Tag: Trent Bolt

  • ಟ್ರೆಂಟ್ ಬೋಲ್ಟ್ ವಿಕೆಟ್ ಹೇಗೆ ಪಡೆಯಬೇಕು? ಎಂಎಸ್‍ಡಿ ಸಲಹೆ ನೀಡುತ್ತಿದಂತೆ ಔಟ್- ವಿಡಿಯೋ

    ಟ್ರೆಂಟ್ ಬೋಲ್ಟ್ ವಿಕೆಟ್ ಹೇಗೆ ಪಡೆಯಬೇಕು? ಎಂಎಸ್‍ಡಿ ಸಲಹೆ ನೀಡುತ್ತಿದಂತೆ ಔಟ್- ವಿಡಿಯೋ

    ನೇಪಿಯರ್: ಟೀಂ ಇಂಡಿಯಾ ಕ್ರಿಕೆಟ್ ತಂಡಕ್ಕೆ ಧೋನಿ ನೀಡುವ ಸಲಹೆ ಮತ್ತಷ್ಟು ಅಗತ್ಯ ಎಂಬುದಕ್ಕೆ ಮತ್ತೊಂದು ಸಾಕ್ಷಿ ಲಭಿಸಿದ್ದು, ನ್ಯೂಜಿಲೆಂಡ್ ತಂಡದ ಬೋಲ್ಟ್ ವಿಕೆಟ್ ಪಡೆಯಲು ಕುಲ್ದೀಪ್ ಯಾದವ್ ಅವರಿಗೆ ಸಲಹೆ ನೀಡಿರುವ ವಿಡಿಯೋ ಲಭಿಸಿದೆ.

    ನೇಪಿಯರ್ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಟೀಂ ಇಂಡಿಯಾ ಬೌಲರ್ ಗಳ ದಾಳಿಗೆ ಸಿಲುಕಿ 157 ರನ್ ಗಳಿಗೆ 9 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇದೇ ವೇಳೆ ಟೀಂ ಇಂಡಿಯಾ ಕಿವೀಸ್ ತಂಡವನ್ನು ಬಹುಬೇಗ ಅಲೌಟ್ ಮಾಡಿ, ಭರ್ಜರಿ ಗೆಲುವು ಪಡೆಯುವ ನಿರೀಕ್ಷೆಯಲ್ಲಿತ್ತು. ಇದರಂತೆ 38ನೇ ಓವರ್ ಎಸೆದ ಕುಲ್ದೀಪ್ ಯಾದವ್‍ಗೆ ಧೋನಿ ಸಲಹೆ ನೀಡಿದ್ದರು. ಇದನ್ನು ಓದಿ:  ನ್ಯೂಜಿಲೆಂಡ್ ವಿರುದ್ಧ ಪಂದ್ಯಕ್ಕೆ ಸೂರ್ಯ ರಶ್ಮಿ ಅಡ್ಡಿ – 40 ನಿಮಿಷ ಆಟಕ್ಕೆ ಬ್ರೇಕ್!

    ಓವರ್ ನ ಅಂತಿಮ ಎಸೆತದಲ್ಲಿ ಬೋಲ್ಟ್ ಸ್ಟ್ರೈಕ್ ನಲ್ಲಿದ್ದು, ಈ ವೇಳೆ ಧೋನಿ, ಕುಲ್ದೀಪ್ ಯಾದವ್‍ಗೆ ಗೂಗ್ಲಿ ಎಸೆಯಲು ಸಲಹೆ ನೀಡಿದ್ದರು. ಧೋನಿ ಸಲಹೆಯಂತೆ ಕುಲ್ದೀಪ್ ಬೌಲ್ ಮಾಡುತ್ತಿದಂತೆ ಬ್ಯಾಟಿಗೆ ತಾಗಿದ ಚೆಂಡು ಸ್ಲಿಪ್ ನಲ್ಲಿದ್ದ ರೋಹಿತ್ ಶರ್ಮಾ ಕೈ ಸೇರಿತ್ತು. ಇದನ್ನು ಓದಿ: 10 ರನ್ ಗಳಿಸಿ ಲಾರಾ ದಾಖಲೆ ಸರಿಗಟ್ಟಿದ ಶಿಖರ್ ಧವನ್

    ರೋಹಿತ್ ಕ್ಯಾಚ್ ಪಡೆಯುತ್ತಿದಂತೆ ಕುಲ್ದೀಪ್ ಯಾದವ್ ಕೂಡ ಕ್ಷಣ ಕಾಲ ಅಚ್ಚರಿಗೊಂಡಿದ್ದರು. ಇತ್ತ ಧೋನಿ ತಂತ್ರಗಾರಿಕೆ ಯಶಸ್ವಿ ಆಗುವುದರೊಂದಿಗೆ ನ್ಯೂಜಿಲೆಂಡ್ 157 ರನ್ ಗಳಿಗೆ ಸರ್ವ ಪತನ ಕಂಡಿತು. ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್‍ಗಳ ಜಯ ಪಡೆಯಿತು. ಇದನ್ನು ಓದಿ: ನ್ಯೂಜಿಲೆಂಡ್ ಅಂತಿಮ 2 ಏಕದಿನ, ಟಿ20 ಸರಣಿಯಿಂದ ಕೊಹ್ಲಿಗೆ ವಿಶ್ರಾಂತಿ

    ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಬ್ಯಾಟಿಂಗ್ ನಲ್ಲಿ ಫಾರ್ಮ್ ಮರಳಿರುವುದು ತಂಡದ ಆತ್ಮಸ್ಥೈರ್ಯ ಹೆಚ್ಚಿಸಿದೆ. ಇತ್ತ ನಾಯಕ ಕೊಹ್ಲಿಗೆ ಬಿಸಿಸಿಐ ಗೆ ಅಂತಿಮ 2 ಪಂದ್ಯ ಹಾಗೂ ಟಿ20 ಸರಣಿಗೆ ವಿಶ್ರಾಂತಿ ನೀಡಿದ್ದು, ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ತಂಡದ ನಾಯಕತ್ವ ವಹಿಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv