Tag: Tribal

  • ಮಧ್ಯಪ್ರದೇಶದಲ್ಲೂ ಬುಲ್ಡೋಜರ್‌ ಸದ್ದು; ಬುಡಕಟ್ಟು ವ್ಯಕ್ತಿ ಮೇಲೆ ಮೂತ್ರವಿಸರ್ಜನೆ ಮಾಡಿದ್ದ ಆರೋಪಿ ಮನೆ ಧ್ವಂಸ

    ಮಧ್ಯಪ್ರದೇಶದಲ್ಲೂ ಬುಲ್ಡೋಜರ್‌ ಸದ್ದು; ಬುಡಕಟ್ಟು ವ್ಯಕ್ತಿ ಮೇಲೆ ಮೂತ್ರವಿಸರ್ಜನೆ ಮಾಡಿದ್ದ ಆರೋಪಿ ಮನೆ ಧ್ವಂಸ

    ಭೋಪಾಲ್‌: ಸಿಧಿ ಜಿಲ್ಲೆಯಲ್ಲಿ ಬುಡಕಟ್ಟು (Tribal) ಜನಾಂಗದ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜಿಸಿ ವಿಕೃತಿ ಮೆರೆದಿದ್ದ ಆರೋಪಿ ಪ್ರವೇಶ್ ಶುಕ್ಲಾ ಮನೆಯನ್ನ ಬುಲ್ಡೋಜರ್‌ನಿಂದ (Bulldozer) ಧ್ವಂಸಗೊಳಿಸಲಾಗಿದೆ.

    ರಾಜ್ಯ ಸರ್ಕಾರದ ಆದೇಶದ ಮೇರೆಗೆ ಅಧಿಕಾರಿಗಳು ಆರೋಪಿ ಮನೆಯನ್ನ ಧ್ವಂಸಗೊಳಿಸಿದ್ದಾರೆ. ಆದ್ರೆ ಆರೋಪಿ ಕುಟುಂಬಸ್ಥರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಹಳೆಯ ವೀಡಿಯೋ ಆಗಿದ್ದು, ಚುನಾವಣೆ ಹತ್ತಿರವಾಗಿರೋದ್ರಿಂದ ಇದನ್ನ ಮುನ್ನೆಲೆಗೆ ತರಲಾಗಿದೆ. ರಾಜಕೀಯ ಕಾರಣಗಳಿಗಾಗಿ ಹಳೆಯ ವೀಡಿಯೋ ಪ್ರಸಾರ ಮಾಡುತ್ತಿದ್ದಾರೆ ಎಂದು ಆರೋಪಿ ಸಹೋದರಿ ದೂರಿದ್ದಾರೆ. ಇದನ್ನೂ ಓದಿ: ಬುಡಕಟ್ಟು ವ್ಯಕ್ತಿ ಮೇಲೆ ಮೂತ್ರವಿಸರ್ಜಿಸಿ ವಿಕೃತಿ- ದುಷ್ಕರ್ಮಿ ಅರೆಸ್ಟ್

    ಆರೋಪಿ ಪ್ರವೇಶ್‌ ಶುಕ್ಲಾ ತಂದೆ, ನನ್ನ ಮಗ ಈ ಕೃತ್ಯ ಎಸಗಲು ಸಾಧ್ಯವೇ ಇಲ್ಲ. ಆತನನ್ನ ಸಿಕ್ಕಿಹಾಕಿಸುವ ಉದ್ದೇಶದಿಂದ ಹೀಗೆ ಮಾಡಿದ್ದಾರೆ. ನಮಗೆ ತುಂಬಾ ನೋವಾಗಿದೆ ಎಂದು ಅಳಲುತೋಡಿಕೊಂಡಿದ್ದಾರೆ. ಸದ್ಯ ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿಯಲ್ಲಿ ಬಂಧಿತನಾಗಿರುವ ಪ್ರವೇಶ್‌ ಶುಕ್ಲಾನನ್ನ ರೇವಾ ಸೆಂಟ್ರಲ್‌ ಜೈಲಿನಲ್ಲಿ ಇರಿಸಲಾಗಿದೆ. ಇದನ್ನೂ ಓದಿ: ವಿಷಾನಿಲ ಸೋರಿಕೆ – 16 ಜನರ ದುರ್ಮರಣ

    ಏನಿದು ಘಟನೆ?
    ಬುಡಕಟ್ಟು ಜನಾಂಗದ ವ್ಯಕ್ತಿಯ ಮೇಲೆ ದುಷ್ಕರ್ಮಿಯೊಬ್ಬ ಮೂತ್ರ ವಿಸರ್ಜಿಸಿ ವಿಕೃತಿ ಮೆರೆದಿದ್ದ ಘಟನೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ನಡೆದಿತ್ತು. ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ಮಧ್ಯಪ್ರದೇಶದ ರಾಜಕೀಯದಲ್ಲಿ ಗದ್ದಲ ಉಂಟಾಗಿತ್ತು. ಆತ ಬಿಜೆಪಿಯ ಸಕ್ರಿಯ ಕಾರ್ಯಕರ್ತ ಎಂದು ಕಾಂಗ್ರೆಸ್ ಆರೋಪಿಸಿತ್ತು.

    ವೀಡಿಯೋ ವೈರಲ್ ಆಗುತ್ತಿದ್ದಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಆತನ ವಿರುದ್ಧ ಕಟ್ಟುನಿಟ್ಟಿನ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಆದೇಶಿಸಿದ್ದರು. ಮಂಗಳವಾರ ತಡರಾತ್ರಿ ಆರೋಪಿ ಪ್ರವೇಶ್‌ ಶುಕ್ಲಾನನ್ನ ಬಂಧಿಸಲಾಗಿತ್ತು.

    ಆತನ ವಿರುದ್ಧ ಬಹಾರಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳು 294, 504, ಸೆಕ್ಷನ್ 3(1) (R)(s) SC/ST ಕಾಯ್ದೆ ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ತನಿಖೆಯ ಭಾಗವಾಗಿ ಆರೋಪಿಯ ಪತ್ನಿ ಹಾಗೂ ಪೋಷಕರನ್ನು ಸಹ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬುಡಕಟ್ಟು ವ್ಯಕ್ತಿ ಮೇಲೆ ಮೂತ್ರವಿಸರ್ಜಿಸಿ ವಿಕೃತಿ- ದುಷ್ಕರ್ಮಿ ಅರೆಸ್ಟ್

    ಬುಡಕಟ್ಟು ವ್ಯಕ್ತಿ ಮೇಲೆ ಮೂತ್ರವಿಸರ್ಜಿಸಿ ವಿಕೃತಿ- ದುಷ್ಕರ್ಮಿ ಅರೆಸ್ಟ್

    ಭೋಪಾಲ್: ಬುಡಕಟ್ಟು ಜನಾಂಗದ (Tribal) ವ್ಯಕ್ತಿಯ ಮೇಲೆ ದುಷ್ಕರ್ಮಿಯೊಬ್ಬ ಮೂತ್ರ ವಿಸರ್ಜಿಸಿ (Urination) ವಿಕೃತಿ ಮೆರೆದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಆತನನ್ನು ಮಂಗಳವಾರ ತಡರಾತ್ರಿ ಬಂಧಿಸಲಾಗಿದೆ.

    ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿರುವ ಘಟನೆಗೆ ಸಂಬಂಧಿಸಿದಂತೆ ವೀಡಿಯೋವೊಂದು ವೈರಲ್ ಆಗಿದೆ. ಅದರಲ್ಲಿ ನೆಲೆದ ಮೇಲೆ ಕುಳಿತಿರುವ ವ್ಯಕ್ತಿಯೊಬ್ಬರ ಮೇಲೆ ಆರೋಪಿ ಸಿಗರೇಟ್ ಸೇದುತ್ತಾ ಅಮಲೇರಿದ ಸ್ಥಿತಿಯಲ್ಲಿ ಮೂತ್ರವಿಸರ್ಜಿಸಿರುವುದು ಕಂಡುಬಂದಿದೆ. ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ಮಧ್ಯಪ್ರದೇಶದ ರಾಜಕೀಯದಲ್ಲಿ ಗದ್ದಲ ಉಂಟಾಗಿದೆ.

    ಆರೋಪಿ ವ್ಯಕ್ತಿಯನ್ನು ಪ್ರವೇಶ್ ಶುಕ್ಲಾ ಎಂದು ಗುರುತಿಸಲಾಗಿದ್ದು, ಆತ ಬಿಜೆಪಿಯ ಸಕ್ರಿಯ ಕಾರ್ಯಕರ್ತ ಎಂದು ಕಾಂಗ್ರೆಸ್ ಆರೋಪಿಸಿದೆ. ಮಾತ್ರವಲ್ಲದೇ ರೇವಾದ ಬಿಜೆಪಿ ಶಾಸಕ ರಾಜೇಂದ್ರ ಶುಕ್ಲಾ ಅವರೊಂದಿಗಿನ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ. ಹಲವು ಕಾಂಗ್ರೆಸ್ ನಾಯಕರು ವೈರಲ್ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

    ಆದರೂ ಬಿಜೆಪಿ ಆರೋಪಿ ವ್ಯಕ್ತಿಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ. ಆತ ನಮ್ಮ ಕ್ಷೇತ್ರದವನು ಎಂಬುದು ನಮಗೆ ತಿಳಿದಿದೆ. ಆದರೆ ಆತ ನಮ್ಮ ಪ್ರತಿನಿಧಿ ಅಥವಾ ಬಿಜೆಪಿ ಕಾರ್ಯಕರ್ತನಲ್ಲ ಎಂದು ಕೇದಾರ್‌ನಾಥ್ ಶುಕ್ಲಾ ಹೇಳಿದ್ದಾರೆ. ಇದನ್ನೂ ಓದಿ: ಮೂಲಭೂತ ಸೌಕರ್ಯವಿಲ್ಲದೇ ಕುಗ್ಗಿದ ಜನ- ಪಯಸ್ವಿನಿ ನದಿಗೆ ಬಿದಿರಿನ ಸೇತುವೆ ಸಂಕಷ್ಟ

    ವೀಡಿಯೋ ವೈರಲ್ ಆಗುತ್ತಿದ್ದಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಆತನ ವಿರುದ್ಧ ಕಟ್ಟುನಿಟ್ಟಿನ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಆದೇಶಿಸಿದ್ದಾರೆ.

    ಪೊಲೀಸರು ತಕ್ಷಣವೇ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಆರೋಪಿ ಬಂಧನದಿಂದ ತಪ್ಪಿಸಿಕೊಳ್ಳಲು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಓಡಿಹೋಗುತ್ತಿದ್ದ. ನಂತರ ಆತನನ್ನು ಮಧ್ಯರಾತ್ರಿ 2 ಗಂಟೆಗೆ ಹಿಡಿದು ವಿಚಾರಣೆಗೆ ಒಳಪಡಿಸಲಾಗಿದೆ. ಆತನ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ, ಎಸ್‌ಸಿ/ಎಸ್‌ಟಿ ಕಾಯ್ದೆ ಹಾಗೂ ಭಾರತೀಯ ದಂಡಸಂಹಿತೆಯ ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆಯ ಭಾಗವಾಗಿ ಆರೋಪಿಯ ಪತ್ನಿ ಹಾಗೂ ಪೋಷಕರನ್ನು ಸಹ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಕೆ.ಜಿ ಟೊಮೆಟೋಗೆ 129 ರೂ., ಯುಪಿಯಲ್ಲಿ 150 ರೂ.!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಣಿಪುರದಲ್ಲಿ ಮುಂದುವರೆದ ಹಿಂಸಾಚಾರ – ಗುಂಡಿನ ದಾಳಿಗೆ ಮಹಿಳೆ ಸೇರಿ 9 ಸಾವು

    ಮಣಿಪುರದಲ್ಲಿ ಮುಂದುವರೆದ ಹಿಂಸಾಚಾರ – ಗುಂಡಿನ ದಾಳಿಗೆ ಮಹಿಳೆ ಸೇರಿ 9 ಸಾವು

    ಇಂಫಾಲ್: ಮಣಿಪುರದಲ್ಲಿ ಹಿಂಸಾಚಾರ (Manipur Violence) ಮುಂದುವರೆದಿದ್ದು, ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಗೆ ಮಹಿಳೆ ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದಾರೆ.

