Tag: Treason

  • ದೇಶದ್ರೋಹಿ ದುಷ್ಕೃತ್ಯಕ್ಕೆ ವಿದ್ಯಾರ್ಥಿಗಳ ಬಳಕೆ, ದೊಡ್ಡ ಷಡ್ಯಂತ್ರವಿದೆ – ಬೊಮ್ಮಾಯಿ ಆರೋಪ

    ದೇಶದ್ರೋಹಿ ದುಷ್ಕೃತ್ಯಕ್ಕೆ ವಿದ್ಯಾರ್ಥಿಗಳ ಬಳಕೆ, ದೊಡ್ಡ ಷಡ್ಯಂತ್ರವಿದೆ – ಬೊಮ್ಮಾಯಿ ಆರೋಪ

    ದಾವಣಗೆರೆ: ರಾಜ್ಯದಲ್ಲಿ ದೇಶ ವಿರೋಧಿ ಕೃತ್ಯಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೇಶ ವಿರೋಧಿ ಕೃತ್ಯಗಳ ಹಿಂದಿರುವವರನ್ನು ಪತ್ತೆ ಹಚ್ಚಲು ಗೃಹ ಸಚಿವ ಬೊಮ್ಮಾಯಿ ರವರು ಬೆಂಗಳೂರಿನಲ್ಲಿ ಪೊಲೀಸ್ ಉನ್ನತಾಧಿಕಾರಿಗಳೊಂದಿಗೆ ನಾಳೆ ಸಭೆ ಕರೆಯುತ್ತೇನೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.

    ಸರ್ಕ್ಯೂಟ್ ಹೌಸ್‍ನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ವಿರೋಧಿ ಹೇಳಿಕೆಗಳು, ಕೃತ್ಯಗಳ ಹಿಂದೆ ಒಂದು ವ್ಯವಸ್ಥಿತ ಸಂಚು, ಷಡ್ಯಂತ್ರ ಇದೆ. ದೇಶ ವಿರೋಧಿ ಚಟುವಟಿಕೆ ನಡೆಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಷಡ್ಯಂತ್ರ ನಡೆದಿದೆ. ಹಾಗಾಗಿ ಇದನ್ನೆಲ್ಲ ಹತ್ತಿಕ್ಕಲು ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸುವುದಾಗಿ ಬಸವರಾಜ ಬೊಮ್ಮಾಯಿ ಹೇಳಿದರು.

    ರಾಜ್ಯದಲ್ಲಿ ದೇಶದ್ರೋಹಿ ಕೃತ್ಯಗಳು ಹೆಚ್ಚಾಗುತ್ತಿವೆ. ವಿಶೇಷವಾಗಿ ವಿದ್ಯಾರ್ಥಿಗಳು ಅದರಲ್ಲೂ ಹೆಣ್ಣು ಮಕ್ಕಳನ್ನು ಇಂತಹ ಕೆಲಸಗಳಿಗೆ ಬಳಕೆ ಮಾಡಿಕೊಂಡು ಸಮಾಜದಲ್ಲಿ ಶಾಂತಿ ಕದಡುವ, ಗಲಭೆ ಸೃಷ್ಟಿಸುವ, ವೈಷಮ್ಯ ಉಂಟುಮಾಡುವ ಕೆಲಸ ನಡೆಯುತ್ತಿದೆ. ದೇಶದ್ರೋಹಿ ಹೇಳಿಕೆ ನೀಡಿರುವ ಅಮೂಲ್ಯ ಹಿಂದೆ ಕೆಲ ವ್ಯಕ್ತಿಗಳು ಹಾಗೂ ಸಂಘಟನೆಗಳ ಕುಮ್ಮಕ್ಕು ಇದ್ದಂತಿದೆ. ಇದರ ಬಗ್ಗೆ ನಾಳೆ ನಡೆಯುವ ಉನ್ನತ ಮಟ್ಟದ ಸಭೆಯಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಇಂತಹ ಕೃತ್ಯದಲ್ಲಿ ಭಾಗಿಯಾದವರನ್ನು ಬೇರು ಸಹಿತ ಕಿತ್ತು ಹಾಕಲಾಗುವುದು ಎಂದರು.

    ಯಾವುದೇ ರೀತಿಯ ದೇಶವಿರೋಧಿ ಚಟುವಟಿಕೆಗಳು ಕಂಡು ಬಂದರೆ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದೇನೆ. ಅದೇ ರೀತಿ ರಾಜ್ಯದಲ್ಲಿನ ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ದೇಶ ವಿರೋಧಿ ಚಟುವಟಿಕೆಗಳಿಗೆ ಶಾಲಾ-ಕಾಲೇಜುಗಳ ವೇದಿಕೆಗಳನ್ನು ವಿದ್ಯಾರ್ಥಿಗಳು ಬಳಸದಂತೆ ಎಚ್ಚರವಹಿಸಿ ವಿದ್ಯಾರ್ಥಿಗಳ ಚಟುವಟಿಕೆಗಳ ಮೇಲೆ ಕಣ್ಣಿಡುವಂತೆಯೂ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

    ದೇಶ ವಿರೋಧಿ ಚಟುವಟಿಕೆ ನಡೆಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಷಡ್ಯಂತ್ರ ನಡೆಯುತ್ತಿದೆ. ಕಾಲೇಜು ವಿದ್ಯಾರ್ಥಿಗಳನ್ನು ದುರುಪಯೋಗ ಪಡಿಸಿಕೊಂಡು ಇಂತಹ ಚಟುವಟಿಕೆಗಳಲ್ಲಿ ತೊಡಗಿಸುವ ಪ್ರಯತ್ನ ನಡೆದಿದೆ. ಇಂತಹ ಚಟುವಟಿಕೆಗಳಲ್ಲಿ ಯಾರೇ ಭಾಗಿಯಾದರೂ ಕಠಿಣಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಕಲ್ಬುರ್ಗಿಯಲ್ಲಿ ನಡೆದ ಸಭೆಯಲ್ಲಿ ಮಹಾರಾಷ್ಟ್ರದ ಮಾಜಿ ಶಾಸಕರು ಕೋಮುಭಾವನೆಗೆ ಧಕ್ಕೆ ತರುವ ರೀತಿ ಮಾತನಾಡಿದ್ದಾರೆ. ಈ ಬಗ್ಗೆಯೂ ಸಹ ಪ್ರಕರಣ ದಾಖಲಾಗಿದೆ. ಮಾಧ್ಯಮದವರು ಶಾಸಕರ ಭವನಕ್ಕೆ ಪ್ರವೇಶ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಈ ವಿಚಾರ ಸ್ಪೀಕರ್ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿ ಜಾರಿಕೊಂಡರು.

  • ಅಮೂಲ್ಯಾ ಹೇಳಿದ್ರಲ್ಲಿ ತಪ್ಪಿಲ್ಲ, ಆಕೆಯ ಮಾತುಗಳಿಗೆ ನಮ್ಮ ಬೆಂಬಲವಿದೆ: ವಕೀಲ ಎಸ್ ಮಾರೆಪ್ಪ

    ಅಮೂಲ್ಯಾ ಹೇಳಿದ್ರಲ್ಲಿ ತಪ್ಪಿಲ್ಲ, ಆಕೆಯ ಮಾತುಗಳಿಗೆ ನಮ್ಮ ಬೆಂಬಲವಿದೆ: ವಕೀಲ ಎಸ್ ಮಾರೆಪ್ಪ

    – ಅಮೂಲ್ಯಾ ಬುದ್ಧಿವಂತ ಹುಡುಗಿ

    ರಾಯಚೂರು: ದೇಶದ್ರೋಹದ ಭಾಷಣ ಮಾಡಿ ಜೈಲುಪಾಲಾಗಿರುವ ಅಮೂಲ್ಯಾ ಲಿಯೋನ ಪರ ರಾಯಚೂರಿನ ಸಿಎಎ ವಿರೋಧಿ ಹೋರಾಟದ ಸಂಚಾಲಕ ಹಿರಿಯ ವಕೀಲ ಎಸ್.ಮಾರೆಪ್ಪ ವಿವಾದಾತ್ಮಕ ಹೇಳಿಕೆ ನೀಡಿ ಅಮೂಲ್ಯಳಾನ್ನು ಬೆಂಬಲಿಸಿದ್ದಾರೆ.

    ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಹೋರಾಟ ಹಿನ್ನೆಲೆ ಶಿವರಾತ್ರಿ ಜಾಗರಣೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಮಾರೆಪ್ಪ, ಆಕೆ ಎಲ್ಲಾ ದೇಶಗಳಿಗೆ ಜಿಂದಾಬಾದ್ ಹೇಳುತ್ತಿದ್ದಳು. ಆದರೆ ಹೇಳಲು ಬಿಡಲಿಲ್ಲ. ಎಲ್ಲಾ ದೇಶಗಳ ಬಗ್ಗೆ ಪ್ರೀತಿ ವ್ಯಕ್ತಪಡಿಸಲು ಮುಂದಾಗಿದ್ದಳು. ಅದಕ್ಕೆ ಕೊನೆಯಲ್ಲಿ ಹಿಂದೂಸ್ಥಾನ್ ಜಿಂದಾಬಾದ್ ಹೇಳಿದ್ದಾಳೆ ಎಂದು ಅಮೂಲ್ಯಾಳನ್ನು ಸಮರ್ಥಿಸಿಕೊಂಡರು. ಇದನ್ನು ಓದಿ: ಬೆಂಗ್ಳೂರಲ್ಲಿ ದೇಶದ್ರೋಹ ಘೋಷಣೆ ಪ್ರಕರಣ- ಪರಪ್ಪನ ಅಗ್ರಹಾರಕ್ಕೆ ಅಮೂಲ್ಯ ಶಿಫ್ಟ್

    ಅಮೂಲ್ಯಾ ಹೇಳಿದ್ದರಲ್ಲಿ ತಪ್ಪಿಲ್ಲ ಅವಳಿಗೆ ಪೂರ್ಣವಾಗಿ ಮಾತನಾಡಲು ಬಿಡಬೇಕಿತ್ತು. ಅವಳ ಮಾತುಗಳಿಗೆ ನಮ್ಮ ಬೆಂಬಲಯಿದೆ. ಮಾತನಾಡಲು ಬಿಡದೆ ಕೇಸ್ ಹಾಕಿದ್ದಾರೆ. ಆಕೆ ಬುದ್ಧಿವಂತ ಹುಡುಗಿ, ವೇದಿಕೆಯಲ್ಲಿದ್ದ ಮುಸ್ಲಿಮರು ಏನು ಹೇಳುತ್ತಾಳೋ ಎಂದು ಹೆದರಿಕೊಂಡು ಮಾತನಾಡಲು ಅವಕಾಶ ಕೊಟ್ಟಿಲ್ಲ. ಅಮೂಲ್ಯಾ ದೇಶದ್ರೋಹಿ ಅಲ್ಲ ಎಂದರು. ಇದನ್ನು ಓದಿ: ಮಗಳು ಮಾಡಿದ್ದು ತಪ್ಪು, ಅವಳ ಕೈ-ಕಾಲು ಮುರಿಯಲಿ: ಅಮೂಲ್ಯ ತಂದೆ

    ಇದೇ ವೇಳೆ ನಮಸ್ತೆ ಟ್ರಂಪ್ ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶದ್ರೊಹ ಮಾಡಿದ್ದಾರೆ. ತಮ್ಮ ದೇಶದ್ರೋಹ ಮುಚ್ವಿಕೊಳ್ಳಲು ಮೋದಿ ಹೋರಾಟಗಾರರನ್ನು ಬಂಧಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಅವರ ಮೇಲೆ ವಾಗ್ದಾಳಿ ನಡೆಸಿದರು.

  • ದೇಶದ್ರೋಹಿಗಳನ್ನು ಸಮರ್ಥಿಸಿಕೊಳ್ಳುವ ಪ್ರಶ್ನೆಯೇ ಇಲ್ಲ: ಡಿಕೆಶಿ

    ದೇಶದ್ರೋಹಿಗಳನ್ನು ಸಮರ್ಥಿಸಿಕೊಳ್ಳುವ ಪ್ರಶ್ನೆಯೇ ಇಲ್ಲ: ಡಿಕೆಶಿ

    ಬೆಂಗಳೂರು: ದೇಶದ್ರೋಹಿಗಳನ್ನು ಸಮರ್ಥಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.

    ದೇಶದ್ರೋಹದ ಹೇಳಿಕೆಗಳನ್ನು ನೀಡಿ ಅಮೂಲ್ಯ ಲಿಯೋನ ಮತ್ತು ಆರ್ದ್ರಾ ನಾರಾಯಣನ್ ಪೊಲೀಸರ ಅತಿಥಿಗಳಾಗಿದ್ದಾರೆ. ಈಗ ಈ ವಿಚಾರಕ್ಕೆ ಸಂಬಂಧಿದಂತೆ ಟ್ವೀಟ್ ಮಾಡಿರು ಡಿಕೆ ಶಿವಕುಮಾರ್ ಅವರು, ಅಮೂಲ್ಯ ಆಗಲಿ, ಮತ್ಯಾರೇ ಆಗಲಿ ದೇಶದ್ರೋಹಿಗಳನ್ನು ಸಮರ್ಥಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಕಿಡಿಕಾರಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಡಿಕೆಶಿ, ಅಮೂಲ್ಯ ಆಗಲಿ, ಮತ್ಯಾರೇ ಆಗಲಿ ದೇಶದ್ರೋಹಿಗಳನ್ನು ಸಮರ್ಥಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಆಕೆ ಪಾಕ್ ಪರ ಘೋಷಣೆ ಹಾಕಿದ ಬಗ್ಗೆ ಹೆಚ್ಚಿನ ತನಿಖೆ ಆಗಬೇಕು. ದೇಶವಿರೋಧಿ ಚಟುವಟಿಕೆಗೆ ಯಾವುದೇ ವೇದಿಕೆ ಆಗಲಿ ದುರ್ಬಳಕೆ ಆಗಬಾರದು. ದೇಶಭಕ್ತಿ, ದೇಶ ಕಟ್ಟುವ ವಿಚಾರದಲ್ಲಿ ಎಲ್ಲ ಭಾರತೀಯರ ಅಭಿಪ್ರಾಯವೂ ಒಂದೇ ಎಂದು ಬರೆದುಕೊಂಡಿದ್ದಾರೆ.

    ಈ ಹಿಂದೆ ಈ ವಿಚಾರವಾಗಿ ಮಾತನಾಡಿದ್ದ ಡಿಕೆಶಿ ಅವರು, ಆಕೆಯ ಭಾಷಣಗಳನ್ನು ನಾನು ನೋಡಿದ್ದೇನೆ. ಅದರಲ್ಲಿ ಆಕೆ ಈಗ ಹೇಳಿದ ಮಾತನ್ನು ಕೇಳಿರಲಿಲ್ಲ. ಅಮೂಲ್ಯಗೆ ಪೂರ್ತಿ ಮಾತನಾಡಲು ಅವಕಾಶ ನೀಡಬೇಕಿತ್ತು. ಆದರೆ ಮಧ್ಯದಲ್ಲಿ ಏನೋ ಸಮಸ್ಯೆಯಾಗಿದೆ. ಇದರ ಬಗ್ಗೆ ನನಗೆ ಇನ್ನೂ ಕೆಲವು ಸ್ಪಷ್ಟನೆಗಳು ಬೇಕಿದೆ. ಹೀಗಾಗಿ ಈ ಬಗ್ಗೆ ನಾನು ಹೆಚ್ಚಾಗಿ ಕಮೆಂಟ್ ಮಾಡುವುದಿಲ್ಲ ಎಂದು ತಿಳಿಸಿದ್ದರು.