Tag: tress

  • ಹೆದ್ದಾರಿಗಾಗಿ ಧರೆಗುರುಳಿದ ಬೃಹತ್ ಮರ- ನೂರಾರು ಹಕ್ಕಿಗಳ ಮಾರಣಹೋಮ

    ಹೆದ್ದಾರಿಗಾಗಿ ಧರೆಗುರುಳಿದ ಬೃಹತ್ ಮರ- ನೂರಾರು ಹಕ್ಕಿಗಳ ಮಾರಣಹೋಮ

    ತಿರುವನಂತಪುರಂ: ರಾಷ್ಟ್ರೀಯ ಹೆದ್ದಾರಿಗಾಗಿ ಬೃಹತ್ ಮರವೊಂದನ್ನು ಉರುಳಿಸಿದ ಪರಿಣಾಮ ನೂರಾರು ಪಕ್ಷಿಗಳು ಮಾರಣಹೋಮವಾದ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ತಿರುರಂಗದಿ ನಗರದ ವಿಕೆ ಪಡಿ ಎಂಬಲ್ಲಿ ನಡೆದಿದೆ.

    ಸಾವಿರಾರು ಪಕ್ಷಿಗಳ ಮಾರಣಹೋಮವಾಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಪಕ್ಷಿಪ್ರಿಯರು ಆಕ್ರೋಶ ಹೊರಹಾಕಿದ್ದಾರೆ. ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಮರ ಉರುಳಿಸಿದ ಜೆಸಿಬಿ ಚಾಲಕನನ್ನು ಬಂಧಿಸಲಾಗಿದೆ. ಅಲ್ಲದೆ ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಪಡೆಯದೇ ಮರವನ್ನು ಉರುಳಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.

    ರಾಷ್ಟ್ರೀಯ ಹೆದ್ದಾರಿ 66 ಅನ್ನು ವಿಸ್ತರಣೆ ಮಾಡುವ ಸಲುವಾಗಿ ರಸ್ತೆ ಬದಿಯ ಮರಗಳನ್ನು ಕಡಿಯಲಾಗುತ್ತಿತ್ತು. ಅಂತೆಯೇ ಗುರುವಾರ ಭಾರೀ ಗಾತ್ರದ ಮರವನ್ನು ನೆಲಕ್ಕುರುಳಿಸಿದರಿಂದ ನೂರಾರು ಪಕ್ಷಿಗಳು ಸಾವನ್ನಪ್ಪಿವೆ. ಇದನ್ನೂ ಓದಿ: ಸಾರ್ವಜನಿಕವಾಗಿ ಹಸ್ತಮೈಥುನ ಮಾಡಿಕೊಳ್ಳುವುದು ಲೈಂಗಿಕ ಉದ್ದೇಶವನ್ನು ಸೂಚಿಸುತ್ತದೆ: ಮುಂಬೈ ಕೋರ್ಟ್

    ಮರ ಕಡಿಯುವುದಕ್ಕೂ ಮುನ್ನ ಅವುಗಳಿಗೆ ಹಾರಲು ಅವಕಾಶ ನೀಡಬೇಕಿತ್ತು. ಇಲ್ಲವೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಆದರೆ ಇದ್ಯಾವುದೂ ಮಾಡದೇ ಏಕಾಏಕಿ ಮರವನ್ನು ಉರುಳಿಸಿರುವ ಪರಿಣಾಮ ಗೂಡು ಸಮೇತ ಹಕ್ಕಿಗಳು ಮರದ ಕೊಂಬೆಗಳಿಗೆ ಸಿಲುಕಿ ಮೃತ ಪಟ್ಟಿವೆ. ಇನ್ನೂ ಕೆಲವು ಮರ ಬಿದ್ದ ರಭಸಕ್ಕೆ ನೆಲಕ್ಕೆ ಅಪ್ಪಳಿಸಿ ಸಾವನ್ನಪ್ಪಿವೆ.

    ಹುಣಸೆ ಮರದಲ್ಲಿ ಶಿಳ್ಳೆ ಹೊಡೆಯುವ ಬಾತುಕೋಳಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳು ಗೂಡುಕಟ್ಟಿಕೊಂಡು ಬದುಕು ನಡೆಸುತ್ತಿದ್ದವು. ಈ ಬಡ ಜೀವಿಗಳ ಜೀವನದ ಬಗ್ಗೆ ಹೆಚ್ಚು ಗಮನ ಹರಿಸದ ಜನರ ಮೇಲೆ ಇದೀಗ ನೆಟ್ಟಿಗರು ಗರಂ ಆಗಿದ್ದಾರೆ. ಈ ಪಕ್ಷಿಗಳನ್ನು ಉಳಿಸಲು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳದೆ ಮರವನ್ನು ಉರುಳಿಸಲು ನಿರ್ಧರಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಕ್ರಮ ಮರ ಸಾಗಾಟ- ಓರ್ವ ಅರೆಸ್ಟ್

    ಅಕ್ರಮ ಮರ ಸಾಗಾಟ- ಓರ್ವ ಅರೆಸ್ಟ್

    ಮಡಿಕೇರಿ: ಅಕ್ರಮವಾಗಿ ಬೀಟೆ ಮರ ಸಾಗಿಸುತ್ತಿದ್ದ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ತಂಡ ಮರ ಮತ್ತು ವಾಹನ ವಶಪಡಿಸಿಕೊಳ್ಳುವುದರೊಂದಿಗೆ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

    ಖಚಿತ ಮಾಹಿತಿ ಮೇರೆಗೆ ಮಡಿಕೇರಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ತಾಲೂಕಿನ ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್ ಮತ್ತು ಡಿಆರ್ ಎಫ್‍ಓ ಮಹದೇವ ನಾಯಕ್ ನೇತೃತ್ವದಲ್ಲಿ ಕಳೆದ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಕುಶಾಲನಗರ ಸಮೀಪ ಅಕ್ರಮವನ್ನು ಪತ್ತೆ ಹಚ್ಚಲಾಗಿದೆ.

    ಆರೋಪಿ ಮಾಲ್ದಾರೆಯ ಅಶ್ರಫ್ ಎಂಬಾತ ಮಾರುತಿ 800 ಕಾರ್ (ಕೆಎ.05.ಎಂಆರ್.6728)ನಲ್ಲಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಇಲಾಖೆ ಮೊಕದಮೆ ದಾಖಲಿಸಿದ್ದು, ತನಿಖೆ ಕೈಗೊಂಡಿದೆ.

  • ಪೇಜಾವರರ ಜೊತೆಯೇ ಚಿರನಿದ್ರೆಗೆ ಜಾರಿದ ದೈವದ ಮರ

    ಪೇಜಾವರರ ಜೊತೆಯೇ ಚಿರನಿದ್ರೆಗೆ ಜಾರಿದ ದೈವದ ಮರ

    ಚಿಕ್ಕಮಗಳೂರು: ಕೃಷ್ಣನ ಪರಮ ಭಕ್ತ ಪೇಜಾವರ ಶ್ರೀಗಳು ಸಾವನ್ನಪ್ಪುತ್ತಿದ್ದಂತೆಯೇ 300 ವರ್ಷಗಳ ಇತಿಹಾಸವಿರುವ ದೈವದ ಬನ್ನಿ ಮರವೂ ಧರೆಗುರುಳಿದೆ.

    ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಪಕ್ಕದಲ್ಲಿದ್ದ ಈ ಮರಕ್ಕೆ ಸ್ಥಳಿಯರು ದೈವದ ಮರ ಎಂದೇ ಹೇಳುತ್ತಿದ್ದರು. ಆದರೆ ಡಿಸೆಂಬರ್ 29ರ ಭಾನುವಾರ ಬೆಳಗ್ಗೆ ಪೇಜಾವರರು ಮರಣ ಹೊಂದುತ್ತಿದ್ದಂತೆ ಈ ಮರ ಕೂಡ ತಾನಾಗಿಯೇ ಧರೆಗುರುಳಿದೆ.

    ಈ ಮರಕ್ಕೆ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಹಾಗೂ ಸ್ಥಳಿಯರಿಂದ ದಿನಂಪ್ರತಿ ಪೂಜೆ ನಡೆಯುತ್ತಿತ್ತು. ದಾರಿಹೋಕರು ಓಡಾಡುವಾಗ ಕೈಮುಗಿದು ನಮಸ್ಕರಿಸುತ್ತಿದ್ದರು. ವಿಜಯ ದಶಮಿಯಂದು ಸುತ್ತಮುತ್ತಲಿನ ಗ್ರಾಮಸ್ಥರು ಇದೇ ಮರದ ಬಳಿ ಅಂಬನ್ನು ಹೊಡೆಯುತ್ತಿದ್ದರು. ಇದೀಗ ಪೇಜಾವರರು ಚಿರನಿದ್ರೆಗೆ ಜಾರುತ್ತಿದ್ದಂತೆ ಈ ಮರ ಕೂಡ ಉರುಳಿ ಬಿದ್ದಿದೆ.

    ಇದು ಕಾಕತಾಳಿಯವೋ ಅಥವಾ ದೈವದ ಶಕ್ತಿಯೋ ಗೊತ್ತಿಲ್ಲ. ಆದರೆ ಸ್ಥಳಿಯರು ಕೃಷ್ಣನ ಪರಮ ಭಕ್ತ ಪೇಜಾವರರು ಸಾವನ್ನಪ್ಪುತ್ತಿದ್ದಂತೆ ಈ ಮರ ಕೂಡ ಅವರೊಂದಿಗೆ ಸ್ವರ್ಗಕ್ಕೆ ಹೋಗಿದೆ ಎಂದೇ ಭಾವಿಸಿದ್ದಾರೆ.

  • ಮೆಸ್ಕಾಂಗೆ ಸವಾಲಾಗಿರುವ ಮಲೆನಾಡ ಮಳೆ- ಸಿಬ್ಬಂದಿ ಮೇಲೆ ಬಿದ್ದ ಮರ

    ಮೆಸ್ಕಾಂಗೆ ಸವಾಲಾಗಿರುವ ಮಲೆನಾಡ ಮಳೆ- ಸಿಬ್ಬಂದಿ ಮೇಲೆ ಬಿದ್ದ ಮರ

    ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಲವು ಕಡೆ ಅವಾಂತರ ಸೃಷ್ಟಿಸಿದೆ. ಮೆಳೆಯ ಅಬ್ಬರಕ್ಕೆ ಆಗುತ್ತಿರುವ ಅನಾಹುತಗಳು ಮೆಸ್ಕಾಂಗೆ ತಲೆನೋವಾಗಿದೆ.

    ಹೌದು. ಮಲೆನಾಡಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ಥಗೊಂಡಿದ್ದು, ರಸ್ತೆಗಳ ಮೇಲೆ ಬೃಹತ್ ಮರಗಳು ಉರುಳಿ ಬಿದ್ದು ಭಾರೀ ಅವಾಂತರ ಸೃಷ್ಟಿಯಾಗಿದೆ. ಅಲ್ಲದೆ ಧರೆಗುರುಳಿರುವ ಮರಗಳ ಜೊತೆಗೆ ಹಲವು ಕಡೆ ವಿದ್ಯುತ್ ಕಂಬಗಳು ಕೂಡ ನೆಲಕ್ಕುರುಳಿದೆ. ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಬಂಡೀಗಡಿ ಬಳಿ ರಸ್ತೆಗೆ ಬೃಹತ್ ಮರ ಉರುಳಿ ಬಿದ್ದಿದೆ.

    ಈ ಹಿನ್ನೆಲೆ ಮಳೆಯಲ್ಲೇ ಮರ ತೆರವು ಕಾರ್ಯಾಚರಣೆ ಮಾಡಿ, ಮೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಲೈನ್ ರಿಪೇರಿ ಕೆಲಸವನ್ನು ಮಾಡುತ್ತಿದ್ದಾರೆ. ಹೀಗೆ ಲೈನ್ ರಿಪೇರಿ ಮಾಡುತ್ತಿದ್ದ ಮೆಸ್ಕಾಂ ಸಿಬ್ಬಂದಿ ಮೇಲೆ ಮರವೊಂದು ಬಿದ್ದಿದ್ದು, ತಕ್ಷಣ ಸ್ಥಳದಲ್ಲಿದ್ದವರು ಸಿಬ್ಬಂದಿಯನ್ನು ರಕ್ಷಿಸಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಸಿಬ್ಬಂದಿ ಪಾರಾಗಿದ್ದಾರೆ.

    ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕಳೆದ ಬಾರಿ 17 ಬಾರಿ ಮುಳುಗಿದ್ದ ಹೆಬ್ಬಾಳೆ ಸೇತುವೆ ಈ ವರ್ಷ ಮೊದಲ ಬಾರಿ ಮುಳುಗಡೆಯಾಗಿದ್ದು, ಮಹಾಮಳೆಗೆ ಜನ ಮನೆಯಿಂದ ಹೊರಬರದಂತ ಸ್ಥಿತಿ ನಿರ್ಮಾಣವಾಗಿದೆ.

    ರಾಜ್ಯದ ಹಲವೆಡೆ ಮಳೆರಾಯನ ರೌದ್ರನರ್ತನಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಅಲ್ಲದೆ ಭಾರೀ ಮಳೆಯ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಗೆ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಸುರಿಯುತ್ತಿದ್ದು, ಉತ್ತರ ಕರ್ನಾಟಕದ ಭಾಗದಲ್ಲಿ ಪ್ರವಾಹ ಸೃಷ್ಟಿಸಿದೆ. ಮಳೆಯ ಅಬ್ಬರಕ್ಕೆ ರಾಜ್ಯದ ನದಿಗಳು ಭೋರ್ಗರೆದು ಹರಿಯುತ್ತಿದ್ದು, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಸೇತುವೆಗಳು ಮುಳುಗಡೆಯಾಗಿದೆ, ರಸ್ತೆಗಳ ಮೇಲೆ ಮರಗಳು, ಗುಡ್ಡಗಳು ಕುಸಿದು ಸಂಚಾರ ಸ್ಥಗಿತಗೊಂಡಿದೆ.

  • ಬೆಂಗ್ಳೂರಲ್ಲಿ ರಾತ್ರಿಯೂ ವರುಣನ ಅಬ್ಬರ- ಧರೆಗುರುಳಿತು 20ಕ್ಕೂ ಹೆಚ್ಚು ಮರ, ತುಮಕೂರಲ್ಲಿ ಇಬ್ಬರು ಬಲಿ

    ಬೆಂಗ್ಳೂರಲ್ಲಿ ರಾತ್ರಿಯೂ ವರುಣನ ಅಬ್ಬರ- ಧರೆಗುರುಳಿತು 20ಕ್ಕೂ ಹೆಚ್ಚು ಮರ, ತುಮಕೂರಲ್ಲಿ ಇಬ್ಬರು ಬಲಿ

    ಬೆಂಗಳೂರು: ನಗರದಲ್ಲಿ ಭಾನುವಾರ ಸಂಜೆ ಅಬ್ಬರಿಸಿದ್ದ ಮಳೆ ಮತ್ತೆ ರಾತ್ರಿ ಕೂಡ ಸುರಿದಿದೆ. ಜಿಲ್ಲೆಯ ಹಲವೆಡೆ ಗುಡುಗು, ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ.

    ತ್ಯಾಗರಾಜನಗರದ ವಿದ್ಯಾಪೀಠ ಸರ್ಕಲ್ ಬಳಿ ಶ್ರೀ ಸಾಯಿ ಸನ್ನಿಧಿ ಅಪಾರ್ಟ್ ಮೆಂಟ್ ಸೆಲ್ಲರ್‍ಗೆ ನೀರು ನುಗ್ಗಿದೆ. ಮಳೆ ನೀರು ನುಗ್ಗಿದ ಪರಿಣಾಮ 5 ಅಡಿ ಎತ್ತರದ ಕಾಂಪೌಂಡ್ ಕುಸಿದು ಬಿದ್ದಿದೆ. ಕಾಂಪೌಂಡ್ ಕುಸಿದಿದ್ದಕ್ಕೆ 10 ಕ್ಕೂ ಹೆಚ್ಚು ಕಾರುಗಳು 6 ದ್ವಿಚಕ್ರ ವಾಹನಳಿಗೆ ಹಾನಿಯಾಗಿದೆ.

    ನಗರದಲ್ಲಿ 20ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. ಕೆಲವು ಕಡೆ ಬಿರುಗಾಳಿ ಜೋರಾಗಿದ್ದ ಹಿನ್ನೆಲೆಯಲ್ಲಿ ಮರಗಳ ರೆಂಬೆಗಳು ಮುರಿದು ಬಿದ್ದಿವೆ. ವಿದ್ಯಾಪೀಠ ಸರ್ಕಲ್‍ನಲ್ಲಿ ಮಳೆ ನೀರು ನುಗ್ಗಿ ಕಾಂಪೌಂಡ್ ಕುಸಿದು ಅಪಾರ್ಟ್ ಮೆಂಟ್‍ನಲ್ಲಿ ನಿಲ್ಲಿಸಿದ್ದ ಕಾರಿಗೆ ಡ್ಯಾಮೇಜ್ ಆಗಿದೆ.

    ಎಲ್ಲೆಲ್ಲಿ, ಎಷ್ಟೆಷ್ಟು ಮರ ಬಿದ್ದಿದೆ?:
    ಕೊಡಿಗೇಹಳ್ಳಿ-1
    ಸಹಕಾರನಗರ-2
    ವಿದ್ಯಾರಣ್ಯಪುರ -2
    ಕಾಚರಕನಹಳ್ಳಿ-1
    ಸುಲ್ತಾನ್ ಪಾಳ್ಯ-1
    ಲುಂಬಿಣಿಗಾರ್ಡನ್-1
    ಹೆಚ್.ಬಿ.ಆರ್ ಲೇಔಟ್-1
    ಲುಂಬಿಣಿಗಾರ್ಡನ್-1
    ಹೆಚ್‍ಎಸ್‍ಆರ್.ಲೇಔಟ್-1 ಮರ ಬಿದ್ದ ವರದಿಯಾಗಿದೆ.

    ಇತ್ತ ರಾಜ್ಯದ ಹಲವೆಡೆಯೂ ಭಾರೀ ಮಳೆಯಾಗಿದ್ದು, ಇಬ್ಬರು ಬಲಿಯಾಗಿದ್ದಾರೆ. ತುಮಕೂರಿನ ಚಿಕ್ಕನಾಯಕನಹಳ್ಳಿ 50 ವರ್ಷದ ರೈತ ಬಸವರಾಜು ಸೌಧೆ ತರಲು ಹೋದಾಗ ಸಿಡಿಲು ಬಡಿದು ಮೃತಪಟ್ಟರೆ, ಇದೇ ತಾಲೂಕಿನ ಹಂದನಕೆರೆ ಗ್ರಾಮ 75 ವರ್ಷದ ಗಂಗಮ್ಮ ದನ ಮೇಯಿಸಲು ಹೋದಾಗ ಶೆಡ್ ಕುಸಿದು ಸಾವನ್ನಪ್ಪಿದ್ದಾರೆ.

    ಒಟ್ಟಿನಲ್ಲಿ ಬಿಸಿಲ ಧಗೆಗೆ ಬೇಸತ್ತಿದ್ದ ರಾಯಚೂರು, ಕಲಬುರಗಿ, ಬಳ್ಳಾರಿ, ಚಿತ್ರದುರ್ಗದಲ್ಲೂ ವರುಣ ಅಬ್ಬರಿಸಿದ್ದು ರೈತರ ಮೊಗದಲ್ಲಿ ಸಂತಸ ಮೂಡಿದೆ.

  • ಹತ್ತಿ ಗಿಡದಲ್ಲಿ ಮೂಡಿದ ಹೆಣ್ಣಿನ ಮುಖದ ಆಕೃತಿ- ಪೂಜೆ ಮಾಡಲು ಮುಗಿಬಿದ್ದ ಜನ

    ಹತ್ತಿ ಗಿಡದಲ್ಲಿ ಮೂಡಿದ ಹೆಣ್ಣಿನ ಮುಖದ ಆಕೃತಿ- ಪೂಜೆ ಮಾಡಲು ಮುಗಿಬಿದ್ದ ಜನ

    – ಜಡೆಯ ರೂಪದಲ್ಲಿ ತಳಕು ಹಾಕಿಕೊಂಡಿರೋ ಕೊಂಬೆಗಳು

    ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ನಗರದ ಸದಾಶಿವನಗರದ ವಸತಿ ಪ್ರದೇಶದಲ್ಲಿ ಹತ್ತಿ (ಅರಳೆ) ಗಿಡದಲ್ಲಿ ಹೆಣ್ಣಿನ ಮುಖದ ಆಕೃತಿ ಮೂಡಿರುವುದು ಜನರಲ್ಲಿ ಕುತೂಹಲ ಮೂಡಿಸಿದೆ. ಸದ್ಯ ಗಿಡದಲ್ಲಿ ಹೆಣ್ಣಿನ ಮುಖ ಮೂಡಿದ ನಂತರ ಜನರು ಹತ್ತಿ ಗಿಡದಲ್ಲಿ ದೇವಿಯ ಮುಖ ಮೂಡಿದೆ ಎಂದು ಪೂಜೆ ಮಾಡಲು ಮುಗಿಬಿದ್ದಿದ್ದಾರೆ.

    ಮೂರು ದಿನಗಳ ಹಿಂದೆ ಗಿಡದಲ್ಲಿ ಅಸ್ಪಷ್ಟವಾಗಿ ಗೋಚರಿಸುತ್ತಿದ್ದ ಮುಖದ ಆಕೃತಿ ಇದೀಗ ಸಂಪೂರ್ಣವಾಗಿ ಕಾಣುತ್ತಿದ್ದು, ಹತ್ತಿ ಗಿಡ ತುಂಬಾ ದೊಡ್ಡದಾಗಿ ಬೆಳೆಯುತ್ತಿದೆ. ಗಿಡದಲ್ಲಿ ಸುಮಾರು 12 ಅಡಿ ಎತ್ತರದಲ್ಲಿ ಮುಖದ ಆಕಾರ ಮೂಡಿದೆ.

    ಅಕ್ಕಪಕ್ಕದ ಮನೆಯವರು ಕೂಡ ಎಂದೂ ಈ ಗಿಡಕ್ಕೆ ಪೂಜೆ ಮಾಡಿದವರಲ್ಲ. ಆದರೆ ಇದೀಗ ಮುಖದ ಆಕೃತಿಯನ್ನು ಕಂಡ ನಂತರ ಸ್ಥಳೀಯರು ಇದೂ ಏನೋ ದೈವಿಚ್ಛೆ ಎಂದು ಗಿಡಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಈ ವಿಷಯ ಹರಡಿದಂತೆಲ್ಲಾ ಜನರು ಗುಂಪು ಗುಂಪಾಗಿ ಬಂದು ನೋಡಿ ಆಶ್ಚರ್ಯ ಮತ್ತು ಭಕ್ತಿ ತೋರುತ್ತಿದ್ದಾರೆ. ಹಾಗೇ ಗಿಡದ ಒಂದು ಕಡೆ ಜಡೆಯ ರೂಪದಲ್ಲಿ ಕೊಂಬೆಗಳು ತಳಕು ಹಾಕಿಕೊಂಡು ಆಶ್ಚರ್ಯ ಮೂಡಿಸಿವೆ.