    ಖಮೆನ್ಲೋಕ್ ಪ್ರದೇಶದಲ್ಲಿ ತಡರಾತ್ರಿ ಈ ದಾಳಿ ನಡೆದಿದೆ. ಮೃತ ದೇಹಗಳು ಗುರುತು ಸಿಗದಂತೆ ಗಾಯಗಳಾಗಿದ್ದು, ಅನೇಕ ಸುತ್ತಿನ ಗುಂಡುಗಳು ದೇಹವನ್ನು ಛಿದ್ರಗೊಳಿಸಿವೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಇಂಫಾಲ್‍ನ (Imphal) ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಬಿಜೆಪಿ ಪ್ರತಿಭಟನೆ – ಮೆಸ್ಕಾಂ ಕಚೇರಿ ಮೇಲೆ ಕಲ್ಲು ತೂರಾಟ

    ಮೇಟಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಘರ್ಷಣೆಗಳಿಂದಾಗಿ ಕಳೆದ ಒಂದು ತಿಂಗಳಿನಿಂದ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದೆ. ಶಾಂತಿಯನ್ನು ಪುನರ್ ಸ್ಥಾಪಿಸುವ ಪ್ರಯತ್ನಗಳ ಮಧ್ಯೆ ಈ ಘಟನೆಯು ದೊಡ್ಡ ಹಿನ್ನಡೆಯಾಗಿದೆ. ರಾತ್ರಿಯ ಘಟನೆಯ ನಂತರ ಕಫ್ರ್ಯೂ ಸಡಿಲಿಕೆಯನ್ನು ನಿಬರ್ಂಧಿಸಲಾಗಿದೆ ಎಂದು ತಿಳಿದು ಬಂದಿದೆ.

    ಬಹುಸಂಖ್ಯಾತ ಮೇಟಿಗಳಿಗೆ ಪರಿಶಿಷ್ಟ ಪಂಗಡಗಳ ಸ್ಥಾನಮಾನ ನೀಡುವ ಕ್ರಮದ ವಿರುದ್ಧ ಬುಡಕಟ್ಟು ಸಮುದಾಯ (Tribal) ಪ್ರತಿಭಟನೆ ನಡೆಸಿದ ನಂತರ ಈ ಹಿಂಸಾಚಾರ ಆರಂಭವಾಗಿತ್ತು. ಇಲ್ಲಿವರೆಗಿನ ಘರ್ಷಣೆಯಲ್ಲಿ ಸುಮಾರು 100 ಜನರು ಸಾವನ್ನಪ್ಪಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ. ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ.

    ರಾಜ್ಯದ 16 ಜಿಲ್ಲೆಗಳಲ್ಲಿ 11 ಜಿಲ್ಲೆಗಳು ಕಫ್ರ್ಯೂ ವಿಧಿಸಲಾಗಿದೆ. ಹಿಂಸಾಚಾರವನ್ನು ಉತ್ತೇಜಿಸುವ ವದಂತಿಗಳನ್ನು ತಡೆಯಲು ರಾಜ್ಯಾದ್ಯಂತ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ. ಇದನ್ನೂ ಓದಿ: ಅವರು ರಾಜ್ಯದ ಹಣ ಲೂಟಿ ಮಾಡಲು ಬಂದಿರೋ ದೆಹಲಿ ಪ್ರತಿನಿಧಿ – `ಕೈ’ನಾಯಕನ ವಿರುದ್ಧ HDK ಕಿಡಿ

  • ಆದಿವಾಸಿಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಕ್ಕೆ ಯತ್ನ – ಐವರು ಪೊಲೀಸ್ ವಶಕ್ಕೆ

    ಆದಿವಾಸಿಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಕ್ಕೆ ಯತ್ನ – ಐವರು ಪೊಲೀಸ್ ವಶಕ್ಕೆ

    ಮಡಿಕೇರಿ: ಆದಿವಾಸಿಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಕ್ಕೆ (Religious Conversion) ಯತ್ನಿಸುತ್ತಿದ್ದ ವ್ಯಕ್ತಿಗಳನ್ನು ಭಜರಂಗದಳದ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡು ಪೊಲೀಸರಿಗೆ (Police) ಹಿಡಿದು ಒಪ್ಪಿಸಿರುವ ಘಟನೆ ಕೊಡಗು (Kodagu) ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ರೇಷ್ಮೆ ಹಡ್ಲು ಹಾಡಿಯಲ್ಲಿ ನಡೆದಿದೆ.

     

    ಭಜರಂಗದಳ ಕಾರ್ಯಕರ್ತರು ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಹಾಡಿಯಲ್ಲಿ ಇರುವ ಆದಿವಾಸಿಗಳಿಗೆ ಎಳ್ಳುಬೆಲ್ಲ ಹಂಚಲು ಹೋಗಿದ್ದರು. ಈ ವೇಳೆ ಹಾಡಿಯ ಜನರನ್ನು ಒಂದೇ ಕಡೆ ಕೂರಿಸಿಕೊಂಡು ಬೈಬಲ್ ಬೋಧನೆಯನ್ನು ಮಾಡುತ್ತಿದ್ದ ಕೆಲ ಕ್ರಿಶ್ಚಿಯನ್ ವ್ಯಕ್ತಿಗಳನ್ನು ಭಜರಂಗದಳದ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ವ್ಯಕ್ತಿಗಳು ಪ್ರತಿ ಭಾನುವಾರ ಹಾಡಿಗಳಿಗೆ ಬಂದು ಬೈಬಲ್ ಬೋಧಿಸಿಕೊಂಡು ಹಾಡಿಯಲ್ಲಿ ನೆಲೆಸಿರುವ ಬಗ್ಗೆ ತಿಳಿದು ಬಂದಿದೆ. ಇದನ್ನೂ ಓದಿ: ಕಾಳಿ ಕೈಯಲ್ಲಿ ಸಿಗರೇಟ್ ವಿವಾದ : ಸುಪ್ರೀಂ ಮೊರೆ ಹೋದ ನಿರ್ದೇಶಕಿ ಲೀನಾ

    ಸುಮಾರು 500 ಕುಟುಂಬಗಳಲ್ಲಿ ಈಗಾಗಲೇ 250 ಮಂದಿಯನ್ನು ಮತಾಂತರ ಮಾಡಿಸಲಾಗಿದೆ ಎಂದು ಭಜರಂಗದಳದ ಕಾರ್ಯಕರ್ತರು ಅರೋಪಿದ್ದಾರೆ. ಅಲ್ಲದೇ ಪ್ರತಿ ಆದಿವಾಸಿಗಳ ಹಾಡಿಯಲ್ಲಿ ಬೈಬಲ್ ಪುಸ್ತಕವನ್ನು (Book) ಹಂಚಿ ಮುಗ್ಧ ಜನರನ್ನು ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿ ಐವರು ಕ್ರಿಶ್ಚಿಯನರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧಿಸಿದಂತೆ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದೆಹಲಿ ವಿಶ್ವವಿದ್ಯಾಲಯದ ಹಂಸರಾಜ್ ಕಾಲೇಜ್‌ ಹಾಸ್ಟೆಲ್‍ನಲ್ಲಿ ಮಾಂಸಾಹಾರ ಸೇವನೆ ನಿಷೇಧ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಂಬುಲೆನ್ಸ್ ಬಾರದೇ ಗರ್ಭಿಣಿಯನ್ನು ಮೂರುವರೆ ಕಿಮೀ ಡೋಲಿಯಲ್ಲೇ ಹೊತ್ತೊಯ್ದರು

    ಅಂಬುಲೆನ್ಸ್ ಬಾರದೇ ಗರ್ಭಿಣಿಯನ್ನು ಮೂರುವರೆ ಕಿಮೀ ಡೋಲಿಯಲ್ಲೇ ಹೊತ್ತೊಯ್ದರು

    ತಿರುವನಂತಪುರಂ: ಇಲ್ಲಿನ ಬುಡಕಟ್ಟು ಗ್ರಾಮಕ್ಕೆ ತಲುಪುವ ರಸ್ತೆ ಸಂಪೂರ್ಣ ಹಾಳಾಗಿದ್ದರಿಂದ ಅಂಬುಲೆನ್ಸ್ (Ambulance) ತಲುಪಲು ಸಾಧ್ಯವಾಗದೇ ಗರ್ಭಿಣಿಯನ್ನು (Pregnant Women) ಸುಮಾರು ಮೂರುವರೆ ಕಿಮೀ ವರೆಗೆ ಡೋಲಿಯಲ್ಲೇ (ತಾತ್ಕಾಲಿಕ ಸ್ಟ್ರೆಚರ್) ಹೊತ್ತೊಯ್ದ ಘಟನೆ ಕೇರಳದಲ್ಲಿ (Kerala) ನಡೆದಿದೆ.

    ಕೇರಳದ (Kerala) ಪಾಲಕ್ಕಾಡ್ ಪ್ರದೇಶದ ಅಟ್ಟಪಾಡಿ ತಾಲೂಕಿನ ಗ್ರಾಮದಲ್ಲಿ ರಸ್ತೆ ಹಾಳಾಗಿದ್ದರಿಂದ ಅಂಬುಲೆನ್ಸ್ ತಲುಪಲು ಸಾಧ್ಯವಾಗದೇ ಡೋಲಿ ಕಟ್ಟಿ ಮಹಿಳೆಯನ್ನು ಹೆಗಲಮೇಲೆ ಹೊತ್ತು ತಂದಿದ್ದಾರೆ. ಮುಖ್ಯರಸ್ತೆಗೆ ಬಂದ ನಂತರ ಅಂಬುಲೆನ್ಸ್ನಲ್ಲಿ ಆಸ್ಪತ್ರೆಗೆ (Hospital) ಕರೆದೊಯ್ಯಲಾಗಿದೆ. ಇದನ್ನೂ ಓದಿ: ಮುಂದುವರಿದ ಮಾಂಡಸ್ ಅಬ್ಬರ: ಇನ್ನೂ 3 ದಿನ ಮಳೆ, ಚಳಿ – ರಾಜ್ಯದ 15 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

    ಬುಡಕಟ್ಟು ಮಹಿಳೆ ಸುಮತಿ ಮುರುಕನ್ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ವೈದ್ಯರ ಪ್ರಕಾರ ಆಕೆಯ ಹೆರಿಗೆ ಮುಂದಿನ ವಾರ ನಡೆಯಬೇಕಿತ್ತು. ಆದರೂ ಮಧ್ಯರಾತ್ರಿ ಹೆರಿಗೆ ಕಾಣಿಸಿಕೊಂಡಿತ್ತು. ಬಳಿಕ ಕೊಟ್ಟತಾರಾ ಬುಡಕಟ್ಟು ಸ್ಪೆಷಾಲಿಟಿ ಆಸ್ಪತ್ರೆಯಿಂದ ಕಾಡುಕುಮಣ್ಣ ಗ್ರಾಮಕ್ಕೆ ಅಂಬುಲೆನ್ಸ್ ಕಳುಹಿಸಿಕೊಡುವಂತೆ ಕರೆ ಮಾಡಿದರು. ಆದ್ರೆ ಗ್ರಾಮಕ್ಕೆ ಬರುವ ರಸ್ತೆ ತೀರಾ ಹದಗೆಟ್ಟಿದ್ದರಿಂದ ಅಂಬುಲೆನ್ಸ್ ಮೂರುವರೆ ಕಿಮೀ ದೂರದಲ್ಲಿರುವ ಮುಖ್ಯರಸ್ತೆ ವರೆಗೆ ಮಾತ್ರ ಬರಲು ಸಾಧ್ಯವಾಯಿತು. ಇದನ್ನೂ ಓದಿ: ಪಿಕ್ನಿಕ್ ಮುಗಿಸಿ ಬರ್ತಿದ್ದ ಬಸ್ ಪಲ್ಟಿ – ಇಬ್ಬರು ಶಾಲಾ ವಿದ್ಯಾರ್ಥಿಗಳ ದುರ್ಮರಣ

    ಆದ್ದರಿಂದ ಸುಮತಿ ಸಂಬಂಧಿಕರೇ ಡೋಲಿಯನ್ನು ಕಟ್ಟಿ ಅದರಲ್ಲಿ ಆಕೆಯನ್ನು ಕೂರಿಸಿ ಕಾಡುದಾರಿಯಲ್ಲೇ ನಡೆದುಕೊಂಡು ಮುಖ್ಯರಸ್ತೆಗೆ ಬಂದರು. ನಂತರ ಅಂಬುಲೆನ್ಸ್ನಲ್ಲಿ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದೀಗ ಸುಮತಿ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ದೇಶವೇ ಪರಮೋಚ್ಛ ಎಂದು ಭಾವಿಸಿ – ರಾಜ್ಯಪಾಲರ ಕರೆ

    ದೇಶವೇ ಪರಮೋಚ್ಛ ಎಂದು ಭಾವಿಸಿ – ರಾಜ್ಯಪಾಲರ ಕರೆ

    ಬೆಂಗಳೂರು: ಬದುಕಿಗೆ ಅರ್ಥ ಕಲ್ಪಿಸಲು, ಸಾಮಾಜಿಕ ಅಸಮಾನತೆ, ಅನಿಷ್ಟ ಪದ್ಧತಿ, ವ್ಯಸನಗಳಿಂದ ದೂರವಿದ್ದು, ದೇಶವೇ ಪರಮೋಚ್ಛ ಎಂದು ಭಾವಿಸಿ, ದೇಶದ ಹಿತದೃಷ್ಟಿಯಿಂದ ಕೆಲಸ ಮಾಡಬೇಕು ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌‌ (Thawarchand Gehlot) ಕರೆ ನೀಡಿದರು.

    ನಗರದ ಯವನಿಕಾ ಸಂಭಾಂಗಣದಲ್ಲಿ ಕೇಂದ್ರ ಕ್ರೀಡಾ ಸಚಿವಾಲಯ, ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ ಸಂಘಟನೆ ವತಿಯಿಂದ ಆಯೋಜಿಸಿದ್ದ 14ನೇ ಬುಡಕಟ್ಟು ಯುವ ವಿನಿಮಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇದನ್ನೂ ಓದಿ: ಯಡಿಯೂರಪ್ಪರಿಂದ ಸಿದ್ದರಾಮಯ್ಯ ದುಡ್ಡು ಪಡೆದಿದ್ದಾರೆ – ಸಿಎಂ ಇಬ್ರಾಹಿಂ

    ಬುಡಕಟ್ಟು ಯುವ ವಿನಿಮಯ ಕಾರ್ಯಕ್ರಮದಿಂದ ಧಾರ್ಮಿಕ, ಸಾಂಸ್ಕೃತಿಕ, ಪ್ರಾಕೃತಿಕ ಮತ್ತು ಭೌಗೋಳಿಕ ಮಾಹಿತಿಯೊಂದಿಗೆ ನೋಡುವ, ಕೇಳುವ, ಓದುವ ಮತ್ತು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ನಾವು ಪರಸ್ಪರ ಅರ್ಥ ಮಾಡಿಕೊಳ್ಳಲು ಹಾಗೂ ದೇಶದ ಅಭಿವೃದ್ಧಿ ಮತ್ತು ಪ್ರಗತಿಯ ಬಗ್ಗೆ ತಿಳಿದುಕೊಳ್ಳಲು ಅವಕಾಶವನ್ನು ಪಡೆಯುತ್ತೇವೆ ಎಂದರು.

    ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಛತ್ತೀಸಗಡ, ಜಾರ್ಖಂಡ್, ಒರಿಸ್ಸಾ ಹಾಗೂ ಬಿಹಾರ ರಾಜ್ಯಗಳ ವಿದ್ಯಾರ್ಥಿಗಳಿಗೆ ಅಭಿವೃದ್ಧಿ ಹೊಂದಿದ ಕರ್ನಾಟಕ ರಾಜ್ಯದ ಭಾಷೆ, ಸಂಪ್ರದಾಯ, ಸಂಸ್ಕೃತಿ, ಉಡುಗೆ, ಆಹಾರ ಮತ್ತು ಇತರ ಅಂಶಗಳನ್ನು ಪರಿಚಯಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು. ಇದನ್ನೂ ಓದಿ: ಸೌಲಭ್ಯದ ಕೊರತೆಯಿಂದ ವಿಶ್ವಕರ್ಮರು ಮತಾಂತರವಾಗ್ತಿದ್ದಾರೆ: ಕೆ.ಪಿ ನಂಜುಂಡಿ ವಿಷಾದ

    ದೇಶದ ಪ್ರಧಾನ ಮಂತ್ರಿಗಳ ಚಿಂತನೆಯು “ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್” ಆಗಿದೆ. ಈ ಚಿಂತನೆಯೊಂದಿಗೆ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಬುಡಕಟ್ಟು ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಬಲೀಕರಣಕ್ಕಾಗಿ ನಿರ್ಧರಿಸಲಾಗಿದೆ. ಬುಡಕಟ್ಟು ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿವೆ. ಈ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆನೀಡಿದರು.

    ದೇಶದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಮತ್ತು ಈಗಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬಡತನದಿಂದ ಬಂದವರು. ಆದರೆ ಶ್ರದ್ಧೆ ಮತ್ತು ಕಠಿಣ ಪರಿಶ್ರಮದಿಂದ ಅವರು ದೇಶದ ಅತ್ಯುನ್ನತ ಸ್ಥಾನವನ್ನು ತಲುಪಿದರು. ಅವರ ಜೀವನ ಪರಿಚಯದಿಂದ ನೀವು ಸ್ಫೂರ್ತಿ ಪಡೆಯಬಹುದು ಎಂದು ತಿಳಿಸಿದರು.

    ಹವಾಮಾನ ಬದಲಾವಣೆ ಇಂದು ಜಾಗತಿಕ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು ನಾವು ಪರಿಸರ ಸಂರಕ್ಷಣೆಗಾಗಿ ಮರಗಳನ್ನು ನೆಡಬೇಕು. ಮರಗಳನ್ನು ಕಡಿಯದಂತೆ ಉಳಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ನಿಮ್ಮ ಪಾತ್ರ ಮಹತ್ವದ್ದು. ಬುಡಕಟ್ಟು ಯುವ ವಿನಿಮಯ ಕಾರ್ಯಕ್ರಮದ ಮೂಲಕ ಕೌಶಲ್ಯ ಅಭಿವೃದ್ಧಿ ಮತ್ತು ಕೈಗಾರಿಕೆ, ಹೊಸ ತಂತ್ರಜ್ಞಾನ, ತಂತ್ರಜ್ಞಾನ, ತಜ್ಞರನ್ನು ಆಲಿಸಿ ವೃತ್ತಿಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆಯುವುದು, ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡಿ ಮತ್ತು ಅದರ ಸಾಂಸ್ಕೃತಿಕ ಮತ್ತು ಭೌಗೋಳಿಕ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಬಹುದು. ಪರಿಚಯ ಮಾಡಿಕೊಳ್ಳುವ ಅವಕಾಶ ಸಿಗಲಿದೆ. ಈ ಮಾಹಿತಿಯು ನಿಮ್ಮ ಒಟ್ಟಾರೆ ಅಭಿವೃದ್ಧಿಯಲ್ಲಿ ಮತ್ತು ಹೊಸ ಉದ್ಯೋಗಾವಕಾಶಗಳನ್ನು ಪಡೆಯುವಲ್ಲಿ ಸಹಾಯಕವಾಗುತ್ತದೆ. ಕಾರ್ಯಕ್ರಮದಲ್ಲಿ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಅಮೆಜಾನ್ ಕಾಡಿನಲ್ಲಿ 26 ವರ್ಷ ಒಂಟಿಯಾಗಿ ಜೀವಿಸಿದ್ದ ಬುಡಕಟ್ಟು ವ್ಯಕ್ತಿ ಸಾವು

    ಅಮೆಜಾನ್ ಕಾಡಿನಲ್ಲಿ 26 ವರ್ಷ ಒಂಟಿಯಾಗಿ ಜೀವಿಸಿದ್ದ ಬುಡಕಟ್ಟು ವ್ಯಕ್ತಿ ಸಾವು

    ಬ್ರೆಸಿಲಿಯಾ: ಬ್ರೆಜಿಲ್‌ನ ದಟ್ಟ ಅಮೆಜಾನ್ ಕಾಡಿನಲ್ಲಿ 26 ವರ್ಷಗಳ ಕಾಲ ಒಂಟಿಯಾಗಿ ಜೀವನ ಸಾಗಿಸಿದ್ದ ಬುಡಕಟ್ಟು ಜನಾಂಗವೊಂದರ ಕಟ್ಟ ಕಡೆಯ ವ್ಯಕ್ತಿ ಸಾವನ್ನಪ್ಪಿದ್ದಾನೆ.

    ವಿಶ್ವದ ಏಕಾಂಗಿ ಮನುಷ್ಯ ಎಂದು ಕರೆಯಲಾಗುತ್ತಿದ್ದ ವ್ಯಕ್ತಿ, ಕಾಡಿನಲ್ಲಿ ಪ್ರಾಣಿಗಳನ್ನು ಹಿಡಿಯಲು ದೊಡ್ಡ ದೊಡ್ಡ ಗುಂಡಿಗಳನ್ನು ತೋಡುತ್ತಿದ್ದ. ಇದಕ್ಕಾಗಿ ಆತನನ್ನು ಮ್ಯಾನ್ ಆಫ್ ದಿ ಹೋಲ್ ಎಂದೂ ಕರೆಯಲಾಗುತ್ತಿತ್ತು. ಈತ ತನ್ನ ಗುಡಿಸಲಿನಲ್ಲಿ ಶನಿವಾರ ಶವವಾಗಿ ಪತ್ತೆಯಾಗಿದ್ದಾನೆ. ತನ್ನ 60ರ ವಯಸ್ಸಿನಲ್ಲಿ ಸ್ವಾಭಾವಿಕವಾಗಿಯೇ ಸಾವನ್ನಪ್ಪಿದ್ದಾನೆ ಎಂದು ವರದಿಗಳು ತಿಳಿಸಿವೆ.

    ಈ ಬುಡಕಟ್ಟು ವ್ಯಕ್ತಿಯ ಹೆಸರು, ಭಾಷೆ ಎಲ್ಲವೂ ಭಿನ್ನವಾಗಿದ್ದು, ಆತನ ಬಳಿ ಮನುಷ್ಯರು ಸುಳಿದಾಡಿದರೆ ಆತ ಅಲ್ಲಿಂದ ಓಡಿ ಹೋಗುತ್ತಿದ್ದ. ಆತನನ್ನು ಹಲವು ಬಾರಿ ಕಾಡಿನಿಂದ ಬಿಡಿಸಿ ನಗರಕ್ಕೆ ಕರೆದುಕೊಂಡು ಬರಲು ಪ್ರಯತ್ನಿಸಲಾಗಿದ್ದು, ವಿಫಲವಾಗಿತ್ತು. ಬಳಿಕ ಆತನನ್ನು ಸ್ವತಂತ್ರನಾಗಿ ಇರಲು ಬಿಡಲಾಗಿತ್ತು. ಇದನ್ನೂ ಓದಿ: ಇರಾಕ್‌ನಲ್ಲಿ ಭುಗಿಲೆದ್ದ ಪ್ರತಿಭಟನೆ – ಗುಂಡಿನ ದಾಳಿಗೆ 23 ಮಂದಿ ಸಾವು, 300 ಜನರಿಗೆ ಗಾಯ

    ವರದಿಗಳ ಪ್ರಕಾರ ಈ ವ್ಯಕ್ತಿಯ ಜನಾಂಗದ ಬಹುಪಾಲು ಜನರು 1970 ರಿಂದ 1980ರ ವೇಳೆ ಸಾವನ್ನಪ್ಪಿದ್ದರು. ಬಳಿಕ ಉಳಿದುಕೊಂಡಿದ್ದ 6 ಸದಸ್ಯರ ಕುಟುಂಬ 1995ರಲ್ಲಿ ಅಕ್ರಮ ಗಣಿಗಾರರ ದಾಳಿಗೆ ಬಲಿಯಾಗಿದ್ದರು. ಆ ದಾಳಿಯಲ್ಲಿ ಉಳಿದುಕೊಡ ಏಕೈಕ ವ್ಯಕ್ತಿ ಈತನಾಗಿದ್ದ. ಇದನ್ನೂ ಓದಿ: ಡ್ರಗ್ಸ್ ಖರೀದಿಗೆ ಫೇಕ್ ಐಡಿ ಬಳಸುತ್ತಿದ್ದ ಮೈಕಲ್ ಜಾಕ್ಸನ್

    ಈ ಬುಡಕಟ್ಟು ವ್ಯಕ್ತಿಯ ನಿಧನಕ್ಕೆ ಬುಡಕಟ್ಟು ಜನರ ಬಗ್ಗೆ ಅಧ್ಯಯನ ಮಾಡುವ ಸರ್ವೈವಲ್ ಇಂಟರ್‌ನ್ಯಾಷನಲ್ ಸಂಸ್ಥೆ ಕಂಬನಿ ಮಿಡಿದಿದೆ.

    Live Tv
    [brid partner=56869869 player=32851 video=960834 autoplay=true]

  • 80 ವರ್ಷಗಳ ನಂತರ ಬುಡಕಟ್ಟು ಕುಗ್ರಾಮದಲ್ಲಿ ಬೆಳಗಿತು ಸೌರಶಕ್ತಿ ಬೆಳಕು

    80 ವರ್ಷಗಳ ನಂತರ ಬುಡಕಟ್ಟು ಕುಗ್ರಾಮದಲ್ಲಿ ಬೆಳಗಿತು ಸೌರಶಕ್ತಿ ಬೆಳಕು

    ಅಗರ್ತಲಾ: ತ್ರಿಪುರದ ಖೋವೈ ಜಿಲ್ಲೆಯ ಸರ್ಖಿಪಾರ ಎಂಬ ದೂರದ ಬುಡಕಟ್ಟು ಕುಗ್ರಾಮದ ಜೀವನಶೈಲಿಯಲ್ಲಿ ದೊಡ್ಡ ಬದಲಾವಣೆಯಾಗಿದೆ. 80 ವರ್ಷಗಳ ಕಾಲ ಕತ್ತಲೆಯಲ್ಲಿದ್ದ ಈ ಬುಡಕಟ್ಟು ಜನರು ಈಗ ಸೌರಶಕ್ತಿಯ ಸಹಾಯದಿಂದ ಪ್ರಕಾಶಮಾನ ಬೆಳಕನ್ನು ಪಡೆಯುತ್ತಿದ್ದಾರೆ.

    ಈ ಬುಡಕಟ್ಟು ಪ್ರದೇಶದಲ್ಲಿ ಮಕ್ಕಳು ಸೂರ್ಯಾಸ್ತಮಾನದ ನಂತರ, ಮನೆಯಿಂದ ಹೊರಗೆ ಬರುವುದು ಕಷ್ಟವಾಗುತ್ತಿತ್ತು ಎಂದರೇ ನಂಬಲು ಅಸಾಧ್ಯ. ಆದರೆ ಇಲ್ಲಿರುವ ಬುಡಕಟ್ಟು ಜನರು ವಿದ್ಯುತ್ ಬದಲು ಬಿದಿರು ಆಧಾರಿತ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಬೆಳಕಿಗಾಗಿ ಉಪಯೋಗಿಸುತ್ತಾರೆ. ತಂಪಾದ ಗಾಳಿಗೆ ಬೀಸಣಿಗೆಗಳನ್ನು ಬಳಸುತ್ತಾರೆ. ಇದನ್ನೂ ಓದಿ: ವಿಜಯಪುರದಲ್ಲಿ ವಿಸ್ಮಯಕಾರಿಯಾಗಿ ಹೆಚ್ಚುತ್ತಿದೆ ಕೃಷ್ಣ ಮೃಗಗಳ ಸಂತತಿ 

    ಈ ಕುರಿತು ಮಾತನಾಡಿದ ಸ್ಥಳೀಯರು, ಇತ್ತೀಚಿನ ದಿನಗಳಲ್ಲಿ ಈ ರೀತಿಯ ಜೀವನವನ್ನು ಊಹಿಸಲೂ ಸಾಧ್ಯವಿಲ್ಲ. ಆದರೆ, ಸೌರ ವಿದ್ಯುತ್ ಯೋಜನೆಗೆ ಧನ್ಯವಾದಗಳು. ಈಗ ಕೆಲಸದ ಅವಧಿಯು ಹೆಚ್ಚಾಗಿದೆ. ವ್ಯಾಪಾರದ ಅವಧಿಯು ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚಿಸುತ್ತದೆ ಎಂದರು.

    ‘ಹಾಟ್ಸ್'(ಗ್ರಾಮ ಮಾರುಕಟ್ಟೆಗಳು) ಈಗ ಮುಸ್ಸಂಜೆಯ ನಂತರವೂ ತೆರೆದಿರುತ್ತವೆ. ಈಗ ಹಳ್ಳಿಯಿಂದ ಮಾರುಕಟ್ಟೆ ರಸ್ತೆಗಳು ಪ್ರಕಾಶಿಸಲ್ಪಟ್ಟಿವೆ. ಗ್ರಾಮಸ್ಥರು ಸುಲಭವಾಗಿ ದೂರದ ಊರಿಗೂ ಹೋಗುವುದಕ್ಕೆ ಸಹಾಯವಾಗುತ್ತೆ ಎಂದು ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ:  ಮಾರಾಟಕ್ಕಿದ್ದಾನೆ ವರ – ಮಾರುಕಟ್ಟೆಯಲ್ಲಿ ಹುಡುಗಿಯರಿಗೆ ಸಿಕ್ತಾನೆ ವರ 

    ರೈತ ಕಲಹಾ ರಿಯಾಂಗ್ ಈ ಕುರಿತು ಮಾತನಾಡಿದ ಅವರು, ಇದು ನಮಗೆ ಕನಸು ನನಸಾಗುವಂತಿದೆ. ಮುಸ್ಸಂಜೆಯ ನಂತರ ಸೀಮೆಎಣ್ಣೆ ದೀಪಗಳು ಮತ್ತು ಬ್ಯಾಟರಿ ಫ್ಲ್ಯಾಷ್‍ಲೈಟ್‍ಗಳು ಮಾತ್ರ ಬೆಳಕಿನ ಮೂಲಗಳಾಗಿದ್ದವು. ಹಳ್ಳಿಯು ರಾತ್ರಿಯಲ್ಲಿ ಭೂತದ ಸ್ಥಳದಂತೆ ಕಾಣುತ್ತಿತ್ತು. ಈಗ ಮಕ್ಕಳು ರಾತ್ರಿಯಲ್ಲಿ ಓದಬಹುದು, ನಾವು ಟಿವಿ ನೋಡಬಹುದು. ನಮ್ಮ ಜೀವನ ಬದಲಾಗಿದೆ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ವಿವಾದಿತ ತಾರೆ ರಾಕಿ ಸಾವಂತ್ ವಿರುದ್ಧ ಎಫ್‌ಐಆರ್‌ ದಾಖಲು

    ವಿವಾದಿತ ತಾರೆ ರಾಕಿ ಸಾವಂತ್ ವಿರುದ್ಧ ಎಫ್‌ಐಆರ್‌ ದಾಖಲು

    ಬುಡಕಟ್ಟು ಸಮುದಾಯದ ವೇಷ ಭೂಷಣ ತೊಟ್ಟು ಅಪಹಾಸ್ಯ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಬಾಲಿವುಡ್ ನ ವಿವಾದಿತ ತಾರೆ ರಾಕಿ ಸಾವಂತ್ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ಸದಾ ವಿವಾದಿಂದಲೇ ಸುದ್ದಿ ಆಗುವ ಈ ನಟಿ ವಿರುದ್ಧ ರಾಂಚಿಯಲ್ಲಿ ದೂರನ್ನು ದಾಖಲಿಸಲಾಗಿದೆ. ಇದನ್ನೂ ಓದಿ : ಕನ್ನಡ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ತಗೆದುಕೊಂಡು ಹೋದ ಮೊದಲಿಗರಾರು? ಹೀಗಿದೆ ನಟ ಜಗ್ಗೇಶ್ ಉತ್ತರ

    ವಾರಕ್ಕೊಂದು ಎಡವಟ್ಟು ಮಾಡಿಕೊಳ್ಳುತ್ತಲೇ ಇರುವ ರಾಕಿಗೆ ಈ ಬಾರಿ ಸರಿಯಾಗಿ ಬುದ್ಧಿ ಕಲಿಸಲೇಬೇಕೆಂದು ನಿರ್ಧರಿಸಿರುವ ಅಜಯ್ ಠಾಕ್ರೆ ಎಂಬುವವರು ಈ ದೂರು ನೀಡಿದ್ದು, ದೂರಿನಲ್ಲಿ ‘ರಾಕಿ ಬುಡಕಟ್ಟು ವೇಷಭೂಷಣಕ್ಕೆ ಅಪಮಾನ ಮಾಡಿದ್ದಾರೆ. ಅದನ್ನೂ ಅವರು ಅರೆನಗ್ನ ರೀತಿಯಲ್ಲಿ ಹಾಕಿಕೊಂಡಿದ್ದಾರೆ. ಇದರಿಂದ ನಮ್ಮ ಸಮುದಾಯದ ಮಹಿಳೆಯರಿಗೆ ಅವಮಾನ ಆಗಿದೆ. ನಾವು ಗೌರವಿಸುವ ಸಂಪ್ರದಾಯಕ್ಕೆ ಧಕ್ಕೆ ತರುವಂತಹ ಕೆಲಸವನ್ನು ರಾಕಿ ಮಾಡಿದ್ದಾರೆ. ಹಾಗಾಗಿ ಸೂಕ್ತ ಕ್ರಮ ತಗೆದುಕೊಳ್ಳಬೇಕೆಂದು’ ದೂರಿನಲ್ಲಿ ಬರೆಯಲಾಗಿದೆ. ಇದನ್ನೂ ಓದಿ :  ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ

    ಈ ಹಿಂದೆ ರಾಕಿ ಸಾವಂತ್ ಬುಡಕಟ್ಟು ಮಹಿಳೆಯರ ವೇಷಭೂಷಣ ಧರಿಸಿ ವಿಡಿಯೋ ಮಾಡಿದ್ದರು ಅದನ್ನು ಇನ್ಸ್ಟಾದಲ್ಲಿ ಹಾಕಿದ್ದರು. ಈ ವಿಡಿಯೋನೇ ಅಜಯ್ ಠಾಕ್ರೆ ಅವರ ಕಂಗೆಣ್ಣಿಗೆ ಗುರಿ ಮಾಡಿಸಿದೆ. ಎಫ್.ಐ.ಆರ್ ದಾಖಲಿಸುವಂತೆ ಮಾಡಿದೆ.

  • ವಿಎಚ್‍ಪಿ, ಭಜರಂಗದಳದಿಂದ ವನವಾಸಿಗಳ ಹಾಡಿಗಳಲ್ಲಿ ಸೇವೆ- ಅಗತ್ಯ ವಸ್ತುಗಳ ಪೂರೈಕೆ

    ವಿಎಚ್‍ಪಿ, ಭಜರಂಗದಳದಿಂದ ವನವಾಸಿಗಳ ಹಾಡಿಗಳಲ್ಲಿ ಸೇವೆ- ಅಗತ್ಯ ವಸ್ತುಗಳ ಪೂರೈಕೆ

    ಮೈಸೂರು: ಗ್ರಾಮಾಂತರ ಜಿಲ್ಲೆಯ ಎಚ್‍ಡಿ ಕೋಟೆ ತಾಲೂಕಿನ ಹುಸ್ಕೂರ್ ಹಾಡಿ, ದಡದಲ್ಲಿ ಹಾಡಿ, ಕಾಂತನ ಹಾಡಿ ಮತ್ತು ಕೆಬ್ಬೆಪುರ ವನವಾಸಿಗಳ ಹಾಡಿಗಳಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದಿಂದ ಸೇವಾಕಾರ್ಯ ನಡೆಸಲಾಯಿತು. ಹಾಡಿಯ ಜನರಿಗೆ ಬಟ್ಟೆ, ಗೋಧಿ ಹಿಟ್ಟು, ಬೆಡ್ ಶೀಟ್, ಮಕ್ಕಳ ಆಟದ ವಸ್ತುಗಳು, ಸೀರೆ, ಪಂಚೆ, ಟಿ-ಶರ್ಟ್ ಸೇರಿದಂತೆ ವಿವಿಧ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು. ಅಲ್ಲದೆ ಧರ್ಮದ ಬಗ್ಗೆ ಹಾಡಿಯ ಬಂಧುಗಳಿಗೆ ಜಾಗೃತಿ ಮೂಡಿಸಲಾಹಿತು.

    ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳದಿಂದ ವನವಾಸಿಗಳ ವಿವಿಧ ಹಾಡಿಗಳಲ್ಲಿ ಸೇವೆಕಾರ್ಯ.

    ದಿನಾಂಕ 31 ರಂದು ಮೈಸೂರು ಗ್ರಾಮಾಂತರ ಜಿಲ್ಲೆಯ ಎಚ್…

    Posted by Vishwa Hindu Parishad – Karnataka ,ವಿಶ್ವ ಹಿಂದು ಪರಿಷದ್ – ಕರ್ನಾಟಕ on Friday, April 2, 2021

    ಜಿಲ್ಲೆಯ ಸರಗೂರು ಎಚ್‍ಡಿ ಕೋಟೆ ತಾಲೂಕುಗಳ ಬಂಡಿಪುರ ಮತ್ತು ನಾಗರಹೋಳೆ ಅಭಾರಣ್ಯಗಳ ಸುತ್ತಲಿರುವ ಬುಡಕಟ್ಟಿಗೆ ಸೇರಿದ ಮುಗ್ದ ಜನರಿಗೆ ಆಮಿಷಗಳನ್ನು ಒಡ್ಡಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿರುತ್ತಾರೆ. ಸುಮಾರು 125 ಹಾಡಿಗಳಿದ್ದು, ಇವುಗಳಲ್ಲಿ ಶೇ.50ರಷ್ಟು ಜನಾಂಗವನ್ನು ಮತಾಂತರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ವಿಹೆಚ್‍ಪಿ ಮತ್ತು ಭಜರಂಗದಳದ ವತಿಯಿಂದ ಸಾಕಷ್ಟು ಕಾರ್ಯಕರ್ತರು ಇದರ ವಿರುದ್ಧ ತಿರುಗಿ ಬಿದ್ದಿದ್ದು, ಮರಳಿ ಹಿಂದೂ ಧರ್ಮಕ್ಕೆ ಕರೆತರುವ ಸತತ ಪ್ರಯತ್ನ ನಡೆಯುತ್ತಿದೆ. ಹಾಡಿ ಜನಾಂಗಕ್ಕೆ ಅವಶ್ಯಕತೆ ಇರುವ ಸಾಕಷ್ಟು ಸಾಮಗ್ರಿಗಳನ್ನು ದಾನಿಗಳಿಂದ ಪಡೆದು ಅವರಿಗೆ ತಲುಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಭಜರಂಗದಳ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣ ತಿಳಿಸಿದ್ದಾರೆ.

    ಕಾರ್ಯಕ್ರಮದಲ್ಲಿ ಪ್ರಾಂತ ಸಹ ಖಜಾಂಚಿ ದೀಪಕ್ ರಾಜಗೋಪಾಲ್ ಮತ್ತು ವಿಎಚ್‍ಪಿ ಗ್ರಾಮಾಂತರ ಜಿಲ್ಲಾ ಸ್ಥಳೀಯ ಕಾರ್ಯಕರ್ತರು ಇದ್ದರು.