Tag: trisha krishnan

  • ಹನಿಮೂನ್‌ಗೆ ಫಿಕ್ಸ್‌ ಮಾಡೋದನ್ನೂ ಕಾಯ್ತಿದ್ದೀನಿ – ಮದ್ವೆ ವದಂತಿಗೆ ತೆರೆ ಎಳೆದ ನಟಿ ತ್ರಿಶಾ

    ಹನಿಮೂನ್‌ಗೆ ಫಿಕ್ಸ್‌ ಮಾಡೋದನ್ನೂ ಕಾಯ್ತಿದ್ದೀನಿ – ಮದ್ವೆ ವದಂತಿಗೆ ತೆರೆ ಎಳೆದ ನಟಿ ತ್ರಿಶಾ

    – 42ನೇ ವಯಸ್ಸಿನಲ್ಲಿ ಮದ್ವೆಯಾಗ್ತಿದ್ದಾರಾ ಖ್ಯಾತ ನಟಿ

    ಮದ್ವೆ ವಿಚಾರಕ್ಕೆ ಬಹುಭಾಷಾ ನಟಿ ತ್ರಿಶಾ (Trisha Krishnan) ಸುದ್ದಿಯಲ್ಲಿದ್ದಾರೆ. ತಮಿಳು, ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ನಟಿಯಾಗಿರುವ ತ್ರಿಷಾ ಇಳಯದಳಪತಿ ವಿಜಯ್, ಸೂರ್ಯ, ವಿಕ್ರಮ್, ಪ್ರಭಾಸ್, ಚಿರಂಜೀವಿ, ಅಜಿತ್, ಸಿಂಬು ಸೇರಿದಂತೆ ಸ್ಟಾರ್ ನಟರ ಜೊತೆ ಅಭಿನಯಿಸಿದ್ದಾರೆ. ಕನ್ನಡದಲ್ಲೂ ದಿ. ನಟ ಪುನೀತ್ ರಾಜ್‌ಕುಮಾರ್ ಅಭಿನಯದ ʻಪವರ್‌ʼ ಸಿನಿಮಾದಲ್ಲಿ ನಾಯಕಿ ಕನ್ನಡಿಗರ ಮನ ಗೆದ್ದಿದ್ದರು.

    ಸೋಷಿಯಲ್‌ ಮೀಡಿಯಾದಲ್ಲಿ (Social Media) ನಟಿ 42ನೇ ವಯಸ್ಸಿನಲ್ಲಿ ಮದ್ವೆಯಾಗ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿತ್ತು. ಚಂಡೀಗಢ ಮೂಲದ ಉದ್ಯಮಿಯೊಂದಿಗೆ ನಟಿ ಹಸೆಮಣೆ ಏರುತ್ತಿದ್ದಂತೆ ಎಂಬ ವದಂತಿ ಹಬ್ಬಿತ್ತು. ಇದಕ್ಕೆ ಇನ್‌ಸ್ಟಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳುವ ಮೂಲಕ ನಟಿ ವದಂತಿಗಳಿಗೆ (Marriage Rumours) ತೆರೆ ಎಳೆದಿದ್ದಾರೆ.

    ʻಜನ ನನಗಾಗಿ ನನ್ನ ಲೈಫ್‌ ಪ್ಲ್ಯಾನ್‌ ಮಾಡಿದಾಗ ನನಗೆ ತುಂಬಾ ಇಷ್ಟ. ಅವ್ರು ನನ್ನ ಹನಿಮೂನ್‌ ಸಹ‌ ನಿಗದಿಮಾಡೋದನ್ನೂ ಕಾಯ್ತಿದ್ದೀನಿʼ ಅಂತ ಬರೆದುಕೊಂಡಿದ್ದಾರೆ. ಜೊತೆಗೆ ಬೇಸರದ ಎಮೋಜಿಯನ್ನು ಹಾಕಿದ್ದಾರೆ.

    ನಟಿ ತ್ರಿಶಾ ಆಗಾಗ್ಗೆ ಮದ್ವೆ ವಿಚಾರಕ್ಕೆ ಸುದ್ದಿ ಆಗುತ್ತಲೇ ಇದ್ದಾರೆ. ಈ ಹಿಂದೆ ನಟ ಸಿಂಬು ಹಾಗೂ ಬಲ್ಲಾಳ ದೇವ ಖ್ಯಾತಿಯ ರಾಣಾ ದಗ್ಗುಬಾಟಿ ಜೊತೆ ಡೇಟಿಂಗ್‌ ಮಾಡ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. 2015 ರಲ್ಲಿ ಉದ್ಯಮಿ ವರುಣ್ ಮಣಿಯನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದು ಸಹ ಶೀಘ್ರದಲ್ಲೇ ರದ್ದಾಯಿತು. ಮದ್ವೆ ಬಳಿಕವೂ ಸಿನಿಮಾದಲ್ಲಿ ನಟಿಸುವ ಬಗ್ಗೆ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಹಾಗಾಗಿ ನಿಶ್ಚಿತಾರ್ಥದ ಬಳಿಕ ಸಂಬಂಧವನ್ನ ರದ್ದುಗೊಳಿಸಲಾಯ್ತು. ಆದ್ರೆ ಈವರೆಗೆ ನಟಿಯ ಕುಟುಂಬಸ್ಥರು ಮದ್ವೆ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ.

  • ವಿಜಯ್ ಜೊತೆ ಲವ್ ವದಂತಿಗೆ ತ್ರಿಷಾ ಕೆಂಡ – ಹೊಲಸು ಮನಸ್ಥಿತಿಯ ಜನ ಎಂದ ನಟಿ

    ವಿಜಯ್ ಜೊತೆ ಲವ್ ವದಂತಿಗೆ ತ್ರಿಷಾ ಕೆಂಡ – ಹೊಲಸು ಮನಸ್ಥಿತಿಯ ಜನ ಎಂದ ನಟಿ

    ದಳಪತಿ ವಿಜಯ್ ಜೊತೆಗಿನ ತ್ರಿಷಾ (Trisha Krishnan) ಪ್ರೇಮ ವದಂತಿ ನಿನ್ನೆ ಮೊನ್ನೆಯದ್ದಲ್ಲ. ತ್ರಿಷಾ ಕಾರಣಕ್ಕೆ ವಿಜಯ್ ಪತ್ನಿ ಸಂಗೀತಾಗೆ ವಿಚ್ಛೇದನ ಕೊಡುತ್ತಿದ್ದಾರೆ ಎಂದು ವರ್ಷಗಳ ಹಿಂದೆಯೇ ವದಂತಿ ಹಬ್ಬಿತ್ತು. ಆದರೆ ಜೂ.22ರಂದು ವಿಜಯ್ ಹುಟ್ಟುಹಬ್ಬದ ದಿನ ನಟಿ ತ್ರಿಷಾ ಅವರು ವಿಜಯ್ ನಿವಾಸ ಎನ್ನಲಾಗುವ ಜಾಗದಲ್ಲಿ ಕುಳಿತು ಆತ್ಮೀಯವಾಗಿರುವ ಫೋಟೋವೊಂದನ್ನು ಪೋಸ್ಟ್ ಮಾಡಿ ವಿಶ್ ಮಾಡಿದ್ದರು.

    ಹಂಚಿಕೊಂಡಿರುವ ಫೋಟೋ ಹಾಗೂ ತ್ರಿಷಾ ವಿಜಯ್‌ಗೆ ವಿಶ್ ಮಾಡಿರುವ ರೀತಿ ಇಬ್ಬರ ನಡುವೆ ಇದ್ದ ಪ್ರೀತಿ ವದಂತಿಗೆ ಪುಷ್ಠಿ ಕೊಡುವಂತಿದೆ. ತ್ರಿಷಾ ಪೋಸ್ಟ್‌ಗೆ ಇವರಿಬ್ಬರ ಮಧ್ಯೆ ಪ್ರೀತಿಯಿರುವುದು ಕನ್ಫರ್ಮ್ ಎಂಬಂತೆ ಕಾಮೆಂಟ್‌ಗಳ ಸುರಿಮಳೆ ಬಂದಿತ್ತು. ಇದೀಗ ಗಾಸಿಪ್ ಹೆಚ್ಚಾಗುತ್ತಿದ್ದಂತೆ ತ್ರಿಷಾ ಅನುಮಾನಿತ ಜನರಿಗೆ ಖಾರವಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.ಇದನ್ನೂ ಓದಿ: ಮಾವು ಬೆಳೆಗಾರರ ನೆರವಿಗೆ ಧಾವಿಸಿದ ಕೇಂದ್ರ – ಪ್ರತಿ ಕ್ವಿಂಟಲ್‌ಗೆ 1,616 ರೂ. ದರ ನಿಗದಿ

    ತ್ರಿಷಾ ಹಾಗೂ ವಿಜಯ್ ನಡುವಿನ ಲವ್ ಮ್ಯಾಟರ್ ಅನುಮಾನ ಹೆಚ್ಚಾಗುತ್ತಿದ್ದಂತೆ ಈ ಕುರಿತು ನಟಿ ಗರಂ ಆದಂತಿದೆ. ಹೀಗಾಗಿ ಇನಸ್ಟಾಗ್ರಾಂ ಸ್ಟೋರಿಯಲ್ಲಿ ಕೆಂಡಕಾರಿದ್ದಾರೆ. ಅನುಮಾನಿತರಿಗೆ ಪರೋಕ್ಷವಾಗಿ ಟಕ್ಕರ್ ಕೊಟ್ಟಿದ್ದಾರೆ. ಇನ್ಸ್ಸ್ಟಾಗ್ರಾಂ ಸ್ಟೋರಿಯಲ್ಲಿ “ನೀವು ಪ್ರೀತಿಯಲ್ಲಿರುವಾಗ ನಿಮ್ಮನ್ನು ನೋಡಿದ ಹೊಲಸು ಮನಸ್ಥಿತಿಯ ಜನರಲ್ಲಿ ಗೊಂದಲ ಸೃಷ್ಟಿಯಾಗುತ್ತೆ” ಎಂದು ಬರೆದುಕೊಂಡಿದ್ದಾರೆ. ಕನ್‌ಫ್ಯೂಸ್ ಆಗಿರೋವ್ರಿಗೆಲ್ಲ ಹೊಲಸು ಎಂದು ಕರೆದಿದ್ದಾರೆ ತ್ರಿಷಾ.

    ಅಂದಹಾಗೆ ತ್ರಿಷಾ ವಿಜಯ್‌ಗೆ ವಿಶ್ ಮಾಡಿರುವ ಪೋಸ್ಟ್‌ಗಂತೂ ಸಿಕ್ಕಾಪಟ್ಟೆ ಲೈಕ್ಸ್ ಬಂದಿದೆ. ಆದರೆ ನಟಿ ಗರಂ ಆಗೋಕೆ, ವಿಜಯ್ ಹಾಗೂ ಪತ್ನಿ ಸಂಗೀತಾ ಜೊತೆ ವಿಚ್ಛೇದನ ವದಂತಿಗೆ ತ್ರಿಷಾ ಕಾರಣ ಎಂದು ಹೇಳುತ್ತಿರುವುದೇ ಕಾರಣ. ವಿಜಯ್ ಹಾಗೂ ತ್ರಿಷಾ ಈವರೆಗೂ ಐದು ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ಗಿಲ್ಲಿ, ತಿರುಪಚ್ಚಿ, ಆತಿ, ಕುರುವಿ ಚಿತ್ರಗಳ ಬಳಿಕ 15 ವರ್ಷಗಳ ಗ್ಯಾಪ್ ತೆಗೆದುಕೊಂಡು ಲಿಯೋ ಚಿತ್ರದಲ್ಲಿ ಜಂಟಿಯಾಗಿದ್ದರು. ಆಗಲೂ ವಿಜಯ್ ಹಾಗೂ ತ್ರಿಷಾ ಆನ್‌ಸ್ಕ್ರೀನ್‌ ಕೆಮೆಸ್ಟ್ರೀ ಭರ್ಜರಿಯಾಗಿ ವರ್ಕೌಟ್ ಆಗಿತ್ತು. ಪ್ರೀತಿಸಿ ದೂರವಾದ್ರು ಎಂಬ ವದಂತಿ ಹಬ್ಬಿತ್ತು. ಇದೀಗ ಲಿಯೋ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ಇಬ್ಬರ ನಡುವೆ ಮತ್ತೆ ಪ್ರೇಮಾಂಕುರವಾಗಿದೆ. ಈ ಕಾರಣಕ್ಕೆ ಪತ್ನಿಯಿಂದ ವಿಜಯ್ ದೂರವಿದ್ದಾರೆ ಎಂಬ ಮಾತು ಕೇಳಿಬಂತು. ಇಷ್ಟೆಲ್ಲದರ ನಡುವೆ ವಿಜಯ್ ಹುಟ್ಟುಹಬ್ಬದ ದಿನ ತ್ರಿಷಾ ಬಹಳ ಸಮಯ ತೆಗೆದುಕೊಂಡು ಶುಭಾಶಯದ ಪೋಸ್ಟ್ ಹಾಕಿದ್ದರು. ಹೀಗಾಗಿ ಅನುಮಾನಕ್ಕೆ ರೆಕ್ಕೆ ಪುಕ್ಕ ಬಂತು. ಇದೀಗ ತ್ರಿಷಾ ಲವ್ ಗಾಸಿಪ್ ಕುರಿತು ಕನ್‌ಫ್ಯೂಸ್ ಆದವರನ್ನ ಹೊಲಸು ಎಂದಿದ್ದಾರೆ.ಇದನ್ನೂ ಓದಿ: ಸಿದ್ದರಾಮಯ್ಯನವರೇ ತಪ್ಪಿಯೂ ಕರ್ನಾಟಕವನ್ನು ಡಿಕೆಶಿ ಕೈಗೆ ಕೊಡಬೇಡಿ, ಮಾರಿಕೊಂಡು ಹೋಗ್ತಾರೆ – ಯತ್ನಾಳ್

  • ರಿವೀಲ್ ಆಯ್ತು ‘ವಿಶ್ವಂಭರ’ ಚಿತ್ರದಲ್ಲಿನ ತ್ರಿಷಾ ಕೃಷ್ಣನ್ ಲುಕ್

    ರಿವೀಲ್ ಆಯ್ತು ‘ವಿಶ್ವಂಭರ’ ಚಿತ್ರದಲ್ಲಿನ ತ್ರಿಷಾ ಕೃಷ್ಣನ್ ಲುಕ್

    ಚಿರಂಜೀವಿ ನಟನೆಯ ‘ವಿಶ್ವಂಭರ’ (Vishambhara) ಸಿನಿಮಾದಲ್ಲಿ ತ್ರಿಷಾ ಕೃಷ್ಣನ್ (Trisha Krishnan) ನಾಯಕಿ ಎಂದು ಹರಿದಾಡುತ್ತಿದ್ದ ಸುದ್ದಿಗೆ ಇದೀಗ ಸ್ಪಷ್ಟನೆ ಸಿಕ್ಕಿದೆ. ಈ ಚಿತ್ರದಲ್ಲಿನ ತ್ರಿಷಾ ಪಾತ್ರದ ಲುಕ್ ಅನ್ನು ಚಿತ್ರತಂಡ ಮೇ 4ರಂದು ಅನಾವರಣ ಮಾಡಿದೆ. ಇದನ್ನೂ ಓದಿ:ಅಟ್ಲಿ ಜೊತೆಗಿನ ಚಿತ್ರಕ್ಕಾಗಿ ಅಲ್ಲು ಅರ್ಜುನ್ ತಯಾರಿ ಹೇಗಿದೆ?- ಹೊರಬಿತ್ತು ಅಪ್‌ಡೇಟ್

    ಇಂದು ತ್ರಿಷಾಗೆ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆ ಫ್ಯಾನ್ಸ್‌ಗೆ ಚಿತ್ರತಂಡ ಗುಡ್ ನ್ಯೂಸ್ ಕೊಟ್ಟಿದೆ. ‘ವಿಶ್ವಂಭರ’ ಸಿನಿಮಾದಲ್ಲಿ ತ್ರಿಷಾ ಯಾವ ಲುಕ್‌ನಲ್ಲಿ ಕಾಣುತ್ತಾರೆ ಎಂಬುದನ್ನು ಪೋಸ್ಟರ್ ಅನ್ನು ತಂಡ ರಿವೀಲ್ ಮಾಡಿದೆ. ಅವನಿ ಎಂಬ ಪಾತ್ರದಲ್ಲಿ ನಟಿಸಿರುವ ತ್ರಿಷಾ ಚೆಂದದ ಸೀರೆಯುಟ್ಟು ಕಂಗೊಳಿಸಿದ್ದಾರೆ. ನಟಿಯ ಲುಕ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಇದನ್ನೂ ಓದಿ:ಮತ್ತೆ ವಿಜಯ್ ದೇವರಕೊಂಡಗೆ ರಶ್ಮಿಕಾ ಮಂದಣ್ಣ ಜೋಡಿ?

     

    View this post on Instagram

     

    A post shared by UV Creations (@uvcreationsofficial)


    ಈ ಚಿತ್ರದಲ್ಲಿ ಚಿರಂಜೀವಿ(Chiranjeevi), ತ್ರಿಷಾ ಜೊತೆ ಕನ್ನಡತಿ ಆಶಿಕಾ ರಂಗನಾಥ್ (Ashika Ranganath) ಕೂಡ ನಟಿಸಿದ್ದಾರೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಬಗ್ಗೆ ಚಿತ್ರತಂಡ ಅಪ್‌ಡೇಟ್ ನೀಡಲಿದೆ.

  • ತ್ರಿಷಾ ಮುದ್ದಿನ ನಾಯಿ ಜಾರೋ ನಿಧನ

    ತ್ರಿಷಾ ಮುದ್ದಿನ ನಾಯಿ ಜಾರೋ ನಿಧನ

    ಸೌತ್ ನಟಿ ತ್ರಿಷಾ (Trisha Krishnan) ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಇಂದು (ಡಿ.25) ನಟಿಯ ಮುದ್ದಿನ ನಾಯಿ ಜಾರೋ ಮೃತಪಟ್ಟಿದೆ. ಇದು ತ್ರಿಷಾಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನ ಜೀವನವೇ ಅರ್ಥಹೀನವೆನಿಸುತ್ತಿದೆ ಎಂದು ಎಮೋಷನಲ್ ಪೋಸ್ಟ್‌ವೊಂದನ್ನು ನಟಿ ಶೇರ್ ಮಾಡಿದ್ದಾರೆ.

    ನನ್ನ ಮಗ ಜಾರೋ ಕ್ರಿಸ್‌ಮಸ್ ದಿನದಂದು ಬೆಳಗ್ಗೆ ಸಾವನ್ನಪ್ಪಿದೆ. ಈ ಅಗಲಿಕೆ ನನ್ನ ಜೀವನ ಅರ್ಥಹೀನವನ್ನಾಗಿ ಮಾಡಿದೆ ಎಂಬುದು ನನ್ನನ್ನು ಚೆನ್ನಾಗಿ ತಿಳಿದವರಿಗೆ ಗೊತ್ತು. ಈ ಆಘಾತದಿಂದ ಚೇತರಿಸಿಕೊಳ್ಳಲಾಗದೆ ನಾನು ಮತ್ತು ನನ್ನ ಕುಟುಂಬಸ್ಥರು ಕುಸಿದು ಹೋಗಿದ್ದೇವೆ. ಮತ್ತೆ ಸಹಜ ಸ್ಥಿತಿಗೆ ಮರಳಲು ಸಮಯ ಬೇಕಾಗುತ್ತದೆ ಎಂದು ಕಣ್ಣೀರಿಟ್ಟಿದ್ದಾರೆ. ಜಾರೋವನ್ನು ಸಮಾಧಿ ಮಾಡಿದಾಗ ತೆಗೆದ ಫೋಟೋವನ್ನು ಕೂಡ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ನಟಿಗೆ ಸಾಂತ್ವನ ಹೇಳುತ್ತಿದ್ದಾರೆ.

     

    View this post on Instagram

     

    A post shared by Trish (@trishakrishnan)

    ಇನ್ನೂ ಮುದ್ದಿನ ನಾಯಿ ಜಾರೋವನ್ನು 2012ರಿಂದ ನಟಿ ಬೆಳೆಸಿದ್ದಾರೆ. ಜಾರೋ ತ್ರಿಷಾರ ಅಚ್ಚುಮೆಚ್ಚಿನ ನಾಯಿಯಾಗಿತ್ತು. ಮುದ್ದಿನ ನಾಯಿಯ ಅಗಲಿಕೆ ನೋವು ತ್ರಿಷಾಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಇದನ್ನೂ ಓದಿ:ಬೆಸ್ಟ್ ಫ್ರೆಂಡ್ ಕೀರ್ತಿ ಸುರೇಶ್ ಮದುವೆಯಲ್ಲಿ ಕನ್ನಡತಿ ಸೋನು ಗೌಡ

     

    View this post on Instagram

     

    A post shared by Trish (@trishakrishnan)

    ಅಂದಹಾಗೆ, ಮೆಗಾಸ್ಟಾರ್ ಚಿರಂಜೀವಿ ಜೊತೆಯೊಂದು ಸಿನಿಮಾ, ಮಲಯಾಳಂನಲ್ಲಿ ಒಂದು ಸಿನಿಮಾ, ಮಣಿರತ್ನಂ ನಿರ್ದೇಶನದಲ್ಲಿ ಸಿಂಬುಗೆ ನಾಯಕಿಯಾಗಿ ತ್ರಿಷಾ ನಟಿಸುತ್ತಿದ್ದಾರೆ. ಕೈತುಂಬಾ ಸಿನಿಮಾಗಳಿವೆ.

  • ತಮಿಳಿನ ಹೊಸ ಚಿತ್ರಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟ ತ್ರಿಷಾ

    ತಮಿಳಿನ ಹೊಸ ಚಿತ್ರಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟ ತ್ರಿಷಾ

    ಸೌತ್ ಬ್ಯೂಟಿ ತ್ರಿಷಾ (Trisha) ಈಗ ಹೊಸ ಸಿನಿಮಾದ ಆಫರ್ ಒಪ್ಪಿಕೊಂಡಿದ್ದಾರೆ. ಅಜಿತ್ ಕುಮಾರ್ ಜೊತೆ ಡ್ಯುಯೆಟ್ ಹಾಡೋಕೆ ರೆಡಿಯಾಗಿದ್ದಾರೆ. ಸದ್ಯ ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ. ಇದನ್ನೂ ಓದಿ:ಜೈಲಿಗೆ ದರ್ಶನ್ ಕುಟುಂಬ ಭೇಟಿ- ತಾಯಿಯನ್ನು ನೋಡ್ತಿದಂತೆ ನಟ ಕಣ್ಣೀರು

    ಈಗಾಗಲೇ ಅಜಿತ್ ಕುಮಾರ್ (Ajith Kumar) ಮತ್ತು ತ್ರಿಷಾ ಎರಡ್ಮೂರು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಹಲವು ವರ್ಷಗಳ ನಂತರ ಈ ಜೋಡಿ ಮತ್ತೆ ಒಂದಾಗುತ್ತಿದೆ. ಬಹುನಿರೀಕ್ಷಿತ ‘ವಿದಾಮುಯರ್ಚಿ’ ಸಿನಿಮಾದಲ್ಲಿ ಜೊತೆಯಾಗಿ ಕಾಣಿಸಿಕೊಳ್ತಿದ್ದಾರೆ.

    ಕಾರಣಾಂತರಗಳಿಂದ ‘ವಿದಾಮುಯರ್ಚಿ’ ಸಿನಿಮಾ ರಿಲೀಸ್‌ಗೆ ತಡವಾಗುತ್ತಲೇ ಇದೆ. ಈಗ ಸಿನಿಮಾದ ಕೊನೆಯ ಶೆಡ್ಯೂಲ್ ಬಾಕಿಯಿದ್ದು, ಜುಲೈ 2ರಿಂದ ತ್ರಿಷಾ ಭಾಗದ ಶೂಟಿಂಗ್ ನಡೆಯಲಿದೆ ಎನ್ನಲಾಗಿದೆ. ಆಗಸ್ಟ್ ಒಳಗೆ ಸಿನಿಮಾ ಶೂಟಿಂಗ್ ಕೆಲಸ ಮುಗಿಸಿ ಈ ವರ್ಷ ದೀಪಾವಳಿಗೆ ಚಿತ್ರ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.

    ಇನ್ನೂ ಚಿರಂಜೀವಿ ನಟನೆಯ ‘ವಿಶ್ವಾಂಭರ’ ಸಿನಿಮಾದಲ್ಲಿ ತ್ರಿಷಾ ನಾಯಕಿಯಾಗಿದ್ದಾರೆ. ಇದರ ಜೊತೆಗೆ ಹಲವು ಪ್ರಾಜೆಕ್ಟ್‌ಗಳು ನಟಿಯ ಕೈಯಲ್ಲಿವೆ.

  • ಬಾಲಿವುಡ್ ಸಿನಿಮಾಗಳಲ್ಲಿ ನಟಿಸದಿರಲು ಕಾರಣ ತಿಳಿಸಿದ ತ್ರಿಶಾ

    ಬಾಲಿವುಡ್ ಸಿನಿಮಾಗಳಲ್ಲಿ ನಟಿಸದಿರಲು ಕಾರಣ ತಿಳಿಸಿದ ತ್ರಿಶಾ

    ತ್ರಿಶಾ ಕೃಷ್ಣನ್ (Trisha Krishnan) ಸದ್ಯ ದಕ್ಷಿದ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 40 ವರ್ಷದ ಈ ಸುಂದರಿಗೆ ಟಾಪ್ ಹೀರೋಗಳ ಜೊತೆ ನಟಿಸಲು ಭಾರೀ ಬೇಡಿಕೆ ಇದೆ. ಹೀಗಿರುವಾಗ ಬಾಲಿವುಡ್ ಚಿತ್ರಗಳಲ್ಲಿ ಯಾಕೆ ನಟಿಸಲ್ಲ ಎಂದು ತ್ರಿಶಾ ತಿಳಿಸಿದ್ದಾರೆ. ಇದನ್ನೂ ಓದಿ:ಮಂಜುನಾಥನ ಸನ್ನಿಧಿಯಲ್ಲಿ ನೆರವೇರಿತು ‘ಗಾಡ್ ಪ್ರಾಮಿಸ್’ ಚಿತ್ರದ ಸ್ಕ್ರೀಪ್ಟ್ ಪೂಜೆ

    ‘ಪೊನ್ನಿಯನ್ ಸೆಲ್ವನ್’ ಚಿತ್ರದ ಸಕ್ಸಸ್ ನಂತರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ತ್ರಿಶಾ ತೊಡಗಿಸಿಕೊಂಡಿದ್ದಾರೆ. ಇದೀಗ ಸೌತ್‌ನ ಸಾಕಷ್ಟು ನಟಿಯರು ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ತ್ರಿಶಾ ಈಗಾಗಲೇ ಒಂದು ಹಿಂದಿ ಸಿನಿಮಾದಲ್ಲಿ ನಟಿಸಿದ್ದಾರೆ. ಅದಾದ ನಂತರ ಅವರು ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ.

    ಅಕ್ಷಯ್ ಕುಮಾರ್ (Akshay Kumar) ನಟನೆಯ ‘ಖಟ್ಟಾ ಮಿಟ್ಟಾ’ ಸಿನಿಮಾ ನಂತರ ನಾನು ಹಿಂದಿ ಚಿತ್ರದಲ್ಲಿ ನಟಿಸಲಿಲ್ಲ. ಈ ಚಿತ್ರದ ಬಗ್ಗೆ ಭಾರೀ ನಿರೀಕ್ಷೆಯಿತ್ತು. ಆದರೆ ಆ ಚಿತ್ರ ಸಕ್ಸಸ್ ಕಾಣದೇ ಹೀನಾಯವಾಗಿ ಸೋತಿತ್ತು. ಹಿಂದಿ ಅಭಿಮಾನಿಗಳ ಮನಸ್ಸಿನಲ್ಲಿ ಜಾಗ ಪಡೆಯೋದ್ರಲ್ಲಿ ನಾನು ಸೋತೆ ಎಂದಿದ್ದಾರೆ. ಹಾಗಾಗಿ ಅದೇ ನನ್ನ ಮೊದಲ ಮತ್ತು ಕೊನೆಯ ಚಿತ್ರವಾಗಿದೆ. ಹಾಗಾಗಿ ನಾನು ಬಾಲಿವುಡ್‌ನಲ್ಲಿ ಸಿನಿಮಾ ಮಾಡುವುದು ಬಿಟ್ಟೆ ಎಂದು ತ್ರಿಶಾ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

    ಸದ್ಯ ‘ವಿಶ್ವಾಂಭರ’ (Vishwambara) ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿಗೆ (Megastar Chiranjeevi) ತ್ರಿಶಾ ನಾಯಕಿಯಾಗಿದ್ದಾರೆ. ಚಿತ್ರೀಕರಣ ಭರದಿಂದ ಸಾಗುತ್ತಿದೆ.

  • ಮೆಗಾಸ್ಟಾರ್, ಕೀರವಾಣಿ ಜೊತೆಗಿನ ಫೋಟೋ ಹಂಚಿಕೊಂಡು ದೈವಿಕ ಕ್ಷಣ ಎಂದ ತ್ರಿಷಾ

    ಮೆಗಾಸ್ಟಾರ್, ಕೀರವಾಣಿ ಜೊತೆಗಿನ ಫೋಟೋ ಹಂಚಿಕೊಂಡು ದೈವಿಕ ಕ್ಷಣ ಎಂದ ತ್ರಿಷಾ

    ಸೌತ್ ಬ್ಯೂಟಿ ತ್ರಿಷಾ (Trisha) ಅವರು ವಿಜಯ್ ಜೊತೆ ‘ಲಿಯೋ’ ಚಿತ್ರದಲ್ಲಿ ನಟಿಸಿದ ನಂತರ ಸದ್ಯ ‘ವಿಶ್ವಾಂಭರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಜೊತೆ ರೊಮ್ಯಾನ್ಸ್ ಮಾಡಲು ಸಜ್ಜಾಗಿದ್ದಾರೆ. ಸದ್ಯ ಚಿರಂಜೀವಿ (Megastar Chiranjeevi) ಮತ್ತು ಆಸ್ಕರ್ ವಿಜೇತ ಎಂ.ಎಂ ಕೀರವಾಣಿ ಜೊತೆ ಫೋಟೋ ಹಂಚಿಕೊಂಡು ನಟಿ ಸಂಭ್ರಮಿಸಿದ್ದಾರೆ.

    ‘ವಿಶ್ವಾಂಭರ’ (Vishwambhara) ಸಿನಿಮಾದ ಚಿತ್ರೀಕರಣದಲ್ಲಿ ನಟಿ ತ್ರಿಷಾ ಅವರು ಚಿರಂಜೀವಿ ಜೊತೆ ಭಾಗಿಯಾಗಿದ್ದಾರೆ. ಈ ವೇಳೆ, ಎಂ.ಎಂ ಕೀರವಾಣಿ ಮತ್ತು ಚಿರಂಜೀವಿ ಜೊತೆ ತ್ರಿಷಾ ಫೋಟೋ ಕ್ಲಿಕ್ಕಿಸಿಕೊಂಡು ಇದೊಂದು ದೈವಿಕ ಮತ್ತು ಪೌರಾಣಿಕ ಮುಂಜಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ತ್ರಿಷಾ ಅಡಿಬರಹ ನೀಡಿದ್ದಾರೆ.

    ‘ವಿಶ್ವಾಂಭರ’ ಸಿನಿಮಾ ಬಿಗ್ ಬಜೆಟ್ ಸಿನಿಮಾವಾಗಿದ್ದು, ಮುಂದಿನ ವರ್ಷ ರಿಲೀಸ್ ಆಗಲಿದೆ. ಚಿತ್ರಕ್ಕೆ ಮಲ್ಲಿಡಿ ವಸಿಷ್ಠ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ಎಂ.ಎಂ ಕೀರವಾಣಿ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಅದಷ್ಟೇ ಅಲ್ಲ, ತ್ರಿಷಾ ಅವರು ಈ ಸಿನಿಮಾದಲ್ಲಿ ಡಬಲ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಇದನ್ನೂ ಓದಿ:ಕೋಲಾರದಲ್ಲಿ ಆಸ್ತಿ ಖರೀದಿ ಮಾಡಿದ ಬಹುಭಾಷಾ ನಟ ಪ್ರಭುದೇವ

    ಮೆಗಾಸ್ಟಾರ್ ಚಿರಂಜೀವಿ ಇತ್ತೀಚೆಗೆ ನಟಿಸಿರುವ ಸಿನಿಮಾಗಳು ಮಕಾಡೆ ಮಲಗಿವೆ. ‘ವಿಶ್ವಾಂಭರ’ ಸಿನಿಮಾ ಮೂಲಕ ಸಕ್ಸಸ್ ರುಚಿಯನ್ನು ಸವಿಯಲು ಮೆಗಾಸ್ಟಾರ್ ಕಾಯ್ತಿದ್ದಾರೆ.

  • ಒಂದು ರಾತ್ರಿಗೆ 25 ಲಕ್ಷ ಎಂದಿದ್ದ ರಾಜಕಾರಣಿ ರಾಜು ವಿರುದ್ಧ ತ್ರಿಶಾ ಕಾನೂನು ಸಮರ

    ಒಂದು ರಾತ್ರಿಗೆ 25 ಲಕ್ಷ ಎಂದಿದ್ದ ರಾಜಕಾರಣಿ ರಾಜು ವಿರುದ್ಧ ತ್ರಿಶಾ ಕಾನೂನು ಸಮರ

    ಹಿರಿಯ ರಾಜಕಾರಣಿಗಾಗಿ ನಟಿ ತ್ರಿಶಾರನ್ನು 25 ಲಕ್ಷ ರೂಪಾಯಿ ಕೊಟ್ಟು ರೆಸಾರ್ಟ್‌ಗೆ ಕರೆಯಿಸಿಕೊಂಡಿದ್ದೆವು ಎಂದು ಎಐಎಡಿಎಂಕೆ ಉಚ್ಚಾಟಿತ ಸದಸ್ಯ ಎ.ವಿ.ರಾಜು (A.v Raju) ಅಸಂಬದ್ಧ ಹೇಳಿಕೆ ನೀಡಿದ್ದರು. ಈ ಮಾತು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಚಾರಕ್ಕೆ ತ್ರಿಶಾ (Trisha Krishnan) ಕೂಡ ಪ್ರತಿಕ್ರಿಯಿಸಿ ತಕ್ಕ ಪಾಠ ಕಲಿಸೋದಾಗಿ ಹೇಳಿದ್ದರು. ಅದರಂತೆ ಎ.ವಿ ರಾಜು ನಡೆಗೆ ಇದೀಗ ತ್ರಿಶಾ ಕಾನೂನು ಸಮರ ಸಾರಿದ್ದಾರೆ.

    ನಟಿ ತ್ರಿಶಾ ಅವರು ಎ.ವಿ ರಾಜು ಅವರ ಕುರಿತ ನೋಟಿಸ್ ಅನ್ನು ನೇರವಾಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಎ.ವಿ ರಾಜು ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದು, ಪರಿಹಾರ ನೀಡುವಂತೆ ನೋಟಿಸ್‌ನಲ್ಲಿ ತಿಳಿಸಿದ್ದಾರೆ. ರಾಜು ಕೊಟ್ಟಿರುವ ಹೇಳಿಕೆಗಳಿಂದ ನಟಿ ತ್ರಿಶಾ ಮಾನಸಿಕವಾಗಿ ನೊಂದಿರುವುದಾಗಿ ಹೇಳಿದ್ದಾರೆ. ಅಲ್ಲದೇ, ಮಾಧ್ಯಮಗಳಲ್ಲಿ ಅವಹೇಳನಕಾರಿ ಕಾಮೆಂಟ್‌ಗಳನ್ನು ನೀಡದಂತೆ ಎಚ್ಚರಿಸಿದ್ದಾರೆ. ಇದನ್ನೂ ಓದಿ:‘ನಮ್ ಗಣಿ ಬಿ.ಕಾಂ ಪಾಸ್’ ಪಾರ್ಟ್ 2ಗೆ ಅಭಿಷೇಕ್ ಶೆಟ್ಟಿ ಸಿದ್ಧತೆ

    ಈಗಾಗಲೇ ರಾಜು (A.v Raju) ಮಾಡಿರುವ ಹೇಳಿಕೆಗಳನ್ನು ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್‌ ಮಾಧ್ಯಮಗಳು ಹಾಗೂ ಸೋಷಿಯಲ್ ಮೀಡಿಯಾಗಳಿಂದ ಸಂಪೂರ್ಣ ಅಳಿಸಿ ಹಾಕಬೇಕು ಎಂದು ಹೇಳಿದ್ದಾರೆ. ಈ ನೋಟಿಸ್ ಸ್ವೀಕರಿಸಿದ 24 ಗಂಟೆಗಳ ಒಳಗೆ ನಟಿ ತ್ರಿಶಾಗೆ ಎ.ವಿ ರಾಜು ಮತ್ತೆ ಕ್ಷಮೆಯಾಚಿಸಬೇಕು. ಇಲ್ಲದೆ ಹೋದಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಕ್ರಮ ತೆಗೆದುಕೊಳ್ಳಲು ಸಿದ್ಧ ಎಂದು ತ್ರಿಶಾ ವಾರ್ನಿಂಗ್ ಕೊಟ್ಟಿದ್ದಾರೆ.

    ನಿನ್ನೆಯಷ್ಟೇ (ಫೆ.21) ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ರಾಜು ಕ್ಷಮೆ ಕೇಳಿದ್ದಾರೆ. ತಮ್ಮ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ. ನಾನು ತ್ರಿಶಾ ರೀತಿಯ ನಟಿಯನ್ನು ಎಂದು ಹೇಳಿದ್ದು, ತ್ರಿಶಾ ಅವರನ್ನೇ ಅಂತ ಹೇಳಿಲ್ಲ. ಆದರೂ, ನಾನು ಕ್ಷಮೆ ಕೇಳುತ್ತೇನೆ. ಯಾರನ್ನೂ ನೋಯಿಸುವ ಉದ್ದೇಶ ತಮಗೆ ಇರಲಿಲ್ಲವೆಂದು ಹೇಳಿದ್ದರು. ಆದರೂ ಆಡಿದ ಮಾತಿಗೆ ರಾಜು ಬೆಲೆ ತೆರಬೇಕಾಗಿದೆ.

    ಪದೇ ಪದೇ ನಟಿ ತ್ರಿಶಾ ಅವರ ಮೇಲೆ ಮಾನಹಾನಿ ಮಾಡುವಂತಹ ಘಟನೆಗಳು ತಮಿಳುನಾಡಿನಲ್ಲಿ ನಡೆಯುತ್ತಿವೆ. ಈ ಹಿಂದೆ ಮನ್ಸೂರ್ ಅಲಿ ಖಾನ್ ಕೂಡ ತ್ರಿಶಾರ ಬಗ್ಗೆ ಅವಹೇಳನ ಮಾಡುವಂತ ಮಾತುಗಳನ್ನು ಆಡಿದ್ದರು. ಇದೀಗ ತಮಿಳು ನಾಡಿನ ರಾಜಕೀಯ ಮುಖಂಡ ಎ.ವಿ.ರಾಜು ನಾಲಿಗೆ ಹರಿಬಿಟ್ಟಿದ್ದರು. ಲೈಂಗಿಕ ಕೆಲಸಕ್ಕಾಗಿ ಎ.ವೆಂಕಟಾಚಲಂ ಅವರು ತ್ರಿಶಾರಿಗೆ 25 ಲಕ್ಷ ರೂಪಾಯಿ ಆಫರ್ ನೀಡಿದ್ದರು. ಇಂತಹ ಅನೇಕ ನಟಿಯರು ನಮ್ಮಲ್ಲಿ ಇದ್ದಾರೆ ಎಂದು ರಾಜು ಹೇಳಿಕೆ ನೀಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹಾಗಾಗಿ ಕಾನೂನು ಕ್ರಮ ಮೂಲಕವೇ ನಟಿ ಉತ್ತರ ಕೊಟ್ಟಿದ್ದಾರೆ.

  • ಸಿಂಗಲ್ ಆಗಿರೋ ತ್ರಿಶಾಗೆ ರೋಸ್ ಕೊಟ್ಟಿದ್ಯಾರು?

    ಸಿಂಗಲ್ ಆಗಿರೋ ತ್ರಿಶಾಗೆ ರೋಸ್ ಕೊಟ್ಟಿದ್ಯಾರು?

    ಸೌತ್ ನಟಿ ತ್ರಿಶಾ (Trisha Krishnan) ಆಗಾಗ ಸಿನಿಮಾ ಬಿಟ್ಟು ವೈಯಕ್ತಿಕ ವಿಚಾರವಾಗಿಯೂ ಭಾರೀ ಸುದ್ದಿಯಾಗ್ತಾರೆ. ಇದೀಗ ವ್ಯಾಲೆಂಟೈನ್ ದಿನದಂದು ಗುಲಾಬಿ ಗೊಂಚಲು ತ್ರಿಶಾಗೆ ಗಿಫ್ಟ್ ನೀಡಿದ್ದಾರೆ. ಯಾರು ಎಂಬುದರ ಬಗ್ಗೆ ಸುಳಿವಿಲ್ಲ. ಸದ್ದಿಲ್ಲದೇ ನಟಿ ಎಂಗೇಜ್ ಆದ್ರಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.

    40ರ ವರ್ಷದ ನಟಿ ತ್ರಿಶಾ ಸದ್ಯ ಟಾಪ್ ನಟರಿಗೆ ನಾಯಕಿಯಾಗುವ ಮೂಲಕ ಸಿನಿಮಾ ಕೆರಿಯರ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಪರ್ಸನಲ್ ಲೈಫ್‌ನಲ್ಲಿ ನಟಿ ಕಮೀಟ್ ಆಗಿದ್ದಾರಾ? ಎಂದು ತ್ರಿಶಾ ಬಗ್ಗೆ ಚರ್ಚೆ ಶುರುವಾಗಿದೆ.

    ನಟಿ ತ್ರಿಶಾ ಅವರು ಪ್ರೇಮಿಗಳ ದಿನ ಒಂದು ಸ್ಪೆಷಲ್ ಪೋಸ್ಟ್ ಶೇರ್ ಮಾಡಿದ್ದರು. ಈ ಪೋಸ್ಟ್ನಲ್ಲಿ ಅಂತೂ ಈ ದಿನ ಹೀಗೆ ಕಳೆಯಿತು ಎಂದು ಕ್ಯಾಪ್ಷನ್ ಬರೆದು ನಟಿ ಕೆಲವೊಂದು ಫೋಟೋಗಳನ್ನು ಅಪ್ಲೋಡ್ ಮಾಡಿದ್ದರು. ಫೋಟೋವೊಂದರಲ್ಲಿ ತಿಳಿ ಗುಲಾಬಿ ಬಣ್ಣದ ರೋಸ್ ಬೊಕ್ಕೆ ಕೂಡಾ ಹಿಡಿದುಕೊಂಡಿದ್ದರು. ಹೂಗಳಿಗೆ ಮುಖ ತಾಗಿಸಿ ನಟಿ ಫುಲ್ ಜೂಮ್‌ನಲ್ಲಿ ಫೋಟೋ ಕ್ಲಿಕ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ನಟಿ ಮುದ್ದಾಗಿ ಕಾಣಿಸಿದ್ದಾರೆ. ನಟಿಯ ಫೋಟೋ ನೋಡ್ತಿದ್ದಂತೆ ನಿಮ್ಮ ವ್ಯಾಲೆಂಟೈನ್‌ ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ಎಂಗೇಜ್‌ ಆಗಿದ್ದಾರೆ ಎನ್ನಲಾದ ಸುದ್ದಿಗೆ ತ್ರಿಶಾ ಕ್ಲ್ಯಾರಿಟಿ ಕೊಡುವವರೆಗೂ ಕಾಯಬೇಕಿದೆ.

     

    View this post on Instagram

     

    A post shared by Trish (@trishakrishnan)

    ಕೆಲ ವರ್ಷಗಳ ಹಿಂದೆ ಉದ್ಯಮಿ ವರುಣ್ ಜೊತೆ ತ್ರಿಷಾ ಎಂಗೇಜ್ ಆಗಿದ್ದರು. ಆದರೆ ವೈಯಕ್ತಿಕ ಕಾರಣಗಳಿಂದ ಇಬ್ಬರೂ ಬ್ರೇಕಪ್ ಮಾಡಿಕೊಂಡರು. ಮದುವೆಗೆ ಇನ್ನೂ ಕೆಲವೇ ದಿನಗಳು ಇದೇ ಎನ್ನುವಾಗ ಬ್ರೇಕಪ್ ಸುದ್ದಿ ಹೇಳಿ ಶಾಕ್ ಕೊಟ್ಟಿದ್ದರು. ಇದನ್ನೂ ಓದಿ:‘ಪುಷ್ಪ 2’ ಶೂಟಿಂಗ್ ಮಧ್ಯ ಬರ್ಲಿನ್ ವಿಮಾನ ಹತ್ತಿದ ಅಲ್ಲು ಅರ್ಜುನ್

    ವಿಜಯ್ ಜೊತೆ ಲಿಯೋ ಸಿನಿಮಾ ಆದ್ಮೇಲೆ ಈಗ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಜೊತೆ ‘ವಿಶ್ವಾಂಭರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  • ಮಲಯಾಳಂ ನಿರ್ಮಾಪಕನ ಜೊತೆ ತ್ರಿಷಾ ಮದುವೆ: ಕೊನೆಗೂ ಬಾಯ್ಬಿಟ್ಟ ನಟಿ

    ಮಲಯಾಳಂ ನಿರ್ಮಾಪಕನ ಜೊತೆ ತ್ರಿಷಾ ಮದುವೆ: ಕೊನೆಗೂ ಬಾಯ್ಬಿಟ್ಟ ನಟಿ

    ಕ್ಷಿಣದ ಖ್ಯಾತ ನಟಿ ತ್ರಿಷಾ (Trisha Krishnan) ಮದುವೆ ಆಗುತ್ತಿದ್ದಾರೆ ಎನ್ನುವ ವಿಚಾರ ಬ್ರೇಕಿಂಗ್ ನ್ಯೂಸ್ ಆಗಿತ್ತು. ಹಲವಾರು ನಟರ ಜೊತೆ ತ್ರಿಷಾ ಹೆಸರು ಓಡಾಡುತ್ತಿದ್ದರೂ, ಕೇರ್ ಮಾಡದೇ ತನ್ನ ಪಾಡಿಗೆ ತಾನು ಕೆಲಸದಲ್ಲಿ ಬ್ಯುಸಿಯಾಗಿದ್ದರು. ಈ ನಟಿ ಮಾಧ್ಯಮಗಳ ಮುಂದೆ ಬಂದರೆ ಸಾಕು, ಮದುವೆ (Marriage) ವಿಚಾರವನ್ನೇ ಕೇಳಲಾಗುತ್ತಿತ್ತು. ಹಾಗಾಗಿ ತ್ರಿಷಾ ಮದುವೆ ಸಾಕಷ್ಟು ಚರ್ಚೆಯಲ್ಲಿತ್ತು.

    ಎರಡು ದಿನಗಳ ಹಿಂದೆಯಷ್ಟೇ ಮಲಯಾಳಂ ನಿರ್ಮಾಪಕನ ಜೊತೆ ತ್ರಿಷಾ ಮದುವೆ ಆಗುತ್ತಿದ್ದಾರೆ ಎನ್ನುವ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಸದ್ಯದಲ್ಲೇ ಈ ಜೋಡಿ ಹಸೆಮಣೆ ಏರಲಿದೆ ಎಂದು ಹೇಳಲಾಗಿತ್ತು. ಆ ನಿರ್ಮಾಪಕ ಯಾರು? ಎನ್ನುವ ಹುಡುಕಾಟ ಕೂಡ ನಡೆದಿತ್ತು. ಈ ನಡುವೆ ತ್ರಿಷಾ ಆ ಮದುವೆ ಬಗ್ಗೆ ಪ್ರತಿಕ್ರಿಯೆ ಬರೆದುಕೊಂಡಿದ್ದಾರೆ.

    ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ತ್ರಿಷಾ ಬರೆದುಕೊಂಡಿದ್ದು, ಇಂತಹ ವಿಚಾರಗಳನ್ನು ಇಲ್ಲಿಗೆ ಬಿಟ್ಟುಬಿಡಿ. ರೂಮರ್ ಗಳನ್ನು ಹಂಚಬೇಡಿ ಎಂದು ಬರೆದುಕೊಳ್ಳುವ ಮೂಲಕ ಮದುವೆ ವಿಚಾರವನ್ನು ತಳ್ಳಿ ಹಾಕಿದ್ದಾರೆ. ಇದೊಂದು ಕೇವಲ ಶುದ್ಧ ಗಾಸಿಪ್ ಎಂದು ಅವರು ಹೇಳಿಕೊಂಡಿದ್ದಾರೆ.

    ಈ ಹಿಂದೆ ತ್ರಿಷಾ ಅವರದ್ದು ಉದ್ಯಮಿ ವರುಣ್ (Varun) ಜೊತೆ ಅದ್ದೂರಿಯಾಗಿ ನಿಶ್ಚಿತಾರ್ಥವಾಗಿತ್ತು. ಹಲವು ವೈಯಕ್ತಿಕ ಕಾರಣ, ಭಿನ್ನಾಭಿಪ್ರಾಯಗಳಿಂದ ವರುಣ್ ಜೊತೆಗಿನ ಸಂಬಂಧ ಮುರಿದು ಬಿತ್ತು. 2015ರಲ್ಲಿ ನಡೆದ ಈ ಕಹಿ ಘಟನೆಯಿಂದ ಹೊರಬಂದು ಈಗ ಸಿನಿಮಾಗಳಲ್ಲಿ ಪವರ್ ಚಿತ್ರದ ನಟಿ ಮತ್ತೆ ಸಿನಿಮಾದತ್ತ ಮುಖ ಮಾಡಿದ್ದಾರೆ.

     

    ‘ಪೊನ್ನಿಯನ್ ಸೆಲ್ವನ್’ (Ponniyin Selvan) ಚಿತ್ರದ ಸಕ್ಸಸ್ ನಂತರ ಮತ್ತೆ ಸಾಲು ಸಾಲು ಬಿಗ್ ಪ್ರಾಜೆಕ್ಟ್‌ಗಳಿಗೆ ತ್ರಿಷಾ ನಾಯಕಿಯಾಗಿದ್ದಾರೆ. ಜೊತೆ ವೈಯಕ್ತಿಕ ಜೀವನದಲ್ಲೂ ಅವರು ಖುಷಿಯಾಗಿದ್ದಾರೆ. ಬೇಗ ತ್ರಿಷಾ ಮದುವೆ ಆಗಲಿ ಎನ್ನುವುದು ಅವರ ಅಭಿಮಾನಿಗಳ ಆಸೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]