Tag: Tripti Dimri

  • Pushpa 2: ಅಲ್ಲು ಅರ್ಜುನ್ ಜೊತೆ ಸೊಂಟ ಬಳುಕಿಸಲಿದ್ದಾರೆ ತೃಪ್ತಿ ದಿಮ್ರಿ

    Pushpa 2: ಅಲ್ಲು ಅರ್ಜುನ್ ಜೊತೆ ಸೊಂಟ ಬಳುಕಿಸಲಿದ್ದಾರೆ ತೃಪ್ತಿ ದಿಮ್ರಿ

    ಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ (Pushpa 2) ಸಿನಿಮಾದಲ್ಲಿ ಸ್ಪೆಷಲ್ ಹಾಡಿಗೆ ಹೆಜ್ಜೆ ‘ಅನಿಮಲ್’ ಖ್ಯಾತಿಯ ಬಾಬಿ 2 ಎಂಟ್ರಿ ಕೊಡ್ತಿದ್ದಾರೆ. ಅಂದರೆ, ನಟಿ ತೃಪ್ತಿ ದಿಮ್ರಿ (Tripti Dimri) ಪುಷ್ಪ 2ನಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲು ಬರುತ್ತಿದ್ದಾರೆ.

    ‘ಪುಷ್ಪ’ ಸಿನಿಮಾ ಸಮಂತಾ ಸೊಂಟ ಬಳುಕಿಸಿದ ಹಾಡು ಸೂಪರ್ ಡೂಪರ್ ಹಿಟ್ ಆಗಿತ್ತು. ಅದೇ ರೀತಿ ‘ಪುಷ್ಪ 2’ನಲ್ಲಿಯೂ ಐಟಂ ಸಾಂಗ್ ಇಟ್ಟರೇ ಫ್ಯಾನ್ಸ್‌ಗೆ ಕಿಕ್ ಕೊಡಲಿದೆ ಎಂಬುದು ಚಿತ್ರತಂಡದ ಲೆಕ್ಕಚಾರ. ಅದಕ್ಕಾಗಿ ಅನಿಮಲ್ (Animal) ಖ್ಯಾತಿಯ ತೃಪ್ತಿ ದಿಮ್ರಿಗೆ ಸೊಂಟ ಬಳುಕಿಸಲು ಚಿತ್ರತಂಡ ಮಣೆ ಹಾಕಿದೆ. ಇದನ್ನೂ ಓದಿ:ನಾನು ಸಿಂಗಲ್‌, ಹೊಸ ಸಂಬಂಧಕ್ಕೆ ಸಿದ್ಧಳಾಗಿದ್ದೇನೆ ಎಂದು ಬ್ರೇಕಪ್‌ ಬಗ್ಗೆ ತಿಳಿಸಿದ ‘ಸಲಾರ್‌’ ನಟಿ

    ರಣ್‌ಬೀರ್ ಕಪೂರ್, ರಶ್ಮಿಕಾ ಜೊತೆ ನಟಿಸಿದ ತೃಪ್ತಿ ದಿಮ್ರಿ ಸಖತ್ ಗ್ಲ್ಯಾಮರಸ್ ಆಗಿ ಕಾಣಿಸಿಕೊಂಡಿದ್ದರು. ಪುಷ್ಪ 2ನಲ್ಲಿ ಇದೀಗ ತೃಪ್ತಿ ಸಖತ್ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆ ಕದಿಯಲಿದ್ದಾರೆ.

    ‘ಪುಷ್ಪ 2’ ಚಿತ್ರದ ಮೂಲಕ ಮತ್ತೊಮ್ಮೆ ರಶ್ಮಿಕಾ ಸಿನಿಮಾಗೆ ತೃಪ್ತಿ ಎಂಟ್ರಿ ಕೊಡ್ತಿದ್ದಾರೆ. ಸಮಂತಾ ಐಟಂ ಡ್ಯಾನ್ಸ್ ಮಾಡಿರುವ ರೆಕಾರ್ಡ್ನ ತೃಪ್ತಿ ಬ್ರೇಕ್ ಮಾಡುತ್ತಾರಾ ಎಂದು ಕಾದುನೋಡಬೇಕಿದೆ.

  • ಶೂಟಿಂಗ್ ಮುಗಿಯುತ್ತಿದ್ದಂತೆ ಬಾಯ್‌ಫ್ರೆಂಡ್ ಜೊತೆ ಗೋವಾಗೆ ತೃಪ್ತಿ ದಿಮ್ರಿ ಜೂಟ್

    ಶೂಟಿಂಗ್ ಮುಗಿಯುತ್ತಿದ್ದಂತೆ ಬಾಯ್‌ಫ್ರೆಂಡ್ ಜೊತೆ ಗೋವಾಗೆ ತೃಪ್ತಿ ದಿಮ್ರಿ ಜೂಟ್

    ‘ಅನಿಮಲ್’ ಬ್ಯೂಟಿ ತೃಪ್ತಿ ದಿಮ್ರಿ (Tripti Dimri) ಬಾಲಿವುಡ್ ಮತ್ತು ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಹೊಸ ಪ್ರಾಜೆಕ್ಡ್‌ಗೆ ಬ್ರೇಕ್ ಸಿಕ್ಕ ಬೆನ್ನಲ್ಲೇ ಬಾಯ್‌ಫ್ರೆಂಡ್ ಜೊತೆ ಗೋವಾಗೆ ಹಾರಿದ್ದಾರೆ. ಗೋವಾದ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.

    ‘ಭೂಲ್ ಭುಲೈಯಾ 3’ ಚಿತ್ರದಲ್ಲಿ ಕಾರ್ತಿಕ್ ಆರ್ಯನ್‌ಗೆ ತೃಪ್ತಿ ದಿಮ್ರಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಇತ್ತ ಶೂಟಿಂಗ್‌ಗೆ ಬ್ರೇಕ್ ಬೀಳುತ್ತಿದ್ದಂತೆ ಬಾಯ್‌ಫ್ರೆಂಡ್ ಸ್ಯಾಮ್ ಮರ್ಚೆಂಟ್ ಜೊತೆ ಗೋವಾದಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ.

    ಬಾಯ್‌ಫ್ರೆಂಡ್ ಜೊತೆ ಇರುವ ಫೋಟೋ ನಟಿ ಶೇರ್ ಮಾಡದೇ ಇದ್ದರೂ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಫೋಟೋ ಒಂದೇ ಆಗಿದೆ. ಇಬ್ಬರ ಡೇಟಿಂಗ್ ಬಗ್ಗೆ ಫ್ಯಾನ್ಸ್‌ಗೆ ಪುಷ್ಠಿ ಸಿಕ್ಕಂತೆ ಆಗಿದೆ.

    ಇದಷ್ಟೇ ಅಲ್ಲ, ಕೆಲದಿನಗಳ ಹಿಂದೆ ಬಾಯ್‌ಫ್ರೆಂಡ್ ಜೊತೆ ಹೋಳಿ ಹಬ್ಬವನ್ನು ನಟಿ ಸಂಭ್ರಮದಿಂದ ಆಚರಿಸಿದ್ದರು. ಇಬ್ಬರ ಹೋಳಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಇದನ್ನೂ ಓದಿ:‘ಆಡುಜೀವಿತಂ’ ಬಾಕ್ಸ್ ಆಫೀಸಿನಲ್ಲೂ ಅಚ್ಚರಿಯ ಗಳಿಕೆ

    ರಣ್‌ಬೀರ್ ಕಪೂರ್ (Ranbir Kapoor) ಜೊತೆ ‘ಅನಿಮಲ್’ (Animal) ಸಿನಿಮಾದಲ್ಲಿ ನಟಿಸಿದ ಮೇಲೆ ತೃಪ್ತಿ ದಿಮ್ರಿಗೆ ಬೇಡಿಕೆ ಜಾಸ್ತಿ ಆಗಿದೆ. ರಶ್ಮಿಕಾ ಮಂದಣ್ಣಗೆ (Rashmika Mandanna) ಠಕ್ಕರ್ ಕೊಟ್ಟು ತೃಪ್ತಿ ಮಿಂಚಿದ್ದಾರೆ. ಹೊಸ ಸಿನಿಮಾ ಆಫರ್ಸ್‌ ನಟಿ ಗಿಟ್ಟಿಸಿಕೊಳ್ತಿದ್ದಾರೆ.

  • ಬಾಯ್‌ಫ್ರೆಂಡ್ ಜೊತೆ ಹೋಳಿ ಹಬ್ಬ ಆಚರಿಸಿದ ‘ಅನಿಮಲ್‌’ ನಟಿ

    ಬಾಯ್‌ಫ್ರೆಂಡ್ ಜೊತೆ ಹೋಳಿ ಹಬ್ಬ ಆಚರಿಸಿದ ‘ಅನಿಮಲ್‌’ ನಟಿ

    ‘ಅನಿಮಲ್’ (Animal) ಸಿನಿಮಾದ ಸಕ್ಸಸ್ ಬಳಿಕ ತೃಪ್ತಿ ದಿಮ್ರಿಗೆ ಬಾಲಿವುಡ್, ತೆಲುಗು ಚಿತ್ರರಂಗದಿಂದ ಬೇಡಿಕೆ ಜಾಸ್ತಿಯಾಗಿದೆ. ಸದ್ಯ ಶೂಟಿಂಗ್‌ಗೆ ಬ್ರೇಕ್ ಹಾಕಿ ಬಾಯ್‌ಫ್ರೆಂಡ್ ಜೊತೆ ಹೋಳಿ ಸೆಲೆಬ್ರೇಟ್ ಮಾಡಿದ್ದಾರೆ. ಹೋಳಿ ಸಂಭ್ರಮದ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿವೆ.

    ಮುಂಬೈನಲ್ಲಿ ಬಾಯ್‌ಫ್ರೆಂಡ್ ಜೊತೆ ಬಣ್ಣದಲ್ಲಿ ಆಟ ಆಡಿ ಹಬ್ಬ ಮಾಡಿ ಖುಷಿಪಟ್ಟಿದ್ದಾರೆ. ಪಡ್ಡೆಹುಡುಗರ ನೆಚ್ಚಿನ ನಟಿ ತೃಪ್ತಿ ದಿಮ್ರಿ ಹೋಳಿ ಸೆಲೆಬ್ರೇಶನ್‌ ಫೋಟೋಗಳನ್ನು ಫ್ಯಾನ್ಸ್‌ ದಂಗಾಗಿದ್ದಾರೆ. ಗಂಡ್‌ ಹೈಕ್ಳ ಕ್ರಶ್‌ ತೃಪ್ತಿ ಎಂಗೇಜ್‌ ಆದ್ರಾ? ಮ್ಯಾಟರ್‌ ಎಂದು ಅಧಿಕೃತ ಮಾಹಿತಿ ಸಿಗದೇ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಇದನ್ನೂ ಓದಿ:ಮಲಯಾಳಂ ಚಿತ್ರದ ಶೂಟಿಂಗ್ ಬಗ್ಗೆ ಅಪ್‌ಡೇಟ್ ಹಂಚಿಕೊಂಡ ‘ದಿಯಾ’ ಹೀರೋ

    ಅನುಷ್ಕಾ ಶರ್ಮಾ (Anushka Sharma) ಸಹೋದರ ಕರ್ಣೇಶ್ ಜೊತೆ ಬ್ರೇಕಪ್ ಆದ್ಮೇಲೆ ಉದ್ಯಮಿ ಸ್ಯಾಮ್ ಮರ್ಚೆಂಟ್ (Sam Merchant) ಜೊತೆ ಎಂಗೇಜ್ ಆಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನಟಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಆಗಾಗ ಸ್ಯಾಮ್ ಜೊತೆಗಿನ ಫೋಟೋ ಹಂಚಿಕೊಳ್ಳುವ ಮೂಲಕ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದ್ದಾರೆ. ಸದ್ಯ ಹೋಳಿ ಫೋಟೋಸ್ ಗಾಸಿಪ್ ಮಂದಿಯ ಬಾಯಿಗೆ ಆಹಾರವಾಗಿದೆ.

    ಸದ್ಯ ‘ಬ್ಯಾಡ್ ನ್ಯೂಸ್’ (Bad Newz) ಸಿನಿಮಾದ ಮೂಲಕ ತೃಪ್ತಿ ದಿಮ್ರಿ ಗಮನ ಸೆಳೆಯುತ್ತಿದ್ದಾರೆ. ವಿಕ್ಕಿ ಕೌಶಲ್- ಆ್ಯಮಿ ಜೊತೆ ಸಖತ್ ಬೋಲ್ಡ್ ಆಗಿ ನಟಿಸಿದ್ದಾರೆ. ಜುಲೈ 20ಕ್ಕೆ ರಿಲೀಸ್ ಆಗುತ್ತಿದೆ.

  • ‘ಬ್ಯಾಡ್ ನ್ಯೂಸ್’ ಬಗ್ಗೆ ಖುಷಿ ಇದೆ ಅಂತಿದ್ದಾರೆ ತೃಪ್ತಿ ದಿಮ್ರಿ

    ‘ಬ್ಯಾಡ್ ನ್ಯೂಸ್’ ಬಗ್ಗೆ ಖುಷಿ ಇದೆ ಅಂತಿದ್ದಾರೆ ತೃಪ್ತಿ ದಿಮ್ರಿ

    ನಿಮಲ್ ಚಿತ್ರ ಖ್ಯಾತಿಯ ತೃಪ್ತಿ ದಿಮ್ರಿ ಥಕಥಕ ಅಂತ ಕುಣೀತಾ ಇದ್ದಾರೆ. ಅನಿಮಲ್ ಹಿಟ್ ಆಗಿದ್ದೇ ತಡ, ಅವರನ್ನು ಅದೃಷ್ಟಗಳು ಹುಡುಕಿಕೊಂಡು ಬರುತ್ತಿವೆ. ಸದ್ಯ ಅವರು ಬ್ಯಾಡ್ ನ್ಯೂಸ್ ಅಲೆಯಲ್ಲಿ ತೇಲುತ್ತಿದ್ದು, ಈ ಚಿತ್ರ ಕೂಡ ತಮ್ಮ ವೃತ್ತಿ ಬದುಕಿಗೆ ದೊಡ್ಡ ಸಕ್ಸಸ್ ಕೊಡಲಿದೆ ಎನ್ನುವ ನಿರೀಕ್ಷೆ ಹೊಂದಿದ್ದಾರೆ. ಈ ಕಾರಣದಿಂದಾಗಿಯೇ ಹೋದ ಕಡೆಗೆಲ್ಲ ಬ್ಯಾಡ್ ನ್ಯೂಸ್ ಬಗ್ಗೆ ಖುಷಿಯಿಂದಲೇ ಮಾತನಾಡುತ್ತಿದ್ದಾರೆ.

    ಬಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣಗೆ (Rashmika Mandanna) ಠಕ್ಕರ್ ಕೊಟ್ಟು ‘ಅನಿಮಲ್’ (Animal) ಸಿನಿಮಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ತೃಪ್ತಿ ದಿಮ್ರಿ (Tripti Dimri) ಈಗ ಇಬ್ಬರು ಸ್ಟಾರ್ ನಟರ ಜೊತೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

    ರಣ್‌ಬೀರ್ ಕಪೂರ್ (Ranbir Kapoor) ಜೊತೆ ರೊಮ್ಯಾನ್ಸ್ ಮಾಡಿದ್ಮೇಲೆ ತೃಪ್ತಿ ಲಕ್ ಬದಲಾಗಿದೆ. ಬಾಲಿವುಡ್‌ನಲ್ಲಿ ನಟಿಗೆ ರೆಡ್ ಕಾರ್ಪೆಟ್ ಹಾಕಿ ವೆಲ್‌ಕಮ್ ಮಾಡುತ್ತಿದ್ದಾರೆ. ಆಫರ್ ಮೇಲೆ ಆಫರ್ ತೃಪ್ತಿ ಕಡೆ ಅರಸಿ ಬರುತ್ತಿದೆ.

    ವಿಕ್ಕಿ ಕೌಶಲ್, ಆಮಿ ವಿರ್ಕ್ ಜೊತೆ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ‘ಬ್ಯಾಡ್ ನ್ಯೂಸ್’ (Bad Newz) ಸಿನಿಮಾದಲ್ಲಿ ಇಬ್ಬರ ಜೊತೆ ತೃಪ್ತಿ ರೊಮ್ಯಾನ್ಸ್ ಮಾಡಲಿದ್ದಾರೆ. ಚಿತ್ರದ ಪೋಸ್ಟರ್ ಕೂಡ ರಿಲೀಸ್ ಆಗಿದ್ದು, ತೃಪ್ತಿ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇಬ್ಬರ ನಟರ ಇಷ್ಟೋಂದು ಬೋಲ್ಡ್ ಆಗಿ ಕಾಣಿಕೊಳ್ತಾರಾ ಎಂದು ಪ್ರಶ್ನೆಗಳ ಸರಿಮಳೆಯನ್ನೇ ಹರಿಸಿದ್ದಾರೆ.

     

    ‘ಬ್ಯಾಡ್ ನ್ಯೂಸ್’ (Bad Newz) ಚಿತ್ರಕ್ಕೆ ಕರಣ್ ಜೋಹರ್ (Karan Johar) ನಿರ್ಮಾಣ ಮಾಡಿದ್ದಾರೆ. ವಿಕ್ಕಿ ಕೌಶಲ್, ಆಮಿಗೆ ತೃಪ್ತಿ ಹೀರೋಯಿನ್ ಆಗಿದ್ದಾರೆ. ಇದೊಂದು ರೊಮ್ಯಾಂಟಿಕ್ ಡ್ರಾಮಾ ಚಿತ್ರವಾಗಿದೆ. ಸಿನಿಮಾ ಇದೇ ಜುಲೈ 19ಕ್ಕೆ ರಿಲೀಸ್ ಆಗಲಿದೆ.

  • ಇಬ್ಬರು ನಟರ ಜೊತೆ ‘ಅನಿಮಲ್‌’ ನಟಿ ತೃಪ್ತಿ ದಿಮ್ರಿ ರೊಮ್ಯಾನ್ಸ್

    ಇಬ್ಬರು ನಟರ ಜೊತೆ ‘ಅನಿಮಲ್‌’ ನಟಿ ತೃಪ್ತಿ ದಿಮ್ರಿ ರೊಮ್ಯಾನ್ಸ್

    ಬಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣಗೆ (Rashmika Mandanna) ಠಕ್ಕರ್ ಕೊಟ್ಟು ‘ಅನಿಮಲ್’ (Animal) ಸಿನಿಮಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ತೃಪ್ತಿ ದಿಮ್ರಿ (Tripti Dimri) ಈಗ ಇಬ್ಬರು ಸ್ಟಾರ್ ನಟರ ಜೊತೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

    ರಣ್‌ಬೀರ್ ಕಪೂರ್ (Ranbir Kapoor) ಜೊತೆ ರೊಮ್ಯಾನ್ಸ್ ಮಾಡಿದ್ಮೇಲೆ ತೃಪ್ತಿ ಲಕ್ ಬದಲಾಗಿದೆ. ಬಾಲಿವುಡ್‌ನಲ್ಲಿ ನಟಿಗೆ ರೆಡ್ ಕಾರ್ಪೆಟ್ ಹಾಕಿ ವೆಲ್‌ಕಮ್ ಮಾಡುತ್ತಿದ್ದಾರೆ. ಆಫರ್ ಮೇಲೆ ಆಫರ್ ತೃಪ್ತಿ ಕಡೆ ಅರಸಿ ಬರುತ್ತಿದೆ. ಇದನ್ನೂ ಓದಿ:‘ಓ ಮೈ ಲಿಲ್ಲಿ’ ಎಂದು ಅನುಪಮಾ ಜೊತೆ ಸಿದ್ದು ಡ್ಯುಯೇಟ್

    ವಿಕ್ಕಿ ಕೌಶಲ್, ಆಮಿ ವಿರ್ಕ್ ಜೊತೆ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ‘ಬ್ಯಾಡ್ ನ್ಯೂಸ್’ (Bad Newz) ಎಂಬ ಸಿನಿಮಾದಲ್ಲಿ ಇಬ್ಬರ ಜೊತೆ ತೃಪ್ತಿ ರೊಮ್ಯಾನ್ಸ್ ಮಾಡಲಿದ್ದಾರೆ. ಚಿತ್ರದ ಪೋಸ್ಟರ್ ಕೂಡ ರಿಲೀಸ್ ಆಗಿದ್ದು, ತೃಪ್ತಿ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇಬ್ಬರ ನಟರ ಇಷ್ಟೋಂದು ಬೋಲ್ಡ್ ಆಗಿ ಕಾಣಿಕೊಳ್ತಾರಾ ಎಂದು ಪ್ರಶ್ನೆಗಳ ಸರಿಮಳೆಯನ್ನೇ ಹರಿಸಿದ್ದಾರೆ.

    ‘ಬ್ಯಾಡ್ ನ್ಯೂಸ್’ (Bad Newz) ಚಿತ್ರಕ್ಕೆ ಕರಣ್ ಜೋಹರ್ (Karan Johar) ನಿರ್ಮಾಣ ಮಾಡಿದ್ದಾರೆ. ವಿಕ್ಕಿ ಕೌಶಲ್, ಆಮಿಗೆ ತೃಪ್ತಿ ಹೀರೋಯಿನ್ ಆಗಿದ್ದಾರೆ. ಇದೊಂದು ರೊಮ್ಯಾಂಟಿಕ್ ಡ್ರಾಮಾ ಚಿತ್ರವಾಗಿದೆ. ಸಿನಿಮಾ ಇದೇ ಜುಲೈ 19ಕ್ಕೆ ರಿಲೀಸ್ ಆಗಲಿದೆ.

    ತೃಪ್ತಿ ಸದ್ಯ ಕಾರ್ತಿಕ್ ಆರ್ಯನ್ ಜೊತೆಗಿನ ಸಿನಿಮಾ ಮತ್ತು ಕೆಲವು ತೆಲುಗು ಪ್ರಾಜೆಕ್ಟ್‌ಗಳನ್ನು ನಟಿ ಒಪ್ಪಿಕೊಂಡಿದ್ದಾರೆ.

  • ರಶ್ಮಿಕಾಗೆ ಠಕ್ಕರ್, ಗೋಲ್ಡನ್ ಚಾನ್ಸ್ ಬಾಚಿಕೊಂಡ ತೃಪ್ತಿ ದಿಮ್ರಿ

    ರಶ್ಮಿಕಾಗೆ ಠಕ್ಕರ್, ಗೋಲ್ಡನ್ ಚಾನ್ಸ್ ಬಾಚಿಕೊಂಡ ತೃಪ್ತಿ ದಿಮ್ರಿ

    ಬಾಲಿವುಡ್‌ನಲ್ಲಿ ಸದ್ಯ ತೃಪ್ತಿ ದಿಮ್ರಿ (Tripti Dimri) ಮೇನಿಯಾ ಶುರುವಾಗಿದೆ. ‘ಅನಿಮಲ್’ ಸಕ್ಸಸ್ ನಂತರ ತೃಪ್ತಿ ನಸೀಬು ಬದಲಾಗಿದೆ. ರಣ್‌ಬೀರ್ ಕಪೂರ್ ಜೊತೆ ಬೋಲ್ಡ್ ಆಗಿ ಕಾಣಿಸಿಕೊಂಡ ಮೇಲೆ ತೃಪ್ತಿ ಇದೀಗ ಬಿಗ್ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ:ರಸ್ತೆ ಅಪಘಾತದಲ್ಲಿ ಖ್ಯಾತ ನಟಿ, ಗಾಯಕ ಸಾವು

    ‘ಅನಿಮಲ್’ಗೆ (Animal) ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ರು ಕೂಡ ಬೇಡಿಕೆ ಹೆಚ್ಚಾಗಿದ್ದು ತೃಪ್ತಿ ದಿಮ್ರಿಗೆ ಬಾಲಿವುಡ್‌ನಲ್ಲಿ ಮತ್ತು ಸೌತ್‌ನಲ್ಲಿ ನಾಯಕಿ ನಟಿಸಿಲು ಬಂಪರ್ ಆಫರ್‌ಗಳು ಅರಸಿ ಬರುತ್ತಿವೆ. ರಶ್ಮಿಕಾಗೆ ಠಕ್ಕರ್ ಕೊಟ್ಟು ಸೌತ್‌ನತ್ತ ತೃಪ್ತಿ ಮುಖ ಮಾಡಿದ್ದಾರೆ.

    ಅನಿಮಲ್, ‘ಭುಲ್ ಭುಲೈಯಾ’ ಮುಂದಿನ ಸೀಕ್ವೆಲ್ ತೃಪ್ತಿ ನಾಯಕಿಯಾಗಿದ್ದಾರೆ. ಇದರ ಜೊತೆ ತೆಲುಗು ಮತ್ತು ತಮಿಳಿನ ಸಿನಿಮಾಗಳಲ್ಲಿ ನಟಿಸಲು ತೃಪ್ತಿಗೆ ಚಾನ್ಸ್ ಸಿಕ್ಕಿದೆ. ಸೌತ್‌ನ ಬಿಗ್ ಸ್ಟಾರ್‌ಗಳ ಜೊತೆ ತೆರೆಹಂಚಿಕೊಳ್ಳುವ ಬಂಪರ್ ಚಾನ್ಸ್ ನಟಿ ಬಾಚಿಕೊಂಡಿದ್ದಾರೆ.

    ಸೌತ್‌ನಲ್ಲಿಯೂ ಕೂಡ ರಶ್ಮಿಕಾ ಮಂದಣ್ಣ (Rashmika Mandanna) ಸಖತ್ ಡಿಮ್ಯಾಂಡ್ ಇತ್ತು. ತೃಪ್ತಿ ಈಗ ದಕ್ಷಿಣದತ್ತ ಮುಖ ಮಾಡಿರೋದ್ರಿಂದ ಎಲ್ಲೆಲ್ಲೂ ‘ಅನಿಮಲ್’ ಬೆಡಗಿಯ ಮೇನಿಯಾ ಹೆಚ್ಚಾಗಿದೆ. ಸೌತ್‌ ನಿರ್ಮಾಪಕರು ಕೂಡ ರಶ್ಮಿಕಾ ಬದಲು ತೃಪ್ತಿಗೆ ಮಣೆ ಹಾಕ್ತಿದ್ದಾರೆ.ಇದನ್ನೂ ಓದಿ:ರಸ್ತೆ ಅಪಘಾತದಲ್ಲಿ ಖ್ಯಾತ ನಟಿ, ಗಾಯಕ ಸಾವು

    ಸೌತ್‌ನ ಯಾವ ಸಿನಿಮಾ ತೃಪ್ತಿ ಒಪ್ಪಿಕೊಂಡಿದ್ದಾರೆ. ಯಾವ ಸ್ಟಾರ್ ನಟರಿಗೆ ಹೀರೋಯಿನ್ ಆಗಿ ನಟಿಸ್ತಾರೆ ಎಂಬುದರ ಬಗ್ಗೆ ಸದ್ಯದಲ್ಲೇ ಮಾಹಿತಿ ಸಿಗಲಿದೆ.

  • ಬಾಯ್‌ಫ್ರೆಂಡ್ ಬರ್ತ್‌ಡೇಗೆ ತೃಪ್ತಿ ದಿಮ್ರಿ ಸ್ವೀಟ್ ವಿಶ್

    ಬಾಯ್‌ಫ್ರೆಂಡ್ ಬರ್ತ್‌ಡೇಗೆ ತೃಪ್ತಿ ದಿಮ್ರಿ ಸ್ವೀಟ್ ವಿಶ್

    ‘ಅನಿಮಲ್’ (Animal) ಚಿತ್ರದ ಮೂಲಕ ಜನಪ್ರಿಯತೆ ಗಳಿಸಿರುವ ತೃಪ್ತಿ ದಿಮ್ರಿಗೆ (Tripti Dimri) ಬಾಲಿವುಡ್‌ನಲ್ಲಿ ಭಾರೀ ಅವಕಾಶಗಳು ಹರಿದು ಬರುತ್ತಿವೆ. ರಣ್‌ಬೀರ್ (Ranbir Kapoor) ಜೊತೆ ಬೋಲ್ಡ್ ಆಗಿ ಕಾಣಿಸಿಕೊಂಡ ಮೇಲೆ ತೃಪ್ತಿಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಇದರ ನಡುವೆ ಬಾಯ್‌ಫ್ರೆಂಡ್ ಹುಟ್ಟುಹಬ್ಬಕ್ಕೆ ವಿಶೇಷವಾಗಿ ನಟಿ ವಿಶ್ ಮಾಡಿದ್ದಾರೆ.

    ನಟಿ ತೃಪ್ತಿ ಎಂಗೇಜ್ ಆಗಿದ್ದಾರೆ. ಹೋಟೆಲ್ ಉದ್ಯಮಿ ಸ್ಯಾಮ್ ಮರ್ಚೆಂಟ್ (Sam Merchant) ಜೊತೆ ಹಲವು ವರ್ಷಗಳಿಂದ ಸ್ನೇಹ ಹೊಂದಿದ್ದಾರೆ. ಇತ್ತೀಚೆಗೆ ಗೆಳೆಯ ಸ್ಯಾಮ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಶೇಷವಾಗಿ ಶುಭಕೋರಿದ್ದಾರೆ.

    ಕಳೆದ ವರ್ಷ ಆಪ್ತರ ಮದುವೆಯಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು. ಆದರೆ ಇಬ್ಬರು ಡೇಟಿಂಗ್ ಮಾಡುತ್ತಿರೋದರ ಬಗ್ಗೆ ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಇದಕ್ಕೂ ಮುನ್ನ ಅನುಷ್ಕಾ ಶರ್ಮಾ (Anushka Sharma) ಸಹೋದರ ಕರ್ಣೇಶ್ ಶರ್ಮಾ ಜೊತೆ ನಟಿ ಡೇಟಿಂಗ್ ಮಾಡುತ್ತಿದ್ದರು. ಕೆಲ ಮನಸ್ತಾಪಗಳಿಂದ ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದರು.

    ‘ಅನಿಮಲ್’ (Animal) ಸಕ್ಸಸ್ ನಂತರ ತೃಪ್ತಿಗೆ ಬಾಲಿವುಡ್ ಸಿನಿಮಾಗಳ ಜೊತೆಗೆ ತೆಲುಗಿನಲ್ಲಿಯೂ ಅವಕಾಶಗಳು ಹರಿದುಬರುತ್ತಿದೆ.

  • ‘ಅನಿಮಲ್’ ಸಕ್ಸಸ್, ಆಶಿಕಿ 3 ಚಿತ್ರಕ್ಕೆ ತೃಪ್ತಿ ದಿಮ್ರಿ ಹೀರೋಯಿನ್

    ‘ಅನಿಮಲ್’ ಸಕ್ಸಸ್, ಆಶಿಕಿ 3 ಚಿತ್ರಕ್ಕೆ ತೃಪ್ತಿ ದಿಮ್ರಿ ಹೀರೋಯಿನ್

    ಬಾಲಿವುಡ್ ಅಂಗಳದಲ್ಲಿ ಸದ್ಯ ಸೆನ್ಸೇಷನಲ್ ಕ್ರಿಯೇಟ್ ಮಾಡಿರೋ ‘ಅನಿಮಲ್’ (Animal) ಸಿನಿಮಾ 500 ಕೋಟಿ ರೂಪಾಯಿಗಿಂತ ಅಧಿಕ ಕಲೆಕ್ಷನ್ ಮಾಡಿದೆ. ಸಿನಿಮಾ ಅಷ್ಟೇ ಅಲ್ಲ, ಚಿತ್ರದಲ್ಲಿ ನಟಿಸಿದ ನಟಿ ತೃಪ್ತಿ ದಿಮ್ರಿ (Tripti Dimri) ಕೂಡ ಕ್ಲಿಕ್ ಆಗಿದ್ದಾರೆ. ಇದರ ನಡುವೆ ಹೊಸ ಸಿನಿಮಾಗೆ ನಾಯಕಿಯಾಗಿ ಸೆಲೆಕ್ಟ್ ಆಗುವ ಮೂಲಕ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟಿದ್ದಾರೆ.

    ಇದೀಗ ಕಾರ್ತಿಕ್ ಆರ್ಯನ್ (Karthik Aryan) ಮುಂದಿನ ಚಿತ್ರಕ್ಕೆ ತೃಪ್ತಿ ದಿಮ್ರಿ ನಾಯಕಿಯಾಗಿದ್ದಾರೆ. ಆಶಿಕಿ ಪಾರ್ಟ್ 1 ಮತ್ತು 2 ಸಂಚಲನ ಸೃಷ್ಟಿಸಿತ್ತು. ಈಗ ಆಶಿಕಿ-3 ಚಿತ್ರಕ್ಕೆ ಚಾಲನೆ ನೀಡಲು ಪ್ರತಿಷ್ಟಿತ ನಿರ್ಮಾಣ ಸಂಸ್ಥೆಯೊಂದು ಮುಂದಾಗಿದೆ. ಕಾರ್ತಿಕ್ ಆರ್ಯನ್- ತೃಪ್ತಿ ಜೋಡಿಯಾಗಿ ನಟಿಸಲು ಫೈನಲ್ ಆಗಿದೆ. 2024ರ ಜನವರಿಯಿಂದ ಶೂಟಿಂಗ್ ಶುರುವಾಗಲಿದೆ.

    ಮೊದಲ ಬಾರಿಗೆ ಕಾರ್ತಿಕ್ ಜೊತೆ ತೃಪ್ತಿ ನಟಿಸುತ್ತಿರೋ ಕಾರಣ ಸಹಜವಾಗಿಯೇ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಇಬ್ಬರ ಜೋಡಿ ಪ್ರೇಕ್ಷಕರಿಗೆ ಅದೆಷ್ಟರ ಮಟ್ಟಿಗೆ ಮೋಡಿ ಮಾಡಬಹುದು ಎಂದು ಕಾತರದಿಂದ ಫ್ಯಾನ್ಸ್ ಎದುರು ನೋಡ್ತಿದ್ದಾರೆ. ಇದನ್ನೂ ಓದಿ:ದರ್ಶನ್ ಸಿನಿಮಾದಲ್ಲಿ ತೆಲುಗು ನಟ ಚಿರಂಜೀವಿ

    ರಣ್‌ಬೀರ್ ಕಪೂರ್ (Ranbir Kapoor) ಜೊತೆ ತೃಪ್ತಿ ರೊಮ್ಯಾನ್ಸ್ ಮಾಡಿದ ಮೇಲೆ ನಟಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ರಶ್ಮಿಕಾ ಮಂದಣ್ಣಗಿಂತ (Rashmika Mandanna) ತೃಪ್ತಿ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಬಾಲಿವುಡ್ ಸಿನಿಮಾಗಳಿಗೆ ನಟಿಸಲು ತೃಪ್ತಿಗೆ ಬೇಡಿಕೆ ಸೃಷ್ಟಿಯಾಗಿದೆ.

  • ಜ್ಯೂ.ಎನ್‌ಟಿಆರ್ ಜೊತೆ ತೆರೆಹಂಚಿಕೊಳ್ತಾರಂತೆ ತೃಪ್ತಿ ದಿಮ್ರಿ

    ಜ್ಯೂ.ಎನ್‌ಟಿಆರ್ ಜೊತೆ ತೆರೆಹಂಚಿಕೊಳ್ತಾರಂತೆ ತೃಪ್ತಿ ದಿಮ್ರಿ

    ಸಿನಿಮಾ, ಸೋಷಿಯಲ್ ಮೀಡಿಯಾ ಏಲ್ಲೆಲ್ಲೂ ಸದ್ದು ಮಾಡ್ತಿರೋ ಏಕೈಕ ಹೆಸರು ಅಂದರೆ ‘ಅನಿಮಲ್’ ಬೆಡಗಿ ತೃಪ್ತಿ ದಿಮ್ರಿ. ಅಷ್ಟರ ಮಟ್ಟಿಗೆ ‘ಅನಿಮಲ್’ (Animal) ಚಿತ್ರದ ನಟಿ ತೃಪ್ತಿ ಮೇಲಿನ ಕ್ರೇಜ್ ಫ್ಯಾನ್ಸ್‌ಗೆ ಹೆಚ್ಚಾಗಿದೆ. ತೆಲುಗಿನ ಸ್ಟಾರ್ ಹೀರೋ ಜ್ಯೂ.ಎನ್‌ಟಿಆರ್ ಜೊತೆ ತೃಪ್ತಿ ತೆರೆಹಂಚಿಕೊಳ್ತಾರಂತೆ. ಈ ಕುರಿತ ವಿಚಾರ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.

    ರಣ್‌ಬೀರ್, ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಅನಿಮಲ್’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಲೂಟಿ ಮಾಡ್ತಿದೆ. ರಶ್ಮಿಕಾರನ್ನ ನೋಡಲು ಹೋಗಿದ್ದ ಫ್ಯಾನ್ಸ್ ಇದೀಗ ತೃಪ್ತಿ ದಿಮ್ರಿ (Tripti Dimri) ನಶೆಯಲ್ಲಿದ್ದಾರೆ. ಅಷ್ಟರ ಮಟ್ಟಿಗೆ ತೃಪ್ತಿ ಪಡ್ಡೆಹುಡುಗರ ಎದೆಯಲ್ಲಿ ಆವರಿಸಿಕೊಂಡಿದ್ದಾರೆ.

    ‘ಅನಿಮಲ್’ ಚಿತ್ರದಲ್ಲಿ ತೃಪ್ತಿ, ಸಿಕ್ಕಾಪಟ್ಟೆ ಬೋಲ್ಡ್ ಆಗಿ ರಣ್‌ಬೀರ್ (Ranbir Kapoor) ಜೊತೆ ನಟಿಸಿದ್ದರು. ಬ್ಯೂಟಿ ಅಷ್ಟೇ ಅಲ್ಲ, ಆ್ಯಕ್ಟಿಂಗ್ ಮೂಲಕನೂ ತೃಪ್ತಿ ಸೈ ಎನಿಸಿಕೊಂಡರು. ಇದೀಗ ಬಾಲಿವುಡ್, ಟಾಲಿವುಡ್‌ನಿಂದ ನಟಿಗೆ ಅಪಾರ ಅವಕಾಶಗಳು ಅರಸಿ ಬರುತ್ತಿವೆ. ಇದೀಗ ಸಂದರ್ಶನವೊಂದರಲ್ಲಿ ನಟಿ ತಮ್ಮ ಆಸೆಯನ್ನ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ:‘ಕಾಂತಾರ’ದಲ್ಲಿ ನಟಿಸೋಕೆ ಅವಕಾಶ ಕೇಳಿದ ನಟಿಯರು

    ತೆಲುಗು ಸಿನಿಮಾರಂಗದಿಂದ ಸಾಕಷ್ಟು ಅವಕಾಶಗಳು ಬರುತ್ತಿವೆ. ಆದರೆ ನನ್ನ ತೆಲುಗು ಡೆಬ್ಯೂ ಸಿನಿಮಾ ಜ್ಯೂ.ಎನ್‌ಟಿಆರ್ (Jr.Ntr) ಜೊತೆ ಮಾಡಲು ಇಷ್ಟ ಎಂದು ತೃಪ್ತಿ ಹೇಳಿದ್ದಾರೆ. ತಾರಕ್ ನಟನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ಮೂಲಕ ನಟಿ, ತಾರಕ್ ಜೊತೆ ನಟಿಸುವ ಸೂಚನೆ ಕೊಟ್ರಾ? ಎಂಬ ಅನುಮಾನ ಕೂಡ ಎಲ್ಲರನ್ನ ಕಾಡುತ್ತಿದೆ. ಸದ್ಯ ಅನಿಮಲ್ ಸಕ್ಸಸ್ ಖುಷಿಯಲ್ಲಿರೋ ನಟಿ ಮುಂದಿನ ನಡೆಯೇನು? ಸಿನಿಮಾ ಕುರಿತು ಗುಡ್ ನ್ಯೂಸ್ ಕೊಡ್ತಾರೆ ಕಾಯಬೇಕಿದೆ.

  • ರಣಬೀರ್ ಜೊತೆ ಹಸಿಬಿಸಿ ದೃಶ್ಯಗಳಲ್ಲಿ ನಟನೆ: ಫಾಲೋವರ್ಸ್ ಹೆಚ್ಚಿಸಿಕೊಂಡ ನಟಿ

    ರಣಬೀರ್ ಜೊತೆ ಹಸಿಬಿಸಿ ದೃಶ್ಯಗಳಲ್ಲಿ ನಟನೆ: ಫಾಲೋವರ್ಸ್ ಹೆಚ್ಚಿಸಿಕೊಂಡ ನಟಿ

    ಬಾಲಿವುಡ್ ನ ಸೂಪರ್ ಹಿಟ್ ಸಿನಿಮಾಗಳ ಸಾಲಿಗೆ ಸೇರ್ಪಡೆ ಆಗುತ್ತಿರುವ ಅನಿಮಲ್ ಸಿನಿಮಾ ಪುಟ್ಟದೊಂದು ಪಾತ್ರ ಮಾಡಿದ್ದ ನಟಿಗೆ, ದೊಡ್ಡ ಮಟ್ಟದಲ್ಲಿ ಹೆಸರು ತಂದು ಕೊಡುತ್ತಿದೆ. ರಣಬೀರ್ ಜೊತೆ ಕೆಲವೇ ಕೆಲವು ದೃಶ್ಯಗಳಲ್ಲಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದ, ಅಪೂರ್ಣ ಬೆತ್ತಲಾಗಿದ್ದ ನಟಿ ತೃಪ್ತಿ ದಿಮ್ರಿಗೆ (Tripti Dimri) ಫಾಲೋವರ್ಸ್ ಸಂಖ್ಯೆ ಜಾಸ್ತಿ ಆಗಿದ್ದಾರೆ. ಸಿನಿಮಾ ರಿಲೀಸ್ ಆಗಿ ಮೂರು ದಿನಗಳಷ್ಟೇ ಕಳೆದಿದ್ದು, ಮೂರು ದಿನದಲ್ಲಿ ಅವರ ಇನ್ಸ್ಟಾ ಫಾಲೋವರ್ಸ್ ಸಂಖ್ಯೆ ದ್ವಿಗುಣವಾಗಿದೆ. ಸದ್ಯ 1.5 ಮಿಲಿಯನ್ ಫಾಲೋವರ್ಸ್ ಅನ್ನು ತೃಪ್ತಿ ಹೊಂದಿದ್ದಾರೆ.

    ಬಾಕ್ಸ್ ಆಫೀಸ್ ಧೂಳ್

    ಅನಿಮಲ್ ಸಿನಿಮಾ ರಿಲೀಸ್ ಆದ ಒಂದೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿದೆ. ಜೊತೆಗೆ ರಿಲೀಸ್ ದಿನದಿಂದ ಈವರೆಗೂ ಬಾಕ್ಸ್ ಆಫೀಸ್ (Box Office) ಕಲೆಕ್ಷನ್ ಏರುತ್ತಲೇ ಇದೆ. ಮೂರು ದಿನದ ಒಟ್ಟು ಕಲೆಕ್ಷನ್ ಮುನ್ನೂರು ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ಈ ಮೂಲಕ ಜವಾನ್ ನಂತರ ಬಾಲಿವುಡ್ ನ ಮತ್ತೊಂದು ಚಿತ್ರ ಕೋಟಿ ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಮಾಡುತ್ತಿದೆ.

     

    ಸಂದೀಪ್ ರೆಡ್ಡಿ ವಂಗ ನಿರ್ದೇಶನದ  ಹಾಗೂ ರಣ್ ಬೀರ್ ಕಪೂರ್ (Ranbir Kapoor) , ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna),  ಪ್ರಮುಖಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಅನಿಮಲ್ (Animal) ಡಿಸೆಂಬರ್ 1 ರಂದು ತೆರೆಗೆ ಬಂದಿದೆ. ಚಿತ್ರಕ್ಕೆ ಸೆನ್ಸಾರ್ (Censor) ಮಂಡಳಿಯು ‘ಎ’ ಪ್ರಮಾಣ ಪತ್ರ ನೀಡಿದ್ದರೂ, ಜೊತೆಗೆ ರಶ್ಮಿಕಾ ಮತ್ತು ರಣಬೀರ್ ಜೋಡಿಯ ಹಸಿಬಿಸಿ ದೃಶ್ಯಗಳನ್ನು ಸಿನಿಮಾ ಒಳಗೊಂಡಿದ್ದರೂ ಪ್ರೇಕ್ಷಕನಿಗೆ ಚಿತ್ರ ಹಿಡಿಸಿದೆ.

     

    ಈ ಚಿತ್ರದ ಬಗ್ಗೆ ಚಿತ್ರತಂಡಕ್ಕೆ ಸಾಕಷ್ಟು ನಿರೀಕ್ಷೆ ಇತ್ತು. ನಟ ರಣಬೀರ್ ಕಪೂರ್ ಸಿನಿಮಾದ ಬಗ್ಗೆ ಮಾತನಾಡುತ್ತಾ, ‘ಇದು ವಿಭಿನ್ನವಾದ ಸಿನಿಮಾ. ತಂದೆ – ಮಗನ ಬಾಂಧವ್ಯದ ಜೊತೆ ಜೊತೆಗೆ ಹಿಂಸೆ ಮತ್ತು ಕ್ರೌರ್ಯಕ್ಕೆ ಒತ್ತು ನೀಡಿದ್ದಾರೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ. ಸೆಂಟೆಮೆಂಟ್ ಅಥವಾ ಹಿಂಸೆಗೆ ಎಷ್ಟು ಪ್ರಾಧಾನ್ಯತೆ ನೀಡಲಾಗಿದೆ ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು. ಹಿರಿಯ ನಟರಾದ ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಅವರ ಜೊತೆ ನಟನೆ ಮಾಡಿದ್ದು ಒಳ್ಳೆಯ ಅನುಭವ. ಜೊತೆಗೆ ರಶ್ಮಿಕಾ ಮಂದಣ್ಣ ಪಾತ್ರಕ್ಕೆ ಜೀವ  ತುಂಬಿದ್ದಾರೆ’ ಎಂದಿದ್ದರು.