Tag: treatment

  • ಅಭ್ಯಾಸದ ವೇಳೆ ಗಾಯಗೊಂಡ ಡ್ಯಾನ್ಸರ್ – ನಟ ವರುಣ್‍ರಿಂದ ಚಿಕಿತ್ಸೆಗೆ 5 ಲಕ್ಷ ರೂ. ಸಹಾಯ

    ಅಭ್ಯಾಸದ ವೇಳೆ ಗಾಯಗೊಂಡ ಡ್ಯಾನ್ಸರ್ – ನಟ ವರುಣ್‍ರಿಂದ ಚಿಕಿತ್ಸೆಗೆ 5 ಲಕ್ಷ ರೂ. ಸಹಾಯ

    ಮುಂಬೈ: ಬಾಲಿವುಡ್ ನಟ ವರುಣ್ ಧವನ್ ಡ್ಯಾನ್ಸ್ ಅಭ್ಯಾಸದ ವೇಳೆ ಗಾಯಗೊಂಡಿದ್ದ ಯುವ ಡ್ಯಾನ್ಸರ್ ಚಿಕಿತ್ಸೆಗೆ 5 ಲಕ್ಷ ರೂ. ನೀಡಿ ಸಹಾಯ ಮಾಡಿದ್ದಾರೆ.

    ಇಶಾನ್ ಡ್ಯಾನ್ಸ್ ಅಭ್ಯಾಸದ ವೇಳೆ ಡಬಲ್ ಫ್ರಂಟ್ ಫ್ಲಿಪ್ ಒಡೆಯಲು ಪ್ರಯತ್ನಿಸಿದ್ದಾನೆ. ಈ ವೇಳೆ ಕುತ್ತಿಗೆಗೆ ಗಂಭೀರವಾಗಿ ಗಾಯವಾಗಿ ಆಸ್ಪತ್ರೆಗೆ ಸೇರಿದ್ದಾನೆ. ಈ ವಿಷಯ ತಿಳಿದ ಹಲವು ಡ್ಯಾನ್ಸರ್ ಗಳು ಇಶಾನ್ ಚಿಕಿತ್ಸೆಗೆ ಹಣವನ್ನು ಸಂಗ್ರಹಿಸಲು ಶುರು ಮಾಡಿದ್ದರು.

    ಡ್ಯಾನರ್ಸ್ ಹಣ ಸಂಗ್ರಹಿಸುತ್ತಿರುವ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಇದನ್ನು ನೋಡಿದ ವರುಣ್ ಇನ್‍ಸ್ಟಾಗ್ರಾಂ ಮೆಸೇಜ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಇಶಾನ್ ಬಗ್ಗೆ ಮಾಹಿತಿ ಪಡೆದು ಸಾಹಯಕ್ಕೆ ಮುಂದಾಗಿದ್ದಾರೆ.

    ವರುಣ್, ಇಶಾನ್ ಚಿಕಿತ್ಸೆಗಾಗಿ 5 ಲಕ್ಷ ರೂ. ಹಣ ನೀಡಿದ್ದಾರೆ. ಡ್ಯಾನ್ಸರ್ ವೊಬ್ಬರು ವರುಣ್ ಜೊತೆ ಚಾಟ್ ಮಾಡಿದ ಸ್ಕ್ರೀನ್ ಶಾಟ್ ತೆಗೆದು ಅದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಸ್ಕ್ರೀನ್ ಶಾಟ್ ತೆಗೆದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ವರುಣ್ ಧವನ್ ನಿರ್ದೇಶಕ ರೆಮೋ ಡಿಸೋಜಾ ನಿರ್ದೇಶನದ ‘ಸ್ಟ್ರೀಟ್ ಡ್ಯಾನ್ಸರ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ವರುಣ್‍ಗೆ ನಾಯಕಿಯಾಗಿ ಶ್ರದ್ಧಾ ಕಪೂರ್ ಹಾಗೂ ನೋರಾ ಫತೇಹಿ ನಟಿಸುತ್ತಿದ್ದಾರೆ. ಇದಲ್ಲದೆ ವರುಣ್ ನಟಿ ಸಾರಾ ಅಲಿ ಖಾನ್ ಜೊತೆ ‘ಕೂಲಿ ನಂ. 1’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  • ಚಿಕಿತ್ಸೆ ನೀಡುತ್ತಿದ್ದ ವೇಳೆ ಬಾಯಿ ಬ್ಲಾಸ್ಟ್, ಮಹಿಳೆ ಸಾವು!

    ಚಿಕಿತ್ಸೆ ನೀಡುತ್ತಿದ್ದ ವೇಳೆ ಬಾಯಿ ಬ್ಲಾಸ್ಟ್, ಮಹಿಳೆ ಸಾವು!

    ಲಕ್ನೋ: ಚಿಕಿತ್ಸೆ ನೀಡುತ್ತಿದ್ದ ವೇಳೆ ವೈದ್ಯರ ಸಮ್ಮುಖದಲ್ಲೇ ಮಹಿಳೆಯ ಬಾಯಿ ಸ್ಫೋಟಗೊಂಡು, ಸಾವನ್ನಪ್ಪಿರುವ ಪ್ರಕರಣ ವೈದ್ಯಕೀಯ ಲೋಕವನ್ನೇ ತಲ್ಲಣಗೊಳಿಸಿದೆ.

    ಉತ್ತರ ಪ್ರದೇಶದ ಅಲಿಗಢ್ ಜೆಎನ್ ಮೆಡಿಕಲ್ ಆಸ್ಪತ್ರೆಯಲ್ಲಿ ಬುಧವಾರ ಇಂತಹದೊಂದು ವಿಚಿತ್ರ ಪ್ರಕರಣ ನಡೆದಿದೆ. ವಿಷ ಸೇವಿಸಿದ ಹಿನ್ನೆಲೆಯಲ್ಲಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ವಿಷ ಹೊರತೆಗೆಯಲು ಚಿಕಿತ್ಸೆಗೆಂದು ವೈದ್ಯರು ಆಮ್ಲಜನಕ್ಕಾಗಿ ಮಹಿಳೆಯ ಬಾಯಿಗೆ ಪೈಪ್ ಹಾಕಿದ್ದಾರೆ. ಆಮ್ಲಜನಕ ಒಳ ಸೇರುತ್ತಿದ್ದಂತೆ ಬಾಯಿ ಸ್ಫೋಟಗೊಂಡಿದ್ದು, ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ್ದಾರೆ.

    ಈ ಪ್ರಕರಣ ಬಗ್ಗೆ ಮಾತನಾಡಿರುದ ವೈದ್ಯರೊಬ್ಬರು, ಇದೇ ಮೊದಲ ಬಾರಿ ಈ ರೀತಿಯ ಘಟನೆ ನಡೆದಿದೆ. ಬಹುಶಃ ಮಹಿಳೆ ಸಲ್ಫೂರಿಕ್ ಆ್ಯಸಿಡ್ ಒಳಗೊಂಡ ಕೆಮಿಕಲ್ ಕುಡಿದಿದ್ದಾರೆ. ಆದ್ದರಿಂದ ನಾವು ಚಿಕಿತ್ಸೆ ನೀಡುತ್ತಿದ್ದ ವೇಳೆ ಮಹಿಳೆ ಬಾಯೊಳಗೆ ಪೈಪ್ ಹಾಕಿದಾಗ, ಆಮ್ಲಜನಕ ದೇಹದೊಳಗೆ ಸೇರುತ್ತಿದ್ದಂತೆ ಸಲ್ಫೂರಿಕ್ ಆ್ಯಸಿಡ್ ಜೊತೆಗೆ ರಿಯಾಕ್ಟ್ ಆಗಿ ಬಾಯಿ ಸ್ಫೋಟಗೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

    ಈ ದೃಶ್ಯಾವಳಿ ಆಸ್ಪತ್ರೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ವೈದ್ಯಕೀಯ ಜಗತ್ತಿನಲ್ಲಿಯೇ ಇದು ಮೊದಲ ಪ್ರಕರಣ ಎನ್ನಲಾಗಿದೆ. ಸದ್ಯ ಈ ಬಗ್ಗೆ ವೈದ್ಯರು ಸಂಶೋಧನೆ ಆರಂಭಿಸಿದ್ದಾರೆ.

  • ಡಿಸಿಎಂ ಸ್ವಕ್ಷೇತ್ರದ ಸರ್ಕಾರಿ ಆಸ್ಪತ್ರೆಯಲ್ಲಿ ಆಯಾಗಳೇ ಡಾಕ್ಟರ್!

    ಡಿಸಿಎಂ ಸ್ವಕ್ಷೇತ್ರದ ಸರ್ಕಾರಿ ಆಸ್ಪತ್ರೆಯಲ್ಲಿ ಆಯಾಗಳೇ ಡಾಕ್ಟರ್!

