Tag: travel agency

  • ತಿರುಪತಿ ತಿಮ್ಮಪ್ಪನ ನಕಲಿ ಟಿಕೆಟ್ ನೀಡಿ 2 ಲಕ್ಷ ವಂಚನೆ

    ತಿರುಪತಿ ತಿಮ್ಮಪ್ಪನ ನಕಲಿ ಟಿಕೆಟ್ ನೀಡಿ 2 ಲಕ್ಷ ವಂಚನೆ

    ಚಿಕ್ಕಬಳ್ಳಾಪುರ: ತಿರುಪತಿ ತಿಮ್ಮಪ್ಪ, ಏಡುಕೊಂಡಲವಾಡ, ಆಪತ್ಭಾಂದವ ಅನಾಥ ರಕ್ಷಕ ಅಂತಲೇ ಕರೆಸಿಕೊಳ್ಳುವ ತಿರುಪತಿ ತಿಮ್ಮಪ್ಪನ ಹೆಸರಿನಲ್ಲಿಯೇ ವಂಚಕನೊರ್ವ ಲಕ್ಷಾಂತರ ರೂಪಾಯಿ ದೋಖಾ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.

    ನಗರದ ಅಮೇಜಿಂಗ್ ಡ್ರೀಮ್ ಹೆಸರಿನ ಟ್ರಾವೆಲ್ ಏಜೆನ್ಸಿ ಮಾಲೀಕೆ ಪ್ರಿಯದರ್ಶಿನಿ ವಂಚನೆಗೊಳಗಾಗಿದ್ದು, ಆಂಧ್ರಪ್ರದೇಶ ವೆಸ್ಟ್ ಗೋದಾವರಿ ಜಿಲ್ಲೆಯ ಪಂಜಾ ವೇಮವರಂನ ಪಂಜಾ ರಮಣ ಪ್ರಸಾದ್ ತಿರುಪತಿ ವೆಂಕಟೇಶ್ವರನ ದರ್ಶನಕ್ಕೆ ಟಿಕೆಟ್ ಬುಕ್ ಮಾಡಿಕೊಡುವುದಾಗಿ ಹೇಳಿ ನಂಬಿಸಿ ನೂರಾರು ಟಿಕೆಟ್‍ಗಳನ್ನು ಕೊಟ್ಟಿದ್ದಾನೆ. ಆದರೆ ಕೊಟ್ಟ ಟಿಕೆಟ್‍ಗಳನ್ನು ಪಡೆದು ತಿಮ್ಮಪ್ಪನ ದರ್ಶನಕ್ಕೆ ತೆರಳಿದಾಗ ಆತ ನೀಡಿದ್ದ ಟಿಕೆಟ್‍ಗಳು ನಕಲಿ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ:  ಸಾಲಬಾಧೆ ತಾಳದೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ

    ತಮ್ಮ ಬಳಿ ಇರುವ ಟಿಕೆಟ್ ನಕಲಿ ಅಂತ ತಿಳಿದು ದರ್ಶನಕ್ಕೆ ಹೋದವರಿಗೆ ಶಾಕ್ ಆಗಿದೆ. ಇಷ್ಟರಲ್ಲಾಗಲೇ ಪ್ರಿಯದರ್ಶಿನಿ 143 ಜನರಿಂದ ತಲಾ 900 ರೂಪಾಯಿಯಂತೆ 1,28,700 ರೂಪಾಯಿ ಹಣವನ್ನು ಪಡೆದು, ವಂಚಕ ಪಂಜಾ ರಮಣ ಪ್ರಸಾದ್ ಖಾತೆಗೆ ಜಮಾ ಮಾಡಿದ್ದಾರೆ. ವಂಚನೆಯಾಗಿರುವ ಬಗ್ಗೆ ತಿಳಿಯುತ್ತಿದ್ದಂತೆ ಪ್ರಸಾದ್‍ಗೆ ಕರೆ ಮಾಡಿ ವಂಚನೆ ಮಾಡಿರುವ ಬಗ್ಗೆ ಕೇಳುತ್ತಿದ್ದಂತೆ, ಆತ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಇನ್ನೂ ಪ್ರಸಾದ್ ಇವರಿಗೆ ಅಲ್ಲದೆ ಇನ್ನೂ ಹಲವರಿಂದ 10 ಲಕ್ಷಕ್ಕೂ ಹೆಚ್ಚು ರೂಪಾಯಿ ವಂಚಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಪ್ಯಾರಾಲಂಪಿಕ್ಸ್ ಕ್ರೀಡಾಪಟುಗಳನ್ನು ಭೇಟಿ ಮಾಡಿ ಅಭಿನಂದಿಸಿದ ಪ್ರಧಾನಿ

    ವಂಚಕ ರಮಣ ಪ್ರಸಾದ್ ಪಂಜಾಬ್ ನ್ಯಾಷನಲ್ ಬ್ಯಾಂಕ್ ತಿರುಪತಿ ಶಾಖೆಯಲ್ಲಿ ಅಕೌಂಟ್ ಹೊಂದಿದ್ದು, ಅದೇ ಖಾತೆಯಿಂದಲೇ ಹಣ ಪಡೆದು ವಂಚಿಸಿದ್ದಾನೆ. ಈಗಾಗಲೇ ಆತನ ವಿರುದ್ಧ ತಿರುಪತಿಯಲ್ಲಿ ಹಲವು ವಂಚನೆ ಪ್ರಕರಣಗಳು ದಾಖಲಾಗಿವೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಮುಂಬೈನಿಂದಲೇ ವಕೀಲರಿಗೆ ಕರೆ ಮಾಡಿ ಅನುಶ್ರೀ ಮಾತುಕತೆ!

    ಸದ್ಯ ವಂಚಕ ರಮಣ ಪ್ರಸಾದ್‍ನನ್ನು ಬಂಧಿಸಿ ನ್ಯಾಯ ಕೊಡಿಸುವಂತೆ ವಂಚನೆಗೊಳಗಾದ ಪ್ರಿಯದರ್ಶಿನಿ ಚಿಕ್ಕಬಳ್ಳಾಪುರ ನಗರದ ಸೈಬರ್ ಕ್ರೈಂ ಬ್ರಾಂಚ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಏನೇ ಆಗಲಿ ಕೋಟ್ಯಾಂತರ ಜನ ಭಕ್ತರನ್ನು ಹೊಂದಿರುವ ತಿರುಪತಿ ತಿಮ್ಮಪ್ಪನ ಹೆಸರಿನಲ್ಲಿ ವಂಚಕ ಭಕ್ತರಿಗೆ ವಂಚನೆ ಮಾಡಿ ಪಂಗನಾಮ ಹಾಕಿರುವುದನ್ನುವಿಪರ್ಯಾಸ ಎಂದೇ ಹೇಳಬಹುದಾಗಿದೆ.

  • ಕೊರೊನಾ ಭೀತಿ- ಹೊಸದಾಗಿ ಮದ್ವೆಯಾದ ಜೋಡಿಗಳ ಹನಿಮೂನ್ ಕ್ಯಾನ್ಸಲ್

    ಕೊರೊನಾ ಭೀತಿ- ಹೊಸದಾಗಿ ಮದ್ವೆಯಾದ ಜೋಡಿಗಳ ಹನಿಮೂನ್ ಕ್ಯಾನ್ಸಲ್

    ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್‍ಗೆ ರಾಜ್ಯದ ಜನ ಬೆಚ್ಚಿ ಬಿದ್ದಿದ್ದಾರೆ. ಟ್ರಾವೆಲ್ಸ್ ಏಜೆನ್ಸಿಗಳನ್ನು ಈ ಸೈತಾನ್ ವೈರಸ್ ಕಾಡುತ್ತಿದೆ. ಹೊಸದಾಗಿ ಮದುವೆಯಾದ ಜೋಡಿಗಳು ಹನಿಮೂನ್‍ಗೆ ಹೊರ ರಾಷ್ಟ್ರಗಳಿಗೆ ಹೋಗೋದಕ್ಕೆ ಭಯಪಡುತ್ತಿದ್ದಾರೆ.

    ಚೀನಾದ ಕೊರೊನಾ ವೈರಸ್‍ನ ಭೀತಿ ರಾಜ್ಯದಲ್ಲಿ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಟೆಕ್ಕಿಯೊಬ್ಬರಿಗೆ ಸೊಂಕು ತಗುಲಿರುವ ಬಗ್ಗೆ ಖಚಿತ ಆಗುತ್ತಿದ್ದಂತೆ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಿಲಾಗಿದೆ. ಅಲ್ಲದೆ ಹೊರ ರಾಷ್ಟ್ರಗಳಿಗೆ ಹೋಗಲು ಜನ ಭಯಪಡುತ್ತಿದ್ದಾರೆ. ಮುಖ್ಯವಾಗಿ ಹೊಸದಾಗಿ ಮದುವೆಯಾಗಿ ಹನಿಮೂನ್‍ಗೆ ಹೋಗುವ ಜೋಡಿಗಳು ಕೊರೊನಾ ವೈರಸ್‍ಗೆ ಭಯ ಪಟ್ಟಿದ್ದು, ಹನಿಮೂನ್ ಪ್ಲಾನ್ ಅನ್ನು ಮುಂದಕ್ಕೆ ಹಾಕಿಕೊಂಡಿದ್ದಾರೆ. ಈ ಪೋಸ್ಟ್‌ಪೋನ್ ಸಂಕಟದಿಂದ ಟ್ರಾವೆಲ್ ಏಜೆನ್ಸಿಗಳಿಗೆ ಭಾರೀ ಹೊಡೆತ ಬಿದ್ದಿದೆ.

    ಕೊರೊನಾ ಭಯಕ್ಕೆ ಯಾರು ಕೂಡ ಹೊರ ರಾಷ್ಟ್ರಗಳಿಗೆ ಹೋಗುತ್ತಿಲ್ಲ. ಅಡ್ವಾನ್ಸ್ ಆಗಿ ಬುಕ್ ಮಾಡಿರುವವರು ಕೂಡ ದಿನಾಂಕವನ್ನು ಪೋಸ್ಟ್‌ಪೋನ್ ಮಾಡಿಕೊಳ್ಳುತ್ತಿದ್ದಾರೆ. ಮುಖ್ಯವಾಗಿ ದುಬೈ, ಸಿಂಗಾಪುರ್, ಹಾಂಕಾಂಗ್, ಥೈಲ್ಯಾಂಡ್, ಅಮೆರಿಕ ರಾಷ್ಟ್ರಗಳಿಗೆ ಈ ಸೀಸನ್‍ನಲ್ಲಿ ಹೆಚ್ಚಿನ ಜನ, ವಿದೇಶ ಪ್ರವಾಸ ಮಾಡುತ್ತಿದ್ದರು. ಆದರೆ ಕೊರೊನಾ ಭೂತಕ್ಕೆ ಇದೀಗ ಹೊರ ರಾಷ್ಟ್ರಗಳಿಗೆ ಹೋಗೋದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಟ್ರಾವೆಲ್ಸ್ ಏಜೆನ್ಸಿಗಳಿಗೆ ದಿನಕ್ಕೆ ಲಕ್ಷಾಂತರ ರೂ. ನಷ್ಟವಾಗ್ತಿದೆ.

    ನಿತ್ಯ ಟ್ರಾವೆಲ್ಸ್ ಅಂಗಡಿಗಳಲ್ಲಿ ಜನ, ಕ್ಯೂ ನಿಂತು ಹೊರ ರಾಷ್ಟ್ರಗಳ ಫ್ಲೈಟ್ ಟಿಕೆಟ್ ಅನ್ನು ಬುಕ್ಕಿಂಗ್ ಮಾಡಿಕೊಳ್ಳುತ್ತಿದ್ದರು. ಆದರೆ ಇದೀಗ ಟ್ರಾವೆಲ್ಸ್ ಬುಕ್ಕಿಂಗ್ ಸೆಂಟರ್ ಗಳು ಗ್ರಾಹಕರಿಲ್ಲದೇ ಬಿಕೋ ಎನ್ನುತ್ತಿದೆ. ಕೊರೊನಾ ಕಂಟಕ ಕರುನಾಡಿಗೂ ವ್ಯಾಪಿಸಿದೆ. ಮದುವೆಯ ಹೊಸತರಲ್ಲಿ ಸ್ವಚ್ಚಂದವಾಗಿ ಹನಿಮೂನ್‍ನಲ್ಲಿ ಬ್ಯೂಸಿ ಇರಬೇಕಾದ ಜೋಡಿಗಳು ಸದ್ಯಕ್ಕೆ ಎಲ್ಲಿ ಹೋಗೋದು ಬೇಡಪ್ಪ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.

  • ಕೋಟಿ ಕೊಟ್ರೂ ಲೇಡಿಸ್‍ಗೆ ಸೀಟ್ ಕೊಡಲ್ಲ – ಟ್ರಾವೆಲ್ಸ್ ಏಜೆನ್ಸಿ ಮಾಲೀಕರು ಪಟ್ಟು

    ಕೋಟಿ ಕೊಟ್ರೂ ಲೇಡಿಸ್‍ಗೆ ಸೀಟ್ ಕೊಡಲ್ಲ – ಟ್ರಾವೆಲ್ಸ್ ಏಜೆನ್ಸಿ ಮಾಲೀಕರು ಪಟ್ಟು

    ಬೆಂಗಳೂರು: ಕೋಟಿ ಕೊಟ್ಟರೂ ಮಹಿಳೆಯರಿಗೆ ಸೀಟ್ ಕೊಡಲ್ಲ ಎಂದು ಬೆಂಗಳೂರಿನ ಟ್ರಾವೆಲ್ಸ್ ಏಜೆನ್ಸಿ ಮಾಲೀಕರು ಪಟ್ಟು ಹಿಡಿದ್ದಾರೆ.

    ಹೌದು. ಬರುವ ಡಿಸೆಂಬರ್ ತಿಂಗಳಿನಲ್ಲಿ ಮಣಿಕಂಠನ ದರ್ಶನ ಮಾಡಲು ಶಬರಿಮಲೆಗೆ ಹೋಗುವ ಭಕ್ತರ ಸಂಖ್ಯೆ ಜಾಸ್ತಿ ಇದೆ. ಆದರೆ ಅಲ್ಲಿಗೆ ಹೋಗಲು ಕೋಟಿ ಕೊಟ್ಟರೂ ಮಹಿಳೆಯರಿಗೆ ಸೀಟ್ ಕೊಡಲ್ಲ. ನಮ್ಮ ಬಸ್ ಹತ್ತಿಸಲ್ಲ ಎಂದು ಕೆಲ ಟ್ರಾವೆಲ್ಸ್ ಏಜೆನ್ಸಿ ಮಾಲೀಕರು ಹೇಳುತ್ತಿದ್ದಾರೆ.

    ಈಗಾಗಲೇ ಸುಪ್ರೀಂಕೋರ್ಟ್ ಶಬರಿಮಲೆ ದೇಗುಲದಲ್ಲಿ ಮಹಿಳೆಯರ ಪ್ರವೇಶ ಕುರಿತಾದ ವಿಚಾರ ವಿಸ್ತ್ರತಪೀಠಕ್ಕೆ ವರ್ಗಾಯಿಸಿದೆ. ಇದರ ಬೆನ್ನಲ್ಲೇ ಒಂದಿಷ್ಟು ಉತ್ಸಾಯಿ ಯುವತಿಯರು ಶಬರಿಮಲೆಗೆ ಹೋಗುವ ಉತ್ಸಾಹ ತೋರಿದ್ರೂ ಟಿಕೆಟ್ ಮಾತ್ರ ಬುಕ್ ಮಾಡೋಕೆ ಟ್ರಾವೆಲ್ ಏಜೆನ್ಸಿಯವರು ಒಲ್ಲೆ ಅಂತಿದ್ದಾರೆ. ಕೋಟಿ ಕೋಟಿ ದುಡ್ಡನ್ನು ತಂದು ಸುರಿಯಿರಿ ಆದರೆ ಬಸ್ಸಿನಲ್ಲಿ ಮಹಿಳೆಯರಿಗೆ ಮಾತ್ರ ಸೀಟ್ ಕೊಡಲ್ಲ. ಹೆಣ್ಣು ಮಕ್ಕಳನ್ನು ನಾವು ಬಸ್ ಕೂಡ ಹತ್ತಿಸಲ್ಲ. ಮಹಿಳೆಯರಿಗೆ ಸೀಟ್ ಕೂಡ ಬುಕ್ ಮಾಡಲ್ಲ ಎಂದು ಟ್ರಾವೆಲ್ಸ್ ಏಜೆನ್ಸಿ ಮಾಲೀಕರು ಪಟ್ಟು ಹಿಡಿದಿದ್ದಾರೆ.

    ಹತ್ತು ವರ್ಷದೊಳಗಿನ ಹೆಣ್ಣುಮಕ್ಕಳು, 50 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮಾತ್ರ ಶಬರಿಮಲೆಗೆ ಹೋಗಲು ಟಿಕೆಟ್ ಬುಕ್ ಮಾಡಲಾಗುತ್ತದೆ. ಆದರೆ ಈಗ ಅವರ ಐಡಿಗಳನ್ನು ಚೆಕ್ ಮಾಡಿ ವಯಸ್ಸು ಲೆಕ್ಕ ಹಾಕಿ ಟಿಕೆಟ್ ಬುಕ್ ಮಾಡಿಕೊಡುತ್ತೇವೆ ಎಂದು ಕೆಲ ಏಜೆನ್ಸಿ ಅವರು ಹೇಳಿದರೆ, ಇನ್ನೂ ಕೆಲವು ಟ್ರಾವೆಲ್ಸ್ ನವರು ಶಬರಿಮಲೆಯ ಆಸು-ಪಾಸು ಕೂಡ ಹೋಗದೇ ದೂರದ ಸ್ಟಾಪ್‍ಗಳಲ್ಲಿ ಮಹಿಳೆಯರನ್ನು ಬಿಡುತ್ತೇವೆ ನಾವು ರಿಸ್ಕ್ ತೆಗೆದುಕೊಳ್ಳಲ್ಲ ಎಂದಿದ್ದಾರೆ.

