Tag: Trivikram

  • ವೈವಾಹಿಕ ಜೀವನಕ್ಕೆ ಕಾಲಿಟ್ಟ ಮನೋರಂಜನ್ ರವಿಚಂದ್ರನ್

    ವೈವಾಹಿಕ ಜೀವನಕ್ಕೆ ಕಾಲಿಟ್ಟ ಮನೋರಂಜನ್ ರವಿಚಂದ್ರನ್

    ಸಾಹೇಬ, ಮುಗಿಲುಪೇಟೆ, ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ ರವಿಂಚಂದ್ರನ್ ಪುತ್ರ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಸಂಗೀತಾ ದೀಪಕ್ ಜತೆ ಮನೋರಂಜನ್ ಹಸೆಮಣೆ ಏರಿದ್ದಾರೆ.

    ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಅವರ ಹಿರಿಯ ಪುತ್ರ ನಟ ಮನೋರಂಜನ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಗಸ್ಟ್ 21 ರಂದು 8.30ರ ಶುಭ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆ ಮಾಡುವ ಮೂಲಕ ಸಂಗೀತಾ ಎಂಬವರ ಕೈ ಹಿಡಿದಿದ್ದಾರೆ.‌ ಇದನ್ನೂ ಓದಿ:ಇಂದಿನಿಂದ 3 ದಿನಗಳ ಕಾಲ ರವಿಚಂದ್ರನ್ ಪುತ್ರನ ಮದುವೆ ಸಡಗರ: ಸಿಂಗಾರಗೊಂಡ ಪ್ಯಾಲೇಸ್ ಮೈದಾನ

    ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನಲ್ಲಿನ ವೈಟ್ ಪೆಟಲ್ಸ್ ತ್ರಿಪುರವಾಸಿನಿಯಲ್ಲಿ ನಡೆದ ಶುಭಘಳಿಗೆಯಲ್ಲಿ ಚಿತ್ರರಂಗದ ಕೆಲ ಗಣ್ಯವ್ಯಕ್ತಿಗಳು ಭಾಗವಹಿಸಿದ್ದರು.

    ಇದೇ ವೇಳೆ ರವಿಚಂದ್ರನ್ ಅವರ ಆಪ್ತರೆನಿಸಿಕೊಂಡಿರುವ ಡಾ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ನಟಿ ಖುಷ್ಬೂ, ಉಮಾಶ್ರೀ, ನಟ ಶರಣ್, ಉಮಾಶ್ರೀ, ಮಾಸ್ಟರ್‌ ಆನಂದ್‌, ಗಾಯಕ ಹೇಮಂತ್‌, ಅಕುಲಗ ಬಾಲಾಜಿ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

    ಈ ವೇಳೆ ಅಭಿಮಾನಿಗಳು ಕೂಡ ನೆಚ್ಚಿನ ನಟನ ಹೊಸ ಬಾಳಿಗೆ ಶುಭಹಾರೈಸಿದ್ದಾರೆ. ಚಿತ್ರರಂಗದಲ್ಲಿ ಕೂಡ ಉತ್ತುಂಗಕ್ಕೆ ಎರಲಿ ಎಂಬುದೇ ಅಭಿಮಾನಿಗಳ ಆಶಯ.

    Live Tv
    [brid partner=56869869 player=32851 video=960834 autoplay=true]

  • ಸಿನಿಮಾ ನೋಡಲು 5 ಹೆಚ್ಚುವರಿ ಅಂಕ ಮತ್ತು 1 ದಿನ ರಜೆ ಘೋಷಿಸಿದ ಪ್ರಿನ್ಸಿಪಾಲ್: ಪಾಲಕರು ಏನ್ ಹೇಳ್ತಾರೆ?

    ಸಿನಿಮಾ ನೋಡಲು 5 ಹೆಚ್ಚುವರಿ ಅಂಕ ಮತ್ತು 1 ದಿನ ರಜೆ ಘೋಷಿಸಿದ ಪ್ರಿನ್ಸಿಪಾಲ್: ಪಾಲಕರು ಏನ್ ಹೇಳ್ತಾರೆ?

    ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಎರಡನೇ ಪುತ್ರ ವಿಕ್ರಮ್ ನಟನೆಯ ಚೊಚ್ಚಲ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ತ್ರಿವಿಕ್ರಮ್ ಹೆಸರಿನಲ್ಲಿ ಮೂಡಿ ಬಂದಿರುವ ಸಿನಿಮಾ ಇನ್ನೇನು ಬಿಡುಗಡೆ ಆಗಲಿದೆ. ಹಾಗಾಗಿ ರಾಜ್ಯಾದ್ಯಂತ ಸಿನಿಮಾ ಟೀಮ್ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಅದರಲ್ಲೂ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ವಿಕ್ರಮ್ ಮತ್ತು ತಂಡ ಸಂವಾದ ನಡೆಸುತ್ತಿದೆ. ಹೀಗೆ ಬೆಳಗಾವಿಯ ಕಾಲೇಜಿಗೆ ಹೋದಾಗ, ಅಲ್ಲಿನ ಪ್ರಾಂಶುಪಾಲರು ಭರ್ಜರಿ ಆಫರ್ ಕೊಟ್ಟಿದ್ದಾರೆ.

    ಬೆಳಗಾವಿಯ ಜೈನ್ ಎಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿದ ಸಿನಿಮಾ ತಂಡವನ್ನು ಅಲ್ಲಿನ ಸಿಬ್ಬಂದಿ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ವಿದ್ಯಾರ್ಥಿಗಳ ಜೊತೆ ಸಿನಿಮಾ ತಂಡ ಮಾತಕತೆ ಮಾಡಿದ ನಂತರ, ಸಿನಿಮಾ ಟೀಮ್ ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿರುವ ಪ್ರಾಂಶುಪಾಲರು ಈ ಸಿನಿಮಾವನ್ನು ನೋಡಿ, ಟಿಕೆಟ್ ತಂದು ಕೊಟ್ಟವರಿಗೆ ಐದು ಗ್ರೇಸ್ ಮಾರ್ಕ್ಸ್ ಮತ್ತು ಒಂದು ದಿನ ರಜೆ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಬೈಕಾಟ್ ಸಾಯಿ ಪಲ್ಲವಿ ಫಿಲ್ಮ್ : ಇಂದು ವಿರಾಟ ಪರ್ವಂ ರಿಲೀಸ್

    ಈ ಆಫರ್ ಘೋಷಣೆ ಆಗುತ್ತಿದ್ದಂತೆಯೇ ಕಾಲೇಜಿನ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದ್ದಾರೆ. ಆದರೆ, ಒಂದು ಕಂಡಿಷನ್ ಏನು ಅಂದರೆ, ಸಿನಿಮಾವನ್ನು ಶನಿವಾರ ನೋಡಬೇಕು.  ಮತ್ತು ಟಿಕೆಟ್ ಅನ್ನು ಕಡ್ಡಾಯವಾಗಿ ತಂದು ಕಾಲೇಜಿಗೆ ಒಪ್ಪಿಸಬೇಕು. ಈ ಆಫರ್ ಕೇಳಿದ ಪಾಲಕರು ಬೆಚ್ಚಿಬಿದ್ದಿದ್ದಾರೆ. ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸುವುದು ಯಾಕೆ ಎಂಬ ಪ್ರಶ್ನೆಯನ್ನೂ ಮಾಡಿದ್ದಾರಂತೆ. ಆದರೂ, ಈ ಆಫರ್ ಮಾತ್ರ ಕ್ಯಾನ್ಸಲ್ ಆಗಿಲ್ಲ ಎಂದು ಹೇಳಲಾಗುತ್ತಿದೆ.

    Live Tv

  • ಟ್ರೇಲರ್‌ನಲ್ಲಿ  ಕಂಡಿದ್ದು ಭಿನ್ನ ಕಥೆಯ ರಂಗನಾಯಕಿ!

    ಟ್ರೇಲರ್‌ನಲ್ಲಿ ಕಂಡಿದ್ದು ಭಿನ್ನ ಕಥೆಯ ರಂಗನಾಯಕಿ!

    ಬೆಂಗಳೂರು: ನಿರ್ದೇಶಕ ದಯಾಳ್ ಪದ್ಮನಾಭನ್ ಯಾವ ಚಿತ್ರವನ್ನೇ ಮಾಡಿದರೂ ವಿಶಿಷ್ಟವಾದ ಕಥೆಯನ್ನೇ ಕೈಗೆತ್ತಿಕೊಂಡಿರುತ್ತಾರೆಂಬ ನಂಬಿಕೆ ಪ್ರೇಕ್ಷಕರಲ್ಲಿದೆ. ಇತ್ತೀಚೆಗೆ ತೆರೆಗಂಡಿದ್ದ ತ್ರಯಂಬಕಂ ಚಿತ್ರದವರೆಗೂ ಅವರು ಆ ನಂಬಿಕೆಯನ್ನು ಹುಸಿಗೊಳಿಸಿದ್ದೇ ಇಲ್ಲ. ಇದೀಗ ಅವರು ರಂಗನಾಯಕಿ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅದರ ಟ್ರೇಲರ್ ಕೂಡಾ ಬಿಡುಗಡೆಯಾಗಿದೆ. ಈ ಮೂಲಕವೇ ಇದು ದಯಾಳ್ ನಿರ್ದೇಶನದ ಇದುವರೆಗಿನ ಚಿತ್ರಗಳಿಗಿಂತಲೂ ಭಿನ್ನವಾದ ಕಥೆಯನ್ನೊಳಗೊಂಡಿರೋ ಸಿನಿಮಾ ಎಂಬ ಭರವಸೆ ಪ್ರೇಕ್ಷಕರಲ್ಲಿ ಮೂಡಿಕೊಂಡಿದೆ.

    ಈ ಟ್ರೇಲರ್ ಬಿಡುಗಡೆಯಾದ ತುಸು ಹೊತ್ತಿನಲ್ಲಿಯೇ ವ್ಯಾಪಕ ವೀಕ್ಷಣೆ ಪಡೆದುಕೊಂಡಿದೆ. ಜೊತೆಗೆ ಭರ್ಜರಿಯಾದ ಪಾಸಿಟಿವ್ ಕಮೆಂಟುಗಳನ್ನೂ ತನ್ನದಾಗಿಸಿಕೊಳ್ಳುತ್ತಾ ಯೂಟ್ಯೂಬ್ ಟ್ರೆಂಡಿಂಗ್‍ನತ್ತ ಸಾಗುತ್ತಿದೆ. ವ್ಯಾಲ್ಯೂಮ್ 1 ವರ್ಜಿನಿಟಿ ಎಂಬ ಟ್ಯಾಗ್ ಲೈನ್ ಹೊಂದಿರೋ ರಂಗನಾಯಕಿಯ ಕಥೆ ಅತ್ಯಾರಕ್ಕೊಳಗಾದ ಹುಡುಗಿಯೊಬ್ಬಳು ಸಮಾಜವನ್ನು ಎದುರಿಸುವಂಥಾ ಸೂಕ್ಷ್ಮ ಕಥಾಹಂದರವನ್ನೊಳಗೊಂಡಿರೋ ಸ್ಪಷ್ಟ ಸುಳಿವನ್ನು ಈ ಟ್ರೇಲರ್ ಬಿಟ್ಟು ಕೊಟ್ಟಿದೆ. ಇದು ವಿಶೇಷವಾದ ಕಥೆಯ ಮಹಿಳಾಪ್ರಧಾನ ಚಿತ್ರ. ಇಲ್ಲಿ ನಾಗಕನ್ನಿಕೆ ಖ್ಯಾತಿಯ ಅದಿತಿ ಪ್ರಭುದೇವ ರಂಗನಾಯಕಿಯಾಗಿ ಅಮೋಘವಾಗಿ ಅಭಿನಯಿಸಿರೋ ಸ್ಪಷ್ಟ ಲಕ್ಷಣಗಳೂ ಗೋಚರಿಸಿವೆ.

    ದಯಾಳ್ ಪದ್ಮನಾಭನ್ ಅವರಿಗೆ ಈ ಚಿತ್ರದಲ್ಲಿಯೂ ನಟ ನವೀನ್ ಕೃಷ್ಣ ಸಂಭಾಷಣೆಕಾರರಾಗಿ ಸಾಥ್ ಕೊಟ್ಟಿದ್ದಾರೆ. ಅದಿತಿ ಪ್ರಭುದೇವ ಜೊತೆ ಎಂಜಿ ಶ್ರೀನಿವಾಸ್ ಮತ್ತು ತ್ರಿವಿಕ್ರಂ ಮುಖ್ಯ ಪಾತ್ರಗಳ ಮೂಲಕ ಜೊತೆಯಾಗಿದ್ದಾರೆ. ಈ ಹಿಂದೆ ಎಟಿಎಂ ಎಂಬ ಚಿತ್ರ ನಿರ್ಮಾಣ ಮಾಡಿದ್ದ ಎಸ್ ವಿ ನಾರಾಯಣ್ ರಂಗನಾಯಕಿಗೂ ಬಂಡವಾಳ ಹೂಡಿದ್ದಾರೆ. ಹೆಣ್ಣೊಬ್ಬಳು ಅತ್ಯಾಚಾರಕ್ಕೊಳಗಾದರೆ ಕೇಸು ದಾಖಲಿಸಿ ಅತ್ಯಾಚಾರಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಲೂ ಪೋಶಕರು ಹಿಂದೇಟು ಹಾಕುತ್ತಾರೆ. ಅದಕ್ಕೆ ಕಾರಣ ಈ ಸಮಾಜದ ಭಯ. ಆದರಿಲ್ಲಿ ಅತ್ಯಾಚಾರಕ್ಕೀಡಾದ ನಾಯಕಿಯೇ ಖುದ್ದಾಗಿ ಕೇಸು ದಾಖಲಿಸೋ ದೃಷ್ಯದ ಮೂಲಕ ಇದೊಂದು ಭಿನ್ನ ಕಥೆ ಹೊಂದಿರೋ ಚಿತ್ರವೆಂಬ ಸುಳಿವನ್ನೂ ಈ ಟ್ರೇಲರ್ ಬಿಟ್ಟುಕೊಟ್ಟಿದೆ. ಇದುವೇ ರಂಗನಾಯಕಿಗಾಗಿ ಪ್ರೇಕ್ಷಕರು ನಕಾತರದಿಂದ ಕಾಯುವಂತೆಯೂ ಮಾಡಿದೆ.