Tag: treatment

  • ಚಿಕಿತ್ಸೆ ನೀಡಲು ತಡ ಮಾಡಿದ ವೈದ್ಯರಿಗೆ ಶಾಸಕ ತರಾಟೆ

    ಚಿಕಿತ್ಸೆ ನೀಡಲು ತಡ ಮಾಡಿದ ವೈದ್ಯರಿಗೆ ಶಾಸಕ ತರಾಟೆ

    ಮೈಸೂರು: ಚಾಮರಾಜನಗರದ ಹನೂರು ತಾಲೂಕಿನ ಮಾರಮ್ಮ ದೇವಾಲಯದ ವಿಷ ಪ್ರಸಾದ ತಿಂದು ಅಸ್ವಸ್ಥರಾಗಿದ್ದ ಮಹಿಳೆಗೆ ಚಿಕಿತ್ಸೆ ನೀಡದೆ ತಡ ಮಾಡಿದ ವೈದ್ಯರಿಗೆ ಶಾಸಕ ನಾಗೇಂದ್ರ ತರಾಟೆ ತೆಗೆದುಕೊಂಡಿದ್ದಾರೆ.

    ತಮಿಳುನಾಡು ಮೂಲದ ಲಕ್ಷೀ ಎಂಬವರ ಸ್ಥಿತಿ ಗಂಭೀರವಾಗಿತ್ತು, ಇದರಿಂದ ಅವರನ್ನು ಕೆ.ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ವೈದ್ಯರು ಮೊದಲು ಅಸ್ವಸ್ಥಗೊಂಡ ಮಹಿಳೆಗೆ ಚಿಕಿತ್ಸೆ ಕೊಡದೆ ಅವರ ಬಳಿಯೇ ಮಾಹಿತಿ ಪಡೆಯಲು ವೈದ್ಯರು ಮುಂದಾಗಿದ್ದಾರೆ. ಇದನ್ನು ಗಮನಿಸಿದ ನಾಗೇಂದ್ರ ಅವರು ವೈದ್ಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

    ಮೊದಲು ರೋಗಿಗೆ ಚಿಕಿತ್ಸೆ ನೀಡಿ ಆ ಬಳಿಕ ಮಾಹಿತಿ ಪಡೆಯಿರಿ. ಇಂತಹ ಸಂದರ್ಭದಲ್ಲಿ ರೋಗಿಗಳ ಆರೋಗ್ಯ ಮುಖ್ಯ ಎಂದು ಶಾಸಕ ನಾಗೇಂದ್ರ ಅವರು ತಿಳಿಸಿದ್ದಾರೆ. ಬಳಿಕ ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ಆಸ್ಪತ್ರೆಯಲ್ಲಿ ಸೇರಿರುವ ಎಲ್ಲಾ ರೋಗಿಗಳಿಗೂ ಚಿಕಿತ್ಸೆ ನೀಡಲಾಗಿದೆ. ಆದರೆ ಹೆಚ್ಚಿನ ಅವಶ್ಯಕತೆ ಇರುವ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲು ಸಹ ಸೂಚನೆ ನೀಡಲಾಗಿದೆ ಎಂದರು.

    ಯಾವುದೇ ರೋಗಿಯ ಜಾತಿ, ಹೆಸರು ಬಗ್ಗೆ ತಿಳಿಯುವ ಮೊದಲು ಚಿಕಿತ್ಸೆ ನೀಡುವುದು ಮುಖ್ಯ. ಆದ್ದರಿಂದ ವೈದ್ಯರಿಗೆ ಈ ಕುರಿತು ಸ್ವಲ್ಪ ಏರು ಧ್ವನಿಯಲ್ಲಿ ಸೂಚನೆ ನೀಡಿದ್ದೇನೆ ಅಷ್ಟೇ. ಕೆ. ಆರ್ ಆಸ್ಪತ್ರೆಗೆ ಸಂಬಂಧಿಸಿದಂತೆ ಹೆಚ್ಚಿನ ಸೌಲಭ್ಯ ನೀಡಲು ಸದನದಲ್ಲೂ ಪ್ರಸ್ತಾಪ ಮಾಡಿದ್ದೇನೆ. ಆಸ್ಪತ್ರೆಯಲ್ಲಿ ಯಾವುದೇ ರೀತಿಯ ಲೋಪವಾಗದಂತೆ ನೋಡಿಕೊಳ್ಳಲು ಕ್ರಮಕೈಗೊಳ್ಳಲಾಗಿದೆ. ಎಲ್ಲಾ ರೋಗಿಗಳಿಗೂ ಉತ್ತಮ ಚಿಕಿತ್ಸೆ ನೀಡುತ್ತೇವೆ ಎಂದು ನಾಗೇಂದ್ರ ಅವರು ಸ್ಪಷ್ಟನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ವಿಮಾನದಲ್ಲಿ ಫ್ರಾನ್ಸ್ ಪ್ರಜೆ ಜೀವ ಉಳಿಸಿದ ಮೈಸೂರು ಮೂಲದ ವೈದ್ಯ

    ವಿಮಾನದಲ್ಲಿ ಫ್ರಾನ್ಸ್ ಪ್ರಜೆ ಜೀವ ಉಳಿಸಿದ ಮೈಸೂರು ಮೂಲದ ವೈದ್ಯ

    ಮೈಸೂರು: ವಿಮಾನದಲ್ಲಿ ಪ್ರಯಾಣಿಸುವ ವೇಳೆ ಫ್ರಾನ್ಸ್ ಪ್ರಜೆಯೊಬ್ಬರ ಜೀವವನ್ನು ಮೈಸೂರು ಮೂಲದ ವೈದ್ಯರೊಬ್ಬರು ಉಳಿಸಿ ನಿಷ್ಠೆಯಿಂದ ಕರ್ತವ್ಯ ಪಾಲಿಸಿದ್ದಾರೆ.

    ಏರ್ ಫ್ರಾನ್ಸ್ ವಿಮಾನದಲ್ಲಿ ಪ್ರಯಾಣಿಸುವ ವೇಳೆ ಫ್ರಾನ್ಸ್ ಪ್ರಜೆಯೊಬ್ಬರಿಗೆ ಸಿಂಕೋಪಾಲ್ ಸಮಸ್ಯೆ ಕಾಣಿಸಿಕೊಂಡಿದೆ. ಅದೇ ವಿಮಾನದಲ್ಲಿ ಪ್ಯಾರಿಸ್‍ನಿಂದ ಬೆಂಗಳೂರಿಗೆ ಬರುತ್ತಿದ್ದ ಮೈಸೂರಿನ ಮಕ್ಕಳ ತಜ್ಞರಾದ ಡಾ. ಪ್ರಭುಲಿಂಗಸ್ವಾಮಿ ತಕ್ಷಣ ಫ್ರಾನ್ಸ್ ಪ್ರಜೆಗೆ ವಿಮಾನದಲ್ಲೇ ಚಿಕಿತ್ಸೆ ನೀಡಿದ್ದಾರೆ. ಇದರಿಂದ ಫ್ರಾನ್ಸ್ ಪ್ರಜೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡಾ. ಪ್ರಭುಲಿಂಗಸ್ವಾಮಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಏರ್ ಫ್ರಾನ್ಸ್ ಸಂಸ್ಥೆ ನೂರು ಯುರೋ ಅನ್ನು ಉಡುಗೊರೆಯಾಗಿ ನೀಡಿದೆ.

    ವಿಶ್ವದ ಅತ್ಯುನ್ನತ ವಿಮಾನಯಾನ ಸಂಸ್ಥೆಯೆನಿಸಿರುವ ಏರ್ ಫ್ರಾನ್ಸ್ ಸಂಸ್ಥೆಯೂ ಇಮೇಲ್ ಮೂಲಕ ಡಾ. ಪ್ರಭುಸ್ವಾಮಿ ಅವರಿಗೆ ಧನ್ಯವಾದ ಅರ್ಪಿಸಿದೆ. ಬಿಡುವಿನಲ್ಲಿದ್ದರು ತಮ್ಮ ಕರ್ತವ್ಯವನ್ನು ಮರಿಯದ ಡಾ. ಪ್ರಭುಲಿಂಗಸ್ವಾಮಿ ಅವರ ಕೆಲಸ ನಿಜಕ್ಕೂ ಮೆಚ್ಚಲೇಬೇಕು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಶೇಷ ಅಭಿಮಾನಿಯನ್ನ ಭೇಟಿಯಾಗಲು ಮುಂದಾದ್ರು ಸುದೀಪ್

    ವಿಶೇಷ ಅಭಿಮಾನಿಯನ್ನ ಭೇಟಿಯಾಗಲು ಮುಂದಾದ್ರು ಸುದೀಪ್

    ಬೆಂಗಳೂರು: ನಟ ಕಿಚ್ಚ ಸುದೀಪ್ ಅವರು ಸಹಾಯ ಕೇಳಿದವರಿಗೆ ತಮ್ಮ ಕೈಲಾಗುವ ಸಹಾಯವನ್ನು ಮಾಡುತ್ತಾರೆ. ಈಗ ಸುದೀಪ್ ಅವರು ಕಾಯಿಲೆಯಿಂದ ಬಳಲುತ್ತಿರುವ ಪುಟ್ಟ ಅಭಿಮಾನಿಯನ್ನು ಭೇಟಿ ಮಾಡಲು ಮುಂದಾಗಿದ್ದಾರೆ.

    12 ವರ್ಷದ ರಾಹುಲ್ ಎಂಬ ಬಾಲಕನನ್ನು ನಟ ಸುದೀಪ್ ಅವರು ಭೇಟಿ ಮಾಡಲು ಇಚ್ಛಿಸಿದ್ದಾರೆ. ರಾಹುಲ್ ಹುಟ್ಟಿ 12 ವರ್ಷಗಳಾಗಿದೆ. ಆದರೆ ರಾಹುಲ್ ಹುಟ್ಟಿದಾಗಿನಿಂದಲೇ ಬ್ರೈನ್ ಟ್ಯೂಮರ್ ಮತ್ತು ರಕ್ತಸ್ರಾವ ಕಾಯಿಲೆಯಿಂದ ಬಳಲುತ್ತಿದ್ದಾನೆ. ಈ ಬಾಲಕನಿಗೆ ತಾನು ಸಾಯುವ ಮುನ್ನಾ ತನ್ನ ನೆಚ್ಚಿನ ಅಭಿಮಾನಿ ನಟ ಸುದೀಪ್ ಅವರನ್ನು ಭೇಟಿ ಮಾಡಬೇಕೆಂದು ಆಸೆ ಪಟ್ಟಿದ್ದಾನೆ.

    ಈ ಕುರಿತು ಕೆಟೋ ಎಂಬ ಟ್ವಿಟರ್ ಖಾತೆ ಬರೆದು ಸುದೀಪ್ ಅವರಿಗೆ ತಿಳಿಸುವ ಪ್ರಯತ್ನ ಮಾಡಿದೆ. ಕೆಟೋ ಮಾಡಿರುವ ಟ್ವೀಟ್ ಗಮನಿಸಿದ ಸುದೀಪ್ ಅವರು ಪ್ರತಿಕ್ರಿಯಿಸಿ ಭೇಟಿ ಮಾಡಲು ಒಪ್ಪಿದ್ದು, ಎಲ್ಲಿ, ಯಾವಾಗ ಎಂದು ರೀಟ್ವೀಟ್ ಮಾಡಿದ್ದಾರೆ.

    ರಾಹುಲ್ ಯಾರು?
    ರಾಹುಲ್ ಬೆಂಗಳೂರು ಮೂಲದ ನಿವಾಸಿ ಜಲಿಂದರ್ ಅವರ ಮಗನಾಗಿದ್ದು, ತಂದೆ ವೆಲ್ಡರ್ ಕೆಲಸ ಮಾಡುತ್ತಿದ್ದಾರೆ. ಅವರಿಗೆ ತಿಂಗಳಿಗೆ 8,000 ರೂ. ಸಂಬಳ ಬರುತ್ತದೆ. ಆದರೆ ರಾಹುಲ್ ಗೆ ಹುಟ್ಟಿದಾಗಿನಿಂದಲೇ ಬ್ರೈನ್ ಟ್ಯೂಮರ್ ಮತ್ತು ರಕ್ತಸ್ರಾವ ಕಾಯಿಲೆಯಿಂದ ಬಳಲುತ್ತಿದ್ದಾನೆ. ರಾಹುಲ್ ಚಿಕಿತ್ಸೆಗೆ ಸುಮಾರು 7 ಲಕ್ಷ ಹಣ ವೆಚ್ಚವಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

    ವೈದ್ಯರು ಹೇಳಿದ ಬಳಿಕ ಪೋಷಕರು ತಮ್ಮ ಬಳಿ ಇದ್ದ ಚಿನ್ನಾಭರಣಗಳನ್ನು ಮಾರಿ ಸುಮಾರು 4 ಲಕ್ಷ ರೂ ಹೊಂದಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಇನ್ನೂ 3 ಲಕ್ಷಕ್ಕೆ ಪೋಷಕರು ಹರಸಾಹಸ ಪಟ್ಟಿದ್ದಾರೆ. ಆದರೆ ಎಲ್ಲೂ ಹಣ ಸಿಗಲಿಲ್ಲ. ಕೊನೆಗೆ ಹಣ ಸಹಾಯಕ್ಕಾಗಿ ದಾನಿಗಳ ಮೊರೆ ಹೋಗಿದ್ದಾರೆ. ರಾಹುಲ್ ಸುದೀಪ್ ನ ಕಟ್ಟಾ ಅಭಿಮಾನಿಯಾಗಿದ್ದು, ಈಗ ಸುದೀಪ್ ಬಳಿ ಪೋಷಕರು ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಗರಹಾವಿನ ಮೇಲೆ ಹರಿದ ಬೈಕ್- ಮೂಳೆ ಹೊರಬಂದು ಸಾವು ಬದುಕಿನ ಮಧ್ಯೆ ಹೋರಾಟ

    ನಾಗರಹಾವಿನ ಮೇಲೆ ಹರಿದ ಬೈಕ್- ಮೂಳೆ ಹೊರಬಂದು ಸಾವು ಬದುಕಿನ ಮಧ್ಯೆ ಹೋರಾಟ

    ಮಂಡ್ಯ: ಬೈಕ್ ಹರಿದು ಮೂಳೆ ಹೊರ ಬಂದು ಗಾಯಗೊಂಡಿದ್ದ ನಾಗರ ಹಾವು ಸಾವು ಬದುಕಿನ ಮಧ್ಯೆ ಹೋರಾಡುತ್ತಿದೆ.

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಶಾಂತಿಕೋಪ್ಪಲು ಗ್ರಾಮದ ರಸ್ತೆಯಲ್ಲಿ ಬೈಕ್ ಸವಾರನೊಬ್ಬ ನಾಗರಹಾವಿನ ಮೇಲೆ ಹರಿದ ಬೈಕ್ ಹರಿಸಿದ್ದಾನೆ. ಪರಿಣಾಮ ಹಾವಿನ ತಲೆಯ ಭಾಗದಲ್ಲಿ ಮೂಳೆ ಮುರಿದಿದೆ. ಮೂಳೆ ಹೊರ ಬಂದು ಗಾಯಗೊಂಡ ನಾಗರಹಾವು ಜೀವನ್ಮರಣದ ಮಧ್ಯೆ ಹೋರಾಡುತ್ತಿದೆ.

    ಹಾವಿನ ಪರಿಸ್ಥಿತಿ ನೋಡಲಾಗದೇ ಶಾಂತಿಕೋಪ್ಪಲ ಗ್ರಾಮದ ರೈತರೊಬ್ಬರು ವ್ಯಥೆ ಪಟ್ಟಿದ್ದಾರೆ. ರೈತ ಉರಗ ಸಂರಕ್ಷಕ ಕೆಂಪರಾಜುರನ್ನ ಸಂಪರ್ಕಿಸಿದ್ದಾರೆ. ಕೆಂಪರಾಜು ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ನಾಗರಹಾವಿಗೆ ನೀರು ಕುಡಿಸಿ ರಕ್ಷಿಸಿದ್ದಾರೆ. ಸದ್ಯ ನಾಗರಹಾವಿಗೆ ಶಸ್ತ್ರಚಿಕಿತ್ಸೆ ಅವಶ್ಯಕತೆ ಇರುವುದರಿಂದ ಪಶು ಚಿಕಿತ್ಸಾಲಯಕ್ಕೆ ಕೊಂಡೊಯ್ದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಂಗೆ ಎಷ್ಟು ವಯಸ್ಸು- 111 ಅಂದಾಗ, ಬಹಳಾಯ್ತು ಅಂದ್ರು ನಡೆದಾಡೋ ದೇವ್ರು

    ನಂಗೆ ಎಷ್ಟು ವಯಸ್ಸು- 111 ಅಂದಾಗ, ಬಹಳಾಯ್ತು ಅಂದ್ರು ನಡೆದಾಡೋ ದೇವ್ರು

    ತುಮಕೂರು: ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಮಠದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಈ ವೇಳೆ ಸಿದ್ದಗಂಗಾ ಶ್ರೀ ನಂಗೆ ಎಷ್ಟು ವಯಸ್ಸಾಯ್ತು ಎಂದು ಪ್ರಶ್ನಿಸಿದ್ದಾರೆ. ಆಗ ಕಿರಿಯ ಶ್ರೀ 111 ಎಂದಾಗ ಬಹಳ ಆಯ್ತು ಎಂದು ನಡೆದಾಡುವ ದೇವರು ಹೇಳಿದ್ದಾರೆ.

    ಸಿದ್ದಗಂಗಾ ಶ್ರೀಗಳ ಅನಾರೋಗ್ಯದ ಹಿನ್ನೆಲೆಯಲ್ಲಿ ಡಿಸಿಎಂ ಜಿ.ಪರಮೇಶ್ವರ್ ಸಿದ್ದಗಂಗಾ ಮಠಕ್ಕೆ ಆಗಮಿಸಿದರು. ಡಿಸಿಎಂ ಶ್ರೀಗಳ ಆರೋಗ್ಯ ವಿಚಾರಿಸಿ ಸಿದ್ದಗಂಗಾ ಶ್ರೀಗಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡಬೇಕೋ, ಬೇಡ್ವೋ ಎನ್ನುವುದನ್ನು ವೈದ್ಯರ ಸಲಹೆ ಪಡೆದು ತೀರ್ಮಾನ ಕೈಗೊಳ್ಳಲಾಗುತ್ತೆ ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ಹೇಳಿದ್ದಾರೆ.

    ಸಿದ್ದಗಂಗಾ ಮಠದಲ್ಲಿ ಶ್ರೀಗಳ ಆರೋಗ್ಯ ವಿಚಾರಿಸಿದ ಬಳಿಕ ಮಾತಾಡಿದರ ಅವರು, ಶ್ರೀಗಳು ನನ್ನ ಜೊತೆ ಮಾತಾಡಿದ್ರು. ಯಾವಾಗ ಬಂದ್ರಿ, ಚೆನ್ನಾಗಿದ್ದೀರಾ ಅಂತ ಕೇಳಿದ್ರು. ಕಿರಿಯ ಶ್ರೀಗಳ ಬಳಿ ತಮಗೆ ಎಷ್ಟು ವಯಸ್ಸಾಯ್ತು ಅಂತ ಪ್ರಶ್ನಿಸಿದ್ರು. ಆಗ ಕಿರಿಯ ಶ್ರೀಗಳು 111 ವರ್ಷ ಅಂದ್ರು. ಅದಕ್ಕೆ ಬಹಳ ಆಯ್ತು, ಬಹಳ ಆಯ್ತು ಅಂದ್ರು. ಶ್ರೀಗಳು ಎಂದಿನಂತೆ ಲವಲವಿಕೆಯಿಂದ ಮಾತನಾಡಿದ್ದಾರೆ ಅಂತ ಪರಮೇಶ್ವರ್ ಹೇಳಿದ್ದಾರೆ.

    ಸಿದ್ದಗಂಗ ಶ್ರೀ ಅವರನ್ನು ಬಿಜಿಎಸ್ ಆಸ್ಪತ್ರೆಯ ಡಾ. ರವೀಂದ್ರ ಅವರ ತಂಡ ಬಂದು ತಪಾಸಣೆ ನಡೆಸಿ ಚಿಕಿತ್ಸೆಯನ್ನು ನೀಡಿದೆ. ನಡೆದಾಡುವ ದೇವರು ಚೇತರಿಸಿಕೊಂಡಿದ್ದಾರೆ. ಸಿದ್ದಗಂಗಾ ಶ್ರೀಗಳು ಆರೋಗ್ಯರಾಗಿದ್ದಾರೆಂದು ಮಠದ ಕಿರಿಯ ಶ್ರೀಗಳು ಸ್ಪಷ್ಟಪಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಗಳ ಆಪ್ತ ವೈದ್ಯ ಡಾ. ಪರಮೇಶ್ವರ್, ಹೃದಯ ಬಡಿತದಲ್ಲಿ ಸ್ವಲ್ಪ ಏರುಪೇರು ಕಂಡುಬಂದಿದ್ದು, ಜ್ವರದಿಂದ ಬಳಲುತ್ತಿದ್ದರು. ಬಳಿಕ ಬಿಜಿಎಸ್ ಆಸ್ಪತ್ರೆಯ ಡಾ.ರವೀಂದ್ರ ಅವರ ತಂಡ ಬಂದು ತಪಾಸಣೆ ನಡೆಸಿ ಏನು ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ. ಇಂಜೆಕ್ಷನ್ ನೀಡಿದ ಬಳಿ ಸ್ವಾಮೀಜಿ ಕೂಡ ಆರಾಮಗಿದ್ದಾರೆ. ಪೂಜೆಯನ್ನು ಕೂಡ ಮಾಡಿದ್ದಾರೆ ಎಂದು ಹೇಳಿದ್ದಾರೆ.

    2018 ಜನವರಿಯಲ್ಲಿ ಶ್ರೀಗಳ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿತ್ತು. ಅಂದು ಅಳವಡಿಸಿದ್ದ ಸ್ಟಂಟ್ ಗೆ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಡಿಸೆಂಬರ್ 1ರಂದು ಬಿಜಿಎಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಆಸ್ಪತ್ರೆಗೆ ಆಗಮಿಸಿದ್ದ ಶ್ರೀಗಳು ವ್ಹೀಲ್ ಚೇರ್ ನಲ್ಲಿ ಕುಳಿತುಕೊಳ್ಳಲು ಒಪ್ಪದೇ ನಡೆದುಕೊಂಡು ಹೋಗುವ ಮೂಲಕ ಎಲ್ಲರನ್ನು ಅಚ್ಚರಿಸಿಗೊಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇದು ಕೇವಲ ಇಂಟರ್‌ವಲ್‌ – ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದ ಸೋನಾಲಿ ಬೇಂದ್ರೆ

    ಇದು ಕೇವಲ ಇಂಟರ್‌ವಲ್‌ – ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದ ಸೋನಾಲಿ ಬೇಂದ್ರೆ

    ಮುಂಬೈ: ಅಮೆರಿಕದಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಭಾರತಕ್ಕೆ ಮರಳಿದ್ದಾರೆ.

    ಸೋನಾಲಿ 4 ತಿಂಗಳು ಕ್ಯಾನ್ಸರ್ ನಿಂದ ಹೋರಾಡಿ ಈಗ ಭಾನುವಾರ ರಾತ್ರಿ ಭಾರತಕ್ಕೆ ಬಂದು ಮುಂಬೈನಲ್ಲಿ ಇಳಿದರು. ಸೋನಾಲಿ ಜೊತೆ ಅವರ ಪತಿ ಗೋಲ್ದಿ ಬೆಹಲ್ ಕೂಡ ಇದ್ದರು.

    ಈ ವೇಳೆ ಸೋನಾಲಿ ಮಾಧ್ಯಮದವರನ್ನು ನೋಡಿದ ತಕ್ಷಣ ಕೈ ಮುಗಿದು ನಮಸ್ಕಾರ ಮಾಡಿದರು. ಭಾರತಕ್ಕೆ ಬರುತ್ತಿರುವ ವಿಷಯವನ್ನು ಸೋನಾಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ತನ್ನ ಅಭಿಮಾನಿಗಳಿಗೆ ತಿಳಿಸಿದ್ದರು.

    ಪೋಸ್ಟ್ ನಲ್ಲಿ ಏನಿದೆ?
    ದೂರ ಹೋದಷ್ಟು ಹೃದಯಗಳು ಹತ್ತಿರವಾಗುತ್ತದೆ ಎಂದು ಜನರು ಹೇಳುತ್ತಾರೆ. ಆದರೆ ಇದು ನಿಜವಾಗಲೂ ಆಗುತ್ತದೆ. ಈ ದೂರ ನನಗೆ ಸಾಕಷ್ಟು ಕಲಿಸಿದೆ. ನನ್ನ ಊರು ಹಾಗೂ ಮನೆಯಿಂದ ದೂರ ನ್ಯೂಯಾರ್ಕ್ ನಲ್ಲಿರುವಾಗ ನನ್ನ ಜೀವನದಲ್ಲಿ ಸಾಕಷ್ಟು ವಿಷಯಗಳು ನಡೆದಿವೆ. ಈಗ ನಾನು ನನ್ನ ಹೃದಯವಿರುವ ಜಾಗಕ್ಕೆ ಮರಳಿದ್ದೇನೆ. ಈ ಫೀಲಿಂಗ್ ನಾನು ಹೇಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ ಹೇಳಲು ಪ್ರಯತ್ನಿಸುತ್ತಿದ್ದೇನೆ. ನನ್ನ ಕುಟುಂಬ ಹಾಗೂ ಸ್ನೇಹಿತರನ್ನು ಖುಷಿಯಾಗಿ ನೋಡಲು ಕಾತುರದಿಂದ ಇದ್ದೇನೆ. ನನ್ನ ಕ್ಯಾನ್ಸರ್ ಪಯಣ ಇನ್ನೂ ಮುಗಿದಿಲ್ಲ. ಇದು ಕೇವಲ ಇಂಟರ್‌ವಲ್‌ ಎಂದು ಹೇಳಿಕೊಂಡಿದ್ದಾರೆ.

    ಸದ್ಯ ಸೋನಾಲಿ ಕೆಲವು ದಿನಗಳಿಗಾಗಿ ಮುಂಬೈಗೆ ಆಗಮಿಸಿದ್ದಾರೆ. ಮತ್ತೆ ಚಿಕಿತ್ಸೆ ಪಡೆಯಲು ಅವರು ನ್ಯೂಯಾರ್ಕ್ ಗೆ ಹೋಗುವ ಸಾಧ್ಯತೆಗಳಿವೆ. ಸೋನಾಲಿ ನಟಿ ಪ್ರಿಯಾಂಕಾ ಚೋಪ್ರಾಳ ಗೆಳತಿಯಾಗಿದ್ದು, ಡಿ.12ರಂದು ನಡೆಯುವ ಆರತಕ್ಷತೆ ಕಾರ್ಯಕ್ರಮಕ್ಕೆ ಸೋನಾಲಿ ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

    ನಾಲ್ಕು ತಿಂಗಳ ಹಿಂದೆ ತನಗೆ ಕ್ಯಾನ್ಸರ್ ಇರುವ ವಿಷಯ ಟ್ವಿಟ್ಟರ್ ಮೂಲಕ ತಮ್ಮ ಅಭಿಮಾನಿಗಳಿಗೆ ಸೋನಾಲಿ ತಿಳಿಸಿದರು. ಬಳಿಕ ಚಿಕಿತ್ಸೆ ಪಡೆಯಲು ನ್ಯೂಯಾರ್ಕ್ ಗೆ ತೆರಳಿದರು. ಅಲ್ಲದೇ ತಮ್ಮ ಆರೋಗ್ಯದ ಬಗ್ಗೆ ಪ್ರತಿಯೊಂದು ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದರು.

     

    View this post on Instagram

     

    They say “Distance makes the heart grow fonder”. It sure does. But let’s never underestimate what distance teaches you. Being away from home in the city of New York, I realized I was walking amongst so many stories. Each trying to write their own chapter in different ways. Each struggling to do it but never giving up. Each taking it #OneDayAtATime. And now I’m on my way back to where my heart is. It’s a feeling I can’t describe in words but I’m going to try – it’s the joy to see my family and friends again, the excitement to do what I love and mainly the gratitude for the journey I’ve had up until this moment. The fight is not yet over…but I’m happy and looking forward to this happy interval 🙂 It’s time to learn that there is a new normal out there and I can’t wait to embrace it and #SwitchOnTheSunshine. #NowPlaying #AdventureOfALifeTime???? And as my adventure with life continues these words by Chris Martin hit home, “Everything you want is a dream away. Under this pressure, under this weight We are diamonds taking shape…”

    A post shared by Sonali Bendre (@iamsonalibendre) on

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ- ಸೋಮವಾರ ಡಿಸ್ಚಾರ್ಜ್?

    ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ- ಸೋಮವಾರ ಡಿಸ್ಚಾರ್ಜ್?

    ಬೆಂಗಳೂರು: ಶತಾಯುಷಿ, ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳಿಗೆ ಮತ್ತೊಮ್ಮೆ ಯಶಸ್ವಿ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಆದರೆ ಶ್ರೀಗಳಿಗೆ ವಿಶ್ರಾಂತಿಯ ಅಗತ್ಯವಿದ್ದು, ಸೋಮವಾರ ಬೆಳಗ್ಗೆ ಡಿಸ್ಚಾರ್ಜ್ ಮಾಡುವ ನಿರ್ಧಾರ ಮಾಡಲಾಗಿದೆ ಎಂದು ಬಿಜಿಎಸ್ ಮುಖ್ಯವೈದ್ಯರಾದ ಡಾ. ರವೀಂದ್ರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

    ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ವೈದ್ಯರು, ಸ್ವಾಮೀಜಿ ಅವರ ಆರೋಗ್ಯ ಉತ್ತಮವಾಗಿದೆ. ಇಂದು ಮಧ್ಯಾಹ್ನ ಪೂಜೆ ಮಾಡಿದ್ದಾರೆ. ಅವರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಕಿಡ್ನಿ ಹಾಗೂ ರಕ್ತ ಪರೀಕ್ಷೆ ಮಾಡುವ ಕಾರಣದಿಂದ ಇಂದು ಆಸ್ಪತ್ರೆಯಲ್ಲಿ ಉಳಿಯಲಿದ್ದಾರೆ. ನಾಳೆ ರಕ್ತ ಪರೀಕ್ಷೆ ಮಾಡಿ ಡಿಸ್ಚಾರ್ಜ್ ಮಾಡಲಾಗುತ್ತದೆ. ಶ್ರೀಗಳು ಈಗಾಗಲೇ ಮಠಕ್ಕೆ ಹೋಗುತ್ತೇನೆ ಎಂದು ಹೇಳಿದ್ದಾರೆ. ಆದರೆ ನಾವೇ ಬೇಡ ಎಂದು ಇಂದು ರಾತ್ರಿ ಮಾತ್ರ ಆಸ್ಪತ್ರೆಯಲ್ಲಿ ಇರುವುದು ಒಳ್ಳೆಯದು ಎಂದು ಉಳಿಸಿಕೊಂಡಿದ್ದೆವೆ ಎಂದು ತಿಳಿಸಿದ್ದಾರೆ.

    ಶ್ರೀಗಳ ಆರೋಗ್ಯದಲ್ಲಿ ಕೊಂಚ ಏರುಪೇರಾದ ಹಿನ್ನೆಲೆಯಲ್ಲಿ ಬಿಜಿಎಸ್ ಆಸ್ಪತ್ರೆಗೆ ಶನಿವಾರ ಅವರನ್ನ ದಾಖಲು ಮಾಡಲಾಗಿತ್ತು. ಪಿತ್ತಕೋಶದಲ್ಲಿ ಅಳವಡಿಸಿದ್ದ ಸ್ಟಂಟ್ ಬ್ಲಾಕ್ ನಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ವೈದ್ಯರು ಎಂಡೋಸ್ಕೋಪಿ ಮಾಡುವ ಮೂಲಕ ಸ್ಟಂಟ್ ಅಳವಡಿಕೆ ಮಾಡಿದ್ದಾರೆ. ಶ್ರೀಗಳು ಆಸ್ಪತ್ರೆಗೆ ದಾಖಲಾಗುತ್ತಿದಂತೆ ಡಾ. ರವೀಂದ್ರ ನೇತೃತ್ವದ ತಂಡ ಶ್ರೀಗಳಿಗೆ ಅಲ್ಟ್ರಾಸೌಂಡ್, ಬ್ಲಡ್ ಚೆಕಪ್ ಸೇರಿದಂತೆ ವೈದ್ಯಕೀಯ ತಪಾಸಣೆ ನಡೆಸಿದರು.

    ಭಾನುವಾರ ಕೂಡ ಚಿಕಿತ್ಸೆ ಮುಂದುವರಿದು ಮತ್ತೆರಡು ಸ್ಟಂಟ್ ಗಳನ್ನು ಯಶಸ್ವಿಯಾಗಿ ಅಳವಡಿಸಿದರು. ತಪಾಸಣೆ ವೇಳೆ ಶ್ರೀಗಳಿಗೆ ರಕ್ತದಲ್ಲಿ ಹಾಗೂ ಪಿತ್ತಕೋಶ, ಪಿತ್ತನಾಳದಲ್ಲಿ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಮತ್ತೆರಡು ಸ್ಟಂಟ್ ಅಳವಡಿಕೆ ಮಾಡಲಾಯಿತು. ಬ್ಲಾಕ್ ಆಗಿದ್ದ ಸ್ಟಂಟ್ ಸ್ವಚ್ಛ ಗೊಳಿಸುವ ಜೊತೆಗೆ ಎಂಡೋಸ್ಕೋಪಿ ಮೂಲಕ ಸ್ಟಂಟ್ ಅಳವಡಿಸಲಾಗಿದ್ದು ಶಸ್ತ್ರ ಚಿಕಿತ್ಸೆ ಮಾಡದೇ ಅಳವಡಿಸಿರುವುದು ವಿಶೇಷವಾಗಿದೆ.

    ಶ್ರೀಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನಲೆಯಲ್ಲಿ ಆದಿಚುಂಚನಗಿರಿ ಮಠದ ನಿರ್ಮಾಲನಂದ ಸ್ವಾಮಿಜಿಗಳು ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜುನ್, ವಿ. ಸೋಮಣ್ಣ, ಶ್ರೀಗಳ ಆರೋಗ್ಯ ತಪಾಸಣೆ ನಡೆಸುತ್ತಿದ್ದ ಡಾ. ವೆಂಕಟರಮಣ ಆಗಮಿಸಿ ಆರೋಗ್ಯ ವಿಚಾರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ತಾಯಿಯ ಚಿಕಿತ್ಸೆಗೆ ಹಣವಿಲ್ಲವೆಂದು ಆಕೆಯನ್ನು ಕೊಂದೇ ಬಿಟ್ಟ ಮಗ

    ತಾಯಿಯ ಚಿಕಿತ್ಸೆಗೆ ಹಣವಿಲ್ಲವೆಂದು ಆಕೆಯನ್ನು ಕೊಂದೇ ಬಿಟ್ಟ ಮಗ

    ಮುಂಬೈ: ತಾಯಿಗೆ ಚಿಕಿತ್ಸೆ ಕೊಡಿಸಲು ಹಣವಿಲ್ಲ ಎಂದು ಪಾಪಿ ಮಗ ಆಕೆಯನ್ನು ಕೊಲೆ ಮಾಡಿದ ಘಟನೆಯೊಂದು ಶುಕ್ರವಾರ ನಸುಕಿನ ಜಾವ ಮಹಾರಾಷ್ಟ್ರದ ಮುಂಬೈನ ದಹಿಸರ್ ವೆಸ್ಟ್ ನಲ್ಲಿ ನಡೆದಿದೆ.

    ಯೋಗೇಶ್(52) ತನ್ನ 80 ವರ್ಷದ ತಾಯಿ ಲಲೀತಾ ಶೆಣೈಯನ್ನು ಕೊಲೆ ಮಾಡಿದ ವ್ಯಕ್ತಿ. ತಾಯಿಗೆ ಚಿಕಿತ್ಸೆ ಕೊಡಿಸಲು ಹಣವಿಲ್ಲವೆಂದು ಯೋಗೇಶ್ ಮೊದಲು ತಾಯಿಯ ಮುಖವನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದಾನೆ. ನಂತರ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಆಕೆಯ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ.

    ಯೋಗೇಶ್‍ಗೆ ತಾಯಿಯ ಚಿಕಿತ್ಸೆಯ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೇ ಕೆಲವು ವರ್ಷಗಳ ಹಿಂದೆ ಪತ್ನಿ ಆತನನ್ನು ಬಿಟ್ಟು ಹೋಗಿದ್ದರಿಂದ ಆತ ಖಿನ್ನತೆಗೊಳಗಾಗಿದ್ದನು. ಯೋಗೇಶ್ ತನ್ನ ತಾಯಿಯನ್ನು ಕೊಲೆ ಮಾಡಿ ನಮ್ಮ ಬಳಿ ಶರಣಾಗಿ ಕಋತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಎಂಎಚ್‍ಬಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

    ಯೋಗೇಶ್ ಖಾಸಗಿ ಕಂಪನಿಯಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದನು. ಕೆಲವು ವರ್ಷಗಳ ಹಿಂದೆ ಪತ್ನಿ ಕೂಡ ಆತನನ್ನು ಬಿಟ್ಟು ಹೋಗಿದ್ದರಿಂದ ಆತ ಖಿನ್ನತೆಗೊಳಗಾಗಿದ್ದನು. ತಾಯಿಯ ಚಿಕಿತ್ಸೆಗೆ ಹಣವಿಲ್ಲದೇ ಆಕೆಯ ಜೊತೆ ದಿನ ಜಗಳವಾಡುತ್ತಿದ್ದನು.

    ಶುಕ್ರವಾರ ನಸುಕಿನ ಜಾವ ಕೂಡ ತಾಯಿ ಹಾಗೂ ಮಗನ ನಡುವೆ ಜಗಳವಾಗಿದೆ. ಇಬ್ಬರ ಜಗಳದಿಂದ ಅಕ್ಕಪಕ್ಕದ ಮನೆಯವರು ಎದ್ದು ಪೊಲೀಸರಿಗೆ ಕರೆ ಮಾಡಿದ್ದಾರೆ. ಆದರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡುವ ಮೊದಲೇ ಯೋಗೇಶ್ ತನ್ನ ತಾಯಿಯನ್ನು ಕೊಲೆ ಮಾಡಿದ್ದಾನೆ.

    ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕೊಲೆ ಮಾಡಲು ಬಳಸಿದ ಚಾಕುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಯೋಗೇಶ್ ಕೋಪದಲ್ಲಿ ನನ್ನ ತಾಯಿಯ ಕೊಲೆ ನಡೆದುಹೋಯಿತು ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಅಮೆರಿಕದಿಂದ ಡಾಕ್ಟರ್ ಕರೆಸಿ ಚಿಕಿತ್ಸೆ ಕೊಡಿಸಿದ್ರು- ಅಂಬಿ ಸಹಾಯದಿಂದ ಓಡಾಡ್ತಿದ್ದಾರೆ ಮಹಿಳೆ

    ಅಮೆರಿಕದಿಂದ ಡಾಕ್ಟರ್ ಕರೆಸಿ ಚಿಕಿತ್ಸೆ ಕೊಡಿಸಿದ್ರು- ಅಂಬಿ ಸಹಾಯದಿಂದ ಓಡಾಡ್ತಿದ್ದಾರೆ ಮಹಿಳೆ

    ಮಂಡ್ಯ: ರೆಬೆಲ್ ಸ್ಟಾರ್ ಮಂಡ್ಯದ ಗಂಡು ನಮಗೆಲ್ಲರಿಗೂ ಈಗ ನೆನಪು ಮಾತ್ರ. ಆದರೆ ಅವರು ಮಾಡಿರುವ ಸಹಾಯ ಎಲ್ಲರಿಗೂ ಕಾಡುತ್ತಿದ್ದು, ಅವರ ಅಭಿಮಾನಿಗಳ ಕಣ್ಣಲ್ಲಿ ಇಂದಿಗೂ ನೀರು ತರಿಸುತ್ತಿದೆ. ಅಂಬಿ ಅವರು ಲೆಕ್ಕವಿಲ್ಲದಷ್ಟು ಸಹಾಯ ಮಾಡಿದ್ದಾರೆ. ಅದರಲ್ಲಿ ಮಹಿಳೆಯೊಬ್ಬರಿಗೆ ಮಾಡಿರುವ ಸಹಾಯ ಅವರನ್ನ ತುಂಬಾ ಕಾಡುತ್ತಿದ್ದು, ನನ್ನ ಪ್ರಾಣ ತಗೊಂಡು ಅಂಬಿ ಅಣ್ಣನ ಪ್ರಾಣ ಉಳಿಸಬೇಕಾಗಿತ್ತು ಅಂತಾ ಕಣ್ಣೀರು ಹಾಕುತ್ತಿದ್ದಾರೆ.

