Tag: Tribute

  • 23ನೇ ಓವರ್‌ನಲ್ಲಿ ಪಂದ್ಯ ಸ್ಥಗಿತ – ಲಾರ್ಡ್ಸ್ ಟೆಸ್ಟ್‌ನಲ್ಲಿ ವಾರ್ನ್‍ಗೆ ವಿಶೇಷ ಗೌರವ

    23ನೇ ಓವರ್‌ನಲ್ಲಿ ಪಂದ್ಯ ಸ್ಥಗಿತ – ಲಾರ್ಡ್ಸ್ ಟೆಸ್ಟ್‌ನಲ್ಲಿ ವಾರ್ನ್‍ಗೆ ವಿಶೇಷ ಗೌರವ

    ಲಾರ್ಡ್ಸ್: ಆಸ್ಟ್ರೇಲಿಯಾದ ದಿವಂಗತ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಅವರಿಗೆ ಗೌರವ ಸಲ್ಲಿಸಲು ಪ್ರಸ್ತುತ ಲಾರ್ಡ್ಸ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಅನ್ನು ಮೊದಲ ಇನ್ನಿಂಗ್ಸ್‌ನ 23ನೇ ಓವರ್‌ನ ನಂತರ ನಿಲ್ಲಿಸಲಾಯಿತು.

    23ನೇ ಓವರ್‌ನ ನಂತರದಲ್ಲಿ ಮೈದಾನದ ಸ್ಕ್ರೀನ್‍ವೊಂದರ ಮೇಲೆ ಶೇನ್ ವಾರ್ನ್ ಅವರ ಫೋಟೋವನ್ನು ಹಾಕಲಾಯಿತು. ಫೋಟೋದಲ್ಲಿ ಅವರು ರೌಂಡ್ ಕ್ಯಾಪ್‍ವೊಂದನ್ನು ಎಡಗೈನಲ್ಲಿ ಹಿಡಿದು ನಿಂತಿದ್ದು, ಶೇನ್ ವಾರ್ನ್ ಅವರೇ ನಿಮ್ಮನ್ನು ಇಲ್ಲಿ ನೇರದಿರುವ ಪ್ರತಿಯೊಬ್ಬರು ನೆನಪಿಕೊಳ್ಳುತ್ತಿದ್ದಾರೆ ಎಂದು ಶೀರ್ಷಿಕೆ ನೀಡಿದ್ದಾರೆ.

    ಶೇನ್ ವಾರ್ನ್ ಅವರು ತಮ್ಮ ಆಟದ ದಿನಗಳಲ್ಲಿ 23 ಸಂಖ್ಯೆಯ ಜೆರ್ಸಿಯೊಂದನ್ನು ಧರಿಸುತ್ತಿದ್ದ ಹಿನ್ನೆಲೆ ಆಟಗಾರರು 23ನೇ ಓವರ್ ವೇಳೆ ಆಟ ನಿಲ್ಲಿಸಿ ಗೌರವ ಸೂಚಿಸಿದರು. ಪ್ರೇಕ್ಷಕರು ಕೂಡ ದಂತಕಥೆಗೆ 23 ಸೆಕೆಂಡುಗಳ ಕಾಲ ಎದ್ದು ನಿಂತು ಚಪ್ಪಾಳೆಯೊಂದಿಗೆ ಗೌರವ ಸಲ್ಲಿಸಿದರು.

    ಈ ಕುರಿತು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರರೆಲ್ಲರೂ ಅವರೊಂದಿಗೆ ಕಳೆದ ಹಳೆಯ ನೆನಪುಗಳನ್ನೆಲ್ಲಾ ನೆನಪಿಸಿಕೊಂಡು ಭಾವನಾತ್ಮಕವಾಗಿ ಟ್ವೀಟ್ ಮಾಡುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

    ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಶೇನ್ ವಾರ್ನ್ ಮಾರ್ಚ್ 4 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. 52 ವರ್ಷದ ಶೇನ್ ವಾರ್ನ್‍ಗೆ ಥಾಯ್ಲೆಂಡ್‍ನ ವಿಲ್ಲಾದಲ್ಲಿ ಹೃದಯಾಘಾತವಾಗುತ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ವೈದ್ಯರು ತುರ್ತು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ, ವಾರ್ನ್ ಕೊನೆಯುಸಿರೆಳೆದಿದ್ದರು.

    ಆಸ್ಟ್ರೇಲಿಯಾದ ತಂಡದಲ್ಲಿ ಗೂಗ್ಲಿ ಎಸೆತದ ಮೂಲಕ ಸಾಕಷ್ಟು ಪ್ರಸಿದ್ಧಿ ಪಡೆದಿದ್ದ ವಾರ್ನ್ ಕ್ರಿಕೆಟ್‍ಗೆ ನಿವೃತ್ತಿ ನೀಡಿದ ಬಳಿಕ ಹಲವು ತಂಡಗಳಿಗೆ ಕೋಚ್ ಮತ್ತು ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ಐಪಿಎಲ್‍ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದರು.

  • ಪುನೀತ್‌ಗೆ ವಿಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಸಿದ ರೈತ

    ಪುನೀತ್‌ಗೆ ವಿಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಸಿದ ರೈತ

    ಮಂಡ್ಯ: ಕನ್ನಡದ ಖ್ಯಾತ ನಟ ಪುನೀತ್ ರಾಜ್‌ಕುಮಾರ್ ಅಗಲಿ 3 ತಿಂಗಳುಗಳು ಕಳೆದಿವೆ. ಮಂಡ್ಯ ಜಿಲ್ಲೆಯ ರೈತನೊಬ್ಬ ಪುನೀತ್‌ಗೆ ಅಂದು ವಿಶೇಷವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದು, ಇದೀಗ ಚಿಗುರು ಬಂದಿದೆ.

    ಮಂಡ್ಯದ ಮೊತ್ತಳ್ಳಿ ಗ್ರಾಮದ ರೈತ ಕಾಳಪ್ಪ ರಾಜು ಪುನೀತ್ ಅವರ ಅಗಲಿಕೆಯ ಬಳಿಕ ವಿಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದರು. ತಮ್ಮ ಭತ್ತದ ಗದ್ದೆಯಲ್ಲಿ ಮತ್ತೆ ಹುಟ್ಟಿ ಬಾ ಪುನೀತ್ ರಾಜ್ ಕುಮಾರ್ ಎಂದು ಭತ್ತದಲ್ಲೇ ಬರೆದು ನಾಟಿ ಮಾಡಿದ್ದರು. ಇದೀಗ ನಾಟಿ ಮಾಡಿರುವ ಭತ್ತ ಚಿಗುರಿದೆ. ಇದನ್ನೂ ಓದಿ: RD Parade 2022: ಕರ್ನಾಟಕದ ಸ್ತಬ್ಧಚಿತ್ರಕ್ಕೆ ಎರಡನೇ ಸ್ಥಾನ

    ರೈತ ಸಲ್ಲಿಸಿದ ಶ್ರದ್ಧಾಂಜಲಿಯನ್ನು ಜನರು ಕುತೂಹಲದಿಂದ ವೀಕ್ಷಣೆ ಮಾಡುತ್ತಿದ್ದಾರೆ. ರೈತ ತಮ್ಮ ಗದ್ದೆಯಲ್ಲಿ ಬಿಡಿಸಿರುವ ಶ್ರದ್ಧಾಂಜಲಿ ಚಿತ್ತಾರದ ಫೋಟೋ ಹಾಗೂ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಹಿಜಬ್ ಮಾನಸಿಕತೆ ಮೋಸ್ಟ್ ಡೇಂಜರಸ್: ಪ್ರಮೋದ್ ಮುತಾಲಿಕ್

  • ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದ ಅಮೇರಿಕ ಡಿಜೆ ಮಾರ್ಷ್ ಮೆಲ್ಲೋ

    ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದ ಅಮೇರಿಕ ಡಿಜೆ ಮಾರ್ಷ್ ಮೆಲ್ಲೋ

    ಪುಣೆ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಅಮೇರಿಕದ ಸಂಗೀತ ನಿರ್ಮಾಪಕ ಹಾಗೂ ಖ್ಯಾತ ಡಿಜೆ ಮಾರ್ಷ್ ಮೆಲ್ಲೋ ಅವರು ತಮ್ಮ ಸಂಗೀತ ಕಾರ್ಯಕ್ರಮದಲ್ಲಿ ಮೌನಾಚರಣೆ ಮಾಡುವ ಮೂಲಕ ನಮನವನ್ನು ಸಲ್ಲಿಸಿದ್ದಾರೆ.

    ಭಾನುವಾರದಂದು ಪುಣೆಯಲ್ಲಿ ನಡೆದ ವಿಎಚ್1 ಸೂಪರ್‍ಸೋನಿಕ್ 2019ರ ಸಂಗೀತ ಕಾರ್ಯಕ್ರಮಕ್ಕೆ ಮಾರ್ಷ್ ಮೆಲ್ಲೋ ಆಗಮಿಸಿದ್ದರು. ಈ ವೇಳೆ ತಮ್ಮ ಡಿಜೆ ಕಾರ್ಯಕ್ರಮವನ್ನು ಆರಂಭಿಸುವ ಮುನ್ನ ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಆತ್ಮಕ್ಕೆ ಶಾಂತಿ ಸಿಗಲೆಂದು 2 ನಿಮಿಷ ಮೌನಾಚರಣೆ ಮಾಡಿ ವೀರರಿಗೆ ನಮನ ಸಲ್ಲಿಸಿದ್ದಾರೆ.

    ಅಷ್ಟೇ ಅಲ್ಲದೇ ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನನ್ನ ನಮನ ಎಂದು ಬರೆದು ಮಾರ್ಷ್ ಮೆಲ್ಲೋ ಅವರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

    ಈ ಸಂಗೀತ ಕಾರ್ಯಕ್ರಮದಲ್ಲಿ ಸಾಕಷ್ಟು ಸ್ವದೇಶಿ ಕಲಾವಿದರು ತಮ್ಮ ಸಂಗೀತ ಕಾರ್ಯಕ್ರಮ ನೀಡಿದರು. ಆದರೇ ಯಾರು ಕೂಡ ಪುಲ್ವಾಮ ದಾಳಿಯನ್ನು ನೆನೆಪಿಸಿಕೊಳ್ಳಲಿಲ್ಲ. ವಿದೇಶಿ ಕಲಾವಿದರಾದರೂ ಮಾರ್ಷ್ ಮೆಲ್ಲೋ ಅವರು ಭಾರತದ ವೀರ ಯೋಧರಿಗೆ ನಮನ ಸಲ್ಲಿಸಿ ಅಭಿಮಾನಿಗಳ ಮನ ಗೆದ್ದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುತಾತ್ಮರಾದ ಯೋಧರಿಗೆ ಮೆರವಣಿಗೆ ಮೂಲಕ ನಮನ ಸಲ್ಲಿಸಿದ ನವಜೋಡಿ!

    ಹುತಾತ್ಮರಾದ ಯೋಧರಿಗೆ ಮೆರವಣಿಗೆ ಮೂಲಕ ನಮನ ಸಲ್ಲಿಸಿದ ನವಜೋಡಿ!

    ಗಾಂಧಿನಗರ: ಗುಜರಾತಿನ ನವಜೋಡಿಯೊಂದು ತಮ್ಮ ಮದುವೆ ಮೆರವಣಿಗೆ ವೇಳೆ ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸಿದ್ದಾರೆ.

