Tag: trishika

  • ಮಾರುಕಟ್ಟೆ ಕಟ್ಟಡದ ಬಗ್ಗೆ ತಿಳಿಯಲು ಸಾಮಾನ್ಯರಂತೆ ಬಂದ ಯದುವೀರ್ ದಂಪತಿ -ವಿಡಿಯೋ ನೋಡಿ

    ಮಾರುಕಟ್ಟೆ ಕಟ್ಟಡದ ಬಗ್ಗೆ ತಿಳಿಯಲು ಸಾಮಾನ್ಯರಂತೆ ಬಂದ ಯದುವೀರ್ ದಂಪತಿ -ವಿಡಿಯೋ ನೋಡಿ

    ಮೈಸೂರು: ರಾಜವಂಶಸ್ಥ ಯದುವೀರ್ ಒಡೆಯರ್ ನಗರದ ದೇವರಾಜ ಮಾರುಕಟ್ಟೆಗೆ ತಮ್ಮ ಪತ್ನಿ ತ್ರಿಷಿಕಾ ಅವರ ಜೊತೆ ಭೇಟಿ ನೀಡಿದ್ದರು.

    ಮಾರುಕಟ್ಟೆ ಕಟ್ಟಡ ಕೆಡುವ ವಿಚಾರದಲ್ಲಿ ರಾಜಮನೆತನ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಮಾರುಕಟ್ಟೆ ಕಟ್ಟಡದ ಸ್ಥಿತಿ ತಿಳಿಯಲು ಪತ್ನಿ ಸಮೇತರಾಗಿ ಯದುವೀರ್ ಮಾರುಕಟ್ಟೆಗೆ ಭೇಟಿ ನೀಡಿದ್ದರು. ಮಾರುಕಟ್ಟೆಯಲ್ಲಿ ಯದುವೀರ್ ದಂಪತಿ ಕಂಡು ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಅಚ್ಚರಿಗೊಂಡರು.

    ಸಾಮಾನ್ಯರಂತೆ ಮಾರುಕಟ್ಟೆಯಲ್ಲಿ ಓಡಾಡಿದ ಯದುವೀರ್ ದಂಪತಿ, ವ್ಯಾಪಾರಿಗಳ ಬಳಿ ಮಾತುಕತೆ ನಡೆಸಿ ಕಟ್ಟಡದ ಬಗ್ಗೆ ಮಾಹಿತಿ ಪಡೆದರು. ಮಾರುಕಟ್ಟೆಯ ವ್ಯಾಪಾರಿಗಳ ಅಂಗಡಿಯ ಮುಂದೆ ಕುಳಿತು ಅವರ ಬಳಿ ಮಾತನಾಡಿದ್ದಾರೆ.

    ಇದೇ ವೇಳೆ ಮಾರುಕಟ್ಟೆಯಲ್ಲಿ ಸೊಪ್ಪು, ಹಣ್ಣು ಮತ್ತು ತರಕಾರಿ ಖರೀದಿಸಿದ್ದರು. ವ್ಯಾಪಾರಿಗಳು ಅವರಿಂದ ಹಣ ಪಡೆಯಲು ನಿರಾಕರಿಸಿದ್ದರು. ಆದರೂ ತ್ರಿಷಿಕಾ ಅವರು ಬಲವಂತವಾಗಿ ಹಣವನ್ನು ನೀಡಿದ್ದಾರೆ. ಬಳಿಕ ಮಾರುಕಟ್ಟೆ ಹೊರಗೆ ಬಂದು ಗುರು ಸ್ವೀಟ್‍ನಲ್ಲಿ ಮೈಸೂರು ಪಾಕ್ ಖರೀದಿಸಿದರು. ರಾಜವಂಶಸ್ಥರ ಸರಳತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಗ್ರೌಂಡಿಗಿಳಿದು ಬ್ಯಾಟ್ ಬೀಸಿದ ಮಹಾರಾಜರ ಪತ್ನಿ

    ಗ್ರೌಂಡಿಗಿಳಿದು ಬ್ಯಾಟ್ ಬೀಸಿದ ಮಹಾರಾಜರ ಪತ್ನಿ

    ಮೈಸೂರು: ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನೆನಪಿನಾರ್ಥ ಆಯೋಜಿಸಲಾಗಿದ್ದ ಕ್ರಿಕೆಟ್ ಟೂರ್ನಿಯನ್ನು ಬ್ಯಾಟಿಂಗ್ ಮಾಡುವ ಮೂಲಕ ಮೈಸೂರಿನ ಯದುವಂಶದ ಸೊಸೆ ತ್ರಿಷಿಕಾ ಕುಮಾರಿ ಸಿಂಗ್ ಉದ್ಘಾಟಿಸಿದ್ದಾರೆ.

    ಇಂದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನೆನಪಿನಾರ್ಥ ಅರಸು ಮಂಡಳಿ ವತಿಯಿಂದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದೆ. ಈ ಪಂದ್ಯಾವಳಿಗೆ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪತ್ನಿ ತ್ರಿಷಿಕಾ ಅವರು ಬ್ಯಾಟ್ ಬೀಸುವ ಮೂಲಕ ಚಾಲನೆ ನೀಡಿದರು.

    ತ್ರಿಷಿಕಾ ಅವರು ಕ್ರಿಕೆಟ್ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಖುಷಿ ಪಟ್ಟಿದ್ದಾರೆ. ಹಾಗೆಯೇ ಪಂದ್ಯಾವಳಿಯಲ್ಲಿ ಸ್ಪರ್ಧಿಸುತ್ತಿರುವ ಎಲ್ಲಾ ಕ್ರಿಕೆಟ್ ತಂಡಕ್ಕೂ ಶುಭಹಾರೈಸಿದ್ದು, ಅವರ ಪ್ರೋತ್ಸಾಹಕ್ಕೆ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತ್ರಿಷಿಕಾ ಅವರು ಬ್ಯಾಟಿಂಗ್ ಮಾಡಿದ ದೃಶ್ಯವನ್ನು ಸ್ಥಳದಲ್ಲಿದ್ದವರು ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದಿದ್ದಾರೆ.

  • ಮೊದಲ ದಸರಾಗೆ ಸಜ್ಜಾದ ಆದ್ಯವೀರ್ – ಈಗ ಅರಮನೆ ಒಡೆಯರ್ ಹೀಗಿದ್ದಾರೆ

    ಮೊದಲ ದಸರಾಗೆ ಸಜ್ಜಾದ ಆದ್ಯವೀರ್ – ಈಗ ಅರಮನೆ ಒಡೆಯರ್ ಹೀಗಿದ್ದಾರೆ

    ಮೈಸೂರು: ಐತಿಹಾಸಿಕ ಹಬ್ಬ ದಸರಾಗೆ ನಾಡಿನ ಜನತೆ ಸಿದ್ಧರಾಗುತ್ತಿದ್ದಾರೆ. ಇತ್ತ ಗಜಪಡೆಗಳು ಕೂಡ ಸಜ್ಜಾಗುತ್ತಿದ್ದು, ಯದುವಂಶದ ಆದ್ಯವೀರ್ ನರಸಿಂಹರಾಜ ಒಡೆಯರ್ ಕೂಡ ತನ್ನ ಮೊದಲ ದಸರಾ ಹಬ್ಬಕ್ಕೆ ತಯಾರಾಗುತ್ತಿದ್ದಾರೆ.

    ಆದ್ಯವೀರ್ ಡಿಸೆಂಬರ್ 6 2017ರಲ್ಲಿ ಜನಿಸಿದ್ದರು. ಆದ್ದರಿಂದ ಆದ್ಯವೀರ್ ಗೆ ಇದೇ ಮೊದಲ ದಸರವಾಗಿದೆ. ಈ ಬಾರಿಯ ದಸರಾ ವಿಶೇಷವಾಗಿದೆ. ಆದ್ದರಿಂದ ಮೈಸೂರಿನ ಸಂಸ್ಥಾನದ ಯದುವಂಶಕ್ಕೆ ಸುಮಾರು 6 ದಶಕಗಳಿಂದ ಸಂತಾನ ಇರಲಿಲ್ಲ. ಆದರೆ ಕಳೆದ ವರ್ಷ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ ದಂಪತಿಗೆ ಆದ್ಯವೀರ್ ಜನಿಸುವ ಮೂಲಕ ರಾಜಮನೆತನಕ್ಕೆ ಸಂತಾನ ಪ್ರಾಪ್ತಿಯಾಗಿತ್ತು. ಈ ಸಂತಸವನ್ನು ಇಡೀ ನಾಡಿನ ಜನತೆಯೂ ಸಂಭ್ರಮಿಸಿತ್ತು.

    ಆದ್ಯವೀರ್ ಜನಿಸಿ ಸುಮಾರು ಒಂಭತ್ತು ತಿಂಗಳಾಗಿದೆ. ಇದುವರೆಗೂ ಅವರ ಫೋಟೋ ಎಲ್ಲಿಯೂ ಲಭ್ಯವಾಗಿರಲಿಲ್ಲ. ಆದರೆ ಈಗ ಅವರು ಹೇಗಿದ್ದಾರೆ ಎಂಬುದನ್ನು ಈ ಫೋಟೋ ಮೂಲಕ ತಿಳಿಯಬಹುದು. ಆದ್ಯವೀರ್ ಅವರು ತಮ್ಮ ತಾಯಿ ತ್ರಿಷಿಕಾ ಅವರ ಆರೈಕೆಯಲ್ಲಿದ್ದಾರೆ.

    ಈಗಾಗಲೇ ದಸರಾಗೆ ಅರ್ಜುನ ಮತ್ತು ತಂಡ ಅರಮನೆಗೆ ಬಂದಿದ್ದು, ಅವುಗಳಿಗೆ ಪೌಷ್ಠಿಕ ಆಹಾರ ನೀಡುವ ಮೂಲಕ ಆರೈಕೆ ಮಾಡಲಾಗುತ್ತಿದೆ. ಪ್ರತಿದಿನ ಆನೆಗಳಿಗೆ ರಸ್ತೆಗಳಲ್ಲಿ ತಾಲೀಮು ನಡೆಯುತ್ತಿದೆ. ತೂಕವನ್ನು ಕೂಡ ಅಳತೆ ಮಾಡಲಾಗಿದೆ. ಇತ್ತೀಚೆಗಷ್ಟೆ ಅರ್ಜುನ ಮತ್ತು ತಂಡದ ಆನೆಗಳು ಅರಮನೆ ಮುಂದೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದವು. ನಾಡಿನ ಹಬ್ಬವಾದ ದಸರಾಗೆ ಸಕಲ ಸಿದ್ಧತೆ ಕೂಡ ನಡೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಪತ್ನಿ, ಪುತ್ರ ಜೊತೆ ದೇವಿ ಚಾಮುಂಡೇಶ್ವರಿಗೆ ಯದುವೀರ್ ಪೂಜೆ

    ಪತ್ನಿ, ಪುತ್ರ ಜೊತೆ ದೇವಿ ಚಾಮುಂಡೇಶ್ವರಿಗೆ ಯದುವೀರ್ ಪೂಜೆ

    ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಯದುವೀರ್ ದಂಪತಿ ಕುಟುಂಬ ಸಮೇತವಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಪತ್ನಿ ತ್ರಿಷಿಕಾ ಹಾಗೂ ಪುತ್ರ ಆದ್ಯವೀರ್ ಜೊತೆಗೂಡಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದೇವಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ್ದಾರೆ. ಸಂಪ್ರದಾಯದಂತೆ ವಾಲಗ ಸಮೇತವಾಗಿ ದೇಗುಲದ ಅರ್ಚಕರು ಯದುವೀರ್ ಹಾಗೂ ಅವರ ಕುಟುಂಬದವರನ್ನು ಬರಮಾಡಿಕೊಂಡಿದ್ದಾರೆ.

    ಇನ್ನೂ ದೇವಸ್ಥಾನಕ್ಕೆ ಪೂಜೆಗೆ ಬಂದಿದ್ದ ಯದುವೀರ್ ಜೊತೆ ಸೆಲ್ಫಿಗೆ ಜನರು ಮುಗಿಬಿದ್ದರು. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಕಾರಿನಲ್ಲಿ ಕೂತಿದ್ದ ವೇಳೆ ಜನರು ಸೆಲ್ಫಿಗೆ ಯದುವೀರ್ ಪೋಸ್ ನೀಡಿದರು. ಇದನ್ನೂ ಓದಿ: ದಕ್ಷಿಣ ಕನ್ನಡದ ಈ ಹನುಮನ ಕೃಪೆಯಿಂದ ಯದುವೀರ್ -ತ್ರಿಷಿಕಾಗೆ ಪುತ್ರ ಸಂತಾನ!

  • ತಾಯಿ ಚಾಮುಂಡಿ ದೇವಿಯ ಸನ್ನಿಧಾನದಲ್ಲಿ ಆದ್ಯವೀರ್ ತೊಟ್ಟಿಲು ಶಾಸ್ತ್ರ

    ತಾಯಿ ಚಾಮುಂಡಿ ದೇವಿಯ ಸನ್ನಿಧಾನದಲ್ಲಿ ಆದ್ಯವೀರ್ ತೊಟ್ಟಿಲು ಶಾಸ್ತ್ರ

    ಮೈಸೂರು: ಮೈಸೂರಿನ ರಾಜವಂಶಸ್ಥ ಯದುವೀರ್ ದಂಪತಿ ಕೆಲ ದಿನಗಳ ಹಿಂದೆ ಪುತ್ರನೊಂದಿಗೆ ಅರಮನೆಗೆ ಆಗಮಿಸಿದ್ದು, ಇಂದು ಚಾಮುಂಡಿ ಬೆಟ್ಟದಲ್ಲಿ ಶಾಸ್ತ್ರೋಕ್ತವಾಗಿ ತೊಟ್ಟಿಲು ಪೂಜೆ ನೆರವೇರಿದೆ.

    ಪುತ್ರನ ಜನನದ ನಂತರ ಯದುವೀರ್ ದಂಪತಿ ಚಾಮುಂಡಿ ದೇವಿಯ ದರ್ಶನ ಪಡೆದಿದ್ದು, ಕುಟುಂಬ ಸಮೇತ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಮಗನ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಾಲಯದ ಆವರಣದಲ್ಲಿ ಸಂಪಿಗೆ ಮರಕ್ಕೆ ಗಂಧದ ತೊಟ್ಟಿಲು ಕಟ್ಟಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದರು.

    ಫೆ.25ರಂದು ಬೆಂಗಳೂರು ಅರಮನೆಯಲ್ಲಿ ಯದುವೀರ್ ಪುತ್ರನಿಗೆ ನಾಮಕರಣ ಕಾರ್ಯಕ್ರಮ ನೆರವೇರಿತ್ತು. ಆದ್ಯವೀರ್ ನರಸಿಂಹರಾಜ ಒಡೆಯರ್ ಎಂದು ಮಗುವಿಗೆ ನಾಮಕರಣ ಮಾಡಲಾಗಿತ್ತು. ನಂತರ ಮೈಸೂರು ಅರಮನೆಗೆ ಬಂದ ದಂಪತಿಗೆ ಅರಮನೆಯಲ್ಲಿದ್ದ ಮುತ್ತೈದೆಯರು ಆರತಿ ಬೆಳಗಿ ಸ್ವಾಗತ ಕೋರಿದ್ದರು. ಮಗನಿಗೆ ಆದ್ಯವೀರ್ ಎಂದು ನಾಮಕರಣ ಮಾಡಲು ಕಾರಣ ಕೇಳಿದಾಗ ಯದುವೀರ್ ಅವರು, ಆದ್ಯಾ ಎಂದರೆ ದುರ್ಗಿ, ಚಾಮುಂಡಿ ಎಂದರ್ಥ. ಮಗುವಿನ ಒಳಿತಿಗಾಗಿ ಆ ಹೆಸರು ಇಡಲಾಗಿದೆ ಎಂದು ತಿಳಿಸಿದ್ದರು.

    ಯದುವೀರ್ ದಂಪತಿ ಶೀಘ್ರದಲ್ಲೇ ಪುತ್ರನ ಜೊತೆ ದೇವಾಲಯಗಳಿಗೆ ಪ್ರವಾಸ ಮಾಡಲಿದ್ದಾರೆ.

     

  • ನಾಮಕರಣ ಮುಗಿಸಿ ಬಂದ ಯದುವೀರ್ ದಂಪತಿ, ಆದ್ಯವೀರ್ ಗೆ ಮೈಸೂರು ಅರಮನೆಯಲ್ಲಿ ಅದ್ಧೂರಿ ಸ್ವಾಗತ!

    ನಾಮಕರಣ ಮುಗಿಸಿ ಬಂದ ಯದುವೀರ್ ದಂಪತಿ, ಆದ್ಯವೀರ್ ಗೆ ಮೈಸೂರು ಅರಮನೆಯಲ್ಲಿ ಅದ್ಧೂರಿ ಸ್ವಾಗತ!

    ಮೈಸೂರು: ಪುತ್ರ ಆದ್ಯವೀರ್ ಜೊತೆ ಮೈಸೂರು ಅರಮನೆಗೆ ಯದುವೀರ್ ದಂಪತಿ ಆಗಮಿಸಿದ್ದು, ತ್ರಿಷಿಕಾ ಹಾಗೂ ಯದುವೀರ್ ಅವರಿಗೆ ಆರತಿ ಬೆಳಗಿ ಸ್ವಾಗತ ಮಾಡಲಾಗಿದೆ.

    ಕಳೆದ ವಾರವಷ್ಟೆ ಬೆಂಗಳೂರು ಅರಮನೆಯಲ್ಲಿ ಯದುವೀರ್ ಪುತ್ರನಿಗೆ ನಾಮಕರಣ ಕಾರ್ಯಕ್ರಮ ನೆರವೇರಿತ್ತು. ಆದ್ಯವೀರ್ ನರಸಿಂಹರಾಜ ಒಡೆಯರ್ ಎಂದು ಮಗುವಿಗೆ ನಾಮಕರಣ ಮಾಡಲಾಗಿತ್ತು. ನಂತರ ಮೈಸೂರು ಅರಮನೆಗೆ ಬಂದ ದಂಪತಿಗೆ ಅರಮನೆಯಲ್ಲಿದ್ದ ಮುತ್ತೈದೆಯರು ಆರತಿ ಬೆಳಗಿ ಸ್ವಾಗತ ಕೋರಿದ್ದಾರೆ.

    ಯದುವೀರ್ ಕುಟುಂಬ ನಾಮಕರಣ ಕಾರ್ಯಕ್ರಮ ಮುಗಿಸಿ ಮೈಸೂರು ಅರಮನೆಗೆ ಬಂದಿದ್ದು, ಇದೀಗ ಮೈಸೂರು ಅರಮನೆಯಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆ. ಆದ್ಯವೀರ್ ನನ್ನು ನೋಡಿ ಅರಮನೆ ಸಿಬ್ಬಂದಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೈಸೂರು ಯದುವಂಶದ ಯುವರಾಜನಿಗೆ ನಾಮಕರಣ

    ಆದ್ಯವೀರ್ ತುಂಬಾ ಚೆನ್ನಾಗಿದ್ದಾನೆ. ನಾಮಕರಣ ಮುಗಿಸಿ ಮೈಸೂರಿಗೆ ಆಗಮಿಸಿದ್ದೇವೆ. ಬೆಂಗಳೂರಿನಲ್ಲಿ ನಾಮಕರಣ ಮಾಡಿದ್ದು ನಮ್ಮ ಅನುಕೂಲಕ್ಕಾಗಿ ಅಷ್ಟೇ. ಅದನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಮೈಸೂರಿನಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.

    ಶೀಘ್ರದಲ್ಲೇ ಚಾಮುಂಡಿ ಬೆಟ್ಟಕ್ಕೆ ಹೋಗಲಿದ್ದೇವೆ. ಆದ್ಯಾ ಎಂದರೆ ದುರ್ಗಿ, ಚಾಮುಂಡಿ ಎಂದರ್ಥ. ಮಗುವಿನ ಒಳಿತಿಗಾಗಿ ಆ ಹೆಸರು ಇಡಲಾಗಿದೆ. ಮಗು ಆದ್ಯವೀರ್ ಚೆನ್ನಾಗಿದ್ದಾನೆ. ಇಂದು ಬೆಂಗಳೂರಿನಿಂದ ಮೈಸೂರಿಗೆ ಕರೆತಂದಿದ್ದೇವೆ. ಮುಂದಿನ ಕಾರ್ಯಕ್ರಮಗಳೆಲ್ಲ ಅಮ್ಮನ ಸೂಚನೆಯಂತೆ ನಡೆಯಲಿದೆ ಎಂದು ಯದುವೀರ್ ತಿಳಿಸಿದ್ದಾರೆ.

    ಯದುವೀರ್ ದಂಪತಿ ಶೀಘ್ರದಲ್ಲೇ ಪುತ್ರನ ಜೊತೆ ದೇವಾಲಯಗಳಿಗೆ ಪ್ರವಾಸ ಮಾಡಲಿದ್ದಾರೆ.

  • ದಕ್ಷಿಣ ಕನ್ನಡದ ಈ ಹನುಮನ ಕೃಪೆಯಿಂದ ಯದುವೀರ್ -ತ್ರಿಷಿಕಾಗೆ ಪುತ್ರ ಸಂತಾನ!

    ದಕ್ಷಿಣ ಕನ್ನಡದ ಈ ಹನುಮನ ಕೃಪೆಯಿಂದ ಯದುವೀರ್ -ತ್ರಿಷಿಕಾಗೆ ಪುತ್ರ ಸಂತಾನ!

    ಮಂಗಳೂರು: ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ದಂಪತಿಗೆ ಗಂಡು ಮಗು ಜನಿಸಿರುವ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಆದರೆ ಸಂಭ್ರಮ ಮನೆ ಮಾಡಲು ಹನುಮಂತನ ಕೃಪೆ ಕಾರಣ ಎನ್ನುವ ಮಾತುಗಳು ಈಗ ಕೇಳಿ ಬಂದಿವೆ.

    ಹೌದು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಈಶ್ವರಮಂಗಲದಲ್ಲಿರುವ ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿರುವ ಹನುಮಂತ ಕೃಪೆಯಿಂದ ಗಂಡು ಮಗು ಜನಿಸಿದೆ ಎನ್ನುವ ಮಾತನ್ನು ಆ ಕ್ಷೇತ್ರವನ್ನು ನಂಬುತ್ತಿರುವ ಭಕ್ತರು ಹೇಳಿದ್ದಾರೆ.

    ಆಂಜನೇಯನ ಪರಮ ಭಕ್ತರಾಗಿರುವ ಯದುವೀರ್ ಅವರು ಕಳೆದ ತಿಂಗಳು ಈ ಕ್ಷೇತ್ರಕ್ಕೆ ಆಗಮಿಸಿ ವಿಶೇಷ ಪೂಜೆ ಮಾಡಿಸಿದ್ದರು. ಈ ಪೂಜೆಯ ವೇಳೆ ಗಂಡು ಮಗು ಜನಿಸಬೇಕೆಂದು ಅವರು ಪ್ರಾರ್ಥನೆ ಮಾಡಿಕೊಂಡಿದ್ದರು ಎಂದು ಆಡಳಿತ ಮಂಡಳಿಯ ಸದಸ್ಯರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಈ ಹಿಂದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಈ ಕ್ಷೇತ್ರಕ್ಕೆ ಆಗಮಿಸುತ್ತಿದ್ದರು. ಆದರೆ ಯದುವೀರ್ ಒಡೆಯರ್ ನಾಲ್ಕು ಬಾರಿ ಈ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಮೊದಲು ಶ್ರೀಕಂಠದತ್ತ ಒಡೆಯರ್ ಅವರ ಪತ್ನಿ ಪ್ರಮೋದಾ ದೇವಿ ಅವರ ಜೊತೆ ಆಗಮಿಸಿದ್ದ ಯದುವೀರ್ ನಂತರ ಪತ್ನಿ ಜೊತೆ ಎರಡು ಬಾರಿ ಕ್ಷೇತ್ರಕ್ಕೆ ಆಗಮಿಸಿದ್ದರು. ಪ್ರಮೋದಾ ದೇವಿ ಅವರ ಜೊತೆ ಬಂದಾಗ ಅವರನ್ನು ಮೆರವಣಿಗೆ ಮಾಡಿ ಕರೆದುಕೊಂಡು ಬರಲಾಗಿತ್ತು. ಪತ್ನಿ ಗರ್ಭಿಣಿಯಾದ ಬಳಿಕ ಒಂದು ಬಾರಿ ಭೇಟಿ ನೀಡಿದ್ದು ವಿಶೇಷ. ಕೊನೆಯದಾಗಿ ಕಳೆದ ತಿಂಗಳು ಅವರೊಬ್ಬರೆ ಈ ಕ್ಷೇತ್ರಕ್ಕೆ ಆಗಮಿಸಿ ವಿಶೇಷ ಪೂಜೆ ಮಾಡಿಸಿ ತೆರಳಿದ್ದರು.

    ಕ್ಷೇತ್ರಕ್ಕೆ ಆಗಮಿಸುವ ಮೊದಲೇ ಆಡಳಿತ ಮಂಡಳಿಯವರ ಜೊತೆ ವಿಶೇಷ ಪೂಜೆ ನಡೆಸಲು ಬರುತ್ತಿದ್ದೇನೆ ಎಂದು ಯದುವೀರ್ ತಿಳಿಸಿದ್ದರು. ಅದೇ ರೀತಿಯಾಗಿ ಪೂಜೆಯ ಪ್ರಾರ್ಥನೆ ಸಲ್ಲಿಸುವ ವೇಳೆ ಆರ್ಚಕರ ಜೊತೆ ತಮ್ಮ ಗಂಡು ಮಗುವಿನ ಬೇಡಿಕೆಯನ್ನು ಅವರು ಇಟ್ಟಿದ್ದರು. ಇದನ್ನೂ ಓದಿ: ಮೈಸೂರು ರಾಜರಿಗೆ ಪುತ್ರ ಸಂತಾನ: ಅಲಮೇಲಮ್ಮ ಶಾಪ ವಿಮೋಚನೆ ಆಯ್ತಾ? ಶಾಪ ನೀಡಿದ್ದು ಯಾಕೆ?

     

     

  • 6 ದಶಕಗಳ ಬಳಿಕ ಮೈಸೂರು ಸಂಸ್ಥಾನದ ಯದುವಂಶಕ್ಕೆ ಪುತ್ರ ಸಂತಾನ

    6 ದಶಕಗಳ ಬಳಿಕ ಮೈಸೂರು ಸಂಸ್ಥಾನದ ಯದುವಂಶಕ್ಕೆ ಪುತ್ರ ಸಂತಾನ

    ಮೈಸೂರು/ಬೆಂಗಳೂರು: ಆರು ದಶಕಗಳ ಬಳಿಕ ಮೈಸೂರು ಸಂಸ್ಥಾನದ ಯದುವಂಶಕ್ಕೆ ಪುತ್ರ ಸಂತಾನ ಪ್ರಾಪ್ತಿಯಾಗಿದೆ. ರಾಣಿ ತ್ರಿಷಿಕಾ ಕುಮಾರಿಗೆ ಗಂಡು ಮಗುವಿನ ಜನನವಾಗಿದ್ದು, ರಾಜಮಾತೆ ಪ್ರಮೋದಾದೇವಿ ಮತ್ತು ರಾಜ ಯದುವೀರ್ ಮುಖದಲ್ಲಿ ಮಂದಹಾಸ ಮೂಡಿದೆ.

    ಬೆಂಗಳೂರಿನ ಇಂದಿರಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ರಾಣಿ ತ್ರಿಷಿಕಾ ಕುಮಾರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೆರಿಗೆ ನೋವಿನ ಹಿನ್ನಲೆಯಲ್ಲಿ ತ್ರಿಷಿಕಾರನ್ನು ಖಾಸಗಿ ಆಸ್ಪತ್ರೆಯಲ್ಲಿ ಕರೆತರಲಾಗಿತ್ತು. ಬುಧವಾರ ರಾತ್ರಿ 9.50 ಕ್ಕೆ ತ್ರಿಷಿಕಾ ಗಂಡು ಮಗುವಿಗೆ ಜನ್ಮ ನೀಡಿದರು. ಮಿಥುನ ರಾಶಿ ಪುನರ್ವಸು ನಕ್ಷತ್ರದಲ್ಲಿ ಗಂಡು ಮಗು ಜನನವಾಗಿದ್ದು, ಜ್ಯೋತಿಷ್ಯದ ಪ್ರಕಾರ ಶ್ರೀರಾಮನು ಇದೇ ನಕ್ಷತ್ರದಲ್ಲಿ ಹುಟ್ಟಿದ್ದನು.

    ತ್ರಿಷಿಕಾ ಜೊತೆಯಲ್ಲೇ ಇರುವ ಯದುವೀರ್, ರಾಜಮಾತೆ ಪ್ರಮೋದಾದೇವಿ ಮತ್ತು ತ್ರಿಷಿಕಾ ತಾಯಿ ಯೋಗಕ್ಷೆಮ ನೋಡಿಕೊಳ್ಳುತ್ತಿದ್ದಾರೆ. ಯುವರಾಜನ ಆಗಮನ ಹಿನ್ನೆಲೆಯಲ್ಲಿ ಇಂದು ತಾಯಿ ಚಾಮುಂಡೇಶ್ವರಿಗೆ ಒಡೆಯರ್ ವಂಶಸ್ಥರು ಪೂಜೆ ಸಲ್ಲಿಸುವ ಸಾಧ್ಯತೆ ಇದೆ. 1953ರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜನಿಸಿದ ನಂತರ ಮೈಸೂರು ರಾಜಮನೆತನದಲ್ಲಿ ಗಂಡು ಸಂತಾನ ಪ್ರಾಪ್ತಿಯಾಗಿರಲಿಲ್ಲ.

    ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ದಂಪತಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಯದುವೀರ್ ರನ್ನು ರಾಜಮನೆತನದ ಉತ್ತರಾಧಿಕಾರಿಯನ್ನಾಗಿ ಪ್ರಮೋದಾದೇವಿ ಒಡೆಯರ್ ದತ್ತು ಪಡೆದಿದ್ದರು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜನಿಸಿದ್ದ ಸಂದರ್ಭದಲ್ಲಿ ಇಡೀ ಮೈಸೂರು ನಗರಕ್ಕೆ ಎತ್ತಿನ ಗಾಡಿಗಳಲ್ಲಿ ಸಿಹಿ ತಿಂಡಿಯನ್ನು ಕೊಂಡೊಯ್ದು ಜನರಿಗೆ ಹಂಚಲಾಗಿತ್ತು.

  • ಸಾಮಾನ್ಯ ಜನರಂತೆ ರೈಲಲ್ಲಿ ಪ್ರಯಾಣಿಸಿದ ಮೈಸೂರಿನ ರಾಜ ರಾಣಿ!

    ಸಾಮಾನ್ಯ ಜನರಂತೆ ರೈಲಲ್ಲಿ ಪ್ರಯಾಣಿಸಿದ ಮೈಸೂರಿನ ರಾಜ ರಾಣಿ!

    ಮೈಸೂರು: ಯದುವಂಶದ ಮಹಾರಾಜ ಮತ್ತು ಮಹಾರಾಣಿ ಇವತ್ತು ರೈಲಿನಲ್ಲಿ ಸಾಮಾನ್ಯರಂತೆ ಪ್ರಯಾಣ ಮಾಡಿದರು. ತುಂಬು ಗರ್ಭಿಣಿಯಾಗಿರುವ ಮಹಾರಾಣಿ ತ್ರಿಷಿಕಾ ಕುಮಾರಿ ಸಿಂಗ್ ಇಷ್ಟು ದಿನ ತವರು ಮನೆಯಲ್ಲಿದ್ದರು. ದಸರಾ ಪ್ರಯುಕ್ತ ಇವತ್ತು ಬೆಂಗಳೂರಿನಿಂದ ಮೈಸೂರಿಗೆ ಶತಾಬ್ದಿ ರೈಲಿನಲ್ಲಿ ಆಗಮಿಸಿದ್ದಾರೆ.

    ಯದುವೀರ್ ಕುಟುಂಬಸ್ಥರೊಂದಿಗೆ ತ್ರಿಷಿಕಾ ಕುಮಾರಿ ಅವರು ಇಂದು ನಗರಕ್ಕೆ ಆಗಮಿಸಿದರು. ತುಂಬು ಗರ್ಭಿಣಿಯಾಗಿರುವ ತ್ರಿಷಿಕಾ ಅವರನ್ನು ಕರೆತರಲು ಯದುವೀರ್ ಬೆಂಗಳೂರಿಗೆ ತೆರಳಿದ್ದರು. ಬೆಂಗಳೂರು ಮೈಸೂರು ರಸ್ತೆಯಲ್ಲಿ ಕಾರಿನ ಪ್ರಯಾಣ ಸುರಕ್ಷಿತವಲ್ಲ ಎಂದು ರೈಲಿನಲ್ಲಿ ಸಾಮಾನ್ಯರಂತೆ ಎಸಿ ಬೋಗಿಯಲ್ಲಿ ಎಲ್ಲರೊಂದಿಗೆ ಕುಳಿತು ಪ್ರಯಾಣಿಸಿದ್ದಾರೆ.

    ಇನ್ನೂ ರೈಲಿನಲ್ಲಿ ಮೈಸೂರಿನಮ ಮಹಾರಾಜ ಮತ್ತು ಮಹಾರಾಣಿಯನ್ನು ಕಂಡ ಸಹ ಪ್ರಯಾಣಿಕರು ಆಶ್ಚರ್ಯದಿಂದ ನೋಡಿದ್ದಾರೆ. ರೈಲಿನಲ್ಲಿ ಮೈಸೂರು ನಗರಕ್ಕೆ ಬಂದ ತ್ರಿಷಿಕಾ ವಿಶ್ವಪ್ರಸಿದ್ಧ ದಸರಾದಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ನಾಡಹಬ್ಬ ದಸರಾಗೆ ಭರ್ಜರಿ ತಯಾರಿ ನಡೆಸಲಾಗುತ್ತಿದೆ.

  • ಮೈಸೂರು ರಾಜಕುಟುಂಬಕ್ಕೆ ಶೀಘ್ರವೇ ಸಂತಾನ ಭಾಗ್ಯ – ತ್ರಿಷಿಕಾ ಇದೀಗ ಗರ್ಭವತಿ

    ಮೈಸೂರು ರಾಜಕುಟುಂಬಕ್ಕೆ ಶೀಘ್ರವೇ ಸಂತಾನ ಭಾಗ್ಯ – ತ್ರಿಷಿಕಾ ಇದೀಗ ಗರ್ಭವತಿ

    ಮೈಸೂರು: ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪತ್ನಿ ತ್ರಿಷಿಕಾ ಗರ್ಭಾವತಿಯಾಗಿದ್ದು, ರಾಜವಂಶಸ್ಥರಲ್ಲಿ ಸಂತಸ ಮೂಡಿಸಿದೆ.

    ತ್ರಿಷಿಕಾ ಇದೀಗ 4 ತಿಂಗಳ ಗರ್ಭಿಣಿಯಾಗಿದ್ದು ದಸರೆ ವೇಳೆಗೆ ಮಗು ಜನನವಾಗೋ ನಿರೀಕ್ಷೆಯಿದೆ. ಸೂತಕದ ಹಿನ್ನೆಲೆಯಲ್ಲಿ ಈ ಬಾರಿ ದಸರಾ ನಡೆಯುತ್ತಾ? ನಡೆಯಲ್ವಾ? ಎಂಬ ಪ್ರಶ್ನೆ ಕೂಡ ಮೂಡಿತ್ತು. ಆದ್ರೆ ರಾಜ ಕುಟುಂಬಕ್ಕೆ ಸೂತಕ ಅನ್ವಯಿಸದ ಕಾರಣ ಈ ಬಾರಿ ಎಂದಿನಂತೆ ದಸರಾ ನಡೆಯಲಿದೆ ಎಂದು ಅರಮನೆ ಜ್ಯೋತಿಷಿಗಳು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಶ್ರೀರಂಗಪಟ್ಟಣದ ರಾಜ ಶ್ರೀರಂಗರಾಯನ ಪತ್ನಿ ಅಲಮೇಲಮ್ಮ ಶಾಪದಿಂದಾಗಿ ಒಡೆಯರ್ ವಂಶದ ರಾಜರಿಗೆ ಮಕ್ಕಳಾಗುವುದಿಲ್ಲ ಎಂದು ಜಾನಪದ ಕಥೆಯಲ್ಲಿ ಹೇಳಲಾಗುತ್ತದೆ. ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದಿರಲಿ ಎಂದು ಅಲಮೇಲಮ್ಮ ಶಾಪ ನೀಡಿದ್ದರು ಎಂಬ ನಂಬಿಕೆಯಿದೆ. ಇದೀಗ ತ್ರಿಷಿಕಾ ಗರ್ಭಿಣಿಯಾಗಿದ್ದು ಮಕ್ಕಳ ಭಾಗ್ಯ ಪಡೆಯಂತಾಗಿದೆ.

    ಯದುವೀರ್ ಅವರು ರಾಣಿ ಪ್ರಮೋದಾದೇವಿ ಒಡೆಯರ್ ಅವರ ದತ್ತು ಪುತ್ರ.