಟದಲ್ಲಿ ಮೂಡಿ ಬಂದಿರಬಹುದೆನ್ನುವುದಕ್ಕೆ ಇದು ಉದಾಹರಣೆ” .- ಎಂದು ಖ್ಯಾತ ಕಲಾವಿದೆ ಭವ್ಯರವರು ಈ ಸಂದರ್ಭದಲ್ಲಿ ಹೇಳಿದರು. ತಾನು ಇಂತಹ ಸಿನಿಮಾದಲ್ಲಿ ಪಾರ್ಟ್ ಮಾಡಿದ್ದು ಇನ್ನಿಲ್ಲದ ಹೆಮ್ಮೆ ಮತ್ತು ಪುನೀತಭಾವ  ಮೂಡಿಸಿದೆ ಎಂದು ಮಾತು ಸೇರಿಸಿದರು.

    ನಿರ್ಮಾಪಕ ತ್ರಿವಿಕ್ರಮ ತಮ್ಮ ಮಾತು ಮುಂದುವರೆಸುತ್ತಾ;  ” ನನ್ನ ತ್ರಿವಿಕ್ರಮ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ  ಈ ಮಟ್ಟದಲ್ಲಿ ಸಿನಿಮಾ ಒಂದು ಮೂಡಿ ಬರುತ್ತದೆ ಎಂದು ನಾನು ಊಹಿಸಿರಲಿಲ್ಲ. “ಕೊರಗಜ್ಜ” ಸಿನಿಮಾ ಎಲ್ಲಾ ಊಹೆಯನ್ನು ಮೀರಿ ಅದ್ಭುತ ರೀತಿಯಲ್ಲಿ ಮೂಡಿಬಂದಿದೆ.  ಭಾರತೀಯ ಚಿತ್ರರಂಗದಲ್ಲೇ ಇದೊಂದು ವಿಶಿಷ್ಟ ಸಿನೆಮಾ ಆಗಿ ಮೂಡಿ ಬಂದಿದೆ . ನಿರ್ದೇಶಕರು ಸುಮಾರು ಒಂದುವರೆ ವರ್ಷ ಗಳ ಕಾಲ   ರೀಸರ್ಚ್ ಮಾಡಿ ಎಂಟು ನೂರು ವರ್ಷದ ಹಿಂದೆ ಬದುಕಿದ್ದ 23-24 ವರ್ಷ ಪ್ರಾಯದ  “ತನಿಯಾ” ಎನ್ನುವ ಆದಿವಾಸಿ ಹುಡುಗ “,  ಮಹಾನ್ ಶಕ್ತಿ “ಕೊರಗಜ್ಜ” ಆಗಿ  ಬೆಳಗುತ್ತಿರುವ ಬಗೆ ಹೇಗೆ ಎನ್ನುವುದನ್ನು ಕಣ್ಣಿಗೆ ಕಟ್ಟುವ ರೀತಿಯಲ್ಲಿ ವಿಭಿನ್ನ ಜ಼ೋನರ್ ನಲ್ಲಿ ಈ ಸಿನಿಮಾವನ್ನು ಮಾಡಿದ್ದಾರೆ…..! ಈ ಮಹಾನ್ ಶಕ್ತಿಯ ನ್ನು ಮರುಸ್ರಷ್ಟಿ ಮಾಡಿ ಸಸ್ಪೆನ್ಸ್, ಉತ್ಸುಕತೆ, ಥ್ರಿಲ್ಲರ್, ಊಹಿಸಲಾರದ  ತಿರುವುಗಳ ಕಥಾ ಹಂದರ ಮತ್ತು ಬಿಗಿದಿಟ್ಟುಕೊಳ್ಳುವ ಆಕರ್ಷಣೀಯ ಸ್ಕ್ರೀನ್ ಪ್ಲೆ ಸಿನಿಮಾವನ್ನು ಬೇರೆಯೇ ಮಜಲಿಗೆ ಕೊಂಡೊಯ್ದಿದೆ. ಕಬೀರ್ ಬೇಡಿ ಅಭಿನಯಿಸಿದ್ದ, ನೂರಾರು ಕಲಾವಿದರನ್ನು ಬಳಸಿಕೊಂಡು ಮೈನವಿನೇಳಿಸುವಂತೆ ಚಿತ್ರೀಕರಿಸಿದ್ದ ಯುದ್ಧ ಭೂಮಿಯ ಪರಿಕಲ್ಪನೆಯಂತೂ ಜಗತ್ತಿನ ಯಾವುದೇ “ವಾರ್” ಸಿನೆಮಾ ಸ್ರಷ್ಟಿಸುವ ಸಂಚಲನವನ್ನು “ಕೊರಗಜ್ಜ” ಸಿನಿಮಾ ಸ್ರಷ್ಟಿಸಿದೆ ಎಂದು  ಹೆಮ್ಮೆಯಿಂದ ಹೇಳಿಕೊಂಡರು.ಯುದ್ಧ ಸನ್ನಿವೇಷವನ್ನು ಚಿತ್ರೀಕರಿಸುವ ಸಮಯದಲ್ಲಿ  ಕಬೀರ್ ಬೇಡಿಯವರು  ಸುಧೀರ್ ಅತ್ತಾವರ್ ರನ್ನು”ವಾಟರ್ ವರ್ಲ್ಡ್” ಚಿತ್ರದ   ಹಾಲಿವುಡ್ ನಿರ್ದೇಶಕ ಕೆವಿನ್ ಹಾಲ್  ರೆಯ್ನಾಲ್ಡ್ಸ್ ಜೊತೆ ಯಾಕೆ ಕಂಪೇರ್ ಮಾಡಿದ್ದರು ಎನ್ನುವುದು ಈಗ ತಿಳಿದು ಬರುತ್ತಿದೆ ಎಂದು ತ್ರಿವಿಕ್ರಮ ನೆನಪಿಸಿ ಕೊಂಡರು.

