Tag: tricolor flag

  • 75ನೇ ಸ್ವಾತಂತ್ರ್ಯ ಸಂಭ್ರಮಕ್ಕೆ 75 ಮೀ. ತಿರಂಗಾದೊಂದಿಗೆ 75 ಕಿ.ಮೀ ರ‍್ಯಾಲಿ

    75ನೇ ಸ್ವಾತಂತ್ರ್ಯ ಸಂಭ್ರಮಕ್ಕೆ 75 ಮೀ. ತಿರಂಗಾದೊಂದಿಗೆ 75 ಕಿ.ಮೀ ರ‍್ಯಾಲಿ

    ಬೆಂಗಳೂರು: ಭಾರತಕ್ಕೆ ಸ್ವಾತಂತ್ರ‍್ಯ ಬಂದು 75 ನೇ ವರ್ಷದ ಸಂಭ್ರಮಕ್ಕೆ ದಿನಗಣನೆ ಶುರುವಾಗಿದೆ. ಆಗಸ್ಟ್ 15ಕ್ಕೆ ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ‍್ಯ ಸಿಕ್ಕಿ 75 ವರ್ಷಗಳು ತುಂಬುತ್ತಿದೆ. ಈ ಅಮೃತ ಸ್ವಾತಂತ್ರ‍್ಯ ಉತ್ಸವವನ್ನು ಮತ್ತಷ್ಟು ಸಂಭ್ರಮದಿಂದ ಆಚರಣೆ ಮಾಡಲು ಎಲ್ಲರೂ ಸಿದ್ಧರಾಗುತ್ತಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಮನೆ ಅವರು ಮನೆಯಲ್ಲೂ ರಾಷ್ಟ್ರ ಧ್ವಜವನ್ನು ಹಾರಿಸಲು ಕರೆ ನೀಡಿರುವುದು ಗೊತ್ತೇ ಇದೆ. ಭಾರತದ ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ಪಕ್ಷ ಸಹ ಭಾರತದ 75ನೇ ಸ್ವಾತಂತ್ರ‍್ಯ ದಿನಚಾರಣೆಯ ಪ್ರಯುಕ್ತ ಫ್ರೀಡಂ ರ‍್ಯಾಲಿಗೆ ಕರೆ ನೀಡಿದೆ. ಇದನ್ನೂ ಓದಿ: ಹೈಕಮಾಂಡ್ ಅವಕಾಶ ಕೊಟ್ಟರೇ ನಾವು ಸಿದ್ದರಾಮೋತ್ಸವಕ್ಕಿಂತಲೂ ಹೆಚ್ಚು ಜನರನ್ನು ಸೇರಿಸುತ್ತೇವೆ: ಕೆ.ಪಿ.ನಂಜುಂಡಿ

    ಫ್ರೀಡಂ ಮಾರ್ಚ್ ಪ್ರಯುಕ್ತ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 75 ಕಿ.ಮೀ ನಡಿಗೆ ಮಾಡುವ ಕಾರ್ಯಕ್ರಮಕ್ಕೆ ಕೆಪಿಸಿಸಿ ಕರೆ ನೀಡಿದ್ದು, ಅದರ ಪ್ರಯುಕ್ತ ಇಂದು ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಗೋವಿಂದಪುರ ವಾರ್ಡ್ನ ಕಾಂಗ್ರೆಸ್ ಕಾರ್ಯಕರ್ತರು ರ‍್ಯಾಲಿಗೆ ಚಾಲನೆ ನೀಡಿದರು.

    ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸೈಯದ್ ಆಲಿ ನೇತೃತ್ವದಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಗೋವಿಂದಪುರ ವಾರ್ಡ್‌ನಲ್ಲಿ 9 ಕಿ.ಮೀ ಫ್ರೀಡಂ ಮಾರ್ಚ್ ಮಾಡಿದರು. 75 ಮೀ. ಉದ್ದದ ತ್ರಿವರ್ಣ ಧ್ವಜವನ್ನು ಇಡೀ ವಾರ್ಡ್‌ನಲ್ಲಿ ಪ್ರದರ್ಶನ ಮಾಡಿದ್ದು ವಿಶೇಷವಾಗಿತ್ತು. 75 ಮೀ. ಉದ್ದದ ತ್ರಿವರ್ಣ ಧ್ವಜವನ್ನು 500 ಜನ ಹಿಡಿದುಕೊಂಡು ನಡಿಗೆಯಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಪ್ರಧಾನಿ ಬಂದಾಗ ಮಾತ್ರ ರಸ್ತೆ ಮಾಡಿಸ್ತೀರಾ; ನಮ್ಮ ಮಕ್ಕಳು ಒಳ್ಳೆ ರಸ್ತೆಯಲ್ಲಿ ಓಡಾಡಬಾರದಾ – ಪ್ರಕಾಶ್‌ ರಾಜ್‌ ಪ್ರಶ್ನೆ

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್ ಪಕ್ಷ ಭಾರತದ ತ್ರಿವರ್ಣ ಧ್ವಜದ ಹಕ್ಕುದಾರ- ಡಿಕೆಶಿ ಪ್ರತಿಪಾದನೆ

    ಕಾಂಗ್ರೆಸ್ ಪಕ್ಷ ಭಾರತದ ತ್ರಿವರ್ಣ ಧ್ವಜದ ಹಕ್ಕುದಾರ- ಡಿಕೆಶಿ ಪ್ರತಿಪಾದನೆ

    ತುಮಕೂರು: ಭಾರತಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಬಹಳಷ್ಟಿದೆ. ಈ ದೇಶದ ತ್ರಿವರ್ಣಧ್ವಜದ ಹಕ್ಕುದಾರರು ನಾವು ಕಾಂಗ್ರೆಸಿಗರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತ್ರಿವರ್ಣ ಧ್ವಜದ ಮೇಲೆ ತಮ್ಮ ಪಕ್ಷದ ಹಕ್ಕನ್ನು ಪ್ರತಿಪಾದಿಸಿದ್ದಾರೆ.

    ತುಮಕೂರಿನಲ್ಲಿ ನಡೆದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಇತಿಹಾಸ ಇದ್ದು, ಈ ದೇಶಕ್ಕೆ ತಮ್ಮ ಪಕ್ಷದ ಕೊಡುಗೆ ಅಪಾರ ಎಂದರಲ್ಲದೇ ವೇದಿಕೆಯ ಪೋಡಿಯಂ ಮೇಲೆ ಹೊದಿಸಿದ್ದ ಕೇಸರಿ, ಬಿಳಿ, ಹಸಿರು ಬಣ್ಣದ ಕಾಂಗ್ರೆಸ್ ಬಾವುಟ ಹಿಡಿದು ತೋರಿಸಿ ತ್ರಿವರ್ಣ ಧ್ವಜದ ಹಕ್ಕುದಾರರು ನಾವು ಎಂದರು. ಇದನ್ನೂ ಓದಿ: ಪಕ್ಷಕ್ಕೆ ಮೋಸ ಮಾಡಲ್ಲ, ಎಲ್ಲಿಂದ್ಲೋ ಬಂದು ಮಂಡ್ಯ ನಮ್ಮದೇ ಅನ್ನೋರಿಗೆ ಮಣೆ ಹಾಕ್ಬೇಡಿ: ಎಸ್‍ಟಿಎಸ್

    ಹಾಗೇ ಮುಂದುವರಿದು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಮಾಡಿದ ದೇಶದ ಆಸ್ತಿ-ಪಾಸ್ತಿಯನ್ನು ಬಿಜೆಪಿ ಸರ್ಕಾರ ಮಾರಾಟ ಮಾಡುತ್ತಿದೆ. ರೈಲು, ವಿಮಾನ, ಬಿಎಸ್ ಎನ್ ಎಲ್ ಎಲ್ಲವೂ ಮಾರಾಟ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಖಾಸಗೀಕರಣ ವಿರೋಧ ಮಾಡಿತ್ತು. ಬ್ಯಾಂಕ್ ಗಳನ್ನು ರಾಷ್ಟ್ರೀಕರಣ ಮಾಡಿತ್ತು. ಆದರೆ ಬಿಜೆಪಿ ಸರ್ಕಾರ ಎಲ್ಲವನ್ನೂ ಹರಾಜು ಹಾಕುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಈ ದೇಶದಲ್ಲಿ 400 ಸೀಟ್ ಪಡೆದ ಬಲಿಷ್ಠ ಬಿಜೆಪಿ ಸರ್ಕಾರವನ್ನು ಯೂಟರ್ನ್ ಮಾಡುವಂತೆ ಮಾಡಿದ ಶಕ್ತಿ ರೈತ ಸಮುದಾಯಕ್ಕೆ ಇದೆ. ರೈತರ ಹೋರಾಟದ ಪರಿಣಾಮ ಕೃಷಿ ತಿದ್ದುಪಡಿ ಕಾಯಿದೆ ವಾಪಸ್ ಪಡೆದರು ಎಂದು ಕೇಂದ್ರದ ವಿರುದ್ಧ ಗುಡುಗಿದರು. ಇದನ್ನೂ ಓದಿ: ಗೆಹ್ಲೋಟ್ ಸರ್ಕಾರದ ಸಚಿವ ಸಂಪುಟ ಪುನಾರಚನೆ – 15 ಮಂದಿ ಸಂಪುಟ ಸೇರ್ಪಡೆ

