Tag: trinayani

  • ಪವಿತ್ರಾ ಜಯರಾಮ್‌ ಸಾವಿನ ಬಳಿಕ ಖಿನ್ನತೆಗೆ ಒಳಗಾಗಿದ್ರಾ ಚಂದ್ರಕಾಂತ್‌?

    ಪವಿತ್ರಾ ಜಯರಾಮ್‌ ಸಾವಿನ ಬಳಿಕ ಖಿನ್ನತೆಗೆ ಒಳಗಾಗಿದ್ರಾ ಚಂದ್ರಕಾಂತ್‌?

    ತೆಲುಗು ನಟ ಚಂದ್ರಶೇಖರ್ (Actor Chandrashekar) ಮತ್ತು ಪವಿತ್ರಾ ಜಯರಾಮ್ (Pavithra Jayaram) ಅವರದ್ದು 5 ವರ್ಷಗಳ ಗೆಳತನ. ಅದು ಕೇವಲ ಗೆಳತನವಾಗಿ ಉಳಿದಿರಲಿಲ್ಲ. ಅಲ್ಲೊಂದು ಸಂಬಂಧವಿತ್ತು. ಮನೆಯವರ ವಿರೋಧವಿತ್ತು. ಕಾರಣ, ಇಬ್ಬರಿಗೂ ಒಂದೊಂದು ಸಂಸಾರ. ಎರಡೆರಡು ಮಕ್ಕಳು. ಇದೆಂಥ ಸಂಬಂಧ ನೈತಿಕವಾ? ಅನೈತಿಕವಾ? ಏನೇ ಇರಲಿ. ಈಗ ಆ ಸಂಬಂಧ ಹೆಣವಾಗಿದೆ. ನಟಿ ಪವಿತ್ರಾ ಜಯರಾಮ್ ಹೆಣದ ಮುಂದೆ ಕೂತು ಎದೆ ಎದೆ ಬಡಿದುಕೊಂಡಿದ್ದ ಚಂದ್ರು ಅಲಿಯಾಸ್ ಚಂದ್ರಕಾಂತ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪವಿತ್ರಾನ ಮರೆಯೋಕೆ ಆಗ್ತಿಲ್ಲ ಅಂತ ನೇಣಿಗೆ ಕೊರಳೊಡ್ಡಿದ್ದಾರೆ. ಈ ಸಾವು ಸಾವಿರ ಅನುಮಾನಗಳಿಗೆ ಕಾರಣವಾಗಿದೆ. ಸಾವಿನ ಹಿಂದಿರೋ ರಹಸ್ಯವೂ ಬಯಲಾಗಿದೆ.

    ಕನ್ನಡದ ನಟಿ ಪವಿತ್ರಾ ಜಯರಾಮ್ ಆಕ್ಸಿಡೆಂಟ್‌ನಲ್ಲಿ (Accident) ಸತ್ತಾಗ ಆಕೆಯ ಜೊತೆ ಟ್ರಾವೆಲ್ ಮಾಡ್ತಿದ್ದೋನು ಇದೇ ಚಂದ್ರು. ಅದೊಂದು ಭಯಾನಕ ಆಕ್ಸಿಡೆಂಟ್. ಕಾರಿನ ಹಿಂಬಂದಿ ಸೀಟ್‌ಲ್ಲಿ ಕೂತಿದ್ದ ಚಂದ್ರು ಬದುಕಿದ್ದ, ಪಕ್ಕದಲ್ಲೇ ಕೂತಿದ್ದ ಪವಿತ್ರಾ ಉಸಿರು ಚೆಲ್ಲಿದ್ದಳು. ನನಗಾದ ಗಾಯಕಂಡು ಪವಿತ್ರಾ ಶಾಕ್ ಆಗಿದ್ದಳು. ಸಡನ್ನಾಗಿ ಸ್ಟ್ರೋಕ್ ಆಗಿರಬೇಕು. ಅಂಬ್ಯುಲೆನ್ಸ್ ಬರೋದು ತಡವಾಯಿತು. ಬದುಕಲಿಲ್ಲ ಅಂತ ಇದೇ ಚಂದ್ರು ಹೇಳಿದ್ದ. ಪವಿತ್ರಾ ಸಾವಿಗೆ ನಾನೇ ಕಾರಣ ಅಂತ ಚಂದ್ರುಗೆ ಏನಾದ್ರೂ ಅನಿಸ್ತಾ. ಅದೇ ಆತ್ಮಹತ್ಯೆಗೆ ಕಾರಣ ಆಯ್ತಾ?

    ಪವಿತ್ರಾನ ಚಂದ್ರು ಅದೆಷ್ಟು ಪ್ರೀತಿಸ್ತಾ ಇದ್ದ ಅನ್ನೋಕೆ ಅವರೇ ಪೋಸ್ಟ್ ಮಾಡಿರೋ ವಿಡಿಯೋಗಳು ಸಾಕ್ಷಿ ಆಗುತ್ತವೆ. ಶೂಟಿಂಗ್ ಸೆಟ್, ಹೋಟೆಲ್, ಪಾರ್ಕ್, ಮನೆ ಹೀಗೆ ಸಿಕ್ಕ ಸಿಕ್ಕ ಕಡೆಯಲ್ಲ ಆತ್ಮೀಯ ಆಗಿರೋ ವಿಡಿಯೋ ಮಾಡಿದ್ದಾರೆ. ತಮ್ಮಿಬ್ಬರ ಮಧ್ಯ ಹೆಸರಿಡಲಾಗದ ಒಂದು ಸಂಬಂಧ ಇದೆ ಅಂತ ತರ‍್ಸಿದ್ದಾರೆ. ಈ ತೋರಿಕೆಯ ಹಿಂದೆಯೂ ಒಂದು ಟ್ರ್ಯಾಜಿಡಿ ಕಹಾನಿ ಇದೆ. ಅದು ಅಂತಿಂಥ ಕಹಾನಿಯಲ್ಲ, ಎರಡು ಮಕ್ಕಳ ಭವಿಷ್ಯ. ತನ್ನನ್ನೇ ನಂಬಿಕೊಂಡಿರೋ ಪತ್ನಿ. ಈಗ ಕಣ್ಣೀರು ಹಾಕ್ತಿದ್ದಾರೆ. ಇದನ್ನೂ ಓದಿ:ಚಂದ್ರಕಾಂತ್, ಪವಿತ್ರಾ ಮದುವೆ ರೂಮರ್ಸ್ ಬಗ್ಗೆ ಸ್ಪಷ್ಟನೆ ನೀಡಿದ ಪುತ್ರ

    ಚಂದ್ರುಗೆ ಈಗಾಗಲೇ ಮದುವೆ ಆಗಿತ್ತು. ಬರೋಬ್ಬರಿ ಇಪ್ಪತ್ತು ವರ್ಷಗಳ ಪ್ರೀತಿ, ಒಂಬತ್ತು ವರ್ಷಗಳ ದಾಂಪತ್ಯ. ಈ ಸಾಂಗತ್ಯಕ್ಕೆ ಜೊತೆಯಾಗಿದ್ದು ಎರಡು ಮುದ್ದಾದ ಮಕ್ಕಳು. ಪವಿತ್ರಾಗೂ ಮದುವೆ ಆಗಿದೆ. ಎರಡು ಮಕ್ಕಳಿದ್ದಾರೆ. ಗಂಡನಿಂದ ದೂರವಿದ್ದಾಕೆ ಚಂದ್ರುಗೆ ಹತ್ತಿರವಾಗೋಕೆ ಕಾರಣ ಆ ಸೀರಿಯಲ್. ಪ್ರೇಕ್ಷಕರ ಸೆಳೆಯಲು ಧಾರಾಹಿಯಲ್ಲಿ ಟ್ವಿಸ್ಟು-ಟರ್ನ್ ಇರತ್ತೆ ಸರಿ. ಆದರೆ, ಅದನ್ನೇ ಜೀವನ ಅನ್ಕೊಂಡ್ರೆ ಹೇಗೆ? ಪಾತ್ರಧಾರಿ ಆಗಬೇಕೆ ಹೊರತು ಪಾತ್ರ ಆಗಬಾರದು ಅಲ್ಲವಾ? ನಟ-ನಟಿ ಆಗಿದ್ದೋರು, ಸ್ನೇಹಿತರಾಗ್ತಾರೆ. ಆ ಸ್ನೇಹ ಒಟ್ಟಾಗಿ ಇರುವಂತೆ ಮಾಡತ್ತದೆ. ಇತ್ತ ಚಂದ್ರು ಹೆಂಡ್ತಿ, ಮಕ್ಕಳನ್ನು ತೊರೆದರೆ. ಪವಿತ್ರಾ ಕೂಡ ಒಂದೇ ಮನೆಯಲ್ಲಿ ಇರೋಕೆ ಒಪ್ಪುತ್ತಾರೆ. ಅಲ್ಲಿಂದ ಹೊಸ ಜರ್ನಿ ಶುರು ಮಾಡ್ತಾನೆ ಚಂದ್ರು.

    ಮೋಹವೇ ಹಾಗೆ.. ಅದೊಂದು ರೀತಿ ಯಡವಟ್ಟು. ಇಲಿ ಮೇಲೆ ಆನೆ ಸವಾರಿ ಮಾಡೋ ಕನಸು. ಇದು ಸಾಧ್ಯವಾ? ತಿಳಿಸಿ ಹೇಳೋರು ಯಾರು? ಆದ್ರೂ, ಹೇಳಿದ್ದಾರೆ. ನೀನು ಹೋಗ್ತಾ ಇರೋ ದಾರಿ ಸರಿ ಇಲ್ಲ ಅಂತ ತಾಯಿ ಗದರಿದ್ದಾಳೆ. ನನ್ನ ಗಂಡನ್ನ ನನಗೆ ಬಿಟ್ಟು ಕೊಡಿ ಅಂತ ಚಂದ್ರು ಹೆಂಡ್ತಿ ಉಡಿಯೊಡ್ಡಿದ್ದಾಳೆ. ತಾಯಿ ಮಾತನ್ನು ಚಂದ್ರು ಕೇಳಿಲ್ಲ. ಚಂದ್ರು ಹೆಂಡ್ತಿ ಮಾತನ್ನು ಪವಿತ್ರಾ ಕಿವಿಹಾಕ್ಕೊಂಡಿಲ್ಲ. ಈಗ ಆಗಿದ್ದೆಲ್ಲ ದುರಂತ.

     

    View this post on Instagram

     

    A post shared by Pavithra Jayaram (@pavithra_jayram_)

    ಚಂದ್ರುನ ಸರಿ ದಾರಿಗೆ ತರೋಕೆ ಏನೆಲ್ಲ ಪ್ರಯತ್ನ ಪಟ್ಟಿದ್ದಾಳೆ ಪತ್ನಿ ಶಿಲ್ಪಾ. ಐದು ವರ್ಷದಿಂದ ಕಾದಿದ್ದಾಳೆ. ಗಂಡ ಬಾರದೇ ಇದ್ದಾಗ ಪವಿತ್ರಾಗೆ ವಾರ್ನ್ ಕೂಡ ಮಾಡಿದ್ದಾಳೆ. ಏನೇ ಮಾಡಿದರೂ ಗಂಡ ಜಗ್ಗಿಲ್ಲ.. ಪವಿತ್ರಾ ಕೇರ್ ಮಾಡಿಲ್ಲ. ಈ ಜಗಳ ಅತಿರೇಕಕ್ಕೆ ಹೋದಾಗ ಪವಿತ್ರಾನೇ ನನ್ನ ಸರ್ವಸ್ವ ಅಂದಿದ್ದಾನೆ ಚಂದ್ರು. ಪವಿತ್ರಾ ಜೊತೆ ಮದುವೆ ಆಗೋದಾಗಿ ಹೇಳಿದ್ದಾನೆ. ಅಷ್ಟರ ಮಟ್ಟಿಗೆ ಈ ಸಂಬಂಧ ಗಟ್ಟಿಯಾಗಿದೆ. ಪವಿತ್ರಾ-ಚಂದ್ರು ಐದು ವರ್ಷದಿಂದ ಜೊತೆಯಲ್ಲೇ ಇದ್ದಾರೆ. ಒಂದೇ ನೆರಳಿನಲ್ಲಿ ಬದುಕ್ತಿದ್ದಾರೆ. ಕಷ್ಟ ಸುಖದಲ್ಲಿ ಭಾಗಿಯಾಗಿದ್ದಾರೆ. ಒಟ್ಟೊಟ್ಟಿಗೆ ಜರ್ನಿ ಮಾಡಿದ್ದಾರೆ. ಜಗತ್ತು ಈ ಬದುಕಿಗೊಂದು ಹೆಸರು ಕೊಟ್ಟಿದೆ. ಅದೇ ಇವತ್ತು ಚಂದ್ರು ಸಾವಿಗೆ ಕಾರಣ ಆಯ್ತಾ? ಗೊತ್ತಿಲ್ಲ. ಚಂದ್ರು ಮಾತ್ರ ಬಾರದ ಲೋಕಕ್ಕೆ ಹೋಗಿದ್ದಾನೆ. ಪವಿತ್ರಾ ಸಾವಿನ ಶಾಕ್‌ನಲ್ಲಿದ್ದವನು ಎರಡೇ ದಿನದಲ್ಲಿ ನಿನ್ನ ಬಂದು ಸರ‍್ಕೋತೀನಿ ಮಮ್ಮು ಅಂತ ಪೋಸ್ಟ್ ಮಾಡಿ ನೇಣಿಗೆ ಶರಣಾಗಿದ್ದಾನೆ.

    ಪವಿತ್ರಾ ಸಾವಿನ ನಂತರ ಚಂದ್ರು ಖಿನ್ನತೆಗೆ ಜಾರಿದ್ದ ಅಂತ ಹೇಳ್ತಿದ್ದಾರೆ ಅವರ ತಾಯಿ. ದಿನವೂ ಕುಡ್ಕೊಂಡ್ ರ‍್ತಿದ್ನಂತೆ.. ಎರಡು ದಿನದಿಂದ ಯಾರ ಫೋನ್‌ಗೂ ಸಿಕ್ಕಿಲ್ಲ. ಪವಿತ್ರಾ ಜೊತೆಗಿನ ಫೋಟೋ ಶೇರ್ ಮಾಡಿದ್ದಾನೆ. ಸಾವಿನ ಮುನ್ಸೂಚನೆ ಕೊಟ್ಟಿದ್ದಾನೆ. ಯಾವ ಮನೆಯಲ್ಲಿ ಪವಿತ್ರಾ ಜೊತೆ ವಾಸವಿದ್ನೋ.. ಅದೇ ಮನೆಯಲ್ಲಿ ಉಸಿರು ಚೆಲ್ಲಿದ್ದಾನೆ. ಮಕ್ಕಳು ಅನಾಥ ಆಗಿವೆ. ಹೆಂಡತಿ, ತಾಯಿ, ತಂಗಿ ಬೀದಿಗೆ ಬಂದಿದ್ದಾರೆ. ಪ್ರೀತಿ ಅಂದರೆ ಸಾಯೋದಲ್ಲ. ಬದುಕೋದು ಚಂದ್ರು ನಟಿಸ್ತಿದ್ದ ಯಾವ ಸೀರಿಯಲ್‌ನಲ್ಲೂ ಈ ಡೈಲಾಗ್ ಇರಲಿಲ್ಲವಾ? ಅಥವಾ ಅದು ಬರೀ ಡೈಲಾಗ್ ಅಂತ ಹೇಳ್ಬಿಟ್ಟು ಮರೆತು ಬಿಟ್ಟರಾ? ಪಾತ್ರಧಾರಿಗಳು ಪಾತ್ರವಾದ್ಮೇಲೆ. ಪ್ರೀತಿ ಅಂದರೆ ಏನು ಅಂತಾನೂ ನೆನಪಿಡಬೇಕಲ್ಲವಾ? ಇಟ್ಟಿದ್ದರೆ ಚಂದ್ರು ಬದುಕರ‍್ತಿದ್ದ ಪತ್ನಿ ಶಿಲ್ಪಾ ಕಾಯುವಿಕೆಗೆ ಅಂತ್ಯನಾದ್ರೂ ಸಿಕ್ಕಿರೋದು ಅಲ್ವೇ.

  • ಚಂದ್ರಕಾಂತ್, ಪವಿತ್ರಾ ಮದುವೆ ರೂಮರ್ಸ್ ಬಗ್ಗೆ ಸ್ಪಷ್ಟನೆ ನೀಡಿದ ಪುತ್ರ

    ಚಂದ್ರಕಾಂತ್, ಪವಿತ್ರಾ ಮದುವೆ ರೂಮರ್ಸ್ ಬಗ್ಗೆ ಸ್ಪಷ್ಟನೆ ನೀಡಿದ ಪುತ್ರ

    ರಾಧಾ ರಮಣ, ತ್ರಿಯನಯನಿ ಸೀರಿಯಲ್‌ ನಟಿ ಪವಿತ್ರಾ ಜಯರಾಮ್ (Pavithra Jayaram) ಕೆಲದಿನಗಳ ಹಿಂದೆ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಬಳಿಕ ಮೇ 17ರಂದು ಪವಿತ್ರಾ ಅವರ ಗೆಳೆಯ ಚಂದು ಅಲಿಯಾಸ್ ಚಂದ್ರಕಾಂತ್ (Actor Chandrakanth) ಆತ್ಮಹತ್ಯೆಗೆ ಶರಣಾದರು. ಈ ಬೆನ್ನಲ್ಲೇ ಇಬ್ಬರ ಸಂಬಂಧದ ಬಗ್ಗೆ ಮುನ್ನೆಗೆ ಬಂತು. ಇಬ್ಬರೂ ಮದುವೆಯಾಗಬೇಕು ಎಂದು ನಿರ್ಧರಿಸಿದ್ದರು ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಚಾರವಾಗಿ ಪವಿತ್ರಾ ಪುತ್ರ (Son) ಪ್ರಜ್ವಲ್ ಪ್ರತಿಕ್ರಿಯೆ ನೀಡಿದ್ದಾರೆ.

    ಚಂದ್ರಕಾಂತ್ ಸಾವನ್ನಪ್ಪಿದ ಬಳಿಕ ಅವರ ಕುಟುಂಬಸ್ಥರು ಪವಿತ್ರಾ ಬಗ್ಗೆ ಹಲವು ವಿಚಾರಗಳ ಬಗ್ಗೆ ದೂರಿದ್ದರು. ಪ್ರವಿತ್ರಾ ಬಂದ ಮೇಲೆ ನಮ್ಮ ಸಂಸಾರ ಹಾಳಾಯ್ತು ಎಂದು ತೆಲುಗು ಮಾಧ್ಯಮಗಳಲ್ಲಿ ಕಣ್ಣೀರಿಟ್ಟಿದ್ದರು. ಈ ಬಗ್ಗೆ ಇದೇ ಮೊದಲ ಬಾರಿಗೆ ಪವಿತ್ರಾ ಜಯರಾಮ್ ಅವರ ಪುತ್ರ ಪ್ರಜ್ವಲ್ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರರಂಗ ಹೇಗೆ ಅಂತ ನಿಮಗೂ ಗೊತ್ತು. ನಾನು ಇಂಡಸ್ಟ್ರಿಗೆ ಬಂದರೂ ಕೂಡ ಹಾಗೆಯೇ. ನನ್ನ ಜೊತೆ ಯಾರಾದರೂ ಇದ್ದರೆ ಮೊದಲು ಆ ರೀತಿಯ ಗಾಸಿಪ್ ಹುಟ್ಟಿಕೊಳ್ಳುತ್ತದೆ.

    ಅಮ್ಮ ಮತ್ತು ಚಂದ್ರಶೇಖರ್ ಅವರು ಎಷ್ಟು ಒಳ್ಳೆಯ ಸ್ನೇಹಿತರು ಎಂಬುದು ನಮಗೆ ಮತ್ತು ಇಂಡಸ್ಟ್ರಿಯವರಿಗೆ ಗೊತ್ತು. ಅವರ ಒಡನಾಟ ಹೇಗಿತ್ತು ಅಂತ ನಾವು ನೋಡಿದ್ದೇವೆ. ಮದುವೆ (Wedding) ಆಗುವ ಪ್ಲ್ಯಾನ್ ಇತ್ತು ಎಂಬುದನ್ನೆಲ್ಲ ನಾನು ಸಂದರ್ಶನದಲ್ಲಿ ನೋಡಿದೆ. ಆದರೆ ಅಷ್ಟೊಂದು ಮಾತುಕತೆ ಆಗಿರಲಿಲ್ಲ. ಅಷ್ಟೊಂದು ನಮಗೂ ಗೊತ್ತಿರಲಿಲ್ಲ ಎಂದು ಪ್ರಜ್ವಲ್ ಹೇಳಿದ್ದಾರೆ.

    ಚಂದು ಕುಟುಂಬದವರು ಮಾತನಾಡಿರುವುದನ್ನು ನಾನು ನೋಡಿದ್ದೇನೆ. ಅದಕ್ಕೆ ಏನ್ ಸಾಕ್ಷಿ ಬೇಕು, ಅದು ನನ್ನ ಬಳಿ ಇದೆ. ಅದರ ಬಗ್ಗೆ ನಾವೂ ಮಾತನಾಡುವುದಕ್ಕೆ ಶುರು ಮಾಡಿದರೆ, ಮನಸ್ತಾಪಗಳು ಜಾಸ್ತಿ ಆಗುತ್ತವೆ. ಈಗ ನನ್ನ ಮತ್ತು ನನ್ನ ತಂಗಿ ಭವಿಷ್ಯ ಮುಖ್ಯ. ಅವರಲ್ಲೂ ದುಃಖ ಇದೆ. ಆದರೆ ಸತ್ಯ ಏನಿದೆ, ಅದನ್ನು ಮಾತನಾಡಲಿ ಎಂದು ಪ್ರಜ್ವಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ:ವೈಯಕ್ತಿಕ ಜೀವನದಲ್ಲಿ ಏರುಪೇರಾಗಿದೆ: ನೊಂದುಕೊಂಡು ಪೋಸ್ಟ್ ಮಾಡಿದ ನಿಶ್ವಿಕಾ

    ಅವರಿಬ್ಬರು ಉತ್ತಮ ಸ್ನೇಹಿತರು. ಚಂದ್ರಕಾಂತ್ ಆತ್ಮಹತ್ಯೆ ಬಗ್ಗೆ ನ್ಯೂಸ್ ನೋಡಿದಾಗಲೇ ಗೊತ್ತಾಗಿದ್ದು. ನಾವಿಲ್ಲಿ ನಮ್ಮ ತಾಯಿಯ ಕಾರ್ಯಗಳಲ್ಲಿ ಬ್ಯುಸಿ ಇದ್ದೆವು. ಇದೇ ವೇಳೆ ಚಂದ್ರಕಾಂತ್ ಸಾವಿನ ವಿಚಾರ ಗೊತ್ತಾಗಿ, ಇನ್ನೂ ಬೇಜಾರಾಯಿತು. ಹೈದರಾಬಾದ್‌ನಲ್ಲಿ ನಮಗೆ ತುಂಬ ಹತ್ತಿರದಲ್ಲಿ ಇದ್ದವರು ಎಂದರೆ ಅದು ಚಂದ್ರಕಾಂತ್. ಅವರು ಈ ರೀತಿ ಮಾಡಿಕೊಂಡಿದ್ದು, ನಮಗೂ ತುಂಬಾ ಬೇಜಾರಾಯಿತು. ನಾವು ಹೋಗಬೇಕಿತ್ತು. ಆದರೆ ಇಲ್ಲಿ ಕಾರ್ಯಗಳು ಇದ್ದಿದ್ದರಿಂದ ನಾವು ಹೋಗುವುದಕ್ಕೆ ಸಾಧ್ಯವಾಗಲಿಲ್ಲ ಎಂದು ಪವಿತ್ರಾ ಪ್ರಜ್ವಲ್ ಮಾತನಾಡಿದ್ದಾರೆ.