Tag: Tripti Dimri

  • ‘ಅನಿಮಲ್’ ನಟಿಗೆ ಬಂಪರ್ ಆಫರ್- ಪ್ರಭಾಸ್‌ಗೆ ನಾಯಕಿಯಾದ ತೃಪ್ತಿ ದಿಮ್ರಿ

    ‘ಅನಿಮಲ್’ ನಟಿಗೆ ಬಂಪರ್ ಆಫರ್- ಪ್ರಭಾಸ್‌ಗೆ ನಾಯಕಿಯಾದ ತೃಪ್ತಿ ದಿಮ್ರಿ

    ‘ಅನಿಮಲ್’ ಖ್ಯಾತಿಯ (Animal) ನಟಿ ತೃಪ್ತಿ ದಿಮ್ರಿಗೆ (Tripti Dimri) ಬಿಗ್ ಚಾನ್ಸ್‌ವೊಂದು ಸಿಕ್ಕಿದೆ. ಸೂಪರ್ ಸ್ಟಾರ್ ಪ್ರಭಾಸ್‌ಗೆ ನಾಯಕಿಯಾಗಿ ತೃಪ್ತಿ ದಿಮ್ರಿ ನಟಿಸಲಿದ್ದಾರೆ. ಈ ಕುರಿತು ಚಿತ್ರತಂಡವೇ ಅಧಿಕೃತ ಘೋಷಣೆ ಮಾಡಿದೆ. ಇದನ್ನೂ ಓದಿ:‘ಬಿಗ್ ಬಾಸ್’ ಬಳಿಕ ಬಿಗ್ ನ್ಯೂಸ್ ಕೊಟ್ರು ಮೋಕ್ಷಿತಾ ಪೈ!

    ಡಾರ್ಲಿಂಗ್ ಪ್ರಭಾಸ್ (Prabhas) ಜೊತೆ ತೃಪ್ತಿ ದಿಮ್ರಿ ರೊಮ್ಯಾನ್ಸ್ ಮಾಡಲಿದ್ದಾರೆ. ‘ಸ್ಪಿರಿಟ್‌’ಗೆ (Spirit) ತೃಪ್ತಿ ನಾಯಕಿ ಎಂದು 9 ಭಾಷೆಗಳಲ್ಲಿ ಪೋಸ್ಟರ್ ಮೂಲಕ ಚಿತ್ರತಂಡ ತಿಳಿಸಿದೆ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಧನ್ಯವಾದಗಳು. ಈ ಚಿತ್ರದ ಭಾಗವಾಗಲು ಹೆಮ್ಮೆಯಾಗುತ್ತಿದೆ. ‘ಅನಿಮಲ್’ ಬಳಿಕ ಮತ್ತೆ ‘ಸ್ಪಿರಿಟ್’ ಅವಕಾಶ ಕೊಟ್ಟಿದ್ದಕ್ಕೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾಗೆ (Sandeep Reddy Vanga) ನಟಿ ಥ್ಯಾಂಕ್ಯೂ ಎಂದಿದ್ದಾರೆ.

     

    View this post on Instagram

     

    A post shared by Triptii Dimri (@tripti_dimri)

    ನಾಯಕಿ ತೃಪ್ತಿ ಹೆಸರನ್ನು 9 ಭಾಷೆಗಳಲ್ಲಿ ಉಲ್ಲೇಖಿಸಿ ಅನೌನ್ಸ್ ಮಾಡಿರೋದ್ದಕ್ಕೆ ‘ಸ್ಪಿರಿಟ್’ ಸಿನಿಮಾ 9 ಭಾಷೆಗಳಲ್ಲಿ ಮೂಡಿ ಬರಲಿದ್ಯಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಇದನ್ನೂ ಓದಿ:‘ಮಾರ್ನಮಿ’ಗೆ ಮೋಹಕ ತಾರೆ ರಮ್ಯಾ ಸಾಥ್ – ರಿವೀಲಾಯ್ತು ಚೈತ್ರಾ ಆಚಾರ್ ರೋಲ್

    ಈ ಚಿತ್ರದಲ್ಲಿ ಪ್ರಭಾಸ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ತಿದ್ದಾರೆ. ಹೀಗಾಗಿ ತೃಪ್ತಿ ಪಾತ್ರ ಈ ಚಿತ್ರದಲ್ಲಿ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ.

  • ಬೀಚ್ ಬಳಿ ನಟಿ ತೃಪ್ತಿ ದಿಮ್ರಿ ಹಾಟ್ ಪೋಸ್‌

    ಬೀಚ್ ಬಳಿ ನಟಿ ತೃಪ್ತಿ ದಿಮ್ರಿ ಹಾಟ್ ಪೋಸ್‌

    ‘ಅನಿಮಲ್’ ಖ್ಯಾತಿಯ (Animal) ತೃಪ್ತಿ ದಿಮ್ರಿ (Triptii Dimri) ಅವರು ವೆಕೇಷನ್ ಮೂಡ್‌ನಲ್ಲಿದ್ದಾರೆ. ಬೀಚ್ ಬಳಿ ತೃಪ್ತಿ ಮಸ್ತ್ ಆಗಿ ಪೋಸ್ ಕೊಟ್ಟಿದ್ದಾರೆ. ನಟಿಯ ಮೈಮಾಟ ನೋಡಿ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಇದನ್ನೂ ಓದಿ:ನಿರ್ಮಾಪಕಿಯಾದ ರಾಕಿಂಗ್ ಸ್ಟಾರ್ ಯಶ್ ತಾಯಿ

    ಸಿನಿಮಾ ಮತ್ತು ಸಾಮಾಜಿಕ ಜಾಲತಾಣದಲ್ಲಿ ತೃಪ್ತಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಈ ನಡುವೆ ಸಿನಿಮಾ ಕೆಲಸಕ್ಕೆ ಬ್ರೇಕ್ ಸಿಕ್ಕ ಬೆನ್ನಲ್ಲೇ ವೆಕೇಷನ್‌ನಲ್ಲಿ ಅವರು ಬ್ಯುಸಿಯಾಗಿದ್ದಾರೆ. ಕಡಲ ತೀರದಲ್ಲಿ ನಟಿ ತುಂಡು ಬಟ್ಟೆ ಧರಿಸಿ ಸಖತ್ ಹಾಟ್ ಆ್ಯಂಡ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:‘ಥಾಮಾ’ ಚಿತ್ರಕ್ಕಾಗಿ ಊಟಿಯಲ್ಲಿ ಬೀಡುಬಿಟ್ಟ ರಶ್ಮಿಕಾ ಮಂದಣ್ಣ

    ವಿವಿಧ ಭಂಗಿಯಲ್ಲಿ ಪೋಸ್ಟ್ ಕೊಟ್ಟಿರೋ ತೃಪ್ತಿ ದಿಮ್ರಿ ಅವರನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಸೂರ್ಯನ ಕಿರಣಕ್ಕೆ ನಟಿ ಮೈಯೊಡ್ಡಿ ನಿಂತಿದ್ದಾರೆ.

    2017ರಲ್ಲಿ ‘ಮೋಮ್’ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ‘ಲೈಲಾ ಮಜ್ನು’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದರು. ಆದರೆ ‘ಅನಿಮಲ್’ (Animal) ಚಿತ್ರದಲ್ಲಿ ರಣಬೀರ್ ಕಪೂರ್‌ಗೆ (Ranbir Kapoor) 2ನೇ ನಾಯಕಿಯಾಗಿ ನಟಿಸಿದರು. ಬಾಬಿ 2 ಎಂದೇ ತೃಪ್ತಿ ಫೇಮಸ್ ಆದರು.

    ‘ಅನಿಮಲ್’ ಸಿನಿಮಾದಲ್ಲಿ ರಣಬೀರ್‌ಗೆ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ತೃಪ್ತಿ ನಾಯಕಿಯರಾಗಿ ನಟಿಸಿದ್ದರು. ಚಿತ್ರದಲ್ಲಿ ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಂಡು ಟಾಕ್ ಆಫ್ ದಿ ಟೌನ್ ಆಗಿದ್ದರು.

    2024ರಲ್ಲಿ ‘ಭೂಲ್ ಭುಲೈಯಾ 3’ ಚಿತ್ರದಲ್ಲಿ ಕಾರ್ತಿಕ್ ಆರ್ಯನ್‌ಗೆ ನಾಯಕಿಯಾಗಿ ನಟಿಸಿದರು. ಈ ಸಿನಿಮಾ ಕೂಡ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.

    ಸದ್ಯ ಅವರು ‘ದಡಕ್ 2’ ಮತ್ತು ಬಾಲಿವುಡ್‌ನ ಮತ್ತೊಂದು ಬಿಗ್ ಪ್ರಾಜೆಕ್ಟ್‌ವೊಂದರಲ್ಲಿ ನಟಿಸುತ್ತಿದ್ದಾರೆ. ಸೌತ್‌ನಿಂದಲೂ ಅವರಿಗೆ ಆಫರ್ ಅರಸಿ ಬರುತ್ತಿದೆ.

  • Bhool Bhulaiyaa 3: ಬೆಚ್ಚಿ ಬೀಳಿಸಲು ಬಂದ ವಿದ್ಯಾ ಬಾಲನ್

    Bhool Bhulaiyaa 3: ಬೆಚ್ಚಿ ಬೀಳಿಸಲು ಬಂದ ವಿದ್ಯಾ ಬಾಲನ್

    ಕಾರ್ತಿಕ್ ಆರ್ಯನ್ (Karthik Aryan) ನಟನೆಯ ‘ಭೂಲ್ ಭೂಲಯ್ಯ 3’ (Bhool Bhulaiyaa 3) ಸಿನಿಮಾದ ಟೀಸರ್ ರಿಲೀಸ್ ಆಗಿದೆ. ದೆವ್ವದ ರೂಪದಲ್ಲಿ ವಿದ್ಯಾ ಬಾಲನ್ ಬೆಚ್ಚಿ ಬೀಳಿಸಿರುವ ತುಣುಕು ನೋಡಿ ಫ್ಯಾನ್ಸ್ ಬೆರಗಾಗಿದ್ದಾರೆ. ಚಿತ್ರದ ಟೀಸರ್ ಇದೀಗ ಟ್ರೆಂಡಿಂಗ್‌ನಲ್ಲಿದೆ. ಇದನ್ನೂ ಓದಿ:ದಶೋತ್ಸವ ಸಂಭ್ರಮದಲ್ಲಿ ಪಬ್ಲಿಕ್ ಮ್ಯೂಸಿಕ್‌ – ನೀವಿಲ್ಲದೇ ನಾವಿಲ್ಲ, ಮುಂದೆಯೂ ಹರಸಿ ಹಾರೈಸಿ

    ‘ಭೂಲ್ ಭೂಲಯ್ಯ 2’ ಚಿತ್ರದ ಸಕ್ಸಸ್ ನಂತರ ಇದರ ಪಾರ್ಟ್ 3ನಲ್ಲಿ ಕಾರ್ತಿಕ್ ಆರ್ಯನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ತೃಪ್ತಿ ದಿಮ್ರಿ (Tripti Dimri) ಕಾಣಿಸಿಕೊಂಡಿದ್ದಾರೆ. ಮಂಜುಲಿಕಾ ಆಗಿ ಹೆದರಿಸಲು ವಿದ್ಯಾ ಬಾಲನ್ (Vidya Balan) ಟೊಂಕ ಕಟ್ಟಿ ನಿಂತಿದ್ದಾರೆ. ಟೀಸರ್ ಝಲಕ್ ಭಯಾನಕವಾಗಿ ಮೂಡಿ ಬಂದಿದೆ. ಹಾಟ್‌ ಬ್ಯೂಟಿ ವಿದ್ಯಾ ಬಾಲನ್‌ ಈ ಬಾರಿ ದೆವ್ವದ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದಾರೆ.

     

    View this post on Instagram

     

    A post shared by KARTIK AARYAN (@kartikaaryan)

    ವಿದ್ಯಾ ಬಾಲನ್ ಮತ್ತು ಕಾರ್ತಿಕ್ ಆರ್ಯನ್ ಜಟಾಪಟಿ ತೋರಿಸಲಾಗಿದೆ. ಬಿಟ್ಟಿರುವ ಟೀಸರ್‌ನಿಂದ ಚಿತ್ರದ ಕುರಿತು ಕುತೂಹಲ ಕೆರಳಿಸಿದೆ. ಇದೇ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಆಗಲಿದೆ.

    ಸದ್ಯ ‘ಸ್ತ್ರೀ 2’ (Stree 2) ಸಕ್ಸಸ್‌ನಿಂದ ಬಾಲಿವುಡ್‌ಗೆ (Bollywood) ಮರುಜೀವ ಸಿಕ್ಕಂತೆ ಆಗಿದೆ. ‘ಭೂಲ್ ಭೂಲಯ್ಯ 3’ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲುತ್ತಾ ಎಂದು ಕಾದುನೋಡಬೇಕಿದೆ.

  • ಮತ್ತೊಂದು ರೊಮ್ಯಾಂಟಿಕ್ ಸಿನಿಮಾ ಒಪ್ಪಿಕೊಂಡ ತೃಪ್ತಿ ದಿಮ್ರಿ

    ಮತ್ತೊಂದು ರೊಮ್ಯಾಂಟಿಕ್ ಸಿನಿಮಾ ಒಪ್ಪಿಕೊಂಡ ತೃಪ್ತಿ ದಿಮ್ರಿ

    ‘ಅನಿಮಲ್’ (Animal) ಖ್ಯಾತಿಯ ತೃಪ್ತಿ ದಿಮ್ರಿ (Tripti Dimri) ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಮತ್ತೊಂದು ರೊಮ್ಯಾಂಟಿಕ್ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಕಾರ್ತಿಕ್ ಆರ್ಯನ್ ಜೊತೆ ಡ್ಯುಯೆಟ್ ಹಾಡಲು ನಟಿ ರೆಡಿಯಾಗಿದ್ದಾರೆ.

    ರಣ್‌ಬೀರ್ ಕಪೂರ್ ಜೊತೆ ಬೋಲ್ಡ್ ಪಾತ್ರದಲ್ಲಿ ನಟಿಸಿದ ಬಳಿಕ ತೃಪ್ತಿಗೆ ಹೆಚ್ಚೆಚ್ಚು ಹಾಟ್ & ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಳ್ತಿದ್ದಾರೆ. ವಿಕ್ಕಿ ಕೌಶಲ್ ಜೊತೆ ಗುಡ್ ನ್ಯೂಸ್ ಚಿತ್ರ, ರಾಜ್‌ಕುಮಾರ್ ರಾವ್ ಜೊತೆ ‘ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:ಮೀಟೂ ಬಗ್ಗೆ ಹೊಸ ಬಾಂಬ್ ಸಿಡಿಸಿದ ಶ್ರದ್ಧಾ ಶ್ರೀನಾಥ್!

    ಈ ಬೆನ್ನಲ್ಲೇ, ಲವರ್ ಬಾಯ್ ಕಾರ್ತಿಕ್ ಆರ್ಯನ್ ಹೊಸ ಚಿತ್ರಕ್ಕೆ ತೃಪ್ತಿ ನಾಯಕಿಯಾಗಿದ್ದು, ಇದೇ ಸೆ.24ರಿಂದ ಚಿತ್ರೀಕರಣ ಶುರುವಾಗಲಿದೆ. ಮುಂಬೈನಲ್ಲಿ ನಡೆಯಲಿರುವ ಈ ಚಿತ್ರದ ಶೂಟಿಂಗ್‌ಗೆ ಕಾರ್ತಿಕ್ ಜೊತೆ ನಟಿ ಭಾಗಿಯಾಗಲಿದ್ದಾರೆ. ಈ ಚಿತ್ರವನ್ನು ಅನುರಾಗ್ ಬಸು ನಿರ್ದೇಶನ ಮಾಡಲಿದ್ದಾರೆ.

    ವಿಭಿನ್ನವಾಗಿರುವ ಲವ್ ಸ್ಟೋರಿ ಇದಾಗಿದ್ದು, ಎಂದೂ ಕಾಣಿಸಿಕೊಂಡಿದ ಡಿಫರೆಂಟ್ ರೋಲ್‌ಗೆ ತೃಪ್ತಿ ಜೀವ ತುಂಬಲಿದ್ದಾರೆ. ಇದೇ ಮೊದಲ ಬಾರಿಗೆ ಕಾರ್ತಿಕ್ ಮತ್ತು ತೃಪ್ತಿ ಜೊತೆಯಾಗುತ್ತಿರೋದ್ರಿಂದ ಸಿನಿಮಾ ಕುರಿತು ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

  • ಫಸ್ಟ್ ನೈಟ್ CD ಕಳೆದುಕೊಂಡ ತೃಪ್ತಿ ದಿಮ್ರಿ- ಸಖತ್ ಆಗಿದೆ ಹೊಸ ಚಿತ್ರದ ಟ್ರೈಲರ್

    ಫಸ್ಟ್ ನೈಟ್ CD ಕಳೆದುಕೊಂಡ ತೃಪ್ತಿ ದಿಮ್ರಿ- ಸಖತ್ ಆಗಿದೆ ಹೊಸ ಚಿತ್ರದ ಟ್ರೈಲರ್

    ‘ಅನಿಮಲ್’ ಚಿತ್ರದ ನಟಿ ತೃಪ್ತಿ ದಿಮ್ರಿ (Tripti Dimri) ಮತ್ತೊಮ್ಮೆ ಬೋಲ್ಡ್ ಪಾತ್ರದಲ್ಲಿ ನಟಿಸಿದ್ದಾರೆ. ‘ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ’ (Vicky Vidya Ka Woh Wala Video) ಚಿತ್ರದಲ್ಲಿ ಫಸ್ಟ್ ನೈಟ್ CD ಕಳೆದುಕೊಂಡ ಗೃಹಿಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಟ್ರೈಲರ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಆತ್ಮಹತ್ಯೆಗೂ ಮುನ್ನ ಮಗಳಿಗೆ ಕರೆ ಮಾಡಿ ಮಲೈಕಾ ತಂದೆ ಹೇಳಿದ್ದೇನು?

    ಮೊದಲ ರಾತ್ರಿಯಲ್ಲಿ ತಮ್ಮ ಖಾಸಗಿ ವಿಡಿಯೋ ಮಾಡಿಕೊಂಡು ಪೇಚಿಗೆ ಸಿಲುಕಿದ ಗಂಡ-ಹೆಂಡತಿಯ ಕಥೆ ಈ ಸಿನಿಮಾದಲ್ಲಿದೆ. ಮನೆಗೆ ಬಂದ ಕಳ್ಳರು ಸಿಡಿ (CD) ಪ್ಲೇಯರ್ ಕದಿಯುತ್ತಾರೆ. ಅದರ ಜೊತೆ ಸಿಡಿ ಕೂಡ ಕಳ್ಳತನ ಆಗುತ್ತದೆ. ಆದರೆ ಯಾರೋ ಒಬ್ಬರು ಅವರ ಫಸ್ಟ್ ನೈಟ್ ಸಿಡಿ ಕದ್ದು 2 ಲಕ್ಷ ಕೊಡಬೇಕೆಂದು ಬ್ಲಾಕ್ ಮೇಲ್ ಮಾಡುತ್ತಾರೆ. ಏನೋ ಮಾಡಲು ಹೋಗಿ ಇನ್ನೇನೋ ಎಡವಟ್ಟಾಗುತ್ತದೆ. ಆ ಸಿಡಿ ಹುಡುಕಲು ಗಂಡ-ಹೆಂಡತಿ ಏನೆಲ್ಲ ಸರ್ಕಸ್ ಮಾಡುತ್ತಾರೆ ಎಂಬ ಕಥೆಯನ್ನು ‘ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ’ ಸಿನಿಮಾದಲ್ಲಿ ತೋರಿಸಲಾಗುತ್ತಿದೆ.

     

    View this post on Instagram

     

    A post shared by RajKummar Rao (@rajkummar_rao)

    ಮೊದಲ ಬಾರಿಗೆ ರಾಜ್‌ಕುಮಾರ್ ರಾವ್‌ಗೆ (Rajkumar Rao) ಜೋಡಿಯಾಗಿ ತೃಪ್ತಿ ನಟಿಸಿದ್ದಾರೆ. ಇಬ್ಬರ ಕಾಂಬಿನೇಷನ್ ಟ್ರೈಲರ್‌ನಲ್ಲಿ ಮೋಡಿ ಮಾಡಿದೆ. ಹಾಗಾಗಿ ಬಗೆಗಿನ ಕ್ಯೂರಿಯಾಸಿಟಿ ಫ್ಯಾನ್ಸ್‌ಗೆ ಹೆಚ್ಚಾಗಿದೆ. ಚಿತ್ರದ ಇನ್ನೊಂದು ವಿಶೇಷ ಅಂದ್ರೆ ಮಲ್ಲಿಕಾ ಶೆರಾವತ್ ಸ್ಪೆಷಲ್ ರೋಲ್‌ನಲ್ಲಿ ನಟಿಸಿದ್ದಾರೆ.

