Tag: treatment

  • ಚಿಕ್ಕಮಗಳೂರಿನ ಕೊಪ್ಪದಲ್ಲಿ ಹಾಲಿವುಡ್ ಹೀರೋಯಿನ್‍ಗೆ ಆರ್ಯುವೇದ ಚಿಕಿತ್ಸೆ!

    ಚಿಕ್ಕಮಗಳೂರಿನ ಕೊಪ್ಪದಲ್ಲಿ ಹಾಲಿವುಡ್ ಹೀರೋಯಿನ್‍ಗೆ ಆರ್ಯುವೇದ ಚಿಕಿತ್ಸೆ!

    ಚಿಕ್ಕಮಗಳೂರು: ಆಸ್ಟ್ರೇಲಿಯಾ ದೇಶದ ಹಾಲಿವುಡ್ ಬೆಡಗಿ ಇಸಾಬೆಲ್ ಲೂಕಾಸ್ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದ ಆರೋಗ್ಯನಿಕೇತನ ಆಯುರ್ವೇದಾಶ್ರಮಲ್ಲಿ ಚಿಕಿತ್ಸೆ ಪಡೆದಿದ್ದಾರೆ.

    20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇಸಾಬೆಲ್ ಹಾಲಿವುಡ್‍ನ ಹೆಸರಾಂತ ನಟಿ. ಹಾಲಿವುಡ್ ಚಿತ್ರಗಳೆಂದ್ರೆ ಆ್ಯಕ್ಷನ್, ಸ್ಟಂಟು, ಫೈಟ್‍ಗೇನು ಕೊರತೆ ಇರೋಲ್ಲ. ಸಿನಿಮಾಕ್ಕಾಗಿ ದೇಶ-ದೇಶ ಸುತ್ತಿದ್ದ ಇವರು ಮಾನಸಿಕ ಹಾಗೂ ದೈಹಿಕ ಖಿನ್ನತೆಗೆ ಒಳಗಾಗಿದ್ದರು. ತನ್ನ ದೇಹದ ಸ್ಥಿತಿಗತಿಯನ್ನ ಹತೋಟಿಗೆ ತಂದುಕೊಳ್ಳಲು ಇಸಾಬೆಲ್ ಆಯ್ಕೆ ಮಾಡಿಕೊಂಡ ಜಾಗ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರ ಗ್ರಾಮದ ಆರೋಗ್ಯನಿಕೇತನ ಆಯುರ್ವೇದಾಶ್ರಮ. ಕಳೆದ ಮೂರು ವಾರಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಇಸಬೆಲ್ಲಾ ಇದೀಗ ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಟ್ರೇಲಿಯಾಕ್ಕೆ ಹಿಂದಿರುಗಲಿದ್ದಾರೆ.

    ಭಾರತದ ಆಯುರ್ವೇದ ಚಿಕಿತ್ಸೆಯಿಂದಾಗಿ ನಾನೂ ಮೊದಲಿನಂತಾಗಿ ಸಂತೋಷದಿಂದ ನನ್ನ ದೇಶಕ್ಕೆ ಹಿಂತಿರುಗುತ್ತಿದ್ದೇನೆ. “ಹ್ಯಾಟ್ಸಾಫ್ ಇಂಡಿಯಾ ಅಂಡ್ ಇಂಡಿಯನ್ ಮೆಡಿಸಿನ್” ಎಂದು ನಟಿ ಇಸಾಬೆಲ್ ಲೂಕಾಸ್ ಹೇಳುವ ಮೂಲಕ ಆಯುರ್ವೇದ ಚಿಕಿತ್ಸೆಯನ್ನು ಹೊಗಳಿದರು.

    ಕೊಪ್ಪಗೆ ಬಂದಿದ್ದು ಹೇಗೆ?
    ಟ್ರಾನ್ಸ್ ಫಾರ್ಮರ್, ರಿವೇಂಜ್ ಆಫ್ ದಿ ಫಾಲೆನ್, ಡೇ ಬ್ರೇಕರ್ಸ್, ದಿ ಫೆಸಿಪಿಕ್, ಡಸ್ ನಾಟ್ ಮೀ ಸೇರರಿದಂತೆ 20 ಕ್ಕೂ ಹೆಚ್ಚು ಹಾಳಿವುಡ್ ಸಿನಿಮಾಗಳಲ್ಲಿ ನಟಿಸಿರುವ ಇಸಾಬೆಲ್ ಹೋಂ ಆಂಡ್ ವೇ ಕಿರುತೆರೆ ದಾರಾವಾಹಿ ಹೆಸರು ತಂದುಕೊಟ್ಟಿತ್ತು. ಇಸಾಬೆಲ್ ಸ್ನೇಹಿತೆ ಪಾಪ್ ಗಾಯಕಿ ಜೂಲಿಯಾ ಸ್ಟೋನ್ ಮ್ಯಾಗ್ಜೇನ್ ಮೂಲಕ ಹರಿಹರಪುರದ ಆಯುರ್ವೇದಾಶ್ರಮದ ಬಗ್ಗೆ ಮಾಹಿತಿ ಪಡೆದುಕೊಂಡು, ಒಮ್ಮೆ ಇಲ್ಲಿಗೆ ಭೇಟಿ ನೀಡಿದ್ದರು. ನಂತರ ನಟಿ ಇಸಾಬೆಲ್ ಅವರಿಗೆ ಇಲ್ಲಿಗೆ ಹೋಗಿ ಚಿಕತ್ಸೆ ಪಡೆಯೋದಕ್ಕೆ ಸಲಹೆ ನೀಡಿದ್ದರು. ಈ ಸಲಹೆಯ ಹಿನ್ನೆಲೆಯಲ್ಲಿ ಇಸಾಬೆಲ್ ಕೊಪ್ಪಗೆ ಬಂದಿದ್ದರು.

    ವಿದೇಶಿಯರಿಗೆ ಚಿಕಿತ್ಸೆ:
    ಚಿಕ್ಕಮಗಳೂರು ಜಿಲ್ಲೆ ಕೊಪ್ಪಾದ ಆರೋಗ್ಯನಿಕೇತನ ಆಯುರ್ವೇದಾಶ್ರಮದಲ್ಲಿ ಸದ್ಯ 15ಕ್ಕೂ ಹೆಚ್ಚು ವಿದೇಶಿಗರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 10 ವರ್ಷದಿಂದ ಆಯುರ್ವೇದ ಚಿಕಿತ್ಸೆ ನಡೆಸುತ್ತಿರುವ ಈ ಆಶ್ರಮದಲ್ಲಿ ಈವರಗೆ ಮೂರು ಸಾವಿರಕ್ಕೂ ಅಧಿಕ ವಿದೇಶಿಗರು ಚಿಕಿತ್ಸೆ ಪಡೆದಿದ್ದು, ಈಗಲೂ ವಾರ್ಷಿಕ ನೂರಾರು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಮೆರಿಕ, ರಷ್ಯಾ, ಜಪಾನ್ ಸೇರಿದಂತೆ ನಾಲ್ಕೈದು ದೇಶದವರು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರತದ ಆಯುರ್ವೇದ ಹಾಗೂ ಇಲ್ಲಿನ ಪಥ್ಯದ ಚಿಕಿತ್ಸೆಯಿಂದ ನಮ್ಮ ದೇಹದ ಆಂತರಿಕ ಹಾಗೂ ಬಾಹ್ಯ ಸ್ಥಿತಿಗತಿಗಳು ತುಂಬಾ ಬದಲಾಗಿದೆ ಎಂದು ಇಲ್ಲಿನ ಚಿಕಿತ್ಸೆ ಬಗ್ಗೆ ಹರ್ಷ ವ್ಯಕ್ತಪಡಿಸ್ತಾರೆ. ಜೊತೆಗೆ ಅಮೆರಿಕದ ಕೆಲ ವಿದ್ಯಾರ್ಥಿಗಳು ಇಲ್ಲಿನ ಆಯುರ್ವೇದದ ಚಿಕಿತ್ಸೆಯನ್ನು ಕಲಿಯುತ್ತಿದ್ದಾರೆ.

     

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಚಿಕ್ಕಬಳ್ಳಾಪುರದ ನಕಲಿ ವೈದ್ಯನಿಗೆ ಶೋಕಾಸ್ ನೋಟಿಸ್ ಜಾರಿ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಚಿಕ್ಕಬಳ್ಳಾಪುರದ ನಕಲಿ ವೈದ್ಯನಿಗೆ ಶೋಕಾಸ್ ನೋಟಿಸ್ ಜಾರಿ

    ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲೂಕು ಆಚೇಪಲ್ಲಿ ಕ್ರಾಸ್ ಬಳಿಯ ಅಯ್ಯಪ್ಪ ಎಂಟರ್‍ಪ್ರೈಸಸ್ ಅಂಗಡಿಯಲ್ಲಿ ವೈದ್ಯಕೀಯ ಪರೀಕ್ಷೆ ಹಾಗೂ ಚಿಕಿತ್ಸೆಯನ್ನ ನೀಡುತ್ತಿದ್ದ ನಕಲಿ ವೈದ್ಯನಿಗೆ ಶೋಕಾಸ್ ನೋಟಿಸ್ ಜಾರಿಯಾಗಿದೆ.

    ವರದಿಯ ಫಲಶೃತಿಯಾಗಿ ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆಯಂತೆ ಸ್ಥಳಕ್ಕೆ ಭೇಟಿ ನೀಡಿದ್ದ ತಾಲೂಕು ಆರೋಗ್ಯಾಧಿಕಾರಿ ಸತ್ಯನಾರಾಯಣ್ ಅವರು ನಕಲಿ ವೈದ್ಯ ನರೇಶ್‍ಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.  ಒಂದು ವಾರದೊಳಗೆ ವಿಚಾರಣೆಗೆ ಖುದ್ದಾಗಿ ಹಾಜರಾಗಿ ಉತ್ತರ ನೀಡುವಂತೆ ನೋಟಿಸ್‍ನಲ್ಲಿ ಉಲ್ಲೇಖ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ರವಿ ಪ್ರಕಾಶ್ ನಕಲಿ ವೈದ್ಯರ ಕಡಿವಾಣಕ್ಕೆ ಕಾನೂನು ರೀತಿಯ  ಎಲ್ಲ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

    ನರೇಶ್ ಕಳೆದ ಮೂರು ವರ್ಷಗಳಿಂದ ಜನರಿಗೆ ಚಿಕಿತ್ಸೆ ನೀಡುತ್ತಿದ್ದನು. ಈ ಪ್ರಕರಣದ ಬೆನ್ನತ್ತಿದ್ದ ಪಬ್ಲಿಕ್ ರಹಸ್ಯ ಕಾರ್ಯಚರಣೆಯ ಮೂಲಕ ಪ್ರಕರಣವನ್ನು ಬಯಲು ಮಾಡಿತ್ತು.

    ಇದನ್ನೂ ಓದಿ: ಚಿಲ್ಲರೆ ಅಂಗಡಿಯಲ್ಲಿ ತಲೆ ಎತ್ತಿದೆ ಆಸ್ಪತ್ರೆ – ಅಂಗಡಿ ಮಾಲೀಕನೇ ಇಲ್ಲಿ ಡಾಕ್ಟರ್  

     

  • ಚಿಲ್ಲರೆ ಅಂಗಡಿಯಲ್ಲಿ ತಲೆ ಎತ್ತಿದೆ ಆಸ್ಪತ್ರೆ – ಅಂಗಡಿ ಮಾಲೀಕನೇ ಇಲ್ಲಿ ಡಾಕ್ಟರ್

    ಚಿಲ್ಲರೆ ಅಂಗಡಿಯಲ್ಲಿ ತಲೆ ಎತ್ತಿದೆ ಆಸ್ಪತ್ರೆ – ಅಂಗಡಿ ಮಾಲೀಕನೇ ಇಲ್ಲಿ ಡಾಕ್ಟರ್

    – ಬಾಗೇಪಲ್ಲಿ ಜನರ ಜೀವದ ಜೊತೆ ನಕಲಿ ವೈದ್ಯನ ಚೆಲ್ಲಾಟ

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಮಿತಿ ಮೀರಿದ್ದು, ಇದಕ್ಕೆ ಸ್ಪಷ್ಟ ನಿದರ್ಶನ ಎಂಬಂತೆ ಚಿಲ್ಲರೆ ಅಂಗಡಿಯೊಂದರಲ್ಲಿ ಅಂಗಡಿ ಮಾಲೀಕ ವೈದ್ಯಕೀಯ ಚಿಕಿತ್ಸೆ ನೀಡುತ್ತಿರುವ ಘಟನೆ ಪಬ್ಲಿಕ್ ಟಿವಿ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಜಿಲ್ಲೆಯ ಬಾಗೇಪಲ್ಲಿ ತಾಲೂಕು ಆಚೇಪಲ್ಲಿ ಕ್ರಾಸ್ ಬಳಿಯ ಅಯ್ಯಪ್ಪ ಎಂಟರ್‍ಪ್ರೈಸಸ್ ಅಂಗಡಿಯಲ್ಲಿ ವೈದ್ಯಕೀಯ ಪರೀಕ್ಷೆ ಹಾಗೂ ಚಿಕಿತ್ಸೆಯನ್ನ ನೀಡಲಾಗ್ತಿದೆ. ಅಂಗಡಿ ಮಾಲೀಕ ನರೇಶ್ ಎಂಬಾತ ವೈದ್ಯಕೀಯ ಪರೀಕ್ಷೆ ಮಾಡಿ ಮಾತ್ರೆ ಹಾಗೂ ಇಂಜೆಕ್ಷನ್ ನೀಡುತ್ತಾ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾನೆ.

    ನಾನು ಆರ್‍ಎಂಪಿ ಡಾಕ್ಟರ್, ಕಳೆದ 3 ವರ್ಷಗಳಿಂದಲೂ ಇದೇ ರೀತಿ ಚಿಕಿತ್ಸೆ ನೀಡುತ್ತಿದ್ದೇನೆ ಎಂದು ಅಂಗಡಿ ಮಾಲೀಕ ನರೇಶ್ ಹೇಳಿದ್ದಾನೆ. 3 ವರ್ಷಗಳಿಂದಲೂ ಅಂಗಡಿ ಮಾಲೀಕ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ರೂ ಅಕ್ರಮಕ್ಕೆ ಕಡಿವಾಣ ಹಾಕಲು ಜಿಲ್ಲಾ ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದೇ ವಿಫಲವಾಗಿರುವುದು ಸಾಬೀತಾಗಿದೆ.

     

  • ಪೋಷಕರು ಮಾಡಿದ ಈ ಒಂದು ತಪ್ಪಿನಿಂದ ಮಂಡ್ಯದಲ್ಲಿ 2 ವರ್ಷದ ಮಗು ಸಾವು

    ಪೋಷಕರು ಮಾಡಿದ ಈ ಒಂದು ತಪ್ಪಿನಿಂದ ಮಂಡ್ಯದಲ್ಲಿ 2 ವರ್ಷದ ಮಗು ಸಾವು

    ಮಂಡ್ಯ: ಪೋಷಕರು ಮಾಡಿದ ಒಂದು ಚಿಕ್ಕ ತಪ್ಪಿನಿಂದ ಎರಡು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯಲ್ಲಿ ನಡೆದಿದೆ.

    ಕೆಆರ್ ಪೇಟೆ ಪಟ್ಟಣದ ಸುಭಾಷ್ ನಗರ ನಿವಾಸಿ ಲೋಕೇಶ್ ಎಂಬವರ ಎರಡು ವರ್ಷದ ಮಗು ದೀಕ್ಷಿತ್ ಸಾವನ್ನಪ್ಪಿದ ಮಗು. ಮಗುವಿಗೆ ಕೆಮ್ಮು ಇದ್ದಿದ್ದರಿಂದ ಕೆಮ್ಮಿನ ಔಷಧಿಯನ್ನ ಪೋಷಕರು ಕುಡಿಸಿದ್ದಾರೆ. ಆದ್ರೆ ಔಷಧಿ ಕುಡಿಸಿದ ಬಳಿಕ ಮಗುವಿನ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿದೆ. ಬಳಿಕ ಔಷಧಿಯನ್ನ ಪರೀಕ್ಷಿಸಿದಾಗ ಔಷಧಿ ಎಕ್ಸ್ ಪೈರ್ ಆಗಿರೋದು ಗೊತ್ತಾಗಿದೆ.

    ಮಗುವಿನ ಆರೋಗ್ಯದಲ್ಲಿ ಏರುಪೇರಾದ ನಂತರ ಪೋಷಕರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ.

     

  • ಚಿಕಿತ್ಸೆ ಕೊಡಿ ಎಂದಿದ್ದಕ್ಕೆ ಗಾಯಾಳುವಿಗೆ ಹೊಡೆಯುತ್ತೇನೆ ಎಂದ ತುಮಕೂರಿನ ಸರ್ಕಾರಿ ವೈದ್ಯ

    ತುಮಕೂರು: ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ನೀಡಿ ಪರಿಪರಿಯಾಗಿ ಮನವಿ ಮಾಡಿ ಕಣ್ಣೀರು ಹಾಕಿದ್ದಕ್ಕೆ ವೈದ್ಯ ದೌರ್ಜನ್ಯ ಎಸಗಿದ ಘಟನೆ ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

    ತುಮಕೂರು ತಾಲೂಕಿನ ಕಲ್ಲಹಳ್ಳಿ ಗ್ರಾಮದ ನಿವಾಸಿಗಳಾದ ಕರಿಸಿದ್ದಯ್ಯ ಹಾಗೂ ಹೇಮರಾಜ್ ಎನ್ನುವರು ಊರ್ಡಿಗೆರೆ ಬಳಿ ಬೈಕ್ ಗಳ ಡಿಕ್ಕಿಯಲ್ಲಿ ಗಾಯಗೊಂಡಿದ್ದರು. ಚಿಕಿತ್ಸೆಗೆಂದು ತುಮಕೂರಿನ ಜಿಲ್ಲಾಸ್ಪತ್ರೆಗೆ ಭಾನುವಾರ ರಾತ್ರಿ ಕರೆತಂದಿದ್ದಾರೆ.ಆದರೆ ವೈದ್ಯ ಡಾ.ವಾಸೀಮ್ ಪ್ರಾಥಮಿಕ ಚಿಕಿತ್ಸೆ ನೀಡಿ ಮನೆಗೆ ಹೋಗುವಂತೆ ಹೇಳಿದ್ದಾರೆ.

    ಮನೆಗೆ ಹೋಗದ ಸ್ಥಿತಿಯಲ್ಲಿ ಗಾಯಾಳು ಕರಿಸಿದ್ದಯ್ಯ ತನ್ನನ್ನು ಆಸ್ಪತ್ರೆಯಲ್ಲೇ ದಾಖಲಿಸಿಕೊಂಡು ಚಿಕಿತ್ಸೆ ಮುಂದುವರೆಸುವಂತೆ ಗೋಗರೆದು ಅಂಗಲಾಚಿ ಬೇಡಿದ್ದಾರೆ. ಆದರೂ ಸಹ ಜಿಲ್ಲಾಸ್ಪತ್ರೆಯ ವೈದ್ಯ ವಾಸೀಮ್ ದಾಖಲಿಸಿಕೊಳ್ಳದೆ ಕರಿಸಿದ್ದಯ್ಯ ಅವರನ್ನು ನಿಂದಿಸಿದ್ದಾರೆ. ಜೊತೆಗೆ ಆಸ್ಪತ್ರೆಗೆ ದಾಖಲಿಸಿಕೊಳ್ಳದೇ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ.

    ವೈದ್ಯರಿಗೆ ಹಿಡಿಶಾಪ ಹಾಕಿದ ಗಾಯಾಳುಗಳು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯ ಮೊರೆಹೋಗಿದ್ದಾರೆ. ಗಾಯಗೊಂಡ ರೋಗಿಯ ಮೇಲೆಯೇ ಬಾಯಿಗೆ ಬಂದಂತೆ ಬೈದು ಹೊಡೆಯುತ್ತೇನೆ ಎಂದು ರೌಡಿಗಳ ರೀತಿ ವಾಸೀಮ್ ವರ್ತನೆ ಮಾಡಿದ್ದಾರೆ.

    ಇದೇ ಆಸ್ಪತ್ರೆಯಲ್ಲಿ ಕಳೆದ ವಾರ ಚಿಕಿತ್ಸೆಗೆಂದು ಬಂದಿದ್ದ ಗರ್ಭಿಣಿ ಮತ್ತು ಆಕೆಯ ಪತಿಗೆ ವೈದ್ಯರು ಚಿಕಿತ್ಸೆ ನೀಡದೆ ನಿಂದಿಸಿದ ಘಟನೆ ನಡೆದಿತ್ತು. ಗರ್ಭಿಣಿ ಮಸ್ತಾಕ್ ಚಿಕಿತ್ಸೆಗೆ ಬಂದಾಗ ಅಂಬುಲೆನ್ಸ್ ಚಾಲಕ ರಘು ಮತ್ತು ವೈದ್ಯರು ಬಾಯಿಗೆ ಬಂದಂತೆ ಬೈದಿದ್ದರು ಎನ್ನಲಾಗಿದೆ.