Tag: triple talak

  • ಮುಸ್ಲಿಂ ಸಮುದಾಯದ ಪುರುಷರಿಗಷ್ಟೇ ಕಾಂಗ್ರೆಸ್ ಸೀಮಿತವೇ: ಮೋದಿ ಪ್ರಶ್ನೆ

    ಮುಸ್ಲಿಂ ಸಮುದಾಯದ ಪುರುಷರಿಗಷ್ಟೇ ಕಾಂಗ್ರೆಸ್ ಸೀಮಿತವೇ: ಮೋದಿ ಪ್ರಶ್ನೆ

    ನವದೆಹಲಿ: ಕಾಂಗ್ರೆಸ್ ಪಕ್ಷ ಕೇವಲ ಮುಸ್ಲಿಂ ಸಮುದಾಯದ ಪುರುಷರಿಗಷ್ಟೇ ಸೀಮಿತವಾಗಿದೇಯಾ ಎಂದು ಪ್ರಶ್ನಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಉತ್ತರ ಪ್ರದೇಶದ ಅಜಂಪುರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ಮಾತ್ರ ಸೀಮಿತವಾಗಿದ್ದರೆ ಅದು ಅವರಿಗೆ ಬಿಟ್ಟಿದ್ದು. ಆದರೆ ಕಾಂಗ್ರೆಸ್ ಮುಸ್ಲಿಂ ಪುರುಷರಿಗೆ ಮಾತ್ರ ಸೀಮಿತವಾಗಿದೆಯಾ? ಏಕೆಂದರೆ ತ್ರಿವಳಿ ತಲಾಕ್, ನಿಖಾ ಹಲಾಲ ವಿರುದ್ಧ ಮುಸ್ಲಿಂ ಮಹಿಳೆಯರು ಹೋರಾಟ ನಡೆಸುವ ಸಂದರ್ಭದಲ್ಲಿ ನೀವು ಅವರ ಪರ ನಿಲ್ಲಲಿಲ್ಲ ಎಂದು ಆರೋಪಿಸಿದರು.

    ಇದೇ ವೇಳೆ ಬಿಎಸ್‍ಪಿ ಹಾಗೂ ಸಮಾಜವಾದಿ ಪಕ್ಷದ ನಾಯಕರ ವಿರುದ್ಧವೂ ವಾಗ್ದಾಳಿ ನಡೆಸಿದ ಮೋದಿ, ಕೆಲವು ಪಕ್ಷಗಳು ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಸಿದ್ಧಾಂತವನ್ನು ಪಾಲನೆ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ಸರ್ಕಾರ ರೂಪಿಸುತ್ತಿರುವ ಯೋಜನೆಗಳು ಎಲ್ಲರ ಅಭಿವೃದ್ಧಿಗಾಗಿ ಎಂಬ ಅಂಶವನ್ನೇ ಮರೆತಿದ್ದಾರೆ. ಇಂತಹ ಪಕ್ಷಗಳು ಕೇವಲ ತಮ್ಮ ಕುಟುಂಬ, ಆಪ್ತರ ಅಭಿವೃದ್ಧಿಗಾಗಿ ಮಾತ್ರ ಹೆಚ್ಚಿನ ಗಮನಹರಿಸುತ್ತವೆ. ದಲಿತರು ಹಾಗೂ ಹಿಂದುಳಿದವರನ್ನು ಕೇವಲ ರಾಜಕೀಯ ಉದ್ದೇಶಕ್ಕಾಗಿ ಬಳಕೆ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಪರಸ್ಪರ ಆರೋಪ ಮಾಡುತ್ತಿದ್ದ ಅವರು ಇಂದು ಮೋದಿಯನ್ನು ಎದುರಿಸಲು ಒಂದಾಗಿದ್ದರೆ ಎಂದು ವಾಗ್ದಾಳಿ ನಡೆಸಿದರು.

    2019 ರ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಎರಡು ದಿನಗಳ ಹಿಂದೆಯಷ್ಟೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ಕಾಂಗ್ರೆಸ್ ಕೇವಲ ಕೋಮುಭಾವನೆಯನ್ನು ಮುಂದಿಟ್ಟು ಚುನಾವಣೆ ಎದುರಿಸಲು ಮುಂದಾಗಿದೆ ಎಂದು ಆರೋಪಿಸಿದ್ದರು.

     

  • ಫೇಸ್ ಬುಕ್ ಮೂಲಕ ತ್ರಿವಳಿ ತಲಾಖ್ ನೀಡಿದ ಪತಿ

    ಫೇಸ್ ಬುಕ್ ಮೂಲಕ ತ್ರಿವಳಿ ತಲಾಖ್ ನೀಡಿದ ಪತಿ

    ಗಾಂಧಿನಗರ: ಫೇಸ್‍ಬುಕ್ ಮೂಲಕ ಪತ್ನಿಗೆ ತ್ರಿವಳಿ ತಲಾಖ್ ನೀಡಿರುವ ಘಟನೆ ಗುಜರಾತ್ ರಾಜ್‍ಕೋಟ್ ನ ಧೋರಾಜಿ ಪ್ರದೇಶದಲ್ಲಿ ನಡೆದಿದೆ.

    ಕಾನೂನತ್ಮಾಕವಾಗಿ ತ್ರಿವಳಿ ತಲಾಕ್ ನೀಡುವುದನ್ನು ನಿಷೇಧಿಸಿದ್ದರೂ ರಫೀಕ್ ಹನ್ ಎಂಬ ವ್ಯಕ್ತಿ ತನ್ನ ಪತ್ನಿ ಸರಬಾನೊ ಅವರಿಗೆ ಸಾಮಾಜಿಕ ಜಾಲತಾಣ ಫೇಸ್‍ಬುಕ್ ಮೂಲಕ ತಲಾಕ್ ನೀಡಿದ್ದಾನೆ.

    ಪತಿಯಿಂದ ತಲಾಖ್ ಸಂದೇಶ ಪಡೆದ ಪತ್ನಿ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರೂ ಈವರೆಗೂ ಅಧಿಕಾರಿಗಳು ವ್ಯಕ್ತಿಯ ವಿರುದ್ಧ ಲಿಖಿತ ದೂರು ದಾಖಲಿಸಿಕೊಂಡಿಲ್ಲ ಎಂದು ಸ್ಥಳಿಯ ಮಾಧ್ಯಮವೊಂದು ವರದಿ ಮಾಡಿದೆ.

    ಅಂದಹಾಗೇ ಈ ದಂಪತಿಗೆ 2015 ರಲ್ಲಿ ಮದುವೆಯಾಗಿದ್ದರು. ಬಳಿಕ ಇಬ್ಬರ ಸಂಬಂಧದಲ್ಲಿ ಬಿರುಕು ಉಂಟಾಗಿ ಒಂದು ವರ್ಷದ ನಂತರ ಪತ್ನಿ ಸರಬಾನೊ ತವರು ಸೇರಿದ್ದರು. ಇಬ್ಬರ ದಾಂಪತ್ಯ ಜೀವನ ಸುಧಾರಿಸಲು ಆಕೆಯ ಪೋಷಕರು ರಫೀಕ್‍ನ ಜೊತೆ ಮಾತುಕತೆ ನಡೆಸಿದ್ದರು ಸಮಸ್ಯೆ ಬಗೆಹರಿಸಲು ವಿಫಲಾಗಿದ್ದರು. ಬಳಿಕ ಸರಬಾನೊ ಕೌಟುಂಬಿಕ ನ್ಯಾಯಾಲಯದಲ್ಲಿ ಪತಿಯಿಂದ ಜೀವನಾಂಶ ನೀಡಲು ಅರ್ಜಿ ಸಲ್ಲಿದ್ದರು.

    ಕೋರ್ಟ್ ಸರಬಾನೊಗೆ ಅರ್ಜಿ ವಿಚಾರಣೆ ನಡೆಸಿ ಮಾಸಿಕ ಮೂರು ಸಾವಿರ ರೂ. ನೀಡುವಂತೆ ರಫೀಕ್‍ಗೆ ಆದೇಶಿಸಿತ್ತು. ಆದರೆ ಕೆಲ ಕಾಲ ಜೀವನಾಂಶ ನೀಡಿದ ರಫೀಕ್ ಕಳೆದ ಐದು ತಿಂಗಳಿಂದ ಯಾವುದೇ ಹಣ ನೀಡಿರಲಿಲ್ಲ. ಹೀಗಾಗಿ ಕೋರ್ಟ್‍ಗೆ ಹಾಜರಾಗುವಂತೆ ರಫೀಕ್‍ಗೆ ವಾರಂಟ್ ನೀಡಲಾಗಿತ್ತು. ಅದರಂತೆ ಹಾಜರಾದ ಆತ ಸರಿಯಾದ ರೀತಿಯಲ್ಲಿ ಜೀವನಾಂಶ ಪಾವತಿಸುವುದಾಗಿ ನ್ಯಾಯಾಲಯದಲ್ಲಿ ಭರವಸೆ ನೀಡಿದ್ದ.

    ಆದರೆ ಫೆಬ್ರವರಿ 25 ರಂದೆ ರಫೀಕ್ ತನ್ನ ಪತ್ನಿಯ ಫೋಟೋವನು ಫೇಸ್‍ಬುಕ್ ನಲ್ಲಿ ಫೋಸ್ಟ್ ಮಾಡಿ ನಾನು ಇಂದು ನನ್ನ ಪತ್ನಿಗೆ ವಿಚ್ಛೇದನ ನೀಡಿದ್ದೇನೆ, ತಲಾಖ್, ತಲಾಖ್, ತಲಾಖ್ ಎಂದು ಬರೆದುಕೊಂಡಿದ್ದ. ಇದನ್ನು ಗಮನಿಸಿದ ಪತ್ನಿ ಪೊಲೀಸ್ ಠಾಣೆಗೆ ತೆರಳಿ ದೂರನ್ನು ಸಲ್ಲಿಸಿದ್ದರು. ಆದರೆ ಸರಬಾನೊ ಅವರ ದೂರು ಪಡೆದ ಪೊಲೀಸರು ರಫೀಕ್ ವಿರುದ್ಧ ಎಫ್‍ಐಆರ್ ದಾಖಲಿಸದೆ ನಿರ್ಲಕ್ಷ ವಹಿಸಿದ್ದರು. ಇದರ ವಿರುದ್ಧ ಮತ್ತೆ ಸರಬಾನೊ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಸರಬಾನೊ ಪರ ವಕೀಲ ಕಾರ್ತಿಕೇಯ ಪರೇಖ್, ಪ್ರಕರಣದ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳ ಗಮನ ಸೆಳೆಯಲು ತೀರ್ಮಾನಿಸಿದ್ದು, ಸಾಮಾಜಿಕ ಜಾಲತಾಣದ ಮೂಲಕ ರಫೀಕ್ ನೀಡಿರುವ ತಲಾಖ್ ಕಾನೂನು ಉಲ್ಲಂಘನೆಯಾಗಿದೆ ಎಂದು ತಿಳಿಸಿದ್ದಾರೆ.

  • ತ್ರಿವಳಿ ತಲಾಖ್ ನೀಡ್ತೀನಿ ಅನ್ನೋದಾಗಿ ಬೆದರಿಕೆ ಹಾಕಿದ್ದ ಪತಿ ಅಂದರ್

    ತ್ರಿವಳಿ ತಲಾಖ್ ನೀಡ್ತೀನಿ ಅನ್ನೋದಾಗಿ ಬೆದರಿಕೆ ಹಾಕಿದ್ದ ಪತಿ ಅಂದರ್

    ಬೆಂಗಳೂರು: ಪತ್ನಿಗೆ ತ್ರಿವಳಿ ತಲಾಖ್ ನೀಡುವುದಾಗಿ ಬೆದರಿಕೆ ಹಾಕಿದ್ದ ಪತಿಯನ್ನು ಬಂಧಿಸುವಲ್ಲಿ ಕೆ.ಆರ್.ಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

    ರಿಯಾಜ್ ಬಂಧಿತ ಪತಿಯಾಗಿದ್ದು, ಈತನ ವಿರುದ್ಧ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪತ್ನಿ ಶಬ್ನಂ ದೂರು ದಾಖಲಿಸಿದ್ದರು.

    2004ರಲ್ಲಿ ರಿಯಾಜ್ ಮತ್ತು ಶಬ್ನಂ ಜೋಡಿ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಮದುವೆಯಾಗಿದ್ದರು. ವರದಕ್ಷಿಣೆಗಾಗಿ ಹಲವು ಭಾರಿ ಪೀಡಿಸಿದ್ದ ಪತಿ ರಿಯಾಜ್ ವರದಕ್ಷಣೆ ನೀಡದಿದ್ದರೆ ತ್ರಿವಳಿ ತಲಾಖ್ ನೀಡುವುದಾಗಿ ಬೆದರಿಕೆ ಹಾಕಿದ್ದ.

    ವೃತಿಯಲ್ಲಿ ಇಂಜಿನಿಯರ್ ಆಗಿರುವ ರಿಯಾಜ್ ಕೆಲಸದ ನಿಮಿತ್ತ ಒರಿಸ್ಸಾದ ಭುವನೇಶ್ವರ್ ಹಾಗೂ ವಿದೇಶಕ್ಕೂ ತೆರಳಿರುವುದಾಗಿ ಸುಳ್ಳು ಹೇಳಿದ್ದ. ಪಾಸ್ ಪೋರ್ಟ್ ಇಲ್ಲದೆಯೇ ವಿದೇಶಕ್ಕೆ ತೆರಳುವ ಕುರಿತು ಅನುಮಾನಗೊಂಡ ಶಬ್ನಂ, ಪತಿ ಕುರಿತು ಆತ ಕೆಲಸ ಮಾಡುವ ಕಂಪೆನಿಯಲ್ಲಿ ವಿಚಾರಿಸಿದ್ದಾಳೆ. ಈ ವೇಳೆ ರಿಯಾಜ್ ನಗರದಲ್ಲೇ ಮತ್ತೊಂದು ಮಹಿಳೆ ಜೊತೆ ಆಕ್ರಮ ಸಂಬಂಧವಿರುವ ಅಂಶ ಬೆಳಕಿಗೆ ಬಂದಿದೆ. ಇದನ್ನೂ ಓದಿ: ತ್ರಿವಳಿ ತಲಾಖ್ ನಿಷೇಧ – ಸುಪ್ರೀಂನಿಂದ ಮಹತ್ವದ ತೀರ್ಪು

    ರಿಯಾಜ್ ಆಕ್ರಮ ಸಂಬಂಧ ಹೊಂದಿರುವ ಮಹಿಳೆಗೆ ನಗರದಲ್ಲೇ ಮತ್ತೊಂದು ಮನೆ ಮಾಡಿಕೊಟ್ಟಿದ್ದಾನೆ. ಅಲ್ಲದೇ ಈಗಾಗಲೇ ತ್ರಿವಳಿ ತಲಾಖ್ ಕೇಂದ್ರ ಸರ್ಕಾರ ನಿಷೇಧ ಮಾಡಿದ್ದರೂ ತ್ರಿವಳಿ ತಲಾಖ್ ನೀಡುವುದಾಗಿ ಬೆದರಿಕೆ ಹಾಕುತ್ತಿದ್ದ ಕಾರಣ ಪತ್ನಿ ರಿಯಾಜ್ ವಿರುದ್ಧ ದೂರು ದಾಖಲಿಸಿದ್ದಾರೆ. ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ವಿಷಯ ತಿಳಿಯುತ್ತಿದಂತೆ ರಿಯಾಜ್ ನಾಪತ್ತೆಯಾಗಿದ್ದ. ಪ್ರಕರಣದ ವಿಚಾರಣೆ ನಡೆಸಿದ ಕೆ.ಆರ್.ಪುರ ಪೊಲೀಸರು ರಿಯಾಜ್ ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಸ್ಪೀಡ್ ಪೋಸ್ಟ್ ನಲ್ಲಿ ತಲಾಖ್ ನೀಡಿದ್ದ ಪತಿ ವಿರುದ್ಧ ಗೆದ್ದು ಅನಿಷ್ಟ ಪದ್ದತಿಗೆ ಮುಕ್ತಿ ಹಾಡಿದ್ದು ಈ ಮಹಿಳೆ