Tag: Trivikram Srinivas

  • ಆತ ನನ್ನ ಜೀವನವನ್ನೇ ನಾಶ ಮಾಡಿಬಿಟ್ಟ- ತ್ರಿವಿಕ್ರಮ್ ವಿರುದ್ಧ ಸಿಡಿದೆದ್ದ ಪೂನಂ ಕೌರ್

    ಆತ ನನ್ನ ಜೀವನವನ್ನೇ ನಾಶ ಮಾಡಿಬಿಟ್ಟ- ತ್ರಿವಿಕ್ರಮ್ ವಿರುದ್ಧ ಸಿಡಿದೆದ್ದ ಪೂನಂ ಕೌರ್

    ಟಾಲಿವುಡ್ ನಟಿ ಪೂನಂ ಕೌರ್ (Poonam Kaur) ಮತ್ತೆ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ (Trivikram Srinivas) ವಿರುದ್ಧ ಗರಂ ಆಗಿದ್ದಾರೆ. ನಿರ್ದೇಶಕ ತ್ರಿವಿಕ್ರಮ್ ಮೇಲೆ ದೂರು ನೀಡಿದ್ದರೂ MAA ಸಂಸ್ಥೆ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಟಿ ರಾಂಗ್ ಆಗಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ನಟಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ನಿಮಗೆ ಕಪ್‌ ಗೆಲ್ಲಲು ಸಾಮರ್ಥ್ಯ ಇಲ್ವಾ?: ಭವ್ಯಾಗೆ ಸುದೀಪ್ ಕ್ಲಾಸ್

    ಡೈರೆಕ್ಟರ್ ತ್ರಿವಿಕ್ರಮ್ ಅವರು ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಿರೋದಾಗಿ ಈ ಹಿಂದೆ ಪೂನಂ ಆರೋಪ ಮಾಡಿದ್ದರು. ಈ ಬಗ್ಗೆ ಇದೀಗ ಮತ್ತೆ ನಟಿ ಧ್ವನಿಯೆತ್ತಿದ್ದಾರೆ. ತೆಲುಗಿನ ಕಲಾವಿದರ ಸಂಘ ‘ಮಾ’ ಕುರಿತು ಎಕ್ಸ್‌ನಲ್ಲಿ ರಿಯಾಕ್ಟ್ ಮಾಡಿ, ತ್ರಿವಿಕ್ರಮ್ ಶ್ರೀನಿವಾಸ್ ಮೇಲಿನ ದೂರನ್ನು ‘ಮಾ’ ಸಂಸ್ಥೆ ಸ್ವೀಕರಿಸಲಿಲ್ಲ. ಯಾವುದೇ ವಿಚಾರಣೆ ಮಾಡಿಲ್ಲ. ಸೂಕ್ತ ಕ್ರಮ ಕೈಗೊಂಡಿಲ್ಲ. ಆತ ನನ್ನ ಜೀವನವನ್ನೇ ನಾಶ ಮಾಡಿ ಬಿಟ್ಟ ಎಂದು ಬರೆದುಕೊಂಡಿದ್ದಾರೆ. ಹಾಗಾದ್ರೆ ‘ಮಾ’ ಸಂಸ್ಥೆ ಯಾರ ಪರ ನಿಂತಿದೆ ಎಂದು ನಟಿ ಬೇಸರ ವ್ಯಕ್ತಪಡಿಸಿದ್ದಾರೆ.

    ಇದಕ್ಕೆ ‘ಮಾ’ ಸಂಸ್ಥೆ ಸ್ಪಂದಿಸಿ, ಎಕ್ಸ್‌ನಲ್ಲಿ ಆರೋಪ ಮಾಡಿದ್ರೆ ಪ್ರಯೋಜನವಿಲ್ಲ. ತ್ರಿವಿಕ್ರಮ್ ವಿರುದ್ಧ ದೂರು ಕೊಟ್ಟರೆ ಕ್ರಮ ಕೈಗೊಳ್ಳುತ್ತೇವೆ. ಇದುವರೆಗೂ ಯಾವುದೇ ಲಿಖಿತ ದೂರು ಬಂದಿಲ್ಲ ಎಂದು ‘ಮಾ’ ಚಲನಚಿತ್ರ ಕಲಾವಿದರ ಸಂಘ ಪೂನಂ ಆರೋಪಕ್ಕೆ ಉತ್ತರ ಕೊಟ್ಟಿದೆ.

