Tag: trending

  • ಮಾನ್ಸೂನ್ ಜ್ಯುವೆಲರಿಯಲ್ಲಿ ಮಿನಿ ಛತ್ರಿಯ ಹವಾ!

    ಮಾನ್ಸೂನ್ ಜ್ಯುವೆಲರಿಯಲ್ಲಿ ಮಿನಿ ಛತ್ರಿಯ ಹವಾ!

    ಮಳೆಗಾಲದಲ್ಲಿ ಬಟ್ಟೆ ಕೇವಲ ಅಂದ ಹೆಚ್ಚಿಸೋದು ಮಾತ್ರವಲ್ಲ. ಬಟ್ಟೆಗೆ ಸರಿಹೊಂದುವಂತೆ ಆಭರಣಗಳು ಎಲ್ಲವೂ ಬಹಳ ಮುಖ್ಯವಾಗಿರುತ್ತದೆ. ಪ್ರತಿ ಟೈಮ್‌ಗೂ ಟ್ರೆಂಡ್ ಬದಲಾಗುವಂತೆ ಈ ಮಾನ್ಸೂನ್ ಸಮಯದಲ್ಲೂ ಅಂಬ್ರೆಲ್ಲಾ ಇಯರಿಂಗ್, ಅಂಬ್ರೆಲ್ಲಾ ಪೆಂಡೆಂಟ್ ನ್ಯೂ ಫ್ಯಾಷನ್ ಮಾರುಕಟ್ಟೆಯಲ್ಲಿ ರಾರಾಚಿಸುತ್ತಿದೆ.

    ಮಿನಿ ಛತ್ರಿಗಳ ಥೀಮ್ ಇರುವಂತಹ ಕಿವಿಯೊಲೆಗಳು, ಪೆಂಡೆಂಟ್ ಹಾಗೂ ಉಂಗುರಗಳು ಹೆಣ್ಣು ಮಕ್ಕಳನ್ನು ಆಕರ್ಷಿಸುತ್ತಿದೆ. ಮಾನ್ಸೂನ್ ಫ್ಯಾಷನ್ ಜ್ಯುವೆಲರಿಗಳಲ್ಲಿ ಇದೀಗ ಛತ್ರಿಗಳ ಹಂಗಾಮ ಹೆಚ್ಚಾಗಿದೆ. ಹೌದು, ಇದೀಗ ಎಲ್ಲಾ ಟ್ರೆಂಡ್ ಹೋಗಿ ಅಂಬ್ರೆಲ್ಲಾ ಜ್ಯುವೆಲರಿ ಟ್ರೆಂಡ್ ಶುರುವಾಗಿದೆ.

    ಛತ್ರಿಗಳಿಗೂ ಫ್ಯಾಷನ್ ಜ್ಯುವೆಲರಿಗಳಿಗೂ ಏನು ಸಂಬಂಧ ಅಂತಾ ಯೋಜಿಸುತ್ತಿದ್ದೀರಾ? ಇದು ಬೇರೇನಲ್ಲ ಛತ್ರಿಗಳ ಥೀಮ್ ಇರಿಸಿಕೊಂಡಂತಹ ಫ್ಯಾಷನ್ ಜ್ಯುವೆಲರಿಗಳು ಜ್ಯುವೆಲರಿ ಲೋಕಕ್ಕೆ ಲಗ್ಗೆ ಇಟ್ಟಿದ್ದು, ಇದೀಗ ಹೆಣ್ಣು ಮಕ್ಕಳ ಮನ ಸೆಳೆಯುತ್ತಿದೆ.

    ವೆರೈಟಿ ಡಿಸೈನ್ ಇಯರಿಂಗ್ಸ್
    ಇದೀಗ ಫ್ಯಾಶನ್ ಲೋಕಕ್ಕೆ ಛತ್ರಿಯ ಚಿತ್ತಾರವಿರುವ ಹ್ಯಾಂಗಿಂಗ್ಸ್, ಕಿವಿಯೊಲೆ, ಸ್ಟಡ್ಸ್, ಉಂಗುರ, ಬ್ರೆಸ್ಲೆಟ್, ಫಿಂಗರ್‌ರಿಂಗ್‌ಗಳು ಎಂಟ್ರಿ ಕೊಟ್ಟಿದೆ. ಜ್ಯುವೆಲರಿ ಡಿಸೈನರ್‌ಗಳು ತಮ್ಮ ಕೈಚಳಕದಿಂದ ಹೆಣ್ಣು ಮಕ್ಕಳ ಮನ ಗೆಲ್ಲುವಂತಹ ಸೂಪರ್ ಸ್ಟೈಲ್‌ನ ಜ್ಯುವೆಲ್ಲರಿಗಳನ್ನ ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ನೋಡಲು ಡಿಫರಂಟ್ ಲುಕ್ ನೀಡುವ ಈ ಫ್ಯಾಷನ್ ಜ್ಯುವೆಲರಿಗಳು ಕ್ಲಾಸಿ ವಿಥ್ ಡಿಫರೆಂಟ್ ಕಾಣಲು ಸಹಕರಿಸುತ್ತದೆ.

    ಅಂಬ್ರೆಲ್ಲಾ ವಿನ್ಯಾಸದ ಕಿವಿಯೋಲೆ
    ಕಲರ್‌ಫುಲ್ ಛತ್ರಿ, ಕ್ರಿಸ್ಟಲ್ ಅಂಬ್ರೆಲ್ಲಾ ಹ್ಯಾಂಗಿಂಗ್ಸ್, ಲೈಟ್ವೇಟ್ ಮೆಟೀರಿಯಲ್‌ನಲ್ಲಿ ಮಾಡಿದ ಇಯರಿಂಗ್ಸ್, ನೀರಿನ ಹನಿಯನ್ನು ಹೋಲುವ ಅಂಬ್ರೆಲ್ಲಾ ಡಿಸೈನ್ ಇಯರಿಂಗ್‌ಗಳು ಹೆಚ್ಚು ಪಾಪ್ಯುಲರ್ ಆಗಿವೆ. ಇಂತಹ ಇಯರಿಂಗ್‌ಗಳು ಮಾನ್ಸೂನ್‌ನಲ್ಲಿ ಧರಿಸುವ ಬಟ್ಟೆಗಳಿಗೆ ಸಕ್ಕತ್ ಮ್ಯಾಚ್ ಆಗುತ್ತದೆ. ಅಲ್ಲದೆ ಫ್ಯಾಶನ್ ಪ್ರಿಯರಿಗೆ ಇದೊಂದು ಡಿಫ್ರೆಂಟ್ ಲುಕ್ ನೀಡುತ್ತದೆ.

    ಇನ್ನು ಇದರಲ್ಲಿ ಪರ್ಲ್, ಮೆಟಲ್, ಸ್ಟೋನ್‌, ಕಾಟನ್, ಟೆರಾಕೋಟ್, ವುಡನ್, ಸಿಲ್ವರ್, ಗೋಲ್ಡ್ ಕವರ್ಡ್ ಡಿಸೈನ್‌ನ ನಾನಾ ಛತ್ರಿ ಚಿತ್ತಾರದ ಹ್ಯಾಂಗಿಂಗ್ಸ್ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ಫ್ಯಾಶನ್ ಪ್ರಿಯರ ಗಮನ ಸೆಳೆಯುತ್ತಿರುವ ಇಯರಿಂಗ್‌ಗಳನ್ನು ಜ್ಯುವೆಲರಿ ಡಿಸೈನರ್ ಪರಿಚಯಿಸಿದ್ದಾರೆ.

    ಅಂಬ್ರೆಲ್ಲಾ ಫಿಂಗರ್ ರಿಂಗ್
    ಇನ್ನು, ವಿವಿಧ ವಿನ್ಯಾಸವಿರುವ ಉಂಗುರಗಳು ಕೂಡ ಫಂಕಿ ಜ್ಯುವೆಲರಿ ಕೆಟಗರಿಯಲ್ಲಿ ಬಿಡುಗಡೆಯಾಗಿವೆ. ಅದರಲ್ಲೂ ಬ್ಲ್ಯೂ ಹಾಗೂ ವೈಟ್ ಕ್ರಿಸ್ಟಲ್ ಸ್ಟೋನ್‌ಗಳಿಂದ ಮಾಡಿರುವ ಅಂಬ್ರೆಲ್ಲಾ ಡಿಸೈನ್‌ಗಳ ಉಂಗುರಗಳು ಹುಡುಗಿಯರನ್ನು ಹೆಚ್ಚು ಆಕರ್ಷಿಸಿದೆ.

    ಮಳೆಗಾಲಕ್ಕೆ ಹೊಂದುವ ಜ್ಯುವೆಲರಿಗಳನ್ನು ಮಾರುಕಟ್ಟೆಗೆ ಪರಿಚಯಿಸಿರುವಂತಹ ಡಿಸೈನರ್‌ಗಳ ಕೈಚಳಕಕ್ಕೆ ಎಲ್ಲರೂ ಮಾರುಹೋಗಿದ್ದಾರೆ. ಸದಾ ಟ್ರೆಂಡ್‌ನಲ್ಲಿರಬೇಕು ಎಂದುಕೊಳ್ಳುವವರಿಗೆ ಇದು ಹೇಳಿ ಮಾಡಿಸಿದ ಡಿಸೈನ್ ಆಗಿದೆ.

  • Fashion | ಮತ್ತೆ ಟ್ರೆಂಡ್ ಸೆಟ್ ಮಾಡುತ್ತಿದೆ ‘ಮಾಟಿ’ ಕರ್ಣಾಭರಣ!

    Fashion | ಮತ್ತೆ ಟ್ರೆಂಡ್ ಸೆಟ್ ಮಾಡುತ್ತಿದೆ ‘ಮಾಟಿ’ ಕರ್ಣಾಭರಣ!

    – ಈ ಮಾಟಿಗಳು ಮಾಡ್ರನ್ ಗೂ ಸೈ, ಎತ್ನಿಕ್ ಗೂ ಸೈ

    ಗಿನ ಫ್ಯಾಶನ್‌ ಲೋಕದಲ್ಲಿ ಹುಡುಗಿರು ಡಿಫರೆಂಟ್‌ ಆಗಿ ಕಾಣಲು ಬಯಸುತ್ತಾರೆ. ಇತ್ತೀಚೆಗೆ ಚಿನ್ನದ ಆಭರಣಗಳನ್ನು ಇಷ್ಟ ಪಡದೆ ಹೆಚ್ಚಾಗಿ ಆರ್ಟಿಫೀಶಿಯಲ್‌ ಜ್ಯುವೆಲ್ಲರಿಗಳನ್ನು ಹಾಕಲು ಬಯಸುತ್ತಾರೆ. ಮಾರುಕಟ್ಟೆಗೆ ವಿವಿಧ ಬಗೆಯ ಆಭರಣಗಳು ಲಗ್ಗೆ ಇಟ್ಟಿವೆ. ಫ್ಯಾಶನ್‌ ಪ್ರಿಯರು ಆರ್ಟಿಫೀಶಿಯಲ್‌ ಜ್ಯುವೆಲ್ಲರಿಗಳನ್ನು ಪಾರ್ಟಿ, ಇತರ ಸಮಾರಂಭಗಳಿಗೆ ಧರಿಸಲು ಈ ಆಭರಣಗಳನ್ನು ಇಷ್ಟ ಪಡುತ್ತಾರೆ.

    ಇತ್ತೀಚೆಗೆ ಫ್ಯಾಷನ್ ಲೋಕದಲ್ಲಿ ಸಂಸ್ಕೃತಿಯ ಛಾಯೆ ಕಳೆದುಕೊಳ್ಳದೆ ಆಧುನಿಕತೆಯನ್ನು ತೋರಿಸುವ ಶೈಲಿ ಹೆಚ್ಚು ಮೆಚ್ಚುಗೆ ಪಡೆಯುತ್ತಿದೆ. ಆ ಶೈಲಿಯ ಉತ್ತಮ ಉದಾಹರಣೆ ಎಂದರೆ ಮಾಟಿ ಆಭರಣಗಳೊಂದಿಗೆ ಮಾಡ್ರನ್ ಡ್ರೆಸ್‌ಗಳ ಕಾಂಬಿನೇಷನ್.

    ಮಾಟಿ ಆಭರಣಗಳು ಮತ್ತೆ ಫ್ಯಾಷನ್ ಲೋಕದಲ್ಲಿ ಗಮನ ಸೆಳೆಯುತ್ತಿವೆ. ಇವು ಸಾಂಪ್ರದಾಯಿಕ ಸೀರೆಗಳಿಂದ ಹಿಡಿದು ಆಧುನಿಕ ಉಡುಪುಗಳವರೆಗೆ ಎಲ್ಲದಕ್ಕೂ ಒಪ್ಪುತ್ತದೆ. ಇತ್ತೀಚೆಗೆ, ಎರಡು ಅಥವಾ ಮೂರು ಎಳೆಯ ಮಾಟಿಗಳು ಹೆಚ್ಚು ಜನಪ್ರಿಯವಾಗಿವೆ. ಏಕೆಂದರೆ ಇವು ಮುಖದ ಆಕರ್ಷಕತೆಯನ್ನು ಹೆಚ್ಚಿಸುತ್ತವೆ ಅಲ್ಲದೇ ಹೆವಿ ವರ್ಕ್‌ಗಳಿರುವ ಮಾಟಿಗಳು ಗ್ರ್ಯಾಂಡ್ ಲುಕ್ ನೀಡುತ್ತವೆ. ಅಲ್ಲದೇ ಸ್ಟೋನ್ ಅಥವಾ ಮುತ್ತಿನ ಕೆಲಸದ ಮಾಟಿಗಳು ವಿಶೇಷವಾಗಿ ಆಕರ್ಷಕವಾಗಿವೆ.

    ಟ್ರೆಂಡಿಂಗ್ ಮಾಟಿಗಳನ್ನು ಧರಿಸುವುದರಿಂದ ದೊಡ್ಡ ನೆಕ್ಲೆಸ್‌ ಧರಿಸುವ ಅಗತ್ಯವಿಲ್ಲದೆ ರಿಚ್ ಲುಕ್ ಪಡೆಯಬಹುದು. ಚಿನ್ನದ ಜೊತೆಗೆ ಬೆಳ್ಳಿ ಮಾಟಿಗಳೂ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ವಿಭಿನ್ನ ಆಯ್ಕೆಗಳನ್ನು ನೀಡುತ್ತವೆ. 2025ರಲ್ಲಿ ಮಾಟಿ ಆಭರಣಗಳು ಮತ್ತೆ ಫ್ಯಾಷನ್‌ನಲ್ಲಿ ಪ್ರಮುಖ ಸ್ಥಾನ ಪಡೆದಿವೆ. ಹಳೆಯ ಕಾಲದ ಮಾಟಿಗಳು ಈಗ ನವೀಕೃತ ರೂಪದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಸಾಂಪ್ರದಾಯಿಕ ಹಾಗೂ ಆಧುನಿಕ ಉಡುಪುಗಳಿಗೆ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.

    ಸೀರೆ, ಗ್ರ್ಯಾಂಡ್‌ ಸೆಲ್ವಾರ್ ಅಥವಾ ಸ್ಕರ್ಟ್‌-ಬ್ಲೌಸ್‌ ಧರಿಸಿದಾಗ ಮಾಟಿ ಆಭರಣಗಳು ರಿಚ್‌ ಲುಕ್‌ ನೀಡುತ್ತವೆ. ಇವು ಫ್ರೀ ಹೇರ್ ಅಥವಾ ಬನ್‌ ಹೇರ್‌ಸ್ಟೈಲ್‌ಗೂ ಚೆನ್ನಾಗಿ ಹೊಂದುತ್ತವೆ. ಸಾಂಪ್ರದಾಯಿಕ ಉಡುಗೆಗಳಿಗೂ ವಿಭಿನ್ನ ರೀತಿಯ ಸ್ಟೈಲಿಶ್ ಮಾಟಿಗಳು ಹೊಸ ಲುಕ್ ಅನ್ನು ನೀಡುತ್ತದೆ. ಒಂದೆಳೆಯ ಮಾಟಿಗಳಿಂದ ಹಿಡಿದು ಎರಡು-ಮೂರೆಳೆಯ ಮಾಟಿಗಳವರೆಗೆ ವಿವಿಧ ವಿನ್ಯಾಸಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಬಜೆಟ್‌ ಮತ್ತು ಶೈಲಿಗೆ ಅನುಗುಣವಾಗಿ ಆಯ್ಕೆಮಾಡಬಹುದು. ಹೀಗಾಗಿ, ಮಾಟಿ ಆಭರಣಗಳು ಇಂದಿನ ಫ್ಯಾಷನ್‌ ಪ್ರಿಯರಿಗೆ ಹೊಸ ಆಯ್ಕೆಯಾಗಿ ಹೊರಹೊಮ್ಮಿವೆ.

    ಅದರಲ್ಲೂ ಫ್ಯಾಷನ್‌ ಕ್ಷೇತ್ರದಲ್ಲಿರುವ ಮಾಡೆಲ್‌ಗಳು, ಸೆಲೆಬ್ರೆಟಿಗಳು ಅತಿ ಹೆಚ್ಚಾಗಿ ಇಂತಹ ಆಭರಣಗಳನ್ನು ಧರಿಸುತ್ತಾರೆ. ಫೋಟೋಶೂಟ್‌ನಲ್ಲಿ ಧರಿಸುವ ಮಾಟಿ ಇಯರಿಂಗ್ ಇಡೀ ಲುಕ್‌ ಅನ್ನು ಬದಲಿಸುತ್ತವೆ ಹಾಗೂ ನೋಡಲು ಆಕರ್ಷಕವಾಗಿ ಬಿಂಬಿಸುತ್ತವೆ. ಈಗಿನ ಟ್ರೆಂಡ್‌ಗೆ ಮ್ಯಾಚ್‌ ಆಗುವಂತಾ ಮಾಟಿಗಳನ್ನು ಡಿಸೈನರ್ಸ್ ಮಾರುಕಟ್ಟೆಗೆ ಪರಿಚಯಿಸಿದ್ದಾರೆ

    ಮಾಡ್ರನ್ ಡ್ರೆಸ್‌ಗಳಿಗೆ ಒಪ್ಪುವ ಮಾಟಿಗಳು

    ಸಿಂಪಲ್ ಡ್ರೆಸ್‌ಗಳು, ಶರ್ಟ್ಸ್ ಅಥವಾ ವೆಸ್ಟರ್ನ್ ಗೌನ್ಸ್‌ಗಳಿಗೆ ಸ್ಟೈಲಿಶ್ ಮಾಟಿಗಳು ಎತ್ನಿಕ್ ಟಚ್ ಕೊಡುತ್ತವೆ. ಹಾಗೆಯೇ ಯುನೀಕ್ ಆಗಿ ಕೂಡ ಕಾಣಿಸುತ್ತದೆ. ಕಚೇರಿ, ಕಾಲೇಜು ಅಥವಾ ಕಾಫಿ ಡೇಟ್‌ಗೆ ಬಳಸಬಹುದಾದ ಮಾಟಿಗಳು ಲಭ್ಯವಿವೆ. ಹ್ಯಾಂಡ್‌ಪೈಂಟೆಡ್ ಅಥವಾ ಪ್ಯಾಟ್‌ಟರ್ನ್ಡ್ ಮಾಟಿಗಳು ಶರ್ಟ್‌ ಡ್ರೆಸ್‌ಗಳಿಗೆ ತುಂಬಾ ಆಕರ್ಷಕವಾಗಿ ಕಾಣುತ್ತದೆ.

    ಮಾಟಿ ಆಭರಣಗಳ ತೂಕವು ಕಡಿಮೆಯಿದ್ದು, ವಿನ್ಯಾಸದ ವೈವಿಧ್ಯತೆ ಹೆಚ್ಚಾಗಿದೆ. ಜೀನ್ಸ್‌-ಟಾಪ್‌ ಅಥವಾ ಜಂಪ್‌ಸೂಟ್‌ ಜೊತೆ ಕಲರ್ ಫುಲ್ ಮಾಟಿಗಳು ಹಾಗೂ ಮ್ಯಾಚಿಂಗ್ ಬಳೆ ಹಾಕಿದರೆ ಕ್ಲಾಸೀ ಲುಕ್ ನೀಡುತ್ತದೆ. ಈ ಸ್ಟೈಲ್‌ಗಳನ್ನು ಬಳಸುವುದರಿಂದ ನವೀನತೆಯ ಜೊತೆಗೆ ಸಂಸ್ಕೃತಿಯ ಹಳೆಯ ಆಭರಣಗಳ ವಿನ್ಯಾಸಗಳೂ ಚಾಲ್ತಿಯಲ್ಲಿರುತ್ತದೆ.

    ಸ್ಟೋನ್‌ ಅಥವಾ ಮುತ್ತಿನ ಮಾಟಿ

    ಸ್ಟೋನ್‌ ಅಥವಾ ಮುತ್ತಿನ (Pearl) ಮಾಟಿ ತುಂಬಾನೇ ಆಕರ್ಷಕವಾಗಿ ಕಾಣುವುದು. ಮುತ್ತಿನ ಡಿಸೈನ್‌ಗಳ ಮಾಟಿಗಳು ಸೀರೆ, ಲಂಗ ದಾವಣಿಗೆ ಹೇಳಿ ಮಾಡಿಸಿದ ಆಭರಣವಾಗಿದೆ. ಇದು ಉಡುಪಿನ ರೂಪುರೇಷೆಯನ್ನೇ ಬದಲಾಯಿಸುತ್ತದೆ. ಹಾಗಾಗಿ ತುಂಬಾ ಜನ ಮುತ್ತಿನ ಡಿಸೈನ್‌ನಲ್ಲಿ ಮಾಟಿ ಖರೀದಿಸಲು ಇಷ್ಟಪಡುತ್ತಾರೆ.

     ಮಾಟಿ ಆಭರಣಗಳು ನಾವಿನ್ಯತೆಯೊಂದಿಗೆ ಸಂಸ್ಕೃತಿಯ ಸೌಂದರ್ಯವನ್ನೂ ಪ್ರತಿಬಿಂಬಿಸುತ್ತವೆ. ವಿಭಿನ್ನ ವಿನ್ಯಾಸಗಳೊಂದಿಗೆ ಆಧುನಿಕ ಫ್ಯಾಶನ್‌ಗೂ ಸೂಕ್ತವಾಗಿವೆ. ಸ್ಟೈಲಿಶ್ ಆಯ್ಕೆಯಾಗಿರುವ ಈ ಆಭರಣಗಳು ನಿತ್ಯ ಉಡುಪುಗಳಿಗೆ ಆಕರ್ಷಕವಾಗಿವೆ. ನೀವು ಸಾಂಪ್ರದಾಯಿಕ ಉಡುಗೆ ಹಾಗೂ ಮಾಡನ್ ಡ್ರೆಸ್ ಗಳಲ್ಲಿ ರಿಚ್ ಲುಕ್ ನಲ್ಲಿ ಕಾಣಿಸಿಕೊಳ್ಳಬೇಕೆಂದರೆ ಇಂತಹ ಆಧುನಿಕ ಮಾಟಿಗಳನ್ನ ಬಳಸಿ.

  • ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಚಿನ್ನಮ್ಮ ಹಾಡು ಆಲ್ ಇಂಡಿಯಾ ಟ್ರೆಂಡಿಂಗ್

    ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಚಿನ್ನಮ್ಮ ಹಾಡು ಆಲ್ ಇಂಡಿಯಾ ಟ್ರೆಂಡಿಂಗ್

    ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣದ, ಶ್ರೀನಿವಾಸರಾಜು ಅವರ ನಿರ್ದೇಶನದದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ ‘ಕಷ್ಣಂ ಪ್ರಣಯ ಸಖಿ’ ಚಿತ್ರದ ಚಿನ್ನಮ್ಮ ಹಾಡು ಇತ್ತೀಚಿಗೆ ಬಿಡುಗಡೆಯಾಗಿತ್ತು. ಕವಿರಾಜ್ ಅವರು ಬರೆದು ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡನ್ನು ಖ್ಯಾತ ಗಾಯಕ ಕೈಲಾಶ್ ಖೇರ್ ಹಾಗೂ ಇಂದು ನಾಗರಾಜ್ ಹಾಡಿದ್ದಾರೆ.

    ಪ್ರಸ್ತುತ ಆಲ್ ಇಂಡಿಯಾ ಯೂಟ್ಯೂಬ್ ಟ್ರೆಂಡಿಂಗ್ ಪಟ್ಟಿಯಲ್ಲಿ ಚಿನ್ನಮ್ಮ ಹಾಡು ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ಏಳು ಮಿಲಿಯನ್ ಗೂ ಅಧಿಕ ವೀಕ್ಷಣೆಗೊಂಡು ಮೂರನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ದಳಪತಿ ವಿಜಯ್ ಅವರ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಚಿತ್ರದ ಚಿನ್ನ ಚಿನ್ನ ಕಣ್ಗಳ್ ಹಾಗೂ ಎರಡನೇ ಸ್ಥಾನದಲ್ಲಿ ಪ್ರಭಾಸ್ ನಟನೆಯ ಕಲ್ಕಿ 2898 AD ಚಿತ್ರದ ‘ಥೀಮ್ ಆಫ್ ಕಲ್ಕಿ’ ಹಾಡು ಇದೆ.

    ಇದೇ ವೇಗದಲ್ಲಿ ವೀಕ್ಷಣೆಯಾಗುತ್ತಿದ್ದರೆ “ಚಿನ್ನಮ್ಮ” ಹಾಡು ಮೊದಲ ಸ್ಥಾನಕ್ಕೆ ಬರುವ ಸಾಧ್ಯತೆ ಇದೆ.

  • ‘ಕೆರೆಬೇಟೆ’ ಟ್ರೈಲರ್ ತುಂಬಾ ಕಾಡ ಗರ್ಭದ ಕಥೆಯ ಗಾಢ ಛಾಯೆ

    ‘ಕೆರೆಬೇಟೆ’ ಟ್ರೈಲರ್ ತುಂಬಾ ಕಾಡ ಗರ್ಭದ ಕಥೆಯ ಗಾಢ ಛಾಯೆ

    ಗೌರಿಶಂಕರ್ ಅಭಿನಯದ `ಕೆರೆಬೇಟೆ’ (Kerebete) ಚಿತ್ರದ ಟ್ರೈಲರ್ (Trailer) ಲಾಂಚ್ ಆಗಿದೆ. ಹಾಗೆ ಬಿಡುಗಡೆಗೊಂಡಿರುವ ಈ ಟ್ರೈಲರ್ ದಿನಗಳು ಹೊರಳಿಕೊಳ್ಳುತ್ತಲೇ ವ್ಯಾಪಕ ಮೆಚ್ಚುಗೆ ಪಡೆದುಕೊಳ್ಳುತ್ತಾ, ಟ್ರೆಂಡಿಂಗ್ ನತ್ತ ದಾಪುಗಾಲಿಡುತ್ತಿದೆ. ಸಾಮಾನ್ಯವಾಗಿ ಒಂದು ಜನಪ್ರಿಯ ಅಲೆಯ ಅಬ್ಬರದ ನಡುವೆ ಅದಕ್ಕೆ ಹೊರತಾದಂತೆ ಕಾಣಿಸುವ ಚಿತ್ರವೊಂದರ ಸುಳಿವು ಸಿಕ್ಕರೂ ಸಾಕು, ತಾನೇ ತಾನಾಗಿ ಅದರತ್ತ ಪ್ರೇಕ್ಷಕರು ಆಕರ್ಷಿತರಾಗುತ್ತಾರೆ. ಆ ರೀತಿಯಲ್ಲಿಯೇ ಕೆರೆಬೇಟೆ ಕೂಡಾ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಇದೀಗ ಟ್ರೈಲರ್ ನೋಡಿದವರೆಲ್ಲ ರೋಮಾಂಚಿತರಾಗಿದ್ದಾರೆ. ಅದರ ಸುತ್ತ ಗರಿಗೆದರಿಕೊಂಡಿರುವ ನಿರೀಕ್ಷೆಗಳನ್ನು ಕಂಡು ಚಿತ್ರತಂಡ ಅಕ್ಷರಶಃ ಥ್ರಿಲ್ ಆಗಿದೆ.

    ಹಳ್ಳಿ ವಾತಾವರಣದ ಕಥೆ ಎಂದಾಕ್ಷಣ ಒಂದಷ್ಟು ಭಾಗಗಳ ಭಾಷಾ ಶೈಲಿಯನ್ನು ಮಾತ್ರವೇ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಮಲೆನಾಡಿನಲ್ಲಿ ಘಟಿಸುವ ಒಂದಷ್ಟು ಕಥಾನಕಗಳು ಬಂದಿದ್ದರೂ ಕೂಡಾ, ಆ ಭಾಗದ ಭಾಷೆಯನ್ನು ಪರಿಪೂರ್ಣವಾಗಿ ಬಳಸಿಕೊಂಡಿದ್ದು ವಿರಳ. ಆದರೆ, ಕೆರೆಬೇಟೆ ಚಿತ್ರವಿಡೀ ಅಂತಹ ಮಲೆನಾಡು ಭಾಷೆಗಳ ಗಂಧ ತುಂಬಿಕೊಂಡಂತಿದೆ. ಅದು ಕರುನಾಡಿನ ಎಲ್ಲ ಭಾಗಗಳ ಪ್ರೇಕ್ಷಕರಿಗೂ ಹೊಸತನದೊಂದಿಗೆ ಸೋಕುವ ಸೂಚನೆಗಳೂ ಕಾಣಿಸುತ್ತಿವೆ. ಇದೇ ಟ್ರೈಲರ್ ಮೂಲಕ ಒಟ್ಟಾರೆ ಕೆರೆಬೇಟೆ ಕಥನದ ನಾನಾ ಮಜಲುಗಳು ಅನಾವರಣಗೊಂಡಿವೆ. ಇದು ಎಲ್ಲ ಅಭಿರುಚಿಯ ಪ್ರೇಕ್ಷಕರಿಗೂ ಇಷ್ಟವಾಗಬಲ್ಲ ಫುಲ್ ಮೀಲ್ಸ್ ಅನ್ನೋದು ಕೂಡಾ ಸದರಿ ಟ್ರೈಲರ್ ನೊಂದಿಗೆ ಸಾಬೀತಾಗಿದೆ.

    ಕೆರೆಬೇಟೆಯ ಸುತ್ತಾ ಪ್ರೀತಿ, ಜಾತಿ, ಮೇಲು ಕೀಳು, ಬಡತನ ಮುಂತಾದ ಅಂಶಗಳೊಂದಿಗೆ ರಗಡ್ ಕಥಾನಕದ ಝಲಕ್ಕುಗಳು ಈ ಟ್ರೈಲರ್ ಮೂಲಕ ತೆರೆದುಕೊಂಡಿದೆ. ಕಾಡ ಗರ್ಭದ ಸಹಜ ಛಾಯೆಯಲ್ಲಿ ಚಲಿಸೋ ಕಥೆಯೆಂದರೇನೇ ಥ್ರಿಲ್ ಆಗಿ ಕಾಯೋ ಬಹುದೊಡ್ಡ ಪ್ರೇಕ್ಷಕ ವರ್ಗವಿದೆ. ಅದರಲ್ಲಿಯೂ ಕ್ಲಾಸ್, ಮಾಸ್ ಕಂಟೆಂಟಿನ ಸಮಾಗಮದಂಥಾ ಚಿತ್ರವೆಂದಮೇಲೆ ಸಂಚಲನ ಸೃಷ್ಟಿಯಾಗೋದುಜಜ ಸಹಜ. ಈ ನಿಟ್ಟಿನಲ್ಲಿ ನೋಡಹೋದರೆ, ಕೆರೆಬೇಟೆ ಕಟ್ಟುಮಸ್ತಾದ ಕಥೆಯ ಮೂಲಕ ಮೈಕೈ ತುಂಬಿಕೊಂಡಿರೋದನ್ನು ಈ ಟ್ರೈಲರ್ ಸಾಕ್ಷೀಕರಿಸಿದೆ.

    ಜೋಕಾಲಿ, ರಾಜಹಂಸ ಮುಂತಾದ ಸಿನಿಮಾಗಳ ಮೂಲಕ ಸದ್ದು ಮಾಡಿದ್ದ ಗೌರಿಶಂಕರ್ (Gowrishankar) ಕೆರೆಬೇಟೆ ನಾಯಕನಾಗಿ ಮರಳಿದ್ದಾರೆ. ಅವರ ಪಾತ್ರದ ರಗಡ್ ಲುಕ್ ನೋಡುಗರನ್ನೆಲ್ಲ ಸೆಳೆಯುವಂತಿದೆ. ಜೈಶಂಕರ್ ಪಟೇಲ್ ಜನಮನ ಸಿನಿಮಾ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿರುವ ಕೆರೆಬೇಟೆ, ರಾಜ್ ಗುರು ನಿರ್ದೇಶನದಲ್ಲಿ ರೂಪುಗೊಂಡಿದೆ. ಇದರ ಸ್ಕ್ರೀನ್ ಪ್ಲೇ ಮತ್ತು ಸಂಭಾಷಣೆಯನ್ನು ಗೌರಿಶಂಕರ್ ಮತ್ತು ನಿರ್ದೇಶಕರು ಒಟ್ಟುಗೂಡಿ ರೂಪಿಸಿದ್ದಾರೆ. ಮೊದಲ ಹೆಜ್ಜೆಯಲ್ಲಿಯೇ ರಾಜ್ ಗುರು ವಿಶಿಷ್ಟವಾದ ಕಥೆಯೊಂದನ್ನು ಕೈಗೆತ್ತಿಕೊಂಡಿದ್ದಾರೆಂಬುದಕ್ಕೂ ಈ ಟ್ರೈಲರಿನಲ್ಲಿ ಸಾಕ್ಷಿಗಳಿದ್ದಾವೆ.

    ನಿಖರವಾಗಿ ಹೇಳಬೇಕೆಂದರೆ, ಕೆರೆಬೇಟೆ ಟ್ರೈಲರ್ ಈ ವರ್ಷದ ಪ್ರಾಮಿಸಿಂಗ್ ಟ್ರೈಲರ್ ಆಗಿ ದಾಖಲಾಗುತ್ತದೆ. ಈ ವರ್ಷದ ಆರಂಭದಿಂದಲೇ ಭಿನ್ನ ಪ್ರಯೋಗಗಳ, ಹೊಸಾ ಹಾದಿಯ ಒಂದಷ್ಟು ಸಿನಿಮಾಗಳು ತೆರೆಗಾಣುತ್ತಿವೆ. ಅದರಲ್ಲಿ ಬಹುತೇಕ ಚಿತ್ರಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿವೆ. ಕನ್ನಡ ಚಿತ್ರರಂಗದ ಪಾಲಿಗೆ ಭಿನ್ನವಾದೊಂದು ಪಥ ತೆರೆದುಕೊಂಡಿರುವ ಈ ಘಳಿಗೆಯಲ್ಲಿ ಕೆರೆಬೇಟೆ ಟ್ರೈಲರ್ ಮತ್ತಷ್ಟು ನಿರೀಕ್ಷೆ ಮೂಡಿಸುವಂತಿದೆ. ಇದೀಗ ಟ್ರೈಲರ್ ನೋಡಿದವರೆಲ್ಲರೊಳಗೂ ಸಿನಿಮಾವನ್ನು ಕಣ್ತುಂಬಿಕೊಳ್ಳುವ ಕೌತುಕ ಮೂಡಿಕೊಂಡಿದೆ. ಅದು ಕೆರೆಬೇಟೆ ಟ್ರೈಲರಿನ ನಿಜವಾದ ಸಾರ್ಥಕತೆ.

     

    ಇನ್ನುಳಿದಂತೆ, ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ವಲ್ಲಭ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಕೆರೆಬೇಟೆ ಇದೇ ಮಾರ್ಚ್ 15ರಂದು ಬಿಡುಗಡೆಗೊಳ್ಳಲಿದೆ.

  • ಅಮೆಜಾನ್ ಪ್ರೈಮ್ ಭಾರತದ ಟ್ರೆಂಡಿಂಗ್ ಚಿತ್ರದಲ್ಲಿ ‘ಕಬ್ಜ’ಗೆ ಮೊದಲ ಸ್ಥಾನ

    ಅಮೆಜಾನ್ ಪ್ರೈಮ್ ಭಾರತದ ಟ್ರೆಂಡಿಂಗ್ ಚಿತ್ರದಲ್ಲಿ ‘ಕಬ್ಜ’ಗೆ ಮೊದಲ ಸ್ಥಾನ

    ರ್.ಚಂದ್ರು ನಿರ್ದೇಶನದಲ್ಲಿ ಮೂಡಿ ಬಂದಿರುವ ಕಬ್ಜ (Kabzaa) ಸಿನಿಮಾ ಏಪ್ರಿಲ್ 14 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಿದೆ. ಕನ್ನಡವೂ ಸೇರಿದಂತೆ ಹಿಂದಿ, ಮಲಯಾಳಂ, ತಮಿಳು ಹಾಗೂ ತೆಲುಗಿನಲ್ಲಿ ಈ ಚಿತ್ರ ರಿಲೀಸ್ ಆಗಿದ್ದು, ಬಿಡುಗಡೆಯಾದ ಒಂದೇ ದಿನಕ್ಕೆ ಭಾರತದ ಟ್ರೆಂಡಿಂಗ್ ಚಿತ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಬಾಲಿವುಡ್ ಸೇರಿದಂತೆ ಇತರ ಭಾಷೆಗಳ ಚಿತ್ರಗಳನ್ನು ಹಿಂದಿಕ್ಕಿ ದಾಖಲೆ ಬರೆದಿದೆ.

    ಸುದೀಪ್, ಉಪೇಂದ್ರ ಹಾಗೂ ಶಿವರಾಜ್ ಕುಮಾರ್ ಕಾಂಬಿನೇಷನ್ ನ ‘ಕಬ್ಜ’ ಟ್ರೆಂಡಿಂಗ್ ನಲ್ಲಿ ಪ್ರಥಮ ಸ್ಥಾನ ಪಡೆದಿದ್ದರೆ, ವಿಕ್ರಮಾದಿತ್ಯ ಮೊಟ್ಟಾನೆ ಅವರ ವೆಬ್ ಸರಣಿ ಜುಬಿಲಿ ಎರಡನೇ ಸ್ಥಾನದಲ್ಲಿದೆ. ಸಾವಿರಾರು ಕೋಟಿ ಬಾಚಿರುವ ಶಾರುಖ್ ಖಾನ್ ನಟನೆಯ ‘ಪಠಾಣ್’ ಮೂರನೇ ಸ್ಥಾನದಲ್ಲಿದ್ದರೆ, ತೆಲುಗಿನ ರಂಗಮಾರ್ತಾಂಡ ಸಿನಿಮಾ ಐದನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.

    ಆರನೇ ಸ್ಥಾನದಲ್ಲಿ ಅಮೆರಿಕಾದ ಸಿಟ್ ಕಾಮ್ ಯಂಗ್ ಶೆಲ್ಡನ್ ಸರಣಿ ಇದ್ದರೆ, ಏಳನೇ ಸ್ಥಾನದಲ್ಲಿ ವೇಣು ಟಿಲ್ಲು ನಿರ್ದೇಶನದ ಬಲಗಂ, ಎಂಟನೇ ಸ್ಥಾನದಲ್ಲಿ ಹ್ಯಾಪಿ ಫ್ಯಾಮಿಲಿ ಕಂಡೀಷನ್ಸ್ ಅಪ್ಲೈ ಹಿಂದಿ ವೆಬ್ ಸರಣಿ, ಒಂಬತ್ತನೇ ಸ್ಥಾನದಲ್ಲಿ ಅಮೆರಿಕನ್ ಸೂಪರ್ ಹೀರ್ ಚಿತ್ರ ಬ್ಲಾಕ್ ಆಡಂ, ಹತ್ತನೇ ಸ್ಥಾನದಲ್ಲಿ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ವಾರಿಸು’ ಪಡೆದುಕೊಂಡಿದೆ.

    ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡುವುದಾಗಿ ಮೊನ್ನೆಯಷ್ಟೇ  ನಿರ್ದೇಶಕ ಆರ್.ಚಂದ್ರು (R. Chandru) ತಿಳಿಸಿದ್ದರು. ಕಬ್ಜ ಸಿನಿಮಾ 25 ದಿನಗಳ ಪ್ರದರ್ಶನ ಕಂಡಿರುವ ಹಿನ್ನೆಲೆಯಲ್ಲಿ ಮತ್ತೊಂದು ಹೊಸ ಸುದ್ದಿಯನ್ನು ಹೇಳುವುದಾಗಿ ಮಾತನಾಡಿದ್ದರು. ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಚಂದ್ರು. ಪತ್ರಿಕಾಗೋಷ್ಠಿಯಲ್ಲಿ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ್ದು, ಇಂದಿನಿಂದ ‘ಕಬ್ಜ 2’ (Kabzaa 2 ) ಸಿನಿಮಾದ ಕೆಲಸದಲ್ಲಿ ತೊಡಗುವುದಾಗಿ ತಿಳಿಸಿದ್ದಾರೆ.

    ಕಬ್ಜಗಿಂತಲೂ ಕಬ್ಜ 2 ಬಜೆಟ್ ದೊಡ್ಡದಾಗಿಯೇ ಇರುತ್ತದೆಯಂತೆ. ಭಾರೀ ಬಜೆಟ್ ನಲ್ಲಿ ಕಬ್ಜ 2 ಮೂಡಿ ಬರಲಿದ್ದು, ಭಾರತೀಯ ಸಿನಿಮಾ ರಂಗದ ಖ್ಯಾತ ಕಲಾವಿದರು ತಾರಾಗಣದಲ್ಲಿ ಇರಲಿದ್ದಾರಂತೆ. ಸದ್ಯ ಕಥೆ ಬರೆಯುವುದರಲ್ಲಿ ತೊಡಗಿರುವ ಚಂದ್ರು, ಮುಂದಿನ ದಿನಗಳಲ್ಲಿ ತಾರಾಬಳಗದ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದರು.

    ‘ಕಥೆ, ಮೇಕಿಂಗ್, ತಾರಾಗಣ, ಬಜೆಟ್ ಯಾವುದರ ಬಗ್ಗೆಯೂ ಕಡಿಮೆ ಮಾಡುವುದಿಲ್ಲ. ಇನ್ನೂ ಅದ್ಧೂರಿಯಾಗಿ ಸಿನಿಮಾ ಮಾಡುವಂತಹ ಶಕ್ತಿಯನ್ನು ಕಬ್ಜ ನೀಡಿದೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಹುಮ್ಮಸ್ಸನ್ನು ಮತ್ತಷ್ಟು ಹೆಚ್ಚು ಮಾಡಿದೆ’ ಎಂದಿದ್ದಾರೆ ಚಂದ್ರು. ಸಿನಿಮಾ ಗೆಲ್ಲಿಸಿದ ಪ್ರತಿಯೊಬ್ಬರಿಗೂ ಅವರು ಧನ್ಯವಾದ ಹೇಳಿದರು.

    ಕಬ್ಜ ಸಿನಿಮಾ ರಿಲೀಸ್ ಆಗಿ ಎರಡನೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿತ್ತು. ನಾನಾ ಕಾರಣಗಳಿಂದಾಗಿ ಈ ಸಿನಿಮಾ ವಿಶೇಷತೆಯನ್ನೂ ಒಳಗೊಂಡಿತ್ತು, ರಿಯಲ್ ಸ್ಟಾರ್ ಉಪೇಂದ್ರ (Upendra), ಕಿಚ್ಚ ಸುದೀಪ್ (Sudeep) ಮತ್ತು ಶಿವರಾಜ್ ಕುಮಾರ್ (Shivaraj Kumar) ಇದೇ ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ನಟಿಸಿ, ಅಭಿಮಾನಿಗಳಿಗೆ ತ್ರಿಬಲ್ ಮನರಂಜನೆಯನ್ನು ನೀಡಿದ್ದರು.

  • ಆಸ್ಪತ್ರೆಗಾಗಿ ಟ್ಟಿಟ್ಟರ್ ಅಭಿಯಾನ – ದೇಶದ 35 ಟಾಪ್ ಹ್ಯಾಷ್‌ಟ್ಯಾಗ್‌ನಡಿ ಟ್ರೆಂಡಿಂಗ್

    ಆಸ್ಪತ್ರೆಗಾಗಿ ಟ್ಟಿಟ್ಟರ್ ಅಭಿಯಾನ – ದೇಶದ 35 ಟಾಪ್ ಹ್ಯಾಷ್‌ಟ್ಯಾಗ್‌ನಡಿ ಟ್ರೆಂಡಿಂಗ್

    ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಒತ್ತಾಯಿಸಿ ಭಾನುವಾರ ಸಂಜೆ 5ಕ್ಕೆ ಹಮ್ಮಿಕೊಂಡಿದ್ದ ಟ್ವಿಟ್ಟರ್ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ದೇಶದಲ್ಲಿ 35 ಟಾಪ್ ಹ್ಯಾಷ್‌ಟ್ಯಾಗ್‌ನಡಿ ಟ್ವಿಟ್ಟರ್ ಟ್ರೆಂಡಿಂಗ್ ಆಗಿದೆ.

    ದಶಕಗಳಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಒತ್ತಾಯ ಕೇಳಿಬರುತ್ತಿದೆ. ಅತಿಹೆಚ್ಚು ರಸ್ತೆ ಅಪಘಾತಗಳಾಗಿ, ಗಾಯಗೊಂಡವರನ್ನು ಆಸ್ಪತ್ರೆ ಸೇರಿಸುವ ಮುನ್ನವೇ ಅಸುನೀಗುತ್ತಿರುವ ಘಟನೆಗಳೇ ಹೆಚ್ಚು ಇರುತ್ತೆ. ಇದನ್ನೂ ಓದಿ: ಗಡಿ ಭಾಗದ ಹಿರಿಯ ಸಂಶೋಧಕ ಡಾ.ಶಿವನಗೌಡ ಪಾಟೀಲ್ ನಿಧನ – ಕೊನೆಯ ಇಚ್ಚೆಯಂತೆ ದೇಹದಾನ 

    ಹೀಗಾಗಿ 2019ರಲ್ಲಿ ಮೊದಲ ಬಾರಿಗೆ ಟ್ವಿಟ್ಟರ್ ಅಭಿಯಾನ ಹಮ್ಮಿಕೊಂಡಾಗ ಅಂದಿನ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರೂ ಯಾವುದೇ ಕಾರ್ಯಗಳು ಆಗಿರಲಿಲ್ಲ. ಈ ನಡುವೆ ಇತ್ತೀಚಿಗೆ ಶಿರೂರು ಟೋಲ್ ಗೇಟಿನಲ್ಲಿ ನಡೆದ ಆಂಬುಲೆನ್ಸ್‌ ಅಪಘಾತದಲ್ಲಿ ಜಿಲ್ಲೆಯ ನಾಲ್ವರು ದುರ್ಮರಣ ಹೊಂದಿದ್ದರು. ಈ ಪ್ರಕರಣದ ಬಳಿಕ ಮತ್ತೆ ಆಸ್ಪತ್ರೆಗಾಗಿ ಕೂಗು ಹೆಚ್ಚಾಗಿದ್ದು, ಹಂತಹಂತವಾಗಿ ಪ್ರತಿಭಟನೆಗಳನ್ನ ಹಮ್ಮಿಕೊಳ್ಳಲು ವಿವಿಧ ಸಂಘಟನೆಗಳು ಸಜ್ಜಾಗಿವೆ.

    ಆದರೆ ಇದರ ಮೊದಲ ಭಾಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಟ್ವಿಟ್ಟರ್ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಸಂಜೆ 8ರವರೆಗೆ 14 ಸಾವಿರ ಟ್ವೀಟ್‍ಗಳಾಗಿವೆ. ಟ್ವಿಟ್ಟರ್‌ನಲ್ಲಿ ಆಸ್ಪತ್ರೆಯ ಅವಶ್ಯಕತೆ ಕುರಿತು ಬರೆದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯ, ಸಿಎಂ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಕೆ.ಸುಧಾಕರ್ ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಲಾಯಿತು.

    ಸಂಜೆ 5 ರಿಂದ ನಿರಂತರವಾಗಿ ನಡೆದ ಈ ಟ್ವೀಟ್ ಅಭಿಯಾನಕ್ಕೆ ಅತಿಹೆಚ್ಚಾಗಿ ಯುವಕರು ಕೈಜೋಡಿಸಿದ್ದರು. ಅನೇಕ ಸಂಘಟನೆಗಳು ಕೂಡ ಬೆಂಬಲ ವ್ಯಕ್ತಪಡಿಸಿತು.

    ಹ್ಯಾಷ್‌ಟ್ಯಾಗ್ ಟ್ರೆಂಡಿಂಗ್
    ಟ್ವಿಟ್ಟರ್ ಅಭಿಯಾನದಲ್ಲಿ #WeNeedEmergencyHospitalInUttaraKannada ಹಾಗೂ #NoHospitalNoVote ಎಂಬ ಎರಡು ಹ್ಯಾಷ್‌ಟ್ಯಾಗ್ ಬಳಸಲಾಗಿತ್ತು. ಇಲ್ಲಿ #NoHospitalNoVote ಹ್ಯಾಷ್‌ಟ್ಯಾಗ್ ಭಾರತದ 35 ಟ್ರೆಂಡಿಂಗ್ ಹ್ಯಾಷ್‌ಟ್ಯಾಗ್‌ಗಳ ಪೈಕಿ ಸ್ಥಾನ ಪಡೆದುಕೊಂಡಿತು. ಅಲ್ಲದೇ, ದೆಹಲಿಯ ರಾಜಕೀಯ ಬೆಳವಣಿಗೆಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಾರ್ಟಿ ನಡೆಸುತ್ತಿದ್ದ #ದುಚ್ಚಾ_ಮೋದಿ(ವಂಚಕ ಮೋದಿ) ಹ್ಯಾಷ್‌ಟ್ಯಾಗ್ ಜೊತೆಗೆ ಟ್ರೆಂಡ್ ಆಗಿದ್ದು, ಟ್ವಿಟ್ಟರ್ ಅನಾಲಿಟಿಕ್ಸ್‌ನಲ್ಲಿ ಬೆಳಕಿಗೆ ಬಂದಿದೆ.

    ಕೈಜೋಡಿಸಿದ ಪ್ರಮುಖರು
    ಸ್ಯಾಂಡಲ್‍ವುಡ್ ನಿರ್ದೇಶಕ ಸಿಂಪಲ್ ಸುನಿ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಅನೇಕ ಪ್ರಮುಖರು ಟ್ವೀಟ್ ಮಾಡಿ ಬೆಂಬಲ ವ್ಯಕ್ತಪಡಿಸಿದ್ದು, 1.9 ಮಿಲಿಯನ್ ಜನರನ್ನ ಈ ಹ್ಯಾಷ್‌ಟ್ಯಾಗ್ ಟ್ವೀಟ್‍ಗಳು ತಲುಪಿವೆ. ಇದನ್ನೂ ಓದಿ: ಕ್ಯಾಂಪಸ್‍ನಲ್ಲಿ ಗುಂಡಿನ ದಾಳಿ: ಮೂವರು ಬಲಿ, ಇಬ್ಬರಿಗೆ ಗಂಭೀರ ಗಾಯ

    ಸುಸಜ್ಜಿತ ತುರ್ತು ಚಿಕಿತ್ಸಾ ವ್ಯವಸ್ಥೆಗೆ ಆಗ್ರಹಿಸಿ ಉತ್ತರ ಕನ್ನಡದ ಜನರು ನಡೆಸುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಅಹವಾಲನ್ನು ಮುಕ್ತ ಮನಸ್ಸಿನಿಂದ ಆಲಿಸಿ, ಸಮಸ್ಯೆ ಬಗೆಹರಿಸುವತ್ತ ಕಾರ್ಯಪ್ರವೃತ್ತವಾಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಸಹ ಟ್ಟೀಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪೋಷಕರೇ ಎಚ್ಚರ – ಟ್ರೆಂಡ್ ಆಗಿದೆ ತಲೆಬುರುಡೆ ಒಡೆಯುವ ಚಾಲೆಂಜ್

    ಪೋಷಕರೇ ಎಚ್ಚರ – ಟ್ರೆಂಡ್ ಆಗಿದೆ ತಲೆಬುರುಡೆ ಒಡೆಯುವ ಚಾಲೆಂಜ್

    – ಏನಿದು ಸ್ಕಲ್ ಬ್ರೇಕರ್ ಚಾಲೆಂಜ್?

    ನವದೆಹಲಿ: ಸಾಮಾಜಿಕ ಜಾಲತಾಣ ಎಂಬುದು ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟದ್ದು. ಇದಕ್ಕೆ ನಿದರ್ಶನ ಎಂಬಂತೆ ಈಗ ಸ್ಕಲ್ ಬ್ರೇಕರ್ ಚಾಲೆಂಜ್ (ತಲೆಬುರುಡೆ ಒಡೆಯುವ ಸವಾಲು) ಎಂಬ ಹೊಸ ಸ್ಪರ್ಧೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‍ನಲ್ಲಿ ಇದ್ದು, ಇದು ಪೋಷಕರ ನಿದ್ದೆಗೆಡಿಸಿದೆ.

    ಇತ್ತೀಚೆಗೆ ಯುವಕ ಯುವತಿಯರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿರುತ್ತಾರೆ. ಫೇಸ್ ಬುಕ್, ವಾಟ್ಸಪ್ ಮತ್ತು ಟಿಕ್ ಟಾಕ್ ಎಂದು ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರೆ. ಈಗ ಈ ರೀತಿಯ ಸಾಮಾಜಿಕ ಜಾಲತಾಣದಲ್ಲಿ ಪ್ರಾಣ ತೆಗೆಯುವ ಹೊಸ ಚಾಲೆಂಜ್ ಬಂದಿದ್ದು, ಈ ಚಾಲೆಂಜ್ ಸಖತ್ ಟ್ರೆಂಡ್ ಸೆಟ್ ಮಾಡುತ್ತಿದೆ. ಪ್ರಾಣಕ್ಕೆ ಕುತ್ತು ತರುವ ಈ ಚಾಲೆಂಜ್ ಮಾಡಿ ಯುವಕ ಯುವತಿಯರು ಪ್ರಾಣ ಕೆಳದುಕೊಳುತ್ತಿದ್ದಾರೆ.

    ಏನಿದು ಸ್ಕಲ್ ಬ್ರೇಕರ್ ಚಾಲೆಂಜ್?
    ಸ್ಕಲ್ ಬ್ರೇಕರ್ ಚಾಲೆಂಜ್ (ತಲೆಬುರುಡೆ ಒಡೆಯುವ ಸವಾಲು) ಎಂಬುದು ಒಂದು ಡೆಡ್ಲಿ ಚಾಲೆಂಜ್ ಆಗಿದೆ. ಈ ಚಾಲೆಂಜ್‍ನಲ್ಲಿ ಮೂವರು ನಿಂತಿರುತ್ತಾರೆ ಈ ಮೂವರಲ್ಲಿ ಮಧ್ಯದ ವ್ಯಕ್ತಿ ಮೇಲಕ್ಕೆ ಜಿಗಿದಾಗ ಅಕ್ಕ ಪಕ್ಕ ನಿಂತಿರುವವರು ಜಿಗಿದವನ ಕಾಲುಗಳಿಗೆ ಒದೆಯುತ್ತಾರೆ. ಆಗ ಜಿಗಿದ ವ್ಯಕ್ತಿ ತನ್ನ ಸಮತೋಲನ ಕಳೆದುಕೊಂಡು ನೆಲದ ಮೇಲೆ ಬಿದ್ದಾಗ ಆತನ ತಲೆಗೆ ಬೀಳುವ ಏಟಿನೊಂದಿಗೆ ಈ ಚಾಲೆಂಜ್ ಮುಗಿಯುತ್ತದೆ. ಒಂದು ವೇಳೆ ಜೋರಾಗಿ ಬಿದ್ದರೆ ಆ ವ್ಯಕ್ತಿಯ ತಲೆಬುರುಡೆ ಒಡೆಯುವ ಅಥವಾ ಜೀವಕ್ಕೆ ಕಂಟಕ ಉಂಟಾಗುವ ಸಂಭವವಿರುತ್ತದೆ.

    ಈ ರೀತಿಯ ಭಯಾನಕ ಚಾಲೆಂಜ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಾಗುತ್ತದೆ. ಇತ್ತೀಚೆಗೆ ಯುವಕ-ಯುವತಿಯ ಜೊತೆಗೆ ಮಕ್ಕಳು ಬಳಸುವ ಟಿಕ್ ಟಾಕ್‍ನಲ್ಲಿ ಇದು ಹೆಚ್ಚು ಪ್ರಚಲಿತದಲ್ಲಿ ಇದೆ. ಇದನ್ನು ಕಂಡ ಬೆಚ್ಚು ಬಿದ್ದಿರುವ ಪೋಷಕರು ಈ ಸ್ಕಲ್ ಬ್ರೇಕರ್ ಚಾಲೆಂಜ್‍ನ್ನು ಶಾಲಾ ಆವರಣದಲ್ಲಿ ನಿಷೇಧಿಸಬೇಕು. ಜೊತೆಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ.

    https://twitter.com/britishchickAD/status/1228335700132712450

    ಅಮೆರಿಕಾ, ಯೂರೋಪ್ ರಷ್ಯಾನಂತಹ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮೊದಲಿಗೆ ಶುರುವಾಗುವ ಈ ರೀತಿಯ ಡೆಡ್ಲಿ ಚಾಲೆಂಜ್‍ಗಳು, ಸೋಶಿಯಲ್ ಮೀಡಿಯಾದ ಮೂಲಕ ಎಲ್ಲಾ ಕಡೆ ಪಸರಿಸುತ್ತವೆ. ಈ ಚಾಲೆಂಜ್‍ಗಳಿಗೆ ಆಕರ್ಷಣೆಯಾಗಿ ಈ ಸವಾಲನ್ನು ಸ್ವೀಕರಿಸಿದ ಮಕ್ಕಳು ತಲೆಗೆ ಬೆನ್ನಿಗೆ ಪೆಟ್ಟು ಮಾಡಿಕೊಂಡು ಆಸ್ಪತ್ರೆ ಸೇರುತ್ತಿದ್ದಾರೆ. ಈ ರೀತಿಯ ಚಾಲೆಂಜ್‍ಗಳನ್ನು ಸಾಮಾಜಿಕ ಜಾಲತಾಣದಲ್ಲಿ ನಿಷೇಧ ಮಾಡಬೇಕು ಎಂಬ ಮಾತುಗಳು ಈಗ ಸಖತ್ ಸದ್ದು ಮಾಡುತ್ತಿವೆ.

    ಸೋಷಿಯಲ್ ಮೀಡಿಯಾದ ಈ ಹಿಂದೆಯು ಇದೇ ರೀತಿಯ ಕೆಲ ಡೆಡ್ಲಿ ಚಾಲೆಂಜ್‍ಗಳು ಬಂದು ಸಾಕಷ್ಟು ಅವಾತರ ಸೃಷ್ಟಿಸಿದ್ದವು. ಕೆಲವೇ ತಿಂಗಳ ಹಿಂದೆ ಪಬ್ ಜೀ, ಕೀಕೀ ಚಾಲೆಂಜ್ ಮತ್ತು ಬ್ಲೂ ವೇಲ್ ಚಾಲೆಂಜ್ ಮಾಡಿ ಕೆಲ ಮಕ್ಕಳು ಮತ್ತು ಯುವಕರು ಜೀವತೆತ್ತಿದ್ದರು. ಅಲ್ಲದೇ ಟಿಕ್‍ಟಾಕ್ ಮಾಡಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದರು.

  • ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗ್ತಿದೆ ಸ್ಯಾರಿ ಟ್ವಿಟ್ಟರ್

    ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗ್ತಿದೆ ಸ್ಯಾರಿ ಟ್ವಿಟ್ಟರ್

    ಸಾಮಾಜಿಕ ಜಾಲತಾಣದಲ್ಲಿ ಹಲವಾರು ಚಾಲೆಂಜ್‍ಗಳು ಅಥವಾ ಹಲವು ವಿಷಯಗಳು ಟ್ರೆಂಡಿಂಗ್ ಆಗುತ್ತಿರುತ್ತದೆ. ಆದರೆ ಈಗ ‘ಸ್ಯಾರಿ ಟ್ವಿಟ್ಟರ್’ ವೈರಲ್ ಆಗುತ್ತಿದ್ದು, ರಾಜಕಾರಣಿಗಳು, ಸಿನಿಮಾ ಕಲಾವಿದರು ಸೇರಿದಂತೆ ಹಲವು ಮಹಿಳೆಯರು ತಾವು ಸೀರೆ ಧರಿಸಿರುವ ಫೋಟೋವನ್ನು ಟ್ವೀಟ್ ಮಾಡುತ್ತಿದ್ದಾರೆ.

    ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಸ್ಯಾರಿಟ್ವಿಟ್ಟರ್ ಹ್ಯಾಶ್‍ಟ್ಯಾಗ್ ಟ್ರೆಂಡಿಂಗ್‍ನಲ್ಲಿ ಇತ್ತು. ಆದರೆ ಇಂದು ಬೆಳಗ್ಗೆಯಿಂದ ಹಲವು ಮಹಿಳೆಯರು ಸ್ಯಾರಿಟ್ವಿಟ್ಟರ್ ಹ್ಯಾಶ್‍ಟ್ಯಾಗ್ ಬಳಸಿ ತಾವು ಸೀರೆ ಧರಿಸಿರುವ ಫೋಟೋವನ್ನು ಪೋಸ್ಟ್ ಮಾಡುತ್ತಿದ್ದಾರೆ.

    ಈ ಹ್ಯಾಶ್‍ಟ್ಯಾಗ್ ಟ್ರೆಂಡಿಂಗ್ ಆಗುತ್ತಿದ್ದಂತೆ ಕಲಾವಿದರು, ರಾಜಕಾರಣಿಗಳು ಸೀರೆ ಧರಿಸಿರುವ ಫೋಟೋವನ್ನು ಪೋಸ್ಟ್ ಮಾಡುತ್ತಿದ್ದಾರೆ. ಶಿವಸೇನೆಯ ಪ್ರಿಯಾಂಕ ಚರ್ತುವೇದಿ ಸೀರೆ ಧರಿಸಿರುವ ನಾಲ್ಕು ಫೋಟೋ ಟ್ವಿಟ್ಟರಿನಲ್ಲಿ ಹಾಕಿದ್ದಾರೆ.”ಇದು ಸ್ಯಾರಿಟ್ವಿಟ್ಟರ್ ಹಾಗೂ ನಾನು ಈ ಹ್ಯಾಶ್‍ಟ್ಯಾಗ್ ಬಳಸಿ ಟ್ವೀಟ್ ಮಾಡುವುದನ್ನು ಮಿಸ್ ಮಾಡಿಕೊಳ್ಳಲು ಇಷ್ಟವಿಲ್ಲ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಬಿಜೆಪಿ ನಾಯಕಿ ನೂಪೂರ್ ಶರ್ಮಾ ಕೂಡ ಸೀರೆ ಧರಿಸಿರುವ ಎರಡು ಫೋಟೋವನ್ನು ಟ್ವಿಟ್ಟರಿನಲ್ಲಿ ಹಾಕಿ ಅದಕ್ಕೆ, “ನನಗೆ ಸಂಪೂರ್ಣವಾಗಿ ಸೂಟ್ ಆಗುವಂತಹ ಚಾಲೆಂಜ್ ಈಗ ಟ್ರೆಂಡ್ ಆಗುತ್ತಿದೆ” ಎಂದು ಬರೆದು ಟ್ವೀಟ್ ಮಾಡಿದ್ದಾರೆ. ನಟಿ, ರಾಜಕಾರಣಿ ನಗ್ಮಾ ಅವರು ಕೂಡ ಹಳದಿ ಸೀರೆ ಧರಿಸಿ ಸ್ಯಾರಿ ಟ್ವಿಟ್ಟರ್ ಹ್ಯಾಶ್‍ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ. ಸೆಲೆಬ್ರಿಟಿ ಅಲ್ಲದೆ ಹಲವರು ಈ ಚಾಲೆಂಜ್ ಸ್ವೀಕರಿಸಿ ಸೀರೆ ಧರಿಸಿರುವ ಫೋಟೋವನ್ನು ಪೋಸ್ಟ್ ಮಾಡುತ್ತಿದ್ದಾರೆ.

  • ಯೂಟ್ಯೂಬ್ ಟ್ರೆಂಡಿಂಗ್ 2ರಲ್ಲಿ ಯಶ್ ಸಿನಿಮಾ

    ಯೂಟ್ಯೂಬ್ ಟ್ರೆಂಡಿಂಗ್ 2ರಲ್ಲಿ ಯಶ್ ಸಿನಿಮಾ

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಮಾಸ್ಟರ್ ಪೀಸ್’ ಸಿನಿಮಾ ಈಗ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿದ್ದು, ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

    ಮಾಸ್ಟರ್ ಪೀಸ್ ಸಿನಿಮಾ 2015 ಡಿಸೆಂಬರ್ ಕೊನೆಯಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತ್ತು. ಆದರೆ ಈ ಸಿನಿಮಾವನ್ನು ಅಧಿಕೃತವಾಗಿ ಯೂಟ್ಯೂಬ್  ಗೆ ಸೆಪ್ಟಂಬರ್ 12 ರಂದು ಅಪ್ಲೋಡ್ ಮಾಡಲಾಗಿದೆ. ಇಂದಿಗೆ ಸಿನಿಮಾ ಅಪ್ಲೋಡ್ ಆಗಿ ಮೂರು ದಿನಗಳಾಗಿದೆ. ಆದರೆ ಇಂದಿಗೂ ಮಾಸ್ಟರ್ ಪೀಸ್ ಸಿನಿಮಾ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಎರಡನೇ ಸ್ಥಾನದಲ್ಲಿದೆ.

    ಈಗಾಗಲೇ ಸಿನಿಮಾ 5 ಲಕ್ಷಕ್ಕಿಂತ ಅಧಿಕವಾಗಿ ವ್ಯೂವ್ ಕಂಡಿದ್ದು, 5.7 ಪ್ರೇಕ್ಷಕರು ಮಾಸ್ಟರ್ ಪೀಸ್ ಸಿನಿಮಾವನ್ನು ಲೈಕ್ಸ್ ಮಾಡಿದ್ದಾರೆ. ಮಾಸ್ಟರ್ ಪೀಸ್ ಸಿನಿಮಾ ಬಿಡುಗಡೆಯಾಗಿ ಮೂರು ವರ್ಷಗಳಾದರೂ ಇಂದಿಗೂ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ 2 ನಲ್ಲಿ ಇರುವುದರಿಂದ ಯಶ್ ಹವಾ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ತಿಳಿಯಬಹುದು.

    ಮಾಸ್ಟರ್ ಪೀಸ್ ಸಿನಿಮಾ ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಗೊಂಡಿದ್ದು, ನಿರ್ದೇಶಕ ಮಂಜು ಮಾಂಡವ್ಯ ಅವರ ನಿರ್ದೇಶದಲ್ಲಿ ಮೂಡಿಬಂದಿತ್ತು. ಈ ಸಿನಿಮಾದಲ್ಲಿ ಮೊದಲ ಬಾರಿಗೆ ಸಾನ್ವಿ ಶ್ರೀವಾಸ್ತವ್ ಅವರು ಯಶ್ ಗೆ ನಾಯಕಿಯಾಗಿ ಅಭಿನಯಿಸಿದ್ದರು. ಈ ಸಿನಿಮಾದಲ್ಲಿ ಯಶ್ ಭಗತ್ ಸಿಂಗ್ ಲುಕ್ ನಲ್ಲಿ ಮಿಂಚಿದ್ದರು. ರವಿಶಂಕರ್, ಚಿಕ್ಕಣ್ಣ, ಹಿರಿಯ ನಟಿ ಸುಹಾಸಿನಿ ಸೇರಿದಂತೆ ತಾರಾಬಳಗವೆ ಈ ಸಿನಿಮಾದಲ್ಲಿತ್ತು.

    ಸದ್ಯಕ್ಕೆ ಯಶ್ ಅವರು ಬಹುನಿರೀಕ್ಷಿತ ‘ಕೆಜಿಎಫ್’ ಸಿನಿಮಾ ಶೂಟಿಂಗ್ ಮುಗಿಸಿದ್ದು, ‘ಮೈ ನೇಮ್ ಇಸ್ ಕಿರಾತಕ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಕ್ರವರ್ತಿ ಚಿತ್ರದ ಹಿಂದಿ ಡಬ್ಬಿಂಗ್ ವರ್ಷನ್ ಇದೇ ತಿಂಗಳ ಮೂರನೇ ತಾರೀಕಿನಂದು ಯೂಟ್ಯೂಬಿನಲ್ಲಿ ಬಿಡುಗಡೆಯಾಗಿತ್ತು. ಅದು ಬಿಡುಗಡೆಯಾದ ಕ್ಷಣದಿಂದಲೇ ಯಾವ ಥರದಲ್ಲಿ ಕ್ರೇಜ್ ಸೃಷ್ಟಿಯಾಗಿತ್ತೆಂದರೆ ಎರಡು ದಿನ ಕಳೆಯೋದರೊಳಗೆ ಏಳು ಮಿಲಿಯನ್‍ಗೂ ಅಧಿಕ ಜನ ಅದನ್ನು ವೀಕ್ಷಿಸಿದ್ದಾರೆ. ಒಟ್ಟಾರೆ ಚಿತ್ರದ ಬಗ್ಗೆ, ದರ್ಶನ್ ಅವರ ಅಭಿನಯದ ಬಗ್ಗೆ ಮೆಚ್ಚುಗೆಗಳ ಮಹಾಪೂರವೇ ಹರಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೀಗಬೇಡ ಟ್ರೆಂಡಿಂಗ್ ಟಾಪಿಕ್ ಆಗಿದ್ದು ಹೇಗೆ?

    ಬೀಗಬೇಡ ಟ್ರೆಂಡಿಂಗ್ ಟಾಪಿಕ್ ಆಗಿದ್ದು ಹೇಗೆ?

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಈಗ ಬೀಗಬೇಡ ಎನ್ನುವ ಟ್ರೆಂಡ್ ಕ್ರಿಯೆಟ್ ಆಗಿದ್ದು, ಜನ `ಬೀಗಬೇಡ’ ಹ್ಯಾಶ್ ಟ್ಯಾಗ್ ಬಳಸಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.

    ಯಾರದ್ದೋ ಮೇಲಿನ ಸಿಟ್ಟು, ಯಾರಿಗೋ ಟಾಂಗ್ ಕೊಡಲು ಜನ ಈಗ ಬೀಗಬೇಡ ಹ್ಯಾಶ್ ಟ್ಯಾಂಗ್ ಬಳಸಿ ಪಂಚಿಂಗ್ ಡೈಲಾಗ್ ಬರೆಯುತ್ತಿದ್ದಾರೆ.

    ಈ ಬೀಗಬೇಡ ಟ್ರೆಂಡ್ ಸೃಷ್ಟಿಯಾಗಲು  ಕಾರಣವಾಗಿದ್ದು ಹಾಸ್ಯ ಸಾಹಿತಿ ಪ್ರಾಣೇಶ್ ಅವರ ಒಂದು ಡೈಲಾಗ್. ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಾಣೇಶ್ “ಎತ್ತರದಲ್ಲಿದ್ದೇನೆಂದು ಬೀಗಬೇಡ. ನಕ್ಷತ್ರಗಳು ಕೆಳಗೆ ಉರುಳಿದ್ದನ್ನು ನೋಡಿದ್ದೇನೆ” ಎಂದು ಹೇಳಿದ್ದರು. ಒಂದು ವರ್ಷದ ಹಿಂದೆ ಈ ಕಾರ್ಯಕ್ರಮ ನಡೆದಿದ್ದು ಆಗ ಅಷ್ಟೇನು ಟ್ರೆಂಡ್ ಕ್ರಿಯೆಟ್ ಆಗಿರಲಿಲ್ಲ. ಕೆಲ ದಿನಗಳ ಹಿಂದೆ ಉತ್ತರ ಕರ್ನಾಟಕ ಫೇಸ್ ಬುಕ್ ಪೇಜ್ ನಲ್ಲಿ ಪ್ರಾಣೇಶ್ ಅವರ ಬೀಗಬೇಡ ಪದಕ್ಕೆ ಪೂರಕವಾಗಿ ಜೀವನಕ್ಕೆ ಅನ್ವಯವಾಗುವ ಸಾಲುಗಳನ್ನು ಬರೆಯಲಾಗಿತ್ತು. ಈ ಸಾಲುಗಳನ್ನು ಜನ ಶೇರ್ ಮಾಡಿದ್ದರ ಪರಿಣಾಮ ಪದ ಪ್ರಚಲಿತಕ್ಕೆ ಬಂತು.

    ಬೀಗಬೇಡ ಪದ ನಿಧಾನಕ್ಕೆ ಫೇಮಸ್ ಆಗುತ್ತಿದ್ದಂತೆ ಹಲವು ಕನ್ನಡ ಪೇಜ್‍ಗಳು ಟ್ರೋಲ್ ಮಾಡಲು ಆರಂಭಿಸಿತ್ತು. ಬಳಿಕ ಜನರು ತಮ್ಮ ಫೇಸ್‍ಬುಕ್, ವಾಟ್ಸಪ್, ಟ್ವಿಟ್ಟರ್ ನಲ್ಲಿ ತಮ್ಮದೇ ಸಾಲುಗಳನ್ನು ಬರೆಯುವುದರ ಮೂಲಕ ಈಗ ಬೀಗಬೇಡ ಪದ ಟ್ರೆಂಡಿಂಗ್ ಟಾಪಿಕ್ ಆಗಿದೆ.

    https://twitter.com/manjuphotoshop/status/1027859071389650944

    ಬೀಗಬೇಡ ಸಾಲುಗಳು:

    ಇವತ್ತು ಹೆಂಡ್ತಿ ಕಾಲು ಹಿಡಿತಾಳೆ ಅಂತ ಬೀಗಬೇಡ.ದಿನಾ ಹೆಂಡ್ತಿ ಕಾಲು ಒತ್ತಿದ್ದು ಕಂಡಿದ್ದೀನಿ

    ಮೊಬೈಲ್ ಚಾರ್ಜ್ 100% ಇದೆ ಎಂದು ಬೀಗಬೇಡ..ಚಾರ್ಜ್ ಗೆ ಹಾಕಿ ಸ್ವಿಚ್ ಆನ್ ಮಾಡದೇ ಇದ್ದವರನ್ನಾ ನೋಡಿದ್ದೀನಿ

    ಹೊಸ ಕಾರು ತಗೊಂಡೆ ಅಂತ ಮೆರೀಬೇಡ..ಫೆರಾರಿಯಲ್ಲಿ ಓಡಾಡ್ತಿದ್ದ ವಿಜಯ್ ಮಲ್ಯ ಪರಾರಿಯಾಗಿದ್ದನ್ನ ಕಂಡಿದ್ದೇನೆ…

    ಕೊನೆಯ ಉಸಿರಿರು ಇರೋವರೆಗೂ ಜೊತೆಗಿರ್ತಾಳೆ ಅಂತ ಬೀಗಬೇಡ. ಸಣ್ಣ ಜಗಳಕ್ಕೆ ಮುನಿಸಿಕೊಂಡು ಜೀವನವನ್ನೆ ನರಕ ಮಾಡಿ ಹೋದವರನ್ನು ನಾವು ಕಂಡಿದ್ದೇವೆ

    ಕೋಟಿ ಸಂಪಾದಿಸಿನೆಂದು ಬೀಗಬೇಡ , ಸಂಪತ್ತು ಇದ್ದರೂ 6×3 ಅಡಿಗಾಗಿ ಕೋರ್ಟ್ ನಲ್ಲಿ ಬೇಡಿದವರನ್ನು ನೋಡಿದ್ದೇವೆ!

    ಆ ಪಕ್ಷ ಈ ಪಕ್ಷ ಎಂದು ಬೀಗಬೇಡ. ಪಿತೃಪಕ್ಷದಲ್ಲೇ ಹೊಗೆ ಹಾಕಿಸಿಕೊಂಡವರನ್ನು ಕಂಡಿದ್ದೇವೆ.

    ನಾನು ದೊಡ್ಡ ಧೈರ್ಯವಂತೆ ಎಂದು ಬೀಗಬೇಡ. ಜಿರಳೆ ಬಂದಾಗ ಓಡಿದವರನ್ನು ನೋಡಿದ್ದೇನೆ.

    ನಾನೇ ಟ್ವೀಟಿಸಿದ್ದು ಚನ್ನಾಗಿದೆಅಂತ ಖುಶಿಯಿಂದ ಬೀಗಬೇಡ. ಅದನ್ನ ಬೇರೆಯವರು copy paste ಮಾಡಿ ನಿನಗಿಂತ ಜಾಸ್ತಿ Likes ತಗೊಂಡಿದ್ದನ್ನ ನಾನು ನೋಡಿದ್ದೇನೆ.

    ಇದನ್ನು ಓದಿದ ಬಳಿಕ ನಿಮ್ಮಲ್ಲೂ ಬೀಗಬೇಡಿ ಟಾಪಿಕ್ ಗೆ ಸಂಬಂಧಿಸಿದಂತೆ ಹೊಸ ಸಾಲುಗಳು ಹುಟ್ಟಿದರೆ ಕಮೆಂಟ್  ಬಾಕ್ಸ್ ನಲ್ಲಿ  ಕಮೆಂಟ್ ಮಾಡಿ