Tag: triveni sangama

  • ಮುಳುಗಿತು  ತ್ರಿವೇಣಿ ಸಂಗಮ – ಭಗಂಡೇಶ್ವರನ ಮೆಟ್ಟಿಲುವರೆಗೆ ಆವರಿಸಿದ ನೀರು

    ಮುಳುಗಿತು ತ್ರಿವೇಣಿ ಸಂಗಮ – ಭಗಂಡೇಶ್ವರನ ಮೆಟ್ಟಿಲುವರೆಗೆ ಆವರಿಸಿದ ನೀರು

    ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಮತ್ತೆ ಮಳೆಯ ಆರ್ಭಟ ಮುಂದುವರಿದಿದ್ದು, ಸೋಮವಾರ ಸಂಜೆ ಸುರಿದ ಭಾರೀ ಮಳೆಗೆ ತ್ರಿವೇಣಿ ಸಂಗಮ (Triveni Sangama) ಮುಳುಗಿದೆ.

    ಭಾಗಮಂಡಲ ವ್ಯಾಪ್ತಿಯಲ್ಲಿ ನಿನ್ನೆಯಿಂದ ಸುರಿದ ಭಾರಿ ಮಳೆಗೆ ತ್ರಿವೇಣಿ ಸಂಗಮ ಭರ್ತಿಯಾಗಿದ್ದು, ಭಾಗಮಂಡಲದ ಭಗಂಡೇಶ್ವರನ ಸನ್ನಿಧಿಯ (Bhagandeshwara Temple) ಮುಂಭಾಗದ ಮೆಟ್ಟಿಲುವರೆಗೆ ನೀರು ಆವರಿಸಿದೆ.  ಇದನ್ನೂ ಓದಿ: ಚಾರ್ಮಾಡಿ ಘಾಟ್‌ನಲ್ಲಿ ರಸ್ತೆಗುರುಳಿದ ಮರ: ಚಿಕ್ಕಮಗಳೂರು-ಮಂಗಳೂರು ಮಾರ್ಗ ಬಂದ್

    ಭಾಗಮಂಡಲ (Bhagamandala) ಸಂಪೂರ್ಣವಾಗಿ ಜಲಾವೃತವಾಗಿದೆ. ಕೆಳಭಾಗದ ನಾಪೋಕ್ಲು ರಸ್ತೆ ಮತ್ತು ಮಡಿಕೇರಿ ರಸ್ತೆ ಮುಳುಗಡೆಯಾಗಿದೆ. ಮಳೆ, ಗಾಳಿಯ ಆರ್ಭಟಕ್ಕೆ ಈ ಭಾಗದ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಇದನ್ನೂ ಓದಿ: ವಯನಾಡಿನ ಬೆಟ್ಟದಲ್ಲಿ ಜಲಸ್ಫೋಟ – 19 ಮಂದಿ ಸಾವು, ನೂರಾರು ಮಂದಿ ಸಿಲುಕಿರುವ ಸಾಧ್ಯತೆ

     

  • ಭಾಗಮಂಡಲ ಮೇಲ್ಸೇತುವೆ ವಾಹನ ಸಂಚಾರಕ್ಕೆ ಮುಕ್ತ – ಗ್ರಾಮಗಳಿಗೆ ನೆರೆ ಭೀತಿ ಇಲ್ಲ

    ಭಾಗಮಂಡಲ ಮೇಲ್ಸೇತುವೆ ವಾಹನ ಸಂಚಾರಕ್ಕೆ ಮುಕ್ತ – ಗ್ರಾಮಗಳಿಗೆ ನೆರೆ ಭೀತಿ ಇಲ್ಲ

    ಮಡಿಕೇರಿ: ಭಾಗಮಂಡಲದಲ್ಲಿ (Bhagamandala) ನಿರ್ಮಾಣವಾಗಿರುವ ಕೊಡಗಿನ (Kodagu) ಏಕೈಕ ಮೇಲ್ಸೇತುವೆ (Flyover) ವಾಹನ ಸಂಚಾರಕ್ಕೆ ಮುಕ್ತಗೊಂಡಿದ್ದು ಇನ್ನು ಮುಂದೆ ಪ್ರವಾಹ ಬಂದರೂ ಗ್ರಾಮಸ್ಥರು, ಕಾವೇರಿ ಭಕ್ತರು (Cauvery Devotees) ಯಾವುದೇ ಅತಂಕ ಇಲ್ಲದೇ ಮಳೆಗಾಲದಲ್ಲೂ ಓಡಾಟ ನಡೆಸಬಹುದಾಗಿದೆ.

    ಹೌದು. ಸುಮಾರು ಆರು ವರ್ಷಗಳ ಬಳಿಕ ಸೇತುವೆ ಕಾಮಗಾರಿ ಮುಕ್ತಾಯಗೊಳ್ಳುತ್ತಿದ್ದು, ಒಂದಷ್ಟು ಸಣ್ಣಪುಟ್ಟ ಕೆಲಸಗಳು ಬಾಕಿ ಇವೆ. ವಾಹನಗಳ ಸಂಚಾರಕ್ಕೆ ಈಗಾಗಲೇ ಮೇಲ್ಸೇತುವೆಯಲ್ಲಿ ಅವಕಾಶ ಮಾಡಲಾಗಿದೆ. ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಮೇಲ್ಸೇತುವೆ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ. ಇದನ್ನೂ ಓದಿ: ವರ್ಷದಿಂದ ವರ್ಷಕ್ಕೆ ರಾಕೆಟ್‌ ವೇಗದಲ್ಲಿ ಚಿಮ್ಮುತ್ತಿದೆ ಭಾರತದ ರಕ್ಷಣಾ ರಫ್ತು!

     

    ಮಳೆಗಾಲದಲ್ಲಿ (Rain) ಭಾಗಮಂಡಲ ಜಲಾವೃತವಾಗುವುದು ಸಾಮಾನ್ಯ. ತ್ರಿವೇಣಿ ಸಂಗಮ (Triveni Sangama) ಮುಳುಗಡೆಯಾದರೆ ತಲಕಾವೇರಿ, ಕೋರಂಗಾಲ, ಅಯ್ಯಂಗೇರಿ, ನಾಪೋಕ್ಲು ಮತ್ತು ಚೇರಂಗಾಲ ಸೇರಿದಂತೆ ಹಲವು ಗ್ರಾಮಗಳ ಸಂಪರ್ಕ ಕಡಿತಗೊಳ್ಳುತ್ತವೆ. ಇದರಿಂದ ಈ ಭಾಗದ ನಿವಾಸಿಗಳು ಮಳೆಗಾಲದಲ್ಲಿ ವಿಪರೀತ ಸಮಸ್ಯೆ ಅನುಭವಿಸುತ್ತಿದ್ದರು. ಈ ಭಾಗದ ಮಕ್ಕಳಿಗೆ ಶಾಲೆಗೆ ತೆರಳಲು ಕೂಡ ಸಮಸ್ಯೆಯಾಗುತ್ತಿತ್ತು. ಇದನ್ನೂ ಓದಿ: ಕೊಟ್ಟ ಮಾತಿನಂತೆ ಚಿತ್ರ ಬಿಡಿಸಿದ ಯುವತಿಗೆ ಪತ್ರ ಬರೆದ ಪ್ರಧಾನಿ ಮೋದಿ

    2019 ರಲ್ಲಿ ಕೋರಂಗಾಲದಲ್ಲಿ ಭೂಕುಸಿತವಾಗಿ ಒಂದೇ ಸ್ಥಳದಲ್ಲಿ 5 ಜನರು ಭೂಸಮಾಧಿಯಾಗಿದ್ದರು. ಈ ದುರ್ಘಟನೆ ಸಂಭವಿಸಿದ ಸ್ಥಳವನ್ನು ತಲುಪಬೇಕಾಗಿದ್ದ ರಕ್ಷಣಾ ಪಡೆಗಳು, ಸ್ಥಳೀಯರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ರಸ್ತೆ ಮುಳುಗಡೆಯಾಗಿದ್ದರಿಂದ ಯಾವುದೇ ವಾಹನಗಳ ಓಡಾಟವೂ ಸಾಧ್ಯವಾಗಿರಲಿಲ್ಲ.

    2020 ರ ಆಗಸ್ಟ್ ತಿಂಗಳಲ್ಲೂ ತಲಕಾವೇರಿಯ ಗಜಗಿರಿ ಬೆಟ್ಟ ಕುಸಿದುಬಿದ್ದಿತ್ತು. ಪರಿಣಾಮ ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕರಾಗಿದ್ದ ನಾರಾಯಣ ಆಚಾರ್ ಮತ್ತು ಕುಟುಂಬದ ಐವರು ಭೂ ಸಮಾಧಿಯಾಗಿದ್ದರು. ಆಗಲೂ ಕೂಡ ಬಾರಿ ಮಳೆ ಸುರಿಯುತ್ತಿದ್ದರಿಂದ ಭಾಗಮಂಡಲದ ತ್ರಿವೇಣಿ ಸಂಗಮ ಮುಳುಗಡೆಯಾಗಿತ್ತು. ಭಾಗಮಂಡಲದಿಂದ ತಲಕಾವೇರಿವರೆಗೆ ಹಲವು ಕಡೆಗಳಲ್ಲಿ ಭೂಕುಸಿತವಾಗಿದ್ದರಿಂದ ಜೆಸಿಬಿ ಮತ್ತು ಇತರೇ ವಾಹನಗಳನ್ನು ತೆಗೆದುಕೊಂಡು ಹೋಗಿ ರಸ್ತೆ ತೆರವು ಮಾಡಲು ಪರದಾಡಬೇಕಾಗಿತ್ತು. ಹೀಗಾಗಿ ಭಾಗಮಂಡಲದಲ್ಲಿದ್ದ ಪ್ರವಾಹದ ನೀರನ್ನು ದಾಟಿ ಮುಂದೆ ಹೋಗಲು ಎರಡು ದಿನಗಳೇ ಕಾಯಬೇಕಾಗಿತ್ತು.

    ಹಲವಾರು ದಶಕಗಳಿಂದ ಪ್ರತಿ ಮಳೆಗಾಲದಲ್ಲಿಯೂ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದ ಭಾಗಮಂಡಲ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರಿಗೆ ಮೇಲ್ಸೇತುವೆ ಕಾಮಗಾರಿ ಮುಕ್ತವಾಗಿದ್ದು ಈಗ ಹರ್ಷದಲ್ಲಿದ್ದಾರೆ.

     

  • ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನಕ್ಕೆ ತಡೆ ನೀಡಿಲ್ಲ: ಮಡಿಕೇರಿ ಡಿಸಿ

    ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನಕ್ಕೆ ತಡೆ ನೀಡಿಲ್ಲ: ಮಡಿಕೇರಿ ಡಿಸಿ

    ಮಡಿಕೇರಿ: ಕೊಡಗಿನ ಜನರ ಅಚಾರ, ವಿಚಾರ, ಪದ್ಧತಿ, ಧಾರ್ಮಿಕ ಅಚರಣೆಗಳಿಗೆ ಕೊಡಗಿನ ತಲಕಾವೇರಿಯ ಭಾಗಮಂಡಲದ ಭಂಗಡೇಶ್ವರ ದೇವಾಲಯ ಪ್ರಸಿದ್ಧ. ಅದರಲ್ಲೂ ಸತ್ತವರ ಪಿಂಡ ಪ್ರದಾನವನ್ನು ಭಾಗಮಂಡಲ ಸಮೀಪದ ತ್ರಿವೇಣಿ ಸಂಗಮದಲ್ಲಿ ಮಾಡುವುದು ವಾಡಿಕೆ. ಆದರೆ ಕೋವಿಡ್ ಬಳಿಕ ಜನರಲ್ಲಿ ಗೊಂದಲ ಉಂಟಾಗಿತ್ತು. ಇದಕ್ಕೆ ಸ್ವತಃ ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸ್ಪಷ್ಟನೆ ನೀಡಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಅಸ್ಥಿ ಬಿಡಲು ತಡೆ ನೀಡಿಲ್ಲ ಎಂದಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು, ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನಕ್ಕೆ ಇದುವರೆಗೆ ಯಾವುದೇ ತಡೆ ನೀಡಿಲ್ಲ. ಜನ ಗೊಂದಲಕ್ಕೊಳಗಾಗಬಾರದು ಎಂದು ದೇವಾಲಯ ಸಮಿತಿಗೆ ಸೂಚನೆ ನೀಡುವುದಾಗಿ ತಿಳಿಸಿದ್ದಾರೆ. ಲಾಕ್‍ಡೌನ್ ಇರುವುದರಿಂದ ಐದು ಜನ ಮೀರದಂತೆ ಪಿಂಡ ಪ್ರದಾನ ಮಾಡಲು ನಿಯಮ ಜಾರಿಯಲ್ಲಿ ಇದೆ. ದೇವಾಲಯ ಸಮಿತಿಯ ಪೂರ್ವಾನುಮತಿ ಪಡೆದು ಪಿಂಡ ಪ್ರದಾನ ಮಾಡಬಹುದು. ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಪಿಂಡ ಪ್ರದಾನ ಮಾಡಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಲಾಕ್‍ಡೌನ್ ಮುಂದುವರಿಕೆ – ಅಗತ್ಯ ವಸ್ತುಗಳ ಖರೀದಿಗೆ ಸಡಿಲಿಕೆ

    ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನ ಮಾಡಿದರೆ ಮೋಕ್ಷ ಲಭಿಸುವ ನಂಬಿಕೆ ಕೊಡಗಿನ ಜನರದ್ದಾಗಿದೆ. ಅಲ್ಲದೆ ತಲಾಂತರಗಳಿಂದ ತ್ರಿವೇಣಿ ಸಂಗಮದಲ್ಲೇ ಪಿಂಡ ಪ್ರದಾನ ಮಾಡುತ್ತ ಬಂದಿದ್ದಾರೆ. ಹೀಗಾಗಿ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನಕ್ಕೆ ಅವಕಾಶ ನೀಡುವಂತೆ ಒಂದೂವರೆ ವರ್ಷದಿಂದ ಜನ ಮನವಿ ಮಾಡುತ್ತಿದ್ದರು. ಈ ಕುರಿತು ಇದೀಗ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

    ಲಾಕ್‍ಡೌನ್ ಆಗಿರುವ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಪಿಂಡ ಪ್ರದಾನಕ್ಕೆ ಸರಿಯಾದ ಮಾರ್ಗಸೂಚಿ ಇಲ್ಲದ ಕಾರಣ ಇಲ್ಲಿನ ಜನರು ಜಿಲ್ಲೆಯ ವಿವಿಧೆಡೆ ಎಲ್ಲೆಲ್ಲೂ ಹೋಗಿ ಪಿಂಡ ಪ್ರದಾನ ಮಾಡಿ ಬರುತ್ತಿದ್ದಾರೆ. ಮನೆಯಲ್ಲಿ ಯಾರದ್ರೂ ಹಿರಿಯರು ಸತ್ತರೆ ಪಿಂಡ ಪ್ರದಾನ ಮಾಡದೆ ಮೃತರ ಮನೆಯವರು ಮನೆಯಿಂದ ಹೊರಗೆ ಹೋಗುವಂತಿಲ್ಲ ಇದು ಕೊಡಗಿನವರ ಪರಂಪರಾಗತ ಆಚರಣೆಯಾಗಿದೆ. ಹೀಗಾಗಿ ಸಾರ್ವಜನಿಕರಿಗೆ ತುಂಬಾ ಸಮಸ್ಯೆಯಾಗಿತ್ತು.

  • ಪಿಂಡ ಪ್ರಧಾನಕ್ಕೆಂದು ಬಂದು ತ್ರಿವೇಣಿ ಸಂಗಮದಲ್ಲಿ ಶವವಾದ ಯುವಕ

    ಪಿಂಡ ಪ್ರಧಾನಕ್ಕೆಂದು ಬಂದು ತ್ರಿವೇಣಿ ಸಂಗಮದಲ್ಲಿ ಶವವಾದ ಯುವಕ

    ಮಡಿಕೇರಿ: ಪಿಂಡ ಪ್ರಧಾನಕ್ಕೆಂದು ಬಂದಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನಡೆದಿದೆ.

    ಹುಣುಸೂರು ಮೂಲದ ಸುಬ್ರಹ್ಮಣಿ (29) ಮೃತ ಪಟ್ಟ ದುರ್ದೈವಿ. ಮನೆಯಲ್ಲಿ ಹಿರಿಯರು ಮೃತಪಟ್ಟ ನಂತರ ಕಾವೇರಿ ನದಿಯಲ್ಲಿ ಕುಟುಂಬ ಸಮೇತರಾಗಿ ತ್ರಿವೇಣಿ ಸಂಗಮಕ್ಕೆ ಪಿಂಡ ಪ್ರಧಾನ ಮಾಡಲು ಅಗಮಿಸಿದ್ದರು. ಈ ವೇಳೆ ಈ ಅವಘಡ ಸಂಭವಿಸಿದ್ದು, ಸುಬ್ರಹ್ಮಣಿ ಮೃತಪಟ್ಟಿದ್ದಾನೆ.

    ಬೆಳಿಗ್ಗೆ ಪಿಂಡ ಪ್ರಧಾನದ ವೇಳೆ ಸ್ನಾನಕ್ಕೆ ಇಳಿಯುವ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿದ ತಮ್ಮನನ್ನು ರಕ್ಷಿಸಲು ಮುಂದಾಗಿ ಅಣ್ಣಂದಿರು ಅಪಾಯದಲ್ಲಿ ಸಿಲುಕಿದ್ದಾನೆ. ನೀರಿನಲ್ಲಿ ಮುಳುಗುತಿದ್ದ ಅಣ್ಣಂದಿರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಆದರೆ ಇದಕ್ಕೂ ಮೊದಲೇ ಮುಳುಗಿದ ತಮ್ಮ ಮೃತಪಟ್ಟಿದ್ದಾನೆ. ಬದುಕುಳಿದ ಇಬ್ಬರು ಸಹೋದರರಿಗೆ ಭಾಗಮಂಡಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಕಳೆದ ಒಂದು ವಾರದಿಂದ ಭಾಗಮಂಡಲ ಸುತ್ತಮುತ್ತ ಅಧಿಕ ಮಳೆಯಾಗಿ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಇದರಿಂದ ಇಂದು ಪಿಂಡ ಪ್ರಧಾನಕ್ಕೆ ಬಂದಾಗ ಈ ಅವಘಡ ಸಂಭವಿಸಿದೆ. ಈ ಸಂಬಂಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೊಡಗಿನಲ್ಲಿ ಭಾರೀ ಮಳೆ: ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿ

    ಕೊಡಗಿನಲ್ಲಿ ಭಾರೀ ಮಳೆ: ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿ

    ಮಡಿಕೇರಿ: ಕೊಡಗಿನಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಕಾವೇರಿ, ಲಕ್ಷ್ಮಣತೀರ್ಥ ನದಿಗಳು ತುಂಬಿ ಹರಿಯುತ್ತಿದೆ.

    ಮಳೆಯ ಪ್ರಮಾಣ ಇದೇ ರೀತಿ ಮುಂದುವರಿದಲ್ಲಿ ಪ್ರವಾಹ ಏರ್ಪಡುವ ಸಾಧ್ಯತೆಗಳಿದೆ. ಕಾವೇರಿಯ ಉಗಮ ಸ್ಥಾನವಾದ ಕಾವೇರಿ ಮತ್ತು ಭಾಗಮಂಡಲ ಕ್ಷೇತ್ರದಲ್ಲಿ ಭಾರೀ ವರ್ಷಾಧಾರೆಯಿಂದ ತ್ರಿವೇಣಿ ಸಂಗಮ ಭರ್ತಿಯಾಗಿದೆ.

    ಗಣನೀಯ ಪ್ರಮಾಣದಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ಕಾವೇರಿಯ ನೀರು ಸ್ನಾನ ಘಟ್ಟದ ಮೆಟ್ಟಿಲುಗಳನ್ನು ಮೀರಿದೆ. ನಾಪೋಕ್ಲು, ಭಾಗಮಂಡಲ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಗಳಿವೆ.

    ಮಡಿಕೇರಿ ತಾಲೂಕಿನ ಸಂಪಾಜೆ, ಚೆಂಬು, ಕರಿಕೆ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ವಿದ್ಯುತ್ ಕಂಬಗಳು ಉರುಳಿ ಬಿದ್ದಿದೆ.

    https://youtu.be/_17rLEGEkBQ

     

     

  • ವರುಣನಿಗಾಗಿ ತಲಕಾವೇರಿಯಲ್ಲಿ ಪರ್ಜನ್ಯ ಜಪ – ತ್ರಿವೇಣಿ ಸಂಗಮದಲ್ಲಿ ಸಚಿವರಿಂದ ಬಾಗಿನ

    ವರುಣನಿಗಾಗಿ ತಲಕಾವೇರಿಯಲ್ಲಿ ಪರ್ಜನ್ಯ ಜಪ – ತ್ರಿವೇಣಿ ಸಂಗಮದಲ್ಲಿ ಸಚಿವರಿಂದ ಬಾಗಿನ

    ಮಡಿಕೇರಿ: ಮಳೆಗಾಗಿ ಪ್ರಾರ್ಥಿಸಿ ಜೀವ ನದಿ ತಲಕಾವೇರಿ ಸನ್ನಿಧಿಯಲ್ಲಿ ಪರ್ಜನ್ಯ ಜಪ ಆರಂಭವಾಗಿದೆ.

    ವರುಣನ ಕೃಪೆಗಾಗಿ ಕಾವೇರಿ ಉಗಮಸ್ಥಾನ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ತಲಕಾವೇರಿಯಲ್ಲಿ ಪರ್ಜನ್ಯ ಜಪ ಆಯೋಜನೆ ಮಾಡಿದ್ದ ಸಚಿವ ಎಂ.ಬಿ ಪಾಟೀಲ್ ವಿವಾದದಿಂದ ದೂರ ಉಳಿಯಲು ಎಂಜಿನಿಯರ್‍ಗಳ ಮೂಲಕ ಪರ್ಜನ್ಯ ಜಪ ಮಾಡಿಸಿದ್ರು.

    ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಬಸವರಾಜ್, ಪತ್ನಿ ಜಯಶ್ರೀ ಜೊತೆಗೆ ಪರ್ಜನ್ಯ ಜಪ ನಡೆಸಿದರು. ಅರ್ಚಕರಾದ ಪ್ರಶಾಂತ್ ಆಚಾರ್ ನೇತೃತ್ವದಲ್ಲಿ ಮುಂಜಾನೆ 9 ಗಂಟೆಯಿಂದ 11 ಗಂಟೆಯ ವರೆಗೆ ಪೂಜಾ ವಿಧಿ ವಿಧಾನಗಳು ನಡೆದವು.

    ಸರ್ಕಾರದಿಂದ ಮಳೆಗಾಗಿ ಪೂಜೆ ಮಾಡುವುದಕ್ಕೆ ವಿರೋಧ ವ್ಯಕ್ತವಾದ್ದರಿಂದ ವೈಯಕ್ತಿಕವಾಗಿ ಪೂಜೆ ಮಾಡೋದಾಗಿ ಹೇಳಿದ್ದ ನೀರಾವರಿ ಸಚಿವ ಎಂ.ಬಿ.ಪಾಟಿಲ್ ತಲಕಾವೇರಿ-ಭಾಗಮಂಡಲ ಕ್ಷೇತ್ರಕ್ಕೆ ಭೇಟಿ ನೀಡಿ, ತ್ರಿವೇಣಿ ಸಂಗಮದಲ್ಲಿ ಬಾಗಿನ ಅರ್ಪಿಸಿದ್ರು. ಸಚಿವರಿಗೆ ಕಲಾ ತಂಡಗಳ ಅದ್ದೂರಿ ಸ್ವಾಗತ ಸಿಕ್ತು.