Tag: Trevor Bayliss

  • ವಿಶ್ವಕಪ್ ಗೆದ್ದ ಇಂಗ್ಲೆಂಡ್ ಟೀಮ್ ಕೋಚ್‍ಗೆ ಸನ್‍ರೈಸರ್ಸ್ ಬಂಪರ್ ಆಫರ್

    ವಿಶ್ವಕಪ್ ಗೆದ್ದ ಇಂಗ್ಲೆಂಡ್ ಟೀಮ್ ಕೋಚ್‍ಗೆ ಸನ್‍ರೈಸರ್ಸ್ ಬಂಪರ್ ಆಫರ್

    ಹೈದರಾಬಾದ್: 2019ರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಕೋಚ್ ಟ್ರೆವರ್ ಬೇಲಿಸ್ ಅವರನ್ನು ಹೈದರಾಬಾದ್ ಸನ್‍ರೈಸರ್ಸ್ ತಂಡ ಕೋಚ್ ಆಗಿ ನೇಮಿಸಿದೆ.

    ಕಳೆದ ಬಾರಿಯ ಟೂರ್ನಿಯಲ್ಲಿ ಹೈದರಾಬಾದ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ಟಾಮ್ ಮೂಡಿ ತಂಡದ ಕೋಚ್ ಜವಾಬ್ದಾಯಿಂದ ಹಿಂದೆ ಸರಿದಿದ್ದರು. ಈ ಹಿನ್ನೆಲೆಯಲ್ಲಿ ಹೈದರಾಬಾದ್ ತಂಡದ ಆಡಳಿತ ಮಂಡಳಿ ಈ ಸ್ಥಾನದಲ್ಲಿ ಬೇಲಿಸ್ ಅವರನ್ನು ನೇಮಕ ಮಾಡಿದೆ. ಸದ್ಯ ಬೇಲಿಸ್ ಇಂಗ್ಲೆಂಡ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಅವಧಿ ಮುಗಿದ ಬಳಿಕ ಹೈದರಾಬಾದ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

    2016 ಐಪಿಎಲ್ ಟೂರ್ನಿಯಲ್ಲಿ ಗೆಲುವು ಪಡೆದಿದ್ದ ಹೈದರಾಬಾದ್ ತಂಡ ಮೂಡಿ ಮಾರ್ಗದರ್ಶನದಲ್ಲಿ ಮುನ್ನಡೆದಿತ್ತು. ಇತ್ತ ಆಸ್ಟ್ರೇಲಿಯಾ ಮೂಲದ ಟ್ರೆವರ್ ಬೇಲಿಸ್ ಅವರನ್ನು ಕೋಚ್ ಆಗಿ ಪಡೆದುಕೊಳ್ಳಲು ಕೋಲ್ಕತ್ತಾ ತಂಡ ಕೂಡ ಅಂತಿಮ ಕ್ಷಣದವರೆಗೂ ಪ್ರಯತ್ನ ನಡೆಸಿತ್ತು. ಆದರೆ ಅಂತಿಮವಾಗಿ ಭಾರೀ ಮೊತ್ತ ನೀಡಿ ಹೈದರಾಬಾದ್ ತಂಡ ಪಡೆದುಕೊಳ್ಳಲು ಯಶಸ್ವಿಯಾಗಿದೆ.

    ಕೋಚ್ ಆಗಿ ಉತ್ತಮ ರೆಕಾರ್ಡ್ ಹೊಂದಿರುವ ಟ್ರೆವರ್ ಬೇಲಿಸ್, ಕೋಲ್ಕತ್ತಾ ತಂಡ 2 ಬಾರಿ ಐಪಿಎಲ್ ಟೂರ್ನಿಯಲ್ಲಿ ಕಪ್ ಗೆದ್ದ ಸಂದರ್ಭದಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ ಸಿಡ್ನಿ ಸಿಕ್ಸರ್ ತಂಡ ಬಿಗ್‍ಬ್ಯಾಷ್ ಲೀಗ್ ನಲ್ಲಿ ಗೆಲುವು ಪಡೆಯಲು ಕಾರಣರಾಗಿದ್ದರು. ಸದ್ಯ ಇಂಗ್ಲೆಂಡ್ ವಿಶ್ವಕಪ್ ಗೆದ್ದ ತಂಡದ ಕೋಚ್ ಆಗಿದ್ದಾರೆ. ಇತ್ತ ಹೈದರಾಬಾದ್ ತಂಡದ ಕೋಚ್ ಆಗಿದ್ದ ಟಾಮ್ ಮೂಡಿ ಕೂಡ ಐಪಿಎಲ್ ನಲ್ಲಿ ಉತ್ತಮ ದಾಖಲೆ ಹೊಂದಿದ್ದು, ಇವರ ಮಾರ್ಗದರ್ಶನದಲ್ಲಿ ಹೈದರಾಬಾದ್ ತಂಡ ಒಮ್ಮೆ ಕಪ್ ಗೆಲುವು ಪಡೆದಿದ್ದರೆ, 5 ಬಾರಿ ಪ್ಲೇ ಆಫ್ ಪ್ರವೇಶ ಮಾಡಿತ್ತು. ಈ ಬಾರಿಯ ಟೂರ್ನಿಯಲ್ಲಿ ತಂಡ ಎಲಿಮಿನೇಟರ್ ಪಂದ್ಯದಲ್ಲಿ ಸೋಲುಂಡ ಕಾರಣ ಕ್ರೀಡಾಂಣದಲ್ಲೇ ಅತ್ತಿದ್ದರು.