Tag: Triangle love story

  • ಕೊಪ್ಪಳ ಯುವಕನ ಹತ್ಯೆಗೆ ಬಿಗ್ ಟ್ವಿಸ್ಟ್ – ಟ್ರಯಾಂಗಲ್ ಲವ್ ಸ್ಟೋರಿಗೆ ಹೆಣವಾದ್ನಾ?

    ಕೊಪ್ಪಳ ಯುವಕನ ಹತ್ಯೆಗೆ ಬಿಗ್ ಟ್ವಿಸ್ಟ್ – ಟ್ರಯಾಂಗಲ್ ಲವ್ ಸ್ಟೋರಿಗೆ ಹೆಣವಾದ್ನಾ?

    ಕೊಪ್ಪಳ: ಕಳೆದ ಎರಡು ದಿನಗಳ ಹಿಂದೆ ಕೊಪ್ಪಳದಲ್ಲಿ ನಡೆದ ಭೀಕರ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಟ್ರಯಾಂಗಲ್ ಲವ್‌ಗೆ (Triangle Love) ಯುವಕ ಕೊಲೆ ಮಾಡಲಾಗಿದೆ ಎಂಬ ವಿಚಾರ ತನಿಖೆಯಲ್ಲಿ ಬಯಲಾಗಿದ್ದು, ಪ್ರಕರಣದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಆ. 3ರಂದು ನಡುರಸ್ತೆಯಲ್ಲಿ 27 ವರ್ಷದ ಯುವಕನನ್ನ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಟ್ರಯಾಂಗಲ್ ಲವ್ ಸ್ಟೋರಿ ವಿಚಾರವಾಗಿ ನಡೆದ ಕೊಲೆ ಇದೀಗ ಸದ್ದು ಮಾಡುತ್ತಿದೆ. ಕೊಲೆ ಮಾಡಿದ ಓರ್ವ ಆರೋಪಿ ಠಾಣೆಗೆ ಶರಣಾಗಿದ್ದು, ಇದೀಗ ಪೊಲೀಸರು ಕೊಲೆಗೆ ಸಹಾಯ ಮಾಡಿದ ಮೂವರನ್ನು ಬಂಧಿಸಿದ್ದಾರೆ. ಕೊಲೆಗೆ ಪೊಲೀಸ್ ವರಿಷ್ಠಾಧಿಕಾರಿ ಹೊಸ ಟ್ವಿಸ್ಟ್ ಕೊಟ್ಟರೆ, ಹತ್ಯೆಯಾದ ಯುವಕನ ತಂದೆ ಮತ್ತೊಂದು ತಿರುವು ಟ್ವಿಸ್ಟ್ ಕೊಟ್ಟಿದ್ದಾರೆ. ಇನ್ನು ಇದೇ ಕೊಲೆಯನ್ನ ರಾಜಕೀಯವಾಗಿ ಬಳಸಿಕೊಳ್ಳಲು ರಾಜಕೀಯ ನಾಯಕರು ಮುಂದಾಗಿದ್ದಾರೆ. ಇದನ್ನೂ ಓದಿ: ಉತ್ತರಕಾಶಿ ಮೇಘಸ್ಫೋಟ | ಕೊಚ್ಚಿ ಹೋದ ಗ್ರಾಮ – ಹಲವು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಣೆ

    ಹಿಂದೂ ಯುವಕ ಗವಿಸಿದ್ದಪ್ಪನನ್ನು ಸಾಧಿಕ್ ಎಂಬ ಅನ್ಯಕೋಮಿನ ಯುವಕ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿದ್ದ. ಬಳಿಕ ತಾನೇ ಪೊಲೀಸರಿಗೆ ಶರಣಾಗಿದ್ದ. ಹತ್ಯೆಯಾದ ಗವಿಸಿದ್ದಪ್ಪ, ಸಾಧಿಕ್ ಪ್ರೀತಿಸುತ್ತಿದ್ದ ಹುಡುಗಿಗೆ ತೊಂದರೆ ಕೊಟ್ಟಿದ್ದ. ಅದಕ್ಕಾಗಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ. ಅಸಲಿಗೆ ಇದು ಟ್ರಯಾಂಗಲ್ ಲವ್ ಸ್ಟೋರಿಗಾಗಿ ನಡೆದ ಕೊಲೆ ಎಂಬುದು ಗೊತ್ತಾಗಿದೆ. ಸಾಧಿಕ್ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದ. ಆದ್ರೆ ಆಕೆ ಸಾಧಿಕ್‌ನೊಂದಿಗೆ ಬ್ರೇಕಪ್ ಮಾಡಿಕೊಂಡು, ಗವಿಸಿದ್ದಪ್ಪನನ್ನು ಪ್ರೀತಿಸುತ್ತಿದ್ದಳು. ಗವಿಸಿದ್ದಪ್ಪನನ್ನೇ ಮದುವೆಯಾಗುವುದಾಗಿ ಓಡಿ ಹೋಗಿದ್ದಳು. ಅಪ್ರಾಪ್ತೆಯಾಗಿದ್ದ ಕಾರಣ ಗವಿಸಿದ್ದಪ್ಪನಿಗೆ ಹಿರಿಯರು ಬುದ್ಧಿವಾದ ಹೇಳಿ ಸುಮ್ಮನಿರಿಸಿದ್ದರು. ಇದಾದ ಮೇಲೆ ಆತನೂ ಕೂಡ ಸೈಲೆಂಟ್ ಆಗಿ ಬಿಟ್ಟಿದ್ದ. ಆದರೆ ಭಾನುವಾರ ರಾತ್ರಿ ಸಾಧಿಕ್ ಮಾರಕಾಸ್ತçಗಳಿಂದ ಗವಿಸಿದ್ದಪ್ಪನನ್ನು ಕೊಚ್ಚಿ ಕೊಲೆಗೈದಿದ್ದ. ಇದನ್ನೂ ಓದಿ: ಧರ್ಮಸ್ಥಳ ಶವಗಳ ಹೂತಿಟ್ಟ ಕೇಸ್ – ಇಂದು ಕೊನೆಯ ಪಾಯಿಂಟ್‌ನಲ್ಲಿ ಶೋಧ

    ಇನ್ನು ಗವಿಸಿದ್ದಪ್ಪ ಕೊಲೆಯನ್ನೇ ಇದೀಗ ರಾಜಕೀಯ ಅಸ್ತ್ರ ಮಾಡಿಕೊಳ್ಳಲು ರಾಜಕೀಯ ನಾಯಕರು ರೆಡಿಯಾಗಿದ್ದಾರೆ. ಕೊಲೆಯಾದ ಗವಿಸಿದ್ದಪ್ಪ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಯುವಕನಾದ್ದರಿಂದ ಕೊಲೆಯನ್ನು ಈ ಸಮುದಾಯ ಗಂಭೀರವಾಗಿ ಪರಿಗಣಿಸಿದೆ. ಅಮಾಯಕ ಯುವಕನ ಕೊಲೆ ಖಂಡಿಸಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡೋಕೆ ವಾಲ್ಮೀಕಿ ಸಮುದಾಯದವರು ಚಿಂತನೆ ಮಾಡಿದ್ದಾರೆ. ಇದನ್ನೂ ಓದಿ: ಹವಾಮಾನ ವೈಪರೀತ್ಯ – ಸಿಎಂ ರಾಯಚೂರು ಪ್ರವಾಸ ರದ್ದು

    ಗವಿಸಿದ್ದಪ್ಪನ ಮನೆಗೆ ಶ್ರೀರಾಮುಲು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು. ಈ ವೇಳೆ ಗವಿಸಿದ್ದಪ್ಪನ ತಾಯಿ ರಾಮುಲು ಕಾಲಿಗೆ ಬಿದ್ದು ಗೋಳಾಡಿದ್ದರು. ಅಲ್ಲದೇ ಸಹೋದರಿಯರು ಸಹ ನ್ಯಾಯಕ್ಕಾಗಿ ಕಣ್ಣೀರು ಹಾಕಿದ್ದರು. ಮನೆಗೆ ಭೇಟಿ ನೀಡಿದ ಬಳಿಕ ರಾಮುಲು ಇಡೀ ಪ್ರಕರಣಕ್ಕೆ ಹೊಸ ತಿರುವು ಕೊಟ್ಟಿದ್ದಾರೆ. ಹಂತಕ ಪಿಎಫ್‌ಐ ಸಂಘಟನೆಯುಲ್ಲಿದ್ದ ಎಂದು ಆರೋಪಿಸಿದ್ದಾರೆ. ತನ್ನ ಮಗನ ಸಾವಿಗೆ ಕಾರಣಳಾದ ಯುವತಿ ವಿರುದ್ಧವೂ ದೂರು ನೀಡೋದಾಗಿ ಗವಿಸಿದ್ದಪ್ಪನ ತಂದೆ ಹೇಳಿದ್ದಾರೆ.

    ಒಟ್ಟಾರೆ, ಇಡೀ ಪ್ರಕರಣವನ್ನ ಪೊಲೀಸರು ದಿಕ್ಕು ತಪ್ಪಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

  • ಮಚ್ಚಿನಿಂದ ಕೊಲೆಗೈದ ಕೇಸ್‌ಗೆ ಟ್ವಿಸ್ಟ್ – ಪ್ರಿಯತಮೆಗಾಗಿ ಮಾಜಿ ಲವ್ವರ್‌ನನ್ನೇ ಕೊಂದ ಪ್ರಿಯಕರ

    ಮಚ್ಚಿನಿಂದ ಕೊಲೆಗೈದ ಕೇಸ್‌ಗೆ ಟ್ವಿಸ್ಟ್ – ಪ್ರಿಯತಮೆಗಾಗಿ ಮಾಜಿ ಲವ್ವರ್‌ನನ್ನೇ ಕೊಂದ ಪ್ರಿಯಕರ

    -ಬಳಿಕ ಪೊಲೀಸರಿಗೆ ಶರಣಾದ ಆರೋಪಿ

    ಕೊಪ್ಪಳ: ನಡುರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಯುವಕನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆಗೆ ಟ್ವಿಸ್ಟ್ ಸಿಕ್ಕಿದೆ. ಪ್ರಿಯತಮೆಯನ್ನು ತಾನೇ ಮದುವೆಯಾಗಬೇಕೆಂದು ಆಕೆಯ ಮಾಜಿ ಪ್ರಿಯಕರನನ್ನು ಹತೈಗೈದಿರುವುದಾಗಿ ವಿಷಯ ಬೆಳಕಿಗೆ ಬಂದಿದೆ.

    ಭಾನುವಾರ (ಆ.3) ರಾತ್ರಿ ಕೊಪ್ಪಳದ ಬಹದ್ದೂರ ಬಂಡಿ ರಸ್ತೆಯಲ್ಲಿರುವ ನಿರ್ಮಿತಿ ಕೇಂದ್ರದ ಸಮೀಪ ಮಸೀದಿ ಮುಂದೆ ಕೊಪ್ಪಳದ ಸೈಲಾನ್‌ಪುರ ಓಣಿಯ ಮೂಲದ ಆರೋಪಿ ಸಾದಿಕ್ ಗವಿಸಿದ್ಧಪ್ಪ ನಾಯಕ(27) ಎಂಬಾತನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದ. ಬಳಿಕ ಆರೋಪಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.ಇದನ್ನೂ ಓದಿ: ಸಾರಿಗೆ ಮುಷ್ಕರ ನಿಲ್ಲಿಸಲು KSRTC, BMTC ಕೊನೆಯ ಕಸರತ್ತು

    ಘಟನೆ ಸಂಬಂಧ ಮೃತನ ಕುಟುಂಬಸ್ಥರು ಸಾದಿಕ್ ಮತ್ತು ಇತರ ಮೂವರು ಸೇರಿ ಕೊಲೆ ಮಾಡಿದ್ದಾಗಿ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ನಾಲ್ವರ ವಿರುದ್ಧ ಬಿಎನ್‌ಸ್ 103(1) 2023 ಹಾಗೂ ಎಸ್ಸಿ/ಎಸ್ಟಿ ಕಾಯ್ದೆ 1989ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದಾಗ ಎರಡು ಮಚ್ಚುಗಳು ಪತ್ತೆಯಾಗಿದ್ದವು.

    ಕೊಲೆ ನಡೆದಿದ್ದು ಹೇಗೆ?
    ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಮೃತ ಗವಿಸಿದ್ದಪ್ಪ ನಾಯಕ ಬೈಕ್ ನಿಲ್ಲಿಸಿಕೊಂಡು ನಿಂತಿದ್ದ. ಈ ವೇಳೆ ಆತನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ಬಳಿ ಸಾದಿಕ್ ಪೊಲೀಸರಿಗೆ ಶರಣಾಗಿ ನಾನೊಬ್ಬನೇ ಕೊಲೆ ಮಾಡಿರುವುದಾಗಿ ತಿಳಿಸಿದ್ದ.

    ಹಿನ್ನೆಲೆ ಏನು?
    ಕಳೆದ ಕೆಲ ದಿನಗಳ ಹಿಂದೆ ಕೃಷಿ ಸಾಮಗ್ರಿ ಮಾರಾಟ ಮಳಿಗೆಯಲ್ಲಿ ಗವಿಸಿದ್ದಪ್ಪ ನಾಯಕ ಮತ್ತು ಬಾನು ಕೆಲಸ ಮಾಡುತ್ತಿದ್ದರು. ಕೆಲಸ ಮಾಡುವ ಜಾಗದಲ್ಲಿ ಪರಿಚಯ ಆಗಿದ್ದ ಇವರು, ನಂತರ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ಇಷ್ಟೇ ಅಲ್ಲದೇ ಸುಮಾರು 7 ತಿಂಗಳ ಹಿಂದೆ ಮೃತ ಗವಿಸಿದ್ದಪ್ಪ ಮತ್ತು ಆಗ ಅಪ್ರಾಪ್ತೆ ಆಗಿದ್ದ ಬಾನು ಮದುವೆಯಾಗಲು ಓಡಿ ಹೋಗಿದ್ದರು. ಆಗ ಬಾನು ಅಪ್ರಾಪ್ತೆ ಆಗಿದ್ದರಿಂದ ರಾಜಿ ಪಂಚಾಯಿತಿ ನಡೆದು, ಇವರನ್ನು ಬೇರೆ ಮಾಡಿದ್ದರು. ಘಟನೆ ನಂತರ ಇಬ್ಬರನ್ನೂ ಕೆಲಸ ಬಿಡಿಸಲಾಗಿತ್ತು. ಇದೇ ವೇಳೆ ಬಾನು ಆರೋಪಿ ಸಾದಿಕ್‌ನನ್ನು ಪ್ರೀತಿಸಿದ್ದಳು. ಜೊತೆಗೆ ಗವಿಸಿದ್ದಪ್ಪನ ಜೊತೆಗೂ ಪ್ರೀತಿ ಮುಂದುವರೆದಿತ್ತು.

    ಸ್ವಲ್ಪ ದಿನಗಳ ಬಳಿಕ ಆರೋಪಿ ಸಾದಿಕ್‌ಗೆ ಗವಿಸಿದ್ದಪ್ಪ ಹಾಗೂ ಬಾನು ಪ್ರೀತಿ ಬಗ್ಗೆ ವಿಷಯ ಗೊತ್ತಾಗಿತ್ತು. ಇದ್ರಿಂದ ರೊಚ್ಚಿಗೆದ್ದ ಸಾದಿಕ್ ಗವಿಸಿದ್ದಪ್ಪನಿಗೆ ತಕರಾರು ಮಾಡಿದ್ದ. ಇದಕ್ಕೆಲ್ಲಾ ತಲೆಕಡೆಸಿಕೊಳ್ಳದ ಗವಿಸಿದ್ದಪ್ಪ ಹಾಗೆಯೇ ಪ್ರೀತಿ ಮುಂದುವರೆಸಿದ್ದ. ಕೊನೆಗೆ ನಾನೇ ಬಾನು ಅನ್ನು ಮದುವೆಯಾಗಬೇಕೆಂದು ಸಾದಿಕ್ ಮಚ್ಚಿನಿಂದ ಕೊಚ್ಚಿ ಗವಿಸಿದ್ದಪ್ಪ ನಾಯಕನನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.ಇದನ್ನೂ ಓದಿ: ರಮ್ಯಾಗೆ ಅಶ್ಲೀಲ ಮೆಸೇಜ್ ಕೇಸ್: ಪ್ರಜ್ವಲ್ ಕಿಡಿ

  • ತ್ರಿಕೋನ ಪ್ರೇಮ ಪ್ರಕರಣ – ರೆಡ್ ಹ್ಯಾಂಡಾಗಿ ಗೆಳೆಯನೊಂದಿಗೆ ಸಿಕ್ಕಿಬಿದ್ದ ಪ್ರೇಯಸಿಗೆ ನಡು ರಸ್ತೆಯಲ್ಲೇ ಚಾಕು ಇರಿದ ಪ್ರಿಯಕರ

    ತ್ರಿಕೋನ ಪ್ರೇಮ ಪ್ರಕರಣ – ರೆಡ್ ಹ್ಯಾಂಡಾಗಿ ಗೆಳೆಯನೊಂದಿಗೆ ಸಿಕ್ಕಿಬಿದ್ದ ಪ್ರೇಯಸಿಗೆ ನಡು ರಸ್ತೆಯಲ್ಲೇ ಚಾಕು ಇರಿದ ಪ್ರಿಯಕರ

    ಮಡಿಕೇರಿ: ಕೊಡಗಿನಲ್ಲಿ ನಡೆದ ತ್ರಿಕೋನ ಪ್ರೇಮ ಪ್ರಕರಣ ಇಡೀ ನಗರವನ್ನೇ ಬೆಚ್ಚಿ ಬೀಳಿಸಿದೆ. ರೊಚ್ಚಿಗೆದ್ದ ಪ್ರಿಯಕರನೋರ್ವ ತನ್ನ ಪ್ರೇಯಸಿ ಮತ್ತು ಆಕೆಯೊಂದಿಗೆ ಇದ್ದ ಯುವಕನಿಗೆ ಚಾಕು ಇರಿದ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಪ್ರಸಿದ್ಧ ಪ್ರವಾಸಿತಾಣ ಕಾವೇರಿ ನಿಸರ್ಗಧಾಮದಲ್ಲಿ ನಡೆದಿದೆ.

    ಘಟನೆಯಲ್ಲಿ ಗಾಯಗೊಂಡ ಯುವಕ ಮತ್ತು ಯುವತಿ ಇಬ್ಬರು ಕುಶಾಲನಗರ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಚಾಕು ಇರಿದ ಯುವಕ ಕುಶಾಲನಗರದ ಹೋಟೆಲ್ ಸಪ್ಲೆಯರ್ ಎಂದು ತಿಳಿದುಬಂದಿದೆ. ಈ ಸಂಬಂಧ ಇದೀಗ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ತ್ರಿವರ್ಣ ಧ್ವಜ ಭಾರತೀಯರಿಗಷ್ಟೇ ಅಲ್ಲ, ವಿದೇಶದಲ್ಲಿರುವ ಪ್ರಜೆಗಳಿಗೂ ರಕ್ಷಣಾತ್ಮಕ ಗುರಾಣಿ: ಮೋದಿ ಬಣ್ಣನೆ

    ಏನ್ನಿದು ಪ್ರಕರಣ?
    ಕಳೆದ ನಾಲ್ಕು ವರ್ಷದಿಂದ ಯುವಕನೋರ್ವ ಕಾಲೇಜಿಗೆ ಹೋಗುತ್ತಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ನಾಲ್ಕು ವರ್ಷದಿಂದ ಪ್ರೀತಿ ಮಾಡಿದ ಯುವತಿ, ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ವಿಷಯಗಳಿಗೆ ಪ್ರಿಯಾಕರನೊಂದಿಗೆ ಗಲಾಟೆ ಮಾಡುತ್ತಿದ್ದಳು ಎನ್ನಲಾಗಿದೆ. ಕುಶಾಲನಗರದ ಹೋಟೆಲ್ ಒಂದರಲ್ಲಿ ಸಪ್ಲೆಯರ್ ಆಗಿ ಕೆಲಸ ಮಾಡುತ್ತಿದ್ದ ಯುವಕ ದಿನ ನಿತ್ಯ ಫೋನ್ ಮಾಡಿ ಯುವತಿಯ ಯೋಗ ಕ್ಷೇಮ ವಿಚಾರಿಸುತ್ತಿದ್ದ. ಅದರಂತೆ ಇಂದು ಕೂಡ ಕರೆ ಮಾಡಿ ಯೋಗ ಕ್ಷೇಮ ವಿಚಾರಿಸುವಾಗ ಎಲ್ಲಿದ್ಯಾ  ಎಂದು ಯುವಕ ಕೇಳಿದ್ದಾನೆ. ಇದಕ್ಕೆ ಯುವತಿ ತಾನು ಕಾಲೇಜಿಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾಳೆ. ಆದರೆ ಅನುಮಾನಗೊಂಡ ಯುವಕ ಇಂದು ಕುಶಾಲನಗರ ಕಾವೇರಿ ನಿಸರ್ಗಧಾಮಕ್ಕೆ ಹೋಗಿ ಹುಡುಕಾಟ ನಡೆಸಿದಾಗ ಈ ವೇಳೆ ಯುವತಿ ಮತ್ತೋರ್ವ ಯುವಕನೊಂದಿಗೆ ಇರುವುದನ್ನು ಕಂಡು ತನ್ನೊಂದಿಗೆ ಕಾಲೇಜಿಗೆ ಹೋಗುವುದಾಗಿ ಹೇಳಿ ಇಲ್ಲಿ ಮತ್ತೋರ್ವನ ಜೊತೆ ಇದ್ಯಾ ಎಂದು ಪ್ರಿಯಕರ ಗಲಾಟೆ ಮಾಡಿದ್ದಾನೆ.

    ಬಳಿಕ ಮೂವರು ಜಗಳವಾಡಿದ್ದಾರೆ. ಅಲ್ಲದೇ ತನ್ನೊಂದಿಗೆ ಇದ್ದ ಚಾಕುವನ್ನು ತೆಗೆದು ಯುವಕ, ಯುವತಿಗೆ ಪ್ರಿಯಕರ ಚುಚ್ಚಿದ್ದಾನೆ. ಚಾಕು ಇರಿಸಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಯುವಕ, ಯುವತಿ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಾಕು ಇರಿದ ಯುವಕ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಇದನ್ನೂ ಓದಿ: ಬಾರ್ ಓಪನ್ ಆದ ಒಂದೇ ವರ್ಷಕ್ಕೆ ಏಳಕ್ಕೂ ಹೆಚ್ಚು ಮಂದಿ ಸಾವು – ಬಾರ್ ಬಂದ್ ಮಾಡುವಂತೆ ಉಗ್ರ ಹೋರಾಟ

    ಸದ್ಯ ಯುವಕ, ಯುವತಿ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಕುಶಾಲನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ತ್ರಿಕೋನ ಪ್ರೇಮ ಪ್ರಕರಣವನ್ನು ಕುಶಾಲನಗರದ ಗ್ರಾಮಾಂತರ ಠಾಣಾ ಪೊಲೀಸರು ದಾಖಲಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತ್ರಿಕೋನ ಪ್ರೇಮ ಪ್ರಕರಣದಲ್ಲಿ ಯುವಕನ ದಾರುಣ ಅಂತ್ಯ!

    ತ್ರಿಕೋನ ಪ್ರೇಮ ಪ್ರಕರಣದಲ್ಲಿ ಯುವಕನ ದಾರುಣ ಅಂತ್ಯ!

    ಮಂಗಳೂರು: ತ್ರಿಕೋನ ಪ್ರೇಮ ಪ್ರಕರಣದಲ್ಲಿ ಕಲಹ ಉಂಟಾಗಿ ಆತ್ಮಹತ್ಯೆ ಮಾಡಲು ಮುಂದಾದ ಪ್ರೇಯಸಿಯನ್ನು ರಕ್ಷಿಸಲು ಹೋದ ಯುವಕ ತಾನೇ ಬಲಿಯಾದ ಘಟನೆ ಮಂಗಳೂರು ನಗರ ಹೊರವಲಯದ ಸೋಮೇಶ್ವರ ಬೀಚ್‍ನಲ್ಲಿ ನಡೆದಿದೆ. ಮುನ್ನೂರು ಗ್ರಾಮದ ಉಳಿಯ ನಿವಾಸಿ ಲಾಯ್ಡ್ ಡಿಸೋಜ (26) ಸಮುದ್ರಪಾಲಾದ ಯುವಕ.

    ಮೃತ ಲಾಯ್ಡ್ ಡಿಸೋಜ ಇಬ್ಬರು ಯುವತಿಯರನ್ನು ಪ್ರೀತಿಸುತ್ತಿದ್ದ. ಈ ಬಗ್ಗೆ ಕಲಹ ಉಂಟಾದಾಗ ಶುಕ್ರವಾರ ಸಂಜೆ ಸೋಮೇಶ್ವರ ಬೀಚ್‍ನಲ್ಲಿ ಮಾತುಕತೆ ನಡೆಸಲು ಮೂವರು ತೆರಳಿದ್ದರು. ಲಾಯ್ಡ್ ಪ್ರೇಯಸಿಯರಾದ ಅಶ್ವಿತಾ ಪೆರಾವೊ ಹಾಗೂ ಡಾಕ್ಲಿನ್ ನಡುವೆ ಮಾತುಕತೆ ವೇಳೆ ಜಗಳ ಏರ್ಪಟ್ಟಿದ್ದು, ಅಶ್ವಿತಾ ನೊಂದು ಸಮುದ್ರಕ್ಕೆ ಹಾರಿದ್ದಾರೆ. ಇದನ್ನೂ ಓದಿ: ಕಚ್ಚಾ ಬದಾಮ್ ಹಾಡಿ ಟ್ರೋಲಾದ ರಾನು ಮಂಡಲ್

    ಆಕೆಯನ್ನು ರಕ್ಷಿಸಲು ಲಾಯ್ಡ್ ಕೂಡಾ ಸಮುದ್ರಕ್ಕೆ ಹಾರಿದ್ದ. ಈ ವೇಳೆ ಘಟನೆಯನ್ನು ಗಮನಿಸಿದ ಸ್ಥಳೀಯರು ಅವರಿಬ್ಬರನ್ನು ರಕ್ಷಿಸಲು ಮುಂದಾಗಿದ್ದಾರೆ. ಅಶ್ವಿತಾಳನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ಲಾಯ್ಡ್‍ನನ್ನು ದಡಕ್ಕೆ ತರುವಷ್ಟರಲ್ಲಿ ಆತ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಮರಿಗಳೊಂದಿಗೆ ಪ್ರವಾಸಿಗರನ್ನು ಅಡ್ಡಹಾಕಿದ ಆನೆಗಳು – ಕೆ.ಗುಡಿ ಸಫಾರಿ ವೇಳೆ ಗಜ ಪಡೆ ಎಂಟ್ರಿ

    ಘಟನೆಯ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹಾಸನದಲ್ಲೊಂದು ತ್ರಿಕೋನ ಪ್ರೇಮ ಕಥೆ – ವಿಷ ಸೇವಿಸಿದವಳ ಆಯ್ಕೆ ಬಳಿಕ ಮತ್ತೊಬ್ಬಳು ಕೊಟ್ಟಿದ್ದೇಕೆ ಎಚ್ಚರಿಕೆ.?

    ಹಾಸನದಲ್ಲೊಂದು ತ್ರಿಕೋನ ಪ್ರೇಮ ಕಥೆ – ವಿಷ ಸೇವಿಸಿದವಳ ಆಯ್ಕೆ ಬಳಿಕ ಮತ್ತೊಬ್ಬಳು ಕೊಟ್ಟಿದ್ದೇಕೆ ಎಚ್ಚರಿಕೆ.?

    ಹಾಸನ: ನನಗೆ ಆದ ಮೋಸಕ್ಕೆ ಅವನನ್ನು ಮಾತ್ರ ಸುಮ್ಮನೆ ಬಿಡಲ್ಲ ಎಂದು ತನ್ನ ಪ್ರಿಯಕರನನ್ನು ಮದುವೆಯಾದ ಹುಡುಗಿಗೆ ಭಗ್ನ ಪ್ರೇಮಿಯೊಬ್ಬಳು ಎಚ್ಚರಿಕೆ ನೀಡಿ ಹೋದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರಲ್ಲಿ ನಡೆದಿದೆ.

    ಸಕಲೇಶಪುರ ಮೂಲದ ಯುವಕನೊಬ್ಬ ಇಬ್ಬರು ಯುವತಿಯರನ್ನು ಪ್ರೀತಿಸಿದ್ದನಂತೆ. ಆದರೆ ಯುವಕ ಇಬ್ಬರನ್ನು ಪ್ರೀತಿಸುತ್ತಿರುವ ವಿಷಯ ಯುವತಿಯರಿಗೆ ತಿಳಿದಿರಲಿಲ್ಲ. ಆದರೆ ಇಬ್ಬರು ಯುವತಿಯರು ಏಕಕಾಲದಲ್ಲಿ ತಮ್ಮನ್ನು ಮದುವೆಯಾಗುವಂತೆ ಯುವಕನ ಬಳಿ ಜಗಳ ಮಾಡಿದ್ದಾರೆ. ಈ ವೇಳೆ ತ್ರಿಕೋನ ಪ್ರೇಮ ಕಥೆ ಬಯಲಾಗಿದೆ.


    ಇಬ್ಬರೂ ಯುವತಿಯರು ತನ್ನನ್ನೇ ಮದುವೆಯಾಗುವಂತೆ ಪಟ್ಟು ಹಿಡಿದಿದ್ದರಿಂದ ಪರಿಚಯಸ್ಥರು ರಾಜಿ, ಪಂಚಾಯತಿ ಮಾಡಲು ಮುಂದಾದರೂ ಫಲಕಾರಿಯಾಗಿಲ್ಲ. ಇಬ್ಬರಲ್ಲಿ ಒಬ್ಬಳು ಯುವತಿ ವಿಷ ಸೇವಿಸಿ ಅದೃಷ್ಟವಶಾತ್ ಬದುಕಿ ಬಂದಿದ್ದಾಳೆ. ಇಷ್ಟೆಲ್ಲಾ ಅವಾಂತರದ ನಂತರ ಇಬ್ಬರ ಹೆಸರನ್ನು ಚೀಟಿಯಲ್ಲಿ ಬರೆದು ಹಾಕುತ್ತೇವೆ. ಯಾರ ಹೆಸರು ಬರುತ್ತದೆಯೋ ಆ ಹುಡುಗಿಯನ್ನು ಯುವಕ ವರಿಸುತ್ತಾನೆ ಎಂದು ಪರಿಚಯಸ್ಥರು, ಸಂಬಂಧಿಕರು ತೀರ್ಮಾನ ಮಾಡಿದ್ದಾರೆ. ಇದನ್ನೂ ಓದಿ: ಮೈಸೂರಿನ ದರೋಡೆ, ಶೂಟ್‍ಔಟ್ ಪ್ರಕರಣ- ಖತರ್ನಾಕ್ ಬಾಂಬೆ ಬುಡ್ಡಾ ಅಂದರ್

    ಈ ವೇಳೆ ಒಂದು ನಿರ್ಧಾರಕ್ಕೆ ಬಂದ ಯುವಕ ತನಗಾಗಿ ವಿಷ ಸೇವಿಸಿ ಬದುಕಿ ಬಂದ ಯುವತಿಯನ್ನು ಮದುವೆಯಾಗುವುದಾಗಿ ತಿಳಿಸಿದ್ದಾನೆ. ಇದರಿಂದ ಕೋಪಗೊಂಡ ಮತ್ತೊಬ್ಬ ಯುವತಿ ಯುವಕನ ಕೆನ್ನೆಗೆ ಬಾರಿಸಿದ್ದಾಳೆ. ನಂತರ ಯುವಕ ಮದುವೆಯಾಗಲು ನಿರ್ಧರಿಸಿದ ಯುವತಿ ಬಳಿ ಬಂದು, ನನಗೆ ನಿನ್ನ ಮೇಲೆ ಕೋಪವಿಲ್ಲ. ಮನಸ್ಸಲ್ಲಿ ಏನೂ ಇಟ್ಟುಕೊಳ್ಳಬೇಡ. ಎಲ್ಲಿಯಾದರೂ ಸಿಕ್ಕಾಗ ಮಾತನಾಡಿಸು. ನಿನ್ನ ಬದುಕು ಚೆನ್ನಾಗಿರಲಿ ಎಂದಿದ್ದಾಳೆ. ಆದರೆ ನನಗೆ ಮೋಸ ಮಾಡಿದವನನ್ನು ಮಾತ್ರ ಸುಮ್ಮನೆ ಬಿಡಲ್ಲ ಎಂದು ಯುವತಿ ಹೊರಟು ಹೋಗಿದ್ದಾಳೆ. ಈ ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೆ ಪ್ರಕರಣದ ವಿಡಿಯೋ ಮಾತ್ರ ವೈರಲ್ ಆಗಿದೆ. ಇದನ್ನೂ ಓದಿ: ಕೋವಿಡ್‌ಗೂ ಮೊದಲು ಬಂದಿದ್ದ ನಿಫಾ ವೈರಸ್‌ಗೆ ಕೇರಳದಲ್ಲಿ 12ರ ಬಾಲಕ ಬಲಿ