Tag: Trivikram

  • ಫ್ಯಾನ್ಸ್‌ಗೆ ಗುಡ್ ನ್ಯೂಸ್- ‘ಮುದ್ದು ಸೊಸೆ’ಗೆ ತ್ರಿವಿಕ್ರಮ್ ಹೀರೋ

    ಫ್ಯಾನ್ಸ್‌ಗೆ ಗುಡ್ ನ್ಯೂಸ್- ‘ಮುದ್ದು ಸೊಸೆ’ಗೆ ತ್ರಿವಿಕ್ರಮ್ ಹೀರೋ

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ರನ್ನರ್ ಅಪ್ ತ್ರಿವಿಕ್ರಮ್ (Trivikram) ಅವರು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ಮುದ್ದು ಸೊಸೆ’ಗೆ ಹೀರೋ ಆಗಿ ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:‘ದಿ ಡೆವಿಲ್’ ಶೂಟಿಂಗ್ ಮತ್ತೆ ಆರಂಭ- ದರ್ಶನ್ ಭದ್ರತೆಗಾಗಿ ಭಾರೀ ಮೊತ್ತ ಕಟ್ಟಿದ ಚಿತ್ರತಂಡ

    ‘ಬಿಗ್ ಬಾಸ್’ ಶೋ ಮುಗಿಯಿತು ತ್ರಿವಿಕ್ರಮ್ ಮುಂದೇನು ಮಾಡ್ತಾರೆ ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ. ‘ಮುದ್ದು ಸೊಸೆ’ ಎಂಬ ಹೊಸ ಸೀರಿಯಲ್‌ನಲ್ಲಿ ನಟಿಸಲು ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮೂಲಕ ಮೋಡಿ ಮಾಡಿದ್ದ ಪ್ರತಿಮಾ ಅವರು ‘ಮುದ್ದು ಸೊಸೆ’ಯಾಗಿ ಕಾಣಿಸಿಕೊಳ್ತಿದ್ದಾರೆ.

    ‘ಮುದ್ದು ಸೊಸೆ’ ಧಾರಾವಾಹಿಯಲ್ಲಿ ನಾಯಕ-ನಾಯಕಿಯ ಮದುವೆ ಫಿಕ್ಸ್ ಆಗಿರುತ್ತದೆ. ಇನ್ನೂ 10ನೇ ಕ್ಲಾಸ್ ಓದುತ್ತಿದ್ದ ನಾಯಕಿ ವಿದ್ಯಾಗೆ ಈಗಲೇ ಮದುವೆ ಆಗೋ ಆಸೆ ಇರೋದಿಲ್ಲ. ಓದುವ ಕನಸಿನಿಂದ ಮದುವೆ ಬೇಡ ಎಂದರೂ ಯಾರೂ ಅವಳ ಮಾತನ್ನು ಕೇಳಲು ರೆಡಿ ಇರೋದಿಲ್ಲ. ಇದು ಈ ಸೀರಿಯಲ್‌ನ ಒನ್‌ಲೈನ್ ಸ್ಟೋರಿಯಾಗಿದೆ. ಬಾಲ್ಯ ವಿವಾಹದ ಕಥೆಯಾಗಿದೆ. ಈ ವಿಭಿನ್ನ ಸ್ಟೋರಿಯಲ್ಲಿ ತ್ರಿವಿಕ್ರಮ್ ನಾಯಕನಾಗಿ ನಟಿಸುತ್ತಿದ್ದಾರೆ.

    ಈ ಸೀರಿಯಲ್‌ನ ಪ್ರೋಮೋ ರಿಲೀಸ್ ಆಗ್ತಿದ್ದಂತೆ ಭವ್ಯಾ ಗೌಡನೇ ನಾಯಕಿಯಾಗಿದಿದ್ರೆ ಚೆನ್ನಾಗಿರುತ್ತಿತ್ತು ಎಂದು ಪ್ರೇಕ್ಷಕರು ಕಾಮೆಂಟ್ ಮಾಡಿದ್ದಾರೆ. ಸೀರಿಯಲ್ ಶುರುವಾಗೋ ಮುಂಚೆ ನಾಯಕಿಯನ್ನು ಬದಲಿಸಿ ಎಂದು ಬೇಡಿಕೆ ಇಟ್ಟಿದ್ದಾರೆ.

  • BBK 11: ತ್ರಿವಿಕ್ರಮ್ ಕಡೆಯಿಂದ ಮದುವೆ ಪ್ರಪೋಸಲ್ ಬಂದ್ರೆ ಭವ್ಯಾ ರಿಯಾಕ್ಷನ್ ಏನು?

    BBK 11: ತ್ರಿವಿಕ್ರಮ್ ಕಡೆಯಿಂದ ಮದುವೆ ಪ್ರಪೋಸಲ್ ಬಂದ್ರೆ ಭವ್ಯಾ ರಿಯಾಕ್ಷನ್ ಏನು?

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟಕ್ಕೆ ತೆರೆಬಿದ್ದಿದೆ. ಹನುಮಂತ (Hanumantha) ವಿನ್ನರ್ ಆಗಿದ್ದು, ತ್ರಿವಿಕ್ರಮ್ ರನ್ನರ್ ಅಪ್ ಆಗಿ ಗೆದ್ದು ಬೀಗಿದ್ದಾರೆ. 5ನೇ ರನ್ನರ್ ಅಪ್ ಆಗಿರುವ ಭವ್ಯಾ ಅವರು ತ್ರಿವಿಕ್ರಮ್ (Trivikram) ಜೊತೆಗಿನ ಬಾಂಡಿಂಗ್ ಬಗ್ಗೆ ಮಾತನಾಡಿದ್ದಾರೆ. ತ್ರಿವಿಕ್ರಮ್ ಕಡೆಯಿಂದ ಮದುವೆ ಪ್ರಪೋಸಲ್ ಬಂದ್ರೆ ಭವ್ಯಾ (Bhavya Gowda) ಉತ್ತರ ಏನಾಗಿರುತ್ತದೆ ಎಂದು ನಟಿ ರಿಯಾಕ್ಟ್ ಮಾಡಿದ್ದಾರೆ.

    ಅವರ ಕಡೆಯಿಂದ ಮದುವೆ ಪ್ರಪೋಸಲ್ ಬರಲ್ಲ ಅಂತ ನನಗೂ ಗೊತ್ತು. ನನ್ನ ಕಡೆಯಿಂದಲೂ ಬರಲ್ಲ ಅನ್ನೋದು ತ್ರಿವಿಕ್ರಮ್‌ಗೆ ಗೊತ್ತು. ಇಬ್ಬರೂ ಲೈನ್ ಹಾಕಿಕೊಂಡು ಇದ್ದೀವಿ, ನನಗೂ ಮತ್ತು ತ್ರಿವಿಕ್ರಮ್‌ಗೂ ಈ ರೀತಿಯ ಆಲೋಚನೆ ಇರಲಿಲ್ಲ. ನಮ್ಮೀಬ್ಬರ ನಡುವೆ ಇಬ್ಬರಿಗೂ ಒಳ್ಳೆಯ ಬಾಂಡಿಂಗ್ ಹಾಗೂ ಫ್ರೆಂಡ್ಶಿಪ್ ಇದೆ. ಇದನ್ನೂ ಓದಿ:ಸುದೀಪ್ ಸರ್ ಕೊಟ್ಟಿರೋದಕ್ಕೆ ಬೆಲೆ ಕಟ್ಟಲಾಗಲ್ಲ, ಫ್ರೇಮ್ ಹಾಕಿಸಿ ಇಟ್ಟುಕೊಳ್ಳುತ್ತೇನೆ: ಯುವನ್

    ‘ಬಿಗ್ ಬಾಸ್’ ಆಟ ಅಂತ ಬಂದಾಗ ಅವರ ಆಟ ಅವರು ಆಡಿದ್ದಾರೆ. ನನ್ನ ಆಟ ನಾನು ಆಡಿದ್ದೇನೆ. ಆ ಮನೆಯಲ್ಲಿ ಕಂಫರ್ಟ್ ಝೋನ್ ಅಂತ ಕೊಟ್ಟಿರೋದು ತ್ರಿವಿಕ್ರಮ್. ನನ್ನ ಏಳು ಬೀಳುಗಳಲ್ಲಿ ಅವರು ನನ್ನ ಜೊತೆ ಇದ್ದರು. ಆ ತರಹ ಏನಿಲ್ಲ ಇದ್ದರೆ ಖಂಡಿತವಾಗಿಯೂ ನಾವು ತಿಳಿಸುತ್ತಿದ್ವಿ ಎಂದು ತ್ರಿವಿಕ್ರಮ್ ಜೊತೆಗೆ ಮದುವೆಯಾಗುವ ಪ್ಲ್ಯಾನ್ ಇಲ್ಲ ಎಂದು ಭವ್ಯಾ ಸ್ಪಷ್ಟಪಡಿಸಿದ್ದಾರೆ.

    ಇನ್ನೂ ‘ಬಿಗ್ ಬಾಸ್’ ಮನೆಯ 5ನೇ ರನ್ನರ್ ಆಗಿ ಹೊರಹೊಮ್ಮಿರುವ ಭವ್ಯಾ ಇದೀಗ ಹೊಸ ಶೋವೊಂದಕ್ಕೆ ಆಯ್ಕೆಯಾಗಿದ್ದಾರೆ. ‘ಬಾಯ್ಸ್ ವರ್ಸಸ್ ಗರ್ಲ್ಸ್’ ನಟಿ ಭಾಗಿಯಾಗಲಿದ್ದಾರೆ. ಇದರ ಜೊತೆ ಸಿನಿಮಾ ಅಥವಾ ಸೀರಿಯಲ್ ಆಫರ್‌ಗಳಿಗಾಗಿ ನಟಿ ಎದುರು ನೋಡುತ್ತಿದ್ದಾರೆ.

  • ಭವ್ಯಾ ಮೇಲೆ ನಿಜವಾಗಲೂ ಲವ್ ಆಗಿದ್ಯಾ?- ತ್ರಿವಿಕ್ರಮ್ ಹೇಳೋದೇನು?

    ಭವ್ಯಾ ಮೇಲೆ ನಿಜವಾಗಲೂ ಲವ್ ಆಗಿದ್ಯಾ?- ತ್ರಿವಿಕ್ರಮ್ ಹೇಳೋದೇನು?

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ತ್ರಿವಿಕ್ರಮ್ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಇದೀಗ ಬಿಗ್ ಬಾಸ್ ಜರ್ನಿ ಜೊತೆಗೆ ಭವ್ಯಾ ಜೊತೆಗಿನ ಒಡನಾಟದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ತ್ರಿವಿಕ್ರಮ್ (Trivikram) ಮಾತನಾಡಿದ್ದಾರೆ. ಭವ್ಯಾ ಮೇಲೆ ಲವ್ ಆಗಿತ್ತಾ? ಹೇಗೆ ಎಂದು ಸ್ಪಷ್ಟಪಡಿಸಿದ್ದಾರೆ.‌ ಇದನ್ನೂ ಓದಿ:BBK 11: ನಾನು ಯಾವತ್ತಿದ್ದರೂ ಡಿಬಾಸ್‌ ಫ್ಯಾನ್:‌ ‘ಬಿಗ್‌ ಬಾಸ್‌’ ರಜತ್‌

    ತಮ್ಮ ಗರ್ಲ್‌ಫ್ರೆಂಡ್ ಡಾಕ್ಟರ್ ಎಂದು ವೈರಲ್ ಆಗಿದ್ದ ಸುದ್ದಿಗೆ ತ್ರಿವಿಕ್ರಮ್ ಮಾತನಾಡಿ, ನನ್ನ ಗರ್ಲ್‌ಫ್ರೆಂಡ್ ಡಾಕ್ಟರ್ ಆ ನನಗೂ ಗೊತ್ತಿಲ್ಲ ಎಂದು ಹೇಳಿ ವಿಚಾರವನ್ನು ಅವರು ಅಲ್ಲಗೆಳೆದಿದ್ದಾರೆ. ಈ ವಿಚಾರ ಸುಳ್ಳು ಎಂದಿದ್ದಾರೆ.

    ಇನ್ನೂ ಭವ್ಯಾಗೆ ಅವರ ಪೋಷಕರು ಬರೆದ ಲೆಟರ್‌ನಲ್ಲಿ ಪನ್ನಿಕುಟ್ಟಿ ಅಂತ ಬರೆದಿತ್ತು. ಅದನ್ನೇ ನಾನು ಮುಂದುವರೆಸಿದೆ. ಆ ತರ ಲವ್ ಯೂ ಅಂತ ಆಚೆನೂ ಹೇಳಿದ್ದೇನೆ. ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ನಿಮ್ಮನ್ನು ಆಚೆ ತಳ್ಳುತ್ತಿದ್ದಾರೆ ಅಂದರೆ ಒಬ್ಬರು ಜೆನ್ಯೂನ್ ಫ್ರೆಂಡ್ ಬೇಕಾಗುತ್ತಾರೆ. ಹಾಗೆಯೇ ನನಗೆ ಭವ್ಯಾ ಫ್ರೆಂಡ್ ಅಷ್ಟೇ. ನನಗೆ ಅನುಷಾ, ಚೈತ್ರಾಕ್ಕ, ರಂಜಿತ್ ಎಲ್ಲರೂ ಕ್ಲೋಸ್ ಆಗಿದ್ದಾರೆ. ಅವರಂತೆಯೇ ಭವ್ಯಾ ಕೂಡ ಬೆಸ್ಟ್‌ ಫ್ರೆಂಡ್‌ ಎಂದಿದ್ದಾರೆ.

    ಇನ್ನೂ ಭವ್ಯಾ ನನ್ನಗಿಂತ ಚಿಕ್ಕವಳು. ಅವಳೊಂದಿಗೆ ಮದುವೆ ಆಗಲ್ಲ ಎಂದು ಕೂಡ ತ್ರಿವಿಕ್ರಮ್ ತಿಳಿಸಿದ್ದಾರೆ.

  • BBK 11| ಹನುಮಂತು ಮುಂದೆ ಗಾಂಧೀಜಿ ನಿಂತಿದ್ರೂ ಹನುಮಂತುನೇ ಗೆಲ್ತಿದ್ರು: ರಜತ್ ಕಿಶನ್

    BBK 11| ಹನುಮಂತು ಮುಂದೆ ಗಾಂಧೀಜಿ ನಿಂತಿದ್ರೂ ಹನುಮಂತುನೇ ಗೆಲ್ತಿದ್ರು: ರಜತ್ ಕಿಶನ್

    ಬೆಂಗಳೂರು: ಹನುಮಂತು (Hanumantha) ಮುಂದೆ ಗಾಂಧೀಜಿ ನಿಂತಿದ್ದರು ಹನುಮಂತುನೇ ಗೆಲ್ಲುತ್ತಿದ್ದರು ಎಂದು ಬಿಗ್ ಬಾಸ್ ಸೀಸನ್ 11ರ (Bigg Boss 11) ಸೆಕೆಂಡ್ ರನ್ನರ್ ಅಪ್ ರಜತ್ ಕಿಶನ್ (Rajath Kishan) ಸಂತಸ ವ್ಯಕ್ತಪಡಿಸಿದರು.

    ಬಿಗ್ ಬಾಸ್ 11ರ ಗ್ರ್ಯಾಂಡ್ ಫಿನಾಲೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಗ್ ಬಾಸ್ ಜರ್ನಿ ಚೆನ್ನಾಗಿತ್ತು. ಶಾರ್ಟ್ ಟೈಂನಲ್ಲಿ ಇಷ್ಟೊಂದು ಪ್ರೀತಿ ವಿಶ್ವಾಸ ಸಿಕ್ಕಿರೋದು ಖುಷಿ ಇದೆ ಎಂದು ಹರ್ಷ ವ್ಯಕ್ತಪಡಿಸಿದರು. ಇದನ್ನೂ ಓದಿ: ದೇವರಾಣೆ ಗೆಲ್ತೀನಿ ಅಂತ ಬಂದಿರಲಿಲ್ಲ, ಹೋಗಿ ಮಜಾ ಮಾಡಿ ಬರೋಣ ಅಂತ ಬಂದಿದ್ದೆ: ಹನುಮಂತ

    ಇನ್ನು ಮಾಜಿ ಪ್ರೇಯಸಿ ಜೊತೆ ಪೋಟೋ ವೈರಲ್ ಮಾಡಿ ಟ್ರೋಲ್ ಪೇಜ್‌ಗಳು ಬೆದರಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಹೊರಗಡೆ ಬಂದಿದ್ದೀನಲ್ಲ, ನೋಡಿಕೊಳ್ಳುತ್ತೇನೆ ಬಿಡಿ ಎಂದರು. ಇದನ್ನೂ ಓದಿ: BBK 11: ಬಿಗ್‌ ಬಾಸ್‌ ಟ್ರೋಫಿ ಗೆದ್ದು ಸುದೀಪ್‌ ಕಾಲಿಗೆ ಬಿದ್ದ ಹನುಮಂತ

    ಬಿಗ್ ಬಾಸ್ ಸೀಸನ್ 11ರಲ್ಲಿ ಹನುಮಂತ ವಿನ್ನರ್ ಆಗಿ ಹೊರಹೊಮ್ಮಿದ್ರೆ, ತ್ರಿವಿಕ್ರಮ್ ರನ್ನರ್ ಅಪ್ ಆಗಿದ್ದಾರೆ. ಇನ್ನು ಬಿಗ್ ಬಾಸ್ 11ರ ಶೋಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದಿದ್ದ ರಜತ್ ಅವರು ಮನೆಯಲ್ಲಿ ವೈಲ್ಡ್ ಆಗಿ ಆಟ ಆಡಿ ಸೆಕೆಂಡ್ ರನ್ನರ್ ಅಪ್ ಪಟ್ಟ ಸ್ವೀಕರಿಸಿದ್ದಾರೆ.‌ ಇದನ್ನೂ ಓದಿ: BBK 11: ಹನುಮಂತ ಟ್ರೋಫಿ ಗೆದ್ದಿರೋದು ಖುಷಿಯಿದೆ- ತ್ರಿವಿಕ್ರಮ್‌ ರಿಯಾಕ್ಷನ್‌

  • BBK 11: ಹನುಮಂತ ಟ್ರೋಫಿ ಗೆದ್ದಿರೋದು ಖುಷಿಯಿದೆ- ತ್ರಿವಿಕ್ರಮ್‌ ರಿಯಾಕ್ಷನ್‌

    BBK 11: ಹನುಮಂತ ಟ್ರೋಫಿ ಗೆದ್ದಿರೋದು ಖುಷಿಯಿದೆ- ತ್ರಿವಿಕ್ರಮ್‌ ರಿಯಾಕ್ಷನ್‌

    ‘ಬಿಗ್‌ ಬಾಸ್ ಕನ್ನಡ 11ʼರ (Bigg Boss Kannada 11) ಶೋನಲ್ಲಿ ವಿನ್ನರ್‌ ಆಗಿ ಹನುಮಂತ ಗೆದ್ದು ಬೀಗಿದ್ದಾರೆ. ರನ್ನರ್‌ ಅಪ್‌ ಆಗಿರೋ ತ್ರಿವಿಕ್ರಮ್‌ ಅವರು ಹನುಮಂತನ ಗೆಲುವಿನ ಬಗ್ಗೆ ಮಾತನಾಡಿದ್ದಾರೆ. ಹನುಮಂತ (Hanumantha) ಟ್ರೋಫಿ ಗೆದ್ದಿರೋದು ಖುಷಿಯಿದೆ ಎಂದು ತ್ರಿವಿಕ್ರಮ್‌ ಮಾತನಾಡಿದ್ದಾರೆ.

    ಹನುಮಂತು ಗೆದ್ದಿರೋದು ನನಗೆ ಖುಷಿ ಇದೆ. ಅವರು ಟ್ರೋಫಿ ಗೆದ್ದಿರೋದು ಖುಷಿಯಾಗಿದೆ.  ನೀವು ತೋರಿಸಿರುವ ಪ್ರೀತಿಗೆ ಚಿರಋಣಿ ಆಗಿದ್ದೇನೆ. ಯುದ್ದದಲ್ಲಿ 100 ದಿನ ನಿಲ್ಲೋದು ಮುಖ್ಯ ಎಂದು ‘ಬಿಗ್‌ ಬಾಸ್‌ 11’ರ ರನ್ನರ್‌ ಅಪ್‌ ತ್ರಿವಿಕ್ರಮ್‌ ಮಾತನಾಡಿದ್ದಾರೆ. ಇದನ್ನೂ ಓದಿ:ಮಗನ ಕೊನೆ ಶೋ ನೋಡಲು ಬಿಗ್‌ ಬಾಸ್‌ ಮನೆಗೆ ಬಂದಿದ್ದ ಸುದೀಪ್‌ ತಂದೆ

    ಇನ್ನೂ ತ್ರಿವಿಕ್ರಮ್‌ ಗೆದ್ದೆ ಗೆಲ್ಲುತ್ತಾರೆ ಎಂದು ಅನೇಕರು ಭಾವಿಸಿದ್ದರು. ಆದರೆ ತ್ರಿವಿಕ್ರಮ್‌ ಫ್ಯಾನ್ಸ್‌ಗೆ ಈ ವಿಚಾರ ನಿರಾಸೆ ಆಗಿದೆ.

  • ಮಗನ ಕೊನೆ ಶೋ ನೋಡಲು ಬಿಗ್‌ ಬಾಸ್‌ ಮನೆಗೆ ಬಂದಿದ್ದ ಸುದೀಪ್‌ ತಂದೆ

    ಮಗನ ಕೊನೆ ಶೋ ನೋಡಲು ಬಿಗ್‌ ಬಾಸ್‌ ಮನೆಗೆ ಬಂದಿದ್ದ ಸುದೀಪ್‌ ತಂದೆ

    – ದೊಡ್ಮನೆ ವೇದಿಕೆಯಲ್ಲಿ ತಾಯಿ ನೆನೆದು ಕಿಚ್ಚ ಭಾವುಕ

    ‘ಬಿಗ್‌ ಬಾಸ್‌ ಸೀಸನ್‌ 11′ ಕಿಚ್ಚ ಸುದೀಪ್‌ ಅವರ ಕೊನೆ ಶೋ. ಈ ಸೀಸನ್‌ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿತ್ತು. ಮಗನ ಕೊನೆ ಶೋ ನೋಡಲು ಸುದೀಪ್‌ ಅವರ ತಂದೆ ಬಿಗ್‌ ಬಾಸ್‌ ಮನೆಗೆ ಬಂದಿದ್ದು ವಿಶೇಷವಾಗಿತ್ತು.

    ಸುದೀಪ್‌ ಅವರಿಗೆ ಇದು ಕೊನೆಯ ಸೀಸನ್‌ ಆಗಿದ್ದರಿಂದ ಬಿಗ್‌ ಬಾಸ್‌, ಕಿಚ್ಚನ ಬಗ್ಗೆ ಗೌರವಪೂರ್ವಕ ನುಡಿಯನ್ನಾಡಿದರು. ಅಭಿಮಾನಿಗಳ ಅಭಿಮಾನದ ಚಕ್ರವರ್ತಿ ಕಿಚ್ಚ ಸುದೀಪ್‌ ಅವರಿಗೆ ಬಿಗ್‌ ಬಾಸ್‌ ಅಭಿನಂದನೆ ಸಲ್ಲಿಸಿದರು.

    ಈ ಸೀಸನ್‌ ನಮ್ಮೆಲ್ಲರಿಗೂ ಮರೆಯಲಾಗದ ನೆನಪಿನ ಕಳಸ. ಇಲ್ಲಿ ಕಲಿತ ಪಾಠಗಳು ವಿಶೇಷ. ಸುದೀಪ್‌ ಈ ಸೀಸನ್‌ನ ಅಭೂತಪೂರ್ವ ಯಶಸ್ಸಿಗೆ ಕಾರಣರಾಗಿರುವ ನಿಮಗೆ ಬಿಗ್‌ಬಾಸ್‌ ತಂಡದ ವತಿಯಿಂದ ಒಂದು ಚಿಕ್ಕ ನೆನಪಿನ ಕಾಣಿಕೆಯನ್ನು ಬಿಗ್‌ ಬಾಸ್‌ ನೀಡಿತು.

    ಬಿಗ್‌ ಬಾಸ್‌ ಫಿನಾಲೆ ಮಧ್ಯದಲ್ಲಿ ಎಂಟ್ರಿಯಾದ ಯೋಗರಾಜ್‌ ಭಟ್‌ ಅವರು ಸುದೀಪ್‌ ಅವರ ವ್ಯಕ್ತಿ ಚಿತ್ರಣ, ತಾಯಿ ವಾತ್ಸಲ್ಯ, ತಂದೆ ಪ್ರೀತಿಯ ಬಗ್ಗೆ ತಿಳಿಸಿಕೊಟ್ಟರು. ಒಟ್ಟಾರೆ ಸುದೀಪ್‌ ಅವರಿಗೆ ಇದೊಂದು ಭಾವುಕ ಕ್ಷಣವಾಗಿತ್ತು.

    ಪುತ್ರನ ಕೊನೆ ಸೀಸನ್‌ ನೋಡಲು ಸುದೀಪ್‌ ಅವರ ತಂದೆ ಎಂ.ಸಂಜೀವ್‌ ಅವರು ಬಿಗ್‌ ಬಾಸ್‌ ಮನೆಗೆ ಆಗಮಿಸಿದ್ದರು. ಪ್ರೇಕ್ಷಕರ ವೇದಿಕೆಯಲ್ಲಿ ಕುಳಿತಿದ್ದರು. ಅವರನ್ನು ಯೋಗರಾಜ್‌ ಭಟ್‌ ಅವರು ಪರಿಚಯಿಸಿದರು. ‘ನಿಮ್ಮ ತಂದೆ ನಮಗೆ ತುಂಬಾ ಆಪ್ತರು’ ಎಂದು ಸುದೀಪ್‌ ಮುಂದೆ ಹೇಳಿದರು. ‘ನೀವು ಬಂದಿದ್ದು ಫಿನಾಲೆ ಗ್ರ್ಯಾಂಡ್‌ಗೆ ಗ್ರ್ಯಾಂಡ್‌ ಆಯ್ತು’ ಎಂದು ಸುದೀಪ್‌ ತಂದೆಗೆ ಯೋಗರಾಜ್‌ ಭಟ್‌ ಧನ್ಯವಾದ ತಿಳಿಸಿದರು.

    ಬಿಗ್‌ ಬಾಸ್‌ ನಿರೂಪಕರಾಗಿ ಸತತ 11 ಸೀಸನ್‌ಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದ ಸುದೀಪ್‌ ಅವರು ಕೊನೆ ಸೀಸನ್‌ನಲ್ಲಿ ಐದು ನಿಮಿಷ ಪ್ರೇಕ್ಷಕರಾದರು. ಇತ್ತೀಚೆಗೆ ವಿಧಿವಶರಾದ ಸುದೀಪ್‌ ಅವರ ತಾಯಿಯನ್ನು ವೇದಿಕೆಯಲ್ಲಿ ಸ್ಮರಿಸಲಾಯಿತು. ‘ಅಮ್ಮ.. ಅಮ್ಮ..’ ಹಾಡನ್ನು ಪ್ಲೇ ಮಾಡಲಾಯಿತು. ಅಗಲಿದ ತಾಯಿ ನೆನೆದು ಸುದೀಪ್‌ ಹನಿಗಣ್ಣಾದರು. ಫಿನಾಲೆ ಸಂಭ್ರಮದಲ್ಲಿದ್ದ ಬಿಗ್‌ ಬಾಸ್‌ ಮನೆ ಅರೆ ಕ್ಷಣ ಭಾವುಕವಾಯಿತು. ಕೊನೆಗೆ ಸುದೀಪ್‌ ಅವರಿಗೆ ಫ್ಯಾಮಿಲಿ ಇರುವ ಫೋಟೊ ಫ್ರೇಮ್‌ ಗಿಫ್ಟ್‌ ನೀಡಲಾಯಿತು. ವಿಶೇಷ ಕೊಡುಗೆ ನೀಡಿದ ಬಿಗ್‌ ಬಾಸ್‌ ತಂಡಕ್ಕೆ ಕಿಚ್ಚ ಕೃತಜ್ಞತೆ ಸಲ್ಲಿಸಿದರು.

  • BBK 11: ಟಾಸ್ಕ್‌ ಕಿಂಗ್‌ಗೆ ಒಲಿಯದ ಅದೃಷ್ಟ- ರನ್ನರ್‌ ಅಪ್‌ ಆದ ತ್ರಿವಿಕ್ರಮ್‌

    BBK 11: ಟಾಸ್ಕ್‌ ಕಿಂಗ್‌ಗೆ ಒಲಿಯದ ಅದೃಷ್ಟ- ರನ್ನರ್‌ ಅಪ್‌ ಆದ ತ್ರಿವಿಕ್ರಮ್‌

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟಕ್ಕೆ ಕೊನೆಗೂ ತೆರೆಬಿದ್ದಿದೆ. ಹನುಮಂತ ವಿನ್ನರ್ ಆಗಿ ಹೊರಹೊಮ್ಮಿದ್ರೆ, ತ್ರಿವಿಕ್ರಮ್ (Trivikram) ರನ್ನರ್ ಅಪ್ (Runner Up) ಆಗಿದ್ದಾರೆ. ಇದನ್ನೂ ಓದಿ:ದಾನ-ಧರ್ಮ ಬೇಕು.. ದಡ್ಡತನ ಬೇಡ: ಲಕ್ಷ ಲಕ್ಷ ಹಣವನ್ನ ದಾನ ಮಾಡ್ತೀನಿ ಎಂದ ಮಂಜು ಕಿವಿ ಹಿಂಡಿದ ಸುದೀಪ್‌

    ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿಯಾಗಿ ಗುರುತಿಸಿಕೊಳ್ಳುತ್ತಿದ್ದರು. ಆದರೆ ಫಿನಾಲೆಯಲ್ಲಿ ತ್ರಿವಿಕ್ರಮ್ ಮುಗ್ಗರಿಸಿರೋದು ಫ್ಯಾನ್ಸ್‌ಗೆ ನಿರಾಸೆಯುಂಟು ಮಾಡಿದೆ.

    ಇನ್ನೂ ಭವ್ಯಾ ಜೊತೆಗಿನ ಲವ್ವಿ ಡವ್ವಿ ವಿಚಾರವಾಗಿ ಅವರು ಹೈಲೆಟ್ ಆಗಿದ್ದರು. ಅದಷ್ಟೇ ಅಲ್ಲ, ನಮ್ಮೀಬ್ಬರ ನಡುವೆ ಸ್ನೇಹ ಮಾತ್ರ ಎಂದಿದ್ದ ತ್ರಿವಿಕ್ರಮ್ ಇತ್ತೀಚೆಗೆ ಭವ್ಯಾಗೆ ಪ್ರಪೋಸ್ ಕೂಡ ಮಾಡಿದ್ದರು. ಇದು ಅವರ ಆಟಕ್ಕೆ ಅಡ್ಡಿ ಆಯ್ತು ಎಂಬುದು ಅಭಿಮಾನಿಗಳ ಅನಿಸಿಕೆ.

    ‘ಬಿಗ್ ಬಾಸ್’ ಆಟ ಮುಗಿದಿದೆ. ಜೋಡಿ ಹಕ್ಕಿಗಳಾಗಿದ್ದ ಭವ್ಯಾ ಮತ್ತು ತ್ರಿವಿಕ್ರಮ್ ಮುಂದಿನ ದಿನಗಳಲ್ಲಿ ಗುಡ್ ನ್ಯೂಸ್ ಕೊಡುತ್ತಾರಾ? ಏನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

  • BBK 11: ಭವ್ಯಾಗೆ ಐ ಲವ್‌ ಯೂ ಪನ್ನಿ ಕುಟ್ಟಿ ಎಂದ ತ್ರಿವಿಕ್ರಮ್‌

    BBK 11: ಭವ್ಯಾಗೆ ಐ ಲವ್‌ ಯೂ ಪನ್ನಿ ಕುಟ್ಟಿ ಎಂದ ತ್ರಿವಿಕ್ರಮ್‌

    ಬಿಗ್‌ ಬಾಸ್‌ ಮನೆಯ ಆಟ (Bigg Boss Kannada 11) ಇನ್ನೇನು 4 ದಿನಗಳಲ್ಲಿ ಅಂತ್ಯವಾಗಲಿದೆ. ಹೀಗಿರುವಾಗಲೇ ಭವ್ಯಾಗೆ ಪತ್ರ ಬರೆದು ತಮ್ಮ ಮನದಾಳದ ಮಾತನ್ನು ತ್ರಿವಿಕ್ರಮ್ ಅವರು ಹೇಳಿಕೊಂಡಿದ್ದಾರೆ. ಸ್ಪರ್ಧಿಗಳ ಎದುರು ಭವ್ಯಾಗೆ (Bhavya Gowda) ಐ ಲವ್ ಯೂ ಎಂದು ತ್ರಿವಿಕ್ರಮ್ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.‌ ಇದನ್ನೂ ಓದಿ:ನಿವೃತ್ತಿ ಬಗ್ಗೆ ಮಾತನಾಡಿದ ರಶ್ಮಿಕಾ ಮಂದಣ್ಣ- ಶ್ರೀವಲ್ಲಿ ಅಭಿಮಾನಿಗಳು ಶಾಕ್

    ಬಿಗ್ ಬಾಸ್‌ನಲ್ಲಿ ಚಟುವಟಿಕೆ ಒಂದನ್ನು ನೀಡಲಾಗಿತ್ತು. ಈ ಚಟುವಟಿಕೆ ಪ್ರಕಾರ, ಸ್ಪರ್ಧಿಗಳು ಎಲ್ಲಾ ಸ್ಪರ್ಧಿಗಳಿಗೆ ಪತ್ರ ಬರೆದು ತಮಗೆ ಅನಿಸಿದ ಮಾತನ್ನು ತಿಳಿಸಬೇಕಿತ್ತು. ಇದಕ್ಕಾಗಿ ರೆಸಾರ್ಟ್ ಮಾದರಿಯ ಸೆಟ್ ಕೂಡ ಹಾಕಿದ್ದರು ಬಿಗ್ ಬಾಸ್. ಅಲ್ಲಿ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಈ ವೇಳೆ, ಭವ್ಯಾ ಅವರಿಗೆ ತ್ರಿವಿಕ್ರಮ್ ಪತ್ರ ಬರೆದಿದ್ದಾರೆ. ಭಾವನೆಗಳ ಮಹಾಪೂರ ನೀನು, ಕನಸುಗಳ ಶಿಖರ ನೀನು, ಸಾಧನೆಗಳ ಚೀಲವನ್ನು ನೀರು ಕುಡಿದಷ್ಟೇ ಸಲೀಸಾಗಿ ಹೊತ್ತು ಸಾಗುತ್ತಿರುವ ಸ್ಮಾಲ್ ಸಾಧಕಿ ನೀನು. ಕಷ್ಟ ಎಂಬ ಕೆಸರಿನಲ್ಲಿ ಅರಳಿದ ಕಮಲ ನೀನು. ತಂದೆ-ತಾಯಿಗೆ ಗಂಡು ಮಗ ನೀನು. ಗೆಳೆಯರಿಗೆ ರೌಡಿ ಬೇಬಿ ನೀನು. ಕನ್ನಡಿಗರ ಮನ ಗೆದ್ದ ಗೀತಾ ನೀನು. ಜಗತ್ತು ಬೇಕಾದ್ದು ಹೇಳಲಿ, ನನ್ನ ಮತ್ತು ನಿನ್ನ ಗೆಳೆತನ ಕಲುಷಿತವಾಗದಿರಲಿ. ಯಾರು ಏನಾದರೂ ಹೇಳಿಕೊಳ್ಳಲಿ. ಐ ಲವ್ ಯೂ ಪನ್ನಿ ಕುಟ್ಟಿ ಎಂದು ಭವ್ಯಾಗಾಗಿ  ತ್ರಿವಿಕ್ರಮ್ (Trivikram) ಪತ್ರದಲ್ಲಿ ಹೇಳಿದ್ದಾರೆ.

    ಈ ವೇಳೆ, ಇದೆಲ್ಲ ವೋಟ್ ಪಡೆಯಲು ಮಾಡಿದ ತಂತ್ರ ಎಂದು ಹನುಮಂತಗೆ ಅನ್ನಿಸಿರಬಹುದು. ಇದಕ್ಕಾಗಿ ಅವರು, ಏನ್ ಆಡ್ತಾರಿ ಆಟಾನ ಎಂದರು. ಈ ಮಾತನ್ನು ಕೇಳಿ ಎಲ್ಲರೂ ನಕ್ಕರು.

    ಇನ್ನೂ ಈ ಮೊದಲು ಭವ್ಯಾಗೆ ತ್ರಿವಿಕ್ರಮ್ ಅವರು ಪ್ರಪೋಸ್ ಕೂಡ ಮಾಡಿದ್ದರು. ಹೊರ ಹೋದ ಬಳಿಕ ಆ ಬಗ್ಗೆ ಯೋಚಿಸೋಣ ಎಂದು ಭವ್ಯಾ ಅವರು ನೇರವಾಗಿ ಹೇಳಿಕೊಂಡಿದ್ದರು. ಇದು ವೀಕೆಂಡ್‌ ಪಂಚಾಯಿತಿಯಲ್ಲಿ ಸುದೀಪ್‌ ಮುಂದೆ ಚರ್ಚೆ ಕೂಡ ಆಗಿತ್ತು. ಆದರೆ ಇಬ್ಬರೂ ಪ್ರೀತಿಸುತ್ತಿರೋದಾಗಿ ಒಪ್ಪಿಕೊಂಡಿಲ್ಲ. ನಾವಿಬ್ಬರೂ ಜಸ್ಟ್‌ ಫ್ರೆಂಡ್ಸ್‌ ಎಂದಷ್ಟೇ ಮಾತನಾಡಿದರು.

  • BBK 11: ನಿನಗೆ ಮೋಹ, ಪ್ರೀತಿ ಅಡ್ಡಿಯಾಗುತ್ತಿದೆ: ಭವ್ಯಾಗೆ ಗುರೂಜಿ ಭವಿಷ್ಯ

    BBK 11: ನಿನಗೆ ಮೋಹ, ಪ್ರೀತಿ ಅಡ್ಡಿಯಾಗುತ್ತಿದೆ: ಭವ್ಯಾಗೆ ಗುರೂಜಿ ಭವಿಷ್ಯ

    ‘ಬಿಗ್ ಬಾಸ್ ಕನ್ನಡ 11’ರಲ್ಲಿ (Bigg Boss Kannada 11) ಗಟ್ಟಿ ಸ್ಪರ್ಧಿಯಾಗಿ ಗುರುತಿಸಿಕೊಂಡಿರುವ ಭವ್ಯಾ ಗೌಡ ಅವರು ತ್ರಿವಿಕ್ರಮ್ (Trivikram) ಜೊತೆಗಿನ ಸ್ನೇಹ ವಿಚಾರವಾಗಿ ಹೈಲೆಟ್ ಆಗಿದ್ದಾರೆ. ಇದೀಗ ಬಿಗ್ ಬಾಸ್ ಮನೆಗೆ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಆಗಮಿಸಿದ್ದಾರೆ. ನಿನಗೆ ಮೋಹ, ಪ್ರೀತಿ ಅಡ್ಡಿಯಾಗುತ್ತಿದೆ ಎಂದು ಭವ್ಯಾಗೆ (Bhavya Gowda) ಗುರೂಜಿ ಕಿವಿ ಮಾತೊಂದನ್ನು ಹೇಳಿದ್ದಾರೆ. ಇದನ್ನೂ ಓದಿ:ಚಿಲ್ಕೂರ್ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಿಯಾಂಕಾ ಚೋಪ್ರಾ

    ಭವ್ಯಾ ಅವರನ್ನು ಕರೆದು ವಿದ್ಯಾಶಂಕರಾನಂದ ಸರಸ್ವತಿ ಅವರು ಭವಿಷ್ಯ ಹೇಳಿದ್ದಾರೆ. ಈ ವೇಳೆ ಅವರಿಗೆ ಎಚ್ಚರಿಕೆ ನೀಡುವ ಕೆಲಸ ಆಗಿದೆ. ಜಾತಕದ ಅನ್ವಯ ಪ್ರಸ್ತುತ ಶನಿ ದಶಾ ನಡೆಯುತ್ತಿದೆ. ಸಣ್ಣಪುಟ್ಟ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಕೂದಲು ಉದುರುವುದು, ಹಲ್ಲು ನೋವು, ಜಾಯಿಂಟ್ ಪೇನ್ ಬರುತ್ತದೆ. ಶನಿ ಸಣ್ಣಪುಟ್ಟ ಸಮಸ್ಯೆ ಕೊಡುತ್ತಾನೆ. ಇದನ್ನು ನಿರ್ಲಕ್ಷ್ಯ ಮಾಡಬಹುದು. ಶನಿ ಹೋದಮೇಲೆ ಅದೂ ಹೋಗುತ್ತದೆ ಎಂದಿದ್ದಾರೆ ಗುರೂಜಿ.

    2027ರಿಂದ ನಿನ್ನ ಭವಿಷ್ಯದಲ್ಲಿ ಸುವರ್ಣಯುಗ. ನೀನು ಫ್ಯಾಷನ್ ಇಂಡಸ್ಟ್ರೀಗೆ ಸಂಬಂಧಿಸಿ ಉದ್ಯಮ ಆರಂಭಿಸುತ್ತೀಯ ಎಂದಿದ್ದಾರೆ ಅವರು. ಆ ಬಳಿಕ ವೀಳ್ಯದ ಎಲೆ ಎತ್ತಲು ಗುರೂಜಿ ಹೇಳಿದರು. 15 ಎಲೆಯನ್ನು ಭವ್ಯಾ ಎತ್ತಿಕೊಟ್ಟರು. ನಿನಗೆ ಮೋಹ, ಪ್ರೀತಿ ಅಡ್ಡಿಯಾಗುತ್ತಿದೆ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ:ಸೈಫ್‌ ಕುಟುಂಬಕ್ಕೆ ಸೇರಿದ 15 ಸಾವಿರ ಕೋಟಿ ಮೌಲ್ಯದ ಆಸ್ತಿ ಕೇಂದ್ರದ ವಶಕ್ಕೆ?

    ಇನ್ನೂ ಬಿಗ್ ಬಾಸ್‌ನಲ್ಲಿ ತ್ರಿವಿಕ್ರಮ್ ಅವರು ಭವ್ಯಾಗೆ ಪ್ರಪೋಸ್ ಮಾಡಿದ್ದಾರೆ. ಅದನ್ನು ಇಬ್ಬರೂ ಒಪ್ಪಿಕೊಂಡಿಲ್ಲ. ನಮ್ಮೀಬ್ಬರ ನಡುವೆ ಏನಿಲ್ಲ ಎಂದು ಹೇಳುತ್ತಲೇ ಬಂದಿದ್ದಾರೆ. ಇದನ್ನೇ ಗುರೂಜಿ ಪರೋಕ್ಷವಾಗಿ ಭವ್ಯಾಗೆ ಹೇಳಿದ್ರಾ? ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.

  • BBK 11: ವರಸೆ ಬದಲಿಸಿದ ಭವ್ಯಾಗೆ ಪುಂಗಬೇಡ ಎಂದ ತ್ರಿವಿಕ್ರಮ್‌

    BBK 11: ವರಸೆ ಬದಲಿಸಿದ ಭವ್ಯಾಗೆ ಪುಂಗಬೇಡ ಎಂದ ತ್ರಿವಿಕ್ರಮ್‌

    ದೊಡ್ಮನೆಯಲ್ಲಿ (Bigg Boss Kannada 11) ಪ್ರೇಮ ಪಕ್ಷಿಗಳಾಗಿದ್ದ ತ್ರಿವಿಕ್ರಮ್ ಮತ್ತು ಭವ್ಯಾ ನಡುವೆ ಬಿರುಕಾಗಿದೆ. ಇದೀಗ ಭವ್ಯಾ (Bhavya Gowda) ವಿರುದ್ಧ ತ್ರಿವಿಕ್ರಮ್ ತಿರುಗಿ ಬಿದ್ದಿದ್ದಾರೆ. ನಿನ್ನ ಬಂಡವಾಳ ಬಯಲಾಯ್ತು ಪುಂಗಬೇಡ ಅಂತ ಭವ್ಯಾ ವಿರುದ್ಧ ತ್ರಿವಿಕ್ರಮ್‌ (Trivikram) ಗುಡುಗಿದ್ದಾರೆ. ಇದನ್ನೂ ಓದಿ:ಶ್ರೇಯಸ್ ಜೊತೆ ದಿಲ್ ದಾರ್ ಅಖಾಡಕ್ಕಿಳಿದ ಕೀರ್ತಿ ಕೃಷ್ಣ!

    ದೊಡ್ಮನೆ ಆಟಕ್ಕೆ ಬ್ರೇಕ್‌ ಬೀಳಲು ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಸ್ಪರ್ಧಿಗಳು ತಮ್ಮನ್ನು ತಾವು ಕಾಪಾಡಿಕೊಳ್ಳಲು ಬಿಗ್ ಬಾಸ್‌ನಲ್ಲಿ ಇನ್ನೊಬ್ಬರ ಮೇಲೆ ದೂರಬೇಕಾದ ಅನಿವಾರ್ಯತೆ ಎದುರಾಗಿದೆ. ಇಷ್ಟು ದಿನ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ತ್ರಿವಿಕ್ರಮ್ ಹಾಗೂ ಭವ್ಯಾ ನಡುವೆ ಬಿರುಕು ಮೂಡಿದೆ. ಯಾರು ಯಾರನ್ನ ಹಿಂದಿಕ್ಕಿ ಮುಂದೆ ಹೋಗಲು ಪ್ರಯತ್ನ ಮಾಡುತ್ತಿದ್ದಾರೆ ಎಂಬುದರ ಕುರಿತು ಇಬ್ಬರ ನಡುವೆ ಬಿರುಸಿನ ಚರ್ಚೆ ನಡೆದಿದೆ.

    105 ದಿನಗಳಿಂದ ಇರದಿದ್ದ ಬಾಂಡಿಂಗ್ ಈಗ ಇನ್ನೊಬ್ಬರ ಜೊತೆ ಸೇರಿಕೊಂಡು ಆಚೆ ಇಡುತ್ತಿದ್ದೀಯ. ತುಂಬಾ ಬಂಡವಾಳಗಳು ಗೊತ್ತಾದಾಗ ಯಾರು ಏನು ಮಾಡೋಕೆ ಆಗಲ್ಲ ಎಂದು ತ್ರಿವಿಕ್ರಮ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಭವ್ಯಾ ನೀನು ಏನೇನೋ ತಲೆಗೆ ಹಾಕ್ಕೊಂಡು ಮಾತನಾಡಬೇಡ. ನೀವೇ ಹಾಳಾಗುತ್ತಿದ್ದೀರಾ ಅಷ್ಟೇ ಎಂದು ಭವ್ಯಾ ಉತ್ತರಿಸಿದ್ದಾರೆ. ಈ ವೇಳೆ ತ್ರಿವಿಕ್ರಮ್, ನೀನೇನು ನನಗೆ ಹೇಳುವುದು. ಇಷ್ಟೆಲ್ಲಾ ಪುಂಗೋ ಅವಶ್ಯಕತೆ ಇಲ್ಲ ಎಂದ ತ್ರಿವಿಕ್ರಮ್‌ಗೆ ನಿನ್ನ ಫ್ರೆಂಡ್‌ಶಿಪ್‌ ಅನ್ನು ಎಲ್ಲೂ ನಾನು ಬಳಸಿಕೊಂಡಿಲ್ಲ ಎಂದಿದ್ದಾರೆ. ಮೊದಲ ದಿನ ಇದ್ದ ಹಾಗೇ ಈಗ ನೀನಿಲ್ಲ ಎಂದು ಭವ್ಯಾಗೆ ನೇರವಾಗಿಯೇ ಹೇಳಿದ್ದಾರೆ.

    ತ್ರಿವಿಕ್ರಮ್ ಹಾಗೂ ಭವ್ಯಾ ಇಬ್ಬರು ಸೋಫಾ ಮೇಲೆ ಕುಳಿತು ಈ ರೀತಿಯಾಗಿ ಮಾತನಾಡಿದ್ದಾರೆ. ಇದರಿಂದ ಬೇಸರ ಮಾಡಿಕೊಂಡ ಭವ್ಯಾ ಎದ್ದು ಹೋಗಿದ್ದಾರೆ. ಸದ್ಯ ನೋಡುಗರಿಗೆ ಇಬ್ಬರ ನಡುವಿನ ಸ್ನೇಹ, ಪ್ರೀತಿ ಈಗ ಇಲ್ಲ ಎಂದು ಅನಿಸುತ್ತಿದೆ. ಟ್ರೋಫಿ ಗೆಲ್ಲುವ ಉದ್ದೇಶದಿಂದ ಹೀಗೆ ಒಬ್ಬರನೊಬ್ಬರು ದೂರ ಮಾಡಿಕೊಳ್ಳುತ್ತಿದ್ದಾರಾ? ಎನ್ನುವ ಪ್ರಶ್ನೆ ಮೂಡಿದೆ. ಇಬ್ಬರೂ ದೂರವಾಗೋ ಸೂಚನೆ ಸಿಕ್ಕಿದೆ.