  • ಅರುಣಾಚಲ ಪ್ರದೇಶದಲ್ಲಿ ಮಕ್ಕಳಿಗೆ ತ್ರಿವರ್ಣದ ಮಾಸ್ಕ್

    ಅರುಣಾಚಲ ಪ್ರದೇಶದಲ್ಲಿ ಮಕ್ಕಳಿಗೆ ತ್ರಿವರ್ಣದ ಮಾಸ್ಕ್

    ಗುವಾಹಟಿ: ಮಕ್ಕಳಲ್ಲಿ ರಾಷ್ಟ್ರ ಭಕ್ತಿ ಹೆಚ್ಚಿಸಲು ಅರುಣಾಚಲ ಪ್ರದೇಶದಲ್ಲಿ ತ್ರಿವರ್ಣ ಧ್ವಜ ಬಣ್ಣದ ಮಾಸ್ಕ್ ಗಳನ್ನು ವಿತರಿಸಲಾಗುತ್ತಿದೆ. ನವೆಂಬರ್ 16ರಿಂದ ಶಾಲೆಗಳು ಆರಂಭವಾಗಲಿದ್ದು, ಹೀಗಾಗಿ ಸಾವಿರಾರು ಮಾಸ್ಕ್ ಗಳನ್ನು ವಿತರಿಸಲಾಗುತ್ತಿದೆ.

    ಈ ಕುರಿತು ಅರುಣಾಚಲ ಪ್ರದೇಶ ಸರ್ಕಾರ ಆದೇಶ ಹೊರಡಿಸಿದ್ದು, ನವೆಂಬರ್ 16ರಿಂದ 10ನೇ ತರಗತಿ ಹಾಗೂ 12 ತರಗತಿ ಶಾಲೆ, ಕಾಲೇಜುಗಳನ್ನು ತೆರೆಯಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇದರ ಭಾಗವಾಗಿ ಖಾದಿ ಆ್ಯಂಡ್ ವಿಲೇಜ್ ಇಂಡಸ್ಟ್ರೀಸ್ ಕಮಿಷನ್(ಕೆವಿಐಸಿ)ನಿಂದ 60 ಸಾವಿರ ಖಾದಿ ಬಟ್ಟೆಯ ಮಾಸ್ಕ್ ಖರೀದಿಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದೆ.

    ಕೊರೊನಾ ಲಾಕ್‍ಡೌನ್ ಬಳಿಕ ಮೊದಲ ಬಾರಿಗೆ ಶಾಲೆಗೆ ಮರಳಿದ ಬಳಿಕ ಸಾವಿರಾರು ಮಕ್ಕಳು ತ್ರಿವರ್ಣದ ಮಾಸ್ಕ್ ಧರಿಸಲಿದ್ದಾರೆ ಎಂದು ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಸಚಿವಾಲಯ ತಿಳಿಸಿದೆ. ಕೆವಿಐಸಿ ಈಗಾಗಲೇ ಸರ್ಕಾರಕ್ಕೆ ಮಾಸ್ಕ್ ಪೂರೈಸಿದ್ದು, ಇನ್ನು ಕೇವಲ 6 ದಿನಗಳಲ್ಲಿ ಮಾಸ್ಕ್‍ಗಳನ್ನು ಮಕ್ಕಳಿಗೆ ನೀಡಬೇಕಿದೆ.

    ಮಕ್ಕಳಲ್ಲಿ ರಾಷ್ಟ್ರೀಯತೆ ಜಾಗೃತಗೊಳಿಸುವ ಉದ್ದೇಶದಿಂದ ತ್ರಿವರ್ಣದ ಮಾಸ್ಕ್‍ಗಳನ್ನು ವಿತರಿಸಲಾಗುತ್ತಿದೆ. ಎಲ್ಲ ಮಾಸ್ಕ್‍ಗಳನ್ನು ಕೆವಿಐಸಿ ಉತ್ಪಾದಿಸಲಿದೆ. ಡಬಲ್ ಟ್ವಿಸ್ಟೆಡ್ ಖಾದಿ ಬಟ್ಟೆಯಿಂದ ಮಾಸ್ಕ್ ತಯಾರಿಸಲಾಗಿದೆ. ಇದರಿಂದಾಗಿ ಉಸಿರಾಟದ ಸಮಸ್ಯೆ ಸಹ ಕಾಡುವುದಿಲ್ಲ ಎಂದು ಸರ್ಕಾರ ತನ್ನ ಆದೇಶದಲ್ಲಿ ಮಾಹಿತಿ ನೀಡಿದೆ.

  • ಪಾಕ್ ಮಾದರಿ ಧ್ವಜವನ್ನು ಕಾರಿಗೆ ಹಾಕಿದ್ದ ಚಾಲಕನಿಗೆ ಪೊಲೀಸರಿಂದ ಕ್ಲಾಸ್

    ಪಾಕ್ ಮಾದರಿ ಧ್ವಜವನ್ನು ಕಾರಿಗೆ ಹಾಕಿದ್ದ ಚಾಲಕನಿಗೆ ಪೊಲೀಸರಿಂದ ಕ್ಲಾಸ್

    – ಪೊಲೀಸರ ಕಾರ್ಯಕ್ಕೆ ನೆಟ್ಟಿಗರು ಫಿದಾ, ವಿಡಿಯೋ ವೈರಲ್

    ಬೆಂಗಳೂರು: ಪಾಕಿಸ್ತಾನ ಮಾದರಿಯ ಫ್ಲಾಗ್ ಅನ್ನು ಕಾರಿನ ಮುಂಭಾಗಕ್ಕೆ ಹಾಕಿಕೊಂಡಿದ್ದ ಕಾರು ಚಾಲಕನಿಗೆ ಎಲೆಕ್ಟ್ರಾನ್ ಸಿಟಿ ಸಂಚಾರ ಪೊಲೀಸರು ಕ್ಲಾಸ್ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಘಟನೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ವೀರಸಂದ್ರ ಬಳಿ ನಡೆದಿದೆ ಎಂದು ತಿಳಿದು ಬಂದಿದೆ. ಪಾಕಿಸ್ತಾನದ ಧ್ವಜ ಹೋಲುವ ಧ್ವಜವನ್ನು ಕಾರಿನ ಮುಂಭಾಗ ಅಳವಡಿಸಿಕೊಂಡಿರುವುದನ್ನು ಕಂಡ ಎಲೆಕ್ಟ್ರಾನಿಕ್ ಸಿಟಿ ಟ್ರಾಫಿಕ್ ಪೊಲೀಸರು ಕಾರನ್ನು ತಡೆದು, ಚಾಲಕನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ತಮಿಳುನಾಡಿನಿಂದ ಬೆಂಗಳೂರಿಗೆ ಬರುತ್ತಿದ್ದ ಕಾರಿನ ಮುಂಭಾಗದಲ್ಲಿ ಅರ್ಧ ಚಂದ್ರನಿರುವ ಹಸಿರು ಬಣ್ಣ ಧ್ವಜ ಇರುವುದನ್ನು ಕಂಡ ಪೊಲೀಸರು, ಕಾರನ್ನು ತಡೆದು ಆ ಧ್ವಜವನ್ನು ಬಿಚ್ಚಿಸಿ ಭಾರತದ ತ್ರಿವರ್ಣ ಧ್ವಜವನ್ನು ಅಳವಡಿಸಿದ್ದಾರೆ. ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

  • 100 ಮೀಟರ್ ತ್ರಿವರ್ಣ ಧ್ವಜ ಮೆರವಣಿಗೆ

    100 ಮೀಟರ್ ತ್ರಿವರ್ಣ ಧ್ವಜ ಮೆರವಣಿಗೆ

    ಹಾವೇರಿ: ಜಿಲ್ಲೆಯ ರಟ್ಟೀಹಳ್ಳಿ ತಾಲೂಕು ಮಾಸೂರು ಗ್ರಾಮದಲ್ಲಿ 71ನೇ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ.

    71ನೇ ಗಣರಾಜ್ಯೋತ್ಸವ ಅಂಗವಾಗಿ ಶ್ರೀ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ವತಿಯಿಂದ 100 ಮೀಟರ್ ತ್ರಿವರ್ಣ ಧ್ವಜದ ಮೆರವಣಿಗೆ ನಡೆಸಲಾಗಿದೆ. ಮಾಸೂರು ಗ್ರಾಮದ ಶಾಲೆಯಿಂದ ಪ್ರಾರಂಭವಾದ ಮೆರವಣಿಗೆ, ಬಸ್ ನಿಲ್ದಾಣ ಸೇರಿದಂತೆ ಗ್ರಾಮದಲ್ಲಿ ಮೂರು ಕಿ.ಲೋ ಮೀಟರ್ ವರೆಗೂ ಮೆರವಣಿಗೆ ಮಾಡಲಾಗಿದೆ.

    ನೂರು ಮೀಟರ್ ತ್ರಿವರ್ಣ ಧ್ವಜದ ಮೆರವಣಿಗೆ ನೋಡುಗರ ಗಮನ ಸೆಳೆದಿದೆ. ಅಷ್ಟೇ ಅಲ್ಲದೇ ಸಂಸ್ಥೆಯ ಅಧ್ಯಕ್ಷ ಮಂಜುನಾಥ ತಳವಾರ ಧ್ವಜಾರೋಹಣ ನೆರವೇರಿಸಿದ್ದಾರೆ. ಗ್ರಾಮದ ಪ್ರಮುಖ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಪ್ರಮುಖ ಗಣ್ಯರು, ಶಾಲೆಯ ಸಿಬ್ಬಂದಿ ವರ್ಗ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  • 300 ವಿದ್ಯಾರ್ಥಿಗಳಿಂದ ರಂಗೋಲಿಯಲ್ಲಿ ಮೂಡಿದೆ ತ್ರಿವರ್ಣ ಧ್ವಜ

    300 ವಿದ್ಯಾರ್ಥಿಗಳಿಂದ ರಂಗೋಲಿಯಲ್ಲಿ ಮೂಡಿದೆ ತ್ರಿವರ್ಣ ಧ್ವಜ

    ಬೆಂಗಳೂರು: ಭಾನುವಾರ ಜನವರಿ 26ರಂದು 71ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ಇಡೀ ದೇಶವೇ ಸಿದ್ಧವಾಗುತ್ತಿದೆ.

    ಗಣರಾಜ್ಯೋತ್ಸವದ ಪ್ರಯುಕ್ತ ನಗರದಲ್ಲಿ ರಂಗೋಲಿ ಸ್ಪರ್ಧೆ ಕೂಡ ನಡೆದಿದೆ. ಒಂದೇ ರಂಗೋಲಿಯನ್ನ 300 ವಿದ್ಯಾರ್ಥಿಗಳು ಸೇರಿ ಮೂಡಿಸಿದ್ದಾರೆ. ನಮ್ಮ ರಾಷ್ಟ್ರ ಧ್ವಜವನ್ನ ರಂಗೋಲಿ ಮೂಲಕ ವಿದ್ಯಾರ್ಥಿಗಳು ಬಿಡಿಸಿದ್ದಾರೆ.

    3000 ಸ್ಕ್ವಯರ್ ಫೀಟ್‍ನಲ್ಲಿ ಕೇಸರಿ ಬಿಳಿ ಹಸಿರು ಬಣ್ಣದ ತ್ರಿವರ್ಣ ಧ್ವಜದ ರಂಗೋಲಿ ಇದು. ಬೆಂಗಳೂರಿನ ಜಯನಗರದ ಕಿತ್ತೂರುರಾಣಿ ಚೆನ್ನಮ್ಮ ಆಟದ ಮೈದಾನದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಈ ವಿಶೇಷ ರಂಗೋಲಿಯನ್ನ 300 ಜನ ವಿದ್ಯಾರ್ಥಿಗಳು ಶಿಕ್ಷಕರು ಸೇರಿಕೊಂಡು ರಚಿಸಿದ್ದಾರೆ.

    ಭಾನುವಾರ ನಡೆಯುವ ಗಣರಾಜ್ಯೋತ್ಸವದ ಮುಖ್ಯ ಆಕರ್ಷಣೆಯಾಗಿ ನಮ್ಮ ತ್ರಿವರ್ಣ ಧ್ವಜದ ರಂಗೋಲಿ ಕಂಗೋಳಿಸಲಿದೆ.

  • ಆಂಜನೇಯನ ಹೃದಯದಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ

    ಆಂಜನೇಯನ ಹೃದಯದಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ

    ತುಮಕೂರು: ಆಂಜನೇಯನ ಹೃದಯದಲ್ಲಿ ಶ್ರೀರಾಮ ನೆಲೆಸಿದ್ದಾನೆ ಅನ್ನುವ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ತುಮಕೂರಿನಲ್ಲಿ ಆಂಜನೇಯ ದೇವರ ಹೃದಯ ಕಮಲದಲ್ಲಿ ತ್ರಿವರ್ಣ ಧ್ವಜ ರಾರಾಜಿಸಿದೆ.

    ಕೇವಲ ಹೃದಯದಲ್ಲಿ ಮಾತ್ರವಲ್ಲ ಆಂಜನೇಯ ಸ್ವಾಮಿಯ ಬಲಗೈಯಲ್ಲೂ ತಿರಂಗ ಹಾರಾಡಿದೆ. ತುಮಕೂರು ನಗರದ ಹನುಮಂತಪುರದ ಬಯಲು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಇಂದು ಶ್ರಾವಣ ಶನಿವಾರದ ವಿಶೇಷ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಆಂಜನೇಯಸ್ವಾಮಿಗೆ ಬೆಣ್ಣೆ ಅಲಂಕಾರ ಮಾಡಿ ವಿವಿಧ ಫಲಪುಷ್ಪಗಳಿಂದ ಸಿಂಗರಿಸಲಾಗಿದೆ.

    ಬೆಣ್ಣೆ ಅಲಂಕಾರದ ನಡುವೆ ಆಂಜನೇಯ ಸ್ವಾಮಿಯ ವೃಕ್ಷಸ್ಥಳದಲ್ಲಿ ಕಾಗದದ ತ್ರಿವರ್ಣ ಧ್ವಜ ಅಂಟಿಸಲಾಗಿದೆ. ಅದೇ ರೀತಿ ಬಲಗೈಯಲ್ಲೂ ತ್ರಿವರ್ಣ ಧ್ವಜ ಹಾರಾಡಿದೆ. ಗಣಪತಿ ಅಷ್ಟೋತ್ರ, ಆಂಜನೇಯ ಅಷ್ಟೋತ್ರ ಏಕಾರ್ತಿ, ಪಂಚಾರ್ತಿ ಮಾಡಿ ಬಳಿಕ ಮಹಾ ಮಂಗಳಾರತಿ ಮಾಡಲಾಯಿತು. ಈ ಮೂಲಕ ದೈವ ಭಕ್ತಿಯ ಜತೆಗೆ ದೇಶಭಕ್ತಿಯೂ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮೊಳಗಿದೆ.

    ಈ ಅಪರೂಪದ ದೃಶ್ಯವನ್ನು ಕಂಡು ಭಕ್ತಾದಿಗಳು ಪುಳಕಿತರಾಗಿದ್ದು, ದೇವಸ್ಥಾನ ಸಿಬ್ಬಂದಿಯ ದೇವರ ಮೇಲಿನ ಭಕ್ತಿ ಹಾಗೂ ದೇಶಭಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಧೋನಿಯ ನಡೆಗೆ ಅಭಿಮಾನಿಗಳ ಮೆಚ್ಚುಗೆ – ವಿಡಿಯೋ ನೋಡಿ

    ಧೋನಿಯ ನಡೆಗೆ ಅಭಿಮಾನಿಗಳ ಮೆಚ್ಚುಗೆ – ವಿಡಿಯೋ ನೋಡಿ

    ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದ ವೇಳೆ ಅಭಿಮಾನಿಯೊಬ್ಬ ಭದ್ರತೆಯನ್ನು ಮೀರಿ ಮೈದಾನ ಪ್ರವೇಶಿಸಿ ಧೋನಿ ಕಾಲಿಗೆ ಬಿದ್ದಿದ್ದಾರೆ. ಆದರೆ ಈ ವೇಳೆ ಅಭಿಮಾನಿಯ ಕೈಯಲ್ಲಿದ್ದ ತ್ರಿವರ್ಣ ಧ್ವಜ  ನೆಲಕ್ಕೆ ತಾಗುವ ಮುನ್ನವೇ ಧೋನಿ ಎಚ್ಚೆತ್ತು ಧ್ವಜ ತೆಗೆದುಕೊಂಡಿದ್ದಾರೆ.

    ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಆಡುತ್ತಿದ್ದ ವೇಳೆ ಘಟನೆ ನಡೆದಿದ್ದು, ಅಭಿಮಾನಿಯಿಂದ ಪಡೆದ ಬಾವುಟವನ್ನು ಧೋನಿ ಭದ್ರತಾ ಸಿಬ್ಬಂದಿಗೆ ನೀಡಿದ ಬಳಿಕ ಆಟ ಮುಂದುವರಿಸಿದ್ದರು. ಧೋನಿ ಅವರು ತ್ರಿವರ್ಣ ಧ್ವಜಕ್ಕೆ ನೀಡಿದ ಗೌರವಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ಹಿಂದೆಯೂ ಹಲವು ಪಂದ್ಯಗಳ ವೇಳೆ ಅಭಿಮಾನಿಗಳು ಭದ್ರತ ಪಡೆಗಳ ಕಣ್ತಪಿಸಿ ಬಂದು ಧೋನಿಯ ಕಾಲಿಗೆ ಬಿದ್ದಿದ್ದನ್ನ ಇಲ್ಲಿ ನೆನೆಯ ಬಹುದಾಗಿದೆ. ಆದರೆ ಪಂದ್ಯದಲ್ಲಿ ತಮ್ಮ ವಿಕೆಟ್ ಕೀಪಿಂಗ್ ಮೂಲಕ ಗಮನ ಸೆಳೆದ ಧೋನಿ ಬ್ಯಾಟಿಂಗ್ ನಲ್ಲಿ ನಿರಾಸೆ ಮೂಡಿಸಿದರು. ಪಂದ್ಯದಲ್ಲಿ 4 ರನ್‍ಗಳ ರೋಚಕ ಸೋಲುಂಡ ಟೀಂ ಇಂಡಿಯಾ ಸರಣಿ ಗೆಲುವು ಪಡೆಯಲು ವಿಫಲವಾಗಿತ್ತು. ಈ ಮೂಲಕ ಬರೋಬ್ಬರಿ 30 ತಿಂಗಳ ಬಳಿಕ ಟಿ20 ಟೂರ್ನಿಯನ್ನು ಕೈಚೆಲ್ಲಿತು.

    https://twitter.com/madhavanand22/status/1094571840268161025?

    https://twitter.com/Iam_Jaimsd/status/1094550157889130496?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಿಮಾಲಯ ಏರಿ ತ್ರಿವರ್ಣ ಧ್ವಜ ಹಾರಿಸಿ ಬಂದ ಮೈಸೂರಿನ ಗೃಹಿಣಿಯರು!

    ಹಿಮಾಲಯ ಏರಿ ತ್ರಿವರ್ಣ ಧ್ವಜ ಹಾರಿಸಿ ಬಂದ ಮೈಸೂರಿನ ಗೃಹಿಣಿಯರು!

    ಮೈಸೂರು: ನಗರದ ಗೃಹಿಣಿಯರ ತಂಡವೊಂದು ಹಿಮಾಲಯ ಪರ್ವತ ಏರಿ ಯಶಸ್ವಿಯಾಗಿ ಹಿಂದಿರುಗಿ ಬಂದಿದ್ದಾರೆ.

    ಮೈಸೂರಿನ 27 ಮಹಿಳೆಯರು ಈ ಸಾಹಸ ಮಾಡಿದ್ದಾರೆ. ಹಿಮಾಲಯ ಪರ್ವತದ ಮೌಂಟ್ ಬರಾಟ್ ಪರ್ವತವನ್ನು ಮಹಿಳೆಯರು ಯಶಸ್ವಿಯಾಗಿ ಏರಿ ಇದೀಗ ವಾಪಾಸ್ ಆಗಿದ್ದಾರೆ. ಸುಮಾರು 14.500 ಸಾವಿರ ಅಡಿ ಎತ್ತರದ ಕಡಿದಾದ ಮೌಂಟ್ ಬರಾಟ್ ಪರ್ವತವನ್ನು ಏರಿದ್ದು, ಪರ್ವತದ ಮೇಲೆ ಗೃಹಿಣಿಯರು ತ್ರಿವರ್ಣ ಧ್ವಜ ಹಾರಿಸಿದ್ದಾರೆ.

    ಮೈಸೂರಿನ ಟೈಗರ್ ಅಡ್ವೆಂಚರ್ ಫೌಂಡೇಷನ್ ನೇತೃತ್ವದಲ್ಲಿ ಮಹಿಳೆಯರು ಈ ಸಾಹಸ ಮಾಡಿದ್ದಾರೆ. ಪರ್ವತ ಏರಿ ಇಳಿಯಲು 8 ದಿನ ಆಗಿದೆ. 27 ಮಹಿಳೆಯರ ಈ ತಂಡದಲ್ಲಿ 14 ಗೃಹಿಣಿಯರು ಇದ್ದರು. ಇವರು ಕಳೆದ ಮೇ ತಿಂಗಳಲ್ಲಿ ಹೋಗಿದ್ದು, ಮೂರು ದಿನಗಳ ಹಿಂದೆ ಪ್ರವಾಸ ಮುಗಿಸಿ ಹಿಂದಿರುಗಿ ಬಂದಿದ್ದಾರೆ.

  • ಕೊಹ್ಲಿಯಂತೆ ಧೋನಿ ಹೆಲ್ಮೆಟ್ ನಲ್ಲಿ ತ್ರಿವರ್ಣ ಧ್ವಜ ಯಾಕಿಲ್ಲ?

    ಕೊಹ್ಲಿಯಂತೆ ಧೋನಿ ಹೆಲ್ಮೆಟ್ ನಲ್ಲಿ ತ್ರಿವರ್ಣ ಧ್ವಜ ಯಾಕಿಲ್ಲ?

    ನವದೆಹಲಿ: ನಾಯಕ ಎಂಎಸ್ ಧೋನಿ ತ್ರಿವರ್ಣ ಧ್ವಜ ಇರುವ ಹೆಲ್ಮೆಟ್ ಯಾಕೆ ಧರಿಸುವುದಿಲ್ಲ ಎನ್ನುವ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ.

    ಸಚಿನ್ ತೆಂಡೂಲ್ಕರ್, ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಆಟಗಾರರು ಬಿಸಿಸಿಐ ಲೋಗೋದ ಕೆಳಗೆ ಅಥವಾ ಮೇಲುಗಡೆ ತ್ರಿವರ್ಣ ಧ್ವಜ ಇರುವ ಹೆಲ್ಮೆಟ್ ಧರಿಸುತ್ತಾರೆ. ಆದರೆ ಧೋನಿ ತ್ರಿವರ್ಣ ಧ್ವಜ ಇರುವ ಹೆಲ್ಮೆಟ್ ಧರಿಸದೇ ಅಂಗಳಕ್ಕೆ ಇಳಿಯುತ್ತಿದ್ದರು. ಹೀಗಾಗಿ ಯಾಕೆ ಧೋನಿ ತ್ರಿವರ್ಣ ಧ್ವಜ ಇರುವ ಹೆಲ್ಮೆಟ್ ಧರಿಸಲ್ಲ ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿದ್ದರು.

    ಧೋನಿ ವಿಕೆಟ್ ಕೀಪಿಂಗ್ ಮಾಡುವ ವೇಳೆ ಕೆಲ ಸಮಯ ಹೆಲ್ಮೆಟ್ ಬಿಚ್ಚಿಟ್ಟು ಕೀಪಿಂಗ್ ಮಾಡುತ್ತಾರೆ. ಈ ಸಮಯದಲ್ಲಿ ಹೆಲ್ಮೆಟ್ ಅನ್ನು ನೆಲದ ಮೇಲೆ ಬಿಚ್ಚಿಡಬೇಕಾಗುತ್ತದೆ. ಹೆಲ್ಮೆಟ್ ಮೇಲೆ ತ್ರಿವರ್ಣ ಧ್ವಜ ಇದ್ದರೆ ಅದಕ್ಕೆ ಅಪಮಾನ ಮಾಡಿದ ಹಾಗೇ ಎಂಬ ಕಾರಣಕ್ಕೆ ಧೋನಿ ತ್ರಿವರ್ಣ ಧ್ವಜ ಇಲ್ಲದ ಹೆಲ್ಮೆಟ್ ಧರಿಸುತ್ತಾರೆ. ಇದನ್ನೂ ಓದಿ: ಮೊದಲ ಟಿ-20ಯಲ್ಲಿ ಧೋನಿಯಿಂದ ವಿಶ್ವದಾಖಲೆ

    ಧೋನಿ ಅವರಿಗೆ 2011 ರಲ್ಲಿ ಭಾರತೀಯ ಸೇನೆ ಲೆಫ್ಟಿನೆಂಟ್ ಕರ್ನಲ್ ಸ್ಥಾನವನ್ನು ನೀಡಿ ಗೌರವಿಸಿದೆ. ಧೋನಿ ತಮ್ಮ ದೇಶ ನೀಡುವ ಗೌರವದಂತೆ ಸೈನಿಕರಿಗೂ ಹೆಚ್ಚಿನ ಗೌರವ ನೀಡುತ್ತಾರೆ. ಅಂದಹಾಗೇ ಟೀಂ ಇಂಡಿಯಾ ಮತ್ತೊಬ್ಬ ಆಟಗಾರ ಗೌತಮ್ ಗಂಭೀರ್ ಸಹ ಇದೇ ಸಾಲಿನಲ್ಲಿ ಬರುತ್ತಾರೆ. ಧೋನಿ ಭಾರತೀಯ ಸೈನ್ಯದಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸಿದ ರೀತಿಯಲ್ಲೇ ಗಂಭೀರ್ ಸಹ ಸೈನ್ಯ ಸೇರುವ ಆಸೆ ಹೊಂದಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಈ ಕುರಿತು ತಮ್ಮ ಮನದ ಆಸೆಯನ್ನು 2018ರ ಗಣರಾಜೋತ್ಸವ ವೇಳೆ ವ್ಯಕ್ತಪಡಿಸಿದ್ದರು.  ಇದನ್ನೂ ಓದಿ: ಆ ಕಡೆ ಯಾಕೆ ನೋಡ್ತಿದ್ದಿ, ನನ್ನನ್ನು ನೋಡು – ಪಾಂಡೆ ವಿರುದ್ಧ ಕ್ಯಾಪ್ಟನ್ ಕೂಲ್ ಗರಂ