Tag: Trivikram

  • BBK 11: ನಾಮಿನೇಷನ್‌ನಲ್ಲಿ ಒಡೆದ ಒಗ್ಗಟ್ಟು- ತ್ರಿವಿಕ್ರಮ್‌ ಮೇಲೆ ಉಗ್ರಂ ಮಂಜು ಕೆಂಡ

    BBK 11: ನಾಮಿನೇಷನ್‌ನಲ್ಲಿ ಒಡೆದ ಒಗ್ಗಟ್ಟು- ತ್ರಿವಿಕ್ರಮ್‌ ಮೇಲೆ ಉಗ್ರಂ ಮಂಜು ಕೆಂಡ

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ 8ನೇ ವಾರಕ್ಕೆ ಕಾಲಿಟ್ಟಿದೆ. ಈಗಾಗಲೇ ಹನುಮಂತ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟು ಸ್ಪರ್ಧಿಗಳು ಮತ್ತು ಜನರ ಮನೆಗೆದ್ದಿದ್ದಾರೆ. ಈ ವಾರಾಂತ್ಯ ಕಿಚ್ಚನ ಪಂಚಾಯಿತಿಯಲ್ಲಿ ರಜತ್ ಕಿಶನ್ ಮತ್ತು ಶೋಭಾ ಶೆಟ್ಟಿ ದೊಡ್ಮನೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇವರ ಖಡಕ್ ಎಂಟ್ರಿಯ ನಡುವೆ ನಾಮಿನೇಷನ್ ಪ್ರಕ್ರಿಯೆ ಜರುಗಿದೆ. ಈ ವೇಳೆ, ತ್ರಿವಿಕ್ರಮ್ ಮತ್ತು ಉಗ್ರಂ ಮಂಜು (Ugramm Manju) ನಡುವೆ ವಾಕ್ಸಮರ ನಡೆದಿದೆ. ತ್ರಿವಿಕ್ರಮ್‌ ಮೇಲೆ ಮಂಜು ಕೆಂಡಕಾರಿದ್ದಾರೆ.

    ಇಂದಿನ ಸಂಚಿಕೆಯ ಬಿಗ್ ಬಾಸ್ ಪ್ರೋಮೋದಲ್ಲಿ 50ನೇ ವಾರಕ್ಕೆ ಕಾಲಿಟ್ಟ ಮನೆ ಮಂದಿಗೆ ನಾಮಿನೇಷನ್ ಬಿಸಿ ಮುಟ್ಟಿಸಲಾಗಿದೆ. ಮಡಿಕೆಯನ್ನು ಕೋಲಿನಿಂದ ಹೊಡೆದು ನಾಮಿನೇಟ್ ಮಾಡಬೇಕಿತ್ತು. ಅದರಂತೆ ಸ್ಪರ್ಧಿಗಳು ಒಬ್ಬೊಬ್ಬರಾಗಿ ಬಂದು ನಾಮಿನೇಷನ್‌ಗೆ ಹೆಸರನ್ನು ತೆಗೆದುಕೊಂಡು ಮಡಿಕೆಯನ್ನು ಹೊಡೆದು ಹಾಕಿದ್ದಾರೆ. ಇದನ್ನೂ ಓದಿ:‘ಎಮರ್ಜೆನ್ಸಿ’ ರಿಲೀಸ್‌ಗೆ ಮುಹೂರ್ತ ಫಿಕ್ಸ್- ಜ.17ಕ್ಕೆ ಕಂಗನಾ ಸಿನಿಮಾ ರಿಲೀಸ್

    ಇದೇ ನಾಮಿನೇಷನ್ ಪ್ರಕ್ರಿಯೆಯಲ್ಲಿ ಮೋಕ್ಷಿತಾ (Mokshitha Pai) ಅವರು ಮಂಜುರನ್ನು ನಾಮಿನೇಟ್ ಮಾಡಿದ್ದಾರೆ. ಮಂಜಣ್ಣನ ಕೆಲವು ಮಾತುಗಳು ನನಗೆ ಕುಗ್ಗಿಸುತ್ತದೆ ಅಂತ ಹೇಳಿದ್ದಾರೆ. ಅದಕ್ಕೆ ಉಗ್ರಂ ಮಂಜು ಅವರು ಮೋಕ್ಷಿತಾಗೆ ತಿರುಗೇಟು ನೋಡಿದ್ದಾರೆ. ಇನ್ಮುಂದೆ ನನಗೆ ಅಣ್ಣ ಅಂತ ಕರೆಯಬೇಡ ಎಂದು ಹೇಳಿ ಮೋಕ್ಷಿತಾಗೆ ನಾಮಿನೇಟ್ ಮಾಡಿದ್ದಾರೆ. ಇದಲ್ಲದೇ, ತ್ರಿವಿಕ್ರಮ್ (Trivikram) ಹಾಗೂ ಉಗ್ರಂ ಮಂಜು ನಡುವೆಯೂ ವಾದ ವಿವಾದ ನಡೆದಿದೆ. ಉಗ್ರಂ ಮಂಜು ಹಾಗೂ ತ್ರಿವಿಕ್ರಮ್ ಒಬ್ಬರಿಗೊಬ್ಬರು ನಾಮಿನೇಟ್ ಮಾಡಿಕೊಂಡಿದ್ದಾರೆ. ಇದೇ ವೇಳೆ ಈ ಇಬ್ಬರು ಜೋರು ಧ್ವನಿಯಲ್ಲಿ ಮಾತಾಡಿದ್ದಾರೆ.

    ಪರ್ಸನಲ್ ಆಗಿ ಟಾರ್ಗೆಟ್ ಮಾಡುತ್ತಾರೆ ಎಂದು ಹೇಳುತ್ತಾ ಮಂಜುರನ್ನು ತ್ರಿವಿಕ್ರಮ್ ನಾಮಿನೇಟ್ ಮಾಡಿದ್ದಾರೆ. ಎಲ್ಲರನ್ನೂ ತುಳಿದು ಮೇಲಕ್ಕೆ ಬರಬೇಕು ಅನ್ನೋ ಮನೋಭಾವ ನಿನಗಿದೆ ಎಂದು ತ್ರಿವಿಕ್ರಮ್‌ಗೆ ಮಂಜು ತಿರುಗೇಟು ನೀಡಿದ್ದಾರೆ. ಕೆಲಸ ಆಗೋ ತನಕ ಮಾತ್ರ ಇರುತ್ತಾರೆ. ಆಮೇಲೆ ಇರಲ್ಲ ಎಂದು ಮಂಜು ಗುಡುಗಿದ್ದಾರೆ. ಜೋರಾಗಿ ಮಾತನಾಡಲು ನಮಗೂ ಬರುತ್ತ ಎಂದು ತ್ರಿವಿಕ್ರಮ್ ಕೂಡ ಕೆಂಡಕಾರಿದ್ದಾರೆ. ಇಬ್ಬರ ವಾಗ್ವಾದಕ್ಕೆ ಮನೆ ಮಂದಿ ಸೈಲೆಂಟ್ ಆಗಿದ್ದಾರೆ.

    ಇನ್ನೂ ಮನೆಗೆ ಇಬ್ಬರು ಖಡಕ್ ಆಗಿರುವ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಆಗಮನವಾಗಿದೆ. ಹಾಗಾಗಿ ಇನ್ಮುಂದೆ ಆಟದಲ್ಲಿ ಏನೆಲ್ಲಾ ತಿರುವು ಸಿಗಲಿದೆ ಎಂಬುದನ್ನು ಕಾದುನೋಡಬೇಕಿದೆ.

  • ತ್ರಿವಿಕ್ರಮ್ ಗೋಮುಖ ವ್ಯಾಘ್ರ: ಕೆರಳಿದ ಮೋಕ್ಷಿತಾ

    ತ್ರಿವಿಕ್ರಮ್ ಗೋಮುಖ ವ್ಯಾಘ್ರ: ಕೆರಳಿದ ಮೋಕ್ಷಿತಾ

    ಬಿಗ್ ಬಾಸ್ ಮನೆ (Bigg Boss Kannada 11) ಇದೀಗ ಮತ್ತೆ ರಣರಂಗವಾಗಿದೆ. ಸ್ಪರ್ಧಿಗಳಿಬ್ಬರ ನಡುವೆ ಕಿಚ್ಚು ಹೊತ್ತಿಕೊಂಡಿದೆ. ನಟ ತ್ರಿವಿಕ್ರಮ್ ಮತ್ತು ಮೋಕ್ಷಿತಾ ಪೈ ನಡುವೆ ವಾಕ್ಸಮರ ಶುರುವಾಗಿದೆ. ಮಾತಿನ ಚಕಮಕಿಯ ನಡುವೆ ಮೋಕ್ಷಿತಾ (Mokshitha Pai) ಅವರು ತ್ರಿವಿಕ್ರಮ್ (Trivikram) ಗೋಮುಖ ವ್ಯಾಘ್ರ ಎಂದು ಕರೆದಿದ್ದಾರೆ. ತ್ರಿವಿಕ್ರಮ್ ವಿರುದ್ಧ ನಟಿ ಕೆರಳಿದ್ದಾರೆ. ಇದನ್ನೂ ಓದಿ:ಕೇರಳದ ಹೇಮಾ ಕಮಿಟಿ ಮೂಲಕ ದಾಖಲಾಗಿದ್ದ ಕೇಸ್ ಬೆಂಗಳೂರಿಗೆ ವರ್ಗಾವಣೆ

    ತ್ರಿವಿಕ್ರಮ್ ಮತ್ತು ಮೋಕ್ಷಿತಾ ಈಗ ಮನೆಯಲ್ಲಿ ಹಾವು ಮುಂಗುಸಿಯಾಗಿದ್ದಾರೆ. ಅದರಲ್ಲೂ ತ್ರಿವಿಕ್ರಮ್ ಆಡಿರುವ ಮಾತು ಮೋಕ್ಷಿತಾ ಪೈ ಕಿವಿಗೆ ಬಿದ್ದಿದ್ದು, ಇದೇ ವಿಚಾರವಾಗಿ ವಾಗ್ವಾದಕ್ಕಿಳಿದ್ದಿದ್ದಾರೆ ಮೋಕ್ಷಿತಾ. ಉಗ್ರಂ ಮಂಜು (Ugramm Manju) ಜೊತೆಗೆ ತ್ರಿವಿಕ್ರಮ್ ಮಾತನಾಡುತ್ತಾ, ಅವರು 10 ವಾರಕ್ಕೆ ಬಂದಿರೋರು. 10 ವಾರದ ಬಳಿಕ ಅವರ ಅವಶ್ಯಕತೆ ಇಲ್ಲ ಅಣ್ಣ ಎಂದು ಹೇಳಿದ್ದರು. ಇದೇ ಮಾತು ಈಗ ಮೋಕ್ಷಿತಾ ಕಿವಿಗೆ ಬಿದ್ದಿದೆ. ನಾನು 10 ವಾರ ಇರುತ್ತೇನೆ ಅಂತ ಡಿಸೈಡ್ ಮಾಡೋಕೆ ನೀವು ಯಾರು ಎಂದು ಪ್ರಶ್ನಿಸಿದ್ದಾರೆ ಮೋಕ್ಷಿತಾ. ಅದಕ್ಕೆ ತ್ರಿವಿಕ್ರಮ್, ಆಯ್ತಮ್ಮಾ ನೀನು ಫಿನಾಲೆಗೆ ಹೋಗಮ್ಮ ಎಂದು ತಿರುಗೇಟು ನೀಡಿದ್ದಾರೆ.

    ರೊಚ್ಚಿಗೆದ್ದ ಮೋಕ್ಷಿತಾ ಇಷ್ಟಕ್ಕೆ ಸುಮ್ಮನಾಗದೆ, ನಾವೆಲ್ಲಾ ಇಲ್ಲಿ ಏನು ಅಲ್ಲ. ಯಾವುದೋ ಒಂದು ಸೀರಿಯಲ್ ಐದುವರೆ ವರ್ಷ ಮಾಡಿಕೊಂಡು ಬಂದಿದ್ದೀವಿ ಸುಮ್ನೆ. ನೀವು ಏನು ಅಲ್ಲ ತಿಳಿದುಕೊಂಡುಬಿಟ್ಟಿದ್ದೀರಿ. ನೀವು ಗೋಮುಖ ವ್ಯಾಘ್ರ ತರಹ ಆಟ ಆಡ್ತಾ ಇದ್ದೀರಾ. ಇವತ್ತಿಂದ ಆಟ ಶುರು ಎಂದು ಮೋಕ್ಷಿತಾ ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ. ನೀವು ಏನು ತಿಳಿದುಕೊಂಡಿದ್ದೀರಾ ಅದನ್ನು ಸಾಬೀತುಪಡಿಸುತ್ತೇನೆ ಎಂದು ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು ಹಾಕಿದ್ದಾರೆ.

    ಬಿಗ್ ಬಾಸ್‌ಗೆ ಬಂದ ದಿನದಿಂದ ಸೈಲೆಂಟ್ ಆಗಿದ್ದ ಪಾರು ಇದೀಗ ತ್ರಿವಿಕ್ರಮ್ ವಿರುದ್ಧ ವೈಲೆಂಟ್ ಆಗಿ ಸಮರ ಸಾರಿರೋದನ್ನು ನೋಡಿ ಸ್ಪರ್ಧಿಗಳು,ಪ್ರೇಕ್ಷಕರು ದಂಗಾಗಿದ್ದಾರೆ. ಮೋಕ್ಷಿತಾ ಇನ್ ಫೈರ್ ಅಂತ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

  • BBK 11: ತ್ರಿವಿಕ್ರಂ, ಉಗ್ರಂ ಮಂಜು ಕ್ರೌರ್ಯ- ಸ್ಪರ್ಧಿಗಳಿಗೆ ತಕ್ಕ ಪಾಠ ಕಲಿಸಿದ ಬಿಗ್ ಬಾಸ್

    BBK 11: ತ್ರಿವಿಕ್ರಂ, ಉಗ್ರಂ ಮಂಜು ಕ್ರೌರ್ಯ- ಸ್ಪರ್ಧಿಗಳಿಗೆ ತಕ್ಕ ಪಾಠ ಕಲಿಸಿದ ಬಿಗ್ ಬಾಸ್

    ದೊಡ್ಮನೆಯಲ್ಲಿ (Bigg Boss Kannada 11) ಈಗ ಪಾಲಿಟಿಕ್ಸ್ ಆಟ ನಡೆಯುತ್ತಿದೆ. ಧರ್ಮಪರ ಸೇನಾ ಪಕ್ಷ ಮತ್ತು ಪ್ರಾಮಾಣಿಕ ಸಮರ್ಥರ ನ್ಯಾಯವಾದಿ ಪಕ್ಷ ಎಂಬ ಎರಡು ರಾಜಕೀಯ ಪಾರ್ಟಿಗಳನ್ನು ರಚನೆ ಮಾಡಲಾಗಿದೆ. ಒಂದಕ್ಕೆ ತ್ರಿವಿಕ್ರಂ ಲೀಡರ್ ಆಗಿದ್ದರೆ, ಮತ್ತೊಂದಕ್ಕೆ ಐಶ್ವರ್ಯಾ ಲೀಡರ್ ಆಗಿದ್ದಾರೆ. 2 ತಂಡಕ್ಕೂ ‘ಬಿಗ್ ಬಾಸ್’ ಟಾಸ್ಕ್ ಅನ್ನು ನೀಡಿದರು. ಎರಡು ತಂಡದವರು, ಕಿತ್ತಾಟ ಮಾಡಿ ಟಾಸ್ಕ್ ರದ್ದಾಗುವಂತೆ ಮಾಡಿದ ಪರಿಣಾಮ, ಸ್ಪರ್ಧಿಗಳಿಗೆ ಬಿಗ್ ಬಾಸ್ ತಕ್ಕ ಶಾಸ್ತಿ ಮಾಡಿದ್ದಾರೆ. ಇದನ್ನೂ ಓದಿ:BBK 11: ಮೈ ಮುಟ್ಟಬೇಡಿ, ಕಾಲು ನೆಟ್ಟಗಿದೆ: ಐಶ್ವರ್ಯಾಗೆ ಚೈತ್ರಾ ಆವಾಜ್

    ಕೊಟ್ಟಿರುವ ಬೋರ್ಡ್‌ಗೆ ಎರಡು ತಂಡಗಳು ಬಿಗ್ ಬಾಸ್ ಕಳುಹಿಸುವ ವಸ್ತುಗಳನ್ನು ತೆಗೆದುಕೊಂಡು ತಮ್ಮ ತಮ್ಮ ಪಕ್ಷಗಳ ಪೋಸ್ಟರ್ ಅನ್ನು ರಚಿಸಿ, ಅದನ್ನು ಗೋಡೆ ಮೇಲೆ ಅಂಟಿಸಬೇಕು. ಒಂದು ಪಕ್ಷದವರು ಪೋಸ್ಟರ್ ಅಂಟಿಸಿದರೆ, ಮತ್ತೊಂದು ಪಕ್ಷದವರು ಅದನ್ನು ಕಿತ್ತುಹಾಕಬೇಕು. ಪಕ್ಷಗಳ ಸದಸ್ಯರು ತಮ್ಮ ಪಕ್ಷಗಳ ಪೋಸ್ಟರ್‌ಗಳನ್ನು ಯಾರೂ ಕೀಳದಂತೆ ಕಾಯಬೇಕು. ಇದು ಟಾಸ್ಕ್ ಆಗಿತ್ತು.

    ಕೊಟ್ಟ ಆಟವನ್ನು ಕ್ರೀಡಾ ಮನೋಭಾವದಿಂದ ಸ್ಪರ್ಧಿಗಳು ತೆಗೆದುಕೊಳ್ಳಲಿಲ್ಲ. ಅದರಲ್ಲೂ ತ್ರಿವಿಕ್ರಂ, ಚೈತ್ರಾ ಕುಂದಾಪುರ, ಗೋಲ್ಡ್ ಸುರೇಶ್, ಮಂಜು ಅವರ ಆರ್ಭಟ ಜೋರಾಗಿತ್ತು. ಇವರೆಲ್ಲರ ರೌದ್ರವತಾರಕ್ಕೆ ಹನುಮಂತ ಸುಸ್ತಾಗಿ ಬಿದ್ದು ಬಿಟ್ಟರು. ಟಾಸ್ಕ್ನಲ್ಲಿ ಮಂಜು ಅವರನ್ನು ತಡೆಯಲು ಹೋದ ತ್ರಿವಿಕ್ರಂ (Trivikram) ಜೋರಾಗಿ ಗುದ್ದಿದರು. ಅದರ ಪರಿಣಾಮ, ಮಂಜು ಬಾಯಿಗೆ ಪೆಟ್ಟಾಯಿತು. ಎರಡು ಬಾರಿ ಟಾಸ್ಕ್ ಆಡಿಸಿದರೂ ಯಾವುದೇ ಫಲಿತಾಂಶ ಬರಲಿಲ್ಲ. ಪ್ರತಿಬಾರಿಯೂ ಮಂಜು (Ugramm Manju) ಮತ್ತು ತ್ರಿವಿಕ್ರಂ ಬಹಳ ಆರ್ಭಟದಿಂದಲೇ ಅಖಾಡಕ್ಕೆ ಇಳಿಯುತ್ತಿದ್ದರು. ಉಸ್ತುವಾರಿ ಆಗಿದ್ದ ಮೋಕ್ಷಿತಾ (Mokshitha Pai) ಅವರು ತುಂಬಾ ಸಲ ಇದನ್ನು ತಪ್ಪಿಸಲು ಪ್ರಯತ್ನಿಸಿದರು. ಆದರೆ ಏನು ಪ್ರಯೋಜನ ಆಗಲಿಲ್ಲ.

    ಯಾವಾಗ ತಾವು ನೀಡಿದ ಟಾಸ್ಕ್ ಅನ್ನು ಸ್ಪರ್ಧಿಗಳು ಸರಿಯಾಗಿ ಆಡಲಿಲ್ಲವೋ, ಆಗ ಸ್ಪರ್ಧಿಗಳ ಮೇಲೆ ಬಿಗ್ ಬಾಸ್ ಕೆಂಡವಾದರು. ರಾಜಕೀಯ ಮಾಡಲು ಬೇಕಿರುವುದು ತಂತ್ರಗಳು ಮತ್ತು ಯುಕ್ತಿ. ಹೆಚ್ಚಾಗಿ ದೈಹಿಕ ಬಲದ ಪ್ರದರ್ಶನಕ್ಕೆ ಒತ್ತು ನೀಡಿದ್ದೀರಿ ಎಂದು ಬಿಗ್ ಬಾಸ್ ಆಕ್ರೋಶ ವ್ಯಕ್ತಪಡಿಸಿದರು. ಈ ಟಾಸ್ಕ್ ವಿಚಾರಕ್ಕೆ ಬಂದರೆ, ಎರಡು ಸುತ್ತು ನಡೆದರೂ, ಫಲಿತಾಂಶ ಘೋಷಣೆ ಮಾಡಲು ಸಾಧ್ಯವಾಗದಂತೆ ಆಗಿದೆ. ಹಾಗಾಗಿ ಈ ಟಾಸ್ಕ್ ಅನ್ನು ರದ್ದು ಮಾಡಿದರು ಬಿಗ್ ಬಾಸ್. ಇಂದಿನ ತಪ್ಪು ಮುಂದಿನ ಪಾಠವಾಗುತ್ತದೆ ಮರೆಯದಿರಿ ಎಂದು ಬಿಗ್ ಬಾಸ್ ಸ್ಪರ್ಧಿಗಳಿಗೆ ಕಿವಿಹಿಂಡಿದರು. ಇನ್ನಾದರೂ ಬಲ ಪ್ರದರ್ಶನ ಬಿಟ್ಟು ಯುಕ್ತಿಯಿಂದ ಸ್ಪರ್ಧಿಗಳು ಆಟ ಆಡುತ್ತಾರಾ? ಕಾದುನೋಡಬೇಕಿದೆ.

  • BBK 11: ಮೈ ಮುಟ್ಟಬೇಡಿ, ಕಾಲು ನೆಟ್ಟಗಿದೆ: ಐಶ್ವರ್ಯಾಗೆ ಚೈತ್ರಾ ಆವಾಜ್

    BBK 11: ಮೈ ಮುಟ್ಟಬೇಡಿ, ಕಾಲು ನೆಟ್ಟಗಿದೆ: ಐಶ್ವರ್ಯಾಗೆ ಚೈತ್ರಾ ಆವಾಜ್

    ಬಿಗ್ ಬಾಸ್ ಮನೆಯ ಆಟ (Bigg Boss Kannada 11) ಶುರುವಾದ ದಿನದಿಂದ ಜಗಳದ ಮೂಲಕವೇ ಹೈಲೆಟ್ ಆಗುತ್ತಿದೆ. ಮನರಂಜನೆಗಿಂತ ಸ್ಪರ್ಧಿಗಳ ಕಿರಿಕ್ ನೋಡಿ ಸ್ವತಃ ವೈಲ್ಡ್ ಕಾರ್ಡ್ ಎಂಟ್ರಿ ಹನುಮಂತ ಕೂಡ ದಂಗಾಗಿದ್ದಾರೆ. ಕ್ಯಾಪ್ಟನ್ ಆಗಿರೋ ತ್ರಿವಿಕ್ರಂ ರೂಲ್ಸ್‌ವೊಂದನ್ನು ಬ್ರೇಕ್ ಮಾಡಿದ್ದಾರೆ. ಈ ವೇಳೆ, ಚೈತ್ರಾಗೆ (Chaithra Kundapura) ಪಾಠ ಮಾಡಲು ಬಂದ ಐಶ್ವರ್ಯಾ ಮೇಲೆ ಕಿಡಿಕಾರಿದ್ದಾರೆ. ನನ್ನ ಮೈ ಮುಟ್ಟಬೇಡಿ, ಕಾಲು ನೆಟ್ಟಗಿದೆ ಎಂದು ಐಶ್ವರ್ಯಾಗೆ ಚೈತ್ರಾ ಆವಾಜ್ ಹಾಕಿದ್ದಾರೆ.

    ಈ ಬಾರಿ ತ್ರಿವಿಕ್ರಂ (Trivikram) ಹಾಗೂ ಐಶ್ವರ್ಯಾ (Aishwarya) ಜೋಡಿ ಕ್ಯಾಪ್ಟನ್ ಆಗಿದ್ದಾರೆ. ಈ ರೀತಿ ಜೋಡಿಯೊಂದು ಒಟ್ಟಿಗೆ ಕ್ಯಾಪ್ಟನ್ ಆಗಿರೋದು ಬಿಗ್ ಬಾಸ್ ಇತಿಹಾಸದಲ್ಲಿ ಇದೇ ಮೊದಲು. ಕ್ಯಾಪ್ಟನ್ ರೂಮ್‌ನಲ್ಲಿ ವಿಶೇಷ ಸವಲತ್ತುಗಳು ಇರುತ್ತವೆ. ಇನ್ನೂ ನಿಯಮಗಳ ಪ್ರಕಾರ, ಕ್ಯಾಪ್ಟನ್ ಹೊರತು ಯಾರೂ ಕೂಡ ಈ ರೂಂನ ಬಳಕೆ ಮಾಡಬಾರದು. ಆದರೆ, ಈ ನಿಯಮವನ್ನು ತ್ರಿವಿಕ್ರಂ ಬ್ರೇಕ್ ಮಾಡಿದ್ದಾರೆ.

    ಆಟದ ತಂತ್ರಗಾರಿಕೆಯ ಕುರಿತು ಮಾತನಾಡಲು ಚೈತ್ರಾರನ್ನು ಕ್ಯಾಪ್ಟನ್ ರೂಮ್‌ಗೆ ಕರೆದುಕೊಂಡು ಹೋಗಿದ್ದಾರೆ ತ್ರಿವಿಕ್ರಂ. ಇದನ್ನು ಗಮನಿಸಿದ ಐಶ್ವರ್ಯಾ ಅವರು ಕ್ಯಾಪ್ಟನ್ ಹೊರತುಪಡಿಸಿ ಮತ್ಯಾರೂ ಆ ರೂಂನ ಬಳಕೆ ಮಾಡುವಂತಿಲ್ಲ ಎಂದು ಹೇಳಿದರು. ಆದರೆ, ಇದನ್ನು ತ್ರಿವಿಕ್ರಂ ಒಪ್ಪಲಿಲ್ಲ. ಇದನ್ನೂ ಓದಿ:ಫ್ಯಾನ್ಸ್‌ಗೆ ಸಿಹಿಸುದ್ದಿ- ಹೊಸ ರಿಲೀಸ್ ಡೇಟ್ ಅನೌನ್ಸ್ ಮಾಡಿದ ‘ಪುಷ್ಪ 2’ ಟೀಮ್

    ಆ ಬಳಿಕ ಐಶ್ವರ್ಯಾ ಅವರು, ಚೈತ್ರಾನ ಕೈ ಹಿಡಿದು ಎಳೆದು ತರುವ ಪ್ರಯತ್ನ ಮಾಡಿದ್ದಾರೆ. ಇದರಿಂದ ಚೈತ್ರಾ ಸಿಟ್ಟಾದರು. ಕೈ ಮುಟ್ಟಿ ಮಾತನಾಡಬೇಡಿ. ನನ್ನ ಕಾಲು ನೆಟ್ಟಗಿದೆ ಎಂದು ಕೂಗಾಡಿದರು ಚೈತ್ರಾ. ಆ ಬಳಿಕ ಸುಮ್ಮನಾದರು ಐಶ್ವರ್ಯಾ. ನಂತರ ತ್ರಿವಿಕ್ರಂ ಜೊತೆ ಸಿಟ್ಟು ಮಾಡಿಕೊಂಡರು. ಇಬ್ಬರ ನಡುವೆ ವಾಕ್ಸಮರ ನಡೆಯಿತು.

  • BBK 11: ಟಾಸ್ಕ್‌ ವೇಳೆ ಪೆಟ್ಟು, ಆಸ್ಪತ್ರೆಗೆ ದಾಖಲಾದ ತ್ರಿವಿಕ್ರಮ್?

    BBK 11: ಟಾಸ್ಕ್‌ ವೇಳೆ ಪೆಟ್ಟು, ಆಸ್ಪತ್ರೆಗೆ ದಾಖಲಾದ ತ್ರಿವಿಕ್ರಮ್?

    ಟಾಸ್ಕ್ ವೇಳೆ ಕಂಟೆಸ್ಟೆಂಟ್‌ಗೆ ಗಾಯವಾಗೋದು, ಅವರನ್ನು ಆಸ್ಪತ್ರೆಗೆ ದಾಖಲಿಸೋದು ಪ್ರತಿ ಸೀಸನ್‌ನಲ್ಲೂ ನಡೆದಿದೆ. ಕಳೆದ ಬಾರಿ ಸಂಗೀತಾ ಮತ್ತು ಡ್ರೋನ್ ಪ್ರತಾಪ್‌ಗೆ ಕೆಮಿಕಲ್ ಮಿಕ್ಸ್ ಮಾಡಿದ್ದ ನೀರು ಎರೆಚಿದ್ದರಿಂದ ಕಣ್ಣಿಗೆ ಹಾನಿಯಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲ ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಕನ್ನಡಕ ಹಾಕಿಕೊಂಡೇ ದೊಡ್ಮನೆಗೆ ವಾಪಸ್ಸಾಗಿದ್ದರು. ಕೈ ಕಾಲು ಮುರಿದುಕೊಂಡು ಕೆಲ ಕಂಟೆಸ್ಟೆಂಟ್‌ಗಳು ಬಿಗ್‌ಬಾಸ್ ಮನೆಯಿಂದಲೇ ಆಚೆ ಬಂದಿದ್ದೂ ಇದೆ. ಸೀಸನ್ 11ರಲ್ಲೂ ಅದು ಮುಂದುವರೆದಿದೆ. ಈ ಸೀಸನ್‌ನಲ್ಲಿ ಇದೇ ಮೊದಲ ಬಾರಿಗೆ ಟಾಸ್ಕ್‌ನಲ್ಲಿ ‘ಬಿಗ್‌ ಬಾಸ್’ ಸ್ಪರ್ಧಿ ತ್ರಿವಿಕ್ರಮ್ (Trivikram) ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ.

    ‘ಬಿಗ್‌ ಬಾಸ್ ಸೀಸನ್ 11’ (Bigg Boss Kannada 11) ಶುರುವಾಗಿ ಐದು ದಿನಗಳಾಗಿವೆ. ದಿನದಿಂದ ದಿನಕ್ಕೆ ಬಿಗ್‌ಬಾಸ್ ಮನೆ ಕಾವು ಪಡೆದುಕೊಳ್ಳುತ್ತಿದೆ. ಮೊದಲ ದಿನದಿಂದಲೇ ಸ್ಪರ್ಧಿಗಳು ದ್ವೇಷ ಸಾಧಿಸ್ತಾ ಇದ್ದಾರೆ. ಬಿಗ್‌ಬಾಸ್ ಮನೆ ಒಂದು ದಿನವೂ ಶಾಂತವಾಗಿ ಉಳಿದಿಲ್ಲ. ಸ್ವರ್ಗ ನಿವಾಸಿಗಳು ಮತ್ತು ನಕರ ನಿವಾಸಿಗಳ ಮಧ್ಯೆ ಬಿಗ್ ಫೈಟ್ ನಡೆಯುತ್ತಲೇ ಇದೆ. ಒಂದೊಂದು ಸಲ ತಮ್ಮದೇ ಗುಂಪಿನ ಸದಸ್ಯರ ಜೊತೆಯೇ ಸ್ಪರ್ಧಿಗಳು ಜಗಳಕ್ಕೆ ಇಳಿದದ್ದುಂಟು. ಹಾಗಾಗಿ ಟಾಸ್ಕ್‌ನಲ್ಲಿ ತೀರಾ ತೀವ್ರತೆ ಕಾಣುತ್ತಿದೆ. ಗೆಲ್ಲುವುದಕ್ಕಾಗಿ ಎಂತಹ ರಿಸ್ಕ್ ತಗೆದುಕೊಳ್ಳಲು ಸ್ಪರ್ಧಿಗಳು ರೆಡಿ ಆಗಿದ್ದಾರೆ. ಈ ಪರಿಣಾಮ, ಬಿಗ್ ಬಾಸ್ ಸ್ಪರ್ಧಿ ತ್ರಿವಿಕ್ರಮ್ ಗಾಯಗೊಂಡಿದ್ದಾರೆ. ಇದನ್ನೂ ಓದಿ:‘ನನ್ನ ಹೃದಯದ ಒಂದು ಭಾಗ’ ಎನ್ನುತ್ತಾ ಸಿಹಿಸುದ್ದಿ ಕೊಟ್ಟ ಶ್ರೀನಿಧಿ ಶೆಟ್ಟಿ

    5ನೇ ದಿನಕ್ಕೆ ಕಾಲಿಟ್ಟಿರೋ ಬಿಗ್ ಬಾಸ್ ಸ್ಪರ್ಧಿಗಳಿಗೆ ಟಾಸ್ಕ್ವೊಂದನ್ನು ನೀಡಲಾಗಿತ್ತು. ಬ್ಯಾಸ್ಕೆಟ್ ಬಾಲ್ ಚೆಂಡುಗಳನ್ನು ಸಂಗ್ರಹಿಸೋದು ಮತ್ತು ಅವುಗಳನ್ನು ತಮ್ಮ ಗೋಲ್‌ನಲ್ಲಿ ಇರಿಸಬೇಕಿತ್ತು. ಎದುರಾಳಿ ತಂಡದವರು ಗೋಲ್‌ನಲ್ಲಿ ಚೆಂಡುಗಳನ್ನು ಹಾಕದೇ ಇರೋ ರೀತಿಯಲ್ಲಿ ತಡೆಯಬೇಕಿತ್ತು. ಚೆಂಡು ಸಂಗ್ರಹಿಸಲು ಮತ್ತು ಅದನ್ನು ತಡೆಯಲು ಹರಸಾಹಸವೇ ನಡೆದಿದೆ. ಭಾರೀ ಜಟಾಪಟಿಯ ಮಧ್ಯ ಅವಘಡ ಸಂಭವಿಸಿದೆ. ತುಂಬಾ ಅಗ್ರೆಸ್ಸಿವ್ ಆಗಿ ಆಡುತ್ತಿದ್ದ ತ್ರಿವಿಕ್ರಮ್ ಈ ಟಾಸ್ಕ್‌ನಲ್ಲಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಕನ್ಪೆಷನ್ ರೂಮ್‌ಗೆ ಕರೆಯಿಸಿ, ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಹೇಳಲಾಗ್ತಿದೆ. ಚಿಕಿತ್ಸೆ ಪಡೆದ ನಂತರ ಅವರು ವಾಪಸ್ ಬಿಗ್‌ ಬಾಸ್ ಮನೆಗೆ ಬಂದಿದ್ದಾರೆ ಅನ್ನೋದು ಸುದ್ದಿ.

    ರಿಲೀಸ್ ಆಗಿರೋ ಪ್ರೊಮೋದಲ್ಲಿ ಚೆಂಡು ಕಬಳಿಸುವ ವೇಳೆ ಶಿಶಿರ್ ಕೂಡ ಕೆಳಗೆ ಬಿದ್ದಿರುವುದನ್ನು ನೋಡಬಹುದು. ಇದಷ್ಟೇ ಅಲ್ಲ, ಟಾಸ್ಕ್ ವೇಳೆ ಗೋಲ್ಡ್ ಸುರೇಶ್ ಸಹ ಗಾಯಗೊಂಡಿದ್ದಾರೆ ಎಂದು ಹೇಳಲಾಗ್ತಿದೆ. ಆದರೆ, ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟು ಏನೂ ಸುರೇಶ್‌ಗೆ ಆಗಿಲ್ಲವಂತೆ. ಒಂದು ಕಡೆ ಮನೆಯಲ್ಲಿ ಕುಸ್ತಿ ನಡೆಯುತ್ತಿದ್ದರೆ ಮತ್ತೊಂದು ಕಡೆ ಲವ್‌ ಸ್ಟೋರಿ ಕೂಡ ಶುರುವಾಗಿದೆ. ಧರ್ಮ ಕೀರ್ತಿರಾಜ್ ಮೇಲೆ ಅನುಷಾ ಹಾಗೂ ಐಶ್ವರ್ಯಾಗೆ ಲೈಟ್ ಆಗಿ ಲವ್ವಾದಂತೆ ಕಾಣುತ್ತಿದೆ. ಇದೊಂದು ತ್ರಿಕೋನ ಲವ್‌ಸ್ಟೋರಿ ಆಗಿದ್ದು, ನಿಜವಾಗಿಯೂ ಇವರ ಮಧ್ಯ ಪ್ರೀತಿ ಅರಳಿದೆಯಾ? ಕಾದು ನೋಡಬೇಕು.

  • BBK 11: ದೊಡ್ಮನೆಗೆ ಕಾಲಿಟ್ಟ ಶಿಶಿರ್, ತ್ರಿವಿಕ್ರಮ್, ಮಾನಸಾ

    BBK 11: ದೊಡ್ಮನೆಗೆ ಕಾಲಿಟ್ಟ ಶಿಶಿರ್, ತ್ರಿವಿಕ್ರಮ್, ಮಾನಸಾ

    ನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 11ಕ್ಕೆ (Bigg Boss Kannada 11) ತ್ರಿವಿಕ್ರಮ್ ಮತ್ತು ಶಿಶಿರ್ ಶಾಸ್ತ್ರಿ, ಮಾನಸಾ (Manasa Tukali Santhosh) ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:ಜೊತೆಯಾಗಿ ದೊಡ್ಮನೆಗೆ ಕಾಲಿಟ್ಟ ಅನುಷಾ ರೈ, ಧರ್ಮ ಕೀರ್ತಿರಾಜ್‌

    ತ್ರಿವಿಕ್ರಮ್ ಪದ್ಮಾವತಿ ಸೀರಿಯಲ್ ಮೂಲಕ ಪ್ರೇಕ್ಷಕರಿಗೆ ಪರಿಚಿತರಾಗಿದ್ರೆ, ಶಿಶಿರ್ ಕುಲವಧು ಸೇರಿದಂತೆ ಹಲವು ಸೀರಿಯಲ್, ಸಿನಿಮಾಗಳ ಮೂಲಕ ಸೈ ಎನಿಸಿಕೊಂಡಿದ್ದಾರೆ. 8ನೇ ಮತ್ತು 9ನೇ ಸ್ವರ್ಧಿಯಾಗಿ ಆಗಮಿಸಿದ್ದಾರೆ. ಶಿಶಿರ್ (Shishir Shastry) ನರಕಕ್ಕೆ ಎಂಟ್ರಿ ಪಡೆದರೆ, ತ್ರಿವಿಕ್ರಮ್ (Trivikram) ಸ್ವರ್ಗಕ್ಕೆ ಬಂದಿದ್ದಾರೆ.

    ಇತ್ತ ಮಾನಸಾ ತುಕಾಲಿ ಸಂತೋಷ್ ಅವರು ಗಿಚ್ಚಿ ಗಿಲಿಗಿಲಿ 3ರ ರನ್ನರ್ ಅಪ್ ಆಗಿದ್ದರು. ಈಗ ಬಿಗ್ ಬಾಸ್ ಮನೆಗೆ 10ನೇ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ.

    ಪ್ರಸ್ತುತ ಭವ್ಯಾ ಗೌಡ, ಯಮುನಾ, ಧನರಾಜ್, ಗೌತಮಿ, ಅನುಷಾ ರೈ, ಧರ್ಮ ಕೀರ್ತಿರಾಜ್ ದೊಡ್ಮನೆ ಪ್ರವೇಶ ಪಡೆದಿದ್ದಾರೆ. ಒಟ್ಟು 17 ಸ್ಪರ್ಧಿಗಳ ಜಟಾಪಟಿ ದೊಡ್ಮನೆಯಲ್ಲಿ ನೋಡಬಹುದು.

  • ಮತ್ತೆ ಒಂದಾದ ಅಲ್ಲು ಅರ್ಜುನ್ ಮತ್ತು ತ್ರಿವಿಕ್ರಮ್

    ಮತ್ತೆ ಒಂದಾದ ಅಲ್ಲು ಅರ್ಜುನ್ ಮತ್ತು ತ್ರಿವಿಕ್ರಮ್

    ‘ಅಲ ವೈಕುಂಠಪುರಮುಲೋ’ ಸಿನಿಮಾದ ಮೂಲಕ ಹಿಟ್ ಜೋಡಿ ಎಂದೇ ಹೆಸರು ಪಡೆದಿದ್ದ ಅಲ್ಲು ಅರ್ಜುನ್ (Allu Arjun) ಮತ್ತು ತ್ರಿವಿಕ್ರಮ್  (Trivikram) ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಮತ್ತೆ ಒಂದಾಗಿದ್ದಾರೆ.  ಗುರು ಪೂರ್ಣಿಮೆ ದಿನದಂದು ಈ ಸಿಹಿ ಸುದ್ದಿಯನ್ನು ಅವರು ಹಂಚಿಕೊಂಡಿದ್ದಾರೆ.

    ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಪ್ರಾಜೆಕ್ಟ್ ಹೊರತುಪಡಿಸಿ ಬನ್ನಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಒಪ್ಪಿಕೊಂಡಿದ್ದಾರೆ. ಅನಿಮಲ್ ಸಿನಿಮಾ ಖ್ಯಾತಿಯ ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಟೀ-ಸೀರಿಸ್ ನಿರ್ಮಾಣ ಸಂಸ್ಥೆಯಲ್ಲಿ ಈ ಚಿತ್ರ ಮೂಡಿಬರಲಿದೆ. ಇದೀಗ ಅಲ್ಲು ಅರ್ಜುನ್ ತ್ರಿವಿಕ್ರಮ್ ಜೊತೆ ಕೈ ಜೋಡಿಸಿದ್ದಾರೆ. ಇದನ್ನೂ ಓದಿ:ಗೋಲ್ಡನ್ ಟೆಂಪಲ್‌ನಲ್ಲಿ ಪಾತ್ರೆ ತೊಳೆದು ಸೇವೆ ಸಲ್ಲಿಸಿದ ರಾಘವ್- ಪರಿಣಿತಿ ಜೋಡಿ

    ಟಾಲಿವುಡ್ ಹಿಟ್ ಜೋಡಿ ಅಲ್ಲು ಅರ್ಜುನ್ ಹಾಗೂ ತ್ರಿವಿಕ್ರಮ್ ಮತ್ತೆ ಒಂದಾಗಿದ್ದಾರೆ. ‘ಜುಲಾಯಿ’, ‘ಸನ್ ಆಫ್ ಸತ್ಯಮೂರ್ತಿ’, ‘ಅಲ ವೈಕುಂಠಪುರಮುಲೋ’ ಸಿನಿಮಾಗಳಂತಹ ಮೆಗಾ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿರುವ ಈ ಕಾಂಬೋ ನಾಲ್ಕನೇ ಚಿತ್ರಕ್ಕೆ ಸಜ್ಜಾಗಿದ್ದಾರೆ. ಬಹಳ ದಿನಗಳಿಂದಲೂ ಅಲ್ಲು-ತ್ರಿವಿಕ್ರಮ್ ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಈ ಗಾಸಿಪ್ ಗೆ ಅಧಿಕೃತ ಮುದ್ರೆ ಬಿದ್ದಿದೆ.

    ಗುರು ಪೂರ್ಣಿಮಾ ದಿನದ ಅಂಗವಾಗಿ ಅಲ್ಲು ಅರ್ಜುನ್ ಹಾಗೂ ತ್ರಿವಿಕ್ರಮ್ ಹೊಸ ಸಿನಿಮಾ ಅನೌನ್ಸ್ ಆಗಿದೆ. ಪ್ಯಾನ್-ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿದ್ದು, ಅದಕ್ಕೆ ಬೇಕಾದ ಎಲ್ಲ ತಯಾರಿ ಕೂಡ ಮಾಡಿಕೊಳ್ಳಲಾಗುತ್ತಿದೆ.

    ಅಲ ವೈಕುಂಠಪುರಮುಲೂ ಸಿನಿಮಾದಂತಹ ಭರ್ಜರಿ ಹಿಟ್ ಕೊಟ್ಟಿರುವ ಹಾರಿಕಾ ಮತ್ತು ಹಾಸನ್ ಕ್ರಿಯೇಷನ್ಸ್  ಹಾಗೂ ಗೀತಾ ಆರ್ಟ್ಸ್ (Geetha Arts) ಬ್ಯಾನರ್ ನಡಿಯಲ್ಲಿಯೇ ಅಲ್ಲು ಅರ್ಜುನ್ ಹಾಗೂ ತ್ರಿವಿಕ್ರಮ್ ನಾಲ್ಕನೇ ಸಿನಿಮಾ ತಯಾರಾಗಲಿದೆ. ಈಗಾಗಲೇ ಸೂಪರ್ ಹಿಟ್ ಜೋಡಿ ಎನಿಸಿಕೊಂಡಿರುವ ಇವರಿಬ್ಬರು ಮತ್ತೆ ಒಂದಾಗಿರುವುದು ಭಾರೀ ನಿರೀಕ್ಷೆ ಹೆಚ್ಚಿಸಿದೆ. ಉಳಿದ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಶೀಘ್ರದಲ್ಲೇ ಚಿತ್ರತಂಡ ಅಪ್ ಡೇಟ್ ಕೊಡಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸತತ ಸೋಲಿನಿಂದ ಬೇಸತ್ತ ಪೂಜಾಗೆ ನಿರ್ದೇಶಕ ತ್ರಿವಿಕ್ರಮ್ ಸಲಹೆ

    ಸತತ ಸೋಲಿನಿಂದ ಬೇಸತ್ತ ಪೂಜಾಗೆ ನಿರ್ದೇಶಕ ತ್ರಿವಿಕ್ರಮ್ ಸಲಹೆ

    ರಾವಳಿ ಬ್ಯೂಟಿ ಪೂಜಾ ಹೆಗ್ಡೆಗೆ (Pooja Hegde) ಲಕ್ ಕೈಕೊಟ್ಟಿದೆ. ಸಾಲು ಸಾಲು ಸಿನಿಮಾ ಸೋಲುಗಳಿಂದ ಪೂಜಾ ಕಂಗೆಟ್ಟಿದ್ದಾರೆ. ಬಿಗ್ ಬ್ರೇಕ್‌ಗಾಗಿ ಎದುರು ನೋಡ್ತಿದ್ದಾರೆ. ಹೀಗಿರುವಾಗ ನಿರ್ದೇಶಕ ತ್ರಿವಿಕ್ರಮ್ (Director Trivikram) ಕೂಡ ಪೂಜಾಗೆ ಒಂದಿಷ್ಟು ಸಲಹೆ ಕೊಟ್ಟಿದ್ದಾರೆ ಎಂಬ ಮಾತುಗಳು ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡ್ತಿದೆ.

    ನಟಿ ಪೂಜಾ ಹೆಗ್ಡೆ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನ ಕೊಟ್ಟಂತಹ ನಟಿ, ರಶ್ಮಿಕಾ (Rashmika) ಜೊತೆ ಪೈಪೋಟಿ ಕೊಟ್ಟವರಲ್ಲಿ ಪೂಜಾ ಕೂಡ ಒಬ್ಬರು. ಹೀಗಿರುವಾಗ ಕಳೆದ ವರ್ಷ ಪೂಜಾ ನಟಿಸಿರುವ ಬ್ಯಾಕ್ ಟು ಬ್ಯಾಕ್ ಚಿತ್ರಗಳು ನೆಲಕಚ್ಚಿದೆ. ತಮ್ಮ ವೃತ್ತಿ ಜೀವನಕ್ಕೆ ಬಿಗ್ ಬ್ರೇಕ್‌ಗಾಗಿ ಕಾಯ್ತಿದ್ದಾರೆ. ಇದನ್ನೂ ಓದಿ: ಕನ್ನಡಕ್ಕೆ ಮೊದಲ ಆದ್ಯತೆ ಕೊಟ್ರು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಮಂದಣ್ಣ

    ಪೂಜಾ ಸದ್ಯ ದಕ್ಷಿಣದ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಸತತ ಸೋಲುಗಳನ್ನು ಕಂಡಿರೋ ಪೂಜಾ ಹೆಗ್ಡೆ ಕೈಯಲ್ಲಿ ತೆಲುಗಿನ ಏಕೈಕ ಸಿನಿಮಾವಿದೆ. ಈಗಾಗಲೇ ಮಹೇಶ್ ಬಾಬು (Mahesh Babu) ಅಭಿನಯದ 28ನೇ ಸಿನಿಮಾಗೆ ಸಹಿ ಮಾಡಿರೋ ನಟಿ ಸಿನಿಮಾದಲ್ಲಿ ನಟಿಸೋಕೆ ಹೈದರಾಬಾದ್‌ಗೆ ಬಂದಿದ್ದಾರೆ. ಇನ್ನೇನು ಲ್ಯಾಂಡ್ ಆಗುತ್ತಿದ್ದಂತೆ ಜುಬಿಲಿ ಹಿಲ್ಸ್‌ನಲ್ಲಿರುವ ದೇವಿ ಟೆಂಪಲ್‌ಗೆ ಭೇಟಿ ನೀಡಿ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ.

    ಮಹೇಶ್ ಬಾಬು ಹಾಗೂ ಪೂಜಾ ಹೆಗ್ಡೆ ಕಾಂಬಿನೇಷನ್ ಸಿನಿಮಾಗೆ ತ್ರಿವಿಕ್ರಮ್ (Trivikram) ಆಕ್ಷನ್ ಕಟ್ ಹೇಳುತ್ತಿರೋದು ಗೊತ್ತೇ ಇದೆ. ಇವರಿಗೂ ಸಿನಿಮಾ ಬಗ್ಗೆ ಭಯ ಇರೋದ್ರಿಂದ ಪೂಜಾ ಹೆಗ್ಡೆಗೆ ಟೆಂಪಲ್ ರನ್ ಮಾಡುವಂತೆ ಸಲಹೆಗಳನ್ನು ನೀಡಿದ್ದಾರಂತೆ. ದೇವಸ್ಥಾನಗಳಿಗೆ ಹೋಗಿ ವಿಶೇಷ ಪೂಜೆಗಳನ್ನು ಸಲ್ಲಿಸುವಂತೆ ನಟಿಗೆ ನಿರ್ದೇಶಕರು ಸಲಹೆ ನೀಡಿದ್ದಾರಂತೆ. ಪೂಜಾ ಹೆಗ್ಡೆ ಕೂಡ ಈ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಅನ್ನೋ ಮಾತು ಟಾಲಿವುಡ್‌ನಲ್ಲಿ ಓಡಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿನಿಮಾ ಸೋಲಿನ ಬೆನ್ನಲ್ಲೇ ಐಟಂ ಡ್ಯಾನ್ಸ್‌ಗೆ ಓಕೆ ಎಂದ ರಶ್ಮಿಕಾ ಮಂದಣ್ಣ

    ಸಿನಿಮಾ ಸೋಲಿನ ಬೆನ್ನಲ್ಲೇ ಐಟಂ ಡ್ಯಾನ್ಸ್‌ಗೆ ಓಕೆ ಎಂದ ರಶ್ಮಿಕಾ ಮಂದಣ್ಣ

    ನ್ನಡದ ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ(Rashmika Mandanna) ಬಹುಭಾಷಾ ನಾಯಕಿಯಾಗಿ ಮಿಂಚ್ತಿದ್ದಾರೆ. ಇತ್ತೀಚಿನ ಬಾಲಿವುಡ್‌ (Bollywood) `ಗುಡ್‌ ಬೈ’ (Good Bye) ಚಿತ್ರದ ಸೋಲಿನ ನಂತರ ಇದೀಗ ಸ್ಟಾರ್ ನಟನ ಐಟಂ ಡ್ಯಾನ್ಸ್‌ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ ಪುಷ್ಪ ನಟಿ.

    `ಪುಷ್ಪ’ (Pushpa Film) ಸಕ್ಸಸ್ ನಂತರ ಪ್ಯಾನ್ ಇಂಡಿಯಾ ಸ್ಟಾರ್ ನಾಯಕಿಯಾಗಿ ಮಿಂಚ್ತಿರುವ ರಶ್ಮಿಕಾ ಮಂದಣ್ಣಗೆ (Rashmika) ಈಗ ಲಕ್ ಕೈ ಕೊಟ್ಟಂತಿದೆ. ಸ್ಟಾರ್ ವ್ಯಾಲ್ಯೂ ಇರುವ ನಟಿ ಈಗ ಮಹೇಶ್ ಬಾಬು ಮುಂದಿನ ಚಿತ್ರದಲ್ಲಿ ಐಟಂ ಡ್ಯಾನ್ಸ್‌ಗೆ ಹೆಜ್ಜೆ ಹಾಕಲಿದ್ದಾರೆ ಎಂಬ ಸುದ್ದಿ ಸೌಂಡ್ ಮಾಡುತ್ತಿದೆ. ಸ್ಟಾರ್ ಹೀರೋಯಿನ್ ಆಗಿದ್ರು ಐಟಂ ಹಾಡಿಗೆ ಓಕೆ ಅಂದಿದ್ಯಾಕೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ.

    ತ್ರಿವಿಕ್ರಮ್ ನಿರ್ದೇಶನದ ಚಿತ್ರದಲ್ಲಿ ಮಹೇಶ್ ಬಾಬು (Mahesh Babu) ಜತೆ ಪೂಜಾ ಹೆಗ್ಡೆ, ಶ್ರೀಲೀಲಾ (Sreeleela) ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಇದೇ ಚಿತ್ರದಲ್ಲಿ ರಶ್ಮಿಕಾ ಐಟಂ ಹಾಡಿಗೆ ಹೆಜ್ಜೆ ಹಾಕಲು ಓಕೆ ಅಂದಿದ್ದಾರೆ. `ಪುಷ್ಪ 2’ನಲ್ಲಿ (Pushpa 2) ಬ್ಯುಸಿಯಿರುವ ಕೊಡಗಿನ ಬ್ಯೂಟಿ, ಮಹೇಶ್ ಬಾಬು ನಟನೆಯ ಐಟಂ ಹಾಡಿಗೆ ಹೆಜ್ಜೆ ಹಾಕಲು ನಟಿ ದುಬಾರಿ ಸಂಭಾವನೆಯನ್ನೇ ಕೇಳಿದ್ದಾರಂತೆ. ಪ್ರತಿಷ್ಠಿತ ಆಭರಣ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಸ್ಥಾನದಿಂದ ಹೊರಗಿಟ್ಟ ಮೇಲೆ ಐಟಂ ಡ್ಯಾನ್ಸ್‌ನತ್ತ ನಟಿ ಮುಖ ಮಾಡಿರೋದು ಹಲವರ ಅಚ್ಚರಿಗೆ ಕಾರಣವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಹಾಲಿವುಡ್ ಹಾಗೂ ಬಾಲಿವುಡ್ ನಟ ಕಬೀರ್ ಬೇಡಿ ಹಂಟರ್ ಆಗಿ ಕನ್ನಡಕ್ಕೆ ಎಂಟ್ರಿ

    ಹಾಲಿವುಡ್ ಹಾಗೂ ಬಾಲಿವುಡ್ ನಟ ಕಬೀರ್ ಬೇಡಿ ಹಂಟರ್ ಆಗಿ ಕನ್ನಡಕ್ಕೆ ಎಂಟ್ರಿ

    ಅಂತರರಾಷ್ಟ್ರೀಯ  ಖ್ಯಾತಿಯ ಹಾಲಿವುಡ್ ಹಾಗೂ ಬಾಲಿವುಡ್ ನಟ ಕಬೀರ್ ಬೇಡಿ (Kabir Bedi) ಅವರು ಮೊಟ್ಟಮೊದಲ ಬಾರಿಗೆ ವಿನಯ್ (Vinay) ನಿರ್ದೇಶನದ “ಹಂಟರ್” (Hunter) ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹಾಲಿವುಡ್ ನಲ್ಲಿ ಹಲವಾರು ಸಿನಿಮಾಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಕಬೀರ್ ಬೇಡಿ ಅಲ್ಲಿ ಜೇಮ್ಸ ಬಾಂಡ್, ಮೈಕಲ್ ಕೇನ್ ಮೊದಲಾದ ಖ್ಯಾತ ನಾಮರೊಂದಿಗೆ ಅಭಿನಯಿಸಿರುತ್ತಾರೆ.  ಇದೀಗ ನಿರ್ಮಾಪಕ  ತ್ರಿವಿಕ್ರಮ ಸಪಲ್ಯ ರವರು ನಮ್ಮ ಭಾಷೆಯ ಚಿತ್ರಕ್ಕೂ ಅವರನ್ನು ಪರಿಚಯಿಸಿರುವುದು ಚಿತ್ರದ ಕುತೂಹಲವನ್ನು ಹೆಚ್ಚಿಸಿದೆ.

    ಪ್ಯಾನ್ ಇಂಡಿಯಾ ಮಾದರಿಯ ಈ ಸಿನಿಮಾದಲ್ಲಿ ನಿರಂಜನ್ ಮತ್ತು ಸೌಮ್ಯ ಮೆನನ್ ನಾಯಕ-ನಾಯಕಿಯರಾಗಿದ್ದು ಪ್ರಕಾಶ್ ರಾಜ್, ನಾಝರ್ ಮತ್ತು ಸುಮನ್ ಪ್ರಧಾನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.   ಯುರೋಪ್ ನಾದ್ಯಂತ ಧೂಳೆಬ್ಬಿಸಿದ್ದ ನಂಬರ್ 1 ಟಿವಿ ಸೀರಿಸ್ “ಸಂದೋಕನ್” ನಲ್ಲಿ  ನಟಿಸಿದ್ದ ಬೇಡಿಯವರಿಗೆ      ಕಳೆದ  ಸೆಪ್ಟೆಂಬರ್ ನಲ್ಲಿ ಇಟೆಲಿಯ ವೆನಿಸ್ ನಲ್ಲಿ  “Life time achievement award” ಬಂದ ನಂತರ, ಇದೇ ಮೊದಲ ಬಾರಿಗೆ ಚಿತ್ರ ವೊಂದರಲ್ಲಿ ಅಭಿನಯಿಸಿರುತ್ತಾರೆ. ಅದೂ ನಮ್ಮ ಕನ್ನಡ ಭಾಷೆಯ ಚಿತ್ರ. ಇದನ್ನೂ ಓದಿ:ರಿಲೇಶನ್ ಶಿಪ್ ಇಟ್ಕೊಳ್ಳೋಕೆ ಬಿಗ್ ಬಾಸ್ ಮನೆಗೆ ಬಂದಿಲ್ಲ ಎಂದು ಕಣ್ಣೀರಿಟ್ಟ ನಟಿ ಮಯೂರಿ

    ಇದಲ್ಲದೆ ಕಬೀರ್ ಬೇಡಿಯವರು ತ್ರಿವಿಕ್ರಮ ಸಾಪಲ್ಯರವರ ಮತ್ತೊಂದು ಚಿತ್ರದಲ್ಲೂ ಅಭಿನಯಿಸುತ್ತಿರುವ ಮಾಹಿತಿ ಹೊರಬಿದ್ದಿದೆ. ಅಕ್ಟೋಬರ್ 7 ರಿಂದ ಚಿತ್ರೀಕರಣ ಆರಂಭಗೊಳ್ಳಲಿರುವ ಸುಮಾರು 800 ವರ್ಷಗಳ ಹಿಂದಿನ ಕಥೆಯಾಧಾರಿತ ಪಿರಿಯಾಡಿಕ್ ಸಿನಿಮಾದಲ್ಲಿ  ಬೆಂಗಾಲಿ ನಟ ಸೌಮಿಕ್ ಚಟರ್ಜಿ ಪ್ರಮುಖ ಪಾತ್ರದಲ್ಲಿದ್ದು  ಕನ್ನಡದ ಖ್ಯಾತ ಹಿರಿಯ ನಟಿಯರಾದ ಶ್ರುತಿ ಹಾಗೂ  ಭವ್ಯ  ಮುಖ್ಯ ಪಾತ್ರಗಳಲ್ಲಿ  ಅಭಿನಯಿಸುತ್ತಿದ್ದಾರೆ.

    ಒಟ್ಟಿನಲ್ಲಿ ತ್ರಿವಿಕ್ರಮ (Trivikram) ರವರು  ಎರಡು ಸಿನಿಮಾಗಳನ್ನು ಜಂಟಿಯಾಗಿ ಚಿತ್ರೀಕರಿಸಿ, ಅದೆರಡರಲ್ಲೂ ಕಬೀರ್ ಬೇಡಿಯಂತಹ ವಿಶ್ವದ ಪ್ರಖ್ಯಾತ ನಟನನ್ನು ಕರೆತಂದು ಚಿತ್ರರಂಗದಲ್ಲಿ ಹೊಸ ಸಂಚಲನ ಸ್ರಷ್ಟಿಸಿರುತ್ತಾರೆ.  ಅವರೊಬ್ಬ ದಿಟ್ಟ ನಿರ್ಮಾಪಕ ಎನ್ನುವುವುದಕ್ಕೆ ಇದು ಸಾಕ್ಷಿ.

    Live Tv
    [brid partner=56869869 player=32851 video=960834 autoplay=true]