Tag: Tree Cut

  • ಕಂಪೆನಿ ಬೋರ್ಡ್ ಕಾಣೋದಕ್ಕಾಗಿ 20 ವರ್ಷ ಹಳೆಯ ಮರಕ್ಕೆ ಬೆಂಕಿಯಿಟ್ಟ ಸಿಬ್ಬಂದಿ!

    ಕಂಪೆನಿ ಬೋರ್ಡ್ ಕಾಣೋದಕ್ಕಾಗಿ 20 ವರ್ಷ ಹಳೆಯ ಮರಕ್ಕೆ ಬೆಂಕಿಯಿಟ್ಟ ಸಿಬ್ಬಂದಿ!

    ಬೆಂಗಳೂರು: ಬನ್ನೇರುಘಟ್ಟ ರಸ್ತೆಯಲ್ಲಿರುವ ಆಕ್ಸೆಂಚರ್ ಕಂಪೆನಿ ಸಿಬ್ಬಂದಿ ಮರ ಕಡಿದು ಮರದ ಬುಡಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.

    ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಆಕ್ಸೆಂಚರ್ ಕಂಪೆನಿ ಸಿಬ್ಬಂದಿ ಈ ದರ್ಪದ ವರ್ತನೆ ತೋರಿದ್ದು, ಇಪ್ಪತ್ತು ವರ್ಷ ಹಳೆಯ ಮರಕ್ಕೆ ಬೆಂಕಿಯಿಟ್ಟು ಮರದ ಮಾರಣ ಹೋಮ ನಡೆಸಿದ್ದಾರೆ. ಕಂಪೆನಿ ಬೋರ್ಡ್ ಕಾಣೋದಕ್ಕಾಗಿ ಅರಣ್ಯ ಘಟಕದ ಅನುಮತಿ ಇಲ್ಲದೇ ಮರ ಕಡಿದಿದ್ದಾರೆ.

    ವಕೀಲ ಉಮೇಶ್ ಎಂಬವರು ಬಿಟಿಎಂ ಲೇಔಟ್ ಠಾಣೆಯಲ್ಲಿ ಆಕ್ಸೆಂಚರ್ ಕಂಪೆನಿ ವಿರುದ್ಧ ದೂರು ದಾಖಲಿಸಿದ್ದಾರೆ.