    ಕಳೆದುಕೊಂಡ ಸಿಡಿಗಾಗಿ ಪರದಾಡುವ ಈ ಜೋಡಿಗೆ ಮಲ್ಲಿಕಾ ಪಾತ್ರ ಸಹಾಯ ಮಾಡುತ್ತಾರೆ ಇನ್ನೊಂದು ಇಂಟರೆಸ್ಟಿಂಗ್. ತೃಪ್ತಿ ಜೋಡಿ ವೈವಾಹಿಕ ಬದುಕನ್ನು ಮರಳಿ ಟ್ರ್ಯಾಕ್‌ಗೆ ತರಲು ಮಲ್ಲಿಕಾ ಪಾತ್ರ ಯಾವ ರೀತಿ ಸಹಾಯ ಮಾಡುತ್ತೆ ಎಂಬುದನ್ನು ಟ್ರೈಲರ್‌ನಲ್ಲಿ ಸಣ್ಣ ಝಲಕ್ ತೋರಿಸಿದ್ದಾರೆ. ಒಟ್ನಲ್ಲಿ ಕಾಮಿಡಿ ಕಮ್ ರೊಮ್ಯಾಂಟಿಕ್ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ. ಇದೇ ಅಕ್ಟೋಬರ್ 11ಕ್ಕೆ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ.

  • ‘ಬ್ಯಾಡ್ ನ್ಯೂಸ್’ ಚಿತ್ರದ 27 ಸೆಕೆಂಡ್‌ನ ಕಿಸ್ಸಿಂಗ್ ದೃಶ್ಯಕ್ಕೆ ಕತ್ತರಿ ಹಾಕಿದ ಸೆನ್ಸಾರ್ ಬೋರ್ಡ್

    ‘ಬ್ಯಾಡ್ ನ್ಯೂಸ್’ ಚಿತ್ರದ 27 ಸೆಕೆಂಡ್‌ನ ಕಿಸ್ಸಿಂಗ್ ದೃಶ್ಯಕ್ಕೆ ಕತ್ತರಿ ಹಾಕಿದ ಸೆನ್ಸಾರ್ ಬೋರ್ಡ್

    ಬಾಲಿವುಡ್ ನಟ ವಿಕ್ಕಿ ಕೌಶಲ್, ತೃಪ್ತಿ ದಿಮ್ರಿ (Triptii Dimri), ಆಮಿ ವಿರ್ಕ್ ನಟನೆಯ ‘ಬ್ಯಾಡ್ ನ್ಯೂಸ್’ (Bad Newz) ಸಿನಿಮಾ ಇದೇ ಜು.19ರಂದು ಬಿಡುಗಡೆಯಾಗಲಿದೆ. ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಹಾಟ್ ಸಾಂಗ್‌ವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇನ್ನೂ ಚಿತ್ರದ 27 ಸೆಕೆಂಡ್‌ಗಳ ಕಿಸ್ಸಿಂಗ್ ದೃಶ್ಯಕ್ಕೆ ಸೆನ್ಸಾರ್ ಬೋರ್ಡ್ ಕತ್ತರಿ ಹಾಕಿದೆ.

    ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಲಿಪ್‌ಲಾಕ್ ದೃಶ್ಯಗಳಿಗೆ ಕತ್ತರಿ ಹಾಕಿದೆ. ಈ ದೃಶ್ಯಗಳಲ್ಲಿ ಒಂದು 9 ಸೆಕೆಂಡುಗಳ ಕಾಲ ಕಿಸ್ಸಿಂಗ್ ಸೀನ್ ಇದ್ದರೆ, ಇನ್ನೆರಡು ದೃಶ್ಯಗಳಲ್ಲಿ 10 ಸೆಕೆಂಡುಗಳು ಮತ್ತು 8 ಸೆಕೆಂಡುಗಳು ಕಾಲ ಕಿಸ್ಸಿಂಗ್ ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ:ಬೆತ್ತಲೆ ಪಾರ್ಟಿಯಲ್ಲಿ ಪಾಲ್ಗೊಂಡು ಬೆಚ್ಚಿಬಿದ್ದ ನಟಿ ಸುಚಿತ್ರಾ ಕೃಷ್ಣಮೂರ್ತಿ

     

    View this post on Instagram

     

    A post shared by Vicky Kaushal (@vickykaushal09)

    ‘ಅನಿಮಲ್’ ಸಿನಿಮಾದ ಸಕ್ಸಸ್ ಬಳಿಕ ತೃಪ್ತಿ ದಿಮ್ರಿ ‘ಬ್ಯಾಡ್ ನ್ಯೂಸ್’ ಚಿತ್ರ ಒಪ್ಪಿಕೊಂಡಿದ್ದಾರೆ. ವಿಕ್ಕಿ ಕೌಶಲ್ (Vicky Kaushal) ಜೊತೆ ಮೊದಲ ಬಾರಿಗೆ ನಟಿಸಿದ್ದಾರೆ. ಚಿತ್ರದ ‘ತೌಬಾ ತೌಬಾ’ ಸಾಂಗ್ ಹಿಟ್ ಆದ ಬಳಿಕ ಇಬ್ಬರ ರೊಮ್ಯಾಂಟಿಕ್ ಸಾಂಗ್ ಕೂಡ ಪಡ್ಡೆಹುಡುಗರ ನಿದ್ದೆಗೆಡಿಸಿದೆ.