    ತುಮಕೂರು: ಡಿಸಿಎಂ ಜಿ.ಪರಮೇಶ್ವರ್ ಅವರ ಸ್ವಕ್ಷೇತ್ರ ಕೊರಟಗೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ ಆಯಾಗಳೇ ಡಾಕ್ಟರ್ ಆಗಿ ಪರಿವರ್ತನೆಯಾಗಿದ್ದಾರೆ. ರೋಗಿಗಳಿಗೆ ಆಯಾಗಳೇ ಇಂಜೆಕ್ಷನ್ ಹಾಗೂ ಗ್ಲೂಕೋಸ್ ನೀಡುತ್ತಿರುವ ವಿಡಿಯೋ ಇದಕ್ಕೆ ಸಾಕ್ಷಿಯಾಗಿದೆ.

    ಯಾವುದೇ ತರಬೇತಿ ಇಲ್ಲದ ಆಯಾಗಳು ನೇರವಾಗಿ ರೋಗಿಗಳಿಗೆ ಇಂಜೆಕ್ಷನ್, ಗ್ಲೂಕೋಸ್ ಕೊಡುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ಸಂಬಂಧಿಯೊಬ್ಬರು ಆಯಾಗಳು ಸೂಜಿ ಚುಚ್ಚಿ ಗ್ಲೂಕೋಸ್ ಬಾಟಲಿ ಹಾಕುತ್ತಿರುವ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದ್ದಾರೆ.

    ರೋಗಿಗಳಿಗೆ ಗ್ಲೂಕೋಸ್, ಇಂಜೆಕ್ಷನ್ ಕೊಡುವ ಕೆಲಸವನ್ನು ಡಾಕ್ಟರ್ ಅಥವಾ ನರ್ಸಗಳು ಮಾಡಬೇಕು. ಆದರೆ ಎಲ್ಲವನ್ನೂ ಬಿಟ್ಟು ಹೌಸ್ ಕೀಪಿಂಗ್ ಆಯಾಗಳು ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿರುವುದು ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುತ್ತಿರುವ ಗುಣಮಟ್ಟದ ಚಿಕಿತ್ಸೆಗೆ ಹಿಡಿದ ಕೈಗನ್ನಡಿಯಾಗಿದೆ.

    ಇಲ್ಲಿರುವ ನರ್ಸಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ತಮ್ಮ ಕೆಲಸವನ್ನು ಆಯಾಗಳ ಮೇಲೆ ಹಾಕಿ ತಾವು ಹಾಯಾಗಿದ್ದಾರೆ. ಇದನ್ನೆಲ್ಲಾ ಪ್ರಶ್ನಿಸಬೇಕಾದ ಡಾಕ್ಟರ್ ಸಹ ತೆಪ್ಪಗಿರುತ್ತಾರೆ. ರಾಜ್ಯದ ಉಪಮುಖ್ಯಮಂತ್ರಿಗಳ ಸ್ವಕ್ಷೇತ್ರದಲ್ಲೇ ಆಸ್ಪತ್ರೆಯ ಸ್ಥಿತಿ ಹೀಗಾದರೆ ಇನ್ನುಳಿದ ಆಸ್ಪತ್ರೆಗಳ ಗತಿ ಉಹಿಸಲು ಸಾಧ್ಯವೇ? ಎನ್ನುವ ಪ್ರಶ್ನೆ ಸದ್ಯ ಸಾರ್ವಜನಿಕರಲ್ಲಿ ಹುಟ್ಟಿಕೊಂಡಿದೆ.

  • ಮೈಸೂರಿನಲ್ಲಿ ಪ್ರಿಯಕರನ ಮುಂದೆಯೇ ಯುವತಿಯ ಮೇಲೆ 6 ಮಂದಿಯಿಂದ ಗ್ಯಾಂಗ್‍ರೇಪ್

    ಮೈಸೂರಿನಲ್ಲಿ ಪ್ರಿಯಕರನ ಮುಂದೆಯೇ ಯುವತಿಯ ಮೇಲೆ 6 ಮಂದಿಯಿಂದ ಗ್ಯಾಂಗ್‍ರೇಪ್

    ಮೈಸೂರು: ಅರಮನೆ ನಗರಿಯಲ್ಲೊಂದು ಹೀನಕೃತ್ಯ ನಡೆದಿದ್ದು, ಆರು ಮಂದಿ ಕಾಮುಕರು ಸೇರಿಕೊಂಡು ಯುವತಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.

    ಮೈಸೂರಿನ ಹೊರವಲಯದ ಲಿಂಗಾಂಬುಧಿ ಪಾಳ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪ್ರಿಯಕರನ ಮುಂದೆಯೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

    ಏನಿದು ಪ್ರಕರಣ?
    ಮೈಸೂರಿನ ಲಾಡ್ಜ್‌ವೊಂದರಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದು, ಪರಿಚಯವಾಗಿ ಪರಸ್ಪರ ಪ್ರೀತಿಸುತ್ತಿದ್ದರು. ಬುಧವಾರ ತಡರಾತ್ರಿ ಬೈಕ್‍ನಲ್ಲಿ ಇಬ್ಬರು ಲಿಂಗಾಂಬುಧಿ ಪಾಳ್ಯದ ನಿರ್ಜನ ಪ್ರದೇಶಕ್ಕೆ ಹೋಗಿದ್ದರು. ಅಲ್ಲಿಯೇ ಕುಳಿತು ಪ್ರೇಮಿಗಳು ಮಾತನಾಡುತ್ತಿದ್ದರು. ಆದರೆ ಇದೇ ಪ್ರದೇಶದಲ್ಲಿ ಕಾರಿನಲ್ಲಿ ಕುಳಿತುಕೊಂಡು ಆರು ಮಂದಿ ಮದ್ಯ ಸೇವನೆ ಮಾಡುತ್ತಿದ್ದರು. ಅವರು ಪ್ರೇಮಿಗಳನ್ನು ನೋಡಿ ಏಕಾಏಕಿ 6 ಮಂದಿ ದುಷ್ಕರ್ಮಿಗಳು ಇವರ ಮೇಲೆ ಹಲ್ಲೆ ಮಾಡಿದ್ದಾರೆ.

    ಯುವತಿ ಮುಂದೆ ಪ್ರಿಯಕರನ ಮೇಲೆ ಹಲ್ಲೆ ನಡೆಸಿ ಬಳಿಕ ಆತನ ಮುಂದೆಯೇ ಆರು ಮಂದಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಬಳಿಕ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಸದ್ಯಕ್ಕೆ ಯುವತಿ ಹಾಗೂ ಯುವಕ ಮೈಸೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಬಗ್ಗೆ ಮಾಹಿತಿ ತಿಳಿದ ಮೈಸೂರಿನ ಕುವೆಂಪು ನಗರ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಈ ಘಟನೆ ಕುರಿತು ಇನ್ನೂ ಯಾವುದೇ ದೂರು ದಾಖಲಾಗಿಲ್ಲ.

  • ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ ಕೊಡಿಸಿದ ಪೊಲೀಸ್ ಪೇದೆ – ವಿಡಿಯೋ ನೋಡಿ

    ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ ಕೊಡಿಸಿದ ಪೊಲೀಸ್ ಪೇದೆ – ವಿಡಿಯೋ ನೋಡಿ

    ಮೈಸೂರು: ಗಾಯಗೊಂಡಿದ್ದ ನಾಗರಹಾವನ್ನು ಪೊಲೀಸ್ ಪೇದೆಯೊಬ್ಬರು ರಕ್ಷಿಸಿ ಚಿಕಿತ್ಸೆ ಕೊಡಿಸಿದ ಅಪರೂಪದ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ಪೊಲೀಸ್ ಪೇದೆಯ ಉರಗ ಪ್ರೇಮ ಎಲ್ಲರ ಮನ ಗೆದ್ದಿದೆ.

    ಮೈಸೂರಿನ ಲಲಿತಾದ್ರಿಪುರದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಕಟ್ಟಡವೊಂದರ ಕಾಮಗಾರಿ ನಡೆಯುತ್ತಿದ್ದ ವೇಳೆ ನಾಗರಹಾವೊಂದು ಗಾಯಗೊಂಡಿತ್ತು. ಇದನ್ನು ಕಂಡ ಪೊಲೀಸ್ ಪೇದೆ ಕೆಂಪರಾಜು ಹಾವನ್ನು ರಕ್ಷಿಸಿದ್ದಾರೆ. ಬಳಿಕ ಅದಕ್ಕೆ ನೀರನ್ನು ಕುಡಿಸಿ ಮೈಸೂರಿನ ಧನ್ವಂತರಿ ರಸ್ತೆಯಲ್ಲಿರೋ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

    ಗಾಯಗೊಂಡ ಹಾವಿಗೆ ಪಶು ಆಸ್ಪತ್ರೆಯಲ್ಲಿ ಅನಾಸ್ತೇಶಿಯಾ ಕೊಟ್ಟು ವೈದ್ಯ ಯಶ್ವಂತ್ ಹಾಗೂ ವೈದ್ಯ ತಿಮ್ಮೇಗೌಡ ಚಿಕಿತ್ಸೆ ನೀಡಿದ್ದಾರೆ. ನಾಗರಹಾವು ಚೇತರಿಸಿಕೊಂಡ ಬಳಿಕ ಪೊಲೀಸ್ ಪೇದೆ ತಾವೇ ಖುದ್ದಾಗಿ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದಾರೆ.

