Tag: treatment

  • ಮಿಸ್ ಫೈರಿಂಗ್ – ಡಿಎಆರ್ ಪೊಲೀಸ್ ಪೇದೆ ಸಾವು

    ಮಿಸ್ ಫೈರಿಂಗ್ – ಡಿಎಆರ್ ಪೊಲೀಸ್ ಪೇದೆ ಸಾವು

    ದಾವಣಗೆರೆ: ಬಂದೂಕು ಕ್ಲೀನ್ ಮಾಡುವಾಗ ಮಿಸ್ ಫೈರಿಂಗ್ ಆಗಿ ಪೊಲೀಸ್ ಪೇದೆಯ ಕುತ್ತಿಗೆ ಸೀಳಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ಮೃತ ಡಿಎಆರ್ ಪೊಲೀಸ್ ಪೇದೆಯನ್ನು ಚೇತನ್.ಆರ್(28) ಎಂದು ಗುರುತಿಸಲಾಗಿದೆ. ಈ ಘಟನೆ ದಾವಣಗೆರೆ ಡಿಎಆರ್ ಶಸ್ತ್ರಾಸ್ತ್ರಗಾರದಲ್ಲಿ ಸೋಮವಾರ ಬೆಳಗ್ಗೆ ನಡೆದಿದ್ದು, ತಕ್ಷಣ ಖಾಸಗಿ ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

    2012 ಬ್ಯಾಚ್ ನಲ್ಲಿ ಆಯ್ಕೆಯಾಗಿದ್ದ ಚೇತನ್, ಹುಣಸಘಟ್ಟೆ ಫೈರಿಂಗ್ ಸೆಂಟರ್ ನಿಂದ ಬಂದಂತಹ ಬಂದೂಕು, ರೈಫಲ್ ಗಳನ್ನು ಸೋಮವಾರ ಬೆಳಗ್ಗೆ ಕ್ಲೀನ್ ಮಾಡುತ್ತಿದ್ದರು, ಇದೇ ಸಂದರ್ಭದಲ್ಲಿ ಅಲ್ಲಿಗೆ ಬಂದ ಸ್ನೇಹಿತರನ್ನು ಚೇತನ್ ಮಾತನಾಡಿಸಿಕೊಂಡು ನಿಂತಿದ್ದರು. ಈ ವೇಳೆ ಬಂದೂಕು ಕ್ಲೀನ್ ಮಾಡುತ್ತಿರುವಾಗ ಮಿಸ್ ಫೈರಿಂಗ್ ಆಗಿದ್ದು, ಎದುರಿಗೆ ಇದ್ದ ಚೇತನ್ ಗಂಟಲು ಭಾಗದಿಂದ ತಲೆಗೆ ಬುಲೆಟ್ ಬಿದ್ದಿದೆ. ಕೂಡಲೇ ಖಾಸಗಿ ಆಸ್ಪತ್ರೆಗೆ ಸಾಗಿಸುವುದರೊಳಗೆ ಪ್ರಾಣಪಕ್ಷಿ ಹಾರಿ ಹೋಗಿದೆ. ಇದನ್ನೂ ಓದಿ:ಆ. 31ರೊಳಗೆ ನಿಮ್ಮ ಸೇನೆ ಇಲ್ಲಿಂದ ಕಾಲ್ಕಿತ್ತಬೇಕು- ಅಮೆರಿಕಾಗೆ ತಾಲಿಬಾನಿಗಳ ಬೆದರಿಕೆ

    ಸದ್ಯ ಮೃತ ಪೊಲೀಸ್ ಪೇದೆಯನ್ನು ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಮಲಹಾಳ್ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದ್ದು, ಚೇತನ್ ಕಳೆದ ಐದು ವರ್ಷಗಳ ಹಿಂದೆ ಪ್ರೀತಿಸಿ ಮನೆಯವರ ವಿರೋಧದ ನಡುವೆಯೇ ಮದುವೆಯಾಗಿದ್ದರು. ಅವರಿಗೆ ಎರಡು ವರ್ಷದ ಮಗು ಇದ್ದು, ಇದೀಗ ಚೇತನ್ ಹೆಂಡತಿ ಮತ್ತೆ 9 ತಿಂಗಳ ಗರ್ಭಿಣಿಯಾಗಿದ್ದಾರೆ. ಹೆಣ್ಣು ಮಗು ಆಗಬೇಕು ಎಂದು ಪುಟ್ಟ ಮಗುವಿಗಾಗಿ ಕಾತುರದಿಂದ ಕಾಯುತ್ತಿದ್ದರು. ಆದರೆ ಇಂದು ನಡೆದ ಆ ದುರ್ಘಟನೆಯಿಂದ ಆತನ ಕನಸಿನ ಗೋಪುರವೇ ಕಳಚಿ ಬಿದ್ದಿದೆ. ಅಲ್ಲದೇ ಶಸ್ತ್ರಾಸ್ತ್ರ ಮೀಸಲು ಪಡೆಯಲ್ಲಿ ಚೇತನ್ ಎಲ್ಲಾ ಸಿಬ್ಬಂದಿಗೂ ಅಚ್ಚುಮೆಚ್ಚಾಗಿದ್ದರು. ಆಸ್ಪತ್ರೆಗೆ ಪೂರ್ವ ವಲಯ ಐಜಿಸಿ ರವಿ.ಎಸ್ ಹಾಗೂ ಎಸ್.ಪಿ. ರಿಷ್ಯಂತ್ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿದ್ದರು. ಇದನ್ನೂ ಓದಿ:ರಾಜ್ಯದಲ್ಲಿ ಇಂದಿನಿಂದ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ – ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಚಾಲನೆ

  • 3.5 ಕೋಟಿ ಜನರಿಗೆ ಸ್ಮಾರ್ಟ್ ಹೆಲ್ತ್ ಕಾರ್ಡ್ ಘೋಷಿಸಿದ ಒಡಿಶಾ ಸಿಎಂ

    3.5 ಕೋಟಿ ಜನರಿಗೆ ಸ್ಮಾರ್ಟ್ ಹೆಲ್ತ್ ಕಾರ್ಡ್ ಘೋಷಿಸಿದ ಒಡಿಶಾ ಸಿಎಂ

    ಭುವನೇಶ್ವರ: 75ನೇ ಸ್ವಾತಂತ್ರ್ಯ ದಿನಾಚರಣೆಯಂದು ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಭಾನುವಾರ ಬಿಜು ಸ್ವಾಸ್ಥ್ಯ ಕಲ್ಯಾಣ ಯೋಜನೆಯಡಿ ರಾಜ್ಯದ 3.5 ಕೋಟಿ ಜನರಿಗೆ ಸ್ಮಾರ್ಟ್ ಹೆಲ್ತ್ ಕಾರ್ಡ್ ನೀಡುವುದಾಗಿ ಘೋಷಿಸಿದ್ದಾರೆ.

    ಈ ಯೋಜನೆಯು ಆರೋಗ್ಯ ಸೇವಾ ವಿತರಣಾ ವ್ಯವಸ್ಥೆಯನ್ನು ಪರಿವರ್ತಿಸುತ್ತದೆ ಮತ್ತು ದೇಶದ ಆರೋಗ್ಯ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸುವುದರ ಜೊತೆಗೆ ಹೊಸ ಯುಗಕ್ಕೆ ನಾಂದಿ ಹಾಡಲಿದೆ ಎಂದಿದ್ದಾರೆ. ಇಡೀ ಒಡಿಶಾದ ಎಲ್ಲಾ ಜನರು ನನ್ನ ಕುಟುಂಬ. ಜನರು ಜಮೀನನ್ನು, ಆಭರಣಗಳನ್ನು ಮಾರುವುದರ ಜೊತೆಗೆ ಚಿಕಿತ್ಸಾ ವೆಚ್ಚವನ್ನು ಭರಿಸಲು ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಿರುವ ವಿಚಾರ ನನಗೆ ನೋವುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಅಫ್ಘಾನಿಸ್ತಾನ ತೊರೆದ ಅಧ್ಯಕ್ಷ ಅಶ್ರಫ್ ಘನಿ, ಉಪಾಧ್ಯಕ್ಷ ಸಾಲೇಹ

    ನಂತರ ಜನರನ್ನು ಕಷ್ಟದಿಂದ ಪಾರು ಮಾಡಲು ನಾನು ನಿರ್ಧರಿಸಿದೆ. ಹೀಗಾಗಿ ಜನರು ಲಭ್ಯವಾಗುತ್ತಿರುವ ಉತ್ತಮ ಆರೋಗ್ಯ ಸೌಲಭ್ಯವನ್ನು ಉಚಿತವಾಗಿ ಪಡೆಯಬಹುದು. ಬಿಜು ಸ್ವಾಸ್ಥ್ಯ ಯೋಜನೆಯಡಿ ನಿರ್ದಿಷ್ಟ ಮೊತ್ತಕ್ಕೆ ಡೆಬಿಟ್ ಕಾರ್ಡ್‍ಗಳಾಗಿ ಕಾರ್ಯನಿರ್ವಹಿಸುವ ಸ್ಮಾರ್ಟ್ ಹೆಲ್ತ್ ಕಾರ್ಡ್‍ಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ:ಮುನಿಸು ಶಮನವಾದರೂ ಜಮೀರ್ ಆಹ್ವಾನ ಒಪ್ಪದ ಸಿದ್ದರಾಮಯ್ಯ

  • ಪತ್ನಿಯ ತಿಥಿ ದಿನವೇ ಪತಿ ಸಾವು -ಇಬ್ಬರು ಮಕ್ಕಳು ಅನಾಥ

    ಪತ್ನಿಯ ತಿಥಿ ದಿನವೇ ಪತಿ ಸಾವು -ಇಬ್ಬರು ಮಕ್ಕಳು ಅನಾಥ

    ಮೈಸೂರು: ಕೋವಿಡ್‍ನಿಂದ ಮೃತಪಟ್ಟ ಪತ್ನಿಯ ತಿಥಿ ದಿನವೇ ಪತಿಯೂ ಕೋವಿಡ್‍ನಿಂದಾಗಿ ಸಾವನ್ನಪ್ಪಿದ್ದು, ಇವರ ಇಬ್ಬರು ಮಕ್ಕಳು ಅನಾಥರಾಗಿರುವ ಮನಕಲಕುವ ಘಟನೆ  ಮೈಸೂರಿನಲ್ಲಿ ನಡೆದಿದೆ. ಇದನ್ನೂ ಓದಿ:  ಪತ್ನಿಗೆ ಕೊರೊನಾ- ಪ್ರಾಣ ಬಿಟ್ಟ ಪತಿರಾಯ

    ಕೆ. ಸುಷ್ಮ(37) ಹಾಗೂ ಡಿ.ಪ್ರಸನ್ನ(44) ಮೃತರಾಗಿದ್ದಾರೆ. ಮೈಸೂರಿನ ಗಂಗೋತ್ರಿ ಲೇಔಟ್‍ನ ನಿವಾಸಿಗಳಾದ ಇವರು ಕೊರೊನಾದಿಂದ ಮೃತಪಟ್ಟಿದ್ದಾರೆ. ಹಾಸನ ಸರ್ಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕಿ ಕೆ. ಸುಷ್ಮ ಕಾರ್ಯ ನಿರ್ವಹಿಸುತ್ತಿದ್ದರು. ಇವರ ಪತಿ ಡಿ.ಪ್ರಸನ್ನ ಮೈಸೂರು ವಿಶ್ವವಿದ್ಯಾನಿಲಯದ ತೋಟಗಾರಿಕೆ ವಿಭಾಗದಲ್ಲಿ ತಾತ್ಕಾಲಿಕ ವಾಹನ ಚಾಲಕ ರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದನ್ನೂ ಓದಿ:
    ಕೊರೊನಾ ಸೋಂಕಿಗೆ ಒಂದು ವರ್ಷದ ಕಂದಮ್ಮ ಬಲಿ

    ತಿಂಗಳ ಹಿಂದೆ ಪತಿಗೆ ಕೊರೊನಾ ಸೋಂಕು ತಗುಲಿತ್ತು. ಬಳಿಕ ಪತ್ನಿಯಲ್ಲಿಯೂ ಸೋಂಕು ಕಾಣಿಸಿಕೊಂಡಿತ್ತು. ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಮಧ್ಯೆ ಶಾಲೆಗೆ ರಜೆ ಇದ್ದ ಕಾರಣ ಮಕ್ಕಳನ್ನು ತಾತ ಹುಣಸೂರು ತಾಲ್ಲೂಕಿನಲ್ಲಿನ ಮನೆಯಲ್ಲಿ ಇದ್ದರು. 11 ದಿನದ ಹಿಂದೆ ಸುಷ್ಮ ಮೃತಪಟ್ಟಿದ್ದರು. ಶುಕ್ರವಾರ ಸುಷ್ಮಾ ಅವರ ಹನ್ನೊಂದನೇ ದಿನದ ಕಾರ್ಯವನ್ನು ಮಾಡಲು ಮೈಸೂರಿಗೆ ಮಕ್ಕಳು ಆಗಮಿಸಿದ್ದರು. ಇತ್ತ ತಿಥಿ ಕಾರ್ಯ ನಡೆಯಬೇಕಾದರೆ ತಂದೆ ಪ್ರಸನ್ನ ಕೋವಿಡ್‍ನಿಂದ ಸಾವನ್ನಪ್ಪಿದ್ದಾರೆ. ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ 14,12 ವರ್ಷದ ಇಬ್ಬರು ಹೆಣ್ಣು ಮಕ್ಕಳ ಭವಿಷ್ಯಕ್ಕೆ ಕಾರ್ಮೋಡ ಆವರಿಸಿದೆ. ಇದನ್ನೂ ಓದಿ:  ಕೊರೊನಾದಿಂದ ದೂರವಿರಲು ಹಾವು ತಿಂದ

  • ಕೊರೊನಾ ಸೋಂಕಿಗೆ ಒಂದು ವರ್ಷದ ಕಂದಮ್ಮ ಬಲಿ

    ಕೊರೊನಾ ಸೋಂಕಿಗೆ ಒಂದು ವರ್ಷದ ಕಂದಮ್ಮ ಬಲಿ

    ಶಿವಮೊಗ್ಗ: ಕೊರೊನಾ ಸೋಂಕಿಗೆ ಒಂದು ವರ್ಷದ ಕಂದಮ್ಮ ಬಲಿಯಾದ ಮನಕಲಕುವ ಘಟನೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ.

    ಮೃತಪಟ್ಟ ಮಗುವನ್ನು ಉದಮ (1) ಎಂದು ಗುರುತಿಸಲಾಗಿದೆ. ಶಿವಮೊಗ್ಗದ ಗಾಂಧಿ ಬಜಾರಿನ ಮಡಿವಾಳರ್ ಕೇರಿ ನಿವಾಸಿಯಾಗಿರುವ ಉದಯ – ಚೈತ್ರಾ ದಂಪತಿಯ ಮಗು ಕೊರೊನಾ ಸೋಂಕಿಗೆ ಬಲಿಯಾಗಿದೆ. ಇದನ್ನೂ ಓದಿ : ವಿವಾಹವಾದ ನಾಲ್ಕೇ ದಿನಕ್ಕೆ ಕೊರೊನಾಗೆ ಬಲಿಯಾದ ನವ ವಿವಾಹಿತೆ

    ಮಗುವಿಗೆ ಬಿಳಿ ರಕ್ತಕಣ ಕಡಿಮೆಯಾಗಿದೆ ಎಂದು ಹೆತ್ತವರು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಮಗುಗೆ ಆಕ್ಸಿಜನ್ ಸಮಸ್ಯೆ ಎದುರಾಗಿದೆ. ನಂತರ ಮಗುವನ್ನು ಚಿಕಿತ್ಸೆಗೆಂದು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ : ಮದುವೆಯಾದ ನಾಲ್ಕೇ ದಿನಕ್ಕೆ ನವವಿವಾಹಿತೆ ಕೊರೊನಾಗೆ ಬಲಿ..!

    ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ ನಂತರ ಮಗುವನ್ನು ಕೋವಿಡ್ ಟೆಸ್ಟ್‍ಗೆ ಒಳಪಡಿಸಿದ್ದಾರೆ. ನಂತರ ಮಗುಗೆ ಕೋವಿಡ್ ಸೋಂಕಿರುವುದು ದೃಢಪಟ್ಟಿದೆ. ಚಿಕಿತ್ಸೆ ಪಡೆಯುತ್ತಿದ್ದ ಮಗು ನಿನ್ನೆ ರಾತ್ರಿ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದೆ. ಮಗು ಮೃತಪಟ್ಟ ನಂತರ ಹೆತ್ತವರು ಹಾಗೂ ಕುಟುಂಬಸ್ಥರ ರೋಧನೆ ಮುಗಿಲು ಮುಟ್ಟಿದೆ. ಇದನ್ನೂ ಓದಿ:  ಸೋಂಕು ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ವ್ಯಕ್ತಿಯೇ ಕೊರೊನಾಗೆ ಬಲಿ

  • ರಾಯಚೂರಿನಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣ ಹೆಚ್ಚಳ – ನಾಲ್ಕು ಜನ ಸೋಂಕಿತರು ಸಾವು

    ರಾಯಚೂರಿನಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣ ಹೆಚ್ಚಳ – ನಾಲ್ಕು ಜನ ಸೋಂಕಿತರು ಸಾವು

    ರಾಯಚೂರು: ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಒಟ್ಟು 31 ಪ್ರಕರಣಗಳು ಈಗಾಗಲೇ ದಾಖಲಾಗಿದ್ದು, ಇದುವರೆಗೆ ನಾಲ್ಕು ಜನ ಸೋಂಕಿತರು ಬ್ಲ್ಯಾಕ್ ಫಂಗಸ್‍ಗೆ ಬಲಿಯಾಗಿದ್ದಾರೆ.

    ಜಿಲ್ಲೆಯಲ್ಲಿ ದಾಖಲಾಗಿರುವ ಬ್ಲ್ಯಾಕ್ ಫಂಗಸ್ ಪ್ರಕರಣಗಳ ಪೈಕಿ, ಖಾಸಗಿ ಆಸ್ಪತ್ರೆಗಳಲ್ಲಿ ಪತ್ತೆಯಾದ ಪ್ರಕರಣಗಳು ಹಾಗೂ ಸಾವಿನ ಲೆಕ್ಕವನ್ನು ಜಿಲ್ಲಾಡಳಿತ ಪ್ರಕಟಿಸಿಲ್ಲ. ಸದ್ಯ 23 ಜನ ಸೋಂಕಿತರು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಇದನ್ನೂ ಓದಿ, ರಾಯಚೂರಿನ ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಕೊರೊನಾ- ಆರೈಕೆ ಕೇಂದ್ರಕ್ಕೆ ಬರಲೊಪ್ಪದ ಜನ

    ರಿಮ್ಸ್ ಆಸ್ಪತ್ರೆಯಿಂದ ಚಿಕಿತ್ಸೆಗಾಗಿ ಬೇರೆಡೆಗೆ 4 ಜನ ಸೋಂಕಿತರು ಹೋಗಿದ್ದಾರೆ. ಬ್ಲ್ಯಾಕ್ ಫಂಗಸ್ ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್‍ನ್ನು ಈಗಾಗಲೇ ಆರಂಭ ಮಾಡಲಾಗಿದೆ. 28 ಹಾಸಿಗೆಯ ವಾರ್ಡ್ ನಲ್ಲಿ ಚಿಕಿತ್ಸೆ ಆರಂಭಿಸಲಾಗಿದೆ. 11 ಜನ ನುರಿತ ಇ.ಎನ್.ಟಿ ವೈದ್ಯರ ತಂಡ ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದೆ. ಇದುವರೆಗೆ ಇಬ್ಬರೂ ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲೂ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

  • ಕೊರೊನಾ ಗೆದ್ದ 105 ವರ್ಷದ ಅಜ್ಜಿ

    ಕೊರೊನಾ ಗೆದ್ದ 105 ವರ್ಷದ ಅಜ್ಜಿ

    ಬೆಂಗಳೂರು: ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 105 ವರ್ಷದ ವೃದ್ಧೆಯೊಬ್ಬರು ಕೊರೊನಾದಿಂದ ವಾಸಿಯಾಗಿದ್ದಾರೆ.

    105 ವರ್ಷದ ಲಕ್ಷ್ಮಮ್ಮ ಅಜ್ಜಿಗೆ ಕೊರೊನಾ ಸೋಂಕು ದೃಢವಾಗಿತ್ತು. ಹೀಗಾಗಿ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ 12 ದಿನದಿಂದ ಚಿಕಿತ್ಸೆ ಪಡೆಯುತ್ತಾ ಇದ್ದ ಅಜ್ಜಿ ಇದೀಗ ಕೊರೊನದಿಂದ ವಾಸಿಯಾಗಿದ್ದರೆ.

    ದೇಶಾದ್ಯಂತ ಅಬ್ಬರಿಸಿದ್ದ ಮಾರಕ ಕೊರೊನಾ ಸೋಂಕಿನ ಪ್ರಮಾಣ ಕೊಂಚ ತಗ್ಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 2.22ಲಕ್ಷಕ್ಕೂ ಅಧಿಕ ಹೊಸ ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿದ್ದು, 4,454 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

  • ಕೊರೊನಾ ಸೋಂಕಿಗೆ ಯುವಕ ಬಲಿ

    ಕೊರೊನಾ ಸೋಂಕಿಗೆ ಯುವಕ ಬಲಿ

    ಕೊಪ್ಪಳ: ಕೊರೊನಾದ ಎರಡನೇ ಅಲೆಯಲ್ಲಿ ಹೆಚ್ಚಾಗಿ ಯುವಕ ಯುವತಿಯರು ಸಾವನ್ನಪ್ಪುತ್ತಿದ್ದು, ಸದ್ಯ ಕೊಪ್ಪಳ ಜಿಲ್ಲೆಯಲ್ಲಿ ಯುವಕನೋರ್ವ ಕೊರೊನಾ ಸೋಂಕಿಗೆ ಬಲಿಯಾಗಿದ್ದಾನೆ.

    ಕೊಪ್ಪಳದ ಗಂಗಾವತಿ ತಾಲೂಕಿನ ಅರಳಹಳ್ಳಿ ರಾಜರಾಜೇಶ್ವರಿ ಬ್ರಹನ್ಮಠದ ಸ್ವಾಮೀಜಿಯಾದ ಶ್ರೀ ಗವಿಸಿದ್ದೇಶ್ವರ ತಾತನವರ ದ್ವಿತೀಯ ಸುಪುತ್ರ ಪ್ರಸಾದ್ (19)  ಮೃತ ಯುವಕ.

    ಕಳೆದ 10 ದಿನಗಳ ಹಿಂದೆ ಯುವಕನಿಗೆ ಸೊಂಕು ಕಾಣಿಸಿಕೊಂಡಿದ್ದು, ಕೊಪ್ಪಳದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊಳ್ಳುತ್ತಿದ್ದನು, ಚಿಕಿತ್ಸೆ ಫಲಕಾರಿಯಾಗದೆ ತೀವ್ರ ಉಸಿರಾಟದ ತೊಂದರೆಯಿಂದ ಪ್ರಸಾದ್ ಇಂದು ಕೊನೆಯುಸಿರೆಳೆದಿದ್ದಾನೆ. ಬಾಳಿ-ಬದುಕಬೇಕಾದ ಯುವಕ ಕೊರೊನಾಗೆ ಬಲಿಯಾಗಿದ್ದು, ಕುಟುಂಬದ ಅಕ್ರಂದನ ಮುಗಿಲು ಮುಟ್ಟಿದೆ. ನಂತರ ಮಠದ ಜಮೀನಿನಲ್ಲಿ ಯುವಕನ ಅಂತ್ಯ ಸಂಸ್ಕಾರ ನಡೆಸಲಾಯಿತು.

  • ಒಂದು ವಾರದ ಅಂತರದಲ್ಲಿ ಅಣ್ಣ, ತಮ್ಮ ಕೊರೊನಾಗೆ ಬಲಿ

    ಒಂದು ವಾರದ ಅಂತರದಲ್ಲಿ ಅಣ್ಣ, ತಮ್ಮ ಕೊರೊನಾಗೆ ಬಲಿ

    ಮೈಸೂರು: ವಾರದ ಅಂತರದಲ್ಲಿ ಇಬ್ಬರು ಸಹೋದರರು ಕೊರೊನಾಗೆ ಬಲಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

    ಪ್ರಸಾದ್( 31) ರಾಘವೇಂದ್ರ (33) ಮೃತರಾಗಿದ್ದಾರೆ. ಮೈಸೂರಿನ ಬಂಡಿಪಾಳ್ಯ ನಿವಾಸಿಯಾದ ನವೀನ್ ಅವರ ಇಬ್ಬರು ಹಿರಿಯ ಸಹೋದರರು ಒಂದು ವಾರದ ಅಂತರದಲ್ಲಿ ಕೊರೊನಾಗೆ ಬಲಿಯಾಗಿದ್ದಾರೆ.

    ಕಳೆದ ವಾರ ನವೀನ್ ಅವರ ಎರಡನೇ ಅಣ್ಣ ಪ್ರಸಾದ್ ಸಾವನ್ನಪ್ಪಿದ್ದರು. ಇಂದು ಮೊದಲನೇ ಅಣ್ಣ ರಾಘವೇಂದ್ರ ಕೊರೊನಾಗೆ ಬಲಿಯಾಗಿದ್ದಾರೆ. ಆಸ್ಪತ್ರೆಯಿಂದ ಕೊನೆ ಕ್ಷಣದಲ್ಲಿ ಪತ್ನಿ ಹಾಗೂ ತಮ್ಮನಿಗೆ ವೀಡಿಯೋ ಕಾಲ್ ಮಾಡಿದ್ದ ರಾಘವೇಂದ್ರ, ನಾನು ಗುಣಮುಖನಾಗಿ ಬರುವೆ ಎಂದು ಹೇಳಿದ್ದರು.

    ವೀಡಿಯೋ ಕಾಲ್ ಮಾಡಿದ ಮರು ದಿನವೇ ಸಾವನ್ನಪ್ಪಿದ್ದಾರೆ. ಇಬ್ಬರು ಅಣ್ಣರ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಮೃತ ಸಹೋದರನ ಕೊನೆಯ ತಮ್ಮ ನವೀನ್ ಆರೋಪಿಸಿದ್ದಾರೆ. ಇಬ್ಬರು ಸಹೋದರರನ್ನುಕೇದುಕೊಂಡು ಕಣ್ಣೀರು ಹಾಕಿದ್ದಾರೆ.

  • ಪೊನ್ನಂಬಲಂ ಚಿಕಿತ್ಸೆಗೆ ಮೆಗಾಸ್ಟಾರ್ ಚಿರಂಜೀವಿಯಿಂದ ನೆರವು

    ಪೊನ್ನಂಬಲಂ ಚಿಕಿತ್ಸೆಗೆ ಮೆಗಾಸ್ಟಾರ್ ಚಿರಂಜೀವಿಯಿಂದ ನೆರವು

    ಚೆನ್ನೈ: ದಕ್ಷಿಣ ಭಾರತದ ಖ್ಯಾತ ಖಳನಟ ಪೊನ್ನಂಬಲಂ ಕಿಡ್ನಿ ಚಿಕಿತ್ಸೆಗೆ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಧನ ಸಹಾಯ ಮಾಡಿದ್ದಾರೆ. ಈ ಬಗ್ಗೆ ಪೊನ್ನಂಬಲಂರವರೆ ಸ್ವತಃ ವೀಡಿಯೋವೊಂದನ್ನು ಮಾಡುವ ಮೂಲಕ ಚಿರಂಜೀವಿಯವರಿಗೆ ಧನ್ಯವಾದ ತಿಳಿಸಿದ್ದಾರೆ.

    ಹಲವು ದಿನಗಳಿಂದ ಪೊನ್ನಂಬಲಂರವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಸಹಾಯಕ್ಕಾಗಿ ಆರ್ಥಿಕ ಸಹಾಯಬೇಕಿದೆ ಎಂದು ಆಸ್ಪತ್ರೆಯ ಬೆಡ್ ಮೂಲಕ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

    ಇದೀಗ ಪೊನ್ನಂಬಲಂ ಕಿಡ್ನಿ ಆಪರೇಷನ್‍ಗೆ ಮೆಗಾಸ್ಟಾರ್ ಚಿರಂಜೀವಿ 2 ಲಕ್ಷ ರೂ. ನೀಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ. ಹೀಗಾಗಿ ಪೊನ್ನಂಬಲಂ, ಚಿರಂಜೀವಿ ಅಣ್ಣನಿಗೆ ನಮಸ್ತೇ. ನನ್ನ ಕಿಡ್ನಿ ಆಪರೇಷನ್‍ಗೆ ನೀವು 2 ಲಕ್ಷ ನೀಡಿದ್ದು, ಬಹಳ ಸಹಾಯವಾಯಿತು. ಜೀವನಪೂರ್ತಿ ಈ ಸಹಾಯವನ್ನು ನಾನು ಮರೆಯಲ್ಲ. ಆ ದೇವರು ನಿಮಗೆ ಒಳ್ಳೆಯದು ಮಾಡಲಿ’ ಎಂದು ವೀಡಿಯೋ ಮಾಡುವ ಮೂಲಕ ಶುಭ ಹಾರೈಸಿದ್ದಾರೆ.

    ಈ ಮುನ್ನ ಪೊನ್ನಂಬಲಂ ಆರೋಗ್ಯ ಸ್ಥಿತಿ ಹದಗೆಟ್ಟಾಗ ಕಾಲಿವುಡ್ ನಟ ಸೂಪರ್ ಸ್ಟಾರ್ ರಜನಿಕಾಂತ್ ಆರ್ಥಿಕ ನೆರವು ನೀಡಿದ್ದರು. ಅಲ್ಲದೆ ನಟ ಕಮಲ್ ಹಾಸನ್ ಪೊನ್ನಂಬಲಂರವರ ಇಬ್ಬರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಭರವಸೆ ನೀಡಿದ್ದರು.

     

    ಪೊನ್ನಂಬಲಂರವರು ತಮಿಳು, ತೆಲುಗು ಸೇರಿದಂತೆ ಕನ್ನಡದಲ್ಲಿದ ಓ ನನ್ನ ನಲ್ಲೆ, ಚಿನ್ನ, ಲೇಡಿ ಕಮೀಷನರ್, ಕಿಚ್ಚ, ಗುನ್ನಾ, ಮಸ್ತಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬಣ್ಣಹಚ್ಚಿದ್ದಾರೆ.

  • ನಕಲಿ ವೈದ್ಯರ ವಿರುದ್ಧ ಜಿಲ್ಲಾಡಳಿತ ಸಮರ- ಕ್ಲಿನಿಕ್ ಮೇಲೆ ದಾಳಿ

    ನಕಲಿ ವೈದ್ಯರ ವಿರುದ್ಧ ಜಿಲ್ಲಾಡಳಿತ ಸಮರ- ಕ್ಲಿನಿಕ್ ಮೇಲೆ ದಾಳಿ

    ಯಾದಗಿರಿ: ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಕಠಿಣ ನಿರ್ಧಾರ ಕೈಗೊಂಡಿರುವ ಯಾದಗಿರಿ ಜಿಲ್ಲಾಡಳಿತ ನಕಲಿ ವೈದ್ಯರ ವಿರುದ್ಧ ಸಮರಸಾರಿದ್ದು, ಆರ್‍ಎಂಪಿ (ಗ್ರಾಮೀಣ ವೈದ್ಯಕೀಯ ವೈದ್ಯರು) ವೈದ್ಯರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದೆ.

    ಕೊರೊನಾ ಎರಡನೇ ಅಲೆ ಯಾದಗಿರಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಇದಕ್ಕೆ ಪರೋಕ್ಷವಾಗಿ ನಕಲಿ ವೈದ್ಯರ ಹಾವಳಿ ಕಾರಣವಾಗಿದೆ. ಜಿಲ್ಲೆಯ ಎಲ್ಲಾ ತಾಲೂಕಿನ ಮತ್ತು ಗ್ರಾಮಗಳ ಜನ ನಕಲಿ ವೈದ್ಯರನ್ನು ನೆಚ್ಚಿಕೊಂಡಿದ್ದಾರೆ. ಬಂಡವಾಳ ಮಾಡಿಕೊಂಡಿರುವ ನಕಲಿ ವೈದ್ಯರು ಜನರಿಗೆ ಕೊರೊನಾ ಇದ್ದರೂ, ಅದನ್ನು ಅವರಿಗೆ ತಿಳಿಸದೆ ಸಾಮಾನ್ಯ ಚಿಕಿತ್ಸೆ ನೀಡುತ್ತಿದ್ದಾರೆ. ಜನರಿಗೆ ಆರೋಗ್ಯ ತೀರಾ ಆರೋಗ್ಯ ಹದಗೆಟ್ಟಾಗ, ಸರ್ಕಾರಿ ಆಸ್ಪತ್ರೆಗಳಿಗೆ ಕಳುಹಿಸುತ್ತಿದ್ದಾರೆ.

    ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ಕೆಂಡಾಮಂಡಲವಾಗಿ ಡಿಸಿ ರಾಗಪ್ರಿಯ ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳ ತಂಡಗಳನ್ನು ರಚಿಸಿದ್ದು, ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ತಹಶಿಲ್ದಾರ ಚನ್ನಮಲ್ಲಪ್ಪ, ಜನಗನಾಥ್ ರೆಡ್ಡಿ ಸೇರಿದಂತೆ ವಿವಿಧ ಅಧಿಕಾರಿಗಳು ನಕಲಿ ಕ್ಲಿನಿಕ್ ಮೇಲೆ ದಾಳಿ ಮಾಡಿ, ವೈದ್ಯರನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ.