Tag: trinayani serial

  • ನಾವು ಮನೆಗಿಂತ ಜಾಸ್ತಿ ಸೆಟ್‌ನಲ್ಲಿ ಇದ್ವಿ- ಚಂದು ಗೌಡ

    ನಾವು ಮನೆಗಿಂತ ಜಾಸ್ತಿ ಸೆಟ್‌ನಲ್ಲಿ ಇದ್ವಿ- ಚಂದು ಗೌಡ

    ‘ರಾಧಾ ರಮಣ’ (Radha Ramana) ಸೀರಿಯಲ್ ನಟಿ ಪವಿತ್ರಾ ಜಯರಾಂ (Pavitra Jayaram) ಕಾರು ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ನಟ ಚಂದು ಗೌಡ (Chandu Gowda) ಅವರು ಮಂಡ್ಯದ ಉಮ್ಮಡಹಳ್ಳಿಗೆ ಆಗಮಿಸಿ ಸಹನಟಿ ಪವಿತ್ರಾ ಅಂತಿಮ ದರ್ಶನ ಪಡೆದರು. ಈ ವೇಳೆ, ಪವಿತ್ರಾ ಜೊತೆಗಿನ ಒಡನಾಟದ ಬಗ್ಗೆ ಚಂದು ಗೌಡ ಮಾತನಾಡಿದ್ದರು.

    ಪವಿತ್ರಾ ಸಾವಿನ ಸುದ್ದಿ ನಿಜಕ್ಕೂ ನೋವು ಕೊಟ್ಟಿದೆ. ‘ತ್ರಿನಯನಿ’ (Trinayani) ಸೀರಿಯಲ್‌ನಲ್ಲಿ 5 ವರ್ಷಗಳ ಕಾಲ ನಾವು ಒಟ್ಟಿಗೆ ಕೆಲಸ ಮಾಡಿದ್ವಿ. ಮನೆಗಿಂತ ನಾವು ಜಾಸ್ತಿ ಸೆಟ್‌ನಲ್ಲಿ ಜೀವನ ಮಾಡಿದ್ವಿ. ತಿಂಗಳಲ್ಲಿ 15 ದಿನ ನಾವು ಹೈದರಾಬಾದ್‌ನಲ್ಲಿ ಕೆಲಸ ಮಾಡಿದ್ದೇವೆ. ಪವಿತ್ರಾ ಜೊತೆ ಉತ್ತಮ ಒಡನಾಟ ಇತ್ತು. ಅವರು ಬೇರೆ ಅಲ್ಲ, ನಮ್ಮ ಮನೆಯವರು ಬೇರೆ ಅಲ್ಲ. ಇಷ್ಟು ಹತ್ತಿರದವರು ತೀರಿಕೊಂಡಾಗ ಅದು ಬೇರೇ ತರಹನೇ ನೋವಾಗುತ್ತದೆ. ಅವರ ಆತ್ಮಕ್ಕೆ ಶಾಂತಿ ಕೊಡಲಿ ಅಂತ ದೇವರಲ್ಲಿ ಕೇಳಿ ಕೇಳುತ್ತೇನೆ ಎಂದು ಕಿರುತೆರೆ ನಟ ಚಂದು ಗೌಡ ಭಾವುಕರಾಗಿದ್ದಾರೆ.

    ದೇವರು ಇಷ್ಟು ಚಿಕ್ಕ ವಯಸ್ಸಿಗೆ ಅವರನ್ನು ಕರೆದುಕೊಂಡು ಬಿಟ್ಟರು. ಅವರ ಸಾವು ನಾವು ನಿರೀಕ್ಷೆ ಮಾಡಿರಲಿಲ್ಲ. ಸಾಕಷ್ಟು ಸಮಯದಿಂದ ಒಟ್ಟಿಗೆ ಕೆಲಸ ಮಾಡಿದ್ದೇವೆ. ಈಗ ಅವರು ಇಲ್ಲ ಅಂದರೆ ಬೇಸರವಾಗುತ್ತೆ. ಆಕ್ಸಿಡೆಂಟ್ ಆದಾಗ ಅಂಬ್ಯುಲೆನ್ಸ್ ಸರಿಯಾದ ಸಮಯಕ್ಕೆ ಬರಲಿಲ್ಲ. ಈಗ ಅವರೇ ಇಲ್ಲ ಅಂದಾಗ ಯಾರನ್ನು ದೂರಿ ಏನು ಉಪಯೋಗ ಎಂದು ಪವಿತ್ರಾ ಅಂತಿಮ ದರ್ಶನ ಪಡೆದ ವೇಳೆ ಚಂದು ಗೌಡ ಮಾತನಾಡಿದ್ದಾರೆ. ಇದನ್ನೂ ಓದಿ:ಒಕ್ಕಲಿಗ ಸಂಪ್ರದಾಯದಂತೆ ನೆರವೇರಿದ ಪವಿತ್ರಾ ಜಯರಾಂ ಅಂತ್ಯಕ್ರಿಯೆ

    ಇತ್ತೀಚೆಗೆ ಮದರ್ಸ್‌ ಡೇಗೆ ಎಂದು ಕಾರ್ಯಕ್ರಮ ಮಾಡಿದ್ವಿ. ಎಷ್ಟು ಚೆನ್ನಾಗಿ ಕುಣಿದಿದ್ವಿ. ಆಕ್ಟ್ ಮಾಡಿದ್ವಿ ಎಂದು ಪವಿತ್ರಾ ಜೊತೆಗಿನ ಒಡನಾಟವನ್ನು ಚಂದು ಗೌಡ ವಿವರಿಸಿದ್ದರು.

    ಪವಿತ್ರಾ ಅವರು ಬೆಂಗಳೂರಿನಿಂದ ಹೈದರಾಬಾದ್‌ಗೆ ಪ್ರಯಾಣಿಸುತ್ತಿದ್ದ ಕಾರು ನಿನ್ನೆ (ಮೇ 12) ಆಂಧ್ರ ಪ್ರದೇಶದ ಕರ್ನೂಲಿನ ಬಳಿ ಅಪಘಾತಕ್ಕೆ ಈಡಾಗಿತ್ತು. ಇಂದು (ಮೇ 13) ಹುಟ್ಟುರಾದ ಉಮ್ಮಡಹಳ್ಳಿಯಲ್ಲಿ ಪವಿತ್ರಾ ಅಂತ್ಯಕ್ರಿಯೆ ನೆರವೇರಿದೆ.

  • ವಿಶೇಷ ಫೋಟೋಶೂಟ್‌ ಮೂಲಕ ಮಗಳನ್ನು ಪರಿಚಯಿಸಿದ `ತ್ರಿನಯನಿ’ ಖ್ಯಾತಿಯ ಚಂದು

    ವಿಶೇಷ ಫೋಟೋಶೂಟ್‌ ಮೂಲಕ ಮಗಳನ್ನು ಪರಿಚಯಿಸಿದ `ತ್ರಿನಯನಿ’ ಖ್ಯಾತಿಯ ಚಂದು

    ಕಿರುತೆರೆ ಮತ್ತು ಹಿರಿತೆರೆಯಲ್ಲಿ ಸಕ್ರಿಯರಾಗಿರುವ ನಟ ಚಂದು ಗೌಡ (Actor Chandu Gowda) ಅವರ ಮನೆಯಲ್ಲಿ ಸಂತಸ ಮನೆ ಮಾಡಿದೆ. ಇತ್ತೀಚೆಗೆ ಮುದ್ದು ಮಗಳ ಆಗಮನದ ಬಗ್ಗೆ ಸಿಹಿ ಸುದ್ದಿ ಹಂಚಿಕೊಂಡಿದ್ದರು. ಈಗ ಮಗಳ ಜೊತೆಗೆ ಮುದ್ದಾದ ಫೋಟೋಶೂಟ್ ಮಾಡಿಸಿ, ಮಗಳ ಫೋಟೋ ಕೂಡ ರಿವೀಲ್ ಮಾಡಿದ್ದಾರೆ.

    ಸಾಕಷ್ಟು ಸೀರಿಯಲ್, ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದ ತ್ರಿನಯನಿ ಖ್ಯಾತಿಯ ಚಂದು ಗೌಡ 2020ರಲ್ಲಿ ಬಹುಕಾಲದ ಶಾಲಿನಿ (Shalini) ಜೊತೆ ಹಸೆಮಣೆ (Wedding) ಏರಿದ್ದರು. 2022ರಲ್ಲಿ  ಚಂದು ಮನೆಗೆ ಆಗಸ್ಟ್‌ನಲ್ಲಿ ಹೆಣ್ಣು ಮಗುವಿನ ಆಗಮನವಾಗಿತ್ತು. ಇದೀಗ ವಿಶೇಷವಾದ ರೀತಿಯಲ್ಲಿ ಮಗಳನ್ನು ಅಭಿಮಾನಿಗಳಿಗೆ ನಟ ಚಂದು ಪರಿಚಯಿಸಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳಿಗೆ ಸೂಪರ್ ಚಾಲೆಂಜ್ ಕೊಟ್ರು ದಿವ್ಯಾ ಉರುಡುಗ- ಅರವಿಂದ್ ಜೋಡಿ

     

    View this post on Instagram

     

    A post shared by Chandu B Gowda (@im_chandugowda)

    ಕವಿತಾ ನಾಗಾರಾಜ್ ಫೋಟೋಗ್ರಾಫಿಯಲ್ಲಿ ಈ ಫೋಟೋಶೂಟ್ ಮೂಡಿ ಬಂದಿದೆ. ಸದ್ಯ ಚಂದು ಗೌಡ ಅವರ ಮುದ್ದಾದ ಫೋಟೋ ನೋಡಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ. ಫೋಟೋ ಇಂಟರ್‌ನೆಟ್‌ನಲ್ಲಿ ಸದ್ದು ಮಾಡ್ತಿದೆ.

     

    View this post on Instagram

     

    A post shared by Chandu B Gowda (@im_chandugowda)

    ‌ʻಲಕ್ಷ್ಮಿ ಬಾರಮ್ಮ ಸೀರಿಯಲ್ʼ ಮೂಲಕ ಕನ್ನಡಿಗರ ಮನಗೆದ್ದ ನಟ ಚಂದು ಈಗ `ತ್ರಿಯನಿ’ (Trinayani Serial) ಸೀರಿಯಲ್ ಮೂಲಕ ಮೋಡಿ ಮಾಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k