    ನವೆಂಬರ್ ತಿಂಗಳಲ್ಲಿ ಅಯ್ಯಪ್ಪ ದೇಗುಲಕ್ಕೆ ತೆರಳುವ ಭಕ್ತಾದಿಗಳ ಸಂಖ್ಯೆ ಹೆಚ್ಚು. ಈಗ ಬಸ್ಸಿನವರು ಕೊಟ್ಟ ಶಾಕ್‍ಗೆ ಶಬರಿಮಲೆಗೆ ಹೋಗಬೇಕು ಅಂದುಕೊಂಡಿದ್ದ ಮಹಿಳೆಯರು ಥಂಡಾ ಹೊಡೆದಿದ್ದಾರೆ.

  • ಟ್ರಾವೆಲ್ ಏಜೆನ್ಸಿ ಕಾರ್ ಚಾಲಕನನ್ನು ಅಪಹರಿಸಿ ಕೂಡಿಹಾಕಿ ಥಳಿತ!

    ಟ್ರಾವೆಲ್ ಏಜೆನ್ಸಿ ಕಾರ್ ಚಾಲಕನನ್ನು ಅಪಹರಿಸಿ ಕೂಡಿಹಾಕಿ ಥಳಿತ!

    ಬೆಂಗಳೂರು: ಟ್ರಾವೆಲ್ ಏಜೆನ್ಸಿಯ ಕಾರು ಚಾಲಕನನ್ನು ದುಷ್ಕರ್ಮಿಗಳ ತಂಡವೊಂದು ಅಪಹರಿಸಿ ಬೇರೊಂದು ವಾಹನದಲ್ಲಿ ಕೂಡಿಹಾಕಿ ಮನಬಂದಂತೆ ಥಳಿಸಿರುವ ಘಟನೆ ಬೆಂಗಳೂರಿನ ಬನಶಂಕರಿಯಲ್ಲಿ ನಡೆದಿದೆ.

    ಭಾನುವಾರ ತಡರಾತ್ರಿ ಹಾರೋಹಳ್ಳಿಯಿಂದ ಬೆಂಗಳೂರಿಗೆ ಸೌಜನ್ಯ ಟ್ರಾವೆಲ್ಸ್‍ನ ಕಾರು ಚಾಲಕ ನವೀನ್ ಬರ್ತಿದ್ರು. ಈ ವೇಳೆ ಕನಕಪುರದ ಬೋಳಾರ್ ಬಳಿ ಓವರ್ ಟೆಕ್ ಮಾಡಿಕೊಂಡು ಬಂದ ಕೆಂಪು ಬಣ್ಣದ ಕೆಎ04ಎಂಜಿ 9249 ನಂಬರಿನ ಸ್ವಿಫ್ಟ್ ಕಾರು ನವೀನ್ ಅವರ ಕಾರಿಗೆ ಡಿಕ್ಕಿ ಹೊಡೆದಿದೆ.

    ಕುಡಿದ ಮತ್ತಿನಲ್ಲಿದ್ದ ಪುಂಡರ ಗ್ಯಾಂಗ್ ಚಾಲಕ ನವೀನ್‍ಗೆ ಹಿಗ್ಗಾಮುಗ್ಗ ಥಳಿಸಿ, ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಹಣ ನೀಡಲು ನಿರಾಕರಿಸಿದ್ದಕ್ಕೆ ನವೀನ್‍ರನ್ನು ಕಿಡ್ನ್ಯಾಪ್ ಮಾಡಿ ಥಳಿಸಿ, ಬನಶಂಕರಿ ಮೆಟ್ರೋ ನಿಲ್ದಾಣದ ಬಳಿ ವಾಹನವೊಂದರಲ್ಲಿ ಕೂಡಿಹಾಕಿ ಕಾರ್ ಸಮೇತ ಪರಾರಿಯಾಗಿದ್ದಾರೆ.

    ಸದ್ಯ ಬನಶಂಕರಿ ಪೊಲೀಸರು ನವೀನ್‍ರನ್ನು ರಕ್ಷಿಸಿ ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.