  • ಮಹೇಶ್ ಬಾಬು ಸಿನಿಮಾಗೆ ಖ್ಯಾತ ನಟಿ ರೇಖಾ ಎಂಟ್ರಿ

    ಮಹೇಶ್ ಬಾಬು ಸಿನಿಮಾಗೆ ಖ್ಯಾತ ನಟಿ ರೇಖಾ ಎಂಟ್ರಿ

    ಟಾಲಿವುಡ್ (Tollywood) ನಟ ಮಹೇಶ್ ಬಾಬು (Mahesh Babu) ಇದೀಗ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಜೊತೆಗಿನ ತಮ್ಮ 28ನೇ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ದಿನದಿಂದ ದಿನಕ್ಕೆ ಚಿತ್ರತಂಡ ಪಾತ್ರವರ್ಗ ಹಿರಿದಾಗುತ್ತಿದೆ. ಈಗ ಮಹೇಶ್ ಬಾಬು ಚಿತ್ರಕ್ಕೆ ಬಾಲಿವುಡ್ ಖ್ಯಾತ ನಟಿ ರೇಖಾ ಆಗಮನವಾಗಿದೆ.

    `ಸರ್ಕಾರು ವಾರಿ ಪಾಟ’ ಚಿತ್ರದ ಗೆಲುವಿನ ನಂತರ ನಿರ್ದೇಶಕ ತ್ರಿವಿಕ್ರಮ್ ಜೊತೆ ಪ್ರಿನ್ಸ್ ಮಹೇಶ್ ಬಾಬು ಕೈಜೋಡಿಸಿದ್ದಾರೆ. ಹೊಸ ಬಗೆಯ ಪಾತ್ರದಲ್ಲಿ ಬರಲು ನಟ ರೆಡಿಯಾಗಿದ್ದಾರೆ. ಸದ್ಯ ಮಹೇಶ್ ಬಾಬು ಚಿತ್ರಕ್ಕೆ ಸಾಥ್ ನೀಡಲು ನಟಿ ರೇಖಾ ಎಂಟ್ರಿಯಾಗಿದೆ.

    ಚಿತ್ರದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿ ರೇಖಾ ನಟಿಸುತ್ತಿದ್ದಾರೆ. ರೇಖಾ ಪಾತ್ರ ಈ ಸಿನಿಮಾದಲ್ಲಿ ಮೇಜರ್ ರೋಲ್ ಪ್ಲೇ ಮಾಡ್ತಿದ್ದು, ಕಥೆ ಕೇಳ್ತಿದ್ದಂತೆ ಖುಷಿಯಿಂದ ಸೌತ್ ಸಿನಿಮಾದಲ್ಲಿ ನಟಿಸಲು ನಟಿ ಓಕೆ ಎಂದಿದ್ದಾರೆ. ಇದನ್ನೂ ಓದಿ: `ಶಾಕುಂತಲಂ’ ರಿಲೀಸ್‌ಗೂ ಮುನ್ನವೇ ಮತ್ತೊಂದು ಮಹಿಳಾ ಪ್ರಧಾನ ಚಿತ್ರದಲ್ಲಿ ಸಮಂತಾ

    ಇನ್ನೂ ಮಹೇಶ್ ಬಾಬು ನಾಯಕಿಯರಾಗಿ ಕರಾವಳಿ ಬ್ಯೂಟಿ ಪೂಜಾ ಹೆಗ್ಡೆ ಮತ್ತು `ಗಾಳಿಪಟ 2′ ನಾಯಕಿ ಸಂಯುಕ್ತಾ ಮೆನನ್ ಕಾಣಿಸಿಕೊಳ್ಳಲಿದ್ದಾರೆ. ಎಸ್. ರಾಧಾಕೃಷ್ಣ ಈ ಚಿತ್ರವನ್ನ ಅದ್ದೂರಿಯಾಗಿ ನಿರ್ಮಾಣ ಮಾಡ್ತಿದ್ದಾರೆ.

  • ಪೂಜಾ ಹೆಗ್ಡೆಗೆ ಅಂತ ದುಬಾರಿ ಕಾರು ಖರೀದಿಸಿದ್ರಾ ತೆಲುಗಿನ ಸ್ಟಾರ್ ಡೈರೆಕ್ಟರ್?