    ಈ ಚಿತ್ರವನ್ನು ಆನಂದ್ ತಿವಾರಿ ನಿರ್ದೇಶನವನ್ನು ಮಾಡಿದ್ದಾರೆ. ಕರಣ್ ಜೋಹರ್ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಈ ಸಿನಿಮಾ ರಿಲೀಸ್‌ಗಾಗಿ ಪಡ್ಡೆಹುಡುಗರು ಎದುರು ನೋಡ್ತಿದ್ದಾರೆ.

  • ತಮಿಳು ನಟ ಧನುಷ್‌ಗೆ ಹಾಟ್ ಬೆಡಗಿ ತೃಪ್ತಿ ದಿಮ್ರಿ ನಾಯಕಿ

    ತಮಿಳು ನಟ ಧನುಷ್‌ಗೆ ಹಾಟ್ ಬೆಡಗಿ ತೃಪ್ತಿ ದಿಮ್ರಿ ನಾಯಕಿ

    ಬಾಲಿವುಡ್‌ನ ಹಾಟ್ ಬೆಡಗಿ ತೃಪ್ತಿ ದಿಮ್ರಿ (Tripti Dimri) ಈಗ ಹೊಸ ಚಿತ್ರವೊಂದಕ್ಕೆ ಆಯ್ಕೆಯಾಗಿದ್ದಾರೆ. ತಮಿಳು ನಟ ಧನುಷ್ (Dhanush) ನಟಿಸಲಿರುವ ಬಾಲಿವುಡ್ ಚಿತ್ರದಲ್ಲಿ ‘ಅನಿಮಲ್’ (Animal) ಸುಂದರಿ ತೃಪ್ತಿ ಹೀರೋಯಿನ್ ಆಗಿದ್ದಾರೆ. ಇದನ್ನೂ ಓದಿ:ಅನಂತ್‌ ಅಂಬಾನಿ ಮದುವೆಯಲ್ಲಿ 160 ವರ್ಷದ ಹಿಂದಿನ ಸೀರೆಯುಟ್ಟು ಕಂಗೊಳಿಸಿದ ಆಲಿಯಾ ಭಟ್

    ‘ಅನಿಮಲ್’ ಸಿನಿಮಾದಲ್ಲಿ ರಣ್‌ಬೀರ್ ಕಪೂರ್ ಜೊತೆ ತೃಪ್ತಿ ದಿಮ್ರಿ ಹಸಿ ಬಿಸಿ ದೃಶ್ಯಗಳಲ್ಲಿ ನಟಿಸಿದ್ದರು. ಈ ಸಿನಿಮಾದ ಸಕ್ಸಸ್ ನಂತರ ಸೌತ್ ಮತ್ತು ಬಾಲಿವುಡ್‌ನಲ್ಲಿ ನಟಿಗೆ ಬೇಡಿಕೆ ಹೆಚ್ಚಾಗಿದೆ. ಈಗ ಮತ್ತೊಂದು ಬಂಪರ್ ಆಫರ್ ಅನ್ನು ನಟಿ ಗಿಟ್ಟಿಸಿಕೊಂಡಿದ್ದಾರೆ.

    ಆನಂದ್ ಎಲ್ ರೈ ನಿರ್ದೇಶನದ ಹೊಸ ಚಿತ್ರದಲ್ಲಿ ತಮಿಳು ನಟ ಧನುಷ್‌ಗೆ ತೃಪ್ತಿ ನಾಯಕಿಯಾಗ್ತಿದ್ದಾರೆ. ಇದೊಂದು ದುರಂತ ಪ್ರೇಮ ಕಥೆಯಾಗಿದ್ದು, ತೃಪ್ತಿ ಪಾತ್ರಕ್ಕೆ ಪ್ರಾಮುಖ್ಯತೆ ಇದೆ. ಎಂದೂ ನಟಿಸಿರದ ವಿಭಿನ್ನ ಪಾತ್ರಕ್ಕೆ ನಟಿ ಜೀವ ತುಂಬಲಿದ್ದಾರೆ.

    ಇನ್ನೂ ‘ಪುಷ್ಪ 2’ (Pushpa 2) ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆ ತೃಪ್ತಿ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕಾರ್ತಿಕ್ ಆರ್ಯನ್ ಜೊತೆಗಿನ ಹೊಸ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ನಟಿಯ ಕೈಯಲ್ಲಿವೆ.

  • ಮುಂಬೈನಲ್ಲಿ ಐಷಾರಾಮಿ ಮನೆ ಖರೀದಿಸಿದ ‘ಅನಿಮಲ್’ ನಟಿ

    ಮುಂಬೈನಲ್ಲಿ ಐಷಾರಾಮಿ ಮನೆ ಖರೀದಿಸಿದ ‘ಅನಿಮಲ್’ ನಟಿ

    ‘ಅನಿಮಲ್’ (Animal) ಸಿನಿಮಾದ ಸಕ್ಸಸ್ ಬಳಿಕ ಬಾಲಿವುಡ್ ನಟಿ ತೃಪ್ತಿ ದಿಮ್ರಿಗೆ (Tripti Dimri) ಬೇಡಿಕೆ ಜಾಸ್ತಿಯಾಗಿದೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ತೃಪ್ತಿ ಈಗ ಮುಂಬೈನಲ್ಲಿ ದುಬಾರಿ ಮನೆಯನ್ನು ಖರೀದಿಸಿದ್ದಾರೆ.

    ಮುಂಬೈನ ಬಾಂದ್ರಾ ವೆಸ್ಟ್ ಪ್ರದೇಶದ ಕಾರ್ಟರ್ ರಸ್ತೆಯಲ್ಲಿ ತೃಪ್ತಿ ದಿಮ್ರಿ ಐಷಾರಾಮಿ ಬಂಗಲೆಯನ್ನು ಖರೀದಿಸಿದ್ದಾರೆ. ಈ ದುಬಾರಿ ಬಂಗಲೆಯ ಬೆಲೆ 14 ಕೋಟಿ ರೂ. ಮೌಲ್ಯದಾಗಿದೆ. ಇದನ್ನೂ ಓದಿ:ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ರಜನಿಕಾಂತ್

    ಇದೀಗ ಮನೆಗೆ 70 ಲಕ್ಷ ರೂ. ಅಡ್ವಾನ್ಸ್ ಕೂಡ ಪಾವತಿಸಲಾಗಿದೆ. ಈ ಬಂಗಲೆಯನ್ನು ಒಟ್ಟು 2,226 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ತೃಪ್ತಿ ಈ ಬಂಗಲೆಯನ್ನು ಜೂನ್ 3ರಂದು ಖರೀದಿಸಿದ್ದಾರೆ. ಇದೀಗ ನೆಚ್ಚಿನ ನಟಿಯ ಸಕ್ಸಸ್ ನೋಡಿ ಅಭಿಮಾನಿಗಳು ಖುಷಿಪಡ್ತಿದ್ದಾರೆ.

    ಇನ್ನೂ ಕರಣ್ ಜೋಹರ್ ನಿರ್ಮಾಣದ ಹೊಸ ಸಿನಿಮಾ, ಕಾರ್ತಿಕ್ ಆರ್ಯನ್ ಜೊತೆ ಹೊಸ ಚಿತ್ರ, ಅನಿಮಲ್ 2, ಪುಷ್ಪ 2ನಲ್ಲಿ ಐಟಂ ಡ್ಯಾನ್ಸ್ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ತೃಪ್ತಿ ಕೈಯಲ್ಲಿವೆ.

  • ಸಿದ್ಧಾಂತ್ ಚತುರ್ವೇದಿ ಜೊತೆ ತೃಪ್ತಿ ದಿಮ್ರಿ ರೊಮ್ಯಾನ್ಸ್

    ಸಿದ್ಧಾಂತ್ ಚತುರ್ವೇದಿ ಜೊತೆ ತೃಪ್ತಿ ದಿಮ್ರಿ ರೊಮ್ಯಾನ್ಸ್

    ‘ಅನಿಮಲ್’ (Animal) ಸಿನಿಮಾದ ಹಾಟ್ ಬೆಡಗಿ ತೃಪ್ತಿ ದಿಮ್ರಿ ‘ಪುಷ್ಪ 2’ ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕ್ತಾರೆ ಎಂಬ ಸುದ್ದಿ ವೈರಲ್ ಆದ ಬೆನ್ನಲ್ಲೇ ಇದೀಗ ಬಿಟೌನ್‌ನಲ್ಲಿ ಬಿಗ್ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಸಿದ್ಧಾಂತ್ ಚತುರ್ವೇದಿ (Siddhant Chaturvedi) ಜೊತೆ ಡ್ಯುಯೇಟ್ ಹಾಡೋಕೆ ರೆಡಿಯಾಗಿದ್ದಾರೆ. ಇದನ್ನೂ ಓದಿ:ತಮಿಳು ನಟ ಸಿಂಬುಗೆ ಜಾನ್ವಿ ಕಪೂರ್ ನಾಯಕಿ

    ಖ್ಯಾತ ನಿರ್ದೇಶಕ ಕಮ್ ನಿರ್ಮಾಪಕ ಕರಣ್ ಜೋಹರ್ ‘ಧಡಕ್ 2’ (Dhadak 2) ಸಿನಿಮಾ ಮಾಡಲು ಮುಂದಾಗಿದ್ದಾರೆ. ಸಿದ್ಧಾಂತ್ ಮತ್ತು ತೃಪ್ತಿ ಈ ಹೊಸ ಜೋಡಿಯನ್ನು ಜೊತೆಯಾಗಿಸಿ ವಿಭಿನ್ನ ಪ್ರೇಮ ಕಥೆಯನ್ನು ತೋರಿಸಲು ಹೊರಟಿದ್ದಾರೆ. ತಂಡದ ಕಡೆಯಿಂದ ಅಫಿಷಿಯಲ್ ಅನೌನ್ಸ್‌ಮೆಂಟ್ ಕೂಡ ಆಗಿದೆ.

    ‘ಅನಿಮಲ್’ ಸಿನಿಮಾದಲ್ಲಿ ರಣ್‌ಬೀರ್ ಜೊತೆ ಬೋಲ್ಡ್ ಆಗಿ ಕಾಣಿಸಿಕೊಂಡ ಮೇಲೆ ತೃಪ್ತಿಗೆ ಅದೃಷ್ಟ ಖುಲಾಯಿಸಿದೆ. ಧಡಕ್ 2ಗೆ ಚಾನ್ಸ್ ಸಿಕ್ಕಿದೆ. ಸಿದ್ಧಾಂತ್ ಕಾಣಿಸಿಕೊಳ್ತಿರುವ ತೃಪ್ತಿಗೆ ಉತ್ತಮ ಪಾತ್ರವೇ ಸಿಕ್ಕಿದೆ. ನಾಯಕಿ ಪಾತ್ರಕ್ಕೆ ಭಾರೀ ಪ್ರಾಮುಖ್ಯತೆ ಇದ್ದು, ಜನರಿಗೂ ಈ ಸಿನಿಮಾ ಕನೆಕ್ಟ್ ಆಗಲಿದೆಯಂತೆ.

