Tag: tribal community

  • 25,000 ರೂ.ಗೆ ಜೀತಕ್ಕಿರಿಸಿದ್ದ ಮಗ ಸಾವು – ರಹಸ್ಯವಾಗಿ ಸಮಾಧಿಯಲ್ಲಿ ಹೂತಿಟ್ಟಿದ್ದ ಮಾಲೀಕ ಅರೆಸ್ಟ್‌

    25,000 ರೂ.ಗೆ ಜೀತಕ್ಕಿರಿಸಿದ್ದ ಮಗ ಸಾವು – ರಹಸ್ಯವಾಗಿ ಸಮಾಧಿಯಲ್ಲಿ ಹೂತಿಟ್ಟಿದ್ದ ಮಾಲೀಕ ಅರೆಸ್ಟ್‌

    – ಕರುಳು ಹಿಂಡುವ ಕಥೆ – ಪೊಲೀಸರು ಪ್ರಕರಣ ಭೇದಿಸಿದ್ದೇ ರೋಚಕ

    ಚೆನ್ನೈ/ಹೈದರಾಬಾದ್‌: 25,000 ರೂ. ಸಾಲಕ್ಕಾಗಿ (Loan) ಜೀತಕ್ಕಿರಿಸಿಕೊಂಡಿದ್ದ ಹುಡುಗನೊಬ್ಬನ ಶವ ತಮಿಳುನಾಡಿನಲ್ಲಿ (TamilNadu) ಸಮಾಧಿಯಲ್ಲಿ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಹೌದು. ಆಂಧ್ರ ಪ್ರದೇಶದ ಬಾತುಕೋಳಿ ಸಾಕಣೆದಾರ (Duck Rearer) ಯಾನಾಡಿ ಬುಡಕಟ್ಟು ಸಮುದಾಯದ ಮಹಿಳೆ ಮತ್ತು ಆಕೆಯ ಮೂವರು ಮಕ್ಕಳನ್ನು 25,000 ರೂ. ಸಾಲಕ್ಕೆ ಜೀತದಾಳುಗಳಾಗಿ ಇರಿಸಿಕೊಂಡಿದ್ದ. ಬಳಿಕ ತಾಯಿ ಇಬ್ಬರು ಮಕ್ಕಳನ್ನ ಬಿಟ್ಟು ಒಬ್ಬ ಮಗನನ್ನ ಮೇಲಾಧಾರವಾಗಿ (collateral) ಇರಿಸಿಕೊಂಡಿದ್ದ. ಮಹಿಳೆ ಬಡ್ಡಿ ಸಮೇತ ಸಾಲದ ಹಣ ಹೊಂದಿಸಿ ಮಗನನ್ನ ಬಿಡುವಂತೆ ಮಹಿಳೆ ಕೇಳಿದಾಗ ಹುಡುಗ ಓಡಿಹೋಗಿದ್ದಾನೆಂದು ಕಥೆ ಕಟ್ಟಿದ್ದ. ಇದನ್ನೂ ಓದಿ: ಪಾಕ್‌ ಏಜೆಂಟ್‌ ಜೊತೆ ಭಾರತೀಯ ಸೇನಾ ತಾಣಗಳ ಫೋಟೊ ಹಂಚಿಕೆ – ಗುಜರಾತ್‌ ವ್ಯಕ್ತಿ ಬಂಧನ

    ಈ ಸಂಬಂಧ ಮಹಿಳೆ ನೀಡಿನ ದೂರಿನ ಮೇರೆಗೆ ಕೇಸ್‌ ದಾಖಲಿಸಿಕೊಂಡ ಪೊಲೀಸರು (Andhra Police) ಬಾತುಕೋಳಿ ಸಾಕಣೆದಾರನನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಹುಡುಗ ಮೃತಪಟ್ಟಿರುವುದು ಗೊತ್ತಾಗಿದೆ. ವಿಚಾರಣೆ ವೇಳೆ ಮಾಲೀಕನೇ ತಮಿಳುನಾಡಿನ ಕಾಂಚಿಪುರಂನಲ್ಲಿರುವ ತನ್ನ ಅತ್ತೆಯ ಮನೆಯ ಬಳಿ ಶವವನ್ನು ಹೂತಿದ್ದಾನೆಂದು ಬಾಯ್ಬಿಟ್ಟಿದ್ದಾನೆ. ಬಳಿಕ ಮಂಗಳವಾರ (ಮೇ 20) ಪೊಲೀಸರು ಹುಡುಗನ ಶವವನ್ನ ಹೊರತೆಗೆದಾಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇದನ್ನೂ ಓದಿ: Davanagere | ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ ಪಲ್ಟಿ – 40ಕ್ಕೂ ಹೆಚ್ಚು ಮಂದಿಗೆ ಗಾಯ

    ಕರುಳು ಹಿಂಡುವ ಕಥೆ ನೀವೂ ಓದಿ…
    ಆಂಧ್ರ ಪ್ರದೇಶದ ನಿವಾಸಿ ಅನಕಮ್ಮ ಮತ್ತು ಆಕೆಯ ದಿ. ಪತಿ ಚೆಂಚಯ್ಯ ಮತ್ತವರ ಮೂವರು ಮಕ್ಕಳು ಬಾತುಕೋಳಿ ಸಾಕಣೆದಾರನ ಬಳಿ ಒಂದು ವರ್ಷದಿಂದ ಜೀತದಾಳುಗಳಾಗಿ ಕೆಲಸ ಮಾಡಿಕೊಂಡಿದ್ದರು. ಚೆಂಚಯ್ಯ ಮರಣದ ನಂತರ ಮಾಲೀಕ ಅನಕಮ್ಮ ಮತ್ತು ಆಕೆಯ ಮಕ್ಕಳನ್ನ ವಿರೀತವಾಗಿ ಶೋಷಣೆ ಮಾಡುತ್ತಿದ್ದ. ಆದ್ರೆ ಚೆಂಚಯ್ಯ ಮರಣಕ್ಕೂ ಮುನ್ನ 25,000 ರೂ. ಸಾಲ ಪಡೆದುಕೊಂಡಿದ್ದ ಕಾರಣ ಅವರು ಹೊರಗೆ ಹೋಗಲು ಸಾಧ್ಯವಿರಲಿಲ್ಲ. ಸಂಬಳ ಹೆಚ್ಚು ಮಾಡುವಂತೆ ಕೇಳಿಕೊಂಡಿದ್ದರೂ ಮಾಲೀಕನ ಮನಸ್ಸು ಕರಗಲಿಲ್ಲ. ಇದನ್ನೂ ಓದಿ: Bengaluru | ಅಕ್ರಮವಾಗಿ ನಾಡ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ರೌಡಿಶೀಟರ್ ಬಂಧನ

    ಕೊನೆಗೆ ಆಕೆ ಮನೆಯಿಂದ ಹೊರಹೋಗಲು ನಿರ್ಧರಿಸಿದಾಗ 25,000 ರೂ. ಸಾಲಕ್ಕೆ 20 ಸಾವಿರ ರೂ. ಬಡ್ಡಿ ಹಣ ಸೇರಿ 45,000 ರೂ. ಕೊಡುವಂತೆ ಪಟ್ಟು ಹಿಡಿದಿದ್ದ. ಇದರಿಂದ ವಿಧಿಯಿಲ್ಲದೇ ಅನಕಮ್ಮ ತಮ್ಮ ಮೂವರು ಮಕ್ಕಳಲ್ಲಿ ಒಬ್ಬ ಮಗನನ್ನ ಜೀತದಾಳಾಗಿ ಬಿಟ್ಟು ಹೋಗಲು ಒಪ್ಪಿಕೊಂಡಳು. ಆಗಾಗ್ಗೆ ತನ್ನ ಮಗನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಳು. ಅಮ್ಮ ಫೋನ್‌ ಮಾಡಿದಾಗೆಲ್ಲ ಮಾಲೀಕ ತೊಂದ್ರೆ ಕೊಡ್ತಿದ್ದಾನೆ, ನನ್ನನ್ನು ಇಲ್ಲಿಂದು ಕರೆದುಕೊಂಡು ಹೋಗು ಅಂತ ಮಗ ಬೇಡಿಕೊಳ್ಳುತ್ತಿದ್ದ. ಅನಕಮ್ಮ ಏಪ್ರಿಲ್‌ನಲ್ಲಿ ಮಗನೊಂದಿಗೆ ಕೊನೆಯ ಬಾರಿ ಮಾತನಾಡಿದ್ದಳು.

    ಹೇಗೋ ಏಪ್ರಿಲ್‌ ಅಂತ್ಯದ ವೇಳೆಗೆ ಅನಕಮ್ಮ ಕಟ್ಟಪಟ್ಟು ದುಡಿದು ಹಣ ಹೊಂದಿಸಿದಳು. ಸಾಲ ಪಾವತಿಸಿ ಮಗನನ್ನ ಬಿಡಿಸಿಕೊಂಡು ಬರಲೆಂದು ಆ ಬಾತುಕೋಳಿ ಸಾಕಣೆದಾರನ ಬಳಿ ಹೋದಾಗ ಆತ ತಕ್ಷಣಕ್ಕೆ ಆಟವಾಡಿಸಿದ. ಮೊದಮೊದಲು ಹುಡುಗನನ್ನ ಬೇರೆಡೆಗೆ ಕೆಲಸಕ್ಕೆ ಕಳುಹಿಸಿರುವುದಾಗಿ ಹೇಳುತ್ತಿದ್ದ ಮಾಲೀಕ ಬಳಿಕ ಓಡಿ ಹೋಗಿದ್ದಾನೆಂದು ಕಥೆ ಕಟ್ಟಿದ್ದ. ಇದರಿಂದ ಅನುಮಾನಗೊಂಡ ಅನಕಮ್ಮ ಬುಡಕಟ್ಟು ಸಮುದಾಯ ಮುಖಂಡದ ಸಹಾಯ ಪಡೆದು ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದರು. ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆ ಬಾತುಕೋಳಿ ಸಾಕಣೆದಾರನನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.

    ವಿಚಾರಣೆ ವೇಳೆ ಬಾತುಕೋಳಿ ಸಾಕಣೆದಾರ ಹುಡುಗ ಸಾವನ್ನಪ್ಪಿದ್ದಾನೆ ಮತ್ತು ಆತನನ್ನ ಕಾಂಚಿಪುರಂನಲ್ಲಿರುವ ತನ್ನ ಅತ್ತೆಯ ಮನೆಯ ಬಳಿ ರಹಸ್ಯವಾಗಿ ಸಮಾಧಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಈ ಪ್ರಕರಣದಲ್ಲಿ ಆರೋಪಿಗೆ ಸಹಕರಿಸಿದ್ದ ಬಾತುಕೋಳಿ ಸಾಗಣೆದಾರನ ಪತ್ನಿ, ಮಗನನ್ನೂ ಬಂಧಿಸಿ, ಜೀತ ಪದ್ಧತಿ (ನಿರ್ಮೂಲನೆ) ಕಾಯ್ದೆ, ಬಾಲ ಕಾರ್ಮಿಕ ಕಾಯ್ದೆ, ಬಾಲ ನ್ಯಾಯ ಕಾಯ್ದೆ, ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್‌ ದಾಖಲಿಸಲಾಗಿದೆ. ಮಂಗಳವಾರ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

    ಯಾನಾಡಿ ಬುಡಕಟ್ಟು ಜನಾಂಗದವರು ಜೀತಪದ್ದತಿಗೆ ಹೆಚ್ಚು ಗುರಿಯಾಗುತ್ತಿದ್ದಾರೆ. ಇತ್ತೀಚೆಗೆ ಈ ಸಮುದಾಯದ 50 ಜನರನ್ನ ರಕ್ಷಣೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ವಿಧಾನಸೌಧ ಗೈಡೆಡ್ ಟೂರ್‌ಗೆ ಭಾನುವಾರ ಚಾಲನೆ – ಜೂ.1ರಿಂದ ಸಾರ್ವಜನಿಕರಿಗೆ ಪ್ರವೇಶ, ಶುಲ್ಕ ಪ್ರಕಟ

  • ಚಿತ್ರದುರ್ಗ| ಬುಡಕಟ್ಟು ಸಮುದಾಯದ ವಿಶೇಷ ದೀಪಾವಳಿ – ಯುವತಿಯರು ಮಾತ್ರ ಆಚರಿಸುವ ಗೋದ್ನಾಹಬ್ಬ

    ಚಿತ್ರದುರ್ಗ| ಬುಡಕಟ್ಟು ಸಮುದಾಯದ ವಿಶೇಷ ದೀಪಾವಳಿ – ಯುವತಿಯರು ಮಾತ್ರ ಆಚರಿಸುವ ಗೋದ್ನಾಹಬ್ಬ

    ಚಿತ್ರದುರ್ಗ: ಕೋಟೆನಾಡಿನ ಬಣಜಾರ ತಾಂಡದಲ್ಲಿ ಆಚರಿಸುವ ಗೋದ್ನಹಬ್ಬ (Godna Festival) ಯುವತಿಯರ ಬದುಕಿಗೆ ದಾರಿದೀಪವಾಗಿದೆ. ಮದುವೆಯಾಗದ ಯುವತಿಯರು ಸಾಂಪ್ರದಾಯಿಕವಾಗಿ ಆಚರಿಸುವ ವಿಶೇಷ ಸಂಸ್ಕೃತಿಯೊಂದು ಪೂರ್ವಜರ ಕಾಲದಿಂದಲು ಜೀವಂತವಾಗಿದೆ.

    ತಲೆ ಮೇಲೆ ಬುಟ್ಟಿ ಹೊತ್ತು ಹೂ ತರಲು ಕಾಡಿಗೆ ಹೊರಟ ಯುವತಿಯರು. ರಸ್ತೆಯುದ್ದಕ್ಕೂ ಭರ್ಜರಿ ಸ್ಟೆಪ್ ಹಾಕುತ್ತಿರುವ ವನಿತೆಯರು. ಈ ದೃಶ್ಯಗಳು ಕಂಡುಬಂದಿದ್ದು ಚಿತ್ರದುರ್ಗ (Chitradurga) ತಾಲೂಕಿನ ಮದಕರಿಪುರ (Madakaripura) ತಾಂಡದಲ್ಲಿ. ಹೌದು, ಬಂಜಾರ ಸಮುದಾಯವು ಈ ಸಂಸ್ಕೃತಿಯನ್ನು ಪೂರ್ವಜರ ಕಾಲದಿಂದಲೂ ಆಚರಿಸುತ್ತಿದೆ. ಈ ಸಂಪ್ರದಾಯವನ್ನು ಪ್ರತಿವರ್ಷ ದೀಪಾವಳಿಯಂದು ಆಚರಿಸಲಿದ್ದು, ಮದುವೆ ವಯಸ್ಸಿಗೆ ಬಂದ ಯುವತಿಯರು ತವರು ಮನೆಯಲ್ಲಿ ಗೋದ್ನಹಬ್ಬದಲ್ಲಿ ಭಾಗಿಯಾಗೋದು ಇಲ್ಲಿನ ವಿಶೇಷ. ಅಲ್ಲದೇ ಗೋದ್ನಹಬ್ಬದಲ್ಲಿ ಒಮ್ಮೆ ಭಾಗಿಯಾದ ಯುವತಿ ಮುಂದಿನ ವರ್ಷ ತನ್ನ ಗಂಡನ ಮನೆಯಲ್ಲಿ ದೀಪಾವಳಿ ಆಚರಿಸುತ್ತಾಳೆ. ಗಂಡನ ಮನೆಯ ದೀಪ ಬೆಳಗಿಸಿ ಅವರ ಬದುಕಿಗೆ ಬೆಳಕಾಗುವಂತೆ ಸ್ವರ್ಗಾಸ್ತರಾದ ಹಿರಿಯರು ಆಶೀರ್ವದಿಸುವರೆಂಬ ನಂಬಿಕೆ ಇವರಲ್ಲಿದೆ. ಹೀಗಾಗಿ ಪ್ರತಿವರ್ಷ ದೀಪಾವಳಿಯಂದು ಎರಡು ದಿನಗಳ ಕಾಲ ಗೋದ್ನಾ ಹಬ್ಬವನ್ನು ಆಚರಿಸಲಾಗುತ್ತದೆ. ಇದನ್ನೂ ಓದಿ: ಹಳಿಯಲ್ಲಿದ್ದ ಕಸ ತೆರವುಗೊಳಿಸುತ್ತಿದ್ದ ವೇಳೆ ಎಕ್ಸ್‌ಪ್ರೆಸ್ ರೈಲು ಡಿಕ್ಕಿ – ನಾಲ್ವರು ಗುತ್ತಿಗೆ ಕಾರ್ಮಿಕರ ದುರ್ಮರಣ

    ಇನ್ನು ಈ ಹಬ್ಬಕ್ಕೆ ಕಾಡಿನಿಂದ ಬಗೆಬಗೆಯ ಹೂಗಳನ್ನು ತರುತ್ತಾರೆ. ಆ ಗ್ರಾಮದ ಪ್ರತಿಯೊಬ್ಬರ ಮನೆಯಲ್ಲೂ ದೀಪ ಬೆಳಗಿಸಿ ಪೂಜಿಸುತ್ತಾರೆ. ಅಲ್ಲದೇ ತವರು ಮನೆಯಲ್ಲಿರುವ ಸ್ವತಂತ್ರವು, ಗಂಡನ ಮನೆಯಲ್ಲೇ ಸಿಗದೇ ಇರಬಹುದು. ಹೀಗಾಗಿ ಮದುವೆಗೂ ಮುನ್ನ ತವರಿನಲ್ಲಿ ಆಚರಿಸುವ ಗೋದ್ನಹಬ್ಬ ಜೀವನಪರ್ಯಂತ, ಆ ಯುವತಿಗೆ ಸವಿನೆನಪಾಗಿ ಉಳಿಯಲಿ ಎಂಬ ಉದ್ದೇಶದಿಂದ ದೀಪಾವಳಿ ಹಬ್ಬವನ್ನು ಈ ರೀತಿ ಆಚರಿಸುತ್ತಾರೆ. ಇದನ್ನೂ ಓದಿ: Bengaluru | ಸಾಫ್ಟ್‌ವೇರ್‌ ಹ್ಯಾಕ್‌ ಮಾಡಿ ಡೋರ್‌ಲಾಕ್‌ ಓಪನ್‌ – ಐಷಾರಾಮಿ ಕಾರುಗಳ್ಳರ ಬಂಧನ

  • ಬಿಜೆಪಿ ಏಕಾಂಗಿಯಾಗಿ 370 ಸ್ಥಾನಗಳ ಗಡಿ ಮುಟ್ಟಲಿದೆ: ಪ್ರಧಾನಿ ಮೋದಿ

    ಬಿಜೆಪಿ ಏಕಾಂಗಿಯಾಗಿ 370 ಸ್ಥಾನಗಳ ಗಡಿ ಮುಟ್ಟಲಿದೆ: ಪ್ರಧಾನಿ ಮೋದಿ

    – ಬುಡಕಟ್ಟು ಸಮುದಾಯ ಮತಬ್ಯಾಂಕ್ ಅಲ್ಲ, ದೇಶದ ಹೆಮ್ಮೆ

    ಭೋಪಾಲ್: ಭಾರತೀಯ ಜನತಾ ಪಕ್ಷ (BJP) ಏಕಾಂಗಿಯಾಗಿ 370 ಸ್ಥಾನಗಳ ಗಡಿ ಮುಟ್ಟಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಭಾನುವಾರ ಮಧ್ಯಪ್ರದೇಶದ (Madhya Pradesh) ಝಬುವಾ (Jhabua)  ಜಿಲ್ಲೆಯಲ್ಲಿ 7,550 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ನಮಗೆ ಮತ್ತು ನಮ್ಮ ಪಕ್ಷಕ್ಕೆ ಬುಡಕಟ್ಟು ಸಮುದಾಯ ಮತಬ್ಯಾಂಕ್ ಅಲ್ಲ, ಅದು ದೇಶದ ಹೆಮ್ಮೆ. ಕೇಸರಿ ಪಕ್ಷವು 370 ಸ್ಥಾನಗಳ ಗಡಿಯನ್ನು ಮುಟ್ಟಲಿದೆ ಎಂದು ಹೇಳಿದರು. ಇದನ್ನೂ ಓದಿ: ಫೆ.13ರಂದು ದೆಹಲಿಯಲ್ಲಿ ರೈತರ ಪ್ರತಿಭಟನೆ- ಹರಿಯಾಣದ ಕೆಲವೆಡೆ ಇಂಟರ್ನೆಟ್ ಬ್ಯಾನ್, ಸೆಕ್ಷನ್ 144 ಜಾರಿ

    ಚುನಾವಣಾ ಪ್ರಚಾರಕ್ಕಾಗಿ ಮಧ್ಯಪ್ರದೇಶಕ್ಕೆ ಬಂದಿಲ್ಲ:
    ಮಧ್ಯಪ್ರದೇಶಕ್ಕೆ ಚುನಾವಣಾ ಪ್ರಚಾರಕ್ಕಾಗಿ ಬಂದಿಲ್ಲ. ಆದರೆ ಜನರ ಸೇವೆಗಾಗಿ ಬಂದಿದ್ದೇನೆ. ನನ್ನ ಈ ರಾಜ್ಯ ಭೇಟಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ ಮತ್ತು ವಿವಿಧ ವಿಷಯಗಳನ್ನು ಹೇಳಲಾಗುತ್ತಿದೆ. ಕೆಲವರು ಮೋದಿ ಲೋಕಸಭೆ ಚುನಾವಣೆಯ (Lok Sabha Election) ಹೋರಾಟವನ್ನು ಜಬುವಾದಿಂದ ಪ್ರಾರಂಭಿಸುತ್ತಿದ್ದಾರೆ ಎಂದು ಹೇಳುತ್ತಾರೆ. ಆದರೆ ನಾನು ಚುನಾವಣಾ ಪ್ರಚಾರಕ್ಕಾಗಿ ಬಂದಿಲ್ಲ. ಬದಲಾಗಿ ಜನರ ಸೇವೆ ಮಾಡಲು ಬಂದಿದ್ದೇನೆ ಎಂದರು. ಇದನ್ನೂ ಓದಿ: ರಾಮಲಲ್ಲಾ ದರ್ಶನಕ್ಕೆ ಅಯೋಧ್ಯೆಗೆ ಬಸ್‌ನಲ್ಲಿ ತೆರಳಿದ ಯುಪಿ ಶಾಸಕರು

    ಮಧ್ಯಪ್ರದೇಶದಲ್ಲಿ ಆರು ಲೋಕಸಭಾ ಸ್ಥಾನಗಳನ್ನು ಬುಡಕಟ್ಟು ಜನಾಂಗದವರಿಗೆ ಮೀಸಲಿರಿಸಲಾಗಿದೆ. ಮಧ್ಯಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭ ಪ್ರಧಾನಿ ಮೋದಿಯವರು ಆಹಾರ ಅನುದಾನ ಯೋಜನೆಯ ಸುಮಾರು ಎರಡು ಲಕ್ಷ ಮಹಿಳಾ ಫಲಾನುಭವಿಗಳಿಗೆ ಮಾಸಿಕ ಕಂತುಗಳನ್ನು ವಿತರಿಸಿದರು. ಇದರ ಅಡಿಯಲ್ಲಿ ವಿಶೇಷವಾಗಿ ಹಿಂದುಳಿದ ಬುಡಕಟ್ಟುಗಳ ಮಹಿಳೆಯರಿಗೆ ಪೌಷ್ಟಿಕ ಆಹಾರಕ್ಕಾಗಿ ತಿಂಗಳಿಗೆ 1,500 ರೂ. ನೀಡಲಾಗುತ್ತದೆ. ಇದನ್ನೂ ಓದಿ: ಮದುವೆಯಲ್ಲಿ ಡಿಜೆಗಾಗಿ ಜಗಳ, ಠಾಣೆ ಮೆಟ್ಟಿಲೇರಿದ ಕುಟುಂಬಸ್ಥರು

    ಇದಲ್ಲದೆ, ಪ್ರಧಾನಿ ಮೋದಿ ಅವರು 1.75 ಲಕ್ಷ ‘ಅಧಿಕಾರ್ ಅಭಿಲೇಖ್’ ಅಥವಾ ಸ್ವಾಮಿತ್ವ ಯೋಜನೆಯಡಿ ಭೂಮಿಯ ಹಕ್ಕುಗಳ ದಾಖಲೆಗಳನ್ನು ವಿತರಿಸಿದರು. ಇದು ಜನರು ತಮ್ಮ ಭೂಮಿಯ ಮೇಲಿನ ಹಕ್ಕಿಗಾಗಿ ಸಾಕ್ಷ್ಯಚಿತ್ರ ಪುರಾವೆಗಳನ್ನು ಹೊಂದಲು ಅನುವು ಮಾಡಿಕೊಡುತ್ತದೆ. ಇದನ್ನೂ ಓದಿ: ನಿಮ್ಮ ಪೋಷಕರು ನನಗೆ ಮತ ಹಾಕದಿದ್ರೆ 2 ದಿನ ಊಟ ಮಾಡ್ಬೇಡಿ- ಶಾಸಕರ ವಿವಾದಾತ್ಮಕ ಹೇಳಿಕೆ

    ಪ್ರಧಾನಿ ಮೋದಿ ಅವರು ಮಧ್ಯಪ್ರದೇಶದಲ್ಲಿ ನೀರು ಸರಬರಾಜು ಮತ್ತು ಕುಡಿಯುವ ನೀರನ್ನು ಬಲಪಡಿಸಲು ಅನೇಕ ಯೋಜನೆಗಳನ್ನು ಅನಾವರಣಗೊಳಿಸಿದರು. ಧಾರ್ ಮತ್ತು ರತ್ಲಂನ ಸಾವಿರಕ್ಕೂ ಹೆಚ್ಚು ಹಳ್ಳಿಗಳಿಗೆ ಸಹಾಯ ಮಾಡುವ ಕುಡಿಯುವ ನೀರು ಸರಬರಾಜು ಯೋಜನೆಯಾದ ‘ತಲವಾಡ ಯೋಜನೆ’ ಮತ್ತು ಅಟಲ್ ಮಿಷನ್ ಫಾರ್ ರಿಜುವೆನೇಶನ್ ಮತ್ತು ನಗರ ಪರಿವರ್ತನೆ (ಅಮೃತ್) 2.0 ಅಡಿಯಲ್ಲಿ 14 ನಗರ ನೀರು ಸರಬರಾಜು ಯೋಜನೆಗಳಿಗೆ ಮೋದಿ ಶಂಕುಸ್ಥಾಪನೆ ಮಾಡಿದರು. ಇದು ಮಧ್ಯಪ್ರದೇಶದ ಬಹು ಜಿಲ್ಲೆಗಳಾದ್ಯಂತ 50,000 ಕ್ಕೂ ಹೆಚ್ಚು ನಗರ ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತದೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಆಚಾರ್ಯ ಪ್ರಮೋದ್ ಕೃಷ್ಣಂ ಉಚ್ಛಾಟನೆ- ಕೈ ನಾಯಕ ಹೇಳಿದ್ದೇನು?

    ಇವುಗಳಲ್ಲದೆ, ಝಬುವಾದ 50 ಗ್ರಾಮ ಪಂಚಾಯತ್‌ಗಳಿಗೆ ಪ್ರಧಾನ ಮಂತ್ರಿ ‘ನಲ್ ಜಲ್ ಯೋಜನೆ’ಗೆ ಚಾಲನೆ ನೀಡಿದ್ದಾರೆ. ಇದು ಸುಮಾರು 11,000 ಮನೆಗಳಿಗೆ ನಲ್ಲಿ ನೀರನ್ನು ಒದಗಿಸುತ್ತದೆ. ಇವುಗಳಲ್ಲದೆ, ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿಯಲ್ಲಿ ರತ್ಲಂ ರೈಲು ನಿಲ್ದಾಣ ಮತ್ತು ಮೇಘನಗರ ರೈಲು ನಿಲ್ದಾಣದ ಪುನರಾಭಿವೃದ್ಧಿಯನ್ನು ಒಳಗೊಂಡಿರುವ ಬಹು ರೈಲು ಯೋಜನೆಗಳನ್ನು ಪ್ರಧಾನಿ ಅನಾವರಣಗೊಳಿಸಿದ್ದಾರೆ. ಯೋಜನೆಗಳು ಇಂದೋರ್-ದೇವಾಸ್-ಉಜ್ಜೈನ್ ಸಿ ಕ್ಯಾಬಿನ್ ರೈಲು ಮಾರ್ಗವನ್ನು ದ್ವಿಗುಣಗೊಳಿಸುವುದು, ಯಾರ್ಡ್ ಮರುರೂಪಿಸುವಿಕೆಯೊಂದಿಗೆ ಇಟಾರ್ಸಿ-ಉತ್ತರ-ದಕ್ಷಿಣ ದರ್ಜೆಯ ವಿಭಜಕ ಮತ್ತು ಬರ್ಖೇರಾ-ಬುದ್ನಿ-ಇಟಾರ್ಸಿಯನ್ನು ಸಂಪರ್ಕಿಸುವ ಮೂರನೇ ಮಾರ್ಗವನ್ನು ಒಳಗೊಂಡಿರುತ್ತದೆ. ಇದನ್ನೂ ಓದಿ: 1 ವರ್ಷದಲ್ಲಿ ಚುನಾವಣಾ ಬಾಂಡ್‌ಗಳಿಂದ BJPಗೆ 1,300 ಕೋಟಿ ರೂ. ಗಳಿಕೆ – ಹೆಲಿಕಾಪ್ಟರ್‌ ಬಳಕೆಗೆ 78.2 ಕೋಟಿ ರೂ. ಖರ್ಚು

    ಈ ವೇಳೆ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ 559 ಗ್ರಾಮಗಳಿಗೆ ಅಂಗನವಾಡಿ ಭವನಗಳು, ನ್ಯಾಯಬೆಲೆ ಅಂಗಡಿಗಳು, ಆರೋಗ್ಯ ಕೇಂದ್ರಗಳು, ಶಾಲೆಗಳಲ್ಲಿ ಹೆಚ್ಚುವರಿ ಕೊಠಡಿಗಳು, ಆಂತರಿಕ ರಸ್ತೆಗಳು ಸೇರಿದಂತೆ ಇತರೆ ನಿರ್ಮಾಣ ಚಟುವಟಿಕೆಗಳಿಗೆ ಬಳಸಲು 55.9 ಕೋಟಿ ರೂ. ನೀಡಿದ್ದಾರೆ. ಇದನ್ನೂ ಓದಿ: 17ನೇ ಲೋಕಸಭೆಯಲ್ಲಿ 221 ಮಸೂದೆ ಅಂಗೀಕಾರ: ಪ್ರಹ್ಲಾದ್ ಜೋಶಿ

  • ಗೋಮಾಂಸ ಸೇವಿಸಿದ್ದಾರೆಂದು ಬುಡಕಟ್ಟು ಜನಾಂಗದ 24 ಮಂದಿಗೆ ಸಾಮಾಜಿಕ ಬಹಿಷ್ಕಾರ

    ಗೋಮಾಂಸ ಸೇವಿಸಿದ್ದಾರೆಂದು ಬುಡಕಟ್ಟು ಜನಾಂಗದ 24 ಮಂದಿಗೆ ಸಾಮಾಜಿಕ ಬಹಿಷ್ಕಾರ

    ತಿರುವನಂತಪುರ: ಗೋಮಾಂಸ ಸೇವಿಸಿದ್ದಾರೆಂದು ಆರೋಪಿಸಿ ಬುಡಕಟ್ಟು ಜನಾಂಗದ 24 ಮಂದಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ.

    ಇಡುಕ್ಕಿ ಜಿಲ್ಲೆಯ ಮಾರಯೂರು ಅರಣ್ಯ ಪ್ರದೇಶದ ಬಳಿ ಈ ಘಟನೆ ನಡೆದಿದೆ. ಸ್ಥಳೀಯ ಸ್ವಯಂ ಆಡಳಿತ ಮತ್ತು ಬುಡಕಟ್ಟು ಸಚಿವಾಲಯವು, ಜನಾಂಗದ ಮುಖಂಡರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದಾಗಿ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಪೋಷಕರ ಚಿತಾಭಸ್ಮ ಸ್ವೀಕರಿಸಿದ ಬಿಪಿನ್ ರಾವತ್ ಪುತ್ರಿಯರು – ಹರಿದ್ವಾರದಲ್ಲಿ ಅಸ್ಥಿ ವಿಸರ್ಜನೆ

    ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಈವರೆಗೂ ಯಾರೂ ಸಹ ಠಾಣೆಗೆ ಬಂದು ದೂರು ನೀಡಿಲ್ಲ. ಸ್ಥಳೀಯರಿಂದ ತಮಗೆ ಬಂದ ಮಾಹಿತಿ ಆಧರಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಗೋಮಾಂಸ ಸೇವಿಸುವ ಮೂಲಕ ನಮ್ಮ ಪೂರ್ವಿಕರ ಪದ್ಧತಿಗಳಿಗೆ ಧಕ್ಕೆ ತಂದಿದ್ದಾರೆ ಎಂದು ಬುಡಕಟ್ಟು ಜನಾಂಗದ ಮುಖಂಡರ ನೇತೃತ್ವದಲ್ಲಿ ಕೆಲವರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿತ್ತು. ಬಹಿಷ್ಕಾರಕ್ಕೆ ಒಳಗಾದವರು ಊರಿನಿಂದ ಆಚೆಗೆ ಹೋಗಬೇಕು. ಕುಟುಂಬದವರು ಯಾರೂ ಸಹ ಅವರನ್ನು ಸಂಪರ್ಕಿಸುವಂತಿಲ್ಲ ಎಂದು ಶಿಕ್ಷೆ ವಿಧಿಸಲಾಗಿತ್ತು. ಇದನ್ನೂ ಓದಿ: ಚುನಾವಣೆಯಲ್ಲಿ 350ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ: ಯೋಗಿ ಆದಿತ್ಯನಾಥ್