    ಪೂಜಾ ಹೆಗ್ಡೆಗೆ ಅಂತ ದುಬಾರಿ ಕಾರು ಖರೀದಿಸಿದ್ರಾ ತೆಲುಗಿನ ಸ್ಟಾರ್ ಡೈರೆಕ್ಟರ್?

    ಹೆಸರಾಂತ ನಟಿ, ಕರಾವಳಿ ಚೆಲುವೆ ಪೂಜಾ ಹೆಗ್ಡೆ (Pooja Hegde) ಹೆಸರು ಮತ್ತೆ ಸಿನಿಮಾ ರಂಗದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಇತ್ತೀಚಿನ ಸಿನಿಮಾಗಳು ಗೆಲ್ಲದೇ ಇದ್ದರೂ, ಡೇಟಿಂಗ್ (Dating) ವಿಚಾರವಾಗಿ ಆಗಾಗ್ಗೆ ಪೂಜಾ ಗಾಸಿಪ್ ಕಾಲಂನಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಈ ಹಿಂದೆ ಸಲ್ಮಾನ್ ಖಾನ್ ಜೊತೆ ಪೂಜಾಗೆ ಸಂಬಂಧವಿದೆ ಎಂದು ಹೇಳಲಾಗಿತ್ತು. ಪೂಜಾ ಮತ್ತು ಸಲ್ಮಾನ್ ಒಟ್ಟೊಟ್ಟಿಗೆ ಕಾಣಿಸಿಕೊಂಡ ಫೋಟೋಗಳು ವೈರಲ್ ಆಗಿದ್ದವು. ಅಲ್ಲದೇ, ಪೂಜಾ ಸಹೋದರನ ಮದುವೆ ಸಲ್ಮಾನ್ ಕೂಡ ಬಂದಿದ್ದರು.

    ಸಲ್ಮಾನ್ ಖಾನ್ ಜೊತೆಯಷ್ಟೇ ಅಲ್ಲ, ಪೂಜಾ ನಟಿಸಿರುವ ಸಿನಿಮಾಗಳ ಬಹುತೇಕ ನಟರ ಜೊತೆ ಇವರ ಹೆಸರು ತಳುಕು ಹಾಕಿಕೊಂಡಿದೆ. ಆದರೂ, ಈವರೆಗೂ ಅವರು ಡೇಟಿಂಗ್ ವಿಚಾರವಾಗಿ ಯಾವತ್ತೂ ಪ್ರತಿಕ್ರಿಯೆ ನೀಡಿಲ್ಲ. ಆ ಕುರಿತು ಮಾತನಾಡುವಂತಹ ಧೈರ್ಯವನ್ನೂ ಅವರು ಮಾಡಿಲ್ಲ. ಇದೀಗ ದುಬಾರಿ ಕಾರಿನ ಕಾರಣಕ್ಕಾಗಿ ಪೂಜಾ ಮತ್ತೆ ಸದ್ದು ಮಾಡುತ್ತಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕರು ಪೂಜಾಗೆ ಎರಡು ಕೋಟಿ ಬೆಲೆಯ ದುಬಾರಿ ಕಾರು ನೀಡಿದ್ದಾರೆ ಎನ್ನುವುದು ಸದ್ಯಕ್ಕಿರುವ ಮಾಹಿತಿ.

    ತೆಲುಗಿನ ಸ್ಟಾರ್ ಡೈರೆಕ್ಟರ್  ತ್ರಿವಿಕ್ರಮ್ ಶ್ರೀನಿವಾಸ್ (Trivikram Srinivas) ಇತ್ತೀಚೆಗಷ್ಟೇ ದುಬಾರಿ ಕಾರೊಂದನ್ನು (Car) ಖರೀದಿಸಿದ್ದಾರೆ. ಆ ಕಾರನ್ನು ಪೂಜಾ ಹೆಗ್ಡೆಗೆ ಕೊಟ್ಟಿದ್ದಾರೆ ಎನ್ನುವುದು ವರ್ತಮಾನ. ತ್ರಿವಿಕ್ರಮ್ ನಿರ್ದೇಶನದ ಎರಡು ಸಿನಿಮಾಗಳಲ್ಲಿ ಪೂಜಾ ನಾಯಕಿಯಾಗಿ ನಟಿಸಿದ್ದರು. ಅರವಿಂದ ಸಮೇತ ವೀರ ರಾಘವ ಹಾಗೂ ಅಲಾ ವೆಕುಂಠಪುರಂಲೋ ಚಿತ್ರಗಳಿಗೆ ಇವರೇ ನಾಯಕಿ. ಎರಡೂ ಹಿಟ್ ಚಿತ್ರಗಳು. ಈಗ ಮೂರನೇ ಬಾರಿ ಪೂಜಾ ಇದೇ ನಿರ್ದೇಶಕ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

    ತ್ರಿವಿಕ್ರಮ್ ನಿರ್ದೇಶನದ ಮಹೇಶ್ ಬಾಬು ನಟನೆಯ ಹೊಸ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿ. ಈ ಸಿನಿಮಾದ ಶೂಟಿಂಗ್ ಗೆ ಬರುವುದಕ್ಕಾಗಿ ಪೂಜಾಗೆ ಕಾರು ಕೊಡಿಸಿದ್ದಾರೆ ಎನ್ನುವುದು ಗುಸುಗುಸು. ದುಬಾರಿ ಕಾರು ಕೊಡಿಸಿದ್ದರ ಕಾರಣಕ್ಕಾಗಿ ಇಬ್ಬರ ಮಧ್ಯೆ ಏನೋ ನಡೆದಿದ್ಯಾ ಎನ್ನುವ ಪ್ರಶ್ನೆಯನ್ನು ಹಲವರು ಮಾಡಿದ್ದಾರೆ. ಆದರೆ, ಈ ಕಾರಿನ ಹಿಂದೆ ಬೇರೆಯದ್ದೇ ಕಥೆ ಇದೆ ಎನ್ನುವುದು ಚಿತ್ರತಂಡದ ಮಾತು. ನಟಿಗೆ ಕೇವಲ ಪಿಕ್ ಅಪ್ ಮತ್ತು ಡ್ರಾಪ್ ಮಾಡುವುದಕ್ಕಾಗಿ ಮಾತ್ರ ಈ ಕಾರು ಬಳಕೆ ಆಗುತ್ತಿದೆಯಂತೆ.

  • ಮಹೇಶ್ ಬಾಬು ಹೊಸ ಚಿತ್ರಕ್ಕೆ ಪಡೆವ ಸಂಭಾವನೆ ಬರೋಬ್ಬರಿ 70 ಕೋಟಿ

    ಮಹೇಶ್ ಬಾಬು ಹೊಸ ಚಿತ್ರಕ್ಕೆ ಪಡೆವ ಸಂಭಾವನೆ ಬರೋಬ್ಬರಿ 70 ಕೋಟಿ

    ತೆಲುಗು ಸಿನಿಮಾ ರಂಗದಲ್ಲೀಗ ಪ್ರಿನ್ಸ್ ಮಹೇಶ್ ಬಾಬು ಅವರದ್ದೇ ಮಾತು. ಸದ್ಯ ಅವರು ತ್ರಿವಿಕ್ರಮ್ ಶ್ರೀನಿವಾಸ್ ಜೊತೆ ಸಿನಿಮಾ ಮಾಡಲಿದ್ದು, ಈ ಸಿನಿಮಾಗೆ ಅವರು ಬರೋಬ್ಬರಿ 70 ಕೋಟಿ ಸಂಭಾವನೆಯನ್ನು ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೂಲಕ ತೆಲುಗು ಸಿನಿಮಾ ರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯಲಿರುವ ಯುವನಟ ಎಂಬ ಕೀರ್ತಿಗೂ ಅವರು ಪಾತ್ರವಾಗಲಿದ್ದಾರೆ.

    ಮಹೇಶ್ ಬಾಬು ಸಿನಿಮಾಗಳು ಸೋಲುವುದು ಕಡಿಮೆ. ಅವೆಲ್ಲವೂ ಭಾರೀ ಬಜೆಟ್ ಸಿನಿಮಾಗಳೇ ಆಗಿರುತ್ತವೆ. ಅಲ್ಲದೇ ಬಾಕ್ಸ್ ಆಫೀಸಿನಲ್ಲಿ ಸಖತ್ ಕಮಾಯಿ ಮಾಡುತ್ತವೆ. ಹೀಗಾಗಿಯೇ ಅವರು ಸಿನಿಮಾದಿಂದ ಸಿನಿಮಾಗೆ ಡಿಮಾಂಡ್ ಮಾಡುತ್ತಾರೆ ಎನ್ನುತ್ತಿದೆ ಟಾಲಿವುಡ್. ಅವರು ಸಂಭಾವನೆಯನ್ನು ಅದೆಷ್ಟೇ ಏರಿಸಿದರು. ನಿರ್ಮಾಪಕರು ಕೊಡಲು ರೆಡಿ ಇರುತ್ತಾರೆ ಎಂದು ಹೇಳಲಾಗುತ್ತದೆ. ಇದನ್ನೂ ಓದಿ:ರಾಮ್ ಗೋಪಾಲ್ ವರ್ಮಾ ‘ಲಡಕಿ’ ನೋಡಿ ಬೆಚ್ಚಿ ಬಿದ್ದರಂತೆ ಸೆನ್ಸಾರ್ ಟೀಮ್

    ತ್ರಿವಿಕ್ರಮ್ ಶ್ರೀನಿವಾಸ್  ಮತ್ತು ಮಹೇಶ್ ಬಾಬು ಕಾಂಬಿನೇಷನ್ ನ ಹೊಸ ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದ್ದು ಇದಾದ ನಂತರ ರಾಜಮೌಳಿ ಜೊತೆ ಮಹೇಶ್ ಬಾಬು ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಇನ್ನೂ ಈ ಕುರಿತು ಅಧಿಕೃತ ಮಾಹಿತಿಯಂತೂ ಇಲ್ಲ. ಮೊದಲು ತ್ರಿವಿಕ್ರಮ್ ಸಿನಿಮಾವಾಗುತ್ತಾ ಅಥವಾ ರಾಜಮೌಳಿ ಅವರ ಸಿನಿಮಾ ಬರತ್ತಾ ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • ರಿಯಲ್ ಸ್ಟಾರ್ ಉಪೇಂದ್ರ ಅಂದರೆ ಸುಮ್ನೇನಾ? ಟಾಲಿವುಡ್ ಸೂಪರ್ ಸ್ಟಾರ್ ಗೆ ಅಣ್ಣನಾದ ಉಪ್ಪಿ

    ರಿಯಲ್ ಸ್ಟಾರ್ ಉಪೇಂದ್ರ ಅಂದರೆ ಸುಮ್ನೇನಾ? ಟಾಲಿವುಡ್ ಸೂಪರ್ ಸ್ಟಾರ್ ಗೆ ಅಣ್ಣನಾದ ಉಪ್ಪಿ

    ಚಂದನವನದ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಕಾಂಬಿನೇಷನ್ನಲ್ಲಿ ಸಿನಿಮಾವೊಂದು ಮೂಡಿ ಬರಲಿರುವ ಸುದ್ದಿ ಸಿನಿ ಅಂಗಳದಲ್ಲಿ ಕೇಳಿಬರುತ್ತಿದೆ. ಉಪ್ಪಿ ಟಾಲಿವುಡ್ಗೆ ಹೊಸಬರಲ್ಲವಾದರೂ, ಇಬ್ಬರು ಸ್ಟಾರ್ ನಟರು ಒಟ್ಟಿಗೆ ನಟಿಸುತ್ತಿರುವ ಬಗ್ಗೆ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ. ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾಡುತ್ತಿದ್ದಾರೆ.

    ಮಹೇಶ್ ಬಾಬು ಮತ್ತು ತ್ರಿವಿಕ್ರಮ್ ಕಾಂಬಿನೇಷನ್ನಲ್ಲಿ ‘ಅತುಡು’, ‘ಖಲೇಜಾ’ದಂತಹ ಸೂಪರ್ ಹಿಟ್ ಚಿತ್ರಗಳು ಮೂಡಿಬಂದಿತ್ತು. ಸುಮಾರು 11 ವರ್ಷಗಳ ನಂತರ ಮಹೇಶ್ ಮತ್ತು ತ್ರಿವಿಕ್ರಮ್ ಜೊತೆಯಾಗಿ ಮತ್ತೆ ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿ ಸಕ್ಸಸ್‍ಫುಲ್ ಕಾಂಬಿನೇಷನ್ ಮತ್ತೆ ಒಟ್ಟಿಗೆ ಸೇರಿಕೊಂಡಿದ್ದು ಟಾಲಿವುಡ್ ನಲ್ಲಿ ಅತೀವ ಕುತೂಹಲ ಮೂಡಿಸಿದೆ. ಜೊತೆಗೆ ರಿಯಲ್ ಸ್ಟಾರ್ ಉಪ್ಪಿ ಸಹ ಈ ಸಿನಿಮಾದಲ್ಲಿ ನಟಿಸುತ್ತಿರುವುದರಿಂದ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಲಾಗಿದೆ. ಇದನ್ನೂ ಓದಿ: ಲಿವ್ ಇನ್ ರಿಲೇಶನ್‍ಶಿಪ್ – ಮದುವೆ ಬಗ್ಗೆ ವಿದ್ಯಾ ಬಾಲನ್ ಹೇಳೋದೇನು?


    ಈ ಸಿನಿಮಾ ಹಾರಿಕಾ ಮತ್ತು ಹಾಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರಲಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿದೆ. ಈ ಚಿತ್ರದಲ್ಲಿ ಮಹೇಶ್ಗೆ ಜೋಡಿಯಾಗಿ ಬುಟ್ಟಬೊಮ್ಮ ಪೂಜಾ ಹೆಗಡೆ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ನಾಯಕ ಮಹೇಶ್ ಬಾಬು ಅಣ್ಣನಾಗಿ ಉಪೇಂದ್ರ ನಟಿಸಲು ತ್ರಿವಿಕ್ರಮ್ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಈ ವೇಳೆ ಉಪೇಂದ್ರ ಅವರು ಸಹ ಸಿನಿಮಾದಲ್ಲಿ ನಟಿಸಲು ಉತ್ಸಾಹ ತೋರಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಆದರೆ ಇದು ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ.

    ರಿಯಲ್ ಸ್ಟಾರ್ ಉಪೇಂದ್ರ ನಟಿಸುತ್ತಿದ್ದಾರೆ?

    ಮಹೇಶ್ ಬಾಬು- ತ್ರಿವಿಕ್ರಮ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ‘ಎಸ್ಎಸ್ಎಂಬಿ 28’ ಎಂಬ ಶೀರ್ಷಿಕೆ ಇಟ್ಟಿದ್ದಾರೆ. ಈ ಚಿತ್ರದ ಮುಹೂರ್ತ ಸಹ ನೆರವೇರಿದೆ. ಮಹೇಶ್ ಬಾಬು ಪ್ರಸ್ತುತ ‘ಸರ್ಕಾರು ವಾರಿ ಪಾಟ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಯುವ ನಿರ್ದೇಶಕ ಪರಶುರಾಮ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಮುಗಿದ ತಕ್ಷಣ ಮಹೇಶ್ ಬಾಬು ಅವರು ತ್ರಿವಿಕ್ರಮ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಕೇಳಿಬಂದಿದೆ. ಇದನ್ನೂ ಓದಿ: ಸ್ಟಾರ್ ತಾರಾಗಣದ ಬಹು ನಿರೀಕ್ಷಿತ ‘ತ್ರಿಕೋನ’ ಬಿಡುಗಡೆಗೆ ರೆಡಿ 

    ಈ ಹಿಂದೆ ತೆಲುಗಿನ ಸ್ಟಾರ್ ಡೈರೆಕ್ಟರ್ ರಾಮ್ ಗೋಪಲ್ ವರ್ಮಾ ನಿರ್ದೇಶನದಲ್ಲಿ ಉಪ್ಪಿ ನಟಿಸುತ್ತಾರೆ ಎಂಬ ಸುದ್ದಿ ಮೊನ್ನೆಯಷ್ಟೇ ಸಂಚಲನ ಮೂಡಿಸಿತ್ತು. ಈ ಸಿನಿಮಾ ಮುತ್ತಪ್ಪ ರೈ ಜೀವನಾಧಾರಿತ ಕಥೆಯೆಂದು ಚಿತ್ರತಂಡ ತಿಳಿಸಿದ್ದು, ಈ ಸಿನಿಮಾಗೆ ‘ಆರ್’ ಎಂದು ಹೆಸರನ್ನು ಇಡಲಾಗಿದೆ.