    https://www.youtube.com/watch?v=SFh3fBH6e0I

  • ಗಾನಕೋಗಿಲೆ ಎಸ್.ಜಾನಕಿ ಆಸ್ಪತ್ರೆಗೆ ದಾಖಲು

    ಗಾನಕೋಗಿಲೆ ಎಸ್.ಜಾನಕಿ ಆಸ್ಪತ್ರೆಗೆ ದಾಖಲು

    ಮೈಸೂರು: ಗಾನಕೋಗಿಲೆ ಎಸ್.ಜಾನಕಿ ಅವರಿಗೆ ಸೊಂಟ ಮುರಿದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಎಸ್.ಜಾನಕಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರು ದಿನಗಳ ಹಿಂದೆಯೇ ಜಾನಕಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ಜಾನಕಿ ಅವರು ಮೈಸೂರಿನಲ್ಲಿ ಸಂಬಂಧಿಕರ ಮನೆಗೆ ಬಂದಿದ್ದರು.

    ಈ ಸಂದರ್ಭದಲ್ಲಿ ಮನೆಯಲ್ಲಿ ಬಿದ್ದು ಸೊಂಟ ಮುರಿದುಕೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೊಂಟದ ಭಾಗದಲ್ಲಿ ಫ್ರಾಕ್ಚರ್ ಕಂಡುಬಂದ ಹಿನ್ನೆಲೆಯಲ್ಲಿ ವೈದ್ಯರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಮುಂದುವರಿಸಿದ್ದಾರೆ.

    ಎಸ್ ಜಾನಕಿ ಅವರಿಗೆ ಈಗ ಸುಮಾರು 80 ವರ್ಷ ವಯಸ್ಸಾಗಿದ್ದು, ಸುಮಾರು 17 ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಜೊತೆಗೆ ನಾಲ್ಕು ಬಾರಿ ತಮ್ಮ ಹಾಡಿಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಇವರು 1952ರಲ್ಲಿ ಅಂದಿನ ಪ್ರಖ್ಯಾತ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಅವರಿಂದ ಆಯೋಜಿಸಲ್ಪಟ್ಟಿದ್ದ ಸಂಗೀತ ಸಂಜೆಯಲ್ಲಿ ಪಿ.ಬಿ. ಶ್ರೀನಿವಾಸ್ ಜೊತೆಗೆ ಹಾಡಿದ್ದರು. ಹೀಗಾಗಿ ಜಾನಕಿ ಅವರು ತಮ್ಮ ಸಂಗೀತ ಪಯಣವನ್ನು ಪ್ರಥಮ ಬಾರಿಗೆ ಮಹಾನಗರಿಯಲ್ಲಿಯೇ ಆರಂಭಿಸಿದ್ದರು. ಅವರ ಕೊನೆಯ ಗಾಯನ ಕೂಡ ಮೈಸೂರಿನಲ್ಲಿ ಹಾಡಿದ್ದರು.

  • ಕಾಡಿನಿಂದ ನಾಡಿಗೆ ಬಂದ ಅತಿಥಿಗೆ ಭರ್ಜರಿ ಸೇವೆ!

    ಕಾಡಿನಿಂದ ನಾಡಿಗೆ ಬಂದ ಅತಿಥಿಗೆ ಭರ್ಜರಿ ಸೇವೆ!

    ಬೆಳಗಾವಿ: ಕಾಡಿನಿಂದ ನಾಡಿಗೆ ಬಂದ ವಿಶೇಷ ಅತಿಥಿಗೆ ಅರಣ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆ, ಊಟ, ಉಪಚಾರ ನೀಡಿ ಭಾರಿ ಸೇವೆ ಮಾಡುತ್ತಿದ್ದಾರೆ.

    ಹೌದು. ಬೆಳಗಾವಿ ತಾಲೂಕಿನ ಹಂಗರಗಾ ಗ್ರಾಮದ ಹೊರವಲಯದಲ್ಲಿ ಹದಿನೈದು ದಿನಗಳ ಹಿಂದೆ ಕಾಡುಕೋಣವೊಂದು ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆಗ ಅರಣ್ಯ ಇಲಾಖೆ ಸಿಬ್ಬಂದಿ ನಡೆಯಲು ಆಗದ ಸ್ಥಿತಿಯಲ್ಲಿದ್ದ ಕಾಡುಕೋಣಕ್ಕೆ ಪಶುತಜ್ಞರನ್ನು ಕರೆಸಿ ಚಿಕಿತ್ಸೆ ಕೊಡಿಸಿದ್ದರು. ಆದರೂ ಕಾಡುಕೋಣ ಚೇತರಿಸಿಕೊಂಡಿರಲಿಲ್ಲ. ಆದ್ದರಿಂದ ಮೈಸೂರು, ಗದಗ ಪ್ರಾಣಿ ಸಂಗ್ರಾಲಯ ವೈದ್ಯರು ಹಾಗೂ ಬೆಳಗಾವಿಯ ಸ್ಥಳಿಯ ಪಶು ವೈದ್ಯರನ್ನು ಕರೆಸಿ ಕಾಡುಕೊಣಕ್ಕೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಚಿಕಿತ್ಸೆ ಜೊತೆಗೆ ವೈದ್ಯರ ಸಲಹೆಯಂತೆ ಕಾಡುಕೋಣಕ್ಕೆ ದಿನಕ್ಕೆ 80 ಕೇಜಿ ಮೆಕ್ಕೇಜೊಳದ ಮೇವು ಹಾಗೂ ಪ್ರೋಟಿನ್ ಪುಡಿಯನ್ನು ನೀರಿನಲ್ಲಿ ಬೆರಸಿ ನೀಡಲಾಗುತ್ತಿದೆ. ಸದ್ಯ ಕಾಡುಕೋಣ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಸದ್ಯದಲ್ಲೇ ಮೈಸೂರು ಮೃಗಾಲಯಕ್ಕೆ ಇದನ್ನು ಸ್ಥಳಾಂತರಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

  • ಕಾರು ನಿಲ್ಲಿಸಿ ಪೋಷಕರ ಕಷ್ಟ ಆಲಿಸಿದ ಸಿಎಂ

    ಕಾರು ನಿಲ್ಲಿಸಿ ಪೋಷಕರ ಕಷ್ಟ ಆಲಿಸಿದ ಸಿಎಂ

    ಮಂಡ್ಯ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಾರ್ಗ ಮಧ್ಯೆ ಕಾರು ನಿಲ್ಲಸಿ ತಮಗಾಗಿ ಕಾದು ಕುಳಿತಿದ್ದ ಪೋಷಕರ ಕಷ್ಟವನ್ನು ಆಲಿಸಿದ್ದಾರೆ.

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಾರೇಕುರ ಗ್ರಾಮದಲ್ಲಿ ಸಿಎಂ ಕುಮಾರಸ್ವಾಮಿ ಅವರಿಗಾಗಿ ಅನಾರೋಗ್ಯಪೀಡಿತ ತಂದೆ-ತಾಯಿ ಕಾದು ಕುಳಿತ್ತಿದ್ದರು. ಇಂದು ಸಿಎಂ ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ಉತ್ತರ ಕ್ಷೇತ್ರದ ದೋಸ್ತಿ ಅಭ್ಯರ್ಥಿ ಪರ ಪ್ರಚಾರಗೊಂಡಿದ್ದರು. ಆದರೆ ಅದಕ್ಕೂ ಮೊದಲು ಜೆಡಿಎಸ್ ಸಚಿವರು ಮತ್ತು ಶಾಸಕರೊಂದಿಗೆ ಪುತ್ರನ ಗೆಲುವಿಗೆ ನಡೆಸಬೇಕಾದ ತಂತ್ರಗಾರಿಕೆ ಕುರಿತು ಗುಪ್ತ ಸಭೆ ನಡೆಸಿದ್ದಾರೆ.

    ಸಭೆ ಮುಗಿಸಿ ಬೆಂಗಳೂರಿಗೆ ಹಿಂದಿರುಗುತ್ತಿದ್ದರು. ಮಾರ್ಗಮಧ್ಯೆ ಕಾದುನಿಂತಿದ್ದ ಮಗುವಿನ ಪೋಷಕರನ್ನು ಸಿಎಂ ಕುಮಾರಸ್ವಾಮಿ ಕಾರು ನಿಲ್ಲಿಸಿ ಅವರ ಕಷ್ಟ ಆಲಿಸಿದ್ದಾರೆ. ಆಗ ಮಗುವಿನ ಅನಾರೋಗ್ಯದ ಬಗ್ಗೆ ಸಿಎಂ ಬಳಿ ದಂಪತಿ ಹೇಳಿಕೊಂಡಿದ್ದರು. ನಂತರ ಅನಾರೋಗ್ಯಪೀಡಿತ ಮಗುವಿಗೆ ಚಿಕಿತ್ಸೆ ಕೊಡಿಸುವ ಭರವಸೆಯನ್ನು ಸಿಎಂ ಕುಮಾರಸ್ವಾಮಿ ನೀಡಿದ್ದಾರೆ.

    ಅಷ್ಟೇ ಅಲ್ಲದೇ ನಾಳೆ (ಮಂಗಳವಾರ) ಬೆಂಗಳೂರಿನ ತಮ್ಮ ನಿವಾಸಕ್ಕೆ ಬಂದು ಭೇಟಿ ಮಾಡುವಂತೆ ಪೋಷಕರಿಗೆ ಸಿಎಂ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ. ನಂತರ ಕೆಆರ್‍ಎಸ್‍ನಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಈ ಹಿಂದೆಯೂ ಕೂಡ ಸಿಎಂ ಕುಮಾರಸ್ವಾಮಿ ಅವರು ಹೂ ಮಾರಾಟ ಮಾಡುತ್ತಿದ್ದ ಬಾಲಕಿಯ ಬಳಿ ಕಾರು ನಿಲ್ಲಿಸಿ ಮಾತನಾಡಿಸಿದ್ದರು.

  • ಟ್ರೀಟ್‍ಮೆಂಟ್ ಸರಿಯಿಲ್ಲವೆಂದು ವೈದ್ಯನ ಮೇಲೆ ಹಲ್ಲೆ

    ಟ್ರೀಟ್‍ಮೆಂಟ್ ಸರಿಯಿಲ್ಲವೆಂದು ವೈದ್ಯನ ಮೇಲೆ ಹಲ್ಲೆ

    ಬೆಂಗಳೂರು: ಟ್ರೀಟ್‍ಮೆಂಟ್ ಸರಿಯಿಲ್ಲ ಎಂದು ಪ್ರಸಿದ್ಧ ವೈದ್ಯರೊಬ್ಬರ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.

    ವಿಜಯ್ ಕುಮಾರ್ ಬಾಯ್ನಾಕ್ ಹಲ್ಲೆಗೊಳಗಾದ ವೈದ್ಯರಾಗಿದ್ದು, ಇವರು ಹೋಮಿಯೋಪಥಿ ಡಾಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಸರ್ಕಾರಿ ಹೋಮಿಯೋಪಥಿ ವೈದ್ಯರಾಗಿದ್ದ ವಿಜಯ್ ಕುಮಾರ್, ಕರ್ನಾಟಕದ ಮಾಜಿ ರಾಜ್ಯಪಾಲ ಟಿ.ಎನ್. ಚತುರ್ವೇದಿ ಅವರಿಗೆ ಪರ್ಸನಲ್ ಹೋಮಿಯೋಪಥಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ತಮ್ಮ ನಿವೃತ್ತಿ ನಂತರ ನಾಗರಭಾವಿ ಬಳಿಯ ಪಾಪರೆಡ್ಡಿಪಾಳ್ಯದಲ್ಲಿ ಹೋಮಿಯೋಪಥಿ ಕ್ಲಿನಿಕ್ ತೆರೆದು ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ.

    ಕಳೆದ 23ರಂದು ಇವರ ಕ್ಲಿನಿಕ್‍ಗೆ ಬಂದ ಸುರೇಶ್ ನಾಯ್ಕ್ ಡಸ್ಟ್ ಅಲರ್ಜಿಗೆ ನೀವು ಕೊಟ್ಟ ಚಿಕಿತ್ಸೆ ಸರಿಯಿಲ್ಲ ಎಂದು ಜಗಳ ಶುರು ಮಾಡಿದ್ದಾನೆ. ಅಲ್ಲದೆ ನನ್ನ ಹೆಂಡತಿಗೆ ಮಾಧ್ಯಮದವರೆಲ್ಲ ಗೊತ್ತು ನಮಗೆ ಒಂದೂವರೆ ಲಕ್ಷ ಹಣ ಕೊಟ್ಟರೆ ಸರಿ ಎಂದು ಬೇಡಿಕೆ ಇಟ್ಟಿದ್ದಾನೆ. ಈ ವೇಳೆ ಹಣ ನೀಡಲು ವೈದ್ಯ ವಿಜಯ್ ಕುಮಾರ್ ನಿರಾಕರಿಸಿದ್ದಕ್ಕೆ ಮುಖಕ್ಕೆ ಗುದ್ದಿ ಹಲ್ಲೆ ನಡೆಸಿದ್ದಲ್ಲದೇ, ಆಕ್ಸಿಡೆಂಟ್ ಮಾಡಿ ಜೀವ ತೆಗೆಯೋದಾಗಿ ಬೆದರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

    ಡಾಕ್ಟರ್ ವಿಜಯ್ ಕುಮಾರ್‍ರ ಮೇಲಿನ ಹಲ್ಲೆಯನ್ನು ಖಂಡಿಸಿರುವ ಸ್ಥಳೀಯರು, ವೈದ್ಯ ವಿಜಯ್ ಕುಮಾರ್ ಕಳೆದ ಎರಡು ವರ್ಷಗಳಿಂದ ಪಾಪರೆಡ್ಡಿ ಪಾಳ್ಯದಲ್ಲಿ ಕ್ಲಿನಿಕ್ ತೆರೆದು ಬಡವರಿಗೆ ಉಚಿತವಾಗಿ ಹೋಮಿಯೋಪಥಿ ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಮೇಲೆ ಹಲ್ಲೆ ಮಾಡಿರೋದು ಚಿಕಿತ್ಸೆ ವಿಷಯಕ್ಕಲ್ಲ. ಬೇರೆಯದ್ದೇ ಕಾರಣ ಇದೆ. ಪೊಲೀಸರು ಆರೋಪಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಸದ್ಯ ಘಟನೆ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ಕಟ್ಟಡ ಕುಸಿತ ದುರಂತಕ್ಕೆ 7 ಮಂದಿ ಬಲಿ- 61 ಮಂದಿಯ ರಕ್ಷಣೆ

    ಕಟ್ಟಡ ಕುಸಿತ ದುರಂತಕ್ಕೆ 7 ಮಂದಿ ಬಲಿ- 61 ಮಂದಿಯ ರಕ್ಷಣೆ

    ಧಾರಾವಾಡ: ಧಾರವಾಡದ ಕಟ್ಟಡ ಕುಸಿತ ದುರಂತ 7 ಮಂದಿಯ ಜೀವ ಬಲಿ ಪಡೆದಿದ್ದು, 2 ದಿನಗಳ ಕಾರ್ಯಾಚರಣೆ ಬಳಿಕ 61 ಮಂದಿಯನ್ನು ಸುರಕ್ಷಿತವಾಗಿ ಹೊರಗಡೆ ತೆಗೆಯಲಾಗಿದೆ. ಎಲ್ಲರೂ ಖಾಸಗಿ ಆಸ್ಪತ್ರೆ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    6 ಅಂತಸ್ಥಿನ ಕಟ್ಟಡದಲ್ಲಿ ಪೇಂಟಿಂಗ್ ಅಂಗಡಿ ಇಟ್ಟುಕೊಂಡಿದ್ದ ತಂದೆ- ಮಗ ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಧಾರವಾಡದ ತಪೋವನ ಸಮೀಪದ, ಹಳಿಯಾಳ ರಸ್ತೆ ಡಿ.ಬಿ ಕಾಲೋನಿಯ ನಿವಾಸಿಗಳಾದ ತಂದೆ ಮಹೇಶ್ವರ ಹಿರೇಮಠ ಹಾಗೂ ಅವರ ಮಗ ಅಶೀತ್ ಹಿರೇಮಠ ಮರಣ ಹೊಂದಿದ ದುರ್ದೈವಿಗಳು.

    ಕಟ್ಟಡದ ನೆಲಮಹಡಿಯಲ್ಲಿ ತಾಯಿ- ಮಗಳು ಸಿಲುಕಿ ಹಾಕಿಕೊಂಡಿದ್ದು, ತಾಯಿ ಪ್ರೇಮಾ ಉಣಕಲ್ ಅವರನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ. ಅವರ ಮಗಳು ದಿವ್ಯಾ ಅವಶೇಷಗಳಡಿ ಸಿಲುಕಿ ಹಾಕಿಕೊಂಡಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ.

    ಕಟ್ಟಡದ ಗ್ರೌಂಡ್ ಫ್ಲೋರಿನಲ್ಲಿ ಕಂಪ್ಯೂಟರ್ ಸೆಂಟರ್ ಇಟ್ಟುಕೊಂಡಿದ್ದ ಅನುಪ್ ಕುಡತಾರಕರ್ ಜೊತೆಗೆ ಅಂಗಡಿಗೆ ಹೋಗಿದ್ದ, 3 ಮಂದಿ ವಿದ್ಯಾರ್ಥಿನಿಯರು ಇದ್ದಾರೆ ಎನ್ನುವ ಮಾಹಿತಿ ರಕ್ಷಣಾ ಸಿಬ್ಬಂದಿಗೆ ಇದೆ. ಕಲಘಟಗಿ ನಿವಾಸಿ ನಬೀಸಾಬ ನದಾಫ ಪ್ರಣಾಪಾಯದಿಂದ ಪಾರಾಗಿದ್ದಾನೆ. ಎನ್.ಡಿ.ಆರ್.ಎಫ್ ತಂಡ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸೇರಿದಂತೆ ಸ್ಥಳೀಯರು ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ.