Tag: treatment

  • ಶಿವಮೊಗ್ಗದಲ್ಲಿ 11 ಜನರ ಮೇಲೆ ತೀವ್ರ ನಿಗಾ – ಜಿಲ್ಲಾ ಆರೋಗ್ಯ ಇಲಾಖೆ ಸ್ಪಷ್ಟನೆ

    ಶಿವಮೊಗ್ಗದಲ್ಲಿ 11 ಜನರ ಮೇಲೆ ತೀವ್ರ ನಿಗಾ – ಜಿಲ್ಲಾ ಆರೋಗ್ಯ ಇಲಾಖೆ ಸ್ಪಷ್ಟನೆ

    ಶಿವಮೊಗ್ಗ: ನಗರದಲ್ಲಿ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಡಿಎಚ್‍ಓ ಡಾ. ರಾಜೇಶ್ ಸುರಗಿಹಳ್ಳಿ ಹೇಳಿದ್ದಾರೆ.

    ಇಂದು ತಮ್ಮನ್ನು ಭೇಟಿ ಮಾಡಿದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ಶಿವಮೊಗ್ಗದಲ್ಲಿ ಒಟ್ಟು 11 ಜನರ ಮೇಲೆ ತೀವ್ರ ನಿಗಾ ಇರಿಸಲಾಗಿದೆ ಎಂದು ಹೇಳಿದ್ದಾರೆ. ಶಿವಮೊಗ್ಗ ಜಿಲ್ಲೆಗೆ ಬರುವ ವಿದೇಶಿ ಪ್ರವಾಸ ಮಾಡಿದವರ ಮೇಲೆ ನಿಗಾ ಇರಿಸಲಾಗಿದ್ದು, ಅದರಲ್ಲಿ ಜನವರಿಯಲ್ಲಿ ಚೀನಾದಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ನಾಲ್ವರು ವಿದ್ಯಾರ್ಥಿಗಳನ್ನು ಸೇರಿದಂತೆ, 5 ಜನರ ಕುಟುಂಬವೊಂದರ ಮೇಲೂ ನಿಗಾ ಇರಿಸಲಾಗಿದೆ. ಅವರಿಗೆ ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಈಗಾಗಲೇ ತಿಳಿಸಲಾಗಿದೆ ಎಂದಿದ್ದಾರೆ.

    ಈಗಾಗಲೇ ಈ 11 ಜನರಿಗೆ ವಿಮಾನ ನಿಲ್ದಾಣದಲ್ಲಿಯೇ ಸ್ಕ್ರೀನಿಂಗ್ ನಡೆಸಲಾಗಿದ್ದು, ನೆಗೆಟಿವ್ ರಿಪೋರ್ಟ್ ಬಂದಿದೆ. ಆದರೂ ನಾಲ್ಕು ವಾರಗಳ ಕಾಲ ನಿಗಾ ಇರಿಸಬೇಕೆಂಬ ನಿರ್ದೇಶನ ಬಂದಿರುವ ಹಿನ್ನೆಲೆಯಲ್ಲಿ ಅವರ ಮೇಲೆ ನಿಗಾ ಇರಿಸಲಾಗಿದ್ದು, ಮನೆ ಬಿಟ್ಟು ಎಲ್ಲಿಯೂ ತೆರಳದಂತೆ ಸೂಚಿಸಲಾಗಿದೆ.

    ಜೊತೆಗೆ ಯಾವುದೇ ಸಭೆ ಸಮಾರಂಭ, ಯಾವುದೇ ಪ್ರವಾಸ ಮಾಡದಂತೆ, ಕುಟುಂಬದ ಸದಸ್ಯರ ಜೊತೆ ಬೆರೆಯದಂತೆ ಸೂಚಿಸಲಾಗಿದ್ದು, ಅವರಿಗೆ ವೈರಸ್ ಬಗ್ಗೆ ಜಾಗೃತಿ ನೀಡಲಾಗಿದೆ ಎಂದಿದ್ದಾರೆ. ಇನ್ನು ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ 6 ಬೆಡ್ ಇರುವ ಕೊರೊನಾ ತೀವ್ರ ನಿಗಾ ಘಟಕ ತೆರೆಯಲಾಗಿದೆ ಎಂದು ತಿಳಿಸಿದ್ದಾರೆ.

  • 6 ಮಂದಿ ಮುಸ್ಲಿಮರ ಪ್ರಾಣ ಉಳಿಸಿ, ಸಾವು-ಬದುಕಿನ ಮಧ್ಯೆ ಹಿಂದೂ ವ್ಯಕ್ತಿ ಹೋರಾಟ

    6 ಮಂದಿ ಮುಸ್ಲಿಮರ ಪ್ರಾಣ ಉಳಿಸಿ, ಸಾವು-ಬದುಕಿನ ಮಧ್ಯೆ ಹಿಂದೂ ವ್ಯಕ್ತಿ ಹೋರಾಟ

    – ಅಂಬುಲೆನ್ಸ್ ಬರದೇ ರಾತ್ರಿಯಿಡೀ ಸುಟ್ಟು ಗಾಯಗಳಿಂದ ನರಳಾಟ
    – ಸ್ನೇಹಿತನ ತಾಯಿಯ ಜೀವ ಉಳಿಸಿದ್ದಕ್ಕೆ ಸಂತೋಷ

    ನವದೆಹಲಿ: ಕಳೆದ ಕೆಲವು ದಿನಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಈಗಾಗಲೇ 39 ಜನರು ಮೃತಪಟ್ಟಿದ್ದು, 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಮಧ್ಯೆ ಕಷ್ಟದಲ್ಲಿದ್ದ ಆರು ಮಂದಿ ಮುಸ್ಲಿಮರ ಪ್ರಾಣವನ್ನು ಕಾಪಾಡಿದ ಹಿಂದೂ ವ್ಯಕ್ತಿಯೊಬ್ಬರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

    ಹೌದು. ದೆಹಲಿಯ ಹಿಂಸಾಚಾರದ ಮಧ್ಯೆಯೂ ಅಗತ್ಯವಿರುವವರಿಗೆ ಅನೇಕ ಮಂದಿ ಮನೆಯಿಂದ ಹೊರ ಬಂದು ಸಹಾಯ ಮಾಡಿದ್ದಾರೆ. ದೆಹಲಿಯ ದಂಗೆಯಲ್ಲಿ ದುಷ್ಕರ್ಮಿಗಳು ಮುಸ್ಲಿಮರ ಮನೆ ಮತ್ತು ಅಂಗಡಿಗಳ ಮೇಲೆ ದಾಳಿ ನಡೆಸಿ, ಬೆಂಕಿ ಹಚ್ಚಿದ್ದರು. ಈ ವೇಳೆ ಸ್ಥಳೀಯ ಹಿಂದೂಗಳು ಮುಸ್ಲಿಮರ ನೆರವಿಗೆ ಧಾವಿಸಿ ತಮ್ಮ ಮನೆಗಳಲ್ಲಿ, ಗುರುದ್ವಾರಗಳಲ್ಲಿ ಆಶ್ರಯ ನೀಡುವ ಮೂಲಕ ಸಹಾಯದ ಹಸ್ತಚಾಚಿದ್ದರು.

    ಇದೇ ಸಂದರ್ಭದಲ್ಲಿ ದುಷ್ಕರ್ಮಿಗಳು ಮನೆಗೆ ಬೆಂಕಿ ಹಚ್ಚಿದಾಗ ಪ್ರೇಮ್‍ಕಾಂತ್ ಬಾಘೆಲ್ ಬೆಂಕಿ ಅವಘಡದಿಂದ ನೆರೆಹೊರೆಯ ಆರು ಮಂದಿ ಮುಸ್ಲಿಮರ ಜೀವ ಉಳಿಸಿದ್ದಾರೆ. ಶಿವ್ ವಿಹಾರ್ ದಲ್ಲಿ ಹಿಂದೂ-ಮುಸ್ಲಿಮರು ಸಾಮರಸ್ಯದಿಂದ ವಾಸಿಸುತ್ತಿದ್ದರು. ಆದರೆ ಗಲಭೆಯಲ್ಲಿ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದು ಮುಸ್ಲಿಂ ಮನೆಗಳಿಗೆ ಬೆಂಕಿ ಹಚ್ಚಿದ್ದರು.

    ಈ ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಬಾಘೆಲ್ ತಕ್ಷಣ ಬೆಂಕಿ ಹೊತ್ತಿಕೊಂಡಿದ್ದ ಮನೆಯೊಳಗೆ ನುಗ್ಗಿದ್ದಾರೆ. ಅಲ್ಲದೆ ತನ್ನ ಪ್ರಾಣವನ್ನು ಲೆಕ್ಕಿಸದೆ ಬೆಂಕಿಯಲ್ಲಿ ಸಿಲುಕಿಕೊಂಡಿದ್ದ ಆರು ಮಂದಿ ನೆರೆಹೊರೆಯವರನ್ನು ರಕ್ಷಿಸಿದ್ದಾರೆ. ಈ ವೇಳೆ ತನ್ನ ಸ್ನೇಹಿತನ ವಯಸ್ಸಾದ ತಾಯಿಯನ್ನು ಕಾಪಾಡುವಾಗ ಬಾಘೆಲ್‍ಗೆ ಗಂಭೀರವಾದ ಗಾಯಗಳಾಗಿವೆ.

    ಸುಟ್ಟ ಗಾಯಗಳಿಂದ ನರಳಾಡುತ್ತಿದ್ದ ಬಾಘೆಲ್‍ನನ್ನು ಆಸ್ಪತ್ರೆಗೆ ದಾಖಲಿಸಲು ಯಾರೊಬ್ಬರೂ ವಾಹನ ನೀಡಲಿಲ್ಲ. ನೆರೆಹೊರೆಯವರು ಅಂಬುಲೆನ್ಸ್ ಗೆ ಫೋನ್ ಮಾಡಿದರೂ ಯಾವುದೇ ವೈದ್ಯಕೀಯ ವಾಹನವೂ ಬರಲಿಲ್ಲ. ಕೊನೆಗೆ ಬಾಘೆಲ್ ಇಡೀ ರಾತ್ರಿ ಶೇ.70 ರಷ್ಟು ಸುಟ್ಟಗಾಯಗಳೊಂದಿಗೆ ತನ್ನ ಮನೆಯಲ್ಲಿ ಕಳೆದಿದ್ದಾರೆ. ಬಾಘೆಲ್ ಸ್ನೇಹಿತರು ಮತ್ತು ಕುಟುಂಬದವರು ಆತ ಬದುಕುವ ಭರವಸೆಯನ್ನು ಕಳೆದುಕೊಂಡಿದ್ದಾರೆ. ಬೆಳಗ್ಗೆ ಬಾಘೆಲ್‍ ಅವರನ್ನು ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸದ್ಯ ಆಸ್ಪತ್ರೆಯಲ್ಲಿ ಬಾಘೆಲ್‍ಗೆ ಚಿಕಿತ್ಸೆ ನಡೆಯುತ್ತಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಆದರೆ ಸಾವಿನ ಅಂಚಿನಲ್ಲಿದ್ದ ತನ್ನ ಸ್ನೇಹಿತನ ತಾಯಿಯ ಜೀವವನ್ನು ಉಳಿಸಲು ಸಾಧ್ಯವಾಯಿತು ಎಂದು ಸಂತೋಷಪಟ್ಟಿದ್ದಾರೆ.

  • 4 ತಿಂಗ್ಳ ಮಗುವಿಗೆ ಬಾಟಲಿನಲ್ಲಿ ಕ್ರಿಮಿನಾಶಕ ಕುಡಿಸಿದ ಸೋದರಿ

    4 ತಿಂಗ್ಳ ಮಗುವಿಗೆ ಬಾಟಲಿನಲ್ಲಿ ಕ್ರಿಮಿನಾಶಕ ಕುಡಿಸಿದ ಸೋದರಿ

    – ತಾನೂ ಜ್ಯೂಸ್ ಎಂದು ಕುಡಿದ್ಲೂ
    – ಮಕ್ಕಳ ಒದ್ದಾಟ ನೋಡಿ ಭಯಗೊಂಡು ವಿಷ ಕುಡಿದ ತಾಯಿ

    ಯಾದಗಿರಿ: ಮನೆಯಲ್ಲಿಟ್ಟಿದ್ದ ಕ್ರಿಮಿನಾಶಕವನ್ನು ಜ್ಯೂಸ್ ಎಂದು ಕುಡಿದು ಮಕ್ಕಳಿಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತಾಲೂಕಿನ ಕೊಡಾಲ್ ಗ್ರಾಮದಲ್ಲಿ ನಡೆದಿದೆ.

    ಖೈರನ್‍ಬಿ (2) ಮತ್ತು 4 ತಿಂಗಳ ಅಫ್ಸಾನಾ ಮೃತ ಮಕ್ಕಳು. ಮಕ್ಕಳು ವಿಷ ಸೇವಿಸಿದ್ದಕ್ಕೆ ಆಘಾತಗೊಂಡು ತಾಯಿ ಶಹನಹಾಜ್ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಯಾದಗಿರಿ ಖಾಸಗಿ ಆಸ್ಪತ್ರೆಯಲ್ಲಿ ಶಹನಹಾಜ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಮಕ್ಕಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ಖೈರನ್‍ಬಿ ತನ್ನ ತಂಗಿ ಅಫ್ಸಾನಾಳನ್ನು ಆಟವಾಡಿಸುತ್ತಿದ್ದಳು. ಈ ವೇಳೆ ಜ್ಯೂಸ್ ಎಂದು ಮೊದಲಿಗೆ ಬಾಟಲಿನಲ್ಲಿ ಹಾಕಿ ಮಗುವಿಗೆ ಕುಡಿಸಿದ್ದಾಳೆ. ನಂತರ ತಾನೂ ಕುಡಿದಿದ್ದಾಳೆ. ಈ ವೇಳೆ ತಾಯಿ ಶಹನಹಾಜ್ ಮನೆಯೊಳಗೆ ಕೆಲಸ ಮಾಡುತ್ತಿದ್ದರು. ಹೊರಗೆ ಬಂದು ನೋಡಿದಾಗ ಮಕ್ಕಳು ಒದ್ದಾಡುತ್ತಿದ್ದವು. ಆಗ ಮಕ್ಕಳು ವಿಷ ಸೇವಿಸಿದ್ದಕ್ಕೆ ಆಘಾತಗೊಂಡ ಶಹನಹಾಜ್ ಪತಿಯ ಮನೆಯವರು ಬೈಯುತ್ತಾರೆ ಎಂದು ತಾನೂ ವಿಷ ಕುಡಿದಿದ್ದಾರೆ.

    ತಕ್ಷಣ ಮೂವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಾಲ್ಕು ತಿಂಗಳ ಮಗು ಅಫ್ಸಾನಾ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದೆ. ಇನ್ನೂ ತೀವ್ರವಾಗಿ ಅಸ್ವಸ್ಥಗೊಂಡಿರುವ ಖೈರನ್‍ಬಿಳನ್ನು ರಾಯಚೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೂ ಚಿಕಿತ್ಸೆ ಫಲಕಾರಿಯಾದ ಖೈರನ್‍ಬಿ ಮೃತಪಟ್ಟಿದ್ದಾಳೆ.

    ಸದ್ಯ ತಾಯಿ ಶಹನಹಾಜ್ ಯಾದಗಿರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ವಡಗೇರಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಆರು ತಿಂಗಳು ಹೆಣ್ಣು ಮಗುವನ್ನು ಮೋರಿಗೆ ಎಸೆದ ಹೆತ್ತವರು- ಸ್ಥಳೀಯರಿಂದ ರಕ್ಷಣೆ

    ಆರು ತಿಂಗಳು ಹೆಣ್ಣು ಮಗುವನ್ನು ಮೋರಿಗೆ ಎಸೆದ ಹೆತ್ತವರು- ಸ್ಥಳೀಯರಿಂದ ರಕ್ಷಣೆ

    ಮೈಸೂರು: ಹೆಣ್ಣು ಎಂಬ ಕಾರಣಕ್ಕೆ 6 ತಿಂಗಳ ಮಗುವನ್ನು ತಂದೆ-ತಾಯಿ ಇಬ್ಬರು ಮೋರಿಯಲ್ಲಿ ಬಿಸಾಡಿ ಕರುಣೆ ಇಲ್ಲದಂತೆ ನಡೆದುಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

    ಮೈಸೂರಿನ ವಿದ್ಯಾರಣ್ಯಪುರಂನ ಸೂಯೆಜ್ ಫಾರಂನ ಮೋರಿಯಲ್ಲಿ 6 ತಿಂಗಳ ಹಸುಗೂಸನ್ನು ಬಿಸಾಡಿದ್ದ ಹೆತ್ತವರು, ಕಸ ಹಾಕುವ ಜಾಗದಲ್ಲಿ ಮಗುವನ್ನು ಎಸೆದಿದ್ದರು. ಸ್ಥಳೀಯರೊಬ್ಬರು ನಡೆದುಕೊಂಡು ಹೋಗುವಾಗ ಮಗುವಿನ ಅಳುವ ಶಬ್ಧ ಕೇಳಿ ಮಗು ರಕ್ಷಣೆ ಮಾಡಿದ್ದಾರೆ.

    ಮೋರಿಯಲ್ಲಿ ಮಗುವನ್ನ ಕಂಡು ಆತಂಕಗೊಂಡ ಜನರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಸ್ಥಳೀಯರ ಸಹಾಯದಿಂದ ಪುಟ್ಟ ಕಂದಮ್ಮ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

    ಪ್ರಾಥಮಿಕ ಚಿಕಿತ್ಸೆಗಾಗಿ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ಮಗು ರವಾನೆ ಮಾಡಿದ್ದು, ಕರುಣೆ ಇಲ್ಲದೆ ಮಗುವನ್ನು ಮೋರಿಯಲ್ಲಿ ಎಸೆದಿದ್ದ ತಂದೆ-ತಾಯಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಚೆಲುವಾಂಬ ಆಸ್ಪತ್ರೆಯ ವಿಶೇಷ ವಾರ್ಡ್‍ನಲ್ಲಿ ಮಗುವಿನ ಹಾರೈಕೆ ನಡೆಯುತ್ತಿದ್ದು, ಮಗು ಆರೋಗ್ಯವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

  • ಪತ್ನಿ ಜೀವ ಉಳಿಸಿದ್ದ ಪತಿ ಕೊನೆಗೂ ಉಳಿಲಿಲ್ಲ

    ಪತ್ನಿ ಜೀವ ಉಳಿಸಿದ್ದ ಪತಿ ಕೊನೆಗೂ ಉಳಿಲಿಲ್ಲ

    ದುಬೈ: ಅಗ್ನಿ ಅವಘಡದಿಂದ ಪತ್ನಿಯನ್ನು ರಕ್ಷಿಸಿ ಶೇ.90 ರಷ್ಟು ಭಾಗ ಸುಟ್ಟು ಹೋಗಿ ಆಸ್ಪತ್ರೆಗೆ ದಾಖಲಾಗಿದ್ದ ಪತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಅಬುಧಾಬಿಯಲ್ಲಿ ನಡೆದಿದೆ.

    ಕೇರಳದ ಅನಿಲ್ ನಿನಾನ್ (32) ಮೃತ ಪತಿ. ಅನಿಲ್ ನಿನಾನ್ ಅವರು ಶೇ. 90 ರಷ್ಟು ಸುಟ್ಟ ಗಾಯಗಳಾಗಿದ್ದು, ಅಬುಧಾಬಿಯ ಮಾಫ್ರಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪತ್ನಿ ನೀನು ಕೂಡ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅನಿಲ್ ನಿನಾನ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

    ನಮಗೆ ತುಂಬಾ ದುಃಖದ ಸಂಗತಿ. ಅನಿಲ್ ನಿನಾನ್ ಪತ್ನಿ ನೀನು ಇನ್ನೂ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಅನಿಲ್ ಸಾವಿನಿಂದ ನಮ್ಮೆಲ್ಲರಿಗೂ ನೋವಾಗಿದೆ ಎಂದು ಆಪ್ತ ಸಂಬಂಧಿಯೊಬ್ಬರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ದುಬೈನ ಉಮ್ ಅಲ್ ಕ್ವೈನ್‍ನಲ್ಲಿರುವ ಅಪಾರ್ಟ್ ಮೆಂಟ್‍ನಲ್ಲಿ ಈ ಘಟನೆ ನಡೆದಿದೆ. ಕಳೆದ ವಾರ ಈ ಅವಘಡ ಸಂಭವಿಸಿದೆ. ದಂಪತಿಯ ಅಪಾರ್ಟ್ ಮೆಂಟ್‍ನ ಕಾರಿಡಾರ್‌ನಲ್ಲಿ ಇರಿಸಲಾಗಿದ್ದ ವಿದ್ಯುತ್ ಬಾಕ್ಸ್‌ನಿಂದ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಶಂಕಿಸಲಾಗಿದೆ. ಕಾರಿಡಾರ್‌ನಲ್ಲಿ ಮೊದಲು ನೀನುಗೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಬೆಡ್‍ರೂಮಿನಲ್ಲಿದ್ದ ಅನಿಲ್ ಓಡಿ ಬಂದು ತನ್ನ ಪತ್ನಿಯನ್ನು ಬೆಂಕಿಯಿಂದ ರಕ್ಷಿಸಿದ್ದಾರೆ. ಆದರೆ ಇದೇ ವೇಳೆ ಅನಿಲ್‍ಗೆ ಬೆಂಕಿ ಹೊತ್ತಿಕೊಂಡಿತ್ತು ಎಂದು ಪೊಲೀಸರು ತಿಳಿಸಿದ್ದರು.

    ಅಗ್ನಿ ಅವಘಡದಿಂದ ಪತಿ ಅನಿಲ್ ನಿನಾನ್ ಶೇ.90 ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದು, ಉಮ್ ಅಲ್ ಕ್ವೈನ್‍ನ ಶೇಖ್ ಖಲೀಫಾ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅಬುಧಾಬಿಯ ಮಾಫ್ರಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂಲತಃ ಕೇರಳ ದಂಪತಿಯಾಗಿದ್ದು, ಇವರಿಗೆ ನಾಲ್ಕು ವರ್ಷದ ಮಗನಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು.

  • ಭೀಕರ ಅಪಘಾತ – 14 ಮಂದಿ ಸಾವು, 30ಕ್ಕೂ ಹೆಚ್ಚು ಜನರು ಗಂಭೀರ

    ಭೀಕರ ಅಪಘಾತ – 14 ಮಂದಿ ಸಾವು, 30ಕ್ಕೂ ಹೆಚ್ಚು ಜನರು ಗಂಭೀರ

    – ಟ್ರಕ್‍ಗೆ ಹಿಂದಿನಿಂದ ಡಿಕ್ಕಿ ಹೊಡೆದ ಬಸ್

    ಲಕ್ನೋ: ಟ್ರಕ್‍ಗೆ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ 14 ಮಂದಿ ಪ್ರಯಾಣಿಕರು ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಫಿರೋಜಾಬಾದ್‍ನ ಆಗ್ರಾ-ಲಕ್ನೋ ಎಕ್ಸ್ ಪ್ರೆಸ್‍ವೇಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಇಟವಾದಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಲೀಪರ್ ಬಸ್‍ನಲ್ಲಿ ಸುಮಾರು 40-45 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಅವರಲ್ಲಿ 35 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

    ಫಿರೋಜಾಬಾದ್‍ನ ನಾಗ್ಲಾ ಖಂಗರ್ ಪೊಲೀಸ್ ಠಾಣಾ ಪ್ರದೇಶದಲ್ಲಿ ಬುಧವಾರ ರಾತ್ರಿ ಸುಮಾರು 10 ಗಂಟೆಗೆ ಈ ಅಪಘಾತ ಸಂಭವಿಸಿದೆ. ಸ್ಲೀಪರ್ ಬಸ್ ದೆಹಲಿಯಿಂದ ಬಿಹಾರ್ ನ ಮೋತಿಹಾರಿಗೆ ಹೋಗುತ್ತಿತ್ತು. ಈ ಡಬಲ್ ಡೆಕ್ಕರ್ ಬಸ್ ಕಂಟೇನರ್ ಟ್ರಕ್‍ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ತಿಳಿಸಿದ್ದಾರೆ.

    ಪರಿಣಾಮ ಬಸ್ಸಿನಲ್ಲಿದ್ದ 14 ಮಂದಿ ಪ್ರಯಾಣಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಸ್ಥಳಕ್ಕೆ ಬೇಗ ಹೋಗಿ ಪರಿಶೀಲನೆ ನಡೆಸಿ ಪರಿಹಾರ ನೀಡಿ. ಜೊತೆಗೆ ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ಕೊಡಿಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದ್ದಾರೆ.

  • ಕೊರೊನಾ ವೈರಸ್ ಇದೆ ಎಂದು ತಿಳಿದು ವ್ಯಕ್ತಿ ಆತ್ಮಹತ್ಯೆ

    ಕೊರೊನಾ ವೈರಸ್ ಇದೆ ಎಂದು ತಿಳಿದು ವ್ಯಕ್ತಿ ಆತ್ಮಹತ್ಯೆ

    – ತನ್ನ ಬಳಿ ಬರುತ್ತಿದ್ದ ಜನರಿಗೆ ಕಲ್ಲು ಹೊಡೆಯುತ್ತಿದ್ದ ವ್ಯಕ್ತಿ

    ಹೈದರಾಬಾದ್: ತನಗೆ ಕೊರೊನಾ ವೈರಸ್ ಬಂದಿದೆ ಎಂದು ತಿಳಿದು ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದಿದೆ.

    ಬಾಲಕೃಷ್ಣ(50) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಶೇಷಮ್ನಾಯುದಕಂಡ್ರಿಗ ಗ್ರಾಮದ ನಿವಾಸಿಯಾಗಿರುವ ಬಾಲಕೃಷ್ಣ ಹೃದಯ ಬಡಿತದ ಸಮಸ್ಯೆಯಿಂದ ಚಿಕಿತ್ಸೆ ಪಡೆಯಲು ತಿರುಪತಿಯ ರುಯಾ ಆಸ್ಪತ್ರೆಗೆ ತೆರಳಿದ್ದರು. ವೈದ್ಯರು ಬಾಲಕೃಷ್ಣ ಅವರ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಯಾವುದೋ ವೈರಸ್‍ನ ಲಕ್ಷಣ ಇದೆ ಎಂದು ಹೇಳಿದ್ದಾರೆ. ಹೀಗಾಗಿ ಬಾಲಕೃಷ್ಣ ಅವರು ಎರಡು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪೆಡೆದಿದ್ದರು.

    ಭಾನುವಾರ ಬಾಲಕೃಷ್ಣ ತಮ್ಮ ಗ್ರಾಮಕ್ಕೆ ಹಿಂದಿರುಗಿದ್ದಾರೆ. ಈ ವೇಳೆ ಕುಟುಂಬಸ್ಥರ ಬಳಿ, ನನಗೆ ಕೊರೊನಾ ವೈರಸ್ ಇದೆ. ನನ್ನ ಬಳಿ ಯಾರು ಬರಬೇಡಿ. ಯಾರು ನನ್ನ ಕೈಯನ್ನು ಸಹ ಹಿಡಿದುಕೊಳ್ಳಬೇಡಿ ಎಂದರು. ಅಲ್ಲದೆ ತನ್ನ ಬಳಿ ಬರುತ್ತಿದ್ದ ಜನರಿಗೆ ಕಲ್ಲು ಹೊಡೆದು ಮನೆಯೊಳಗೆ ಹೋಗುತ್ತಿದ್ದರು. ಬಾಲಕೃಷ್ಣ ಅವರ ಸ್ಥಿತಿಯನ್ನು ನೋಡಿದ ಕುಟುಂಬಸ್ಥರು ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಲಿಲ್ಲ.

    ಸೋಮವಾರ ಬಾಲಕೃಷ್ಣ ಮನೆಯಿಂದ ಹೊರ ಬಂದು ಹೊಲಕ್ಕೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದರು. ಮನೆಯಿಂದ ಹೊರಬಂದ ಬಾಲಕೃಷ್ಣ ಅವರನ್ನು ನೋಡಿದ ಗ್ರಾಮಸ್ಥರು ಆಶ್ಚರ್ಯಗೊಂಡರು. ಬಾಲಕೃಷ್ಣ ಅವರ ಹೊಲದಲ್ಲಿ ತನ್ನ ತಾಯಿಯ ಸಮಾಧಿ ಬಳಿಯಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಲಕೃಷ್ಣ ಅವರಿಗೆ ಪತ್ನಿ, ಮಗಳು ಹಾಗೂ ಇಬ್ಬರು ಮಗ ಇದ್ದಾರೆ. ಸದ್ಯ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಬುದ್ಧಿ ಸ್ವಾಧೀನ ಕಳ್ಕೊಂಡ ಜಾನುವಾರುಗಳ ಜೀವಂತ ಸಮಾಧಿ

    ಬುದ್ಧಿ ಸ್ವಾಧೀನ ಕಳ್ಕೊಂಡ ಜಾನುವಾರುಗಳ ಜೀವಂತ ಸಮಾಧಿ

    ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಯಲಗಟ್ಟ ಗ್ರಾಮದಲ್ಲಿ ಸಾಕಿ ಬೆಳೆಸಿದ ಜಾನುವಾರುಗಳನ್ನ ಸ್ವತಃ ಗ್ರಾಮಸ್ಥರೇ ಜೀವಂತ ಸಮಾಧಿ ಮಾಡಿದ ಘಟನೆ ನಡೆದಿದೆ.

    ಹುಚ್ಚು ನಾಯಿ ಕಡಿತಕ್ಕೊಳಗಾದ ಗ್ರಾಮದ ಸುಮಾರು 10 ರಾಸುಗಳು ಬುದ್ಧಿ ಸ್ವಾಧೀನ ಕಳೆದುಕೊಂಡಿದ್ದವು. ಹುಚ್ಚು ನಾಯಿ ಗ್ರಾಮದ ಜನ ಹಾಗೂ ದನಗಳ ಮೇಲೆ ದಾಳಿ ಮಾಡುತ್ತಿದ್ದವು. ಕೆಲ ದಿನಗಳಿಂದ ಹುಚ್ಚು ನಾಯಿಗಳ ಕಡಿತಕ್ಕೆ ಎಮ್ಮೆಯೊಂದು ಆಕಳುಗಳ ಮೇಲೆ ದಾಳಿ ಮಾಡಿತ್ತು. ಜೀವ ಭಯದಿಂದ ಗ್ರಾಮಸ್ಥರು ಜೆಸಿಬಿ ಮೂಲಕ ಪ್ರಾಣಿಗಳ ಜೀವಂತ ಸಮಾಧಿ ಮಾಡಿದ್ದಾರೆ.

    ಕೆಲವು ಜಾನುವಾರುಗಳು ಅನಾರೋಗ್ಯದಿಂದ ಸಾವನ್ನಪ್ಪಿವೆ. ಪಶುವೈದ್ಯರಿಗೆ ಮಾಹಿತಿ ನೀಡಿದರೂ ಸರಿಯಾದ ಸಮಯಕ್ಕೆ ಔಷಧಿ ವಿತರಣೆ ಮಾಡದ ಹಿನ್ನೆಲೆಯಲ್ಲಿ ಪಶು ಇಲಾಖೆ ಅಧಿಕಾರಿಗಳ ಹಾಗೂ ವೈದ್ಯರ ನಿಷ್ಕಾಳಜಿಯಿಂದ ಚಿಕಿತ್ಸೆ ಸಿಗದೆ ಪ್ರಾಣಿಗಳು ಸ್ವಾಧೀನ ಕಳೆದುಕೊಂಡು ದಾಳಿಮಾಡುತ್ತಿದ್ದವು.

    ಹೀಗಾಗಿ ಬೇರೆದಾರಿಯಿಲ್ಲದೆ ಗ್ರಾಮಸ್ಥರೇ ನಾಲ್ಕೈದು ಜಾನುವಾರುಗಳನ್ನು ಜೀವಂತ ಸಮಾಧಿ ಮಾಡಿದ್ದಾರೆ. ಜೊತೆಗೆ ಚಿಕಿತ್ಸೆ ನೀಡದ ಪಶು ವೈಧ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಲುಕೇಮಿಯಾ ಕಾಯಿಲೆಯಿಂದ ಬಳಲುತ್ತಿದ್ದ ಮಗುವನ್ನು ಉಳಿಸಲು ಚೆಂಡೆ ಪ್ರದರ್ಶನ ಮಾಡಿ  ಹಣ ಸಂಗ್ರಹ

    ಲುಕೇಮಿಯಾ ಕಾಯಿಲೆಯಿಂದ ಬಳಲುತ್ತಿದ್ದ ಮಗುವನ್ನು ಉಳಿಸಲು ಚೆಂಡೆ ಪ್ರದರ್ಶನ ಮಾಡಿ ಹಣ ಸಂಗ್ರಹ

    – ಬಾಲಕಿಯ ಕುಟುಂಬಸ್ಥರಿಗೆ 79,551 ರೂ. ಹಸ್ತಾಂತರ

    ಬೆಂಗಳೂರು: ಮಗುವಿನ ಜೀವ ಉಳಿಸಲು ಚೆಂಡೆ ತಂಡ ಹಲವೆಡೆ ಚೆಂಡೆ ಪ್ರದರ್ಶನ ನೀಡಿ ಹಣ ಸಂಗ್ರಹಿಸುವ ಮೂಲಕ ಮಾನವೀಯತೆ ಮರೆದಿದೆ.

    ಆಟವಾಡಿಕೊಂಡು ಮನೆಯವರ ಮುದ್ದಿನ ಕಣ್ಮಿಣಿಯಾಗಿದ್ದ ಕುಂದಾಪುರದ ನಿಹಾರಿಕ ಲುಕೇಮಿಯಾ ಕ್ಯಾನ್ಸರ್ ನಿಂದ ಬಳಲುತ್ತಿದ್ದಾಳೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನಿಹಾರಿಕ ತಂದೆ ಮಹೇಶ್ 5 ವರ್ಷದ ಕಂದಮ್ಮನನ್ನು ಉಳಿಸಲು ಹರಸಾಹಸ ಪಡುತ್ತಿದ್ದಾರೆ. ಇನ್ನೊಂದಡೆ ಮಹೇಶ್ ತಾಯಿಗೂ ಇತ್ತೀಚೆಗೆಷ್ಟೇ ಕ್ಯಾನ್ಸರ್ ಬಂದಿತ್ತು.

    ನಿಹಾರಿಕಳನ್ನು ಮಹೇಶ್ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲದೆ ಎರಡೂವರೆ ವರ್ಷಗಳ ನಿರಂತರವಾದ ಚಿಕಿತ್ಸೆ ನೀಡಿದರೆ, ನಿಹಾರಿಕಳನ್ನು ಉಳಿಸಬಹುದು. ಈ ಚಿಕಿತ್ಸೆಗೆ 10 ಲಕ್ಷ ರೂ. ಖರ್ಚು ಆಗುತ್ತೆ ಎಂದು ವೈದ್ಯರು ತಿಳಿಸಿದ್ದಾರೆ.

    ಈಗ ನಿಹಾರಿಕಗಳ ಸಹಾಯಕ್ಕೆ ಬಂದಿರುವ ಶ್ರೀ ಸಾಯಿ ಚೆಂಡೆ ಬಳಗದ ಟೀಂ ಉಡುಪಿಯ ಹಲವಡೆ ಚೆಂಡೆ ಪ್ರದರ್ಶನವನ್ನು ನೀಡಿ ಚಿಕಿತ್ಸೆಗೆ ಹಣ ಸಂಗ್ರಹವನ್ನು ಮಾಡಿದ್ದಾರೆ. ಈ ಟೀಮ್‍ನ ಸದಸ್ಯರು ಚೆಂಡೆ ಕಲೆಯನ್ನು ಪ್ರದರ್ಶಿಸಿ, ಸದ್ಯ 79,551 ರೂ. ಹಸ್ತಾಂತರ ಮಾಡಿದ್ದಾರೆ.

  • ಕೈಮುರಿದಿದ್ದು ಒಂದ್ಕಡೆ, ಕಟ್ ಹಾಕಿರೋದು ಮತ್ತೊಂದ್ಕಡೆ- ಡಾಕ್ಟರ್ ಎಡವಟ್ಟಿನಿಂದ ಮಗು ನರಳಾಟ

    ಕೈಮುರಿದಿದ್ದು ಒಂದ್ಕಡೆ, ಕಟ್ ಹಾಕಿರೋದು ಮತ್ತೊಂದ್ಕಡೆ- ಡಾಕ್ಟರ್ ಎಡವಟ್ಟಿನಿಂದ ಮಗು ನರಳಾಟ

    ಗದಗ: ಸರ್ಕಾರಿ ಆಸ್ಪತ್ರೆಗಳು ಅಂದರೆ ಬಡವರ ಪಾಲಿನ ಸಂಜೀವಿನಿ ಅಂತಾರೆ. ಆದರೆ ಸರ್ಕಾರಿ ವೈದ್ಯರ ನಿರ್ಲಕ್ಷ್ಯಕ್ಕೆ ರಾತ್ರಿ ಇಡೀ ಮಗು ನರಳಾಡಿರುವ ಘಟನೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

    ಜಿಲ್ಲೆ ಶಿರಹಟ್ಟಿ ಪಟ್ಟಣದ ಸಾಯಿನ್ ಕೊನಿವಾಳ ಅವರ ಮಗು ಕಟ್ಟೆ ಮೇಲಿಂದ ಬಿದ್ದು ಕೈ ಮುರಿದುಕೊಂಡಿದೆ. ಮನೆಯ ಮುಂಭಾಗದ ಕಟ್ಟೆಯ ಮೇಲೆ ಆಟವಾಡುತ್ತಾ ಕೆಳಗೆ ಬಿದ್ದಿದೆ. ಮಗುಬಿದ್ದ ತಕ್ಷಣ ಪೋಷಕರ ಶಿರಹಟ್ಟಿ ತಾಲೂಕಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಮಗುವಿನ ಕೈ ಮುರಿದಿದ್ದು ಒಂದುಕಡೆ ಆದರೆ ಶಿರಹಟ್ಟಿ ವೈದ್ಯರು ಮತ್ತೊಂದು ಕಡೆಗೆ ಕಟ್ಟು ಹಾಕಿ ಗದಗ ಜಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ.

    ಬಲಗೈನ ತೊಳ(ರಟ್ಟೆ)ನ ಭಾಗದಲ್ಲಿ ಮುರಿತವಾದರೆ ಮುಂಗೈಗೆ ಬ್ಯಾಂಡೇಜ್ ಮಾಡಿ ಕಳುಹಿಸಿದ್ದಾರೆ. ಗದಗ ಜಿಮ್ಸ್ ಆಸ್ಪತ್ರೆಗೆ ಕರೆತಂದರೇ ಅಲ್ಲಿ ನೈಟ್ ಡ್ಯೂಟಿ ಡಾಕ್ಟರ್ ನಿರ್ಲಕ್ಷ್ಯ ಮಾಡಿದ್ದಾರೆ. ಆರ್ಥೊಫಿಡಿಕ್ ಡಾಕ್ಟರ್ ಮಾರ್ನಿಂಗ್ ನೋಡುತ್ತೇನೆ, ಸದ್ಯ ನೀವೆ ಚಿಕಿತ್ಸೆ ಕೊಡಿ ಎಂದು ನರ್ಸ್ ಗೆ ಹೇಳಿ ಸುಮ್ಮನಾಗಿದ್ದಾರೆ.

    ಇತ್ತ ಶಿರಹಟ್ಟಿ ತಾಲೂಕ ಆಸ್ಪತ್ರೆ ಹಾಗೂ ಗದಗ ಜಿಮ್ಸ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ ಮಗು ನರಳಾಡುವಂತಾಗಿದೆ. ಎಕ್ಸರೆ ರಿಪೋರ್ಟ್ ನಲ್ಲಿ ಶಿರಹಟ್ಟಿ ವೈದ್ಯರ ಎಡವಟ್ಟು ಬಯಲಾಗಿದೆ.