    ಮದುವೆಯಾಗಿ ಕೇವಲ ಒಂದು ಗಂಟೆ ಸಮಯವಾಗಿದೆ ಅಷ್ಟೇ, ಆದ್ರೆ ತಮ್ಮ ಮದುವೆ ಸಂಭ್ರಮವನ್ನು ಆಚರಿಸುವ ಬದಲಾಗಿ ತಮ್ಮ ಮದುವೆ ಮೆರವಣಿಗೆ ವೇಳೆ ಹುತಾತ್ಮ ಯೋಧರ ಭಾವಚಿತ್ರವನ್ನು ಹಿಡಿದು ಗೌರವ ಸಲ್ಲಿಸಿದ್ದಾರೆ. ನವಜೋಡಿಗಳ ಈ ನಿರ್ಧಾರಕ್ಕೆ ಅವರ ಕುಟುಂಬಸ್ಥರು ಹಾಗೂ ಬಂಧು-ಮಿತ್ರರು ಕೂಡ ಸಾಥ್ ಕೊಟ್ಟು ವೀರ ಯೋಧರಿಗೆ ನಮನ ಸಲ್ಲಿಸಿದ್ದಾರೆ. ಇದನ್ನೂ ಓದಿ: ಪುತ್ರಿ ಮದುವೆ ಊಟ ರದ್ದು ಮಾಡಿ 11 ಲಕ್ಷ ರೂ. ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದ ಉದ್ಯಮಿ

    ಮೆರವಣಿಗೆಯ ಉದ್ದಕ್ಕೂ ಯೋಧರಿಗೆ ಜೈಕಾರ ಹಾಕುತ್ತ ಉಗ್ರರ ವಿರುದ್ಧ ಘೋಷಣೆ ಕೂಗುತ್ತ ಆಕ್ರೋಶ ಹೊರಹಾಕಿದ್ದಾರೆ. ಹಾಗೆಯೇ ರಾಷ್ಟ್ರ ಧ್ವಜವನ್ನು ಹಿಡಿದು ಭಾರತದಲ್ಲಿ ಕೇವಲ 1427 ಹುಲಿಗಳಿಲ್ಲ, ಗಡಿಯಲ್ಲಿ 13 ಲಕ್ಷ ಹುಲಿಗಳು ದೇಶ ಕಾಯುತ್ತಿದ್ದಾರೆ ಎಂದು ಸಂದೇಶ ಸಾರಿದ್ದಾರೆ.

    ಕುದುರೆ ರಥದಲ್ಲಿ ನವಜೋಡಿಗಳು ಸಾಗುತ್ತಿದ್ದರೆ, ಅವರ ಮುಂದೆ ನೂರಾರು ಮಂದಿ ಭಾರತದ ಧ್ವಜವನ್ನು ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಅದರಲ್ಲೂ ಪುಟ್ಟ ಪುಟ್ಟ ಮಕ್ಕಳು ಧ್ವಜವನ್ನು ಹಿಡಿದು ಯೋಧರಿಗೆ ಜೈಕಾರ ಹಾಕಿದರೆ ಇನ್ನು ಕೆಲವರು ಸೈನಿಕರ ವೇಷಭೂಷಣ ಧರಿಸಿ ಮೆರೆವಣಿಗೆಯಲ್ಲಿ ಸಾಗುತ್ತಿದ್ದ ದೃಶ್ಯ ಎಲ್ಲರ ಗಮನ ಸೆಳೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಡೆದಾಡುವ ದೇವರಿಗೆ ನಮನ – ಭಾವಚಿತ್ರದ ಮುಂದೆ 1 ಗಂಟೆ ಇತ್ತು ನಾಗರಹಾವು!

    ನಡೆದಾಡುವ ದೇವರಿಗೆ ನಮನ – ಭಾವಚಿತ್ರದ ಮುಂದೆ 1 ಗಂಟೆ ಇತ್ತು ನಾಗರಹಾವು!

    ದಾವಣಗೆರೆ: ನಡೆದಾಡುವ ದೇವರು ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರದ ಮುಂಭಾಗ ನಾಗರಹಾವೊಂದು ಒಂದು ಗಂಟೆಗಳ ಕಾಲ ಕುಳಿತ ಅಚ್ಚರಿಯ ಘಟನೆ ಚನ್ನಗಿರಿ ತಾಲ್ಲೂಕಿನ ನಾಗೇನಹಳ್ಳಿಯಲ್ಲಿ ನಡೆದಿದೆ.

    ನಾಗೇನಹಳ್ಳಿ ಗ್ರಾಮದ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಗ್ರಾಮಸ್ಥರು ಶ್ರೀಗಳ ಭಾವಚಿತ್ರವಿಟ್ಟು ಶ್ರದ್ಧಾಂಜಲಿ ಸಲ್ಲಿಸಿ, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥನೆ ಮಾಡಿದ್ದಾರೆ. ಗ್ರಾಮಸ್ಥರು ಶ್ರದ್ಧಾಂಜಲಿ ಸಲ್ಲಿಸಿ ತೆರಳಿದ ಬಳಿಕ ಅಲ್ಲಿಗೆ ನಾಗರಹಾವೊಂದು ಆಗಮಿಸಿದೆ. ಇದನ್ನೂ ಓದಿ: ಅನ್ನ ಚೆಲ್ಲಲು ಬಂದ ಭಕ್ತನಿಗೆ ಮಠದ ವಿದ್ಯಾರ್ಥಿಯಿಂದ ಅನ್ನದ ಪಾಠ! – ವಿಡಿಯೋ ನೋಡಿ

    ಎಲ್ಲಿಂದಲೋ ಬಂದಿದ್ದ ನಾಗರಹಾವು ಸಿದ್ದಗಂಗಾ ಶ್ರೀಗಳ ಭಾವಚಿತ್ರದ ಮುಂದೆ ಒಂದು ಗಂಟೆಗೂ ಅಧಿಕ ಕಾಲ ಕುಳಿತಿತ್ತು. ಈ ವಿಶೇಷ ದೃಶ್ಯವನ್ನು ನೋಡಿದ ಗ್ರಾಮಸ್ಥರು ಆಶ್ಚರ್ಯ ಪಟ್ಟಿದ್ದಾರೆ. ಸಾಧಾರಣವಾಗಿ ಕಾಣಿಸಿಕೊಳ್ಳದ ನಾಗರಹಾವು ಸಿದ್ದಗಂಗಾ ಶ್ರೀಗಳ ಭಾವಚಿತ್ರ ಮುಂದೆ ಕಾಣಿಸಿದ್ದನ್ನು ಕಂಡು ಜನರು ಇದೊಂದು ವಿಸ್ಮಯ ಎಂದಿದ್ದಾರೆ. ಕೇವಲ ಮನುಷ್ಯರು ಮಾತ್ರವಲ್ಲದೇ ಮೂಖ ಜೀವಿ ಕೂಡ ಸಿದ್ದಗಂಗಾ ಶ್ರೀಗಳಿಗೆ ನಮನ ಸಲ್ಲಿಸಿದೆ ಎಂದು ಬರೆದು ಭಾವಚಿತ್ರ ಮುಂದಿರುವ ನಾಗರಹಾವಿನ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂಬರೀಶ್ ಶ್ರದ್ಧಾಂಜಲಿ- ವೇದಿಕೆಯಲ್ಲೇ ಎಚ್‍ಡಿಕೆಗೆ ಸಿದ್ದರಾಮಯ್ಯ ಮನವಿ

    ಅಂಬರೀಶ್ ಶ್ರದ್ಧಾಂಜಲಿ- ವೇದಿಕೆಯಲ್ಲೇ ಎಚ್‍ಡಿಕೆಗೆ ಸಿದ್ದರಾಮಯ್ಯ ಮನವಿ

    ಬೆಂಗಳೂರು: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರೇ ನೀವು ರಾಮನಗರದಲ್ಲಿ ಫಿಲಂ ಸಿಟಿ ಮಾಡಬೇಕು ಅಂತ ಆಸೆ ಇಟ್ಟುಕೊಂಡಿದ್ದೀರಾ. ಆದ್ರೆ ಅದನ್ನು ಅಂಬಿ ಆಸೆಯಂತೆ ಮೈಸೂರಿನಲ್ಲಿ ಮಾಡಿ ಅಂತ ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.

    ಇಂದು ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಅಂಬೇಡ್ಕರ್ ಭವನದಲ್ಲಿ ಅಗಲಿದ ಅಂಬರೀಶ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ವೇದಿಕೆಯಲ್ಲೇ ಎಚ್‍ಡಿಕೆಯಲ್ಲಿ ಮನವಿ ಮಾಡಿಕೊಂಡರು.

    ನನ್ನ ಬಳಿ ಅಂಬರೀಶ್ ಅವರು ಫಿಲಂ ಸಿಟಿ ಮೈಸೂರಿನಲ್ಲಿ ಆಗಬೇಕು ಅಂತ ಹೇಳಿದ್ದರು. ಅದಕ್ಕೆ ನಮ್ಮ ಕ್ಷೇತ್ರ ಹುಳಿಮಾವು ಬಳಿ ನಾನು ಜಾಗವನ್ನು ಕೂಡ ಕೊಟ್ಟಿದ್ದೇನೆ. ಅಲ್ಲದೇ ಆ ಫಿಲಂ ಸಿಟಿಗೆ ಅಂಬರೀಶ್ ಅವರ ಹೆಸರನ್ನೇ ಇಡಿ. ಈ ಮೂಲಕ ಅವರ ಹೆಸರು ಶಾಸ್ವತವಾಗಿ ಉಳಿಯಲು ಸಾಧ್ಯ ಅಂತ ಹೇಳಿದ್ರು.

    ಅಂಬರೀಶ್ ಅವರ ಮಾತು ಬಹಳ ಒರಟು. ಆದ್ರೆ ಅವರ ಜೊತೆಯಲ್ಲಿ ಸ್ವಲ್ಪ ಸಮಯ ಕಳೆದ್ರೆ, ಅವರ ಹೃದಯ ಎಷ್ಟು ಮೃದುವಾಗಿತ್ತು ಹಾಗೂ ಎಷ್ಟು ಸ್ನೇಹಮಯವಾಗಿತ್ತು ಅನ್ನೋದು ಅರ್ಥವಾಗುತ್ತದೆ. ಸ್ನೇಹದಲ್ಲಿ ಅಂಬರೀಶ್ ಅವರಿಗೆ ಶ್ರೀಮಂತರಿರಲಿ, ಬಡವರಿರಲಿ ತಾರತಮ್ಯ ಇರಲಿಲ್ಲ. ಸಣ್ಣವರಿಂದ ಹಿಡಿದು ಅವರು ಎಷ್ಟೇ ಎತ್ತರದವರಾಗಿದ್ದರೂ ಕೂಡ ಒಂದೇ ರೀತಿಯ ಸ್ನೇಹ ಅವರಲ್ಲಿತ್ತು. ಅದು ಅವರ ವಿಶೇಷತೆಯಾಗಿತ್ತು. ಅದು ಒಂದು ಮಾನವೀಯ ಗುಣ ಕೂಡ ಆಗಿತ್ತು. ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು. ಅದು ಎಲ್ಲರಿಗೂ ಬರಬೇಕಾದಂತಹ ಒಂದು ಸ್ವಭಾವವಾಗಿದೆ. ಆಗ ಮಾತ್ರ ಸಮಾಜದಲ್ಲಿ ನಾವು ಸಹಬಾಳ್ವೆ, ಸಾಮರಸ್ಯ ಕಾಣಲು ಸಾಧ್ಯ. ಇಂತಹ ಒಬ್ಬ ಸ್ನೇಹಜೀವಿ ಅಂಬರೀಶ್ ಆಗಿದ್ದರು ಅಂತ ಹೇಳಿದ್ರು.

    ಪುಟ್ಟಣ್ಣ ಕಣಗಲ್ ನಿರ್ದೇಶನದ ನಾಗರಹಾವು ಚಿತ್ರದಲ್ಲಿ ಜಲೀಲ್ ಪಾತ್ರ ಮಾಡಲು ಅಂಬರೀಶ್ ಆಯ್ಕೆಯಾಗಿದ್ದರು. ನಾನು ಅವರನ್ನು ಭೇಟಿ ಮಾಡುವ ಸಮಯಕ್ಕೆ ಅಂಬರೀಶ್, ನಾಗರಹಾವು ಚಿತ್ರದಲ್ಲಿ ಅಭಿನಯ ಮಾಡಿಬಿಟ್ಟಿದ್ದಾರೆ. ಹೀಗಾಗಿ ಅಂಬಿಗೆ ಅದು ಕೂಡ ಬಯಸಿ ಬಂದಿದ್ದಲ್ಲ. ಆದ್ರೆ ಅವರಿಗೆ ಆ ಕ್ಷೇತ್ರದಲ್ಲಿ(ಕನ್ನಡ ಚಿತ್ರರಂಗ) ಬಹಳ ಎತ್ತರಕ್ಕೆ ಬೆಳೆದ್ರು. 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ ಅಂದ್ರು.

    ರಾಜಕಾರಣಕ್ಕೂ ಅಂಬರೀಶ್ ಅವರು ಬಯಸಿ ಬಂದಿಲ್ಲ. ದೇವೇಗೌಡರು ಜನತಾದಳದ ಅಧ್ಯಕ್ಷರಾಗಿದ್ದರು. ಅಲ್ಲದೇ ಪ್ರಧಾನಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಅಂಬರೀಶ್ ರಾಜಕೀಯ ಪ್ರವೇಶ ಮಾಡಿದ್ರು ಅಂತ ಮಾಜಿ ಸಿಎಂ, ಅಂಬರೀಶ್ ಅವರ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ರು.

    ಮನವಿ ಸ್ವೀಕರಿಸಿದ ಎಚ್‍ಡಿಕೆ:
    ಮೈಸೂರಿನಲ್ಲೇ ಫಿಲಂ ಸಿಟಿ ಮಾಡುವ ಸಿದ್ದರಾಮಯ್ಯ ಅವರ ಮನವಿಯನ್ನು ಎಚ್‍ಡಿಕೆ ಸ್ವೀಕರಿಸಿದ್ದಾರೆ. ಮೈಸೂರಿನಲ್ಲೇ ಫಿಲಂ ಸಿಟಿ ಮಾಡುವುದಾಗಿ ವೇದಿಕೆಯಲ್ಲೇ ಘೋಷಣೆ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ನೀವೆಂದೂ ನೋಡಿರದ ಶ್ರದ್ಧಾಂಜಲಿ ಕಾರ್ಯಕ್ರಮ-ವಿಡಿಯೋ

    ನೀವೆಂದೂ ನೋಡಿರದ ಶ್ರದ್ಧಾಂಜಲಿ ಕಾರ್ಯಕ್ರಮ-ವಿಡಿಯೋ

    ನವದೆಹಲಿ: ವೃದ್ಧ ದಂಪತಿಯ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಯುವತಿಯನ್ನು ಕರೆಸಿ ಡ್ಯಾನ್ಸ್ ಮಾಡಿಸಿದ ವಿಡಿಯೋವೊಂದು ವೈರಲ್ ಆಗಿದೆ.

    ಈ ಘಟನೆ ಎಲ್ಲಿ, ಯಾವಾಗ ನಡೆದಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ ಈ ವಿಡಿಯೋ ನೋಡಿದಾಗ ಯುವತಿ ಬಾಲಿವುಡ್ ‘ವಾಂಟೆಡ್’ ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದಾಳೆ. ಈ ಸಂದರ್ಭದಲ್ಲಿ ಅಲ್ಲಿದ್ದ ಜನರು ಯುವತಿಯ ಡ್ಯಾನ್ಸ್ ನೋಡಿ ಎಂಜಾಯ್ ಮಾಡಿದ್ದಾರೆ.

    ವೇದಿಕೆ ಮೇಲೆ ಯುವತಿ ಡ್ಯಾನ್ಸ್ ಮಾಡುತ್ತಿದ್ದು, ಆಕೆ ಹಿಂದೆಯೇ ವೃದ್ಧ ದಂಪತಿಯ ಶ್ರದ್ಧಾಂಜಲಿ ಪೋಸ್ಟರ್ ಹಾಕಲಾಗಿತ್ತು. ಆ ಬ್ಯಾನರ್ ನೋಡಿದ ಮೇಲೆ ಇದೊಂದು ಶ್ರದ್ಧಾಂಜಲಿ ಕಾರ್ಯಕ್ರಮವಾಗಿದ್ದು, ಯುವತಿ ಅಲ್ಲಿ ಡ್ಯಾನ್ಸ್ ಮಾಡುತ್ತಿದ್ದಳು.

    ವಿಡಿಯೋದಲ್ಲಿ ಕೆಲವು ಮಂದಿ ಯುವತಿಯ ಡ್ಯಾನ್ಸ್ ನೋಡುತ್ತಾ ತಿರುಗಾಡುತ್ತಿದ್ದರೆ, ಇನ್ನೂ ಕೆಲವು ಮಂದಿ ಸ್ಟೇಜ್ ಮುಂದೆಯೇ ಚೇರ್ ಹಾಕಿ ಅಲ್ಲಿ ಕುಳಿತುಕೊಂಡು ಡ್ಯಾನ್ಸ್ ವೀಕ್ಷಿಸಿದ್ದಾರೆ. ಈ ವಿಡಿಯೋದಲ್ಲಿ ಬ್ಯಾನರ್ ನಲ್ಲಿರುವ ದಿವಂಗತ ವೃದ್ಧ ದಂಪತಿಯ ಮುಖವೂ ಕಾಣಿಸುತ್ತದೆ.

    ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಯುವತಿ ಬಾಲಿವುಡ್ ಹಾಡಿಗೆ ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋವನ್ನು ನೋಡಿದ ಜನರು ಪರ ಹಾಗೂ ವಿರುದ್ಧ ಬಗ್ಗೆ ಮಾತನಾಡುತ್ತಿದ್ದಾರೆ.

    ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಮಾಡುವುದಕ್ಕೆ ಜನರು ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸುತ್ತಾರೆ. ಆದರೆ ಈ ಕಾರ್ಯಕ್ರಮದ ಆಯೋಜಕರು ವೇದಿಕೆಯಲ್ಲಿ ಯುವತಿಗೆ ಬಾಲಿವುಡ್ ಹಾಡಿಗೆ ಡ್ಯಾನ್ಸ್ ಮಾಡಿಸಿ ಒಂದು ಹೊಸ ಪರಂಪರೆಯನ್ನು ಶುರು ಮಾಡಿದ್ದಾರೆ. ಈ ವಿಡಿಯೋದಲ್ಲಿ ಯಾರು ಶ್ರದ್ಧಾಂಜಲಿ ಅಥವಾ ಪ್ರಾರ್ಥನೆ ಮಾಡುವುದು ಕಂಡು ಬಂದಿಲ್ಲ. ಆದರೆ ಈ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮದ ಬ್ಯಾನರ್ ಮುಂದೆ ಯುವತಿ ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕುತ್ತಿರುವುದು ಮಾತ್ರ ಕಂಡು ಬಂದಿದೆ.