Tag: treatment

  • World First Aid Day: ತುರ್ತು ಸಂದರ್ಭಗಳಲ್ಲಿ ಜೀವ ರಕ್ಷಿಸುವುದೇ ಗೋಲ್ಡನ್‌ ಅವರ್!‌

    World First Aid Day: ತುರ್ತು ಸಂದರ್ಭಗಳಲ್ಲಿ ಜೀವ ರಕ್ಷಿಸುವುದೇ ಗೋಲ್ಡನ್‌ ಅವರ್!‌

    ಪ್ರತಿ ವರ್ಷ ಸೆಪ್ಟೆಂಬರ್‌ ತಿಂಗಳ ಎರಡನೇ ಶನಿವಾರದಂದು ವಿಶ್ವ ಪ್ರಥಮ ಚಿಕಿತ್ಸಾ ದಿನವನ್ನು (World First Aid Day) ಆಚರಿಸಲಾಗುತ್ತದೆ. ಜನರಲ್ಲಿ ಪ್ರಥಮ ಚಿಕಿತ್ಸೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ನಮ್ಮ ದೈನಂದಿನ ಬದುಕಿನಲ್ಲಿ ಮಾನವನ ಜೀವಕ್ಕೆ ಕುತ್ತು ತರುವ ಅನೇಕ ಸಂದರ್ಭಗಳು ಎದುರಾಗುತ್ತವೆ. ಅಂತಹ ಸಂದರ್ಭದಲ್ಲಿ ನಾವು ಹೇಗೆ ಪ್ರತಿಕ್ರಿಯಿಸಬೇಕು ಮತ್ತು ಅಂತಹ ಸಂದರ್ಭವನ್ನು ಹೇಗೆ ಎದುರಿಸಬೇಕು ಎನ್ನುವುದನ್ನು ನಾವು ಮೊದಲು ತಿಳಿಯಬೇಕು. ಏಕೆಂದ್ರೆ ಘಟನೆ ಸಂಭವಿಸಿದ ನಂತರದ ಒಂದು ಗಂಟೆಯ ಅವಧಿಯನ್ನು ಗೋಲ್ಡನ್‌ ಸಮಯ/ಸುವರ್ಣ ಸಮಯ ಎಂದು ಕರೆಯಲಾಗುತ್ತದೆ. ಏಕೆಂದರೆ ಆ ಸಮಯದಲ್ಲಿ ಸರಿಯಾದ ಕ್ರಮ ತೆಗೆದುಕೊಂಡಲ್ಲಿ ಮಾತ್ರ ಒಂದು ಜೀವವನ್ನು ಉಳಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಬೆಂಗಳೂರಿನ ವಾಸವಿ ಆಸ್ಪತ್ರೆಯ ತುರ್ತು ನಿಗಾ ಘಟಕದ ಮುಖ್ಯಸ್ಥರಾದ ಡಾ. ಶೃತಿ ಭಾಸ್ಕರನ್.

    ನಮ್ಮ ಅನೇಕ ಹಳ್ಳಿಗಳಲ್ಲಿ, ಗುಡ್ಡಗಾಡುಗಳಲ್ಲಿ ವಾಸವಾಗಿರುವ ಜನರಿಗೆ ವೈದ್ಯಕೀಯ ಸೇವೆಗಳು ಎಲ್ಲಾ ಸಂದರ್ಭಗಳಲ್ಲೂ ಲಭ್ಯವಿರುವುದಿಲ್ಲ. ಗಾಯ, ಇತರೆ ರೋಗರುಜಿನಗಳು ಹಾಗೂ ಅನೇಕ ಅವಘಡಗಳು ಸಂಭವಿಸಿದ ವೇಳೆ ಏನು ಮಾಡಬೇಕು ಎಂದು ತೋಚದೆ ಕಂಗಾಲಾದ ಪರಿಸ್ಥಿತಿಗಳು ಎದುರಾಗಿವೆ. ಹೀಗಾಗಿ ಗ್ರಾಮೀಣ ಭಾಗದ ಜನರಿಗೆ ಪ್ರಥಮ ಚಿಕಿತ್ಸೆಯ ಬಗ್ಗೆ ಹೆಚ್ಚು ಅರಿವು ಮೂಡಿಸುವ ಜವಾಬ್ದಾರಿ ನಮ್ಮ ಮೇಲಿದೆ. ಯಾರಿಗಾದರೂ ಗಾಯವಾದಲ್ಲಿ, ಚರ್ಮ ಹರಿದು ರಕ್ತಸ್ರಾವ ಉಂಟಾದಲ್ಲಿ ಕೂಡಲೇ ಪ್ರಥಮ ಚಿಕಿತ್ಸೆ ನೀಡುವುದು ಮುಖ್ಯ. ಒಂದು ವೇಳೆ ಚಿಕಿತ್ಸೆ ತೆಗೆದುಕೊಳ್ಳಲು ವಿಫಲವಾದಲ್ಲಿ ಅದು ದೀರ್ಘಕಾಲದ ಸಮಸ್ಯೆಗೆ ಎಡೆಮಾಡಿಕೊಡುವ ಸಾಧ್ಯತೆಗಳಿರುತ್ತವೆ.

    ವಿವಿಧ ತುರ್ತು ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆ ಹೇಗಿರಬೇಕು?
    ನಮ್ಮ ಕಣ್ಣೆದುರು ಯಾರಾದರು ತಲೆ ಸುತ್ತಿ ಬೀಳುವಂತದ್ದು ಅಥವಾ ಮೆದುಳಿನ ರಕ್ತಸ್ರಾವವಾಗುವುದು, ಪಾರ್ಶ್ವವಾಯುಗಳಂತಹ ಸಮಸ್ಯೆಯನ್ನು ಎದುರಿಸುತ್ತಿರುವುದು ಕಂಡುಬಂದಲ್ಲಿ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಸಮಸ್ಯೆಗೆ ಒಳಗಾದವರ ನಾಡಿ ಮಿಡಿತವನ್ನು ಪರೀಕ್ಷಿಸುವ ಮೂಲಕ ಉಸಿರಾಡುತ್ತಿದ್ದಾರೆಯೇ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು. ಏಕೆಂದರೆ ಹೃದಯಾಘಾತ ಅಥವಾ ಪಾರ್ಶ್ವವಾಯು ಪ್ರಕರಣಗಳಲ್ಲಿ ಪ್ರತಿಯೊಂದು ನಿಮಿಷವು ನಿರ್ಣಾಯಕವಾಗಿರುತ್ತದೆ ಹೀಗಾಗಿ ರೋಗಿಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವುದು ಅತ್ಯವಶ್ಯಕ. ಘಟನೆ ಸಂಭವಿಸಿದ ಒಂದು ಗಂಟೆಯೊಳಗೆ ರೋಗಿಗೆ ಚಿಕಿತ್ಸೆಗೆ ನೀಡಿದರೆ ಆತನ ಪರಿಸ್ಥಿತಿಯನ್ನು ವೈದ್ಯರು ಅವಲೋಕಿಸಲು ಸಾಧ್ಯವಾಗುತ್ತದೆ. ಹೃದಯಾಘಾತ ಪ್ರಕರಣಗಳಲ್ಲಿ ಸಿಪಿಆರ್‌ ಮಾಡುವುದು ರೋಗಿಯ ಜೀವದ ನಿರ್ಣಾಯಕ ಘಟನೆಯಾಗಿರುತ್ತದೆ ಎಂದು ಅವರು ತಿಳಿಸಿದರು.

    ತಡವಾದ ಚಿಕಿತ್ಸೆ ಮತ್ತು ಮನೆಮದ್ದುಗಳಿಂದಾಗುವ ಸಮಸ್ಯೆಗಳು
    ರೋಗಿಗೆ ಕೂಡಲೇ ಪ್ರಥಮ ಚಿಕಿತ್ಸೆ ನೀಡುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದುದು ಮನೆಮದ್ದುಗಳ ಬಳಕೆಯಿಂದಾಗುವ ದುಷ್ಪಪರಿಣಾಮಗಳನ್ನು ತಿಳಿಯುವುದು ಕೂಡ. ನಾವೆಲ್ಲಾ ಏನಾದರು ಸಮಸ್ಯೆ ಬಂದಾಗ ಮನೆಮದ್ದುಗಳ ಮೊರೆ ಹೋಗುತ್ತೇವೆ. ಮನೆಮದ್ದುಗಳು ತಾತ್ಕಾಲಿಕ ಸಮಸ್ಯೆಗಳಿಗೆ ಪರಿಹಾರವನ್ನು ನೀಡಬಹುದು ಆದರೆ ಅದು ದೀರ್ಘಕಾಲದ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು ಎನ್ನುವುದೂ ಅಷ್ಟೇ ಸತ್ಯ.

    ಇಂದಿನ ದಿನಗಳಲ್ಲಿ H1N1 ನಂತಹ ವೈರಲ್ ಸೋಂಕುಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಕೆಮ್ಮು, ಜ್ವರದ ಲಕ್ಷಣಗಳನ್ನು ಹೊಂದಿರುತ್ತದೆ. ಆದರೆ ಈ ಬಗ್ಗೆ ಸರಿಯಾಗಿ ತಿಳಿಯದೆ ಮನೆಮದ್ದುಗಳನ್ನು ಪ್ರಯೋಗಿಸುತ್ತೇವೆ. ಆದರೆ ಈ ವೇಳೆ ಆಮ್ಲಜನಕದ ಮಟ್ಟವು ರೋಗಿಯ ಅರಿವಿಲ್ಲದೇ ಕುಸಿಯುತ್ತಾ ಹೋಗುತ್ತದೆ. ಹಾಗಾಗಿ ಸೂಕ್ತ ಸಮಯಕ್ಕೆ ಸರಿಯಾದ ಚಿಕಿತ್ಸೆಯನ್ನು ತೆಗೆದುಕೊಳ್ಳದೆ ಇದ್ದರೆ ಸಮಸ್ಯೆ ಇನ್ನಷ್ಟು ಗಂಭೀರವಾಗಲು ಕಾರಣವಾಗಬಹುದು.

    ಕೆಲವೊಮ್ಮೆ ನಮ್ಮ ದೇಹದಲ್ಲಿ ಗಾಯಗಳಾದಾಗ ಅರಿಶಿಣ ಹಚ್ಚುವುದು ಅಥವಾ ಇತರೆ ಮನೆಮದ್ದುಗಳನ್ನು ಪ್ರಯೋಗಿಸುತ್ತೇವೆ ಆದರೆ ಅದೊಂದು ತಪ್ಪು ಪ್ರಕ್ರಿಯೆ. ಗಾಯಕ್ಕೆ ಯಾವುದೇ ಮನೆಮದ್ದನ್ನು ಪ್ರಯೋಗಿಸುವ ಬದಲು ಹರಿಯುವ ನೀರಿನಿಂದ ಗಾಯದ ಸ್ಥಳವನ್ನು ಮೊದಲು ಸ್ವಚ್ಛಗೊಳಿಸಬೇಕು. ತದನಂತರ ಗಾಯದ ಸ್ಥಳವನ್ನು ಸ್ವಚ್ಛವಾದ ಬಟ್ಟೆಯಿಂದ ಮುಚ್ಚಿ ವೈದ್ಯಕೀಯ ಆರೈಕೆ ಪಡೆಯುವುದು ಉತ್ತಮ. ಆರೋಗ್ಯಕ್ಕೆ ಅಪಾಯ ಒದಗಿದ ಸಂದರ್ಭಗಳಲ್ಲಿ ಯಾವುದೇ ರೀತಿಯ ಮನೆಮದ್ದುಗಳ ಬಳಕೆ ಉತ್ತಮವಲ್ಲ ಎಂದು ವೈದ್ಯೆ ಶೃತಿ ಭಾಸ್ಕರನ್ ವಿವರಿಸುತ್ತಾರೆ.

    ಓದುಗರಿಗೆ ವೈದ್ಯರ ಸಲಹೆ ಏನು?
    ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ರೋಗಿಯು ಅಂತರ್ಜಾಲದಲ್ಲಿ ತಮ್ಮ ರೋಗಲಕ್ಷಣಗಳ ಕುರಿತಾಗಿ ಪರಿಶೀಲಿಸಲು ಮುಂದಾಗುತ್ತಾರೆ. ತದನಂತರ ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಳ್ಳಲು ತೊಡಗುತ್ತಾರೆ. ಆದರೆ ವಾಸ್ತವವಾಗಿ ನಿಖರವಾದ ರೋಗನಿರ್ಣಯ ಮತ್ತು ಚಿಕಿತ್ಸೆಗಾಗಿ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ. ಸುವರ್ಣ ಸಮಯ/ಗೋಲ್ಡನ್‌ ಸಮಯದಲ್ಲಿ ಸಮಯೋಚಿತ ಪ್ರಥಮ ಚಿಕಿತ್ಸೆ ತೆಗೆದುಕೊಳ್ಳುವುದರಿಂದ ತುರ್ತು ಪರಿಸ್ಥಿತಿಗೆ ಪರಿಹಾರವನ್ನು ಕಂಡುಕೊಳ್ಳಬಹುದು ಜೊತೆಗೆ ವೃತ್ತಿಪರ ತಜ್ಞರ ಸಲಹೆ ತೆಗೆದುಕೊಳ್ಳುವುದು ಮುಖ್ಯವಾದುದು ಎಂದು ವಾಸವಿ ಆಸ್ಪತ್ರೆಯ ವೈದ್ಯೆ ಶೃತಿ ಭಾಸ್ಕರನ್ ಸಲಹೆ ನೀಡಿದ್ದಾರೆ.

  • ಆಸ್ಟ್ರೇಲಿಯಾದಿಂದ ಭಾರತಕ್ಕೆ ಬಂದ ಎರಡೂವರೆ ವರ್ಷದ ಹೆಣ್ಣುಮಗುವಿಗೆ H5N1 ಹಕ್ಕಿ ಜ್ವರ!

    ಆಸ್ಟ್ರೇಲಿಯಾದಿಂದ ಭಾರತಕ್ಕೆ ಬಂದ ಎರಡೂವರೆ ವರ್ಷದ ಹೆಣ್ಣುಮಗುವಿಗೆ H5N1 ಹಕ್ಕಿ ಜ್ವರ!

    – ಮಾನವನಲ್ಲಿ ಪತ್ತೆಯಾದ ಮೊದಲ ಪ್ರಕರಣ

    ಕೋಲ್ಕತ್ತಾ: ಆಸ್ಟ್ರೇಲಿಯಾದಿಂದ (Autralia) ಭಾರತಕ್ಕೆ ಪ್ರಯಾಣಿಸಿದ್ದ ಎರಡೂವರೆ ವರ್ಷದ ಹೆಣ್ಣುಮಗುವಿನಲ್ಲಿ H5N1 ಹಕ್ಕಿ ಜ್ವರ (H5N1 Bird Flu) ಕಾಣಿಸಿಕೊಂಡಿದೆ. ಶುಕ್ರವಾರ ಭಾರತಕ್ಕೆ ಪ್ರಯಾಣಿಸಿದ್ದ ಮಗುವಿನಲ್ಲಿ ಹಕ್ಕಿ ಜ್ವರ ಪತ್ತೆಯಾಗಿದ್ದು, ಆಸ್ಟ್ರೇಲಿಯಾದಲ್ಲಿ ತೀವ್ರ ನಿಗಾ ಘಟಕ ಚಿಕಿತ್ಸೆಯ ಅಗತ್ಯತೆಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

    ಅಲ್ಲದೇ ಏವಿಯನ್ ಇನ್ ಫ್ಲುಯೆಂಜಾ (H5N1) ವೈರಸ್‌ನಿಂದ ಮಾನವನಲ್ಲಿ ಉಂಟಾದ ಮೊದಲ ಸೋಂಕು ಇದಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ. ಈ ನಡುವೆ ಪಕ್ಷಗಳಿಂದ ಉಂಟಾಗುವ ಈ ವೈರಸ್‌ ಮಾನವರಿಗೆ ತರುವ ಅಪಾಯಗಳು ಕಡಿಮೆ. ಹಾಗಾಗಿ ಜನರು ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಅಭಯ ನೀಡಿದೆ.

    ಮಗುವಿನ ಪ್ರಯಾಣ ಹಿನ್ನೆಲೆ ಹೀಗಿದೆ..
    ಕಳೆದ ಫೆಬ್ರವರಿ 12 ರಿಂದ 29ರ ವರೆಗೆ ಕೋಲ್ಕತ್ತಾದಲ್ಲಿ (Kolkata) ಮಗು ಪ್ರಯಾಣಿಸಿತ್ತು. ಈ ವೇಳೆ ಯಾವುದೇ ಅನಾರೋಗ್ಯ ಇರಲಿಲ್ಲ. ಮಾರ್ಚ್‌ 1ರಂದು ಆಸ್ಟ್ರೇಲಿಯಾಕ್ಕೆ ತೆರಳಿದ್ದ ಮರುದಿನವೇ ಇಲ್ಲಿನ ಆಗ್ನೇಯ ವಿಕ್ಟೋರಿಯಾದ ಆಸ್ಪತ್ರೆಗೆ ದಾಖಲಿಸಲಾಯಿತು. ಮಗುವಿನ ಆರೋಗ್ಯ ಹದಗೆಡುತ್ತಿದ್ದ ಕಾರಣ ಮಾರ್ಚ್‌ 4ರಿಂದ ಒಂದು ವಾರಗಳ ವರೆಗೆ ಮೆಲ್ಬೋರ್ನ್‌ನ ತೀವ್ರ ನಿಗಾಘಟಕದಲ್ಲಿ ಇರಿಸಲಾಗಿತ್ತು. ಎರಡು ವಾರಗಳಲ್ಲಿ ಪೂರ್ಣ ಚಿಕಿತ್ಸೆ ಪಡೆದ ಬಳಿಕ ಆಸ್ಪತ್ರೆಯಿಂದ ಮಗುವನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಈ ವೇಳೆ ಮಗುವಿಗೆ ಹೆಚ್‌5ಎನ್‌1 ಗೆ ಪರೀಕ್ಷೆ ನಡಲಾಗಿತ್ತು. ಏಪ್ರಿಲ್‌ನಲ್ಲಿ ಮಗುವಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಮಗುವಿನ ಪರೀಕ್ಷಾ ವರದಿ ಪಾಸಿಟಿವ್‌ ಬಂದಿದೆ, ಆದ್ರೆ ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಮತ್ತು ಭಾರತದಲ್ಲಿರುವ ಮಗುವಿನ ಕುಟುಂಬಸ್ಥರಿಗೂ ಪರೀಕ್ಷೆ ನಡೆಸಲಾಗಿದ್ದು, ಅವರಿಗೆ ಸೂಂಕು ದೃಢಪಟ್ಟಿಲ್ಲ ಎಂದು ವೈದ್ಯರು ಹೇಳಿದ್ದಾರೆ.

    ಏನಿದು ಹಕ್ಕಿ ಜ್ವರ?
    ಏವಿಯನ್ ಇನ್ ಫ್ಲುಯೆಂಜಾ (Avian Influenza) ಎಂದು ಕರೆಯಲಾಗುವ ಬರ್ಡ್ ಫ್ಲೂ ಅಥವಾ ಹಕ್ಕಿ ಜ್ವರ ಮೂಲಭೂತವಾಗಿ ಪಕ್ಷಿಗಳ (ಕೋಳಿ, ಬಾತುಕೋಳಿ ಇತ್ಯಾದಿ) ಮೇಲೆ ಪರಿಣಾಮ ಬೀರುವ ಒಂದು ವೈರಾಣು ಸೋಂಕು. ಆದರೆ ಇದು ಮನುಷ್ಯರಿಗೂ ಸಹ ತಗುಲುತ್ತದೆ. ಹಕ್ಕಿಜ್ವರದಲ್ಲಿ H5N1, H7N9, H5N6 ಮತ್ತು H5N8 ಎಂಬ ನಾಲ್ಕು ಮಾದರಿಗಳಿವೆ.

    H5N1, H7N9, H5N6 ಮಾದರಿಯ ಹಕ್ಕಿ ಜ್ವರ ವೈರಸ್ ವಿಶ್ವದ ಹಲವು ದೇಶಗಳಲ್ಲಿ ಕಂಡುಬಂದಿದ್ದು, ಇದರಿಂದಾಗಿ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ H5N1 ಸಾಮಾನ್ಯ ಮಾದರಿಯ ಹಕ್ಕಿ ಜ್ವರವಾಗಿದೆ. ಇದು ಮನುಷ್ಯರಲ್ಲಿ 1997ರಲ್ಲಿ ಪತ್ತೆ ಮಾಡಲಾಗಿದ್ದು, ಇದು ಪೀಡಿತರಲ್ಲಿ ಶೇ.60ರಷ್ಟು ಮಂದಿಯ ಪ್ರಾಣಕ್ಕೆ ಹಾನಿ ಉಂಟು ಮಾಡಿದೆ. ಹಕ್ಕಿಗಳಿಗೆ ಇದು ತುಂಬಾ ಮಾರಣಾಂತಿಕ ವೈರಸ್ ಆಗಿದ್ದು, ಮನುಷ್ಯರು ಹಾಗೂ ಪ್ರಾಣಿಗಳಿಗೆ ಕೂಡ ಇದು ಸುಲಭವಾಗಿ ಹಬ್ಬುತ್ತದೆ.

    ರೋಗ ಲಕ್ಷಣಗಳೇನು?
    ಕೆಮ್ಮು, ಉಸಿರಾಟದಲ್ಲಿ ತೊಂದರೆ, ತೀವ್ರ ಜ್ವರ, ತಲೆನೋವು, ಸ್ನಾಯುಗಳ ನೋವು, ಮೂಗು ಸೋರುವಿಕೆ, ಗಂಟಲಿನ ಊತ, ಮೂಗು ಮತ್ತು ಒಸಡಿನಿಂದ ರಕ್ತ ಸೋರುವಿಕೆ.

  • ಮಕ್ಕಳನ್ನು ಕಾಡುತ್ತಿದೆ ಮಂಗನಬಾವು ಕಾಯಿಲೆ – ಲಕ್ಷಣಗಳೇನು? ಚಿಕಿತ್ಸೆ ಹೇಗೆ?

    ಮಕ್ಕಳನ್ನು ಕಾಡುತ್ತಿದೆ ಮಂಗನಬಾವು ಕಾಯಿಲೆ – ಲಕ್ಷಣಗಳೇನು? ಚಿಕಿತ್ಸೆ ಹೇಗೆ?

    ಣ್ಣ ಮಕ್ಕಳ ದೇಹ ಬಹಳ ಸೂಕ್ಷ್ಮವಾಗಿರುವುದರಿಂದ ಅವರಿಗೆ ಸೋಂಕುಗಳು ಬಹಳ ಬೇಗನೆ ತಗುಲುತ್ತದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮಂಪ್ಸ್ ಕಾಯಿಲೆ (ಮಂಗನ ಬಾವು) ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ದೇವರನಾಡು ಕೇರಳದಲ್ಲಿ ಈ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಕೇವಲ 2 ತಿಂಗಳಲ್ಲಿ 15,000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ ಎಂದು ಕೇರಳದ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಅದೇ ರೀತಿ ಈ ಸೋಂಕು ಕರ್ನಾಟಕಕ್ಕೂ ಲಗ್ಗೆ ಇಟ್ಟಿದೆ. ದಿನೇ ದಿನೇ ಶಾಲಾ ಮಕ್ಕಳಲ್ಲಿ ಈ ಸೋಂಕು ಕಾಣಿಸತೊಡಗಿದ್ದು, ಪೋಷಕರು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಒಳಿತು. ಹಾಗಿದ್ರೆ ಮಂಪ್ಸ್ ಕಾಯಿಲೆಯ ಲಕ್ಷಣಗಳೇನು? ಚಿಕಿತ್ಸೆ ಹೇಗೆ ಎಂಬುದರ ಕುರಿತು ಸಣ್ಣ ಮಾಹಿತಿ ಇಲ್ಲಿ ವಿವರಿಸಲಾಗಿದೆ.

    ಮಂಗನಬಾವು ಎಂದರೇನು?
    ಮಂಗನಬಾವು ಅಥವಾ ಮಂಪ್ಸ್ (Mumps Disease) ಎಂದು ಕರೆಯಲ್ಪಡುವ ಕಾಯಿಲೆ ಒಂದು ಸಾಂಕ್ರಮಿಕ ರೋಗವಾಗಿದೆ. ಇದು ಒಬ್ಬರಿಂದ ಮತ್ತೊಬ್ಬರಿಗೆ ಬಹಳ ಬೇಗ ಹರಡುತ್ತದೆ. ಮಂಪ್ಸ್ ಸೋಂಕಿತರು ಸೀನುವುದು ಅಥವಾ ಕೆಮ್ಮಿದಾಗ ಅವರ ಲಾಲಾರಸದಲ್ಲಿರುವ ವೈರಸ್ ಗಾಳಿಯಲ್ಲಿ ಹರಡುವುದರಿಂದ ಮತ್ತೊಬ್ಬರಿಗೆ ಈ ಕಾಯಿಲೆ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.

    ಮಂಪ್ಸ್ ಕಾಯಿಲೆ ಲಕ್ಷಣಗಳೇನು?
    *ಮಂಪ್ಸ್ ವೈರಸ್ ಉಸಿರಾಟದ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ಇದರ ಪರಿಣಾಮ ವಿಪರೀತ ತಲೆನೋವು, ಜ್ವರ ಮತ್ತು ಆಯಾಸದಂತಹ ಲಕ್ಷಣಗಳು ಕಾಣಿಸತೊಡಗುತ್ತದೆ.
    *ನಂತರ ಲಾಲಾರಸ ಗ್ರಂಥಿಗಳಲ್ಲಿ ತೀವ್ರವಾದ ಊತ ಕಾಣಿಸುತ್ತದೆ. ಅಲ್ಲದೇ ದವಡೆಗಳು ಮತ್ತು ಕೆನ್ನೆಗಳು ವಿಪರೀತ ಊದಿಕೊಳ್ಳುತ್ತವೆ. ಈ ರೀತಿಯಾದ ಊತದಿಂದ ಆಹಾರ ಸೇವನೆಗೆ ತೊಂದರೆಯುಂಟಾಗುತ್ತದೆ.
    *ಕೆಲವೊಮ್ಮೆ ಈ ವೈರಸ್ ಮೆದುಳು, ಮೇದೋಜ್ಜೀರಕ ಗ್ರಂಥಿ, ವೃಷಣಗಳು ಅಥವಾ ಅಂಡಾಂಶಯಗಳು ಸೇರಿದಂತೆ ಇತರೆ ಅಂಗಾಂಗಳ ಮೇಲೆ ಪರಿಣಾಮ ಬೀರಬಹುದು.
    *ವಯಸ್ಕರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಈ ಕಾಯಿಲೆಗೆ ತುತ್ತಾಗಬಹುದು.

    ಕಾಯಿಲೆಗೆ ಚಿಕಿತ್ಸೆ ಏನು?
    ಹಿಂದೆ ಮಂಗನಬಾವು ಮಕ್ಕಳಲ್ಲಿ ಉಂಟಾಗುವ ಬಹಳ ಸಾಮಾನ್ಯ ಕಾಯಿಲೆಯಾಗಿತ್ತು. 1967ರಲ್ಲಿ ಮಂಪ್ಸ್ ಲಸಿಕೆ ಲಭ್ಯವಾದ ನಂತರ ಈ ರೋಗದ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಯಿತು. ದಡಾರ-ಮಂಪ್ಸ್-ರುಬೆಲ್ಲಾ (ಎಂಎಂಆರ್) ಲಸಿಕೆಯನ್ನು ಕೊಡಿಸುವ ಮೂಲಕ ನಿಮ್ಮ ಮಗುವಿಗೆ ಮಂಗನಬಾವು ಬಾರದಂತೆ ಮುನ್ನೆಚ್ಚರಿಕೆ ವಹಿಸಬಹುದು. ಊದಿಕೊಂಡ ಲಾಲಾರಸ ಗ್ರಂಥಿಗಳ ಮೇಲೆ ತಂಪಾದ ಅಥವಾ ಬೆಚ್ಚಗಿನ ಬಟ್ಟೆಯನ್ನು ಹಾಕಿ.

    ಮಂಗನಬಾವು ಲಸಿಕೆ ಸಾಮಾನ್ಯವಾಗಿ ನೀಡಲಾಗುವ ಬಾಲ್ಯದ ವ್ಯಾಕ್ಸಿನೇಷನ್‌ಗಳ ಒಂದು ಭಾಗವಾಗಿದೆ. ಇದನ್ನು ಸಾಮಾನ್ಯವಾಗಿ ಸಂಯೋಜಿತ ದಡಾರ-ಮಂಪ್ಸ್-ರುಬೆಲ್ಲಾ ಲಸಿಕೆಯಾಗಿ ನೀಡಲಾಗುತ್ತದೆ. 12 ಮತ್ತು 15 ತಿಂಗಳ ವಯಸ್ಸಿನ ನಡುವಿನ ಮೊದಲ ಡೋಸ್ ಹಾಗೂ ಶಾಲೆಗೆ ಪ್ರವೇಶಿಸುವ ಮೊದಲು 4 ಮತ್ತು 6 ವರ್ಷಗಳ ನಡುವಿನ ಎರಡನೇ ಡೋಸ್ ನೀಡಲಾಗುತ್ತದೆ.

    ಮಂಗನಬಾವು ಸಾಮಾನ್ಯವಾಗಿ 2-12 ವರ್ಷ ವಯಸ್ಸಿನ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ವಯಸ್ಕರಿಗೂ ಈ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಗೆ ಯಾವುದೇ ನಿರ್ದಿಷ್ಟ ಆಂಟಿವೈರಲ್ ಚಿಕಿತ್ಸೆ ಇಲ್ಲ. ಅದರೆ ಆರಂಭದಲ್ಲೇ ಇದನ್ನು ಪತ್ತೆ ಹಚ್ಚಿದರೆ ಸಮಸ್ಯೆಯನ್ನು ತಡೆಗಟ್ಟಬಹುದು.

    ಈ ಲಕ್ಷಣಗಳು ನಿಮ್ಮಲ್ಲಿ ಕಾಣಿಸಿಕೊಂಡರೆ ಹೆಚ್ಚು ನೀರು ಕುಡಿಯಿರಿ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.
    *ಊದಿಕೊಂಡ ಸ್ಥಳಕ್ಕೆ ಬೆಚ್ಚಗಿನ ಅಥವಾ ತಣ್ಣನೆಯ ಶಾಖವನ್ನು ನೀಡುವುದು ಸಹ ಉತ್ತಮ.
    *ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸಿ. ದಿನಕ್ಕೆ 2-3 ಬಾರಿ ಇದನ್ನು ಪುನರಾವರ್ತಿಸಿ.
    *ವೈರಸ್ ಹರಡುವುದನ್ನು ತಡೆಯಲು ಸೋಂಕಿತ ವ್ಯಕ್ತಿಯಿಂದ ದೂರವಿರುವುದು ಉತ್ತಮ.
    *ಗಟ್ಟಿ ಪದಾರ್ಥಗಳನ್ನು ಜಗಿಯಲು ಕಷ್ಟವಾಗಿರುವುದರಿಂದ ಮೃದು ಆಹಾರ ಅಥವಾ ದ್ರವ ರೂಪದ ಆಹಾರ ಸೇವನೆ ಉತ್ತಮ.

  • ಯುರೋಪಿನಲ್ಲಿ ಐವರ ಸಾವಿಗೆ ಕಾರಣವಾಯ್ತು ಗಿಳಿ ಜ್ವರ- ಏನಿದು ಫೀವರ್‌, ಲಕ್ಷಣಗಳೇನು..?

    ಯುರೋಪಿನಲ್ಲಿ ಐವರ ಸಾವಿಗೆ ಕಾರಣವಾಯ್ತು ಗಿಳಿ ಜ್ವರ- ಏನಿದು ಫೀವರ್‌, ಲಕ್ಷಣಗಳೇನು..?

    ತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾಗುತ್ತಿದ್ದಂತೆಯೇ ಮನುಷ್ಯ ಒಂದಲ್ಲ ಒಂದು ರೀತಿಯಲ್ಲಿ ಅನಾರೋಗ್ಯಕ್ಕೀಡಾಗುತ್ತಿದ್ದಾನೆ. ಶೀತ, ಜ್ವರ ಹಾಗೂ ಕೆಮ್ಮು ಸಾಮಾನ್ಯವಾಗಿರುತ್ತದೆ. ಡೆಂಗ್ಯೂ, ಮಲೇರಿಯಾ, ಟೈಫಾಯ್ಡು, ಹಂದಿ ಜ್ವರ, ಕೊರೊನಾ ವೈರಸ್‌, ಹಕ್ಕಿ ಜ್ವರ ಕೇಳಿದ್ದೇವೆ. ಸದ್ಯ ಈ ಜ್ವರಗಳ ಜೊತೆ ಅಪರೂಪದಲ್ಲಿ ಅಪರೂಪದ ಗಿಳಿ ಜ್ವರವೂ ಸೇರಿಕೊಂಡಿದೆ.

    ಹೌದು. ಗಿಳಿ ಜ್ವರ ನಾವು ಹೊಸದಾಗಿ ಕೇಳಿಸಿಕೊಂಡ ಸೋಂಕಾದರೆ ಯುರೋಪ್‌ನಾದ್ಯಂತ (Europe) ಈ ವರ್ಷ ಐವರ ಸಾವಿಗೆ ಕಾರಣವಾಗಿದೆ. ಈ ಮೂಲಕ ಯೂರೋಪಿಯನ್ನರನ್ನು ಭಾರೀ ಆತಂಕಕ್ಕೆ ದೂಡಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಡೆನ್ಮಾರ್ಕ್‌ನಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ನೆದರ್‌ಲ್ಯಾಂಡ್‌ನಲ್ಲಿ ಓರ್ವ, ಮತ್ತು ಆಸ್ಟ್ರಿಯಾ, ಜರ್ಮನಿ ಮತ್ತು ಸ್ವೀಡನ್‌ನಾದ್ಯಂತ ಡಜನ್‌ಗಟ್ಟಲೆ ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗಿದ್ರೆ ಏನಿದು ಗಿಳಿ ಜ್ವರ..?, ಇದರ ಲಕ್ಷಣಗಳೇನು..?, ಚಿಕಿತ್ಸೆ ಏನು ಎಂಬುದನ್ನು ನೋಡೋಣ.

    ಏನಿದು ಗಿಳಿ ಜ್ವರ?: ಈ ಜ್ವರವನ್ನು ಸಿಟ್ಟಾಕೋಸಿಸ್‌ ಎಂದೂ ಕರೆಯುತ್ತಾರೆ. ಇದು ಅಪರೂಪದ ಗಂಭೀರ ಸಮಸ್ಯೆ ಉಂಟು ಮಾಡುವ ವೈರಸ್‌ ಆಗಿದೆ. ಕ್ಲಮೈಡಿಯ ಸಿಟ್ಟಾಸಿ ಎಂಬ ಬ್ಯಾಕ್ಟೀರಿಯಾದಿಂದ ಇದು ಉಂಟಾಗುತ್ತದೆ. ಇದು ಪಕ್ಷಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ವಿಶೇಷವಾಗಿ ಗಿಳಿಗಳು, ಪಾರಿವಾಳಗಳು ಹಾಗೂ ಕೋಳಿಗಳ ಮೇಲೆ ಇದು ಪರಿಣಾಮ ಬೀರುತ್ತದೆ. ಈ ಬ್ಯಾಕ್ಟೀರಿಯಾವು ಗಾಳಿಯಿಂದ ಮನುಷ್ಯರಿಗೂ ಹರಡುತ್ತದೆ ಎಂಬುದಾಗಿ ವೈದ್ಯ ಮೂಲಗಳು ತಿಳಿಸಿವೆ.

    ಗಿಳಿ ಜ್ವರವನ್ನು ಅಪರೂಪದ ಕಾಯಿಲೆ ಎಂದು ಪರಿಗಣಿಸಲಾಗುತ್ತದೆ. ಕೆನಡಾದಲ್ಲಿ (Canada) ಮನುಷ್ಯರ ಮೇಲೆ ಗಿಳಿ ಜ್ವರ (Parrot Fever) ಅಷ್ಟಾಗಿ ಪರಿಣಾಮ ಬೀರಿಲ್ಲ. ಹೀಗಾಗಿ ರಾಷ್ಟ್ರೀಯವಾಗಿ ಸೂಚಿಸಬಹುದಾದ ರೋಗವಲ್ಲ ಎಂದು ಕೆನಡಾ ಆರೋಗ್ಯ ಸಂಸ್ಥೆ ತಿಳಿಸಿದೆ.

    ಗಿಳಿ ಜ್ವರ ಹೇಗೆ ಬರುತ್ತದೆ?: ಗಿಳಿ ಜ್ವರವು ಕ್ಲಮೈಡಿಯ ಸಿಟ್ಟಾಸಿ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಬ್ಯಾಕ್ಟೀರಿಯಾದ ಸೋಂಕು. ಇದು ಸೋಂಕಿತ ಪಕ್ಷಿಗಳ ನೇರ ಸಂಪರ್ಕದ ಮೂಲಕ ಅಥವಾ ಅವುಗಳ ಹಿಕ್ಕೆಗಳು, ಗರಿಗಳು ಅಥವಾ ಉಸಿರಾಟದ ಸ್ರವಿಸುವಿಕೆಯ ಮೂಲಕ ಮನುಷ್ಯರಿಗೆ ಹರಡುತ್ತದೆ. ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವ ಅಥವಾ ಮೊದಲೇ ಅಸ್ತಿತ್ವದಲ್ಲಿರುವ ಉಸಿರಾಟದ ಪರಿಸ್ಥಿತಿಗಳನ್ನು ಹೊಂದಿರುವ ಜನರು ಈ ಸೋಂಕಿಗೆ ಹೆಚ್ಚು ಒಳಗಾಗುತ್ತಾರೆ.

    ಗಿಳಿ ಜ್ವರವು ಮುಖ್ಯವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಬಳಿಕ ವಿವಿಧ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಕೆನಡಿಯನ್ ಸೆಂಟರ್ ಫಾರ್ ಆಕ್ಯುಪೇಷನಲ್ ಹೆಲ್ತ್ ಅಂಡ್ ಸೇಫ್ಟಿ (CCOHS) ಹೇಳಿದೆ. ಅಪರೂಪದ ಸಂದರ್ಭದಲ್ಲಿ, ಯಕೃತ್ತಿನ ಉರಿಯೂತ, ಪೆರಿಕಾರ್ಡಿಯಮ್ (ಹೃದಯ ಕುಹರದ ಒಳಪದರ), ಮಯೋಕಾರ್ಡಿಯಂ (ಹೃದಯ ಸ್ನಾಯು) ಮತ್ತು ಮೆದುಳಿನ ಉರಿಯೂತ ವರದಿಯಾಗಿದೆ. ಸೋಂಕಿತ ಪ್ರಾಣಿಗಳನ್ನು ತಿನ್ನುವುದರಿಂದ ರೋಗವು ಹರಡುವುದಿಲ್ಲ ಎಂದು CCOHS ಹೇಳಿದೆ.

    ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ಈ ಸೋಂಕು ಧೂಳಿನ ಕಣಗಳು, ನೀರಿನ ಹನಿಗಳ ಮೂಲಕ ಹಾಗೂ ಪಕ್ಷಿಗಳು ಮನುಷ್ಯರನ್ನು ಕಚ್ಚಿದಾಗಲೂ ಹರಡುತ್ತದೆ. ಇದಾದ ಕೆಲವು ದಿನಗಳ ಬಳಿಕ ರೋಗಲಕ್ಷಣಗಳು ಉಲ್ಬಣಗೊಳ್ಳುತ್ತಾ ಹೋಗುತ್ತದೆ.ಕ್ರಮೇಣ ಈ ಸೋಂಕಿನಿಂದ ನ್ಯುಮೋನಿಯಾ ಮತ್ತು ಹೃದಯ ರಕ್ತನಾಳಗಳ ಉರಿಯೂತ ಸಂಭವಿಸಬಹುದು. ಹೆಪಟೈಟಿಸ್ ಮತ್ತು ನರಸಂಬಂಧಿ ಸಮಸ್ಯೆ ಕೂಡ ಎದುರಾಗುವ ಸಾಧ್ಯತೆಗಳಿವೆ. ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಸರಿಯಾದ ವೈದ್ಯಕೀಯ ನೆರವು ದೊರೆಯದಿದ್ದರೆ ಸಾವು ಸಂಭವಿಸುವ ಸಾಧ್ಯತೆಗಳಿವೆ.

    ಲಕ್ಷಣಗಳೇನು..?: ಸೋಂಕು ತಗುಲಿದ ಕೂಡಲೇ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳಲ್ಲ. 5 ರಿಂದ 14 ದಿನಗಳ ಬಳಿಕ ರೋಗ ಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ವ್ಯಕ್ತಿಯು ಬ್ಯಾಕ್ಟೀರಿಯಾದ ಸಂಪರ್ಕಕ್ಕೆ ಬಂದಾಗ ಆತನಿಗೆ ಶೀತ, ಒಣ ಕೆಮ್ಮು, ವಾಂತಿ, ಭೇದಿ, ತಲೆನೋವು, ಸ್ನಾಯು ಸೆಳೆತ ಮತ್ತು ಆಯಾಸ ಹಾಗೂ ಜ್ವರದ ರೀತಿಯ ರೋಗಲಕ್ಷಣಗಳು ಕಂಡುಬರುತ್ತದೆ. ಸೌಮ್ಯವಾದ ಪ್ರಕರಣಗಳಲ್ಲಿ ಜ್ವರವು ಮೂರು ವಾರಗಳವರೆಗೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಉಳಿಯಬಹುದು. ಇದು ನ್ಯುಮೋನಿಯಾ ಹಾಗೂ ಕೆಲವರಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಇನ್ನೂ ಕೆಲವರಲ್ಲಿ ಎದೆನೋವು ಕಾಣಿಸಿಕೊಳ್ಳುವ ಸಾಧ್ಯತೆಗಳು ಕೂಡ ಇವೆ.

    ಚಿಕಿತ್ಸೆ ಏನು?: ಸಾಮಾನ್ಯವಾಗಿ ಗಿಳಿ ಜ್ವರಕ್ಕೆ ಆಂಟಿಬಯೋಟಿಕ್‌ಗಳನ್ನು ನೀಡಲಾಗುತ್ತದೆ. ರೋಗ ಲಕ್ಷಣಗಳು ಹೆಚ್ಚಾದಂತೆ ಔಷಧಗಳೂ ಬೇರೆ ಬೇರೆಯಾಗುತ್ತಾ ಹೋಗುತ್ತದೆ. ಏಕೆಂದರೆ ರೋಗ ಲಕ್ಷಣಗಳು ತೀವ್ರಗೊಂಡಾಗ ನ್ಯುಮೋನಿಯಾ ಹಾಗೂ ಹೃದಯದ ರಕ್ತನಾಳಗಳ ಉರಿಯೂತ ಕೂಡಾ ಆಗಬಹುದು. ಹೆಪಟೈಟೀಸ್ ಹಾಗೂ ನರಗಳ ಸಮಸ್ಯೆ ಕೂಡ ಎದುರಾಗಬಹುದು. ಸೂಕ್ತ ಸಮಯದಲ್ಲಿ ವೈದ್ಯಕೀಯ ನೆರವು ಸಿಗದಿದ್ದರೆ ಸಾವನ್ನಪ್ಪುವ ಸಾಧ್ಯತೆಯೂ ಇದೆ.

    ಪಾರಾಗುವುದು ಹೇಗೆ?: ಗಿಳಿ ಜ್ವರವನ್ನು ತಡೆಗಟ್ಟಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಪಕ್ಷಿಗಳನ್ನು ನಿರ್ವಹಿಸುವಾಗ ಅಥವಾ ಪಕ್ಷಿಗಳು ಇರುವ ಪ್ರದೇಶಗಳಲ್ಲಿ ಕೆಲಸ ಮಾಡುವಾಗ ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು. ನೀವು ಪಕ್ಷಿಗಳು ಅಥವಾ ಅವುಗಳ ಪಂಜರಗಳನ್ನು ನಿರ್ವಹಿಸುವಾಗ, ನಿಮ್ಮ ಕೈಗಳನ್ನು ತೊಳೆದುಕೊಳ್ಳಿ ಮತ್ತು ಪಕ್ಷಿ ಪಂಜರಗಳನ್ನು ಸ್ವಚ್ಛಗೊಳಿಸುವಾಗ ಕೈಗೆ ಗ್ಲೌಸ್‌ಗಳು ಮತ್ತು ಮಖಕ್ಕೆ ಮಾಸ್ಕ್ ಧರಿಸುವುದು ಅತ್ಯಗತ್ಯ. ಅಲ್ಲದೆ ಅದರ ಅಪಾಯಗಳ ಬಗ್ಗೆ ನಿಮಗೆ ಮತ್ತು ಇತರರಿಗೆ ಶಿಕ್ಷಣ ನೀಡುವುದು ಮತ್ತು ಅಗತ್ಯವಿದ್ದರೆ ವೈದ್ಯಕೀಯ ಆರೈಕೆಯನ್ನು ಪಡೆಯುವುದು ಅತ್ಯಗತ್ಯ.

    ಯುರೋಪಿನಲ್ಲಿ ಏಕಾಏಕಿ ಸಂಭವಿಸುವ ಬಗ್ಗೆ ಹೇಳುವುದಾದರೆ WHO ಪ್ರಕಾರ, ಆಸ್ಟ್ರಿಯಾದಲ್ಲಿ ಹಿಂದಿನ 8 ವರ್ಷಗಳಲ್ಲಿ ವರ್ಷಕ್ಕೆ ಸರಾಸರಿ ಎರಡು ಪ್ರಕರಣಗಳಿಗೆ ಹೋಲಿಸಿದರೆ, 2023 ರಲ್ಲಿ 14 ಗಿಳಿ ಜ್ವರದ ಪ್ರಕರಣಗಳು ವರದಿಯಾಗಿವೆ. 2024 ರ ಮಾರ್ಚ್ 4 ರ ಹೊತ್ತಿಗೆ ದೇಶವು ನಾಲ್ಕು ಪ್ರಕರಣಗಳನ್ನು ವರದಿ ಮಾಡಿದೆ. ಡೆನ್ಮಾರ್ಕ್ 2023 ರ ಅಂತ್ಯದಿಂದ 2024 ರ ಜನವರಿ ಮಧ್ಯದವರೆಗೆ ಗಿಳಿ ಜ್ವರ ಪ್ರಕರಣಗಳಲ್ಲಿ ಹೆಚ್ಚಳವನ್ನು ವರದಿ ಮಾಡಿದೆ ಎಂದು WHO ಹೇಳಿದೆ. ಫೆಬ್ರವರಿ 27 ರ ಹೊತ್ತಿಗೆ 23 ವ್ಯಕ್ತಿಗಳು ರೋಗಕ್ಕೆ ತುತ್ತಾದರು. 17 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ 15 ಮಂದಿಗೆ ನ್ಯುಮೋನಿಯಾದಿಂದ ಬಳಲುತ್ತಿದ್ದಾರೆ ಇದೆ. ಇನ್ನು ನಾಲ್ವರು ಸಾವನ್ನಪ್ಪಿದ್ದಾರೆ.

    2023ರ ಡಿಸೆಂಬರ್‌ನಲ್ಲಿ ಜರ್ಮನಿಯಲ್ಲಿ ಐವರಲ್ಲಿ ಗಿಳಿ ಜ್ವರ ದೃಢಪಟ್ಟಿತ್ತು. ಈ ಮೂಲಕ ಇದೇ ವರ್ಷ ಒಟ್ಟು 14 ಮಂದಿಯಲ್ಲಿ ಈ ಜ್ವರ ಕಾಣಿಸಿಕೊಂಡಿತ್ತು. 2024 ರ ಈ ಅವಧಿಯಲ್ಲಿ ಫೆಬ್ರವರಿ 20ರೊಳಗೆ ಮತ್ತೆ 5 ಪ್ರಕರಣಗಳು ವರದಿಯಾಗಿವೆ. 2023 ರ ನವೆಂಬರ್ ಕೊನೆಯಲ್ಲಿ ಮತ್ತು ಡಿಸೆಂಬರ್ ತಿಂಗಳ ಆರಂಭದಲ್ಲಿ ಸ್ವೀಡನ್ ನಲ್ಲಿಯೂ ಒಂದಷ್ಟು ಪ್ರಕರಣಗಳು ವರದಿಯಾಗಿವೆ. ನವೆಂಬರ್ ನಲ್ಲಿ 7 ಪ್ರಕರಣಗಳು ಮತ್ತು ಡಿಸೆಂಬರ್ ನಲ್ಲಿ 19 ಪ್ರಕರಣಗಳು ವರದಿಯಾಗಿವೆ. ಇದು ಹಿಂದಿನ ತಿಂಗಳುಗಳಲ್ಲಿ ಆಯಾ ತಿಂಗಳುಗಳಿಗೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆಯನ್ನು ದ್ವಿಗುಣಗೊಳಿಸುತ್ತದೆ. ಒಟ್ಟಿನಲ್ಲಿ ಯುರೋಪ್‌ನಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಬಗ್ಗೆ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು WHO ಹೇಳಿದೆ.

  • ಪಾವಗಡ ಆಸ್ಪತ್ರೆಯಲ್ಲಿ ವಿವಿಧ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮೂವರು ಮಹಿಳೆಯರು ಸಾವು

    ಪಾವಗಡ ಆಸ್ಪತ್ರೆಯಲ್ಲಿ ವಿವಿಧ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮೂವರು ಮಹಿಳೆಯರು ಸಾವು

    – ಮಹಿಳೆಯರ ಸಾವಿಗೆ ಶಸ್ತ್ರಚಿಕಿತ್ಸಾ ಕೊಠಡಿ ಅಶುಚಿತ್ವವೇ ಕಾರಣ
    – ಸ್ಟೆಫೆಲೋ ಕಾಕಲ್ ಬ್ಯಾಕ್ಟೀರಿಯಾದಿಂದ ಸಾವನ್ನಪ್ಪಿರಬಹುದು ಎಂದ ಡಿಹೆಚ್‌ಒ

    ತುಮಕೂರು: ಒಂದೇ ದಿನ ವಿವಿಧ ಶಸ್ತ್ರಚಿಕಿತ್ಸೆಗೆ (Surgery) ಒಳಗಾಗಿದ್ದ ಮೂವರು ಮಹಿಳೆಯರು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ (Pavagada Government Hospital) ನಡೆದಿದೆ.

    ಸಂತಾನಹರಣ, ಗರ್ಭಕೋಶ ಆಪರೇಷನ್ ಹಾಗೂ ಸಿಸೇರಿಯನ್ (Cesarean) ಹೆರಿಗೆಗೆ ಒಳಗಾಗಿದ್ದ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಕಳೆದ 5 ದಿನಗಳ ಅವಧಿಯಲ್ಲಿ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ದುಬೈನಲ್ಲಿ ಗೌಡರ ಗೌಜಿ ಗಮ್ಮತ್ತು-2024 – ಒಕ್ಕಲಿಗ ಸಮುದಾಯಗಳ ಕುಟುಂಬ ಸಮಾಗಮ 

    ಇದೇ ಫೆಬ್ರವರಿ 22ರಂದು 7 ಮಹಿಳೆಯರಿಗೆ ಹೆರಿಗೆ ಸೇರಿದಂತೆ ವಿವಿಧ ರೀತಿಯ ಶಸ್ತ್ರಚಿಕಿತ್ಸೆಗೆ ಮಾಡಲಾಗಿತ್ತು. ಈ ವೇಳೆ ಸಂತಾನ ಹರಣ ಚಿಕಿತ್ಸೆಗೆ ಒಳಗಾಗಿದ್ದ ವೀರ್ಲಗೊಂದಿ ಗ್ರಾಮದ ಮಹಿಳೆ ಅನಿತಾ (30) ಚಿಕಿತ್ಸೆ ಮಾಡಿಸಿಕೊಂಡ ದಿನವೇ ಸಾವನ್ನಪ್ಪಿದ್ದಾರೆ. ಇನ್ನೂ ರಾಜವಂತಿ ಮೂಲದ ಅಂಜಲಿ ಎಂಬ ಮಹಿಳೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಹೆರಿಗೆ ಬಳಿಕ ಮಹಿಳೆಯ ಸ್ಥಿತಿ ಗಂಭೀರವಾಗಿತ್ತು. ಆದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಫೆ.24ರಂದು ಅಂಜಲಿ ಸಾವನ್ನಪ್ಪಿದ್ದಾರೆ.

    ಮತ್ತೊಂದು ಪ್ರಕರಣದಲ್ಲಿ ಬ್ಯಾಡನೂರು ಗ್ರಾಮದ 40 ವರ್ಷದ ನರಸಮ್ಮ ಎಂಬ ಮಹಿಳೆ ಗರ್ಭಕೋಶದ ಶಸ್ತ್ರಚಿಕಿತ್ಸೆಗೆ ನಡೆಸಲಾಗಿತ್ತು. ನಸರಮ್ಮ ಸ್ಥಿತಿಯೂ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಫೆ.25 ರಂದು ನಸರಮ್ಮ ಸಾವನ್ನಪ್ಪಿದ್ದರು. ಈ ಮೂವರು ಫೆ.22ರಂದು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಹೇಳಲಾಗಿದೆ.

    ಇದೀಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಶಸ್ತ್ರಚಿಕಿತ್ಸೆಗೆ ನಡೆಸಿದ ವೈದ್ಯೆ ಡಾ. ಪೂಜಾ ಹಾಗೂ ನಿರ್ಲಕ್ಷ್ಯ ತೋರಿದ ಆಸ್ಪತ್ರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಮೃತರ ಭಾವಚಿತ್ರ ಹಿಡಿದು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ರಾಹುಲ್‌ಗೆ ಶಾಕ್‌ – ವಯನಾಡಿನಲ್ಲಿ ಸಿಪಿಐ ಅಭ್ಯರ್ಥಿ ಕಣಕ್ಕೆ

    ಆರೋಗ್ಯಾಧಿಕಾರಿ ಹೇಳಿದ್ದೇನು?
    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುನಾಥ್ `ಪಬ್ಲಿಕ್ ಟಿವಿ’ಯೊಂದಿಗೆ ಮಾತನಾಡಿದ್ದಾರೆ. ಫೆ.22 ರಂದು ಮಹಿಳೆಯರಿಗೆ ಶಸ್ತ್ರಚಿಕಿತ್ಸೆ ನಡೆದಿದೆ. ಒಟ್ಟು 7 ಮಹಿಳೆಯರಿಗೆ ಅಂದು ಸಂತಾನಹರಣ, ಸಿಸೇರಿಯನ್ ಮತ್ತು ಗರ್ಭಕೋಶದ ಶಸ್ತ್ರಚಿಕಿತ್ಸೆ ನಡೆದಿದೆ. ಈ ಘಟನೆಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಹೇಳೋಕಾಗಲ್ಲ. ಶಸ್ತ್ರಚಿಕಿತ್ಸಾ ಕೊಠಡಿ (ಆಪರೇಷನ್ ಥಿಯೇಟರ್ ಶುಚಿತ್ವ) ಇಲ್ಲದಿರೋದು ಕಾರಣ ಇರಬಹುದು. ಆಪರೇಷನ್ ಥಿಯೇಟರ್‌ನಲ್ಲಿ ಸ್ಟೆಫೆಲೋ ಕಾಕಲ್ ಬ್ಯಾಕ್ಟೀರಿಯಾ ಇದೆ. ಇದರಿಂದ ಮಹಿಳೆಯರು ಸಾವನ್ನಪ್ಪಿರಬಹುದು. ಬೆಂಗಳೂರಿನಿಂದ ತನಿಖಾ ತಂಡ ಬಂದು ಸ್ಯಾಂಪಲ್ ತೆಗೆದುಕೊಂಡು ಹೋಗಿದೆ. ವರದಿ ಬಂದ ನಂತರ ವೈದ್ಯರು ಸೇರಿದಂತೆ ಸಿಬ್ಬಂದಿ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

  • ‘ಮಿಂಟೋ’ ಆಸ್ಪತ್ರೆಯ ಕರ್ಮಕಾಂಡ – ಆಸ್ಪತ್ರೆಗೆ ಬೀಗ ಹಾಕಿ ರಸ್ತೆಯಲ್ಲೇ ರೋಗಿಗಳಿಗೆ ಚಿಕಿತ್ಸೆ

    ‘ಮಿಂಟೋ’ ಆಸ್ಪತ್ರೆಯ ಕರ್ಮಕಾಂಡ – ಆಸ್ಪತ್ರೆಗೆ ಬೀಗ ಹಾಕಿ ರಸ್ತೆಯಲ್ಲೇ ರೋಗಿಗಳಿಗೆ ಚಿಕಿತ್ಸೆ

    – ಊಟದ ಸಮಯ ಎಂದು ರೋಗಿಗಳನ್ನು ಹೊರಗಡೆ ಕಳುಹಿಸಿ ಆಸ್ಪತ್ರೆಗೆ ಬೀಗ

    ಬೆಂಗಳೂರು: ಇಲ್ಲಿನ ಮಿಂಟೋ ಆಸ್ಪತ್ರೆ (Minto Hospital) ಅತಿದೊಡ್ಡ ಸರ್ಕಾರಿ ಆಸ್ಪತ್ರೆಯಾಗಿದೆ. ಆದರೆ ಈಗ ಊಟದ ಸಮಯ ಎಂದು ಆಸ್ಪತ್ರೆಗೆ ಬೀಗ ಹಾಕಿ ರಸ್ತೆಯಲ್ಲೇ ರೋಗಿಗಳಿಗೆ ಚಿಕಿತ್ಸೆ ನೀಡಿ ಅಮಾನವೀಯ ವರ್ತನೆ ತೋರಿದ್ದಾರೆ. ಇದರಿಂದ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಸಿಗದೆ ಆಸ್ಪತ್ರೆ ಮುಂಭಾಗ ರೋಗಿಗಳು ನರಳಾಡುತ್ತಿದ್ದಾರೆ.

    ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇರುವ ಅತಿದೊಡ್ಡ ಕಣ್ಣಿನ ಆಸ್ಪತ್ರೆ (Eye Hospital) ಎಂದರೆ ಅದು ಮಿಂಟೋ ಆಸ್ಪತ್ರೆ. ಉಚಿತವಾಗಿ ಚಿಕಿತ್ಸೆ ಸಿಗುತ್ತದೆ ಎಂದು ದೂರದ ಊರುಗಳಿಂದ ಜನ ಬರುತ್ತಾರೆ. ಎಂತಹದ್ದೇ ಸಂದರ್ಭದಲ್ಲೂ ಆದರೂ ಸೂಕ್ತ ಸಮಯಕ್ಕೆ ಚಿಕಿತ್ಸೆ ಕೊಡುವುದು ಆಸ್ಪತ್ರೆಗಳ ಕರ್ತವ್ಯ. ಆದರೆ ಕೆ.ಆರ್ ಮಾರ್ಕೆಟ್ ಬಳಿಯ ಮಿಂಟೋ ಆಸ್ಪತ್ರೆಯಲ್ಲಿ ವೈದ್ಯರು ತಮ್ಮ ಕರ್ತವ್ಯವನ್ನು ಮರೆತು ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ವೈದ್ಯರು ಊಟ ಮಾಡುವ ಸಮಯ ಎಂದು ರೋಗಿಗಳನ್ನು ಹೊರಗಡೆ ಕಳುಹಿಸಿ ಆಸ್ಪತ್ರೆಗೆ ಬೀಗ ಹಾಕಿದ್ದಾರೆ. ಇದನ್ನೂ ಓದಿ: ಬಿಜೆಪಿಯಿಂದ 2, ಜೆಡಿಎಸ್‌ನಿಂದ 4 ಮಂದಿ ಕಾಂಗ್ರೆಸ್‌ಗೆ ಮತ ಹಾಕಲು ಸಿದ್ದರಿದ್ದಾರೆ: ಡಿಕೆಶಿ

    ಮಿಂಟೋ ಆಸ್ಪತ್ರೆಗೆ ಬೀಗ ಹಾಕಿದ ಸಮಯದಲ್ಲಿ ಸಂಜಯ್ ಗಾಂಧಿ ಆಸ್ಪತ್ರೆಯಿಂದ ಎಮರ್ಜೆನ್ಸಿ ಕೇಸ್ ಬಂದರೂ ಸಹ ಆಸ್ಪತ್ರೆಯ ಬೀಗ ತೆಗೆದು ಚಿಕಿತ್ಸೆ ಕೊಟ್ಟಿಲ್ಲ. ಬದಲಾಗಿ ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿಯೇ ಅಂಬುಲೆನ್ಸ್ ಒಳಗಡೆಯೇ ಚಿಕಿತ್ಸೆ ಕೊಟ್ಟಿದ್ದಾರೆ. ಆಸ್ಪತ್ರೆಗೆ ಬೀಗ ಹಾಕಿದ ಕಾರಣ ನೂರಾರು ರೋಗಿಗಳು ಆಸ್ಪತ್ರೆ ಮುಂಭಾಗ ಗೇಟ್ ಬಳಿ ಚಿಕಿತ್ಸೆಗಾಗಿ ಕಾಯುತ್ತಿದ್ದಾರೆ. ವೈದ್ಯರ ಬೇಜವಾಬ್ದಾರಿ ನಿರ್ಲಕ್ಷ್ಯಕ್ಕೆ ರೋಗಿಗಳು ನಲುಗಿ ಹೋಗಿದ್ದಾರೆ. ಇದನ್ನೂ ಓದಿ: ಲೋಕಸಭೆ ಚುನಾವಣೆ: RSS ಹಿನ್ನೆಲೆಯುಳ್ಳ ಅಭ್ಯರ್ಥಿಗಳು ಬಿಜೆಪಿಯಿಂದ ಕಣಕ್ಕೆ?

    ಆಸ್ಪತ್ರೆಗೆ ಬೀಗ ಹಾಕಿರುವ ಕಾರಣ ನೂರಾರು ರೋಗಿಗಳು ಚಿಕಿತ್ಸೆಗಾಗಿ ಹಂಬಲಿಸುತ್ತಾ ಇದ್ದ ಹಿನ್ನೆಲೆಯಲ್ಲಿ ‘ಪಬ್ಲಿಕ್ ಟಿವಿ’ ವೈದ್ಯರ ನಿರ್ಲಕ್ಷ್ಯ, ಬೇಜವಾಬ್ದಾರಿತನವನ್ನು ಪ್ರಶ್ನೆ ಮಾಡಿದ ಬಳಿಕ ಗೇಟ್ ಓಪನ್ ಮಾಡಿ ರೋಗಿಗಳನ್ನು ಒಳಗಡೆ ಬಿಟ್ಟಿದ್ದಾರೆ. ಇನ್ನು ಈ ಕುರಿತು ರೋಗಿಗಳು ಹಾಗೂ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ. ರೋಗಿಗಳಿಗಿಂತ ಇವರಿಗೆ ಊಟನೇ ಹೆಚ್ಚಾಗಿದೆ. ಊಟದ ಸಮಯ ಎಂದು ಒಂದೂವರೆ ಗಂಟೆ ಆಸ್ಪತ್ರೆಗೆ ಬೀಗ ಹಾಕಿಕೊಂಡರೆ ಎಮರ್ಜೆನ್ಸಿ ಇರುವ ರೋಗಿಗಳ ಪರಿಸ್ಥಿತಿ ಏನಾಗಬೇಡ? ರಸ್ತೆಯಲ್ಲೇ ಚಿಕಿತ್ಸೆ ಕೊಡುತ್ತಿದ್ದಾರೆ. ಐಸಿಯು, ಬೆಡ್ ಬೇಡವೇ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಮ ಮಂದಿರಕ್ಕೆ 11 ಕೋಟಿ ದೇಣಿಗೆ ನೀಡಿದ್ದ ವಜ್ರ ಉದ್ಯಮಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್‌

    ಸರ್ಕಾರ ಮತ್ತು ವೈದ್ಯಕೀಯ ಶಿಕ್ಷಣ ನಿಜಕ್ಕೂ ಈ ಆಸ್ಪತ್ರೆ ಮೇಲೆ ನಿಗಾ ವಹಿಸಬೇಕಿದೆ. ಸುಸಜ್ಜಿತ ಕಟ್ಟಡ, ವೈದ್ಯಕೀಯ ಸೌಲಭ್ಯ ಇದ್ದರೂ ಈ ರೀತಿ ನಿರ್ಲಕ್ಷ್ಯ ಮಾಡಿ ಬೀಗ ಹಾಕಿ ರಸ್ತೆಯಲ್ಲೆ ಚಿಕಿತ್ಸೆ ಕೊಡೋದು ಎಷ್ಟು ಸರಿ? ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವರು ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸುತ್ತಾರಾ ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ: ರೈತರನ್ನು ಹಿಮ್ಮೆಟ್ಟಿಸಲು ʻಶಬ್ದಾಸ್ತ್ರʼ ಪ್ರಯೋಗ – ಇದು ಹೇಗೆ ಕೆಲಸ ಮಾಡುತ್ತೆ?

  • ಓವರ್ ಡೋಸ್ ಡ್ರಗ್: ಸಾವು ಬದುಕಿನ ಮಧ್ಯೆ ಪೋರ್ನ್ ಸ್ಟಾರ್ ಹೋರಾಟ

    ಓವರ್ ಡೋಸ್ ಡ್ರಗ್: ಸಾವು ಬದುಕಿನ ಮಧ್ಯೆ ಪೋರ್ನ್ ಸ್ಟಾರ್ ಹೋರಾಟ

    ಖ್ಯಾತ ಪೋರ್ನ್ ಸ್ಟಾರ್ ಎಮಿಲಿ ವಿಲ್ಸ್ (Emily Wills) ಸಾವು ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಹೋರಾಟ ನಡೆಸಿದ್ದಾರೆ. ಓವರ್ ಡೋಸ್  ಡ್ರಗ್ (Drugs) ನೀಡಿದ ಪರಿಣಾಮ ಅವರು ಪ್ರಜ್ಞೆ ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಏಳು ನೂರಕ್ಕೂ ಹೆಚ್ಚು ಪೋರ್ನ್ ಸಿನಿಮಾಗಳಲ್ಲಿ ನಟಿಸಿರುವ ಎಮಿಲಿ, ಅತಿಯಾದ ಡ್ರಗ್ಸ್ ಕೂಡ ತೆಗೆದುಕೊಳ್ಳುತ್ತಿದ್ದರಂತೆ.

    ಪೋರ್ನ್ ಲೋಕದ ತಾರೆಯಾಗಿದ್ದ ಎಮಿಲಿ ಇತ್ತೀಚೆಗೆ ಡ್ರಗ್ ವ್ಯಸನಿಯಾದ ಕಾರಣದಿಂದಾಗಿ, ಡ್ರಗ್ ನಿಂದ ಮುಕ್ತಿ ಹೊಂದುವುದಕ್ಕಾಗಿ ಕ್ಯಾಲಿಪೋರ್ನಿಯಾದ ಮಾಲಿಬು ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಂತೆ. ಈ ವೇಳೆಯಲ್ಲೇ ಅವರ ಆರೋಗ್ಯದಲ್ಲಿ ಏರುಪೇರಾಗಿದೆ.

     

    ಔಷಧಿಯಲ್ಲಿ ಏರುಪೇರಾಗಿ ಎಮಿಲಿ ಇದೀಗ ತುರ್ತು ಘಟಕದಲ್ಲಿ ಚಿಕಿತ್ಸೆ (Treatment) ಪಡೆಯುತ್ತಿದ್ದು, ಆರೋಗ್ಯ ತೀರಾ ಹದಗೆಟ್ಟಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಎಮಿಲಿಯ ಆರೋಗ್ಯಕ್ಕಾಗಿ ಅವರು ಕುಟುಂಬ ಪ್ರಾರ್ಥಿಸಿದೆ.

  • ನಟಿ ಪೂನಂಗೆ ಫೈಬ್ರೊಮ್ಯಾಲ್ಜಿಯಾ ಕಾಯಿಲೆ: ಬಟ್ಟೆ ತೊಡಲು ಕಷ್ಟ ಎಂದ ನಟಿ

    ನಟಿ ಪೂನಂಗೆ ಫೈಬ್ರೊಮ್ಯಾಲ್ಜಿಯಾ ಕಾಯಿಲೆ: ಬಟ್ಟೆ ತೊಡಲು ಕಷ್ಟ ಎಂದ ನಟಿ

    ತಾವು ಮೂರು ವರ್ಷಗಳಿಂದ ಫೈಬ್ರೊಮ್ಯಾಲ್ಜಿಯಾ (Fibromyalgia) ಕಾಯಿಲೆಯಿಂದ ಬಳಲುತ್ತಿರುವುದಾಗಿ ನಟಿ, ರಾಜಕಾರಣಿ ಪೂನಂ ಕೌರ್ (Poonam Kaur) ಹೇಳಿಕೊಂಡಿದ್ದಾರೆ. ಮಾಧ್ಯಮವೊಂದರ ಸಂದರ್ಶನದಲ್ಲಿ ಈ ವಿಷಯವನ್ನು ಬಹಿರಂಗ ಪಡಿಸಿರುವ ಪೂನಂ ಕೌರ್, ಈ ಕಾಯಿಲೆಯಿಂದಾಗಿ ಬಟ್ಟೆ ಹಾಕಿಕೊಳ್ಳಲು ಕಷ್ಟ ಪಡುತ್ತಿದ್ದೇನೆ ಎಂದಿದ್ದಾರೆ.

    ಈ ಕಾಯಿಲೆಗೆ ತುತ್ತಾದವರ ಬದುಕು ನರಕ. ದೀರ್ಘಕಾಲದ ಅಸ್ವಸ್ಥತೆ, ಖಿನ್ನತೆ, ತಲೆ ನೋವು, ದೇಹದ ಸ್ನಾಯುಗಳು ಬಿಗಿಯಾಗಿ ನೋವು ಹೀಗೆ ನಾನಾ ರೀತಿಯ ಸಂಕಟವನ್ನು ಅನುಭವಿಸಬೇಕಾಗುತ್ತಿದೆ. ಮೂರು ವರ್ಷಗಳಿಂದ ನಾನು ಈ ಕಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

    ಫೈಬ್ರೊಮ್ಯಾಲ್ಜಿಯಾ ಕಾರಣದಿಂದಾಗಿ ಅವರು ಎರಡು ವರ್ಷಗಳ ಕಾಲ ಸಡಿಲವಾದ ಬಟ್ಟೆಗಳನ್ನು ಧರಿಸಿದ್ದಾರಂತೆ. ನಾಟಿ ವೈದ್ಯೆ ಡಾ.ಮಂತೇನ ಅವರ ಬಳಿ ಚಿಕಿತ್ಸೆ ಪಡೆಯುತ್ತಿರುವುದಾಗಿಯೂ ಅವರು ಮಾತನಾಡಿದ್ದಾರೆ.

     

    ಸಿನಿಮಾ ನಟನೆ, ರಾಜಕಾರಣ ಮತ್ತು ಸಮಾಜಮುಖಿ ಕೆಲಸಗಳ ಮೂಲಕ ಪೂನಂ ಕೌರ್ ಗುರುತಿಸಿಕೊಂಡಿದ್ದಾರೆ. ಕಾಯಿಲೆ ಕಾರಣದಿಂದಾಗಿ ಅವರು ಸಿನಿಮಾ ರಂಗದಿಂದ ಸ್ವಲ್ಪ ದಿನಗಳ ಕಾಲ ದೂರವೂ ಉಳಿದಿದ್ದರು.

  • ಶೂಟಿಂಗ್ ವೇಳೆ ಅವಘಡ: ಮಂಡ್ಯ ರಮೇಶ್ ಗೆ ತೀವ್ರ ಗಾಯ

    ಶೂಟಿಂಗ್ ವೇಳೆ ಅವಘಡ: ಮಂಡ್ಯ ರಮೇಶ್ ಗೆ ತೀವ್ರ ಗಾಯ

    ಸಿನಿಮಾ ಹಾಗೂ ರಂಗಭೂಮಿ ನಟ ಮಂಡ್ಯ ರಮೇಶ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸೆ ಧಾರಾವಾಹಿ ಶೂಟಿಂಗ್ ವೇಳೆ ಅವಘಡ ನಡೆದಿದ್ದು, ಅವರಿಗೆ ತೀವ್ರ ಗಾಯವಾಗಿದೆ ಎಂದು ತಿಳಿದು ಬಂದಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಕಲ್ಲು ಕ್ವಾರಿಯಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ರಮೇಶ್ ಕಾಲು ಜಾರಿ ಬಿದ್ದಿದ್ದಾರಂತೆ.

    ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಎರಡು ಆಪರೇಷನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಆಸೆ ಸೀರಿಯಲ್ ನಲ್ಲಿ ಮಂಡ್ಯ ರಮೇಶ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಧಾರಾವಾಹಿಯ ದೃಶ್ಯದ ಚಿತ್ರೀಕರಣದಲ್ಲಿ ಇಂಥದ್ದೊಂದು ಅವಘಡ ಸಂಭವಿಸಿದೆ.

    ರಮೇಶ್ ಅರವಿಂದ್ ನಿರ್ಮಾಣದಲ್ಲಿ ಈ ಧಾರಾವಾಹಿ ಮೂಡಿ ಬರುತ್ತಿದ್ದು, ಭಾರೀ ನಿರೀಕ್ಷೆ ಮೂಡಿಸಿದ ಧಾರಾವಾಹಿ ಇದಾಗಿದೆ. ಸದ್ಯ ಚಿಕಿತ್ಸೆ ಪಡೆದಿರುವ ಮಂಡ್ಯ ರಮೇಶ್ ಅವರಿಗೆ ಒಂದು ತಿಂಗಳ ಕಾಲ ರೆಸ್ಟ್ ತಗೆದುಕೊಳ್ಳುವಂತೆ ವೈದ್ಯರು ತಿಳಿಸಿದ್ದಾರೆ. ಕಿರುತೆರೆ, ರಂಗಭೂಮಿ ಮತ್ತು ಸಿನಿಮಾದಲ್ಲಿ ಸಕ್ರೀಯರಾಗಿರುವ ಮಂಡ್ಯ ರಮೇಶ್ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

  • ‘ಬಿಗ್ ಬಾಸ್’ ಮನೆಯಲ್ಲಿ ಅವಘಡ: ಹೊರಕ್ಕೆ ಬಂದ ತನಿಷಾ

    ‘ಬಿಗ್ ಬಾಸ್’ ಮನೆಯಲ್ಲಿ ಅವಘಡ: ಹೊರಕ್ಕೆ ಬಂದ ತನಿಷಾ

    ಟಾಸ್ಕ್ ಆಡುತ್ತಿದ್ದಾಗ ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಅವಘಡ ಸಂಭವಿಸಿದೆ. ಈ ಕಾರಣದಿಂದಾಗಿ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿರುವ ತನಿಷಾ ಕುಪ್ಪಂಡ (Tanisha Kuppanda) ಮನೆಯಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಟಾಸ್ಕ್ ಆಡುವಾಗ ಅವರಿಗೆ ಬಲವಾದ ಪೆಟ್ಟು ಬಿದ್ದಿದ್ದು, ಚಿಕಿತ್ಸೆಗಾಗಿ (Treatment) ಅವರನ್ನು ಮನೆಯಿಂದ ಕಳುಹಿಸಲಾಗಿದೆ ಎನ್ನುವ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಬಿಗ್ ಬಾಸ್ ಆಟದಲ್ಲಿ ಎಂದಿನಂತೆ ಟಾಸ್ಕ್ ಆಡಲು ಎರಡು ತಂಡಗಳಾಗಿ ವಿಂಗಡಿಸಿದ್ದರು. ಮನೆಯವರ ವೋಟ್ ಮೇರೆಗೆ ಡ್ರೋನ್ ಪ್ರತಾಪ್ ಮತ್ತು ಮೈಕಲ್ ಅವರನ್ನ ಕ್ಯಾಪ್ಟನ್ ಆಗಿ ಕಣಕ್ಕೆ ಬಿಡಲಾಯಿತು. ಎರಡು ಟೀಮ್‌ನ ಜಟಾಪಟಿ ನಂತರ ಗೆದ್ದಿರುವ ತಂಡ ಕ್ಯಾಪ್ಟನ್ ರೇಸ್‌ಗೆ ಕಾಲಿಡಲಿದ್ದಾರೆ ಎಂದು ಹೇಳಲಾಗಿತ್ತು

    ಡ್ರೋನ್ ತಂಡದಲ್ಲಿ ಪವಿ, ತುಕಾಲಿ, ನಮ್ರತಾ, ವರ್ತೂರು, ಸಿರಿ, ಆಟ ಆಡಿದ್ರೆ, ಮೈಕಲ್ ಟೀಮ್‌ನಲ್ಲಿ ತನಿಷಾ, ವಿನಯ್, ಸ್ನೇಹಿತ್, ಸಂಗೀತಾ, ಅವಿನಾಶ್ ಶೆಟ್ಟಿ ತಂಡವಾಗಿ ರೂಪುಗೊಂಡಿದ್ದಾರೆ. ಎರಡು ತಂಡ ಟಾಸ್ಕ್ವೊಂದರಲ್ಲಿ ಆಟ ಆಡುವಾಗ ತನಿಷಾ ಕಾಲಿಗೆ ಪೆಟ್ಟಾಗಿದ್ದು, ತುಂಬಾ ನೋವಿನಿಂದ ಒದ್ದಾಡಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗೆ ಕಳುಹಿಸಲಾಗಿದೆ.

    ಬಿಗ್ ಬಾಸ್ ಟೀಮ್ ಕಡೆಯಿಂದ ಬಂದು ತನಿಷಾ ಅವರನ್ನು ಚಿಕಿತ್ಸೆಗಾಗಿ ಹೊರ ಕರೆದುಕೊಂಡು ಹೋಗಿದ್ದಾರೆ. ಸಣ್ಣ ಪುಟ್ಟ ಏಟಾಗಿದ್ದರೆ ಆದಷ್ಟು ಬೇಗ ಬಿಗ್ ಬಾಸ್‌ಗೆ ಬರಲಿದ್ದಾರೆ. ಹೆಚ್ಚಿನ ಚಿಕಿತ್ಸೆ ಬೇಕಿದ್ರೆ ಮತ್ತೆ ಬಿಗ್ ಬಾಸ್‌ಗೆ ಬರೋದು ಅನುಮಾನವೇ ಸರಿ ಎಂದು ಹೇಳಲಾಗುತ್ತಿದೆ.

    ದೊಡ್ಮನೆಗೆ ಕಾಲಿಟ್ಟ ಮೊದಲ ದಿನದಿಂದಲೂ ಗಟ್ಟಿ ಸ್ಪರ್ಧಿಯಾಗಿ ತನಿಷಾ ಸೆಡ್ಡು ಹೊಡೆದಿದ್ದಾರೆ. ಎದುರಾಳಿಗೆ ಮಸ್ತ್ ಠಕ್ಕರ್ ಕೊಟ್ಟಿದ್ದಾರೆ. ಸದ್ಯ ತನಿಷಾ ಮನೆಯಿಂದ ಹೊರಹೋಗಿರೋದು ಬಿಗ್ ಬಾಸ್ ಮನೆಮಂದಿಗೂ ಬೇಸರ ಮೂಡಿಸಿದೆ. ತಮ್ಮ ನೆಚ್ಚಿನ ನಟಿಯು ಬೇಗ ಗುಣಮುಖರಾಗಿ ಮತ್ತೆ ಬಿಗ್ ಬಾಸ್ ಮನೆಗೆ ಬರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.