Tag: Tremors

  • ಹರಿಯಾಣ: 1 ಗಂಟೆ ಅವಧಿಯಲ್ಲಿ ಎರಡು ಬಾರಿ ಕಂಪಿಸಿದ ಭೂಮಿ

    ಹರಿಯಾಣ: 1 ಗಂಟೆ ಅವಧಿಯಲ್ಲಿ ಎರಡು ಬಾರಿ ಕಂಪಿಸಿದ ಭೂಮಿ

    ಹರಿಯಾಣ: ಹರಿಯಾಣದ (Haryana) ಫರೀದಾಬಾದ್ (Faridabad) ಜಿಲ್ಲೆಯಲ್ಲಿ ಒಂದರ ಹಿಂದೊಂದರಂತೆ ಭೂಕಂಪನಗಳು ಸಂಭವಿಸಿದೆ. ದೆಹಲಿ-ಎನ್‌ಸಿಆರ್‌ನಾದ್ಯಂತ ಕಂಪನದ ಅನುಭವವಾಗಿದೆ.

    ಫರಿದಾಬಾದ್ ಜಿಲ್ಲೆಯಲ್ಲಿ ಗುರುವಾರ ಎರಡು ಬಾರಿ ಭೂಮಿ ಕಂಪಿಸಿದೆ. ರಾಷ್ಟ್ರೀಯ ಭೂಕಂಪನಶಾಸ್ತ್ರದ ಕೇಂದ್ರದ ಮಾಹಿತಿಯ ಪ್ರಕಾರ, ಮೊದಲ ಕಂಪನವು ಬೆಳಗ್ಗೆ 10.54ಕ್ಕೆ ಸಂಭವಿಸಿದೆ, ಇದಾಗಿ ಗಂಟೆಯೊಳಗೆ ಎರಡನೆಯ ಬಾರಿಗೆ 11.43ಕ್ಕೆ ಭೂಮಿ ಕಂಪಿಸಿದೆ. ಇದನ್ನೂ ಓದಿ: ಜೈಲಿಂದ ಹೊರಬಂದ ಬಳಿಕ ಹೆಚ್‌ಡಿಕೆ ಭೇಟಿಯಾದ ದೇವರಾಜೇಗೌಡ – ಪೆನ್‌ಡ್ರೈವ್‌ ಕೇಸ್ ಬಗ್ಗೆ ಮಾತುಕತೆ

    ದೇಶದ ರಾಜಧಾನಿ ದೆಹಲಿ-ಎನ್‌ಸಿಆರ್‌ನ ಹಲವಾರು ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

  • ವಿಜಯಪುರದ ಹಲವೆಡೆ ಭಾರೀ ಶಬ್ದದೊಂದಿಗೆ ಕಂಪಿಸಿದ ಭೂಮಿ

    ವಿಜಯಪುರದ ಹಲವೆಡೆ ಭಾರೀ ಶಬ್ದದೊಂದಿಗೆ ಕಂಪಿಸಿದ ಭೂಮಿ

    ವಿಜಯಪುರ: ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿದ್ದು, ರಾತ್ರಿ 8:21ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವ ಆಗಿರುವ ಬಗ್ಗೆ ಜನಸಾಮಾನ್ಯರು ಮಾಹಿತಿ ಹಂಚಿಕೊಂಡಿದ್ದಾರೆ.

    ವಿಜಯಪುರ ನಗರದ ಬಸವನಗರ, ಗಾಂಧಿನಗರ, ಗ್ಯಾಂಗ್ ಬಾವಡಿ ಬಡಾವಣೆ ಸೇರಿದಂತೆ ಹಲವೆಡೆ ಭೂಮಿ ಕಂಪಿಸಿದ ಹಿನ್ನೆಲೆ ಮನೆಯಿಂದ ಜನರು ಭಯಭೀತರಾಗಿ ಹೊರಬಂದಿದ್ದಾರೆ. ಭಾರೀ ಶಬ್ದ ಹಾಗೂ ಭೂಮಿ ಕಂಪನದ ಹಿನ್ನೆಲೆ ಮನೆಯಲ್ಲಿನ ಸಾಮಾಗ್ರಿಗಳು ಕೆಳಗೆ ಬಿದ್ದಿವೆ. ಇದನ್ನೂ ಓದಿ: ಷರತ್ತಿನೊಂದಿಗೆ ಗಣೇಶೋತ್ಸವಕ್ಕೆ BBMP ಗ್ರೀನ್ ಸಿಗ್ನಲ್ – ಈದ್ಗಾ ಮೈದಾನ ಗಣಪನಿಗೆ ಸಿಕ್ಕಿಲ್ಲ ಪರ್ಮಿಷನ್

    ಜಿಲ್ಲೆಯ ಬಸವನಬಾಗೇವಾಡಿ, ಇಂಡಿ ವಿಜಯಪುರ, ನಿಡಗುಂದಿ ತಾಲೂಕಿನಲ್ಲೂ ಕಂಪನದ ಅನುಭವಾಗಿದ್ದು, ಈ ಬಗ್ಗೆ ಜನ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನರ್ಸ್, ಫಾರ್ಮಾಸಿಸ್ಟ್ ಜೋಡಿಯ ಟ್ಯಾಬ್ಲೆಟ್ ವೆಡ್ಡಿಂಗ್ ಕಾರ್ಡ್ ವೈರಲ್

    Live Tv
    [brid partner=56869869 player=32851 video=960834 autoplay=true]

  • ಬೀದರ್ ನಲ್ಲಿ ಮತ್ತೆ ಭೂಮಿ ಗಢ ಗಢ- ನಿದ್ದೆ ಮಾಡ್ದೆ ದೇವಸ್ಥಾನದಲ್ಲಿ ಕಾಲಕಳೆದ ಜನ

    ಬೀದರ್ ನಲ್ಲಿ ಮತ್ತೆ ಭೂಮಿ ಗಢ ಗಢ- ನಿದ್ದೆ ಮಾಡ್ದೆ ದೇವಸ್ಥಾನದಲ್ಲಿ ಕಾಲಕಳೆದ ಜನ

    ಬೀದರ್: ತಡರಾತ್ರಿ ಎರಡನೇ ಬಾರಿಗೆ ಲಘು ಭೂಕಂಪನದ ಅನುಭವಾಗಿ ಗ್ರಾಮಸ್ಥರು ರಾತ್ರಿಯಿಡೀ ಗ್ರಾಮದ ದೇವಸ್ಥಾನದಲ್ಲಿ ಕಾಲಕಳೆದ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಟರನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ತಡರಾತ್ರಿ ಸುಮಾರು 12:40ಕ್ಕೆ ಲಘು ಭೂಕಂಪನವಾಗಿದ್ದು ಜನರು ಭಯಗೊಂಡು ಮನೆಯಿಂದ ಓಡಿ ಬಂದಿದ್ದಾರೆ. ಎಲ್ಲಿ ನಿದ್ದೆ ಮಾಡಿದರೆ ಮತ್ತೆ ಭೂಕಂಪನವಾಗಿ ಅನಾಹುತವಾಗುತ್ತೋ ಎಂದು ಭಯಗೊಂಡ ಜನ ರಾತ್ರಿಯಿಡೀ ಗ್ರಾಮದ ದೇವಸ್ಥಾನದಲ್ಲಿ ಜಾಗರಣೆ ಮಾಡಿದ್ದಾರೆ. 5 ಸೆಕೆಂಡ್‍ಗಳ ಕಾಲ ನಡುಗಿದ ಭೂಮಿಗೆ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ಗ್ರಾಮಸ್ಥರು ಭಯದಲ್ಲಿ ನಿದ್ದೆ ಮಾಡದೆ ಕುಳಿತುಕೊಂಡೆ ಭಯದಲ್ಲಿ ಬೆಳಗ್ಗೆವರೆಗೆ ಕಾಲ ಕಳೆದಿದ್ದಾರೆ.

    ಮಂಗಳವಾರ ಭೂಮಿ ಕಂಪನವಾದಾಗ ಸ್ಥಳಕ್ಕೆ ತಹಶೀಲ್ದಾರ್ ಮತ್ತು ಡಿವೈಎಸ್‍ಪಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಈ ರೀತಿ ಪದೇ ಪದೇ ಭೂಮಿ ನಡುತ್ತಿರುವುದಾದ್ರೂ ಏಕೆ ಎಂದು ಆತಂಕದಿಂದ ಗ್ರಾಮಸ್ಥರು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ಮಾಡಿ ಗ್ರಾಮಸ್ಥರಿಗೆ ಉತ್ತರ ನೀಡಬೇಕಾಗಿದೆ.

  • ಉತ್ತರ ಭಾರತದಲ್ಲಿ ಪ್ರಬಲ ಭೂಕಂಪನ

    ನವದೆಹಲಿ: ದೇಶದ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದಾದ್ಯಂತ ಸೋಮವಾರ ರಾತ್ರಿ 10.35ರ ಸುಮಾರಿಗೆ ಪ್ರಬಲ ಭೂಕಂಪ ಸಂಭವಿಸಿದೆ.

    ಸುಮಾರು 30 ಸೆಕೆಂಡ್‍ಗಳ ಭೂಮಿ ಕಂಪಿಸಿದ ಅನುಭವವಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಉತ್ತರಾಖಂಡದ ಪಿಥೌರಾಗಢ ಭೂಕಂಪನದ ಕೇಂದ್ರ ಬಿಂದು ಎನ್ನಲಾಗಿದ್ದು, ರಿಕ್ಟರ್ ಮಾಪಕದಲ್ಲಿ 5.8ರಷ್ಟು ತೀವ್ರತೆ ದಾಖಲಾಗಿದೆ.

    ನವದೆಹಲಿ, ಎನ್‍ಸಿಆರ್, ಪಂಜಾಬ್, ಹರ್ಯಾಣ, ಚಂಡೀಗಢ, ಡೆಹ್ರಾಡೂನ್, ಸಹರಾನ್‍ಪುರ, ಮುಸ್ಸೋರಿ, ಗಾಜಿಯಾಬಾದ್, ಚಂಡೀಗಢದಲ್ಲೂ ಭೂಕಂಪನದ ಅನುಭವವಾಗಿದೆ. ಭೂಕಂಪ ಪ್ರಬಲವಾಗಿದ್ದರೂ ಇದುವರೆಗೆ ಯಾವುದೇ ಹಾನಿ ಅಥವಾ ಸಾವು ನೋವಿನ ವರದಿಯಾಗಿಲ್ಲ.