Tag: Triveni Movie Theater

  • ಅಪ್ಪು ಜೊತೆ ನನಗೆ ಸಿನಿಮಾ ಮಾಡೋ ಭಾಗ್ಯ ಸಿಗಲಿಲ್ಲ: ಉಪೇಂದ್ರ

    ಅಪ್ಪು ಜೊತೆ ನನಗೆ ಸಿನಿಮಾ ಮಾಡೋ ಭಾಗ್ಯ ಸಿಗಲಿಲ್ಲ: ಉಪೇಂದ್ರ

    ಚಂದನವನದ ರಿಯಲ್ ಸ್ಟಾರ್ ಉಪೇಂದ್ರ ಅವರು ಶನಿವಾರ(ಇಂದು) ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ವೀಕ್ಷಿಸಲು ಬಂದಿದ್ದರು. ಈ ವೇಳೆ ಅಪ್ಪು ನೆನಪಿನ ಬುತ್ತಿಯನ್ನ ಉಪ್ಪಿ ಬಿಚ್ಚಿಟ್ಟಿದ್ದಾರೆ.

    ಶಿವರಾಜ್‍ಕುಮಾರ್ ಮತ್ತು ಗೀತಾ ಅವರ ಜೊತೆ ತ್ರಿವೇಣಿ ಚಿತ್ರಮಂದಿರದಲ್ಲಿ ಉಪೇಂದ್ರ ಅವರು ‘ಜೇಮ್ಸ್’ ಸಿನಿಮಾ ವೀಕ್ಷಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಭಿಮಾನಿಗಳನ್ನು ನೋಡಿ ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ. ಅಪ್ಪು ಸರ್‌ಗೆ ಡೈರೆಕ್ಷನ್ ಮಾಡಬೇಕು ಎಂಬ ಆಸೆಯಿತ್ತು. ಆದರೆ ಆ ಕನಸು ಕೊನೆಗೂ ಈಡೇರಲಿಲ್ಲ. ಅಪ್ಪು ಜೊತೆ ನನಗೆ ಸಿನಿಮಾ ಮಾಡೋ ಭಾಗ್ಯ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಫ್ಯಾನ್ಸ್ ಜೊತೆ ‘ಜೇಮ್ಸ್’ ವೀಕ್ಷಿಸಿದ ಶಿವಣ್ಣ ದಂಪತಿ – ಏನ್ ಹೇಳಲಿ ನನ್ನ ತಮ್ಮನ ಆ್ಯಕ್ಟಿಂಗ್ ಬಗ್ಗೆ

    ಸಿನಿಮಾದಲ್ಲಿ ಪ್ರತಿಯೊಂದು ಫ್ರೇಮ್‍ನಲ್ಲೂ ಆ್ಯಕ್ಟಿಂಗ್ ನೋಡಿದ್ರೆ ಅವರ ನಟನೆಯ ಕೌಶಲ್ಯದ ಬಗ್ಗೆ ಗೊತ್ತಾಗುತ್ತೆ. ಅದರಲ್ಲಿಯೂ ಜನರು ಅವರನ್ನು ಏಕೆ ದೇವರು ಅಂತ ಕರೆಯುತ್ತಾರೆ ಎಂದು ತಿಳಿಯುತ್ತೆ ಎಂದು ಭಾವನಾತ್ಮಕಾವಾಗಿ ನುಡಿದಿದ್ದಾರೆ.

    ಈ ವೇಳೆ ಗೀತಾ ಶಿವರಾಜ್‍ಕುಮಾರ್ ಅಪ್ಪುನನ್ನು ನೆನೆದು ಕಣ್ಣೀರಿಡುತ್ತಿರಬೇಕಾದರೆ ಅವರಿಗೆ ಸಮಾಧಾನ ಮಾಡಿದ್ದಾರೆ. ಅಲ್ಲದೇ ಈ ವೇಳೆ ಅಪ್ಪು ಮೇಲೆ ಅಭಿಮಾನಿಗಳು ಇಟ್ಟಿರುವ ಪ್ರೀತಿ ಕಂಡು ಸಂತೋಷ ವ್ಯಕ್ತಪಡಿಸಿದ್ದಾರೆ.  ಇದನ್ನೂ ಓದಿ: RRR ಸಿನಿಮಾದಲ್ಲಿ ತಾಂತ್ರಿಕ ದೋಷ- ಥಿಯೇಟರ್‌ ಗಾಜು ಹೊಡೆದ ಫ್ಯಾನ್ಸ್‌, ಟಿಕೆಟ್‌ ದರ ವಾಪಸ್‌