    ರೆಬೆಲ್ ಸ್ಟಾರ್ ಅಂಬಿ ಅಸಂಖ್ಯಾತ ಅಭಿಮಾನಿಗಳನ್ನು ಅಗಲಿ ಇಂದಿಗೆ ಒಂದು ವಾರ. ಅಂಬಿಯ ಮಾತು ಒರಟಾಗಿದರು, ಮನಸ್ಸು ಮಾತ್ರ ಬೆಣ್ಣೆ. ಅವರು ರಾಜ್ಯಾದ್ಯಂತ ಹಲವಾರು ಅಭಿಮಾನಿಗಳಿಗೆ ಸಹಾಯ ಹಸ್ತ ಚಾಚಿದ್ದಾರೆ. ಕಲಿಯುಗದ ಕರ್ಣನ ಸಹಾಯ ನೆನೆದು ಮಂಡ್ಯ ತಾಲೂಕಿನ ಹನಕೆರೆ ಗ್ರಾಮದ ಪುಷ್ಪಲತಾ ಅವರು ಕಣ್ಣೀರು ಹಾಕುತ್ತಿದ್ದಾರೆ.

    ಕಾಲು ನೋವಿನಿಂದಾಗಿ ನಡೆಯಲು ಆಗುತ್ತಿರಲಿಲ್ಲ. ನೆಲದಲ್ಲಿ ತೆವಳಿಕೊಂಡು ಓಡಾಡುತ್ತಿದ್ದೆ. ಆಗ ನಮ್ಮೂರಿಗೆ ಆಗಮಿಸಿದ ಅಂಬಿ ಅಣ್ಣ ನನ್ನ ಸ್ಥಿತಿಯನ್ನು ನೋಡಿ ಮರುಗಿ ಅಮೆರಿಕದಿಂದ ಸರ್ಜನ್ ರಾಮಕೃಷ್ಣರವರನ್ನು ಬೆಂಗಳೂರಿಗೆ ಕರೆಸಿ ಚಿಕಿತ್ಸೆ ಕೊಡಿಸಿದರು. ಇಂದು ನಾನು ಓಡಾಡ್ತಿರೋದಕ್ಕೆ ಅಂಬಿಯಣ್ಣ ಕಾರಣ ಅಂತಾ ನೆನೆದು ಕಣ್ಣೀರು ಹಾಕಿದರು.

    ಅಂಬಿ ಅಣ್ಣನ ಅಗಲಿಕೆಯನ್ನು ನಮ್ಮ ಕೈಯಲ್ಲಿ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಜನ್ ರಾಮಕೃಷ್ಣ ಅವರನ್ನು ಭೇಟಿ ಮಾಡಲು ವಾರಗಟ್ಟಲೆ ಕಾದು ಅಪಾಯಿಂಟ್ಮೆಂಟ್ ಪಡೆಯಬೇಕು. ಆದರೆ ಅಂಬಿ ಅಣ್ಣನ ಒಂದೇ ಮಾತಿಗೆ ಅವರು ನಮ್ಮ ಮನೆಗೆ ವರ್ಷಕ್ಕೊಮ್ಮೆ ಆಗಮಿಸಿ ನಮ್ಮ ಅತ್ತೆಗೆ ಚಿಕಿತ್ಸೆ ನೀಡಿ ಹೋಗುತ್ತಿದ್ದರು ಎಂದು ಪುಷ್ಪಲತಾ ಸಂಬಂಧಿಕರು ಗದ್ಗದಿತರಾದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ರೆಬಲ್ ಸ್ಟಾರ್ ಅಂಬರೀಶ್ ಇನ್ನಿಲ್ಲ

    ರೆಬಲ್ ಸ್ಟಾರ್ ಅಂಬರೀಶ್ ಇನ್ನಿಲ್ಲ

    ಬೆಂಗಳೂರು: ರೆಬೆಲ್ ಸ್ಟಾರ್, ಮಾಜಿ ಸಚಿವ ಅಂಬರೀಶ್ ನಿಧನರಾಗಿದ್ದಾರೆ.

    ಕಳೆದ ಕೆಲವು ದಿನಗಳಿಂದ ಕಿಡ್ನಿ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅಂಬರೀಶ್ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ.

    ಮಂಡ್ಯ ಬಸ್ ದುರಂತ ಘಟನೆಯ ಬಳಿಕ ಸುಸ್ತಾಗಿದ್ದ ಅಂಬರೀಶ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆಂದು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುನಲ್ಲಿದ್ದ ಅಂಬರೀಶ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

    ಭಾನುವಾರ ಇಡೀ ದಿನ ಪಾರ್ಥೀವ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ಇರಿಸಲಾಗುತ್ತಿದೆ. ಅಂತಿಮ‌ ದರ್ಶನಕ್ಕೆ ಆಗಮಿಸಲು ಮಂಡ್ಯ ಜಿಲ್ಲೆಯಿಂದ ವಿಶೇಷ ಸಾರಿಗೆ ಬಸ್ ವ್ಯವಸ್ಥೆಗೊಳಿಸಲಾಗಿದೆ.

    ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv