Tag: Trivandrum

  • ಗೆಳತಿಗೆ ಅಪ್ಪುಗೆ ನೀಡಿ ಸಸ್ಪೆಂಡ್ ಆಗಿದ್ದ ವಿದ್ಯಾರ್ಥಿ ಪರೀಕ್ಷೆಯಲ್ಲಿ 91.2% ಅಂಕ ಪಡೆದ!

    ಗೆಳತಿಗೆ ಅಪ್ಪುಗೆ ನೀಡಿ ಸಸ್ಪೆಂಡ್ ಆಗಿದ್ದ ವಿದ್ಯಾರ್ಥಿ ಪರೀಕ್ಷೆಯಲ್ಲಿ 91.2% ಅಂಕ ಪಡೆದ!

    ತಿರುವನಂತಪುರಂ: ಕಳೆದ ಕೆಲ ದಿನಗಳ ಹಿಂದೆ ಗೆಳತಿಗೆ ಅಪ್ಪುಗೆ ನೀಡಿ ಅಮಾನತುಗೊಂಡಿದ್ದ ವಿದ್ಯಾರ್ಥಿ ಸಿಬಿಎಸ್‍ಸಿ 12 ತರಗತಿಯ ಪರೀಕ್ಷೆಯಲ್ಲಿ 91.2% ಅಂಕ ಪಡೆದಿದ್ದಾನೆ.

    ಈ ಕುರಿತು ಸ್ಥಳೀಯ ಮಾಧ್ಯಮದೊಂದಿಗೆ ಸಂತಸ ವ್ಯಕ್ತಪಡಿಸಿರುವ ವಿದ್ಯಾರ್ಥಿ ಪೋಷಕರು ಶಾಲೆಯ ಆಡಳಿತ ಮಂಡಳಿ ನಿರ್ಧಾರದಿಂದ ಸಾಕಷ್ಟು ಬೇಸರ ಉಂಟಾಗಿತ್ತು. ಆದರೆ ವಿದ್ಯಾರ್ಥಿಗಳ ಭವಿಷ್ಯದ ಕಾರಣ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿತ್ತು. ಸದ್ಯ ತಮ್ಮ ಮಗ ಎಲ್ಲವನ್ನು ಬದಿಗೊತ್ತಿ ಉತ್ತಮ ಅಂಕ ಪಡೆದಿರುವುದು ಸಂತಸ ತಂದಿದೆ ಎಂದು ತಿಳಿಸಿದ್ದಾರೆ.

    ವಿದ್ಯಾರ್ಥಿ ಎದುರಿಸಿದ್ದ ಪರೀಕ್ಷೆಯಲ್ಲಿ ಆಂಗ್ಲಭಾಷೆಯಲ್ಲಿ 87, ಅರ್ಥಶಾಸ್ತ್ರದಲ್ಲಿ 99, ವ್ಯವಹಾರ ಅಧ್ಯಯನದಲ್ಲಿ 90, ಲೆಕ್ಕಶಾಸ್ತ್ರದಲ್ಲಿ 88, ಮನಃಶಾಸ್ತ್ರದಲ್ಲಿ 92 ಅಂಕಗಳನ್ನು ಗಳಿಸಿದ್ದಾನೆ.

    ಏನಿದು ಪ್ರಕರಣ?
    ಕಳೆದ ಡಿಸೆಂಬರ್ ಅವಧಿಯಲ್ಲಿ ಕೇರಳದ ಸೇಂಟ್ ಥಾಮಸ್ ಸೆಂಟ್ರಲ್ ಶಾಲೆಯಲ್ಲಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿತ್ತು. ವಿದ್ಯಾರ್ಥಿ ತನ್ನ ಗೆಳತಿಯನ್ನು ಅಪ್ಪಿಕೊಂಡಿದ್ದ ಫೋಟೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಆಗಿದ್ದಕ್ಕೆ ಶಿಸ್ತು ಕ್ರಮದ ಹಿನ್ನೆಲೆಯಲ್ಲಿ ಶಾಲೆ ಈ ನಿರ್ಣಯ ಕೈಗೊಂಡಿತ್ತು.

    ಶಾಲೆಯ ನಿರ್ಧಾರದ ವಿರುದ್ಧ ವಿದ್ಯಾರ್ಥಿ ಫೋಷಕರು ಕೇರಳ ಹೈಕೋರ್ಟ್ ಹಾಗೂ ಮಾನವ ಹಕ್ಕುಗಳ ಆಯೋಗದ ಮೆಟ್ಟಿಲು ಸಹ ಹತ್ತಿದ್ದರು. ಆದರೆ ನ್ಯಾಯಾಲಯ ಶಾಲೆಗೆ ಶಿಸ್ತು ನಿಯಮ ರೂಪಿಸುವ ಅಧಿಕಾರ ಇದೇ ಎಂದು ಅಭಿಪ್ರಾಯಪಟ್ಟು ಪ್ರಕರಣದಲ್ಲಿ ಮಧ್ಯ ಪ್ರವೇಶಿಸಲು ನಿರಾಕರಿಸಿತ್ತು. ಬಳಿಕ ಸಂಸದ ಶಶಿ ತರೂರ್ ಮಧ್ಯ ಪ್ರವೇಶದಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ತೆಗೆದು ಕೊಳ್ಳಲು ಅವಕಾಶ ನೀಡಲಾಗಿತ್ತು.

  • ಧೋನಿ ನಿವೃತ್ತಿ ಬಗ್ಗೆ ಮಾತನಾಡಿದವರಿಗೆ ತಿರುಗೇಟು ಕೊಟ್ಟ ಕೊಹ್ಲಿ

    ಧೋನಿ ನಿವೃತ್ತಿ ಬಗ್ಗೆ ಮಾತನಾಡಿದವರಿಗೆ ತಿರುಗೇಟು ಕೊಟ್ಟ ಕೊಹ್ಲಿ

    ತಿರುವನಂತಪುರಂ: ಭಾರತ ತಂಡದ ಮಾಜಿ ನಾಯಕ ಎಂ.ಎಸ್ ಧೋನಿಯ ಕ್ರಿಕೆಟ್ ಗೆ ನಿವೃತ್ತಿ ಹೇಳಬೇಕು ಎಂದು ಹೇಳಿದ್ದ ಟೀಕಾಕಾರರಿಗೆ ತಿರುಗೇಟು ನೀಡಿರುವ ಕೊಹ್ಲಿ, ಯಾಕೆ ಎಲ್ಲರೂ ಅವರನ್ನೇ ಗುರಿಯಾಗಿಸಿಕೊಂಡಿದ್ದಾರೆ ಎಂಬುವುದು ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.

    ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯ ಗೆದ್ದ ಬಳಿಕ ಮಾತನಾಡಿದ ಕೊಹ್ಲಿ ಯಾಕೆ ಎಲ್ಲರೂ ಅವರನ್ನೇ ಗುರಿಯಾಗಿಸಿಕೊಂಡಿದ್ದಾರೆ. ನಾನು ಸತತವಾಗಿ ಮೂರು ಬಾರಿ ಬ್ಯಾಟಿಂಗ್ ಮಾಡುವಲ್ಲಿ ವಿಫಲವಾದರು ಯಾರು ನನ್ನನ್ನು ಟೀಕೆ ಮಾಡುವುದಿಲ್ಲ, ಏಕೆಂದರೆ ನನಗೆ 35 ವರ್ಷ ಪೂರ್ಣಗೊಂಡಿಲ್ಲ. ಆದರೆ ಧೋನಿ ಎಲ್ಲಾ ಫಿಟ್ ನೆಸ್ ಪರೀಕ್ಷೆಗಳನ್ನು ಪೂರ್ಣಗೊಳಿಸಿ ಆಯ್ಕೆಯಾಗಿದ್ದಾರೆ. ಬ್ಯಾಟ್ ಮೂಲಕ ತಂಡದ ಗೆಲುವಿಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ. ಆಸ್ಟೇಲಿಯಾ ಹಾಗೂ ಶ್ರೀಲಂಕಾ ಸರಣಿಯಲ್ಲಿ ಧೋನಿ ನೀಡಿದ ಪ್ರದರ್ಶನವೇ ಇದಕ್ಕೆ ಸಾಕ್ಷಿ. ನ್ಯೂಜಿಲೆಂಡ್ ಸರಣಿಯಲ್ಲಿ ಮಾತ್ರ ಅವರಿಗೆ ಬ್ಯಾಟ್ ಮಾಡಲು ಉತ್ತಮ ಅವಕಾಶ ಲಭ್ಯವಾಗಿಲ್ಲ ಎಂದು ಹೇಳಿದರು.

    ನ್ಯೂಜಿಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯಾ ಸಹ ಉತ್ತಮವಾಗಿ ಬ್ಯಾಟ್ ಮಾಡಲು ಸಾಧ್ಯವಾಗಲಿಲ್ಲ. ಆದರೆ ನಾವು ಧೋನಿ ಅವರನ್ನು ಮಾತ್ರ ಯಾಕೆ ಗುರಿ ಮಾಡುತ್ತಿದ್ದೇವೆ? ಒಬ್ಬರನ್ನೇ ಟೀಕೆ ಮಾಡುವುದು ಸರಿಯಲ್ಲ. ಧೋನಿ ಬ್ಯಾಟ್ ಮಾಡಲು ಬಂದ ಕ್ರಮಾಂಕದ ಕುರಿತು ತಿಳಿದು ಸತ್ಯವನ್ನು ಗಮನಿಸಿಬೇಕಿದೆ. ಧೋನಿ ಬ್ಯಾಟ್ ಮಾಡಲು ಆಗಮಿಸಿದ ವೇಳೆ ರನ್ ರೇಟ್ ಎಷ್ಟಿತ್ತು ಹಾಗೂ ಪ್ರಮುಖ ವಿಕೆಟ್‍ಗಳನ್ನು ಸಹ ಕಳೆದುಕೊಡಿದ್ದೇವು ಎಂದು ತಿಳಿಸಿದ್ದಾರೆ.

    ತಂಡದ ಸದಸ್ಯರಾಗಿ ಎಲ್ಲಾ ಆಟಗಾರರು ಪಂದ್ಯದ ವೇಳೆ ಬ್ಯಾಟ್ ಮಾಡುವ ಸನ್ನಿವೇಶದ ಕುರಿತು ತಿಳಿದಿರುತ್ತೇವೆ. ವಿವಿಧ ದೃಷ್ಟಿಗಳಿಂದ ವಿಮರ್ಶೆ ನಡೆಸುವ ಟೀಕಾಕಾರರ ಹೇಳಿಕೆಗಳಿಂದ ನಾವು ಭಾವನತ್ಮಕತೆಗೆ ಒಳಾಗುವುದಿಲ್ಲ. ಕ್ರೀಡಾಂಗಣದಲ್ಲಿದ್ದಾಗ ವಿಕೆಟ್ ಹೇಗೆ ವರ್ತಿಸುತ್ತಿದೆ ಎಂಬುದನ್ನು ಮಾತ್ರ ಗಮನಿಸುತ್ತೇವೆ ಎಂದು ಟೀಕಾಕಾರಿಗೆ ಟಾಂಗ್ ನೀಡಿದ್ದಾರೆ.

    ಎರಡನೇ ಟಿ-20 ಪಂದ್ಯದಲ್ಲಿ ಭಾರತಕ್ಕೆ ನ್ಯೂಜಿಲೆಂಡ್ 197 ರನ್ ಗೆಲುವಿನ ಗುರಿ ನೀಡಿತ್ತು. ಆದರೆ ಭಾರತ ಪ್ರಮುಖ ವಿಕೆಟ್‍ಗಳನ್ನು ಕಳೆದುಕೊಂಡು 40ರನ್ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಧೋನಿ 49 (37 ಎಸೆತ) ರನ್ ಗಳಿಸಿದ್ದರು. ಇದರಿಂದ ಪಂದ್ಯದ ಪ್ರಮುಖ ಸಮಯದಲ್ಲಿ ಧೋನಿ ನಿಧಾನಗತಿಯಿಂದ ಬ್ಯಾಟ್ ಮಾಡಿದರು ಎಂದು ಹಲವರು ಟೀಕೆ ಮಾಡಿದ್ದರು.

    ಭಾರತ ತಂಡದ ಮಾಜಿ ಆಟಗಾರ ವಿ.ವಿ.ಎಸ್ ಲಕ್ಷ್ಮಣ್ ಧೋನಿ ಟಿ-20 ಮಾದರಿಗೆ ವಿದಾಯ ನೀಡಿ ಯುವ ಆಟಗಾರರಿಗೆ ಅವಕಾಶವನ್ನು ನೀಡಬೇಕು ಎಂದು ಹೇಳಿಕೆ ನೀಡಿದ್ದರು. ಅಲ್ಲದೇ ಸೆಹ್ವಾಗ್ ಧೋನಿ ಯಾವ ಕ್ರಮಾಂಕದಲ್ಲಿ ಬ್ಯಾಟ್ ಮಾಡಬೇಕು ಎಂದು ನಿರ್ಧಾರ ಮಾಡಬೇಕು ಎಂದು ಅಭಿಪ್ರಾಯ ಪಟ್ಟಿದ್ದರು.

  • ರೋಚಕ ಲಾಸ್ಟ್ ಓವರ್‍ನಲ್ಲಿ ಪಾಂಡ್ಯಾ ಕೊಹ್ಲಿಗೆ ಹೇಳಿದ್ದೇನು?

    ರೋಚಕ ಲಾಸ್ಟ್ ಓವರ್‍ನಲ್ಲಿ ಪಾಂಡ್ಯಾ ಕೊಹ್ಲಿಗೆ ಹೇಳಿದ್ದೇನು?

    ತಿರುವನಂತಪುರ: `ನಾನು ಉತ್ತಮ ಬೌಲಿಂಗ್ ಮಾಡುತ್ತೇನೆ, ನೀವು ಚೀತಸಬೇಡಿ’ ಎಂದು ಪಾಂಡ್ಯಾ ನಾಯಕ ಕೊಹ್ಲಿಗೆ ಭರವಸೆ ನೀಡಿ, ನಿರ್ಣಾಯಕ ಓವರ್‍ ನಲ್ಲಿ ಕೇವಲ 12 ರನ್‍ಗಳನ್ನು ನೀಡುವ ಮೂಲಕ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.

    ಪಂದ್ಯದ ಮುಕ್ತಾಯದ ನಂತರ ಮಾತನಾಡಿದ ಕೊಹ್ಲಿ, ಪಾಂಡ್ಯಾ ಅಂತಿಮ ಓವರ್‍ನಲ್ಲಿ ಹೇಳಿದ ಮಾತನ್ನು ಬಿಚ್ಚಿಟ್ಟರು. ಪಂದ್ಯದ ನಿರ್ಣಾಯಕ ಒವರ್‍ನಲ್ಲಿ ಬೌಲರ್‍ಗೆ ಧೈರ್ಯ ತುಂಬುವುದು ನಾಯಕನ ಕರ್ತವ್ಯ ಆದ್ದರಿಂದಲೇ ನಾನು ಪಾಂಡ್ಯಾಗೆ ಸಲಹೆ ನೀಡಲು ತೆರಳಿದೆ. ಈ ವೇಳೆ ಪಾಂಡ್ಯಾ ತಮ್ಮದೇ ಶೈಲಿಯಲ್ಲಿ `ನಾನು ಉತ್ತಮ ಬೌಲಿಂಗ್ ಮಾಡುತ್ತೇನೆ, ನೀವು ಚಿಂತಿಸಬೇಡಿ’ ಎಂದರು. ತಂಡದ ನಾಯಕನಿಗೆ ಬೌಲರ್ ಇಷ್ಟು ಭರವಸೆ ನೀಡಿದರೆ ಸಾಕು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಪಾಂಡ್ಯಾ ಅವರ ಬೌಲಿಂಗ್ ಮೇಲಿನ ವಿಶ್ವಾಸದಿಂದಲೇ ಅವರಿಗೆ ಬಾಲ್ ನೀಡಿದೆ. ಪಾಂಡ್ಯಾರ ಆಫ್ ಕಟ್ ಸ್ವಿಂಗ್ ಉತ್ತಮ ಫಲಿತಾಂಶವನ್ನು ನೀಡಿತು. ಇನ್ನೂಳಿದಂತೆ ಬೂಮ್ರಾ ಅವರ ಶಿಸ್ತುಬದ್ಧ ದಾಳಿ ನ್ಯೂಜಿಲೆಂಡ್ ಆಟಗಾರರನ್ನು ಒತ್ತಡದಲ್ಲಿ ಸಿಲುಕಿಸಿತು ಎಂದರು.

    ಒಟ್ಟಾರೆ ತಂಡದ ಸಾಂಘಿಕ ಹೋರಾಟದಿಂದ ಟೀಂ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

    ಕೊನೆಯ ಆ ಓವರ್: ನ್ಯೂಜಿಲೆಂಡ್ ಗೆಲ್ಲಲು ಕೊನೆಯ ಓವರ್ ನಲ್ಲಿ 19 ರನ್ ಬೇಕಾಗಿತ್ತು. ಮೊದಲ ಎಸೆತದಲ್ಲಿ 1 ರನ್ ಬಂದರೆ 2ನೇ ಎಸೆತದಲ್ಲಿ ಯಾವುದೇ ರನ್ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಈ ವೇಳೆ ಬಾಲ್ ಪಾಂಡ್ಯಾ ಎಡಕೈಗೆ ತಗುಲಿತ್ತು. ತಕ್ಷಣ ಟೀಂ ಫಿಸಿಯೋ ಬಂದು ನೋವು ನಿವಾರಕ ಸ್ಪ್ರೇ ಹಾಕಿದರು. ಬಳಿಕ ಬೌಲಿಂಗ್ ಆರಂಭಿಸಿದ ಪಾಂಡ್ಯಾ 3ನೇ ಎಸೆತದಲ್ಲಿ ಗ್ರಾಂಡ್ ಹೋಮ್ ಸಿಕ್ಸರ್ ಬಾರಿಸಿದಾಗ ಸ್ಟೇಡಿಯಂನಲ್ಲಿ ನೀರವ ಮೌನ. ನಂತರದ ಬಾಲ್ ನಲ್ಲಿ ಪಾಂಡ್ಯಾ ವೈಡ್ ಎಸೆದರು. 4ನೇ ಎಸೆತದಲ್ಲಿ ಕೇವಲ 1 ರನ್ ಮಾತ್ರ ಬಂತು. 5 ನೇ ಎಸೆತದಲ್ಲಿ 2 ರನ್ ಬಂದಿತ್ತು. ಅಷ್ಟರಲ್ಲಾಗಲೇ ಟೀಂ ಇಂಡಿಯಾ ಗೆಲುವು ಖಚಿತವಾಗಿತ್ತು. ಯಾಕೆಂದರೆ ಬಾಕಿ ಉಳಿದಿದ್ದ 1 ಎಸೆತದಲ್ಲಿ 8 ರನ್ ಬೇಕಾಗಿತ್ತು. ಆದರೆ ಕೊನೆಯ ಎಸೆತದಲ್ಲಿ ನ್ಯೂಜಿಲೆಂಡ್ ಆಟಗಾರರು ಕೇವಲ 1 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಈ ಮೂಲಕ ಟೀಂ ಇಂಡಿಯಾ 6 ರನ್ ಗಳ ಗೆಲುವು ಸಾಧಿಸಿತ್ತು.

  • ಐಎಎಸ್ ಅಧಿಕಾರಿ ಜೊತೆ ಶಾಸಕನಿಗೆ ಲವ್ವಾಯ್ತು, ಇಂದು ಮದುವೆಯೂ ಆಯ್ತು!

    ಐಎಎಸ್ ಅಧಿಕಾರಿ ಜೊತೆ ಶಾಸಕನಿಗೆ ಲವ್ವಾಯ್ತು, ಇಂದು ಮದುವೆಯೂ ಆಯ್ತು!

    ತಿರುವನಂತಪುರಂ: ಕೇರಳದ ಅರುವಿಕ್ಕರ ಕಾಂಗ್ರೆಸ್ ಶಾಸಕ ಕೆ.ಎಸ್.ಶಬರೀನಾಥನ್ ಹಾಗೂ ತಿರುವನಂತಪುರಂ ಸಬ್ ಕಲೆಕ್ಟರ್ ಡಾ.ದಿವ್ಯಾ ಎಸ್.ಅಯ್ಯರ್ ವಿವಾಹ ಇಂದು ಕನ್ಯಾಕುಮಾರಿಯಲ್ಲಿ ನಡೆಯಿತು.

    ಇಂದು ಬೆಳಗ್ಗೆ ಕನ್ಯಾಕುಮಾರಿ ಜಿಲ್ಲೆಯ ತಕ್ಕಲ ಕುಮಾರಸ್ವಾಮಿ ದೇವಸ್ಥಾನದಲ್ಲಿ ಸರಳ ವಿವಾಹ ಸಮಾರಂಭ ನಡೆಯಿತು. ಸಂಜೆ 5 ಗಂಟೆಯಿಂದ 9 ಗಂಟೆವರೆಗೆ ನಾಲಂಜಿರ ಎಂಬಲ್ಲಿರುವ ಗಿರಿದೀಪಂ ಕನ್ವೆನ್ಷನ್ ಸೆಂಟರ್ ಹಾಗೂ ನಾಳೆ ಶಾಸಕರ ಕ್ಷೇತ್ರದಲ್ಲಿ ರಿಸೆಪ್ಷನ್ ನಡೆಯಲಿದೆ.

    ಕೇರಳ ವಿಪಕ್ಷ ಮುಖಂಡ ಕಾಂಗ್ರೆಸ್ ನ ರಮೇಶ್ ಚೆನ್ನಿತ್ತಲ, ಮಾಜಿ ಸಿಎಂ ಉಮ್ಮನ್ ಚಾಂಡಿ, ಕೆಸಿ ಜೋಸೆಫ್, ವಿ.ಡಿ.ಸತೀಶನ್, ಆಂಟೋ ಆಂಟನಿ ಮುಂತಾದ ಕಾಂಗ್ರೆಸ್ ಮುಖಂಡರು ನವದಂಪತಿಗಳಿಗೆ ಶುಭಹಾರೈಸಿದರು.

    ಪ್ರೀತಿ ಹುಟ್ಟಿದ್ದು ಹೇಗೆ?: ಕೋಟ್ಟಯಂ ಸಬ್ ಕಲೆಕ್ಟರ್ ಆಗಿದ್ದ ದಿವ್ಯಾ ಅವರಿಗೆ ತಿರುವನಂತಪುರಂಗೆ ವರ್ಗಾವಣೆಯಾಗಿತ್ತು. ಈ ಮೂಲಕ ಶಾಸಕ ಶಬರೀನಾಥ್ ಗೆ ದಿವ್ಯಾ ಜೊತೆ ಫ್ರೆಂಡ್ ಶಿಪ್ ಬೆಳೆಯುತ್ತದೆ. ಇದೇ ಮುಂದೆ ಲವ್ ಆಗಿದೆ.

    ನಾವಿಬ್ಬರೂ ಸುಮಾರು ದಿನಗಳಿಂದ ಪರಿಚಿತರಾಗಿದ್ದೆವು. ಆ ಪರಿಚಯ ಪ್ರೀತಿಗೆ ಬದಲಾಯ್ತು. ಆದರೆ ನಾವು ಇದ್ಯಾವುದನ್ನೂ ಯಾರಿಗೂ ಹೇಳಿರಲಿಲ್ಲ ಎಂದ ಶಬರೀನಾಥ್ ಕಳೆದ ತಿಂಗಳು ಫೇಸ್ ಬುಕ್ ನಲ್ಲಿ ಮದುವೆಯ ವಿಷಯವನ್ನು ಪ್ರಕಟಿಸಿದರು. ಈ ಮೂಲಕ ಅವರು ಕೇರಳದಲ್ಲಿ ಅಚ್ಚರಿ ಮೂಡಿಸಿದ್ದರು.

    ಎಸ್.ಎಸ್.ಎಲ್.ಸಿಯಲ್ಲಿ 3ನೇ ಸ್ಥಾನ ಗಳಿಸಿದ್ದ ದಿವ್ಯಾ ನಂತರ ಎಂಬಿಬಿಎಸ್ ವ್ಯಾಸಂಗ ಮುಗಿಸಿದ್ದರು. ಬಳಿಕ 2014ರಲ್ಲಿ ಐಎಎಸ್ ಪಾಸಾದರು.

     

     

    https://www.facebook.com/SabarinadhanKS/photos/a.381807742010687.1073741828.381641775360617/662658643925594/?type=3&theater

  • ಕೇರಳದ ಸ್ವಾಮೀಜಿಯ ಮರ್ಮಾಂಗ ಕತ್ತರಿಸಿದ್ದು ಮಗಳ ಬಾಯ್ ಫ್ರೆಂಡ್ – ತಾಯಿಯಿಂದ ದೂರು

    ಕೇರಳದ ಸ್ವಾಮೀಜಿಯ ಮರ್ಮಾಂಗ ಕತ್ತರಿಸಿದ್ದು ಮಗಳ ಬಾಯ್ ಫ್ರೆಂಡ್ – ತಾಯಿಯಿಂದ ದೂರು

    ತಿರುವನಂತಪುರ: ಕೇರಳದಲ್ಲಿ ಸ್ವಾಮೀಜಿಯ ಮರ್ಮಾಂಗವನ್ನು ಯುವತಿಯೊಬ್ಬಳು ಕಟ್ ಮಾಡಿದ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.

    ಸ್ವಾಮೀಜಿಯ ಮರ್ಮಾಂಗವನ್ನು ನನ್ನ ಮಗಳು ಕಟ್ ಮಾಡಿಲ್ಲ, ಬದಲಾಗಿ ಆಕೆಯ ಪ್ರಿಯಕರ ಕಟ್ ಮಾಡಿದ್ದಾನೆ ಎಂದು ಯುವತಿಯ ತಾಯಿ ಹಾಗೂ ಸೋದರ ಪೊಲೀಸರಿಗೆ ತಿಳಿಸಿದ್ದಾರೆ. ನನ್ನ ಮಗಳು ಸ್ವಾಮಿ ವಿರುದ್ಧ ಸುಳ್ಳು ದೂರು ನೀಡಿದ್ದಾಳೆ ಎಂದು ಯುವತಿಯ ತಾಯಿ ಆರೋಪಿಸಿದ್ದಾರೆ.

    ನನ್ನ ಪುತ್ರಿಗೆ ಒಬ್ಬ ಹುಡುಗನ ಜೊತೆ ಲವ್ ಇದೆ. ಆದರೆ ಇದಕ್ಕೆ ಸ್ವಾಮೀಜಿ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಆಕೆಗೆ ಸ್ವಾಮಿಯ ಮೇಲೆ ದ್ವೇಷವಿತ್ತು. ಆಕೆಯ ಮಾನಸಿಕ ಸ್ಥಿಮಿತವನ್ನೂ ಕಳೆದುಕೊಂಡಿದ್ದಾಳೆ. ಸ್ವಾಮೀಜಿ ನಮ್ಮ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಾನೆ ಎಂದು ಬಾಯ್ ಫ್ರೆಂಡ್‍ಗೆ ತಿಳಿಸಿದ್ದಳು. ಗಂಗೇಶಾನಂದ ಸ್ವಾಮಿ ಈ ಪ್ರಕರಣದಲ್ಲಿ ನಿರಪರಾಧಿಯಾಗಿದ್ದು ನನ್ನ ಮಗಳ ಬಾಯ್ ಫ್ರೆಂಡ್ ಈ ಕೃತ್ಯವೆಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಈ ದೂರಿನ ಬಗ್ಗೆ ವಿಸ್ತೃತ ತನಿಖೆ ನಡೆಸುವಂತೆ ಐಜಿ ಮನೋಜ್ ಅಬ್ರಹಾಂಗೆ ಡಿಜಿಪಿ ಸೂಚಿಸಿದ್ದಾರೆ.

    ಇದನ್ನೂ ಒದಿ: ರೇಪಿಸ್ಟ್ ಕಾಮಿ ಸ್ವಾಮೀಜಿಯ ಮರ್ಮಾಂಗವನ್ನೇ ಕಟ್ ಮಾಡಿದ್ಳು ಯುವತಿ!-ಏನಿದು ಘಟನೆ? ಇಲ್ಲಿದೆ ಪೂರ್ಣ ಮಾಹಿತಿ

    ಸ್ವಾಮಿ ನನ್ನ ಮಗಳಿಗೆ ಯಾವುದೇ ಲೈಂಗಿಕ ಕಿರುಕುಳ ನೀಡಿಲ್ಲ ಎಂದೂ ತಾಯಿ ಹೇಳಿದ್ದಾರೆ. ಸ್ವಾಮಿ ಗಂಗೇಶಾನಂದ ತೀರ್ಥಪಾದ ಮರ್ಮಾಂಗವನ್ನು ಯುವತಿ ಕಳೆದ ವಾರ ಕತ್ತರಿಸಿದ್ದಳು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಆದರೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸ್ವಾಮಿ ನನ್ನ ಮರ್ಮಾಂಗವನ್ನು ನಾನೇ ಕತ್ತರಿಸಿದ್ದೇನೆ. ಯುವತಿ ಸುಳ್ಳು ಹೇಳುತ್ತಿದ್ದಾಳೆ. ಆಕೆಯ ಮಾತನ್ನು ನಂಬಬೇಡಿ ಎಂದು ಹೇಳಿದ್ದ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಒಟ್ಟಿನಲ್ಲಿ ದಿನಕ್ಕೊಂದು ತಿರುವು ಪಡೆಯುತ್ತಿರುವ ಈ ಕೇಸ್ ತನಿಖೆಯೇ ಪೊಲೀಸರಿಗೆ ತಲೆ ನೋವಾಗಿದೆ.

    ಇದನ್ನೂ ಒದಿ: ಯುವತಿ ಅಲ್ಲ, ನನ್ನ ಮರ್ಮಾಂಗವನ್ನು ನಾನೇ ಕತ್ತರಿಸಿದೆ: ಕಾಮಿ ಸ್ವಾಮೀಜಿ