Tag: Trisha

  • ಕಾಂಗ್ರೆಸ್ ಸೇರಲಿದ್ದಾರೆ ಖ್ಯಾತ ನಟಿ ತ್ರಿಷಾ: ಕುತೂಹಲ ಮೂಡಿಸಿದ ರಾಜಕೀಯ ನಡೆ

    ಕಾಂಗ್ರೆಸ್ ಸೇರಲಿದ್ದಾರೆ ಖ್ಯಾತ ನಟಿ ತ್ರಿಷಾ: ಕುತೂಹಲ ಮೂಡಿಸಿದ ರಾಜಕೀಯ ನಡೆ

    ಪುನೀತ್ ರಾಜ್ ಕುಮಾರ್ ನಟನೆಯ ಪವರ್ ಸೇರಿದಂತೆ ನಾನಾ ಭಾಷೆಯ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟಿ ತ್ರಿಷಾ ರಾಜಕೀಯಕ್ಕೆ ಬರಲಿದ್ದಾರೆ ಎನ್ನುವ ಸುದ್ದಿ ತಮಿಳು ನಾಡಿನಲ್ಲಿ ಭಾರೀ ಸಂಚಲನ ಮೂಡಿಸಿದೆ. ಹೆಸರಾಂತ ಈ ನಟಿಯ ನಡೆಯ ಬಗ್ಗೆ ಚರ್ಚೆ ಕೂಡ ಶುರುವಾಗಿದೆ. ಮುಂದಿನ ದಿನಗಳಲ್ಲಿ ತ್ರಿಷಾ ರಾಜಕಾರಣಕ್ಕೆ ಬರಲು ಒಲವು ತೋರಿದ್ದು, ಶೀಘ್ರದಲ್ಲೇ ಅವರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎನ್ನಲಾಗುತ್ತಿದೆ.

    ತಮಿಳು ಸಿನಿಮಾ ರಂಗದ ನಟ ನಟಿಯರು ಸಿನಿಮಾ ರಂಗಕ್ಕೆ ಬರುವುದು ಹೊಸದೇನೂ ಅಲ್ಲ.  ತಮಿಳು ನಾಡಿನಲ್ಲಿ ಅತೀ ಹೆಚ್ಚು ಬಾರಿ ಮುಖ್ಯಮಂತ್ರಿಗಳು ಆಗಿದ್ದು ಸಿನಿಮಾ ರಂಗದವರೇ ಎನ್ನುವುದು ಇತಿಹಾಸ. ಹಾಗಾಗಿ ತ್ರಿಷಾ ಅವರ ನಡೆ ಅಚ್ಚರಿಗೂ ಕಾರಣವಾಗಿದೆ. ಈಗಾಗಲೇ ಅವರು ಕಾಂಗ್ರೆಸ್ ಪಕ್ಷವನ್ನು ಸಂಪರ್ಕಿಸಿದ್ದು, ಮುಂದಿನ ಚುನಾವಣೆಯಲ್ಲಿ ಇದೇ ಪಕ್ಷದಿಂದಲೇ ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಕೊನೆಗೂ ಶಿವಣ್ಣ, ಅನುಶ್ರೀ ಭೇಟಿಯಾಗಿ ಆಸೆ ಈಡೇರಿಸಿಕೊಂಡ ಕಾಫಿನಾಡು ಚಂದು

    ತಮಿಳು ನಾಡಿನಲ್ಲಿ ಡಿಎಂಕೆ, ಅಣ್ಣಾಡಿಎಂಕೆ ಅಂತ ಪ್ರಬಲ ಪಕ್ಷಗಳು ಇದ್ದರೂ, ಇದೇ ಪಕ್ಷದ ಮೂಲಕ ಜಯಲಲಿತಾ ಸೇರಿದಂತೆ ಹಲವು ಸಿನಿಮಾ ನಟ ನಟಿಯರು ಗುರುತಿಸಿಕೊಂಡಿದ್ದರೂ, ತ್ರಿಷಾ ಮಾತ್ರ ನ್ಯಾಷನಲ್ ಪಾರ್ಟಿ ಸೇರುತ್ತಿರುವ ಮೂಲಕ ವಿಭಿನ್ನ ಹಾದಿ ಕಂಡುಕೊಂಡಿದ್ದಾರೆ. ಇಂಥದ್ದೊಂದು ನಿರ್ಧಾರ ತಗೆದುಕೊಳ್ಳಲು ಕಾರಣವನ್ನು ಅವರೇ ಮುಂದಿನ ದಿನಗಳಲ್ಲಿ ಹೇಳಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪೊನ್ನಿಯನ್ ಸೆಲ್ವನ್ ವಿವಾದ : ಮಣಿರತ್ನಂ ಮತ್ತು ವಿಕ್ರಮ್ ಗೆ ನೋಟಿಸ್

    ಪೊನ್ನಿಯನ್ ಸೆಲ್ವನ್ ವಿವಾದ : ಮಣಿರತ್ನಂ ಮತ್ತು ವಿಕ್ರಮ್ ಗೆ ನೋಟಿಸ್

    ಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ನಿರೀಕ್ಷಿತ ಸಿನಿಮಾ ಪೊನ್ನಿಯನ್ ಸೆಲ್ವನ್ ಇದೀಗ ವಿವಾದಕ್ಕೀಡಾಗಿದೆ. ಟೀಸರ್ ಬಗ್ಗೆ ಅಪಾರ ಮೆಚ್ಚುಗೆ ಬಂದ ಹಿನ್ನೆಲೆಯಲ್ಲಿ ಸಂಭ್ರಮಿಸಬೇಕಾಗಿದ್ದ ಚಿತ್ರತಂಡ ಇದೀಗ ಆತಂಕಕ್ಕೊಳಗಾಗಿದೆ. ಚೋಳರ ಇತಿಹಾಸವನ್ನು ಹೇಳಲು ಹೊರಟಿರುವ ನಿರ್ದೇಶಕರು, ಆ ಇತಿಹಾಸವನ್ನು ತಿರುಚಿದ್ದಾರೆ ಎಂದೆ ಸೆಲ್ವನ್ ಅನ್ನುವವರು ಕೋರ್ಟ್ ಮೆಟ್ಟಿಲು ಏರಿದ್ದಾರೆ. ಹಾಗಾಗಿ ನಿರ್ದೇಶಕ ಮಣಿರತ್ನಂ ಮತ್ತು ವಿಕ್ರಮ್ ಗೆ ಕೋರ್ಟ್ ನೋಟಿಸ್ ಜಾರಿ ಮಾಡಿದೆ.

    ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ಚೋಳ ಸಾಮ್ರಾಜ್ಯದ ಉಗಮ ಮತ್ತು ಅದು ಬೆಳೆದು ಬಂದ ಇತಿಹಾಸವನ್ನು ಹೇಳಲು ಹೊರಟಿದ್ದಾರೆ ಮಣಿರತ್ನಂ. ಆದರೆ, ನಿಜ ಇತಿಹಾಸವನ್ನು ಅವರು ಹೇಳುತ್ತಿಲ್ಲ ಎಂದು ಉದಾಹರಣೆ ಸಮೇತ, ಕೋರ್ಟ್ ಮೆಟ್ಟಿಲು ಏರಿದ್ದಾರೆ ಸೆಲ್ವನ್.  ಈ ಸಿನಿಮಾದಲ್ಲಿ ನಟ ವಿಕ್ರಮ್ ಅವರು, ಆದಿತ್ಯ ಕರಿಕಾಲನ್ ಪಾತ್ರದಲ್ಲಿ ನಟಿಸಿದ್ದು, ರಿಲೀಸ್ ಆದ ಪೋಸ್ಟರ್ ನಲ್ಲಿ ಅವರ ಹಣೆ ಮೇಲೆ ತಿಲಕವಿದೆ. ಟೀಸರ್ ನಲ್ಲಿ ತಿಲಕವಿಲ್ಲ ಎಂದು. ಹೀಗಾಗಿ ಇತಿಹಾಸವನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ:ಬ್ರೇಕಪ್ ನಂತರ ಸ್ಟಾರ್ ನಟಿ ಸಹೋದರನ ಜೊತೆ ಇಲಿಯಾನಾ ಡೇಟಿಂಗ್

    ಕೋರ್ಟ್ ನೋಟಿಸ್ ಜಾರಿಯಾಗಿದ್ದರೂ, ಈ ಕುರಿತು ಮಣಿರತ್ನಂ ಆಗಲಿ, ವಿಕ್ರಮ್ ಆಗಲಿ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಅಲ್ಲದೇ, ಸಿನಿಮಾ ರಿಲೀಸ್ ಗೂ ತಮಗೆ ಆ ಸಿನಿಮಾವನ್ನು ತೋರಿಸಬೇಕು ಎಂದು ಸೆಲ್ವನ್ ದೂರಿನಲ್ಲಿ ಬರೆದ್ದಾರೆ. ಆದರೆ, ಈ ಕುರಿತು ಮಣಿರತ್ನಂ ಅವರು ಯಾವುದೇ ನಿರ್ಧಾರ ತಗೆದುಕೊಂಡಿಲ್ಲ. ಐದು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಐಶ್ವರ್ಯಾ ರೈ, ಕಾರ್ತಿ, ತ್ರಿಶಾ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿ ಇದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮೆಗಾಸ್ಟಾರ್ ಚಿರಂಜೀವಿ ನಟನೆಯ ಚಿತ್ರದಿಂದ ಹೊರ ಬಂದ ತ್ರಿಶಾ

    ಮೆಗಾಸ್ಟಾರ್ ಚಿರಂಜೀವಿ ನಟನೆಯ ಚಿತ್ರದಿಂದ ಹೊರ ಬಂದ ತ್ರಿಶಾ

    ನವದೆಹಲಿ: ಮೆಗಾಸ್ಟಾರ್ ಚಿರಂಜೀವಿ ಅವರ ಫಿಲ್ಮ್ ಅಂದರೆ ಅಭಿಮಾನಿಗಳಿಗೆ ಸ್ವಲ್ಪ ಕ್ರೇಜ್ ಜಾಸ್ತಿನೇ ಇರುತ್ತದೆ. ಹಾಗೆಯೇ ಇದೀಗ ಅವರು 152ನೇ ಸಿನಿಮಾ ಮಾಡ್ತಿದ್ದಾರೆ ಅಂದ್ರೆ ಅಭಿಮಾನಿಗಳಲ್ಲಿ ನಿರೀಕ್ಷೆ, ಕುತೂಹಲಗಳು ತುಸು ಜಾಸ್ತಿಯೇ ಇರುತ್ತದೆ. ಆದರೆ ಈ ಮಧ್ಯೆ ಚಿರು ಹಾಗೂ ಎವರ್ ಗ್ರೀನ್ ಚೆಲುವೆ ತ್ರಿಶಾ ಅಭಿಮಾನಿಗಳಿಗೆ ಬೇಸರದ ಸಂಗತಿಯೊಂದು ಹೊರಬಿದ್ದಿದೆ.

    ಹೌದು. ಚಿರು ಅಭಿನಯದ ನೂತನ ಚಿತ್ರ ‘ಆಚಾರ್ಯ’ದಲ್ಲಿ ನಾನು ನಟಿಸಿಲ್ಲ ಎಂದು ತ್ರಿಶಾ ಹೊರಬಂದಿದ್ದಾರೆ. ಈ ವಿಚಾರ ಇಬ್ಬರ ಅಭಿಮಾನಿಗಳಲ್ಲೂ ನಿರಾಶೆ ಮೂಡಿಸಿದೆ.

    https://twitter.com/trishtrashers/status/1238438787488743426

    ಈ ಬಗ್ಗೆ ಟ್ವಿಟ್ ಮಾಡಿರುವ ತ್ರಿಶಾ, ಕೆಲವೊಂದು ವಿಚಾರಗಳು ನಾವು ಮೊದಲೇ ಚರ್ಚಿಸಿದಂತೆ ಆಗಲ್ಲ. ಸಣ್ಣ ಭಿನ್ನಾಭಿಪ್ರಾಯಗಳಿಂದ ಚಿರಂಜೀವಿ ಸರ್ ಸಿನಿಮಾದಿಂದ ಹೊರಬರಲು ನಿರ್ಧರಿಸಿದ್ದೇನೆ. ಆದರೆ ಆದಷ್ಟು ಬೇಗ ನೂತನ ಪ್ರಾಜೆಕ್ಟ್ ನೊಂದಿಗೆ ಮತ್ತೆ ನಿಮ್ಮ ಮುಂದೆ ಬರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಚಿತ್ರ ತಂಡಕ್ಕೆ ಶುಭಾಶಯ ಕೋರಿದ್ದಾರೆ.

    ಈ ಹಿಂದೆ 2006ರಲ್ಲಿ ತೆರೆಕಂಡಿದ್ದ ಸ್ಟ್ಯಾಲಿನ್ ಚಿತ್ರದಲ್ಲಿ ತ್ರಿಶಾ ಹಾಗೂ ಚಿರಂಜೀವಿ ತೆರೆ ಹಂಚಿಕೊಂಡಿದ್ದರು. ಈ ಹಿಟ್ ಜೋಡಿ ಮತ್ತೆ ಜೊತೆಯಾಗಿ ನಟಿಸುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ್ದು, ಸಿನಿಮಾಕ್ಕಾಗಿ ಕಾಯುತ್ತಿದ್ದರು. ಆದರೆ ಇದೀಗ ತ್ರಿಶಾ ಅವರ ಈ ಹೇಳಿಕೆಯಿಂದ ಅಭಿಮಾನಿಗಳಲ್ಲಿ ನಿರಾಸೆ ಮೂಡಿದೆ.

  • ಸಾಮಿ ಸ್ಕ್ವೇರ್ ನಿಂದ ತ್ರಿಶಾ ಔಟ್ – ಚಿಯಾನ್ ವಿಕ್ರಂಗೆ ಸಿಕ್ಕಿದ್ದು ಐಶ್ವರ್ಯ!

    ಸಾಮಿ ಸ್ಕ್ವೇರ್ ನಿಂದ ತ್ರಿಶಾ ಔಟ್ – ಚಿಯಾನ್ ವಿಕ್ರಂಗೆ ಸಿಕ್ಕಿದ್ದು ಐಶ್ವರ್ಯ!

    ಬೆಂಗಳೂರು: ‘ಸಾಮಿ ಸ್ಕ್ವೇರ್’ ಯಾವುದೋ ಹಾಲಿವುಡ್, ಬಾಲಿವುಡ್ ಸಿನಿಮಾ ಎಂದು ಕನ್ಫ್ಯೂಸ್ ಆಗಬೇಡಿ! 2003ರಲ್ಲಿ ಸಂಚಲನ ಸೃಷ್ಟಿಸಿದ್ದ ವಿಕ್ರಮ್ ನಾಯಕನಾಗಿದ್ದ ‘ಸಾಮಿ’ ಚಿತ್ರದ ಭಾಗ 2 ಈ ಚಿತ್ರ. ಕೆಟ್ಟಾ ಕೊಳಕಾಗಿ ಬೈಯುವ ಖಡಕ್ ಪೊಲೀಸ್ ಅಧಿಕಾರಿ ಆಗಿದ್ದ ವಿಕ್ರಮ್ ‘ಸಾಮಿ ಸ್ಕ್ವೇರ್’ನಲ್ಲೂ ಅದನ್ನೇ ಮುಂದುವರೆಸಿದ್ದಾರೆ. ಹಿಟ್ ಜೋಡಿ ಆಗಿ ನಾಯಕ ವಿಕ್ರಂ ಹಾಗೂ ನಿರ್ದೇಶಕ ಹರಿ ಅವರೇ ಇರಲಿದ್ದು, ‘ಆಫೀಸರ್ ಆರು ಸಾಮಿ’ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

    ಆ್ಯಕ್ಷನ್ ಚಿತ್ರದಲ್ಲಿ ವಿಕ್ರಂ ಎದುರು ರಾಷ್ಟ್ರ ಪ್ರಶಸ್ತಿ ವಿಜೇತ ನಟ ಬಾಬಿ ಸಿಂಹ ನಟಿಸಿದ್ದು, ಭಾಗ 2ರಲ್ಲಿ ಮೊದಲ ನಾಯಕ ತ್ರಿಶಾ ಔಟ್ ಆಗಿದ್ದಾರೆ. ಅವರ ಸ್ಥಾನದಲ್ಲಿ ‘ಸಾಮಿ ಸ್ಕ್ವೇರ್’ಗೆ ನಟಿ ಐಶ್ವರ್ಯ ರಾಜೇಶ್ ಆಯ್ಕೆಯಾಗಿದ್ದು, ಚಿತ್ರ ಆಗಸ್ಟ್ 31 ಅಥವಾ ಸೆಪ್ಟೆಂಬರ್ 13ಕ್ಕೆ ರಿಲೀಸ್ ಆಗಲಿದೆ ಎನ್ನಲಾಗಿದೆ.

    ಟೀಸರ್ ಬಿಡುಗಡೆಯಾದ ತಿಂಗಳಲ್ಲೇ 11 ಮಿಲಿಯನ್ ವ್ಯೂಗಳನ್ನು ಯುಟ್ಯೂಬ್‍ನಲ್ಲಿ ಪಡೆದಿರುವ ಚಿತ್ರ ಕುತೂಹಲ ಹುಟ್ಟಿಸಿರುವುದಂತೂ ಸುಳ್ಳಲ್ಲ. ತೆಲುಗಿನ ಖ್ಯಾತ ರಾಕ್ ಸ್ಟಾರ್ ಗಾಯಕ ದೇವಿಶ್ರೀ ಪ್ರಸಾದ್ (ಡಿಎಸ್‍ಪಿ) ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದು ಪ್ಲಸ್ ಪಾಯಿಂಟ್ ಆಗುವುದು ಖಂಡಿತ. ಚಿತ್ರದ ಇನ್ನೋರ್ವ ನಾಯಕಿಯಾಗಿ ಕೀರ್ತಿ ಸುರೇಶ್ ಆಯ್ಕೆ ಆಗಿದ್ದು, ಐಶ್ವರ್ಯ ರಾಜೇಶ್‍ಗೆ ಸ್ಪರ್ಧೆ ಹೆಚ್ಚಿಸಿದೆ. ತನ್ನ ಪಾತ್ರದ ಬಗ್ಗೆ ಥ್ರಿಲ್ ಆಗಿರುವ ಐಶ್ವರ್ಯ ತಾನು ಪ್ರಸ್ತುತ ಪ್ರಯೋಗಾತ್ಮಕ ಪಾತ್ರಗಳಿಗೆ ಒಡ್ಡಿಕೊಂಡಿದ್ದೇನೆಂದು ಹೇಳಿಕೊಂಡಿದ್ದಾರೆ. ತೆರೆಗೆ ಬರಲಿರುವ ‘ಕಾನಾ’ ಚಿತ್ರದಲ್ಲಿ ತಾಪ್ಸಿ ಪನ್ನು ಜೊತೆ ತೆರೆ ಹಂಚಿಕೊಂಡಿರುವ ಐಶ್ವರ್ಯ ಮಹಿಳಾ ಕ್ರಿಕೆಟರ್ ಆಗಿ ನಟಿಸಿದ್ದಾರೆ. ‘ಚೆಕ್ಕಾ ಚಿವಂತವನಂ’ನಲ್ಲಿ ಕ್ಲಾಸ್ ಪಾತ್ರ ಮಾಡಿರುವ ಐಶ್ವರ್ಯ ‘ಧ್ರುವ ನಕ್ಷತ್ರಂ’ನಲ್ಲಿ ಜರ್ನಲಿಸ್ಟ್ ಆಗಿದ್ದಾರೆ.

    ‘ಸಾಮಿ’ ಮಾಡಿದ್ದ ಗಲ್ಲಾ ಪೆಟ್ಟಿಗೆ ರೆಕಾರ್ಡ್‍ಗಳನ್ನು ‘ಸಾಮಿ ಸ್ಕ್ವೇರ್’ ಚಿಂದಿ ಉಡಾಯಿಸಿ ಹೊಸ ದಾಖಲೆಗಳನ್ನು ಬರೆಯಲಿದೆ ಎಂಬುದು ತಮಿಳು ಚಿತ್ರ ಪಂಡಿತರ ಹಾಗೂ ಸಿನಿ ರಸಿಕರ ಅಂಬೋಣ!

  • ಸದ್ದಿಲ್ಲದೇ ಹಸಮಣೆ ಏರಲು ಸಿದ್ಧವಾದ ನಟಿ ತ್ರಿಷಾ!

    ಸದ್ದಿಲ್ಲದೇ ಹಸಮಣೆ ಏರಲು ಸಿದ್ಧವಾದ ನಟಿ ತ್ರಿಷಾ!

    ಬೆಂಗಳೂರು: ಭಾರತೀಯ ಚಿತ್ರರಂಗದಲ್ಲಿ ನಾಯಕಿಯರು ಸದ್ದಿಲ್ಲದೇ ಹಸಮಣೆ ಏರುತ್ತಿದ್ದಾರೆ. ಈಗ ಈ ಲಿಸ್ಟ್ ಗೆ ಟಾಲಿವುಡ್ ನಟಿ ತ್ರಿಷಾ ಕೃಷ್ಣನ್ ಕೂಡ ಸೇರಿಕೊಳ್ಳುತ್ತಿದ್ದಾರೆ.

    ಮೊನ್ನೆ ಮೊನ್ನೆಯಷ್ಟೆ ಸೋನಮ್ ಕಪೂರ್ ಮದುವೆಯಾದರು. ನಂತರ ದಿಢೀರ್ ಎಂದು ನೇಹಾ ದೂಪಿಯಾ ಕೂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟದ್ದರು. ಅದಕ್ಕೂ ಮೊದಲು ಶ್ರಿಯಾ ಸರಣ್ ಕೂಡ ಸಂಸಾರ ಜೀವನಕ್ಕೆ ಎಂಟ್ರಿ ಕೊಟ್ಟಿದ್ದರು.

    ಕಳೆದ ನಾಲ್ಕು ವರ್ಷದ ಹಿಂದೆಯೇ ತ್ರಿಷಾ ಮದುವೆಯಾಗಬೇಕಿತ್ತು. ಅದ್ಧೂರಿ ನಿಶ್ಚಿತಾರ್ಥವಾಗಿದ್ದರೂ ಕೆಲವೇ ದಿನಗಳಲ್ಲಿ ಸಂಬಂಧ ಮುರಿದುಹೋಯಿತ್ತು. ಬಳಿಕ ತೆಲುಗು ಸ್ಟಾರ್ ರಾಣಾ ದಗ್ಗುಬಾಟಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿತ್ತು. ಅದೇನೇ ಇದ್ದರೂ ಇಲ್ಲಿಯವರೆಗೆ ಸಿಂಗಲ್ ಆಗಿದ್ದ ತ್ರಿಷಾ ಇದೀಗ ಗುಪ್ತವಾಗಿ ಮದುವೆಗೆ ಸಜ್ಜಾಗುತ್ತಿದ್ದಾರೆ ಎಂಬ ಸುದ್ದಿ ಟಾಲಿವುಡ್‍ನಲ್ಲಿ ಕೇಳಿ ಬರುತ್ತಿದೆ.

    ತ್ರಿಷಾ ಮದುವೆ ವಿಚಾರವನ್ನು ಗುಟ್ಟಾಗಿ ಇಡೋದಕ್ಕೆ ಕಾರಣವೂ ಇದೆ. ಹಿಂದೊಮ್ಮೆ ಬ್ಯುಸಿನಸ್‍ಮ್ಯಾನ್ ವರುಣ್ ಜೊತೆಗಿನ ಮದುವೆ ವಿಚಾರವನ್ನೇ ಬಚ್ಚಿಡದೇ ಹೇಳಿಕೊಂಡಿದ್ದರು. ಕೆಲವೇ ತಿಂಗಳಲ್ಲಿ ಮುರಿದು ಬಿದ್ದಾಗಲೂ ಧೈರ್ಯದಿಂದ ಮಾತನಾಡಿದ್ದರು. ಆದರೆ ಈ ಬಾರಿ ಮಾತ್ರ ಮದುವೆ ವಿಚಾರದಲ್ಲಿ ಸೀಕ್ರೆಟ್ ಮೇಂಟೈನ್ ಮಾಡುತ್ತಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ತ್ರಿಷಾ ಮದುವೆಯಾಗಲಿದ್ದು, ವಿದೇಶದಲ್ಲಿ ಆಭರಣ, ಬಟ್ಟೆ ಖರೀದಿ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.

    ಮೂಲಗಳ ಪ್ರಕಾರ ಮದುವೆಯಾದ ಮೇಲೆ ತ್ರಿಷಾ ಅಭಿನಯಿಸುವುದಿಲ್ಲ. ಕೈಯಲ್ಲಿರುವ ಐದಾರು ಪ್ರಾಜೆಕ್ಟ್‍ಗಳನ್ನು ಸಹಿ ಹಾಕಿದ್ದು, ಬೇರೆ ಯಾವುದೇ ಯಾವುದೇ ಹೊಸ ಚಿತ್ರಕ್ಕೂ ಸಹಿ ಹಾಕಿಲ್ಲ.

    ತ್ರಿಷಾ ಮದುವೆಯಾಗುತ್ತಿರೋ ಹುಡುಗ ಮುಂಬೈ ಮೂಲದ ಬುಸಿನಸ್‍ಮ್ಯಾನ್ ಆಗಿದ್ದು, ಮದುವೆಯ ಬಳಿಕ ಇಬ್ಬರೂ ವಿದೇಶದಲ್ಲಿ ಸೆಟಲ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

    ಉದ್ಯಮದಲ್ಲಿ ಸದಾ ಬೇಡಿಕೆಯಲ್ಲಿದ್ದ ತ್ರಿಷಾ ಹಿಂದೊಮ್ಮೆ ವೈಯಕ್ತಿಕ ಜೀವನದಲ್ಲಿ ಎಡವಿದ್ದರು. ಈ ಬಾರಿ ಅತ್ಯಂತ ಕಾಳಜಿಯಿಂದ ವೈಯಕ್ತಿಕ ಜೀವನ ಸರಿದೂಗಿಸಿಕೊಂಡು ತಮ್ಮ ಸಿನಿಮಾ ಚಾರ್ಮ್ ಅದಕ್ಕೆ ತಟ್ಟದಂತೆ ನೋಡಿಕೊಳ್ಳುತ್ತಿದ್ದಾರೆ. ಅದೇನೇ ಇದ್ದರೂ ಶೀಘ್ರದಲ್ಲೇ ತ್ರಿಷಾ ರಿಯಲ್ ಮದುಮಗಳಾಗಿ ನಿಮ್ಮ ಮುಂದೆ ಕಾಣಿಸ್ಕೊಳ್ಳುವ ಸಮಯ ಕೂಡಿ ಬಂದಿದೆ.

  • ಈ ಗ್ರಾಮದ ಜನರಿಗೆ ಶೌಚಾಲಯ ಕಟ್ಟಿಸಿ ಮಾದರಿಯಾದ ನಟಿ ತ್ರಿಶಾ!

    ಈ ಗ್ರಾಮದ ಜನರಿಗೆ ಶೌಚಾಲಯ ಕಟ್ಟಿಸಿ ಮಾದರಿಯಾದ ನಟಿ ತ್ರಿಶಾ!

    ಕಂಚಿಪುರಂ: ಗ್ರಾಮದ ಜನರಿಗೆ ಶೌಚಾಲಯ ಕಟ್ಟಿಸಿ ಕೊಡುವ ಮೂಲಕ ದಕ್ಷಿಣ ಭಾರತದ ಫೇಮಸ್ ನಟಿ ತ್ರಿಶಾ ಇತರ ನಟ-ನಟಿಯರಿಗೆ ಮಾದರಿಯಾಗಿದ್ದಾರೆ.

    ಕಂಚಿಪುರಂ ಜಿಲ್ಲೆಯ ನೆಮಾಲಿ ಗ್ರಾಮದ ಜನರು ಶೌಚಾಲಯವಿಲ್ಲದೇ ಪರದಾಡುತ್ತಿದ್ದರು. ಹೀಗಾಗಿ ಸ್ವಚ್ಛ ಭಾರತ ಅಭಿಯಾನದ ಮೂಲಕ ನಟಿ ಸ್ವತಃ ತಾವೇ ನಿಂತು ಶೌಚಾಲಯ ಕಟ್ಟಿಸಿಕೊಟ್ಟಿದ್ದಾರೆ. ಹೀಗಾಗಿ ಆ ಭಾಗದ ಗ್ರಾಮದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ನಟಿ ಶೌಚಾಲಯ ನಿರ್ಮಾಣ ಮಾಡಲೆಂದು ಇಟ್ಟಿಗೆಗಳನ್ನು ಜೋಡಿಸಿ ಅದರ ಮಧ್ಯೆ ಸಿಮೆಂಟ್ ಹಾಕುತ್ತಿರೋ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ತಮಿಳು ನಟಿ ತ್ರಿಶಾ ಅವರು ನವೆಂಬರ್ ತಿಂಗಳಿನಿಂದ ಯುನಿಸೆಫ್ (ಯುನೈಟೆಡ್ ನೇಷನ್ಸ್ ಚಿಲ್ಡ್ರನ್ಸ್ ಫಂಡ್) ಜೊತೆ ಸೇರಿಕೊಂಡು ಈ ಕೆಲಸಗಳನ್ನು ಮಾಡುತ್ತಿದ್ದಾರೆ. ಅಲ್ಲದೇ ಅವರು ರಕ್ತಹೀನತೆ, ಬಾಲ್ಯ ವಿವಾಹ, ಬಾಲಕಾರ್ಮಿಕ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಮುಂತಾದವುಗಳ ಕುರಿತು ತಮಿಳುನಾಡು ಮತ್ತು ಕೇರಳದಲ್ಲಿ ಜಾಗೃತಿ ಮೂಡಿಸುವ ಕೆಲಸಗಳನ್ನೂ ಕೂಡ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಚಿತ್ರರಂಗದ ಸ್ಟಾರ್ ಗಳು ಮತ್ತು ಸೆಲೆಬ್ರಿಟಿಗಳು ಇಂತಹ ಕೆಲಸಗಳನ್ನು ಮಾಡುತ್ತಿರುವುದು ತುಂಬಾ ಅಪರೂಪವಾಗಿದೆ. ಹೀಗಾಗಿ ತ್ರಿಶಾ ಅವರ ಈ ಪರಿಶ್ರಮಕ್ಕೆ ಜನ ಬೆಂಬಲ ಸೂಚಿಸಿದ್ದಾರೆ.

  • ತಮಿಳು ಗಾಯಕಿಯಿಂದ ಧನುಷ್, ಹನ್ಸಿಕಾ, ರಾಣಾ, ತ್ರಿಶಾ ಖಾಸಗಿ ಫೋಟೋ ಲೀಕ್

    ತಮಿಳು ಗಾಯಕಿಯಿಂದ ಧನುಷ್, ಹನ್ಸಿಕಾ, ರಾಣಾ, ತ್ರಿಶಾ ಖಾಸಗಿ ಫೋಟೋ ಲೀಕ್

    ಚೆನ್ನೈ: ತಮಿಳು ನಟಿ ಕಮ್ ಗಾಯಕಿ ಸುಚಿತ್ರಾ ಕಾರ್ತಿಕ್ ಖಾತೆಯಿಂದ ಸಂಚಿತಾ ಶೆಟ್ಟಿ ವಿಡಿಯೋ ಮಾತ್ರವಲ್ಲ, ಕಾಲಿವುಡ್ ನಟರಾದ ಧನುಷ್, ಹನ್ಸಿಕಾ, ಆಂಡ್ರಿಯಾ ಜರ್ಮಿಯಾ, ದಗ್ಗುಬಾಟಿ ರಾಣಾ, ತ್ರಿಶಾ, ಅನಿರುದ್ಧ್ ಅವರ ಬಣ್ಣವು ಬಯಲಾಗಿದೆ.

    ಧನುಷ್‍ನಿಂದ ನಾನು ಲೈಂಗಿಕ ಕಿರುಕುಳ ಒಳಗಾಗಿದ್ದೇನೆ. ಧನುಷ್ – ಅನಿರುದ್ಧ್ ನೀವು ಅಂದುಕೊಂಡಷ್ಟು ಒಳ್ಳೆಯವರಲ್ಲ ಎನ್ನುವ ಬರಹವಿರುವ ಟ್ವೀಟ್ ಸುಚಿತ್ರಾ ಖಾತೆಯಿಂದ ಪ್ರಕಟವಾಗಿದೆ. ಅಷ್ಟೇ ಅಲ್ಲದೇ ದಗ್ಗುಬಾಟಿ ರಾಣಾ ನಟಿ ತ್ರಿಶಾಗೆ ಮುತ್ತು ನೀಡುತ್ತಿರುವ ಫೋಟೋ ಸುಚಿತ್ರಾ ಖಾತೆಯಿಂದ ಟ್ವೀಟ್ ಆಗಿದೆ.

    ಈ ಬಗ್ಗೆ ತಮಿಳು ನಟಿ ಕಮ್ ಗಾಯಕಿ ಸುಚಿತ್ರಾ ಪತಿ ಕಾರ್ತಿಕ್ ಸ್ಪಷ್ಟನೆ ನೀಡಿ, ತನ್ನ ಪತ್ನಿಯ ಟ್ವಿಟ್ಟರ್ ಅಕೌಂಟ್ ಯಾರೋ ಹ್ಯಾಕ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

    ಈಗ ಸುಚಿತ್ರಾ ಕಾರ್ತಿಕ್ ಟ್ವೀಟ್‍ಗಳು ಡಿಲೀಟ್ ಆಗಿದೆ. ಈ ಟ್ವೀಟ್‍ಗಳು ಡಿಲೀಟ್ ಆಗಿದ್ದರೂ ಸುಚಿತ್ರಾ ಖಾತೆಯಿಂದ ಪ್ರಕಟವಾದ ಟ್ವೀಟ್‍ಗಳ ಸ್ಕ್ರೀನ್ ಶಾಟ್‍ಗಳನ್ನು ಜನ ತೆಗೆದು ಶೇರ್ ಮಾಡುತ್ತಿದ್ದು ಈಗ ವೈರಲ್ ಆಗಿದೆ.

    ಇದನ್ನೂ ಓದಿ: ತಮಿಳು ಗಾಯಕಿ ರಿಲೀಸ್ ಮಾಡಿದ ಹಸಿ ಬಿಸಿ ವೀಡಿಯೋ ಸ್ಯಾಂಡಲ್‍ವುಡ್ ನಟಿಯದ್ದಾ..?

    ಇಲ್ಲಿ ಸುಚಿತ್ರಾ ಖಾತೆಯಿಂದ ಪ್ರಕಟವಾಗಿರುವ ಫೋಟೋ ಮತ್ತು ಅವರ ಟ್ವೀಟ್ ಗಳನ್ನು ನೀಡಲಾಗಿದೆ.