     

    ನಿರ್ದೇಶನ ಮಾತ್ರವಲ್ಲದೆ, ಸಿನೆಮಾಗೆ ಕಲಾ ನಿರ್ದೇಶನ, ಕಾಸ್ಟ್ಯೂಮ್ ಹಾಗೂ ಮೇಕಪ್ ಡಿಸೈನ್ ಕೂಡಾ ಸುಧೀರ್ ಅತ್ತಾವರ್ ಅಧ್ಭುತವಾಗಿ ಮಾಡಿದ್ದಾರೆ ಎಂದು ತಮ್ಮ  ನಿರ್ದೇಶಕನ ಮೇಲೆ  ಹೆಮ್ಮೆ ಯ ಮಾತುಗಳನ್ನು ಹೇಳಿದರು. ಸುಧೀರ್ ರವರು ದೇಶಾದ್ಯಂತ ನೂರಾರು ನಾಟಕ ಪ್ರದರ್ಶನಗಳಲ್ಲಿ ಅಭಿನಯ, ಐವತ್ತರಷ್ಟು ನಾಟಕಗಳ ನಿರ್ದೇಶನ, ಮುಂಬಾಯಿಯ “ಇಪ್ಟಾ” ಮೊದಲಾದ ಸಂಸ್ಥೆಗಳ ನಂಟು.ಹೀಗೆ ರಂಗಭೂಮಿಯಲ್ಲಿ ಸಾಕಷ್ಟು ಪಳಗಿದ ಅವರ ಅನುಭವವೇ ಸಿನಿಮಾವನ್ನು ಈ ಮಟ್ಟಕ್ಕೆ ಕೊಂಡೊಯ್ದಿದೆ- ಎಂದು ಸೇರಿಸಿದರು.

  • ‘ಕೊರಗಜ್ಜ’ ಸಿನಿಮಾ ಶೂಟಿಂಗ್ ವೇಳೆ ಕಾಣಿಸಿಕೊಂಡ ಅಗೋಚರ ಶಕ್ತಿ

    ‘ಕೊರಗಜ್ಜ’ ಸಿನಿಮಾ ಶೂಟಿಂಗ್ ವೇಳೆ ಕಾಣಿಸಿಕೊಂಡ ಅಗೋಚರ ಶಕ್ತಿ

    ತ್ರಿವಿಕ್ರಮ ಸಪಲ್ಯ ನಿರ್ಮಾಣದ ಬಹುಕೋಟಿ ಬಜೆಟ್ ನ, ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲಂ ಸ್ ಬ್ಯಾನರ್ ನಡಿಯ   ‘ಕೊರಗಜ್ಜ’ ಸಿನಿಮಾ ಆರಂಭದಿಂದಲೂ ಹಲವಾರು ಪವಾಡ ಮತ್ತು ಸವಾಲುಗಳ ಜೊತೆ ತೊಂದರೆ ಗಳನ್ನು ಎದುರಿಸುತ್ತಾ ಬಂದಿರುವ ವಿಚಾರ ಗೊತ್ತೇ ಇದೆ. ಕೊಚ್ಚಿ ಮತ್ತು ಮುಂಬೈ ನಲ್ಲಿ ಕೊನೆಹಂತದ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದ್ದು, ದೈವ ನರ್ತನದ  ಪ್ರಮುಖ ದ್ರಶ್ಯವೊಂದನ್ನು ನಿನ್ನೆ ಮಧ್ಯರಾತ್ರಿಯ ವೇಳೆ  ನೂರಾರು ಉರಿವ ಪಂಜುಗಳನ್ನು ಧರಿಸಿಕೊಂಡ ಕೇರಳದ ತೆಯ್ಯಂ ಕಲಾವಿದರ ಮತ್ತು ಮಾಸ್ ಮಾದ ಅವರ  ಮೈ ನವಿರೇಳಿಸುವ ಸಾಹಸ ಸನ್ನಿವೇಶವೊಂದನ್ನು ನಿರ್ದೇಶಕ ಸುಧೀರ್ ಅತ್ತಾವರ್ ಮೂರನೇ ಬಾರಿ ಮರು ಚಿತ್ರೀಕರಿಸುತ್ತಿದ್ದರು.

    ಖ್ಯಾತ ಕಲಾವಿದೆ ಶ್ರುತಿ ಯೊಂದಿಗೆ ನೂರಾರು ಸಹ ಕಲಾವಿದರು ಭಾಗವಹಿಸಿದ್ದ ಸನ್ನಿವೇಶವನ್ನು ಬೆಂಗಳೂರಿನ ಹೊರವಲಯದ ಕನಕಪುರ ರಸ್ತೆಯ ಕಗ್ಗಲಿ ಹಳ್ಳಿಯಲ್ಲಿ ಹಾಕಿದ್ದ ಆದ್ದೂರಿ ಸೆಟ್ ನಲ್ಲಿ ಮಲಯಾಳಂ ಚಿತ್ರರಂಗದ ಖ್ಯಾತ   ಡಿ ಒ ಪಿ ಮನೋಜ್ ಪಿಳ್ಳೈ ಚಿತ್ರೀಕರಿಸುತ್ತಿದ್ದಾಗ,ನಿರ್ದೇಶಕ ಸುಧೀರ್ ಅತ್ತಾವರ್ ರನ್ನು ಅಗೋಚರ ಶಕ್ತಿಯೊಂದು ಬಲವಾಗಿ ತಳ್ಳಿ  ಏಳೆಂಟು  ಗಜ ದೂರಕ್ಕೆಸೆಯಲ್ಪಟ್ಟ ಘಟನೆ ಚಿತ್ರ ತಂಡವನ್ನು ಬೆಚ್ಚಿಬೀಳಿಸಿದೆ. ಎಲ್ಲೂ ಎಡವಿ ಬೀಳದೆ, ಜಾರದೆ ಇದ್ದರೂ, ಏಕಾಏಕಿ ಬಲವಾಗಿ ತಳ್ಳಿದಂತೆ ವೇಗ ಪಡೆದುಕೊಂಡು ನಿರ್ದೇಶಕರು ಎಸೆಯಲ್ಪಟ್ಟ ವಿಲಕ್ಷಣ ಘಟನೆ, ಸುಮಾರು ಮುನ್ನೂರ ಕ್ಕಿಂತಲೂ ಹೆಚ್ಚಿದ್ದ ಚಿತ್ರತಂಡದ  ಸಮಕ್ಷಮದಲ್ಲೇ ಘಟನೆ ನಡೆದಿದೆ.

     

    ಸನ್ನಿವೇಷವನ್ನು  ವಿವರಿಸುತ್ತಿದ್ದ ಸಮಯದಲ್ಲಿ ನಿರ್ದೇಶಕರನ್ನು ಒಂದೇ ಸಮನೆ ಅಗೋಚರ ಶಕ್ತಿ ಬಲವಾಗಿ ದೂಡಿದಂತಾಗಿ, ತನ್ನನ್ನು ನಿಭಾಯಿಸಿಕೊಳ್ಳದೆ ನಿರ್ದೇಶಕರು ಸುಮಾರು ದೂರಕ್ಕೆ ಎಸೆಯಲ್ಪಟ್ಟದ್ದನ್ನು ಕಂಡು ಖ್ಯಾತ ನಟಿ ಶ್ರತಿ,  ನಿರ್ದೇಶಕರು ದೊಡ್ಡ ಮಟ್ಟದ ಗಾಯಗಳಿಂದ ಪಾರಾಗಿರುವುದನ್ನು ಕೊರಗಜ್ಹ ದೈವವೇ ನಿರ್ದೇಶಕರನ್ನು ಕಾಪಾಡಿದೆ ಎಂದು ವ್ಯಾಖ್ಯಾನಿಸಿದ್ದಾರೆ.

  • ಕನ್ನಡದಲ್ಲಿ ಮತ್ತೊಂದು ದೈವದ ಸಿನಿಮಾ : ‘ಕರಿ ಹೈದ ಕರಿ ಅಜ್ಜ’ ಶೂಟಿಂಗ್ ಮುಕ್ತಾಯ

    ಕನ್ನಡದಲ್ಲಿ ಮತ್ತೊಂದು ದೈವದ ಸಿನಿಮಾ : ‘ಕರಿ ಹೈದ ಕರಿ ಅಜ್ಜ’ ಶೂಟಿಂಗ್ ಮುಕ್ತಾಯ

    ನಿರ್ಮಾಪಕ ತ್ರಿವಿಕ್ರಮ ಸಪಲ್ಯ ನಿರ್ಮಾಣದ ‘ಕರಿ ಹೈದ ಕರಿ ಅಜ್ಜ’ ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ. ಪವಾಡ ಪುರುಷ ಕೊರಗಜ್ಜ ಜೀವನಾಧಾರಿತ ಸಿನಿಮಾ ಇದಾಗಿದ್ದು, ಚಿತ್ರಕ್ಕೆ ಸುಧೀರ್ ಅತ್ತಾವರ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಬರುವ ಮುಖ್ಯ ಪಾತ್ರವೊಂದರಲ್ಲಿ ಹಾಲಿವುಡ್, ಬಾಲಿವುಡ್ ಹಾಗೂ ಫ್ರೆಂಚ್ ಸಿನಿಮಾಗಳ ನೃತ್ಯ ನಿರ್ದೇಶಕ, ಡ್ಯಾನ್ಸರ್, ನಟ ಸಂದೀಪ್ ಸೋಪರ್ಕರ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಇವರು ಕೊರಗಜ್ಜನ ಜೊತೆ ಬರುವ ಗುಳಿಗನ್ ಪಾತ್ರ ನಿರ್ವಹಿಸಿದ್ದಾರೆ. ಅಂತರರಾಷ್ಟ್ರೀಯ ಈ ಕಲಾವಿದ ಇದೇ ಮೊದಲಬಾರಿಗೆ ಕನ್ನಡ ಸಿನಿಮಾವೊಂದರಲ್ಲಿ ನಟಿಸಿರುವುದು ವಿಶೇಷ.

    ಈ ಸಿನಿಮಾ ಬಗ್ಗೆ ಮಾಹಿತಿ ನೀಡಲು ಇತ್ತೀಚೆಗೆ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ್ ‘ನಿನ್ನೆಯಷ್ಟೇ ಕೊರಗಜ್ಜ ಕೋಲು ಕೊಡುವ ಮೂಲಕ ‘ಕರಿ ಹೈದ ಕರಿ ಅಜ್ಜ’ ಚಿತ್ರದ ಶೂಟಿಂಗ್ ಮುಗಿಸಲಾಯಿತು. ಚಿತ್ರೀಕರಣ ಸಂದರ್ಭದಲ್ಲಿ ಸಾಕಷ್ಟು ಪವಾಡಗಳು ನಡೆದಿದ್ದು, ಎಲ್ಲರ ಅನುಭಕ್ಕೆ ಬಂದಿದೆ. ಇದು ಕೊರಗಜ್ಜ ಎಂದು ಕರೆಯುವ 22, 23 ವರ್ಷ ಬದುಕಿದ್ದ ಹುಡುಗನ ಕಥೆ. ಇದರಲ್ಲಿ ಹಾಲಿವುಡ್ ಕೋರಿಯೋಗ್ರಾಫರ್ ಹಾಗೂ ನಟ ಸಂದೀಪ್ ಸೋಪರ್ಕರ್ ಗುಳಿಗನ್ ಪಾತ್ರ ಮಾಡಿದ್ದಾರೆ. ಇದು ಕೊರಗಜ್ಜನ ಜೊತೆಗೆ ಸಾಗುತ್ತದೆ. ಗುಳಿಗನ್ ಪಾತ್ರವನ್ನು ಡ್ಯಾನ್ಸ್ ಬೇಸ್ ನಲ್ಲಿ ತೋರಿಸಲಾಗಿದ್ದು ಆ ಪಾತ್ರಕ್ಕೆ ಸಂದೀಪ್ ಅವರು ಸೂಕ್ತರಾಗಿದ್ದಾರೆ. ಈ ಮೊದಲು ಕೊರಗಜ್ಜನ ಬಗ್ಗೆ 7-8 ಜನ ಸಿನಿಮಾ ಮಾಡಲು ಪ್ರಯತ್ನ ಮಾಡಿದ್ರು ಆಗಿರಲಿಲ್ಲ. ನಮಗೆ ದೇವರ ಅಪ್ಪಣೆ ಸಿಕ್ಕಮೇಲೆ ಈ ಸಿನಿಮಾ ಮಾಡಲು ಮುಂದಾದೆವು. 12ನೇ ಶತಮಾನದ ಕಥೆ ಇದಾಗಿದ್ದು, ಚಿತ್ರದಲ್ಲಿ ಬುರ್ದಗೋಳಿ ಉತ್ಪತ್ತಿ ಕಲ್ಲು ಮುಖ್ಯವಾಗುತ್ತದೆ. ನಾವು ಈ ದೃಶ್ಯವನ್ನು ಸೋಮೇಶ್ವರದಲ್ಲಿ ಶೂಟ್ ಮಾಡುವ ಮೂಲಕ ಚಾಲನೆ ನೀಡಿದೆವು. ನಮಗೆಲ್ಲ ಶೂಟಿಂಗ್ ಸಂದರ್ಭದಲ್ಲಿ ಒಂದಿಷ್ಟು ಅನುಭವ ಆಗಿವೆ. ಈ ಸಿನಿಮಾವನ್ನು ನಾನು ಮಾಡಲಿಲ್ಲ. ಆ ದೈವ  ನನ್ನ ಕೈಲಿ ಮಾಡಿಸಿದ್ದಾರೆ. ನಮ್ಮ ಚಿತ್ರದಲ್ಲಿ ಭೈರಕ್ಕಿ ಪಾತ್ರ ಮುಖ್ಯವಾಗಿದ್ದು, ಭೈರಕ್ಕಿ ಕೊರಗಜ್ಜನ ಸಾಕು ತಾಯಿ. ಈ ಪಾತ್ರವನ್ನು ನಟಿ ಶ್ರುತಿ ನಿರ್ವಹಿಸಿದ್ದಾರೆ. ಇಂದು ಮಂಗಳೂರು ಕಡೆ ಮನೆ ಮನೆಯಲ್ಲಿ ಕೊರಗಜ್ಜನ ಆರಾಧಿಸುತ್ತಾರೆ. ಜನ ವಿಸ್ಕಿ, ಬ್ರಾಂದಿ, ಕೊರಗಜ್ಜಗೆ ನೀಡುತ್ತಿದ್ದು, ಅಂದಿನ ಕಾಲದಲ್ಲಿ ಇವುಗಳು ಇರಲಿಲ್ಲ. ಕಳ್ಳಬಟ್ಟಿ ಇತ್ತು. ದೇವರಿಗೆ ನಾವು ಎನೂ ಬೇಕಾದರೂ ಕೊಡಬಹುದು. ಇಂದಿನ ಜನ ವಿಸ್ಕಿ, ಬ್ರಾಂದಿ ಕೊಡುತ್ತಿರುವುದು ಕೊರಗ ಜನಾಂಗಕ್ಕೆ ಬೇಸರ ತಂದಿದೆ. ಈ ಚಿತ್ರದಲ್ಲಿ ಕೊರಗಜ್ಜನ ನೈಜ ಕಥೆ ಹೇಳಲಾಗಿದ್ದು, ಕಥೆಯನ್ನು ಕೊರಗ ಜನಾಂಗದಿಂದ ಕಲೆಕ್ಟ್ ಮಾಡಿ ಸಿನಿಮಾ ಮಾಡಲಾಗಿದೆ’ ಎಂದು ಹೇಳಿದರು. ಇದನ್ನೂ ಓದಿ: ಸಂಕ್ರಾಂತಿ ಸಂಭ್ರಮಕ್ಕಾಗಿ ಮತ್ತೆ ಜೊತೆಯಾದ ಬಿಗ್ ಬಾಸ್ ಸ್ಪರ್ಧಿಗಳು

    ನಂತರ ಮಾತನಾಡಿದ ಹಾಲಿವುಡ್ ನಟ ಸಂದೀಪ್ ಸೋಪರ್ಕರ್ ಮಾತನಾಡಿ ‘ಈ ಚಿತ್ರ ನಂಗೆ ಒಳ್ಳೆ ಅನುಭವ ನೀಡಿದೆ. ಈ ತಂಡ ಹಾಗೂ ಸಿನಿಮಾದಲ್ಲಿ ಕೆಲಸ ಮಾಡಿದ್ದು ತುಂಬಾ ಖುಷಿ ಕೊಟ್ಟಿದೆ. ಒಳ್ಳೆಯ ತಂಡ ಇದಾಗಿದ್ದು ಅದ್ಭುತ ಕೆಲಸ ಮಾಡಿದೆ. ನಾನು ಮಾಡಿರುವ ಪಾತ್ರ ಅದ್ಭುತವಾಗಿದ್ದು ಹೊಸ ರೀತಿಯಲ್ಲಿ ಅನುಭವ ನೀಡಿತು. ಈ ಪಾತ್ರವನ್ನು ನಾನು ನನ್ನ ಸಿಸ್ಟರ್ಸ್ ಜೊತೆಗೆ ರೀಸರ್ಚ್ ಮಾಡಿ ಮಾಡಿದ್ದೇನೆ. ಒಳ್ಳೆ ರೀತಿ ಶೂಟಿಂಗ್ ಆಯ್ತು. ಈ ಪಾತ್ರ ಮಾಡಿದ್ದು ಖುಷಿ ಇದ್ದು, ಇದರಲ್ಲಿ ನಾನು ಡ್ಯಾನ್ಸ್ ಜೊತೆ ನಟನೆ ಕೂಡ ಮಾಡಿದ್ದೇನೆ. ಶೂಟಿಂಗ್ ಮಾಡುವ ಸಂದರ್ಭದಲ್ಲಿ ಸಾಕಷ್ಟು ಜನ ಗಲಾಟೆ ಮಾಡಿ 2 ದಿನ ಶೂಟಿಂಗ್ ನಿಂತಿತು. ನಂತರ ನಿರ್ದೇಶಕ, ನಿರ್ಮಾಪಕರು ಕಷ್ಟಪಟ್ಟು ಶೂಟಿಂಗ್ ಮಾಡಿಸಿದರು. ಮೊದಲಬಾರಿಗೆ ಜಾನಪದ ಶೈಲಿಯಲ್ಲಿ ಡ್ಯಾನ್ಸ್ ಮಾಡಿದ್ದು ಶಿವನ ನೃತ್ಯ ಮಾಡಿರುವ ಒಳ್ಳೆ ಅನುಭವ ಮರೆಯಲಾಗದು’ ಎಂದರು. ಕೊರಗಜ್ಜನ ಸಾಕು ತಾಯಿ ಪಾತ್ರ ನಿರ್ವಹಿಸಿರುವ ನಟಿ ಶ್ರುತಿ ಮಾತನಾಡಿ, ‘ಈ ಸಿನಿಮಾ ನನ್ನ ಮನಸ್ಸಿನಲ್ಲಿ ವಿಷೇಶವಾದ ಸ್ಥಾನ ಪಡೆಯುತ್ತದೆ. ನಾನಿಲ್ಲಿ ಭೈರಕ್ಕಿ ಪಾತ್ರ ಮಾಡಿದ್ದೇನೆ. ದೈವದ ಕಥೆ ಅದ್ಭುತವಾಗಿ ಇದ್ದು ಈ ಕಥೆಯನ್ನು ಹೆಕ್ಕಿ ತೆಗೆದ ನಿರ್ದೇಶಕರ ಧೈರ್ಯ ಮೆಚ್ಚಬೇಕು. ಚಿತ್ರಕ್ಕಾಗಿ ನಿರ್ಮಾಪಕರು ಕೋಟಿ ಕೋಟಿ ಹಣ ಖರ್ಚು ಮಾಡಿದ್ದಾರೆ. ಯಾರಿಗೂ ಸಿಗದೆ ಇರುವ ಅವಕಾಶ ಈ ತಂಡಕ್ಕೆ ಸಿಕ್ಕಿದೆ. ಇದರಲ್ಲಿ ಬರುವ ಪ್ರತಿಯೊಬ್ಬರ ಪಾತ್ರ ಪೇಂಟಿಂಗ್ ತರಾ ಇದ್ದು ನಿರ್ದೇಶಕರು ಅಷ್ಟು ತಯಾರಿ ಮಾಡಿಕೊಂಡು ಸಿನಿಮಾ ಮಾಡಿದ್ದಾರೆ. ಭೈರಕ್ಕಿ ಕೊರಗಜ್ಜ ಸಾಕು ತಾಯಿ 2 ಸೇಡ್ ಪಾತ್ರಕ್ಕಿದೆ. ಇದರಲ್ಲಿ ಕೊರಗಜ್ಜಗೆ ತನಿಯಾ/ ಕಾಂತಾರೆ ಹೆಸರು. ನಾನು ಕಳ್ಳಬಟ್ಟಿ ಮಾರುತ್ತಿರುತ್ತೇನೆ. ಇದರಲ್ಲಿ ತಾಯಿ ಮಗನ ಬಾಂಧವ್ಯವನ್ನು ಅದ್ಭುತವಾಗಿ ತೋರಿಸಲಾಗಿದೆ. ನಮ್ಮ ಜೊತೆ ಸಾಕಷ್ಟು ರಂಗಭೂಮಿ ಕಲಾವಿದರು ಇದರಲ್ಲಿ ನಟನೆ ಮಾಡಿದ್ದಾರೆ. ನಾನು ಈ ಸಿನಿಮಾ ಮಾಡಿದ್ದು ಧನ್ಯತಾ ಭಾವ ಇದೆ’ ಎಂದರು.

    ಇದೇ ಸಂದರ್ಭದಲ್ಲಿ ಮಾತನಾಡಿದ ಮತ್ತೋರ್ವ ನಟಿ ಭವ್ಯ ‘ಈ ಚಿತ್ರದಲ್ಲಿ ನಾನು ವಿಷೇಶವಾದ ಪಾತ್ರ ಮಾಡಿದ್ದು, ಶೂಟಿಂಗ್ ಮಾಡುವಾಗ ಮಿರಾಕಲ್ ಆಗತಾ ಇತ್ತು. ಒಂದು ದೃಶ್ಯದಲ್ಲಿ ಗ್ಲಿಸರಿನ್ ಇಲ್ಲದೆ ಅತ್ತಿದ್ದೇನೆ ಕೂಡ’ ಎಂದು ತಮ್ಮ ಶೂಟಿಂಗ್ ಅನುಭವ ಹಂಚಿಕೊಂಡರು. ಚಿತ್ರದ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ‘ತುಳು ನಾಡ ಜನರ ಸಂಸ್ಕೃತಿ ತೋರಿಸುವ ಆಸೆ ಇತ್ತು. ಅದು ಈ ಚಿತ್ರದ ಮೂಲಕ ಇಡೇರಿದೆ. ಸೋಮೇಶ್ವರ, ಉಲ್ಲಾಳ, ಮಡನ್ ತ್ಯಾರ್ ಮುಂತಾದ ಸ್ಥಳದಲ್ಲಿ ಶೂಟಿಂಗ್ ಮಾಡಲಾಗಿದ್ದು ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರವನ್ನು ಮೇ ನಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಇದೆ’ ಎನ್ನುವರು. ಚಿತ್ರದಲ್ಲಿ ಪ್ರಮುಖ ಪ್ರಾತ್ರವೊಂದರಲ್ಲಿ ಬಾಲಿವುಡ್ ನಟ ಕಬೀರ್ ಬೇಡಿ ನಟಿಸಿದ್ದಾರೆ. ನಾಯಕನಾಗಿ ಭರತ್ ಸೂರ್ಯ ನಟನೆ ಮಾಡಿದ್ದು, ಇವರು ಸಿನಿಮಾ ಶೂಟಿಂಗ್ ಮುಗಿಯುವ ವರೆಗೆ ಕಾಲಿಗೆ ಚಪ್ಪಲಿ ಹಾಕಿಲ್ಲವಂತೆ. ಇನ್ನು ನಾಯಕಿಯಾಗಿ ವೃತಿಕಾ ಅಭಿನಯಿಸಿದ್ದಾರೆ. ಚಿತ್ರವನ್ನು ಏಕಕಾಲದಲ್ಲಿ ಕನ್ನಡ, ತುಳು ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಿಸಲಾಗುತ್ತಿದೆ. ಧ್ರತಿ ಕ್ರಿಯೇಷನ್ಸ್ ಹಾಗೂ ಸಕ್ಸಸ್ ಫಿಲಂಸ್ ಬ್ಯಾನರ್ ನಲ್ಲಿ ಈ ನಿರ್ಮಾಣ ಮಾಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೊರಗಜ್ಜನ ಸಿನಿಮಾದಲ್ಲಿ ಕಾಣಿಸಿಕೊಂಡ ಬಾಲಿವುಡ್ ನಟ ಕಬೀರ್ ಬೇಡಿ

    ಕೊರಗಜ್ಜನ ಸಿನಿಮಾದಲ್ಲಿ ಕಾಣಿಸಿಕೊಂಡ ಬಾಲಿವುಡ್ ನಟ ಕಬೀರ್ ಬೇಡಿ

    ದ್ರತಿ ಕ್ರಿಯೇಷನ್ಸ್ ಮತ್ತು ಸಕ್ಸಸ್ ಫಿಲ್ಮ್ಸ್ ಬ್ಯಾನರ್ ಅಡಿ ತ್ರಿವಿಕ್ರಮ್ ಸಪಲ್ಯ  ನಿರ್ಮಿಸುತ್ತಿರುವ,  ಸುಧೀರ್ ಅತ್ತಾವರ್ ನಿರ್ದೇಶನದ  “ಕರಿ ಹೈದ….ಕರಿ ಅಜ್ಜ …”.ಸಿನೆಮಾದಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ಹಾಲಿವುಡ್ ಹಾಗೂ ಬಾಲಿವುಡ್ ನಟ ಕಬೀರ್ ಬೇಡಿ ನಟಿಸಿದ್ದಾರೆ. ಯುರೋಪಿನಾದ್ಯಂತ ಪ್ರಸಿದ್ದಿ ಪಡೆದ ” ಸಂದೀಕನ್” ಟಿವಿ ಸೀರಿಸ್ ನಲ್ಲಿ ನಟಿಸಿರುವ ಕಬೀರ್ ಬೇಡಿ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.  “ಕರಿ ಹೈದ ಕರಿ ಅಜ್ಜ” ಚಿತ್ರದ ತಮ್ಮ ಪಾತ್ರದ ಬಗ್ಗೆ “ಕಬೀರ್ ಬೇಡಿ” ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ.

    ಸುಧೀರ್ ಅತ್ತಾವರ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ನಟಿಸಿದ್ದು ಖುಷಿಯಾಗಿದೆ. “ಕೊರಗಜ್ಜ” ದೈವದ ಕುರಿತಾದ ಈ ಚಿತ್ರದಲ್ಲಿ ರಾಜನ ಪಾತ್ರ ನನ್ನದು. ಶೃತಿ, ಭವ್ಯ, ಭರತ್ ಸೂರ್ಯ ಮುಂತಾದ ಕಲಾವಿದರ ಜೊತೆ ಅಭಿನಯಿಸಿದ್ದ ಅನುಭವವನ್ನು ಹಂಚಿಕೊಂಡ ಕಬೀರ್ ಬೇಡಿ, ಬೆಂಗಳೂರಿನ ನೃತ್ಯ ಗ್ರಾಮಕ್ಕೆ ಬರುತ್ತಿದ್ದುದ್ದನ್ನು ಹಾಗೂ ಗಿರೀಶ್ ಕಾರ್ನಾಡ್ ಅವರ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡರು.‌ ಇದನ್ನೂ ಓದಿ:  ಹಿರಿಯ ನಿರ್ದೇಶಕ ಭಗವಾನ್ ಆರೋಗ್ಯ ಸ್ಥಿತಿ ಗಂಭೀರ: ಆಸ್ಪತ್ರೆಗೆ ದಾಖಲು

    ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣವಾಗಿದೆ. ಬೆಳ್ತಂಗಡಿ ಆಸುಪಾಸಿನಲ್ಲೇ ಹೆಚ್ಚು ಚಿತ್ರೀಕರಣವಾಗಿದೆ. ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಅವರ ಕುಟುಂಬದವರಿಗೆ “ಕೊರಗಜ್ಜ”ನ ಕುರಿತಾದ ಚಿತ್ರ ಮಾಡುವ ಹಂಬಲವಿತ್ತು. ಈ ಕಥೆ ಮೆಚ್ಚಿ ಅವರು ನಿರ್ಮಾಕ್ಕೆ ಮುಂದಾದರು. .  ಕೊರಗಜ್ಜನ ಜೀವನದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿ, ಕೊರಗಜ್ಜನ ಜನಾಂಗದ ಮಹನೀಯರೊಂದಿಗೆ ಚರ್ಚೆ ಮಾಡಿ   12ನೇ ಶತಮಾನದಲ್ಲಿದ್ದ ಕೊರಗಜ್ಜನ ಬಗ್ಗೆ ಯಾರಿಗೂ ಗೊತ್ತಿರದ ನಿಜ ಬದುಕಿನ ವಿಷಯವನ್ನು ತಿಳಿಸುವ ಪ್ರಯತ್ನ ಈ ಚಿತ್ರದ ಮೂಲಕ ಮಾಡುತ್ತಿದ್ದೇವೆ. ಭರತ್ ಸೂರ್ಯ “ಕೊರಗಜ್ಜ” ನ ಪಾತ್ರದಲ್ಲಿ ಕಾಣಿಸಿಕೊಳುತ್ತಿದ್ದಾರೆ. ಕಬೀರ್ ಬೇಡಿ, ಶೃತಿ, ಭವ್ಯ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ವಿದ್ಯಾಧರ್ ಶೆಟ್ಟಿ ಸಂಕಲನದ ಜೊತೆಗೆ  ಇತಿಹಾಸದ ದಾಖಲೆ ಮತ್ತು ಪುರಾವೆಗಳನ್ನು ಕಲೆ ಹಾಕಿದ್ದಾರೆ.  ಪವನ್ ವಿ ಕುಮಾರ್ ಮತ್ತು ಗಣೇಶ್ ಕೆಳಮನೆ ಛಾಯಾಗ್ರಹಣ, ಸುಧೀರ್- ಕೃಷ್ಣ ರವಿ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ ಎಂದು ಮಾಹಿತಿ ನೀಡಿದ ನಿರ್ದೇಶಕ ಸುಧೀರ್ ಅತ್ತಾವರ್, ಕಲಾ‌ ನಿರ್ದೇಶನವನ್ನು ತಾವೇ ಮಾಡಿರುವುದಾಗಿ ಹೇಳಿದರು.

    ನಮ್ಮ ಕುಟುಂಬದವರಿಗೆ “ಕೊರಗಜ್ಜ” ನ ಮೇಲೆ ವಿಶೇಷ ಭಕ್ತಿ. ಹಾಗಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದೇವೆ. ಚಿತ್ರತಂಡದ ಪ್ರೋತ್ಸಾಹದಿಂದ ಚಿತ್ರ ಉತ್ತಮವಾಗಿ ಮೂಡಿ ಬರುತ್ತಿದೆ. ಅಂದುಕೊಂಡಂತೆ ಆದರೆ, ಏಪ್ರಿಲ್ ಅಥವಾ ಮೇ ನಲ್ಲಿ ಚಿತ್ರ ತೆರೆಗೆ ಬರಲಿದೆ ಎಂದರು ನಿರ್ಮಾಪಕ ತ್ರಿವಿಕ್ರಮ ಸಪಲ್ಯ. ಕಬೀರ್ ಬೇಡಿ ಅವರಂತಹ ಮಹಾನ್ ನಟನ ಜೊತೆ ಅಭಿನಯಿಸಿದ್ದು ತುಂಬಾ ಸಂತೋಷವಾಗಿದೆ. ನಾನು ಈ ಚಿತ್ರದಲ್ಲಿ ರಾಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸುಧೀರ್ ಅತ್ತಾವರ್ ಒಳ್ಳೆಯ ಚಿತ್ರ ನಿರ್ದೇಶಿಸುತ್ತಿದ್ದಾರೆ. ನಿಮ್ಮೆಲ್ಲರ ಬೆಂಬಲವಿರಲಿ ಎಂದರು ಹಿರಿಯ ನಟಿ ಭವ್ಯ.

    Live Tv
    [brid partner=56869869 player=32851 video=960834 autoplay=true]