Tag: tricolour flag

  • ಉರ್ದು ಶಾಲೆಯಲ್ಲಿ ಉಲ್ಟಾ ಹಾರಿದ ತ್ರಿವರ್ಣ ಧ್ವಜ – ರಾಷ್ಟ್ರ ಪ್ರೇಮಿಗಳ ಆಕ್ರೋಶ

    ಉರ್ದು ಶಾಲೆಯಲ್ಲಿ ಉಲ್ಟಾ ಹಾರಿದ ತ್ರಿವರ್ಣ ಧ್ವಜ – ರಾಷ್ಟ್ರ ಪ್ರೇಮಿಗಳ ಆಕ್ರೋಶ

    ಬೆಳಗಾವಿ: ಸ್ವಾತಂತ್ರ್ಯ ದಿನದಂದೇ (Independence Day) ಉರ್ದು ಶಾಲೆಯಲ್ಲಿ ತ್ರಿವರ್ಣ ಧ್ವಜವನ್ನು (Tricolour Flag) ಉಲ್ಟಾ ಹಾರಿಸಿ ಅಪಮಾನ ಎಸಗಿದ್ದು, ರಾಷ್ಟ್ರಪ್ರೇಮಿಗಳ ಕೆಂಗಣ್ಣಿಗೆ ಗುರಿಯಾದ ಘಟನೆ ಬೆಳಗಾವಿ (Belagavi) ಜಿಲ್ಲೆಯ ಮೂಡಲಗಿ (Mudalagi) ತಾಲೂಕಿನ ಲಕ್ಷ್ಮೇಶ್ವರ ಗ್ರಾಮದಲ್ಲಿ ನಡೆದಿದೆ.

    ಸ್ವಾತಂತ್ರ್ಯೋತ್ಸವದ ದಿನವೇ ಅದ್ವಾನಕ್ಕೆ ಉರ್ದು ಶಾಲೆ ಕಾರಣವಾಗಿದ್ದು, ಶಿಕ್ಷಕರು ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಿ ಅಪಮಾನ ಎಸಗಿದ್ದಾರೆ. ಲಕ್ಷ್ಮೇಶ್ವರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಸಿರು ಬಣ್ಣವನ್ನು ಮೇಲೆ ಮಾಡಿ ಧ್ವಜಾರೋಹಣವನ್ನು ಮಾಡಿದ್ದಾರೆ. ಶಿಕ್ಷಕರ ಅದ್ವಾನಕ್ಕೆ ರಾಷ್ಟ್ರ ಪ್ರೇಮಿಗಳು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಾರಿಗೆ ಇಲಾಖೆ ಸಿಬ್ಬಂದಿಯ ಯಡವಟ್ಟು – ಧ್ವಜಾರೋಹಣ ವೇಳೆ ಅಂಬೇಡ್ಕರ್ ಪೋಟೋ ಇಡದ್ದಕ್ಕೆ ಆಕ್ರೋಶ

    ಉರ್ದು ಶಾಲೆಯಲ್ಲಿ ಉಲ್ಟಾ ಹಾರಿದ ತ್ರಿವರ್ಣ ಧ್ವಜದ ಫೋಟೋ ಎಲ್ಲೆಡೆ ಭಾರೀ ವೈರಲ್ ಆಗಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಈ ಕುರಿತು ಸ್ಥಳಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಪರೇಡ್ ವೇಳೆ ಕುಸಿದು ಬಿದ್ದ ಮೂವರು ವಿದ್ಯಾರ್ಥಿಗಳು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತ-ಪಾಕ್ ಗಡಿಯಲ್ಲಿ ಅತ್ಯಂತ ಎತ್ತರದ ತ್ರಿವರ್ಣಧ್ವಜ ಹಾರಿಸಿದ ಭಾರತ- ಪಾಕ್‍ಗೆ ಈಗ ಭಯವೇನು ಗೊತ್ತಾ?

    ಭಾರತ-ಪಾಕ್ ಗಡಿಯಲ್ಲಿ ಅತ್ಯಂತ ಎತ್ತರದ ತ್ರಿವರ್ಣಧ್ವಜ ಹಾರಿಸಿದ ಭಾರತ- ಪಾಕ್‍ಗೆ ಈಗ ಭಯವೇನು ಗೊತ್ತಾ?

    ನವದೆಹಲಿ: ಭಾರತ ಪಾಕಿಸ್ತಾನ ಗಡಿಯಲ್ಲಿರುವ ಅಮೃತಸರ ಬಳಿಯ ಅಟ್ಟಾರಿಯಲ್ಲಿ ಭಾನುವಾರದಂದು ಭಾರತ ಅತ್ಯಂತ ಎತ್ತರದ ತ್ರಿವರ್ಣ ಧ್ವಜವನ್ನ ಹಾರಿಸಿದೆ.

    120 ಅಡಿ ಉದ್ದ, 80 ಅಡಿ ಅಗಲವಿರುವ ಧ್ವಜವನ್ನ 360 ಅಡಿ ಉದ್ದದ ಸ್ತಂಭದ ಮೇಲೆ ಹಾರಿಸಲಾಗಿದೆ. ಈ ಧ್ವಜ ಎಷ್ಟು ಎತ್ತರವಿದೆ ಎಂದರೆ ಇದನ್ನು ಸುಮಾರು 30 ಕಿ.ಮೀ ದೂರದಲ್ಲಿರುವ ಲಾಹೋರ್‍ನಲ್ಲಿರುವ ಪ್ರಸಿದ್ಧ ಅನಾರ್ಕಲಿ ಬಜಾರ್‍ನಿಂದಲೂ ಕಾಣಬಹುದಾಗಿದೆ. 100 ಕೆಜಿ ತೂಕವಿರುವ ಈ ಧ್ವಜವನ್ನ ಎತ್ತರದ ಪ್ರದೇಶದಲ್ಲಿ ಜೋರಾಗಿ ಬೀಸೋ ಗಾಳಿಯನ್ನು ತಡೆದುಕೊಳ್ಳಲು ಸಹಾಯವಾಗುವಂತೆ ಪ್ಯಾರಾಚೂಟ್ ಮೆಟೀರಿಯಲ್‍ನಿಂದ ಮಾಡಲಾಗಿದೆ.

    360 ಅಡಿ ಉದ್ದವಿರುವ ಸ್ತಂಭ 55 ಟನ್ ತೂಕವಿದ್ದು ದೆಹಲಿಯ ಕುತುಬ್ ಮಿನಾರ್‍ಗಿಂತ ಎತ್ತರವಿದೆ. ಧ್ವಜ ಸ್ತಂಭದ ಸುತ್ತ ಎಲ್‍ಇಡಿ ಫ್ಲಡ್ ಲೈಟ್‍ಗಳನ್ನ ಹಾಕಲಾಗಿದ್ದು, ರಾತ್ರಿ ಹೊತ್ತಿನಲ್ಲೂ ಮೈಲಿ ದೂರದಲ್ಲಿದ್ರೂ ಧ್ವಜ ಕಾಣುವಂತೆ ಮಾಡಲಾಗಿದೆ.

    ಈ ಯೋಜನೆಗೆ ಸುಮಾರು 4 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಅಮೃತಸರ ಇಂಪ್ರೂವ್‍ಮೆಂಟ್ ಟ್ರಸ್ಟ್ ಇದನ್ನು ಪೂರ್ಣಗೊಳಿಸಿದೆ. ಧ್ವಜದ ದೈನಂದಿನ ನಿರ್ವಹಣೆಯನ್ನು ಬಿಎಸ್‍ಎಫ್‍ನ ಆದೇಶದಂತೆ ಮಾಡಲಾಗುತ್ತದೆ ಎಂದು ವರದಿಯಾಗಿದೆ. ಅತೀ ಎತ್ತರದ ಈ ತ್ರಿವರ್ಣ ಧ್ವಜ ಈಗ ಅಟ್ಟಾರಿ ವಾಗಾ ಗಡಿಯಲ್ಲಿ ಪ್ರತಿದಿನ ಸಂಜೆ ಬೀಟಿಂಗ್ ರಿಟ್ರೀಟ್ ವೀಕ್ಷಿಸಲು ಬರುವ ಸಾವಿರಾರು ಜನರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

    ಪಾಕಿಸ್ತಾನದ ವಿರೋಧ: ಇದೇ ವೇಳೆ ಗಡಿ ಭಾಗದಲ್ಲಿ ಎತ್ತರದ ಧ್ವಜ ಅಳವಡಿಸಿರುವುದಕ್ಕೆ ಪಾಕಿಸ್ತಾನ ವಿರೋಧ ವ್ಯಕ್ತಪಡಿಸಿದೆ. ಭಾರತ ಈ ಧ್ವಜವನ್ನು ಗಡಿ ಭಾಗದಲ್ಲಿ ಗೂಢಾಚಾರಿಕೆ ಮಾಡಲು ಬಳಸುತ್ತದೆ ಎಂದು ಪಾಕಿಸ್ತಾನ ಹೆದರಿದೆ.

    ಈ ಹೇಳಿಕೆಯನ್ನು ಭಾರತ ತಳ್ಳಿಹಾಕಿದ್ದು, ಧ್ವಜಸ್ತಂಭವನ್ನು ಝೀರೋ ಲೈನ್‍ಗಿಂತ 200 ಮೀಟರ್ ಒಳಗೆ ಅಳವಡಿಸಲಾಗಿದೆ. ಧ್ವಜ ನಿಂತಿರುವುದು ಭಾರತದ ಮಣ್ಣಿನಲ್ಲಿ. ದೇಶವೊಂದು ತನ್ನ ನೆಲದಲ್ಲಿ ಧ್ವಜ ಹಾರಿಸುವುದನ್ನು ಯಾವುದೇ ಕಾನೂನಾಗಲೀ ಅಥವಾ ಅಂತರಾಷ್ಟ್ರೀಯ ಕಟ್ಟುಪಾಡುಗಳಾಗಲೀ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದೆ.