Tag: Trikona

  • ಕಾಲನ ಕಷ್ಟಗಳಿಗೆಲ್ಲ ತಾಳ್ಮೆಯೇ ಉತ್ತರ

    ಕಾಲನ ಕಷ್ಟಗಳಿಗೆಲ್ಲ ತಾಳ್ಮೆಯೇ ಉತ್ತರ

    ಚಿತ್ರ: ತ್ರಿಕೋನ
    ನಿರ್ದೇಶನ: ಚಂದ್ರಕಾಂತ್
    ನಿರ್ಮಾಪಕ: ರಾಜಶೇಖರ್
    ತಾರಾಗಣ: ಸುರೇಶ್ ಹೆಬ್ಳಿಕರ್, ಜೂಲಿ ಲಕ್ಷ್ಮಿ, ಅಚ್ಯುತ್ ಕುಮಾರ್, ಸುಧಾರಾಣಿ, ಇತರರು

    ಚಂದ್ರಕಾಂತ್ ನಿರ್ದೇಶನದ ತ್ರಿಕೋನ ಸಿನಿಮಾ ರಾಜ್ಯಾದ್ಯಂತ ತೆರೆ ಕಂಡಿದೆ. ತ್ರಿಕೋನ ಹೆಸರೇ ಹೇಳುವಂತೆ ಮೂರು ಆಯಾಮದಲ್ಲಿ ಹೇಳಲಾದ ಕಥೆ. ಹಾಗೆಯೇ ಮೂರು ಕಥೆಯನ್ನು ಇದು ಒಳಗೊಂಡಿದೆ. ಮೂರು ಕಥೆಗೂ ಸ್ಯಾಂಡಲ್ ವುಡ್ ಘಟಾನುಘಟಿ ನಟ ನಟಿಯರ ಅಭಿನಯವಿದೆ. ಇಡಿ ಚಿತ್ರದ ಉದ್ದೇಶ ತಾಳ್ಮೆಯ ಮಹತ್ವ ಸಾರುವುದು. ಆಧುನಿಕ ಜಗತ್ತು ತಾಳ್ಮೆ ಕಳೆದುಕೊಂಡು ವರ್ತಿಸುತ್ತಿದೆ. ಇದರಿಂದ ಸರಳ ಸುಂದರ ಬದುಕನ್ನು ಮತ್ತಷ್ಟು ಜಟಿಲ ಮಾಡಿಕೊಂಡಿದ್ದಾರೆ. ಏನೇ ಕಷ್ಟ ಕಾರ್ಪಣ್ಯಗಳು ಎದುರಾದರೂ ತಾಳ್ಮೆಯೊಂದಿದ್ರೆ ಅದನ್ನು ಎದುರಿಸಬಹುದು ಎನ್ನುವುದು ಸಿನಿಮಾದ ಸಾರಾಂಶ. 65.45.25 ಹೀಗೆ ಮೂರು ಪೀಳಿಗೆಯ ಕಥೆ ಚಿತ್ರದಲ್ಲಿದ್ದು, ಒಂದೊಂದು ಪೀಳಿಗೆ ತಾಳ್ಮೆ, ಶಕ್ತಿ, ಅಹಂ ಅನ್ನು ಪ್ರತಿನಿಧಿಸುತ್ತದೆ. ಇದನ್ನೂ ಓದಿ: ಕ್ಲಾಸ್ ಕಟೆಂಟ್, ಮಾಸ್ ನರೇಶನ್, ಮಸ್ತ್ ಮನರಂಜನೆ ನೀಡಲು ‘ತ್ರಿಕೋನ’ ಟೀಂ ರೆಡಿ

    ಮಂಗಳೂರಿನಲ್ಲಿರುವ ತಮ್ಮ ಐಷಾರಾಮಿ ಹೊಟೇಲ್ ನ್ನು ಹರಾಜಿನಲ್ಲಿ ಉಳಿಸಿಕೊಳ್ಳಲು ಉದ್ಯಮಿ ನಟರಾಜ್ ಹಾಗೂ ಪತ್ನಿ ಪಾರ್ವತಿ ಬೆಂಗಳೂರಿನಿಂದ ಮಂಗಳೂರಿಗೆ ಕಾರಿನಲ್ಲಿ ಹೊರಡುತ್ತಾರೆ. ಅದೇ ಐಷಾರಾಮಿ ಹೋಟೆಲ್ ಕೊಂಡುಕೊಳ್ಳಲು ಯುವ ಉದ್ಯಮಿ ತ್ರಿವಿಕ್ರಮ್ ಮಂಗಳೂರಿಗೆ ಹೊರಡುತ್ತಾನೆ. ಆ ಹೋಟೆಲ್ ನಲ್ಲಿ ರಜೆ ದಿನವನ್ನು ಕಳೆಯಲು ಕೋದಂಡರಾಮನ ಕುಟುಂಬವೂ ಮಂಗಳೂರಿಗೆ ಪ್ರಯಾಣ ಬೆಳೆಸುತ್ತಾರೆ. ಹೀಗೆ ಮಂಗಳೂರಿಗೆ ಪ್ರಯಾಣ ಬೆಳೆಸೋ ಈ ಮೂವರ ಪ್ರಯಾಣದ ಹಾದಿ ಮಾತ್ರ ಸುಖಕರವಾಗಿರೋದಿಲ್ಲ. ಮೂವರು ಹಲವಾರು ಗಂಡಾಂತರಗಳನ್ನು ಎದುರಿಸುತ್ತಾರೆ. ಯಾಕೆ ಹೀಗಾಗುತ್ತಿದೆ ಅನ್ನೋದೇ ದೊಡ್ಡ ಯಕ್ಷ ಪ್ರಶ್ನೆಯಾಗಿರುತ್ತೆ. ಅಸಲಿಗೆ ಕಾಲನಿಂದ ಎದುರಾದ ಆ ಗಂಡಾಂತರಗಳಿಗೆಲ್ಲ ಕಾರಣವೇನು, ಅವರಿಗೆಲ್ಲ ಯಾಕೆ ಹೀಗಾಯ್ತು, ಆ ಸಮಸ್ಯೆಯನ್ನು ಅಹಂ, ಶಕ್ತಿ, ತಾಳ್ಮೆಯಿಂದ ಎದುರಿಸಿದ ಮೂವರಲ್ಲಿ ಯಾರು ಸೈ ಎನಿಸಿಕೊಳ್ಳುತ್ತಾರೆ. ಯಾರು ಪಾಠ ಕಲಿತ್ರು ಅನ್ನೋದೇ ತ್ರಿಕೋನ. ಇದನ್ನೂ ಓದಿ: ತಾಳ್ಮೆಯ ಅಸಲಿ ತಾಕತ್ತು ಅನಾವರಣ ಮಾಡಲಿದೆ ಚಂದ್ರಕಾಂತ್ ನಿರ್ದೇಶನದ ‘ತ್ರಿಕೋನ’ ಚಿತ್ರ

    ಒಂದೇ ಸಿನಿಮಾದಲ್ಲಿ ಮೂರು ವಿಭಿನ್ನ ಕಥೆಯನ್ನು ಹೇಳ ಹೊರಟ ನಿರ್ದೇಶಕರ ಪ್ರಯತ್ನವನ್ನು ಮೆಚ್ಚಲೇಬೇಕು. ಹಾಗೆಯೇ ಇವತ್ತಿನ ದಿನಮಾನಕ್ಕೆ ಪ್ರಸ್ತುತ ಎನಿಸುವ ಕಥೆ ಆಯ್ಕೆ ಮಾಡಿಕೊಂಡು ಗೆದ್ದಿದ್ದಾರೆ. ಅದನ್ನು ದೃಶ್ಯ ರೂಪಕ್ಕೆ ತರುವ ಪ್ರಯತ್ನದಲ್ಲಿ ಅಲ್ಲಲ್ಲಿ ಕೊಂಚ ಎಡವಿರೋದು ತಿಳಿಯುತ್ತೆ. ಪ್ರಯಾಣದಲ್ಲಿ ಒಂದಷ್ಟು ಕಡೆ ಪ್ರಯಾಸದ ಕಥೆ ಸಾಗಿ ಪ್ರೇಕ್ಷಕರ ತಾಳ್ಮೆಯನ್ನು ಆಗಾಗ ಪರೀಕ್ಷೆ ಮಾಡುತ್ತೆ. ಮೊದಲಾರ್ಧ ಸರಾಗವಾಗಿ ನೋಡಿಸಿಕೊಂಡು ಹೋಗಿ ಕ್ಯೂರಿಯಾಸಿಟಿ ಬಿಲ್ಡ್ ಮಾಡಿ, ದ್ವಿತೀರ್ಯಾದ ಮಂದಗತಿಯಲ್ಲಿ ಸಾಗಿ ನೋಡುಗರನ್ನು ಕಾಡುತ್ತೆ. ಎಲ್ಲಾ ಅನುಭವಿ ತಾರಾಗಣವಿದ್ದರೂ, ನೈಜ ಅಭಿನಯ ಮೂಡಿ ಬಂದರೂ ಚಿತ್ರಕಥೆ, ಅದನ್ನು ಹೇಳ ಹೊರಟ ಪರಿ ಪ್ರಯಾಸವಾಗುವಂತೆ ಮಾಡಿದೆ. ಸಾಧುಕೋಕಿಲ ಇಡೀ ಸಿನಿಮಾದ ಶಕ್ತಿ. ಅವರು ತೆರೆ ಮೇಲೆ ಬಂದಾಗಲೆಲ್ಲ ಸಿನಿಮಾಗೆ ಹೊಸ ಕಳೆ ಸಿಕ್ಕಿದೆ. ಕಮರ್ಷಿಯಲ್ ಎಳೆಯಲ್ಲಿ ಸಿನಿಮಾ ಕಟ್ಟಿಕೊಟ್ಟ ರೀತಿಯೂ ಮೆಚ್ಚುವಂತದ್ದು, ಹಾಡುಗಳು ಚಿತ್ರಕ್ಕೆ ಪೂರಕವಾಗಿದೆ ಹೊರತು ನೆನಪಿನಂಗಳದಲ್ಲಿ ಉಳಿಯೋದು ಕಷ್ಟ. ತಾಂತ್ರಿಕವಾಗಿ ಸಿನಿಮಾ ಗಟ್ಟಿಯಾಗಿದೆ. ಇನ್ನಷ್ಟು ಕುಸುರಿ ಕೆಲಸಗಳನ್ನು ಮಾಡಿದ್ರೆ ಖಂಡಿತ ಸಿನಿಮಾ ರಂಗೇರಿ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿತ್ತು. ಒಂದಷ್ಟು ನ್ಯೂನ್ಯತೆಗಳನ್ನು ಬದಿಗೊತ್ತಿ ಸಿನಿಮಾ ನೋಡಿದ್ರೆ ಖಂಡಿತ ಮನರಂಜನೆಗೆ ಕೊರತೆ ಇಲ್ಲ. ಇದನ್ನೂ ಓದಿ: ಸ್ಟಾರ್ ತಾರಾಗಣದ ಬಹು ನಿರೀಕ್ಷಿತ ‘ತ್ರಿಕೋನ’ ಬಿಡುಗಡೆಗೆ ರೆಡಿ

  • ತಾಳ್ಮೆಯ ಅಸಲಿ ತಾಕತ್ತು ಅನಾವರಣ ಮಾಡಲಿದೆ ಚಂದ್ರಕಾಂತ್ ನಿರ್ದೇಶನದ ‘ತ್ರಿಕೋನ’ ಚಿತ್ರ

    ತಾಳ್ಮೆಯ ಅಸಲಿ ತಾಕತ್ತು ಅನಾವರಣ ಮಾಡಲಿದೆ ಚಂದ್ರಕಾಂತ್ ನಿರ್ದೇಶನದ ‘ತ್ರಿಕೋನ’ ಚಿತ್ರ

    143 ಎಂಬ ಸಿನಿಮಾ ನಿರ್ದೇಶಿಸಿ ಚಂದನವನದಲ್ಲಿ ಗಮನ ಸೆಳೆದಿದ್ದ ನಿರ್ದೇಶಕ ಚಂದ್ರಕಾಂತ್, ತ್ರಿಕೋನ ಸಿನಿಮಾ ಮೂಲಕ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಬಿಡುಗಡೆಯ ಅಂಚಿನಲ್ಲಿರುವ ಈ ಸಿನಿಮಾ ಟ್ರೇಲರ್ ಜೊತೆಗೆ ಸ್ಟಾರ್ ತಾರಬಳಗದ ಮೂಲಕ ಸಖತ್ ಸುದ್ದಿಯಲ್ಲಿದೆ.

    ‘ತ್ರಿಕೋನ’ ಸಿನಿಮಾದ ಕಥೆ ಎಷ್ಟು ಗಟ್ಟಿತನ ಹೊಂದಿದೆಯೋ ಅದಕ್ಕೆ ಆಯ್ಕೆ ಮಾಡಿಕೊಂಡ ತಾರಬಳಗವೂ ಅಷ್ಟೇ ಪರ್ಫೆಕ್ಟ್ ಆಗಿದೆ. ಬಹುತೇಕ ಸ್ಟಾರ್ ಪೋಷಕ ನಟರೇ ಅಭಿನಯಿಸಿರುವ ಈ ಚಿತ್ರದಲ್ಲಿ ಮೂರು ಜನರೇಷನ್ ಕಥೆ ಹೇಳ ಹೊರಟಿದ್ದೇವೆ ಎನ್ನುತ್ತಾರೆ ನಿರ್ದೇಶಕರು. ಇಂಟ್ರಸ್ಟಿಂಗ್ ಫ್ಯಾಕ್ಟರ್ ಏನಪ್ಪ ಅಂದರೆ ಚಿತ್ರದಲ್ಲಿ ಹಿರಿಯ ನಟಿ ಲಕ್ಷ್ಮಿ ಹಾಗೂ ಹಿರಿಯ ನಟ ಸುರೇಶ್ ಹೆಬ್ಳಿಕರ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಸ್ಯಾಂಡಲ್‍ವುಡ್ ಎವರ್ ಗ್ರೀನ್ ಸಿನಿಮಾ ಪಲ್ಲವಿ ಅನುಪಲ್ಲವಿಯಲ್ಲಿ ನಟಿಸಿದ್ದ ಇವರು ಮೂರು ದಶಕದ ನಂತರ ಅದರಲ್ಲೂ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾವಿದು. ಇದನ್ನೂ ಓದಿ: ಕ್ಲಾಸ್ ಕಟೆಂಟ್, ಮಾಸ್ ನರೇಶನ್, ಮಸ್ತ್ ಮನರಂಜನೆ ನೀಡಲು ‘ತ್ರಿಕೋನ’ ಟೀಂ ರೆಡಿ

    Trikona

    ಚಿತ್ರದಲ್ಲಿ 25, 45, 65 ಹೀಗೆ ಮೂರು ವಯೋಮಾನದವರ ಕಥೆ ಇದೆ. ಈ ಮೂರು ವಯೋಮಾನವು ಚಿತ್ರದಲ್ಲಿ ಶಕ್ತಿ, ಅಹಂ, ತಾಳ್ಮೆಯನ್ನು ಪ್ರತಿನಿಧಿಸುತ್ತವೆ. ರಾಜ್ ವೀರ್, ಮಾರುತೇಶ್ 25 ವರ್ಷದವರನ್ನು ಚಿತ್ರದಲ್ಲಿ ಪ್ರತಿನಿಧಿಸಿದರೆ, ಅಚ್ಯುತ್ ಕುಮಾರ್, ಸುಧಾರಾಣಿ 45, ಲಕ್ಷ್ಮಿ, ಸುರೇಶ್ ಹೆಬ್ಳಿಕರ್ 65ರ ವಯೋಮಾನದವರನ್ನು ಪ್ರತಿನಿಧಿಸುವ ಪಾತ್ರವನ್ನು ನಿಭಾಯಿಸಿದ್ದಾರೆ. ಬದುಕಿನಲ್ಲಿ ಕಷ್ಟಗಳು ಎದುರಾದಾಗ ಶಕ್ತಿ, ಅಹಂ, ತಾಳ್ಮೆ ಮೂಲಕ ಮೂರು ವಯೋಮಾನದವರು ಹೇಗೆ ಬಗೆಹರಿಸಿಕೊಳ್ಳುತ್ತಾರೆ, ತಾಳ್ಮೆ ಜೀವನದಲ್ಲಿ ಎಷ್ಟು ಮುಖ್ಯ ಎನ್ನುವುದೇ ಚಿತ್ರದ ಒನ್ ಲೈನ್ ಕಹಾನಿ. ಇದನ್ನೂ ಓದಿ: ಕಿಚ್ಚನ ಭೇಟಿಗೆ 600 ಕಿಲೋ ಮೀಟರ್ ನಡೆದು ಬಂದ ಮಹಿಳಾ ಅಭಿಮಾನಿಗಳು

    ಬರ್ಫಿ, ಪೆರೋಲ್ ಸಿನಿಮಾ ನಿರ್ದೇಶನ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿರುವ ರಾಜ್ ಶೇಖರ್ ಈ ಚಿತ್ರಕ್ಕೆ ಕಥೆ ಬರೆದು ನಿರ್ಮಾಣ ಮಾಡುತ್ತಿದ್ದಾರೆ. ತಾಂತ್ರಿಕವಾಗಿ ಶ್ರೀಮಂತವಾಗಿ ಮೂಡಿ ಬಂದಿರುವ ಈ ಚಿತ್ರಕ್ಕೆ ಜೀವನ್ ಪ್ರಕಾಶ್ ಸಂಕಲನ, ಶ್ರೀನಿವಾಸ್ ವಿನ್ನಕೋಟ ಕ್ಯಾಮೆರಾ ವರ್ಕ್, ಸುರೇಂದ್ರನಾಥ್ ಸಂಗೀತ ಸಂಯೋಜನೆ ಇದೆ. ಏಪ್ರಿಲ್ 8ಕ್ಕೆ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

  • ಕ್ಲಾಸ್ ಕಟೆಂಟ್, ಮಾಸ್ ನರೇಶನ್, ಮಸ್ತ್ ಮನರಂಜನೆ ನೀಡಲು ‘ತ್ರಿಕೋನ’ ಟೀಂ ರೆಡಿ

    ಕ್ಲಾಸ್ ಕಟೆಂಟ್, ಮಾಸ್ ನರೇಶನ್, ಮಸ್ತ್ ಮನರಂಜನೆ ನೀಡಲು ‘ತ್ರಿಕೋನ’ ಟೀಂ ರೆಡಿ

    ಸ್ಯಾಂಡಲ್‍ವುಡ್ ಅಂಗಳದಲ್ಲಿ ಸಾಲು, ಸಾಲು ಸಿನಿಮಾಗಳು ತೆರೆಗೆ ಬರಲು ಸಿದ್ದವಾಗಿ ನಿಂತಿವೆ. ಕೊರೋನಾ ಅಲೆಗಳ ಹೊಡೆತಕ್ಕೆ ಸಿಕ್ಕಿ ಬಿಡುಗಡೆ ಕಾಣದೆ ನಲುಗಿದ್ದ ಚಿತ್ರಗಳು ಒಂದೊಂದಾಗಿ ಬಿಡುಗಡೆ ಭಾಗ್ಯ ಕಾಣುತ್ತಿವೆ. ಚಿತ್ರಮಂದಿರಗಳ ಎದುರು ಮತ್ತೆ ಹಬ್ಬದ ವಾತಾವರಣ ಶುರುವಾಗಿದೆ. ಕ್ಲಾಸ್, ಸಸ್ಪೆನ್ಸ್, ಥ್ರಿಲ್ಲರ್ ಹೀಗೆ ಎಲ್ಲಾ ಜಾನರ್ ಸಿನಿಮಾಗಳು ಬಿಡುಗಡೆ ಭಾಗ್ಯವನ್ನು ಕಾಣುತ್ತಿವೆ. ಈ ಪೈಕಿ ತೆರೆಗೆ ಬರಲು ಸಜ್ಜಾಗಿರುವ ‘ತ್ರಿಕೋನ’ ಸಿನಿಮಾ ಕೂಡ ಸಖತ್ ಸುದ್ದಿಯಲ್ಲಿದೆ.

    ‘ತ್ರಿಕೋನ’ ಸಿನಿಮಾ ಕ್ಲಾಸ್ ಸಬ್ಜೆಕ್ಟ್ ಒಳಗೊಂಡ ಮಾಸ್ ಸಿನಿಮಾ ಅಂದರೆ ತಪ್ಪಾಗುವುದಿಲ್ಲ. ಟ್ರೇಲರ್ ನೋಡಿದವರಿಗೆ ಅದರ ಝಲಕ್ ಗೊತ್ತಾಗಿರುತ್ತದೆ. ತ್ರಿಕೋನ ಮೂಲಕ ಜೀವನದಲ್ಲಿ ತಾಳ್ಮೆ ಮಹತ್ವವೇನು ಎನ್ನುವುದನ್ನು ಹೇಳುವುದಕ್ಕೆ ಹೊರಟಿದ್ದಾರೆ ನಿರ್ದೇಶಕ ಚಂದ್ರಕಾಂತ್. ಮೂರು ಜನರೇಷನ್ ಇಟ್ಟುಕೊಂಡು ಕಥೆ ಹೆಣೆದಿರುವ ನಿರ್ದೇಶಕರು ಅದನ್ನು ತೆರೆ ಮೇಲೂ ತೋರಿಸಿದ್ದಾರೆ. 25, 45, 65 ವಯೋಮಾನದವರ ಪಾತ್ರಗಳಲ್ಲಿ ಪಾತ್ರಧಾರಿಗಳನ್ನು ಕಾಣಬಹುದು. ಜೀವನದಲ್ಲಿ ಕಷ್ಟ ಎನ್ನುವುದು ಎಲ್ಲರಿಗೂ ಬರುತ್ತದೆ. ಕಷ್ಟ ಬಂದಾಗ ಆಯಾ ವಯೋಮಾನದವರು ಯಾವ ರೀತಿ ಎದುರಿಸುತ್ತಾರೆ. ಶಕ್ತಿ, ಅಹಂ, ತಾಳ್ಮೆ ಇವುಗಳಲ್ಲಿ ಯಾವುದು ಮುಖ್ಯ ಎನ್ನುವುದುದನ್ನು ಆಕ್ಷನ್ ಥ್ರಿಲ್ಲರ್, ಸಸ್ಪೆನ್ಸ್ ಸಬ್ಜೆಕ್ಟ್
    ಜೊತೆಗೆ ಮಾಸ್ ಆಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಚಂದ್ರಕಾಂತ್.

    Trikona

    ಚಂದ್ರಕಾಂತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಎರಡನೇ ಸಿನಿಮಾವಿದು. ಚಿತ್ರಕ್ಕೆ ನಿರ್ಮಾಪಕ ರಾಜ್ ಶೇಖರ್ ಕತೆ ಬರೆದಿದ್ದು, ಚಿತ್ರಕಥೆ, ಸಂಭಾಷಣೆ, ಸಾಹಿತ್ಯದ ಜವಾಬ್ದಾರಿಯನ್ನು ಚಂದ್ರಕಾಂತ್ ವಹಿಸಿಕೊಂಡಿದ್ದಾರೆ. ಚಿತ್ರದ ತಾರಾಗಣವೇ ಈ ಚಿತ್ರದ ಮತ್ತೊಂದು ಹೈಲೈಟ್. ಜೂಲಿ ಲಕ್ಷ್ಮಿ, ಸುರೇಶ್ ಹೆಬ್ಳಿಕರ್, ಅಚ್ಯುತ್ ಕುಮಾರ್, ಸುಧಾರಾಣಿ, ರಾಜ್ ವೀರ್, ಮಾರುತೇಶ್, ಸಾಧುಕೋಕಿಲ, ಮನದೀಪ್ ರಾಯ್ ಒಳಗೊಂಡ ಸ್ಟಾರ್ ಕಲಾವಿದರ ರಂಗು ಚಿತ್ರಕ್ಕಿದೆ. ಇದನ್ನೂ ಓದಿ : ಸ್ನೇಹಿತರ ನಿವೃತ್ತಿ ನೆನಪಿಸಿ, ಆರೋಗ್ಯದಿಂದಿರಲು ಟಿಪ್ಸ್ ಕೊಟ್ಟ ಜಗ್ಗೇಶ್

    ಸುರೇಂದ್ರನಾಥ್ ಸಂಗೀತ, ಶ್ರೀನಿವಾಸ್ ವಿನ್ನಕೋಟ, ಜೀವನ್ ಪ್ರಕಾಶ್ ಸಂಕಲನ ಚಿತ್ರಕ್ಕಿದ್ದು, ಪೊಲೀಸ್ ಪ್ರಕಿ ಪ್ರೊಡಕ್ಷನ್ ಬ್ಯಾನರ್ ನಡಿ ರಾಜ್ ಶೇಖರ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಟೈಟಲ್, ತಾರಾಗಣದ ಮೂಲಕ ಸೌಂಡ್ ಮಾಡುತ್ತಿರುವ ತ್ರಿಕೋನ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರದಲ್ಲಿ ಯಾವ ರೀತಿ ಸೆಳೆಯಲಿದೆ ಎನ್ನುವುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ : ಮೇ 11ಕ್ಕೆ ನಟಿ ಮಮತಾ ರಾವುತ್ ಮದುವೆ : ಡಾಕ್ಟರ್ ಜತೆ ಸಪ್ತಪದಿ ತುಳಿಯಲಿರುವ ನಟಿ

  • ಸ್ಟಾರ್ ತಾರಾಗಣದ ಬಹು ನಿರೀಕ್ಷಿತ ‘ತ್ರಿಕೋನ’ ಬಿಡುಗಡೆಗೆ ರೆಡಿ

    ಸ್ಟಾರ್ ತಾರಾಗಣದ ಬಹು ನಿರೀಕ್ಷಿತ ‘ತ್ರಿಕೋನ’ ಬಿಡುಗಡೆಗೆ ರೆಡಿ

    ಟೈಟಲ್ ಹಾಗೂ ಟ್ರೇಲರ್ ಮೂಲಕ ಸುದ್ದಿಯಲ್ಲಿರುವ ‘ತ್ರಿಕೋನ’ ಚಿತ್ರ ಬಿಡುಗಡೆಯ ಹೊಸ್ತಿಲಿಗೆ ಬಂದು ನಿಂತಿದೆ. ಏಪ್ರಿಲ್ 8 ರಂದು ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಸಕಲ ತಯಾರಿ ಮಾಡಿಕೊಂಡಿದೆ. ಬಹಳ ವರ್ಷಗಳ ನಂತರ ಮತ್ತೆ ನಿರ್ದೇಶನದ ಟ್ರ್ಯಾಕ್ ಮರಳಿರುವ ಚಂದ್ರಕಾಂತ್ ಈ ಚಿತ್ರದ ಗೆಲುವಿಗೆ ಎದುರು ನೋಡುತ್ತಿದ್ದು ಸಿನಿಮಾ ಬಗ್ಗೆ ಸಾಕಷ್ಟು ಹೋಪ್ ಇಟ್ಟುಕೊಂಡಿದ್ದಾರೆ.

    ‘ತ್ರಿಕೋನ’ ಆಕ್ಷನ್ ಥ್ರಿಲ್ಲರ್, ಸಸ್ಪೆನ್ಸ್ ಕಹಾನಿ ಒಳಗೊಂಡ ಸಿನಿಮಾ. 2014ರಲ್ಲಿ ತೆರೆಕಂಡ 143 ಸಿನಿಮಾ ಮುಲಕ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಚಂದ್ರಕಾಂತ್ ಎರಡನೇ ಸಿನಿಮಾವಿದು. ಸಿನಿಮಾದ ಕಟೆಂಟ್ ಬಗ್ಗೆ ಅಪಾರ ನಂಬಿಕೆ ಇಟ್ಟು ನಿರ್ದೇಶನಕ್ಕೆ ಮರಳಿರುವ ಇವರು ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಜವಾಬ್ದಾರಿಯನ್ನು ಅಚ್ಚಕಟ್ಟಾಗಿ ನಿಭಾಯಿಸಿ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಚಿತ್ರಕಥೆಯ ರೂವಾರಿ ನಿರ್ಮಾಪಕರಾದ ರಾಜ್ ಶೇಖರ್, ಅಷ್ಟೇ ಅಲ್ಲ ‘ತ್ರಿಕೋನ’ ಸಿನಿಮಾ ನಿರ್ಮಾಣ ಕೂಡ ಇವರೇ ಮಾಡಿದ್ದಾರೆ. ಇದನ್ನೂ ಓದಿ: ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧ: ವಕ್ಫ್ ಮಂಡಳಿಯ ಸುತ್ತೋಲೆಯಲ್ಲಿ ಏನಿದೆ? ಸುಪ್ರೀಂ ಕೋರ್ಟ್ ಹೇಳಿದ್ದೇನು?

    ಕಷ್ಟಗಳು ಎದುರಾದಾಗ ಆಯಾ ವಯೋಮನಾದ ಜನರು ಶಕ್ತಿ, ಅಹಂ, ತಾಳ್ಮೆ ಅಸ್ತ್ರ ಉಪಯೋಗಿಸಿ ಹೇಗೆ ಅದನ್ನು ಬಗೆಹರಿಸಿಕೊಳ್ಳುತ್ತಾರೆ. ‘ತಾಳ್ಮೆ’ ಜೀವನದಲ್ಲಿ ಎಷ್ಟು ಮುಖ್ಯ ಅನ್ನೋದನ್ನು ಮೂರು ಜನರೇಷನ್ ಇಟ್ಟುಕೊಂಡು ಕಥೆ ಹೆಣೆದು ಕಮರ್ಶಿಯಲ್ ಎಳೆಯಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಚಿತ್ರದಲ್ಲಿ ಜೂಲಿ ಲಕ್ಷ್ಮಿ, ಸುರೇಶ್ ಹೆಬ್ಳಿಕರ್ ಅಪರೂಪದ ಜೋಡಿಯನ್ನು ಕಣ್ತುಂಬಿಕೊಳ್ಳಬಹುದು. ಹಾಗೆಯೇ ಅಚ್ಯುತ್ ಕುಮಾರ್, ಸುಧಾರಾಣಿ ಜುಗಲ್ಬಂದಿ, ಸಾಧು ಕೋಕಿಲ, ಮನದೀಪ ರಾಯ್, ರಾಜ್ ವೀರ್, ಮಾರುತೇಶ್ ಹೀಗೆ ಹಲವು ಕಲಾವಿದರು ತ್ರಿಕೋನದಲ್ಲಿ ಜೊತೆಯಾಗಿ ಭರಪೂರ ಮನರಂಜನೆ ನೀಡಲು ಸಜ್ಜಾಗಿದ್ದಾರೆ.

    ಕಟೆಂಟ್ ಎಷ್ಟು ಗಟ್ಟಿತನ ಹೊಂದಿದೆಯೋ ತಾಂತ್ರಿಕವಾಗಿಯೂ ಸಿನಿಮಾ ಅಷ್ಟೇ ಸ್ಟ್ರಾಂಗ್ ಆಗಿದೆ ಅನ್ನೋದು ಚಿತ್ರತಂಡದ ಮಾತು. ಸುರೇಂದ್ರನಾಥ್ ಸಂಗೀತ ಹಾಗೂ ಹಿನ್ನೆಲೆ ಸಂಗೀತ, ಶ್ರೀನಿವಾಸ್ ವಿನ್ನಕೋಟ ಛಾಯಾಗ್ರಾಹಣ, ಜೀವನ್ ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ಪೊಲೀಸ್ ಪ್ರಕಿ ಪ್ರೋಡಕ್ಷನ್ ಬ್ಯಾನರ್ ನಿರ್ಮಾಣದಲ್ಲಿ ಬರ್ತಿರುವ ಈ ಚಿತ್ರಕ್ಕೆ ರಾಜ್ ಶೇಖರ್ ನಿರ್ಮಾಪಕರು. ಇದನ್ನೂ ಓದಿ: ತಲೆಕೂದಲು ಬೋಳಿಸಿಕೊಂಡ ಫೋಟೋ ಶೇರ್ ಮಾಡಿದ ಗರ್ಭಿಣಿ ಸಂಜನಾ