    2018ರಲ್ಲಿ ‘ಧಡಕ್’ ಸಿನಿಮಾದಲ್ಲಿ ಇಶಾನ್‌ಗೆ ನಾಯಕಿಯಾಗಿ ಜಾನ್ವಿ ಕಪೂರ್ ನಟಿಸಿದ್ದರು. ಜಾನ್ವಿ ಚೊಚ್ಚಲ ಸಿನಿಮಾಗೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದರು.

  • ‘ಪುಷ್ಪ 2’ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಜಾನ್ವಿ ಕಪೂರ್‌

    ‘ಪುಷ್ಪ 2’ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಜಾನ್ವಿ ಕಪೂರ್‌

    ಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ (Pushpa 2) ಸಿನಿಮಾ ಬಗ್ಗೆ ಇಂಟ್ರಸ್ಟಿಂಗ್ ಅಪ್‌ಡೇಟ್‌ವೊಂದು ಹೊರಬಿದ್ದಿದೆ. ತೃಪ್ತಿ ದಿಮ್ರಿ ಒಬ್ಬರೇ ಅಲ್ಲ, ಹಾಟ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ಕೂಡ ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಜೊತೆ ಡ್ಯಾನ್ಸ್ ಮಾಡಲಿದ್ದಾರೆ. ಈ ಮೂವರ ಜುಗಲ್‌ಬಂದಿ ಬಗ್ಗೆ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ‘ಪುಷ್ಪ’ ಪಾರ್ಟ್ 1ರಲ್ಲಿ ಸಮಂತಾ ಡ್ಯಾನ್ಸ್ ನೋಡಲೆಂದೇ ಸಾಕಷ್ಟು ಜನ ಥಿಯೇಟರ್‌ಗೆ ಆಗಮಿಸಿದ್ದರು. ಆ ಐಟಂ ಹಾಡು ಸೂಪರ್ ಹಿಟ್ ಆಗಿತ್ತು. ಪುಷ್ಪ 2ನಲ್ಲಿ ಕೂಡ ಅದೇ ರೀತಿ ಸ್ಪೆಷಲ್ ಸಾಂಗ್ ಇದ್ದರೆ ಪ್ರೇಕ್ಷಕರನ್ನು ಸೆಳೆಯಬಹುದು ಎಂಬುದು ಚಿತ್ರತಂಡದ ಲೆಕ್ಕಚಾರ. ಇತ್ತೀಚೆಗೆ ತೃಪ್ತಿ (Tripti Dimri) ಚಿತ್ರತಂಡ ಸೇರುವ ಬಗ್ಗೆ ಸುದ್ದಿಯಾಗಿತ್ತು. ಈಗ ‘ದೇವರ’ ಚಿತ್ರದ ನಟಿ ಜಾನ್ವಿ (Janhvi Kapoor)  ಕೂಡ ಕೈಜೋಡಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ಶೂಟಿಂಗ್ ಮುಗಿಸಿದ ಶಿವಕಾರ್ತಿಕೇಯನ್, ಸಾಯಿ ಪಲ್ಲವಿ ನಟನೆಯ ‘ಅಮರನ್’ ಸಿನಿಮಾ

    ಈ ಬಾರಿ ಅಲ್ಲು ಅರ್ಜುನ್ (Allu Arjun) ಅಲಿಯಾಸ್ ಪುಷ್ಪರಾಜ್ ಜೊತೆ ಬಾಲಿವುಡ್‌ನ ಹಾಟ್ ಬೆಡಗಿಯರಾದ ತೃಪ್ತಿ ದಿಮ್ರಿ ಮತ್ತು ಜಾನ್ವಿ ಕಪೂರ್ ಸೊಂಟ ಬಳುಕಿಸಲಿದ್ದಾರೆ. ಮೂವರು ಒಂದೇ ಸ್ಟೇಜ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಮಂತಾ ಹೆಜ್ಜೆ ಹಾಕಿದ ಹಾಡಿನಂತೆಯೇ ಪುಷ್ಪ 2ನಲ್ಲಿ ಈ ಬಾರಿಯೂ ಕೂಡ ಮ್ಯೂಸಿಕ್ ಕಿಕ್ ಇರಲಿದೆ ಎನ್ನಲಾಗಿದೆ.

    ಒಂದು ವೇಳೆ, ಈ ಸುದ್ದಿ ನಿಜವೇ ಆಗಿದ್ದಲ್ಲಿ ಪ್ರೇಕ್ಷಕರಿಗೆ ಮನರಂಜನೆ ಗ್ಯಾರಂಟಿ. ಇದೆಲ್ಲದರ ನಡುವೆ ಮೇ 29ರಂದು ಕಪಲ್ ಡ್ಯಾನ್ಸ್ ರಿಲೀಸ್ ಆಗಲಿದೆ ಎಂದು ರಶ್ಮಿಕಾ ಮಂದಣ್ಣ ಮಾಹಿತಿ ನೀಡಿದ್ದರು. ಆ ಸಾಂಗ್ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ. ಅಂದಹಾಗೆ, ‘ಪುಷ್ಪ 2’ ಸಿನಿಮಾ ಇದೇ ಆಗಸ್ಟ್ 15ಕ್ಕೆ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ.