Tag: triple riding

  • ದೊಡ್ಮನೆ ಹೀರೋಗೆ ಮೇಘಾ ಶೆಟ್ಟಿ ಹೀರೋಯಿನ್

    ದೊಡ್ಮನೆ ಹೀರೋಗೆ ಮೇಘಾ ಶೆಟ್ಟಿ ಹೀರೋಯಿನ್

    ಕಿರುತೆರೆಯ ಜನಪ್ರಿಯ ನಟಿ ಮೇಘಾ ಶೆಟ್ಟಿ (Megha Shetty)  ಈಗ ಬೆಳ್ಳಿತೆರೆಯಲ್ಲಿ ಬಂಪರ್ ಆಫರ್ ಬಾಚಿಕೊಳ್ತಿದ್ದಾರೆ. ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ಚಿತ್ರಕ್ಕೆ (Vinay Rajkumar) ನಾಯಕಿಯಾಗಿ ನಟಿ ಸೆಲೆಕ್ಟ್ ಆಗಿದ್ದಾರೆ. ‘ಗ್ರಾಮಾಯಣ’ (Gramayana Film) ಚಿತ್ರಕ್ಕೆ ಜೊತೆ ಜೊತೆಯಲಿ ನಟಿ ಎಂಟ್ರಿ ಕೊಡುತ್ತಿದ್ದಾರೆ.

    ದೊಡ್ಮನೆ ಹೀರೋ ವಿನಯ್ ರಾಜ್‌ಕುಮಾರ್ ನಟನೆಯ ಗ್ರಾಮಾಯಣ ಚಿತ್ರ ಇತ್ತೀಚೆಗೆ ಮಗದೊಮ್ಮೆ ಚಾಲನೆ ನೀಡಲಾಗಿದ್ದು, ಈ ಸಿನಿಮಾದಲ್ಲಿ ವಿನಯ್ ಎದುರು ನಾಯಕಿಯಾಗಿ ಕರಾವಳಿ ನಟಿ ಮೇಘಾ ಶೆಟ್ಟಿ ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ:ದುನಿಯಾ ವಿಜಯ್ ನಿರ್ದೇಶನದ ಭೀಮನ ‘ಸೈಕ್ ಸಾಂಗ್’ ರಿಲೀಸ್

    ‘ಗ್ರಾಮಾಯಣ’ ಹಳ್ಳಿ ಸೊಗಡಿನ ಕಥೆಯಾಗಿದ್ದು, ಮೇಘಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅಕ್ಟೋಬರ್ 4ರಿಂದ ಹೊಸದಾಗಿ ಚಿತ್ರೀಕರಣ ಶುರು ಮಾಡಲಾಗುತ್ತದೆ. ಕೆಲ ವರ್ಷಗಳ ಹಿಂದೆ ಆರಂಭವಾಗಿದ್ದ ಗ್ರಾಮಾಯಣ ಚಿತ್ರ ಈಗ ಹೊಸ ಟೀಮ್‌ನೊಂದಿಗೆ ಮತ್ತೆ ಶುರುವಾಗುತ್ತಿದೆ.

    ಗೋಲ್ಡನ್ ಹೀರೋ ಗಣೇಶ್‌ಗೆ (Golden Star Ganesh) ನಾಯಕಿ ‘ತ್ರಿಬಲ್ ರೈಡಿಂಗ್’ (Triple Riding) ಸಿನಿಮಾದಲ್ಲಿ ನಟಿಸಿದ್ದರು. ಧನ್ವೀರ್ ಗೌಡ ನಟನೆಯ ಕೈವ ಸಿನಿಮಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ‘ಆಪರೇಷನ್ ಲಂಡನ್ ಕೆಫೆ’ ಸಿನಿಮಾದಲ್ಲೂ ನಾಯಕಿಯಾಗಿ ನಟಿಸಿದ್ದಾರೆ. ಸದ್ಯದಲ್ಲೇ ರಿಲೀಸ್ ಅಪ್‌ಡೇಟ್ ಸಿಗಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗ್ಲ್ಯಾಮರ್ ಡಾಲ್‌ನಂತೆ ಕಂಗೊಳಿಸಿದ ಮೇಘಾ ಶೆಟ್ಟಿ

    ಗ್ಲ್ಯಾಮರ್ ಡಾಲ್‌ನಂತೆ ಕಂಗೊಳಿಸಿದ ಮೇಘಾ ಶೆಟ್ಟಿ

    ಕಿರುತೆರೆಯ ಬ್ಯೂಟಿ ಕ್ವೀನ್ ಮೇಘಾ ಶೆಟ್ಟಿ (Megha Shetty) ಈಗ ಹಿರಿತೆರೆಯಲ್ಲಿ ಆಕ್ಟೀವ್ ಆಗಿದ್ದಾರೆ. ಅದಕ್ಕಾಗಿ ಹೊಸ ಬಗೆಯ ಲುಕ್‌ನಲ್ಲಿ ಆಗಾಗ ಮಿಂಚುತ್ತಾರೆ. ಈಗ ಕರ್ಲಿ ಹೇರ್ ಸ್ಟೈಲ್‌ನಲ್ಲಿ ಗ್ಲ್ಯಾಮರ್ ಗೊಂಬೆಯಂತೆ ಜೊತೆ ಜೊತೆಯಲಿ (Jothe Jotheyali) ನಟಿ ಕಂಗೊಳಿಸಿದ್ದಾರೆ.

    ಕಪ್ಪು ಬಣ್ಣದ ಉಡುಗೆಯಲ್ಲಿ ಸ್ಟೈಲೀಶ್ ಲುಕ್‌ನಲ್ಲಿ ಮೇಘಾ ಮಿಂಚಿದ್ದಾರೆ. ಕಪ್ಪು ಬಣ್ಣದ ಶಾರ್ಟ್ ಡ್ರೆಸ್ ಧರಿಸಿ, ಕ್ಯಾಮೆರಾ ಕಣ್ಣಿಗೆ ಸ್ಟೈಲ್ ಆಗಿ ಪೋಸ್ ನೀಡಿದ್ದಾರೆ. ಗ್ಲ್ಯಾಮರ್ ಡಾಲ್‌ನಂತೆ ಕಾಣ್ತಿರೋ ಮೇಘಾ ನೋಡಿ ಪಡ್ಡೆ ಹುಡುಗರು ಬೋಲ್ಡ್ ಆಗಿದ್ದಾರೆ. ಸದ್ಯ ಈ ಫೋಟೋ ಸಖತ್ ವೈರಲ್ ಆಗುತ್ತಿದೆ.‌ ಇದನ್ನೂ ಓದಿ:ನಾನಿನ್ನೂ ಸಿಂಗಲ್, ದಿಶಾ ಜೊತೆಗಿನ ಬ್ರೇಕಪ್ ಬಗ್ಗೆ ಟೈಗರ್ ಶ್ರಾಫ್ ಸ್ಪಷ್ಟನೆ

    ‘ಜೊತೆ ಜೊತೆಯಲಿ’ ಸೀರಿಯಲ್ ಮೂಲಕ ಅನು ಸಿರಿಮನೆಯಾಗಿ ಬಣ್ಣ ಹಚ್ಚಿದ ಕರಾವಳಿ ಬ್ಯೂಟಿ ಮೇಘಾ ಶೆಟ್ಟಿ ಈಗ ಸಾಲು ಸಾಲು ಸಿನಿಮಾಗಳನ್ನ ಮಾಡ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿ, ಜಯಿಸಬೇಕು ಅಂತಾ ಹೊಸ ಬಗೆಯ ಪಾತ್ರಗಳ ಅನ್ವೇಷಣೆಯಲ್ಲಿದ್ದಾರೆ.

    ಆಪರೇಷನ್ ಲಂಡನ್ ಕೆಫೆ(Operation London Cafe), ಕೈವ, ಸಿನಿಮಾಗಳು ಮೇಘಾ ಶೆಟ್ಟಿ ಕೈಯಲ್ಲಿವೆ. ಗೋಲ್ಡನ್ ಸ್ಟಾರ್ ಗಣೇಶ್(Golden Star Ganesh) ಜೊತೆ ತ್ರಿಬಲ್ ರೈಡಿಂಗ್, ಡಾರ್ಲಿಂಗ್ ಕೃಷ್ಣ (Darling Krishna) ಜೊತೆ ‘ದಿಲ್ ಪಸಂದ್’ ಸಿನಿಮಾ ಮಾಡಿ ನಟಿ ಮೆಚ್ಚುಗೆ ಗಳಿಸಿದ್ದಾರೆ.

    ‘ಜೊತೆ ಜೊತೆಯಲಿ’ ಸೀರಿಯಲ್ ಮಾಡಿ ಗೆದ್ದು ಬೀಗಿರೋ ನಟಿ, ಮುಂದೆ ಮತ್ತೆ ಕಿರುತೆರೆಯಲ್ಲಿ ನಟಿಸುವ ಅವಕಾಶ ಸಿಕ್ಕರೆ ಕಾಣಿಸಿಕೊಳ್ತಿನಿ. ಜನರಿಗೆ ಸಿನಿಮಾಗಿಂತ ಟಿವಿ ಕ್ಷೇತ್ರದಿಂದಲೇ ಹೆಚ್ಚು ಹತ್ತಿರ ಆಗಬಹುದು ಅಂತಾರೆ ನಟಿ ಮೇಘಾ. ಅದೇನೇ ಇರಲಿ ಬೆಳ್ಳಿ ಪರದೆಯಲ್ಲಿ ಯುವ ನಟಿ ಗೆಲ್ಲಲಿ ಎಂಬುದೇ ಅಭಿಮಾನಿಗಳ ಆಶಯ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವರ್ಕೌಟ್ ಫೋಟೋ ಹಂಚಿಕೊಂಡ ‘ಜೊತೆ ಜೊತೆಯಲಿ’ ನಟಿ

    ವರ್ಕೌಟ್ ಫೋಟೋ ಹಂಚಿಕೊಂಡ ‘ಜೊತೆ ಜೊತೆಯಲಿ’ ನಟಿ

    ಟಿ ಮೇಘಾ ಶೆಟ್ಟಿ (Megha Shetty) ಅವರು ಸದ್ಯ ವರ್ಕೌಟ್ ಮೂಡ್‌ನಲ್ಲಿದ್ದಾರೆ. ಜನಪ್ರಿಯ ‘ಜೊತೆ ಜೊತೆಯಲಿ’ (Jothe Jotheyali) ಸೀರಿಯಲ್ ಮುಗಿದ ಮೇಲೆ ತಮ್ಮ ಫಿಟ್‌ನೆಸ್ ಕಡೆ ಹೆಚ್ಚು ಗಮನ ನೀಡುತ್ತಿದ್ದಾರೆ. ಸದ್ಯ ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ನಟಿ ಹಂಚಿಕೊಂಡಿದ್ದಾರೆ.

    ‘ಜೊತೆ ಜೊತೆಯಲಿ’ ಸೀರಿಯಲ್ ಮೂಲಕ ಟಿವಿ ಕಿರುತೆರೆಗೆ ಲಗ್ಗೆಯಿಟ್ಟ ನಟಿ ಮೇಘಾ ಅವರು ಸೀರಿಯಲ್ ಜೊತೆ ಸಿನಿಮಾಗಳನ್ನು ಮಾಡುತ್ತಾ ನಾಲ್ಕು ವರ್ಷ ಕಿರುತೆರೆಯಲ್ಲಿ ರಂಜಿಸಿದ್ದರು. ಅಭಿಮಾನಿಗಳ ನೆಚ್ಚಿನ ಸೀರಿಯಲ್‌ಗೆ ಬ್ರೇಕ್ ಬಿದ್ದಿದೆ. ಅನು ಸಿರಿಮನೆ (Anu Sirimane)  ಪಾತ್ರಕ್ಕೂ ಕೂಡ ತೆರೆ ಬಿದ್ದಿದೆ.

    ಸೀರಿಯಲ್ ಮುಗಿದ ಬಳಿಕ ತಮ್ಮ ಮುಂದಿನ ಸಿನಿಮಾಗಳ ಕಡೆ ಗಮನ ನೀಡುತ್ತಿದ್ದಾರೆ. ಸದ್ಯ ವೆಕೇಷನ್ ಮೂಡ್‌ನಲ್ಲಿರುವ ನಟಿ ಮೈಸೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಡೈಲಿ ಜಿಮ್ ವರ್ಕೌಟ್ ಮಾಡುತ್ತಾ ಬೆವರಿಳಿಸುತ್ತಿದ್ದಾರೆ. ಮೇಘಾ ಲುಕ್‌ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಮೇಕಪ್ ಇಲ್ಲದೇ ಕೂಡ ನಟಿ ಮುದ್ದಾಗಿ ಕಾಣಿಸುತ್ತಿದ್ದಾರೆ. ಇದನ್ನೂ ಓದಿ:‘ಕಡ್ಡಿಪುಡಿ’ ಚಂದ್ರು ವಿರುದ್ಧ ಠಾಣೆ ಮೆಟ್ಟಿಲೇರಿದ ‘ರೊಮಿಯೋ’ ಖ್ಯಾತಿಯ ಪಿಸಿ ಶೇಖರ್

    ಮೇಘಾ ಶೆಟ್ಟಿ ಅವರು ತ್ರಿಬಲ್ ರೈಡಿಂಗ್, ದಿಲ್ ಪಸಂದ್ ಚಿತ್ರಗಳಲ್ಲಿ ಈಗಾಗಲೇ ನಟಿಸಿ ಸೈ ಎನಿಸಿಕೊಂಡಿದ್ದಾರೆ. ‘ಕೈವ’ ಮತ್ತು ‘ಆಪರೇಷನ್ ಲಂಡನ್ ಕೆಫೆ’ ಚಿತ್ರಗಳು ಈ ವರ್ಷ ತೆರೆಗೆ ಬರಲಿದೆ.

  • ‘ಜೊತೆ ಜೊತೆಯಲಿ’ ನನ್ನ ಪಯಣ ಮುಗಿಯಿತು : ನಟಿ ಮೇಘಾ ಶೆಟ್ಟಿ ಭಾವುಕ

    ‘ಜೊತೆ ಜೊತೆಯಲಿ’ ನನ್ನ ಪಯಣ ಮುಗಿಯಿತು : ನಟಿ ಮೇಘಾ ಶೆಟ್ಟಿ ಭಾವುಕ

    ರೂರು ಜಗದೀಶ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಜೊತೆ ಜೊತೆಯಲಿ’ (Jothe Jotheyali) ಧಾರಾವಾಹಿ ಮುಗಿಯುತ್ತಿದೆಯಾ? ಅಥವಾ ಸೀರಿಯಲ್ (Serial) ನಾಯಕಿ ಮೇಘಾ ಶೆಟ್ಟಿ (Megha Shetty) ಪಾತ್ರ ಮುಕ್ತಾಯ ಆಗುತ್ತಿದೆಯೋ ಗೊತ್ತಿಲ್ಲ. ಆದರೆ, ತಮ್ಮ ಪಾತ್ರವು ಧಾರಾವಾಹಿಯ ಕಥೆಯಲ್ಲಿ ಮುಗಿಯುತ್ತಿರುವ ಕುರಿತು ನಟಿ ಮೇಘಾ ಶೆಟ್ಟಿ ಹಂಚಿಕೊಂಡಿದ್ದಾರೆ. ಒಂದೊಂದು ರೀತಿಯಲ್ಲಿ ಕುಟುಂಬವನ್ನು ತೊರೆದಂತೆ ನೋವು ಆಗುತ್ತಿದೆ ಎಂದು ಅವರು ಹೇಳಿದ್ದಾರೆ.

    ಜೊತೆ ಜೊತೆಯಲಿ ಧಾರಾವಾಹಿಯು ಅವರ ವೃತ್ತಿ ಜೀವನಕ್ಕೆ ದೊಡ್ಡ ಬ್ರೇಕ್ ನೀಡಿತ್ತು. ಸತತ ನಾಲ್ಕು ವರ್ಷಗಳ ಕಾಲ ಪ್ರೇಕ್ಷಕರನ್ನು ರಂಜಿಸಿರುವ ಧಾರಾವಾಹಿಯು ಅಪಾರ ಅಭಿಮಾನಿಗಳನ್ನು ಹೊಂದಿತ್ತು. ಅದರಲ್ಲೂ ಅನಿರುದ್ಧ ಜತ್ಕರ್ ಗೂ ಕೂಡ ದೊಡ್ಡ ಮಟ್ಟದ ಗೆಲುವನ್ನು ತಂದು ಕೊಟ್ಟಿತ್ತು. ಅಂತಹ ಧಾರಾವಾಹಿ ಈಗ ಅಂತಿಮ ದೃಶ್ಯಗಳನ್ನು ಚಿತ್ರೀಕರಿಸುತ್ತಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಮೇಘಾ ನಿರ್ವಹಿಸುತ್ತಿದ್ದ ಪಾತ್ರವೂ ಕೊನೆಗೊಂಡಿದೆ. ಇದನ್ನೂ ಓದಿ:ಶಾಹಿದ್ ಕಪೂರ್ ಜೊತೆ ಪೂಜಾ ಹೆಗ್ಡೆ ರೊಮ್ಯಾನ್ಸ್

    ಜೊತೆ ಜೊತೆಯಲಿ ಧಾರಾವಾಹಿ ಮುಗಿಯುತ್ತಿದ್ದಂತೆಯೇ ಮೇಘಾ ಶೆಟ್ಟಿ ಸಿನಿಮಾಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಈಗಾಗಲೇ ಅವರು ಗೋಲ್ಡನ್ ಸ್ಟಾರ್ ಗಣೇಶ್ (Ganesh) ನಟನೆಯ ಟ್ರಿಬಲ್ ರೈಡಿಂಗ್ (Triple Riding) ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದಾರೆ. ಅಲ್ಲದೇ,   ಧನ್ವೀರ್ ನಟನೆಯ ಕೈವಾ ಸಿನಿಮಾದಲ್ಲೂ ನಾಯಕಿಯಾಗಿ ನಟಿಸಿದ್ದಾರೆ. ಆಪರೇಷನ್ ಲಂಡನ್ ಕೆಫೆ ಸಿನಿಮಾದ ಶೂಟಿಂಗ್ ನಲ್ಲೂ ಬ್ಯುಸಿಯಾಗಿದ್ದಾರೆ.

    ಕಿರುತೆರೆಯಿಂದ ಆಚೆ ಬರುತ್ತಿದ್ದಂತೆಯೇ ಹಲವಾರು ನಿರ್ದೇಶಕರು ಮೇಘಾರ ಜೊತೆ ಮಾತುಕತೆ ಮಾಡುತ್ತಿದ್ದಾರಂತೆ. ಹಲವು ಸ್ಕ್ರಿಪ್ಟ್ ಗಳನ್ನೂ ಅವರು ಕೇಳಿದ್ದಾರೆ. ಒಂದಷ್ಟು ಒಪ್ಪಿಕೊಂಡಿದ್ದಾರಂತೆ. ಮುಂದಿನ ದಿನಗಳಲ್ಲಿ ಈ ಸಿನಿಮಾಗಳ ಬಗ್ಗೆ ಮಾಹಿತಿ ಸಿಗಬಹುದು.

  • ಗಣೇಶ್ ನಟನೆಯ ‘ತ್ರಿಬಲ್ ರೈಡಿಂಗ್’ ಚಿತ್ರಕ್ಕಾಗಿ ಹಾಡಿದ ಚಂದನ್ ಹಾಗೂ ಮಂಗ್ಲಿ

    ಗಣೇಶ್ ನಟನೆಯ ‘ತ್ರಿಬಲ್ ರೈಡಿಂಗ್’ ಚಿತ್ರಕ್ಕಾಗಿ ಹಾಡಿದ ಚಂದನ್ ಹಾಗೂ ಮಂಗ್ಲಿ

    ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ತ್ರಿಬಲ್ ರೈಡಿಂಗ್” (Triple Riding) ಚಿತ್ರದ “ಯಟ್ಟಾ ಯಟ್ಟಾ” ಎಂಬ ಹಾಡು ಇತ್ತೀಚಿಗೆ ಬಿಡುಗಡೆಯಾಗಿ ಜನಪ್ರಿಯವಾಗಿದೆ. ಚಂದನ್ ಶೆಟ್ಟಿ ಈ ಹಾಡನ್ನು ಬರೆದಿದ್ದಾರೆ. ಚಂದನ್ ಶೆಟ್ಟಿ (Chandan Shetty) ಹಾಗೂ ಮಂಗ್ಲಿ(Mangli) ಹಾಡಿದ್ದಾರೆ. ಅದ್ದೂರಿಯಾಗಿ ಮೂಡಿಬಂದಿರುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.  ಇತ್ತೀಚಿಗೆ ಈ ಹಾಡಿನ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು.

    ನಾನು “ಮುಂಗಾರು‌ ಮಳೆ” ಸಮಯದಿಂದ ಗಣೇಶ್ (Ganesh) ಅವರನ್ನು ಬಲ್ಲೆ. ಆಗಿನಿಂದಲೂ ನನಗೆ ಅವರಿಗೊಂದು ಸಿನಿಮಾ ಮಾಡುವ ಆಸೆ. ಕಾಲ ಈಗ ಕೂಡಿ ಬಂದಿದೆ. “ತ್ರಿಬಲ್ ರೈಡಿಂಗ್” ಸ್ವಮೇಕ್ ಚಿತ್ರ. ಆಕ್ಷನ್, ಥ್ರಿಲ್ಲರ್, ಕಾಮಿಡಿ, ಸ್ವಲ್ಪ ಸೆಂಟಿಮೆಂಟ್ ಹಾಗೂ ಸಸ್ಪೆನ್ಸ್ ಎಲ್ಲವೂ ಇದೆ. ನಾಲ್ಕು  ಹಾಡುಗಳಿದೆ‌. ಆದರಲ್ಲಿ ಒಂದು ಹಾಡು ಇಂದು ಬಿಡುಗಡೆಯಾಗಿದೆ. ಇನ್ನೂ ಮೂರು ಹಾಡುಗಳು (Song) ಒಂದಕ್ಕಿಂತ ಒಂದು ಚೆನ್ನಾಗಿದೆ. ಸಾಯಿಕಾರ್ತಿಕ್ ಈ ಸಂಗೀತ ನಿರ್ದೇಶಕರು. ಇಂದು ಬಿಡುಗಡೆಯಾಗಿರುವ ಈ ಹಾಡನ್ನು ಚಂದನ್ ಶೆಟ್ಟಿ ಹಾಗೂ ಮಂಗ್ಲಿ ಸುಮಧುರವಾಗಿ ಹಾಡಿದ್ದಾರೆ. ಅಂದುಕೊಂಡ ಹಾಗೆ ಸಿನಿಮಾ‌ ಮಾಡಿದ್ದೇವೆ. ಅದಕ್ಕೆ ಕಾರಣರಾದ ನಿರ್ಮಾಪಕ ರಾಮ್ ಗೋಪಾಲ್ ಅವರಿಗೆ ಧನ್ಯವಾದ. ನಿಮ್ಮೆಲ್ಲರ ಹಾರೈಕೆಯಿರಲಿ ಎಂದರು ನಿರ್ದೇಶಕ ಮಹೇಶ್ ಗೌಡ.

    ನಿರ್ದೇಶಕ ಮಹೇಶ್ (Mahesh Gowda) ನನಗೆ “ಮುಂಗಾರು ಮಳೆ” ಯಿಂದ ಪರಿಚಯ. ಆ ಚಿತ್ರಕ್ಕೆ ಅವರು ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಆಗಲೇ ನನಗೆ ಒಂದು ಕಥೆ ಮಾಡುತ್ತೀನಿ ಎಂದಿದ್ದರು‌. ಹದಿನಾಲ್ಕು ವರ್ಷಗಳ ನಂತರ ಕಥೆ ಮಾಡಿಕೊಂಡು ಬಂದರು. ಒಳ್ಳೆಯ ಪಾತ್ರ ಕೊಟ್ಟಿರುವುದಕ್ಕೆ ಧನ್ಯವಾದ. ಮೊದಲ ಬಾರಿ ನಿರ್ಮಾಣ ಮಾಡಿರುವ ರಾಮ್ ಗೋಪಾಲ್ ಅವರಿಗೆ ಒಳ್ಳೆಯದಾಗಲಿ. ಚಿತ್ರದ ಆರಂಭದಿಂದ ಕೊನೆಯವರೆಗೂ ಸಾಕಷ್ಟು ಟ್ವಿಸ್ಟು, ಟರ್ನ್ ಗಳಿರುತ್ತವೆ. ಇದೊಂದು ಪಕ್ಕಾ ಕಾಮಿಡಿ ಚಿತ್ರ. ಅದರಲ್ಲೂ ಚಿತ್ರದ ಕೊನೆಯ ಇಪ್ಪತ್ತು ನಿಮಿಷ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ. “ತ್ರಿಬಲ್ ರೈಡಿಂಗ್” ಹೋದರೆ ಏನೆಲ್ಲಾ ತೊಂದರೆ ಆಗಬಹುದು ಎನ್ನುವುದನ್ನ ಇದರಲ್ಲಿ ನೋಡಬಹುದು.  ಈ ಚಿತ್ರದಲ್ಲಿ ಮೂವರು ನಾಯಕಿಯರು. ಅದಿತಿ ಪ್ರಭುದೇವ,  ಮೇಘ ಶೆಟ್ಟಿ ಹಾಗೂ ರಚನಾ ಇಂದರ್. ಎಲ್ಲರ ಅಭಿನಯ ತುಂಬಾ ಚೆನ್ನಾಗಿದೆ. ನೋಡಿ ಹರಸಿ ಎಂದರು ಗೋಲ್ಡನ್ ಸ್ಟಾರ್ ಗಣೇಶ್.

    ನನ್ನದು ಈ ಚಿತ್ರದಲ್ಲಿ ಡಾಕ್ಟರ್ ಪಾತ್ರ. ಗಣೇಶ್ ಸರ್ ಜೊತೆ ನನ್ನ ಮೊದಲ ಸಿನಿಮಾ. ಹಾಡು ಹಾಗೂ ಸಿನಿಮಾ ಎರಡು ಚೆನ್ನಾಗಿದೆ ಎಂದು ಮೇಘ ಶೆಟ್ಟಿ ತಿಳಿಸಿದರು. “ಲವ್ ಮಾಕ್ಟೇಲ್” ನಂತರ ನಾನು‌ ಒಪ್ಪಿಕೊಂಡ ಚಿತ್ರ ಇದು. ಹಠಮಾರಿ ಹೆಣ್ಣಿನ ಪಾತ್ರ ನನ್ನದು. ಏನಾದರೂ ಬೇಕೆಂದರೆ ಅದು ಬೇಕು ಎಂದು ಪಡೆದುಕೊಳ್ಳುತ್ತೇನೆ. ಒಳ್ಳೆಯ ಪಾತ್ರ ಕೊಟ್ಟ ನಿರ್ದೇಶಕರಿಗೆ ಧನ್ಯವಾದ ಎಂದರು ರಚನಾ ಇಂದರ್. ಇದನ್ನೂ ಓದಿ:ಮಸ್ತಾಗಿದೆ `ಕಬ್ಜ’ ಟೀಸರ್: ಹೇಗಿದೆ ಗೊತ್ತಾ ಉಪೇಂದ್ರ- ಸುದೀಪ್ ಜುಗಲ್‌ಬಂದಿ

    ಗಣೇಶ್ ಸರ್ ಗೆ ಈ ಹಿಂದೆ ಎರಡು ಹಾಡು ಹಾಡಿದೆ. ಇದು ಮೂರನೇ ಹಾಡು. ಸಾಯಿಕಾರ್ತಿಕ್ ತುಂಬಾ ಚೆನ್ನಾಗಿ ಸಂಗೀತ ನೀಡಿದ್ದಾರೆ. ಹಾಡು ಹಾಗೂ ಸಿನಿಮಾ ಎರಡೂ ಹಿಟ್ ಆಗಲಿ ಎಂದು ಚಂದನ್ ಶೆಟ್ಟಿ ಹಾರೈಸಿದರು. ಇದು ನನ್ನ ಮೊದಲ ನಿರ್ಮಾಣದ ಚಿತ್ರ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ರಾಮ್ ಗೋಪಾಲ್ ವೈ.ಎಂ. ಹಾಡುಗಳ ಹಾಗೂ ಹಾಡಿರುವವರ ಬಗ್ಗೆ ಸಂಗೀತ ನಿರ್ದೇಶಕ  ಸಾಯಿಕಾರ್ತಿಕ್ ಮಾತನಾಡಿದರು. ಚಿತ್ರತಂಡದ ಅನೇಕ ಸದಸ್ಯರು ತಮ್ಮ ಅನುಭವ ಹಂಚಿಕೊಂಡರು.

    Live Tv
    [brid partner=56869869 player=32851 video=960834 autoplay=true]

  • ಪುಂಡರ ತ್ರಿಬಲ್ ರೈಡಿಂಗ್-ಪ್ರಶ್ನಿಸಿದ ಪೇದೆಯ ಮೇಲೆ ಹಲ್ಲೆಗೆ ಯತ್ನ

    ಪುಂಡರ ತ್ರಿಬಲ್ ರೈಡಿಂಗ್-ಪ್ರಶ್ನಿಸಿದ ಪೇದೆಯ ಮೇಲೆ ಹಲ್ಲೆಗೆ ಯತ್ನ

    ಬೆಂಗಳೂರು: ತ್ರಿಬಲ್ ರೈಡಿಂಗ್ ಪ್ರಶ್ನಿಸಿದ ಟ್ರಾಫಿಕ್ ಪೊಲೀಸ್ ಪೇದೆಗೆ ಪುಂಡರು ಚಾಕು ಇರಿಯಲು ಯತ್ನಿಸಿದ ಘಟನೆ ನಗರದ ಮಣಿಪಾಲ್ ಸೆಂಟರ್ ಬಳಿ ನಡೆದಿದೆ.

    ಹಲಸೂರು ಸಂಚಾರಿ ಠಾಣೆಯ ಮಹೇಶ್ ಅವರಿಗೆ ಪುಂಡರು ಚಾಕು ಇರಿಯಲು ಯತ್ನಿಸಿದರು. ಅದೃಷ್ಟವಶಾತ್ ಮಹೇಶ್ ಅವರು ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಆದರೆ ಮಹೇಶ್ ಅವರ ಕತ್ತಿನ ಭಾಗದ ಶರ್ಟ್ ತುಂಡಾಗಿದೆ.

    ಪೇದೆ ಮಹೇಶ್ ಅವರು ಹಲಸೂರು ಸಂಚಾರಿ ಠಾಣಾ ವ್ಯಾಪ್ತಿಯ ಟ್ರಾಫಿಕ್ ಸಿಗ್ನಲ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಸ್ಕೂಟಿಯಲ್ಲಿ ಮೂವರು ಪುಂಡರು ಬರುತ್ತಿದ್ದರು. ಪೊಲೀಸರು ಬೈಕ್‍ಗೆ ಅಡ್ಡಹಾಕಲು ಬರುತ್ತಿದ್ದನ್ನು ನೋಡಿದ ಪುಂಡರು ಯೂಟರ್ನ್ ತೆಗೆದುಕೊಂಡು ಪರಾರಿಯಾಗಲು ಯತ್ನಿಸಿದರು. ಬಳಿಕ ಮಹೇಶ್ ಅವರು ವಾಪಸ್ಸು ಸಿಗ್ನಲ್ ಪಾಯಿಂಟ್‍ಗೆ ಬರುತ್ತಿದ್ದಾಗ ಹಿಂಬದಿಯಿಂದ ಬಂದ ಪುಂಡರು ಚಾಕು ಹಾಕಲು ಮುಂದಾಗಿದ್ದರು.

    ಸಿಗ್ನಲ್‍ನಲ್ಲಿದ್ದ ಜನರು ಕೂಗಿ, ಚಾಕು ಹಾಕುತ್ತಿದ್ದಾರೆ ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದರು. ತಕ್ಷಣವೇ ಪುಂಡರು ಪರಾರಿಯಾಗಲು ಯತ್ನಿಸಿದರು. ಈ ವೇಳೆ ಆರೋಪಿಗಳು ಚಾಕು ಇರಿಯಲು ಯತ್ನಿಸಿದ ಪರಿಣಾಮ ಪೇದೆ ಮಹೇಶ್ ಅವರ ಕತ್ತಿನ ಭಾಗದ ಶರ್ಟ್ ಕತ್ತರಿಸಿ ಕೆಳಗೆ ಬಿದಿದೆ. ಆರೋಪಿಗಳು ಸ್ಕೂಟಿ ಹಾಗೂ ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ಸ್ಥಳದಲ್ಲಿಯೇ ಎಸೆದು ಪೊಲೀಸರಿಂದ ತಪ್ಪಿಸಿಕೊಂಡು ಹೋಗಿದ್ದಾರೆ.

    ಈ ಸಂಬಂಧ ಹಲಸೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಕೂಟಿ ಹಾಗೂ ಚಾಕುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ತನಿಖೆ ಆರಂಭಿಸಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ.

  • ಮದ್ಯದ ಮತ್ತಲ್ಲಿ ತ್ರಿಬಲ್ ರೈಡಿಂಗ್- ಕ್ಯಾಂಟರ್ ಗೆ  ಡಿಕ್ಕಿ ಹೊಡೆದು ಸವಾರರಿಗೆ ಗಂಭೀರ ಗಾಯ

    ಮದ್ಯದ ಮತ್ತಲ್ಲಿ ತ್ರಿಬಲ್ ರೈಡಿಂಗ್- ಕ್ಯಾಂಟರ್ ಗೆ ಡಿಕ್ಕಿ ಹೊಡೆದು ಸವಾರರಿಗೆ ಗಂಭೀರ ಗಾಯ

    ಬೆಂಗಳೂರು: ಕುಡಿದು ಅಡ್ಡಾದಿಡ್ಡಿ ತ್ರಿಬಲ್ ರೈಡಿಂಗ್ ಮಾಡಿದ ಪರಿಣಾಮ ಬುಲೆಟ್ ಬೈಕ್ ಓಡಿಸುತ್ತಿದ್ದ ಸವಾರರು ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಹೆಬ್ಬಾಳದಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.

    ತ್ರಿಬಲ್ ರೈಡಿಂಗ್ ಮಾಡುತ್ತ ಮೇಕ್ರಿ ಸರ್ಕಲ್ ಕಡೆಯಿಂದ ಏರ್ಪೋರ್ಟ್ ರಸ್ತೆ ಕಡೆ ಹೋಗುತ್ತಿದ್ದ ಬುಲೆಟ್ ಸವಾರರು ಮುಂದೆ ಹೋಗುತ್ತಿದ್ದ ಕ್ಯಾಂಟರ್ ಗೆ ಚಮಕ್ ಕೊಡೋಕೆ ಹೋಗಿ ನಿಯಂತ್ರಣ ತಪ್ಪಿ ಕ್ಯಾಂಟರ್ ಗೆ ಹಿಂಬಂದಿಯಿಂದ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಬುಲೆಟ್ ನಲ್ಲಿದ್ದ ಇಬ್ಬರು ನಡುರಸ್ತೆಯಲ್ಲೇ ಕೆಳಗೆ ಬಿದ್ದರೆ ಬೈಕ್ ಓಡಿಸುತ್ತಿದ್ದ ಯುವಕ ರಸ್ತೆ ಬದಿಯ ಡಿವೈಡರ್ ಗೆ ರಭಸದಿಂದ ಡಿಕ್ಕಿ ಹೊಡೆದಿದ್ದಾನೆ.

    ಪರಿಣಾಮ ಇಬ್ಬರು ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿ, ಗಾಯಗೊಂಡವರನ್ನ ಹತ್ತಿರದಲ್ಲೇ ಇರುವ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಸುದ್ದಿ ತಿಳಿಯುತ್ತಿದಂತೆಯೇ ಸ್ಥಳಕ್ಕೆ ದೌಡಾಯಿಸಿದ ಹೆಬ್ಬಾಳ ಸಂಚಾರಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.